Friday, April 29, 2011

ಆಡದೆ... ಉಳಿದಿಹ .. ಮಾತೂ ... ನೂರಿದೆ...!!

ನಾನು ಹೇಳಿದೆ...

"ಬಂದ ಜನರನ್ನು ...
ಗೇಟಿನಲ್ಲಿ ನಾನೇ..ಕ್ಯಾಮರಾ ಹಿಡಿದು...
ಮೊದಲು ಅವರ ಫೋಟೋ ತೆಗೆದು ಸ್ವಾಗತಿಸುವೆ..."

ಎಲ್ಲರು ಝಾಡಿಸಿದರು...
ಮನೆಯಲ್ಲಿ... ಗೆಳೆಯರು... ಅಳಿಯಂದಿರುಗಳು. ..... 
ಸುತಾರಾಂ  ಒಪ್ಪಲಿಲ್ಲ...

"ನಿನ್ನ  ಪುಸ್ತಕ ಬಿಡುಗಡೆ ..
ನೀನು ಅಲ್ಲಲ್ಲಿ ಓಡಾಡುತ್ತ ಮಾತಾಡಿಸುತ್ತ ಇರು ಸಾಕು ..
ಉಳಿದುದನ್ನು ನಾವು ನೋಡಿಕೊಳ್ಳುತ್ತೇವೆ.." ಅಂದು ಬಿಟ್ಟರು...

ಆದರೆ ಗಡಿಬಿಡಿಯಲ್ಲಿ ನಿಮ್ಮನ್ನೆಲ್ಲ ಮಾತನಾಡಿಸಲು ಆಗಲಿಲ್ಲ..

ಎಷ್ಟೋ ಹೊಸ ಗೆಳೆಯರು.. ಸಹೋದರಿಯರು ಬಂದಿದ್ದರು...!

ಇನ್ನೂ ಏನೇನೋ ಮಾಡಬೇಕಿತ್ತು...!
ಕೆಲವು ತುಂಟತನದ ಉಪಾಯಗಳಿದ್ದವು... 
ಎಲ್ಲದಕ್ಕೂ ಮನೆಯಲ್ಲಿ ನಿಷೇಧ ಹೇರಿದ್ದರು...

ಮೆಚ್ಚಿನ ಜಿ.ಎನ್ ಮೋಹನ್... ಜೋಗಿ.. 
ಹಾಲ್ದೊಡ್ಡೇರಿ  ಸುಧೀಂದ್ರ  ಬಂದಿದ್ದರು...!

ದೆಹಲಿಯ "ಸೀತಣ್ಣ.., 
ಮುಂಬೈ ಅಶೋಕ್.. ಮತ್ತೆ ನಾಲ್ವರು.. 
ಮಂಗಳೂರಿನಿಂದ ವನಿತಾ... ದಿನಕರ...

ದೂರದ "ಗದಗಿನಿಂದ " ವೀರ ನಾರಾಯಣ  "ಶಿವೂ ಯಳವತ್ತಿ..."

ತನ್ನ ಕಾರ್ಯಕ್ರಮ ತಪ್ಪಿಸಿ ಬೆಳಗಿನ ಬಸ್ಸಿಗೆ ತುಮಕೂರಿನಿಂದ " ವಿಶ್ವಣ್ಣ ನೆಂಬ ತಮ್ಮ" ...

ಹಿರಿಯರಾದ  ಎವರ್ ಗ್ರೀನ್ .. !
ಎವರ್ ಯಂಗ್...!
 "ಹೆಬ್ಬಾರ್ ಸರ್' ಮತ್ತು  ಸತ್ಯ ಪ್ರಕಾಶ್ ಸರ್...!

ಪ್ರೀತಿಯಿಂದ .. ಆಶಿರ್ವಾದವಾಗಿ ಬೆನ್ನುಡಿ ಬರೆದು ಕೊಟ್ಟ  "ಮಂಗಳತ್ತೆ... ತಮ್ಮ ಪತಿಯನ್ನೂ ಕರೆದುಕೊಂಡು ಬಂದಿದ್ದರು... 

ಓಡಾಡುತ್ತಿದ್ದೆ...
ಮಾತನಾಡುತ್ತಿದ್ದೆ..... 
ಹೇಳಲಾಗದ ಸಂತೋಷ...! 
ಸಂಭ್ರಮ...!

ನಿಮ್ಮನ್ನೆಲ್ಲಾ ಹೇಗೆ ಮಾತನಾಡಿಸಿದೆನೋ ಗೊತ್ತಿಲ್ಲ...

ಪ್ರೀತಿ ಹೀಗೆಯೇ ಇರಲಿ....

ಒಂದು ಭಾನುವಾರ ನಮ್ಮ ಸಂಭ್ರಮದಲ್ಲಿ ...
ನಮ್ಮ ಕಾರ್ಯದಲ್ಲಿ ಪ್ರೋತ್ಸಾಹ ಪೂರ್ವಕವಾಗಿ ಭಾಗವಹಿಸಿದ್ದಕ್ಕೆ...


ಅನಿವಾರ್ಯ ಕಾರಣಗಳಿಂದ ಬರಲಾಗದೆ...
ಶುಭ ಕೋರಿದ.. 
ಯಶಸ್ಸನ್ನು ಪ್ರಾರ್ಥಿಸಿದ ಎಲ್ಲ ಗೆಳೆಯರಿಗೆ 
ಸಹೋದರಿಯರಿಗೆ...

ಕೃತಜ್ಞತೆಗಳು...
ವಂದನೆಗಳು... 

"ಇದೆ.. ಇದರ.. ಹೆಸರು..!" 
ಮುಖಪುಟದ ನಾಯಕಿ... ಬೆಡಗಿ...
ಚಂದದ ಕಣ್ಣಿನ.. ಮುದ್ದು..ಪುಟಾಣಿ... " ಅಬ್ಜಾ..."


ಹೂವಿನಂಥಹ ಮಾತಿನಿಂದ.. ಮಧುರ ಕಂಠದಿಂದ.. 
ಕಾರ್ಯಕ್ರಮದ ನಿರೂಪಣೆ...
ಸುಮತಿಯವರಿಂದ...

ಬಹು ಕಾತುರದ ಸಮಯ... ಪುಸ್ತಕ ಬಿಡುಗಡೆ...ಇದೆ... ಇದರ... ಸಂಭ್ರಮ....!!
ಮೆಚ್ಚಿನ "ದುಂಡಿರಾಜ್..."
ಖ್ಯಾತ ನಟ... "ಕೋಮಲ್"...
ಅಂದು... ಇಂದು.. ಎಂದೆಂದಿಗೂ ಹತ್ತಿರದ.. "ದಿವಾಕರ"...
ಸಂಗೀತಕ್ಕೆ  ಜೀವನವನ್ನು ಮುಡುಪಾಗಿಟ್ಟ... "ಉಪಾಸನ ಮೋಹನ್...."


ನನ್ನ ಕನಸನ್ನು "ಸಾಕಾರಗೊಳಿಸಿದ...  ನನ್ನ ಮೆಚ್ಚಿನ... ಆತ್ಮೀಯ.."ಹೂವಿನಂಥಹ " ಮಣಿಕಾಂತ್...


ಒಳಪುಟವಿನ್ಯಾಸ... ಅಕ್ಷರಗಳ ಜೋಡಣೆ... ಒಟ್ಟಾರೆ ಪುಸ್ತಕ "ತಮ್ಮದು" ಎಂದು ಪ್ರೀತಿಯಿಂದ ಮಾಡಿಕೊಟ್ಟ...
 "ಪ್ರೇಂ ಕುಮಾರ್"
(ಹದಿನೈದು ವರ್ಷ ನಮ್ಮ ನಾಡಿನ ದೈತ್ಯ ಪ್ರತಿಭೆ "ಲಂಕೇಶರಲ್ಲಿ" ಇವರ ಒಡನಾಟವಿತ್ತು....)


"ನೀಲಿಮಾ ಪ್ರಕಾಶನ" ಅಮ್ಮನ.. ಮುದ್ದು ಕಂದನ ಪ್ರೀತಿ...



ತುಂಬಿದ ಕೊಡ ತುಳುಕುವದಿಲ್ಲ... 
ಸಜ್ಜನ... ಬರಹಗಾರ .. ವಿಜ್ಞಾನಿ.. "ಹಾಲ್ದೊಡ್ಡೇರಿ ಸುಧೀಂದ್ರ"ರವರು...


ನಗುಮುಖದ  ಮೋಹನ... ಜಿ.ಎನ್.....


ದೈತ್ಯ ಬರಹಗಾರ.. ಗಿರೀಶ್ ರಾವ್... 
ನಮ್ಮ ಮೆಚ್ಚಿನ " ಜೋಗಿ "...
ಕೊಟ್ಟ ಮಾತಿನಂತೆ  ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿದ್ದು... ಮತ್ತಷ್ಟು ಸಂಭ್ರಮ ತರಿಸಿತ್ತು....


ಮೆಚ್ಚಿನ ನಟಿ... ಆತ್ಮಿಯತೆಯಿಂದ ಬಂದಿದ್ದು ಹೀಗೆ...


ಮುಂಬೈನಿಂದ... ನಮ್ಮ ಸಭ್ರಮದಲ್ಲಿ  ಸಡಗರ ಪಟ್ಟಿದ್ದು ಹೀಗೆ...
ಇವರದ್ದು ಒಂದು ಗೆಳೆಯರ ಬಳಗ ಇದೆ... 
"ಸ್ನೇಹ ಲೋಕ" ಅಂತ... ಆರ್ಕುಟ್ಟಿನಲ್ಲಿ...
ಅವರೆಲ್ಲರೂ ಬಂದಿದ್ದರು...

ಡೆಲ್ಲಿ ಮಾಮ... 
ಸೀತಣ್ಣ..  ಬೆಳಗಿನ ವಿಮಾನದಲ್ಲಿ ಕಾರ್ಯಕ್ರಮಕ್ಕಾಗಿಯೇ ಬಂದಿದ್ದರು....


ಬ್ಲಾಗ್ ಲೋಕದ "ಪಡೆಯಪ್ಪ.. ರಜನೀಕಾಂತ್" 
ಮತ್ತು ವನಿತಾ ಪುಟ್ಟಮ್ಮ... ಮಂಗಳೂರಿನಿಂದ ಬಂದಿದ್ದರು...


ಗದುಗಿನ ಗಂಡು... 
ಚುಟುಕು ಕಥೆಗಳ ಸರದಾರ "ಶಿವೂ ಯಳವತ್ತಿ" ನಮ್ಮ ಸಂಭ್ರಮದಲ್ಲಿ ಬಂದಿದ್ದರು...
ಅವರ ಜೊತೆ ಪ್ರತಿಭಾವಂತ ಬರಹಗಾರ " ಗೌತಮ್  ಮದುಮಗ"....



"ಮೂರನೆಯ ಕಿವಿ" ಖ್ಯಾತಿಯ.. 
" ರವಿ  ಐನ್ ಕೈ.."ಮೈಸೂರಿನಿಂದ...
ಮತ್ತು..
ವಿಘ್ನೇಶ್ವರ  ಭಟ್ ಮತ್ತು ದಿವಾಕರ ಇವರ ಸಮಾಲೋಚನೆ....



ಗೆಳೆಯ ಗುಬ್ಬಚ್ಚಿ ಸತೀಶ್..
"ಚಿಂವ್.. ಚಿಂವ್"  ಅಂತ  ತುಮಕೂರಿನಿಂದ ಬಂದಿದ್ದರು...


ಇವರ್ಯಾರೋ ಸಿನೆಮ ನಟ ಅಂದುಕೊಳ್ಳ ಬೇಡಿ... 
ತಮ್ಮ ಪೂರ್ವ ನಿಗದಿತ ಕಾರ್ಯಕ್ರಮ ಬಿಟ್ಟು ..
ಬೆಳಗಿನ ಬಸ್ ಹಿಡಿದು ತುಮಕೂರಿನಿಂದ ಬಂದ... "ವಿಶ್ವಣ್ಣ..." 
ಅಳಿಯಂದಿರ ಗುಂಪಿನ ಸಜ್ಜನ...

ಅಳಿಯಂದಿರ ಗುಂಪಿನ  "ನಾಗು"... ಅಲಿಯಾಸ್ ಕೆ. ನಾಗರಾಜ್..
ಮುಖಪುಟದ ಕಲ್ಪನೆ ಕೊಟ್ಟವರು...
ಬೇಂದ್ರೆ ಸಾಹಿತ್ಯವನ್ನು  ಚೆನ್ನಾಗಿ ಓದಿಕೊಂಡಿದ್ದಾರೆ....

ಇವರ ವಿಚಾರಧಾರೆ ಭಿನ್ನವಾಗಿರುತ್ತದೆ... ನಮ್ಮ ನಾಗು  ಸೌಮ್ಯ ಪ್ರತಿಭಾವಂತ....


ಎಲ್ಲ ಸೇರ್ತಾ ಇದ್ದೇವೆ... ಕಾರ್ಯಕ್ರಮ ಶುರುವಾಗಲಿಲ್ಲವಲ್ಲ ಸ್ವಾಮಿ....


ಮನೆಯವರೆನ್ನೆಲ್ಲ... ಸಿದ್ದಗಂಗಾ  ಸ್ವಾಮಿಜಿಯವರ ಬಳಿ ಕಳಿಸಿ...
 ಡುಮ್ಮಣ್ಣನ ಮತ್ತು ಬ್ಲಾಗ್ ಸ್ನೇಹಿತರನ್ನು  ನೋಡಲು ಬಂದ  
"ಇಂದೂಶ್ರೀ..".

ವಿಳಾಸ ತಪ್ಪಿದ್ದರೂ ಕೊನೆಗೂ ಹುಡುಕಿ ಬಂದ ..
ತಂಗಿ... ಶ್ವೇತಾ... ಮತ್ತು ಅವರ ಸ್ನೇಹಿತೆ...


ಬಾವ ಪಡೆಯಪ್ಪನ ಖದರೇ ಬೇರೆ .. ಬಿಡಿ... 
ಜೊತೆಯಾಗಿ.. ಸಂಗಾತಿ.. ತಂಗಿ  "ವನಿತಾ.."

"ಬಿಸಿಲು ಹನಿ" ಖ್ಯಾತಿಯ ಮಿತ್ರ "ಉದಯ ಇಟಗಿ...."

ಪ್ರೀತಿಯಿಂದ ಬ್ಲಾಗ್ ಓದುವ ದಂಪತಿಗಳು... ಗೀತಾ... ಮತ್ತು ವಿಕ್ರಮ್....

ಹೊಸ ಜೋಡಿ.. ಹೊಸ ಸಿಹಿ ಸುದ್ಧಿಯ ನಿರೀಕ್ಷೆಯಲ್ಲಿ... 
ಗುರುಪ್ರಸಾದ್ ದಂಪತಿಗಳು...



ಸ್ವಲ್ಪ ಹೊತ್ತು ಕ್ಯಾಮರಕ್ಕೆ ರೆಸ್ಟ್ ಕೊಟ್ಟ ..
ಮುದ್ದಿನ ತಮ್ಮಯ್ಯಾ.. "ನವೀನ್ ಹಳ್ಳಿ ಮೇಷ್ಟ್ರು.."


ಸ್ವಲ್ಪ ತಡವಾದರೂ  ಓಡೋಡಿ ಬಂದ ನಟ ಕೋಮಲ್... 
ಮಾತಿನಲ್ಲಿ .. ನಡತೆಯಲ್ಲಿ ಸಜ್ಜನಿಕೆ ಮೆರೆದರು...

ಮಾತೆಯ ಮಮತೆಯೊಂದಿಗೆ .. ಮಡದಿಯ ಪ್ರೀತಿ... ಗೆಳೆಯ ವಸುಧೆಶ್...

 ನಮ್ಮ "ಬಾಲೂ ಸುಬ್ಬು ಸಜ್ಜನರೆಂದು ಗೊತ್ತಿತ್ತು... 
ತುಂಟರೆಂದು ಗೊತ್ತಾಗಿದ್ದು ಈಗ...


"ಪ್ರಕಾಶಣ್ಣಾ.. ನಾನೂ ಬಂದಿದ್ದೇನೆ" ...
ಎನ್ನುವ ಸಹೋದರಿ .. "ವೀಣಾ...' !

"ಮಾನಸ ರಂಗ"ದ ಚೆಲುವೆ.. ವಾಣಿಶ್ರೀ...


"ಪ್ರಕಾಶಣ್ಣ... ನಾನತೂ ಖಂಡಿತ ಬರುವೆ" 
ಎಂದು ಮಾತು ತಪ್ಪದ.....
ಕನಸು ಕಣ್ಣಿನ  ಹುಡುಗಿ.. " ದಿವ್ಯಾ..."

ಇವಳು ಯಾರು ಬಲ್ಲಿರೇನು... ಸಹಜ ಸುಂದರಿ "ಕಾಂತಿ'ಯನು....?


ಚುಕ್ಕಿ ಚಿತ್ತಾರದ  ಭೂರಮೆಯ... ನಾಗಂದಿಗೆ ಕುಟುಂಬ.... 
ನಮ್ಮ ಸಡಗರದಲ್ಲಿ....

ಆಗ್ರಾದ ಹುಡುಗಿಯ  ಅಪ್ಪ.. ಅಮ್ಮ... 
ಸಂಭ್ರಮದಿಂದ ಬಂದಿದ್ದರು....


ಪುಟ್ಟ ತಮ್ಮ "ರಾಜೇಶ್ ಮಂಜುನಾಥ"...

ಈ ಪುಟ್ಟ ಹುಡುಗ  " ದೊಡ್ಡಮನಿ ಮಂಜು.."  
ನನ್ನಂತೆ  ದೊಡ್ಡ ಆಕಾರದ ಆಕೃತಿ ಅಂತ  ಅಂದುಕೊಂಡಿದ್ದೆ...!...



ಸಿಕ್ಕ ಸ್ವಲ್ಪ ಸಮಯದಲ್ಲೇ  ನಮಗೆ ಹುರಿದುಂಬಿಸಿದ ಗೆಳೆಯ " ಶಿವೂ.... " ಗಿರೀಶ್ ಮತ್ತು ನವೀನ್ ಜೊತೆ...
ಇನ್ನೊಂದು ವಿಷಯಗೊತ್ತಾ?


ಗೆಳೆಯ ಕೆ. ನಾಗರಾಜ್  "ಫೋಟೋಕ್ಕೆ" ಸಿಗಲೇ ಇಲ್ಲ...

ಮತ್ತೊಬ್ಬ ಗೆಳೆಯ "ಮಲ್ಲಿಕಾರ್ಜುನ್" ...
ಕ್ಯಾಮರ ತಗೊಂಡು ಬಂದಿದ್ದರು..


ಎಷ್ಟು ಮಾತಾನಾಡಿದರೂ.. ಸಾಲದು...
ಯಳವತ್ತಿ ಇದ್ದಲ್ಲಿ ನಗು ಇರಲೇ ಬೇಕಲ್ಲಾ..!


ಮಗಳನಂತೂ ಕೊಡಲಿಲ್ಲ... ಇದನ್ನಾದರೂ....!!  ?? ...
ಮುದ್ದಿನ  ಅಳಿಮಯ್ಯ "ಅನಿಲು.."


ಇವರು ಬಿಗ್ ಬಾಸ್... ಅಲ್ಲ...ಅಲ್ಲ..!
 ದಿಗ್ ಬಾಸ್...ಅಲ್ಲ..!
ಇವರು.. ಗೆಳೆಯ " ದಿಗ್ವಾಸ್..."

"ನಿಲ್ಲಯ್ಯೋ ನಿಲ್ಲೋ ಓ.. ಕೆಂಚು ಮೀಸೆಯವನೆ...!"
ಕಿರುಮಿಸೆಯಾ... ನಾಚಿಕೆಯ ಅಳಿಮಯ್ಯ "ಶಿವ ಪ್ರಕಾಶ..."


ವಸ್ತಾರೆ ಸಾಹೇಬರ ಜೊತೆ  ಮುಗ್ಧ ನಗುವಿನ  "ಕ್ಯಾಪ್ಶನ್ ಬಾಲಣ್ಣ..." 


ಸ್ನೇಹದ ನಗುವಿನ ಡಾಕ್ಟರ್ ಸಂತೋಷ್... ತಮ್ಮ ಕ್ಯಾಮರಾದೊಂದಿಗೆ..


ಅರಸಿಕೆರೆಯ ಅರಸಿಗ ಮದುವೆಗೆ ಕರೆಯಲು ಬಂದಿದ್ದರು...
ಅಜ್ಜನ ಮನೆಯ 'ಗಣಪತಿ.."


ರವೆ ವಾಂಗಿ ಬಾತ್.. ಅನಾನಸ್ ಕೇಸರಿ ಬಾತ್.. 
ವಾಹ್... 
ಬನ್ರಿ... ಮಾರಾಯರೇ.... 
ಖರ್ಚಾಗಿ ಹೋದೀತು...! 
ಬನ್ರೀ... ಬೇಗ..!

ಬ್ಲಾಗಿಗರ... ಓದುಗರ ಸಡಗರ....


"ರಾಮೇಶ್ವರಕ್ಕೆ ಹೋದರು... ಶನೀಶ್ವರ ಬಿಡಲಾರ"
ಏನೂ ಮಾಡೋಣ ಹೇಳಿ...!

"ಮಾವಾ... 
ನಮ್ಮ ಹುಡುಗಿಯರನ್ನು ನಾವೇ ಹುಡುಕಿ ಕೊಳ್ಳುತ್ತೇವೆ... 
ನಮ್ಮ ಮಾತನ್ನು ವಾಪಸ್ಸು ತೆಗೆದು ಕೊಳ್ಳುತ್ತೇವೆ..." 
ಎಂದ ಅಳಿಯಂದಿರು... !!


"ಗಾದೆಗಳ ಸರದಾರಿಣಿ"  ಸದಾ ಹಸನ್ಮುಖಿ..  
ತಂಗ್ಯಮ್ಮ... "ಶಶಿ..." ಸಂಭ್ರಮ...!


"ಮುಂದೈತೆ ಮಾರಿಹಬ್ಬ" 
ನಮ್ಮನ್ನೆಲ್ಲ ನಗೆಯಲ್ಲಿ ಮುಳುಗಿಸಿದ  ಚುಟುಕು ಕವಿ ಸಾಮ್ರಾಟ್ "ದುಂಡಿರಾಜ್"


ಮುದ್ದಾದ ಜೋಡಿ.. "ಉಮೇಶ್ ಬಾಳಿಕಾಯಿ ದಂಪತಿಗಳು"


ಕವಿ ಮಹಾಬಲಗಿರಿಯೊಡನೆ ಗೆಳೆಯ....


ಎಲ್ಲರದೂ ಮೊದಲ ಭೇಟಿ... 
ಚಂದಾ.. ಚಂದಾ.. ಈ ಸಮಯಾ.... ಸಂಭ್ರಮಾ...!




ಊರಿನಿಂದ ಕಾರ್ಯಕ್ರಮಕ್ಕಾಗಿಯೇ ಬಂದ "ಪರಾಂಜಪೆಯವರು.. 
ಮತ್ತು " ಉಮೇಶ ದೇಸಾಯಿಯವರು"

ವಿ.ಆರ್. ಭಟ್ಟರೇ  ...
ಸಂಕೋಚ ಬೇಡಿ...ಇನ್ನಷ್ಟು ಹಾಕಿಸಿಕೊಳ್ಳಿ..." ... ಬಾಲೂ ಉವಾಚ.....!


"ನೋಡಿಸ್ವಾಮಿ ನಾವು ಫೋಟೋ ತೆಗೆಯೋದು ಹೀಗೆ...." ಗಣಪತಿ...


"ನೋಡಿ ಸ್ವಾಮಿ ನಾವು ಫೋಟೋ ತೆಗೆದಾದ ಮೇಲೆ ಹೀಗೆ..."   ನಂಜುಂಡರು...

ಮಣಿಕಾಂತರ ಕಾರ್ಯಕ್ರಮದಲ್ಲಿ ಹಾಡಿದ್ದರೆನೆ ಚಂದ...!
ಇದು ಹಾಡು ಕೇಳುವ ಸಮಯ....
ಸೋಗಸಾಆದ ಹಾಡುಗಳನ್ನು ಕೇಳಿಸಿದರು  "ಉಪಾಸನ ಮೋಹನ್ ಹಾಗು ಅವರ ಮಿತ್ರರು..."

ಅಂದದ ಫೋಟೋಕ್ಕಾಗಿ ನೆನಪಿನ ಕಾಣಿಕೆ..


"ಇದೆ.. ಇದರ.. ಹೆಸರು..!" ಲೋಕಾರ್ಪಣೆಯ ಸಡಗರ...

ಇದೆ.. ಇದರ ಸಂಭ್ರಮಾ.. !!

ಬರಿ ನಗು.. ಸಡಗರ.. ಸಭ್ರಮವೊಂದೆ... ಅಲ್ಲ...!

ಅಲ್ಲಿ ಭಾವುಕತೆಯೂ ಇತ್ತು...!

ನಮ್ಮ ಹೂವಿನಂಥಹ ಮನಸ್ಸಿನ...ಹೃದಯದ  .. 
ಮಣಿಕಾಂತ್ ನನ್ನಮ್ಮನಿಗೆ ವಂದಿಸಲು ಹೋದಾಗ...


ಸಹಜ ಭಾವುಕತೆ... ಅಲ್ಲಿತ್ತು....
ಅಮ್ಮ ಎನ್ನುವ... ಮಮತೆಯ ಭಾವುಕತೆ ಅಲ್ಲಿ ಕಾಡಿತ್ತು...


ಕಣ್ಣಲ್ಲಿ ಹನಿ ಉದುರಿತ್ತು....

ಅಮ್ಮ... ಎನ್ನಿ...
ಆಯಿ ಎನ್ನಿ.... 
ಆಶೀರ್ವಾದ ಮಮತೆ.. ವಾತ್ಸ್ಯಲ್ಲ ಯಾರಿಗೆ ಬೇಡ ಹೇಳಿ....?

ಇಷ್ಟೆಲ್ಲಾ ಆದರೂ...

ನಿಮ್ಮೆಲ್ಲ ಕೆಲಸ ಬಿಟ್ಟು.. 
ನಮ್ಮ ಕರೆಗೆ  ಬಂದು...
ಪ್ರೋತ್ಸಾಹಿಸಿದ ನಿಮಗೆ  ಹೇಗೆ ವಂದಿಸಲಿ...?...

ಇನ್ನೂ ಏನೇನೋ ಮಾಡಬೇಕಿತ್ತು...
ಮಾತನಾಡಿಸಬೇಕಿತ್ತು...
ನಿಮಗೆಲ್ಲ ಏನೇನೋ ಹೇಳಬೇಕಿತ್ತು....
ಇನ್ನೂ ಏನೇನೋ.. ಇತ್ತು.. !!


ಅಲ್ಲಿ ಸ್ಟೇಜಿನ ಮೇಲೆ ಮಾತನಾಡಲು ನಿಂತವನಿಗೆ..
ಗಂಟಲು ಕಟ್ಟಿತ್ತು.. ಮಾತು ಹೊರ ಬರಲಿಲ್ಲ...

ಹೇಳಲಾಗದೆ... 
ಭಾವ ತೋಡಿಕೊಳ್ಳಲಾಗದೆ.. 
ಒಳಗೊಳಗೇ ಉಳಿದ ಮಾತುಗಳು ನೂರಿತ್ತು..!

"ಕಂಗಳು ...
ವಂದನೆ.. ಹೇಳಿವೆ...!..
ಹೃದಯವು... ತುಂಬಿ.. ಹಾಡಿದೆ....!

ಆಡದೆ... 
ಉಳಿದಿಹ .. ಮಾತು.. ನೂರಿದೆ..... ' !!






(ಗೆಳೆಯರೇ...
ಇನ್ನೂ ಹಲವರ ಫೋಟೋಗಳು ಬಿಟ್ಟುಹೊಗಿವೆ...
ಅನ್ನುವದಕ್ಕಿಂತ... ನನಗೆ ಸಿಕ್ಕಿದ್ದು ಇಷ್ಟು... ಇನ್ನಷ್ಟು ಇದಕ್ಕೆ ಮತ್ತೆ ಸೇರಿಸುವೆ... 
ಒಂದೆರಡು ದಿನಗಳಲ್ಲಿ... ಕ್ಷಮೆ ಇರಲಿ...)


ಇದೆ.. ಇದರ.. ಹೆಸರು" ಪುಸ್ತಕ ನಾಡಿನ ಎಲ್ಲ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ದೊರೆಯುತ್ತದೆ...
ಬೆಂಗಳೂರಿನ 
ಸಪ್ನಾ ಬುಕ್ ಸ್ಟಾಲ್
ಜಯನಗರದ "ಟೋಟಲ್ ಕನ್ನಡ..."
ಗಾಂಧೀ ಬಜಾರಿನ "ಅಂಕಿತ  ಪ್ರಕಾಶನ"

ನವ ಕರ್ನಾಟಕದ ಎಲ್ಲ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತದೆ...

ದಯವಿಟ್ಟು ಪ್ರೋತ್ಸಾಹಿಸಿ...

ಪ್ರೋತಿಯಿಂದ...
ಇಟ್ಟಿಗೆ ಸಿಮೆಂಟು...

ಕಾರ್ಯಕ್ರಮದಲ್ಲಿ ಗೆಳೆಯ ದಿವಾಕರನ "ಭಾಷಣ" ಹೀಗಿತ್ತು...
ಭಾಗ ಒಂದು...

ಭಾಗ ಎರಡು...

48 comments:

ಚುಕ್ಕಿಚಿತ್ತಾರ said...

ಪ್ರಕಾಶಣ್ಣ..

ಆವತ್ತಿನ ಕಾರ್ಯಕ್ರಮ ಮುಗಿದ ಮೇಲೆ ಮನೆಗೆ ಬ೦ದ ನನ್ನವರು...
ನಿಮ್ಮ ’ಇದೇಇದರ ಹೆಸರು” ತಗೊ೦ಡು
ಅತ್ತಿತ್ತ ಹ೦ದದೆ..
..ಕೂತಲ್ಲಿ೦ದ ಏಳದೇ...
ಯಾರನ್ನೂ ಮಾತಾಡಿಸದೇ..
ಓದಿದರೂ ಓದಿದರೂ....ಮುಗಿಯುವ ವರೆಗೂ..
ಕಥೆ ಪುಸ್ಥಕವನ್ನು ಒ೦ದೇಹ೦ತದಲ್ಲಿ ಓದಿದ್ದು ಅವರ ಜೀವಮಾನದಲ್ಲಿ ಅದೇ.. ಮೊದಲು...

ಇರಲಿ ಸಹಿಸಿಕೊ೦ಡಿದ್ದೇನೆ...
ಆದರೆ ಇವರು ಆಮೇಲಿ೦ದ ಅಷ್ಟೊಷ್ಟೊತ್ತಿಗೆ ನಗಲು ಶುರುಮಾಡಿದ್ದಾರೆ..
ಇದಕ್ಕೆ ಏನು ಕಾರಣ..?
ಯಾರು ಕಾರಣ...?
..
..
..
..
..:):):)


ಕಾರ್ಯಕ್ರಮ ತು೦ಬಾ ಚನ್ನಾಗಾಯ್ತು...:):)

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಕಾರ್ಯಕ್ರನಕ್ಕೆ ಹೋದ ಸಂತೋಷವಾಯಿತು
ಖಂಡಿತ ಮುಂದಿನ ಪುಸ್ತಕ ಬಿಡುಗಡೆ ತಪ್ಪಿಸಿಕೊಳ್ಳುವುದಿಲ್ಲ
ಎಲ್ಲ ಬ್ಲಾಗ್ ಗೆಳೆಯರ ಮುಖ ಪರಿಚಯವೂ ಆಯಿತು
ಪುಸ್ತಕಕ್ಕೆ ಅಭಿನಂದನೆಗಳು

umesh desai said...

the programe was ggod. we left early with a family friend whom we met in your function. so in groupphoto etc. i am missing.

ಆದೇಶ್ ಕುಮಾರ್ ಸಿ ಟಿ - Adesh Kumar C T said...

Prakashanna,

Kshamisibidu baralagalilla.. Halad Internals bandu marane dinave kutittu.. Hoda bari sariyagi barediralilla ee baari bareyalilla andare serisuvude illa andru.. Mundina sari tappolla...

ಗಿರೀಶ್.ಎಸ್ said...

Function was grand success...It was wonderful day...We all enjoyed with new frenz...it was
the kind of stage which has been set to meet all the bloggers and other personalities..
but still missed few people...
ಸ್ನೇಹ ಪ್ರೀತಿ ಹೀಗೆ ಬೆಳೆಯಲಿ ,ಜೈ ಹೋ!

ಸುಧೇಶ್ ಶೆಟ್ಟಿ said...

blogigara yaava kaaryakramakkoo baralaagalilla annuva besara ittu.. eega adhu immadi aayitu :(

pusthaka kanditha oduve :)

ಸುಮ said...

ತುಂಬಾ ಚಂದದ ಅತ್ಮಿಯವಾದ ಕಾರ್ಯಕ್ರಮವಾಗಿತ್ತು ಪ್ರಕಾಶಣ್ಣ . ಬ್ಲಾಗ್ ಗೆಳೆಯರನ್ನೆಲ್ಲ ಭೇಟಿ ಮಾಡಿದ ಸಂತಸ ಬೇರೆ :)

Ittigecement said...

ಚುಕ್ಕಿಚಿತ್ತಾರ ವಿಜಯಾ...

ನಟರಾಜ ಪುಸ್ತಕ ಓದಿದ್ದಾನೆಂದರೆ ಅದೊಂದು ಅಪೂರ್ವ ದಾಖಲೆ ಎಂದು ಹೇಳುತ್ತಾರೆ..
ಅದರಲ್ಲೂ ನನ್ನ ಪುಸ್ತಕ ಓದಿದ್ದಾರೆ ಅಂದರೆ ನನಗೂ ಹೆಮ್ಮೆ...!

ನೀವೆಲ್ಲ ದಂಪತಿಗಳು ಬಂದು ಶುಭ ಹಾರೈಸಿದ್ದು.. ಖುಷಿಯಾಯಿತು..

ಸ್ನೇಹ ವಿಶ್ವಾಸ ಯಾವಾಗಲೂ ಇರಲಿ..
ಪ್ರೀತಿಯಿಂದ
ಪ್ರಕಾಶಣ್ಣ..

ಶಿವಪ್ರಕಾಶ್ said...

ಸೂಪರ್ ಸಿಮೆಂಟು... ಸೆಂಟಿಮೆಂಟು...
ಸೂಪರ್ ಡೈರೆಕ್ಷನ್...
ಸೂಪರ್ ಚಿತ್ರ-ಕಥೆ....
ಸೂಪರ್ ಮಾವಯ್ಯ...
ಸೂಪರ್ ಅಳಿಯಂದಿರು...
ಸೂಪರ್ ಗೆಳೆಯರು...
ಎಲ್ಲ ಸೂಪರೋ ಸೂಪರ್...
ಒಟ್ನಲ್ಲಿ ಸಿನಿಮಾ ಖತರ್ನಾಕ್(ಅದ್ಭುತ) ಆಗಿತ್ತು... :)

shivu.k said...

ಸರ್,


ನಾನು ಅನಿರೀಕ್ಷಿತವಾಗಿ ಬೇಗ ಹೋಗಬೇಕಾಗಿತ್ತು. ಕಾರ್ಯಕ್ರಮ ತುಂಬಾ ಚೆನ್ನಾಗಿ ಅಗಿರುವ ವಿಚಾರವನ್ನು ಫೋನ್ ಮಾಡಿ ತಿಳಿದುಕೊಂಡೆ. ಅದನ್ನು ತಪ್ಪಿಸಿಕೊಂಡಿದ್ದಕ್ಕೆ ಮತ್ತು ಗ್ರೂಪ್ ಫೋಟೊ ತಪ್ಪಿಸಿಕೊಂಡಿದ್ದಕ್ಕೆ ವಿಷಾದವಿದೆ.

ಎಲ್ಲಾ ಸುಗಮವಾಗಿ ಮತ್ತು ಸೊಗಸಾಗಿ ಅದಕ್ಕಿಂತ ಆತ್ಮೀಯವಾಗಿ ಆಗಿರುವುದಕ್ಕೆ ಅಭಿನಂದನೆಗಳು.
ಕಾರ್ಯಕ್ರಮ ವಿಡಿಯೋ ಕಾರ್ಯಕ್ರಮವನ್ನು ಬಜ್‍ನಲ್ಲಿ ಹಾಕಿ ಪ್ಲೀಸ್...

Ittigecement said...

ಸಾಗರದಾಚೆಯ ಇಂಚರ ಗುರು...

ನಿಮ್ಮೆಲ್ಲರ ಶುಭ ಹಾರೈಕೆಗೆ ವಂದನೆಗಳು..

ಇಲ್ಲಿ ನಾವೂ ಕೂಡ ನಿಮ್ಮೆಲ್ಲರನ್ನು ಮಿಸ್ ಮಾಡಿಕೊಂಡೆವು...

ಸುಗುಣರ "ಶಾಪದ ಶುಭ ಹಾರೈಕೆ ಆಗಾಗ ನೆನಪಾಗುತ್ತಿತ್ತು..

ಪ್ರೀತಿಗೆ... ಸ್ನೇಹಕ್ಕೆ ವಂದನೆಗಳು...

ಪ್ರಕಾಶಣ್ಣ..

sunaath said...

ಸಮಾರಂಭದ ಚಿತ್ರಗಳನ್ನು ನೋಡಿ ಹಾಗು ವಿವರಣೆ ಓದಿ, ತುಂಬಾ ಖುಶಿಯಾಯಿತು.

Manju M Doddamani said...

ನೋಡಿ ಸ್ವಾಮಿ ನಾವಿರೋದು ಹೀಗೆ...!

ನಾನು ಅನ್ದೊಕೊಂಡಿರ್ಲಿಲ್ಲ ಸರ್ ನೀವು ಅಷ್ಟೋ ದೊಡ್ದದಾಗಿರ್ತಿರ...! ತುಂಬಾ ಖುಷಿ ಆಯ್ತು ನಿಮ್ನ ನೋಡಿ..! ಎಲ್ಲರ ಭಾವ ಚಿತ್ರಗಳೆಲ್ಲ ಸುಂದರವಾಗಿವೆ ಕ್ಲಿಕಿಸಿದ ಕೈಗಳಿಗೆ ಎಷ್ಟು ವಂದನೆಗಳನ್ನ ಹೇಳಿದರು ಸಾಲದು

Niharika said...

Nange baralagalilla. Ksamisi. Adare ellarannu illi photodalli nodi kushi aytu.
Sorry...............
I think i missed a beautiful event.........

ಸೀತಾರಾಮ. ಕೆ. / SITARAM.K said...

ಕಾರ್ಯಕ್ರಮ ಅದ್ಭುತವಾಗಿತ್ತು.
ಅದಕ್ಕಿಂತಾ ಅದ್ಭುತವಾಗಿದೆ ಈ ಮೆಲುಕು....
ಜೈ ಹೋ!

ಜಲನಯನ said...

ಪ್ರಕಾಶನ ಬ್ಲಾಗ್, ಅದ್ರಲ್ಲೂ ಇದೇ ಇದರ ಹೆಸರು- ಬಗ್ಗೆ ಸನಾರಂಭದ ಬಗ್ಗೆ ಬರೆದ ಬ್ಲಾಗ್ ಲೇಖನವನ್ನು ನೋಡ್ಬಾರದು ಅಂತಿದ್ದೆ...ಆದ್ರೆ ಇರಲಾಗ್ಲಿಲ್ಲ..ಓಪನ್ ಮಾಡೇಬಿಟ್ಟೆ..ಈಗ ..ಅನುಭವಿಸ್ತಿದ್ದೇನೆ...ಹೊ.ಉ. ...ನಾನಿಲ್ಲದಾ ಕೂಟ
ಕೊಡುತಿದೆ ಕಾಟ
ಕನಸಲ್ಲೂ ಆ ಸಂಭ್ರಮ
ಗೆಳೆಯರ ಕೂಡಾಟ.....
ಅಭಿನಂದನೆ ದೋಸ್ತಾ....ಇದೇ ಇದರ ಹೆಸರು ಬಹು ಹೆಸರು ಮಾಡಲಿ....

ಮನದಾಳದಿಂದ............ said...

ಪಕ್ಕು ಮಾಮಾ.........
ನಿಮ್ಮ ಪುಸ್ತಕ ಬಿಡುಗಡೆಯ ಸಂಭ್ರಮದ ಶುಭಗಳಿಗೆಯನ್ನು ಮಿಸ್ ಮಾಡಿಕೊಂಡ ನನಗೆ ಯಾರ ಬಾಯಿಂದ ಕೇಳಿದರೂ, ಯಾರ ಬ್ಲಾಗ್ ಓದಿದರೂ, ಯಾವ photo ನೋಡಿದರೂ ಹಸಿವು ಇಂಗುತ್ತಿಲ್ಲ. ಈಗಷ್ಟೇ ಸೀತಾರಾಂ ಸರ್ ಆಫೀಸ್ಸಿಗೆ ಹೋಗಿದ್ದೆ. ಅಲ್ಲಿ ನಿಮ್ಮ ಕಾರ್ಯಕ್ರಮದ್ದೆ ಮಾತು. ಅವರಿಂದ ಸಾಕಷ್ಟು ಕೇಳಿ ತಿಳಿದುಕೊಂಡೆ. ಇಂತಹ ಕಾರ್ಯಕ್ರಮವನ್ನು ಅದಕ್ಕಿಂತ ಹೆಚ್ಚಾಗಿ ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಂಡೆ.......... :(
ಪ್ರೀತಿ ಇರಲಿ...............
ಮನದಾಳದಿಂದ..........

Pradeep Rao said...

ತುಂಬಾ ಚೆನ್ನಾಗಿದೆ ಸಾರ್.. ನನಗೂ ಅಲ್ಲಿ ಎಲ್ಲರನ್ನೂ ಭೇಟಿಯಾಗಿ ಬಹಳ ಸಂತೋಷವಾಯಿತು! ನಿಮ್ಮ ಪುಸ್ತಕವನ್ನೂ ಅರ್ಧ ಓದಿದ್ದಾಯಿತು. ತುಂಬಾ ಕುತೂಹಲಕರವಾಗಿರುವ ಬರವಣಿಗೆಗಳಲ್ಲಿ ಕೆಲವೆಡೆ ಭಾವುಕತೆಯೂ ಇನ್ನು ಕೆಲೆವೆಡೆ ಭರ್ಜರಿ ಹಾಸ್ಯವೂ ತುಂಬಿದೆ. ಸಕ್ಕತ್ತಾಗಿದೆ ಸಾರ್! ನಿಮ್ಮ ಪುಸ್ತಕಗಳು ಹೀಗೆ ಬರುತ್ತಿರಲಿ ಎಂದು ಆಶಿಸುವೆ. ಅಲ್ಲಿಗೆ ಬಂದಾಗ ನಿಮ್ಮ ಮೊದಲ ಪುಸ್ತಕ "ಹೆಸರೇ ಬೇಡ" ಕೊಳ್ಳುವುದನ್ನು ಮರತೆ. ಈಗ ಅದನ್ನೂ ಓದಬೇಕೆನ್ನಿಸುತ್ತಿದೆ. ಎಲ್ಲಿ ದೊರೆಯುತ್ತದೆ ಎಂದು ದಯವಿಟ್ಟು ತಿಳಿಸಿ.

Gubbachchi Sathish said...

naagu sigalilla.

balasubramanya said...

ನನ್ನನ್ನು ಚೇಡಿಸಿದ್ದೀರ !!!! ತಗೊಳ್ಳಿ ನನ್ನ ಶಾಪ ೧] ನಿಮ್ಮ ಕೈಗೆ ಪುರುಸೊತ್ತು ಸಿಗದೇ ಬರೆಯುತ್ತಿರಲಿ.೨]ವರ್ಷಕ್ಕೆರಡು ಪುಸ್ತಕ ಬರೆಯುವಂತಾಗಲಿ.೩] ಎಲ್ಲರ ನಗುವಿನ ತಾಪ ನಿಮಗೆ ತಟ್ಟಲಿ.೪]ಗೆಳೆಯರ ಚುಡಾಯಿಸುವಿಕೆ೪]ಅಳಿಯಂದಿರ ಕಾಟ ನಿಮ್ಮನ್ನು ಕಾಡಲಿ.೫] ಅಳಿಯಂದಿರ ಜೊತೆಗೆ ಸೊಸೆಯಂದಿರ ಕಾಟವೂ ಶುರುವಾಗಲಿ. ಈ ಪಂಚ ಶಾಪಗಳು ನಿಜವಾಗಿ ನಕ್ಕೂ ನಕ್ಕೂ ನಿಮ್ಮ ಹೊಟ್ಟೆ ಕರಗಲಿ.eping

Ittigecement said...

ಉಮೇಶ್ ಸರ್....

ನೀವು ಊರಿಗೆ ಹೋಗಿದ್ದು..
ಕಾರ್ಯಕ್ರಮಕ್ಕೋಸ್ಕರ ಜಲ್ದಿ ವಾಪಸ್ಸಾಗಿದ್ದು ಖುಷಿ ಆಯ್ತು...
ನಿಮ್ಮ ಮಗಳು ಪುಟ್ಟಿ ನನ್ನ ಬಿಡದೆ ಮಾತನಾಡಿಸಿ,
ನಮ್ಮನೆಗೆ ಬನ್ನಿ ಅಂತ ಹೇಳಿ ಹೋಗಿದ್ದಾಳೆ..

ನಿಮ್ಮ ಪುಸ್ತಕವೂ ಆದಷ್ಟು ಬೇಗ ಬರಲೆಂದು ಆಶಿಸುವೆ...

ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ... ಜೈ ಹೋ !

Ittigecement said...

ಆದೇಶು...

ಪರವಾಗಿಲ್ಲ...
ಶುಭ ಹಾರೈಸಿದ್ದೀರಲ್ಲ.. ಅಷ್ಟು ಸಾಕು...

ಮೊದಲು ಓದು.. ಆಮೇಲೆ ಇವೆಲ್ಲ ಇದ್ದೇ ಇರುತ್ತದೆ..

ಬಾರದೆ ಇರುವ ನಿಮಗೊಂದು ಶಿಕ್ಷೆ ಇದೆ..

ಪುಸ್ತಕವನ್ನು ಖರಿದಿಸಿ..
ಓದಿ..
ಹೇಗಿದೆಯೆಂದು ತಪ್ಪದೆ ತಿಳಿಸತಕ್ಕದ್ದು...

ಇದು ನಿಮಗೆ ಶಿಕ್ಷೆ.. ಪರವಾಗಿಲ್ಲವಾ?

ಪ್ರೀತಿಯಿಂದ
ಪ್ರಕಾಶಣ್ಣ..

Ittigecement said...

ಗಿರೀಶು..

ನಿಮ್ಮೆಲ್ಲರ ಓಡಾಟ.. ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ..
ಇದು ತಮ್ಮದೆಂದು ಓಡಾಡಿದ್ದೀರಿ..
ನಾವೆಲ್ಲ ಬರುವಮೊದಲೇ ನೀವೆಲ್ಲ ಅಲ್ಲಿದ್ದೀರಿ...

ನಿಮ್ಮ ಉಪಕಾರ ಹೇಗೆ ತೀರಿಸುವದು..

ಹುಡುಗಿ ಹುಡುಕಲಾ?

ಹ್ಹಾ..ಹ್ಹಾ.. !

ಅವತ್ತೂ ನನ್ನನ್ನು ಬಿಡಲಿಲ್ಲವಲ್ಲ ನೀವೆಲ್ಲ...!!
ಚೆನ್ನಾಗಿತ್ತು ನಿಮ್ಮ ತುಂಟತನ ಜೈ ಜೈ ಜೈ ಹೋ !!

ಪ್ರೀತಿ.. ಸ್ನೇಹ... ನಗು ಯಾವಾಗಲೂ ಹೀಗೆಯೇ ಇರಲಿ..

ಪ್ರೀತಿಯಿಂದ
ಮಾಮಾ.

Ittigecement said...

ಸುಧೇಶು...

ನಿಮ್ಮ ಶುಭ ಹಾರೈಕೆ..
ಪ್ರೀತಿ ಇದ್ದರೆ ಸಾಕು..

ನೀವೆಲ್ಲ ಇದ್ದರೆ ಒಳ್ಳೆಯದಿತ್ತು..

ಅಗಸ್ಟ್ ನಲ್ಲಿ

"ಆಜಾದ್ ಮತ್ತು ನಲವತ್ತು ಜನ ಸ್ನೇಹಿತರು(?) ಬರುತ್ತಿದ್ದಾರಂತೆ..
ಅಗೊಮ್ಮೆ ಭೇಟಿಯಾಗೋಣ..


ನಿಮ್ಮ ಕಾದಂಬರಿ ಚೆನ್ನಾಗಿ ಬರುತ್ತಿದೆ..
ಅದನ್ನು ಆದಷ್ಟು ಬೇಗ ಪುಸ್ತಕ ಮಾಡೋಣ...

ಪ್ರೀತಿಯಿಂದ
ಪ್ರಕಾಶಣ್ಣ..

ದಿನಕರ ಮೊಗೇರ said...

ಕಳೆದ ಸಾರಿ ಬಂದಾಗ "ಅರ್ಧ ಚಂದ್ರ ತೇಜಸ್ವಿ" , ಈ ಸಾರಿ "ಪಡಿಯಪ್ಪ".... ಮುಂದಿನ ಸಾರಿ ......"?" ಹ್ಹ ಹ್ಹಾ...
ಮನಸ್ಸು ಪೂರ್ತಿಯಾಗಿ ಖುಶಿಪಟ್ಟು ವಾಪಸ್ ಬಂದೆವು.... ಮುಂದಿನ ಸಾರಿ ಎಲ್ಲರ ಭೇಟಿ ಯಾವಾಗ...? " ಅಗಷ್ಟ್ ನಲ್ಲಾ..? ಯೋಜನೆ.. ಯೋಚನೆ ಈಗಿನಂದಲೇ ಶುರು ಮಾಡಬಹುದಾ...? ಹೀಗೆ ನಗುತ್ತಿರಿ ಪ್ರಕಾಶಣ್ಣ....

ದೀಪಸ್ಮಿತಾ said...

ಪ್ರಕಾಶಣ್ಣ, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಬ್ಲಾಗಿನ ಅನೇಕ ಗೆಳೆಯರನ್ನು ಕಾಣಲು, ಮಾತಾಡಿಸಲು ಒಳ್ಳೆ ವೇದಿಕೆಯಾಯ್ತು. ನನ್ನ ಬ್ಲಾಗಿನಲ್ಲಿ ಕೂಡ ಒಂದಿಷ್ಟು ಫೋಟೋ ಹಾಕಿದ್ದೇನೆ

Ittigecement said...

ಸುಮಾ...

ನೀವೆಲ್ಲ ಬಂದಿದ್ದು ನಮಗೂ ಖುಷಿಯಾಯಿತು...
ಸರಿಯಾಗಿ ಮಾತನಾಡಲಾಗಲಿಲ್ಲ...

ನಿಮ್ಮ ಯಜಮಾನರ ಕವಿತೆಗಳ ದೊಡ್ಡ ಫ್ಯಾನು ನಾನು...

ಮುಂದೆ ಯಾವುದಾದರೂ ಕಾರ್ಯಕ್ರಮದಲ್ಲಿ ಸುಧಾಕಿರಣರ ಕವಿತಾ ವಾಚನ ಇಟ್ಟರೆ ಚೆನ್ನಾಗಿರುತ್ತದೆ..
ಅವರ ಪ್ರತಿಭೆ ಉಳಿದ ಬ್ಲಾಗ್ ಸ್ನೇಹಿತರಿಗೂ ಗೊತ್ತಾಗುತ್ತದೆ..

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ..
ಪ್ರೀತಿಗೆ ಧನ್ಯವಾದಗಳು...

ಪ್ರೀತಿಯಿಂದ
ಪ್ರಕಾಶಣ್ಣ..

shriram bhat said...

Prakashanna karyakrama super atu,

pustakada modala puta odida nan cousin book tagandavlu vapas kodale tayarille. going tmrw to sapna for another copy.

innu yen helali nim book bagge.

one must sunday.

AntharangadaMaathugalu said...

ಚಿತ್ರಗಳು ತುಂಬಾ ಚೆನ್ನಾಗಿವೆ. ಕಾರ್ಯಕ್ರಮದ ವಿವರಣೆ ಎಲ್ಲಾ ಓದಿ.. ನಾನು ಅಲ್ಲಿ ಬಂದಷ್ಟೇ ಸಂತೋಷವಾಯಿತು.. ಶುಭವಾಗಲಿ ನಿಮಗೆ ಪ್ರಕಾಶ್ ಸಾರ್...


ಶ್ಯಾಮಲ

Gubbachchi Sathish said...

ನಾಗು ಸಿಗಲಿಲ್ಲ
ನಗು ತಡೆಯಲಾಗಲಿಲ್ಲ
ಗೆಳೆಯರ ದಂಡು
ಪ್ರೀತಿಯ ಚೆಂಡು (ಪ್ರಕಾಶಣ್ಣ)
ಕೋಮಲ್ ನ ಗುಂಡು ಗುಂಡು ನಗು
ಡುಂಡಿರಾಜರ ಡಿಂಡಿಮ
ದಿವಾಕರ ಹೆಗಡೆಯವರ "ಪ್ರಕಾಶಹೆಗಡೆ ಜೊತೆ ನಾನು ದಿವಾಕರ ಹೆಗಡೆ" ರೇಡಿಯೋ (ಹಳೆಯ ಮತ್ತು ಮೆಚ್ಚಿನ) ಶೈಲಿಯ ಮುತ್ತುಗಳು.
ಮಣಿಕಾಂತರ ಸಂಭ್ರಮ ಸಡಗರ
ಅಳಿಯಂದಿರ ಗೆರೆ (ಲೈನ್) ಎಳೆಯುವಿಕೆ.
ಉಪಾಸನ ಮೋಹನ ಮತ್ತು ಹಳಿಬಂಡಿ ತಂಡದ "ಜಾಲಿಬಾರು"
ಹೊಸ ಹೊಸ ಬ್ಲಾಗಿಗರ ಜೊತೆ ಹಿರಿಯರು, ಖ್ಯಾತನಾಮರು (ಒಂದು ಕಾಲದಲ್ಲಿ ನಾನು ಇವರೆಲ್ಲ ಯಾವ ಲೋಕದಲ್ಲಿ ಕುಳಿತು ಬರೆಯುತ್ತಾರೆ ಎಂದುಕೊಂಡಿದ್ದೆ)....
ಉಪ್ಪಿಟ್ಟಿನ, ಜೊತೆ ಕೇಸರಿ ಭಾತು, ಕಾಪೀ....
ಮತ್ತೆ ಅಜಿತನ ಭೇಟಿ. (ಇವೆಲ್ಲಾ ಸಾಧ್ಯವಾದದ್ದು ಅಜಿತ್ ಕೌಂಡಿನ್ಯನ ಗೆಳೆತನದಿಂದ ಎಂದು ನೆನೆಯಲು ಹೆಮ್ಮೆಯಾಗುತ್ತದೆ)
- ಚಿಂವ್ ಚಿಂವ್ ಎನ್ನಲು ಇನ್ನೇನು ಬೇಕು.
ಜೈ ಹೋ ಬ್ಲಾಗ್ ಲೋಕ.

Ittigecement said...

ಶಿವಪ್ರಕಾಶು...

ಈ ಕಾರ್ಯಕ್ರಮದ ಓಡಾಟದಲ್ಲಿ ನಿಮಗೂ ತೊಂದರೆ ಕೊಟ್ಟಿದ್ದೇನೆ..
ಅಳಿಯಂದಿರು..
ಮಾವಂದಿರು... ತಂಗಿಯರು..
ಅಣ್ಣಂದಿರು..

ಒಟ್ಟಿನಲ್ಲಿ ..
ನಮ್ಮನ್ನೆಲ್ಲ ಬೆಸೆದ ಈ ಬ್ಲಾಗ್ ಲೋಕಕ್ಕೊಂದು ನಮನ..

ಈ ಪ್ರೀತಿ... ಸ್ನೇಹ ಬಂಧ ಯಾವಾಗಲೂ ಹೀಗೆಯೇ ಇರಲಿ..

ಪ್ರೀತಿಯಿಂದ
ಪ್ರಕಶಣ್ಣ..

ಮನಸು said...

ಪ್ರಕಾಶಣ್ಣ,
ನಿಜಕ್ಕೂ ನಾವು ಮಿಸ್ ಮಾಡಿಕೊಂಡೆವು.... ಮತ್ತೊಂದು ಪುಸ್ತಕ ಬಿಡುಗಡೆ ಮಾಡುವಾಗಲಾದರೂ ನಾವುಗಳು ಸೇರುವಂತಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ... ಕಾರ್ಯಕ್ರಮದ ವಿವರ ಪೂರ್ಣವಾಗಿ ನೀಡಿದ್ದೀರಿ ಧನ್ಯವಾದಗಳು.

shridhar said...

ಅನಿವಾರ್ಯ ಕಾರಣಗಳಿಂದಾಗಿ ಕಾರ್ಯಕ್ರ‍ಮಕ್ಕೆ ಬರಲಾಗಲಿಲ್ಲ .. ನಿಮ್ಮ ಪುಸ್ತಕಕ್ಕೆ ಒಳ್ಳೆಯ ಪ್ರಚಾರ ಸಿಗಲಿ ಮತ್ತು ಮರು ಮುದ್ರಣ ಕಾಣುವಷ್ಟು ಮಾರಾಟವಾಗಲಿ ಎಂದು ಹಾರೈಸುತ್ತೇನೆ ... ಫೋಟೊಗಳನ್ನೆಲ್ಲ ನೋಡೆ ಕಾರ್ಯಕ್ರಮ ಎಷ್ಟು ಚೆನ್ನಾಗಾಗಿರಬಹುದೆಂದು ಊಹಿಸಬಹುದಾಗಿದೆ ..
i missed a good function where i would have had chance to meet many new freinds .

ಚಿತ್ರಾ said...

ಪ್ರಕಾಶಣ್ಣ ,

ಮೊದಲ ಪುಸ್ತಕದ ಬಿಡುಗಡೆಗೂ ಬರಲಾಗಲಿಲ್ಲ. ಇದಕ್ಕಾದರೂ ಬರುತ್ತೇನೆ ಎಂದು ನಿಶ್ಚಯಿಸಿದ್ದೆ .ಆದರೆ , ಅನಿವಾರ್ಯ ಕಾರಣಗಳಿಂದ ಈಗಲೂ ಬರಲಾಗಲಿಲ್ಲ. ಫೋಟೋಗಳನ್ನು ನೋಡುತ್ತಾ ಮನಸಿಗೆ ಬೇಸರವಾಗುತ್ತಿತ್ತು. ಏನೆಲ್ಲಾ ಮಿಸ್ ಆಯ್ತಲ್ಲ, ಎಷ್ಟೊಂದು ಜನರನ್ನು ಭೇಟಿಯಾಗಲು ಆಗಲಿಲ್ಲ ಎಂದು . ಇರಲಿ , ಕಾರ್ಯಕ್ರಮ ಚೆಂದವಾಗಿ ನಡೀತಲ್ಲ ಅದು ತುಂಬಾ ಖುಷಿ. ಇನ್ನಷ್ಟು ಪುಸ್ತಕಗಳನ್ನು ಬಿಡುಗಡೆ ಮಾಡಿ , ಒಮ್ಮೆಯಾದರೂ ಬರಲು ಸಾಧ್ಯವಾಗುತ್ತದಾ ನೋಡೇ ಬಿಡುತ್ತೇನೆ !!!

ಅಮಿತಾ ರವಿಕಿರಣ್ said...

nanu misaade.....pustaka miss madade nanage kodi...prakashanna...

http://jyothibelgibarali.blogspot.com said...

ನಾನು ಮಂಗಳೂರಿನಲ್ಲಿದ್ದರೂ ನಿಮ್ಮ ಪುಸ್ತಕ ಬಿಡುಗಡೆಗೆ ಬಂದ್ದಿದ್ದೆನೋ ಅನ್ನಿಸುತ್ತದೆ. ಪೋಟೊಗಳನ್ನ ಹಾಕಿ ನಮಗೆ ಪರಿಚಯ ಮಾಡಿಕೋಟ್ಟಿದ್ದೀರಿ... ಇನ್ನೂ ನೂರಾರು ಪುಸ್ತಕಗಳು ಹೊರಬರಲಿ.. ಎಂದು ನನ್ನ ಮನದಾಳದ ಶುಭ ಹಾರಯಿಕೆ

Savitha SR said...

ವಾವ್!! ಖುಷಿಯಾಯ್ತು ಓದಿ, ಫೋಟೋಗಳನ್ನ ನೋಡಿ ಪ್ರಕಾಶಣ್ಣ :)
ನಿಮ್ಮ ಮುಂದಿನ ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ತಪ್ಪದೆ ಮಗಳನ್ನ ಕರೆದುಕೊಂಡು ಬರುವೆ :)
-ಸವಿತ ಎಸ್ ಆರ್

Dr.D.T.Krishna Murthy. said...

ಪಕ್ಕು ಮಾಮ;ಸರಳ,ಸಜ್ಜನಿಕೆಯ,ಆತ್ಮೀಯತೆ ತುಂಬಿದ,ನಗುಮುಖದ ನಿಮ್ಮ ಸ್ನೇಹಪೂರ್ಣ ವ್ಯಕ್ತಿತ್ವ ಅದ್ಭುತ.ನಿಮ್ಮ ಸಂಭ್ರಮದಲ್ಲಿ ಪಾಲುಗೊಳ್ಳಲು ಸಾಧ್ಯವಾಗದೆ ಇದ್ದದ್ದಕ್ಕೆ ನೋವಿದೆ.ನಿಮ್ಮಂತಹ ಅಪೂರ್ವ ಸ್ನೇಹಿತರು ನಮಗೆ ಹೆಚ್ಚು ಸಿಗಲಿ.ಫೋಟೋಗಳು ,ಅಡಿಬರಹ ,ಸೂಪರ್!ಅಭಿನಂದನೆಗಳು.

Badarinath Palavalli said...

Sorry brother,
I was in Hassan while you were busy in book release. I missed it. I don’t know Dear Dinakar Mogera is how much angry about me. I beg you to forgive me.

ಬ್ಲಾಗ್ ಲೋಕದ "ಪಡೆಯಪ್ಪ.. ರಜನೀಕಾಂತ್"
ಮತ್ತು ವನಿತಾ ಪುಟ್ಟಮ್ಮ... ಮಂಗಳೂರಿನಿಂದ ಬಂದಿದ್ದರು...

Are so cute lines. about Dinesh Mogera

Good pictures sir.

Ittigecement said...

ಶಿವು ಸರ್..

ನಿಮ್ಮ ಪ್ರೋತ್ಸಾಹ.. ಪ್ರೋತಿ, ಸ್ನೇಹಕ್ಕೆ ಧನ್ಯವಾದಗಳು...

ಸಧ್ಯದಲ್ಲೆ ಕಾರ್ಯಕ್ರಮದ ಉಳಿದ ವಿಡೀಯೋ ಕ್ಲಿಪಿಂಗ್ಸ್ ಹಾಕುವೆ..

ಶುಕ್ರವಾರನೂ ರಜೆಯಿತ್ತು..
ಶನಿವಾರ, ಭಾನುವಾರ ಸೇರಿತ್ತು.. ತುಂಬಾ ಸ್ನೇಹಿತರು ರಜೆ ಅಂತ ಸಣ್ಣ ಟ್ರಿಪ್ಪುಗಳನ್ನು ಕಾಕಿಕೊಂಡು ಬಿಟ್ಟಿದ್ದರು..

ಆದರೂ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು..
ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು..

ಪ್ರೀತಿ.. ಪ್ರೋತ್ಸಾಹ ಹೀಗೆಯೇ ಇರಲಿ...

malathi said...

ಎಲ್ಲರನ್ನು ಭೇಟಿ ಮಾಡೊ ಅವಕಾಶದಿಂದ ವಂಚಿತಳಾಕ್ತಾನೆ ಇದೀನಿ..ನೋಡೋಣ ದೇವರು ಆ ಕಾಲ ಯಾವಗ ಕೊಡ್ತಾನೆ ಅಂತ..ನಿಮ್ಮ ಕಾರ್ಯಕ್ರಮದ ಫೋಟೋಸ್ ನೋಡಿ ಸಂತೋಷ ಆಯ್ತು..ಹಾಗೆ ನಾನು ಬರ್ದೆ ಇರೋದಕ್ಕೆ ಬೇಸರನು ಆಯ್ತು..

malathi said...

ಎಲ್ಲರನ್ನು ಭೇಟಿ ಮಾಡೊ ಅವಕಾಶದಿಂದ ವಂಚಿತಳಾಕ್ತಾನೆ ಇದೀನಿ..ನೋಡೋಣ ದೇವರು ಆ ಕಾಲ ಯಾವಗ ಕೊಡ್ತಾನೆ ಅಂತ..ನಿಮ್ಮ ಕಾರ್ಯಕ್ರಮದ ಫೋಟೋಸ್ ನೋಡಿ ಸಂತೋಷ ಆಯ್ತು..ಹಾಗೆ ನಾನು ಬರ್ದೆ ಇರೋದಕ್ಕೆ ಬೇಸರನು ಆಯ್ತು..

ragat paradise said...

ನಿಮ್ಮ ಈ ಪೋಸ್ಟ್ ಓದಿ ನಿಮ್ಮ ಕಾರ್ಯಕ್ರಮ attend ಮಾಡಿದಷ್ಟೇ ಸಂತೋಷ ಆಯಿತು ಪ್ರಕಾಶಣ್ಣ....

HegdeG said...

program mastagittu, ellarannu meetagi kushi aatu :)

Guruprasad said...

ಎಸ್ಟೋ ದಿನಗಳ ಬಳಿಕ,,, ನನ್ನ ಬ್ಲಾಗ್ ಸ್ನೇಹಿತರನ್ನೆಲ್ಲ ನೋಡುವ ಅವಕಾಶ, ಎಲ್ಲರನ್ನು ಮಾತನಾಡಿಸಿ,, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸದವಕಾಶ,,, ಹಾಗೆ ಅದ್ಬುತ ಎನಿಸುವ ಹಾಡುಗಳು , ಮತ್ತೆ ನವಿರಾದ ಹಾಸ್ಯ,,,,ಸ್ವಲ್ಪ ಅಳು, ಸ್ವಲ ನಗು.... ಇವೆರಡರ ಭಾವನಾತ್ಮಕ ಮಿಶ್ರಣದ,,, ನಮ್ಮ ಪ್ರಕಾಶಣ್ಣನ ಪುಸ್ತಕ ಬಿಡುಗಡೆ ಸಮಾರಂಬ ಮುಗಿದದ್ದೇ ಗೊತ್ತಾಗಲಿಲ್ಲ... ಅಂತು,,, ಒಂದು ಸುಂದರ ಸಂಡೇ ನಮ್ಮದಾಗಿತ್ತು ......
ನನ್ನ madadige ಹೀಗೆ ಪಾಲು ಗೊಳ್ಳುತ್ತಾ ಇರುವುದು ಮೊದಲ ಅನುಭವ.... ಮುಂದೆ ಇಂಥ ಕಾರ್ಯಕ್ರಮ ಎಲ್ಲೇ ಇದ್ದರು,,, ನನ್ನ ಕರೆದುಕೊಂಡು ಹೋಗಿ ಅಂತ,,,,,ಇವಗ್ನಿಂದನೆ ಕೇಳ್ತಾ ಇದ್ದಾಳೆ...

ಕ್ಷಣ... ಚಿಂತನೆ... said...

ನೀವು ಫೋನ್‌ ಮಾಡಿ ಆಹ್ವಾನವಿತ್ತಿದ್ದಿರಿ. ಆದರೆ, ನನಗೆ ಊರಿಗೆ ಹೋಗುವ ಸಂದರ್ಭದಿಂದಾಗಿ ಬರಲಾಗಲಿಲ್ಲ. ಇಲ್ಲಿನ ಫೋಟೋಗಳು ಮತ್ತು ವಿವರಗಳಿಂದ ಅಲ್ಲಿ ನಿಮ್ಮ ಪುಸ್ತಕ ಬಿಡುಗಡೆಯ ಸಂಭ್ರಮವನ್ನು ತಿಳಿದುಕೊಂಡೆ.

ಮುಂದಿನ ಪುಸ್ತಕ ಬಿಡುಗಡೆಗೆ ಖಂಡಿತ ಬರುವೆ. ಮುಂದಿನ ಪುಸ್ತಕ ಯಾವುದು? ಜಸ್ಟ್ ಕುತೂಹಲ....

ಸ್ನೇಹದಿಂದ,

AKSHAY HEGDE said...

Prakashanna nijwaglu nin bokk release function ondu superb function .... nan attend madid modalne function.... estond hosa parichaya aatu khushi aatu ,,, inyavattu ee tara function na mis madkatnille

Love u prakashanna thank u for arrenging the wondeful programme and wonderful books

AKSHAY HEGDE said...

Prakashanna IDE IDARA HESARNA kunt baitakkige ood mugsiddi nice one thank thank u thanku