ಕೂದಲಿನ ಮರೆಯಲ್ಲಿ...
ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ ...
ಸುಮ್ಮನಿರುವ ಕಿವಿಗೆ ತೂತು ಯಾಕೆ ಮಾಡಬೇಕು...??
ಈ... ನೋವು, ಕಣ್ಣೀರು ಎಲ್ಲಯಾಕೆ..?
ನನಗೆ ಅನುಮಾನ ಬಂದರೆ ಮೊದಲು ನೆನಪಾಗುವದು ದಿ ಗ್ರೇಟ್ "ನಾಗು"
ಅವನ ಬಳಿಯೇ ಕೇಳಿದೆ....
"ಲೋ... ಪ್ರಕಾಶು ....
ನಮ್ಮ ಹಿರಿಯರು.. ಹುಚ್ಚರಲ್ಲ...
ಕಿವಿಯಲ್ಲಿ ಮೆದುಳಿಗೆ ಸಂಬಂಧಪಟ್ಟ ನರತಂತುಗಳು ಇವೆ...
ಅಲ್ಲಿ ತೂತು ಮಾಡಿದರೆ ಮೆದುಳು ಉದ್ದೀಪನೆಯಾಗುತ್ತದೆ....
ಪ್ರಚೋದನೆಯಾಗುತ್ತದೆ...
ನಮ್ಮಲ್ಲಿ ಗಂಡು ಹೆಣ್ಣಿನ ಬೇಧವಿಲ್ಲದೆ ಕಿವಿ ತೂತು ಮಾಡಿರುತ್ತಾರೆ..."
ಜನ ಬುದ್ಧಿವಂತರಾಗುತ್ತಾರೆ...
ಕಿವಿ ಚುಚ್ಚೋದರಿಂದ...
ನಿನ್ನಂಥವನ ತಲೆಯಲ್ಲೂ ಅನುಮಾನಗಳು ಬರುತ್ತವೆ..."
ನಾಗು ಮತ್ತೆ ಕೇಳಿದ. ...
" ನಿನಗೆ ಯಾರಾದರೂ ಇಂಟರ್ ನೆಟ್ ತಜ್ಞರು,
ಅರ್ಥ ಶಾಸ್ತ್ರಜ್ಞರು ಗೊತ್ತಿದ್ದರೆ ತಿಳಿಸು..
ನನ್ನ ಕೆಲವು ಅನುಮಾನಗಳನ್ನು ಪರಿಹರಿಸಿ ಕೊಳ್ಳ ಬೇಕು..."
ಈಗ ನನಗೆ ನೆನಪಾದದ್ದು ಗೆಳೆಯ
"ರಾಜೇಶ್ ಮಂಜುನಾಥ್"
ರಾಜು ಫೋನ್ ನಂಬರ್ ಕೊಟ್ಟೆ...
ಭಾವುಕ, ಬುದ್ಧಿವಂತ ...
ಸದಾ ಚಟುವಟಿಕೆಯಲ್ಲಿರುವ ನಗು ಮುಖದ ಹುಡುಗ....
ನಾಗು , ರಾಜು ಏನು ಮಾಡಿದರು ಗೊತ್ತಾಗಲಿಲ್ಲ....
ಆದರೆ ಮರುದಿನ.....
ಇಬ್ಬರು ಸೇರಿ ಹೇಳಿದ ವಿಷಯ ಕೇಳಿ...
ನಾನು ದಂಗಾಗಿ ಹೋದೆ....!!
" ಲೋ... ಪ್ರಕಾಶು... ನಮ್ಮದೇಶದ ಜನ ಸಂಖ್ಯೆ ಎಷ್ಟೋ...?"
"ನೂರು ಕೋಟಿ"
" ಇದರಲ್ಲಿ ನಲವತ್ತು ಪರ್ಸಂಟ್ ಹೆಣ್ಣುಮಕ್ಕಳು ಅಂದುಕೊ...
ಅದರಲ್ಲಿ, ಕಿವಿಗೆ ಏನನ್ನೂ ಧರಿಸದವರು,
ಜಾತಿ ಪಾತಿ ಎಲ್ಲ ಹದಿನೈದು.. ಪರ್ಸಂಟ್ ಕಳೆದು ಬಿಡು"
" ಉಳಿದದ್ದು ಇಪ್ಪತ್ತಾರು ಕೋಟಿ ಮಹಿಳೆಯರು... "
" ಹಾಗಾದರೆ ಈ ಇಪ್ಪಾತಾರು ಕೋಟಿ ಹೆಂಗಸರು...
ಒಬ್ಬಬ್ಬರು ತಲಾ ೫ ಗ್ರಾಮ್ ಚಿನ್ನ ಕಿವಿಗೆ ಧರಿಸುತ್ತಾರೆ ಅಂದುಕೊಂಡರೆ....
ಎಷ್ಟಾಯಿತು ಗೊತ್ತಾ... ಪ್ರಕಾಶು...?
"ಮಾರಾಯಾ... ಪುಣ್ಯಾತ್ಮಾ...
ನನ್ನ ಕಿವಿ ತೂತು ಈಗ ಮುಚ್ಚಿ ಹೋಗಿದೆ...
ನನಗೆ ಈಗ ಅನುಮಾನವಷ್ಟೇ ಬರೋದು...
ಪರಿಹಾರ ಹೊಳಿಯೋದಿಲ್ಲ....
ನೀನೇ ಹೇಳು..."
"೧೩೦೦ ಟನ್... ಬಂಗಾರ ಆಯಿತು...!!.."
" ಅಬ್ಬಾ...!! ಅಯ್ಯೋ... !! ಹೌದೇನೋ...?"
"ನಿಜ... ಇದು ಎಷ್ಟು ರೂಪಾಯಿ ಆಯಿತು ಗೊತ್ತಾ...???.."
"....!!...??...!!."
" ಲೋ.... ಪ್ರಕಾಶು...
ಇದು ನಿನ್ನ ಬಳಿ ಎಣಿಸಲಾಗದಷ್ಟು...!
೧,೮೨,೦೦೦ ಕೋಟಿ.. ರುಪಾಯಿಗಳು..!!!!
೧.೮೨ ಟ್ರಿಲಿಯನ್ ಅಂತ ಹೇಳ ಬಹುದು...."
ನಾನು ಎಚ್ಚರ ತಪ್ಪಿ ಬೀಳುವದೊಂದು ಬಾಕಿ....!!!!!
" ಅಂದರೆ....
ಕರ್ಣಾಟಕದ ಮೂರುವರ್ಷದ ಬಜೆಟ್ ಈ ಹಣದಲ್ಲಿ ನಿಭಾಯಿಸ ಬಹುದು...!!!!!
ನಮ್ಮದೇಶದ ರಕ್ಷಣಾ ವೆಚ್ಚವನ್ನು ನಿಭಾಯಿಸಿ....
ಕಾಶ್ಮೀರದ ಖರ್ಚನ್ನೂ ಭರಿಸ ಬಹುದು...!!!
" ಬಾಂಗ್ಲಾದೇಶದ ವಾರ್ಷಿಕ ಬಜೆಟ್ ಎರಡುವರ್ಷ ಮಾಡ ಬಹುದು....!!
ನನಗೆ ತಡೆದು ಕೊಳ್ಳಲಾಗಲ್ಲಿಲ್ಲ...
"ಪ್ರಕಾಶು... ಇನ್ನೊಂದು ವಿಷಯ ಗೊತ್ತಾ...??
ಈ... ಆರ್ಥಿಕ ಮುಗ್ಗಟ್ಟು ನಮ್ಮ ದೇಶಕ್ಕೆ ಸಮಸ್ಯೆನೇ ಅಲ್ಲ....
ನಮ್ಮ ಹೆಣ್ಣು ಮಕ್ಕಳು ಸ್ವಲ್ಪ ದೊಡ್ಡ ಮನಸ್ಸು ಮಾಡಿದರೆ....!!
" ಮಾರಾಯಾ.., ನೀನೂ..., ರಾಜೇಶ್ ಇದನ್ನೇ ಹುಡುಕಿದಿರಾ...??
ಈ ದೇಶದ ಹೆಣ್ಣು ಮಕ್ಕಳು ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ....
ಹೋಗಿ ಪೋಲಿಸ್ ಪ್ರೊಟೆಕ್ಷನ್ ತಗೊಳ್ಳಿ...
ಮನೆಗೆ ಹೋಗಿ ಈ ವಿಷಯ ಹೇಳ ಬೇಡಿ...
ದೊಣ್ಣೆ ತಗೋತಾರೆ...."
ರಾಜೇಶ್ ಮತ್ತು ನಾಗು ಹೇಳಿದ ವಿಷಯದಲ್ಲಿ ತರ್ಕ ಇದೆ ಅನಿಸಿತು.....
ಈ... ಕಿವಿಯಲ್ಲಿ ಎಷ್ಟು ತೂತು ಇದೆಯೆಂದು ಹೇಳ ಬಲ್ಲಿರಾ...?
ಚಿನ್ನದಂತಹ ಮನಸ್ಸು... ಹೃದಯದ ಬಂಗಾರಿಗೆ...
ಬಂಗಾರವೆಂದರೆ ಯಾಕಿಷ್ಟು ಮೋಹ...?
ಕಣ್ಣು ಬಿಟ್ಟು ...ನೀ .. ನೋಡು ಒಮ್ಮೆ...
ಕಿವಿಯ ಸೌಂದರ್ಯವಾ....!!
ಆರಂಕುಶ ವಿಟ್ಟೋಡೆನ್ನ ಮನ ನೆನೆವುದು...
ತರುಣಿಯ ಚಂದದ ಕಿವಿಗಳನು......
ಕಿವಿಯೂ.... ಚೆಲುವೆಲ್ಲಾ ತಂದೆಂದಿತು....!!
ಕಿವಿಯ ನೋಡುತಿರೆ....
ಮೊಗವ ನೋಡುವಾಸೆ....
ನಿನ್ನ ಕಿವಿಯ ಅಂದ...
ನುಡಿಸಿದೆ ನನ್ನ ಹೃದಯದಿ.... ಸರಿಗಮ.......
ಕವಿಯ ಕಾವ್ಯದ ಸೊಬಗು... ನಿನ್ನಯ ಕಿವಿಯು.....
ಕಿವಿಯ ಅಂದ ಚಂದವ... ನೋಡುತ...
ಮನದ ಮೃದಂಗದ ... ತಕಧಿಮಿತಾ....
ಜಯಂತ್ ಕಾಯ್ಕಿಣಿಯವರ ಶಬ್ಧಗಳಲ್ಲಿ...
ಪದ್ಯವಾಗುವಾಸೆ...... ರಾಗವಾಗಿ ಹಾಡಾಗುವಾಸೆ....
ನನ್ನೊಲವಿನ ಓಲೆ...
ಬರೆಯುವೆನು...
ನಲ್ಲಾ..
ಕಿವಿಯೋಲೆಯ ಮೇಲೆ....
ನಿನ್ನ ಮೆಚ್ಚುಗೆಯ ನೋಟವೊಂದು ಸಾಕೆನಗೆ...
ಕಾದಿರುವೆ .. ಕಾತರದಿ... ತಿಳಿಯದೆ ನಿನಗೆ...?
ನನ್ನೊಲವು, ಚೆಲುವು...
ಹಲವು ಬಗೆಯ ಕಲರವು...
ನಿನ್ನ ಹ್ರದಯದಿ ಜಾಗ ಪಡೆಯಲು
ಈ ಎಲ್ಲ ಅಲಂಕಾರವು....
ಗೋರಿ ತೇರಾ ಕಾನ್ ಬಡಾ ಪ್ಯಾರಾ.....
ಮೈ ತೊಗಯಾ... ಮಾರಾ.... ದೇಖೆ ....ಯಹಾಂ..ರೇ....!!
ಹರಳು..... ರಗಳೆಯಾಗದೆ.... ತರಳೆ...?
ಜೋಲುವ.. ತೂಗುವ ವಿಸ್ಮಯ.... ವಿಚಿತ್ರ....!!
ತುಮ್ ... ಆಗಯೇ... ಹೋ...
ನೂರ್ ಆಗಯಾ... ಹೇ...!!
ಚಾಂದ್ ಜೈಸೆ ಮುಖಡೆಪೆ... ಯೇಹೈ.... ಸಿತಾರಾ...!!

ಅಂದ... ಚಂದ ವಿಚಿತ್ರದಲ್ಲೂ ಇದೆ....!!
ತೂತಿಲ್ಲದೆಯೂ ಅಲಂಕಾರ....
ಚಂದದ ಹಿಂದೆ ನೋವು ಇರಬೇಕಿಲ್ಲ....!!
ಹಳೆಯ ಸೊಬಗು.... ಹೊಸತನದ ಬೆಡಗು... ಕೂಡಿರಲು...
ಇವಳು ಯಾರು ಬಲ್ಲೆಯೇನು...?
ಮಲ್ಲಿಗೆ ಮುಡಿದವಳೇ...
ಚಂದದಾ ಮನಸಿನವಳೇ...
ಬ್ಲಾಗ್ ಲೋಕದಾ.... ಸಹೋದರಿಯೇ...!!
ಇವಳು ಯಾರು ಬಲ್ಲೆಯೇನು...?
ಚಿನ್ನವಾದರೇನು ಶಿವಾ...?
ಬೆಳ್ಳಿ ಯಾದರೇನು.... ಶಿವಾ...
ಕಿವಿಯಲ್ಲಾ ಚಂದವೇ.. ಶಿವಾ....

ಮತ್ತೆ.. ಮತ್ತೆ..
ಮತ್ತೂ...
ಮತ್ತೇರಿಸಿದೆಯಲ್ಲೇ......
ನಷೆಯಿಲ್ಲದ ಮತ್ತು........ ನಿನ್ನ ಕಿವಿಯ ನತ್ತು....!!
ನಾಗು ಮತ್ತೆ ನನ್ನನ್ನು ಪ್ರಶ್ನಿಸಿದ...
" ನೋಡಪಾ....
ಈ ತೂತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಿಗೇ....ಮಾಡಿ...
ಬಂಗಾರ, ಬೆಳ್ಳಿ ತೂಗು ಬಿಡುತ್ತಾರೆ.... ... ಯಾಕೆ ಗೊತ್ತಾ...?"
" ಪುಣ್ಯಾತ್ಮಾ... ದೇವರಾಣೆ ಗೊತ್ತಿಲ್ಲ..."
" ಪ್ರಕಾಶು... ಅದಕ್ಕೂ ಕಾರಣ ಇದೆ....
ಈಗಲೇ ಬೇಡ ಮುಂದಿನವಾರ ಹೇಳ್ತೇನೆ...."
ಎಂದು ರಾಜೇಶ್ ನನ್ನು ಎಳೆದು ಕೊಂಡು ಹೂರಟು ಹೋದ....
ಯಾಕೆ ಹೆಣ್ಣುಮಕ್ಕಳಿಗೆ... ಹೀಗೆ ಮಾಡುತ್ತಾರೆ...?"
ನಾನು ಕಿವಿಯನ್ನು ಒಮ್ಮೆ... ಮುಟ್ಟಿಕೊಂಡೆ... !!
ಮತ್ತೆ... ಅನುಮಾನಗಳು..ಶುರುವಾದವು ...!!.......!!
(ಕೃತಜ್ಞತೆಗಳು...
ವಿನೂತ......
ಡಾ. ಪ್ರಶಾಂತ್...
ಡಾ. ಲತಾ...
.................
..................
ರೂಪದರ್ಶಿಗಳು...)