Tuesday, April 12, 2011

"ಇದೇ.. ಇದರ.. ಹೆಸರು... !.."

ಹೆಸರು ಇಡುವದು ಬಲು ಕಷ್ಟದ ಕೆಲಸ...

ಹೆಸರಿಡುವ ಮೊದಲೂ..
ನಂತರವೂ.. 
ಸಮಾಧಾನವಾಗುವದು ಬಲು ಕಡಿಮೆ...

ನನ್ನ ಎರಡನೇ ಪುಸ್ತಕ  ಬಿಡುಗಡೆ ಆಗ್ತಾ ಇದೆ....

ಸರಿ...

"ಈ ಪುಸ್ತಕಕ್ಕೆ  ಏನು ಹೆಸರು...?"

"ಹೆಸರೇ.. ಬೇಡ.. !""

" ಅಯ್ಯೋ...ಅದು ಆಗ್ಲೇ ಇಟ್ಟಾಗಿದೆ.. !!.."

ತಲೆ ಕೆರೆದು ಕೊಳ್ಳುವಂಥಹ  ಪರಿಸ್ಥಿತಿ..!!

ಆಗ ಹೊಳೆದದ್ದು  "ಇದೇ.. ಇದರ.. ಹೆಸರು... !.."

ಆಗ ತಕ್ಷಣ ನೆನಪಾದದ್ದು ನಾಡಿನ ಹೆಸರಾಂತ  ಕಲಾವಿದ "ರಘು ಅಪಾರ"

"ರಘುರವರೆ ..
"ಇದಕ್ಕೊಂದು ಮುಖಪುಟ ಮಾಡಿಕೊಡಿ...
ಪುಸ್ತಕದ ಹೆಸರು..
"ಇದೇ.. ಇದರ.. ಹೆಸರು... !.."

"ನೀವು ಈ..ತರಹದ  ಹೆಸರಿಟ್ಟರೆ ಮುಖ ಪುಟ ಮಾಡುವದು ಹೇಗೆ...?"

ಈಗ ಅಪಾರ ತಲೆ ಬಿಸಿ ಮಾಡಿಕೊಂಡರು...

ಗೆಳೆಯ ಮಲ್ಲಿಕಾರ್ಜುನ.. ದಿನಕರ ಮೊಗೆರಾ.. ಅಳಿಯ  ಅನಿಲ್, ನವಿನ  ಹಳ್ಳಿ ಹುಡುಗ, ಮೈಸೂರಿನ ಬಾಲು ಸರ್.. 
ಎಲ್ಲರೂ.. ಪ್ರಯತ್ನಿಸಿದರೂ..
ಇವರೆಲ್ಲರ ಸಂಗಡ  ನಾನೂ ಕೆಲವು ಫೋಟೋ ತೆಗೆದೆ..

ಯಾವುದೂ " ಅಪಾರ " ಅವರಿಗೆ  ಸಮಾಧಾನವಾಗಲಿಲ್ಲ..
ಅವರೊಂದು ಅಧ್ಬುತ ಪ್ರತಿಭೆ..
ಅವರಿಗೆ ಸಮಾಧಾನವಾದಂತೂ ಪಟ್ಟು ಸಡಿಲಿಸುವವರಲ್ಲ...

ಅಷ್ಟರಲ್ಲಿ ನನ್ನ ಅಳಿಯ ನಾಗರಾಜ ಕೆ. ಒಂದು ಐಡಿಯಾ  ಕೊಟ್ಟ...

ಅದನ್ನು ಪ್ರತಿಭಾನ್ವಿತ  ಛಾಯಾಗ್ರಾಹಕ "ದಿಗ್ವಾಸ್ " ಬಳಿ ಹೇಳಿದೆ...

ಇದು ದಿಗ್ವಾಸ್  ತೆಗೆದ ಫೋಟೋ..

ಅದಕ್ಕೊಂದು ರೂಪ.. ವಿನ್ಯಾಸ ಮಾಡಿದವರು ರಘು  "ಅಪಾರ"

ಗೆಳೆಯರೆಲ್ಲರಿಗೂ ಹೃದಯ ಪೂರ್ವಕ ವಂದನೆಗಳು...

ಅವರೆಲ್ಲರ ಪರಿಶ್ರಮ ನಿಮ್ಮ ಮುಂದಿದೆ...

ಹೇಗಿದೆ...?


ಬೆನ್ನುಡಿಯನ್ನು ಪ್ರೀತಿಯಿಂದ ಬರೆದುಕೊಟ್ಟವರು..
ಹೆಸರಾಂತ ರಂಗ ಭೂಮಿ ಕಲಾವಿದೆ..
ಕಿರುತೆರೆ ನಟಿ..
ಮುಕ್ತ ಮುಕ್ತ ಧಾರಾವಾಹಿಯ "ಮಂಗಳತ್ತೆ.."

ಶ್ರೀಮತಿ. ಜಯಲಕ್ಷ್ಮಿ ಪಾಟಿಲ್..ಅಂತೂ ಮತ್ತೊಂದು ಕನಸು ನನಸಾಗುತ್ತಿದೆ..


ನನ್ನ ಎರಡನೇ ಪುಸ್ತಕ ಬಿಡುಗಡೆಯಾಗುತ್ತಲಿದೆ..


ಇದೇ ತಿಂಗಳು   ಭಾನುವಾರ ...
(24/4/2011)...
ಬಸವನಗುಡಿಯ  ವಾಡಿಯಾ  ರಸ್ತೆಯಲ್ಲಿರುವ...  
"ವರ್ಲ್ಡ್  ಕಲ್ಚರ್  ಸೆಂಟರ್"  ನಲ್ಲಿ..

ಬೆಳಿಗ್ಗೆ ೧೦.೩೦ ಕ್ಕೆ.....

ದಯವಿಟ್ಟು... ದಯವಿಟ್ಟು ಬನ್ನಿ...

ಅಂದು ...
ಕಿವಿಗೆ ಇಂಪಾದ ಸಂಗಿತವಿರುತ್ತದೆ...
ಹೊಟ್ಟೆ ತುಂಬಾ  ನಗಲಿಕ್ಕೆ ಹಾಸ್ಯವಿರುತ್ತದೆ..

ರುಚಿಕಟ್ಟಾದ ತಿಂಡಿ... 
ಬೆಚ್ಚನೆಯ ಟೀ.. ಕಾಫಿ..

ಜೋರಾಗಿ ನಕ್ಕು ನಗಲು ಗೆಳೆಯರ ದಂಡೆ ಇದ್ದಿರುತ್ತದೆ...

ಬ್ಲಾಗಿಗರ... 
ಬ್ಲಾಗ್ ಓದುಗರ  ಮಿನಿ ಸಮ್ಮೇಳನ ಅದಾಗಿರುತ್ತದೆ...

ಬರುವಿರಲ್ಲಾ...?

" ಅದೆಲ್ಲ ಸರಿ... ಮಾರಾಯ್ರೇ...!

ಅತಿಥಿಗಳು ಯಾರು?
ಕಾರ್ಯಕ್ರಮದ ಅಧ್ಯಕ್ಷರು ಯಾರು...?

ನಗಿಸಲು .. 
ಹಾಸ್ಯದ ಹೊಳೆ ಹರಿಸಲು ಯಾರ್ಯಾರು ಬರ್ತಾರೆ...?"

ಸ್ವಲ್ಪ...
ಸ್ವಲ್ಪ....ದಯವಿಟ್ಟು  ಕೆಲವೇ...ದಿನ... ಕಾಯಬೇಕು ..
ವಿವರಗಳನ್ನು ತಿಳಿಸುವೆ....

ನಿಮ್ಮೆಲ್ಲರ ಪ್ರೀತಿ... ಸ್ನೇಹಕ್ಕೆ ಸದಾ ಚಿರ ಋಣಿ...

ಪ್ರೀತಿಯಿಂದ...
ಇಟ್ಟಿಗೆ ಸಿಮೆಂಟು....

ಜೈ.. ಜೈ.. ಜೈ... ಹೋ !!


63 comments:

PARAANJAPE K.N. said...

ತು೦ಬ ಖುಷಿಯಾಯ್ತು, ಮುಖಪುಟ ಆಕರ್ಷಕ, ಬೆನ್ನುಡಿ ಬಗ್ಗೆ ಮಾತೇ ಇಲ್ಲ. ಪುಸ್ತಕದ ಒಳಹೂರಣ ಚೆನ್ನಾಗಿದೆ ಎ೦ಬ ಬಗ್ಗೆ ಅನುಮಾನವೇ ಇಲ್ಲ. ಮುಖ್ಯ ಅತಿಥಿಗಳು ಯಾರು ಅಂತ ಬೇಗ ತಿಳಿಸಿ ಗುರುವೇ.

ಚುಕ್ಕಿಚಿತ್ತಾರ said...

ಜೈ... ಹೋ !!

Shashi jois said...

ತುಂಬಾ ಸಂತೋಷ ಆಯ್ತು..
ಖಂಡಿತ ಬರುವೆ ಮೊದಲನೇ ಸಾಲಿನಲ್ಲಿ ಸೀಟು ಕಾದಿರಿಸಿ ಹ ಹ ಹ .

ಕನಸು ಕಂಗಳ ಹುಡುಗ said...

ಪ್ರಕಾಶಣ್ಣಾ.....
really very nice....
ಮುಖಪುಟ ರಾಶೀ impress ಮಾಡಿತ್ತು....

ತುಂಬಾ ತುಂಬಾ ಖುಷಿ ಆಗ್ತಾ ಇದ್ದು.......

ಜೈ ಹೋ.....

umesh desai said...

hegadeji suspense king..!!
yaaru avaru bega helri

Ittigecement said...

ಪರಾಂಜಪೆಯವರೆ...

ತುಂಬಾ ತುಂಬಾ ತುಂಬಾ ಥ್ಯಾಂಕ್ಸ್...

ನಿಮ್ಮೆಲ್ಲರ ಸ್ನೇಹ.. ಪ್ರೀತಿ ಕೊಟ್ಟ ಈ ಬ್ಲಾಗ್ ಲೋಕಕ್ಕೆ ಜೈ ಜೈ ಜೈ ಹೋ.. !!

ಸಧ್ಯದಲ್ಲೇ... ಬಲು ಬೇಗ " ಆಮಂತ್ರಣ ಪತ್ರಿಕೆ" ನಿಮ್ಮ ಕೈ ಸೇರಲಿದೆ..

ಪ್ರೀತಿ..
ಪ್ರೋತ್ಸಾಹ ಹೀಗೆಯೇ ಇರಲಿ...

ತೇಜಸ್ವಿನಿ ಹೆಗಡೆ said...

Many Congrats :) Mukhaputa SUPERB!

ಅರವಿಂದ್ said...

ಪ್ರಕಾಶಣ್ಣ,

"ಇದೆ ಇದರ ಹೆಸರು" ಮುಖ ಚಿತ್ರ ಹಾಗೂ ಮಂಗಳತ್ತೆಯ ಬೆನ್ನುಡಿ ಎರಡು ಚೆಂದಿದೆ. ನೀವೇನೇ ಮಾಡಿದರು ನಿಮಗೆ ನಮ್ಮ ಬೆಂಬಲ ಸದಾ ಇರುತ್ತೆ, ನಿಮ್ಮ ಪ್ರಯತ್ನಕ್ಕೆ ನಲ್ವಾರ್ಯೇಕೆಗಳು.

--

ಅರವಿಂದ್

Digwas Bellemane said...

;-) :-p

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Congratulations Prakashanna! ಮುಖಪುಟ ಬೊಂಬಾಟ್ ಆಗಿದೆ :-)
ಎಲ್ಲಾ ಚೊಲೋದೇ ಆಗ್ಲಿ..

ಪ್ರೀತಿಯಿಂದ,
ಪೂರ್ಣಿಮಾ

Niharika said...

Hesaru yake bidi, bookke saaku...........
Kandita baruve.
Thank you

ಶಿವಪ್ರಕಾಶ್ said...

Jai Ho Prakashanna....

Waiting for that day.. :)

Shubhashayagalu.. :)

Guruprasad said...

ಪ್ರಕಾಶಣ್ಣ,
ಖಂಡಿತ ವಾಗಿಯೂ, ಬರುತ್ತೇನೆ,,,, ತುಂಬಾ ದಿನ ಆಯಿತು,,, ನಮ್ಮ ಬ್ಲಾಗ್ ಸ್ನೇಹಿತರನ್ನು ನೋಡಿ..... ಮತ್ತೆ,,, ನಿಮ್ಮ ಹೊಸ ಪ್ರಯತ್ನಕ್ಕೆ ಅಭಿನಂದನೆಗಳು....
ಗುರು

ಸಾಗರದಾಚೆಯ ಇಂಚರ said...

All the Best Prakashanna

eradane pustakada bidugadegoo nanage baralu aaguttilla, besara vaaguttade

aadare preeti poorvaka haaraike sadaa ide

Jai Ho

Santosh Hegde Ajjibal said...

ಪ್ರಕಾಶಣ್ಣ ತುಂಬಾ ಸಂತೋಷ ಆಯ್ತು..
ಖಂಡಿತ ಬರುವೆ

shivu.k said...

ಸರ್,

ಮುಖಪುಟ ತುಂಬಾ ಚೆನ್ನಾಗಿದೆ...
ದಿಗ್ವಾಸ್ ಫೋಟೊದಿಂದಾಗಿ ಮುಖಪುಟ ರಚನೆ ಕೆಲಸ ಅಪಾರರಿಗೆ ಸುಲಭವಾಗಿದೆ..ಸರಳವಾಗಿದೆ.
ಅಭಿನಂದನೆಗಳು.
ಮುಂದುವರಿಯಲಿ ಪುಸ್ತಕದ ಅಭಿಯಾನ..

ಜಲನಯನ said...

ಪ್ರಕಾಶೂ - ಇದೇ ಇದರ ಹೆಸರು - ಮತ್ತದೇ ನನ್ನ ಪರಿಸ್ಥಿತಿ...ನಿನ್ನ ಕಳೆದ ಪುಸ್ತಕ ಬಿಡುಗಡೆಗೆ ಬರಲು ಅಂತಹ ಪರಿಚಯವಿರಲಿಲ್ಲ ಆದ್ರೆ ಈಗ ಬರಲಾಗುತ್ತಿಲ್ಲವಲ್ಲಾ ಎಂಬ ಕೊರಗು....
ಇಲ್ಲಿಂದಲೇ ಪುಸ್ತಕಕ್ಕೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭಕೋರುವುದೊಂದೇ ದಾರಿ....
ಶುಭಮಸ್ತು...

mahabalagiri said...

jai ho :)

ಸಂದೀಪ್ ಕಾಮತ್ said...

ಚೆನ್ನಾಗಿದೆ ಇದರ ಹೆಸರು :)

Ittigecement said...

ಚುಕ್ಕಿಚಿತ್ತಾರಾ...
ವಿಜಯಾ...

ಈ ಸಾರಿ ತಪ್ಪಿಸಲೇ ಬಾರದು...
ಬಾವ ನಟರಾಜರನ್ನು ಕರೆದು ಬರಲೇ ಬೇಕು... ಕಾಯ್ತ ಇರ್ತಿನಿ... ಜೈ ಹೋ... !

sunaath said...

ಪ್ರಕಾಶ,
ಮುಖಪುಟದ ವಿನ್ಯಾಸ ತುಂಬ ಚೆನ್ನಾಗಿದೆ. ಒಳಗಿನ ತಿರುಳೂ ಚೆನ್ನಾಗಿದೆ ಎನ್ನುವದು ನಮಗೆಲ್ಲ ತಿಳಿದದ್ದೇ ಆಗಿದೆ. ಎರಡನೆಯ ಪುಸ್ತಕದ ಬಿಡುಗಡೆಗೆ ಶುಭಾಶಯಗಳು.

ನಾಗರಾಜ್ .ಕೆ (NRK) said...

Mama, I wish you all SUCCESS.

ಅನಿಲ್ ಬೇಡಗೆ said...

Prakash Mama,Best Wishes..
Jai Ho..! :)

balasubramanya said...

ಶುಭಾಶಯಗಳು ಪ್ರಕಾಶಣ್ಣ , ಮುಖ ಪುಟ ಚೆನ್ನಾಗಿ ಮೂಡಿಬಂದಿದೆ. ನಾನು ಬರುತ್ತೇನೆ.ಮತ್ತೊಮ್ಮೆ ಬ್ಲಾಗ್ ಮಿತ್ರರನ್ನು ಭೇಟಿಮಾದಬಹುದು. ಜೈ ಹೋ .

Dr.D.T.Krishna Murthy. said...

ಪ್ರಕಾಶಣ್ಣ;ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭಾಶಯಗಳು.ಪುಸ್ತಕವನ್ನೂ ಖಂಡಿತ ಕೊಂಡು ಓದುತ್ತೇನೆ.ಜೈ ಹೋ .

Ranjita said...

Congrats prakashanna ...ಮುಖಪುಟ ತುಂಬಾ ಇಂಪ್ರೆಸ್ಸಿವ್ ಆಗಿದ್ದು ... ಕಾರ್ಯಕ್ರಮ ಚೆನ್ನಾಗಿ ಮೂಡಿ ಬರಲಿ
ನಂದು ಮತ್ತೆದೆ ಹಾಡು ಫೋಟೊಗಳನ್ನ ಕಳಿಸಿ ನೋಡ್ತೇನೆ ಅಸ್ಟೆ :D

ದಿನಕರ ಮೊಗೇರ said...

naanantU bandE bartene......

mukha puTa tumbaa chennaagide......

blog baLagada ellaa snehitaru barali endu aashisuttene...

Ittigecement said...

ಕನಸು ಕಂಗಳ ಹುಡುಗ .. ರಾಘವ..

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ..
ಬಹಳ ದಿನಗಳಾದವು ಎಲ್ಲರೂ ಸೇರದೆ..
ಜೋಕು ಹೇಳಿ ಹರಟೆ ಹೊಡೆಯದೆ..

ಈ ಬಾರಿ ಎಲ್ಲರೂ ಸೇರೋಣ..

ದಯವಿಟ್ಟು ಪ್ರಯತ್ನಿಸಿ ಬನ್ನಿ..
ಪ್ರೀತಿಯಿಂದ
ಪ್ರಕಾಶಣ್ಣ..

Gubbachchi Sathish said...

ಜೈ ಹೋ! ಮುಖಪುಟ ಸಖತ್ತಾಗಿದೆ. ಬೆನ್ನುಡಿ ತುಂಬಾ ಚೆನ್ನಾಗಿ ಬರೆದಿದ್ದಾರೆ ಮಂಗಳತ್ತೆಯವರು. ಮುಖಪುಟಕ್ಕೆ ಅಪಾರರವರ ಜೊತೆ ಗೆಳೆಯರು ಸೇರಿರುವುದು ಹೊಸ ರೂಪುರೇಷೆಯನ್ನೇ ಕೊಟ್ಟಿದೆ. ನಾ ಗೆಸ್ (ಸಜೆಸ್ಟ್ ಮಾಡಿದ್ದೆ ಅನ್ಸುತ್ತೆ) ಮಾಡಿದ್ದ ಹಾಗೆ ನೀಲಿಮಾ ಪ್ರಕಾಶನ! ನನಗೆ ಒಂದು ಸೀಟು...ಒಂದು ಪುಸ್ತಕ. ಶುಭವಾಗಲಿ.

- ಚಿಂವ್ ಚಿಂವ್...

Narayan Bhat said...

ಶುಭ ಹಾರೈಕೆಗಳು.

Vidya said...

congratulations.......:))
mukhaputa chennagide:))

Ittigecement said...

ದೇಸಾಯಿ ಸಾಹೇಬರೆ..

ನಾವೆಲ್ಲ ಮತ್ತೊಮ್ಮೆ ಸೇರೋಣ..
ಹಾಸ್ಯ...
ಸುಂದರ ಹಾಡುಗಳು.. ಸಂಗೀತ...!

ಮತ್ತೇನು ಬೇಕು ಒಂದು ಭಾನುವಾರ ಸಂತೋಷವಾಗಿ ಕಳೆಯಲಿಕ್ಕೆ...!

ನಿಮ್ಮನ್ನೆಲ್ಲ ಅಲ್ಲಿ ಕಾಯುತ್ತೇನೆ ದಯವಿಟ್ಟು ಬನ್ನಿ...

ನಿಮ್ಮ ಸ್ನೇಹ.. ಪ್ರೀತಿಗೆ ಜೈ ಜೈ ಜೈ ಹೋ !!

Manasa said...

Congrats Daada :)

All the best :)

ಗಿರೀಶ್.ಎಸ್ said...

abhinandanegalu...jai ho....

ಅಡಪೋಟ್ರು said...

ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು

Sandeep K B said...

Congratulations Prakashanna.

ಸುಷ್ಮಾ ಮೂಡುಬಿದಿರೆ said...

ಮುಖಪುಟ ಸುಂದರವಾಗಿ ಮೂಡಿ ಬಂದಿದೆ...ಶುಭವಾಗಲಿ......

V.R.BHAT said...

ಶುಭ ಹಾರೈಕೆಗಳು.

ಕ್ಷಣ... ಚಿಂತನೆ... said...

Congratulations!
ಶುಭ ಹಾರೈಕೆಗಳು.

ಲೋಕು ಕುಡ್ಲ.. said...
This comment has been removed by the author.
ಲೋಕು ಕುಡ್ಲ.. said...

ಉತ್ತಮ ಪ್ರಯತ್ನ. ಮುಖಪುಟ ಸುಂದರವಾಗಿದೆ. ಬೆನ್ನುಡಿ ತುಂಬಾ ಇಷ್ಟವಾಯಿತು, ಇಟ್ಟಿಗೆ ಸಿಮೆಂಟಿನ ಮಿಶ್ರಣಕ್ಕೆ ಶ್ರಮದ ನೀರು ವಿಶೇಷವಾಗಿ ಬೆರೆಸಿದ್ದೀರಿ. ಬೆನ್ನುಡಿ,ಮುಖಪುಟದಂತೆ ಒಳ ಪುಟದ ಬರಹದ ಬಗ್ಗೆ ಬೇರೆ ಮಾತಿಲ್ಲ. ಕಾದು ಓದುವ ಕುತೊಹಲವಿದೆ, ಶುಭವಾಗಲಿ...! ನಾವೊ ನಿಮ್ಮೊಂದಿಗಿದ್ದೇವೆ.........

ಸೀತಾರಾಮ. ಕೆ. / SITARAM.K said...

naanu bartaa iddene prakaashanna....Delhiyindaaa... jai ho!!!

Deep said...

ಸಾರ್
ಅಭಿನಂದನೆಗಳು , ಶುಭವಾಗಲಿ.
ಮುಖಪುಟ , ಅದರ ಹಿಂದಿನ ಕಥೆ ಗಮ್ಮತ್ತಾಗಿದೆ!!
ಪುಸ್ತಕ ಜನಪ್ರಿಯವಾಗಿ ಮನೆ , ಮನಗಳನ್ನು ತಟ್ಟಲಿ,
ಶುಭ ಹಾರೈಕೆಗಳೊಂದಿಗೆ

minchulli said...

congrats. magalu thumba chikkavaladakke baralu agtha illa. mundina sala khandithaa.. shubhavagali... ondoo uliyadanthe pusthakagalu kharchaagali...

ಸವಿಗನಸು said...

ಶುಭ ಹಾರೈಕೆಗಳು...ಮುಖಪುಟ ತುಂಬಾ ಚೆನ್ನಾಗಿದೆ...
ದಿಗ್ವಾಸ್ ಫೋಟೊ ಸೂಪರ್.....
ಅಭಿನಂದನೆಗಳು.

geeta bhat said...

Mukhaputa tumba chennagi banju. Wish u 'BEST OF LUCK' 2ne bookge..!!! ee sala nanentu miss madtnille.

Ittigecement said...

ತೇಜಸ್ವಿನಿ...

ಪ್ರೋತ್ಸಾಹಕ್ಕೆ.. ಪ್ರೀತಿಗೆ ತುಂಬಾ ತುಂಬಾ ಧನ್ಯವಾದಗಳು..
ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ... ಶುಭ ಹಾರೈಸಿ...

Ashok.V.Shetty, Kodlady said...

Mukhaputa, Bennudi superrrr....Congrats...All the best......Jai Ho......

Ittigecement said...

ಪ್ರೀತಿಯ "ಅರವಿಂದ"....

ನಾನು ಬರೆದುದನ್ನು ಪ್ರೀತಿಯಿಂದ ಓದುವ ನಿಮಗ್ಗೆ ತುಂಬಾ ತುಂಬಾ ವಂದನೆಗಳು..
ನಿಮ್ಮ ಸ್ನೇಹ..
ಶುಭ ಹಾರೈಕೆ ಯಾವಾಗಲೂ ಹೀಗೆಯೇ ಇರಲಿ...

ಪ್ರೀತಿಯಿಂದ
ಪ್ರಕಾಶಣ್ಣ..

Ittigecement said...

ಪ್ರೀತಿಯ ದಿಗ್ವಾಸು...

ಇದರ ಮುಖ ಪುಟಕ್ಕಾಗಿ ನೀವು ತೆಗೆದುಕೊಂಡ ಶ್ರಮ ನನಗೆ ಗೊತ್ತು..
ಎಷ್ಟೆಲ್ಲ ಪ್ರಯತ್ನ ಪಟ್ಟು..
ಅಷ್ಟೆಲ್ಲ ತೆಗೆದರೂ.. ಅಪಾರನಿಗೆ ಇಷ್ಟವಾಗಿದ್ದು ಇದೊಂದೆ..

ಈಗ ಮುಖ ಪುಟ ಎಲ್ಲರಿಗೂ ಇಷ್ಟವಾಗಿದೆ..

ಈ ಖುಷಿಯಲ್ಲಿ ನಿಮಗೂ ಪಾಲಿದೆ.. ಜೈ ಹೋ !!

Ittigecement said...

ಪೂರ್ಣಿಮಾ..

ದೂರದ ಲಂಡನ್ನಿನಿಂದ ಪ್ರೀತಿಯ ಶುಭ ಹಾರೈಕೆ ಖುಷಿ ಕೊಟ್ಟಿದೆ..

ಹೇಗಿದ್ದರೂ ಬರುತ್ತಿರುವಿರಿ..
ಕಾರ್ಯಕ್ರಮದಲ್ಲೂ ಭಾಗವಹಿಸಿ..

ಪ್ರೀತಿಯಿಂದ

ಪ್ರಕಾಶಣ್ಣ..

Shweta said...

Hey Prakashanna...

All the very best..

letlitbe said...

“ಇದೇ ಇದರ ಹೆಸರು” ಎಂಬ ಹೆಸರಿನ ನನ್ನ ಕವನ ಪ್ರಜಾವಾಣಿಯಲ್ಲಿ 27.6. 2010 ರಂದು ಪ್ರಕಟವಾಗಿತ್ತು. ನಿಮ್ಮ ಪುಸ್ತಕಕ್ಕಾಗಿ ನೀವು ಈ ಹೆಸರನ್ನು ಆಯ್ದಿರುವುದು ಓದಿ ಫುಲಕವಾಯಿತು.

shriram bhat said...

Congrats prakasanna. my calender is bloked for you. nangondu seat.

SHRIRAM BHAT.
9916132760

ಕನಸು said...

ಪ್ರಕಾಸ ಸರ್,
ಅಭಿನಂದನೆಗಳು , ಶುಭವಾಗಲಿ.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಿಯ ಪ್ರಕಾಶಣ್ಣಾ...
ಪುಸ್ತಕ ಬಿಡುಗಡೆ ಆಗ್ತಿರೋದಕ್ಕೆ ಅಭಿನಂದನೆ. ಬಿಡುಗಡೆ ಸಮಾರಂಭಕ್ಕೆ ಶುಭಾಶಯ.

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ

Ittigecement said...

ನಿಹಾರಿಕಾ...

ಬರೆದು ಬಿಡಬಹುದು..
ಆದರೆ ಅದಕ್ಕೆ ಸಮಾಧಾನ ತರುವ ಹೆಸರು ಇಡುವದು ಮಹಾ ಕಷ್ಟ..

ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ..

ಬ್ಲಾಗಿಗರೆಲ್ಲ ಅಲ್ಲಿ ಸೇರೋಣ..
ಮುಖ ಪರಿಚವಿಲ್ಲದೆ ಎಷ್ಟೊಂದು ಆತ್ಮೀಯರಾಗುತ್ತೇವೆ ಈ ಬ್ಲಾಗ್ ಲೋಕದಲ್ಲಿ..

ಹಾಡು..
ಹಾಸ್ಯ..
ಒಂದು ಭಾನುವಾರ ನೆನಪಿಡುವಂತೆ ಮಾಡೋಣ..

ಈವು ಬರುತ್ತಿರುವದು ಖುಷಿಯಾಯಿತು.. ಜೈ ಜೈ ಹೋ !!

Ittigecement said...

ಶಿವ ಪ್ರಕಾಶ್..

ನಾವೆಲ್ಲ ಬೇರೆ ಬೇರೆ ರಂಗಗಳಲ್ಲಿದ್ದರೂ..
ಒಂದು ಬಾಂಧವ್ಯ ಬೆಳೆದು ಬಿಟ್ಟಿದೆ..

ನಿನ್ನೆ ಕುವೈತಿನಿಂದ ಮಹೇಶ್ ಮಾತನಾಡುತ್ತಿದ್ದರು..

" ನಾವೆಲ್ಲ ಇಲ್ಲಿದ್ದರೂ ಮನಸ್ಸೆಲ್ಲ ಅಲ್ಲೇ .. ಇರುತ್ತದೆ.. ಪ್ರಕಾಶಣ್ಣ" ಅಂತಿದ್ದರು..
ಆಜಾದು.. ಮಹೇಶ್ ದಂಪತಿಗಳು..
ಉಳಿದ ದೇಶಗಳಲ್ಲಿರುವ ಬ್ಲಾಗಿಗ, ಓದುಗ ಸ್ನೇಹಿತರು ಬಂದಿದ್ದರೆ ಎಷ್ಟು ಮಜವಿರುತ್ತಿತ್ತು ಅಲ್ಲವೆ?

ಮತ್ತೊಂದು ಸಣ್ಣ ಟ್ರಿಪ್ ಹಾಕಬಹುದಿತ್ತು..

ನಿಮ್ಮೆಲ್ಲರ ಪ್ರೀತಿ.. ಸ್ನೇಹಕ್ಕೆ ವಂದನೆಗಳು..

Ittigecement said...

ಪ್ರೀತಿಯ ಗುರು..


ಬನ್ನಿ..
ಬರುವಾಗ ನಿಮ್ಮ ತಾಯಿಯವರನ್ನೂ ಕರೆದು ಕೊಂಡು ಕುಟುಂಬದವರೊಡನೆ ಬನ್ನಿ..

ಬರುವಾಗ ಕ್ಯಾಮರಾ ಮರೆಯ ಬೇಡಿ..

ಅಮೇರಿಕಾದ ರಂಜಿತಾ.., ಆಸ್ಟ್ರೇಲಿಯಾದ ಮಾನಸಾ..
ಎಲ್ಲರೂ ಕಾರ್ಯಕ್ರಮದ ಫೋಟೊ ಹಾಕಲು ಹೇಳಿದ್ದಾರೆ..

ಕಾರ್ಯಕ್ರಮಕ್ಕೆ ಒಬ್ಬರನ್ನೂ ಬಿಡದೆ ಫೋಟೊ ತೆಗೆದು ಹಾಕೋಣ...

ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ವಂದನೆಗಳು.. ವಂದನೆಗಳು...

Ittigecement said...

ಗುರುಮೂರ್ತಿ...

ದಯವಿಟ್ಟು ಬರಲು ಪ್ರಯತ್ನಿಸಿ...

ಶಿವು ಮತ್ತು ಆಜಾದರ ಪುಸ್ತಕ ಬಿಡುಗಡೆಯಲ್ಲೂ ನಿಮಗೆ ಆಗಲಿಲ್ಲ..

ಈಗ ನೀವು ಭಾರತದಲ್ಲೇ ಇರುವಿರಲ್ಲವೆ?

ಮುಂಬೈನಿಂದ "ಅಶೋಕ್ ಶೆಟ್ಟರು" ತಮ್ಮ ಗೆಳೆಯರೊಂದಿಗೆ ಬರುತ್ತಿದ್ದಾರೆ..

ನೀವೂ ಪ್ರಯತ್ನಿಸಿ...

ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ವಂದನೆಗಳು... ವಂದನೆಗಳು..

shravana said...

Congratulations Sir :)

ವನಿತಾ / Vanitha said...

Good Luck Prakashanna :)
ನಾ ಕುವೈತ್ ಗೆ ಬಂದಾಯ್ತು..ಫೋಟೋಸ್ ಅಪ್ ಲೋಡ್ ಮಾಡಿ, ಇಲ್ಲಿಂದಲೇ ಎಂಜಾಯ್ ಮಾಡ್ತಿವಿ.

0 said...

thumba santhosha gurugale, mukhaputa vinyasa sundharavagdhe...