Friday, April 15, 2011

....... ಅತೀತ.



ನಮ್ಮ ಅತೀತ ನಮ್ಮನ್ನು ಬೆಂಬಿಡದೆ ಕಾಡುತ್ತದೆ...
ಹಿಂದೆ ಮಾಡಿದ ತಪ್ಪುಗಳು ಧುತ್ ಎಂದು  ಎದುರಿಗೆ ಬಂದು ಭೂತವಾಗಿಬಿಡುತ್ತದೆ...

ಕೆಲವು ವರ್ಷಗಳ ಹಿಂದೆ ಕಾಲೇಜಿಗೆ ಹೋಗುವಾಗ ಒಬ್ಬ ಶ್ರೀಮಂತ ಹುಡುಗನ ಗೆಳೆತನ ಮಾಡುತ್ತಿದ್ದೆ...
ಅತನ ಬೈಕ್, ಮೊಬೈಲ್ ಬಹಳ ಆಕರ್ಷಕವಾಗಿದ್ದವು..
ಅವನು ಹಾಕುವ ಡ್ರೆಸ್ , ಮಾತನಾಡುವ ರೀತಿ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು...

ಮೊದಲಿಗೆ ಅದು "ಸ್ನೇಹ"ವಾಗಿದ್ದರೂ...
ನಂತರ ಅದು ಪ್ರೇಮವಾಗಿಬಿಟ್ಟಿತ್ತು ನಮಗೆ ಗೊತ್ತಾಗದ ಹಾಗೆ...

ಎಲ್ಲ ಪ್ರೇಮಿಗಳ ಹಾಗೆ ಗುಟ್ಟಾಗಿ ಪ್ರೇಮಿಸಲು ಶುರುಮಾಡಿದ್ದೇವು..

ಪ್ರೇಮ ಮತ್ತು ಕೆಮ್ಮು ಎಷ್ಟು ದಿನ ಅಂತ ಸುಮ್ಮನಿರಲಿಕ್ಕೆ ಸಾಧ್ಯ...?

ಮೊದಲು ಕಾಲೇಜಿನಲ್ಲಿ ಹುಡುಗರ ಬಾಯಲ್ಲಿ...
ಕ್ರಮೇಣ ಕಾಲೇಜಿನ ಕಂಪೌಂಡಿನಲ್ಲಿ... ಪ್ರಕಟವಾಗತೊಡಗಿದವು...

ಮನೆಯವರಿಗೂ ಗೊತ್ತಾಯಿತು...
ಅಪ್ಪ, ಅಣ್ಣ ದೊಡ್ಡ ರಾದ್ದಾಂತವನ್ನೇ ಮಾಡಿದರು...

" ಮದುವೆ ಅಂದರೆ ಕಾಲೇಜಿನ ಪ್ರೇಮವಲ್ಲ..
ಬದುಕು ಈಗ ನೀವಂದುಕೊಳ್ಳುವಷ್ಟು ಸುಂದರ ಪ್ರೇಮ ಪತ್ರವಲ್ಲ..
ಮೊಬೈಲಿನಲ್ಲಿ ಕಳಿಸುವ ಸಣ್ಣ ಸಂದೇಶವೂ ಅಲ್ಲ...
ಅವರ ಮನೆತನ, ಜಾತಿ ಏನೂ ಗೊತ್ತಿಲ್ಲ..
ಮದುವೆ ಅಂದರೆ ಮನೆತನ, ಹುಡುಗನ ಸ್ವಭಾವ ಬಹಳ ಮಹತ್ವವಮ್ಮಾ..."

ಬಹಳ ಬುದ್ಧಿ ಹೇಳಿದರು...

"ಅವನು ತುಂಬಾ ಒಳ್ಳೆಯವನು.. ಹೆಣ್ಣುಮಕ್ಕಳೆಂದರೆ ತುಂಬಾ ಗೌರವ"
ನಾನು ಹುಡುಗನನ್ನು ಸಮರ್ಥಿಸಿದೆ..

"ನಿನ್ನಂಥಹ ಚಂದದ ಹುಡುಗಿ ಸಿಗುತ್ತಾಳೆಂದರೆ ವ್ಯಾಘ್ರನೂ ಗೋಮುಖನಾಗುತ್ತಾನಮ್ಮ..
ಅವನಾಡಿದ ಮಾತುಗಳೆಲ್ಲವೂ ಹರೆಯದ ಬಣ್ಣದ ಮಾತುಗಳು.."
ನಾನು ಅವರ ಬುದ್ಧಿ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ...

ಮುಂದೇನು?

ಮನೆ ಬಿಟ್ಟು ಆ ಹುಡುಗನ ಜೊತೆ ಪಟ್ಟಣಕ್ಕೆ ಬಂದೆ...
ನಮ್ಮ ಕನಸಿನ ಸಂಸಾರ ಶುರುಮಾಡಿದೆವು..

ಆದರೆ ಸ್ವಲ್ಪ ದಿನಗಳಲ್ಲಿಯೇ ಆತನ ಬಣ್ಣ ಒಂದೊಂದಾಗಿ ಗೊತ್ತಾಗತೊಡಗಿದವು...
ಅವನಿಗೆ ಕುಡಿಯುವ ಚಟ ಇತ್ತು..
ಸಿಗರೇಟು ಎಡಬಿಡದೆ ಸೇದುತ್ತಿದ್ದ..

ಕೆಲವು ದಿನಗಳ ನಂತರ ಮನೆಯಿಂದ ತಂದ ಹಣ ಖರ್ಚಾಯಿತು...
ಅವನಿಗೆ ನನ್ನಲ್ಲಿ ಆಸಕ್ತಿಯೂ ಕಡಿಮೆಯಾಯಿತು...

ನಿಜ ...
ಆತನಿಗೆ ನನ್ನ ಅಂದ, ಯೌವ್ವನ ಬೇಕಾಗಿತ್ತು...
ಬದುಕು ದುಸ್ಥರವಾಯಿತು...
ಕೊನೆಗೆ ಹೇಗೋ ಆತನನ್ನು ಬಿಟ್ಟು ಮನೆಗೆ ಬಂದೆ...

ಅದೆಲ್ಲ ಈಗ ನನ್ನ "ಅತೀತ...

ನನ್ನನ್ನು ಮನೆಯವರೆಲ್ಲ ಗೌರವದಿಂದ  ಸ್ವಾಗತಿಸಿದ್ದು..
ನನ್ನನ್ನು ಸಂಪೂರ್ಣವಾಗಿ ಕ್ಷಮಿಸಿದ್ದು... ನನಗೆ ಬದುಕು ಇನ್ನಷ್ಟು ಭಾರವೆನಿಸತೊಡಗಿತು..

ಪ್ರತಿಕ್ಷಣವೂ ಹಿಂಸೆಯಾಗತೊಡಗಿತು...

ನಾನು ಹೆಚ್ಚು ಅಂತರ್ಮುಖಿಯಾಗತೊಡಗಿದೆ..
ಮೊದಲು ಬಹಳ ಮಾತನಾಡುತ್ತಿದ್ದ ನಾನು ಈಗೀಗ ಮೌನಿಯಾಗತೊಡಗಿದೆ..

ನನ್ನ ಮೌನ ನನ್ನ ಸಂಗಾತಿಯಾಗಿತು..

ನನ್ನಪ್ಪ ನನಗೆ ಗಂಡು ಹುಡುಕಲಿಕ್ಕೆ ಶುರು ಮಾಡಿದ...
ನಾನು ಖಡಾಖಂಡಿತವಾಗಿ ಬೇಡವೆಂದೆ...

"ಮಗಳೆ...
ಬದುಕು ನಿಂತ ನೀರಲ್ಲ...
ಅದು ಹರಿತಾನೆ ಇರಬೇಕು.. ಅದು ಯಾರಿಗಾಗಿಯೂ ಕಾಯ ಬಾರದು..
ಏನೇನು ಆಗಬಾರದಾಗಿತ್ತೊ ಅದು ಆಗಿ ಹೋಯಿತು..
ಮತ್ತೆ ಬದುಕನ್ನು ರೂಪಿಸುವದು ನಮ್ಮ ಜವಾಬ್ದಾರಿ..

ನಿನ್ನನ್ನು ನೋಡಲಿಕ್ಕೆ ಅಮೇರಿಕಾದಿಂದ ಒಬ್ಬ ಗಂಡು ಬರುತ್ತಿದ್ದಾನೆ..
ನಿನ್ನನ್ನು ಮದುವೆಯಾಗಿ ನಿನ್ನನ್ನು ಅಮೇರಿಕಾಕ್ಕೆ ಕರ್ದುಕೊಂಡು ಹೋಗುತ್ತಾನೆ..

ನಿನ್ನ ಹಳೆಯದೆಲ್ಲ ಮರೆತು ಹೊಸ ಜೀವನ ಶುರುವಾಗಲಿ..
ಮತ್ತೆ ಹೊಸ ಚಿಗುರು.. ಹೊಸ ಕನಸು ಮೂಡುತ್ತದೆ.."

ನಾನು ಎಷ್ಟೇ ಬೇಡವೆಂದರೂ ಮನೆಯವರ್ಯಾರೂ ಕೇಳಲಿಲ್ಲ..
ಎಲ್ಲರೂ ನನ್ನನ್ನು ಸುಮ್ಮನಿರಿಸಿದರು..

ಹುಡುಗ "ನೋಡುವ" ಶಾಸ್ತ್ರವೂ ಮುಗಿಯಿತು...

ಹುಡುಗನಿಗೆ ನಾನು ಇಷ್ಟವಾದೆ... 
"ಇನ್ನೊಂದು ವಾರದಲ್ಲಿ ಮದುವೆ ಮಾಡಿಕೊಡಿ.." ಎಂದು ಗಂಟುಬಿದ್ದರು...

ಮನೆಯಲ್ಲಿ ಮತ್ತೆ ಸಂಭ್ರಮ.. ಸಡಗರ... ಸಂತೋಷ...!

ನಾನು  ಮತ್ತೂ ಮೌನಿಯಾದೆ...
"ಅಪರಾಧಿ ಮನೋಭಾವ ಹೆಜ್ಜೆ ಹೆಜ್ಜೆಗೂ ಕಾಡತೊಡಗಿತು...
ನಾನು ಹುಡುಗನಿಗೆ ಮೋಸ ಮಾಡುತ್ತಿರುವೆ.." ಎನ್ನುವ ಭಾವ ಕಾಡತೊಡಗಿತು..

"ಹುಡುಗನಿಗೆ ಎಲ್ಲ ವಿಷಯ ಹೇಳಬೇಕು.. ಹೇಗೆ ಹೇಳಲಿ..?"
ಮನಸ್ಸು ಗೊಂದಲದ ಗೂಡಾಯಿತು... ಪ್ರತಿಕ್ಷಣವೂ ಹಿಂಸೆಯಾಗತೊಡಗಿತು..
ಏನು ಮಾಡಲಿ...? ನಾಡಿದ್ದು ಮದುವೆ..

ಹುಡುಗನ ಬಳಿ ಹೇಗೆ ಹೇಳೀಕೊಳ್ಳಲಿ..?

ಕೆಲವೊಮ್ಮೆ ದೇವರಿಗೆ ನಮ್ಮ ಮಾತುಗಳು ಕೇಳುತ್ತವೆ.

ನನ್ನಪ್ಪ ಗಾಭರಿಯಿಂದ ಓಡೋಡಿ ಬಂದ...

"ಮಗಳೆ.. ಒಂದು  ಆತಂಕ ಬಂದಿದೆಯಮ್ಮಾ... !
ಹುಡುಗನಿಗೆ ನಿನ್ನ ಬಳಿ ಪ್ರತ್ಯೇಕವಾಗಿ ಮಾತನಾಡಬೇಕಂತೆ..

ನಿನ್ನ ಬಳಿ ಏನೋ ಕ್ಲಿಯರ್ ಮಾಡ್ಕೋಬೇಕಂತೆ...

ನೋಡಮ್ಮ.. ಅವನು ಏನು ಕೇಳಿದರೂ ಏನೂ ನಡೆಯಲೇ ಇಲ್ಲ..
ನಮಗೆ ಆಗದವರು ಕೆಟ್ಟ ಸುದ್ಧಿ ಹರಡಿದ್ದಾರೆ.. 
ಎಲ್ಲವೂ ಸುಳ್ಳು...ಅಂತ ಹೇಳಿ ಬಿಡು..
ಮಗಳೇ..
ಒಮ್ಮೆ ಮದುವೆಯಾಗಿ ಅಮೇರಿಕಾಕ್ಕೆ ಹೋದ ಮೇಲೆ .. ಎಲ್ಲವೂ ಸರಿಯಾಗಿ ಬಿಡುತ್ತದೆ...
ತುಂಬಾ ಎಚ್ಚರಿಕೆಯಿಂದ.. ಮಾತನಾಡಮ್ಮ..."


ನನ್ನ ತಂದೆ ನನಗೆ ತಿಳಿಸಿ ಹೇಳಿದರು 

ಒಳ್ಳೆಯದಾಯಿತು..
ನನಗೂ ಹುಡುಗನ ಬಳಿ ಮಾತನಾಡಬೇಕಿತ್ತು...

ಹುಡುಗ ನನ್ನನ್ನು ನಮ್ಮನೆಯ ಟೆರಸಿಗೆ ಕರೆದುಕೊಂಡು ಹೋದ...

"ನೋಡಿ..
ಮುಚ್ಚಿಟ್ಟು.. ಬಚ್ಚಿಟ್ಟು ಮಾತನಾಡುವದು ನನಗೆ ಇಷ್ಟವಿಲ್ಲ..
ಮದುವೆಯೆನ್ನುವದು.. ನಮ್ಮಿಬ್ಬರ ಬಾಳಿನ ಪ್ರಶ್ನೆ..
ನಾವಿಬ್ಬರೂ ಸಾಯುವವರೆಗೆ ಜೊತೆಯಾಗಿ ಇರಬೇಕಾದ ಬಾಂಧವ್ಯ.. 
ಇಲ್ಲಿ ಎಲ್ಲವೂ ಮುಕ್ತವಾಗಿರಬೇಕು..
ನಮ್ಮಿಬ್ಬರ ಮಧ್ಯೆ ಯಾವ ಮುಚ್ಚು ಮರೆಯೂ ಇರಬಾರದು..
ಅಲ್ಲವಾ?"

ನಾನು ತಲೆ ತಗ್ಗಿಸಿದ್ದೆ...
ಅವರನ್ನು ನೋಡುವ ಧೈರ್ಯ, ನೈತಿಕತೆ ನನ್ನಲ್ಲಿಲ್ಲವಾಗಿತ್ತು...

" ನಾನು ಅಮೇರಿಕಾದಲ್ಲಿ ಹುಟ್ಟಿ ಬೆಳೆದವ..
ಅಲ್ಲಿದ್ದರೂ ನನಗೆ ನಮ್ಮ ಸಂಸ್ಕಾರ ಸಿಕ್ಕಿದೆ...  ಹಾಗಾಗಿ ನನಗೆ ಭಾರತದ ಹುಡುಗಿಯೇ ಬೇಕೆಂದು ಹಠಹಿಡಿದು ಬಂದಿದ್ದು.."

ಆತ ಸ್ವಲ್ಪ ಹೊತ್ತು ಸುಮ್ಮನಿದ್ದ..

" ನನಗೆ ನೀವು ತುಂಬಾ ಇಷ್ಟವಾಗಿದ್ದೀರಿ..
ನಿಮ್ಮ ಮೌನ..
ನಿಮ್ಮ ನಾಚಿಕೆ ಎಲ್ಲವೂ  ನನಗಿಷ್ಟ..
ನಿಮ್ಮ ಮನೆಯವರ ಸರಳತೆ , ಸಂಸ್ಕಾರ ತುಂಬಾ ಇಷ್ಟವಾಯಿತು.."

ನಾನು ತಲೆ ತಗ್ಗಿಸಿಯೆ ಇದ್ದೆ... ನಾನು ಮಾತು ಹೇಗೆ ಶುರುಮಾಡಲಿ..?
ಹುಡುಗ ಮತ್ತೆ ತನ್ನ ಮಾತನ್ನೇ.. ಆಡತೊಡಗಿದ...

" ನೋಡಿ..
ನಿಮ್ಮ ಬಳಿ ಒಂದು ವಿಷಯ ಹೇಳಲೇ ಬೇಕಾಗಿದೆ..
ನಿಮ್ಮನ್ನು ನೋಡಿದ ದಿನದಿಂದ ನನ್ನೊಳಗೆ ಬೇಯುತ್ತಿರುವ ವಿಷಯ ಹೇಳಬೇಕಿದೆ.."

ಹುಡುಗ ಮಾತು ನಿಲ್ಲಿಸುತ್ತಲೇ ಇಲ್ಲ..
ನನಗೆ ಅವನ ವಿಷಯ ತಡೆದು ನನ್ನ ವಿಷಯ ಹೇಳಬೇಕಿತ್ತು...
ಆದರೆ ಆತ ಅವಕಾಶ ಕೊಡ್ತಾ ಇಲ್ಲ....


"ನಾನು ಒಂದು ತಪ್ಪು ಮಾಡಿದ್ದೇನೆ...

ಕಳೆದ ವರ್ಷ ನಾನು ಕೆಲಸದ ನಿಮಿತ್ತ ನ್ಯೂಯಾರ್ಕಿಗೆ ಹೋದಾಗ..
ಒಂದು ಹುಡುಗಿಯೊಡನೆ ಒಂದೇ ರೂಮಿನಲ್ಲಿರ ಬೇಕಾಯಿತು..
ಏನು ಆಗಬಾರದಿತ್ತೋ.. ಅದು ಆಗಿ ಹೋಯಿತು..

ಆ ಘಟನೆ ನನಗೆ ಅರಿವಿಲ್ಲದೆಯೇ ಆಗಿ ಹೋಯಿತು..
ನಂತರ ಬಹಳ ಪಶ್ಚಾತ್ತಾಪ ಪಟ್ಟರೂ... 
ಮನದೊಳಗೆ ಸುಡುತ್ತಿದೆ...

ನೋಡಿ.. 
ನಿಮ್ಮ  ಮುಗ್ಧತೆಗೆ ನಾನು ಮೋಸ ಮಾಡುವದಿಲ್ಲ...
ನಿಮ್ಮ ಮುಗ್ಧ ಪ್ರೇಮಕ್ಕೆ ದ್ರೋಹ ಮಾಡಲು ಮನಸ್ಸು ಒಪ್ಪಲಿಲ್ಲ..

ನಿಮಗೊಂದು ಮಾತು ಕೊಡುತ್ತೇನೆ..
ಮುಂದೆ ನಾನು ನಿಮಗೆ ನಿಷ್ಠನಾಗಿರುತ್ತೇನೆ..

ಈಗ ಹೇಳಿ ನಾನು ನಿಮಗೆ ಒಪ್ಪಿಗೆನಾ..? "

ನನ್ನೆದೆ ಢವ ಢವ ಹೊಡೆದುಕೊಳ್ಳತೊಡಗಿತು...
ತಲೆ ಎತ್ತಬೇಕೆಂದರೂ ಎತ್ತಲಾಗಲಿಲ್ಲ...
ಏನು ಹೇಳಲಿ...?
ನನ್ನ ಮೌನವನ್ನು ನೋಡಿ ಹುಡುಗ ಮತ್ತೆ ಹೇಳಿದ..

" ನಿಮಗೆ ಒಪ್ಪಿಗೆ ಇಲ್ಲವೆಂದರೆ ...
ನನ್ನ  ಭಾಗ್ಯವನ್ನು ನಾನು ಹಳಿದುಕೊಳ್ಳಬೇಕು...
ನಿಮ್ಮಂಥವರನ್ನು ಕೈ ಹಿಡಿಯುವ ಭಾಗ್ಯ ನನಗಿಲ್ಲ ಅಂದುಕೊಳ್ಳುತ್ತೇನೆ..
ನನಗೆ ಬೇಸರವಾದರೂ... ನಿಮ್ಮ ಅಭಿಪ್ರಾಯಕ್ಕೆ ನಾನು ಬೆಲೆ ಕೊಡುತ್ತೇನೆ..
ದಯವಿಟ್ಟು ಸ್ಪಷ್ಟವಾಗಿ ಹೇಳಿ..
ನಿಮ್ಮ ಮನೆಯವರಿಗೆ.. ನನ್ನ ಮನೆಯವರಿಗೆ ನಾನು ತಿಳಿಸಿ ಹೇಳುತ್ತೇನೆ..


ಧೈರ್ಯವಾಗಿ ಹೇಳಿ.. 
ನಾನು ನಿಮಗೆ ಒಪ್ಪಿಗೆನಾ?"

ಈಗ ನಾನು ಉತ್ತರ ಕೊಡಲೇ ಬೇಕಿತ್ತು..
ತಲೆ ತಗ್ಗಿಸಿಯೇ.. ಹೇಳಿದೆ..

"ನನಗೆ ನೀವು ಒಪ್ಪಿಗೆ.."

ಹುಡುಗ ಖುಷಿಯಿಂದ ಕುಣಿಯುವದೊಂದು ಬಾಕಿ...!!!
ಬಹಳ ಸಂಭ್ರಮ ಪಟ್ಟ...!

" ನನಗೆ ಈಗ ಸಮಾಧಾನವಾಯಿತು..
ಇನ್ನೊಂದು ಪ್ರಶ್ನೆ..
ನಿಮ್ಮ ಬಾಳಲ್ಲೂ ಯಾರದರೂ ಬಂದಿದ್ದಾರೆಯೆ..?
ಮುಕ್ತವಾಗಿ ಹೇಳಿ..
ಕಾಲೇಜಿಗೆ ಹೋಗುವಾಗ ಯಾರಾದರೂ ಇಷ್ಟವಾಗಿದಾರಾ?"

ನನಗೆ ತುಸು ಧೈರ್ಯ ಬಂದಿತ್ತು...

"ನನ್ನ ಮನಸ್ಸಲ್ಲಿ ಯಾರೂ ಇಲ್ಲ...
ತಲೆ ತಗ್ಗಿಸಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ..
ತಲೆ ತಗ್ಗಿಸಿಕೊಂಡು  ಮನೆಗೆ ಬರುತ್ತಿದ್ದೆ.. 
ಎಷ್ಟೆಂದರೂ ಇದು ಹಳ್ಳಿಯಲ್ಲವೇ..? "

ಹುಡುಗನ ಸಂತೋಷ ಅವನ ಧ್ವನಿಯಲ್ಲಿ ಕಾಣುತ್ತಿತ್ತು..

" ನನ್ನ ಅದೃಷ್ಟ.. !!
ನನಗೆ ನೀವು ಸಿಕ್ಕಿದ್ದೀರಿ..!!..."

ಈಗ ಅವನ ಮಾತನ್ನು ತಡೆದು ನಾನು  ಹೇಳಿದೆ...

ಇಲ್ಲರೀ..
 ನನ್ನ ಅದೃಷ್ಟ ನನಗೆ ನೀವು ನನಗೆ ಸಿಕ್ಕಿದ್ದೀರಿ..


ನನ್ನ ಅದೃಷ್ಟ ಹೆಚ್ಚಿನದು.."

ಹುಡುಗ  ನನ್ನ ಮಾತನ್ನು ಒಪ್ಪಲೇ.. ಇಲ್ಲ...


( ಪ್ರತಿಕ್ರಿಯೆಗಳ ಸಂವಾದ ಚೆನ್ನಾಗಿದೆ... ದಯವಿಟ್ಟು ನೋಡಿ...)



38 comments:

ಅಡಪೋಟ್ರು said...

ಹೌದು ಪ್ರಕಾಶಣ್ಣ, ಬದುಕು ಅತೀತ, ಅದು ನಿಂತ ನೀರಾಗಬಾರದು. ಸದಾ ಹರಿಯುತ್ತಲೇ ಇರಬೇಕು ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಮನುಷ್ಯ ಪದಪೋಶಿಯಾಗಬರದು ಅನ್ನುವುದು ಕೂಡ ಅಷ್ಟೇ ಸತ್ಯ ಅಲ್ಲವ??

Ittigecement said...

ಪ್ರೀತಿಯ ಅಡಪೋಟ್ರು...

ಇಲ್ಲಿ ಹುಡುಗಿಯ ನಿಲುವನ್ನು ನಾನು ಸಮರ್ಥಿಸುತ್ತೇನೆ...
ಹುಡುಗಿ ತನ್ನ "ಅತೀತವನ್ನು ಹೇಳಿಕೊಂಡಿದ್ದರೆ...

ಹುಡುಗ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುತ್ತಾನೆ ಎನ್ನುವದು ಯಾವ ಗ್ಯಾರೆಂಟಿ?

ಹೆಣ್ಣುಮಕ್ಕಳ ಅತೀತವನ್ನು ಪುರುಷ ಸಮಾಜ ಯಾವಾಗಲೂ ಮರೆಯುವದಿಲ್ಲ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

PARAANJAPE K.N. said...

ನಿಮ್ಮ ಕಥೆಯ ತಲೆಬರಹವೇ ಆಕರ್ಷಕ. ಇಲ್ಲಿ ಎಲ್ಲವೂ ನಮ್ಮ ನಿಲುಕಿಗೆ ಮೀರಿದ್ದು, ಅತೀತ. ನಾವು ಅ೦ದುಕೊ೦ಡ೦ತೆ ಯಾವುದೂ ಆಗದು. ಅಪ್ರಿಯ ಸತ್ಯವನ್ನು ಅವಳಿ೦ದ ಹುಡುಗನಿಗೆ ಹೇಳಿಸದೇ ಕಥೆ ಮುಗಿಸಿ ಜಾಣ್ಮೆ ತೋರಿದ್ದೀರಿ. ಆತನ ಮುಕ್ತ ವ್ಯಕ್ತಿತ್ವದ ಮು೦ದೆ ಆಕೆ ಕುಬ್ಜಳಾದಳು , ಹಾಗೆಯೇ ಅವಳಿಗೆ ತನ್ನ ತಪ್ಪುಗಳ ಅರಿವಾಯಿತು. ಹೌದು, ಇದು ಪುರುಷಪ್ರಧಾನ ಸಮಾಜ. ಇಲ್ಲಿ ಹುಡುಗಿಯರು ಕಾಲೆಡವಿದರೆ ಮಹಾಪರಾಧ., ಸನ್ನಿವೇಶವನ್ನು ನಾಜೂಕಾಗಿ ನಿಭಾಯಿಸಿ ಉತ್ತಮ ಕಥೆ ಹೆಣೆದು ಕೊಟ್ಟಿದ್ದೀರಿ.

Ittigecement said...

ಪರಾಂಜಪೆಯವರೆ..

ಹುಡುಗಿ ತನ್ನೊಳಗೆ ಅಪರಾಧಿ ಮನೋಭಾವನೆಯಿಂದ ತೊಳಲಾಡುತ್ತಿದ್ದಳು..
ಕೀಳರಿಮೆಯೂ ಇತ್ತು ಅನ್ನಿ..

ಹುಡುಗನ ಕಥೆ ಕೇಳಿ ಸಹಜವಾಗಿ ಧೈರ್ಯ ಬಂದಿದೆ...

ಹುಡುಗಿ ಹುಡುಗನಿಗೆ ಹೇಳದಿರುವದೇ.. ಸಹಜ ಅನಿಸಿತು..

ನನ್ನ ಅನಿಸಿಸಿಕೆ ತಪ್ಪಿರ ಬಹುದು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಚಿತ್ರಾ said...

ಪ್ರಕಾಶಣ್ಣ ,
ಚೆಂದದ ಕಥೆ. ಹುಡುಗ ಏನು ಮಾಡಿದರೂ ಆತ ಅದನ್ನು ಒಪ್ಪಿಕೊಂಡಾಗ ಹುಡುಗಿ ಅವನನ್ನು ಒಪ್ಪಿಕೊಂಡು ಬಿಡುತ್ತಾಳೆ . ( ಕೆಲವೊಮ್ಮೆ ಆತ ಮೊದಲು ಹೇಳದೆ ಆಮೇಲೆ ವಿಷಯ ತಿಲಿದಾಗಳೂ ) . ಆದರೆ , ಇದೇ ಮನೋಭಾವ ಹುಡುಗ ತೋರಿಸುತ್ತಾನ? ಮನೆಯವರು ಮಗಳ ತಪ್ಪನ್ನು ಕ್ಷಮಿಸಿ , ಅವಳ ಬದುಕನ್ನು ಹೊಸದಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದರು . ಆದರೆ ,ಒಂದೊಮ್ಮೆ ಹುಡುಗಿ ತನ್ನ ಮನದಲ್ಲಿ ಬೇಯುತ್ತಿದ್ದ ಸಂಕಟವನ್ನು ಹುಡುಗನಲ್ಲಿ ಹೇಳಿಕೊಂಡಿದ್ದರೆ? ಆತ ಅಷ್ಟೇ ಪ್ರಾಮಾಣಿಕವಾಗಿ ಅವಳನ್ನು ಒಪ್ಪುತ್ತಿದ್ದನೆ? ಅವನ ಅತೀತ ಅವಳ ಭವಿಷ್ಯದಲ್ಲಿ ಒಂದಾಗಬಹುದು . ಮರೆತೇ ಹೋಗಬಹುದು ಆದರೆ ಅವಳ ಅತೀತ?
ಮುಕ್ತಾಯ ಒಂದರ್ಥದಲ್ಲಿ ಸರಿ ಎನಿಸಿತು .
ಇದನ್ನು ಓದಿದಾಗ " Life in Metro " ಸಿನೆಮಾದ ಸನ್ನಿವೇಶ ನೆನಪಾಯ್ತು. ಆಫೀಸ್ ನಲ್ಲಿ ಒಬ್ಬಾತ ಮತ್ತೊಂದು ಸಂಬಂಧ ಇಟ್ಟುಕೊಂಡು ಹೆಂಡತಿಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾನೆ. , ಒಂಟಿತನ , ಅಪಮಾನದ ನಡುವೆ ಬೇಯುವ ಹೆಂಡತಿ ತನ್ನ ಪರಿಸ್ಥಿತಿ ತಿಳಿದೂ ಮರು ಜೀವನ ನೀಡಲು ಮುಂದಾದ ಹುಡುಗನೊಡನೆ ಓಡಿ ಹೋಗಬಯಸುತ್ತಾಳೆ , ಕೊನೆಗಳಿಗೆಯಲ್ಲಿ ಮನಸ್ಸು ಬದಲಾಯಿಸಿ ಮನೆಗೆ ಬರುತ್ತಾಳೆ. ಅದೇ ಹೊತ್ತಿಗೆ ಮನೆಗೆ ಬಂದ ಗಂಡ ಹೆಂಡತಿಯಲ್ಲಿ ತಾನು ಆಕೆಗೆ ಮೋಸ ಮಾಡಿದ್ದನ್ನು ಹೇಳಿಕೊಂಡು ಕ್ಷಮೆ ಕೇಳುತ್ತಾನೆ. ಅದೇ ಆಕೆಯೂ ಅವನಲ್ಲಿ ತಾನು ಓಡಿಹೋಗ ಬಯಸಿ ಕೊನೆಗಳಿಗೆಯಲ್ಲಿ ತಿದ್ದಿಕೊಂಡ ವಿಷಯವನ್ನು ಹೇಳಿಕೊಂಡಾಗ ... ಈಗಾಗಲೇ ಇರುವ ಮಗೂ ತನ್ನದೇ ಹೌದೋ ಅಲ್ಲವೋ ಎಂಬ ಪ್ರಶ್ನೆ ಕೇಳುತ್ತಾನೆ . .. ಆ ಕ್ಷಣ ಆಕೆಯ ಮನೋಸ್ಥಿತಿ ಏನಾಗಿರಬೇಡ ?

Chinnu said...

Wahv Superob annaaaaaaaaaaaaaaaaaaa sakath agide .. heart touching quote

sunaath said...

ಅತೀತವನ್ನು ಒಪ್ಪಿಕೊಂಡು, ನಿರ್ಮಲ ಮನಸ್ಸಿನಿಂದ ಬಾಳು ಕಟ್ಟುವ ಧ್ಯೇಯ ನಮ್ಮ ತರುಣ, ತರುಣಿಯರಲ್ಲಿ ಬಂದರೆ, ಬಾಳು ಬಂಗಾರವಾಗುವದರಲ್ಲಿ ಸಂದೇಹವಿಲ್ಲ!

chetana said...

ಅವಳಿಂದ ಸುಳ್ಳು ಹೆಳಿಸಬಾರದಿತ್ತು ಪ್ರಕಾಶಣ್ಣ:(

ಮಹಾಬಲಗಿರಿ ಭಟ್ಟ said...

ವಾಹ್ ..............................................ಯಂತಾ ತಲೆಬರಹ ......................................

ಅದರಕೆಳಗೆ ಬರೆದಿರುವ ಕಥೆಯೋ..................... ಭಾವಾನುತೀರಕ್ಕೆ ನಮ್ಮನ್ನ ಕರೆದುಕೊಂಡು ಹೋಗುತ್ತದೆ.....................

ಮತ್ತೆ ಅಣ್ಣಾ..................................... ನೀನು ಕಥೆಯ ಮಧ್ಯದಲ್ಲಿ ಪೋಣಿಸುವ ಚುಕ್ಕಿ .........................ಕಥೆಯಂಬ ಉಪ್ಪಿಟ್ಟಿನಲ್ಲಿ ಸಾಸಿವೆ ಕಾಳು ಇದ್ದಂತೆ ,ರುಚಿಗೂ ಸೈ ಅಲಂಕಾರಕ್ಕೂ ಜೈ ........

ಜೈ................................... ಹೋ...........................................

Indushree Gurukar said...

ಇವತ್ತು ಬೆಳಿಗ್ಗೆ 'ಏನ್ ಸ್ವಾಮಿ ಅಳಿಯಂದ್ರೆ' ಅನ್ನೋ film ನೋಡ್ತಿದ್ದೆ.... ಅದ್ರಲ್ಲಿ ಹೆಂಡತಿ ತನ್ನನ್ನು ಅನುಮಾನಿಸಿದಾಗ ಗಂಡ ಒಂದ್ dialogue ಹೇಳ್ತಾನೆ... 'ಶೀಲ ಅನ್ನೋದು ಬರಿ ಹೆಂಗಸರಿಗಷ್ಟೇ ಅಲ್ಲ ಗಂಡಸರಿಗೂ ಇರುತ್ತೆ' ಅಂತ...
ಆದರು ಈ ಶೀಲ/ನೈತಿಕತೆ ಅಂತ ಹೆಣ್ಣಿನ ಮೇಲೆ ಹಾಕೋ ಅಷ್ಟು restrictions ಗಂಡಿನ ಮೇಲಿಲ್ಲ ಅಲ್ವ :)
ಹೆಣ್ಣು ಒಮ್ಮೆ ತಪ್ಪಿ ನಡೆದರೆ ಅವಳು ಅದಕ್ಕಾಗಿ ಜೀವನ ಪೂರ ಕೊರಗಬೇಕು ಅನ್ನೋದು ತಪ್ಪು...ಆದ್ರೆ ನಿಜ ಹೇಳಿದ್ರೆ ಗಂಡು ತನ್ನನ್ನು ('ಭಾರತೀಯ ಹುಡುಗಿ' ಅಂತ ಇಷ್ಟ ಪಟ್ಟಿರುವವಳನ್ನು ) ತಿರಸ್ಕರಿಸೋದೆ ಹೆಚ್ಚು...
ತಾನು ಗಂಡನಿಂದ ಈ ವಿಷಯವನ್ನು ಮುಚ್ಚಿಡ್ತಾ ಇದ್ದೀನಿ ಅನ್ನೋ guilt ಅವಳಿಗೆ ಇರೋಲ್ವ ?
ಈ ಗೊಂದಲಗಳಿಗೆ ಕೊನೆ ಯಾವಾಗ?

Ittigecement said...

ಚಿತ್ರಾ...

ಪ್ರ್ಯಾಕ್ಟಿಕಲಿ ಹುಡುಗಿಯ ನಿರ್ಧಾರ ಸರಿ...
ಪುರುಷ ಸಮಾಜ ಹುಡುಗಿಯ ತಪ್ಪನ್ನು ಮರೆಯದೆ.. ಕೊನೆಯತನಕ ಹಂಗಿಸುತ್ತಾರೆ..
ಇದು ಸರ್ವೇ ಸಾಮಾನ್ಯ..

" ಲೈಫ್ ಇನ್ ಮೆಟ್ರೊ" ಆ ದೃಶ್ಯ ತುಂಬಾ ಚೆನ್ನಾಗಿದೆ.. ವಾಸ್ತವತೆಯಿಂದ ಕೂಡಿದೆ..

ಒಮ್ಮೆ ನಡೆದ ತಪ್ಪಿಗೆ ಕೊರಗುತ್ತ ಕೂರದೆ...
ಅವಕಾಶ ಸಿಕ್ಕಾಗ ಸರಿಪಡಿಸಿಕೊಳ್ಳುವತ್ತ ಹೆಜ್ಜೆ ಹಾಕಿದರೆ.. ಹೊಸ ಕನಸು ಹುಟ್ಟುತ್ತದೆ ಅಲ್ಲವೆ?

ಇಷ್ಟಕ್ಕೂ "ಶೀಲ" ಅನ್ನೋದು ದೇಹಕ್ಕೆ ಸಂಬಂದ್ದಿಸಿದ್ದು ಆಗಬಾರದು ಅಲ್ಲವಾ?

ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು...

ಓ ಮನಸೇ, ನೀನೇಕೆ ಹೀಗೆ...? said...

ಕಥೆ ಚೆನ್ನಾಗಿ ಮೂಡಿ ಬಂದಿದೆ ಪ್ರಕಾಶಣ್ಣ... ಹುಡುಗನೇನೋ ತನ್ನ ತಪ್ಪನ್ನು ಬಿಚ್ಚಿಟ್ಟು ದೊಡ್ಡವನೆನಿಸಿಕೊಂಡ. ಆದರೆ ಹುಡುಗಿ ಮಾತ್ರ ಆ ಗಿಲ್ಟ್ ನಲ್ಲೇ ಜೀವನ ಕಳೆಯಬೇಕಾಗುತ್ತದಲ್ಲ. ಆದರೆ ನೀವು ಹೇಳಿದಂತೆ ಇನ್ನೊಂದು ಕೋನದಿಂದ ನೋಡಿದರೆ, ಹೆಣ್ಣಿನ ತಪ್ಪನ್ನು ಮಾತ್ರ ಸಮಾಜ ಎಂದೂ ಕ್ಷಮಾಭಾವದಿಂದ ನೋಡೋದಿಲ್ಲ. ಆದರೆ ಆ ಹುಡುಗಿ ತನ್ನ ಗೆಳತಿಯ ಉದಾಹರಣೆಯ ಮೂಲಕ ವೋ ಇನ್ಯಾವುದೇ ನೇರವಲ್ಲದ ವಿಧಾನದಲ್ಲಿ ಅವನ ಪ್ರತಿಕ್ರಿಯೆ ಹೇಗಿರಬಹುದಿತ್ತು ಅನ್ನೋದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದರೇ ?

Ittigecement said...

ಚಿನ್ನು ಅವರೆ...

ಬದುಕಿನ ಹರಿವು ಹಾಗಿರುತ್ತದೆ...
ಆಗಿದ್ದು ಆಗಿಹೋಯಿತು.. ಕೊರಗುತ್ತ ಕುಳಿತರೆ ಏನೂ ಪ್ರಯೋಜನವಿಲ್ಲ...

ತಪ್ಪನ್ನು ನಾವೆ ಸರಿ ಪಡಿಸಿಕೊಳ್ಳಬೇಕಾಗುತ್ತದೆ..

ಹುಡುಗಿ ಈ ನಿಟ್ಟಿನಲ್ಲಿ ಸತ್ಯವನ್ನು ಹುಡುಗನಲ್ಲಿ ಮುಚ್ಚಿಟ್ಟಿದ್ದು ಸರಿ ಅಂತ ನನ್ನ ಭಾವನೆ..

ಮತ್ತೆ ಮಾಡಿದ ತಪ್ಪನ್ನು ಮಾಡದೆ...
ಬದುಕಿನ ಉದ್ದಕ್ಕೂ ಅವನಿಗೆ ಪ್ರೀತಿ ಕೊಡುತ್ತಾ ಕಳೆದರೆ.. ಸಾಕಲ್ಲವೆ?
ಅವನಿಗೂ ಅದೆ ಬೇಕು... ಅವಳ ಅತೀತದಿಂದ ಏನೂ ಆಗಬೇಕಾಗಿಲ್ಲ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಸುನಾಥ ಸರ್...

ತಪ್ಪನ್ನು ಮುನ್ನಿಸುವ ಭಾವ ಇಬ್ಬರಲ್ಲೂ ಇದ್ದರೆ ಸರಿ...

ಪ್ರೀತಿ, ಪ್ರೇಮ ಕನಸಲ್ಲಿ ಚಂದ...
ವಾಸ್ತವದಲ್ಲಿ ಅದು ಕಹಿಯಾಗಿರುತ್ತದೆ..
ಕೆಲವೊಂದು ಸುಳ್ಳು ಹೇಳುವ ಅನಿವಾರ್ಯತೆಯೂ ಇರುತ್ತದೆ ಅಲ್ಲವೆ?

ಈ ಕಥೆಯಲ್ಲಿ ಹುಡುಗಿ ಸುಳ್ಳು ಹೇಳಿ.. ಮುಂದೆ ಬದುಕಲ್ಲಿ ಹುಡುಗನಿಗೆ ಅನ್ಯಾಯವಾಗದ ಹಾಗೆ ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆದರೆ ಹುಡುಗನಿಗೆ ಇನ್ನೇನು ಬೇಕು?

ಸರ್.. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಚೇತನಾ...

ಅವಳು ಸುಳ್ಳು ಹೇಳಿದ್ದು ತನ್ನ ಭವಿಷ್ಯದ ಒಳಿತಿಗಾಗಿ..
ಅತೀತವನ್ನು ಮರೆತು... ಸಮಾಧಿ ಮಾಡಿ ಹೊಸ ಕನಸನ್ನು ಕಾಣುವದಕ್ಕಾಗಿ..

ತಪ್ಪಿಲ್ಲ ಅಲ್ಲವೆ?

ಕಥೆಯನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು..

Asha said...

ಪ್ರಕಾಶಣ್ಣ ಕಥೆ ಚೆನ್ನಾಗಿದೆ. ಆದ್ರೆ ಅರ್ಧ ಕಥೆ ಓದಿದ ಅನುಭವ.... ಹುಡುಗಿ ತನ್ನ ಅತೀತವನ್ನ ಹುಡುಗನಿಗೆ ಹೇಳುತ್ತಾಳೋ ಇಲ್ಲವೋ ಅನ್ನೋದನ್ನ ನೀವು ತಿಳಿಸಲೇ ಇಲ್ವಲ್ಲ .....

Ashok.V.Shetty, Kodlady said...

ಪ್ರಕಾಶಣ್ಣ,

ಎಂದಿನಂತೆ ಕಥೆ ಹಾಗೂ ನಿರೂಪಣೆ ಚೆನ್ನಾಗಿತ್ತು, ಆದರೆ ನಂಗೆ ಆ ಹುಡುಗೀನು ಸತ್ಯ ಹೇಳಿ ಬಿಡಬೇಕಿತ್ತು ಅನ್ನಿಸಿತು, ಕಾರಣ ಇಷ್ಟೇ : ಮುಂದೆ ಬೇರೆಯವರಿಂದ ಈ ವಿಷಯ ಗೊತ್ತಾಗಿ ತೊಂದರೆಯಾಗ ಬಾರದಲ್ಲ ಎಂಬ ಉದ್ದೇಶ. ಜೈ ಹೋ................

Ittigecement said...

ಪ್ರೀತಿಯ ಮಹಾಬಲ...

ಈ ಟಿಂ.. ಟಿಂ... ಗಳ ಕಥೆ ಯಾಕೆಂದು ನನಗೂ ಗೊತ್ತಿಲ್ಲ...
ನಾನು ನನ್ನ ಪರೀಕ್ಷೆಯ ಪ್ರಶೆ ಪತ್ರಿಕೆಗಳಲ್ಲೂ ಹೀಗೆ ಬರೆಯುತ್ತಿದ್ದೆ...
ನಮ್ಮ ಶಿಕ್ಷಕರು ತಿದ್ದಲು ಪ್ರಯತ್ನಿಸಿದರೂ.. ಸಾಧ್ಯವಾಗಲಿಲ್ಲ...

ಪರಿಕ್ಷೆಯಲ್ಲಿ ಪಾಸಾಗುತ್ತ ಬಂದೆ..

ತಿದ್ದಿಕೊಳ್ಳಲು ಆಗಲಿಲ್ಲ..

........... ಹಾಗಾಗಿ... ಇದು.... ಇರ್ಲಿ ಬಿಡಿ...

ಕಥೆಯನ್ನು ಇಷ್ತ ಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಜೈ ಜೈ ಹೋ !!

Ittigecement said...

ಇಂದುಶ್ರೀ...

ಕಣ್ಣೆದುರಿಗಿನ ಬದುಕು ಹಾಳಾಗುವದಕ್ಕಿಂತ..
ಒಂದು ಸುಳ್ಳು ಹೇಳಿ ಸರಿಪಡಿಸಿಕೊಳ್ಳುವತ್ತ ಹೆಜ್ಜೆ ಹಾಕುವದು ಸರಿಯಲ್ಲವೆ?

ಇನ್ನು ಹುಡುಗಿಯ ಅಪರಾಧಿ ಮನೋಭಾವನೆ..

ಹೊಸ ಬದುಕಿನ ಕನಸಗಳು...
ಹೂವುಗಳು... ಹಣ್ಣುಕಾಯಿಗಳ ಅಬ್ಬರದಲ್ಲಿ ಬಹುಷಹ ನೆನಪಾಗಲಿಕ್ಕಿಲ್ಲ..

ಇನ್ನೊಂದು ವಿಷಯ..

ಹೆಣ್ಣುಮಕ್ಕಳು ತಮ್ಮ ಹೃದಯದಲ್ಲಿ ಸಮುದ್ರವನ್ನು ಬೇಕಾದರೂ ಅಡಗಿಸಿಟ್ಟುಕೊಳ್ಳುತ್ತಾರೆ..
ಹೊರಗಡೆ .. ಶಾಂತವಾಗಿರುತ್ತಾರೆ..
ಒಳಗಡೆ ಭೋರ್ಗರೆವ ಅಲೆಗಳಿದ್ದರೂ ಸಹ..

ಹೌದು...
ನಾನು ತೀರಾ ಹತ್ತಿರದಿಂದ "ಸಮುದ್ರ" ಬಚ್ಚಿಟ್ಟುಕೊಂಡವರ ಸಂಸಾರ ನೋಡಿದ್ದೇನೆ...
ನನಗೆ ತಿಳಿದಿರುವ ಹಾಗೆ ಅಲ್ಲಿ "ಅಲೆಗಳ" ಕಾಟವೇನೂ ಇಲ್ಲ..

ಕಥೆಗೊಂದು ಚಂದದ ವಿಮರ್ಶೆ ಕೊಟ್ಟಿದ್ದಕ್ಕಾಗಿ..
ಪ್ರೀತಿಯಿಂದ ಓದಿದ್ದಕ್ಕೆ ಧನ್ಯವಾದಗಳು...

ಚುಕ್ಕಿಚಿತ್ತಾರ said...

ಪ್ರಕಾಶಣ್ಣ.
ಈಗ ಸಧ್ಯಕ್ಕೆ ಮುಕ್ತಾಯ ಸರಿ ಅನ್ನಿಸಿದರೂ...
ಮು೦ದೆ ಯಾರೋ.. ಆ ಮೊದಲಿನ ಹಾಳು ಹುಡುಗನೇ ಬ೦ದು ತಮ್ಮಿಬ್ಬರ ಸ೦ಬ೦ಧದ ಬಗ್ಗೆ ಈಕೆಯ ಗ೦ಡನಲ್ಲಿ ಹೇಳಿಕೊ೦ಡ ಅ೦ತನ್ನಿ.. ಆಗಿನ ಸನ್ನಿವೇಶ ಹೇಗಾಗಬಹುದು..? ತಾನು ಇಷ್ಟು ಪ್ರಾಮಾಣಿಕವಾಗಿ ಎಲ್ಲವನ್ನೂ ಮೊದಲೇ ಹೇಳಿಕೊ೦ಡಾಗಲೂ ತನ್ನ ಹೆ೦ಡತಿ ತನಗೆ ಪ್ರಾಮಾಣಿಕವಾಗಿಲ್ಲ ಅನ್ನುವ ಶಾಕ್ ಆಗಬಹುದು.. ಮದುವೆಯ ನ೦ತರದಲ್ಲೂ ಹೆ೦ಡತಿ ಎಷ್ಟೆ ನಿಷ್ಟಳಾಗಿದ್ದರೂ..ಅದು ಗೊತ್ತಿದ್ದರೂ ಕೂಡಾ ತನ್ನಲ್ಲಿ ನ೦ಬಿಕೆಯಿಟ್ಟು ತನ್ನ ವಿಷಯವನ್ನು ಹೇಳದೇ ಹೋದಳು ಎನ್ನುವ ನೋವು ಉ೦ಟಾಗಲೂ ಬಹುದು..

ಇದೇ ತರ ನಮಗೆ ಗುರುತಿನವರ ಮನೆಯಲ್ಲೂ ನಡೆದು ದೊಡ್ಡ ರಾಮಾಯಣವೇ ಆಗಿ ವಿಪರೀತಕ್ಕಿಟ್ಟುಕೊ೦ಡಿತ್ತು..

ಹುಡುಗಿ ಹೇಳುವುದೇ ಸರಿ ಅನ್ನಿಸುತ್ತಿದೆ..

Gubbachchi Sathish said...

"ಅತೀತ" ಕಥೆ ಕಳೆದುಹೋದ ಬದುಕಿಗೆ ಚಿಂತಿಸದೆ ಹೊಸ ಬದುಕಿನತ್ತ ಮುಖ ಮಾಡುವಂತೆ ಸೂಚಿಸುತ್ತಿದೆ. ಅಷ್ಟಕ್ಕೂ ತಪ್ಪೇ ಮಾಡದವ್ರು ಯಾರವ್ರೇ? ಬೆಸ್ಟ್ ಓನ್! ಧನ್ಯವಾದಗಳು.

Ittigecement said...

ಓ ಮನಸೇ.. ನೀನೇಕೆ ಹೀಗೆ...

ನೀವು ಹೇಳಿದ ಹಾಗೆ ಅವನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸ ಬಹುದಿತ್ತು..

ಅಮೇರಿಕಕ್ಕೆ ಹೋದ ಮೇಲೆ ಅಲ್ಲಿ ಇವಳನ್ನು ಕೇಳುವರ್ಯಾರು?

ಅಪರಿಚಿಅತ ಜಾಗ... ಜನ..
ಅಲ್ಲಿ ತಾನು.. ತನ್ನ ಗಂಡ ತನ್ನ ಸಂಸಾರ..
ಸಾಕಲ್ಲವೆ ಹೊಸ ಬದುಕು ಶುರುಮಾಡಲು..
ತನ್ನ ಅತೀತವನ್ನು ಸಮಾಧಿ ಮಾಡಲು...

ಕಥೆಯನ್ನು ಇಷ್ಟಪಟ್ಟು..
ಚಂದದ ಪ್ರತಿಕ್ರಿಯೆಗಾಗಿ ಧನ್ಯವಾದಗಳು.. ಜೈ ಹೋ !

Ittigecement said...

ಆಶಾರವರೆ...

ಹುಡುಗಿ ತನ್ನ "ಅತೀತವನ್ನು" ಹುಡುಗನಿಗೆ ಹೇಳುವದಿಲ್ಲ...

ಹುಡುಗ ತನ್ನ ಅಂತರಂಗವನ್ನು ಬಿಚ್ಚಿಟ್ಟು ದೊಡ್ಡ ಮನುಷ್ಯನಾದ ಸರಿ...

ಆದರೆ ಹುಡುಗಿಯ ಎದುರು ಯಾವಾಗಲೂ ಸಣ್ಣ ಅಳುಕು ಇದ್ದಿರುತ್ತದೆ...
ದಾಂಪತ್ಯದಲ್ಲಿ ಪ್ರೀತಿ.. ಪ್ರೇಮ... ಪ್ರಣಯ .. ಎಷ್ಟೇ ಇದ್ದರೂ..
ಅದೊಂದು ಎರಡು ವಿಭಿನ್ನ ವ್ಯಕ್ತಿಗಳ ಹೊಂದಾಣಿಕೆ..

ಅಂತರಂಗ ಬಿಚ್ಚಿಟ್ಟಿದ್ದಾಗಿ ಹುಡುಗ ಸಣ್ಣವನಾಗಿರುತ್ತಾನೆ
ತನಗೆ ತಾನೆ ಆಗಿಬಿಡುತ್ತಾನೆ...
ಅದು ಅವಳ ಮೇಲುಗೈ .. !

ಹುಡುಗಿ ಸತ್ಯ ಹೇಳ ಬಹುದಿತ್ತು.. ಹೇಳಿಲ್ಲ.. ತಪ್ಪಲ್ಲ ಬಿಡಿ..

ಪ್ರತಿಕ್ರಿಯೆಗಾಗಿ ವಂದನೆಗಳು..

ದಿನಕರ ಮೊಗೇರ said...

ಹೌದು ಪ್ರಕಾಶಣ್ಣ,
ಹುಡುಗಿ ತನ್ನ ಕಥೆ ಹೆಳಿದ್ದಿದ್ದರೆ ಈ ಕಥೆಯ ಅಂತ್ಯವೇ ಬೇರೆ ಆಗುತ್ತಿತ್ತು.........ಗಂಡಸು ತನ್ನ ತಪ್ಪನ್ನು ಎಲ್ಲರೂ ಕ್ಷಮಿಸಬೇಕು ಎಂದು ಆಶಿಸಿ, ತಾನು ಮಾತ್ರ ಎಲ್ಲವನ್ನು ಭೂತಕನ್ನಡಿಯಲ್ಲಿ ಕಾಣುತ್ತಾನೆ.... ಹೆಂಗಸರು ಮನಸ್ಸಲ್ಲಿ ಸಮುದ್ರವನ್ನೆ ಇಟ್ಟುಕೊಂಡು ಬದುಕುತ್ತಾರೆ ನಿಜ.... ತುಂಬಾ ಸುಂದರ ಕಥೆ...... ಇಷ್ಟ ಆಯ್ತು.......... ಕಥೆ ಅಪೂರ್ಣ ಎನಿಸಿದರೂ ಪೂರ್ತಿ ಮಾಡೋದು ಅಷ್ಟೇ ಕಷ್ಟ......

ಕನಸು ಕಂಗಳ ಹುಡುಗ said...

ಪ್ರಕಾಶಣ್ಣಾ ಸೂಪರಿದ್ದು....

ಆದ್ರೆ ನಂಗೆ ಇನ್ನೂ ಮುಂದೆ ಓದು ಮನ್ಸಿದ್ದಿತ್ತು ಈ ಕಥೆಯಾ.....
but ಓದ್ತಾ ಓದ್ತಾ end ಆಯೋತು.... ಗೊತ್ತೇ ಆಯ್ದಿಲ್ಲೆ...

ಗಿರೀಶ್.ಎಸ್ said...

ಕಥೆ ಚೆನ್ನಾಗಿದೆ,
ಅವಳಿಂದ ಏನು ಮುಚ್ಚಿಡಬಾರದು ಎಂಬ ಅವನ ಹಂಬಲ ,
ಅವನಿಗೆ ಎಲ್ಲ ಹೇಳಬೇಕು ಎಂಬ ಅವಳ ಆತಂಕ...
ಆದರೆ ಅವಳು ಅವನ ಹತ್ತಿರ ಈ ವಿಷಯವನ್ನು ಪ್ರಸ್ತಾಪ ಮಾಡುವುದೇ ಇಲ್ಲ....
ಮದುವೆ ಆದ ಮೇಲೆ ಅವಳು ಇದರ ಬಗ್ಗೆ ಪಶ್ಚಾತಾಪ ಪಡಬೇಕೆ?

umesh desai said...

ಹೆಗಡೇಜಿ ಇದು ಕತೆಅಲ್ಲವಾ ? ನಿಮ್ಮದು ಆಕರ್ಷಕ ಶೈಲಿ. ನನಗನಿಸಿದ್ದು ನೇರವಾಗಿ ಹೇಳುತ್ತಿರುವೆ.
ಈಗಿನ ದಿನಗಳಲ್ಲಿ ಹುಡುಗ ಕುಡೀತಾನೆ, ಸಿಗರೇಟ್ ಸೇದತಾನೆ ಇವು ದುರ್ಗುಣ ಅನಿಸುತ್ತವೆಯೇ?
ಆಮೇಲೆ ನಾಯಕಿ ತಗೊಳ್ಳುವ ನಿರ್ಧಾರ ಸ್ವಲ್ಪ ಗೋಜಲು. ಎಷ್ಟೋ ಸಲ ಬರೆಯುವಾಗ ನಾವು ನಮ್ಮ
ನೈತಿಕತೆ, ನಂಬಿಕೆಗಳನ್ನು ಪಾತ್ರಗಳ ಮೂಲಕ ಹೇರುತ್ತೇವೆ ಇದು ಚರ್ಚಾಸ್ಪದ ಸಂಗತಿ. ಹುಡುಗನ
ಮುಕ್ತತೆ ಹುಡುಗಿಗಿಲ್ಲ ಅಥವಾ ಜಾಣತನದ ಸೋಗು ಹಾಕಿಕೊಂಡು ತಾನಾಗಿಯೇ ಯಾಕೆ ಎಲ್ಲ ಹೇಳಿ
ಹಾಳುಮಾಡಿಕೊಳ್ಳಲಿ ಅನ್ನುವ ವಾಂಛೆ ಅವಳಿಗಿದೆ. ಈಗಿನ ಯುವತಿಯರ ಸ್ವಭಾವಕ್ಕೆ ಸ್ವಲ್ಪ ವಿರುದ್ಧ
ಮನೋಭಾವ ನಿಮ್ಮ ನಾಯಕಿಯಲ್ಲಿದೆ. ಇದು ಸರೀನೆ ಆದರ್ಶವಾದಿ ಅನಿಸಿಕೊಳ್ಳಬಹುದೇ ಅವಳು
ಇವು ನನ್ನಲ್ಲಿ ಮೂಡಿದ ಪ್ರಶ್ನೆಗಳು.

Niharika said...

Purusare hage taavu tappu madabavudu adare tanna hudugi pramalikalagirbeku........
Obba gandasu hennina snehakkagi savira mataduttane adre hendatiyagi madikollodikke saavira sala yochne madtane.... (Source: Novel written by Yendamoori virendranath)

ಮನಸು said...

ಪ್ರಕಾಶಣ್ಣ ಕಥೆ ತುಂಬಾ ಚೆನ್ನಾಗಿದೆ.... ಗಂಡು ತನ್ನ ತಪ್ಪನ್ನು ಹೇಳಿಕೊಂಡು ಸಮಾಧಾನ ಮಾಡಿಕೊಂಡ ಅಂತೆ ಹೆಣ್ಣೂ ಕೂಡ ಸಮಾಧಾನದ ಜೀವನ ನೆಡೆಸಬೇಕಲ್ವಾ... ಹೇಳದೆ ಇದ್ದೂ ಮತ್ತೆ ಇನ್ನೆಲ್ಲಿಂದನೋ ತಿಳಿದರೆ ಮತ್ತೆ ಅವರ ಜೀವನದಲ್ಲಿ ಬಿರುಗಾಳಿ ಏಳುವುದಿಲ್ಲವೇ???

HegdeG said...

ಎಷ್ಟು ಹುಡುಗರು ಮತ್ತೆ ಹುಡುಗಿಯರು ತಮ್ಮ ತಪ್ಪನ್ನು ಒಪ್ಪಿಕೊಂಡು ಸಂಗಾತಿಯಾಗುವವರ ಬಳಿ ತೋಡಿಕೊಳ್ಳಲು ಸಿದ್ದರಿರುತ್ತಾರೆ...!!?

ಬದುಕು ನಿಂತ ನೀರಲ್ಲ...
ಅದು ಹರಿತಾನೆ ಇರಬೇಕು.....ಅರ್ಥಪೂರ್ಣವಾದ ಸಾಲು
ಚಂದದ ಬರಹಕ್ಕೆ ಧನ್ಯವಾದಗಳು. :-)

Dr.D.T.Krishna Murthy. said...

ಪ್ರಕಾಶಣ್ಣ;ಕಥೆಯ ಅಂತ್ಯ ಸರಿಯಾಗಿಯೇ ಇದೆ ಎನ್ನುವುದು ನನ್ನ ಅನಿಸಿಕೆ.ಇಲ್ಲಿ ಸುಳ್ಳು ಅಥವಾ ನಿಜದ ಪ್ರಶ್ನೆಗಿಂತಾ ಯಾವುದು ಬದುಕನ್ನು ಕಟ್ಟಿ ಕೊಡುತ್ತದೆ,ಬದುಕನ್ನು ರೂಪಿಸುತ್ತದೆ ಎನ್ನುವುದು ಮುಖ್ಯ.ಹುಡುಗಿ ನಿಜಕ್ಕೂ ಬುದ್ಧಿವಂತೆ!ಮೂರ್ಖಳಲ್ಲ !!

SATHYAPRASAD BV said...

ಪ್ರೀತಿಯ ಪ್ರಕಾಶ್,
ತುಂಬಾ ಆಪ್ತವಾಗಿದೆ ಕಥೆಯ ಹಂದರ ಮತ್ತು ನಿರೂಪಣೆ. ಅಡಿಗರ ಕವಿತೆಯ ಸಾಲು ನೆನೆಪಾಗುತ್ತಿದೆ, "ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ". ಧನ್ಯವಾದಗಳು.

Digwas Bellemane said...

liked....

ಸಾಗರದಾಚೆಯ ಇಂಚರ said...

Prakashanna,
endinante sundara kathe

baduku ninta neeraagabaaradu emba adapotru avara helikege nannadu Jai

prabhamani nagaraja said...

'ಅತೀತ' ಚೆನ್ನಾಗಿದೆ. ಸು೦ದರ ಕಥೆ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ `ಹೆಸರೇ ಬೇಡ' ನನ್ನ ಮಗಳ ಮೂಲಕ ನನಗೆ ಸಿಕ್ಕಿತು. ತು೦ಬಾ ನಗಿಸುತ್ತದೆ. ಅಭಿನಂದನೆಗಳು.

ragat paradise said...

Climax ನಿಂದ ಗೊತ್ತಾಗುವ ಸತ್ಯವೇನೆಂದರೆ ಹುಡುಗರು ಹುಡುಗಿಯರಂತೆ ಸುಳ್ಳು ಹೇಳದೇ ಸತ್ಯ ಹೇಳುತ್ತಾರೆ....

ಸುಧೇಶ್ ಶೆಟ್ಟಿ said...

odhi mugisida mele hudugi nija vishaya huduganige heLabEkittu antha anisitu.... aadare amEle hudugiya nirdhaara sariyaagiyE idhe antha anisitu :)

life in metro dalli sambandhagaLa jatilatheyannu thumba chennagi thorisiddaare ;)

Ashwini Dasare said...

tumba, chennagide:-)