Tuesday, August 24, 2010

ಕೆಲವು ಸಂತೋಷದ ಕ್ಷಣಗಳು....!!

ಗೆಳೆಯರಾದ ಶಿವು  ಮತ್ತು.. ಆಜಾದರ  ಪುಸ್ತಕ ಬಿಡುಗಡೆಯ ..
ಕೆಲವು ಸಂತೋಷದ ಕ್ಷಣಗಳು....

ಇಲ್ಲಿ ಏನೂ ಹೇಳುವ ಅಗತ್ಯವಿಲ್ಲ ಅಲ್ಲವೇ?
ಎಲ್ಲರಲ್ಲೂ...
ಸಂಭ್ರಮ.. !
ಸಂತೋಷ..!
ಸಡಗರ...!!

ಯಾವುದೇ....ನಿರಿಕ್ಷೆಗಳಿಲ್ಲದ..
ಕೇವಲ....
 ಸ್ನೇಹ... ಪ್ರೇಮದ ...
ಬ್ಲಾಗ್ ಗೆಳೆಯರ... ಸಮ್ಮೇಳನ  ಅದಾಗಿತ್ತು...!!

ಇನ್ನೊಮ್ಮೆ..
ಮತ್ತೊಮ್ಮೆ... ಮೆಲುಕು ಹಾಕಬೇಕಾದ ಕ್ಷಣಗಳು...
ನಿಮಗಾಗಿ...

ಜೈ .... ಹೋ....!!


ಖ್ಯಾತ ಛಾಯಾ ಚಿತ್ರಗ್ರಾಹಕರಿಗೆ " ಸನ್ಮಾನವಿತ್ತು"

ನಮ್ಮ ಪ್ರೀತಿಯ "ಹುಡುಕಾಟದ  ಮಲ್ಲಿಕಾರ್ಜುನ್" ಅವರಿಗೆ ಹಿರಿಯರಿಂದ  ಸನ್ಮಾನ... !

ಡುಂಡಿರಾಜರ.. ಹಾಸ್ಯ ಚಟಾಕಿಗಳ ಡಿಂಡಿಮ... !! 


ಶಿವು ಪುಸ್ತಕದ ಪರಿಚಯ ಮಾಡಿಕೊಟ್ಟವರು
"ಹಾಲ್ದೊಡ್ಡೇರಿ."... ಸುಧೀಂದ್ರರವರು....."


ಗೆಳೆಯರಿಬ್ಬರ ಕನಸು ನನಸಾದ ಕ್ಷಣಗಳು...

ಶೇಷಶಾಸ್ತ್ರಿಗಳ ವಿದ್ವತ್ಪೂರ್ಣ ಮಾತುಗಳು...

ಕಾರ್ಯಕ್ರಮದ  ಮುಖ್ಯ ಆಕರ್ಷಣೆ..
ನಿರೂಪಕರಾದ "ಪ್ರವೀಣ್ ಮತ್ತು ಸುಗುಣ" ತುಂಬಾ ಸೊಗಸಾಗಿ ಕಾರ್ಯಕ್ರಮ ನಡೆಸಿಕೊಟ್ಟರು... 

ಈ "ಚಾಟ್ ಪ್ರವೀಣ"..
ನೀರು  ವಿಜ್ಞಾನಿ...
ಮತ್ಸ್ಯ ಜ್ಞಾನಿ.. ಬಲು ಮಾತುಗಾರ..  !!

ಸುಮಧುರ.. ನಿರೂಪಣೆಯ .. ಮೃದು ಮನಸಿನ... "ಸುಗುಣ.."
ಪುಸ್ತಕ ಬಿಡುಗಡೆಯ  ಸಭೆಗೆ ಇವರ ನಿರೂಪಣೆ ಬಹಳ ಸೊಗಸಾಗಿತ್ತು...
ಕಾರ್ಯಕ್ರಮಕ್ಕೆ ಮೆರಗು ತಂದಿತ್ತು...

ನಮ್ಮ ಮೆಚ್ಚಿನ  ನಟಿ.. ಮಂಗಳತ್ತೆ...( ಜಯಲಕ್ಷ್ಮಿ ಪಾಟೀಲ್)  ಮತ್ತು ಉಮಾ ಭಟ್..


ಸುಘೋಷ್  ಮತ್ತು... ಘಜಲ್ ಕವಿ  "ಉಮೇಶ್ ದೇಸಾಯಿಯವರು..."


ನಮ್ಮೆಲ್ಲ ಮೆಚ್ಚಿನ ಛಾಯಾಗ್ರಾಹಕ  "ಮಲ್ಲಿಕಾರ್ಜುನ್"

ಮೋಹಕ ಮೋಡಿಗಾರ ಕೊಳಲು ಗಾರುಡಿಗ "ಕೃಷ್ಣಮೂರ್ತಿಯವರು"...
" ವಿ.ಆರ್. ಭಟ್.." ಮತ್ತು  "ನಾರಾಯಣ್ ಭಟ್"

ಎಷ್ಟು ಮಾತನಾಡಿದರೂ... ಸುದ್ಧಿ ಮಾತ್ರ ಖಾಲಿಯಾಗೊದಿಲ್ರಿ....

ಹೆಬ್ಬಾರ್ ಸರ್  ಅವರ ಉತ್ಸಾಹ... ನಮಗೆಲ್ಲ ಸ್ಪೂರ್ತಿಯಾಗಿತ್ತು....

ಡಾ. ಸತ್ಯನಾರಾಯಣ್..

ಇವರು "ಬಿಸಿಲ ಹನಿ"  ಗೆಳೆಯ "ಉದಯ್ ಇಟಗಿಯವರು....

ಮಂಗಳೂರಿನ "ದಿನಕರ್ ದಂಪತಿಗಳು..".

ಮಗುವಿನಂಥಹ ನಗುವಿನ  "ಸೀತಾರಾಂ ಸರ್..."

ಈ.. ಶಾರ್ಪ್ ಶೂಟರ್ಸ್ ಕಾಟ ಬಹಳ ಇತ್ತು..  !!

ಹೊರನಾಡಿನಲ್ಲಿ  ಕನ್ನಡದ ದೀಪ  ಹಚ್ಚುತ್ತಿರುವ.. ಗೆಳೆಯ...

ಸವಿಗನಸಿನ ತುಂಟ ಕವಿ... "ಮಹೇಶ್"

ವಿ.ಆರ್. ಭಟ್ ಅವರಿಂದ ಶೇಷಶಾಸ್ತ್ರಿಗಳಿಗೆ  ಸನ್ಮಾನ....

ಸುಧೀಂದ್ರ ಅವರಿಗೆ  ಸನ್ಮಾನ  ಸೀತಾರಾಂ ಅವರಿಂದ....

ಘನ  ಗಂಭೀರ  ಅನಿಸುತ್ತಾರಲ್ಲವೇ??

ಇಂಥಹ ತರಲೆ...ತುಂಟಾಟ.. ನೂರಾರಿದ್ದವು  !!..  !!

ಚಂದಾ.. ಚಂದಾ.. ಈ ಜೋಡಿ ಚಂದಾ.. "ನಂಜುಂಡ, ಚೇತನಾ"....

ಇವರು "ನಿಶಾ ಅಂತರಂಗ"...



ನಮ್ಮೆಲ್ಲರ ಮೆಚ್ಚಿನ ಬ್ಲಾಗಿನ ಒಡತಿ "ಎಸ್ಸೇಸ್ಸ್ಕೆ " ಶೋಭಾ....


ಬಹುಮಾನ ಕಾರ್ಯಕ್ರಮಕ್ಕೆ  ತಪ್ಪಿಸಿಕೊಂಡರು ಇವರು..
ಸುಂದರ ಫೋಟೋ ತೆಗೆಯುವ "ಓಂ ಪ್ರಕಾಶ್" ಮತ್ತು  ನಮ್ಮೆಲ್ಲರ ಮೆಚ್ಚಿನ "ಪಾಲಚಂದ್ರ" (ಅನುಭವ ಮಂಟಪ"

"ಮದುವೆ ಗಂಡು"  ಮನದಾಳದ " ಪ್ರವೀಣರಿಗೆ....
ಸಮಯ ನೋಡುವದು ಹೇಗೆ ಅಂತ  ಹೇಳಿಕೊಡುತ್ತಿರುವ  ಭಟ್ಟರು....


ಇವರು "ನಿಮ್ಮೊಳಗೊಬ್ಬ... "ಬಾಲು..."


ಉಮಾ ಭಟ್, ಸುಮನಾ ವೆಂಕಟ್, ಚೇತನಾ....


ಸರ್ಜನರೊಂದಿಗೆ   ಸವಿಯಾದ ತಿಂಡಿ ಸವಿಯುತ್ತಿರುವ "ಕವಿ ಸಾಮ್ರಾಟ್ " ಪರಾಂಜಪೆಯವರು...
ಮಹೇಶ್. ಶಿವು ಮತ್ತು ದಿವ್ಯಾ...

ಈ ಕಾರ್ಯಕ್ರಮ ಯಶಸ್ವಿಯಾಗಲು.. ಮೂಲ ಕಾರಣ ...
ಈ ಗೆಳೆಯರ ಬಳಗ...
ಇಲ್ಲಿ ಇನ್ನೂ ಎರಡು ಮೂರು ಜನ  ತಪ್ಪಿಸಿಕೊಂಡಿದ್ದಾರೆ......
ಮುಂದಿನ ಫೋಟೋ ಪೋಸ್ಟಿನಲ್ಲಿ  ಕರೆತರುವೆ...

(ಪ್ರವೀಣ, ನವಿನ, ಅನಿಲ್ ಬೆಡಗೆ)

ಇನ್ನೂ...
ಕೆಲವು  ಅಪರೂಪದ ಫೋಟೋಗಳಿವೆ...
ಕೆಲವು ದಿನಗಳ ನಂತರ...!!

ಜೈ  ಹೋ...  ಬ್ಲಾಗರ್ಸ್..  !!

Friday, August 20, 2010

ನಮಗೆ.. ನಾವೇ... ನಗಲಿಕ್ಕೆ...! ಸಂಭ್ರಮ ಪಡಲಿಕ್ಕೆ...!

ನಮ್ಮ  ಬದುಕಿನಲ್ಲಿ  ಎಷ್ಟೋ  ಜನರು  ಸಿಗುತ್ತಾರೆ...

ಮರೆಯಾಗುತ್ತಾರೆ...

ಕೆಲವರು  ಮರೆಯಾಗದೆ  ಮನದಲ್ಲೇ ಉಳಿದು ಬಿಡುತ್ತಾರೆ...

ಇನ್ನು  ಹಲವರು...
ಏನೇನೋ ನಮ್ಮಿಂದ ಏನೇನೋ ನಿರೀಕ್ಷೆ ಇಟ್ಟುಕೊಂಡು ಬರುತ್ತಾರೆ...
ನಮ್ಮಲ್ಲಿ ಅದು ಸಿಗದಿದ್ದಲ್ಲಿ ದೂರವಾಗುತ್ತಾರೆ..

ದೂರವಾಗುವಾಗ  ...
ಹೃದಯ ಚುಚ್ಚುವ  ಸಣ್ಣ ನೋವನ್ನೂ  ಉಳಿಸಿ ಹೋಗಿರುತ್ತಾರೆ..

ಬದುಕೇ ಹೀಗೆ ಅಲ್ಲವೇ ?....

ಯಾರಿಂದಲೂ ಏನೂ ನಿರೀಕ್ಷೆ ಇಲ್ಲದೆ ಸ್ನೇಹ ಮಾಡುವ ವ್ಯಕ್ತಿಗಳು ಬಹಳ ಕಡಿಮೆ...

ನನ್ನ ಇಲ್ಲಿಯವರೆಗಿನ  ಬದುಕಿನಲ್ಲಿ  ಅಂಥಹ ಅನೇಕ ವ್ಯಕ್ತಿಗಳು ನನಗೆ ಸಿಕ್ಕಿದ್ದಾರೆ...

ಈ ದೃಷ್ಟಿಯಿಂದ ನಾನು ಭಾಗ್ಯವಂತ...

ಅಪ್ಪನಿಲ್ಲದ  ಬದುಕಿನಲ್ಲಿ ಜಾರುವದು  ಜಾಸ್ತಿ...

ನನಗೆ " ನಾನು ಜಾರುವೆ " ಎನ್ನುವ ಸಂದರ್ಭದಲ್ಲಿ ...
ಬಂಡೆಗಲ್ಲಿನಂತೆ ನನ್ನ ಬಳಿ ನಿಂತ ನನ್ನ ಗೆಳೆಯರನ್ನು ನಾನು  ನೆನಪಿಸಿಕೊಳ್ಳ ಬೇಕು... 

ನನ್ನ ದುಃಖದಲ್ಲಿ..
ನಾನು  ನನ್ನ ನಿರ್ಧಾರಗಳಿಂದ "ಸೋತ"ಸಂದರ್ಭಗಳಲ್ಲಿ ..
ನನ್ನನ್ನು  ಭದ್ರವಾಗಿ   ಹಿಡಿದು ಕೊಂಡವರಿದ್ದಾರೆ ....
ಎದ್ದು  ನಿಲ್ಲಿಸಿದವರಿದ್ದಾರೆ...

ಇದೆಲ್ಲ ನೆನಪಾದಾಗ  ..
ನಮ್ಮ ಬದುಕು  ...
ಎಷ್ಟೊಂದು ಗೆಳೆಯರಿಗೆ...
ಹಿತೈಷಿಗಳಿಗೆ  ಋಣಿಯಾಗಿರುತ್ತದೆ ...  ಅಲ್ಲವೇ?

"ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ ...
ಯಾವುದೇ "ಸಂಬಂಧವನ್ನು  ಕೊನೆಯತನಕ ಇಟ್ಟುಕೊಳ್ಳ ಬಹುದು ...

ನಮ್ಮ ಹತ್ತಿರದವರ ಬಳಿ  ನಾವು "ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ...
ಚಂದವಾಗಿ ...
ನಿಷ್ಕಲ್ಮಶವಾದ.. ...
ಮಗುವಿನಂಥಹ  ನಗು...
ಮುದ್ದಾದ ಮನಸ್ಸು  ನಮ್ಮಲ್ಲಿರುತ್ತದೆ...

ನಮ್ಮ ಅಕ್ಕಪಕ್ಕದ  ಜನರು  ಬಹುಷಃ  ಇದನ್ನೇ ಬಯಸುತ್ತಾರೆ...

"ಎಲ್ಲಿದ್ದಿಯಪ್ಪಾ.. ??
 ಗೋಮಟೇಶ್ವರ ...ದೇವರೇ...!!
ನನಗೆ ಇನ್ನು ಅರ್ಧ ಗಂಟೆ ಸಮಯವಿದೆ...
ಸರಿಯಾಗಿ  ವಿಳಾಸ ಕೊಡು...
ನಿನ್ನನ್ನು ನೋಡಲೇ.. ಬೇಕು"
ಅಂತ  ಅವ  ಫೋನ್ ಮಾಡಿದ...

ನಾನೂ..
ಅವನು ಬರಿ ಚಾಟಿನಲ್ಲಿ ಮಾತನಾಡಿಕೊಂಡು "ಏಕವಚನದಲ್ಲಿ " ಮಾತನಾಡುವ  " ಸ್ಥಿತಿಗೆ "  ಬಂದು ಬಿಟ್ಟಿದ್ದೆವು...

ಎಲ್ಲರ ಬಳಿ  ಇದು  ಹೀಗೆ ..ಸಾಧ್ಯವಿಲ್ಲ...!

ನಾನು ವಿಳಾಸ ಕೊಟ್ಟೆ..

ಸರಿಯಾಗಿ ಅರ್ಧ ಗಂಟೆಯಲ್ಲಿ ಬಂದ...!
ನನಗೂ ಕುತೂಹಲವಿತ್ತು...!

ಕಾರಿನಿಂದ ಇಳಿದು.. ಬಂದವನೇ  ನನ್ನನ್ನು   ಆಲಂಗಿಸಿಕೊಂಡ ...

ಎಷ್ಟೋ ದಿನಗಳ... ಬಾಲ್ಯ ಸ್ನೇಹಿತನ ಹಾಗೆ...!!

ಚಡ್ಡಿ ದೋಸ್ತನ ಹಾಗೆ..!!..

ಬದುಕಿನ ಸಂಬಂಧಗಳಲ್ಲಿ  ...
ಸ್ನೇಹಕ್ಕೆ ಮಾತ್ರ ಈ... ಗುಣವಿದೆ...

ಜಾತಿ, ಮತಗಳ..
ಗೋಡೆಗಳ..
ಗೊಡವೆ ಅದಕ್ಕೆ ಬೇಕಿಲ್ಲ...!  ಅಗತ್ಯವೂ... ಇಲ್ಲ..!

ಸಿಕ್ಕ  ಅಲ್ಪ  ಸಮಯದಲ್ಲೇ  ಹರಟಿದೆವು...
ನಮ್ಮ.. ನಮ್ಮ ಕಾಲೇಜಿನ ತುಂಟ ದಿನಗಳ ನೆನಪು ಮಾಡಿಕೊಂಡೆವು...

ಇಬ್ಬರ ನಡುವೆ "ಗೋಡೆಗಳೇ" ಇರಲಿಲ್ಲ..!
ಯಾವ  ಯಾವುದೇ.. "ನಿರೀಕ್ಷೆಗಳು " ಇದ್ದಿರಲಿಲ್ಲ... !

ಅವುಗಳ ಅಗತ್ಯ ಇಬ್ಬರಿಗೂ ಇರಲಿಲ್ಲ...!

ಆತನಿಗೆ ಬಿಳ್ಕೊಡುವಾಗ ನಾನು ನನ್ನ  "ಹೆಸರೇ.. ಬೇಡ.  !" ಪುಸ್ತಕವನ್ನು ಕೊಟ್ಟೆ..

"ನಮ್ಮ  ಸಂಬಂಧಕ್ಕೂ...."ಹೆಸರೇ.. ಬೇಡ".. ಪ್ರಕಾಶು...! "

ನಾನು  ತಲೆಯಾಡಿಸಿದೆ...
ಕಣ್ಣು ತುಂಬಿ ಬಂದಿತ್ತು...
ಹೇಳಲಾಗದ ಅವ್ಯಕ್ತ ಭಾವಗಳಲ್ಲಿ ಹೃದಯ ಭಾರವಾಗಿತ್ತು...

ಆತ ಹೋಗುವಾಗ ನನಗೆ ಒಂದು  "ಗಣಪತಿಯ" ಮೂರ್ತಿಯನ್ನು ಕೊಟ್ಟ..
ಅದು  ಈಗ  ನಮ್ಮನೆಯ ದೇವರ  ಪೀಠದಲ್ಲಿದೆ ..

ಒಂದು  ಮಗುವಿನಂಥಹ ಸ್ನೇಹಕ್ಕೆ ಇದು  ಸಾಕಲ್ಲವೇ...??

ಅವನೇ  ನನ್ನ ಗೆಳೆಯ  "ಆಜಾದು"

ಸ್ನೇಹಿತರೆ...

ಇದೇ.. ಬರುವ  ಭಾನುವಾರ  ಬೆಳಿಗ್ಗೆ  ನನ್ನ ಗೆಳೆಯನ  "ಜಲನಯನ "  ಪುಸ್ತಕ ಬಿಡುಗಡೆಯಿದೆ...
ದಯವಿಟ್ಟು ಬನ್ನಿ ..

ಹಲವು  ಸ್ನೇಹಿತರ ಭೇಟಿಗಾಗಿ.. 
ಒಂದು ಸಂತೋಷ ಕೂಟಕ್ಕಾಗಿ....
ನಮಗೆ ..
ನಾವೇ... ನಗಲಿಕ್ಕಾಗಿ..
ಒಂದು  ನೆನಪಿನಲ್ಲಿ ಉಳಿಯುವ  ಸಂಭ್ರಮಕ್ಕಾಗಿ...
ದಯವಿಟ್ಟು ಬನ್ನಿ...

ನಿಮಗಾಗಿ ...
ನನ್ನ  ಹಲವಾರು ಗೆಳೆಯರೊಡನೆ ....
ದೊಡ್ಡ ಹೊಟ್ಟೆಯ...
ದೇಶಾವರಿ ನಗುತ್ತ...

ಇದ್ದಷ್ಟು ಹಲ್ಲುಗಳನ್ನು ತೋರಿಸುತ್ತ......

ಕ್ಯಾಮರದೊಡನೆ  ಕಾಯುವೆ......
ಬಾಗಿಲಲ್ಲಿ  ...
ದಯವಿಟ್ಟು  ಬನ್ನಿ...

"ಜೈ .... ಹೋ....!! "




( ಅಂದು...
ನನ್ನನ್ನು ಬ್ಲಾಗ್ ಲೋಕಕ್ಕೆ ಕರೆ ತಂದ ಇನ್ನೊಬ್ಬ ಸ್ನೇಹಿತ...
ಖ್ಯಾತ  ಅಂತರ ರಾಷ್ಟ್ರೀಯ ಛಾಯಾಗ್ರಾಹಕ ಕೆ. ಶಿವುರವರ ಪುಸ್ತಕ ಬಿಡುಗಡೆಯೂ ಇದೆ...
ದಯವಿಟ್ಟು ಬನ್ನಿ)




ಸ್ಥಳ :  ಕನ್ನಡ ಭವನ..
(ರವೀಂದ್ರ ಕಲಾಕ್ಷೇತ್ರ ಪಕ್ಕದಲ್ಲಿ..
ಗೊತ್ತಾಗಲಿಲ್ಲವೇ...?
 ಫೋನ್ ಮಾಡಿ...

Saturday, August 7, 2010

ನಾನು..! ನನ್ನದು...!! ಭಾವುಕರಿಗೆ ಅಲ್ಲ... ಈ ಜಗತ್ತು !!

ನಾನು  ಹೂ...
ನನ್ನ  ಪರಿಮಳ..
ಅಂದ.. ಚಂದ..
ಮಕರಂದದ ಬಗೆಗೆ ನನಗೆ ಹೆಮ್ಮೆ..

ನನ್ನಂದ.. ಬಯಸುವರು...
ನನ್ನ ಮಕರಂದ ಹಿರುವವರು..
ನನ್ನ ಅಂತರಂಗದ ಬಗೆಗೆ ಯೋಚಿಸುವದೇ ಇಲ್ಲ...
                                                                                        
     
ನನ್ನಿಷ್ಟ.. ಬೇಕು..ಬೇಡಗಳ ..
ಗೊಡವೆ...
ಯಾರಿಗೂ ಬೇಕಿಲ್ಲ...!
ನನ್ನ ಈ ಚಂದ ನನಗೆ ಒಂದು ಶಾಪವೇ..?      
                              
    
ಯಾರ್ಯಾರೋ.. ಬರುವರು..
ನನ್ನ..ಹೊಗಳುವರು...
ಮೂಸಿ..
ಮಕರಂದ ಹಿರಿ.. ಹಾರಿ ಹೋಗುವರು...!

ಇದು ಎಂಥಹ ಜಗತ್ತು...?
ನನ್ನಾಸೆ...
ಭಾವಗಳಿಗೆ ಬೆಲೆಯಿಲ್ಲವೇ??
                                     
                     ನನಗೂ ಒಬ್ಬ ಗೆಳೆಯನಿದ್ದಾನೆ...!
ಹೃದಯದಲ್ಲಿ  ನೂರಾರು ...
ಸುಂದರ.. ಸುಮಧುರ..
ಕನಸುಗಳ ಕಟ್ಟಿ..
ನನ್ನ ಬದುಕನ್ನು ಸಾರ್ಥಕ ಗೊಳಿಸಿದವ... !

ನನ್ನಂದ..
ಚಂದಗಳನ್ನು ಅವನಿಗೊಬ್ಬನಿಗೆ..
ಕೊಡಬೇಕೆಂಬ ಮಹದಾಸೆ ನನ್ನದು...!

ಯಾರೂ.. ನನ್ನ ಮಾತುಗಳಿಗೆ  ಬೆಲೆ ಕೊಡುವದಿಲ್ಲ..
ಬಣ್ಣ..ಬಣ್ಣದ...
ಬೆಡಗಿನ  ಮಾತುಗಳನ್ನಾಡುತ್ತಾರೆ...

ನನ್ನಂದ  ...
ಚಂದಗಳ ಹಾಡಿ..
ಹೊಗಳಿ..
ಮಕರಂದ ಹೀರಿ.. ಹಾರಿ ಹೋಗುತ್ತಾರೆ...

 
ನನ್ನ ಭಾವದ ಗೆಳೆಯ...!
ನನ್ನ ಅಂತರಂಗದ ಪ್ರೇಮ..!
ಅವನ ಮಾತೇ.. ಸಂಗೀತ...!!
ಅವನ ಸ್ಪರ್ಶ..!
ಆ...ಆಲಿಂಗನ..!
ಚುಂಬನ...
ಬದುಕಿನ ಸಾರ್ಥಕತೆಯ ರೋಮಾಂಚನ...!!

ನನ್ನ ಗೆಳೆಯ ಬಲು ರಸಿಕ...!
ಹತ್ತಾರು..
ಚಂದದ  ಹೂವುಗಳ ಮನಗೆದ್ದವ...!


ನನ್ನ ಗೆಳೆಯನ  ಮೆಚ್ಚದವರು ಯಾರು  ??
ನೂರಾರು..
ಹೂವುಗಳ  ಮನಗಳ...
ಮನಗೆದ್ದ ಮನ್ಮಥ  .... 
ನನ್ನ ಗೆಳೆಯ...!

ನನ್ನ ಕಣ್ಣುಗಳು..
ಮೃದು ಕೆನ್ನೆಗಳು..
ಅವನು ಕಿವಿಯಲ್ಲಿ ಉಸುರುವ..
ಪಿಸು ಮಾತುಗಳಿಗೆ..
ಬೆಚ್ಚನೆಯ ಆಲಿಂಗನಕೆ..
ಮನಸಾರೆ ಅವನ ಬರುವೆಕೆಯನ್ನು ಕಾತರಿಸುತ್ತವೆ...!

ದಿನವೂ...  ಬರುವ ಗೆಳೆಯ ಇಂದು ಬರಲೇ ಇಲ್ಲ ಯಾಕೆ  ??

ಆರೇ..  !!
ಇದು ಯಾರು  ??
ಮುಖ ನೋಡಿದರೆ.. ಹೃದಯದಂತಿದೆ...!
ಎಷ್ಟು ಒಳ್ಳೆಯವರಿರ ಬಹುದು..  !!
ಒಮ್ಮೆ ಮಾತನಾಡಿಸಿ ಬಿಡುತ್ತೇನೆ...

" ಸುಂದರಾ..
ಹೃದಯ ವದನಾ...!
ನೀನ್ಯಾರು.. ? ...
ಮಕರಂದ ಬೇಕಿತ್ತಾ..?
ನೋಡು...
ನಾನು ನನ್ನ ಗೆಳೆಯನಿಗಾಗಿ   ಮಕರಂದ ಇಟ್ಟು ಕೊಂಡಿರುವೆ..
ಅವಾನಾಸೆ  ನಂತರ ದಯವಿಟ್ಟು ನೀನು ಬಾ...."
"ಎಲೆ... ಸುಮವೇ...
ಕಾಣುವ ಮುಖಕ್ಕೂ...
ಮಾಡುವ ಕೆಲಸಕ್ಕೂ.. ಯಾವ ಸಂಬಂಧವೂ... ಇಲ್ಲ  !!
ನಿನ್ನಂದ.. ಚಂದ ..
ಮಕರಂದ ನನಗೆ ಬೇಕಿಲ್ಲ...
ನನ್ನ ...
ಈ..ಹೃದಯದ ಮುಖಕ್ಕೂ.. "ಹಸಿವೆ" ಎನ್ನುವದು ಇದೆಯಲ್ಲ...  !!
ಹಸಿವಿನಿಂದಲೇ.. ಜಗತ್ತು  !!
ನಿನ್ನ ಮಕರಂದವನ್ನು..
ನಿನ್ನ ಗೆಳೆಯನಿಗೆ ಕೊಡು... ನನಗೆ ಬೇಕಿಲ್ಲ..."


"ನನ್ನ ಆಹಾರ ಹುಡುಕುತ್ತಿರುವೆ...
ಸುಮ್ಮನೆ ಮಾತನಾಡಿಸ.. ಬೇಡ....
 ನನ್ನ ಸಮಯ ಹಾಳುಮಾಡ ಬೇಡ..
ಹೂವುಗಳು... ಯಾವಾಗಲೂ ಭಾವ ಲೋಕದಲ್ಲಿರುತ್ತವೆ ಅನ್ನುತ್ತಾರೆ...
ನಿನ್ನ ಕನಸಲ್ಲಿಯೇ...
ನೀನಿರು......"

"ಇದು ನಿಜ... !
ನಾವು ಹೂವುಗಳು...
 ಭಾವನಾ.. ಪ್ರಪಂಚದಲ್ಲಿರುತ್ತೇವೆ...!
ನೋಡು ಹೃದಯ ವದನಾ..... !
ನೀನು ತುಂಬಾ ಒಳ್ಳೆಯವ... !
ನೀನು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಟ್ಟೆಯಲ್ಲ  !!
ಇಷ್ಟು ಸಾಕು ನನಗೆ  !!.."
ಆಹಾ... !
ಇದೋ...ಬಂದನಲ್ಲ..  !!
 ನನ್ನ ಕನಸಿನ ರಾಜಾ... !
ಕಾಯುವ ಸಮಯಕ್ಕೂ..
ಒಂದು ಸಾರ್ಥಕತೆ ತಂದವ ...!!
ಈ..ನನ್ನಿನಿಯಾ..  !!
ಬಾ,, !
ಬಾ... ಗೆಳೆಯಾ..!.. !
ಯಾರೋ..ಹೀರಿ...ಹಾರಿಹೋಗುವ ಮುನ್ನ...!
ಕೊಟ್ಟುಬಿಡು..!
ನಿನ್ನ ಸಿಹಿ ಚುಂಬನ...!
ಆಲಿಂಗನ...!
ಕ್ಷಣ.. ಕ್ಷಣವೂ...!
ಮರೆತು ...
ಬೆರೆತು...
ಹೋಗುವ.. ಆ.. ರೋಮಾಂಚನ  !!





"ಅಯ್ಯೋ...!!
ಇದೇನಿದು ??
ಹೃದಯ ವದನಾ..
ನೀನ್ಯಾಕೆ.. ಇಲ್ಲಿ ಬಂದೆ ??
ನಮ್ಮ ಪ್ರೇಮ ಸಲ್ಲಾಪದ ಮಧ್ಯೆ..?

ಅಯ್ಯೋ...!!
   ನನ್ನ ಗೆಳೆಯನನ್ನು ಹಿಡಿದು ಬಿಟ್ಟನಲ್ಲಾ..  !!
ಏನು ಮಾಡಲಿ??"

" ಹೃದಯವಂತಾ..!!
ಇತ ನನ್ನ ಗೆಳೆಯ..!
ಈತನನ್ನು ಬಿಟ್ಟು ಬಿಡು...!! "


"ಎಲವೋ...
ಚಂದದ ಹೂವೆ...
ನಿನ್ನಿನಿಯ..
ನನ್ನ ಮೃಷ್ಟಾನ್ನ .. !!
ಭೋಜನ...!!
ಹೇಗೆ ಬಿಡಲಿ..?"


"ನಿನ್ನ ಪ್ರೇಮದ ಕಥೆ ಕೇಳಲು ಚಂದ...
ನನ್ನ ಹಸಿವೆ ನಿನ್ನ ಪ್ರೇಮದಿಂದ  ತುಂಬುವದಿಲ್ಲವಲ್ಲ..  !! "

"ಅಯ್ಯಾ...  ನನ್ನ ಗೆಳೆಯನನ್ನು ಬಿಟ್ಟು ಬಿಡು..
ನಮ್ಮ ಪ್ರೇಮ ಫಲವಾಗಲು ಬಿಡು.."

" ಎಲೆ.. ಸುಮವೇ...
 ನಿನ್ನ ಪ್ರೇಮದ ಗೊಡ್ಡು ಕಥೆ  ನನಗೆ ಬೇಕಿಲ್ಲ..."
ನನಗೆ ನನ್ನ ಹಸಿವು ದೊಡ್ಡದು..  !!"


"ನಿನ್ನ ಭಾವದ ಗೆಳೆಯ.
ನನಗೆ ಬಾಯಲ್ಲಿ ನಿರುಕ್ಕಿಸುತ್ತಾನೆ...!
ಎಷ್ಟು ರುಚಿಯಾಗಿದಾನೆ.. ಈ ನಿನ್ನ ಗೆಳೆಯಾ..  !

ಕಣ್ಮುಚ್ಚಿ ಕಾಣುವ ಕನಸು ಬದುಕಲ್ಲ.. !"


ನಿನ್ನ ಗೆಳೆಯನಿಗೂ ಹತ್ತಾರು...ಗೆಳತಿಯರು...!
ಇಲ್ಲಿ.. ಎಲ್ಲವೂ...
"ನಾನು...!
 ನನ್ನದು...!
ಭಾವುಕರಿಗೆ ಅಲ್ಲ ಈ ಜಗತ್ತು...!!.."
ಮೊದಲು ಹಸಿವೆ...
ಅದಕ್ಕಾಗಿ ಏನಾದರೂ.. ಸರಿಯೇ...!!


ನಾವು ಹೂವುಗಳು...
ಹೂವಿನಂಥಹ  ಮನಸ್ಸು...
ಹೂವಿನಂಥಹ ಹೃದಯ..

ನಮಗೂ..... ಒಂದು ಮನಸಿದೆ  !!


ಜಿವವಿದ್ದರೆ... ಭಾವದ ಬದುಕು.. !
ಪ್ರೇಮ...
ಕನಸು..
ಸೊಗಸು...!

ಮೊದಲು  ಹಸಿವು...
ಆಮೇಲೆ ಬದುಕು.. !!
ಇದೇ ನಮ್ಮ.. ಈ..   ಜಗತ್ತು.. !!






(ಒಳ್ಳೆಯ ಪ್ರತಿಕ್ರಿಯೆಗಳಿವೆ... ದಯವಿಟ್ಟು ನೋಡಿ....)