Monday, December 8, 2008

ಶ್ರವಣ..ಬೆಳಗೊಳದಲ್ಲಿ...!!


ಮುಖೇಶ್ ನ ಒಂದು ಹಾಡಿದೆ......

"'ಹಾಂ..ತುಮ್ ಬಿಲ್ಕುಲ್..ವೈಸಿ..ಹೋ....
ಜೈಸಾ..ಮೈನೆ..ಸೋಛಾ..ಥಾ......"

ನನ್ನಾಕೆ ಹೇಗಿರಬೇಕೆಂದು ಯೋಚಿಸಿದ್ದೇನೋ...ಹಾಗೆಯೆ...ಇದ್ದಳು...
ಇದ್ದಾಳೆ.....

ಮದುವೆಗೂ ಮೊದಲೇ ಹೇಳಿದ್ದೆ...ನನ್ನಾಕೆಗೆ...ನನ್ನ ಜಗತ್ತು ಬಹಳ ಸಣ್ಣದು...
ನನ್ನ ಸರ್ವಸ್ವ ನನ್ನ ಆಯಿ...ಅಣ್ಣ..ಅಕ್ಕ....
ಇದರ ಹೊರತು ಮತ್ತೇನಿಲ್ಲ...
ನಿನಗೆ ಸಂಪೂರ್ಣ ಸ್ವಾತಂತ್ರ್ಯವಿದೆ...ನೀನು ನನ್ನ ಮಡದಿಯಾಗಲ್ಲ......

ನನ್ನ ಗೆಳತಿಯಾಗಿ..ನನ್ನ ಜೇವನದಲ್ಲಿ..ಬಾ...

ಏನೇ ಸಂದರ್ಭ ಬಂದರೂ..ನನ್ನ "ಆಯಿಗೆ" ಏನೂ ಹೇಳಬೇಡ...

ನನ್ನಮ್ಮನ ತಪ್ಪಿದ್ದರೂ ಕೂಡ.... ಸುಮ್ಮನಿರು...

ನನ್ನ ತಂದೆ ತೀರಿದಾಗ ನನ್ನಮ್ಮನಿಗೆ ೨೪ ವರ್ಷ..ತಂದೆ ತೀರಿದ ಒಂದು ತಿಂಗಳಿಗೆ ಈ ಪ್ರಪಂಚಕ್ಕೆ ಬಂದೆ...
ಸಣ್ಣವಯಸ್ಸಿನಲ್ಲಿ ವೈಧವ್ಯ..ತುಂಬು ಬಸಿರು...
ಎರಡು ಚಿಕ್ಕ ಮಕ್ಕಳು....ಬದುಕಲ್ಲಿ...ಏನಿದೆ...?
ಕಷ್ಟವೋ..ದುಃಖವೊ...ಯಾರಬಳಿ..ಹೇಳುವದು...?
ಆತ್ಮಹತ್ಯೆ ಮಾಡಿಕೊಂಡಿದ್ದರೆ...ಆ ದೇವರ ಬಳಿಯೂ....ಉತ್ತರವಿರುತ್ತಿರಲಿಲ್ಲ....
ಮೌನವಾಗಿದ್ದಳು...ದುಖ ಸಹಿಸಿ ಕೊಂಡಳು...

ನಮ್ಮನ್ನು ದೊಡ್ಡವರನ್ನಾಗಿ ಮಾಡಿದಳು...
ಆ ತಾಯಿಗೆ ಎದುರಾಡ ಬೇಡ..ಏನೇ..ಹೇಳಿದರೂ...ಸುಮ್ಮನಿದ್ದುಬಿಡು....ಅಂದಿದ್ದೆ....

ಊರಿಂದ ಅಣ್ಣನ ಫೋನು.." ಹೇಗೆ ನಡಿತಿದೆ..ಹನಿಮೂನು...??

ನನ್ನ ಸಂಕಟ ನನಗೆ.. ಅಣ್ಣನಿಗೆ ಏನು ಹೇಳುವದು..ಈ ಸರಸತ್ತೆ..ಬಿಸಿಬೇಳೆ ಬಾತಿನ ವಿಷಯ....?

ನನಗೋ...ಸಾಕೋ ಸಾಕು..ಅನ್ನಿಸಿ ಬಿಡ್ತು....

ಏಳುವದು ಬೇಡ ..ಮಲಗುವದು ಬೇಡ...
ಟೊಯ್ಲೆಟಗೂ ರೂಮಿಗೂ ಓಡಾಡುವದೂ ಬೇಡ....
ಆ ಯಮಯಾತನೆಯ ದಿನಗಳು....

ಸರಸತ್ತೆ...ನೆನೆಸಿಕೊಂಡು ನಗಲೂ ಅಶಕ್ತತೆ....ಹೊಟ್ಟೆ ನೋವು...
ಹಾಗೂ ಹೀಗೂ ಐದು ದಿನ ಕಳೆಯಿತು..ಸುಧಾರಿಸಿ..ಕೊಂಡೆ....

ಅಕ್ಕ, ಭಾವ..ಪ್ಯಾಕೇಜ್ ಟ್ರಿಪ್ ಟಿಕೇಟ್..ಬುಕ್ ಮಾಡಿ ಕೊಟ್ಟಿದ್ದರು..
ಬೆಳಿಗ್ಗೆ ಬೇಗನೇ ಎದ್ದು ಹೊರಟೆವು...

"ದಾರಿಯಲ್ಲಿ ಒಳ್ಳೆ ಹೊಟೆಲ್ ನಲ್ಲೇ ಊಟಮಾಡಿ' ....ಅಕ್ಕನ ಹಿತವಚನ..!!

ಬಸ್ ಹತ್ತಿ ಕುಳಿತವರಿಗೆ ಈ ಪ್ರಪಂಚ ಮರೆತಿತ್ತು..

ಏನು ಮಾತೊ..ಏನು ಸುದ್ಧಿಯೊ...ನನ್ನಾಕೆಗೆ ಕನ್ನಡ ಅಷ್ಟಾಗಿ ಗೊತ್ತಿಲ್ಲವಾಗಿತ್ತು....
ಹಿಂದಿ, ಇಂಗ್ಲೀಷಿನಲ್ಲಿ ಮತಾಡುತ್ತಿದ್ದೇವು...
ಬಸ್ ನಿಲ್ಲಿಸಿದ್ದು ಮಯೂರ ಅಂತ ಹೊಟೆಲ್...ಬೇಲೂರಿನಲ್ಲಿ...

ಊಟ "ಗೊಬ್ಬರ" ಥರ ಇತ್ತು...ಅದನ್ನೇ ತಿಂದೆವು.....

ನಂತರ ಬಂದಿದ್ದು ಶ್ರವಣಬೆಳಗೊಳ......!

ದೊಡ್ಡ ಬೆಟ್ಟ...ಹತ್ತಿ ಹೋಗಬೇಕಿತ್ತು...

ಮತ್ತೆ ಸರಸಕ್ಕನ "ಬಿಸಿಬೇಳೆ ಬಾತ್" ನೆನಪಾಯಿತು..!!

ಮಯೂರ ಹೊಟೆಲಿನ "ಗೊಬ್ಬರವೂ ನೆನಪಾಯಿತು...!!

ಬೆಟ್ಟ ಹತ್ತುವಾಗ "ಒತ್ತಡ " ಜಾಸ್ತಿಯಾಗಿಬಿಟ್ಟರೆ..?

ಹೊಸ ಹೆಂಡತಿ...ಹೇಗೆ ಹೇಳಲಿ..?
ಮನಸ್ಸಿನ್ನಲ್ಲಿ ಗೊಂದಲ......

ಅಮೂಲಾಗ್ರವಾಗಿ ನನ್ನನ್ನೇ ಸೂಕ್ಷ್ಮವಾಗಿ ಅವಲೋಕಿಸಿಕೊಂಡೆ...

ಉಹೂಂ...ತೊಂದರೆ ಬರಲಿಕ್ಕಿಲ್ಲ ಅನ್ನಿಸಿತು....ಧೈರ್ಯ ತಂದು ಕೊಂಡೆ....

ಮಧ್ಯ ಎನೇನೊ ಮಾತು..ಸಲ್ಲಾಪ....
ಆ ವೈರಾಗ್ಯ ಮೂರ್ತಿಯ ಜಾಗದಲ್ಲಿ....
ಬೆಟ್ಟ ಏರಿದ್ದೆ ಗೊತ್ತಾಗಲಿಲ್ಲ....

ಶುರುವಾಯಿತು ಹೊಟ್ಟೆಲ್ಲಿ ಸಣ್ಣಗೆ....ತಳಮಳ....ಅಯ್ಯೊ ದೇವರೆ..ಇನ್ನೇನು..ಗತಿ ..!!

ಈ ಬೋಳು ಬೆಟ್ಟದಮೇಲೆ...??

ಸ್ವಲ್ಪ..ನೀರು ಸಿಗಬಹುದಾ... ನೋಡಿದೆ....ಇದೆ ಕೆಳಗಡೆ...ದೊಡ್ಡ ಕೆರೆ....!!
ಏನು.. ಪ್ರಯೋಜನ..?

ಮಡದಿ ಕಡೆ ನೋಡಿದೆ....

ನನ್ನ ಮಡದಿಗೊ..ಬಹಳ ಆಶ್ಚರ್ಯ...!

ಇಂಥಹ ದೇವರೂ ಇರುತ್ತದಾ..?

" ಹೇಗೆ ....ಕಣ್ಮುಚ್ಚಿ ....ಪ್ರಾರ್ಥಿಸುವದು............?"

"ನೋಡು ಇದು..ಜೈನರ ದೇವರು..ಬಹುಬಲಿ.."

ಬಾಹುಬಲಿ ಕಥೆ ಹೇಳಿದೆ...

ಅವಳಿಗಿನ್ನೂ ಬಾಹುಬಲಿ ಮೂರ್ತಿ ನೋಡಲು..ಒಂಥರಾ..ಮುಜುಗರ ಅನುಭವಿಸುತ್ತಿದ್ದಳು......

"ಛೀ... ಇಲ್ಲಿ ಬರಬಾರದಿತ್ತೂರಿ.."....... ನಾಚಿಕೆಯಿಂದ ಉಲಿದಳು....

ಇದೇ ಸಮಯ ಅಂದುಕೊಂಡು..."ಬಾ..ಬಾ..ಜಲ್ದಿ ಕೆಳಗಡೆ..ಹೋಗೋಣಾ..." ಅಂದೆ...

" ರೀ... ಫೋಟೊ... ತೆಗೆದೆ ಇಲ್ವಲ್ಲಾ..?" ಹೆಂಡತಿ ನೆನಪಿಸಿದಳು.

." ನನ್ನ ಅತ್ತಿಗೆ ಫೋಟೊ ತೆಗೆದ ಹಾಗೆ ಆಗಿಬಿಟ್ಟರೆ..?" ನಾನು ಕೇಳಿದೆ..
ಅದು ಅವಳಿಗೆ ಗೊತ್ತಿರಲಿಲ್ಲ...
ನಾನು ಲಗುಬಗೆಯಿಂದ ಅವಳ ಫೋಟೊ ತೆಗೆದೆ...

"ಜೋಡಿ ಫೋಟೊ..ಬೇಕು..ರೀ....."

ಇಲ್ಲ ಅನ್ನಲಿಕ್ಕಾಗುತ್ತದೆಯೆ...?

ನಾನಗೆ ಒತ್ತಡ ಜಾಸ್ತಿಯಾದರೆ..ಎಂಬ ಭಯ..

ಸುತ್ತಲೂ ನೋಡಿದಾಗ ಒಬ್ಬ ಒಳ್ಳೆಯ ಕ್ಯಾಮರ ಹೆಗಲಿಗೆ ಹಾಕಿ ಕೊಂಡಿದ್ದ... ಅವನಿಗೇ ವಿನಂತಿಸಿದೆ...

ಆ ಪುಣ್ಯಾತ್ಮನಿಗೊ ಆ ಸಮಯದಲ್ಲೇ ತನ್ನ ಬಗೆಗೆ ಹೇಳಿಕೊಳ್ಳುವ ಚಟ...

" ಸಾರ್... ನನಗೆ...ರಾಷ್ಟೀಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ....
ಈ ಕ್ಯಾಮರ ಎಲ್ಲಾ ನನಗೆ ಗೊತ್ತು..ಸಾರ್.."
ನಿಮಗೆ ಬಾಹುಬಲಿ ಮೂರ್ತಿ ಪೂರ್ತಿ ಬರಬೇಕಾ..ಸಾರ್.."..ಖುಷಿಯಿಮ್ದ..ಬಡಬಡಿಸಿದ...

ಮೂರ್ತಿ....ಪೂರ್ತಿ ಬರಬೇಕಾ ಅಂದರೆ ಏನರ್ಥ..?....

ನನ್ನ ಅತ್ತಿಗೆ ಗೊಮಟೇಶ್ವರನ ಫೋಟೊ ತೆಗೆದದ್ದು ನೆನಪಾಯಿತು... ನನಗೊ ಜಲ್ದಿ ಹೊರಡ ಬೇಕಿತ್ತು..

"ಹೇಗೊ ...ಬೇಗ... ತೆಗೆಯಿರಿ.." ಅಂದೇ.....

ನಿಮ್ಮ ಜೋಡಿ ಚೆನ್ನಾಗಿದೆ...ನನ್ನ ಕ್ಯಾಮರದಲ್ಲೂ ತೆಗೆದು ಕೊಳ್ಳಲೆ ..?"

"ನೋಡಿ ನಾವು ಬೇಗನೇ ಹೋಗಬೇಕು..ಜಲ್ದಿ ತೆಗೆದು ಕೊಡಿ..."

" ಸರ್ ..ಬಸ್ ಹೊರಡುವದು ಇನ್ನೂ ತಡ ಇದೆ.....

ಸ್ವಲ್ಪ್ ಸ್ಮೈಲ್ ಕೊಡಿ ಸರ್..ನಾನು ಮದುವೆ ಗಳಿಗೂ ಫೋಟೊ ತೆಗೆಯುತ್ತೇನೆ.."

ಇಂಥಹ ಸಮಯದಲ್ಲಿ....ಹೇಗೆ ಸ್ಮೈಲ್ ಕೊಡುವದು...??

"ನಮ್ಮ ಮದುವೆ ಆಗಿದೆ..ಪ್ಲೀಸ್ ಬೇಗ ತೆಗೆದು ಕೊಡಿ.." ಅಂದೆ.

ಅಂತೂ ಅವನಿಂದ ಬಿಡುಗಡೆ ಪಡೆದು ಕೆಳಗಡೆ ಹೊರಟೆವು..

ಹೇಗೇಗೋ "ಒತ್ತಡವನ್ನು" ನಿಭಾಯಿಸುತ್ತ..ಕೆಳಗಿಳಿದೆ...
ಕೆಳಗಡೆಇಳಿದವರೆ..ಹೊಟೆಲಿಗೆ ನುಗ್ಗಿದೇವು...

ನನ್ನ ಮಡದಿಗೆ.." ಬೆಟ್ಟದ ಮೇಲಿನ ಒತ್ತಡದ" ವಿಷಯವೂ ಗೊತ್ತಾಗಲಿಲ್ಲ....
"ಅತ್ತಿಗೆ" ತೆಗೆದ ಫೋಟೊ ಬಗೆಗೂ ಕೇಳಲಿಲ್ಲ....


ಅದರೆ...ಸುಖ..ದುಃಖ..ಸಂಸಾರದ ವ್ಯಾಮೋಹ ಎಲ್ಲ ತ್ಯಜಿಸಿ..ವಿರಕ್ತನಾದ.......


........ಗೊಮಟೇಶ್ವರ..ಈಗಲೂ ನೆನಪಾಗುತ್ತಾನೆ..ಹನಿಮೂನು,,ನೆನಪಾದಾಗಲೆಲ್ಲ..

30 comments:

shivu.k said...

ಸಾರ್,
ನಿಮ್ಮ ಹನಿಮೂನ್ ಕತೆ ಚೆನ್ನಾಗಿದೆ. ನಮ್ಮ ಕ್ಲಾಸಿನಲ್ಲಿ ಸದಾಕಾಲ ಒಳ್ಳೆಯದನ್ನು ನೆನಸು ಅನ್ನುತ್ತಾರೆ. ನೀವ್ಯಾಕೆ ಬೆಟ್ಟದ ಮೇಲೆ ಸರಸತ್ತೆಯನ್ನು ನೆನೆಸಿಕೊಂಡಿರಿ. ಬೆಟ್ಟದ ಮೇಲಲ್ಲ ಆ ಮಹಾತಾಯಿಯನ್ನು ಎಲ್ಲಿ ನೆನೆಸಿಕೊಂಡರೂ ನನ್ನೊಳಗಿನ ಬಾಡಿ ಮೆಕ್ಯಾನಿಸಮ್ ಸುಮ್ಮನಿರಲಾರದೆ ವೇಗವಾಗಿ ಒವರ್ ಟೈಮ್ ಮಾಡಲಾರಂಬಿಸುತ್ತವೆ. ನಾನಂತೂ ಸರಸತ್ತೆ ನನ್ನ ನೆನಪಿನಿಂದ ಅಳಿಸಿಹೋಗುವವರೆಗೂ ಬಿಸಿ ಬಿಸಿಬೇಳೆಬಾತ್ ತಿನ್ನಬಾರದು, ಕಡೆಪಕ್ಷ ನೋಡಬಾರದು ಅಂತ ವಿಧೇಯಕ ಮಂಡಿಸಿಕೊಂಡು ಬಿಟ್ಟಿದ್ದೇನೆ.

Santhosh Rao said...

ನಿಮ್ಮನಿಗೆ ನಂದು ಒಂದು ನಮಸ್ಕಾರ .

ಎಡವಟ್ಟು ಆದ್ರು ... Memorable Holiday :)

Ittigecement said...

ಶಿವು ಸರ್.....

ಈ ಸರಸತ್ತೆ ಎಂಥವಳು..?
ಅರ್ಥ ಮಾಡಿಕೊಳ್ಳಲಿಕ್ಕೇ... ಆಗಲಿಲ್ಲ..
ನಾನು ಅವಳ ಮನೆಗೆ ಹೋಗಿದ್ದೇ ಎರಡು ಸಾರಿ...
ಎರಡನೆಯ ಅನುಭವ ಸ್ವಲ್ಪದಿನಗಳ ನಂತರ ಬರೆಯುವೆ....
ಮತ್ತೆ ಅವರ ಮನೆಗೆ ಹೋಗುವ ಧೈರ್ಯ ನನಗಂತೂ ಇಲ್ಲ...
ಇಲ್ಲೇ ಬೆಂಗಳೂರಲ್ಲೇ ಇದ್ದಾರೆ....

ನನಗೆ ಗೊಮಟೇಶ್ವರನ ಬಳಿ "ಅನಿವಾರ್ಯವಾಗಿ" ಸರಸತ್ತೆ ನೆನಪು ಮಾಡಿ ಕೊಳ್ಳಬೇಕಾಯಿತು..

ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಸಂತೋಷ್....

ಎಲ್ಲರ ಜೀವನದಲ್ಲೂ ಆ ಸಮಯ...ರಸಮಯ ಕ್ಷಣಗಳು..

ಸರಸತ್ತೆಯ ಘಟನೆ ಕೂಡ..ಆಗ...ಕಷ್ಟವಾಗಿತ್ತು ಅಷ್ಟೆ...

ನಿಮ್ಮ ಅಣ್ಣನ ಮಾತು ಕೇಳಿ...ನಮಗೂ ಸಿಹಿ ಸುದ್ಧಿ ಕೊಡಿ....

ನನ್ನ ಅಮ್ಮ ನಿಮಗೆ ಆಶೀರ್ವಾದಗಳು ತಿಳಿಸಿದ್ದಾಳೆ...

ಧನ್ಯವಾದಗಳು....

Santhosh Rao said...

@ Shivu ಸಾರ್ ..

ಹನಿ ಮೂನ್ ಟ್ರಿಪ್ ಅಲ್ಲ ಬಿಡಿ ಅದು .. ಒಂದು ವೇಳೆ ಹನಿ ಮೂನ್ ಟ್ರಿಪ್ ಆಗಿದ್ರೆ, ಪ್ರಕಾಶ್ ಅವ್ರು ಎಡವಿದಂತೆ ಕಾಣುತ್ತೆ ..ಅವರು choose ಮಾಡಿದ destination ಆ ಸಮಯಕ್ಕೆ ಸರಿಯಾದುದಲ್ಲ ... :)

Mohan said...

ಪ್ರಕಾಶ್, ಒಳ್ಳೆ ಕತೆ ನಿಮ್ಮದು, ನಗ್ತಾಯಿದಿನಿ,ಅಂತು ಎಂತ ನರಸತ್ತೆ ಒತ್ತಡ.ಪ್ರೆಸರ್,ಕುಕ್ಕರ್ ಗೆ ವ್ಯೆಟ್ ಹಾಕ್ದೊರು ಯಾರು?

Kishan said...

The way you transitioned from one of the serious and bare truth of the life to humorous and hilarious incident is simply amazing, till the last sentence where you came back to talk about Gomateshwara. Hats off!

Ittigecement said...

ಸಂತೋಷ್...
ಅದು ನಿಜವೆ ಅನ್ನಿ.. ಆದರೆ ಅದು ಪ್ಯಾಕೇಜ್ ಟ್ರಿಪ್ ಆಗಿತ್ತು...ಊಟಿ..ಕಾರ್ಯಕ್ರಮ ಮುಂದೂಡಲ್ಪಟ್ಟಿತು...
ಮನೆಯಲ್ಲಿರುವದಕ್ಕಿಂತ..ಬೇಲೂರು ಟ್ರಿಪ್ ಹಾಕಿದೆವು..(ಮೊದಲೆ ಪ್ಲಾನ್ ಹಾಕಿದ್ದೇವು)..

ಸಂತೋಷ್..ನೀವು ನನ್ನ ಪ್ರಶ್ನೆಗೆ ಜಾರಿ ಕೊಂಡು ಬಿಟ್ಟಿದ್ದೀರಿ...ಹಹ್ಹಾ..ಹಹ...!

Ittigecement said...

ಮೋಹನ್...
ಮತ್ತೆ ಹನಿಮೂನ ಸಮಯದಲ್ಲಿ..ಒತ್ತಡದ ಸಮಸ್ಯೆ ಬರಲಿಲ್ಲ...
ನನ್ನಾಕೆಯೇ ವೇಟ್ ಹಾಕಿಬಿಟ್ಟಳೇನೊ...!!

ಹಹ್ಹಾ..ಹಹಾ...

Ittigecement said...

kishan...
thank..you...for your coments...

thanks...

ಅಂತರ್ವಾಣಿ said...

ಪ್ರಕಾಶಣ್ಣ,
ಈ ಲೇಖನದಲ್ಲಿ ನಗು ಹಾಗು ಅಳು ಎರಡನ್ನು ತರಿಸಿದ್ದೀರ.
ನಿಮ್ಮ ಬಾಲ್ಯದ ವಿಚಾರ ತಿಳಿದು ಬೇಸರವಾಯಿತು.
ನೀವು ಮತ್ತೆ ಬಿಸಿ ಬೇಳೆ ಬಾತ ನೆನಪಿಸದಕ್ಕೆ ವಂದನೆಗಳು.

Ittigecement said...

ಅಂತರಾಣಿ...

ಜೀವನ ಅಂದ್ರೆ ಇದೆ ತಾನೆ....?

ಬರೇ ಸಿಹಿಯೊಂದೇ ಬೇಕೆಂದರೆ ಹೇಗೆ...
ಬೇಡವೆಂದರೂ ಕಹಿ..ಸಿಕ್ಕೇ ಸಿಗುತ್ತದೆ.... ಅಲ್ಲವೆ..?

"ಒತ್ತಡ" ENJOY... ಮಾಡಿದ್ದಕ್ಕೆ ವಂದನೆಗಳು....

NilGiri said...

ಬಿಸಿಬೇಳೆಬಾತಿನಿಂದಾಗಿ ನಾವೆಲ್ಲಾ ನರಸತ್ತೆಯನ್ನು "ನೆನಸುವ" ಹಾಗೆ ಮಾಡಿದ್ದೀರಿ. ಪಾಪ ಅದೆಷ್ಟು ನೆಗಡಿ ಬಂತೋ ಏನೋ ಅವರಿಗೆ! ಇನ್ನೊಮ್ಮೆ ಅವರ ಮನೆಗೆ ಹೋಗಿ ಬನ್ನಿ ಪ್ರಕಾಶ್!

ಶ್ರವಣಬೆಳಗೊಳದ ಪ್ರಸಂಗ ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.

ನಿಮ್ಮ ಸಪ್ತಾಹ ಎಲ್ಲಿಯವರೆಗೆ ಬಂತು??!

Ittigecement said...

ಗಿರಿಜಾರವರೆ....
ನಿಜ ಹೇಳ ಬೇಕೆಂದರೆ ನಿಮ್ಮ ಪ್ರತಿಕ್ರಿಯೇಗೆ ಎದುರು ನೋಡುತ್ತಿದ್ದೆ...
(ನಿಮ್ಮನ್ನು ಸಂಪರ್ಕಿಸುವ ವಿಧಾನ ಇದೊಂದೆ ಗೊತ್ತಿರೋದು!)
ತೂಕ ಇಳಿಸುವ ಸಪ್ತಾಹ ಇಂದು ಯಶಸ್ವಿಯಾಗಿ ಮುಗಿಯುತ್ತಿದೆ..ಕನಿಷ್ಟ..ನಾಲ್ಕು ಕಿಲೊ ಕಡಿಮೆಯಾಗಿದೆ..
ಕ್ರತಜ್ನತೆ ಹೇಗೆ ಹೇಳ ಬೇಕೊ ತಿಳಿಯುತ್ತಿಲ್ಲ
ನಿಮಗೆ ಈ ಮೂಲಕ ವಂದನೆಗಳು..ಧನ್ಯವಾದಗಳು..


ನಾನು ಪೂರ್ವಗ್ರಹ ಪೀಡಿತನಲ್ಲ..
ಮತ್ತೊಮ್ಮೆ..ಸರಸತ್ತೆ ಮನೆಗೆ ಹೋಗಿದ್ದೆ..
ಅದೂ ಕೂಡ ಬರೆಯಲೇ ಬೇಕಾದ ಪ್ರಸಂಗ..
ಈಗ ಬರೆದರೆ..ವಾಕರೀಕೆ ಬಂದೀತು..ಮತ್ತೆಮ್ಮೆ ಬರೆಯುವೆ..
ನಿಜ ಹೇಳುವೆ..ಇನ್ನೊಮ್ಮೆ ಸರಸತ್ತೆ ಮನೆಗೆ ಹೋಗುವ ದುಸ್ಸಾಹಸಕ್ಕೆ ಕೈ ಹಾಕುವ ಧೈರ್ಯ ಬರುತ್ತಿಲ್ಲ.

ನಿಮ್ಮ ಪ್ರತಿಕ್ರಿಯೆಗೆ ತುಂಬು ಹ್ರದಯದ ವಂದನೆಗಳು...

ಚಿತ್ರಾ ಸಂತೋಷ್ said...

ಹನಿಮೂನ್, ಸರಸತ್ತೆ, ಬಿಸಿಬೇಳೆ ಬಾತ್..ಭಾರೀ ನೆನಪುಗಳು ಬಿಚ್ಚಿಕೊಳ್ಳುತ್ತೇವೆ..ಇರ್ಲಿ ಬಿಡಿ ಓದ್ತೀವಿ..ತಿಳ್ಕೋತಿವಿ ಸರ್.
-ಚಿತ್ರಾ

Ittigecement said...

ಚಿತ್ರ ಕರ್ಕೇರಾರವರೆ...

ನಾವು ಮಾಡಿದ ತಪ್ಪು ನೀವು ಮಾಡಬಾರದೆಂಬ ಆಶಯ...

ಪ್ರತಿಕ್ರಿಯೆಗೆ ವಂದನೆಗಳು....

Harisha - ಹರೀಶ said...

ಗೊಮ್ಮಟೇಶ್ವರ ಕಾಪಾಡು.... :ದ

ಆ ಪುಣ್ಯಾತ್ಮ ತೆಗ್ದಿದ್ದ ಫೋಟೋ ಹ್ಯಾಂಗೆ ಬಂಜು?

ತೇಜಸ್ವಿನಿ ಹೆಗಡೆ said...

ನವಿರಾದ ಹಾಸ್ಯದ ಜೊತೆಗೆ ವಾಸ್ತವಿಕತೆಯ ಮಿಶ್ರಣವನ್ನು ಹೊಂದಿರುವ ಲೇಖನ. ನಿಮ್ಮ ಬರಹದ ಶೈಲಿ ಬಲು ಇಷ್ಟವಾಯಿತು. ಮುಕ್ತ ಮನಸಿನ ಬಿಚ್ಚು ನುಡಿಗಳು ಆಪ್ತತೆ ನೀಡುತ್ತವೆ.

Ittigecement said...

ಹರೀಶ್....

ಆ ಫೋಟೊ ಮಾಮೂಲಿ ಕೊಡಾಕ್ ಕ್ಯಾಮರಾದಲ್ಲಿ ತೆಗೆದದ್ದು...
ನನ್ನ ಅತ್ತಿಗೆ , ಆಣ್ಣಯ್ಯ( ಅದೂ ಹನಿಮೂನಿಗೆ..!!!) ಹೋದಾಗ ಹಿಡಿದದ್ದು....
ಅತ್ತಿಗೆ ಗೊಮಟೇಶ್ವರನ ಫೋಟೊ ತೆಗೆಯುತ್ತಿದ್ದಾಗ ಅಕಸ್ಮಾತ್ ಅಣ್ಣನ ಕೈ ಕೈ ತಾಗಿತು ...
ಏನೋ ತೆಗೆಯಲು ಹೋಗಿ.. ಏನೋ ಬಂದದ್ದು........

ಹರೀಶ್,,,, ಸಮಾಧಾನ ಆಯಿತಾ..?

ಧನ್ಯವಾದಗಳು...ಹೀಗೆ ಬರುತ್ತಾ ಇರಿ..

Ittigecement said...

ತೇಜಸ್ವಿನಿಯವರೆ....

ನನ್ನ ಬ್ಲೋಗ್ ಗೆ ಸ್ವಾಗತ...

ನಿಮ್ಮ ಪ್ರತಿಕ್ರಿಯೆ ಹೇಗಿದೆ ಗೊತ್ತಾ..?


ಈ ಬೆಳಗಿನ ಛಳಿಯಲ್ಲಿ...
ಮುಂಜಾನೆಯ ಇಳಿಬಿಸಿಲಿನ....ಝಳದಲ್ಲಿ...
ಬೆಚ್ಚಗೆ ಹಬೆಯಾಡುವ ಕೊಫೀಯ ಗುಟುಕಿನ ಹಾಗಿದೆ...!


ಉತ್ಸಾಹ ತುಂಬುವಂತಿದೆ..

ಮತ್ತೂ ಬರೆಯೋಣ ಅನಿಸುತ್ತಿದೆ...

ಧನ್ಯವಾದಗಳು....

sunaath said...

ಹನಿಮೂನ್ ಸ್ವಾರಸ್ಯವಾಗಿದೆ!

Ittigecement said...

ಸುನಾತ ಸರ್....

ಸುಸ್ವಾಗತ..!

ಪ್ರತಿಕ್ರಿಯೆಗೆ ಧನ್ಯವಾದಗಳು...

ಸರ್..ಹೀಗೆ ಬರುತ್ತಾ ಬರುತ್ತಾ ಇರಿ...

Geetha said...

ಒಹೋ....ತು೦ಬಾ ನಿದಾನಕ್ಕೆ ಬ೦ದೆ ಅನ್ಸತಿದೆ...(takes time to climb the steps..haha...)
ಈ ಬರಹ ತು೦ಬ ಚೆನ್ನಾಗಿದೆ....sinewave ತರ... ಇಳಿಸಿ,ಹತ್ತಿಸಿ ಮು೦ದೆ ಸಾಗುತ್ತಾ....

Ittigecement said...

ಗೀತಾರವರೆ.....

ಅಂತೂ ಬಂದಿರಲ್ಲ...ಶ್ರವಣಬೆಳ್ಗೊಳ ತಪ್ಪಿಸಿಕೋಡು ಬಿಡುತ್ತೀರೆನೊ ಅಂದುಕೊಂಡಿದ್ದೆ...

ಪ್ರತಿಕ್ರಿಯೆಗೆ ಹ್ರತ್ಪೂರ್ವಕ ವಂದನೆಗಳು....

ಭಾರ್ಗವಿ said...

ಪ್ರಕಾಶ್ ಅವರೇ ,
ಹಾಸ್ಯದಿಂದ ಕೂಡಿದ ಬರಹ ಶೈಲಿ ತುಂಬಾ ಚೆನ್ನಾಗಿದೆ,ನಿಮ್ಮ ಬಾಲ್ಯ & ತಾಯಿಯ ಬಗ್ಗೆ ಓದಿ ಕಣ್ತುಂಬಿ ಬಂತು. ನಿಮ್ಮ ತಾಯಿಯವರಿಗೆ ನನ್ನ ನಮಸ್ಕಾರಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಬೆತ್ತಲೆ ದೇಹದ ಗೋಮಟೇಶನನ್ನು ನೋಡಿದ ತಕ್ಷಣ ನಿಮಗೆ ಟಾಯ್ಲೆಟ್ ನೆನಪಾಗಬೇಕೆ!? ಇರಲಿ ಅಲ್ಲೂ ನಾವು ಪರಮಾನಂದವನ್ನೇ ಹೊಂದುತ್ತೇವಲ್ಲ!!!

ಮನಸ್ವಿ said...

ಒಳ್ಳೆ ಪ್ರಶರ್ ಕಥೆ!
ಬಾಹುಬಲೀ...........ಕಾಪಾಡು.. ಮೂರ್ತಿ....ಪೂರ್ತಿ ಬರಬೇಕಾ ಅಂದರೆ ಏನರ್ಥ..?.... ಅಂದರೆ ಮೂರ್ತಿಯಲ್ಲಿರುವುದೆಲ್ಲಾ ಬೇಕಾ ಎಂದು ಕೇಳಿರಬೇಕು.. ಅಥವಾ ಹಾಫ್ ಬಂದ್ರೆ ಸಾಕಾ ಕೇಳಿರಬಹುದು ನಿಮ್ಮ ಪುಣ್ಯಾತ್ಮ್ ಛಾಯಾಗ್ರಾಹಕ!
ಸ್ಮೈಲ್ ಹೇಗೆ ಕೊಡೋದು ಅಂದ್ರೆ ದೇವೇಗೌಡ ಯಾವತರ ನಗ್ತಾನೋ ಹಾಗೆ ಬರ್ತಿತ್ತು ನೀವು ನಕ್ಕಿದ್ದರೆ.
ಅಂದಹಾಗೆ ಪೋಟೋ ಚೊಲೋ ಬೈಂದಾ ಎಂತು.. ಅಪ್ಲೋಡ್ ಮಾಡು ನೋಡನಾ ;)

Ittigecement said...

ಭಾರ್ಗವಿಯವರೆ...

ಕಷ್ಟಗಳನ್ನು ಅವರು ಎದುರಿಸಿದ ರೀತಿ ನಮಗೆಲ್ಲ ಆದರ್ಶಪ್ರಾಯ..
ಪ್ರತಿಯೊಬ್ಬರು ಮದುವೆಯಾದಮೇಲೂ ತಂದೆ_ ತಾಯಿಯರನ್ನು ಗೌರವದಿಂದ ನಡೆಸಿಕೊಳ್ಳ ಬೇಕು...
ನಮ್ಮನೆಯಲ್ಲು ಮಾಡುತ್ತಿದ್ದೇನೆ...

ಭಾರ್ಗವಿಯವರೆ..ಧನ್ಯವಾದಗಳು...

Ittigecement said...

ಮಲ್ಲಿಕಾರ್ಜುನ್.....

ಸಾರ್..ಗೊಮಟೇಶ್ವರನನ್ನು ನೋಡಿ ನನಗೆ ಟಯ್ಲೆಟ್ ನೆನಪಾಗಲಿಲ್ಲ!!
ಒತ್ತಡಾ..ಸ್ಸಾ..ರ್..ಒತ್ತಡ...!!

ಒತ್ತಡದಲ್ಲೂ ಪರಮಾನಂದವೇ..?
ಹ್ಹಾ...ಹ್ಹಾ...

Ittigecement said...

ಮನಸ್ವಿ.....

ಫೋಟೊ ಬರಲೇ ಇಲ್ಲ...!

ನಾನು ಈ ಲೇಖನ ಬರೆದಮೇಲೆ ಹಾಕಬೇಕೊ ಬೇಡವೊ ಅಂತ ಬಹಳ ವಿಚಾರ ಮಾಡಿದೆ...
ನನಗೆ ಈಗಲೂ ಅಪರಾಧಿ ಮನೋಭಾವನೆ ಇದೆ...

ಭವ ಬಂಧನದ..ಎಲ್ಲ ಸುಖ ತೊರೆದು ..ಆ ವೈರಾಗ್ಯ ಮೂರ್ತಿಗೆ ನನ್ನಿಂದ ಅಪಚಾರ ವಾಯಿತೇ..? ಎಂದು

ಮಲ್ಲಿಕಾರ್ಜುನ ಗೊಮಟೇಶ್ವರನ ಬಗೆಗೆ ಒಂದು ಸೊಗಸಾದ ಲೇಖನ ಹಾಗೂ ಫೋಟೊ ತಮ್ಮ ಬ್ಲೋಗಿನಲ್ಲಿ ಹಾಕಿದ್ದಾರೆ...
ಅಲ್ಲಿ ಕ್ಷಮೆ ಕೇಳಿದ್ದೇನೆ..
" ಈ ಲೇಖನದಿಂದಾಗಿ ಯಾರಿಗಾದರೂ ನೋವಾದಲ್ಲಿ ನಾನು ಕ್ಷಮೆ ಕೇಳುತ್ತೇನೆ.."
ಪ್ರತಿಕ್ರಿಯೆಗೆ ಧನ್ಯವಾದಗಳು..