Sunday, December 21, 2008

ಮಣ್ಣು...ಮರಳು...ನಾವೂ..ಮರುಳು...!!

ಐಟಿ..ಬಿಟಿ..ನಗರದಲ್ಲೊಂದು ಅಂಡರ್ ಪಾಸ್ ಕಾಮಗಾರಿ...

ನಿನ್ನೆ ನಾನು ಹೆಬ್ಬಾಳದಿಂದ ಬರುತ್ತಿದ್ದೆ. ಗಂಗಾನಗರದ ಬಳಿ ಬಳ್ಳಾರಿ ರಸ್ತೆಯಲ್ಲಿ ಒಂದು ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದೆ.

ಅದು ಅಂತರ ರಾಷ್ಟೀಯ ವಿಮಾನ ನಿಲ್ದಾಣದ ರಸ್ತೆ...!

ಅಲ್ಲಿ ಬಳಸುವ ಮರಳನ್ನು ನೋಡಿ ದಂಗಾಗಿ ಹೋದೆ... !!


ಏನು ಮಾಡಬೇಕು...? ಏನು ಮಾಡಲಿ..?

ಗೊತ್ತಾಗಲಿಲ್ಲ.

ಸ್ನೇಹಿತ ಶಿವು ಗೆ ಫೋನ್ ಮಾಡಿ ನನಗಾದ ಬೇಜಾರು ಹೇಳಿಕೊಂಡೆ.

ಆದರೆ ಅವರು ಸುಮ್ಮನಿರ ಬೇಕಲ್ಲ......
ಜಾಗ, ವಿಳಾಸ ಎಲ್ಲ ಪಡೆದು ...ಅಲ್ಲಿ ಹೋಗಿ
ಕಷ್ಟಪಟ್ಟು ,... ಅಲ್ಲಿಯವರ ಕಣ್ಣು ತಪ್ಪಿಸಿ ಫೋಟೊ ತೆಗೆದು ಕಳಿಸಿದ್ದಾರೆ... !!

ನಾನು ಟಿ.ವಿ.೯ ಗೆ ಫೋನ್ ಮಾಡಿದೆ..ಯಾರೂ ಫೋನ್ ತೆಗೆದು ಕೊಂಡಿಲ್ಲ... !

ಉಪಚುನಾವಣೆಯಲ್ಲಿ ಮಗ್ನರಾಗಿರಾದ್ದಾರೋ..ಗೊತ್ತಾಗಲಿಲ್ಲ...

ಈಗ ತಮ್ಮೆಲ್ಲರ ಗಮನಕ್ಕೆ ಈ ಫೋಟೊಗಳನ್ನು ಇಡುತ್ತಿದ್ದೇನೆ...

ಇಲ್ಲಿ ಬಳಸುತ್ತಿರುವದು...ವಾಷ್ಡ್ ಸಾಂಡ್...

ಅರ್ಥಾತ್..ಫಿಲ್ಟರ್ ಮರಳು....

ಅಂದರೆ ಮಣ್ಣನ್ನು ನೀರಲ್ಲಿ ತೊಳೆದು ಇಡಲಾಗಿದೆ...

ನಮ್ಮ ಐಟಿ ಬಿಟಿ ನಗರದಲ್ಲಿ ಮರಳ ಬದಲು ಮಣ್ಣನ್ನು ಬಳಸುವ ಸಂಶೊಧನೆ ಆಗಿದೆಯ..?ಸರಕಾರ ಇದನ್ನು ಒಪ್ಪಿದೆಯಾ..?

ನಾವು..ನೀವು ಓಡಾಡುವ..ಈ ಅಂಡರ್ ಪಾಸ್ ಪೂರ್ತಿಯಾಗಿ ಇದೇ ಕಟ್ಟಿದ್ದಾರೆಯೆ..?

ಇದರ ಆಯಸ್ಸು ಎಷ್ಟು..?

ಇದಕ್ಕೆ ನಾವು ಏನು ಮಾಡಬಹುದು...?

ಯಾರಾದರೂ ತಿಳಿದವರು ಹೇಳ ಬಲ್ಲರೆ...?

ಬರಿ ಪ್ರಶ್ನೆಗಳು..ಪ್ರಶ್ನೆಗಳು...

ಉತ್ತರ...ಇದೆಯಾ..?
34 comments:

ತೇಜಸ್ವಿನಿ ಹೆಗಡೆ said...

"ಹಣಕಂಡರೆ ಹೆಣವೂ ಬಾಯಿಬಿಡುತ್ತದೆ" ಎಂಬ ಗಾದೆ ಮಾತು ಹೀಗೇ ಸುಮ್ಮನೇ ಹುಟ್ಟಿದ್ದಲ್ಲವಲ್ಲ..!
ಇಂತಹ ಭ್ರಷ್ಟರಿರುವುದರಿಂದಲೇ ಉಗ್ರರು ಸರಾಗವಾಗಿ ತಮ್ಮ ಧಾಳಿ ಮುಂದಿವರಿಸುತ್ತಿರುವುದು!!! ಪಾಕಿಸ್ತಾನದ ಮೇಲೇ ಯುದ್ಧ ಸಾರುವ ಮೊದಲು ನಮ್ಮೊಳಗಿನ ಮಹಾಮಾರಿಗಳನ್ನು ಅಡಗಿಸುವುದು ಮುಖ್ಯ. ನಮ್ಮೊಳಗಿನ ಹುಳುಕನ್ನು ಮುಚ್ಚದೇ ಹೊರಗಿನವರನ್ನು ತಡೆಯಲು ಹೇಗೆ ತಾನೇ ಸಾಧ್ಯ? ಇನ್ನು ಕಾರಿನಲ್ಲಿ ಹೊರ ಹೋಗುವಾಗ ಎಲ್ಲಿಯಾದರೂ ಯಾವುದಾದರೂ ಅಂಡರ್ ಪಾಸ್ ಸಿಕ್ಕರೆ ಖಂಡಿತ ಒಂದು ಕ್ಷಣ ಹೆದರುವೆನು :-(

sunaath said...

ಪ್ರಕಾಶ, ಈ ವಂಚನೆಯ ಕೆಲಸದ photoಗಳನ್ನು ಕೊಟ್ಟು ತುಂಬ ಉತ್ತಮ ಕೆಲಸ ಮಾಡಿರುವಿರಿ.
ಈ ಫೋಟೋಗಳನ್ನು ನೋಡಿದ ಗುತ್ತಿಗೆದಾರರಾಗಲೀ ಅಥವಾ
ಅಧಿಕಾರಿಗಳಾಗಲೀ ಸುಧಾರಿಸಿಯಾರು.
ಕೊನೇ ಪಕ್ಷ, ಅದರ ಕೆಳಗೆ ಓಡಾಡುವ ಜನರಾದರೂ (ತೇಜಸ್ವಿನಿ ಹೇಳಿದಂತೆ) ಎಚ್ಚರಿಕೆ ವಹಿಸುತ್ತಾರೆ.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಇವತ್ತು ಇಂಥದ್ದನ್ನೆಲ್ಲ ನೋಡಿಯೂ ಗೊತ್ತಾದ್ರೂ ‘ನಮಗ್ಯಾಕೆ ಬೇಕು’ ಅಂತ ಸುಮ್ಮ್ನಿದ್ಬಿಡ್ತ ಜನ. ಆಕಸ್ಮಾತ್ ನನ್ನಂಥವ್ವು ದಿನಕ್ಕೆ ನಾಲ್ಕು ಬಾರಿ ಅಲ್ಲಿಯೇ ಸುಳಿದಾಡಿದ್ರೂ ಯಾವ ಮರಳು ಯಾವ ಕೆಲಸಕ್ಕೆ ಸೂಕ್ತ ಅನ್ನೋ ಸೂಕ್ಷ್ಮ ಗೊತ್ತಾಗ್ತಿಲ್ಲೆ. ಹೀಗೆ ನಿನ್ನಂಥವರೇ ನೋಡಿ ವಿಷ್ಯವನ್ನು ಬಯಲಿಗೆಳೆಯವ್ವು ಅಷ್ಟೇ.
ಎಲ್ಲರಿಗೂ ಮೆಚ್ಚುಗೆಯಾಗುವ, ಎಲ್ಲರೂ ಎಚ್ಚೆತ್ತುಕೊಳ್ಳುವಂತಹ ಲೇಖನಕ್ಕೆ ಹಾಗೂ ಫೋಟೋಗಳಿಗೆ ಧನ್ಯವಾದಗಳು. .
ನಿನ್ನ ಧೈರ್ಯಕ್ಕೂ ಒಂದು ಸಲಾಂ.

Ittigecement said...

ತೇಜಸ್ವಿನಿಯವರೆ...

ಈ ಫಿಲ್ಟರ್ ಮರಳಿಂದ ಅನೇಕ ಅನಾಹುತಗಳು ಆಗಿವೆ..
ಆಗುತ್ತವೆ...
ಇದು ಸರಿ ಇಲ್ಲ ಅಂದಮೇಲೆ ಪ್ರತಿಬಂಧ ಹೇರಬಹುದಲ್ಲ..

ಈ ಅಧಿಕಾರಿಗಳು..ಏನು ಮಾಡುತ್ತಿದ್ದಾರೆ..?

ಯಾರಿಗಾದರೂ..
ಮಾಧ್ಯಮದವರಿಗಾದರೂ..
ಈ ಫೊಟೊಗಳು ಬೇಕಾದಲ್ಲಿ..
ಶ್ರೀ. ಶಿವು .ಕೆ ( ಛಾಯಾ ಕನ್ನಡಿ)
ಅಥವಾ..ನನ್ನನ್ನು ಸಂಪರ್ಕಿಸಬಹುದು...
kash531@rediff.com
kash531@gmail.com

ತೇಜಸ್ವಿನಿಯವರೆ..ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಸುನಾತ ಸರ್...

ಲಂಚಕೋರತನ..ಬ್ರಷ್ಠಾಚಾರಕ್ಕೆ ನಾವು ಒಗ್ಗಿ ಹೋಗಿದ್ದೀವಾ,,,?

ಹಣ ತಿಂದು ಸಾಯಲಿ..ಅನ್ನ ಬಹುದೇನೋ....(ಅದೂ ಕಷ್ಟ)

ಅದರೆ ಕೆಲಸನೋ ಹಾಳುಮಾಡಿ..?

ಯಾರದರೂ ಇದನ್ನು ಪತ್ರಿಕೆಗಳಿಗೆ ಹಾಕುವದಾದರೆ..

ಶಿವು.ಕೆ. , ನನ್ನನ್ನು ಸಂಪರ್ಕಿಸಿ...

ಸರ್..ನಿಮ್ಮ ನುಡಿಗೆ ವಂದನೆಗಳು..

Ittigecement said...

ಶಾಂತಲಾ...

ನಿಜ ಹೇಳ ಬೇಕೆಂದರೆ..
ಕೆಲವು ಸಾರಿ ನಮಗೂ ಫಿಲ್ಟರ್ ಮರಳು, ಒಳ್ಳೆಯ ಮರಳಿನ ವ್ಯತ್ಯಾಸ ಗೊತ್ತಾಗುವದಿಲ್ಲ.
ಅಂಥಹ ಚಾಲಾಕಿಗಳಿರುತ್ತಾರೆ..

ಆದರೆ ಇದು ಹಗಲು ದರೋಡೆ..
ಎಂಥಹ ಮುಠ್ಠಾಳನಿಗೂ ಗೊತ್ತಾಗುತ್ತದೆ ಅದು ಫಿಲ್ಟರ್ ಮರಳು ಅಂತ...
ಅಷ್ಟು ಕಳಪೆಯಾಗಿದೆ...

ಶಿವು ಗೆ ಧನ್ಯವಾದಗಳನ್ನು ಅರ್ಪಿಸ ಬೇಕು...

ನಾನು ಅವರ ಬಳಿ ಮಾತನಾಡಿದಾಗ ಸಮಯ..೧.೩೦.
ತಕ್ಷಣ ಊಟವನ್ನೂ ಮಾಡದೆ.. ಫೋಟೊ ತೆಗೆದು ಕಳಿಸಿದ್ದಾರೆ..
ಅವರು ವಾಪಸ್ಸು ಮನೆಗೆ ಬಂದದ್ದು ೩.೩೦.

ಅವರ ಕಳಕಳಿಗೆ ನಮನಗಳು...

ಸ್ಪಂದಿಸಿದ ನಿನಗೂ...
ವಂದನೆಗಳು...

Harisha - ಹರೀಶ said...

ಮಾಡಿ ೪ ವರ್ಷದೊಳಗೆ ಕಟ್ಟಡ, ಫ್ಲೈ ಓವರ್ ಎಲ್ಲ ಯಾಕೆ ಬೀಳ್ತು ಅಂತ ಈಗ ಗೊತ್ತಾತು! ಈಗ ಎರಡು ತಿಂಗಳ ಹಿಂದೆ ನಮ್ಮ ಕಂಪನಿಯ ಪಕ್ಕದಲ್ಲಿ ಪ್ರೆಸ್ಟಿಜ್ ಶಾಂತಿನಿಕೇತನ್ ಅವರ ಅಪಾರ್ಟ್ಮೆಂಟ್ ಕಟ್ಟಡ ಬಿದ್ದಿತ್ತು.. ಸದ್ಯ ಇನ್ನೂ ಕಟ್ಟಿ ಮುಗಿದಿತ್ತಿಲ್ಲೆ

ಮನಸು said...

ನಿಮಗೆ ಆ ಕೆಲಸದ ಬಗ್ಗೆ ಅರಿವಿದ್ದಕ್ಕೆ ನೀವು ಬೇಗ ಎಚ್ಚೆತ್ತುಕೊಂಡಿದ್ದೀರಿ, ನಮ್ಮಂತವರು ಆಗಿದ್ದರೆ ಓಹ್ ಎಷ್ಟು ಚೆನ್ನಾಗಿ ಕಟ್ಟುತಿದ್ದರೆ ಎಂದು ವರ್ಣಿಸುತ್ತಿದ್ದೆವು. ನಿಜವಾಗಿಯೂ ಇಂತಹ ಅಪಾಯಕಾರಿ ಕೆಲಸಕ್ಕೆ ಕಡಿವಾಣ ಹಾಕಲೇ ಬೇಕು. ನಿಮ್ಮ ಎಲ್ಲಾ ಒಳಿತಿನ ನಿರ್ಣಯಕ್ಕೆ ಹಾಗು ಅದರ ಹೋರಾಟಕ್ಕೆ ನಮ್ಮಗಳ ಶುಭ ಹಾರೈಕೆ ಇದ್ದೆಇರುತ್ತದೆ.

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಒಳ್ಳೆಯ ಕೆಲಸಕ್ಕೆ .. ಹಿಗ್ಗದೆಯೇ ಕುಗ್ಗದೆಯೇ ನಡೆ ಮುಂದೆ ...
ಎಂದು ನಮ್ಮಲಿರೋ ಮಹಾಮರಿಗಳನ್ನು ಮೊದಲು ತೊಲಗಿಸಲು ನಮ್ಮಂತ ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕು.

Ittigecement said...

ಹರೀಷ್....

ಪ್ರೆಸ್ಟೀಜ್ ಕಟ್ಟಡ ಬಿದ್ದದ್ದು "ಸ್ಟ್ರಕ್ಚರಲ್ ಫೇಲ್ಯುರ್" ಅಂತ ಕೇಳಿದ್ದೇನೆ...
ಈ ಫಿಲ್ಟರ್ ಮರಳಿನ ಪ್ರಭಾವ ಅಲ್ಲ ಗಳೆಯುವಂತಿಲ್ಲ..

ಬೆಂಗಳೂರಲ್ಲಿ ೭೫% ಮರಳು ಫಿಲ್ಟರ್ ಮರಳು ಅಂತ ಒಂದು ಅಂದಾಜಿದೆ..!
ಅಂದರೆ ಜೀವಮಾನದಲ್ಲಿ ಒಂದು ಮನೆ ಕಟ್ಟುವ ನಮ್ಮ ನಿಮ್ಮಂತವರ ಮನೆಗಳೂ..ಸುರಕ್ಷಿತವಲ್ಲ..!

ಇದು ಹೆದರಿಕೆಯಾಗುತ್ತದೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮನಸು...
ನಿಮ್ಮ ಪ್ರತಿಕ್ರಿಯೆ ಸ್ಪೂರ್ತಿ ಕೊಡುವಂತಿದೆ...

ಶಿವು ಕೂಡ ನಿಮ್ಮ ಮಾತನ್ನೇ ಹೆಳುತ್ತಾರೆ..
ಊಟಾನು ಬಿಟ್ಟು ಫೋಟೊ ತೆಗೆದು ಕೊಟ್ಟದ್ದು ಸಾರ್ಥಕ ವಾಗಬೇಕು..ಅನ್ನುತಾರೆ...

ಈ ದಪ್ಪ ಚರ್ಮದ ಅಧಿಕಾರಿಗಳಿಗೇನು ಮಾಡೋಣ..?

ನಾವು ಜಾಗ್ರತಿಯಾಗಬೇಕು..
ಅದೊಂದೇ ಪರಿಹಾರ..
ಅಲ್ಲವೆ..?

ಧನ್ಯವಾದಗಳು...

ಅಂತರ್ವಾಣಿ said...

prakaashaNNa,

maNNiMda maraLu tayaarisuttaaro?.. yaavaaga ee underpass enaagutto?

itteechege kaTTaDagaLu beeLuttiddu anekaa amaayakara saavige kaaraNa ide irabEku.. enaMteera?

Ittigecement said...

ಅಂತರ್ವಾಣಿ....

ಬಹಳ ಬೇಸರ ಆಗುತ್ತದೆ..
ಏನು ಮಾಡೋಣ ಹೇಳಿ..?
ಮರಳು ಮಾಫಿಯಾ..ಬಹಳ ದೊಡ್ಡದು..
ಕ್ರೂರ ಕೂಡ...
ಸರಕಾರ.., ಅಧಿಕಾರಿಗಳು..ದಿಟ್ಟ ಕ್ರಮ ತೆಗೆದುಕೊಳ್ಳ ಬೇಕು..
ಜನರು ಜಾಗ್ರತಿ ಆಗಬೇಕು...

ವಂದನೆಗಳು..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ನುಡಿ ನಮನ.
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತೆ ಈ ಗುತ್ತಿಗೆದಾರರು ಹಾಗು ಅವರ ಜೊತೆಗಿನ ಕಾಣದ ಕೈಗಳು ನಮಗೆ ಅರಿವಿಲ್ಲದೆ ನಮ್ಮನ್ನೇ ಸುಲಿದು ಮುಕ್ಕುತ್ತಿದ್ದಾರೆ, ಈ ಮೇಲು ಸೇತುವೆ ಇನ್ನು ಯಾರು-ಯಾರನ್ನು ಬಲಿ ತೆಗೆದುಕೊಳ್ಳಲು ನಿರ್ಮಾಣವಾಗುತ್ತಿದೆಯೋ!!!
-ರಾಜೇಶ್ ಮಂಜುನಾಥ್

Ittigecement said...

ರಾಜೇಶ್ ಮಂಜುನಾಥ್....

ನಮ್ಮನ್ನು ದೇವರೇ ಕಾಪಾಡಬೇಕು...

ನಾನೂ ಒಬ್ಬ ಗುತ್ತಿಗೆದಾರ..
ಫಿಲ್ಟರ್ ಮರಳು..ಏಳು ಸಾವಿರಕ್ಕೆ ಸಿಗುತ್ತದೆ...
ಒಳ್ಳೆಯ ಮರಳಿಗೆ ಹನ್ನೊಂದು ಸಾವಿರ ಕೊಡಬೇಕು...
ಈಗಿನ..ಅನಿಶ್ಚಿತತೆ..ಮಾರ್ಕೆಟ್ ರೀತಿ...
ಮನೆ ಕಟ್ಟಿಸುವವರಿಗೆ ಕಡಿಮೆ ಹಣದಲ್ಲಿ ಮನೆ ಬೇಕು...
ಇದೆಲ್ಲಾ ನಮ್ಮ ವ್ಯವಸಾಯದ ಸಮಸ್ಯೆಗಳು...

ಗುಣಮಟ್ಟ ಬೇಕಾದರೆ ಸ್ವಲ್ಪ ಖರ್ಚು ಮಾಡಬೇಕಾಗುತ್ತದೆ...
ಇದನ್ನು ಅರ್ಥ ಮಾಡಿ ಕೊಳ್ಳ ಬೇಕು..

ಅಲ್ಲವಾ...
ಇಲ್ಲದಿದ್ದರೆ ಚೆನ್ನಾಗಿ ಮಾತನಾಡಿ ಟೋಪಿ ಹಾಕುವ ಮೇಸ್ತ್ರಿ ಆಪ್ತನಾಗಿ...
ಹಾಕುವ ಮಕಮಲ್ ಟೋಪಿ ಹಾಕಿಸಿಕೊಳ್ಳ ಬೇಕಾಗುತ್ತದೆ...

ರಾಜೇಶ್ ಧನ್ಯವಾದಗಳು...

Geetha said...

ಈ ವಿಶಯಕ್ಕೆ ನಾನು ಏನು ಮಾಡಬಹುದೊ ತೋಚುತ್ತಿಲ್ಲ :(

Ittigecement said...

ಗೀತಾರವರೆ....

ಮನಸ್ಸಿಗೆ ಬೇಜಾರಾಗುತ್ತದೆ..
ನಮ್ಮನೆ ಕಟ್ಟುವಾಗ ಅದರ ಗಂಭಿರತೆ ಅರ್ಥವಾಗುತ್ತದೆ..
ಅದಕ್ಕೆ ಹಿರಿಯರು ಹೇಳಿದ್ದಾರೆ...

"ಮನೆ ಕಟ್ಟಿನೋಡು...
ಮದುವೆಮಾಡಿ ನೋಡು..."

ಅಲ್ಲವೆ?

shivu.k said...

ಪ್ರಕಾಶ್ ಸಾರ್,

ನಾನು ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ಇಷ್ಟವಾಗಲಿಲ್ಲ. ಅದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡಂತಾಗುತ್ತದೆ. ಸುಮ್ಮನೆ ಮರೆಯಲ್ಲಿ ನಿಂತು ನೋಡುವುದರಲ್ಲಿ ಬಲು ಮಜವಿದೆ. ಒಂದು ಹನಿ ನೀರು ತನ್ನ ಪಾತ್ರ ಹಿಗ್ಗಿಸಿಕೊಳ್ಳುತ್ತಿದೆ! ಅದು ಯಾವ ಕಡೆ ಹರಿಯುತ್ತದೆ ಕಾದು ನೋಡುವ ಕುತೂಹಲ ನನಗೆ !

Prashant said...

This is a really serious thing citizens should come to know..thanks for trying to create awareness!!!!!!!!

Ittigecement said...

ಶಿವು ಸರ್...

ನಿಮ್ಮ ಕಳಕಳಿ ನನಗೆ ಇಷ್ಟ್ವಾಯಿತು..
ಎಲ್ಲರೂ ತಮ್ಮದು..,ನನ್ನದು ಅಂತಿರುವಾಗ..
ಊಟ,ತಿಂಡಿ ಬೀಟ್ಟು ...
ಅಲ್ಲಿಯವರ ಕಣ್ಣು ತಪ್ಪಿಸಿ ಫೋಟೊ ತೆಗೆದಿದ್ದೀರಲ್ಲ..!
ಇದು ನನಗೂ ಸ್ಪೂರ್ತಿಯಾಗಿದೆ ಸರ್...

ಹೀಗೆ ಮುಂದುವರಿಯಲಿ...
ಇಂಥ ವಿಷಯದಲ್ಲಿ ನನ್ನ ಸಂಪೂರ್ಣ ಬೆಂಬಲವಿದೆ...

ಅಭಿನಂದನೆಗಳು...

Ittigecement said...

ಪ್ರಶಾಂತ್....

ನಿಮ್ಮ ಪ್ರತಿಕ್ರಿಯೆ ನಮಗೆ ಸ್ಪೂರ್ತಿಯಾಗಿದೆ...

ಧನ್ಯವಾದಗಳು...

ಚಂದ್ರಕಾಂತ ಎಸ್ said...

ನನಗನ್ನಿಸುವ ಮಟ್ಟಿಗೆ ಇದಿಗ ಸಾಮಾನ್ಯ ಜನರೇ ದಂಗೆ ಏಳಬೇಕು. ಇತ್ತೀಚೆಗೆ ಯಾವುದೋ ಒಂದು ಕಾಲೇಜ್ ನೆಲದಲ್ಲಿ ಇದ್ದಕ್ಕಿದ್ದಂತೆ ಒಂದು ದೇವಸ್ಥಾನ ಕಟ್ಟಲು ಪ್ರಾರಂಭಿಸಿದಾಗ ಆ ಕಾಲೇಜಿನ ಜನಗಳೇ ಗಲಾಟೆ ಮಾಡಿ ಕೆಲಸ ನಿಲ್ಲಿಸಿದರು.
ನೀವು ಇದೇ ಬರವಣಿಗೆಯನ್ನು ಕನ್ನಡ ಪ್ರಭ ಮುಂತಾದ ಪತ್ರಿಕೆಗಳ ವಾಚಕರ ವಿಭಾಗಕ್ಕೆ ಕಳಿಸಿದರೆ ಒಳ್ಳೆಯದು.

Slogan Murugan said...

Nimmagoskara ondu chitra: http://mainsandcrosses.blogspot.com/2008/12/4th-main-chamrajpet.html

Ittigecement said...

ಚಂದ್ರಕಾಂತರವರೆ....

ಜನರು ದಂಗೆ ಎದ್ದರೆ ಮಾತ್ರ ಅಧಿಕಾರಿಗಳಿಗೆ.. ಗದ್ದುಗೆಯಲ್ಲಿ ಕುಳಿತವರಿಗೆ ಗೋತ್ತಾಗುತ್ತದೆ..!

ಅದು ನಿಜ...ಕೂಡ...

ನನಗೆ ಯಾವ ಪತ್ರಿಕೆಯವರೂ ಗೊತ್ತಿಲ್ಲ...

ನೀವು ಹೇಳಿದ ಹಾಗೆ ಕಳುಹಿಸಿ ಕೊಡುತ್ತೇನೆ ನೋಡೋಣ...!

ನಿಮ್ಮ ಕಳಕಳಿಗೆ ಹ್ರದಯಪೂರ್ವಕ ವಂದನೆಗಳು...

Ittigecement said...

ಆತ್ಮೀಯ..ಸ್ಲೋಗನ್..ಮುರುಗನ್....

ನಾನು ನಿಮ್ಮ ಅಭಿಮಾನಿ....

ನಿಮ್ಮ ಬ್ಲೋಗಿನ ಫೋಟೊಗಳಿಗೆ..
ಅವುಗಳ ವೈವಿದ್ಯತೆಗೆ..ಮನಸೋತಿದ್ದೇನೆ...

ನನಗೆ ಬೋರಾದಾಗಲೆಲ್ಲ..ನಿಮ್ಮ ಬ್ಲೋಗಿಗೆ ಬಂದು..
ಉತ್ಸಾಹ ತಂದು ಕೊಳ್ಳುತ್ತೇನೆ....

ನಿಮ್ಮ ಪ್ರೀತಿಗೆ...
ನಿಮ್ಮ ಅಭಿಮಾನಕ್ಕೆ ..

ಧನ್ಯ....
ಧನ್ಯವಾದಗಳು...

ಶಬ್ಧಗಳ ನುಡಿ ನಮನಗಳು..!

ಚಂದ್ರಕಾಂತ ಎಸ್ said...

ನಾನು ನನಗೆ ಗೊತ್ತಿರುವ ಪತ್ರಿಕೆಯವರ ಗಮನವನ್ನು ನಿಮ್ಮ ಬ್ಲಾಗ್ ಕಡೆಗೆ ಸೆಳೆದಿದ್ದೇನೆ. ನೋಡೋಣ ಪ್ರಕಟಿಸುವರೇನೋ

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್..ಒಳ್ಳೆ ವಿಚಾರ. ಟಿವಿ 9 ನವರು ಏನ್ ಮಾಡಿದ್ರು? ಆಮೇಲೆ ಹೇಳಿ...
-ತುಂಬುಪ್ರೀತಿ,
ಚಿತ್ರಾ

Ittigecement said...

ಚಂದ್ರಕಾಂತರವರೆ...

ನಿಮ್ಮ ಸಕ್ರೀಯ ಆಸಕ್ತಿ ನನಗಿಷ್ಟವಾಯಿತು..
ಇನ್ನೂ ಧೈರ್ಯ..ತಂದಿದೆ...
ನೋಡೋಣ ಏನಾಗುತ್ತದೆ ಅಂದು...

ಹ್ರದಯಪೂರ್ವಕ ವಂದನೆಗಳು...

Ittigecement said...

ಚಿತ್ರಾರವರೆ....

ಟಿವಿ ೯ ರವರು ಇನ್ನೂವರೆಗೂ ಪ್ರತಿಕ್ರಿಯಿಸಿಲ್ಲ...

ಇನ್ನೂ ಹಲವಾರು ಕಡೆ ಪ್ರಯತ್ನ ನಡೆದಿದೆ...
ನೋಡೋಣ ಏನಾಗುತ್ತದೆಂದು..

ಧನ್ಯವಾದಗಳು...

Ashok Uchangi said...

ಎಂಥಾ ಮರಳಯ್ಯ....ಇದು ಎಂಥಾ ಮರುಳು...!

ಅಶೋಕ ಉಚ್ಚಂಗಿ
http://mysoremallige01.blogspot.com/

Ittigecement said...

ಅಶೋಕ್......

ನನ್ನ ಬ್ಲೋಗ ಗೆ ಸುಸ್ವಾಗತ..

ನಿಮ್ಮ ಈ ಪ್ರತಿಕ್ರಿಯೆ ಮೊದಲೆ ಗೊತ್ತಾಗಿದ್ದರೆ..ಇದೇ ಹೆಸರನ್ನು ಇಡುತ್ತಿದ್ದೆ..!

ಈಗಲೂ ಕಾಲ ಮಿಂಚಿಲ್ಲ...
ಒಂದು ಟಿವಿ ವಾಹಿನಿಯವರು ಮರಳಿನ ಬಗೆಗೆ ಕಾರ್ಯಕ್ರಮ ಮಾಡುತ್ತಾರಂತೆ ..
ಇದೀಗ ತಾನೆ ಮಾತನಾಡಿದರು..
ಅದಕ್ಕೆ ಇದೆ ಹೆಸರನ್ನಿಡೋಣ...

ಚಂದವಾದ ಪ್ರತಿಕ್ರಿಯೆಗೆ ತುಂಬಾ..ತುಂಬಾ
ಧನ್ಯವಾದಗಳು...

Ashok Uchangi said...

ಪ್ರಿಯರೇ
ಹೆಡ್ಡಿಂಗ್ ಏನೇ ಇರಲಿ.ನಿಮ್ಮ ಕಾಳಜಿ ಮೆಚ್ಚತಕ್ಕದ್ದೇ.ಅದೂ ಒಬ್ಬ ಗುತ್ತಿಗೆದಾರರಾಗಿ ನೀವು ಮಾಡುತ್ತಿರುವ ಕೆಲಸವನ್ನು ಇಡಿ ಸಮಾಜವೇ ಮೆಚ್ಚಬೇಕು.ಟಿವಿ ವರದಿಯ ಫಲಶ್ರುತಿ ಏನಾಗುತ್ತೆ ನೋಡೋಣ.ಶಿವು ಮೂಲಕ ಈ ವರದಿ ಪ್ರಸಾರದ ಸಮಯ ದಯಮಡಿ ತಿಳಿಸಿರಿ.
ಅಶೋಕ ಉಚ್ಚಂಗಿ
http://mysoremallige01.blogspot.com/

Ittigecement said...

ಅಶೋಕ್...

ಟಿವಿ ಯಲ್ಲಿ ಬರುವ ಕಾರ್ಯಕ್ರಮವನ್ನು..
ಖಂಡಿತ ನಮ್ಮ ಬ್ಲೋಗ್ ಓದುಗರಿಗೆಲ್ಲ ತಿಳಿಸುವೆ...

ಧನ್ಯವಾದಗಳು...

ಸುಧೇಶ್ ಶೆಟ್ಟಿ said...

Hyderbad nalli, ondu fly over udhgaataneya dinave maridu biththanthe... idara avastheyoo heege aagabahudo eno...

bhrashtaru...

Ittigecement said...

ಸುಧೇಶ್...

ಫ಼ಿಲ್ತೆರ್ ಮರಳಿನಿಂದ ಅದರ ಶಕ್ತಿ ಕಡಿಮೆ ಆಗುವದಂತೂ ಹೌದು..
ಆದರೆ ಎಷ್ಟು ಎನ್ನುವದು ತಜ್ನರು ಹೇಳಬೇಕು...

ಪ್ರತಿಕ್ರಿಯೆಗೆ ಧನ್ಯವಾದಗಳು...