Wednesday, November 12, 2008

ಇಂಥವರೂ.. ಇರ್ತಾರೆ...!!

ನನ್ನ ಸ್ನೇಹಿತರ ಸ್ನೇಹಿತರೋಬ್ಬರು ಸೈಟ್ ಖರಿದಿಸಿದರು. ಮುಂದೇನು ಅಂದಾಗ ನನ್ನ ಸ್ನೇಹಿತರು ನನ್ನ ಹೆಸರು ಹೇಳಿದರಂತೆ.
"ನೋಡಿ ಪ್ರಕಾಶ್, ನನ್ನ ಸೈಟ್ ವಿದ್ಯಾರಣ್ಯಪುರದ ಹತ್ತಿರ ಇದೆ. ಏನು ಮಾಡ ಬಹುದು ಅಂತ ನೀವು ಹೇಳಬೇಕು" ಅಂದರು.
ನನಗೆ ಈ ಥರ ಅತೀ ಬುದ್ದಿವಂತಿಕೆಯಿಂದ ಮಾತನಾಡುವವರನ್ನು ಕಂಡರೆ ಇಷ್ಟವಾಗುವದಿಲ್ಲ.
ಸೈಟ್ ಇದೆ ಅಂದಮೇಲೆ ಇನ್ನೇನು ಮಾಡ ಬಹುದು? ಅದೂ ನನ್ನ ಹತ್ತಿರ ಕೇಳಿದರೆ ನಾನು ಇನ್ನೇನು ಅನ್ನ ಬಹುದು?
" ಮನೆ ಕಟ್ಟಿಸಿಬಿಡಿ ಸರ್" ಎಂದೆ.
" ನಾಳೆ ಜಾಗ ತೋರಿಸುತ್ತೇನೆ" ಅಂದರು ನಾನು ಸಮ್ಮತಿಸಿದೆ.
ಮರುದಿನ ನನಗೆ ಸೈಟ್ ಬಳಿ ಕರೆದು ಕೊಂಡು ಹೋದರು.
"ನೋಡಿ ಇದೆ ಸೈಟು.." ಮೊದಲು ಕಂಪೌಂಡು ಹಾಕಬೇಕು" ಅಂದರು.
" ಮನೆ ಕಟ್ಟಿಸುವ ವಿಚಾರ ಇದೆಯಾ?" ಎಂದು ಕೇಳಿದೆ.
" ಹೌದು..ಆದರೆ ಮೊದಲು ನಾಲ್ಕೂ ಕಡೆ ಕಂಪೌಂಡು ಹಾಕಬೇಕು."
"ಹಾಗಾದರೆ ಮನೆ ಕಟ್ಟಿ ಆದಮೇಲೆ ಕಂಪೌಂಡು ಹಾಕೋಣ. ಈಗಲೆ ಕಟ್ಟಿದರೆ ಮನೆಕೆಲಸಕ್ಕೆ, ಒಳಗಡೆ ಕೆಲಸಕ್ಕೆ ತೊದರೆ ಅಗುತ್ತದೆ.." ಅಂದೆ.
"ಇಲ್ಲಾರಿ.. ನಾಲ್ಕೂಕಡೆ ಕಂಪೌಂಡ್ ಮೊದಲು ಹಾಕಬೇಕು ಆಮೇಲೆ ಮುಂದಿನ ಕೆಲಸ" ಅಂದರು
" ಯಾಕೆ ಹಾಗೆ? ನಮ್ಮ ಅನುಕೂಲ ನೋಡಿಕೊಳ್ಳಬೇಕಲ್ಲವೆ?" ಎಂದೆ.
" ನನ್ನ ಹೆಂಡ್ತಿ ತಮ್ಮ ಬಿ.ಇ. ಚಿನ್ನದ ಪದಕ ಹೋಲ್ಡರ್, ಅವರು ಹಾಗೆ ಮಾಡಲಿಕ್ಕೆ ಹೇಳಿದ್ದಾರೆ. ಹಾಗೆ ಮಾಡ ಬೇಕು."

ಇದೇನಪ್ಪ ಶುರುವಿನಲ್ಲೆ ಹೀಗೆ.. ಮುಂದೇನು..? ತಲೆ ಕೆರೆದು ಕೊಂಡೆ...

" ನಿಮ್ಮ ಹೆಂಡ್ತಿ ತಮ್ಮ ಎಲ್ಲಿ ಇರ್ತಾರೆ?" ಎಂದು ಸಾವಕಾಶವಾಗಿ ಕೇಳಿದೆ.
" ಇಲ್ಲೆ ಪಕ್ಕದಲ್ಲಿ.. ನಿಮ್ಮ ಕೆಲಸದ ಮೇಲ್ವಿಚಾರಣೆ ಅವರಿಗೆ ಹೇಳಿದ್ದೇನೆ. ಅವರು ಕೆಲಸ ಹುಡುಕುತ್ತಿದ್ದಾರೆ . ಅಲ್ಲಿವರೆಗೆ ಇಲ್ಲಿ ಬರ್ತಿತ್ತಾರೆ ..ಅವರು ಹೇಳಿದ ಹಾಗೆ ಮಾಡಿಬಿಡಿ..."

" ಸರ್.. ಕಾಂಟ್ರಕ್ಟು ಒಬ್ಬರಿಗೆ..ಮೇಲ್ವಿಚಾರಣೆ ಒಬ್ಬರಿಗೆ..ಬೇಡ. ನಿಮ್ಮ ಹಣಾನೂ ಉಳಿಯುತ್ತದೆ. ಅವರಿಗೆ ಕೆಲಸನೂ ವಹಿಸಿ ಬಿಡಿ.
ಮನೆಯವರ ಥರ ಮಾಡಿ ಕೊಡ್ತಾರೆ. ಎಷ್ಟೆಂದರೂ ಹೆಂಡ್ತಿ ತಮ್ಮನಲ್ಲವೆ?" ಅಂದೆ.

ಮನೆ ಕಟ್ಟೊ ಮೊದಲೆ ಕಂಪೌಂಡ್ ಕಟ್ಟುವ ಸಲಹೆ ಕೊಡುವವನ ಮೇಲ್ವಿಚಾರಣೆ ಇನ್ನು ಹೇಗಿರುತ್ತದೆ...?

ನಾನು ಮೆಲ್ಲಗೆ ಜಾರಿಕೊಂಡೆ..
ಜೀವನ ಪೂರ್ತಿ..ಕಲಿಯುತ್ತ....ಇರಬೇಕು....... !!

14 comments:

Lakshmi Shashidhar Chaitanya said...

ಹ ಹ...ಸಖತ್ತಾಗಿದೆ ನಿಮ್ಮ ಅನುಭವ.ಮನೆಕಟ್ಟಿಸುವವರೇ ಕಾಂಟ್ರಾಕ್ಟರ್ ಗಳನ್ನ ತಲೆ ತಿನ್ನುವುದನ್ನು ನೋಡಿರುವೆ...ಇದು ಹೊಸಾಥರ. ನಿಜ....ಜೀವನದಲ್ಲಿ ನಾವು ಬಹಳ ಕಲಿಯಬೇಕಿದೆ.

Shankar Prasad ಶಂಕರ ಪ್ರಸಾದ said...

ಮನೆ ಕಟ್ಟೋದಕ್ಕೆ ಇಟ್ಟಿಗೆ ಬೇಕಂತೋ ಅಥವಾ ಗೋಲ್ಡ್ ಮೆಡಲ್ಲಲ್ಲೇ ಕಟ್ಟುಸ್ತಾರೋ ?
ತಾರಸಿ ಹಾಕಿ ಆಮೇಲೆ ಗೋಡೆ ಹಾಕೋ ಪ್ಲಾನ್ ಇದೆಯಂತಾ ?

ಕಟ್ಟೆ ಶಂಕ್ರ
ಈ ಬ್ಲಾಗನ್ನು ಫಾಲೋ ಮಾಡೋ ಹೊಸಾ ಫೀಚರ್ ಬಂದ ಮೇಲೆ ಬಹಳ ಅನುಕೂಲ ಆಗಿದೆ. ಅಲ್ವೇ ?

Ittigecement said...

ಲಕ್ಷ್ಮೀಯವರೆ .. ನನ್ನ ಬ್ಲೊಗ್ ಗೆ ಸ್ವಾಗತ, ಆ ಚಿನ್ನದ ಪದಕದವನ ಸಲಹೆ ನೋಡಿಯಾಯಿತಲ್ಲ! ಅವನ ಸಲಹೆಯನ್ನ ಕುರುಡುತನದಿಂದ ಅನುಸರಿಸುವ.. ಮೂರ್ಖನ ಕೆಲಸ ತೆಗೆದುಕೊಂಡು.. ನಾನೂ ಅವರ ಪಂಗಡ ಸೇರಲು ಮನಸ್ಸು ಒಪ್ಪಲಿಲ್ಲ. ಧನ್ಯವಾದಗಳು..

Ittigecement said...

ಶಂಕರ್..
ಎಷ್ಟು ಓದಿದರೇನು..? ಸಾಮನ್ಯ ಜ್ನಾನವಿಲ್ಲದಿದ್ದರೆ ಏನು ಪ್ರಯೋಜನ? ಸಾಮಾನ್ಯ ಜ್ನಾನವಿರುವ ಮೇಸ್ತ್ರಿ ಕೂಡ ಕಂಟ್ರಾಕ್ಟರ್ ಅಗಬಹುದು.. ಉದಾಹರಣೆಗೆ ಶ್ರೀ. ಆರ್.ಎನ್. ಶೆಟ್ಟಿಯವರು...., ಎಮ್. ಎಸ್. ರಾಮಯ್ಯನವರು..ಇತ್ಯಾದಿ.
ನನಗೆ ಬ್ಲೊಗ್ ಅನುಸರಿಸುವ ವಿಧಾನ ಗೊತ್ತಿಲ್ಲ. ಮುಂದಿನವಾರ ನನ್ನ ಗೆಳೆಯರು ಬಂದಾಗ ಅನುಸರಿಸುತ್ತೇನೆ. ಧನ್ಯವಾದಗಳು..ಬರುತ್ತಾ ಇರಿ..

ಅಂತರ್ವಾಣಿ said...

ಪ್ರಕಾಶ್ ಅವರೆ,
ಎದ್ದು ಬಿದ್ದು ನಗುತ್ತಾಯಿದ್ದೀನಿ :-)

ಇಂಥವರು ಇರುತ್ತಾರೆ ಅಂತ ತಿಳಿಯಿತು :)

shivu.k said...

ಹೆಂಡ್ತಿ ತಮ್ಮನ ಫೋನ್ ನಂಬರ್ ಇದ್ದರೆ ಕೊಡಿ.. ನಾನು ವಿಚಾರಿಸಿಕೊಳ್ಳುತ್ತೇನೆ. ನಮ್ಮ ನಿತ್ಯ ಬದುಕಿನಲ್ಲಿ ಇಂಥಹ ಅಧಿಕ ಪ್ರಸಂಗಿಗಳು ಹಾಕೆ ಹುಟ್ಟಿಕೊಳ್ಳುತ್ತಾರೋ...
ಇವರನ್ನೆಲ್ಲಾ ಮರಳುಗಾಡಿನಲ್ಲಿ ಬಿಟ್ಟು ಬೆಳಗೆ ಒಂದು ಹೊತ್ತು ಮಾತ್ರ ಊಟಹಾಕಿ ಸತಾಯಿಸಿದರೆ ಆಗ ಬುದ್ಧಿ ಬರಬಹುದು....

Ittigecement said...

ಅಂತರವಾಣಿಯವರೆ ಧನ್ಯವಾದಗಳು...ಬರುತ್ತಾ ಇರಿ

Ittigecement said...

ಶಿವು ಸರ್...
ಹೆಂಡತಿ ತಮ್ಮ ಹೀಗೆ ಅಂದ ಮೇಲೆ.. ಹೆಂಡತಿ ಹೇಗಿರಬಹುದು..?
ಇವರಿಬ್ಬರ ಮಧ್ಯದ ಆ ಗಂಡ ಮಹಾಶಯ ..?
ಸರ್..ಇಂಥವರೂ ಇರ್ತಾರೆ.. !!!
ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

'ಸದಿವಿಂಡೇವಾಡಿಕಿಂಕ ಸಾಕ್ಲೋಡೇ ಮೇಲು', 'ಹೊಸ ವೈದ್ಯನಿಗಿಂತ ಹಳೇ ರೋಗಿ ಮೇಲು' ಎಂಬ ಮಾತುಗಳು ಈ ರೀತಿ ಅನುಭವದ ಮೂಸೆಯಿಂದಲೇ ಹುಟ್ಟಿರಬೇಕು.
* * * *
ಬ್ಲಾಗನ್ನು ಓದಲಾಗದವರೂ ನಿಮ್ಮ ಅನುಭವ ಸಂಗತಿಗಳನ್ನು ಎಂಜಾಯ್ ಮಾಡ್ತಿದ್ದಾರೆ ಸಾರ್. ಹೇಗಂತೀರಾ. ನನ್ನ ಅಂಗಡಿಗೆ ಬರುವ ಕೆಲ ಸ್ನೇಹಿತರಿಗೆ,ಪಕ್ಕದ ಲೇತ್ ಓನರ್ ಮಹಬೂಬ್ ಗೆ ನಿಮ್ಮ 'ಸ್ನೇಹಿತೆ ಪ್ರಸಂಗ' ಮತ್ತು 'ನೀವುಂಟು ನಮ್ಮಿಸ್ಸಸ್ ಉಂಟು ಪ್ರಸಂಗ' ಹೇಳಿದ್ದಕ್ಕೆ ಬಿದ್ದುಬಿದ್ದು ನಕ್ಕು,'ಇದನ್ನು ಫಿಲಂನಲ್ಲಿ ಕಾಮಿಡಿ ಸೀನ್ ಆಗಿ ಬಳಸಬಹುದು'ಅಂದರು.
* * * *
ಅಂದ ಹಾಗೆ 'ಲೆಫ್ಟೊ ರೈಟೋ' ಮತ್ತು 'ಮುದ್ದೆ' ಪ್ರಸಂಗಗಳನ್ನು ಬರೀರಿ ಮಾರಾಯ್ರೆ!

Ittigecement said...

ಮಲ್ಲಿಕಾರ್ಜುನರವರೆ.. ನಿಮ್ಮ ವಿಶ್ವಾಸಕ್ಕೆ ಅನಂತಾನಂತ ವಂದನೆಗಳು.
ನಾನು ನನ್ನ ಪಾಡಿಗೆ ನಾನು.. ಸಿಮೆಂಟು, ಮರಳು ಅಂತ ಇದ್ದವನನ್ನು ಇಲ್ಲಿ ಬ್ಲೊಗ್ ಗೆ ತಂದು ಬಿಟ್ಟರಲ್ಲಾ....
ಇರಲಿ ಅದರ ಬಗೆಗೆ ವಿವರವಾಗಿ ಮತ್ತೊಮ್ಮೆ ಬರೆಯುತ್ತೇನೆ..
ನೀವು ಬರೆದ ಮಾತುಗಳಿಗೆ ಪ್ರತ್ಯೇಕವಾಗಿ ಬರೆಯುತ್ತೇನೆ..
ಧನ್ಯವಾದಗಳು..

Harisha - ಹರೀಶ said...

ಕರ್ಮಕಾಂಡ!! ಇಂಥವರಿಗಿಂತ "ನೀವುಂಟು.. " ಅಂತ ಹೇಳವ್ವೇ ಬೆಟರ್ರೇನ :-)

Ittigecement said...

ಹರೀಷ್..
ನೀವುಂಟು ..ನಮ್ಮನೆಯವರುಂಟು ಅವರ ಪೆಯ್ಮೆಂಟೂ ಬಹಳ ಚೆನ್ನಾಗಿತ್ತು. ನಮ್ಮಂಥಹ ಕಾಂಟ್ರಾಕ್ತ್ಟರ್ ಬಯಸುವದು ಸರಿಯಾದ ಪೇಯ್ಮೆಂಟು..
ಮಾಡಿದ ಕೆಲಸದ ಹಣ ಬಂದರೆ ಮತ್ತೇನೂ ಬೇಡ ಅಲ್ಲವಾ..
ಧನ್ಯವಾದಗಳು...

Unknown said...

u have done a good job... by the gold medal ... we can't get the experience.... no work for the person... no common sence also... poor person... balanceing with wife and wife's brother. :):):)

Ittigecement said...

Roopaa....

I agree with your opinion....

thank you for your coments