ಮದುವೆಯಾಗಿ ಒಂದು ವಾರವಷ್ಟೇ ಆಗಿತ್ತು..
"ಪ್ರಕಾಶು..
ಚಂದಾವರದ ಅತ್ತೆ ಮನೆಗೆ ಹೋಗಿ ಬನ್ನಿ.."
ಅಂತ ಮನೆಯ ಹಿರಿಯರ ಸಲಹೆ...
"ನಾನೂ ಬರ್ತೇನೆ.."
ನನ್ನ ಪ್ರೀತಿಯ ಕಮಲಾಕರ ಚಿಕ್ಕಪ್ಪನೂ ನಮ್ಮೊಡನೆ ಹೊರಟ...
"ಚಿಕ್ಕಪ್ಪಾ.. ಕಾರಿಗೆ ಹೇಳುವೆ.."
"ಬೇಡ ಪ್ರಕಾಶು..
ಉಳಿಸಿದ ಹಣವೇ,,.. ಗಳಿಸಿದ ಹಣ...!
ದುಡಿದ ಹಣವನ್ನು ಉಳಿತಾಯ ಮಾಡಬೇಕು.. ಯಾಕೆ ದುಡ್ಡು ವ್ಯರ್ಥವಾಗಿ ಖರ್ಚು ಮಾಡ್ತೀಯಾ..
ಬಸ್ಸಿನಲ್ಲಿ ಹೋಗೋಣ..."
ಸರಿ..
ಸಿರ್ಸಿಗೆ ಬಂದು ಕುಮುಟಾ ಬಸ್ಸು ಹಿಡಿದೆ..
ಮೇ... ತಿಂಗಳು..
ಸೆಖೆ..
ಸಿಕ್ಕಾಪಟ್ಟೆ ರಷ್...
ಹಾಗೂ ಹೀಗೂ ಒಂದು ಸೀಟು ಹಿಡಿದೆ..
ನಾನು ಮತ್ತು ನನ್ನ ಜಿಂಕೆ ಮರಿ ಇಬ್ಬರೂ ಕುಳಿತೆವು..
ನನ್ನ ಚಿಕ್ಕಪ್ಪ ನಮ್ಮ ಬಳಿ ನಿಂತು ಕೊಡರು...
ಸಂಸ್ಕಾರ...
ಅಪ್ಪನಿಲ್ಲದ ನಮಗೆ ಅವರೇ ಬದುಕು ಕಲಿಸಿದ್ದು..
ನಾನು ಎದ್ದು ನಿಂತು ಅವರಿಗೆ ಜಾಗ ಮಾಡಿಕೊಟ್ಟೆ...
ಆ ನೂಕು ನುಗ್ಗಲಿನಲ್ಲಿ ಮುಂದೆ ಹೋದೆ..
ಅಲ್ಲಿ ಒಂದು ಸೀಟು ಸಿಕ್ಕಿತು...
"ಚಿಕ್ಕಪ್ಪನಿಗೆ ಇಲ್ಲಿ ಕರೆದು ..
ನಾನು ಜಿಂಕೆ ಮರಿ ಹತ್ತಿರ ಹೋಗ ಬಹುದಲ್ಲವಾ ?... "
ತಿರುಗಿ ನೋಡಿದೆ...
ಉಹೂಂ...
ತುಂಬಾ ರಷ್ ಇತ್ತು..
ಅವರು ಇಲ್ಲಿ ಬಂದು ..
ನಾನು ಅಲ್ಲಿ ಹೋಗುವದು ದೊಡ್ಡ ರಾಮಾಯಣ.. !
ಸುಮ್ಮನೆ ಅಲ್ಲಿಯೇ ಕುಳಿತೆ...
ಎಷ್ಟೆಲ್ಲಾ ಹಂಬಲಿಸಿದ್ದೆ .. ನನ್ನಾಕೆಯ ಬಗೆಗೆ !
ಎಷ್ಟೆಲ್ಲ ಪತ್ರ ಬರೆದಿದ್ದೆ..
ನನ್ನೆಲ್ಲ ಕನಸುಗಳು ನನಸಾಗಿದ್ದವು..
ನಾನು ನಮಸ್ಕರಿಸುವ ದೇವರಿಗೆ ಮನಸಾರೆ ವಂದಿಸಿದೆ...
ಮುದ್ದಾದ..
ನನ್ನಿಷ್ಟದ ಹುಡುಗಿ ನನ್ನವಳಾಗಿದ್ದಳು...
ಹನಿಮೂನಿಗೆ ಹೋಗೋಣವೆಂದರೆ ...
" ನೆಂಟರ ಮನೆಗಳಿಗೆ ಮೊದಲು ಹೋಗಿ ಬನ್ನಿ.."
ಎನ್ನುವ ಆಜ್ಞೆ..ಮನೆಯ ಹಿರಿಯರದ್ದು...
ನನ್ನಾಕೆಯ...
ಹತ್ತಿರ ಕುಳಿತುಕೊಳ್ಳಬೇಕು..
ನನ್ನಾಸೆಗಳನ್ನು ಹೇಳೀಕೊಳ್ಳಬೇಕು..
ಅವಳ ನಾಚಿಕೆಯನ್ನು ಅವಳ ಕಣ್ಣುಗಳಲ್ಲಿ ನೋಡಬೇಕು...!
ಬಸ್ಸಿನಲ್ಲಿ ...
ಯಾರೋ ಮೂಟೆ ಚೀಲ ನನ್ನ ಪಕ್ಕಕ್ಕೆ ತಳ್ಳಿದಂತಾಯಿತು..
ಭರ್ಜರಿ ಹೊಟ್ಟೆಯವನೊಬ್ಬ ನನ್ನ ಪಕ್ಕದಲ್ಲಿ ನಿಂತಿದ್ದ..!
ಅವನ ಹಾಕಿದ ಶರ್ಟ್ ಬಟನ್ ....
ಬಿಚ್ಚಿ ಹರಿದು ಹೋಗುವ ಸ್ಥಿತಿಯಲ್ಲಿತ್ತು.....
ಹೊಟ್ಟೆಯ ದೊಡ್ಡ ಬಾವಿಯಂಥಹ ಹೊಕ್ಕಳು ಕಾಣುತ್ತಿತ್ತು....
ಮುಖ ನೋಡಲು ಪ್ರಯತ್ನಿಸಿದೆ...
ಕುಳಿತಿದ್ದರಿಂದ ಬರಿ ಹೊಟ್ಟೆಯೇ ಕಾಣುತ್ತಿತ್ತು...
ಕುಮುಟಾ ಬಸ್ಸು ದೇವಿಮನೆ ಘಟ್ಟ ಇಳಿಯಲು ಪ್ರಾಂಭಿಸಿತ್ತು..
ತಿರುವು ..
ಮುರುವು..
ಆ ಕಡೆ..
ಈ ಕಡೆ ನಮ್ಮ ಶರೀರ ವಾಲುತ್ತಿತ್ತು... !
ಪಕ್ಕದಲ್ಲಿ ಜಿಂಕೆ ಮರಿಯಿದ್ದರೆ ಎಷ್ಟು ಸೊಗಸಿತ್ತು.. !
ರಿಂಗು ಹಾಕಿದ ಮೊಂಡು ಮೂಗು...
ಮುದ್ದು ಕೆನ್ನೆಗಳನ್ನು ಇಷ್ಟು ಹತ್ತಿರದಲ್ಲಿ ಸವಿಯ ಬಹುದಿತ್ತು... !
ಛೇ... !
ಅಷ್ಟರಲ್ಲಿ ....
ಬಿಸಿ ಬಿಸಿ....
ಎರಡು ಬಕೆಟ್ ಸಂಬಾರು ಅನ್ನವನ್ನು ..
ನನ್ನ ತಲೆಯ ಮೇಲೆ ಎರಚಿದಂತಾಯಿತು... ...!
"ಊವ್ವೇ... ಊವ್ವೇ... !!... "
ಆ ದೊಡ್ಡ ಹೊಟ್ಟೆಯವ ನನ್ನ ತಲೆಯ ಮೇಲೆ ವಾಂತಿ ಮಾಡುತ್ತಿದ್ದ..
... !! ಅಯ್ಯಯ್ಯೋ... !!.. ಗಡಿಬಿಡಿ ಬಿದ್ದೆ... !
ತುಟಿ ಮುಚ್ಚಿಕೊಂಡೆ..
ಹಣೆ..
ಮುಖ... ಕೆನ್ನೆಯ ಮೇಲೆ ವಾಂತಿ ಇಳಿಯುತ್ತಿತ್ತು...
ಕಣ್ ಬಿಡಲಾಗುತ್ತಿಲ್ಲ...
ಸಿಂಬಳದಂಥಹ ದ್ರವ ರೆಪ್ಪೆಗಳಿಗೆ ಅಂಟಿಕೊಂಡಿತ್ತು....
ಏಳುವ ಪ್ರಯತ್ನ ಮಾಡಿದೆ..
ಮತ್ತೆ ............
"ಊವ್ವೇ.. ಉವ್ವೇ....." !
ಮತ್ತೆರಡು ಬಕೆಟ್ ವಾಂತಿ ಚೆಲ್ಲಿದಂತಾಯಿತು...!
ಸಿರ್ಸಿ ಪೇಟೆ ಗಲೀಜೆಲ್ಲ ...
ನನ್ನ ಮೈಮೇಲೆ ಎರಚಿದಂತಾಯಿತು.... !
ಷರ್ಟ್..
ಒಳಗೆಲ್ಲ ಅಂಟು.. ಅಂಟು...!
ಲೋಳೇ ದ್ರವ ಕಣ್ಣುಗಳನ್ನು ಮುಚ್ಚಿತ್ತು...
ಕಣ್ಣುಜ್ಜಿಕೊಂಡೆ..
ಕೆಟ್ಟ..
ಅಸಾಧ್ಯವಾಸನೆ...!
ನನಗೂ ವಾಂತಿ ಬರುವಂತಾಯಿತು...
ನನ್ನ ಅಕ್ಕ ಪಕ್ಕದವರೆಲ್ಲ ಓಡಿ ಹೋಗಿದ್ದರು...
ಅಯ್ಯೋ ದೇವರೆ...
ಹೊಸ ಹೆಂಡತಿಯ ಎದುರು ಇದೆಂಥಹ ಅವತಾರ...!
ನಾಚಿಕೆ.. ಅಸಹ್ಯ... !
ನನ್ನಾಕೆ ವ್ಯಾನಿಟಿ ಬ್ಯಾಗಿನಿಂದ ಸಣ್ಣ ಪೌಂಡ್ಸ್ ಪೌಡರ್ ಡಬ್ಬವನ್ನು ..
ತುದಿ ಬೆರಳಲ್ಲಿ ಕೊಟ್ಟಳು...
ಮೂಗಿಗೆ ತುರುಕಿ ಕೊಂಡೆ...
ಕುಮುಟಾ ಬರುವಷ್ಟರಲ್ಲಿ ....
ಮೈಮೇಲಿನ ವಾಂತಿಯೆಲ್ಲ ಅರೆ ಬರೆ ಒಣಗಿತ್ತು..
ವಾಂತಿಯ ಸಂಗಡ ಅಸಾಧ್ಯ ಸೆಖೆ... !
ಒಳಗೆಲ್ಲ ಅಂಟು ಅಂಟು..
ಲೋಳೆಯ ಅನುಭವ... !
ಎಲ್ಲರೂ ನನ್ನನ್ನು ಕರುಣಾಜನಕವಾಗಿ ನೋಡುತ್ತಿದ್ದರು..
ಹೇಗೋ ಹೇಗೋ... ಚಂದಾವರಕ್ಕೆ ಬಂದೆವು...
ಮೊದಲು ಬಚ್ಚಲಿಗೆ ಹೋಗಿ ಸ್ನಾನ ಮಾಡಿದೆ...
ಒಂದು ಹೊಸ ಸೋಪ್ ಪೂರ್ತಿ ಮೈಗೆ ತಿಕ್ಕಿದೆ...
ನನ್ನ ಅವಸ್ಥೆ ನೋಡಿ ...
ನನ್ನ "ಲಕ್ಷ್ಮಿ ಅತ್ತೆ" ಮನೆಯಲ್ಲಿದ್ದ ಪೌಡರ್ ಡಬ್ಬಗಳನ್ನೆಲ್ಲ ಕೊಟ್ಟರು..
ಮೈಗೆ ಎಲ್ಲವನ್ನೂ ಬಳಿದುಕೊಂಡೆ...
ನನ್ನಾಕೆ ಹತ್ತಿರ ಬರುತ್ತಿಲ್ಲ.. !
ದೂರದಿಂದಲೇ ಮಾತುಕತೆ.. !
ನನ್ನ "ವೆಂಕಟರಮಣ" ಮಾವ ಅವರ ಅಮೂಲ್ಯ ಸಲಹೆ ಕೊಟ್ಟರು..
"ಪ್ರಕಾಶು..
ಇನ್ನೂ ಎರಡು ಬಾರಿ ಸ್ನಾನ ಮಾಡು ಮಗನೆ..
ಲಕ್ಸ್ ಸೋಪು ಹಚ್ಚಿಕೊಂಡು.."
ಎಷ್ಟೇ ಸೋಪು ಹಚ್ಚಿದರೂ..
ಮನಸ್ಸಿಗೆ ಅಂಟಿದ ವಾಸನೆಯನ್ನು ಹೇಗೆ ತೆಗೆಯುವದು ?
ಊಟವೂ ಸರಿಯಾಗಿ ಸೇರಲಿಲ್ಲ...
ಅದೇ.. ವಾಂತಿಯ ದೃಶ್ಯ ಕಣ್ಣೆದುರಿಗೆ ಬರುತ್ತಿತ್ತು...!
ಮಧ್ಯಾಹ್ನ ಊಟವಾದ ಮೇಲೆ...
"ಹೊಸ ಮದುಮಕ್ಕಳು...
ಕೋಣೆಯಲ್ಲಿ ವಿಶ್ರಾಂತಿ ಮಾಡಿ"
ಲಕ್ಷ್ಮಿ ಅತ್ತೆ ಹಾಸಿಗೆ ಹಾಸಿಕೊಟ್ಟಳು...
ನನ್ನಾಕೆ ದೂರವೇ ಇದ್ದಳು..
ಈ ಅಸಹ್ಯ ...
ಮುಜುಗರ ಸನ್ನಿವೇಶದಲ್ಲಿ ಏನು ಮಾತನಾಡುವದು ?
ಮಾತಿಲ್ಲ..
ನನ್ನ ಮೌನ ಗೌರಿ.. ನೋಡಲೂ ಚಂದ...!
ದೂರವೇ ಮಲಗಿದೆ..
ಫ್ಯಾನ್ ಗಾಳಿ..
ನನ್ನಾಕೆ ಚಂದದ ಮುಖ.. ಸಣ್ಣ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ...
ಯಾರೊ ಮೈ ತಟ್ಟಿ ಎಬ್ಬಿಸಿದಂತಾಯಿತು..
ನನ್ನಾಕೆ !
ಅವಳ ತುಟಿ ಚಲವಲನೆ ಕಾಣುತ್ತಿತ್ತು..
ಶಬ್ಧ ಕೇಳುತ್ತಿಲ್ಲ.. !
ಅಯ್ಯೋ.. !
ನಾನು ...
ನನಗೆ ಕಿವುಡೆ ?....
ಈಗ ನನ್ನ ಮಾವ ಕೂಡ ಕಂಗಾಲಾದರು...
ಹೊಸ ಮದುವೆ ಜೋಡಿ...!
"ತಮ್ಮ ಮನೆಗೆ ಬಂದು ಹೀಗೆ ಆಗಿಹೋಯ್ತೆ..!"
ಎನ್ನುವ ಗಾಭರಿ... !
ಆತಂಕ ಪಟ್ಟುಕೊಂಡು ಕಿವಿಗೆ ಹಾಕುವ "ಚಿಮಟಿಗೆ" ತಂದರು...
ನನ್ನಾಕೆ ...
ನನ್ನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು..
ಅನುಭವ
ಮೃದುವಾಗಿ ಹಿತವಾಗಿತ್ತು ...
ಕಿವಿಗೆ ಚಿಮಟಿಗೆ ಹಾಕಿದ ಅನುಭವ..
ಏನನ್ನೋ ಹೊರಗೆ ತೆಗೆದಳು...
ಮತ್ತೊಂದು ಕಿವಿಗೂ ಚಿಮಟಿಗೆ ಹಾಕಿದಳು..
ಮತ್ತಷ್ಟು ತೆಗೆದಳು..
ನನಗೆ ಸ್ವಲ್ಪ ಸ್ವಲ್ಪ ಕಿವಿ ಕೇಳತೊಡಗಿತು...!
ಕಿವಿಯಿಂದ ತೆಗೆದದ್ದು ಏನು ಅಂತ ನೋಡಿದೆ..
ಹಳದಿ ಬಣ್ಣದ ಅನ್ನದ ಅಗುಳು.. !!
ಹಳದಿ ಬಣ್ಣದ ಲೋಳೆ.. ಲೋಳೆ.... ಅಂಟು.. !
ಚಿಗುಟಿನಂಥಂಹ .. ಹಲಸಿನ ಗುಜ್ಜಿನಂಥಹದ್ದು..
ಇದು ಚಿಕ್ಕನ್ನು ಇದ್ದಿರ ಬಹುದಾ ?
ಮೀನವಾ !!
"ಊವ್ವೆ.. ಉವ್ವೇ... ಊವ್ವೇ......."
ತಡೆದು ಕೊಳ್ಳಲಾಗದೆ...
ನನ್ನಾಕೆ ವಾಂತಿ ಮಾಡುತ್ತಿದ್ದಳು....
ಅಯ್ಯಯ್ಯೋ.... ನನ್ನ ಮೈ ಮೇಲೆ....!
"ಪ್ರಕಾಶು..
ಚಂದಾವರದ ಅತ್ತೆ ಮನೆಗೆ ಹೋಗಿ ಬನ್ನಿ.."
ಅಂತ ಮನೆಯ ಹಿರಿಯರ ಸಲಹೆ...
"ನಾನೂ ಬರ್ತೇನೆ.."
ನನ್ನ ಪ್ರೀತಿಯ ಕಮಲಾಕರ ಚಿಕ್ಕಪ್ಪನೂ ನಮ್ಮೊಡನೆ ಹೊರಟ...
"ಚಿಕ್ಕಪ್ಪಾ.. ಕಾರಿಗೆ ಹೇಳುವೆ.."
"ಬೇಡ ಪ್ರಕಾಶು..
ಉಳಿಸಿದ ಹಣವೇ,,.. ಗಳಿಸಿದ ಹಣ...!
ದುಡಿದ ಹಣವನ್ನು ಉಳಿತಾಯ ಮಾಡಬೇಕು.. ಯಾಕೆ ದುಡ್ಡು ವ್ಯರ್ಥವಾಗಿ ಖರ್ಚು ಮಾಡ್ತೀಯಾ..
ಬಸ್ಸಿನಲ್ಲಿ ಹೋಗೋಣ..."
ಸರಿ..
ಸಿರ್ಸಿಗೆ ಬಂದು ಕುಮುಟಾ ಬಸ್ಸು ಹಿಡಿದೆ..
ಮೇ... ತಿಂಗಳು..
ಸೆಖೆ..
ಸಿಕ್ಕಾಪಟ್ಟೆ ರಷ್...
ಹಾಗೂ ಹೀಗೂ ಒಂದು ಸೀಟು ಹಿಡಿದೆ..
ನಾನು ಮತ್ತು ನನ್ನ ಜಿಂಕೆ ಮರಿ ಇಬ್ಬರೂ ಕುಳಿತೆವು..
ನನ್ನ ಚಿಕ್ಕಪ್ಪ ನಮ್ಮ ಬಳಿ ನಿಂತು ಕೊಡರು...
ಸಂಸ್ಕಾರ...
ಅಪ್ಪನಿಲ್ಲದ ನಮಗೆ ಅವರೇ ಬದುಕು ಕಲಿಸಿದ್ದು..
ನಾನು ಎದ್ದು ನಿಂತು ಅವರಿಗೆ ಜಾಗ ಮಾಡಿಕೊಟ್ಟೆ...
ಆ ನೂಕು ನುಗ್ಗಲಿನಲ್ಲಿ ಮುಂದೆ ಹೋದೆ..
ಅಲ್ಲಿ ಒಂದು ಸೀಟು ಸಿಕ್ಕಿತು...
"ಚಿಕ್ಕಪ್ಪನಿಗೆ ಇಲ್ಲಿ ಕರೆದು ..
ನಾನು ಜಿಂಕೆ ಮರಿ ಹತ್ತಿರ ಹೋಗ ಬಹುದಲ್ಲವಾ ?... "
ತಿರುಗಿ ನೋಡಿದೆ...
ಉಹೂಂ...
ತುಂಬಾ ರಷ್ ಇತ್ತು..
ಅವರು ಇಲ್ಲಿ ಬಂದು ..
ನಾನು ಅಲ್ಲಿ ಹೋಗುವದು ದೊಡ್ಡ ರಾಮಾಯಣ.. !
ಸುಮ್ಮನೆ ಅಲ್ಲಿಯೇ ಕುಳಿತೆ...
ಎಷ್ಟೆಲ್ಲಾ ಹಂಬಲಿಸಿದ್ದೆ .. ನನ್ನಾಕೆಯ ಬಗೆಗೆ !
ಎಷ್ಟೆಲ್ಲ ಪತ್ರ ಬರೆದಿದ್ದೆ..
ನನ್ನೆಲ್ಲ ಕನಸುಗಳು ನನಸಾಗಿದ್ದವು..
ನಾನು ನಮಸ್ಕರಿಸುವ ದೇವರಿಗೆ ಮನಸಾರೆ ವಂದಿಸಿದೆ...
ಮುದ್ದಾದ..
ನನ್ನಿಷ್ಟದ ಹುಡುಗಿ ನನ್ನವಳಾಗಿದ್ದಳು...
ಹನಿಮೂನಿಗೆ ಹೋಗೋಣವೆಂದರೆ ...
" ನೆಂಟರ ಮನೆಗಳಿಗೆ ಮೊದಲು ಹೋಗಿ ಬನ್ನಿ.."
ಎನ್ನುವ ಆಜ್ಞೆ..ಮನೆಯ ಹಿರಿಯರದ್ದು...
ನನ್ನಾಕೆಯ...
ಹತ್ತಿರ ಕುಳಿತುಕೊಳ್ಳಬೇಕು..
ನನ್ನಾಸೆಗಳನ್ನು ಹೇಳೀಕೊಳ್ಳಬೇಕು..
ಅವಳ ನಾಚಿಕೆಯನ್ನು ಅವಳ ಕಣ್ಣುಗಳಲ್ಲಿ ನೋಡಬೇಕು...!
ಬಸ್ಸಿನಲ್ಲಿ ...
ಯಾರೋ ಮೂಟೆ ಚೀಲ ನನ್ನ ಪಕ್ಕಕ್ಕೆ ತಳ್ಳಿದಂತಾಯಿತು..
ಭರ್ಜರಿ ಹೊಟ್ಟೆಯವನೊಬ್ಬ ನನ್ನ ಪಕ್ಕದಲ್ಲಿ ನಿಂತಿದ್ದ..!
ಅವನ ಹಾಕಿದ ಶರ್ಟ್ ಬಟನ್ ....
ಬಿಚ್ಚಿ ಹರಿದು ಹೋಗುವ ಸ್ಥಿತಿಯಲ್ಲಿತ್ತು.....
ಹೊಟ್ಟೆಯ ದೊಡ್ಡ ಬಾವಿಯಂಥಹ ಹೊಕ್ಕಳು ಕಾಣುತ್ತಿತ್ತು....
ಮುಖ ನೋಡಲು ಪ್ರಯತ್ನಿಸಿದೆ...
ಕುಳಿತಿದ್ದರಿಂದ ಬರಿ ಹೊಟ್ಟೆಯೇ ಕಾಣುತ್ತಿತ್ತು...
ಕುಮುಟಾ ಬಸ್ಸು ದೇವಿಮನೆ ಘಟ್ಟ ಇಳಿಯಲು ಪ್ರಾಂಭಿಸಿತ್ತು..
ತಿರುವು ..
ಮುರುವು..
ಆ ಕಡೆ..
ಈ ಕಡೆ ನಮ್ಮ ಶರೀರ ವಾಲುತ್ತಿತ್ತು... !
ಪಕ್ಕದಲ್ಲಿ ಜಿಂಕೆ ಮರಿಯಿದ್ದರೆ ಎಷ್ಟು ಸೊಗಸಿತ್ತು.. !
ರಿಂಗು ಹಾಕಿದ ಮೊಂಡು ಮೂಗು...
ಮುದ್ದು ಕೆನ್ನೆಗಳನ್ನು ಇಷ್ಟು ಹತ್ತಿರದಲ್ಲಿ ಸವಿಯ ಬಹುದಿತ್ತು... !
ಛೇ... !
ಅಷ್ಟರಲ್ಲಿ ....
ಬಿಸಿ ಬಿಸಿ....
ಎರಡು ಬಕೆಟ್ ಸಂಬಾರು ಅನ್ನವನ್ನು ..
ನನ್ನ ತಲೆಯ ಮೇಲೆ ಎರಚಿದಂತಾಯಿತು... ...!
"ಊವ್ವೇ... ಊವ್ವೇ... !!... "
ಆ ದೊಡ್ಡ ಹೊಟ್ಟೆಯವ ನನ್ನ ತಲೆಯ ಮೇಲೆ ವಾಂತಿ ಮಾಡುತ್ತಿದ್ದ..
... !! ಅಯ್ಯಯ್ಯೋ... !!.. ಗಡಿಬಿಡಿ ಬಿದ್ದೆ... !
ತುಟಿ ಮುಚ್ಚಿಕೊಂಡೆ..
ಹಣೆ..
ಮುಖ... ಕೆನ್ನೆಯ ಮೇಲೆ ವಾಂತಿ ಇಳಿಯುತ್ತಿತ್ತು...
ಕಣ್ ಬಿಡಲಾಗುತ್ತಿಲ್ಲ...
ಸಿಂಬಳದಂಥಹ ದ್ರವ ರೆಪ್ಪೆಗಳಿಗೆ ಅಂಟಿಕೊಂಡಿತ್ತು....
ಏಳುವ ಪ್ರಯತ್ನ ಮಾಡಿದೆ..
ಮತ್ತೆ ............
"ಊವ್ವೇ.. ಉವ್ವೇ....." !
ಮತ್ತೆರಡು ಬಕೆಟ್ ವಾಂತಿ ಚೆಲ್ಲಿದಂತಾಯಿತು...!
ಸಿರ್ಸಿ ಪೇಟೆ ಗಲೀಜೆಲ್ಲ ...
ನನ್ನ ಮೈಮೇಲೆ ಎರಚಿದಂತಾಯಿತು.... !
ಷರ್ಟ್..
ಒಳಗೆಲ್ಲ ಅಂಟು.. ಅಂಟು...!
ಲೋಳೇ ದ್ರವ ಕಣ್ಣುಗಳನ್ನು ಮುಚ್ಚಿತ್ತು...
ಕಣ್ಣುಜ್ಜಿಕೊಂಡೆ..
ಕೆಟ್ಟ..
ಅಸಾಧ್ಯವಾಸನೆ...!
ನನಗೂ ವಾಂತಿ ಬರುವಂತಾಯಿತು...
ನನ್ನ ಅಕ್ಕ ಪಕ್ಕದವರೆಲ್ಲ ಓಡಿ ಹೋಗಿದ್ದರು...
ಅಯ್ಯೋ ದೇವರೆ...
ಹೊಸ ಹೆಂಡತಿಯ ಎದುರು ಇದೆಂಥಹ ಅವತಾರ...!
ನಾಚಿಕೆ.. ಅಸಹ್ಯ... !
ನನ್ನಾಕೆ ವ್ಯಾನಿಟಿ ಬ್ಯಾಗಿನಿಂದ ಸಣ್ಣ ಪೌಂಡ್ಸ್ ಪೌಡರ್ ಡಬ್ಬವನ್ನು ..
ತುದಿ ಬೆರಳಲ್ಲಿ ಕೊಟ್ಟಳು...
ಮೂಗಿಗೆ ತುರುಕಿ ಕೊಂಡೆ...
ಕುಮುಟಾ ಬರುವಷ್ಟರಲ್ಲಿ ....
ಮೈಮೇಲಿನ ವಾಂತಿಯೆಲ್ಲ ಅರೆ ಬರೆ ಒಣಗಿತ್ತು..
ವಾಂತಿಯ ಸಂಗಡ ಅಸಾಧ್ಯ ಸೆಖೆ... !
ಒಳಗೆಲ್ಲ ಅಂಟು ಅಂಟು..
ಲೋಳೆಯ ಅನುಭವ... !
ಎಲ್ಲರೂ ನನ್ನನ್ನು ಕರುಣಾಜನಕವಾಗಿ ನೋಡುತ್ತಿದ್ದರು..
ಹೇಗೋ ಹೇಗೋ... ಚಂದಾವರಕ್ಕೆ ಬಂದೆವು...
ಮೊದಲು ಬಚ್ಚಲಿಗೆ ಹೋಗಿ ಸ್ನಾನ ಮಾಡಿದೆ...
ಒಂದು ಹೊಸ ಸೋಪ್ ಪೂರ್ತಿ ಮೈಗೆ ತಿಕ್ಕಿದೆ...
ನನ್ನ ಅವಸ್ಥೆ ನೋಡಿ ...
ನನ್ನ "ಲಕ್ಷ್ಮಿ ಅತ್ತೆ" ಮನೆಯಲ್ಲಿದ್ದ ಪೌಡರ್ ಡಬ್ಬಗಳನ್ನೆಲ್ಲ ಕೊಟ್ಟರು..
ಮೈಗೆ ಎಲ್ಲವನ್ನೂ ಬಳಿದುಕೊಂಡೆ...
ನನ್ನಾಕೆ ಹತ್ತಿರ ಬರುತ್ತಿಲ್ಲ.. !
ದೂರದಿಂದಲೇ ಮಾತುಕತೆ.. !
ನನ್ನ "ವೆಂಕಟರಮಣ" ಮಾವ ಅವರ ಅಮೂಲ್ಯ ಸಲಹೆ ಕೊಟ್ಟರು..
"ಪ್ರಕಾಶು..
ಇನ್ನೂ ಎರಡು ಬಾರಿ ಸ್ನಾನ ಮಾಡು ಮಗನೆ..
ಲಕ್ಸ್ ಸೋಪು ಹಚ್ಚಿಕೊಂಡು.."
ಎಷ್ಟೇ ಸೋಪು ಹಚ್ಚಿದರೂ..
ಮನಸ್ಸಿಗೆ ಅಂಟಿದ ವಾಸನೆಯನ್ನು ಹೇಗೆ ತೆಗೆಯುವದು ?
ಊಟವೂ ಸರಿಯಾಗಿ ಸೇರಲಿಲ್ಲ...
ಅದೇ.. ವಾಂತಿಯ ದೃಶ್ಯ ಕಣ್ಣೆದುರಿಗೆ ಬರುತ್ತಿತ್ತು...!
ಮಧ್ಯಾಹ್ನ ಊಟವಾದ ಮೇಲೆ...
"ಹೊಸ ಮದುಮಕ್ಕಳು...
ಕೋಣೆಯಲ್ಲಿ ವಿಶ್ರಾಂತಿ ಮಾಡಿ"
ಲಕ್ಷ್ಮಿ ಅತ್ತೆ ಹಾಸಿಗೆ ಹಾಸಿಕೊಟ್ಟಳು...
ನನ್ನಾಕೆ ದೂರವೇ ಇದ್ದಳು..
ಈ ಅಸಹ್ಯ ...
ಮುಜುಗರ ಸನ್ನಿವೇಶದಲ್ಲಿ ಏನು ಮಾತನಾಡುವದು ?
ಮಾತಿಲ್ಲ..
ನನ್ನ ಮೌನ ಗೌರಿ.. ನೋಡಲೂ ಚಂದ...!
ದೂರವೇ ಮಲಗಿದೆ..
ಫ್ಯಾನ್ ಗಾಳಿ..
ನನ್ನಾಕೆ ಚಂದದ ಮುಖ.. ಸಣ್ಣ ನಿದ್ದೆ ಬಂದಿದ್ದೆ ಗೊತ್ತಾಗಲಿಲ್ಲ...
ಯಾರೊ ಮೈ ತಟ್ಟಿ ಎಬ್ಬಿಸಿದಂತಾಯಿತು..
ನನ್ನಾಕೆ !
ಅವಳ ತುಟಿ ಚಲವಲನೆ ಕಾಣುತ್ತಿತ್ತು..
ಶಬ್ಧ ಕೇಳುತ್ತಿಲ್ಲ.. !
ಅಯ್ಯೋ.. !
ನಾನು ...
ನನಗೆ ಕಿವುಡೆ ?....
ಈಗ ನನ್ನ ಮಾವ ಕೂಡ ಕಂಗಾಲಾದರು...
ಹೊಸ ಮದುವೆ ಜೋಡಿ...!
"ತಮ್ಮ ಮನೆಗೆ ಬಂದು ಹೀಗೆ ಆಗಿಹೋಯ್ತೆ..!"
ಎನ್ನುವ ಗಾಭರಿ... !
ಆತಂಕ ಪಟ್ಟುಕೊಂಡು ಕಿವಿಗೆ ಹಾಕುವ "ಚಿಮಟಿಗೆ" ತಂದರು...
ನನ್ನಾಕೆ ...
ನನ್ನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು..
ಅನುಭವ
ಮೃದುವಾಗಿ ಹಿತವಾಗಿತ್ತು ...
ಕಿವಿಗೆ ಚಿಮಟಿಗೆ ಹಾಕಿದ ಅನುಭವ..
ಏನನ್ನೋ ಹೊರಗೆ ತೆಗೆದಳು...
ಮತ್ತೊಂದು ಕಿವಿಗೂ ಚಿಮಟಿಗೆ ಹಾಕಿದಳು..
ಮತ್ತಷ್ಟು ತೆಗೆದಳು..
ನನಗೆ ಸ್ವಲ್ಪ ಸ್ವಲ್ಪ ಕಿವಿ ಕೇಳತೊಡಗಿತು...!
ಕಿವಿಯಿಂದ ತೆಗೆದದ್ದು ಏನು ಅಂತ ನೋಡಿದೆ..
ಹಳದಿ ಬಣ್ಣದ ಅನ್ನದ ಅಗುಳು.. !!
ಹಳದಿ ಬಣ್ಣದ ಲೋಳೆ.. ಲೋಳೆ.... ಅಂಟು.. !
ಚಿಗುಟಿನಂಥಂಹ .. ಹಲಸಿನ ಗುಜ್ಜಿನಂಥಹದ್ದು..
ಇದು ಚಿಕ್ಕನ್ನು ಇದ್ದಿರ ಬಹುದಾ ?
ಮೀನವಾ !!
"ಊವ್ವೆ.. ಉವ್ವೇ... ಊವ್ವೇ......."
ತಡೆದು ಕೊಳ್ಳಲಾಗದೆ...
ನನ್ನಾಕೆ ವಾಂತಿ ಮಾಡುತ್ತಿದ್ದಳು....
ಅಯ್ಯಯ್ಯೋ.... ನನ್ನ ಮೈ ಮೇಲೆ....!
34 comments:
ಪ್ರಕಾಶಣ್ಣ ಈ ಕಥೆ ನಮಗೆ ಹೇಳಿದ್ದಿರಿ. ನಾವೆಲ್ಲ ಕೂತು ನಕ್ಕಿದ್ದು, ನಿಮ್ಮ ಆ ಪರಿಸ್ಥಿತಿ ನೆನೆದು ಬಿದ್ದು ಬಿದ್ದು ನಕ್ಕಿದ್ದೆವು...
ಹಹಹಹ....ನನಗೆ ನಿನ್ನ ಆ ಅಮೃತ ಸ್ನಾನದ ದೃಶ್ಯ ಕಣ್ಣಮುಂದೆ ಬಂತು,,ನಕ್ಕಿದ್ದೇ ನಕ್ಕಿದ್ದು...ನಮ್ಮ ಆಫೀಸ್ ಬಾಯ್ ನನ್ನ ಚೇಂಬರ್ ಹತ್ತಿರ ಹಾದು ಹೋದವ ..ಒಳ ಬಂದು..ನನ್ನ ಮುಖ ನೋಡಿ ಕರೆದ್ರಾ ಸಾ...ಅಂದ... ನಗು ನಿಲ್ಲಿಸಿ...ಇಲ್ಲವಲ್ಲಾ ಎಂದೆ... ಅಲ್ಲಾ...ಇಬ್ರಾಹಿಂ ಇಬ್ರಾಹೀಂ ಅಂದ ಹಾಗಾಯ್ತು ಅಂದ. ನನ್ನ ನಗು ಅಷ್ಟು ಜೋರಾಗಿ ಅವನಿಗೆ ಹಾಗೆ ಕೇಳ್ಸಿತ್ತು...ಅಂದ ಹಾಗೆ ಅವನ ಹೆಸರು ಇಬ್ರಾಹಿ೦..
Innomme anubhavisuvase ideyo.. ??? amruta snana......
ಯಾವತ್ತಿನ ಹಾಗೆ ಲಘು ಹಾಸ್ಯದ ಶೈಲಿಯ ನಿಮ್ಮ ಬರಹ ಇಷ್ಟ ಆಪ್ತ ಎರಡೂ ಆಯ್ತು. ಇಂತಹ ಅನುಭವಗಳು ನಿಮಗೆ ಆಗುವುದ ಸಾಕು ಪ್ರಕಾಶಣ್ಣ :D
nanage vanti bandang aagtide :P vyaaaak :P aa dumma mootena nimma mele ilsidna? :D
ಎಷ್ಟೇ ಸೋಪು ಹಚ್ಚಿದರೂ..
ಮನಸ್ಸಿಗೆ ಅಂಟಿದ ವಾಸನೆಯನ್ನು ಹೇಗೆ ತೆಗೆಯುವದು ?...This is the killer line!!!
ನೆನೆದರೆ ನೆನಸಿದ ಹಾಗೆ ಎನ್ನುವ ಮಾತು ಎಷ್ಟು ನಿಜ... ಅಲ್ಲವೇ..
"ಮರೆಯದ ನೆನಪನು ಎದುರಲ್ಲಿ ತಂದೆ ನೀನು ".. ಸಾಹಸಿಂಹ ಚಿತ್ರದ ಹಾಡು ನೆನಪಿಗೆ ಬಂತು..
ಮೊದಲ ಬಾರಿಗೆ ನಾನು, ಮಡದಿ, ಮಗಳು (ಇನ್ನು ಎರಡು ವರ್ಷದ ಮಗು) ಪ್ರವಾಸಕ್ಕೆ ಹೊರಟೆವು.. ಉಡುಪಿಗೆ ಹೊರಟಾಗ ಹವಾ ನಿಯಂತ್ರಿತ ಬಸ್ಸನಲ್ಲಿ ಪ್ರತಿ ಸೀಟಿನ ಹಿಂದೆ ಒಂದು ಪ್ಲಾಸ್ತಿ ಕವರ್ ಇಟ್ಟಿದ್ದರು... ಅದರ ಉಪಯೋಗ ಏನು ಅಂತ ಮಡದಿ ಕೇಳಿದಾಗ ನನಗು ಗೊತ್ತಿರಲಿಲ್ಲ.. ಆದರೆ ಅಹಂ ಬಿಡಲಿಲ್ಲ.. ಏನೋ ಕಥೆ ಹೇಳಿ ಸುಮ್ಮನಾಗಿಸಿದೆ. ಬಸ್ ಶಿರಾಡಿ ಘಾಟ್ ಇಳಿಯಲು ಶುರುಮಾಡಿದಾಗ ಅರಿವಾಯಿತು.. ಆ ಕವರ್ ಉಪಯೋಗ ಏತಕ್ಕೆ ಅಂತ... ನಾನು ಕೂಡ ಉಪಯೋಗಿಸಿದೆ ಅದು ಬೇರೆ ಮಾತು.. ಹಹಹಹ.
ಒಂದು ಘಟನೆಗೆ ಸರಿಯಾದ ಸುಣ್ಣ ಬಣ್ಣ ಹೊಡೆದು ಘಮ ಘಮ (ಹಹಹಹ) ಎನ್ನುವಂತೆ ನಿರೂಪಣೆ ಮಾಡುವಲ್ಲಿ ನಿಮಗೆ ನೀವೇ ಸರಿ ಸಾಟಿ.. ಸೂಪರ್ ಪ್ರಕಾಶಣ್ಣ
ಅಬ್ಭಾ ..ಆ ಹೊತ್ತಲ್ಲಿ ನಿಮ್ ಪರಿಸ್ಥಿತಿ ಹೇಗಿರಬಹುದು.ನಿಮ್ ಬರಹ ತುಂಬಾ ಇಷ್ಟವಾಯ್ತು
ಯಪ್ಪಾ ದೇವ್ರೇ , ಓದುತ್ತಿದ್ದರೆ ನಮ್ಮ ಮೇಲೆ ಆಗ್ತಿರುವ ಹಾಗೆ ಅನ್ನಿಸಿದೆ. , ಮೊದಲು ನಗು ಬಂದರೂ ನಿಮ್ಮ ಸ್ಥಿತಿ ನೋಡಿ ಅಯ್ಯೋ ಪಾಪ ಅನ್ನಿಸಿತು. ನಿಮ್ಮ ಈ ಲೇಖನ ಓದಿದವರಿಗೆಲ್ಲಾ ಇಂತಹ ಸುಖ ಸಿಗಲೆಂದು ಹಾರೈಸುತ್ತೆನೆ. ಹ ಹ ಹ ಹ
ಈ ಲೇಖನ ಓದಿ ಪ್ರಕಾಶಣ್ಣನ ಚಿತ್ರ ಬರೆದವರಿಗೆ ಮುಂದಿನ ಬ್ಲಾಗ್ ಮಿತ್ರರ ಕೂಟದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು, ಬರೆದ ಚಿತ್ರ ಈ ಲೇಖನದ ಸನ್ನಿವೇಶಕ್ಕೆ ಪೋರಕವಾಗಿರಬೆಕು.
ಮನಸು....
ನಾನು ಬಯಸಿ.. ಬಯಸಿ
ಪ್ರೀತಿಸಿ ಮದುವೆಯಾದ ಹುಡುಗಿ...
ಆಗತಾನೆ ಮದುವೆಯಾಗಿ ಅರ್ಥ ಮಾಡಿಕೊಳ್ಳುವ ಸಂದರ್ಭ...
ಹಸಿಬಿಸಿ ಪ್ರೇಮ ಅರಳುವ ಸಂದರ್ಭ...
ಈ ವಾಂತಿ ಪುರುಷ ವಕ್ರಿಸಿಬಿಡಬೇಕೆ,..?
ನನ್ನ ಆಗ್ರಾದ ಹುಡುಗಿ ಏನು ಮಾಡಿದರೂ ಹತ್ತಿರ ಬರಲೊಲ್ಲಳು.. !
ನನಗೂ ಮೂಗಿನಲ್ಲಿ ವಾಂತಿ ವಾಸನೆ ಕೂತು ಹೋಗಿತ್ತು... !
ಇಂಥಹ ಅವಸ್ಥೆ ಯಾರಿಗೂ ಬರಬಾರದು..
ಅಂದು ಮಹೇಶ್ ಮತ್ತು ನೀವು ನಮ್ಮನೆಗೆ ಬಂದಾಗ ಈ ಸಂದರ್ಭ ಹೇಳಿ ನಕ್ಕಿದ್ದು ಇನ್ನೂ ಹಸಿರಾಗಿದೆ...
ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !
ಆಜಾದೂ...
ನನ್ನ ಸಣ್ಣ ಚಿಕ್ಕಪ್ಪ ಬಹಳ ಕಷ್ಟ ಜೀವಿ...
ಮಕ್ಕಳು ಕಾರಿಗಾಗಿ ಯಾಕೆ ವೃಥಾ ಖರ್ಚು ಮಾಡಬೇಕು?
ಬಸ್ಸಲ್ಲಿ ಹೋದರೆ ಒಳ್ಳೆಯದು ಅಂತ ಅವರ ಭಾವನೆ ಇತ್ತು..
ಸಿರ್ಸಿ ಸಂತೆಯ ದಿನ "ಕುಮುಟಾ" ಬಸ್ಸ್ ಬಹಳ ವಿಶೇಷವಾಗಿರುತ್ತದೆ..
ಬಹಳ ರಷ್ ಇರುತ್ತದೆ..
ದೇವಿಮನೆ ಘಟ್ಟದ ತಿರುವು ಮುರುವು ಬೇರೆ... !
ಆತ ಏನು ತಿಂದಿದ್ದನೋ ಪುಣ್ಯಾತ್ಮ !
ಎಲ್ಲವನ್ನೂ ನನ್ನ ಮೇಲೆ ಕಕ್ಕಿಬಿಡಬೇಕೆ ?
ಒಂಥರಾ ಅಸಹ್ಯ ವಾಸನೆ ಈಗಲೂ ಆಗಾಗ ಮೂಗಿಗೆ ಬಂದು ಅಡರುತ್ತದೆ !
ಪ್ರೀತಿಯಿಂದ "ಅಪ್ಪಿಕೋ ಚಳುವಳಿಯ" ಸಂದರ್ಭದಲ್ಲಿ ಹೀಗೆ ಆಗಿಬಿಟ್ಟಿತ್ತು ಮಾರಾಯಾ !
ಪ್ರತಿಕ್ರಿಯೆಗಳು ಟಾನಿಕ್ ಥರಹ...
ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತವೆ..!
ಅಕ್ಕರೆಯ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು....
ಪ್ರಕಾಶಣ್ಣ ನಕ್ಕು ನಕ್ಕು ಸುಸ್ತಾಯ್ತು...ಛೆ...ನಿಮ್ಮ ಟೈಮೇ ಚೆನ್ನಾಗಿಲ್ಲ...ಇದು ಓದುತ್ತ ಇದ್ದಂತೆ ಆ ನಿಮ್ಮ ಸರಸು ಅತ್ತೆಯ ಬಿಸಿಬೇಳೆಬಾತ್ ಕಥೆ ಸಹಾ ನೆನಪಾಯ್ತು... :-)
ಪ್ರೀತಿಯ ಪ್ರವೀಣರೇ...
ಇನ್ನೊಮ್ಮೆ ಯಾಕೆ ?
ಅಪ್ಪಿಕೋ ಚಳುವಳಿಯ ಸಂದರ್ಭದಲ್ಲಿ ನನ್ನ ವೈರಿಗೂ ಅಂಥಹ ಅವಸ್ಥೆ ಬೇಡ.. !
ನನ್ನ ಮನಿಮೂನ್ ಕಾಲದಲ್ಲಿ ಮೂರು ಮರೆಯಲಾಗದ ಘಟನೆಗಳು
೧) ಈ ವಾಂತಿ ಪುರುಷನ ಅಮೃತ ಸ್ನಾನ..
೨)ಸರಸತ್ತೆಯ ಬಿಸಿಬೇಳೆ ಬಾತ್..
೩) ಸರಸತ್ತೆಯ ಹುಳಿ ಹಿಟ್ಟಿನ ದೋಸೆ....
ಅಕ್ಕರೆಯ ಪ್ರತಿಕ್ರಿಯೆಗೆ ಪ್ರೀತಿಯ ವಂದನೆಗಳು...
ಭಗವಂತ ನೆನೆಸಿಕೊಂಡರೆ ಮೈಮೇಲೆ ಚೇಳೂ ಹಾವೂ ಒಟ್ಟಿಗೆ ಹರಿದಂತೆ ಆಯಿತು. ರಾಮ ರಾಮ ಅದು ಹೇಗೆ ಸಹಿಸಿಕೊಂದರೋ ಆ ವಾಂತಿ ಧಾರೆ!
ಹೊಸ ಮದುಮಗನಿಗೆ ಅದೂ ತನ್ನ ಮಡದಿಯ ಮುಂದೆಯೇ ಹೀಗೆ ಆಗಬೇಕೆ! ಯಪ್ಪಾ...
ಮದುವೆಯ ಹೊಸತರಲ್ಲಿ ಹೀಗೆಲ್ಲಾ ಆದರೆ
ಹೇಗಿರುತ್ತೆ..... ನೆನೆದೇ ಪಾಪ ಅನ್ನಿಸ್ತು....
ಬದರಿನಾಥವರು ಹೇಳಿದ ಹಾಗೆ ವಾಂತಿ ಧಾರೆಯೇ ಸರಿ....
ಪ್ರಕಾಶಣ್ಣನಿಗೆ ವಾಂತಿಗೆ ಅದೆಲ್ಲಿಯ ನಂಟೋ....
ನಗೆ ಹಬ್ಬ..... ಚನ್ನಾಗಿದೆ....
:) :) :) .....................................................................................:) :) :) :)
ಸೂಪರ್ ನಕ್ಕು ನಕ್ಕು ಸುಸ್ತಾಯ್ತು:) ಆಫೀಸಿನಲ್ಲಿ ಕೇಳ್ತಿದ್ದಾರೆ ಏನಾಯ್ತು ಅಂತ
Making the fun is not FUN at all. U have good sence of humour,u could writte such a stiffling situation ended with a great humour. Even it is hard to imagine your plight through out the journey before u took the bath.. Infact, it is almost impossible to tolerate that state.Here is a good quote, 'it is easy to clean the outword stains than to inner'.Good think and act are also as impotant as outward appearance...Thanks for a good laugh..
Making the fun is not FUN at all. U have good sence of humour,u could writte such a stiffling situation ended with a great humour. Even it is hard to imagine your plight through out the journey before u took the bath.. Infact, it is almost impossible to tolerate that state.Here is a good quote, 'it is easy to clean the outword stains than to inner'.Good think and act are also as impotant as outward appearance...Thanks for a good laugh..
Hha hha... namma mele vaanti maaDida haagaayitu.... haagittu nimma vivarane... nakku nakku saakaaytu...
ಪ್ರಕಾಶ್ ಜಿ... ನಿಮ್ಮ ಹಾಸ್ಯಪ್ರಜ್ಞೆಗೆ ಒಂದು ಸಲಾಮು. ನಿಮ್ಮ ಇಂಥ ಅನುಭವಗಳ ರಸದೂಟವನ್ನು ಉಣ್ಣಲು ದೇವರು ನಮಗೆಲ್ಲ ದೀರ್ಘ ಆಯುಸ್ಸು ಕೊಡಬೇಕು... ನನಗೆ ನಗೆ ತಡೆದುಕೊಳ್ಳಲು ಆಗುತ್ತಿಲ್ಲ...
ಎಪ್ಪಾ... ಒಬ್ಬನೇ ಕೂತಾಗ ಇದೆಲ್ಲ ನೆನಪಾಗಿಬಿಟ್ರೆ ಬೇಡ ಆ ಪಾಡು.
ಒಂದು ಕಿವಿಮಾತು : ಈ ಘಟನೆಗಳನ್ನು ಸಿನೆಮಾದವರೇನಾದರೂ ಓದಿದರೆ ಕದ್ದು ಶೂಟ್ ಮಾಡಿಬಿಡ್ತಾರೆ... ಅವರು ಕದಿಯುವುದರಲ್ಲಿ ನಿಸ್ಸೀಮರು. ಬೇಗನೆ ಇವನ್ನೆಲ್ಲ ಒಂದು ಪುಸ್ತಕವಾಗಿ ಪ್ರಕಟಿಸಿ.
wow amazing story nimma e avastyu chikka kateya roopa padedu est janara tutiya midisidavu great sir
ಹ್ಹ ಹ ಹ ಹ.... ಪ್ರಕಾಶಣ್ಣ.... ನೀವು ಅವತ್ತು ತುಂಬಾ ಪುಣ್ಯ ಮಾಡಿದ್ರಿ ಅನ್ಸುತ್ತೆ... ಭಕ್ಷ್ಯ ಭೋಜ್ಯ ಪರಮಾನ್ನ ಎಲ್ಲ ಒಟ್ಟಿಗೆ ಒಂದೇ ಕಡೆ ನೋಡಿದ್ದೀರಿ... :)
ಪ್ರೀತಿಯ ಸುಬ್ರಮಣ್ಯ...
ನಮ್ಮ ಪ್ರೀತಿ.. ಪ್ರೇಮದ ಎದುರು ಹೀಗೆಲ್ಲ ಆಗುವದು....
ಎಷ್ಟು ಕಷ್ಟ ಅಲ್ವಾ ?
ಅದೂ ಮದುವೆಯ ಹೊಸದರಲ್ಲಿ...
ಅರ್ಥ ಮಾಡಿಕೊಳ್ಳುವ ಸಂದರ್ಭಗಳಲ್ಲಿ...
ನಿಜವಾದ ಪ್ರೀತಿಯ ಸತ್ವ ಪರೀಕ್ಷೆ ಆಗುವದು ಇಂಥಹ ಸಮಯಗಳಲ್ಲಿ...
ನನ್ನಾಕೆ ಇಂಥಹ ಸಂದರ್ಭಗಳನ್ನು ಸಹಜವಾಗಿ ಗೆದ್ದುಬಿಟ್ಟಳು..
ನನ್ನನ್ನೂ ಸಹ...
ಪ್ರೀತಿ
ಸಿಹಿಯಾಗುವದು ಇಂಥಹ ಸಮಯಗಳನ್ನು ಗೆದ್ದಾಗ..
ಇಷ್ಟಪಟ್ಟಿದ್ದಕ್ಕೆ ಅಕ್ಕರೆಯ ವಂದನೆಗಳು...
ನಗಿಸೋದು ಅದು ಸಾಮಾನ್ಯ ಸಂಗತಿಗಳನ್ನು ರಸವತ್ತಾಗಿ ಬಿಂಬಿಸೋದು
ಹೆಗಡೇಜಿ ನಿಮ್ಮಿಂದ ಕಲೀಬೇಕ್ರಿ..
ಅಯ್ಯಪ್ಪ..!!
ನೆನ್ಸ್ಕೊಂಡ್ರೆ ಇಸ್ಸೀ ಅನ್ಸತ್ತೆ..
ಇಸ್ಸೀ ಇಸ್ಸೀ ಅನ್ಕೊಂಡೆ ನಕ್ಕು ನಕ್ಕು ಸುಸ್ತಾಯ್ತು ಪ್ರಕಾಶಣ್ಣ..
ಇಷ್ಟು ನಕ್ಕೆನಲ್ಲಾ ನಾನಾದರೂ ಇಂಥ ಘಟನೆಗೆ ಹೊರತಾಗಿಲ್ಲ..
ಸುಮಾರು ೧೩ ವರ್ಷಗಳ ಕೆಳಗಿನ ಮಾತು.. ನಾನಾಗ ಆರನೇ ತರಗತಿ.. ನಮ್ ಶಾಲೆ ಇಂದ ನಮ್ಮೆಲ್ಲರನ್ನ ಶೃಂಗೇರಿ ಹೊರನಾಡು ಕಳಸ ಮುರುಡೇಶ್ವರ ಉಡುಪಿ ಮಲ್ಪೆ ಅಂತ ಇನ್ನು ನಾಲ್ಕಾರು ಕಡೆ ಶೈಕ್ಷಣಿಕ ಪ್ರವಾಸಕ್ಕೆ ಕರ್ಕೊಂಡು ಹೋಗಿದ್ರು.. ಅಲ್ಲಾಗಿದ್ದು ನೋಡಿ ಈ ಮರೆಯಲಾಗದ ಘಟನೆ.. ೫೦-೬೦ ಜನರ ಮಿನಿ ಬಸ್ ಅದು.. ಘಾಟ್ ಸೆಕ್ಷನ್ ನಲ್ಲಿ ಆಗ ವಿಪರೀತ ಅನ್ನೋ ಥರ ವಾಂತಿ ಮಾಡ್ಕೋತಾ ಇದ್ದೆ.. ಅದ್ಕೆ ನನ್ನ ಕಿಟಕಿ ಪಕ್ಕದಲ್ಲೇ ಕೂರಿಸಿ ಬಿಡೋರು.. ಆದ್ರೆ ಇಲ್ಲಿ ಪ್ರಾಬ್ಲಮ್ ಆಗಿದ್ದು ನನ್ ಕಡೆ ಇಂದ ಅಲ್ಲ ನಂ ಫ್ರೆಂಡ್ ಶ್ರೀಧರನ ಕಡೆ ಇಂದ ವಾಂತಿ ಮಾಡಿ ಮಾಡಿ ಸುಸ್ತಾಗಿ ಕಿಟಕಿ ಪಕ್ಕ ಮಲಗಿದ್ದ ನನ್ ತಲೆ ಮೇಲೆ ಯಾರೋ ಎತ್ತಿ ಒಂದು ಬಕ್ಕೆಟ್ ಬೆಚ್ಚಗಿನ ನೀರು ಸುರಿದ ಹಾಗಾಯ್ತು.. ಕಣ್ತೆರೆದು ನೋಡಿದ್ರೆ ತಲೆ ಇಂದ ಬಳ ಬಳ ಅಂತ ಇಳಿತಿರೋ ಅಣ್ಣ ಸಾಂಬಾರಿನ ಥರದ ಪದಾರ್ಥ.. ಶ್ರೀಧರ ಕಿಟಕಿ ಪಕ್ಕ ಬಾಯಿ ತೂರಿಸುವಷ್ಟರಲ್ಲೇ ನನಗೆ ಮಂಗಳ ಸ್ನಾನ ಮಾಡಿಸಿದ್ದ. ನೆನೆಸ್ಕೊಂಡ್ರೆ ಈಗಲೂ ವ್ಯಾಕ್ ಅನ್ಕೊಂಡು ವಾಂತಿ ಬರೋ ಹಾಗಾಗುತ್ತೆ.. ನಿಮ್ಮ ಮೂಗು ಕಟ್ಟಿ ಕೊಂಡಿರೋ ಆ ವಾಸನೆ ನನ್ನನ್ನೂ ಸುತ್ತಿ ಕೊಳ್ಳತ್ತೆ. ಆನಂತರ ಅಲ್ಲೇ ಒಂದು ಊರ್ ಹತ್ರ ಬಸ್ ನಿಲ್ಸಿ ಒಬ್ಬರ ಮನೇಲಿ ಸ್ನಾನ ಮಾಡ್ಕೊಂಡು ಬಟ್ಟೆ ತೊಳೆದು ಬೇರೆ ಬಟ್ಟೆ ಹಾಕೊಂಡು ಟೂರ್ ಮುಂದುವರಿತು ಅನ್ನಿ.. ಆ ಟೂರ್ ಮುಗಿದು ಒಂದು ವಾರ ಆದರು ಕೂಡ ಶ್ರೀಧರನ್ನ ಮಾತಾಡಿಸಿದರೆ ಕೇಳಿ..
ಅದೆಲ್ಲ ಒಂದು ಕಾಲ.. ಈ ನಿಮ್ಮ ಕಥೆ ಜೊತೆ ನನ್ನ ಕಥೆಗೂ ಮತ್ತೆ ಜೀವ ಬಾರೋ ಹಾಗೆ ಮಾಡಿದ್ರಿ ಧನ್ಯವಾದಗಳು.. ಅಂದ ಹಾಗೆ ಈ ಪುರಾಣ ತೋರ್ಸಿ ಶ್ರೀಧರನ ಹೊಟ್ಟೆ ಕೂಡ ಹುಣ್ಣಾಗಿಸ ಬೇಕಿದೆ. ಊರಿಗೆ ಹೋದ ಕೂಡ್ಲೇ ಮಾಡ್ತೀನಿ.. ಇಷ್ಟ ಆಯ್ತು ಪ್ರಕಾಶಣ್ಣ. :)
ಹಹಹಾ ನಕ್ಕು ನಕ್ಕು ಸಾಕಾಯ್ತು.. ಪ್ರಕಾಶಣ್ಣ ಅಮೃತ ಸ್ನಾನದ ಕತೆ ಓದಿ. ಪಾಪ ಅನ್ನಿಸಿಬಿಟ್ಟಿತು ಅದು ಮದುವೆಯಾದ ಹೊಸತರಲ್ಲಿ ಹೃದಯವು ಬಯಸಿದೆ ನಿನ್ನನೇ ಹೇಳಿ ಮರೆಯುವ ಸಮಯದಿ ಹೃದಯ ಕೀಳುವಂತಾಯ್ತಲ್ಲ ಅನ್ನಿಸಿ ಅನುಕಂಪ ಹುಟ್ಟಿತು.
ಡುಮ್ಮಣ್ಣ ನಿಜವಾಗಿ ನಿಮ್ಮ ಅವತ್ತಿನ ಪರಿಸ್ತಿತಿ ನಮ್ಮೆದುರು ನಿಂತಂತಿತ್ತು .... ನಗು ಬರುವದಕ್ಕಿಂತ ಮೊದಲು ಸುಧಾರಿಸಿ ಕೊಳ್ಳಲು ಒಂದು ಗಂಟೆ ಬೇಕಾಯಿತು ..... ಆಮೇಲಿನ... ನಗು ಇನ್ನು ನಿಂತಿಲ್ಲ
ನಾನು ಮೊದಲು ಸ್ನಾನ ಮಡಿ ಆಮೇಲೆ ಕಾಮೆಂಟ್ ಹಾಕಬೇಕು ಅನ್ನಿಸಿತ್ತು ..... ಒಟ್ಟಾರೆ ಚೆನ್ನಾಗಿದೆ ... ನನ್ನ ಪಕ್ಕದಲ್ಲೇ ನೀವು ಕುಳಿತ ಅನುಭವ .... ಬಸ್ಸಿನಲ್ಲಿ ಹುಷಾರಾಗಿರ ಬೇಕು ... ಅದೂ ಸಿರ್ಸಿ-ಕುಮಟಾ ಬಸ್ಸಿನಲ್ಲಿ
Prakashanna,
nimma avasthe oohisalikke aagalilla maraayre :)
vaanthiya asahyada madhyeyoo konege nagu tadeyalaagalilla :)
ಪ್ರಕಾಶಣ್ಣ ನಿಮ್ಮ ಈ ಕಥೆ ನಾ ಓದುವಾಗ ಸರಿ ಸಮಯ ರಾತ್ರಿ 1.೧೫ ನಾನು ಬಿದ್ದು ಬಿದ್ದು ನಕ್ಕಿದ್ದನ್ನು ಕೇಳಿ ನನ್ನ ಮನೆಯವರಿಗೆಲ್ಲ ಎಚ್ಚರಾಗಿ...ಅವರು ಏನೆಂದು ಕೇಳಲು ನಿಮ್ಮ ಕಥೆಯನ್ನು ಮತ್ತೊಮ್ಮೆ ಓದಿ ಹೇಳಿದೆ ...ಎಲ್ಲರು ಬಿದ್ದು ಬಿದ್ದು ನಕ್ಕಿದ್ದೆ ನಕ್ಕಿದ್ದು...ನಿಮ್ಮ ಅನುಭವಗಳು ತುಂಬಾ ಚನ್ನಾಗಿವೆ...
Ayyo odi nangu vaanti baro haage aagtide, yaavdo ketta vaasane bartide anstide..
yappa...vantiyanoo ishtondu vivarisi bareyoda....che che assadhyari neevu , alla asaadharana...
ayyo paapa annistide....
Post a Comment