ಈ ತಣ್ಣನೆಯ ಯಲ್ಲಾಪುರದಲ್ಲಿ ಉಳಿಯುವದೆಲ್ಲಿ ?......
ಛಳಿಗಾಲ....
ಸಾಯಂಕಾಲ ಬೇರೆ ಆಗಿತ್ತು...
ಮರುದಿನ ..
ಮುಂಜಾನೆ ಇಬ್ಬನಿ ಬೀಳುವ ಹೊತ್ತು..
ನಾಡಿನ ಅತ್ಯಂತ ಸುಂದರ ..
"ಸಾತೊಡ್ಡಿ ಜಲಪಾತವನ್ನು" ನೋಡುವ ಕಾತುರ...!
ಗೆಳೆಯ ದಿಗ್ವಾಸ ಮತ್ತು ನಾನು ಇಬ್ಬರೇ ಇದ್ದಿದ್ದೆವು...
ಗೆಳೆಯರೊಬ್ಬರಿಗೆ ಫೋನ್ ಮಾಡಿ ...
" ಒಳ್ಳೆಯ ಹೊಟೆಲ್" ಬಗೆಗೆ ವಿಚಾರಿಸಿದೆವು..
ಅವರು ಹೇಳಿದ ಹೊಟೆಲ್ ಒಳಗೆ ಬಂದೆವು..
"ಒಂದು ...
ಡಬಲ್ ಬೆಡ್ ರೂಮ್ ಬೇಕಾಗಿತ್ತು... ಇದೆಯಾ ?"
ದಿಗ್ವಾಸ್ ಕೇಳಿದ...
ಹೊಟೆಲ್ ಮ್ಯಾನೇಜರ್ ನಮ್ಮತ್ತ ಕಣ್ಣೆತ್ತಿ ನೋಡಲೂ ಇಲ್ಲ..
ಹೆಂಡತಿ ಹತ್ತಿರ ...
ಮುಖ.. ಮುಸುಡಿ ಇಲ್ಲದೆ ಬಯ್ಯಿಸಿಕೊಂಡ...
ಹರಳೆಣ್ಣೆ ಕುಡಿದವನ ಮುಖ ಮಾಡಿಕೊಂಡು ಹೇಳಿದ..
"ಇದೆ..."
"ಎಷ್ಟು...?"
" ನಾನೂರಾ... ಐವತ್ತು..."
ನಾನು ಕಿಸೆಗೆ ಕೈ ಹಾಕುವಷ್ಟರಲ್ಲಿ ದಿಗ್ವಾಸನಿಗೆ ಹಣ ಕೊಟ್ಟಾಗಿತ್ತು..
" ಬೆಳಿಗ್ಗೆ ಐದು ಗಂಟೆಗೆ ಬಿಸಿನೀರು ಸಿಗುತ್ತದಾ ?.. ."
ಹರಳೆಣ್ಣೆಯವ ನನ್ನ ಹೊಟ್ಟೆಯನ್ನೇ ದಿಟ್ಟಿಸಿ ನೋಡತೊಡಗಿದ...
ಈ ಹೊಟ್ಟೆ ಹೊತ್ತುಕೊಂಡು ...
ಬೆಳಿಗ್ಗೆ ಐದು ಗಂಟೆಯ ವಿಷಯ ಮಾತಾಡ್ತಾ ಇದ್ದಾನಲ್ಲಾ...
ಅಂತ ಆಶ್ಚರ್ಯ ಆಗಿರಬಹುದು...
"ನೋಡೋಣ... ಬಿಡಿ...
ಬೆಳಗಾಗಲಿ..."
ಆತ ಅತ್ಯಂತ ನಿರ್ವಿಕಾರ ಭಾವನೆಯಿಂದ ಉತ್ತರಿಸಿದ...
ರಿಜಿಸ್ಟರ್ ಬುಕ್ಕಿನಲ್ಲಿ ...
ನಮ್ಮ ವಿಳಾಸ ಬರೆದುಕೊಂಡದ್ದೂ ಆಯ್ತು...
ಮ್ಯಾನೇಜರ್ ಸುಮ್ಮನೇ ಇದ್ದ.. ಏನನ್ನೂ ಹೇಳ್ತಾನೇ.. ಇಲ್ಲ... !
"ಸ್ವಾಮಿ ರೂಮ್ ಎಲ್ಲಿದೆ ?"
ದಿಗ್ವಾಸ ಎಚ್ಚರಿಸಿದ...
ಎಲ್ಲಿ ಹೋದ್ಯೋ...
ಹರಕ್ ಚಡ್ಡಿ... ಬಾರಲೇ.. ಇಲ್ಲಿ..."
ಒಬ್ಬ ಹುಡುಗ ಓಡೋಡಿ... ಬಂದ..
ಅವನ ಚಡ್ಡಿ ಸರಿ ಇತ್ತು..
"ಇವರಿಗೆ ....
ಅಲ್ಲಿ ಲಾಸ್ಟ್ ರೂಮ್ ತೋರಿಸೊ....."
ಹರಕು ಚಡ್ಡಿ ಮುಂದೆ ಸಾಗಿದ..
ನಾವು ಹಿಂಬಾಲಿಸಿದೆವು...
ಸ್ವಲ್ಪ ದೂರ ಹೋದ ಮೇಲೆ ...
ಹರಕು ಚಡ್ಡಿ ತಿರುಗಿ ನಿಂತು ....
ಒಂಥರಾ ಮಾಡಿ ನನ್ನನ್ನೇ ನೋಡತೊಡಗಿದ.. .
ಕಣ್ಣಲ್ಲಿ ಏನೋ ಅನುಮಾನ.... !
ನನಗೆ ಕಸಿವಿಸಿ ಆಯ್ತು...
" ನಿಮಗೆ "ಗುರಿ" ಇದೆಯಾ...?..."
ಹರಕು ಚಡ್ಡಿ ಗುಂಡು ಹೊಡೆದ ಹಾಗೆ ಪ್ರಶ್ನೆ ಕೇಳಿದ...
ನನಗೆ ಆಶ್ಚರ್ಯ.. !
"ಯಾಕೋ...? .."
"ನಿಮ್ಮನ್ನು ನೋಡಿದ್ರೆ ...
"ಗುರಿ" ಇದ್ದವರ ಹಾಗೆ ಕಾಣಿಸೋದಿಲ್ಲ..."
"ಏನು ಗುರಿ ಮಾರಾಯಾ ?
ಹೊಟೆಲ್ಲಿನಲ್ಲಿ ಉಳಿಯಲಿಕ್ಕೆ ಯಾವ ಗುರಿ ಬೇಕು ..?"
"ಅಲ್ಲಾ...
ಬೇಜಾರು ಮಾಡ್ಕೋ ಬೇಡೀ...
ಮೊದಲೇ ಹೇಳಿಬಿಡ್ತೇನೆ...
ಗುರಿ ಇದ್ದರೆ ಮಾತ್ರ ಆ ರೂಮಿನಲ್ಲಿರಿ...
ಇಲ್ಲಾ ಅಂದ್ರೆ ಬೇರೆ ರೂಮ್ ಮಾಡಿ.. !!... "
ದಿಗ್ವಾಸ ತಲೆ ಕೆರೆದು ಕೊಂಡ..!
ಹರಕು ಚಡ್ಡಿ...
ರೂಮಿನ ಬಾಗಿಲು ತೆಗೆದು ...
ನನ್ನನ್ನು ಟಾಯ್ಲೆಟ್ಟಿನ ಬಳಿ ಕರೆದುಕೊಂಡು ಹೋದ...
ಟಾಯ್ಲೆಟ್ಟಿನ ಬಾಗಿಲಿಗೆ ಭುಜ ಕೊಟ್ಟು ...
ಕೈ ಹಾಕಿ ...
ಬಾಗಿಲನ್ನು ಕಷ್ಟಪಟ್ಟು ಮೇಲೆ ಎತ್ತಿದ..
ಪಕ್ಕಕ್ಕೆ ಸರಿಸಿದ ...
ಸೀತಾ ಕಲ್ಯಾಣದಲ್ಲಿ ಶ್ರೀರಾಮಚಂದ್ರ ಶಿವಧನಸ್ಸು ಎತ್ತಿದ ಹಾಗೆ...
"ಈ ಬಾಗಿಲು ...
ಸ್ವಲ್ಪ ಹೀಗೆ ಇದೇರ್ರೀ... !
ಪೇಟೆ ಹೆಣ್ಣು ಮಕ್ಕಳ ಬ್ಲೌಸ್ ಇದ್ದ ಹಾಗೆ...
ಕೆಳಗೆ ಬಿದ್ದು ಹೋಗಿರ್ತದೆ...
ಆಗಾಗ ಮೇಲೆ ಎತ್ತುತ್ತಾ ಇರಬೇಕು.. "
"ಇಲ್ಲಿ ನೋಡ್ರಿ...
ಇದು ನಮ್ ಹೊಟೆಲ್ ಸಂಡಾಸು...."
ಅದು ತುಂಬಾ ಹಳೆಯ ಕಾಲದ ಭಾರತೀಯ ಮಾದರಿ ಪ್ಯಾನ್....
ನೆಲಕ್ಕೆ ಕುಳಿತು ..
ಉಪಯೋಗಿಸುವಂಥಾದ್ದು...
ಬಹಳ ಸಣ್ಣದಿತ್ತು...
ಉದ್ದ..
ಅಗಲ..
ಎತ್ತರ.. ಎಲ್ಲ ರೀತಿಯ ಅಳತೆಗಳಲ್ಲೂ ಚಿಕ್ಕದಾಗಿತ್ತು...
"ವಿಷಯ ಏನು ಗೊತ್ತುಂಟಾ ?
ದೊಡ್ಡ ...
ದೊಡ್ಡ ಸಕ್ರೆ ಮೂಟೆಯಂಥಹ ..
ಹೊಟ್ಟೆಯವರು ಬಂದು ಬಿಡ್ತಾರೆ....
ದೇವರಾಣೆ ಮಾಡಿ ಹೇಳ್ತೇನೆ.. !
ಅವರಿಗೆ ಗುರಿ ಇರೋದಿಲ್ಲ....
ಮಾಡುವದನ್ನು
ಸರಿಯಾದ ಜಾಗದಲ್ಲಿ ಮಾಡುವದಿಲ್ಲ....!
ಏನೇನು ತಿಂದಿರ್ತಾರೋ... !
ಯಾರ್ಯಾರದ್ದೋ ... ಹೊಲಸುಗಳು... !
ಮರುದಿನ ...
ನಾನು ಕ್ಲೀನ್ ಮಾಡಿ ತೊಳೆಯ ಬೇಕು...
ನನ್ನ ಹಣೆ ಬರಹ ನೋಡಿ ಮಾರಾಯ್ರೆ... ! "
ನನಗೆ ಗಾಭರಿ ಆಯ್ತು..!
ಹೊಟ್ಟೆ ನೋಡಿಕೊಂಡೆ..!
"ನಿಮ್ಮದು ...
ಇನ್ನೂ ಸಕ್ರೆ ಮೂಟೆ ಆಗಿಲ್ಲ ಬಿಡಿ...
ಯಾವುದಕ್ಕೂ ಗುರಿ ಇದೆಯಾ ಅಂತ ...
ಒಂದುಸಾರಿ...
ಕೂತ್ಕೊಂಡು ನೋಡ್ಕೋ ಬಿಡಿ... !...
ಬಾಗಿಲು ಹಾಕ್ಕೋತಿರಾ ?.. "
ಯಾರೋ ಕಿಸಕ್ಕನೆ ನಕ್ಕಾಂತಾಯಿತು...
ಹಿಂದೆ ತಿರುಗಿ ನೋಡಿದೆ.. !
ದಿಗ್ವಾಸ ಬಿದ್ದೂ.. ಬಿದ್ದೂ ನಗುತ್ತಿದ್ದ...
28 comments:
ha ha ha :).. Digwas avaru obbare alla,idanna odidavarellaru biddu biddu nagaare prakashanna,, very nice :)
ದ್ರೋಣರು ತಮ್ಮ ಶಿಷ್ಯರಿಗೆ ಮರದಲ್ಲಿರುವ ಹಕ್ಕಿಯ ಕಣ್ಣಿಗೆ ಗುರಿ ಇಡುವ೦ತೆ ಹೇಳಿದ್ದರಲ್ಲಾ...,
ಅ೦ತಹದೇ ಗ೦ಭೀರ ವಿಷಯ ಇದು...!!
"ರಾಮನು ಬಿಟ್ಟ ಬಾಣ ಎಂದು ತಪ್ಪಿಲ್ಲ ಎಂದೆಂದೂ ತಪ್ಪೊಲ್ಲ...
ಪ್ರಕಾಶಣ್ಣ ಬರೆದ ಬರಹ ನಗುವನ್ನು ನಿಲ್ಸೋಲ್ಲಾ .. "
ಕಿವಿಗೆ ಬಿದ್ದರೂ ಮರೆತು ಹೋಗುವಂತಹ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ನೇಯ್ದು ನಗೆ ಬುಗ್ಗೆ ಉಕ್ಕಿಸುವ ಶೈಲಿ ಇಷ್ಟವಾಗುತ್ತದೆ. ಗ್ರಾಮ್ಯ ಭಾಷೆಯಲ್ಲಿ ದಿನ ಬಳಕೆ ಪದಗಳು ಯಾವ ಯಾವ ರೀತಿಯಲ್ಲಿ ನಗೆ ಚಿಲುಮೆ ಉಕ್ಕಿಸುತ್ತದೆ ಅನ್ನುವುದಕ್ಕೆ ಈ ಬರಹ ಸಾಕ್ಷಿ.
ಗುರಿ ಇರಬೇಕು ರಾಮನ ತರಹ
ನಗು ತರಿಸಬೇಕು ಪ್ರಕಾಶಣ್ಣನ ಬರಹಗಳ ತರಹ.....
ಸೂಪರ್ ಸೂಪರ್
ಅಹಹಹಹ ಎಂಥಾ ಗುರಿ ಮಾರಾಯಾ ಹರ್ಕಲ್ಚಡ್ಡಿದು....
ಹೋಗಲಿ ನಿಮ್ಮಿಬ್ಬರಲ್ಲಿ ಯಾರ ಗುರಿ ಭೇಷಿತ್ತು ಕೇಳಿದ್ಯಾ ಮರುದಿನ ಅವನ್ನ,,,ಹಹಾಅಹಹಹಹ....
ಹೋಟೆಲ್ ಹೊರಗಡೆ ನೀವು ಮುಂದಿನ ಸಲ ಹೋದಾಗ
"ಗುರಿ ಸರಿಯಾಗಿರುವವರಿಗೆ ಮಾತ್ರ ರೂಂ ನೀಡಲಾಗುವುದು"
ಅಂತ ಬೋರ್ಡ್ ಇದ್ರೆ...ಅದು ನಿಮ್ಮ ಕಾರಣ ಅಂದ್ಕೊಬಹುದು...ಹಹಹಹ
ಜೀವನದಲ್ಲಿ ಏನೇನು, ಏನೇನಕ್ಕೆ ಗುರಿ ಇಟ್ಟುಕೊಳ್ಳಬೇಕೋ ಗೊತ್ತಾಗುತ್ತಿಲ್ಲವಪ್ಪ ನಿಮ್ಮ ಕಥೆ ಓದಿದರೆ. ಈ ತರಹದ ಗುರಿಗಳೂ ಇರುತ್ತವಾ ?? :) :) ಜೀವನದಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎಂದಿದ್ದಾರೆ ಹಿರಿಯರು . ಈ ಗುರಿಗೆ ಅವನು ಗುರು ಆದ ಅನ್ನಿ .. :) :)
ಚೆನ್ನಾಗಿದೆ ..
ಆಶಾ...
ಮುಂದೆ ಏನಾಯ್ತು ಗೊತ್ತಾ ?
ನನ್ನ ಗುರಿ ಬಗ್ಗೆ ನನಗೆ ಅನುಮಾನ ಬಂದು ಬೇರೆ ಹೊಟೆಲ್ಲಿಗೆ ಹೋದ್ವಿ...
ಅದು ಜಿಲ್ಲೆಯ ಸಂಭಾವಿತ ರಾಜಕಾರಣಿ ಪ್ರಮೋದ್ ಹೆಗಡೆಯವರ ಹೊಟೆಲ್..
ಅಲ್ಲಿ ಹೋಗಿ
"ನಮಗೆ ಗುರಿ ಅಷ್ಟು ಸರಿಯಾಗಿ ಇಲ್ಲ ಅಂತ ನಮ್ಮ ಭಾವನೆ..
ರೂಮು ಸಿಗ ಬಹುದಾ ?"
ಪ್ರಮೋದ್ ಹೆಗಡೆಯವರ ಮಗ "ಪ್ರಶಾಂತ್ " ಅಲ್ಲಿದ್ದರು..
ಅವರು ಕಕ್ಕಾಬಿಕ್ಕಿ...!
ಗುರಿಯನ್ನು ಇಷ್ಟಪಟ್ಟಿದ್ದಕ್ಕಾಗಿ ಪ್ರೀತಿಯ ಜೈ ಹೋ !
ಪ್ರಸನ್ನರೆ...
ಅದು ತುಂಬಾ ಹಳೆಯ ಹೊಟೆಲ್ಲು..
ನಮ್ಮ ರಾಜ್ಯದ ತಾಲೂಕು ಪ್ರದೇಶಗಳಲ್ಲಿ ಇಂಥಹ ಹೊಟೆಲ್ಲುಗಳು ಸರ್ವೆ ಸಾಮಾನ್ಯ...
ನಮಗೆ ಜಾಸ್ತಿ ನಿರೀಕ್ಷೆಗಳಿರಲಿಲ್ಲ..
ತಗಣಿಯಿಲ್ಲದ...
ಸ್ವಚ್ಛತೆಯುಳ್ಳ ಹೊಟೆಲ್ಲಾಗಿದ್ದರೆ ಸಾಕಿತ್ತು..
ಆಮೇಲೆ ಪ್ರಮೋದ್ ಹೆಗಡೆಯವರ ಹೊಟೆಲ್ಲಿಗೆ ಹೋಗಿ ಉಳಿದುಕೊಂಡೆವು..
ಅದು ತುಂಬಾ ಚೆನ್ನಾಗಿತ್ತು..
ಗುರಿಯನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು...
ಪ್ರೀತಿಯ ಶ್ರೀ....
ಮರುದಿನ ಬೆಳಿಗ್ಗೆ ಸಾತೊಡ್ಡಿ ಜಲಪಾತದಲ್ಲೂ ನಮಗೆ ಗುರಿಯದ್ದೇ ಮಾತು...
"ಜೀವನದಲ್ಲಿ ಮುಂದೆ ಬರಲು "ಗುರಿ" ಇರಬೇಕು..."
"ಬದುಕಿನಲ್ಲಿ ಗುರಿ ಇಲ್ಲದವ ಹದ್ದಿಗಿಂತ ಕಡೆ"
ಒಟ್ಟಿನಲ್ಲಿ ಆ ಮಂಗಳೂರಿನ ಮಾಣಿಯನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ...
" ಮತ್ತೇನಿಲ್ಲ..
ನಮ್ಮ ಗುರಿಯನ್ನು ಪರೀಕ್ಷಿಸಿಕೊಳ್ಳೋಣ ಅಂದರೆ ..
ಇತ್ತಿಚೆಗೆ ಸರಿಯಾದ..
ಆ ಥರಹದ ಟಾಯ್ಲೆಟ್ಟುಗಳು ಸಿಗುವದಿಲ್ಲವಲ್ಲ ಮಾರಾಯ್ರೆ.. !"
ಗುರಿಯನ್ನು ಸಂತೋಷಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !
Nimma ಗುರಿ enembudu arthavaagi shuruvaada naguvina parinaama enu gottaa Prakaash ji? Sikkaapatte hottenovu... Nagunaguttale adannu adumikolluttiddene.
ಹಾ ಹಾ...
ಪರ್ಕಾಶಣ್ಣಾ....
ಜೈ ಹೋ..
ಪ್ರಕಾಶಣ್ಣ..... ಸದ್ಯಕ್ಕೆ ಗುರಿ ಇದೆ... ಅದು ಕೂಡ ನೇರವಾಗಿದೆ ಗುರಿ... ;)
ಮುಂದೆ ಏನಾಗುತ್ತೋ ಗೊತ್ತಿಲ್ಲ... ಈಗ್ಲಂತೂ ಹೊಟ್ಟೆ ತುಂಬಾ ನಗು.... :)
ಸಕ್ಕತ್ತಾಗಿದೆ ಅಣ್ಣ... :)
Haha Sooper :)
ಆಜಾದೂ...
ಹರಕಚಡ್ಡಿ ನಮಗೆ ಇನ್ನೊಂದು ರೂಮ್ ತೋರಿಸಿದ..
ಅಲ್ಲಿ ಕಮೋಡ್ ಇತ್ತಂತೆ..
ಅದನ್ನು ನೋಡಲು ಹೋದವನು ದಿಗ್ವಾಸು..
"ಪ್ರಕಾಶಣ್ಣ..
ಅಲ್ಲಿ ಏನು ಮಾಡಬೇಕೊ ಅದು ಆಗುವಂಥಾದ್ದಲ್ಲ..
ತುಂಬಾ ಗಲೀಜು"
ಅಂತ ಸಾರಾಸಗಟಾಗಿ "ಇಲ್ಲಿ ಇರುವದು ಬೇಡ" ಅಂತ ಅಂದುಬಿಟ್ಟ..
ಮ್ಯಾನೇಜರ ಬಳಿ ಹೋಗಿ "ನಮ್ಮ ಹಣ ವಾಪಸ್ಸು ಕೊಡಿ..
ನಾವು ಇಲ್ಲಿ ಇರಲಾಗುವದಿಲ್ಲ" ಅಂತ ಕೇಳಿದ್ದಕ್ಕೆ
ಆ ಪುಣ್ಯಾತ್ಮ
"ಹಣ ಪೂರ್ತಿ ವಾಪಸ್ಸು ಕೊಡಲಿಕ್ಕೆ ನಾವು ಸರಕಾರ ನಡಸ್ತಾ ಇಲ್ರೀ.."
ಅಂತ ನಮಗೆ ರೋಪ್ ಹಾಕಿದ..
ಕೊನೆಗೆ ಐವತ್ತು ರೂಪಾಯಿ ಕಟ್ ಮಾಡಿ ನಾನೂರು ರೂಪಾಯಿ ವಾಪಸ್ ಕೊಟ್ಟ..
ನಮ್ಮ ಗುರಿ ಪರೀಕ್ಷಿಸಿಕೊಳ್ಳಲಿಕ್ಕೆ "ಐವತ್ತು ರೂಪಾಯಿ" ಕೊಡಬೇಕಾಯ್ತು...
ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಜೈ ಹೋ !
ಪ್ರಕಾಶಣ್ಣ ಸಖತ್ತಾಗಿದೆ ಕೊನೆಯಲ್ಲಿ ಟ್ವಿಸ್ಟ್ ... enjoy it... :-)
Prakash ji
Nimma Guri (kathe)ge bhaari gammattu untu -:D
ಹಹಹ... ಬೀಳುವ ಬಾಗಿಲನ್ನು ಶಹರದ ಹೆಂಗಳೆಯರ ಕುಪ್ಪಸಕ್ಕೆ ಹೋಲಿಸಿದ್ನಾ ಹರಕುಚಡ್ಡಿ.. ನಕ್ಕೂ ನಕ್ಕೂ ಸುಸ್ತು.. ಇನ್ನು ಮೇಲಾದ್ರೂ ಗುರಿ ಇಡೋ ರೂಢಿ ಮಾಡ್ಕೋಬೇಕಪ್ಪ... ಇಲ್ಲಾಂದ್ರೆ ಕಷ್ಟ...
ಸಂಧ್ಯಾ..
"ಗುರಿ ಇಲ್ಲದವ ಹದ್ದಿಗಿಂತ ಕಡೆ..."
ಇದು ಹೊಸ ಗಾದೆ ಹ್ಹಾ.. ಹ್ಹಾ.. !
ಡುಮ್ಮ ಇರುವವರಿಗೆ ಎಷ್ಟೆಲ್ಲ ತೊಂದರೆಗಳು ಅಲ್ಲವಾ ?
ಹರಕು ಚಡ್ಡಿ ನನ್ನನ್ನು ಒಂಥರಾ ಮಾಡಿ ನೋಡುವಾಗ ಆಶ್ಚರ್ಯವಾಗಿದ್ದು ನಿಜ..
ಎಲ್ಲರೂ..
ಅವರವರ ತೊಂದರೆಗಳಿಗೆ ಮಾತ್ರ ಯೋಚಿಸುತ್ತಾರೆ..
ಅದರಂತೆಯೆ "ಹರಕುಚಡ್ದಿಯೂ" ಸಹ..
ಪ್ರತಿದಿನ ಸ್ವಚ್ಛ ಮಾಡುವವ ಅವನಾದ್ದರಿಂದ ..
ಅಲ್ಲಿ ಬರುವವವರ "ಗುರಿ" ಪರೀಕ್ಷೆ ಮಾಡುತ್ತಿದ್ದ ಅನ್ನಿಸುತ್ತದೆ..
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ತುಂಬಾ ದಿನಗಳ ನಂತರ ನಿಜವಾಗಲೂ ಮನಸಾರೆ ನಕ್ಕು ಬಿಟ್ಟೆ. ಹೊಟ್ಟೆ ಬಿರಿದು ಹೋಗುವಷು ನಕ್ಕು ಬಿಟ್ಟೆ!!!
ಎಲ್ಲಿ ಇದ್ದಲ್ಲೇ ಗುರಿ ತಲುಪಿ ಬಿಡುತ್ತೇನೆ ಆಂದೆನಿಸಿದ್ದೂ ನಿಜ.
ನನ್ನದೂ ಡೊಳ್ಳು ಹೊಟ್ಟೆ ಅಲ್ಲವೇ? ನಾನು ಜೊತೆಗೆ ಬಂದಿದ್ದರೆ ಬಹುಶಃ ಅವರು ರೂಮೇ ಕೊಡುತ್ತಿರಲಿಲ್ಲವೋ ಏನೋ?
ನಿಮ್ಮ ಒಂದು ಮಾತು ನಿಜ ನಾನೂ ಚಿಕ್ಕ ಊರುಗಳ ಸಣ್ಣ ಸಣ್ಣ ಲಾಜುಗಳಲ್ಲಿ ಉಳಿದುಕೊಂಡಿದ್ದೇನೆ. ಆ ರೂಮುಗಳ ಅವಸ್ಥೆ ದೇವರಿಗೇ ಪ್ರೀತಿ.
ಸೂಪರ್ ಮಸ್ತ್ ಇದೇ ಕತೆ ನಿಮ್ ವಿವರಣೆ ಕೊಡೊ ಶೈಲಿ ತುಂಬಾ ಮಜಾ ಕೊಡತ್ತೆ. ಯಲ್ಲಾಪುರದಲ್ಲಿ ಪ್ರಕಶಣ್ಣ ನವರ ಗುರಿ ಕತೆ ಚೆನ್ನಾಗಿದೆ. ಇವಾಗ ಯಲ್ಲಾಪುರದ ಲಾಡ್ಜ್ಗಳು ಬದಲಾಗಿವೆ ಸುವ್ಯವಸ್ತಿತವಾಗಿವೆ.
ವಾಜಪೇಯಿಯವರೆ...
ಇಷ್ಟಪಟ್ಟಿದ್ದಕ್ಕೆ ತುಂಬಾ ಖುಷಿ ಆಯ್ತು...
ಯಾರಾದರೂ ದಪ್ಪ ಸೈಜಿನವರು ಕಂಡಾಗ ..
" ಇವರಿಗೆ ಗುರಿ" ಸರಿ ಇರಬಹುದಾ ? .." ..
ಅಂತ ನೆನಪಾಗಿ ಮನದೊಳಗೆ ನಗು ಉಕ್ಕಿ ಬರುತ್ತದೆ..
ಡುಮ್ಮಣ್ಣರಿಗೆ ಎಷ್ಟೊಂದು ತೊಂದರೆಗಳು ಅಲ್ವಾ !
ಮತ್ತೊಮ್ಮೆ ಪ್ರೀತಿಯ ಜೈ ಹೋ !
ಜೀವನದಲ್ಲಿ ಗೊತ್ತು ಗುರಿ ಇಲ್ಲದವರಿಗೆ, ಸಂಡಾಸೂ ದಕ್ಕುವುದಿಲ್ಲ. ಹ ಹ ಹ..!
ಹ ಹ ಹ ಹ ಹ , ಭಾನುವಾರ ದೊಡ್ಡ ನಗೆಯೋದನೆ ಶುರು ಆಯ್ತು. ನಿಮ್ಮ ಈ ಲೇಖನದ ಪ್ರಿಂಟ್ ಔಟ್ ತಗೋತಾ ಇದ್ದೀನಿ, ಜೊತೆಗೆ ಗುರಿಯ ಬಗ್ಗೆ ಪ್ರಯತ್ನ ಪಡ್ತಾ ಇದ್ದೇನಿ. ಯಾಕಂದ್ರೆ ನಾಲೆಇನ್ದ ಐದು ದಿನ ಹೋಟೆಲ್ ಗಳೇ ನಮ್ಮ ಮನೆ ಅದು ನಿಮ್ಮ ಊರಿನ ಸುತ್ತ ಮುತ್ತ , ಜೊತೆಗೆ ರೂಂ ಕೇಳೋ ಮುಂಚೆ ನನಗೆ ಗುರಿ ಇದೆ ಅಂತಾ ಹೇಳಿ ರೂಂ ಪದೆಯುವೆ. ಇದು ನಗು ಬರಿಸೊ ಲೇಖನ ಆದರೂ ವಾಸ್ತವತೆ ಅಡಗಿದೆ, ನನ್ನ ಕಾಲೇಜಿನ ದೆಹಲಿ ಟ್ರಿಪ್ ಜ್ಞಾಪಕಕ್ಕೆ ಬಂತು, ಯಾಕಂದ್ರೆ ವೆಸ್ಟ್ರನ್ ಟೈಪ್ ಕಮೂದ್ ನ ಉಪಯೋಗಿಸೋ ರೀತಿ ತಿಳಿಯದೆ ನನ್ನ ಗೆಳೆಯನೊಬ್ಬ ಕಮೋಡ್ ಮೇಲೆ ಕುಳಿತು ಅದರ ಮೇಲೆ ಕುಕ್ಕಗರ ಗಾಲಿನಲ್ಲಿ ಕುಳಿತು ಸರ್ಕಸ್ ಮಾದಿದ್ದ. ಜೊತೆಗೆ ನಾನೂ ಹೀಗೆ ಮಾಡಿದ್ದೆ ಸಹ. ಆದರಿಂದ ಹಳ್ಳಿ ಹೈಕಳು ಗುರಿ ಇದೊದ್ರಲ್ಲಿ ಫೇಮಸ್ಸು ಬಿದಿ. ಒಳ್ಳೆಯ ಮಾಹಿತಿ ಯುಕ್ತ ಅನುಭವ ಅಂದಹಾಗೆ ನಿಮ್ಮ ಗುರಿ ಎಷ್ಟು ಸಾರಿ ತಪ್ಪಿತು.ಗೊತ್ತಿಲ್ಲ ಅಜಾದ್ ಹೇಳಿದ ಹಾಗೆ ಹೋಟೆಲ್ ನವರಿಂದ ಶಬ್ಬಾಸ್ಗಿರಿ ದೊರಕಿರ ಬಹುದು.
.
Hha hha.... sakkat nakke.... GURI iddone SHOORA andukonDidde...aadre, eega yochane mmaDabekaagide....
ನಗು ತಡೆಯೋಕಾಗ್ತಾ ಇಲ್ಲ. ಅಯ್ಯೋ ದೇವ್ರೇ....
he he he...... thumbaaa comedy...innond sala yellapur bandre nammanege banni
ಹ ಹ ಹ ಹ ...
ನೀವು ಗುರಿ ಸರಿ ಇಟ್ಟಿದ್ದಿರೋ..?
ಎಲ್ಲರು ಗುರಿ ತಪ್ಪಿದ್ದಕ್ಕೆ ಅವನ ಚಡ್ಡಿ ಹರಿದಿರ ಬೇಕು ಪಾಪ ..:ಪ್
Post a Comment