ಒಬ್ಬ ಅಜ್ಜ..
ಮೊಮ್ಮಕ್ಕಳಿಗೆ ಮಹಾಭಾರತದ ಕಥೆ ಹೇಳುತ್ತಿದ್ದ...
ಯುದ್ಧ ಪರ್ವದ ಕೊನೆಯ ಭಾಗ ಅದಾಗಿತ್ತು...
"ಧುರ್ಯೋಧನ ಯುದ್ಧದಲ್ಲಿ ತನ್ನವರೆನ್ನೆಲ್ಲ ಕಳೆದುಕೊಂಡು..
ಪಾಂಡವರಿಗೆ ಹೆದರಿ...
ರಕ್ತ..
ಹೆಣದ ರಾಶಿಗಳ ಕುರುಕ್ಷೇತ್ರ ರಣರಂಗದಲ್ಲಿ ...
ಒಂಟಿಯಾಗಿ ಬರುತ್ತಿದ್ದ....
ಎಲ್ಲಿ ನೋಡಿದರೂ ಹೆಣಗಳ ರಾಶಿ....!
ತನ್ನ ಛಲದಿಂದಾಗಿ ...
ಎಷ್ಟೆಲ್ಲ ಅಮಾಯಕರು ಸತ್ತರು...!
ಎಷ್ಟೆಲ್ಲ ವಿಧವೆಯರು... ಮಕ್ಕಳು... ಅನಾಥರಾದರು..!... "
"ಇಲ್ಲಿ ಸತ್ತವರು...
ಜೀವ ಹೋಗುವ ಯಮ ಯಾತನೆಯಲ್ಲಿ ...
ನೋವಿನಲ್ಲಿ..
ನನ್ನನ್ನು ಶಪಿಸುತ್ತಾ ಸತ್ತಿರಬಹುದೇ ?..
ಪ್ರತಿಯೊಂದು ಹೆಣದ ಕಣ್ಣುಗಳು ತನ್ನನ್ನೇ ದಿಟ್ಟಿಸಿ ನೋಡುತ್ತಿವೆ..
ಭರ್ಚಿಯಿಂದ ಇರಿಯುತ್ತಿವೆ...
ಅಯ್ಯೋ ದೇವರೇ...
ಹೇಗೆ ಎದುರಿಸಲಿ ಈ ನೋಟಗಳನ್ನು ?"
ಧುರ್ಯೋಧನ ಕೊರಗಿದ...
ಮಮ್ಮಲ ಮರುಗಿದ...
ಅಜ್ಜ ...
ತನ್ನ ಕನ್ನಡಕವನ್ನು ಸರಿ ಪಡಿಸಿಕೊಂಡು ...
ಮತ್ತೆ ಮುಂದುವರೆಸಿದ...
"ಮುಂದೆ ಹೋಗುವಾಗ ...
ಕಾಲಿಗೆ ಒಂದು ಹೆಣ ತಾಗಿ ...
ಧುರ್ಯೋಧನ ಬೀಳುವಂತಾದ...
ನೋಡುತ್ತಾನೆ ...!
ಅದು ಅವನ ತಮ್ಮನ ಹೆಣ!!
ತನ್ನ ಬದುಕಿನ ಸ್ವಾರ್ಥ .. ಆಸೆಗಳಿಗೆ ..
ತನ್ನ ತಮ್ಮ ಶವವಾಗಿದ್ದಾನೆ... !
ಅನತಿ ದೂರದಲ್ಲಿ ವೀರ ಅಭಿಮನ್ಯುವಿನ ಹೆಣ....!
ಉಂಡು..
ತಿಂದು.. ತುಂಟಾಟವಾಡಿ ..
ಬೆಳೆಯುವ ಪುಟ್ಟ ಕಂದ...
ತನ್ನ ಛಲದಿಂದಾಗಿ ಹೆಣವಾಗಿದ್ದಾನೆ.. !...
ಎಲ್ಲ ಕಡೆ..
ರಕ್ತ ಪಿಪಾಸು ರಣ ಹದ್ದುಗಳ ಹಾರಾಟ.. !
ಕಾಡು ಪ್ರಾಣಿಗಳ ಕೇಕೆ.... !!
ಎತ್ತ ನೋಡಿದರೂ.... ತನ್ನ ಬಂಧುಗಳ ಹೆಣಗಳ ರಾಶಿ.... !
ಅಯ್ಯೋ ದೇವರೆ.... !!
ಧುರ್ಯೋಧನ ವಿಲವಿಲ ಒದ್ದಾಡಿದ ....
ತಾನು ಪಾಪಿ... !
ಹೆಣಗಳ ರಾಶಿಯಲ್ಲಿ ಜೋರಾಗಿ ಚೀರಿದ.. .. !
ರೋಧಿಸಿದ.....!
ಎದೆ..
ಎದೆ ಬಡಿದುಕೊಂಡ.... !"
ಅಜ್ಜ ಕಥೆಯನ್ನು ನಿಲ್ಲಿಸಿ ಮಕ್ಕಳ ಕಡೆ ನೋಡಿದ...
"ಮಕ್ಕಳೆ...
ಇಲ್ಲಿ ಕುರುಕ್ಷೇತ್ರ....
ಹೆಣಗಳು..
ಶವಗಳ ರಾಶಿ ... ಅಂದರೆ ಏನು ಗೊತ್ತಾ ?... "
ಮಕ್ಕಳಿಗೆ ಅರ್ಥವಾಗಲಿಲ್ಲ...
"ನೀನೆ ಬಿಡಿಸಿ ಹೇಳು ಅಜ್ಜಾ..."
"ಭಾವನೆಗಳು...
ಪ್ರೀತಿ...ಪ್ರೇಮ...
ನಮ್ಮ ಬಾಂಧವ್ಯಗಳು.. ...
ಕುರುಕ್ಷೇತ್ರವೆಂದರೆ...
ಸ್ವಾರ್ಥದ.. ಸೊಕ್ಕಿನ... ನಮ್ಮ ಪಾಪದ ಬದುಕು....
ಧುರ್ಯೋಧನ ಬದುಕಿರುವಾಗ ....
ಬಹಳಷ್ಟು ಜನರ ಭಾವನೆಗಳಿಗೆ ಹಿಂಸಿಸಿದ...
ನೋಯಿಸಿದ..!
ಪಾಂಡವರನ್ನು ಅರಗಿನ ಮನೆಯಲ್ಲಿಟ್ಟು...
ಬೆಂಕಿ ಇಡುವಾಗ.....
ತನ್ನ ಮಕ್ಕಳ ಬಗೆಗೆ ತಾಯಿ ಕುಂತಿದೇವಿ ...
ಎಷ್ಟು ಆತಂಕ ಪಟ್ಟಿರ ಬಹುದು...?
ರಾಜಕುಮಾರರಾಗಿದ್ದ ಪಾಂಡವರನ್ನು ...
ಕಪಟ ಜೂಜಿನಲ್ಲಿ ಸೋಲಿಸಿ..
ವನವಾಸಕ್ಕೆ ಅಟ್ಟಿದಾಗ..
ಪಾಂಡವರ ಹೃದಯ ಎಷ್ಟು ನೊಂದಿರಬಹುದು..?
ಆತಂತ್ರ ಬದುಕಿನ ಆತಂಕ ಎಷ್ಟು ಕಾಡಿರಬಹುದು ?..
ಮಾನವೇ ಭೂಷಣವೆಂದು ನಂಬಿರುವ ...
ಸಾಧ್ವಿ ದ್ರೌಪದಿಯು ..
ತುಂಬಿದ ಸಭೆಯಲ್ಲಿ ಬೆತ್ತಲಾಗುವಾಗ ..
ಎಷ್ಟು ರೋಧಿಸಿರಬಹುದು ?.. ...
ನೊಂದವರ...
ನಮ್ಮಿಂದಾಗಿ ಅತ್ತವರ ...
ಶಾಪ ನಮ್ಮನ್ನು ಕಾಡದೇ ಬಿಡುವದಿಲ್ಲ...."
ಮಕ್ಕಳು ಸುಮ್ಮನಿದ್ದರು...
"ಮಕ್ಕಳೆ..
ಬದುಕಿನಲ್ಲಿ ನಮ್ಮ ಬಂಧುಗಳ..
ಪ್ರೀತಿಸಿದವರ..
ನಮ್ಮವರ ಭಾವನೆಗಳನ್ನು ಪ್ರೀತಿಸಬೇಕು ...
ಇಲ್ಲವಾದಲ್ಲಿ...
ನಮ್ಮ ವೃದ್ಧಾಪ್ಯದ ಕುರುಕ್ಷೇತ್ರದ ರಣರಂಗದಲ್ಲಿ..
ಒಂಟಿಯಾಗಿ ಸಾಗುವಾಗ..
ನಾವು ಕೊಂದ ಭಾವನೆಗಳ ಹೆಣ ..
ನಮ್ಮ ಕಾಲಿಗೇ .. ಎಡವುತ್ತದೆ ...
ನಮ್ಮ ಜೀವ ಹಿಂಡುತ್ತದೆ ....
ನಾನು... ನನ್ನದು...
ನನಗೆ ಮಾತ್ರ ಎನ್ನುವ ಭಾವರಹಿತ ಬದುಕಿಗೆ...
ಪ್ರತಿಯೊಬ್ಬರೂ..
ಅವರವರ ಬದುಕಿನ ಕುರುಕ್ಷೇತ್ರದಲ್ಲಿ ...
ಉತ್ತರ ಕೊಡುವ ಸಂದರ್ಭ ಬಂದೇ ಬರುತ್ತದೆ...
ಎಲ್ಲೋ ಒಂದು ಕಡೆ ..
ಒಬ್ಬಂಟಿಯಾದಾಗ.. ..
ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ...
ಯಾರಾದರೂ ಬೇಕು ಎಂದಾಗ
ಬಂಧುಗಳ ..
ಭಾವನೆಗಳನ್ನು ಕೊಂದ ಧುರ್ಯೋಧನ ನಾವಾಗಬೇಕಾಗುತ್ತದೆ...!
ಒಬ್ಬಂಟಿಯಾಗಿಯೇ.. ರೋಧಿಸಬೇಕಾಗುತ್ತದೆ...
ಸಹಜ ಬದುಕಿನಲ್ಲಿ ಸಿಗುವ .. ಬಾಂಧವ್ಯಗಳು...
ಬಂಧುಗಳು...
ಭಾವನೆ ..
ಪ್ರೀತಿ.. ಪ್ರೇಮಗಳು ನಮಗೆ ಬೇಕು ಎನ್ನುವಾಗ ಸಿಗುವದಿಲ್ಲ...
ನಮಗೆ ಸಿಕ್ಕಿದ
ಮುಗ್ಧ ಭಾವನೆಗಳನ್ನು ..
ಹಿಂಸಿಸಬಾರದು.... ನೋಯಿಸಬಾರದು...
ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."
ಅಜ್ಜನಿಗೆ ಮಾತು ಮುಂದುವರೆಸಲಾಗಲ್ಲಿಲ್ಲ...
ಕನ್ನಡಕ ಮಂಜು ಮಂಜಾಗಿತ್ತು....
ಮೊಮ್ಮಕ್ಕಳಿಗೆ ಮಹಾಭಾರತದ ಕಥೆ ಹೇಳುತ್ತಿದ್ದ...
ಯುದ್ಧ ಪರ್ವದ ಕೊನೆಯ ಭಾಗ ಅದಾಗಿತ್ತು...
"ಧುರ್ಯೋಧನ ಯುದ್ಧದಲ್ಲಿ ತನ್ನವರೆನ್ನೆಲ್ಲ ಕಳೆದುಕೊಂಡು..
ಪಾಂಡವರಿಗೆ ಹೆದರಿ...
ರಕ್ತ..
ಹೆಣದ ರಾಶಿಗಳ ಕುರುಕ್ಷೇತ್ರ ರಣರಂಗದಲ್ಲಿ ...
ಒಂಟಿಯಾಗಿ ಬರುತ್ತಿದ್ದ....
ಎಲ್ಲಿ ನೋಡಿದರೂ ಹೆಣಗಳ ರಾಶಿ....!
ತನ್ನ ಛಲದಿಂದಾಗಿ ...
ಎಷ್ಟೆಲ್ಲ ಅಮಾಯಕರು ಸತ್ತರು...!
ಎಷ್ಟೆಲ್ಲ ವಿಧವೆಯರು... ಮಕ್ಕಳು... ಅನಾಥರಾದರು..!... "
"ಇಲ್ಲಿ ಸತ್ತವರು...
ಜೀವ ಹೋಗುವ ಯಮ ಯಾತನೆಯಲ್ಲಿ ...
ನೋವಿನಲ್ಲಿ..
ನನ್ನನ್ನು ಶಪಿಸುತ್ತಾ ಸತ್ತಿರಬಹುದೇ ?..
ಪ್ರತಿಯೊಂದು ಹೆಣದ ಕಣ್ಣುಗಳು ತನ್ನನ್ನೇ ದಿಟ್ಟಿಸಿ ನೋಡುತ್ತಿವೆ..
ಭರ್ಚಿಯಿಂದ ಇರಿಯುತ್ತಿವೆ...
ಅಯ್ಯೋ ದೇವರೇ...
ಹೇಗೆ ಎದುರಿಸಲಿ ಈ ನೋಟಗಳನ್ನು ?"
ಧುರ್ಯೋಧನ ಕೊರಗಿದ...
ಮಮ್ಮಲ ಮರುಗಿದ...
ಅಜ್ಜ ...
ತನ್ನ ಕನ್ನಡಕವನ್ನು ಸರಿ ಪಡಿಸಿಕೊಂಡು ...
ಮತ್ತೆ ಮುಂದುವರೆಸಿದ...
"ಮುಂದೆ ಹೋಗುವಾಗ ...
ಕಾಲಿಗೆ ಒಂದು ಹೆಣ ತಾಗಿ ...
ಧುರ್ಯೋಧನ ಬೀಳುವಂತಾದ...
ನೋಡುತ್ತಾನೆ ...!
ಅದು ಅವನ ತಮ್ಮನ ಹೆಣ!!
ತನ್ನ ಬದುಕಿನ ಸ್ವಾರ್ಥ .. ಆಸೆಗಳಿಗೆ ..
ತನ್ನ ತಮ್ಮ ಶವವಾಗಿದ್ದಾನೆ... !
ಅನತಿ ದೂರದಲ್ಲಿ ವೀರ ಅಭಿಮನ್ಯುವಿನ ಹೆಣ....!
ಉಂಡು..
ತಿಂದು.. ತುಂಟಾಟವಾಡಿ ..
ಬೆಳೆಯುವ ಪುಟ್ಟ ಕಂದ...
ತನ್ನ ಛಲದಿಂದಾಗಿ ಹೆಣವಾಗಿದ್ದಾನೆ.. !...
ಎಲ್ಲ ಕಡೆ..
ರಕ್ತ ಪಿಪಾಸು ರಣ ಹದ್ದುಗಳ ಹಾರಾಟ.. !
ಕಾಡು ಪ್ರಾಣಿಗಳ ಕೇಕೆ.... !!
ಎತ್ತ ನೋಡಿದರೂ.... ತನ್ನ ಬಂಧುಗಳ ಹೆಣಗಳ ರಾಶಿ.... !
ಅಯ್ಯೋ ದೇವರೆ.... !!
ಧುರ್ಯೋಧನ ವಿಲವಿಲ ಒದ್ದಾಡಿದ ....
ತಾನು ಪಾಪಿ... !
ಹೆಣಗಳ ರಾಶಿಯಲ್ಲಿ ಜೋರಾಗಿ ಚೀರಿದ.. .. !
ರೋಧಿಸಿದ.....!
ಎದೆ..
ಎದೆ ಬಡಿದುಕೊಂಡ.... !"
ಅಜ್ಜ ಕಥೆಯನ್ನು ನಿಲ್ಲಿಸಿ ಮಕ್ಕಳ ಕಡೆ ನೋಡಿದ...
"ಮಕ್ಕಳೆ...
ಇಲ್ಲಿ ಕುರುಕ್ಷೇತ್ರ....
ಹೆಣಗಳು..
ಶವಗಳ ರಾಶಿ ... ಅಂದರೆ ಏನು ಗೊತ್ತಾ ?... "
ಮಕ್ಕಳಿಗೆ ಅರ್ಥವಾಗಲಿಲ್ಲ...
"ನೀನೆ ಬಿಡಿಸಿ ಹೇಳು ಅಜ್ಜಾ..."
"ಭಾವನೆಗಳು...
ಪ್ರೀತಿ...ಪ್ರೇಮ...
ನಮ್ಮ ಬಾಂಧವ್ಯಗಳು.. ...
ಕುರುಕ್ಷೇತ್ರವೆಂದರೆ...
ಸ್ವಾರ್ಥದ.. ಸೊಕ್ಕಿನ... ನಮ್ಮ ಪಾಪದ ಬದುಕು....
ಧುರ್ಯೋಧನ ಬದುಕಿರುವಾಗ ....
ಬಹಳಷ್ಟು ಜನರ ಭಾವನೆಗಳಿಗೆ ಹಿಂಸಿಸಿದ...
ನೋಯಿಸಿದ..!
ಪಾಂಡವರನ್ನು ಅರಗಿನ ಮನೆಯಲ್ಲಿಟ್ಟು...
ಬೆಂಕಿ ಇಡುವಾಗ.....
ತನ್ನ ಮಕ್ಕಳ ಬಗೆಗೆ ತಾಯಿ ಕುಂತಿದೇವಿ ...
ಎಷ್ಟು ಆತಂಕ ಪಟ್ಟಿರ ಬಹುದು...?
ರಾಜಕುಮಾರರಾಗಿದ್ದ ಪಾಂಡವರನ್ನು ...
ಕಪಟ ಜೂಜಿನಲ್ಲಿ ಸೋಲಿಸಿ..
ವನವಾಸಕ್ಕೆ ಅಟ್ಟಿದಾಗ..
ಪಾಂಡವರ ಹೃದಯ ಎಷ್ಟು ನೊಂದಿರಬಹುದು..?
ಆತಂತ್ರ ಬದುಕಿನ ಆತಂಕ ಎಷ್ಟು ಕಾಡಿರಬಹುದು ?..
ಮಾನವೇ ಭೂಷಣವೆಂದು ನಂಬಿರುವ ...
ಸಾಧ್ವಿ ದ್ರೌಪದಿಯು ..
ತುಂಬಿದ ಸಭೆಯಲ್ಲಿ ಬೆತ್ತಲಾಗುವಾಗ ..
ಎಷ್ಟು ರೋಧಿಸಿರಬಹುದು ?.. ...
ನೊಂದವರ...
ನಮ್ಮಿಂದಾಗಿ ಅತ್ತವರ ...
ಶಾಪ ನಮ್ಮನ್ನು ಕಾಡದೇ ಬಿಡುವದಿಲ್ಲ...."
ಮಕ್ಕಳು ಸುಮ್ಮನಿದ್ದರು...
"ಮಕ್ಕಳೆ..
ಬದುಕಿನಲ್ಲಿ ನಮ್ಮ ಬಂಧುಗಳ..
ಪ್ರೀತಿಸಿದವರ..
ನಮ್ಮವರ ಭಾವನೆಗಳನ್ನು ಪ್ರೀತಿಸಬೇಕು ...
ಇಲ್ಲವಾದಲ್ಲಿ...
ನಮ್ಮ ವೃದ್ಧಾಪ್ಯದ ಕುರುಕ್ಷೇತ್ರದ ರಣರಂಗದಲ್ಲಿ..
ಒಂಟಿಯಾಗಿ ಸಾಗುವಾಗ..
ನಾವು ಕೊಂದ ಭಾವನೆಗಳ ಹೆಣ ..
ನಮ್ಮ ಕಾಲಿಗೇ .. ಎಡವುತ್ತದೆ ...
ನಮ್ಮ ಜೀವ ಹಿಂಡುತ್ತದೆ ....
ನಾನು... ನನ್ನದು...
ನನಗೆ ಮಾತ್ರ ಎನ್ನುವ ಭಾವರಹಿತ ಬದುಕಿಗೆ...
ಪ್ರತಿಯೊಬ್ಬರೂ..
ಅವರವರ ಬದುಕಿನ ಕುರುಕ್ಷೇತ್ರದಲ್ಲಿ ...
ಉತ್ತರ ಕೊಡುವ ಸಂದರ್ಭ ಬಂದೇ ಬರುತ್ತದೆ...
ಎಲ್ಲೋ ಒಂದು ಕಡೆ ..
ಒಬ್ಬಂಟಿಯಾದಾಗ.. ..
ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ...
ಯಾರಾದರೂ ಬೇಕು ಎಂದಾಗ
ಬಂಧುಗಳ ..
ಭಾವನೆಗಳನ್ನು ಕೊಂದ ಧುರ್ಯೋಧನ ನಾವಾಗಬೇಕಾಗುತ್ತದೆ...!
ಒಬ್ಬಂಟಿಯಾಗಿಯೇ.. ರೋಧಿಸಬೇಕಾಗುತ್ತದೆ...
ಸಹಜ ಬದುಕಿನಲ್ಲಿ ಸಿಗುವ .. ಬಾಂಧವ್ಯಗಳು...
ಬಂಧುಗಳು...
ಭಾವನೆ ..
ಪ್ರೀತಿ.. ಪ್ರೇಮಗಳು ನಮಗೆ ಬೇಕು ಎನ್ನುವಾಗ ಸಿಗುವದಿಲ್ಲ...
ನಮಗೆ ಸಿಕ್ಕಿದ
ಮುಗ್ಧ ಭಾವನೆಗಳನ್ನು ..
ಹಿಂಸಿಸಬಾರದು.... ನೋಯಿಸಬಾರದು...
ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."
ಅಜ್ಜನಿಗೆ ಮಾತು ಮುಂದುವರೆಸಲಾಗಲ್ಲಿಲ್ಲ...
ಕನ್ನಡಕ ಮಂಜು ಮಂಜಾಗಿತ್ತು....
34 comments:
ನಮಗೆ ಸಿಕ್ಕಿದ
ಭಾವನೆಗಳನ್ನು
ಹಿಂಸಿಸಬಾರದು.... ನೋಯಿಸಬಾರದು...
ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."
ನಿಜ ...
ಜೀವನದಲ್ಲಿ ಹಣ ಸಂಪಾದನೆ ಬಹಳ ಸುಲಭ ಯಾವ ಮಾರ್ಗದಲ್ಲಾದರೂ ಸರಿ. ಆದರೆ ಇನ್ನೊಬ್ಬರ ಪ್ರೀತಿ , ವಿಶ್ವಾಸ , ನಂಬಿಕೆ , ಭಾವನೆಗಳ ಸಂಪಾದನೆ ಬಹಳ ಕಷ್ಟ. ಅದಕ್ಕಿರುವುದು ರಾಜ ಮಾರ್ಗ ಮಾತ್ರ. ಅಡ್ಡ ದಾರಿಯಲ್ಲಿ ಹಣ ಸಂಪಾದಿಸಬಹುದು ಆದ್ರೆ ನಂಬಿಕೆ, ವಿಶ್ವಾಸ, ಪ್ರೀತಿಯನ್ನ ಸಂಪಾದಿಸಲು ಸಾಧ್ಯವೇ ಇಲ್ಲ.
ಇವೆಲ್ಲ ಎಷ್ಟು ಅಮೂಲ್ಯವಾದವೆಂದರೆ ಒಮ್ಮೆ ಕಳೆದುಕೊಂಡರೆ ಮತ್ತೆ ದಕ್ಕಿಸಿಕೊಳ್ಳಲೂ ಸಾದ್ಯವಿಲ್ಲ...
ಪ್ರೀತಿ ಹಂಚಿ ಪ್ರೀತಿ ಪಡೆದುಕೊಳ್ಳುವ ಬದುಕು ಸುಂದರ ಅಲ್ಲವಾ ...
ತುಂಬಾ ಚೆನ್ನಾಗಿದ್ದು...
ಸಂಧ್ಯಾ ಪುಟ್ಟಿ...
ಯಾಕೋ ಇತ್ತೀಚೆಗೆ ನಮ್ಮಲ್ಲಿ ಭಾವನೆಗಳು ಕಡಿಮೆಯಾಗಿಬಿಟ್ಟಿವೆ ಅಂತ ಅನ್ನಿಸುತ್ತಿದೆ..
ನಾನು..
ನನ್ನದು ...
ನನಗೆ ಮಾತ್ರ ಎನ್ನುವ ಭರದಲ್ಲಿ ದಾರಿ ತಪ್ಪುತ್ತಿವೆಯಾ ನಮ್ಮ ಸಂಸ್ಕಾರಗಳು ?
ಹಣಕ್ಕೆ ಕೊಡುವ ಪ್ರಾಮುಖ್ಯತೆ ಜಾಸ್ತಿ ಆಯಿತಾ ?
ನೋಯಿಸಿ...
ನಲಿವು ಪಡೆವುದು ಬಲು ಕಷ್ಟ....
ಅಜ್ಜನ ಕುರುಕ್ಷೇತ್ರ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
Super!!
ಪ್ರೀತಿ, ಪ್ರೇಮ, ವಿಶ್ವಾಸ ಇವೆಲ್ಲ ಅಡ್ಡಾಡುತ್ತ ಅಲೆವಾಗ ಎಲ್ಲರ ಬಳಿಯೂ ಬರುತ್ತದೆ .. ಆದರಿಸಿ ಮನದ ಒಳಗೆ ಜಾಗವಿತ್ತಾಗ ಅರಿಷಡ್ವರ್ಗಗಳು ತಮಗಿನ್ನು ಇಲ್ಲಿ ಕೆಲಸವಿಲ್ಲಾ ಎಂದು ಜಾಗ ಖಾಲಿ ಮಾಡುತ್ತವೆ..ಆದರೆ ದೇಹದ ಸುತ್ತಲೇ ಸುತ್ತುತ್ತಿರುತ್ತದೆ.. ಒಮ್ಮೆ ಪ್ರೀತಿ ಪ್ರೇಮ ವಿಶ್ವಾಸಗಳ ನಡುವೆ ಕೂದಲೆಳೆಯಷ್ಟು ಅಪನಂಬಿಕೆ ಬಂದರೂ ಈ ಅರಿಷಡ್ವರ್ಗಗಳಿಗೆ ಒಳಗೆ ದಾಳಿ ಮಾಡಲು ಅನುವುಮಾಡಿಕೊಡುತ್ತದೆ. ಸೈಂಧವನಿಗೆ (ಜಯದ್ರಥ) ಒಂದು ದಿನ ಅರ್ಜುನನಿಲ್ಲದ ಪಾಂಡವರನ್ನು ತಡೆಗಟ್ಟಲು, ಸೋಲಿಸಲು ವರವಿರುತ್ತದೆ. ಹಾಗೆಯೇ ನಮಗೂ ಕೂಡ ಈ ಅರಿಷಡ್ವರ್ಗಗಳನ್ನೂ ತಡೆದು ಹೆಪ್ಪುಗಟ್ಟಿಸಲು ಶಕ್ತಿ ವರ ಇರುತ್ತದೆ.. ಮನದ ಚಕ್ರವ್ಯೂಹದಲ್ಲಿ ಈ ಶತ್ರುಗಳನ್ನು ತಡೆಯಲು ನಮಗೆ ಸೈಂಧವನ ವರ ಅಥವಾ ಶಕ್ತಿ ಬೇಡ... ನಮ್ಮ ಸುತ್ತಾ ಸಿಗುವ ಇರುವ ಪ್ರೀತಿಯ ತಂಗಾಳಿ ಸಾಕು. ಸುಂದರ ಲೇಖನ ಪ್ರಕಾಶಣ್ಣ.. ಮಹಾಭಾರತ ಒಂದು ಸಮುದ್ರದಂತೆ ಹೆಕ್ಕಿದಷ್ಟು ಇಂತಹ ಮುತ್ತಿನ ನುಡಿಗಳು, ಸಂದೇಶಗಳು ಬರುತ್ತಲೇ ಇರುತ್ತವೆ. ಸೂಪರ್ ಲೇಖನ.
ಸಂತೋಶ್ ಕುಮಾರರವರೆ..
ಹಿಂದೆ ಮಾಡಿದ ಫಲಗಳ ನಮ್ಮ ಬದುಕೂ ಕೂಡ ಒಂದು ಕುರುಕ್ಷೇತ್ರ...
ನಾವು
ನೋಯಿಸಿದ ..
ಸಾಯಿಸಿದ ಭಾವನೆಗಳ ಹೆಣ ..
ನಮ್ಮ ಕಾಲಿಗೆ ಎಡತಾಗಲೇ ಬೇಕು...
ಕಾಲಿಗೆ ತಾಗುತ್ತದೆ..
ಬದುಕಿನ ಕುರುಕ್ಷೇತ್ರದಲ್ಲಿ ಒಂದಲ್ಲ ಒಂದು ದಿನ ನಾವು ಉತ್ತರ ಕೊಡಲೇ ಬೇಕಾಗುತ್ತದೆ...
ಭಾವನೆ..
ಪ್ರೀತಿ..
ಪ್ರೇಮಗಳ..
ಬಾಂಧವ್ಯಗಳ ಹೆಣಗಳ ರಾಶಿಗಳ ಮಧ್ಯೆ ನಾವು ರೋಧಿಸುವ ಸಂದರ್ಭ ಬಂದೇ ಬರುತ್ತದೆ...
ಅಜ್ಜನ ಕುರುಕ್ಷೇತ್ರ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ತುಂಬಾ ಇಷ್ಟವಾದ ಲೇಖನ ಇದು
ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...
ತಟ್ಟಿದ ಮಾತು.
ನೀವು ಹೇಳಿದ ಕಥೆ ಮನಸಿನಲ್ಲಿ ಉಳಿಯುತ್ತದೆ
nannna ಕನ್ನಡಕ ಮಂಜು ಮಂಜಾಗಿತ್ತು.... annaya :) super
ಅಜ್ಜಂದಿರ ಕಣ್ಣುಗಳು ಒದ್ದೆಯಾಗಿವೆ. ಮಂಜಾಗಿವೆ. ಕತೆ ಕೇಳುವ ಮೊಮ್ಮಕ್ಕಳು ಬಳಿಗಿಲ್ಲ. ಅವರನ್ನು ಒಂದೇ ಕೂರಿಸಿಕೊಂಡು ಕತೆ ಹೇಳಬೇಕೆಂದರೆ ಅವಕ್ಕೆ ಇಂಥದೆಲ್ಲ ಬೇಕಿಲ್ಲ. ಅವರ ಅಪ್ಪ-ಅಮ್ಮನಿಗೆ ಇಂಥ ಕತೆ ಹೇಳುತ್ತಾ ಕೂಡುವಷ್ಟು ವ್ಯವಧಾನವಿಲ್ಲ.
ಅವರ ದಾರಿಯೇ ಬೇರೆ. ಮಕ್ಕಳು ಟೀವಿ ನೋಡುತ್ತವೆ. ಛೋಟಾ ಭೀಮ್ ! ಕಣ್ಣು ಪಿಳುಕಿಸದೆ ಬರೀ ನೋಡುತ್ತವೆ. ಕತೆಗೊಂದು ನೀತಿ ಇದೆ ಎಂದು ಟೀವಿ ಹೇಳುವುದಿಲ್ಲ. ಪಾಠ ಕಲಿಯಬೇಕೆಂದು ಅವಕ್ಕೆ ಗೊತ್ತಾಗುವುದಿಲ್ಲ. ಪಾಪ... ಅವಕ್ಕೆ ದಾರಿ ಕಾಣದ ಬದುಕು ಚಾಚಿಕೊಂಡಿದೆ.
ಇದನ್ನೆಲ್ಲಾ ಓದುವಾಗ, ಯೊಚಿಸುವಾಗ ನನ್ನ ಕಣ್ಣು ಮಂಜಾಗುತ್ತವೆ.
ಬದುಕಿನ ರಣರಂಗದಲ್ಲಿ ಸಂಬಂಧಗಳ ಹೆಣಗಳು... ನಿಮ್ಮ ಕಥೆಗಾರಿಕೆಗೆ ಮತ್ತೆ ಶರಣು.
ಪ್ರಕಾಶಣ್ಣ,
ಮನುಷ್ಯ ತುಂಬಾ ವ್ಯಾವಹಾರಿಕವಾಗುತ್ತಿದ್ದಾನೆ ನಿಜ.... ಅದಕ್ಕೆ ತುಂಬಾ ಉದಾಹರಣೆಯೂ ಸಿಗಬಹುದು.... ಅದಕ್ಕೆ ನಮ್ಮ ಸುತ್ತಮುತ್ತಲ ವಾತಾವರಣವೇ ಕಾರಣ.... ಇದೆಲ್ಲಾ... ಸ್ವಲ್ಪ ದಿನ ಅನಿಸತ್ತೆ..... ದೇವರು , ಒಂದು ಕಡೆ ಬೆಳೆಸುತ್ತಾನೆ...ಇನ್ನೊಂದೆಡೆ ಅಳಿಸುತ್ತಾ ಬರುತ್ತಾನೆ... ಆತನೇ ತಕ್ಕಡಿ ಹಿಡಿದಿರುತ್ತಾನೆ....ಹಾಗಾಗಿ ಚಿಂತೆ ಮಾಡುವ ಅವಶ್ಯಕಥೆ ಇಲ್ಲ..... ಚಿಂತನೆಗೆ ಹಚ್ಚಿದ ಬರಹ....
supper sir.......
ಪ್ರೀತಿಯ ಶ್ರೀ...
ಮಹಾಭಾರತ ಎನ್ನುವ ಗ್ರಂಥವೇ ಹಾಗಿದೆ.... !
ಇದೊಂದು ಕಾದಂಬರಿ ಅಂತ ಓದಿದಾಗಲೂ..
ಪ್ರತಿ ಬಾರಿಯೂ ಹೊಸ ಹೊಸ ರುಚಿ ಸಿಗುತ್ತದೆ...
ನಿಜಕ್ಕೂ ಅದ್ಭುತ ವಿಷಯಗಳ ಸರಮಾಲೆ ಇದು !
ನಮ್ಮ ಬದುಕಿನ ಪ್ರತಿ ಸಮಸ್ಯೆಗಳ ..
ಸಂದಿಗ್ಧಗಳಿಗೆ ಇಲ್ಲಿದೆ ಪರಿಹಾರ...
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ,
ಮತ್ತೆ ಮತ್ತೆ ಓದಿದೆ.. ಮನಸಿಗ್ಯಾಕೋ ಹತ್ತಿರವಾಯ್ತು..
ಎಲ್ಲೋ ಒಂದು ಕಡೆ ..
ಒಬ್ಬಂಟಿಯಾದಾಗ.. ..
ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ...
ಯಾರಾದರೂ ಬೇಕು ಎಂದಾಗ
ಒಂಟಿ ಧುರ್ಯೋಧನ ನಾವಾಗಬೇಕಾಗುತ್ತದೆ..
ಅಕ್ಷರಶಃ ನಿಜ..ಆಸ್ತಿ, ಅಂತಸ್ತಿಗಂತ ಪ್ರೀತಿ, ವಿಶ್ವಾಸ ಮುಖ್ಯ... ಮುದೊಂದು ದಿನ ಸೋತಾಗ, ನಮ್ಮಲ್ಲಿ ನಂಬಿಕೆ ಉಳ್ಳವರು ಕೆಲವರಷ್ಟೇ ಇರ್ತಾರೆ..ಅದರಲ್ಲಿ ನಾವೂ ಒಬ್ಬರಾಗಿರ್ತೀವಿ..ಕೆಲವೊಮ್ಮೆ ನಾವೊಬ್ಬರೇ ಆಗಿರ್ತೀವಿ ಅಲ್ವಾ?
ಸುಂದರ ಬರಹ, ಇಷ್ಟವಾಯ್ತು..
ಪ್ರಕಾಶ್ ಜೀ,
ಎಚ್ಚರಿಕೆಯ ಘ೦ಟೆಯ೦ತಿದೆ... ಲೇಖನ ತು೦ಬಾ ಇಷ್ಟವಾಯ್ತು....
ಮಾನವೀಯತೆ ಮೆರೆವ ಮೌಲ್ಯಗಳು ಅಲ್ಲಲ್ಲಿ ಕಳಚಿ ಹೋಗಿವೆ.... ಮತ್ತೊಮ್ಮೆ ಅವುಗಳನ್ನ ಹಿಡಿದಿಡುವುದು ಹೇಗೋ!!?
"ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು" ಅಕ್ಷರ ಸಹ ನಿಜ..... ಇದೊ೦ದು ಅರಿವು, ಪಾಠ...
"ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು".ಪ್ರೀತಿ ಪ್ರೇಮಗಳು ಪೋಷಿಸದೆ ಕಮರಬಾರದು.ಅದ್ಭುತ ಪಾಠ!!! ಮಕ್ಕಳಿಗೆ ಶಾಲೆಯಲ್ಲಿ ಇಂತಹ ಪಾಠಗಳು ಇರಬೇಕು.ಸೂಪರ್ ಪ್ರಕಾಶಣ್ಣ.ಜೈ ಹೋ !!!!
ಕುರುಕ್ಷೇತ್ರ.... ಹೆಣಗಳು.. ಶವಗಳ ರಾಶಿ ... ಗಳನ್ನು ಭಾವನೆಗಳು...
ಪ್ರೀತಿ...ಪ್ರೇಮ...
ನಮ್ಮ ಬಾಂಧವ್ಯಗಳಿಗೆ ಸಮೀಕರಿಸಿದ ರೀತಿ ಸರಿಯಾಗಿದೆ.
ಪರಸ್ಪರ ಗೌರವಿಸುವ ಹಾಗಾದಾಗ ಮಾತ್ರ ನಮಗೂ ಗೌರವ ಸಿಗಬಲ್ಲದು. ಇನ್ನೊಬ್ಬರ ಅಳಲಿಗೆ ಕಿವಿಯಾಗಿ, ಸಾಂತ್ವನವನ್ನು ಹೇಳಿದರೆ ಮಾತ್ರ ನಮ್ಮ ನೋವಿಗೂ ಒಂದು ಕಿವಿ ತೆರೆದುಕೊಳ್ಳುತ್ತದೆ ಎಂದು ನೀವು ವಿವರಿಸಿದ ರೀತಿ ಮನಸ್ಸಿಗೆ ನಾಟಿತು ಸಾರ್.
ಮುಖ್ಯವಾಗಿ "ನಮ್ಮನ್ನು ಪ್ರೀತಿಸುವ ಪ್ರೀತಿಯನ್ನು ಸಾಯಿಸಬಾರದು...."
ಮಹೇಶ್ ಗೌಡರ ಮಾತು ನನಗೂ ಅನ್ವಯಿಸುತ್ತದೆ ಸಾರ್.
Sathya sundara
ಪ್ರೀತಿಯ ದಿಗ್ವಾಸು...
ಸಂಬಂಧಗಳನ್ನು...
ಬಾಂಧವ್ಯಗಳನ್ನು..
ಸ್ನೇಹ..
ಪ್ರೀತಿ.. ಪ್ರೇಮಗಳನ್ನು ಹೇಗೆ ಅಷ್ಟು ಸುಲಭವಾಗಿ ಕಾಲಲ್ಲಿ ಹೊಸಕಿ ಹೋಗಿಬಿಡುತ್ತಾರೆ ಅಂತ ?
ಭಾವನೆಗಳನ್ನು ಕೊಲ್ಲುವವರು ಧುರ್ಯೋಧನನ ಹಾಗೆ ಒಂಟಿಯಾಗಿಬಿಡುತ್ತಾರೆ..
ತಮ್ಮ ಕುರುಕ್ಷೇತ್ರದಲ್ಲಿ...
ತಾವೆ ಸಾಯಿಸಿದ ಭಾವನೆಗಳ ಹೆಣಗಳ ರಾಶಿಯಲ್ಲಿ ಕುಳಿತು ರೋಧಿಸಬೇಕಾಗಿ ಬಂದೇ ಬರುತ್ತದೆ..
ಈ ಲೇಖನಕ್ಕೆ ಬಹಳಷ್ಟು ಮೆಚ್ಚುಗೆ ಸಿಕ್ಕಿದೆ..
ನಿನ್ನೆ ಒಂದೇ ದಿನಕ್ಕೆ ೫೦೦ಕ್ಕೂ ಹೆಚ್ಚು ಓದುಗರು ಬಂದು ನೋಡಿದ್ದಾರೆ.. !!...!
" ಪ್ರತಿಯೊಬ್ಬರ ಭಾವನೆಗಳಿಗೂ ಯಾವಾಗಲೋ ಗಾಯವಾಗಿಬಿಟ್ಟಿರುತ್ತದೆ..
ಹಾಗಾಗಿ ಇಷ್ಟವಾಗಿದೆ..." ನನ್ನ ಮಡದಿಯ ಉವಾಚ ಇದು...
ಬಹಳಷ್ಟು ಬಾರಿ ಅನ್ನಿಸಿದ್ದಿದೆ..
"ಭಾವುಕರು ಹುಚ್ಚರೆ..?
ನಿರ್ಬಾವುಕರೆ ಈ ಜಾಅಗತ್ತಿನಲ್ಲಿ ಬದುಕಲು ಯೋಗ್ಯರು".. ಅಂತ...
ಅಜ್ಜನ ಕುರುಕ್ಷೇತ್ರ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಪ್ರಕಾಶಣ್ಣ,
ನಮ್ಮ ಪುರಾಣ ಕಥೆಗಳನ್ನು ವಿಶ್ಲೇಷಿಸುತ್ತಾ ನಮ್ಮ ಪ್ರಸಕ್ತ ಜೀವನಕ್ಕೆ ಹೋಲಿಸಿಕೊಂಡಾಗ ಉತ್ತರ ಅಲ್ಲೇ ಸಿಗುತ್ತೆ.
ಈಗತಾನೆ ದೇವದತ್ ಪಟ್ಟನಾಯಕರ ಲೇಖನ ಓದುತಿದ್ದೆ,ನೀನೂ ಓದು! ತಿಳಿಕೊಳ್ಳುವುದು ಬಹಳಷ್ಟಿದೆ.
Go to google, type devdutt pattnaik,
you get his web.
ರಾಶಿ ಚಂದಾಯ್ದು ಪ್ರಕಾಶಣ್ಣ. ಎಂಥವರ ಮನಸ್ಸಿಗಾದರೂ ನಾಟುವ ಬರಹ :)
very meaningful article..here dhuryodhana is a man of hatred, is voilent,jealousy,aggessive and is notorious for his criminal activities.Finally he cried, got tears,perhaps he had confessed his crime, he might have been realised the value of love and life.He got nothing but tears and lonelyness. u have put a good lesson 'do respect and love others feeling'..i think u want to reveal the truth that' if you want to live happily you allow others to live happily,if u want love you give love..whatever u give they will knock your door.
ನಿಜ ಪ್ರಕಾಶಣ್ಣಾ.... ಪರಿವರ್ತನೆ ಆಗುತ್ತಾ ಆಗುತ್ತಾ ಬದುಕು ಎಲ್ಲಿಯವರೆಗೆ ಮುಟ್ಟಬಹುದು.....
ಎಲ್ಲದ್ದಕ್ಕೂ ಒಂದು ಅಂತಿಮ ಅನ್ನೋದು ಇರುತ್ತದಲ್ಲಾ......
ಸಿಟ್ಟಿನಲ್ಲಿ.. ಹಣದ ಮತ್ತಿನಲ್ಲಿ ಪ್ರೀತಿಗಳು ಲೆಕ್ಕಕ್ಕಿಲ್ಲ ಪ್ರಕಾಶಣ್ಣಾ.... ಅಲ್ಲೂ ಪ್ರೀತಿ ಇದೆ ಎಂದರೆ... ಶತ್ರುವಿನ ಶತ್ರು ನನ್ನ ಮಿತ್ರ ಎನ್ನುವ ಲೆಕ್ಕದಲ್ಲಿ ಮಾತ್ರ.....
ಕಥೆ ಹೇಳಿದ ಅಜ್ಜನ ಕಣ್ಣೀರಿಗೆ ಏನು ಅರ್ಥಗಳಿದ್ದವೋ....
ಬದುಕಿನ ಲೆಕ್ಕಾಚಾರದಲ್ಲಿ ದಕ್ಕಿದ್ದೆಷ್ಟೋ... ಬಿಟ್ಟಿದ್ದೆಷ್ಟೋ.....
ತುಂಬಾ ಖುಷಿಯೆನಿಸಿತು.....
ಬದುಕಿನ ಅರ್ಥ ಆ ಅಜ್ಜನಿಗೆ ತಿಳಿದಿದೆ. ಇದು ನಮಗೆಲ್ಲರಿಗೂ ಹೊಳೆದರೆ, ಬಾಳು ಹಸನಾದೀತು!
Author has brought about his Message very lucidly and effectively with Maturity of Understanding DURYODHANA, the Character in close relation to our Day to Day life. What really stands out his Commitment to Convey and Simplicity of Narration, spread over the fluid blend of WORDS, leading to TOUCH the HEART of the READER straightaway….MAHABHARATHA is MAHA, in the words of Ved Vyas..”YATTEHASTI TADANYATRA, YANNEHASTI NA TAT QUACHIT!”…” Jo Iss Duniyan Me Hai, Voh Sab Iss Granth Me Hai, Jo Iss Granth Me Naheen Hai, Iss Duniyan Me Naheen Hai…for that reason, MAHABHARATHA stood the Test of TIME, being Universal, with Ultimate Characters…!!!!
ನಮ್ಮ ಬದುಕಿಗೆ ತೀರ ಹತ್ತಿರವಾದದ್ದು ಮಹಾಭಾರತ..ಅದರಲ್ಲೂ ಸುಯೋಧನ
ನಮ್ಮೆಲ್ಲ ಆಸೆ, ಆಕಾಂಕ್ಶೆಗಳ ಪ್ರತಿನಿಧಿ ನಮಗೆ ಗೊತ್ತಿಲ್ಲದೆಯೇ ಅನೇಕಸಲ
ಅವನನ್ನು ಅನುಕರಿಸಿ ನಾವು"ದುರ್ಯೋಧನ"ರಾಗಿದ್ದೇವೆ..ಈ ದಾರಿ ತುಳಿದಾಗ
ಆಗಬಹುದಾದ ಪರಿಣಾಮ ಎನು ಇದು ಅವನಿಗೂ ಗೊತ್ತಿತ್ತು ಆದ್ರೆ ಅವನ ಹಟದ ಮುಂದೆ ಅವನ ದನಿ
ಹೊರಬರಲೇ ಇಲ್ಲ.
ಪ್ರೀತಿಯ "ಸ್ವರ್ಣಾ" ರವರೆ...
ಒಬ್ಬರು ಮಹಿಳೆ ಫೋನ್ ಮಾಡಿದ್ದರು..
"ನಿಮ್ಮ ಬಳಿ ಮಾತಾಡುವಾಗ ಅಳಬಾರದು ಎಂದು ನಿರ್ಧಾರ ಮಾಡಿದ್ದೇನೆ.."
ನನಗೆ ಆಶ್ಚರ್ಯವಾಯಿತು..
" ನೀವು ಬರೆದ ಲೇಖನ ಓದಿದೆ..
ಪರಿಚಯದವರೊಬ್ಬರಿಂದಾಗಿ ಅದನ್ನು ಓದಿದೆ..
ಇದನ್ನು ಹೇಗಾದರೂ ಮಾಡಿ ನನ್ನ ಮಗನಿಗೆ ದಯವಿಟ್ಟು ಓದಿಸಿ...
ಅವನು ಸಾಫ್ಟವೇರ್ ಇಂಜನೀಯರ್..."
" ಏನಾಯ್ತು...?"
"ಮದುವೆಯಾದ ಮೇಲೆ ..
ನನ್ನ ಮಗ ನನ್ನನ್ನು ಬಿಟ್ಟುಬಿಟ್ಟಿದ್ದಾನೆ...
ಸಂಬಂಧವನ್ನು ಕಡಿದುಕೊಂಡು ಹೋಗಿಬಿಟ್ಟಿದ್ದಾನೆ...
ಅಪ್ಪನಿಲ್ಲದ ಅವನನ್ನು...
ತುಂಬಾ ಪ್ರೀತಿ ಮಾಡಿ ಸಾಕಿದ್ದೇನೆ.....
ಅವನಿಲ್ಲದೆ ನಾನು ಹೇಗೆ ಬದುಕಲಿ?"
ಅವರಿಗೆ ಮಾತನಾಡಲಾಗಲಿಲ್ಲ...
ನನಗೂ ಬಹಳ ಕಷ್ಟವಾಯಿತು...
ಈ ಲೇಖನ ಅವರಿಗೆ ಸಮಾಧಾನ ಕೊಟ್ಟಿತೊ.. ಅಥವಾ ಒಳಗಿರುವ ದುಃಖವನ್ನು ಮತ್ತೆ ಕೆದಕಿತೊ ಗೊತ್ತಾಗಲಿಲ್ಲ...
ಅವರು ತಮ್ಮ ದುಃಖವನ್ನು ಹೇಳಿಕೊಂಡರು..
ಮಗನ ಬಗೆಗೆ ಅತ್ತರು..
ಆದರೆ..
ನನಗೆ ಲೇಖನ ಬರೆದಿದ್ದಕ್ಕೆ ಸಾರ್ಥಕ ಅನ್ನಿಸಿತು..
ಭಾವನೆಗಳನ್ನು ನಾವುಗಳೇ ನಾಶ ಮಾಡಿಕೊಳ್ಳುತ್ತಲಿದ್ದೇವೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋಲ್ಲ... ಒಬ್ಬ ಬದುಕಿದನೆಂದರೆ ಮತ್ತೊಬ್ಬ ಸಹಿಸೋಲ್ಲ... ಸಂಬಂಧಗಳಲ್ಲೂ ಹಾಗೆ ಯಾರೂ ಯಾರನ್ನೂ ಪ್ರೀತಿಸಿ ಗೌರವಿಸದಷ್ಟು ಮಟ್ಟಕ್ಕೆ ಬೆಳೆದುಬಿಟ್ಟಿದ್ದೀವಿ... ಎಲ್ಲವನ್ನು ಹಣದಲ್ಲೇ ತೂಗುವತ್ತ ನೆಡೆಯುತ್ತಲಿದ್ದೇವೆ ಎಂದೆನಿಸುತ್ತೆ.
Excellent 'literary' writing Prakashanna!
Hi Sir,
Neevu helodu nija..... anta Dhuryodhanaru tumba iddare......iddeve. Manasu kalakitu. I wish you can post this write up to all such Dhuryodhanas......some how. Kelavaradaroo badallagbahudeno. Please publish it in a news paper....you will make a huge difference!
Kusuma
tumbaaa chandiddu prakashanna. barahada aashayavee super.
ತುಂಬ ಅರ್ಥ ಗರ್ಭಿತ ಲೇಖನ ಪ್ರಕಾಶಣ್ಣ .... ಹೌದು ನಾವು ನೋವಿಸಿರುವ ಹಿಂಸಿಸಿ ಇರುವ ಭಾವನೆ, ಸಂಬಂದಾಗಲೇ ನಮ್ಮನ್ನು ಕಾದುವುದು... ತುಂಬ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು
Post a Comment