Tuesday, June 19, 2012

ನಾನು ನಮ್ಮನೆಯಲ್ಲಿ ...ಒಂದು ಹಳೆ ಹಾರ್ಮೋನಿಯಂ ಪೆಟ್ಟಿಗೆ... ಇಟ್ ಕೊಂಡಿದ್ದಿನಿ ..!



ನಮ್ಮ ಕ್ಲಾಸಿನಲ್ಲೊಬ್ಬ ಮಹಾ ಪುಣ್ಯಾತ್ಮನಿದ್ದ...


ನಾವೆಲ್ಲ ಅವನಿಗೆ ಬಹಳ ಪ್ರೀತಿಯಿಂದ "ಕಾಚಶ್ರೀ" ಅಂತ ಕರೀತಿದ್ವಿ...


ಆತ "ಲೈನಿಂಗ ಡಿಪಾರ್ಟಮೆಂಟಿನಲ್ಲಿ" ಬಹಳಷ್ಟು ಅನುಭವ ಸಂಪಾದಿಸಿದ್ದ..


ಆತ ಯಾವಾಗ್ಲೂ ಹುಡುಗಿಯರ ಹಿಂದೇನೆ ಸುತ್ತುತ್ತಿದ್ದ...
ಆ ಹುಡುಗಿಯರಿಗೂ ಅಷ್ಟೆ ಈತನೆಂದರೆ ಅಚ್ಚುಮೆಚ್ಚು.......


ಆತನನ್ನು ಕಂಡಕೂಡಲೇ ಹಲ್ಲುಕಿಸಿಯುತ್ತಿದ್ದರು..


ಆತನ ವೇಶ ಭೂಷಣಗಳೂ ಹಾಗೆ ಇರುತಿದ್ವು...


ನಮ್ಮ ನಾಗೂ ಅವನಿಂದ ನಮಗೆಲ್ಲ ಒಮ್ಮೆ "ಲೈನಿಂಗ್ " ಬಗೆಗೆ  ಟ್ರೇನಿಂಗ ಕೊಡಿಸಿದ್ದ..
ಅದು ನಮಗೆ ಒಗ್ಗಿ ಬರ್ಲಿಲ್ಲ ಅನ್ನಿ..


ಕಾಚಶ್ರೀ ಕಂಡರೆ ನಮಗೆಲ್ಲ ಒಳಗೊಳಗೆ ಬಹಳ ಹೊಟ್ಟೆಕಿಚ್ಚೂ ಇತ್ತು....
ಅವನ ಮೇಲೆ ಸೇಡು ತಿರಿಸ್ಕೊಲ್ಲಿಕ್ಕೆ ಸಮಯ ಕಾಯ್ತಾ ಇದ್ದಿದ್ವಿ....


ಅದು ಹೇಗೆ ಹುಡುಗಿಯರನ್ನು ಪಟಾಯಿಸುತ್ತಾನೆ ?


ನಾವು ಎಷ್ಟೇ ಡೀಸೆಂಟ್ ಆಗಿದ್ದರೂ ಹುಡುಗಿಯರು ನಮ್ಮತ್ತ ತಲೆ ಎತ್ತಿ ನೋಡುತ್ತಲೂ ಇರಲಿಲ್ಲ...


"ನೋಡ್ರೋ...
ಹುಡುಗೀಯರೆಂದರೆ ಒಂದು ಮಧುರ ಸಂಗೀತ...
ಅವರೊಂದು ಸಂಗೀತ ಸಾಧನ..


ಮಕ್ಕಳಿರಾ....
ಹುಡುಗೀಯರು " ಪಿಟಿಲು"  ಥರಹ..ಕಣ್ರೋ.. !


ಪಿಟಿಲು ನುಡಿಸುವದೊಂದು ಕಲೆ..."


ಅಂದಿನಿಂದ ಮುಂದೆ ಈತ "ಪಿಟಿಲು ಮಾಸ್ಟರ್" ..
ಅಂತ ಬಹಳ ಪ್ರಸಿದ್ಧಿ ಹೊಂದಿದ...


ಕಾಚಶ್ರೀ ಹೆಚ್ಚಾಗಿ ಕ್ಲಾಸಿಗೆ ಚಕ್ಕರ್ ಹಾಕ್ತಿದ್ದ..
ಪರೀಕ್ಷೆಗಳಲ್ಲಿ ಹಾಗೂ ಹೀಗೂ ಪಾಸಾಗುತ್ತಿದ್ದ..


ಒಮ್ಮೆ ಯಾರೋ ಉಪನ್ಯಾಸಕರು ರಜೆ ಹಾಕಿದರು....
ಆ ಕ್ಲಾಸಿಗೆ  ನಮ್ಮ ಪ್ರಿನ್ಸಿಪಾಲರು ಬಂದರು....


ಮೊದಲಿಗೆ ಹಾಜರಿ ತಗೊಳ್ಳುತ್ತಿದ್ದರು...


"ರೋಲ್ ನಂಬರ್ ಇಪ್ಪತ್ತೆಂಟು..."


ಅಂದು ಕಾಚಶ್ರೀ ಬಂದಿರಲಿಲ್ಲ..


ಪ್ರಿನ್ಸಿಪಾಲರು ಮತ್ತೊಮ್ಮೆ ಕೂಗಿದರು..


ನಾಗು ತಣ್ಣಗೆ ಹೇಳಿದ..


"ಸಾರ್..
ಆತ ಬರ್ಲಿಲ್ಲ ..  ಸಾ...
ಪಿಟಿಲು ಪ್ರ್ಯಾಕ್ಟೀಸ್ ಮಾಡ್ತಿರ ಬಹುದು..."


ಪ್ರಿನ್ಸಿಯವರಿಗೆ ಹುಬ್ಬು ಮೇಲೇರಿತು...


"ಏನು...?
ಏನದು..? 
ಆತನಿಗೆ ಪಿಟಿಲು ಬಾರಿಸಲಿಕ್ಕೆ ಬರುತ್ತದೆಯೆ... ?.. !"


"ಹೌದು ಸಾರ್...
ತುಂಬಾ ಎಕ್ಸಪರ್ಟಿದ್ದಾನೆ...


ಏಕಕಾಲದಲ್ಲಿ ಎರಡು ಪಿಟಿಲುಗಳನ್ನೂ ನುಡಿಸ್ತಾನೆ...! !.."


ಆಶ್ಚರ್ಯದಿಂದ ಪ್ರಿನ್ಸಿಪಾಲರ ಕನ್ನಡಕವೂ ಅಲುಗಾಡಿತು.. !


ಅವರಿಗೆ  ಸಂಗೀತ ಎಂದರೆ  ಬಹಳ ಪ್ರೀತಿ....!


"ಏನು...? !!!!!
ಒಂದೇ ಸಾರಿ ಎರಡು ಪಿಟಿಲು ಬಾರಿಸ್ತಾನಾ.. ?..!


ಎಷ್ಟು ವರ್ಷದಿಂದ ಪ್ರ್ಯಾಕ್ಟೀಸ್ ಮಾಡ್ತಿದ್ದಾನೆ...?.."


ಈಗ ಸೀತಾಪತಿ ಎದ್ದುನಿಂತ...


"ಸಾರ್...
ಹೈಸ್ಕೂಲಿನಿಂದ ನನಗೆ ಗೊತ್ತು...!
ಆಗ್ಲಿಂದಲೇ ಬಾರಿಸ್ತಿದ್ದ... !


ಅದಕ್ಕೂ ಮೊದಲು ಕನ್ನಡ ಶಾಲೆ ವಿಷಯ ಗೊತ್ತಿಲ್ಲ... !."


"ಏನ್ರಪ್ಪಾ ನೀವೆಲ್ಲ... !
 ನನಗೆ ಮೊದಲೇ ಯಾಕೇ ಹೇಳ್ಳಿಲ್ಲ...?
ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇದನ್ನೂ ಇಡಬಹುದಿತ್ತಲ್ಲ...


ನೀವೂ ಇದ್ದೀರಾ...!
ದಂಡಪಿಂಡಗಳು.. !


ಪ್ರತಿಭೆಗಳು ಎಲ್ಲಿ ಇರುತ್ತವೆ ಅಂತ ಹೇಳ್ಳಿಕ್ಕೆ ಬರೋದಿಲ್ಲ..."


"ಸಾ..
ಇದೊಂದು ಅದ್ಭುತ ಪ್ರತಿಭೆ...!
ಆತನನ್ನು ನೋಡಿ ನಾವೂ ಪ್ರಯತ್ನ ಪಟ್ವಿ.. !
ಆಗ್ಲಿಲ್ಲ...


ಈ ಪಿಟಿಲುಗಳಿಗೂ ನಮಗೂ ಸರಿ ಬರ್ಲಿಲ್ಲ... ಸಾರ್.. ! "


"ಹೌದು.. ಹೌದು... !


ಎಲ್ಲರೂ ವೀಣೆ  ಶೇಷಣ್ಣ  ಆಗಲಿಕ್ಕೆ ಸಾಧ್ಯ ಇಲ್ಲ.... !


ಕಲೆ ಎಂದರೆ ದೈವಿದತ್ತವಾದದ್ದು...
ಎಲ್ಲರಿಗೂ ಪಿಟಿಲು ಬಾರಿಸಲಿಕ್ಕೆ ಬರೊಲ್ಲ..


ಈಗ ನಾನು ಪಿಟಿಲು ಬಾರಿಸ್ತಿನಿ ಅಂದ್ರೆ ಸಾಧ್ಯವಾ..?


ನಾನು  ಸಹ...ನಮ್ಮನೆಯಲ್ಲಿ ...
ಒಂದು ಹಳೆ  ಹಾರ್ಮೋನಿಯಂ ಪೆಟ್ಟಿಗೆ ಇಟ್ ಕೊಂಡಿದ್ದಿನಿ ..!
ಅದು ಧೂಳ್  ಹಿಡಿತಾ ಇದೆ... !


ರಿಟೈರ್ಡ್  ಆದಮೆಲೆ  ಕಲಿಬೇಕು ಅಂದುಕೊಂಡಿದ್ದೀನಿ...!.."


ನಮಗೆ ಉಕ್ಕಿ ಬರುತ್ತಿದ್ದ ನಗು ತಡಿಯಲಿಕ್ಕೆ ಕಷ್ಟ ಆಗ್ತಿತ್ತು....


" ಸಾರ್..
ನೀವೆಲ್ಲಿ..?
ಪಿಟಿಲೆಲ್ಲಿ...? 
ಪಾಪ  ಆ.. ಹಾರೋಮೊನಿಯಂ ಪೆಟ್ಟಿಗೆ ಎಲ್ಲಿ...? !!


ಎಲ್ಲದಕ್ಕೂ ಯೋಗಬೇಕು ಸಾ... !.."


ಕಷ್ಟಪಟ್ಟು ತಡೆಹಿಡಿದ ನಗು ಬ್ರೇಕ್ ಆಗುವದರಲ್ಲಿ ಇತ್ತು...
................


ಅಷ್ಟರಲ್ಲಿ...


" ಸಾರ್.. ಒಳಗೆ ಬರ್ಲ್ಲಾ.."


ಅಯ್ಯೋ..!
ನಮ್ಮ ಸಾಕ್ಷಾತ್  "ಕಾಚಶ್ರೀ " ಒಳಗೆ ಬರ್ತಿದ್ದ...!


ಪ್ರಿನ್ಸಿಪಾಲರ ಮುಖ ಮೊರದಷ್ಟು ಅಗಲವಾಯಿತು...


ಕಣ್ಣು..
ಬಾಯಿ..
ಮುಖ.. 
ಮಾತಿನಲ್ಲಿ ಪ್ರೀತಿಯ ಹೊಳೆಯನ್ನೇ ಹರಿಸಲಿಕ್ಕೆ  ಪ್ರಯತ್ನ ಪಟ್ಟರು...
ಆಗಲಿಲ್ಲ....


ಅವರದ್ದು ಗಂಟು ಮುಖ....


"ಬಾರಪ್ಪಾ... !
ಬಾ... ಬಾ.. !


ಏನಪ್ಪಾ...
ಪಿಟಿಲು ಬಾರಸ್ತೀಯಂತೆ..!
ನಮಗೆಲ್ಲ ಗೊತ್ತೇ ಇರ್ಲಿಲ್ಲ.. ನೋಡು... !.."


ಕಾಚಶ್ರೀ ಗಾಭರಿ ಬಿದ್ದ.. !


"ಇ..ಇಇ.. ಇಲ್ಲಾ.. ಸಾರ್... ! "


"ನಾಚಿಕೆ ಪಟ್ಕೋ ಬೇಡ್ವೊ...
ಇಷ್ಟು ದಿನ ಸುಮ್ನೆ ನಿನಗೆ ಬಯ್ತಿದ್ನಲ್ಲೋ...!


ಒಂದು ಮಾತು ಹೇಳಬಾರದಾ...?


ಹೋಗ್ಲಿ ಬಿಡು...


ಇದು ನಿನಗೆ ಹೇಗೆ ಈ ಕಲೆ ಬಂತು....?..
ಈ ಕಲೆ ನಿಮ್ಮ ಮನೇಲಿ ಯಾರಿಗಿದೆ...? . !!.. "


ಈಗ ಕಾಚಶ್ರೀ ಮತ್ತೂ ಗಾಭರಿ ಆದ...!!


ನಮ್ಮ ಪ್ರಿನ್ಸಿ ಬಗೆಗೆ ನಿಮಗೆ ಒಂದು ಮಾತು ಹೇಳಲೇ ಬೇಕು.....
ಅವರು ಹೊಗಳುವಾಗಲೂ ಬಯ್ಯುವಾಗಲೂ ..


ಒಂದೇ ರೀತಿ... !
ಒಂದೇ ಧಾಟಿ... !
ಘನ ಘೋರ ಗಂಭೀರತೆ .... !


ಇಲ್ಲಿ ..
ಕಾಚಶ್ರೀಗೆ ತಾನು ಲೈನ್ ಹೊಡೆಯುವ ಘನಂದಾರಿ ಕೆಲ್ಸ ಅವರಿಗೆ ಗೊತ್ತಾಗಿ ಹೋಯ್ತು ಅಂದುಕೊಂಡ...


"ಇ  ಇ...ಇಲ್ಲಾ.. ಸಾರ್.. !
ಇದರಲ್ಲಿ ಮನೆಯವರೆಲ್ಲ ಯಾಕೆ..? "


"ಹೋಗ್ಲಿಬಿಡು...


ನೀನು ..
ಪಿಟಿಲು ನುಡಿಸೋದು ನಿಮ್ಮ ಮನೆಯವರಿಗೆ ಗೊತ್ತೇನೋ...? "


"ಇಲ್ಲಾ... ಸಾರ್...
ಗೊತ್ತಾದ್ರೆ ಸಾಯ್ಸಿ ಬಿಡ್ತಾರೆ...!


ಸಾರ್.. ಸಾರ್.. !


ಇನ್ನು ಮುಂದೆ ಹೀಗೆಲ್ಲ ಮಾಡೊಲ್ಲ... !
ಬಿಟ್ ಬಿಡಿ ಸಾ.. 


ಚೆನ್ನಾಗಿ ಓದ್ತೀನಿ... !
ಬಿಟ್ ಬಿಡಿ ಸಾ... "


" ಅಲ್ಲಯ್ಯಾ..
ಕಲೆಯ ಬೆಲೆ ಎಲ್ಲರಿಗೂ ಗೊತ್ತಾಗೊಲ್ಲ...


ನಿಮ್ ಮನೆಯವರಿಗೆ ನಾನು ಮಾತಾಡ್ತಿನಿ...


ಇವತ್ತು ನೀನು ನನ್ ಛೇಂಬರಿಗೆ ಬಾ....
ಪಿಟಿಲು ಬಾರಿಸು...!!
ನಾನೂ ನಮ್ ಸ್ಟಾಫ್ ಎಲ್ರೂ ಕೇಳಬೇಕು....


ಎರಡು ಪಿಟೀಲು ಒಂದೇ ಸಾರಿ ಬಾರಿಸ್ತಿಯಂತೆ !! "


ಕಾಚಶ್ರೀ ಮತ್ತೂ ಗೊಂದಲಕ್ಕೆ ಬಿದ್ದ... !


ಬೆವರು ಒರೆಸಿ ಕೊಳ್ಳುತ್ತಿದ್ದ...


"ಮುಂದಿನ ವಾರ ನಮ್ ಕಾಲೇಜಿಗೆ ..
"ವಿದ್ಯಾ ಭೂಷಣ" ಸ್ವಾಮೀಜಿ ಬರ್ತಿದ್ದಾರೆ... !


ಆಗ ನಿನ್ನದೂ ..
ಒಂದು "ಪಿಟೀಲು"  ಕಛೇರಿ ಇಡಲಿಕ್ಕೆ ಹೇಳ್ತೀನಿ... !.."


ಅಷ್ಟರಲ್ಲಿ ಜವಾನ ಬಂದು ಏನೋ ಚೀಟಿ ಕೊಟ್ಟ...
ಪ್ರಿನ್ಸಿಪಾಲರು ಹೊರಗೆ ನಡೆದರು...


ಕಾಲೇಜಿನ ಮಾಳಿಗೆ ಹಾರಿ ಹೋಗುವಷ್ಟು ಜೋರಾಗಿ ನಕ್ಕೆವು...


ಪ್ರಿನ್ಸಿಯವರ ಛೇಂಬರಿನಲ್ಲಿ ...
ಕಾಚಶ್ರೀ ಪಿಟಿಲುವಾದನ ಹೇಗಿರಬಹುದು..... !!!!







(ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ..............


ಕಾಚಶ್ರೀ  ಅಂದರೆ ಕಾನೂರು ಚನ್ನಪ್ಪನ್ನ ಮಗ ಶ್ರೀಪಾದ ಅಂತ...)







43 comments:

ಮನಸು said...

ಹಹ್ಹ.. ಒಳ್ಳೆ ಪಜೀತಿಗೆ ಬೀಳಿಸಿದ್ದೀರಿ ಎಲ್ಲರು ಸೇರಿಕೊಂಡು ಮುಂದೆ ಏನಾಯ್ತು.. ಪ್ರಿನ್ಸಿ ಛೇಂಬರ್ ನಲ್ಲಿ ಆಯ್ತಾ ಜೋರು ಪಿಟೀಲು ವಾದನ :))

Ittigecement said...

ಮನಸು............

ಆಗ ನಾವೆಲ್ಲ ಹುಡುಗಿಯರಿಗೆ "ಪಿಟಿಲು" ಅಂತ ಕರೆಯುತ್ತಿದ್ವಿ....

ನಮ್ಮ ಕಾಚಶ್ರೀ ಒಲ್ಲೆಯ ಪಿಟಿಲುವಾದಕ ಅಂತಲೂ ಹೇಳ್ತಿದ್ವಿ....

ಈ ಘಟನೆಯ ನಂತರ ಆ ಶಬ್ಧ ಎಷ್ಟು ಜನಪ್ರೀಯ ಆಯ್ತು ಅಂದ್ರೆ ..

ಅವನಿಗೆ "ಕಾಚಶ್ರೀ" ಎನ್ನುವ ಹೆಸರು ಮಾಯವಾಗಿ "ಪಿಟಿಲು ಮಾಸ್ಟರ್" ಅಂತ
ನಮ್ ಕಾಲೇಜಿನಲ್ಲಿ "ಜಗತ್ ಪ್ರಸಿದ್ಧಿಯಾಗಿ ಹೋದ....

ಆತನ ಮೂಲ ಹೆಸರು ಮರೆತು ಹೋಗವಷ್ಟು...!

ಹಾರ್ಮೋನಿಯಮ್ ಪೆಟ್ಟಿಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

ಚಿತ್ರಾ said...

ಹ ಹ ಹ ....
ನಿಮ್ಮ ಕಾಲೇಜು ದಿನಗಳೆಲ್ಲಾ ಹೀಂಗೇನಾ ? ನಾಗು, ಕಾಚಶ್ರೀ ಗಳಂಥ ಮಹಾನುಭಾವರ ಜೊತೆ ಇದ್ದೆ ನೀನು ಇಷ್ಟು ಬುದ್ಧಿವಂತ ಆಗಿದ್ದಾ ಮಾರಾಯ?

ನಿಮಗೆ ಪಿಟೀಲುವಾದನ ಕೈಗೆ ಹತ್ತಲಿಲ್ಲ ಅಂತ ಪಾಪದವನನ್ನು ಹೀಗೇ ಫಜೀತಿಗೆ ಬೀಳ್ಸೋದಾ? ಛೆ !
ಅವನ ಹಾಗೂ ಪ್ರಿನ್ಸಿಪಾಲ್ ರ ಮುಂದಿನ ಸಂಭಾಷಣೆ ನೆನೆಸಿಕೊಂಡೆ ನಗು ತಡೆಯಲಾಗುತ್ತಿಲ್ಲ !!!
ಇನ್ನು ಪ್ರಿನ್ಸಿಯ .. ಹಾರ್ಮೋನಿಯಂ ಪೆಟ್ಟಿಗೆ .. ಹೊ ಹೊ ಹೊ .....
( ಪ್ರಕಾಶಣ್ಣ , ಖರೆ ಹೇಳು , ನೀನು ಎಷ್ಟು ಸಲಿ ಪಿಟೀಲು ಬಾರಿಸಲು ಪ್ರಯತ್ನ ಮಾಡಿದ್ದೆ? )

ಮಹಿಮಾ said...

Kolalu baarisodu biTTu ee pitIlu kuyyodu yavaginda shuru aaytu shyamma?? chennagide chennagide!! antu young aagidaaga skath joridri antaaytu!!(paapa nimma snehita)

Srikanth Manjunath said...

ನನ್ನ ಹೆಸರು ಶ್ರೀಕಾಂತ್ ಅಂತ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತಿದ್ದೆ..ಆದ್ರೆ "ಶ್ರೀ" ಹೆಸರನ್ನು ಹೀಗೂ ಉಪಯೋಗಿಸಬಹುದು ಹಹಹಹಹ ಸೂಪರ್...
ಸೊಗಸಾದ ಬರವಣಿಗೆ...ಪ್ರಿನ್ಸಿಪಾಲ್ ಪ್ರಶ್ನೆಗೆ ಆಯ್ಯೋ ಇದಕ್ಕೆ ಮನಯವರೆಲ್ಲ ಏತಕೆ ಉತ್ತರ ಸೂಪರ್...ನಕ್ಕು ನಕ್ಕು ಸಾಕಾಯಿತು..ಸುಂದರ, ಸುಲಲಿತ ಬರವಣಿಗೆ..
ವಿದ್ಯಾಭ್ಯಾಸದ ದಿನಗಳ ಮೋಜೇ ಬೇರೆ...ಸದಾ ನಾಗು, ತಮಾಷೆ, ಕೀಟಲೆಗಳು..ಯಾರಿಗೂ ಯಾರ ಮೇಲು ಅಸೂಯೆ, ದ್ವೇಷ ಇದ್ದರೂ ಕೂಡ ಅದು ತಾತ್ಕಾಲಿಕ..ಅಲ್ಲಿ ಎಲ್ಲವನ್ನು ತಮಾಷೆಯಾಗಿ ನೋಡುವ ಕಲೆ ಸಿದ್ದಿಸಿರುತ್ತೆ..ಸೀರಿಯಸ್ ಆಗಿ ಓದು ಬರೆವ ಸಮಯದಲ್ಲಿ ತಮಾಷೆಯಾಗಿ ಇರುತ್ತೇವೆ.. ತಮಾಷೆಯಾಗಿ ಜೀವನ ಸಾಗಿಸಬೇಕಾದಾಗ ಸೀರಿಯಸ್ ಆಗಿ ಇರುವ ಸಂತಸವನ್ನು ಕಳೆದುಕೊಳ್ಳುತ್ತೇವೆ..ಓದಿನ ಜೀವನದ ಘಟನೆಗಳು ಯಾವಾಗಲು ನಗೆ ಬುಗ್ಗೆಯನ್ನೇ ಹುಟ್ಟಿಹಾಕುತ್ತವೆ..ಕಲ್ಮಶವಿಲ್ಲದ ಕಾಲ ಅದು...
(ಕಾಲೇಜ್ ನಲ್ಲಿದ್ದಾಗ, ನನ್ನ ಸ್ನೇಹಿತನಿಗೆ ಒಂದು ಹುಡುಗಿ ಒಂದು ಪಿಟೀಲು ಚಿತ್ರವಿರುವ ಗ್ರೀಟಿಂಗ್ ಕೊಟ್ಟಳು..ಇವನು ಅದನ್ನು ತಣ್ಣಗೆ ಇಟ್ಟುಕೊಂಡು ಕುಳಿತ..ಸುಮಾರು ದಿನ ಆದ ಮೇಲೆ ಯಾರೋ ಅವನನ್ನ ಕೇಳಿದರು ಅವಳು ಗ್ರೀಟಿಂಗ್ ಕೊತ್ತಳಲ್ಲ ತೋರಿಸು ಅಂತ...ಅವನು ಏನು ಅಲ್ವೋ ಅದು ಒಂದು ಪಿಟೀಲು ಇರುವ ಗ್ರೀಟಿಂಗ್ ಏನು ವಿಶೇಷ ಇಲ್ಲ ಅಂದ..ಅದಕ್ಕೆ ಒಬ್ಬ ಹೇಳಿದ ಅಯ್ಯೋ ಕಾಗೆ ಮುಂಡೇದೆ..ಅದರರ್ಥ ನಾನು ಪಿಟೀಲು ನನ್ನ ನುಡಿಸು ಅಂತ ಹುಡುಗಿ ಆಹ್ವಾನ ಕೊಟ್ಟಿದ್ದಾಳೆ ಅಯ್ಯೋ ಮಂಕು ಸಾಂಬ್ರಾಣಿ ಅಂತ ಹೀಗಳದ..ನಾವೆಲ್ಲ ಎಷ್ಟು ನಕ್ಕೆವೋ ತಿಳಿಯದು..)

Ittigecement said...

ಚಿತ್ರಾ...

ಆಗ ಹುಡುಗೀಯರ ಮೇಲೂ ಒಂದು ಸೋಜಿಗವಿತ್ತು...

ಆ ಕಾಚಶ್ರೀಗೆ ನಾಲ್ಕಾರು ಪಿಟಿಲುಗಳಿದ್ದವು..

ಅದು ಇಡೀ ಕಾಲೇಜಿಗೂ ಗೊತ್ತಿತ್ತು...
ಹಾಗಿದ್ದೂ ಈ ಹುಡುಗೀಯರು ಆತನ ಹಿಂದೆಯೇ ಬೀಳುತ್ತಿದ್ದರು...

ಹೆಣ್ಣುಮಕ್ಕಳ ಮನಸ್ಥಿತಿ ನಮಗೆ ಗೊತ್ತೇ ಆಗಲಿಲ್ಲ...!

ನನ್ನ ಸುದ್ಧಿ ಯಾಕೆ ಮಾರಾಯ್ತಿ...?

ನನ್ನ ಮನಸ್ಸಲ್ಲಿ ವಿಜಯಾ ಅನ್ನೊ ಪಿಟಿಲು ಯಾವಗಲೋ ಇದ್ದಿದ್ಲು...

ಹಾಗಾಗಿ ಬೇರೆ ಪಿಟಿಲುಗಳ ಬೆನ್ನು ಹಿಂದೆ ಬೀಳ್ಳಿಲ್ಲ.... ಇದು ಖರೆ.. ಸತ್ಯ...

ಪ್ರಿನ್ಸಿಪಾಲರು ಸಹಜವಾಗಿ ನಿವೃತ್ತಿ ಆದಮೇಲೆ ಹಾರ್ಮೋನಿಯಮ್ ಬಾರಿಸ್ತಿನಿ ಅಂದಿದ್ದು...

ನಮಗೆಲ್ಲ ನಗು ತಡೆಯಲಿಕ್ಕೆ ಆಗ್ಲಿಲ್ಲ...

ಹಾರ್ಮೋನಿಯಮ್ ಇಷ್ಟವಾಗಿದ್ದಕ್ಕೆ ..
ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು........

ಸಂಧ್ಯಾ ಶ್ರೀಧರ್ ಭಟ್ said...

ತುಂಬಾ ಚೆನ್ನಾಗಿದೆ ಪಿಟೀಲು ಮತ್ತು ಹಾರ್ಮೊನಿಯುಂ ಪೆಟ್ಟಿಗೆ ..:) ನಿಮ್ಮ ಕಾಚಶ್ರಿಯ ಪ್ರತಿಭೆಯ ಬಗೆಗೆ ಕೇಳಿ ಪ್ರಿನ್ಸಿಪಾಲರ ಕನ್ನಡಕವು ಅಲ್ಲಾಡಿದ್ದು ನೆನೆಸಿಕೊಂಡು ನಕ್ಕು ನಕ್ಕು ಸಾಕಾಯಿತು..
ಏಕ ಕಾಲಕ್ಕೆ ಎರಡು ಪಿಟೀಲು ಬಾರಿಸುತ್ತಾನೆ, ಮತ್ತು ಅವನು ಹೈಸ್ಕೂಲ್ ನಿಂದಲೂ ಬಾರಿಸುತ್ತಿದ್ದ ಎಂದೂ ನಾಗು ಮತ್ತು ಉಮಾಪತಿ ಅವನ ಪ್ರತಿಭೆಯ ಪ್ರಭೆಯನ್ನು ಹರಡಿದ್ದು ಸೂಪರ್..
ಮೊದಲೇ ಆ ಕಾಲೇಜ್ ದಿನಗಳದ್ದು ಡೆಸ್ಕಿನ ಮೇಲೆ ನೊಣ ಹಾರಿದರೂ ನಗು ಬರುವಂತಹ ವಯಸ್ಸು.. ಅಂತಹದ್ದರಲ್ಲಿ ಇಷ್ಟು ನಗುವನ್ನು ತಡೆದುಕೊಂಡು ಅದು ಹೇಗೆ ನೀವೆಲ್ಲ ಪ್ರಿನ್ಸಿಪಾಲ್ ಹೊರ ಹೋಗುವವರೆಗೂ ಕಾದಿರೋ ಗೊತ್ತಾಗುತ್ತಿಲ್ಲ...

ಮದ್ಯಾನ್ಹದ ಸಮಯದಲ್ಲಿ ಒಳ್ಳೆಯ ನಗೆಯ ರಸದೌತಣ ನೀಡಿದ್ದಕ್ಕೆ ಜೈ ಹೋ..

Anitha Naresh Manchi said...

ಪಾಪ ಪಿಟೀಲು.. ಛೇ ಎಷ್ಟು ಒಳ್ಳೆ ಬುದ್ಧಿವಂತ ಹುಡುಗನ ಬಗ್ಗೆ ಎಷ್ಟೊಂದು ಹೊಟ್ತೆ ಕಿಚ್ಚು ನಿಮ್ಗೆ .. :)

Ittigecement said...

ಮಹೀ....

ಆ ಕಾಲೇಜು ದಿನಗಳೇ ಹಾಗೆ..
ಬೇಕೆಂದರೆ ಮತ್ತೆ ಸಿಗುವದಿಲ್ಲವಲ್ಲ...

ನಿಜಕ್ಕೂ ಅದೆಷ್ಟು ಮಸ್ತ್ ಹೆಸರು ಕೊಟ್ಟಿದ್ದ ಅಲ್ವಾ?

ಕಾಚಶ್ರೀ ಗೆ ಬಹಳ ದಿನಗಳವರೆಗೆ ಒಬ್ಬ ಗೆಳತಿ ಇದ್ದಳು .....
ಸ್ಸಾರಿ ಪಿಟಿಲು ಇದ್ದಳು...

ಅವಳಿಗೆ ನಾವೆಲ್ಲ "ಪಿಟಿಲು ಪರಮೇಶ್ವರಿ" ಅಂತ ಕರಿತಿದ್ವಿ..............

ಹಾರ್ಮೋನಿಯಮ್ ಪೆಟ್ಟಿಗೆ ಇಷ್ಟವಾಗಿದ್ದಕ್ಕೆ....
ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು... ಜೈ ಹೋ !

Dr.D.T.Krishna Murthy. said...

ಈ ರೀತಿಯ ಅದ್ಭುತ ಬರವಣಿಗೆ ಪ್ರಕಾಶಣ್ಣನಿಗೆ ಮಾತ್ರ ಸಾಧ್ಯ ಎನ್ನುವಷ್ಟು ಚೆನ್ನಾಗಿ ಬರೆದಿದ್ದೀರ ಮಾರಾಯ್ರೇ.ಸೂಪರ್ರೋ ಸೂಪರ್ರು.ನಗಿಸುವುದರಲ್ಲಿ ನಿಮಗೆ ನೀವೇ ಸಾಟಿ!ಅಂದ ಹಾಗೆ ಅವನಿಗೇಕೆ 'ಕಾಚಶ್ರೀ'ಎನ್ನುವ ವಿಚಿತ್ರ ಹೆಸರು?ನನಗೇಕೋ ಈ ಸಂಗೀತ ವಾದ್ಯಗಳನ್ನು ಬಾರಿಸುವ ಕಲೆ ಸಿದ್ಧಿಸಲಿಲ್ಲ.ಇನ್ನೂ ಸ್ವಲ್ಪ ಸೀರಿಯಸ್ ಆಗಿ ಟ್ರೈ ಮಾಡಬೇಕಿತ್ತೇನೋ!?ಹೇಗಿದ್ದರೂ ಮುಂದಿನ ವರ್ಷ ರಿಟೈರ್ ಆಗುತ್ತೆ.ಆಗ ಮನೇಲಿ ಒಂದು ಹಾರ್ಮೊನಿಯಂ ಇಡಬೇಕು :-)

ಮನದಾಳದಿಂದ............ said...

ಪಕ್ಕುಮಾಮ,
ಆಹಾ,
ಅದೇನೇನು ಮಾಡಿದರೋ ನೀವೆಲ್ಲಾ ಸೇರ್ಕೊಂಡು ಕಾಲೇಜಲ್ಲಿ?
ಪಿಟೀಲು ಮಾಸ್ಟರ್ ಮಹಿಮೆ ಅಪಾರ! ಒಟ್ಟೊಟ್ಟಿಗೆ ಎರೆಡೆರೆಡು ಪಿಟೀಲು ಬಾರಿಸುವುದೆಂದರೆ ಕಡಿಮೆಯಾ!!!!!!!!????????
ಹ್ಹ ಹ್ಹ ಹ್ಹಾ.............ನಕ್ಕು ನಕ್ಕು ಸಾಕಾಯ್ತು......

Badarinath Palavalli said...

ಕವಿತೆಯಲಿ ಪ್ರೇಮ ಮಜ್ಜನ ಮಾಡಿಸುವ ಪ್ರಕಾಶಣ್ಣ, ಕಥೆಗಾರನಾದಾಗ ಥೇಟ್ ತೆನಾಲೀ ರಾಮಕೃಷ್ಣನಂತೆ ನಗೆ ದೀಪಾವಳಿ ಪಟಾಸು ಹಚ್ಚಿಟ್ಟು ಎದೆಯ ಬೂಜನ್ನು ಝಾಡಿಸಿ ಬಿಡುತ್ತಾರೆ.

ಹ್ಹಹ್ಹಹ್ಹಹ್ಹಾ!!!... :-) :-D ;-) B-)

ಕಾಚಶ್ರೀ ಹೆಸರೇ ರಸಿಕತೆಯ ಪರಮಾವಧಿ. ಈ ಬರಹ ಮತ್ತು ಕಾಮೆಂಟುಗಳೆರಡೂ ಭರ್ಜರಿಯಾಗಿವೆ.

ಅಂದ ಹಾಗೆ ಹಾರ್ಮೋನಿಯಂ ಪೆಟ್ಟಿಗೆ ನಿವೃತ್ತಿ ನಂತರ ಕಲಿಯಲಾರದ ವಿದ್ಯೆ ಅಂತ ಪ್ರಿನ್ಸಿಗೆ ಗೊತ್ತಾದ ಕ್ಷಣ, ಮುಖ ಪ್ರಾಯಶಃ ಚಂಡ ಮದ್ಧಲೆ.

ಯಾಕೋ ಈ ಪಿಟೀಲು ವಾದನ, ನನ್ನ ಪಾಲಿಗೆ ಆಕಾಶ ದೀಪ. ಕಾಚಶ್ರೀಗಳ ಅಮೋಘ ಪ್ರತಿಭೆ ನೋಡಿ ಹೊಟ್ಟೆ ಉರಿದುಕೊಂಡದ್ದೇ ಬಂತು. ನನ್ನ ಶೃತಿಯ ದಿನಗಳಲೆಲ್ಲ "ಮಾಲಾಶ್ರೀ ಬಯಸಿದರೆ ದಕ್ಕಿದ್ದು ಮಾತ್ರ ಉಮಾಶ್ರೀ!". ಅಕಟಕಟಾ!

Keshav.Kulkarni said...

ತುಂಬಾ ದಿನ ಆಗಿತ್ತು, ಓದ್ತಾ ಓದ್ತಾ ನಕ್ಕಿದ್ದು, ಅಲ್ಲಲ್ಲ, ನಕ್ತಾ ನಕ್ತಾ ಓದಿದ್ದು..

shubha hegde said...

ha ha..... thanks for good laugh.

Ittigecement said...

ಶ್ರೀಕಾಂತ್ ಮಂಜುನಾಥ್........

ನಿಮ್ಮ ಪ್ರತಿಕ್ರಿಯೆಗಳು ಟಾನಿಕ್ ಥರಹ...
ಚೆನ್ನಾಗಿ ವಿಶ್ಲೇಷಣೆ ಮಾಡಿರುತ್ತೀರಿ..

ನಿಮ್ಮ ಪ್ರತಿಕ್ರಿಯೆಗಾಗಿ ನಾನು ಯಾವಾಗಲೂ ಕಾಯುತ್ತಿರುತ್ತೇನೆ...

ಆ ಕಾಲೇಜಿನ ದಿನಗಳೇ ಹಾಗೆ...

ಇಂಥಹ ಒಂದು ಶಬ್ಧ ನಮಗೆ ಸಿಕ್ಕ ಮೇಲೆ ಸಿಕ್ಕಾಪಟ್ತೆ ಮಜಾ ಬಂತು...

ಎಷ್ಟೋ ಕನ್ನಡ ಹಾಡುಗಳನ್ನು ಹಾಳು ಮಾಡಿಬಿಟ್ವಿ...

ಉದಾಹರಣೆಗೆ :: ಚಿತ್ರ :ಬೆಂಕಿಯ ಬಲೆ
ಎಸ್ಪಿಬಿ ಹಾಡಿದ ಸೊಗಸಾದ ಹಾಡು.. "ಬಿಸಿಲಾದರೇನು...? ಮಳೆಯಾದರೇನು....?"

ನಮ್ಮ ಕೈಗೆ "ಪಿಟಿಲು" ಶಬ್ಧ ಸಿಕ್ಕ ಮೇಲೆ..

"ಪಿಟಿಲಾದರೇನು....
ಕೊಳಲಾದರೇನು....
ಜೊತೆಯಾಗಿ ಎಂದೂ.. ನಾ ನುಡಿಸಲೇನು...

ನಾ.... ನಿನ್ನ "ತಬಲಾ..." ಎಂದಿಗೂ... ಊ....ಊ...."

ಒಟ್ಟಿನಲ್ಲಿ ಆ ಘಟನೆ ಸಕತ್ ಮಜಾ ಇತ್ತು..

" ಹಳೆ ಹಾರ್ಮೋನಿಯಮ್ ಪೆಟ್ಟಿಗೆ" ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ದಿನಕರ ಮೊಗೇರ said...

nakku nakku saakaaytu..... mast barediddiraa.....

Ittigecement said...

ಸಂಧ್ಯಾ...

ಪ್ರಿನ್ಸಿಪಾಲರು ಕ್ಲಾಸಿನಲ್ಲಿದ್ರು..
ಹಾಗಾಗಿ ನಾವೂ ನಗುವನ್ನು ತಡೆಹಿಡಿದಿದ್ವಿ...

ಅವರೋ ಘನ ಗಂಭೀರ...
ನಗೋದು..
ಬಯ್ಯೋದು... ಹೊಗಳೋದು ... ತೆಗಳೋದು..

ಎಲ್ಲವೂ ಒಂದೇ ಧಾಟಿ... ಒಂದೇ ರಾಗ... !

ಪ್ರಿನ್ಸಿಪಾಲರ ಬಾಯಿಂದ "ಪಿಟಿಲು" ಶಬ್ಧ ಕೇಳಿದ ಕೂಡಲೆ ಕಾಚಶ್ರೀ ಗಾಭರಿ ಬಿದ್ದ...

ಅವರು ಕೇಳ್ತಿರೋ ವಿಷಯವನ್ನು ಆತ ಬೇರೇ ಥರಹವೇ ಅರ್ಥ ಮಾಡಿಕೊಂಡಿದ್ದ...

"ಇದಕ್ಕೆಲ್ಲ ಮನೆಯವರೆಲ್ಲ ಯಾಕೆ?
ಮನೆಯವರಿಗೆ ಗೊತ್ತಾದ್ರೆ ಸಾಯಿಸಿ ಬಿಡ್ತಾರೆ ಬಿಟ್ ಬಿಡಿ ಸಾರ್.. ಚೆನ್ನಾಗಿ ಓದ್ತೀನಿ.." ಅಂತ ದುಂಬಾಲು ಬಿದ್ರೂ..
ಪ್ರಿನ್ಸಿಯವರು ಬಿಡಲಿಕ್ಕೆ ತಯ್ಯಾರ್ ಇರ್ಲಿಲ್ಲ...

"ವಿದ್ಯಾಭೂಷಣರ ಕಛೇರಿಯಲ್ಲಿ ನೀನೂ ಪಿಟಿಲು ಬಾರಿಸು" ಅಂತ ಅಂದುಬಿಟ್ರು...

ನಾವೆಲ್ಲ ಸುಸ್ಸ್ತೋ ಸುಸ್ತು !!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅನಿತಾ ನರೇಶರೇ...

ನಮಗೆಲ್ಲ ನಿಜಕ್ಕೂ "ಕಾಚಶ್ರೀ" ಕಂಡರೆ ಹೊಟ್ಟೆಕಿಚ್ಚು ಇತ್ತು...

ಈ ಪಿಟಿಲುಗಳು ಏನು ಕಂಡಿದ್ದವೂ ಆತನಲ್ಲಿ.. ಗೊತ್ತಿಲ್ಲ...

ಅವನ ಬಳಿ ಸ್ನೇಹಕ್ಕೆ ಹಾತೊರೆಯುತ್ತಿದ್ದರು...

ನಾವು ಎಷ್ಟೇ ಸಭ್ಯತೆಯ ಸೋಗು ಹಾಕಿದರೂ ನಮ್ಮತ್ತ ಕಣ್ಣೆತ್ತಿ ನೋಡುತ್ತಲೂ ಇರಲಿಲ್ಲ...

ಈ ವಿಷಯ ನಮಗಂತೂ ದೊಡ್ಡ ಒಗಟಾಗಿತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಶ್ರೀವತ್ಸ ಕಂಚಿಮನೆಯವರೆ...

ನಮಗೆ ಈ ಪಿಟಿಲು ಶಬ್ಧ ಎಷ್ಟು ಅಭ್ಯಾಸವಾಗಿ ಹೋಗಿತ್ತು ಅಂದ್ರೆ ..
ನಮ್ಮನೆಯಲ್ಲಿ ನಮ್ಮಣ್ಣನಿಗೂ ಈ ಶಬ್ಧ ರೂಢಿಯಾಗಿಬಿಟ್ಟಿತ್ತು...

ಈಗಲೂ ಧಾರವಾಡದ ದಿವಾಕರ...(ಡಿಜಿ)..ನಾಗು.. ವಿನಾಯಕ..
ಉಮಾಪತಿ... ವಿಟಿ ಹೆಗಡೆ... ಯಾರೇ ಸಿಕ್ಕರೂ..
"ಈ ಪಿಟಿಲು.." ಶಬ್ಧ ಮೊದಲಿಗೆ ಬರುತ್ತದೆ...

ಹುಡುಗಿಯರು ಎನ್ನುವ ಶಬ್ಧ ಅಪ್ಪಿ ತಪ್ಪಿಯೂ ನಮ್ಮ ಬಳಿ ಸುಳಿಯುತ್ತಿರಲಿಲ್ಲ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Subrahmanya said...

ಸಕತ್ತಾಗಿತ್ತು:)

balasubramanya said...

ಲೇಖನ ಓದುತ್ತಿದ್ದಂತೆ ನಗು ತಡೆಯಲಾಗಲಿಲ್ಲ.ಹೆಂಡತಿ ಕೇಳಿದಳು ಕಂಪ್ಯೂಟರ್ ನೋಡ್ತಾ ನಗ್ತೀರಲ್ಲಾರೀ ಅಂತಾ, ಈ ಪ್ರಕಾಶ್ ಹೆಗ್ಡೆ ಪಿಟೀಲು ಅಂತಾ ಅಂತಾ ಮುಂದೆ ಹೇಳೋಕೆ ಆಗದೆ ನಗ್ತಾ ಇದ್ದೆ , ಅಯ್ಯೋ ನೀವೋ ನಿಮ್ಮ ಕಂಪ್ಯೂಟರೋ ಅಂತಾ ಒಳಗೆ ಹೋದಳು."ಕಾಚಾಶ್ರೀ" ಅಂತಾ ಗೆಳೆಯನೊಬ್ಬ ನನ್ನ ಜೊತೆಯಲ್ಲೂ ಇದ್ದಾ , ಅವನ ನೆನಪಾಯಿತು.ಅವನ ಹಾಗು ಪ್ರಿನ್ಸಿ ನಡುವಿನ ಮಾತುಕತೆ ನಿಮ್ಮ ಲೇಖನದ ಹಾಗು ನಿಮ್ಮ ಬರವಣಿಗೆಯ ಮೋದಿಯ ಹೈ ಲೈಟು.ಇದನ್ನು ಓದಿದರೆ ಪ್ಯಾರ್ಗೆ ಆಗೋದು ಗ್ಯಾರಂಟೀ. ಜೈ ಕಾಚಾಶ್ರೀ

ಈಶ್ವರ said...

ಅರರೆ.. ಮಸ್ತ್ ಮಸ್ತ್ ಬರೆದಿದ್ದೀರಿ.. ಕಾಚಾಶ್ರೀಯವರಿಗೆ ನಮ್ಮದೊಂದು ಸಲಾಂ ತಿಳಿಸಿ ಪ್ರಕಾಶಣ್ಣ.. ಪಿಟೀಲು ಸಕ್ಕತ್ತಾಗಿತ್ತು :-) :)

Ittigecement said...

ಡಾಕ್ಟ್ರೆ....

ಪಿಟಿಲು ಅಂದ್ರೆ ಹುಡುಗಿ..ಅಂತ ಆದಮೇಲೆ...
ಇನ್ನು ..
"ಹಳೆ ಹಾರ್ಮೋನಿಯಮ್ ಪೆಟ್ಟಿಗೆ.." ಅಂದ ಕೂಡಲೆ ನಮಗೆಲ್ಲ ಉಕ್ಕಿ ಬರುವ ನಗು ತಡೆಯಲಾಗಲಿಲ್ಲ...

ಅದಕ್ಕೂ ಧೂಳ್ ಹಿಡಿದಿದೆ ಅಂದಾಗ ..
ನಗುವನ್ನು ತಡೆಯುವದು ಮತ್ತೂ ಕಷ್ಟವಾಯಿತು...

"ವಿದ್ಯಾಭೂಷಣರ ಕಛೇರಿಯಲ್ಲಿ ನಿನ್ನದೂ "ಪಿಟಿಲು ವಾದನ ಇರಲಿ" ಅಂದಾಗ ನಮ್ಮ ಸ್ಥಿತಿ ದೇವರಿಗೇ ಗೊತ್ತು....

ಈಗಲೂ ನೆನಪಾದಾಗಲೆಲ್ಲ ನಗು ಬೇಡವೆಂದರೂ ಉಕ್ಕುತ್ತದೆ...

ನಮ್ಮ ಹುಡುಗರಲ್ಲಿ ಯಾರಾದ್ರೂ ಸ್ವಲ್ಪ ಚಂದವಿರದ ಹುಡುಗಿಯನ್ನು ನೋಡಿದ್ರೆ..

"ಏನಪಾ ಹಾರ್ಮೋನಿಯಮ್ ಪೆಟ್ಟಿಗೆ ಬಾರಿಸ್ತೀಯೇನೋ..?" ಅಂತಿದ್ವಿ...

ಸರ್ ಜೀ..
ಕಾಚಶ್ರೀಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಕಾಚಶ್ರೀ ಅಂದರೆ "ಕಾನೂರು ಚೆನ್ನಪ್ಪನ ಮಗ "ಶ್ರೀಪಾದ" ಅಂತ...

ಹ್ಹಾ ಹ್ಹಾ..

ಈ ಕಾಚಶ್ರೀ ಬಗೆಗೆ ಈ ಮೊದಲು ಎರಡು ಅಧ್ಯಾಯ ಬರೆದಿರುವೆ... ಓದಿರಬೇಕಲ್ಲವೆ?

umesh desai said...

ಪಾಪ ಅವರ ಪಾಡು ಹಾಡು..!! ಒಳ್ಳೇ ಲೇಖನ ಹಿಂಗೂ ಮಂದಿಗೆ ಎದುರಾಎದುರಾನ ಟೊಪಿಗಿ ಹಾಕಬಹುದು ಅಂತ ನಿಮ್ಮ ಗೆಳ್ಯಾರು ತೋರಿಸಿಕೊಟ್ರು..
ಭಾಳ ದಿನಾ ಆಗಿತ್ತು ನಿಮ್ಮ ಬತ್ತಳಿಕೆಯಿಂದ ನಗೆಬಾಣ ಬಂದು ತೃಪ್ತಿ ಆತು

bilimugilu said...

ನಗಿಸುವುದು ನಿಮಗೊಲಿದ ಒಂದು ಅಪೂರ್ವ ಕಲೆ,
ನಿಮ್ಮ ಬರವಣಿಗೆ - ಲೇಖನಗಳು ಈ ದಿಟ್ಟಿನಲ್ಲಿ ಸಾಗಿದೇ.
ಯಾರಿಗಾದರು ಬೇಸರ ಉಂಟಾಗಿದ್ದಲ್ಲಿ ನಿಮ್ಮ ಬ್ಲಾಗಿನ ಚುಚ್ಚು ಮದ್ದು ಕೊಡಬಹುದು :-)
Roopa Satish

Niharika said...

Paapa Kachashri........ nimge yaru adda hesaru ettillana college li

ಕಾವ್ಯಾ ಕಾಶ್ಯಪ್ said...

ಹಾ ಹಾ ಹಾ ಹಾ.. ಪ್ರಕಾಶಣ್ಣ ಸೂಪರ್.... :) :) ನಿಂಗಕ್ಕೆ ಪಿಟೀಲು ಸಿಕ್ಕಿದ್ದಿಲ್ಲೇ ಹೇಳ ಹುಳಕಿಗೆ ಹಿಂಗೆ ಮಾಡದಲ್ಲ, ಪಾಪ ಕಾಚಶ್ರೀ...... :D ಅವಂಗೆ ಇಟ್ಟ ಹೆಸರೂ ಸೂಪರ್... :P

ವೆಂಕಟೇಶ್ ಹೆಗಡೆ said...
This comment has been removed by the author.
ವೆಂಕಟೇಶ್ ಹೆಗಡೆ said...

ಪ್ರಕಾಶಣ್ಣ ಮೊದಲೇ ಹೇಳಿಬಿಡುತ್ತೇನೆ ಇನ್ನು ಮುಂದೆ ಈ ತರಹದ ಪೋಸ್ಟ್ ಹಾಕಿ ನಮಗೆ ಕಷ್ಟ ಕೊಡಬೇಡಿ ... ನಗು ತಡೆಯಲಾಗುತ್ತಿಲ್ಲ ಮಾರಾಯ್ರೆ ... ಕಾಲೇಜ್ ದಿನಗಳು ನೆನಪಿಗೆ ಬಂತು ...ನಮ್ಮಂತ ಸುಂದರಾಂಗರು ಒಂದೂ ಹುಡುಗಿಯನ್ನು ಪಟಾಯಿಸಲಾಗದೆ (ಪಿಟೀಲು ಬಾರಿಸಲಾಗದೆ ) ಬರೀ ಲೈನ್ ಹೊಡೆದು ನಮ್ಮಷ್ಟಕ್ಕೆ ನಾವೇ ಕುಷಿಪಡುತ್ತಿದ್ದ ಕಾಲ ಅದು ..ಕೆಲವೊಮ್ಮೆ ನಾವ್ ಲೈನ್ ಹೊಡೆಯೋದು ಅವಳಿಗೂ ಗೊತ್ತಾಗದೆ ಅವಳ ಪಕ್ಕದ ಹುಡುಗಿ ತನಗೆ ಎಂದು ಕುಶಿ ಪಟ್ಟಾಗ ಪೇಚಿಗೆ ಸಿಲುಕಿದ್ದೂ ಇದೆ . ಬಿಡಿ ನಮ್ಮ ಕತೆ ಇಷ್ಟೇ ಆಯ್ತು ಹುಡುಗಿ ಪಟಾಯಿಸಲಾಗದೆ ಕವನ ಬರೆದು ಕವಿಗಳಾದ ಸಾರ್ಥಕತೆ ಆ ಎಲ್ಲ ಹುಡುಗಿಯರಿಗೆ (ಪಿಟೀಲು ಗಳಿಗೆ ) ಸಲ್ಲಬೇಕು ... ಧನ್ಯವಾದಗಳು ...ಹುಕ್ಲಕೈ ಉಮಾಪತಿ ಮಾವನ ಮೊದಲಿನಿಂದಲೂ ಗೊತ್ತು ಸೌಮ್ಯಜೀವಿ ಆಷ್ಟಾಗಿ ಮಾತನಾಡುವುದಿಲ್ಲ ...ಆದರೆ ಇಷ್ಟಾಗಿ ಕಾಲೇಜು ದಿನಗಳಲ್ಲಿ ಮೆರೆದ ಕಾಲ ತಿಳಿಸಿದ್ದಕ್ಕಾಗಿ ದನ್ಯವಾದಗಳು ... ನನಗೂ ಗೊತ್ತು ನೀವು ನನ್ನ ಹಾಗೆ ... ಅದಕ್ಕೆ ಕವಿಯಾಗಿದ್ದು :)

Ittigecement said...

ಮನದಾಳದಿಂದ... ಪ್ರವೀಣು...

ನಮಗೆಲ್ಲ ಅದ್ಭುತವೆನಿಸಿದ್ದು..
ಕಾಚಶ್ರೀ ಹುಡುಗೀಯರನ್ನು "ಪಿಟಿಲು" ಅಂದಿದ್ದು !
ನಂತರ ಅದಕ್ಕೆ ಇನ್ನಷ್ಟು ಅರ್ಥಗಳು... ವಿವರಣೆಗಳು ಹುಟ್ಟಿಕೊಂಡವು...

ನಮ್ಮ ನಾಗು "ಪಿಟಿಲು" ಶಬ್ಧವನ್ನು ಸಾರ್ವತ್ರಿಕಗೊಳಿಸಿದ...

ಎಷ್ಟೇ ಪ್ರಯತ್ನ ಪಟ್ಟರೂ "ಪಿಟಿಲು" ಸಿಗದೆ ಹೋದ ಹುಡುಗ ..
ಹನುಮಂತನ ದೇವಸ್ಥಾನ ಕಟ್ಟಿಸಿದರೆ ಏನು ಹೆಸರು ಇಡಬಹುದು?

"ಪಿಟಿಲಾಂಜನೇಯನ ದೇವಾಲಯ..." !!

ಎಷ್ಟೆಲ್ಲ ಒಳ್ಳೊಳ್ಳೆ ಹಾಡುಗಳಲ್ಲಿ ಈ ಪಿಟಿಲು ಶಬ್ಧ ಸೇರಿಸಿ..
ಆ ಹಾಡುಗಳನ್ನು ಹಾಳು ಮಾಡಿದ್ದೇವೆ ಗೊತ್ತಾ ?
ನೆನಪಾದರೆ ಈಗಲೂ ನಗು ಬರುತ್ತವೆ...

ಪೂರ್ತಿಯಾಗಿ ನೆನಪಿಲ್ಲ..

ಈ ಥರಹ ಬ್ಲಾಗುಗಳನ್ನು ಬರೆಯುತ್ತೇನೆ ಎಂದು ಗೊತ್ತಿದ್ದರೆ ಆ ಸಾಹಿತ್ಯಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ...

ಕಾಚಶ್ರೀಯ ಪಿಟಿಲು ಇಷ್ಟವಾಗಿದ್ದಕ್ಕೆ...
ಪ್ರತಿಕ್ರಿಯೆಗೆ ಧನ್ಯವಾದಗಳು... ಜೈ ಹೋ !

Ittigecement said...

ಬದರಿಯವರೇ...

ನೀವು ಫೋನ್ ಮಾಡಿ ನಕ್ಕಿದ್ದು ಮರೆಯಲಾರೆ... ಹ್ಹಾ ಹ್ಹಾ !

" ನಮ್ ಮನೆಯಲ್ಲಿ ಹಳೆ ಹಾರ್ಮೋನಿಯಮ್ ಪೆಟ್ಟಿಗೆ ಇದೆ " ಅಂದಾಕ್ಷಣ..
ನಮ್ಮ ಪಡ್ಡೆ ತಲೆಗಳಿಗೆ " ಇದು ಪ್ರಿನ್ಸಿಯವರ ಹೆಂಡತಿ ಇದ್ದಿರಬಹುದಾ... !! ?? "
ಅಂತ ನಕ್ಕಿದ್ದೋ ನಕ್ಕಿದ್ದು !

" ತುಂಬಾ ದಿನ ಆಗೋಯ್ತು ನೋಡದೆ... ಆದಕ್ಕೆ ಧೂಳ್ ಹಿಡ್ದಿದೆ..
ರಿಟೈಯ್ಡ್ ಆದಮೇಲೆ ನುಡಿಸ್ತಿನಿ.."
ಅಂದಾಗ ನಗೆಯ ಸುನಾಮಿ ಏಳುವದೊಂದು ಬಾಕಿ.... !

ಹ್ಹಾ ಹ್ಹಾ... !

ಸರ್ ಜೀ..
ಹಾರ್ಮೋನಿಯಮ್ ಪೆಟ್ಟಿಗೆ ಇಷ್ಟವಾಗಿದ್ದಕ್ಕೆ ..
ಚಂದದ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು.... ಜೈ ಹೋ !

Mahesh Gowda said...

anna nim kachashri ge pitilu nudsi nudsi... beralu novu bandilwa anna innu ;)

mshebbar said...

SOOPAR

ನೆನಪಿನಂಗಳದಲ್ಲಿ... said...

ಪಿಟೀಲು ನುಡಿಸೋ ಕಾಲ ಹೋಯ್ತು ಪ್ರಕಾಶಣ್ಣ...
ಇನ್ನೇನಿದ್ರೂ ಬೆರಳಂಚಿನಲ್ಲಿ ಗಿಟಾರ್ ನುಡಿಸೋರ ಕಾಲ ಇದು... !

ಉಪಕಾರಣ ಯಾವುದಾದರೇನಂತೆ... ಹೊರಹೊಮ್ಮುವುದು
ಸಂಗೀತವೇ ತಾನೇ ?
ನುಡಿಸೋ ಕೈಗಳು ಅವತ್ತಿಗೂ ಇವತ್ತಿಗೂ ಪ್ರಸ್ತುತ:-)

ಸೀತಾರಾಮ. ಕೆ. / SITARAM.K said...

hennagide peeetilu vaadya... naavu hakki hidiyodu antidvi

Digwas Bellemane said...

ಹ ಹ ಹ ....

Ittigecement said...

ಕೇಶವ ಕುಲಕರ್ಣಿಯವರೆ...

ಹಳೆಯ ಹಾಡುಗಳಲೆಲ್ಲ..ಯಾವುದಾದರೂ ಸಂಗೀತ ಉಪಕರಣಗಳು ಬಂದಲ್ಲಿ..
ಉದಾಹರಣೆಗೆ..
"ನಾನೇ ವೀಣೆ.. ನೀನೇ ತಂತಿ.." ಇತ್ಯಾದಿ ಹಾಡುಗಳನ್ನೆಲ್ಲ ಕೇಳಿದಾಗ
"ನೀನೇ ಪಿಟಿಲು.. ನಾನೇ ಕುಯ್ತ..." ಇತ್ಯಾದಿ ಬದಲಾವಣೆಗಳು.. ನಮ್ಮ "ಪಿಟಿಲು" ಸಾಹೇಬ ನೆನಪಾಗಿ ನಗು ಉಕ್ಕಿಬಿಡುತ್ತದೆ..!

ಕಾಚಶ್ರೀಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ.. ತುಂಬಾ ಧನ್ಯವಾದಗಳು...

Ittigecement said...

ಶುಭಾ...

ಈ ಲೇಖನ ಬರೆದಾದ ಮೇಲೆ ಅನೇಕ ಗೆಳೆಯರು ಹೇಳಿದ್ದಾರೆ...

"ಅವರಗುಂಪಿನಲ್ಲೂ ಒಬ್ಬ "ಕಾಚಶ್ರೀ" ಇದ್ದ ಅಂತ..
ಆದರೆ ಹೆಸರುಗಳು ಮಾತ್ರ ಬೇರೆ...!

ಒಬ್ಬಳು ಗೆಳತಿ ಇದ್ದರೆ ಸಾಕು ಎನ್ನುವದು ಸಹಜ...

ಹಲವಾರು ಪಿಟಿಲುಗಳನ್ನು ಏಕಕಾಲದಲ್ಲಿ...!! ... ? ಇದು ಜೀರ್ಣ ಆಗುವದಲ್ಲ...

ಅಂಥಹ ಮನಸ್ಥಿತಿ ಕುತೂಹಲ ಅಲ್ಲವೆ?

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ದಿನಕರ್...

ನಮ್ಮ ಇನ್ನೊಬ್ಬ ಉಪನ್ಯಾಸಕರು "ಬಣಗೆ ಎಸ್.ಎಮ್"..
ಅವರು ಈಗ ಒಂದು ಇಲಾಖೆಯ "ಡೆಪ್ಯೂಟಿ ಕಮಿಷನರ್"..
ಆಗ ನಮಗೆ ಉಪನ್ಯಾಸಕರಾಗಿದ್ದರು...

ಅವರು ಪಾಠ ಮಾಡುತ್ತ..

"ರೋಮ್ ನಗರ ಬೆಂಕಿ ಹೊತ್ತಿ ಉರಿಯುತ್ತಿರುವಾಗ..
ನಿರೋ ಪಿಟಿಲು ಬಾರಿಸ್ತಿದ್ದ..."
ಅಂದು ಬಿಟ್ಟರು...

ಕ್ಲಾಸಿನಲ್ಲಿ ಹಂಚು ಹಾರಿಹೋಗುವಷ್ಟು ನಗು.... !!

ನಾವೆಲ್ಲ ಯಾಕೆ ನಕ್ಕೇವು ಅಂತ ಅವರಿಗೆ ಗೊತ್ತಾಗಲಿಲ್ಲ...
ಅವರು ಕೇಳಿದರೂ ನಾವು "ಕಾರಣ" ಹೇಳುವ ಸ್ಥಿತಿಯಲ್ಲಿರಲಿಲ್ಲ...

ಯಾಕೆಂದರೆ ಈ ಘಟನೆಯ ನಂತರ ಪ್ರಿನ್ಸಿಯವರ ಶಿಕ್ಷೆ... ಹಾಗಿತ್ತು............

ಹಳೆ ಹಾರ್ಮೋನಿಯಮ್ ಪೆಟ್ಟಿಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.... ಜೈ ಹೋ !!

ಉಷಾ said...

neevu piteelu nudisalagaddakke besara padabedi aa piteelugalella eega harmonium pettigegalaagirtave

chand said...

ನಿಮಗೆ ಪೀಟೀಲು ಬಾರಿಸಲು ಸಿಕ್ಕಿಲ್ಲಾಂತ ಈ ರೀತಿ ಸೇಡು ತೀರಿಸಿಕೊಳ್ಳುವುದೇ ಅಕಟಕಟಾ.....!! ದೇವರಾಣೆಗೂ ಹೇಳುತ್ತೇನೆ ನಾನು ಯಾವತ್ತೂ ಎರಡೆರಡು ಪೀಟೀಲು ಬಾರಿಸಿದ್ದು ಇಲ್ಲವೇ ಇಲ್ಲ... ನೀವ್?

ಮೌನವೀಣೆ said...

ಕಾಚಶ್ರೀಯ ವರ್ತನೆಗೆ ಇತಿಶ್ರೀ ಹಾಡಲು ಮಾಡಿದ ನಿಮ್ಮ ಪ್ರಯತ್ನ ಅದ್ಬುತ...

ಪ್ರಕಾಶಣ್ಣ ನೀವು ಕೂಡ ಒಳ್ಳೆ ಪಿಟೀಲು ಕುಯ್ಯುತ್ತಿರಿ.... ಅನ್ಸುತ್ತೆ...:D :)

Kishan said...

haha.. made me laugh out loud in the train today :-) Thank you.