Thursday, June 28, 2012

ಬೋರಾದ ಬದುಕಿಗೆ "ಟಾನಿಕ್" ಕೊಡುವ ಸ್ಥಳ ಇದು....

ಬ್ಲಾಗಿಗರೆಲ್ಲ ಒಂದು ಟ್ರಿಪ್ ಇಡೋಣ ಅಂತ ಆಜಾದ್ ಸೂಚಿಸಿದಾಗ ನನಗೆ ನೆನಪಾದದ್ದು ಬಾಲಣ್ಣ...
ನಿಮ್ಮೊಳಗೊಬ್ಬ ಬಾಲು... !
"ಎಲ್ಲರೂ ಶ್ರೀರಂಗ ಪಟ್ಟಣಕ್ಕೆ ಹೋಗೋಣ...
ಅಲ್ಲಿ ಎರಡು ಬೆಟ್ಟ ಹತ್ತಿಸ್ತಿನಿ...
ಒಂದು ಕರಿಬೆಟ್ಟ..
ಇನ್ನೊಂದು ಸಾಧನೆಯ ಬೆಟ್ಟ ಏರಿದ ಮಹಾನ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿಸ್ತಿನಿ..
ಎಲ್ರೂ ಬನ್ನಿ..."

ಅಂಕೆಗೌಡರ ಬಗೆಗೆ ಸ್ವಲ್ಪ ಕೇಳಿದ್ದೆ...
ಪುಸ್ತಕಗಳಿಗಾಗಿ ಜೀವನ ಮುಡಿಪಾಗಿಟ್ಟವರು ಅಂತ..

ಅಲ್ಲಿ ಹೋಗಿ ನೋಡಿದಾಗ ಬೆಕ್ಕಸಬೆರಗಾದೆ.. !!

ಒಬ್ಬ ವ್ಯಕ್ತಿ ತನ್ನ ಜೀವಮಾನದ ಎಲ್ಲ ಗಳಿಕೆಯನ್ನು ಸಂಪೂರ್ಣವಾಗಿ "ಪುಸ್ತಕ ಖರೀದಿಗೆ "ಇಡುವುದೇ...?

ಅವರ ಹೆಂಡತಿ ಮಕ್ಕಳಗತಿಯೇನು ?...
ಅವರೆಲ್ಲ ಇದನ್ನು ಒಪ್ಪಿದ್ದಾರೆಯೇ..?...

ಒಂದು ಹಳೆಯ ಸಿನೇಮಾ ಟೆಂಟ್ ಜಾಗವನ್ನು ಖರಿದಿಸಿ..
ಸ್ಥಳಿಯ ರಾಜಕೀಯದವರೊಬ್ಬರ ಸಹಾಯದಿಂದ ಅದನ್ನು ಸರಿಪಡಿಸಿ..
ಅಲ್ಲಿ ಪುಸ್ತಕಗಳ ಜೊತೆ ಸಂಸಾರ ನಡೆಸುತ್ತಿದ್ದಾರೆ... !!

ಅವರಿಗಾಗಿ ಪ್ರತ್ಯೇಕ ಕೋಣೆ ಇಲ್ಲ.. !

ಅವರ ಹೆಂಡತಿಯ ಕೊರಳಲ್ಲಿ ಬಂಗಾರದ ಕರಿಮಣಿ ಇಲ್ಲ..

ಕಿವಿಯಲ್ಲಿ ಸಣ್ಣ ಎರಡು ಓಲೆಗಳನ್ನು ಬಿಟ್ಟರೆ ಅವರ ಮನೆಯಲ್ಲಿ ಬಂಗಾರ ಲೋಹವೇ ಇಲ್ಲ... !!

"ಅಮ್ಮಾ..
ಊಟಕ್ಕೇನು ಮಾಡುತ್ತೀರಿ...?
ಇವರ ಸಾಧನೆಗೆ ನಿಮ್ಮ ಮನಸ್ಸು ಒಪ್ಪಿ ಪ್ರೋತ್ಸಾಹಿಸುತ್ತಿದ್ದೀರಾ?’

ಕುತೂಹಲ ತಡೇಯಲಾರದೆ ನಾನು ಪ್ರಶ್ನೆ ಕೇಳಿದ್ದೆ....

"ತುಂಬಾ ಖುಷಿಯಿಂದ ಒಪ್ಪಿದ್ದೇನೆ... ನಮ್ಮ್ ಸಂತೋಷಕ್ಕೆ ಇವರ ಸಾಧನೆ ಮೆರಗುಕೊಟ್ಟಿದೆ..
ಊಟತಿಂಡಿಯ ಬಗೆ ನಾನು ತಲೆಕೆಡಿಸಿಕೊಂಡಿಲ್ಲ..

ಅವರು ತಂದು ಹಾಕುತ್ತಾರೆ ..
ನಾನು ಸಂತೋಷದಿಂದ ಬಡಿಸುತ್ತೇನೆ..."

ನಾನು ದಂಗಾಗಿ ಹೋದೆ !!

ನನಗೆ ಮಹಾತ್ಮ ಗಾಂಧಿಗಿಂತ "ಕಸ್ತೂರಬಾ" ಅಂದರೆ ಭಕ್ತಿ ಜಾಸ್ತಿ..
ಅವರ ಮಹಾತ್ಮರಾಗುವ ಹುಚ್ಚಾಟಗಳನ್ನೆಲ್ಲ ಸಹಿಸಿದ ಮಹಾಸಾಧ್ವಿ ಮಹಿಳೆ ಅವರು...

ಈ ಸಾಧ್ವಿಮಣಿ "ಕಸ್ತೂರಬಾ"ಗಿಂತ ಕಡಿಮೆಯೇನಿಲ್ಲ ಅಂತ ಅನ್ನಿಸಿತು...

ಹೆಣ್ಣಾಗಿ ಸಹಜ ಆಸೆ ಬಯಕೆಗಳನ್ನು ಬದಿಗಿಟ್ಟು..
ಗಂಡನೊಂದಿಗೆ ಸಂತೋಷದಿಂದ ಪಾಲ್ಗೊಂಡಿದ್ದು...ಬೆರಗಾಗಿಸಿತು... !

ಇನ್ನು ಅಂಕೆಗೌಡರು ಒಬ್ಬ ಸಿದ್ಧಪುರುಷ....
ವೃತ್ತಿಬದುಕಿನಲ್ಲಿ ಪ್ರಾಮಾಣಿಕರು...

ಲಂಚಮುಟ್ಟಿದವರಲ್ಲ... !!

ಅವರ ಮಾತುಗಳಲ್ಲಿ ಸಾತ್ವಿಕತೆಯೆದೆ.. ಸೌಜನ್ಯವಿದೆ..

ತುಂಬಿದ ಕೊಡ ತುಳುಕುವದಿಲ್ಲ ಎನ್ನುವ  ಮಾತಿಗೆ ತಕ್ಕಂತಿದ್ದಾರೆ...


ನಮ್ಮ ಆಜಾದು ಬ್ಲಾಗಿಗರವತಿಯಿಂದ ಅಂಕೆ ಗೌಡರಿಗೆ ಗೌರವ ಸಲ್ಲಿಸಿದರು...


ಅಕ್ಷರ ಪ್ರೇಮಿ "ಶ್ರೀಕಾಂತ್ " ಸಂತಸಕ್ಕೆ ಪಾರವೇ ಇಲ್ಲವಾಗಿತ್ತು...


ಹೊಸಜೋಡಿ "ಶಿವಪ್ರಕಾಶ್ ದಂಪತಿಗಳು" ಪುಸ್ತಕ ಕಾಶಿಯಲ್ಲಿ ಕಳೆದು ಹೋಗಿದ್ದರು....


ಪುಸ್ತಕ ಪ್ರೇಮಿ ಆಜಾದ್.. ಜ್ಯೋತಿ.. ಸುಧೇಶ್.. ಎಲ್ಲರೂ ಒಂದೊಂದು ಪುಸ್ತಕ ಹಿಡಿದು ಕಳೆದು ಹೋಗಿದ್ದರು..

ಸಾಧನೆಯ ಸಿದ್ಧ ಪುರುಷ "ಅಂಕೆ ಗೌಡರು"......
ನಮಗೆಲ್ಲ ಕಿಟ್ಟೆಲ್ ಶಬ್ಧಕೋಶ ಹಳೆಯದೆಂದು ಕೇಳಿದ್ದೇವೆ.. 
ಇವರ ಬಳಿ ಅದಕ್ಕಿಂತಲೂ ಹಳೆಯ ಶಬ್ಧಕೊಶವಿದೆ..!
ಇದು ನಿಮಗೆ ಗೊತ್ತಿದೆಯಾ?

ರೂಪಾ ಸತೀಶ್ ಬಳಿ "ರವಿ ವರ್ಮ ನ " ಸಮಗ್ರ ಚಿತ್ರಗಳ ಅಪೂರ್ವ ಪುಸ್ತಕ !
ಅಲ್ಲೇ ಫೋಟೋ ತೆಗೆದುಕೊಳ್ಳುವ ತವಕ !
ಮಕ್ಕಳಿಗೊಂದು ವಿಶೇಷ ಪುಸ್ತಕ ತೋರಿಸಿದರು...!

ಪುಸ್ತಕ ತೆರೆದಾಗ ಒಂದು ಬಿಲ್ಡಿಂಗ್ ಮೇಲೆ ಎದ್ದು ಬಂತು ... ! 
ಮಕ್ಕಳೇಕೆ .... ನಮಗೆಲ್ಲ  ಆಶ್ಚರ್ಯ !

ಇದೊಂದು ಅಪೂರ್ವ ಪುಸ್ತಕ .. ನಮ್ಮ ದೇಹದ  ಅಂಗಾಂಗ  ರಚನೆಯ ಮಾಹಿತಿ ಪುಸ್ತಕ...

ಎಲ್ಲರೂ ಒಂದೊಂದು ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೆವು.. ಇಲ್ಲಿ ಉಮೇಶ ದೇಸಾಯಿಯವರು...

ಇದೊಂದು ಅದ್ಭುತ ಪುಸ್ತಕ ಇನ್ನೂರು ವರ್ಷಗಳ ಹಿಂದೆ ಭಾರತದ ಪಟ್ಟಣಗಳು ಹೇಗಿದ್ದವು?
ಆಗಿನ ಬೆಂಗಳೂರನ್ನೂ ನೋಡಿ ನಾವೆಲ್ಲಾ ಪುಳಕಿತರಾದೆವು...
ಇದರಲ್ಲಿ ಲಾಲ್ ಬಾಗ್.. ಕಬ್ಬನ್ ಪಾರ್ಕ ಎಲ್ಲವೂ ಇವೆ......

ನಾವು ಒಂದು ತಾಸಿಗಾಗಿ ಹೋಗಿದ್ದು... ಅಲ್ಲಿ ಇದ್ದಿದ್ದು ನಾಲ್ಕು ತಾಸು...
ಹೊಟ್ಟೆ ಚುರ್ ಗುತ್ತಿದಾಗ ಗಡಿಯಾರ ನೆನಪಾಯಿತು...

ಇದು ಜಗತ್ತಿನ "ಐವತ್ತು ಆಶ್ಚರ್ಯಗಳ "ಪುಸ್ತಕ..... ನಮ್ಮ ಪಕ್ಕದಲ್ಲಿ ಐವತ್ತೊಂದನೆಯ ಆಶ್ಚರ್ಯವಾಗಿ "ಅಂಕೆ ಗೌಡರಿದ್ದರು..
ಕೋಟ್ಯಾಂತರ ಪುಸ್ತಕಗಳ ಸರದಾರ...
ಇಲ್ಲಿ ಸಿಗದಿರುವ ಪುಸ್ತಕಗಳೇ  ಇಲ್ಲ...


ಅಲ್ಲಿ ನಮಗೆಲ್ಲ ಕಾಫೀ ಕೂಡ ಇತ್ತು.. ನಮ್ಮ ಗುಂಪಿನ ಸಂಧ್ಯಾ ಎಲ್ಲರಿಗೂ ಕಾಫಿ ಕೊಟ್ಟರು...

ಸಾಧ್ವಿ ಮಣಿ ಯವರಿಗೆ  ಬ್ಲಾಗಿಗರವತಿಯಿಂದ  ಫಲ ತಾಂಬೂಲ...

ನಮ್ಮ ಬಾಲಣ್ಣನಿಗೆ  ಅಂಕೆ  ಗೌಡರ  ಒಡನಾಟ ಹತ್ತು ವರ್ಷಗಳಿಂದ ಇದೆ...

ಸಾಧನೆಯ ಮೇರು ಪುರುಷನ ಪಕ್ಕದಲ್ಲಿ ನಾನು ನಿಂತು ಮಾತಾಡಿದೆ ...

ಆಶ್ಚರ್ಯ ಚಕಿತರಾದ ರೂಪ ಸತೀಶ "ಭಾವ ಸಿಂಚನ" ಪುಸ್ತಕ ಕೊಟ್ಟು ಗೌಡರನ್ನು ಅಭಿನಂದಿಸಿದರು...

ನಾನು ಹುಟ್ಟಿದ ಮರುವರ್ಷದ ಪ್ರಜಾವಾಣಿ ವಿಶೇಷಾಂಕ... !!

ಹೊಸ ಜೋಡಿಗಳೂ ಸಂತೋಷ  ಹಂಚಿ ಕೊಳ್ಳುತ್ತಿರುವದು ...
..
 ಮಹೇಶ್  ತುಂಬಾ ಅಭಿಮಾನದಿಂದ ಗೌಡರನ್ನು ಅಭಿನಂದಿಸಿದರು...


ನವೀನ ಮೇಷ್ಟ್ರು  ಅವರಿಗೆ ನಮಸ್ಕರಿಸಿ ಪುಸ್ತಕ ಕೊಟ್ಟು ಮಾತಾಡಿದರು...

ಸಂಕೋಚದ ಮುದ್ದೆಯಾದ "ಗಿರೀಶ್" ಕೂಡ ಮಾತಾಡಿದರು...

ಸಾಧನೆಯ ಮೇರು ಪುರುಷ .. ಕನ್ನಡಿಗರ  ಹೆಮ್ಮೆ.... !

ನಾವು ಅಲ್ಲಿಗೆ ಹೋಗಿದ್ದು ಹನ್ನೊಂದು ಗಂಟೆಗೆ... ಅಲ್ಲಿಂದ ಹೊರಟಿದ್ದು ಎರಡು ಗಂಟೆಗೆ...
ಇನ್ನೂ ಅಲ್ಲಿ ಇರಬೇಕಿತ್ತು ಎನ್ನುವದು ಎಲ್ಲರ ಆಶಯವಾಗಿತ್ತು...

ಗೌಡರಿಗೆ ಬೆನ್ನೆಲುಬಾಗಿ ನಿಂತ ಹಳ್ಳಿಯ ಜನ...

ಒಂದು ಗ್ರುಪ್ ಫೋಟೋ... ಮಧುರ ನೆನಪಿಗಾಗಿ...

ನಿಜಕ್ಕೂ ಇದೊಂದು ಪುಸ್ತಕ ದೇಗುಲ.... !


ನಾನು ಹುಟ್ಟಿದ ವರ್ಷ ಸುಧಾ ಪತ್ರಿಕೆಯೂ  ಹುಟ್ಟಿತ್ತು... !
ನನಗಿಂತ ..
ಆರು ದಿನ ಮೊದಲು  ಜನಿಸಿದೆ ಸುಧಾ ವಾರಪತ್ರಿಕೆ...!
ವಾಹ್  !
ನನ್ನ ವರ್ಷ ಭವಿಷ್ಯ ನೋಡಿದರೆ.. ಸರಿಯಾಗಿತ್ತು !
"ಹುಟ್ಟಿದ ಮೂರು ತಿಂಗಳಿಗೆ ನನಗೆ ರಿಕೆತ್ಸ್ ರೋಗವಾಗಿತ್ತು.."
ಅಲ್ಲಿ "ಅನಾರೋಗ್ಯ"  ಅಂತ ಬರೆದಿದ್ದರು...






ಪುಟಾಣಿಗಳೂ ಪುಸ್ತಕ ಹಿಡಿದು ಕುಳಿತಿದ್ದರು...
......................................................................................................



ಒಮ್ಮೊಮ್ಮೆ ಬದುಕಿನಲ್ಲಿ ಹೀಗಾಗಿಬಿಡುತ್ತದೆ...


ಎಲ್ಲವೂ ಇದ್ದಿರುತ್ತದೆ... ಸಮಸ್ಯೆಗಳೂ ಅಷ್ಟೇನು ಇದ್ದಿರುವದಿಲ್ಲ... ಹಣವೂ ಇದ್ದಿರುತ್ತದೆ..


ಆದರೆ ಒಂದೊಂದು ದಿನ ತಡೆಯಲಾರದ ಬೋರ್... !
ಕೆಲವೊಂದು ದಿನ ಶೂನ್ಯ ಆವರಿಸಿಕೊಂಡು ಬಿಡುತ್ತದೆ...


ಆಗ ಪಾಂಡವಪುರ ನೆನಪು ಮಾಡಿಕೊಳ್ಳಿ... 
ಅಂಕೆಗೌಡರನ್ನು ಭೇಟಿಯಾಗಿ... ಪುಸ್ತಕ ಕಾಶಿಯಲ್ಲಿ ಮಿಂದು ಬನ್ನಿ...



ದೈನಂದಿನ ವ್ಯವಹಾರ..
ಜಂಜಡಗಳಿಂದ ಬೋರಾಗಿ  ತುಕ್ಕುಹಿಡಿದ ನಮ್ಮ ಮನಗಳಿಗೆ ಅಲ್ಲಿ ಖಂಡಿತ ಉಲ್ಲಾಸ ಸಿಗುತ್ತದೆ..


ನಮಗಿಷ್ಟವಾದ ಪುಸ್ತಕ ಹಿಡಿದು ಬೇರೆ ಲೋಕಕ್ಕೆ ಹೋಗಿ ಬರಬಹುದು...



ನಿಜಕ್ಕೂ ಬದುಕಿಗೆ ಟಾನಿಕ್ ಕೊಡುವ ಸ್ಥಳ ಅದು !


ವಿವರಗಳು ಇಲ್ಲಿವೆ...


ತಾವು ಸಂಗ್ರಹಿಸಿದ ಪುಸ್ತಕಗಳು ಮುಂದಿನ ಜನಾಂಗಕ್ಕೆ ಅನುಕೂಲವಾಗಿ ಇಡಲು ..
ಅಂಕೆ ಗೌಡರು  ಬಹಳ ಪ್ರಯತ್ನ ಪಡುತ್ತಿದ್ದಾರೆ...
ಅವರು ಪಟ್ಟ ಕಷ್ಟಗಳ ಬಗೆಗೆ ಪುಸ್ತಕವನ್ನೇ ಬರೆಯ ಬಹುದು..


ಇದೀಗ ಎತ್ತೆಚ್ಚ ಸರಕಾರ ಈ  ವರ್ಷದ  ಮುಂಗಡ ಪತ್ರದಲ್ಲಿ "ಐವತ್ತು ಲಕ್ಷ"ವನ್ನು ಇದಕ್ಕಾಗಿ ಮಿಸಲಿಟ್ಟಿದ್ದಾರೆ ..
ಅದು ಅನುಷ್ಟಾನವಾಗಬೇಕಷ್ಟೇ...


ಸರಕಾರದ ಮಾತು ಬಿಡಿ..
ಸದಾ ಜಗಳದಲ್ಲೇ ಮೈ ಮರೆತ ಸರಕಾರ  ತನ್ನ ಮಾತನ್ನು ಉಳಿಸಿ ಕೊಳ್ಳುವದಿರಲಿ .
ಅದರ ಅಸ್ತಿತ್ವವೇ ಇಂದು  ಡೋಲಾಯಮಾನವಾಗಿದೆ ..


ನಾವು ಇದನ್ನು ಚೆನ್ನಾಗಿಡಬೇಕು...
ನಮ್ಮಿಂದ ಇದು ಸಾಧ್ಯ.. 
ನಮ್ಮ... ನಿಮ್ಮಂತವರು ಸಾಧ್ಯವಾದ ದೇಣಿಗೆ ಕೊಟ್ಟು ನಮ್ಮ ಕೈಲಾದ ಸಹಾಯ ಮಾಡೋಣ ...


ದಯವಿಟ್ಟು ಅಲ್ಲಿಗೆ ಭೇಟಿ ಕೊಡಿ..
ನಿಮಗೆ ನೀವೇ  ಮನಗಾಣುತ್ತೀರಿ ...


26 comments:

umesh desai said...

ನಿಮ್ಮ ಲೇಖನದ ಹಾದಿ ಕಾಯುತ್ತಿದ್ದೆ..ನಮ್ಮೆಲ್ಲ ಬ್ಲಾಗಿಗರು ಬರೆದಿರುವೆವು
ಇವುಗಳನ್ನು ಓದಿದ ಕೆಲವರಾದರೂ ಅಂಕೇಗೌಡ್ರಮನೆಗೆ ಹೋಗಲಿ..ಅಲ್ಲಿಯ
ಸಂಪತ್ತಿನ ಆನಂದ ಹೊಂದಲಿ..

Badarinath Palavalli said...

ವಾರಾಂತ್ಯದಲ್ಲಿ ಸುಮ್ಮನೆ ಜಾಲಿ ಟ್ರಿಪ್ಪಗೆ ಮನಸೋತ ಜನರ ನಡುವೆ ವಿಭಿನ್ನವಾಗಿ ನಿಲ್ಲುವವರು ನಮ್ಮ ಬ್ಲಾಗಿಗರು.

ಶ್ರೀರಂಗಪಟ್ಟಣದ ಸುತ್ತ ಮುತ್ತ ಪ್ರವಾಸದ ಜೊತೆ, ಕರಿಘಟ್ಟ ಮತ್ತು ಅಂಕೇಗೌಡರ ಪುಸ್ತಕ ಮನೆ ಭೇಟಿಯು ಮನೋವಿಕಾಸ ಮತ್ತು ಏಕತಾನತೆಗೆ ಸೆಡ್ಡು.

ಅಮಿತ ಪುಸತ್ತಕ ಪ್ರೇಮಿಯ ಜೀವನ ಮತ್ತು ಸಾಧನೆ ಜನಜನಿತವಾಗಲಿ. ನಮ್ಮೆಲ್ಲರ ಮನೆಗಳೂ ಪುಟ್ಟ ಪುಸತಕಾಲಯಗಳೇ ಆಗಲಿ ಎಂದು ಆಶಿಸುತ್ತೇನೆ.

ಚಿತ್ರಗಳು ಮತ್ತ ಮಾಹಿತಿಯು ನಾಲ್ಕು ಕಾಲ ಓದುಗರಿಗೆ ದಾರಿದೀಪವಾಗುವಂತಿದೆ.

ಚುಕ್ಕಿಚಿತ್ತಾರ said...

nice info..!!

Srikanth Manjunath said...

ಅಣ್ಣಾವ್ರು ಒಂದು ಹಾಡಲ್ಲಿ ಹೇಳುತ್ತಾರೆ...ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿದ ಮೇಲೆ ನಮ್ಮೂರೇ ನಮಗೆ ಮೇಲು ಅಂತ...ಅದು ಸರಿ...
ನಮ್ಮ ಊರು..ನಮ್ಮ ಜನ, ನಮ್ಮವರ ಸಾಧನೆ ಯಾವತ್ತು ಒಂದು ಕೈ ಮೇಲು...
ಎಂತಹ ಪ್ರವಾಸ...ಅಂತಹ ಸಾಧನೆ...ಅವರ ಸಾಧನೆಗೆ ಪದಗಳ ಕಟ್ಟುವಿಕೆಯ ತಜ್ಞ ಪ್ರಕಾಶಣ್ಣ ಅವರ ಪದಗಳ ಸಾಲು..
ಮೈಸೂರ್ ದಾರಿ, ಶ್ರೀ ರಂಗಪಟ್ಟಣ, ಪಾಂಡವಪುರ..ಇದಕ್ಕೆಲ್ಲ ಮಿಗಿಲಾಗಿ "ಶ್ರೀ ಅಂಕೆ ಗೌಡರ ಪುಸ್ತಕದ ಮನೆ" ಕೂಡ ಒಂದು ಮಾರ್ಗ ಸೂಚಿಯಾಗಬೇಕು..
ಇದಕ್ಕೆ ಇಂತಹ ಬ್ಲಾಗ್ ಗಳು ಸ್ಪೂರ್ತಿದಾಯಕ..
ಸುಂದರ ನಿರೂಪಣೆ...ನಿಮ್ಮ ಮಾತಲ್ಲೇ ಹೇಳುವುದಾದರೆ "ಜೈ ಹೋ...."

Soumya said...

A nice post....the pictures have spoken more than the words! ಅಂಕೆ ಗೌಡರನ್ನು ಪರಿಚಯ ಮಾಡಿಸಿದಕ್ಕಾಗಿ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,
ನಮ್ಮ ಬ್ಲಾಗಿಗರ ಮೊದಲ ಪ್ರಯತ್ನ ಬ್ಲಾಗವನಕ್ಕೆ ಬೇಟಿ. ಈಗ ಇದು ಎರಡನೇ ಅತ್ಯುತ್ತಮ ಪ್ರಯತ್ನವೆಂದು ನನ್ನ ಭಾವನೆ.
ನೀವು ಅಲ್ಲಿಗೆ ಬೇಟಿಕೊಟ್ಟ ಅನುಭವವನ್ನು ಚಿತ್ರಗಳ ಸಹಿತ ಎಲ್ಲರ ಮನಮುಟ್ಟುವಂತೆ ಬರೆದಿದ್ದೀರಿ.

ಇಪ್ಪತ್ತೈದು ಬ್ಲಾಗಿಗರು ಒಂದು ಪುಸ್ತಕ ದೇಗುಲಕ್ಕೆ ಹೋಗಿ ಅಲ್ಲಿನ ಅನುಭವಗಳನ್ನು ಒಬ್ಬರಿಗಿಂತ ಮತ್ತೊಬ್ಬರೂ ಹೀಗೆ ವಿಭಿನ್ನವಾಗಿ ಕಟ್ಟಿಕೊಡಲು ಸಾಧ್ಯವೆನ್ನುವುದಕ್ಕೆ ಇದು ಉತ್ತಮ ಉದಾಹರಣೆ.
ಒಂದು ಉತ್ತಮ ಕಾರ್ಯದಲ್ಲಿ ನಾನು ಜೊತೆಯಾಗುವ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ ನಿಮಗೆ ಮತ್ತು ಬಾಲುಸರ್‍ಗೆ ಧನ್ಯವಾದಗಳು

viju said...

ತುಂಬಾ ಒಳ್ಳೇ ಪೋಸ್ಟ್ ಪ್ರಕಾಶಣ್ಣ.....ಒಂದ್ಸಲ ಹೋಗ್ ಬಪ್ಪದೇಯಾ....ಚೋಲೋ ವಿವರಿಸಿದ್ದೆ ಅವ್ರ ಬಗ್ಗೆ...thank you..

ಸುಮ said...

ಹಿಂದೊಮ್ಮೆ ಬಾಲು ಸರ್ ಬ್ಲಾಗ್ ನಲ್ಲಿ ಅಂಕೇಗೌಡರ ಬಗ್ಗೆ ಓದಿ ಆಶ್ಚರ್ಯವಾಗಿತ್ತು. ನಿಜಕ್ಕೂ ಅದ್ಭುತ ವ್ಯಕ್ತಿ .

ವಾಣಿಶ್ರೀ ಭಟ್ said...

THnak you prakashanna :) ondu adbhyta sadhane madida vyaktiya parichaya madisiddakkagi. kandita omme bheti needa bekenisuttide.

ಗೆಳತಿ said...

ನಮಸ್ತೆ ಅಣ್ಣಯ್ಯ

ನಿಮ್ಮ ಈ ದಿನದ ಬ್ಲಾಗ್ ಓದಿ ನನಗೆ ಪದಗಳಲ್ಲಿ ಹೇಳಲಾರದಷ್ಟು ತುಂಭಾನೇ ಸಂತೋಷವಾಗಿದೆ.

ಇದು ಕೇವಲ ಟ್ರಿಪ್ ಎನ್ನಿಸಿಕೊಳ್ಳದೇ ಎಲ್ಲಾ ಪುಸ್ತಕಪ್ರೇಮಿಗಳಿಗೆ ಒಂದು ಸಂತಸದ, ಹೆಮ್ಮೆಯ ಸುದ್ದಿಯಾಗಿದೆ.

ಎಲೆ ಮರೆಯ ಕಾಯಿಯಂತಿದ್ದ ಪುಸ್ತಕ ಪ್ರೇಮಿ, ಭಾವಜೀವಿ, ಸಾತ್ವಿಕ-ಸೌಜನ್ಯದ ವ್ಯಕ್ತಿ ಅಂಕೇಗೌಡರ ಪೂರ್ಣ ವ್ಯಕ್ತಿತ್ವದ ಹಾಗೂ ಆವರ ಆದರ್ಶ ಜೀವನವನ್ನು ಪರಿಚಯ ಮಾಡಿಕೊಟ್ಟಿದ್ದೀರಿ.

ಶ್ರೀಯುತ ಅಂಕೇಗೌಡರಿಗೆ ಹಾಗೂ ಅವರ ಎಲ್ಲಾ ಕಾರ್ಯಗಳಿಗೆ ಸ್ಪಂದಿಸುತ್ತಿರುವ ಅವರ ಶ್ರೀಮತಿಯವರಿಗೆ ಎಲ್ಲಾ ಪುಸ್ತಕ ಪ್ರೇಮಿಗಳ ಪರವಾಗಿ ನನ್ನ ಸಾಷ್ಟಾಂಗ ನಮಸ್ಕಾರಗಳು

ಇಂತಹ ಮಹಾತ್ಮರ ಬಗ್ಗೆ ತಿಳಿದುಕೊಳ್ಳಲು ಅನುವು ಮಾಡಿಕೊಟ್ಟ ನಿಮ್ಮ ತಂಡಕ್ಕೆ ನನ್ನ ಅನಂತ ಅನಂತ ವಂದನೆಗಳು.

ಮನಸು said...

ಮಾಹಿತಿ ಪೂರ್ಣ ಲೇಖನ ಅಣ್ಣಯ್ಯ ತುಂಬಾ ಚೆನ್ನಾಗಿ ಬರೆದಿದ್ದೀಯಾ, ಹಾಗೆ ಅಂಕೆಗೌಡ್ರು ಅವರ ಬಗ್ಗೆ ಏನು ಹೇಳುವಂತೆಯೇ ಇಲ್ಲ ಇಂತಹ ಮಹಾನ್ ಹವ್ಯಾಸಿಗರು ಎಲ್ಲಿ ಸಿಕ್ತಾರೆ. ಇಂತಹ ವ್ಯಕ್ತಿ ನಮ್ಮಲ್ಲಿ ಇರುವುದೇ ಒಂದು ಸಂತಸದ ವಿಷಯ. ಈ ಸ್ಥಳವನ್ನು ಎಲ್ಲರೂ ನೋಡಿ ಬರಬೇಕು.

balasubramanya said...
This comment has been removed by the author.
ವನಿತಾ / Vanitha said...

Chanda baraddi Prakashanna :)

balasubramanya said...

ಜ್ಞಾನ ಸರೋವರಕ್ಕೆಭೇಟಿ ಕೊಟ್ಟು ಅನುಭವಿಸಿ , ಚಿತ್ರ ತೆಗೆದು , ಮನಸಿನ ಭಾವನೆಗಳನ್ನು ಸುಂದರವಾಗಿ ಹೆಣೆದು ಬ್ಲಾಗ್ ನಲ್ಲಿ ಸುಂದರ ಚಿತ್ತಾರ ಮೂಡಿಸಿದ ನಿಂಗೆ ಜೈ ಹೋ ಪ್ರಕಾಶಣ್ಣ.

Ashok.V.Shetty, Kodlady said...

ಪ್ರಕಾಶಣ್ಣ,

ನಿಮ್ ಹತ್ರ ನಾನು ಮಾತಾಡೋಲ್ಲ .....೨...೨....೨.... ನಾನು ಬರ್ತೀನಿ ಅಂದ್ರು ಕರ್ಕೊಂಡ್ ಹೋಗಿಲ್ಲ ನೀವು......

ನಿಜವಾಗಿಯೂ ಒಂದು ಸುಂದರ 'ದೇಗುಲ'ದ ದರ್ಶನ ಮಾಡಿಕೊಂಡು ಅದ್ರ ಅನುಭವವನ್ನು ಅದಕ್ಕಿಂದ ಸುಂದರವಾಗಿ ಚಿತ್ರಿಸಿ ನಮ್ಮ ಹೊಟ್ಟೆ ಉರಿಸುವ ಪ್ರಯತ್ನವನ್ನು ಸಹ ಸುಂದರವಾಗೇ ಮಾಡಿದ್ದೀರಿ.....ನಿಮ್ ಜೊತೆ ಬರುವ ಅವಕಾಶ ಸ್ವಲ್ಪದರಲ್ಲೇ ತಪ್ಪಿ ಹೋಗಿದ್ದಕ್ಕೆ ದುಃಖ ಆಗ್ತಾ ಇದೆ.......ಆದರೂ ನನ್ನ ಬ್ಲಾಗ್ ಮಿತ್ರರೆಲ್ಲರ ಅನುಭವದ ಲೇಖನಗಳು ನಂಗೆ ಆ ಸುಂದರ ತಾಣದ ದರ್ಶನ ಮಾಡಿಸಿದ್ದಂತು ನಿಜ....

ಧನ್ಯವಾದಗಳು......ಜೈ ಹೊ.....

ಜಲನಯನ said...

ಪ್ರಕಾಶೂ ನನ್ನ ಹತ್ತು ದಿನದ ನಾಡಿನ ಭೇಟಿಯಲ್ಲಿ ಎರಡೇ ದಿನ ಸಾರ್ಥಕ, ಮೊದಲ ದಿನ ಅಮ್ಮ-ಅಪ್ಪರ ನಮಿಸಿ ಆಶೀರ್ವಾದ ಪಡೆದ ಮೊದಲ ದಿನ, ಹೊರಡುವ ಮುಂಚಿನ ಪುಸ್ತಕ ಮನೆಯ ಕಂಡ ದಿನ. ಆಚೆ-ಈಚೆಯ ಸಾರ್ಥಕ ದಿನಗಳ ಮಧ್ಯೆ ಉಳಿದ ಸ್ವಾರ್ಥಕ ದಿನಗಳು. ಆದರೆ ಆ ಸಾರ್ಥಕ ದಿನಗಳಲ್ಲಿ ಒಂದು ದಿನ ಕೊಟ್ಟದ್ದು ನೀನು ಮತ್ತು ಬಾಲು. ಧನ್ಯವಾದ ಇದಕೆ.
ಅಂಕೇಗೌಡರ ಪುಸ್ತಕ ಮನೆಗೆ ಒಮ್ಮೆ ಆಗಸ್ಟಲ್ಲಿ ಹೋಗುವ ಮನಸು ಮಾಡಿದ್ದೇನೆ, ಆ ಅಗಾಧ ಜ್ಞಾನರಾಶಿಯ ಸಾಗರದಲ್ಲಿ ನನ್ನ ಕ್ಷೇತ್ರದ ಜ್ಞಾನ ಮುತ್ತನ್ನು ಹೆಕ್ಕುವ ಆಸೆ.
ಜೈ ಅಂಕೇಗೌಡರೇ ನಿಮ್ಮ ನಿಸ್ವಾರ್ಥ ಸೇವೆಗೆ ನಮನ.

Dr.D.T.Krishna Murthy. said...

ಪ್ರಕಾಶಣ್ಣ;ಬಾಲಣ್ಣನ ಕೃಪೆಯಿಂದ ೨೦೧೦ ರಲ್ಲೇ ಅಂಕೇ ಗೌಡರಂತಹ ಮಹಾನ್ ಪುರುಷರ ಮತ್ತು ಅವರ ಸಾಧನೆಯ ವಿರಾಟ್ ದರ್ಶನ ವಾಗಿತ್ತು.ಸರಸ್ವತೀ ಪುತ್ರರಂತೆ ಕಂಡ ಅವರನ್ನು ಅಲ್ಲೇ ನಿಲ್ಲಿಸಿ ಅವರಿಗೊಂದು ಸಾಷ್ಟಾಂಗ ನಮಸ್ಕಾರ ಮಾಡಿದ್ದೆ.ನಿಜಕ್ಕೂ ಜೀವನದಲ್ಲಿ ಇಂತಹ ವ್ಯಕ್ತಿಯನ್ನೂ ಅವರ ಸಾಧನೆಯನ್ನೂ ಕಣ್ಣಾರೆ ನೋಡಲೇ ಬೇಕು.ಮತ್ತೆ ಮತ್ತೆ ಹೋಗಬೇಕೆಂದು ಮನಸು.ಫೋಟೋ ಮತ್ತು ಲೇಖನ ಅದ್ಭುತವಾಗಿ ಬಂದಿದೆ.ಬ್ಲಾಗಿಗರಿಗೆ ಅಂಕೆಗೌಡರ ದರುಷನ ಮಾಡಿಸಿದ ನಿಮಗೂ ,ಬಾಲಣ್ಣನಿಗೂ ಜಯವಾಗಲಿ.ಜೈ ಹೋ !!!

Sushrutha Dodderi said...

great! bhEti koDbekaytu.

ಮಹಿಮಾ said...

hmmm apporva lekhana...adbhuta vyaktitva...ananya kiru parichaya...yene aagali omme hpgabeku...ee jagada janjada maretu omme jnanasaagarada haniyanna heeri daaha tirisa beku...salp mattigaadaru...vandanegalu...jai ho!!!

Niharika said...

Thanks for the Information anna. Sure i will visit. Happy to know its in Mandya District.

ಸೀತಾರಾಮ. ಕೆ. / SITARAM.K said...

adbhuta chitra lekhana obbarigintaa innobbaadu vinutana-ellara madye Ankegoudara sadhane chiranutana

Keshav.Kulkarni said...

Felt like visiting there. Very good photos and article.

ಸಂಧ್ಯಾ ಶ್ರೀಧರ್ ಭಟ್ said...

ತುಂಬಾ ಚಂದದ ಸಚಿತ್ರ ಲೇಖನ ಪ್ರಕಾಶಣ್ಣ...

guru said...

ಶ್ರೀಯುತ ಅಂಕೇಗೌಡರು ತಮ್ಮ ಶ್ರಮ, ದುಡಿಮೆ, ಸಮಯ ಎಲ್ಲವನ್ನು ಈ ಜ್ಞಾನ ಭಂಡಾರಕ್ಕೆ ಧಾರೆ ಎರೆದು ಇಂದು ಪುಸ್ತಕ ಭಂಡಾರವನ್ನು ಜ್ಞಾನ ಸರೋವರ ವನ್ನಾಗಿ ರೂಪಿಸಿದ್ದಾರೆ.ಇಂತಹ ವ್ಯಕ್ತಿ ನಮ್ಮಲ್ಲಿ ಇರುವುದೇ ಒಂದು ಸಂತಸದ ವಿಷಯ.

Anil Talikoti said...

ಅಂಕೆಗೌಡರ ಸಾಧನೆಗೆ ಬೆರಗಾದೆ. ಸಮೃದ್ಧಿಯ ಅಭಾವವಿಲ್ಲದವರು ಮಾಡದ್ದನ್ನು ಅಂಕೆಗೌಡರು ಮಾಡಿ ತೋರಿಸಿದ್ದಾರೆ, ಅದನ್ನು ಮನಃಪೂರ್ವಕವಾಗಿ, ಮುಕ್ತವಾಗಿ ಹಂಚಿಕೊಳ್ಳುತ್ತಿರುವದ ಕಂಡು ನಿಬ್ಬೆರಗಾದೆ. ಜಿಲ್ಲೆಗೊಬ್ಬರು ಇಂಥವರಿದ್ದರೆ ಸರ್ಕಾರ ವಾರ್ತಾ ಇಲಾಖೆ ಮುಚ್ಚಿ ಮುಗಚಿ ಹಾಕಿಕೊಳ್ಳಬಹುದು. 'ಕ್ಷರ' ವಿಲ್ಲದ್ದು ಅಕ್ಷರ ವಾದರೆ ಅಂಕೆಗೌಡರು ಮಾಡುತ್ತಿರುವದು ನಿರಂತರ ಜ್ಞಾನ ದಾಸೋಹ. ಅವರ ಮನೆಯವರ ಸಹಕಾರ ಓದಿ ಕಣ್ಣು ತುಂಬಿ ಬಂದಿತು. ಅದನ್ನು ಪಸರಿಸಿದ ನಿಮಗೂ ನಮನಗಳು. ಆಜಾದು ಬ್ಲಾಗಿಗರ ಬಗ್ಗೆ ಸ್ವಲ್ಪ ತಿಳಿಸುತ್ತಿರಾ?
ನಿಮ್ಮ ಸಂಗ್ರಹದ ಎಲ್ಲ ಕೊಂಡಿಗಳ ಮೇಲೂ ಸಮಯ ಸಿಕ್ಕಾಗಲೆಲ್ಲ ಕಣ್ಣು ಅಗಲಿಸಿಕೊಂಡು ಓದುವಾಸೆ.
-ಅನಿಲ

asha hegde said...

ತುಂಬಾ ಚೆನ್ನಾದ ಲೇಖನ.....ಒಳ್ಳೇ ಮಾಹಿತಿಗಾಗಿ thank you