Thursday, August 25, 2011

ಅಜ್ಜಾ.. ನೀನು ಗಾಂಧಿ ತಾತ ಅಲ್ಲ...!


ಪ್ರೀತಿಯ ಅಜ್ಜಾ..


ನಿನ್ನ ಕಂಡರೆ ಯಾಕಿಷ್ಟು ಅಕ್ಕರೆ ಹುಟ್ಟಿದೆ..?
ಗೊತ್ತಿಲ್ಲ...


ನನ್ನ ಮಗನಿಗೆ ..
"ನೀನು ಭಗತ್ ಸಿಂಗ್ ನಂತಾಗು...
ಸುಭಾಸ್ ಚಂದ್ರನಂತಾಗು.. ಗಾಂಧಿತಾತನಂತಾಗು.." ಅಂತೆಲ್ಲ ಹೇಳುತ್ತಿದ್ದೆ..


ಸ್ವಲ್ಪ ದೊಡ್ಡವನಾದ ಹಾಗೆ ಅವರ ಬಗೆಗಿನ ಪುಸ್ತಕವನ್ನು ತಂದು ಕೊಡುತ್ತಿದ್ದೆ..


ಒಂದು ದಿನ ನನ್ನ ಮಗ ನನ್ನನ್ನು ಕೇಳಿದ..


"ಅಪ್ಪಾ..
ಭಗತ್ ಸಿಂಗ್..ಗಾಂಧಿಯವರೆಲ್ಲ ಹಳಬರು...
ನೀನೂ ಸಹ ನೋಡಿಲ್ಲ...


ಈಗಿನವರು ಯಾರೂ ಇಲ್ಲವಾ ಒಳ್ಳೆಯ ನಾಯಕರು  ?


ನಮ್ಮದೇಶದ ಪ್ರಧಾನ ಮಂತ್ರಿಗಳು..
ವಿರೋಧ ಪಕ್ಷದ ನಾಯಕರು... 
ಯಾರೂ ಒಳ್ಳೆಯವರು ಇಲ್ಲವಾ ಅಪ್ಪಾ?"


ಏನು ಹೇಳಲಿ...?
ನಾನು ನಿರುತ್ತರನಾಗಿದ್ದೆ..


ನನಗೆ ಈಗ ಉತ್ತರ ಸಿಕ್ಕಿದೆ...!! ಇಷ್ಟು ದಿನ ಎಲ್ಲಿದ್ದೆ  ಅಜ್ಜಾ...?


ನನ್ನ ಮುದ್ದು ಅಜ್ಜಾ...


ಯಾಕೆ ಉಪವಾಸ ಮಾಡುತ್ತೀಯಾ...?


ಈ ದೇಶದ ಬಗೆಗಾ? ..
ನಮ್ಮ ಮುಂದಿನ ಭವಿಷ್ಯದ ಬಗೆಗಾ?....


ಬೇಡ ಅಜ್ಜಾ...


ನಾವು ಈಗ ಸಂತೃಪ್ತಿಯಿಂದ ಇದ್ದೇವೆ..
ಈಗಿನ ವಾತಾವರಣಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ಹೊಂದಿಕೊಂಡಿದ್ದೇವೆ...


ಬೇಡ ಅಜ್ಜಾ.. ನಮಗಾಗಿ ಉಪವಾಸ ಮಾಡಬೇಡ...


ಹಿಂದೆ ಗಾಂಧಿತಾತ ಉಪವಾಸ ಸತ್ಯಾಗ್ರಹ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟರು...


ಅಜ್ಜಾ.. 
ನೀನು ಗಾಂಧಿ ತಾತ ಅಲ್ಲ...! 


ನಿನ್ನನ್ನು "ಗಾಂಧಿತಾತನಂತೆ"  ನೋಡುವ ಯೋಗ್ಯತೆಯೂ ನಮಗಿಲ್ಲ..
ನೋಡುವದೂ ಇಲ್ಲ..!

ನನ್ನ ಮುದ್ದು ಪುಟಾಣಿ ಅಜ್ಜ..

ನಮ್ಮನ್ನೆಲ್ಲ ಒಡೆದು ಬಿಟ್ಟಿದ್ದಾರೆ ..

ನಮ್ಮ ಜಾತಿ ...
ಭಾಷೆ ಹೆಸರಲ್ಲಿ... ಮತ ಧರ್ಮದ..
ಸಿದ್ಧಾಂತದ  ಹೆಸರಲ್ಲಿ ಒಡೆದು ಚೂರು ಚೂರಾಗಿ ಹೋಗಿದ್ದೇವೆ..


ಅಯ್ಯೋ ಅಜ್ಜಾ...
ನಿನ್ನ ತತ್ವಗಳ,  ನೀತಿಗಳ .. ದಿನಾಂಕ  ಮುಗಿದಿದೆ..
ಮುಂಬೈ ಸಿನೆಮಾಗಳ ...
ಅಲ್ಲಿನ ಥಳುಕಿನ ನಟರ ದೇಶ ಭಕ್ತಿ....
ಸಾಹಸ ನಮಗಿಷ್ಟ.. ಅದರ ಬಗೆಗೆ ನಮ್ಮ ಚಿಂತನೆ...!

ಮತ್ತೆ ದೇಶದ ಹೆಸರಲ್ಲಿ ನಮ್ಮನ್ನು ಸೇರಿಸುವ ವ್ಯರ್ಥ ಪ್ರಯತ್ನ ಮಾಡಬೇಡ..


ನಾವೆಲ್ಲಾ ಒಡೆದ ಮನಸ್ಸಿನವರು... ಮತ್ತೆ ಒಂದಾಗುವ ಆಸೆ ನಮಗಿಲ್ಲ....

ಒಡೆದ ಮನಸ್ಸುಗಳಲ್ಲಿ... ...
ಒಂದು ತರಹದ ವಿಲಕ್ಷಣ ಸಂತೋಷವನ್ನು ಅನುಭವಿಸುತ್ತಿದ್ದೇವೆ...

ನಮ್ಮ ಖುಷಿಗೆ  ಅಡ್ಡಿ ಪಡಿಸಬೇಡ...

ಆ ಗಾಂಧಿತಾತನಿಗೆ  ಒಂದು ಪಕ್ಷವಿತ್ತು..
ಹಣವಿರುವವರ ಬೆಂಬಲವಿತ್ತು..
ದೇಶದ ತುಂಬಾ ಒಂದು ಸಂಘಟನೆ ಇತ್ತು....


ಮುಂದಿನ ಪ್ರಧಾನ ಮಂತ್ರಿ ಯಾರಾಗ ಬಹುದೆಂದರೆ ಆ ತಾತನ ಬಳಿ ಉತ್ತರ ಸಿದ್ಧವಿತ್ತು..


ಮುದ್ದು ಅಜ್ಜಾ...


ನಿನ್ನ ಬಳಿ ಏನಿದೆ?...


ನಿನ್ನ ಹತ್ತಿರ ಮುಂದಿನ ....
"ಪ್ರಧಾನ ಮಂತ್ರಿ ಸ್ಥಾನಕ್ಕೆ ಯೋಗ್ಯ ರಾಜಕೀಯ  ಉಮೇದುವಾರ " ಇದ್ದಾನೆಯೇ..?..

ನನ್ನ ಪುಟ್ಟು ಅಜ್ಜಾ ಯಾವುದೋ ಭ್ರಮೆ ಬೇಡ...


ಸತ್ಯ.., 
ಅಹಿಂಸೆಯೆಲ್ಲ ಇಂದಿನ ಭಾರತಕ್ಕೆ ಅಲ್ಲ...!
ಇಂದಿನ ಸರಕಾರಕ್ಕೂ ಅಲ್ಲ...


ಅಜ್ಜಾ...


ನಿನಗೆ ಗೊತ್ತಿಲ್ಲದಂತೆ ನಿನ್ನ ಮಕ್ಕಳು.. ಮೊಮ್ಮಕ್ಕಳು...
ನಾವೆಲ್ಲಾ.. ಬದಲಾಗಿಬಿಟ್ಟಿದ್ದೇವೆ..


ಸರಿಯಾಗಲಾರದಷ್ಟು ಬದಲಾಗಿದ್ದೇವೆ..


ನೋಡುತ್ತಾ ಇರು..
ನಿನಗೂ ಒಂದು ಜಾತಿ.. ಬಣ್ಣ ಬಳಿದು..
ನಿನ್ನನ್ನೂ ....
ಒಂದು ಸಮುದಾಯದ ಬಾವುಟವನ್ನಾಗಿ ಮಾಡಿಬಿಡುತ್ತೇವೆ..


ಅಜ್ಜಾ..
ನಮಗೆ ಯಾರಿಗೂ ನಾಚಿಕೆಯಿಲ್ಲ..!


ಇಷ್ಟೆಲ್ಲ ಜನ ಬಂದರು..
ಆಂದೋಲನ ಮಾಡಿದರು ಅಂತ ಭ್ರಮೆಯಲ್ಲಿ ನೀನಿರಬೇಡ..!

ಈ ಜನರಾ...?
ಟಿವಿಯಲ್ಲಿ ತಮ್ಮ ಮುಖ ಬರುತ್ತದೆ ಅಂತ ಬಂದವರೇ ಜಾಸ್ತಿ...!

ಅಜ್ಜಾ..


ನಿನ್ನ ಬೆಂಬಲಕ್ಕೆ ನಿಂತ ಎಲ್ಲ ಮಾಧ್ಯಮದವರು...
ನಿನ್ನೆದುರಿಗೆ ಸೇರಿ ಕೂಗುವ ಜನ...
ಎಲ್ಲರೂ... ಆತ್ಮವಂಚನೆ ಮಾಡಿಕೊಳ್ಳುವವರು..


ಅಜ್ಜಾ...
ನಿನ್ನೆ ನಿನಗೆ "ಜೈಕಾರ ಹಾಕಿ" ..
ಇಂದು ನಗರ ಸಭೆಗೆ ಹೋಗಿ ನಾನು  ಕಾಸು  ಕೊಟ್ಟು ಬಂದೆ...


ಕಾಸು  ಕೊಡುವ ನನಗೂ..
ತೆಗೆದುಕೊಂಡ ಅವನಿಗೂ ...
ಸ್ವಲ್ಪವೂ ಮುಜುಗರವೂ.. ನಾಚಿಕೆಯೂ ಆಗಲಿಲ್ಲ..
ರೂಢಿಯಾಗಿಬಿಟ್ಟಿದೆ...


ನಮ್ಮ "ಆತ್ಮಸಾಕ್ಷಿಯನ್ನು"  ಸಾಯಿಸಿ...
ಇಬ್ಬರೂ ನಗುತ್ತ .. ಸ್ನೇಹಿತರಂತೆ ಇದ್ದೇವೆ..!


ಇಷ್ಟು ದೊಡ್ಡ ಪಟ್ಟಣದಲ್ಲಿ ಹೆಂಡತಿ ಮಕ್ಕಳೊಂದಿಗೆ ಬದುಕಲು ಇದು ಅಗತ್ಯ...


ಪ್ರೀತಿಯ ಅಜ್ಜಾ .... ಬೇಜಾರಾಗಬೇಡ..


ಇನ್ನು ಸರಕಾರದ ಜೊತೆ ನಿನ್ನ ಮಾತುಕತೆ..!


ತಾವು ಕುಳಿತ ಹಣ್ಣಿನ ಮರದ ರೆಂಭೆಯನ್ನು ...
ಯಾರಾದರೂ ಕಡಿಯುತ್ತಾರೆಯೇ ಅಜ್ಜಾ...?


ಅಜ್ಜಾ..
ನಮ್ಮ ಪ್ರತಿನಿಧಿಗಳು ನಾಟಕದವರು...!


ಒಪ್ಪಿಕೊಂಡಂತೆ ಮಾಡಿದರೂ... ರಂಗೋಲಿ ಒಳಗೆ ನುಸಿಯಲು ಜಾಗ ಇಟ್ಟುಕೊಂಡಿರುತ್ತಾರೆ...


ಅಜ್ಜಾ...
ನಮ್ಮ ದೇಶದ ಬ್ರಷ್ಟಾಚಾರ  ವಿದೇಶಗಳಿಂದಲೂ ಬೆಂಬಲಿತ...


ಅನೇಕ ಅಂತರರಾಷ್ಟ್ರೀಯ ಕಂಪೆನಿಗಳು ..
ನಮ್ಮ ದೇಶವನ್ನು ಉದ್ಧಾರ ಮಾಡಲು ಬಂದಿವೆ..


ನಮ್ಮ ದೇಶದ ಅನೇಕ ಗಣ್ಯರು ..!
ಅವರ ಮಕ್ಕಳು ಅದರಲ್ಲಿ ಕೆಲಸ ಮಾಡುತ್ತಾರೆ..

ನಿನ್ನ ಬಿಲ್ಲನ್ನು ಪಾಸು ಮಾಡುತ್ತೇವೆ ಎನ್ನುವ...
ಎಲ್ಲ ಪಕ್ಷದ ಎಂಪಿಗಳಿಗೆ..
ಮಂತ್ರಿಗಳಿಗೆ....
ಸಂಸತ್ತಿನಲ್ಲಿ ಬಿಲ್ಲು ಪಾಸುಮಾಡುವಾಗ...
ಅವರಿಗೆ ತಿಂದ ಲಂಚದ "ಆತ್ಮಸಾಕ್ಷಿಗೆ " ಹೇಗೆ ಮೋಸ ಮಾಡಿಕೊಳ್ಳಲು ಸಾಧ್ಯ...?

ಬಹುರಾಷ್ಟ್ರೀಯ ಕಂಪೆನಿಗಳ  ಎಂಜಲನ್ನು ..
ನಾವು ಗೌರವದಿಂದ ತಿನ್ನುತ್ತಿದ್ದೇವೆ..
ಆ ಅತಿಥಿಗಳಿಗೆ ನಾವು ಹೇಗೆ ಅಗೌರವ ತೋರಿಸಲು ಸಾಧ್ಯ...?


ಈ ಕಾನೂನು ಬಂದರೆ ಎಷ್ಟೊಂದು ಕುಟುಂಬದ ಯಜಮಾನರು ಜೈಲಿನಲ್ಲಿರಬೇಕಾಗುತ್ತದೆ..?


ಸ್ವಲ್ಪ ಯೋಚಿಸು ಅಜ್ಜಾ...ಅವರೂ ನಿನ್ನ ಮಕ್ಕಳು..!


ಅಜ್ಜಾ..
ಈಗ ಸಂಧಾನ ಮಾತುಕತೆ ಅಂತೆಲ್ಲ ನಾಟಕ ನಡೆಯುತ್ತಿದೆಯಲ್ಲ..


ತೆಪ್ಪಗೆ ಒಪ್ಪಿಕೊಂಡುಬಿಡು..
ಈ ಉಪವಾಸ.. ಅಹಿಂಸೆ.. ಸತ್ಯಾಗ್ರಹ ನಮಗೆ ಅಗತ್ಯ ಇಲ್ಲ..


ಪ್ರತಿ  ನಿತ್ಯ "ನೂರಾ ಇಪ್ಪತ್ತು ಕೋಟಿ" ಜನಕ್ಕೆ  ಹೂವಿಡುವವರಿಗೆ..
ಇನ್ನೊಂದು ಹೂ ಇಡುವದು ಕಷ್ಟವೆ?


ಅಜ್ಜಾ..


ಇದುವರೆಗೆ ಯಾರೂ ಇಡದ ...
ಒಂದು ಚಂದದ ಹೂವು ನಿನಗಿಡುತ್ತಿದ್ದಾರೆ..!


ಇಂದು ಅಲ್ಲದಿದ್ದರೆ ನಾಳೆ ಕೊಟ್ಟೆ..ಕೊಡುತ್ತಾರೆ...!


ಇಟ್ಟುಕೊ..!!


ನಾವು ಇಟ್ಟುಕೊಂಡಿದ್ದೇವೆ... ನೀನೂ ಸಹಿಸಿಕೊ..
ಕ್ರಮೇಣ ರೂಢಿಯಾಗುತ್ತದೆ...!


ಅಜ್ಜಾ..


ಇದೆಲ್ಲ ಬಿಟ್ಟು ನಮ್ಮನೆಗೆ ಬಾ..


ಶೇಂಗಾವನ್ನು ನೀರಿನಲ್ಲಿ ಬೇಯಿಸಿ ...
ಉಪ್ಪು ಖಾರ ಹಾಕಿ ಬೇಯಿಸಿಡುತ್ತೇನೆ..


ಅದನ್ನು ತಿನ್ನುತ್ತ..
ನಿನ್ನ ಹಿಂದಿನ ಸಾಹಸದ ಕಥೆಗಳನ್ನು ಹೇಳು..


ನಿನಗೊಂದು ಜಾತಿ ಪಟ್ಟ ಕಟ್ಟಿ..
ಬಣ್ಣ ಬಳಿದು..
ನಿನ್ನನ್ನು...
ಒಂದು ಬಾವುಟವನ್ನಾಗಿ ನೋಡಲು ಮನಸ್ಸು ಒಪ್ಪುತ್ತಿಲ್ಲ..


ಕರಳು ಕಿವುಚಿದಂತಾಗುತ್ತದೆ..


ಬಂದು ಬಿಡು ಅಜ್ಜಾ...!


ಕಾಯುತ್ತಾ ಇರ್ತೆನೆ...

27 comments:

ಚುಕ್ಕಿಚಿತ್ತಾರ said...

ಬಂದು ಬಿಡು ಅಜ್ಜಾ...


ಕಾಯುತ್ತಾ ಇರ್ತೆನೆ...

TOUCHED..

Ittigecement said...

ವಿಜಯಾ...

ನಾವೆಲ್ಲ ಒಡೆದ ಮನಸ್ಸಿನವರು..
ಮತ್ತೆ ಜೋಡಿಸಲಾಗದಷ್ಟು ಒಡೆದು ಹೋಗಿದ್ದೇವೆ..

ಜಾತಿ..
ಮತ ಧರ್ಮ.. ಭಾಷೆ..
ಸಿದ್ಧಾಂತಗಳ ಹೆಸರಲ್ಲಿ ಒಡೆದು ಹೋಗಿದ್ದೇವೆ..

ಬಹುಷಃ ಇದು ದೇಶದ ಹೆಸರಲ್ಲಿ ನಡೆಯುತ್ತಿರುವ ಮೊದಲನೆಯ ಆಂದೋಲನ..

ಸಾಧ್ಯವಾಗದ "ಅಸಾಧ್ಯ"ದ ಬಗೆಗೆ ಅಂದೋಲನ ಇಷ್ಟು ಬೇಗ ಮುಗಿಯಲಾರದು..
ಇದು ಮೊದಲನೆಯ ಹಂತ ಅಷ್ಟೆ...

ಮನಸಿನ ಮಾತುಗಳು said...

ಏಳು ದಿನದಿಂದ ಏನೂ ತಿನ್ನದೇ ಉಪವಾಸ ಕುಳಿತಿರುವ ಅಜ್ಜನ ನೋಡಿದ್ರೆ ನನಗೆ ಕಣ್ಣಲ್ಲಿ ನೀರು ಬರುತ್ತೆ...:-(

ನೀನು ಹೇಳಿದ್ದು ಒಂದು ಅರ್ಥದಲ್ಲಿ ಹೌದು ಪ್ರಕಾಶಣ್ಣ. "ಪ್ರತಿ ನಿತ್ಯ ಹೂವಿಡುವವರಿಗೆ..
ಇನ್ನೊಂದು ಹೂ ಇಡುವದು ಕಷ್ಟವೆ?" ಈ ಮಾತು ನಿಜ.

Manju M Doddamani said...

ಈ ದೇಶದ ಕಥೆ ಇಷ್ಟೇ ಅಂತ ತಾತನಿಗೆ ಗೊತ್ತು ಆದ್ರು ಅವರು ತಮ್ಮ ಆತ್ಮ ವಿಶ್ವಾಸವನ್ನ ನಂಬಿ ಮಹಾತ್ಮರ ದಾರಿಯಲ್ಲಿ ನಡೀತಾ ಇದಾರೆ ವರಿಗೆ ಜಯವಾಗಲಿ ಹಾಗೆ ನಿಮ್ಮ ಮಾತುಗಳು ಚಿಕ್ಕ ಮಗುವಿನ ಬಾಯಿಂದ ಬಂದಾ ಫೀಲ್ ಕೊಡುತ್ತೆ ತುಂಬಾ ಇಷ್ಟಾ ಆಯ್ತು ಅಸ್ಟೇ ಫೀಲ್ ಆಯ್ತು ಸರ್


ಶೇಂಗಾವನ್ನು ನೀರಿನಲ್ಲಿ ಬೇಯಿಸಿ ಉಪ್ಪು ಖಾರ ಹಾಕಿ ಬೇಯಿಸಿಡುತ್ತೇನೆ..ಅದನ್ನು ತಿನ್ನುತ್ತ..ನಿನ್ನ ಹಿಂದಿನ ಸಾಹಸದ ಕಥೆಗಳನ್ನು ಹೇಳು..!

Ittigecement said...

ದಿವ್ಯಾ...

ಏಳು ದಿನ ಅಲ್ಲ..
ಇಂದು ಹತ್ತನೆಯ ದಿನ...!

ಸಂಸತ್ತಿನಲ್ಲಿ ಎಲ್ಲ ರಾಜಕೀಯ ಪಕ್ಷದ ಕಳ್ಳರಿದ್ದಾರೆ..

ಈ ಕಾನೂನು ಬಂದರೆ ಎಲ್ಲರೂ ಜೈಲಿಗೆ ಹೋಗಬೇಕಾಗುತ್ತದೆ..

ಕಪಿಲ್ ಸಿಬ್ಬಾಲ್ ಒಮ್ಮೆ ಸಂಸತ್ತಿನಲ್ಲಿ ಈ ಕಾನೂನನ್ನು ವಿರೋಧಿಸುತ್ತ ಹೇಳಿದ್ದರು

"ಇಷ್ಟು ವರ್ಷದ ಈ (ಸಂಸತ್ತು) ಮರವನ್ನು ನಾವೇ ಕಡಿದುಕೊಳ್ಳಬೇಕಾಗುತ್ತದೆ..

ನಿಜ ಕಳೆದ ಅರವತ್ತೈದು ವರ್ಷಗಳಿಂದ ಚೆನ್ನಾಗಿ ತಿಂದು ಮೇಯುತ್ತಿರುವ ಇವರು..
ಎಮ್ಮೆಲ್ಲೆಗಳು..
ಅಧಿಕಾರಿಗಳು..
ಈ "ಜನಲೋಕಪಾಲಬಿಲ್" ಬರುವದಕ್ಕೆ ಬಿಡುವದಿಲ್ಲ..

ಅಧಿಕಾರ ಎಲ್ಲವನ್ನೂ ತಿನ್ನುತ್ತದೆ..
ಜೀರ್ಣಿಸಿಕೊಳ್ಳುತ್ತದೆ..

ನಾವು..?

ಎಲ್ಲವನ್ನೂ ಮರೆತುಬಿಡುತ್ತೇವೆ..

Sushrutha Dodderi said...

hmm.. nangoo isht dina idda hopes hortu hoytu. :(

lakshmish hegde said...
This comment has been removed by the author.
lakshmish hegde said...
This comment has been removed by the author.
lakshmish hegde said...

the most dangerous people are dose, who are inbetween two extremities.. ds post has only tried to show clearly dat everything is blur,which voids the entire arguement...we guys(youth) ve to move really far in aar life n it can be said wid no doubt dat, zindagi ki kisi mod par, the fact"we had also supported ds social cause" might stop us in involv in corruption... ds is greater dan any chaturmasya of any guru...sorry..no offence..nawu jasti ogggikondiruwudu yawadakke gottideye???"nawu oggikondu bittiddewe enu madidaru prayojanawilla...kuch bhi chaltha hain"ennuwudakke..

Prabhakar. H.R said...

nice write up...sir...

Vani Satish said...

Still little hope is there..... Prakashanna ..Yes We are also in pain about Anna Hazare :(

ಓ ಮನಸೇ, ನೀನೇಕೆ ಹೀಗೆ...? said...

very true prakashanna..:(

Dr.D.T.Krishna Murthy. said...

prakashanna;touching write up.

ವಾಣಿಶ್ರೀ ಭಟ್ said...

chintanege hachhuva baraha.. nija navu ellavannu sahisikondu sahya ennuvantiddve... badalavaneya birugaali swalpa kashtave!

ಚಿತ್ರಾ said...

ಪ್ರಕಾಶಣ್ಣ ,

ನನಗೆ ಮಾತೇ ಹೊರಡ್ತಾ ಇಲ್ಲ !ಗಂಟಲು ಕಟ್ಟುತ್ತಾ ಇದೆ..
ಒಬ್ಬ ಅತ್ಯುತ್ತಮ ವ್ಯಕ್ತಿಯ ಬಗ್ಗೆ ಬಹು ಸುಂದರ ಲೇಖನ ! ಮನತಟ್ಟುತ್ತದೆ !

sunaath said...

Prakash,
It is piercing irony!

Gubbachchi Sathish said...

ಪ್ರೀತಿಯ ಪ್ರಕಾಶಣ್ಣ,

ಈ "ಅಣ್ಣಾ" ಇದ್ದಾರಲ್ಲ ಅವರ ಬಗ್ಗೆ ನನಗೆ ಇತ್ತೀಚಿಗಷ್ಟೇ ಗೊತ್ತಾಗಿದ್ದು. ನೀವು ಅವರನ್ನು ಬಹಳ ಹತ್ತಿರದಿಂದ ನೋಡಿರುವಿರಿ. ಸದ್ಯಕ್ಕೆ ನಿಮ್ಮನ್ನು ನಾನು ನೋಡಿದ್ದೇನೆ, ನಿಮ್ಮ ಸಾಂಗತ್ಯವಿದೆ ಅನ್ನುವುದು (ಹಜಾರೆ ಅಣ್ಣನ) ಖುಷಿಯ ವಿಚಾರ. ಆದರೆ, ಈ ಹಜಾರೆ ಅಣ್ಣಾ ಮಾಡುತ್ತಿರುವ ಉಪವಾಸದಿಂದ ನಾವು ಎಷ್ಟೆಲ್ಲಾ ಕಲಿತೆವು, ಕಲಿಯುತ್ತಿದ್ದೇವೆ. ನಮ್ಮನ್ನು ನಾವು ಪ್ರಶ್ನಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಎಚ್ಚರಿಸುತ್ತಿದ್ದಾರೆ. ಇವರು ನಮಗೆ ಯುಗಪ್ರವರ್ತಕರಂತೆ ತೋರುತ್ತಿದ್ದಾರೆ. ಸ್ವಂತ ಬುದ್ದಿಇಲ್ಲದ ನಾಯಕರು ಪಕ್ಕಾ ಮೃಗಗಳಂತೆ ವರ್ತಿಸುತ್ತಿದ್ದಾರೆ. ಇವತ್ತಿನ ಬೆಳಗಿನ ಪೇಪರಿನಲ್ಲಿ ಅಣ್ಣಾರನ್ನು ಸಂತೈಸಲು ವಿಲಾಸ್‍ರಾವ್ ದೇಶ್‍ಮುಖ್ ಇದ್ದರು ಎಂದು ಓದಿದೆ. ಹ್ಹ ಹ್ಹ ಹ್ಹ ಈ ವ್ಯಕ್ತಿ ಈ ವಾರದ ದಿ ವೀಕ್ ನ ಮುಖಪುಟದ ಕ್ರಿಮಿನಲ್! ೧೦೦೦ ಕೋಟಿ ಅವ್ಯವಹಾರ!! ಎಂಥಾ ನಾಚಿಕೆಗೇಡು. ಅಲ್ಲವೇ? ನಿಮ್ಮ ಲೇಖನ ಆತ್ಮೀಯತೆಯಿಂದ ಕೂಡಿ, ಎಂತಹವರನ್ನು ಅಜ್ಜನ ಕಥೆ ಕೇಳಿ ಸ್ಪೂರ್ತಿಗೊಳ್ಳುವಂತೆ ಪ್ರೇರೆಪಿಸುತ್ತಿದೆ. ನಿಮಗೆ ಅನಂತ ಅಭಿನಂದನೆಗಳು.

Guruprasad said...

ಪ್ರಕಾಶಣ್ಣ....
ವಾ ... ನಮ್ಮ ಮನಸೇ ಕರಗಬೇಕು,,,, ಹೌದು ನೀವು ಹೇಳುತ್ತಿರುವುದು ಸತ್ಯ,,, ನಾವೆಲ್ಲಾ ಬದಲಿಸಲಾಗದಷ್ಟು ಮುಂದೆ ಬಂದಿದ್ದೇವೆ,,, ಈ ಗೊಡ್ಡು ವ್ಯವಸ್ತೆಗೆ ಒಪ್ಪಿಕೊಂಡಿದ್ದೇವೆ....ಆದರೆ ಯಾರೋ ಒಬ್ಬರು ಮುಂದೆ ನಿಂತು ಹೊತ್ತಿಕೊಂಡ ಕಿಡಿ... ಇಡೀ ದೇಶಕ್ಕೆ ವ್ಯಾಪಿಸಿದೆ.... ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಭ್ರಷ್ಟಾಚಾರದ ವಿರುದ್ದ ತಮ್ಮ ದ್ವನಿ ಎತ್ತಿದ್ದಾರೆ ಅಂದರೆ ಅದು ಸುಲಬದ ಮಾತಲ್ಲ... ಪೂರ್ತಿ ಬದಲಾಗದೆ ಇದ್ದರು ... ಇದು ಭ್ರಷ್ಟ ರಿಗೆ ಇದರ ಬಿಸಿ ಮುಟ್ಟಿದೆ ಅಲ್ವ.... ಅಗಲಿ...ಅದೇ ಬೇಕಾಗಿರುವುದು,,,, atleast ನಮ್ಮ ಮುಂದಿನ generation ಇದರಿಂದ ಸ್ವಲ್ಪ ನಾದ್ರೂ ಎಚ್ಚೆತ್ತು ಕೊಳ್ಳ ಬಹುದು,,, ಇದು ಈ ಪರಿ ಹಬ್ಬಿರುವುದಕ್ಕೆ,," ನಮ್ಮ ಕಟ್ಟಾಳು ಗಳಿಗೆ ಜಾಮೀನು ಸಿಗದೇ ಇರುವುದು,, ಏನೆ ತಿಪ್ಪರಲಾಗ ಹಾಕಿದರು ನಮ್ಮ ಎಡ್ಡಿ ಗೆ ಹಿನ್ನೆಡೆ ಆಗ್ತಾ ಇರೋದು....." ಅಲ್ವ...... ಸ್ವಲ್ಪ ನಾದ್ರೂ ಚೇಂಜ್ ಇದೆ ಅಲ್ವ ...
ಅಜ್ಜನ ಬಗ್ಗೆ ನಮ್ಮ ಪ್ರಕಾಶಣ್ಣ ನ ಸುಂದರ ಬರಹ ....ಚೆನ್ನಾಗಿ ಇದೆ....

Suvarnini Konale said...

ದೂರದ ತಾರೆಗಳ ಕನಸು ಕಾಣುತಾ, ಅದೇ ತಾರೆಗಳ ಬೆಳಕಿನೊಂದಿಗೆ ಕತ್ತಲೆಯೊಳಗೆ ನಡೆಯುವ ಪ್ರಯತ್ನ ನಮ್ಮದು ! ನಡೆಯುತ್ತಿಲ್ಲ ನಾವು.. ಓಡುವವರ ಕಾಲ್ತುಳಿತಕ್ಕೆ ಸಿಲುಕಿ ನಲುಗುತ್ತಿದ್ದೇವೆ. ಆದರೂ ಬೆಳಕು ತುಂಬಿದ ಹಾದಿಯಲ್ಲಿ ಸಾಗುವ ಧೈರ್ಯ ನಮಗಿಲ್ಲ.ಭಯ ನಮಗೆ ! ಅಂತೂ ಇಂತೂ ಲೋಕಪಾಲ್ ಬಿಲ್ ಜಾರಿಗೆ ಬಂದರೂ ಕೂಡ, ನಾವು ಸಾಗುವುದು ಮತ್ತದೇ ಕತ್ತಲೆಯ ಹಾದಿಯೊಳು, ಅಪ್ಪಿ ತಪ್ಪಿ ಅಲ್ಲಿ ಬೆಳಕು ತುಂಬಿದರೂ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲೇ ಬದುಕು ಸಾಗಿಸುವ ನಾವು !
ಬರವಣಿಗೆ ಮನ ಮುಟ್ಟಿತು....

Suvarnini Konale said...

ದೂರದ ತಾರೆಗಳ ಕನಸು ಕಾಣುತಾ, ಅದೇ ತಾರೆಗಳ ಬೆಳಕಿನೊಂದಿಗೆ ಕತ್ತಲೆಯೊಳಗೆ ನಡೆಯುವ ಪ್ರಯತ್ನ ನಮ್ಮದು ! ನಡೆಯುತ್ತಿಲ್ಲ ನಾವು.. ಓಡುವವರ ಕಾಲ್ತುಳಿತಕ್ಕೆ ಸಿಲುಕಿ ನಲುಗುತ್ತಿದ್ದೇವೆ. ಆದರೂ ಬೆಳಕು ತುಂಬಿದ ಹಾದಿಯಲ್ಲಿ ಸಾಗುವ ಧೈರ್ಯ ನಮಗಿಲ್ಲ.ಭಯ ನಮಗೆ ! ಅಂತೂ ಇಂತೂ ಲೋಕಪಾಲ್ ಬಿಲ್ ಜಾರಿಗೆ ಬಂದರೂ ಕೂಡ, ನಾವು ಸಾಗುವುದು ಮತ್ತದೇ ಕತ್ತಲೆಯ ಹಾದಿಯೊಳು, ಅಪ್ಪಿ ತಪ್ಪಿ ಅಲ್ಲಿ ಬೆಳಕು ತುಂಬಿದರೂ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲೇ ಬದುಕು ಸಾಗಿಸುವ ನಾವು !
ಬರವಣಿಗೆ ಮನ ಮುಟ್ಟಿತು....

ಶ್ರೀವತ್ಸ ಕಂಚೀಮನೆ. said...

ಒಪ್ಪಿಕೊಳ್ಳಲೇಬೇಕಾದ ಘೋರ ಸತ್ಯ...
ಮನಸು ಹಿಂಜಿದಂತಾಗುತ್ತದೆ...

lakshmish hegde said...

lol...everybody is up wid d same point???really?? the problem here is high flown kannada usage has d higher prominance over d actual fact dat should have been...rofl..

Prashanth Arasikere said...

Namage yakadru freedom siktho annustha ide..british rule iddagle chennagittu annustha ide....jana hedrutha idru sarkarakke adre iga enu illla..duddu idre saku ella agutte anno sthihthi agide..

ತೇಜಸ್ ಜೈನ್ Tejas jain said...

ಇಂತಹ ವ್ಯಕ್ತಿಯ ಉಪವಾಸದ ಬಗ್ಗೆ ಬಗ್ಗೆ "ಹುಲ್ಲು ತಿಂದವನೂ" ಆರೋಪಮಾಡಿಬಿಟ್ಟ...!

>>"ನಿನಗೊಂದು ಜಾತಿ ಪಟ್ಟ ಕಟ್ಟಿ..
ಬಣ್ಣ ಬಳಿದು..
ನಿನ್ನನ್ನು...
ಒಂದು ಬಾವುಟವನ್ನಾಗಿ ನೋಡಲು ಮನಸ್ಸು ಒಪ್ಪುತ್ತಿಲ್ಲ."

ನಿಮ್ಮ ಮಾತು ನಿಜ, ಕೆಲವೇ ದಿನಗಳಲ್ಲಿ ಇದನ್ನೂ ನಿರೀಕ್ಷಿಸಬಹುದು :(

ಲೇಖನ ಚೆನ್ನಾಗಿ ಮೂಡಿ ಬಂದಿದೆ...

PrashanthKannadaBlog said...
This comment has been removed by the author.
PrashanthKannadaBlog said...

ಶಿಲಾಯುಗಕ್ಕೆ ಮರಳಿ ಬಂದಿದ್ದೇವೆ ನಾವು. ಬಲಶಾಲಿ ದುರ್ಬಲರನ್ನು ಬಳಸಿಕೊಂಡು ಬದುಕುವ ರೀತಿ.
ಇಂದು ಅದಕ್ಕೆ ಭಾವನೆಗಳ ಮೆರುಗು ಬೇರೆ ಕೇಡು.
ತಪ್ಪು ಮತ್ತು ಸರಿಯ ಅರ್ಥವನ್ನೇ ಅದಲು ಬದಲು ಮಾಡಿಕೊಂಡು ಆತ್ಮವಂಚನೆ ಮಾಡಿಕೊಂಡು ಇರುವವರು ನಾವು.
ಅಣ್ಣಾ ಹಜಾರೆ ಕಾರ್ಗತ್ತಲಲ್ಲಿ ಮಿಣುಕು ಹುಳದಂತೆ ಬಂದಿದ್ದಾರೆ. ಅದರಿಂದೆಷ್ಟು ಉಪಯೋಗವೋ ಗೊತ್ತಿಲ್ಲ. ಸಮಾಜದ ಒಳಿತಿಗಾಗಿ ಮಿಡಿಯುತ್ತಿರವ ಅವರಿಗೆ ಪ್ರಾಮಾಣಿಕ ವಂದನೆಗಳು.

ಸಾಗರದಾಚೆಯ ಇಂಚರ said...

Prakaashanna, upavaasa mugidu vaaragale kaledu hoyitu,
sarakaara matte nirlajjetana pradarshiside

namma desha sudharisuvudu endo ?

sundara samyochita baraha