Sunday, January 17, 2010

ನನ್ನದೊಂದು ಪುಟ್ಟ ಸಲಾಮ್....!

ನನ್ನ  ಮಿತ್ರ "ಗೌತಮ್" ಮೊಬೈಲ್ ನಿಂದ ಒಂದು ಮೆಸೆಜ್ ಕೊಟ್ಟಿದ್ದರು..

"ಪ್ರಕಾಶಣ್ಣ ನಿನ್ನ ಬಗ್ಗೆ ಬ್ಲಾಗಿನಲ್ಲಿ ಕವಿತೆ ಬಂದಿದೆ...!


ಮನೆಗೆ ಬಂದು ಲಗುಬಗೆಯಿಂದ ನೆಟ್ ಓಪನ್ ಮಾಡಿದೆ...!


ಅಮೇರಿಕಾದ ಟೆಕ್ಸಾಸ್‍ನಲ್ಲಿರುವ...
 ಸಹೋದರಿ "ವನಿತಾ"ರವರು ಆರ್ಕುಟ್‍ನಲ್ಲಿ ನನಗೊಂದು ಮೆಸೆಜ್ ಇಟ್ಟಿದ್ದರು..
ಹಾಗೆಯೇ ಒಂದು ಲಿಂಕ್ ಕೊಟ್ಟಿದ್ದರು..
ಅಲ್ಲಿ ಕ್ಲಿಕ್ ಮಾಡಿ ಹೋದರೆ..


ಅದು ಕುವೈತ್‍ನಲ್ಲಿರುವ ಗೆಳೆಯ "ಮಹೇಶ್""ಸವಿಗನಸು " ಬ್ಲಾಗ್..


ಅವರ ಬ್ಲಾಗಿನಲ್ಲಿ ನನ್ನ ಬಗೆಗೊಂದು ಕವನ...!


ಅದಕ್ಕೆ ಹಲವಾರು ಪ್ರತಿಕ್ರಿಯೆಗಳು....!




ಇಂದು ಬೆಳಿಗ್ಗೆ ಇನ್ನೊಂದು ಮೆಸ್ಸೆಜು...!


ಕತಾರ್ ದೇಶದಲ್ಲಿರುವ...


ಗೆಳೆಯ "ಮೂರ್ತಿ ಹೊಸಬಾಳೆ "

ನನ್ನ ಬಗೆಗೊಂದು ಲೇಖನ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ...!


ಈಗ್ಗೆ ಕೆಲವು ದಿನಗಳ ಹಿಂದೆ ನನ್ನ ಮತ್ತೊಬ್ಬ ಬ್ಲಾಗ್ ಮಿತ್ರ
( ಜಲಾನಯನ  ಬ್ಲಾಗ್,  ಇವರು  ಕುವೈತ್  ದೇಶದಲ್ಲಿರುತ್ತಾರೆ)
"ಆಝಾದ್ ಭಾಯ್" ನನ್ನ ಬಗ್ಗೆ ತಮ್ಮ ಬ್ಲಾಗಿನಲ್ಲಿ ಬರೆದಿದ್ದರು...


ಬೆಂಗಳೂರಿನಲ್ಲಿ ಕೆಲವೇ ಗಂಟೆಗಳಿದ್ದರೂ..
ನನ್ನನ್ನು ಭೇಟಿಯಾಗಲು ಬಂದಿದ್ದರು...!

ದೂರದ ಊರಿಂದ ಓದುಗ ಗೆಳೆಯರಾದ
ಅನಿಲ್ ಬೆಡ್ಗೆ...
ಶಿವ ಶಂಕರ್ ಯಳವತ್ತಿ...
ನಾಗರಾಜ...
ಕೊಡಗಿನ  ಹಿರಿಯರಾದ "ಪರಮೇಶ್ವರ" ರವರು....


ಇನ್ನೂ ಅನೇಕರ ಹೆಸರು ನೆನಪಾಗುತ್ತಿಲ್ಲ...


ಇವರೆಲ್ಲ ನನ್ನನ್ನು ಭೇಟಿಯಾಗಲು ಬರುತ್ತಾರೆ... !
ತುಂಬಾ ಆತ್ಮಿಯತೆಯಿಂದ  , ಸ್ನೇಹದಿಂದ  ಮಾತನಾಡುತ್ತಾರೆ....!


ನನ್ನ ಆರ್ಕುಟಿನಲ್ಲಿ,
ಫೇಸ್ ಬುಕ್ಕಿನಲ್ಲಿ..
ಈಮೇಲ್ ನಲ್ಲಿ..
ಮೊಬೈಲಿನಲ್ಲಿ...
ಪ್ರೀತಿಯ ಸಂದೇಶಗಳು ನೂರಾರಿವೆ...

ಪ್ರೀತಿಯ ಓದುಗ ಮಿತ್ರರೆ...


ತೀರಾ ಸಾಮಾನ್ಯನಾದ ನನಗೆ ಇದೆಲ್ಲ ಸಂಗತಿಗಳು ಖುಷಿಯಾದರೂ...
ಹೆದರಿಕೆಯನ್ನೂ ಕೊಟ್ಟಿದೆ...
ಇಲ್ಲಿಯವರೆಗೆನೋ... ಬರೆದೆ...
ಸರಿ....
ಇನ್ನೂ ಮುಂದೆಯೂ ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳ ಬಲ್ಲೇನೆಯೇ...?


ನನ್ನ ಜವಾಬ್ದಾರಿ ಹೆಚ್ಚಿಗೆಯಾಗಿಬಿಟ್ಟಿದೆ ... ಅನಿಸಿಬಿಟ್ಟಿದೆ...


ಮತ್ತೆ ಮತ್ತೆ ನನ್ನ ಬಗ್ಗೆ ಬ್ಲಾಗಿನಲ್ಲಿ ಬರೆದುಕೊಳ್ಳಲಿಕ್ಕೆ ಒಂದುರೀತಿಯ ಸಂಕೋಚವಾಗುತ್ತದೆ...
ನನ್ನ ಬ್ಲಾಗ್ ಗೆಳೆಯರ ಸ್ನೇಹಕ್ಕೆ...
ಅವರ ಪ್ರೀತಿಗೆ...
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ....
ಹೃದಯ ತುಂಬಿ ಬಂದಿದೆ...
ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ...


ನಿಮ್ಮ ಪ್ರೀತಿಗೆ...
ಆತ್ಮೀಯತೆಗೆ...
ಕೃತಜ್ಞತೆಗಳು...
ನನ್ನ ಹೃದಯ ಪೂರ್ವಕ ವಂದನೆಗಳು...


ನಿಜ ಹೇಳ ಬೇಕೆಂದರೆ ನಿನ್ನೆ ಒಂದು ಕಥೆಯನ್ನು ರೆಡಿ ಮಾಡಿ ಇಟ್ಟಿದ್ದೆ...
ಆದರೆ ನನ್ನ ಮಿತ್ರ ಮಹೇಶ್ ತಮ್ಮ ಬ್ಲಾಗಿನಲ್ಲಿ
"ಪ್ರಕಾಶಣ್ಣ ತಮ್ಮ  ಬ್ಲಾಗಿನಲ್ಲಿ "ನಗಿಸುತ್ತಾರೆ" ಅಂದಿದ್ದರು..


ನಾನು ಬರೆದ ಕಥೆಯ ಭಾವ ಸ್ವಲ್ಪ ದುಃಖದ್ದು...


ಹಾಗಾಗಿ ಹಾಕಲಿಲ್ಲ...ನಾಳೆ ಕಥೆಯನ್ನು ಹಾಕುವೆ...


ಮತ್ತೊಮ್ಮೆ.. ಮಗದೊಮ್ಮೆ..
ನಿಮಗೆಲ್ಲರಿಗೂ.. ನನ್ನ ನುಡಿ ನಮನಗಳು...

ನನ್ನದೊಂದು  ಪುಟ್ಟ  ಸಲಾಮ್....!

ಭಾವ..
ಅನುಭಾವ...
ಹೃದಯ..
ಅನುಭವಿಸಿದಾಗ..
ಮಾತು ಬೇಕಿರದ
ಶಬ್ಧಗಳು...
ಪ್ರೀತಿ..
ಸ್ನೇಹ.. ಬಾಂಧವ್ಯ...!!

16 comments:

Raghu said...

ಪ್ರಕಾಶಣ್ಣ , ನೀವು ಕಥೆ ಹೇಗೆ ಬರೆದರೂ ಚೆನ್ನಾಗಿ ಬರಿತೀರ ಅನ್ನುವ ನಂಬಿಕೆ ನಮಗಿದೆ... ಕೃತಜ್ಞತೆ ತಿಳಿಸಲು ಶಬ್ದಗಳೇಕೆ ಪ್ರೀತಿ ಆತ್ಮೀಯತೆ ಇದೆಯೆಲ್ಲ... ಹಾಗದ್ರೆ ನಾಳೆ ನಿಮ್ಮ ಬ್ಲಾಗ್ ನಲ್ಲಿ ಮತ್ತೆ ಸಿಗುವ..
ನಿಮ್ಮವ,
ರಾಘು.

ಮನಮುಕ್ತಾ said...

ನಮಸ್ತೆ ಪ್ರಕಾಶಣ್ಣ,

ಓದುಗರ ಪ್ರೀತಿ,ವಿಶ್ವಾಸ ಇನ್ನು ಹೆಚ್ಚೇಆಗುತ್ತದೆ ಸ೦ಶಯವೇ ಇಲ್ಲ. ನಿಮ್ಮ ಬರಹಗಳೆ ಹಾಗಿವೆ.ಹೆಚ್ಚು ಹೆಚ್ಚು ಜನರನ್ನು ಮೋಡಿಮಾಡಿ ಮತ್ತೆ ಮತ್ತೆ ಓದುವ೦ತೆ ಮಾಡುತ್ತದೆ.

ಮತ್ತೂ ಬರೆಯುತ್ತಿರಿ, ಓದುಗರ ಮನ ಮುದಗೊಳಿಸಿ,

ನಿಮಗೆ ಅಮೂಲ್ಯವಾದ ಆತ್ಮೀಯತೆ ಪ್ರೀತಿವಾತ್ಸಲ್ಯಗಳ ಆಸ್ತಿ ಸಿಕ್ಕಿದ್ದಕ್ಕೆ ಅಭಿನ೦ದನೆಗಳು.

ನಾಳೆಯ ಸ೦ಚಿಕೆ ಓದುವೆ.

ಶಿವಪ್ರಕಾಶ್ said...

ಪ್ರಕಾಶಣ್ಣ,
ನಿಮ್ಮ ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಾಶಯ ಕೊರಬೇಕೆಂದುಕೊಂಡಿದ್ದೆ. ಕೆಲವು ಕೆಲಸದಲ್ಲಿ ಬ್ಯುಸಿಯಾಗಿ ಮರೆತುಹೋಗಿಬಿಟ್ಟೆ. ಹಾಗಾಗಿ ನಿಮ್ಮ ಬ್ಲಾಗಿನಲ್ಲಿಯೇ ಶುಭಾಶಯ ಕೋರುತ್ತಿದ್ದೇನೆ.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು....

ಮಹೇಶ್ ಅವರು ನಿಮ್ಮ ಮೇಲೆ ಬರೆದ ಚುಟುಕು(ಕವನ) ಸಕತ್ ಕಿಕ್ಕು ಕೊಡ್ತು...
ಅಂದಹಾಗೆ ಬರ್ತ್ಡೇ ಪಾರ್ಟಿ ಯಾವಾಗ..? ಎಲ್ಲಿ...?

ಆನಂದ said...

ಪ್ರಕಾಶಣ್ಣ,
ಚಿಕ್ಕಂದಿನಲ್ಲಿ ರಾಜ್ ಕುಮಾರ್ ಸಿನಿಮಾ ನೋಡಿ ಇವರು ನಮ್ಮವರೇ‌ ಅನಿಸಿದಂತೆ, ಕೆಲವೊಬ್ಬರು ವಿನಾಕಾರಣ ಆತ್ಮೀಯರೆನ್ನಿಸಿಬಿಡುತ್ತಾರೆ, ಕೆಲವೊಮ್ಮೆ ಮುಖತಃ ನೋಡಿರದಿದ್ದರೂ!
ನಿಮ್ಮ ಬಳಗ ದೊಡ್ಡದಿದೆ. ತಡವಾಗಿಯಾದರೂ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.

Ittigecement said...

ರಘು....

ನಿಮ್ಮೆಲ್ಲರ ಭರವಸೆಯನ್ನು ಉಳಿಸಿಕೊಳ್ಳುವ ಜವಬ್ದಾರಿ ಬಲು ದೊಡ್ಡದು...
ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ...

ನಿಮ್ಮೆಲ್ಲರ ಪ್ರೋತ್ಸಾಹಕ್ಕಾಗಿ..
ಪ್ರೀತಿಗೆ ತುಂಬಾ ತುಂಬಾ ಧನ್ಯವಾದಗಳು...

Subrahmanya said...

ನೀವೂ ಹೀಗೇ ಬರೆಯುತ್ತಿರಿ....ನನ್ನಂತಹವರು ಕಲಿಯುವುದು ಸಾಕಷ್ಟಿದೆ ( ಬದುಕಿರುವವರೆಗೂ ಕಲಿಯುವುದೇ ಬಿಡಿ !) ....ಮುಂದಿನ ಕಥೆಗೆ ಕಾಯುತ್ತಿರುವೆ .

ಮನಸು said...

birthday partygaagi kayta ideevi..yavaga bega tiLisi flight book madbeku

Nisha said...

Belated Happy Birthday to Prakashanna. Naavoo kooda birthday party ge kaythidivi. Sahakarnagarada Shanthisagar, Bhagini, Swathi gardenia elladru sari, birthday party beku :-) :-)

sunaath said...

ಪ್ರಕಾಶ,
ಪ್ರೀತಿ ಇದ್ದಲ್ಲಿ ಜವಾಬುದಾರಿಯ ಹೆದರಿಕೆ ಏಕೆ?
ನಮ್ಮೆಲ್ಲರ ಪ್ರೀತಿಯೇ ನಾವು ಪರಸ್ಪರ ಕೊಡುವ ಜವಾಬು!
ನಿಮಗೂ ನನ್ನದೊಂದು ಸಲಾಮ್!

Unknown said...

HAPPY BIRTHDAY SIR...

ಕ್ಷಣ... ಚಿಂತನೆ... said...

ಪ್ರಕಾಶಣ್ಣ, ನಿಮ್ಮ ಬರವಣಿಗೆಯಲ್ಲಿ ಸರಳತೆ ಇದೆ. ಅದಕ್ಕೆ ಎಲ್ಲರಿಗೂ ನಿಮ್ಮ ಬರಹ ಇಷ್ಟವಾಗುವುದು. ಇದರ ಜೊತೆಗೆ ನಿಮ್ಮ ಆತ್ಮೀಯ ಆದರದಿಂದ ನೀವು ಎಲ್ಲರಿಗೂ ಇಷ್ಟವಾಗುವುದು.

ಹೀಗೆಯೆ ಬರೆಯುತ್ತಿರಿ.

ಸ್ನೇಹದಿಂದ,

Pramod P T said...

ಹುಟ್ಟು ಹಬ್ಬದ ಶುಭಾಶಯಗಳು ಪ್ರಕಾಶ್ ರಿಗೆ...ತುಂಬಾ ತಡವಾಗಿ :)

ಸಾಗರದಾಚೆಯ ಇಂಚರ said...

ಪ್ರಕಾಶ್ ಅಣ್ಣನಿಗೆ ಪ್ರಕಾಶಣ್ಣನೆ ಸಾಟಿ
ನಿಮ್ಮ ಪ್ರೀತಿಯ ವರ್ತುಲ ತುಂಬಾ ವಿಸ್ತಾರವಾದದ್ದು

ಚುಕ್ಕಿಚಿತ್ತಾರ said...

ಉತ್ತಮ, ಕಲಾತ್ಮಕ ಬರಹಕ್ಕೆ ಯಾವತ್ತೂ ಅಪಾರ ಬೇಡಿಕೆ.ಪ್ರೀತಿ ವಿಶ್ವಾಸದ
ಬ್ಲಾಗ್ ಬಳಗ ವಿಸ್ತರಿಸಲಿ...ಎ೦ಬುದು ಹಾರೈಕೆ...

ಸವಿಗನಸು said...

ಪ್ರಕಾಶಣ್ಣ,

ನಿಮ್ಮ ಆತ್ಮೀಯತೆ ಎಲ್ಲರನ್ನು ಆಕರ್ಷಿಸುತ್ತೆ......

ಬರೆಯುತ್ತಿರಿ....

ನಾವು ಪಾರ್ಟಿಗೆ ರೆಡಿ....ಪಾರ್ಟಿಯಲ್ಲಿ ಚಪ್ಪಾತಿ ಇರುತ್ತಾ...? ಹಹ್ಹಹಾ....

chetana said...

:)
oLLe manasugaLige hitaishigaLu bahaLa antaare. nimmanna kanDre ivrigella eshTu preeti!
nalme,
Chetana