ಸುಡು ಬಿಸಿಲು..
ಹೊಸ ಪ್ರಾಜೆಕ್ಟಿನ ಮಾರ್ಕಿಂಗ್ ಕೆಲಸ ಮಾಡಿ ಬಂದಿದ್ದೆ..
ದೊಡ್ಡ ಶರೀರ ಹೊತ್ತು ಬಹಳ ಆಯಾಸವಾಗಿತ್ತು...
ಹಸಿವೆಯೂ ಆಗಿತ್ತು..
ಸಹಕಾರ ನಗರದ "ಶಾಂತಿಸಾಗರದ" ಹೊಟೆಲ್ಲಿನಲ್ಲಿ ಬಹಳ ರಷ್...
ಚೆನ್ನಾಗಿ ತಿಂದು ಬಿಡೋಣ ಅಂದರೆ ತೂಕದ ನೆನಪಾಗಿ..
ಏನು ಮಾಡೋಣ ಆಂತ ತಲೆಕೆರೆದು ಕೊಳ್ಳುತ್ತ ನಿಂತಿದ್ದೆ...
ಅದು ಸ್ವಸಹಾಯ ಪದ್ಧತಿಯ ಹೊಟೆಲ್.. ಊಟದ ಚೀಟಿ ತೆಗೆದು ಕೊಂಡರಾಯಿತು ಅಂದುಕೊಳ್ಳುತ್ತಿದ್ದೆ...
"ನಮಸ್ಕಾರ ಸಾರ್...ನೀವು ಪ್ರಕಾಶಣ್ಣಾ.. ಅಲ್ಲವಾ..?"
ನನಗೆ ಆಶ್ಚರ್ಯದ ಜೊತೆಗೆ ಸಿಕ್ಕಾಪಟ್ಟೆ ಸಂತೋಷವೂ ಆಯಿತು..
ಪುಸ್ತಕ ಬಿಡುಗಡೆ ಆದಮೇಲೆ ಜನಪ್ರಿಯ ಆಗಿಬಿಟ್ಟಿದ್ದೀನಾ..??!!
"ಹೌದು... ನಾನು ಪ್ರಕಾಶಣ್ಣ...."
"ಸಾರ್... ಇಟ್ಟಿಗೆ ಸಿಮೆಂಟು ಪ್ರಕಾಶಣ್ಣಾ...ಅಲ್ಲವಾ..??!!!!"
"ದೇವರಾಣೆ ಹೌದು.. ನಾನೇ.. ಆ ಪ್ರಕಾಶ್ .."
ನನಗೆ ಹೆಮ್ಮೆಯೂ ಆಗುತ್ತಿತ್ತು..
ಅಕ್ಕಪಕ್ಕದಲ್ಲಿ ಯಾರಾದರೂ ನೋಡುತ್ತಿದ್ದಾರಾ... ಗಮನಿಸಿಕೊಂಡೆ..
ಎಲ್ಲರೂ ಅವರ ಪಾಡಿಗೆ ಅವರಿದ್ದರು..
"ಸಾರ್..!! ನಿಮ್ಮನ್ನ ನೋಡ ಬೇಕೆಂದು ಬಹಳ ಆಸೆ ಇತ್ತು ನೋಡಿ...
ಎಷ್ಟು ಖುಷಿ ಆಗ್ತಾ ಇದೆ ಗೊತ್ತಾ ಸಾರ್..!!???!!
ಇರಿ.. ಸಾರ್.. ಇ..ಇಲ್ಲೇ ಇರಿ..
ನಮ್ಮ ಅಪ್ಪನನ್ನು ಕರ್ಕೊಂಡು ಬರ್ತೇನೆ...
ಇ.. ಇಲ್ಲೇ ಊಟ ಮಾಡ್ತಾ ಇದ್ದಾರೆ..ಅವರೂ ನಿಮ್ಮ ಫ್ಯಾನ್.. ಸಾರ್.."
ನನಗೆ ಆದ ಆಯಾಸ .., ಹಸಿವೆ ಎಲ್ಲ ಮರೆತು ಹೋಯ್ತು..!!
ಬೇಡ ಅಂತ ಹೇಳುವದೊರಳಗೆ ಆ ಮನುಷ್ಯ ಜನ ಜಂಗುಳಿಯಲ್ಲಿ ಮಾಯವಾದ...
ಜನ ಆರ್ಡರ್ ಕೊಡುತ್ತಿದ್ದರು..
ನಾನು ಸ್ವಲ್ಪ ಹಿಂದಾದೆ..
ಇಷ್ಟೊಂದು ಪ್ರೀತಿ ತೋರಸ್ತಾ ಇದ್ದಾನೆ ಈ ಮನುಷ್ಯ..!
ಒಮ್ಮೆ ಮಾತನಾಡಿ ಆಮೇಲೆ ಊಟದ ಚೀಟಿ ತೆಗೆದು ಕೊಡರೆ ಆಯ್ತು ಅಂತ ಸಮಾಧಾನ ಮಾಡಿಕೊಂಡೆ...
ಸ್ವಲ್ಪ ಹೊತ್ತಿನಲ್ಲಿ ತನ್ನ ಅಪ್ಪನನ್ನು ಕರೆದು ಕೊಂಡು ಬಂದ...
ಅವರು ಊಟ ಮಾಡುತ್ತಿದ್ದರು.. ಅರ್ಧ ಆಗಿತ್ತು ಅನ್ನಿಸುತ್ತದೆ...
ಎಂಜಲು ಕೈಯನ್ನು ಸ್ವಲ್ಪ ಮೇಲೆತ್ತಿಕೊಂಡು ಬಂದರು..
"ಅಪ್ಪಾ.. ಅಪ್ಪಾ...! ಇವರೇ ಪ್ರಕಾಶಣ್ಣಾ.. ...!!!"
ಅವರು ಎಡಗೈಯಿಂದ ತಲೆ ಕೆರೆದು ಕೊಂಡರು..
ಅವರಿಗೆ ಅರ್ಧ ಊಟ ಬಿಟ್ಟು ಬಂದಿದ್ದಕ್ಕೋ... ಅಥವಾ.. ನಿಜವಾಗಿಯೂ ನೆನಪಾಗಲಿಲ್ಲವೋ ಗೊತ್ತಾಗಲಿಲ್ಲ...
"ಯಾವ ಪ್ರಕಾಶ್ ...??!! ಸಾಫ್ಟ್ ವೇರ್.. ಇಂಜನೀಯರ್ರಾ..??
ಅಲ್ಲ ಇವರ ಮುಖ ನೋಡಿದ್ರೆ ಹಾಗಿಲ್ಲವಲ್ಲಾ..!!"
ನನಗೆ ಸ್ವಲ್ಪ ಅವಮಾನ ಆದಂತಾಯಿತು..
ಆದರೂ ಆ ಹುಡುಗನ ಉತ್ಸಾಹ ನೋಡಿ ಸುಮ್ಮನೆ ಬಾರದ ನಗು ನಕ್ಕೆ...
"ಅಪ್ಪಾ... ಈ ಪ್ರಕಾಶಣ್ಣಾ.. ! ಗೊತ್ತಾಗಲಿಲ್ಲವಾ..??
ಅದೇ... ಚಪಾತಿ.. ಪ್ರಕಾಶಣ್ಣಾ.....!!!..
"ಹೆಸರೇ ಬೇಡ " ಪುಸ್ತಕ..!
ಚಪಾತಿ ಪ್ರಕಾಶ್ ಹೆಗಡೆ..!!"
ಅವರ ಮುಖದಲ್ಲಿ ಈಗ ಸಂತೋಷ ಕಂಡಿತು..
ನನಗೆ ಕಸಿವಿಸಿಯಾಯಿತು..
"ಓಹೋ...ಹಾಗೆ ಹೇಳು ಮತ್ತೆ...!
ಸುಮ್ಮನೆ ಪ್ರಕಾಶಣ್ಣಾ..... ಪ್ರಕಾಶಣ್ಣಾ.. ..
ಅಂದ್ರೆ ಹೇಗೆ ಗೊತ್ತಾಗ ಬೇಕು..?
ಇವರೇನಾ... ಚಪಾತಿ ಪ್ರಕಾಶ್ ಹೆಗಡೆ..??!!"
ಅವರಿಗೆ ಆಶ್ಚರ್ಯ ಆಯ್ತೊ.... ಸಂತೋಷ ಆಯ್ತೊ ಗೊತ್ತಾಗಲಿಲ್ಲ...
ಧ್ವನಿ ಏರಿಸಿ ಮಾತನಾಡಲು ಶುರು ಮಾಡಿದರು..
ನನಗೆ ಇವರು ಹೊಗಳುತ್ತಿದ್ದಾರೊ... ಏನು ಮಾಡ್ತಿದ್ದಾರೆ ಅರ್ಥ ಆಗಲಿಲ್ಲ...
ಕೆಲವು ಜನ ನಮ್ಮೆಡೆಗೆ ನೋಡಲು ಶುರು ಮಾಡಿದರು...!
"ಸಾರ್... ಎಷ್ಟು ಚಂದ ಬರ್ದಿದ್ದೀರಿ ..??
ನಿಮ್ಮನ್ನು ನೋಡ ಬೇಕು.. ಮಾತನಾಡ ಬೇಕು ಅಂತ ಬಹಳ ಆಸೆ ಇತ್ತು...
ನೋಡಿ.. ಸುಮ್ಮನೆ ಪ್ರಕಾಶ್ ಅಂದ್ರೆ ಗೊತ್ತಾಗಲಿಲ್ಲ...
ಬೇಜಾರು ಮಾಡ್ಕೋ ಬೇಡಿ...
"ಚಪಾತಿ ಪ್ರಕಾಶ್ ಹೆಗಡೆ" ಅಂದ ಮೇಲೆ ಅರ್ಥ ಆಯ್ತು.."
ತನ್ನ ಮಗನ ಕಡೆಗೆ ತಿರುಗಿದರು..
" ನಿನಗೆ ಇನ್ನೂ ಬುದ್ಧಿ ಬರ್ಲಿಲ್ಲ ನೋಡು...
ಮೊದಲೇ ಹೇಳ ಬಾರದಿತ್ತೇನೊ.. ಇವರೇ " ಚಪಾತಿ ಪ್ರಕಾಶಣ್ಣಾ.." ಅಂತ...!!"
ನನಗೆ ಈಗ ಹಸಿವೆಯ ನೆನಪಾಯ್ತು...
"ಸರಿ ಸಾರ್.. ಊಟ ಮಾಡಿ.. ನಾನೂ ಊಟ ಮಾಡ್ತೇನೆ..."
"ಸಾರ್ .. ಎರಡೇ ನಿಮಿಷ.. ಮಾತಾಡ್ತಿನಿ..
ಬಹಳ ಚಂದ ಬರಿತಿರಿ ಸಾರ್..!
ಈಗ ನೀವು ಏನು ಮಾಡ ಬೇಕು ಗೊತ್ತಾ..?"
ನನಗೆ ಆಶ್ಚರ್ಯ ಆಯಿತು...!
"ಏನು ಮಾಡ ಬೇಕು..?"
" ಕನ್ನಡ ಸಾಹಿತ್ಯ ಪರಿಷತ್ ನವರಿಗೆ ಒಂದು ಪತ್ರ ಬರಿಬೇಕು.."
"ಸಾಹಿತ್ಯ ಪರಿಷತ್ ನವರಿಗಾ..?? ಪತ್ರನಾ..? ಏನಂತ ಬರಿಬೇಕು..?"
" ನೋಡಿ ಸಾರ್.. ನಮ್ಮ ಕನ್ನಡಲ್ಲಿ ಕೆಲವು ಕೆಟ್ಟ ಶಬ್ಧಗಳಿವೆ..
ಅಂಥಹ ಶಬ್ಧಗಳೆನ್ನೆಲ್ಲ ನಮ್ಮ ನಿಮ್ಮೊಂತೋರು ಹೇಳುವ ಹಾಗೆಯೇ ಇಲ್ಲ.. ಸಾರ್...
ಅದನ್ನೆಲ್ಲ ಬದಲಾಯಿಸ ಬೇಕು..
ಅವೆಲ್ಲ ಹೇಳೊದಕ್ಕೊಂದೆ ಅಲ್ಲ ಸಾರ್.. ನೆನಪಾದರೂ.. ಅಸಹ್ಯ..!
ನೀವೇ ಹೇಳಿ.. !
"ಕಾಚ" ಅಂತ ಹೇಳೋದು ಎಷ್ಟು ಕಷ್ಟ..!!
ಅದರಲ್ಲೂ ಹೆಣ್ಣುಮಕ್ಕಳಿಗೆ ಬಹಳ ಕಷ್ಟ.. ಅಲ್ಲವಾ..??"
" ಅದಕ್ಕೆ ಏನು ಮಾಡ ಬೇಕು...?"
"ನಮ್ಮ ಸಾಹಿತ್ಯ ಪರಿಷತ್ ನವರು ಅಂಥಹ ಶಬ್ಧಗಳನ್ನು ಚೇಂಜ್ ಮಾಡ ಬೇಕು..
ಅದಕ್ಕೊಂದು ಕಮೀಟಿ ಮಾಡ ಬೇಕು..
ಅದರಲ್ಲಿ ನೀವೂ ಇರಬೇಕು.. ಸಾರ್...
ನೀವು ಇನ್ನೊಂದು ಕೆಲ್ಸಾನೂ ಮಾಡಿ..."
"ಏನು...??"
"ನಮ್ಮ.. ಮುಖ್ಯ ಮಂತ್ರಿ.. ಯಡ್ಯೂರಪ್ಪನವರಿಗೂ ಒಂದು ಪತ್ರ ಬರೀರಿ..
ಎಲ್ಲರೂ..ಕನ್ನಡ ಮಾತನಾಡ ಬೇಕು ಅಂತಾರೆ...
ಅಂಡರ್ ವೇರ್ ಅಂತಾರೆ...
ಕಾಚ ಅನ್ನೋದು ಕಷ್ಟ ಸಾರ್..
ಅದಕ್ಕೆ.. ನಮ್ಮೋಂಥೋರು.. ಇಂಗ್ಲೀಷ್ ಶಬ್ಧ ಬಳಸ್ತೀವಿ...
ನೀವು ಓಕೆ ಅಂದ್ರೆ ನಾನೊಂದು ಕೆಲ್ಸ ಮಾಡ್ತೇನೆ.."
"ಏನು ಮಾಡ್ತೀರಿ..?"
"ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷರಿಗೆ..
ಅದೇ.. ನಾರಾಯಣ ಗೌಡರ ಹತ್ರ ನಾನು ಮಾತಾಡ್ತೇನೆ... ನಂಗೆ ಅವರು ಬಹಳ ಪರಿಚಯ..
ನಂಗೆ ವಾಟಾಳ್ ನಾಗರಾಜ್ ಕೂಡ ಪರಿಚಯ ಸಾರ್...!!"
ಯಾಕೋ ಪರಿಸ್ಥಿತಿ ಎಲ್ಲಿಗೋ ಹೋಗ್ತಾ ಇದೆ ಅನ್ನಿಸ್ತು...
ಈಗ ಸಮಸ್ಯೆ ಆಯಿತು... ಹೇಗೆ ಇವರಿಂದ ತಪ್ಪಿಸಿಕೊಳ್ಳುವದು...?
" ಅಪ್ಪಾ...
ಇವರ ಬ್ಲಾಗ್ ನೀವಿನ್ನೂ ಓದಿಲ್ಲ...
ಅದರಲ್ಲಿ.. "ಹಾವು.. ಆತ್ಮ... " ಇನ್ನೂ ಏನೇನೋ... ಇದೆ...!!.."ನಾನು ಅಲ್ಲಿಂದ ತಪ್ಪಿಸಿ ಕೊಳ್ಳಲೇ ಬೇಕಿತ್ತು...
" ಸಾರ್.. ನೀವು ಊಟ ಅರ್ಧ ಮಾಡಿದ್ದೀರಿ...
ನಿಮ್ಮ ಪ್ಲೇಟ್ ಎತ್ತಿಕೊಂಡು ಹೋಗಿ ಬಿಡ್ತಾರೆ..
ನಾನು ನೀವು ಕೂತಲ್ಲೇ ಬರ್ತಿನಿ..
ಅಲ್ಲೇ ಮಾತನಾಡೋಣ.. ನೀವು ಹೊರಡಿ..."ಅವರಿಗೆ ಈಗ ಗಾಭರಿ ಆಯಿತು...!
" ನೋಡೊ.. ಅಲ್ಲಿ..!!
ನನ್ನ ಪ್ಲೇಟ್ ಅಲ್ಲಿದೆಯೋ ಇಲ್ಲವೋ ಅಂತ... !
ಈ "ಚಪಾತಿ ಪ್ರಕಾಶ್ ಹೆಗಡೆಯವರು" ಸಿಕ್ರು ಅಂತ ಉಟ ಬಿಟ್ಟು ಬಂದೆ ..
ಚಪಾತಿ ಬಗ್ಗೆ ಮಾತನಾಡ್ತಾ.. ಊಟ ಮರ್ತು ಬಿಟ್ಟೆ ನೋಡಿ.."
ಈಗ ಮತ್ತೆ ನನ್ನೆಡೆಗೆ ತಿರುಗಿದರು...
" ಉಟಕ್ಕೆ ಬಳಸೋ ಚಪಾತಿಗೆ ಯಾವ ರೀತಿ ಕರಿಬೇಕು ಸಾರ್..? ಅದಕ್ಕೊಂದು ಬೇರೆ ಶಬ್ದ ಕಂಡು ಹಿಡಿದು ಬಿಡಿ...!.."
ನಾನು ತಲೆ ಅಲ್ಲಾಡಿಸಿದೆ....
ಅವರು ಮರೆಯಾಗುತ್ತಿದ್ದ ಹಾಗೆ.. ನಾನು ಹೊಟೆಲ್ಲಿನಿಂದ ಹೊರಗೆ ಬಂದೆ..
ಈಗ ಎಷ್ಟೇ ಹಸಿವಾದರೂ ಆ ಹೋಟೆಲ್ಲಿಗೆ ಮಾತ್ರ ಹೋಗುವದಿಲ್ಲ...
.....................................................................................
.................................................................................
ಪ್ರಿಯ ಓದುಗರೇ...
" ಹೆಸರೇ.. ಬೇಡ " ಪುಸ್ತಕದ ಒಂದು ಸಾವಿರ ಪ್ರತಿಗಳು ಖರ್ಚಾಗಿವೆ...!
ಇದು ನನಗೆ ಬಲು ದೊಡ್ಡ ಸಂತೋಷದ ಸಂಗತಿ..
ಪುಸ್ತಕ ಪ್ರಪಂಚಕ್ಕೆ ಹೊಸಬನಾದ ನನಗೆ ಇಂಥಹ ಸ್ವಾಗತದ ನಿರೀಕ್ಷೆ ಇರಲಿಲ್ಲ...
ನವಕರ್ನಾಟಕದ ಎಲ್ಲ ಪುಸ್ತಕ ಅಂಗಡಿಗಳಲ್ಲಿ "ಹೆಸರೇ.. ಬೇಡ" ಸಿಗುತ್ತದೆ...
ಅವರ ಪ್ರೋತ್ಸಾಹಕ್ಕೆ ನಾನು ಚಿರ ಋಣಿ...
ಆವರಿಗೆ ನಾನು ಆಭಾರಿಯಾಗಿದ್ದೇನೆ... ಅಂಕಿತ ಪ್ರಕಾಶನ ದಲ್ಲೂ "ಹೆಸರೇ.. ಬೇಡ " ಸಿಗುತ್ತದೆ..
ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಧನ್ಯವಾದಗಳು...
ಮೊದಲಿನಿಂದಲೂ ನನಗೆ ಬೆನ್ನುತಟ್ಟಿ ಪ್ರೋತ್ಸಾಹ ಕೊಡುತ್ತಿರುವ
ನಮ್ಮೆಲ್ಲರ ಪ್ರೀತಿಯ "ಜಿ. ಎನ್ ಮೋಹನ್ " ರವರಿಗೆ ನಾನು ತುಂಬಾ.. ತುಂಬಾ ಆಭಾರಿಯಾಗಿದ್ದೇನೆ..
ಅವರಿಗೆ ನನ್ನ ನಮನಗಳು...
"ಅವಧಿಯಲ್ಲೂ " ಹೆಸರೇ ಬೇಡ ಪುಸ್ತಕ ಸಿಗುತ್ತದೆ...
ವ್ಯವಹಾರದಲ್ಲಿ ಸದಾ ಮುಳುಗಿರುತ್ತಿದ್ದ ನನ್ನನ್ನು ..
ನನ್ನ ಬ್ಲಾಗನ್ನು , ನನ್ನ ಪುಸ್ತಕವನ್ನು ..
ಪ್ರೋತ್ಸಾಹಿಸಿದ ನೆಮಗೆಲ್ಲರಿಗೂ ನನ್ನ
ಹೃದಯ ಪೂರ್ವಕ ವಂದನೆಗಳು...
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ....!!
ಕ್ಷಮಿಸಿ ..
ಇನ್ನೂ ಒಂದು ವಿಷಯ ಹೇಳುವದಿದೆ...
ಜನಪ್ರಿಯ ಲೇಖಕ "ಮಣಿಕಾಂತ್ "ರವರ "ಹಾಡು ಹುಟ್ಟಿದ ಸಮಯ.."
ಪುಸ್ತಕ ಬಿಡುಗಡೆ ನಾಳೆ.. "ರವಿಂದ್ರ ಕಲಾಕ್ಷೇತ್ರದಲ್ಲಿ " ನಡೆಯಲಿದೆ...
ದಯವಿಟ್ಟು ಬನ್ನಿ...
ನಾನು ಅಲ್ಲಿರುತ್ತೇನೆ....
ನಿಮಗಾಗಿ ಕಾಯುತ್ತೇನೆ.... ಬರುವಿರಲ್ಲಾ..??( "ಚಪಾತಿ" ವಿಷಯ ಅರ್ಥವಾಗದಿದ್ದಲ್ಲಿ ದಯವಿಟ್ಟು "ಹೆಸರೇ.. ಬೇಡ" ಓದಿ...)
51 comments:
khandita barti naale:)
ಹ್ಹ ಹ್ಹ ಹ್ಹ... `ಚಪಾತಿ ಪ್ರಕಾಶಣ್ಣ‘..!
ಪ್ರಕಾಶಣ್ಣ,
ಚೆನ್ನಾಗಿದೆ, ಖುಷಿಯಾಯಿತು ಅಂದ್ರೆ ನಿಮ್ಮನ್ನು ಚಪಾತಿ ಪ್ರಕಾಶಣ್ಣ ಎಂದು ಒಪ್ಕೊಂಡ ಹಾಗಾಗತ್ತೆ..... ನೀವು ''ಇಟ್ಟಿಗೆ ಸಿಮೆಂಟು'' ಪ್ರಕಾಶಣ್ಣ ಆಗೇ ಇರಿ...... ನೀವು ಎದುರಿಸಿದ ಪ್ರಸಂಗವನ್ನ ಮುಜುಗರವಿಲ್ಲದೆ ಬರೆದ ರೀತಿ ಖುಷಿ ಕೊಡ್ತು..... ...... ಅಯ್ಯೋ.... ಹೀಗೆ ಬರೆದರೂ ಅದೇ ಅರ್ಥ ಕೊಡ್ತಾ ಇದೆ ಆಲ್ವಾ...... ನಿರೂಪಣೆ ಚೆನ್ನಾಗಿತ್ತು............ ತುಂಬಾ ಫೇಮಸ್ ಆದ್ರೆ ಇದೆ ತೊಂದರೆ ಪ್ರಕಾಶಣ್ಣ......
ವಿಜಯ ಕರ್ನಾಟಕದಲ್ಲಿ ಬಾರೋ ಮಣಿಕಾಂತ್ ಸರ್ ಕಾಲಂ, ಮೋಹನ್ ಸರ್ ಕಾಲಂ ತಪ್ಪದೆ ಓದುತ್ತೇನೆ....... ಮಣಿಕಾಂತ್ ಸರ್ ಪುಸ್ತಕ ಸಮಾರಂಭಕ್ಕೆ ಶುಭಾಸ್ಶಯ...... ಹಾಗೆ ನಿಮ್ಮ ಪುಸ್ತಕ ಸಾವಿರ ಮಾರಾಟ ದಾಟಿ ಹತ್ತು ಸಾವಿರ ಮುಟ್ಟಲಿ......
ಕಾಚ ಅಂತ ಹೆಂಗಸರ ಮುಂದೆ ಹೇಳೋದು ಸ್ವಲ್ಪ ಕಷ್ಟವೇ ಸರ್ !! ನೋಡಿ ಏನಾದ್ರು ಬದಲಾವಣೆ ಮಾಡ್ಸೋಕಾಗುತ್ತಾ ಅಂತಾ !!!? ಹ಼ ಹ಼ ಹ಼ ......
ha...ha...ha.............
.........................
.........................
.........................
.........................
ಗೌತಮ್...
ಖಂಡಿತ ಬನ್ನಿ...
ಅಲ್ಲಿ ಹಾಡುಗಳೂ ಇರುತ್ತವೆ...
ಅರ್ಚನಾ ಉಡುಪ..ಮತ್ತು ಇತರೆ ಹಾಡುಗಾರರು ಹಾಡಲಿದ್ದಾರೆ...
ನಿಮ್ಮನ್ನು ಅಲ್ಲಿ ಕಾಯುತ್ತೇನೆ.. ಗೌತಮ್...!
ಪೂರ್ಣಿಮಾ...
ಸಿಕ್ಕಾಪಟ್ಟೆ ಹಸಿವೆ.. ಆಯಾಸ..
ಊಟ ಮಾಡಲು ಅದೊಂದೇ ಅಲ್ಲಿ ಒಳ್ಳೆಯ ಹೊಟೆಲ್ಲು..
ಅವರಿಗೆ ಸಿಕ್ಕಿದ್ದೇ ಸಮಯ ಅಂತ ತಮ್ಮ ಅಭಿಪ್ರಾಯ ಕೊರೆದು ಬಿಡುವ ಆತುರ...!
ಅವರ ಇನ್ನೊಂದಷ್ಟು ಮಾತನ್ನು ಸೆನ್ಸಾರ್ ಮಾಡಿದ್ದೇನೆ...
ಇಂಥೆದ್ದಲ್ಲ ನನಗಂತೂ ತುಂಬಾ ಹೊಸತು..!
ಹ್ಹಾ..ಹ್ಹಾ...!
ಮನೆಗೆ ಬಂದು ಹೇಳಿ ಬಿದ್ದು ಬಿದ್ದೂ ನಕ್ಕೆ..!!
ಆದರೆ ಒಂದು ಧೈರ್ಯ ಇದೆ ನೋಡಿ...!
ಬೇರೆ ಯಾರೇ ಈ ರೀತಿ ಕರೆದರೂ...
ನನ್ನಾಕೆಯಂತೂ ಈ ರಿತಿ ಕರೆಯುವದಿಲ್ಲ...!! ಹ್ಹಾ..ಹ್ಹಾ...!!
ಪ್ರಕಾಶ್, ನಿಮ್ಮ ಹೆಸರೇ ಬೇಡ ಓದಿದ ಗುಂಗಿನಲ್ಲೇ ಇದ್ದೆ...ಬೆಳಗ್ಗೆ ಎದ್ದಿದ್ದು ಲೇಟ್ ಆಗೋಯ್ತು..ಗಡಿ ಬಿಡಿ...ಟವಲ್ ಹೆಗಲ್ ಮೇಲೆ ಹಾಕಿ ಬಾತ್ ರೂಮಿಗೆ ಹೋಗೋವಾಗ ಹೆಂಡತಿಗೆ ‘ಹೊಸದು ಚಪಾತಿ‘ ಕೊಡು ಅಂದೆ...ಅವಳು..ಸ್ನಾನ ಮಾಡ್ಕೊಂಡು ಬನ್ನಿ ಬಿಸಿ-ಬಿಸಿ ಚಪಾತಿಮೇಲೆ ಮೊಟ್ಟೆ ಒಡೆದು ಕಾಯ್ಸಿ ಕೊಡ್ತೇನೆ...ಅಂದಾಗಲೇ...ನಾನು ...ಹೆಸರೇ ಬೇಡದ ಲೋಕದಲ್ಲಿದ್ದೆ ಅಂತ....ಹಹಹ
ಲೈನ್ ಹೊಡೆಯುವ ಪಾಠ ಅರ್ಧಕ್ಕೇ ಬಿಟ್ಟು ಚಪಾತಿ ಲಟ್ಟಿಸಿಬಿಟ್ಟಿರಲ್ಲ ಸಾರ್! ಚೆನ್ನಾಗಿದೆ!
ಪ್ರಕಾಶಣ್ಣ,
ನಿಮ್ಮ ಪುಸ್ತಕ ತರಿಸಿಕೊಂಡು ಓದಬೇಕು, ಭಾರತಕ್ಕೆ ಹೋಗುವವರು ಯಾರಾದರೂ ಸಿಗುತ್ತಾರ
ಎಂದು ನೋಡುತ್ತಿದ್ದೇನೆ,
ಇಂಗ್ಲಿಷ್ನ ವ್ಯಾಮೋಹ ಎಷ್ಟಾಗಿದೆ ಎಂದರೆ ಕನ್ನಡ ದಲ್ಲಿ ಕನ್ನಡ ಯಾವುದು , ಇಂಗ್ಲಿಷ್ ಯಾವುದು ಗೊತ್ತಾಗುತ್ತಿಲ್ಲ
ಒಳ್ಳೆಯ ಲೇಖನ
ಹುಡುಗಿಯರಿಗೆ ಸುಲಭವಾಗಲಿ ಅಂತ ಕಾಚ ಬದಲಾಯಿಸಲಾಗುತ್ತದೆಯೇ? I mean ಕಾಚದ ಹೆಸರು ಬದಲಾಯಿಸಲಾಗುತ್ತದೆಯೇ!
:-)
ಪ್ರೀತಿಯ ದಿನಕರ...
ಅಪ್ಪ, ಮಗ ಇಬ್ಬರೂ ಎಷ್ಟು ಉತ್ಸಾಹದಿಂದ ಮಾತಾಡುತ್ತಿದ್ದರು ಅಂದರೆ...
ಅವರಿಂದ ತಪ್ಪಿಸಿಕೊಳ್ಳಲು ನನಗೆ ಕಷ್ಟವಾಯಿತು..
ಅಪ್ಪ ಮಹಾಶಯನಂತೂ.
ಚಪಾತಿ ಪ್ರಕಾಶ..
ಚಪಾತಿ ಪ್ರಕಾಶ..
ಅಂತ ಬಾಯಿಯ ಚಟ ತೀರಿಸಿಕೊಳ್ಳುವಷ್ಟು ಸಲ ಹೇಳಿದರು..!!
ಅವರಿಬ್ಬರೂ ನನ್ನನ್ನು ಹೊಗಳುತ್ತಿದ್ದಾರೊ..
ತೆಗಳುತ್ತಿದ್ದಾರೊ.. ಗೊತ್ತಾಗಲಿಲ್ಲ...!
ಈಗಂತೂ.. ಅಪ್ಪಿತಪ್ಪಿಯೂ ಆಕಡೆ ಹೋಗುತ್ತಿಲ್ಲ..
ನಿಮ್ಮ ಹಾರೈಕೆಯಂತಾಗಲಿ ದಿನಕರ..
ಧನ್ಯವಾದಗಳು...
ಸುಬ್ರಾಮಣ್ಯ.....
ಅವರು ಹೇಳಿದ್ದರಲ್ಲಿ ಸತ್ಯವಿದೆಯಾ...?
ಒಂದೊಂತೂ ನಿಜ ಶುದ್ಧವಾದ ಕನ್ನಡದಲ್ಲಿ ಯಾರಿಗೇ ಆದರೂ..
ಅಂಗಡಿಗೆ ಹೋಗಿ.. " ನನ್ನ ಸೈಜಿನ ಕಾಚ ಕೊಡಿ" ಅಂತ ಕೇಳುವದು ಕಷ್ಟ..
ಅದರಲ್ಲಿ ಹೆಣ್ಣುಮಕ್ಕಳಿಗಂತೂ ಸಾಧ್ಯವೇ ಇಲ್ಲ...!
ಹೆಸರು ಬದಲಾಯಿಸಿದರೂ.. "ವಸ್ತು" ಅದೇ ಇರುತ್ತದಲ್ಲಾ..!!
ಪ್ರಕಾಶಣ್ಣ "ಇಟ್ಟಿಗೆಸಿಮೆಂಟಾದರೇನು..?
ಚಪಾತಿ ಪ್ರಕಾಶಣ್ಣ ಆದರೇನು...?
ನಾನು ನಾನೇ ಅಲ್ಲವೆ..?
ಆದರೂ
ಚಪಾತಿ ಅಂತ ಹೇಳೋದರಲ್ಲಿ ಇರುವ ಮಜಾ..
ಸರಳತೆ ..
ರಕ್ಷಣೆ
"ಕಾಚ" ದಲ್ಲಿ ಇಲ್ಲ ಅಲ್ಲವಾ...?
ಹ್ಹಾ..ಹ್ಹಾ...!!
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಹ್ಹ ಹ್ಹ ಹ್ಹ, ಸೂಪರ್ ಪ್ರಕಾಶಣ್ಣ.
ಮನೆ ಕಟ್ಟುವ ಕೆಲಸ, ಬ್ಲೋಗ್, ಪುಸ್ತಕ ಬರವಣಿಗೆ ಜೊತೆಗೆ ನಿಮಗೆ ಇನ್ನೊಂದು ಕೆಲಸದ ಆಫರ್...!! ಕನ್ನಡವನ್ನು ತಿದ್ದುವುದು...!
ನೀವು ಒಂಥರ ಸೆಲೆಬ್ರಿಟೀ ಇವಾಗ..! ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವಂತಿಲ್ಲ ಅಲ್ಲವೇ.?
-ಪ್ರಶಾಂತ್
ಪ್ರಕಾಶ,
"ಹೆಸರೇ ಬೇಡ" ಕೃತಿಯು ಬಿಸಿ ‘ಚಪಾತಿ’ಯ ಹಾಗೆ ಮಾರಾಟವಾಗುತ್ತಿರುವದನ್ನು ಓದಿ ಖುಶಿಯಾಯಿತು. ಆದರೆ ನಿಮಗೆ ದೊರೆಕಿದ ಜನಪ್ರಿಯತೆಯಿಂದ ನೀವು ಪಡುತ್ತಿರುವ ಪಾಡಿಗೆ
ಸ್ವಲ್ಪ ಕನಿಕರವೂ ಆಯಿತು.
ಇರಲಿ, ನಿಮ್ಮಿಂದ ಇನ್ನಿಷ್ಟು ಉತ್ತಮ ಲೇಖನಗಳು ಬರಲಿ,ಜನಪ್ರಿಯತೆ ಹೆಚ್ಚಲಿ ಎಂದು ಹಾರೈಸುತ್ತೇನೆ.
" ಸಾವಿರ ಪ್ರತಿಗಳ ಸರದಾರ " ರಿಗೆ ಅಭಿನಂದನೆಗಳು ! ಸಂಖ್ಯೆ ಇನ್ನೂ ಮೇಲೇರಲಿ ಎಂಬ ಹಾರೈಕೆ ನನ್ನದು .
ಇನ್ನು ಚಪಾತಿ ಪ್ರಕಾಶಣ್ಣ ಹೇಳಿ ಕರೆಯಲೆ ಅಡ್ಡಿಲ್ಲೆ ! ಹಿ ಹಿ ಹಿ ..
ಸೆಲೆಬ್ರಿಟಿ ಆದ್ರೆ ಏನೇನು ಪ್ರಾಬ್ಲಂ ಶುರುವಾಗ್ತು ನೋಡಿದ್ಯಾ? ಇನ್ನು ಒಂದೆರಡು ಪುಸ್ತಕ ಪಬ್ಲಿಶ್ ಆದಮೇಲೆ ಎಲ್ಲಿ ಅಂದ್ರೆ ಅಲ್ಲಿ ' self service ' ದರ್ಶಿನಿಗಳಿಗೆ ಹೋಗದೇ ಕಷ್ಟ ನೋಡು ! ಹೋದಲ್ಲೆಲ್ಲಾ ಆಟೋಗ್ರಾಫ್ , ಫೋಟೋ , ಇಂಟರ್ ವ್ಯೂ ...... ಪಾಪಾರಾಝಿ ( ಪಾಪ ರಾಜಿ ಅಲ್ಲಾ ಮತ್ತೆ ! )
ಪ್ರಕಾಶಣ್ಣ , ಆಗಲೂ ಬ್ಲಾಗ್ ಬರೆಯದು ಬಿಟ್ಟು ಬಿಡದ ಮಾರಾಯ !ಅಂದ ಹಾಗೇ , ಕನ್ನಡದ ಬದಲಾಯಿಸಿದ / ಹೊಸ ಶಬ್ದಗಳ ಪಟ್ಟಿ ಮಾಡುವ ಕೆಲಸ ಶುರುವಾತ?
ಹಹ್ಹಹ್ಹಾ!!
ನೀವು ಮನೆಯಿಂದ ಡಬ್ಬಿಯಲ್ಲಿ ಊಟ ತೆಗೆದುಕೊಂಡು ಹೋದರೆ ಒಳ್ಳೆಯದು. ಇಲ್ಲವಾದರೆ ಇಂತಹ ಸನ್ನಿವೇಷಗಳಿಳು ನಡೆಯುತ್ತಲೇ ಇರುತ್ತದೆ.
ಇನ್ನು ಮುಂದೆ ಅನ್ನಪೂರ್ಣ ಆಟ್ಟ (ಗೋದಿಹಿಟ್ಟು) ಹೋಗಿ ಪ್ರಕಾಶ್ ಆಟ್ಟ ಖ್ಯಾತವೆನಿಸಿದರೆ ಆಶ್ಚರ್ಯವಿಲ್ಲ ;-)
ಹ್ಹಹ್ಹಹಹ್ಹ... ಸೂಪರ್ ಪ್ರಕಾಶಣ್ಣ....
ಇಟ್ಟಿಗೆ ಸಿಮೆಂಟು, ಚಪ್ಪಾತಿ ಇನ್ನು ಇನ್ನೇನು ಬರುತ್ತೊ?
ಕಮೀಟಿಗೆ ಯಾವಾಗ ಸೇರುತ್ತೀಯಾ ಪ್ರಕಾಶಣ್ಣ....ಪದಗಳನ್ನು ಬದಲಾಯಿಸೋಕೆ....
ಸಾವಿರ ಪುಸ್ತಕ ಮಾರಾಟ ವಾಹ್......! ಸಂಖ್ಯೆ ಇನ್ನೂ ಜಾಸ್ತಿ ಆಗಲಿ ಎಂದು ಹಾರೈಸುತ್ತೇವೆ....
hahaha chennaagide nimma pajeeti..
ಪ್ರಕಾಶಣ್ಣ,
ಅಭಿನ೦ದನೆಗಳು.
’ಹೆಸರೇ ಬೇಡ’ ಪುಸ್ತಕದ ಇನ್ನೂ ಅನೇಕ ಸಾವಿರ ಪ್ರತಿಗಳು ಹೊರಬ೦ದು ಜನರನ್ನು ಸೇರಲಿ.ಹಾಗೆಯೆ ನಿಮ್ಮ ಎಲ್ಲಾ ಬರಹಗಳೂ ಯಶಸ್ಸಿನ ಉತ್ತು೦ಗಕ್ಕೇರಲಿ.
ನಿಮ್ಮ ಎಲ್ಲಾ ಬರಹಗಳಲ್ಲೂ ಅದದಕ್ಕೆ ಸರಿಯಾದ ಸ್ಪೆಷಲ್ ಒಗ್ಗರಣೆ ಇರತ್ತೆ.ದುಃಖದ ಬರಹಗಳಲ್ಲಿ ದುಃಖದಿ೦ದ ಕಣ್ಣೀರು, ಹಾಸ್ಯದ ಬರಹದಲ್ಲಿ ನಕ್ಕೂನಕ್ಕು ಕಣ್ಣೀರು.
ಅಂತೂ ಮಂದಿ ಊಟಾ ಅರ್ಧಾಕ ಬಿಟ್ಟು ನಿಮ್ಮನ್ನು ಮಾತಾಡಿಸಾಕ ಹತ್ತ್ಯಾರ ಅಭಿನಂದನೆಗಳು.
ಪುಸ್ತಕ ಓದದಿದ್ದ ನನ್ನಾಕೆಯೂ ನಿಮ್ಮ "ಹೆಸರೇ ಬೇಡ" ಓದಿ ಖುಷಿ ಪಟ್ಟಳು. ಒಂದು ಬ್ಯಾಸರಿಕಿ ನೋಡ್ರಿ ಯಾಕೋ ನನ್ನ ಬ್ಲಾಗಗೆ ಬರೂದ ಬಿಟ್ಟೀರಿ...!
The story is good one and interesting to see that you have become a celebrity in kannada minds.
Great Prakash avre... Congrats...
ಹಸಿದ ಹೊಟ್ಟೆ, ಸುಡು ಬಿಸಿಲು, ಅಲ್ಲೊಬ್ಬ ಅಪರೂಪದ ಅಭಿಮಾನಿ..ನಿಮ್ಮ ಪಜೀತಿ ಗೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು..ಪ್ರಕಾಶಣ್ಣ....ತುಂಬಾ ಚೆನ್ನಾಗಿದೆ ಲೇಖನ.
ಇಟ್ಟಿಗೆ ಸಿಮೆಂಟು ಎಲ್ಲರಿಗೂ ಪ್ರಕಾಶಣ್ಣ ಆಗಿದ್ರು ಇಗಾ ಪುಸ್ತಕ ಬಿಡುಗಡೆ ಆದಮೇಲೆ ಚಪಾತಿ ಜೊತೆಗೆ ಸೇರ್ತು ಅನ್ಸುತ್ತೆ ..
ಹೋಟೆಲ್ ಪಚೀತಿ ಚೆನ್ನಾಗಿತ್ತು ಪ್ರಕಾಶಣ್ಣ .. :)
ಹಹಹಹ...ಚೆನ್ನಾಗಿದೆ... ನಿಮ್ಮ ಹೆಸರೇ ಬೇಡ ಪುಸ್ತಕ ಸಾವಿರ ಮಾರಾಟ ಕಂಡಿದ್ದಕ್ಕೆ ಅಭಿನಂದನೆಗಳು...
ಅಂತೂ ಚೆನ್ನಾಗಿ ಚಪಾತಿ ಲಟ್ಟಿಸಿಬಿಟ್ರಿ.. :-)
Hello,
ohh Prakash anna.. thumba famous hagbitri :)
congrats.... :)
ಚುಕ್ಕಿಚಿತ್ತಾರ...
ಕೆಲವು ಶಬ್ಧಗಳು ಹಾಗೇನೆ...
ಆ ವಸ್ತು..
ಅದರ ಅರ್ಥ ಒಂದೇ ಆಗಿದ್ದರೂ...
ನಾವು ಅದನ್ನು ಶುದ್ಧವಾದ ಕನ್ನಡದಲ್ಲಿ ಬಳಸದೆ..
ಇಂಗ್ಲೀಷ್, ಅಥವಾ ಹಿಂದಿ ಶಬ್ಧಕ್ಕೆ ಗಂಟು ಬೀಳುತ್ತೇವೆ...
ಕನ್ನಡದಲ್ಲೇ .. ಹೇಳಿದರೆ ಏನಾಗುತ್ತದೆ..?
ಯಾಕೆ ಅಂತ ಗೊತ್ತಿಲ್ಲ... ನಾವು "ಕಾಚ" ಶಬ್ಧ ಬಳಸುವದಿಲ್ಲ...
ಆದರೆ "ಚಪಾತಿ" ಮಾತ್ರ ದಿನದಿಂದ ದಿನಕ್ಕೆ ಪ್ರಸಿದ್ಧಿ ಆಗ್ತಾ ಇದೆ...
ಹಾ..ಹ್ಹಾ...!
ಧನ್ಯವಾದಗಳು..
ಪ್ರಕಾಶರೆ, ನಿಮ್ಮ ಪುಸ್ತಕದ ಸಾವಿರ ಪ್ರತಿಗಳು ಖರ್ಚಾದ ವಿಷಯ ತಿಳಿದು ಖುಷಿಯಾಯಿತು. ಜೊತೆಗೆ ನಿಮ್ಮ ಹೊಸ ಬರಹದ ಓದು ಕೂಡ ಖುಷಿ ಕೊಟ್ಟಿತು. ಚೆನ್ನಾಗಿದೆ. ಮುಂದಿನ ಪುಸ್ತಕಕ್ಕೆ ಗುದ್ದಲಿ ಪೂಜೆ ಮಾಡಿಬಿಡಿ.
ಜಲನಯನ.. (ಆಝಾದ್ ಭಾಯ್..)
ನಮ್ಮನೆಯಲ್ಲಿ ಚಪಾತಿ ಶಬ್ಧದ ಬಳಕೆ ಮಾಮೂಲಿಯಾಗಿ ಬಿಟ್ಟಿದೆ...
ಆದರೆ ಚಪಾತಿಗೆ ಚಪಾತಿ ಅನ್ನದೆ "ರೊಟ್ಟಿ" ಅನ್ನುತ್ತೇವೆ..
ನಿಮ್ಮ ಚಪಾತಿ ಪ್ರಸಂಗ ಕೇಳಿ ನಮ್ಮನೆಯಲ್ಲಿ ಎಲ್ಲರೂ ನಕ್ಕೆವು...
ತುಂಬಾ ತುಂಬಾ ಧನ್ಯವಾದಗಳು...
ಸುಪ್ತವರ್ಣ...
ಲೈನ್.. ನಾಗು.., ಪೆಟ್ಟಿಗೆ ಗಪ್ಪತಿ, ನಯನಾ.. ರಾಜಿ..
ಇವರೆಲ್ಲರಿಗೂ ಒಂದಷ್ಟು ದಿನ ವಿಶ್ರಾಂತಿ ಕೊಡೋಣ...
ಸ್ವಲ್ಪ ದಿನ "ಕಥೆ" ಬರೆಯೋಣ ಅಂತ..
ಆದರೇ .. ಈ ಚಪಾತಿ ಅಭಿಮಾನಿ ಸಿಕ್ಕಿದ್ದು ..
ಆ ಫಜೀತಿ..
ಅದೇ ಸಮಯದಲ್ಲಿ "ಹೇಸರೇ.. ಬೇಡ" ಸಾವಿರ ಪ್ರತಿಗಳು ಮಾರಾಟವಾಗಿದ್ದು...
ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನಿಸಿತು...
ಧನ್ಯವಾದಗಳು..
ಗುರುಮೂರ್ತಿಯವರೆ...
ಯಾರಾದರೂ ಭಾರತಕ್ಕೆ ಬರುತ್ತಾರೆಂದರೆ ತಿಳಿಸಿ..
ನಾನು ಅವರಿಗೆ ಪುಸ್ತಕ ಮುಟ್ಟಿಸುತ್ತೇನೆ...
ನಿಮ್ಮ ಕವನ ಸಂಕಲನ ಕೂಡ ನನಗೆ ಬೇಕಿತ್ತು...
ಕನ್ನಡದ ಶಬ್ಧಗಳನ್ನು ಬಳಸದೆ..
ಇಂಗ್ಲೀಷ್ ಶಬ್ಧಕ್ಕೆ ನಾವು ಯಾಕೆ ಮೊರೆ ಹೋಗುತ್ತೇವೆ ಅಂತ ಗೊತ್ತಿಲ್ಲ..
ಧನ್ಯವಾದಗಳು..
ಸಂದೀಪ್ ಕಾಮತ್...
ಹ್ಹಾ..ಹ್ಹಾ...!
ಏನೇ ಹೇಳ್ರಿ..
ಚಪಾತಿ ಜನಪ್ರಿಯ ಆಗ್ತಾ ಇರೋದಂತೂ ನಿಜ...
ಎರಡೂ ಚಪಾತಿಗಳು ಗೊಂದಲ ಉಂಟು ಮಾಡದಿದ್ರೆ ಆಯ್ತು ನೋಡ್ರಿ.....
ನಿಮ್ಮ ಹಾಸ್ಯ ಪ್ರಜ್ಞೆಗೆ ಧನ್ಯವಾದಗಳು..
ವನಿತಾರವರೆ...
ನಾವು ನೆಂಟರ ಅಥವಾ ಸ್ನೇಹಿತರ ಮನೆಗೆ ಹೋದಾಗ..
ಈ ಚಪಾತಿ ಸನ್ನಿವೇಶ ಬಂದೇ ಬರುತ್ತದೆ...
ಅವರ ಮನೆಯಲ್ಲಿ ಊಟಕ್ಕೆ ಕುಳಿತಾಗ ಚಪಾತಿ ಮಾಡಿಬಿಟ್ಟಿದ್ದರೆಂತೂ ಮುಗಿದೇ.. ಹೋಯಿತು..
" ಚಪಾತಿ ಹಾಕ್ಕೊಳ್ಳಿ.." ಅಂತ ಒತ್ತಾಯ ಮಾಡುವಾಗ ನಗೆ ತಡೆ ಹಿಡಿಯಲು ಸಾಧ್ಯವೇ ಇಲ್ಲ...
ಧನ್ಯವಾದಗಳು...
ಹ ಹ ಹ..
ಈಗ ನಿಮ್ಮನ್ನು ಹೆಸರು ಚಪಾತಿ ಪ್ರಕಾಶಣ್ಣ ಆಗಿಬಿಟ್ಟಿತಾ...?
ಚಪಾತಿಯ ರುಚಿ ಭರ್ಜರಿಯಾಗಿದೆ!:P
nice incident sharing
ಕಾಕನಕೋಟೆ ಚಿತ್ರದಲ್ಲಿ ನಾಯಕ ಲೋಕೇಶ್ ರವರ ಹೆಸರು "ಕಾಚ"
ಪ್ರಕಾಶಣ್ಣಾ ಒಳ್ಳೇ ಅನುಭವವೇ ಆಗಿದೆ ನಿಮಗೆ. :)
http://lodyaashi.com
ಪಾಚು ಪ್ರಪಂಚ (ಪ್ರಶಾಂತ್...)
ಮುಜುಗರವಾದರೂ.. ಖುಷಿಯಿಯಾಗುತ್ತಿದೆ...
ನನ್ನ ದೈನಂದಿನ ವ್ಯವಹಾರದಲ್ಲಿ ಮುಳುಗಿರುತ್ತಿದ್ದ ನನಗೆ ಬ್ಲಾಗ್ ಲೋಕ ಒಂದು ಹೊಸ ಪರಿಚಯ ಕೊಟ್ಟಿದೆ...
ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು..
ಸುನಾಥ ಸರ್...
ತುಂಬಾ... ತುಂಬಾ ಥ್ಯಾಂಕ್ಸ್...!
ನಿಮ್ಮ ಶುಭ ಹಾರೈಕೆಗಳು..
ಆಶೀರ್ವಾದ ನನ್ನ ಮೇಲೆ ಯಾವಾಗಲೂ ಇರಲಿ...
ಈ ಸಾರಿ ಧಾರವಾಡಕ್ಕೆ ಬಂದಾಗ ನಿಮ್ಮನ್ನು ಭೇಟಿಯಾಗುವೆ...
ಚಿತ್ರಾ....
ಈ ಬ್ಲಾಗ್ ಲೋಕ ನನಗೆ ಹೊಸ ಪರಿಚಯ ಕೊಟ್ಟಿದೆ..
ಖಂಡಿತ ಬ್ಲಾಗ್ ಬರೆಯೋದನ್ನು ನಿಲ್ಲಿಸುವದಿಲ್ಲ....
ಪತ್ರಿಕೆಗಳಿಗೆ ಬರೆಯೋದು ಟೈಮ್ ಇದ್ದಾಗ ಮಾತ್ರ...
ಅದು ಸಧ್ಯಕ್ಕೆ ಆಗದ ಮಾತು...
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಹೃದಯ ಪೂರ್ವಕ ಧನ್ಯವಾದಗಳು..
ರಾಜೀವ...
ಅಟ್ಟ ಪ್ರಕಾಶಣ್ಣ...!!
ಹೊಸ ಹೆಸರು ಇಷ್ಟವಾಯಿತು,...!
ಪ್ರಕಾಶ್ ಅಟ್ಟ (ಹಿಟ್ಟು) ಹ್ಹಾ..ಹ್ಹಾ...!
ನಿಮ್ಮ ಹಾಸ್ಯ ಕಲ್ಪನೆಗೆ ಅಭಿನಂದನೆಗಳು...
ಹ್ಹಾ..ಹ್ಹಾ..! ಪುಣ್ಯ "ಚಪಾತಿ ಪ್ರಕಾಶಣ್ಣ"ನಿಗಿಂತ ಚೆನ್ನಾಗಿದೆ ಈ ಹೆಸರು...!
ಸವಿಗನಸು.. (ಮಹೇಶ್)...
ನಿಮ್ಮಂಥಹ ಸ್ನೇಹಿತರ ಶುಭ ಹಾರೈಕೆಗಳು ನನಗೆ ಶ್ರೀ ರಕ್ಷೆ...!
ನನಗೆ ಇದುವರೆಗೆ ಬಂದ "ವಿಚಿತ್ರ ಹೆಸರುಗಳ " ಬಗೆಗೆ ಒಂದು ಲೇಖನ ಬರೆಯಬೇಕು ಅನ್ನಿಸಿ ಬಿಟ್ಟಿದೆ...
ಬಹಳ ವಿಚಿತ್ರ ಹೆಸರುಗಳಿವೆ...!!
ನಿಮ್ಮ ಪ್ರೋತ್ಸಾಹಕ್ಕೆ ತುಂಬಾ... ತುಂಬಾ.. ಧನ್ಯವಾದಗಳು...
ಮನಸು....
ಸಿಕ್ಕಾಪಟ್ಟೆ ಹಸಿವು...
ರಷ್ ಬೇರೆ...
ಇದ್ದಿದ್ದು ಒಂದೇ ಒಂದು ಒಳ್ಳೆಯ ಹೊಟೆಲ್ಲು...
ಅಲ್ಲಿ "ಚಪಾತಿ ಪ್ರಕಾಶಣ್ಣ" ಅಂದಾಗ
ಇದು ಹೊಗಳಿಕೆಯೋ..
ತೆಗಳಿಕೆಯೋ ಅಂತ ವಿಚಾರ ಮಾಡುವಂಥ ಸ್ಥಿತಿ... ಹ್ಹಾ..ಹ್ಹಾ...!
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಮನಮುಕ್ತಾ....
ನನ್ನ ಗೆಳೆಯ "ಮಲ್ಲಿಕಾರ್ಜುನ್" ನನಗೊಂದು ಮಾತು ಹೇಳಿದ್ದರು..
" ಯಾರನ್ನೂ ಅನುಕರಣೆ ಮಾಡವದು ಬೇಡ.. ನಿಮ್ಮದೇ ಶೈಲಿಯಲ್ಲಿ..ನೀವು ಮಾತನಾಡುವ ಹಾಗೇ ಬರೆಯಿರಿ " ಅಂತ...
ನನ್ನ ಶೈಲಿ ನಿಮಗೆಲ್ಲ ಇಷ್ಟವಾಗಿದ್ದು ಖುಷಿ ತಂದಿದೆ...
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ...
ಗೆಳೆಯರ ಸಹಾಯಕ್ಕೆ ತುಂಬು ಹೃದಯದ ಧನ್ಯವಾದಗಳು...
ಉಮೇಶ್ ದೇಸಾಯಿಯವರೆ..
ಬೇಸರ ಬೇಡ... ಕೆಲಸದ ಒತ್ತಡದ ನಡುವೆ ಬರಲಾಗಲಿಲ್ಲ...
ಕ್ಷಮಿಸುವಿರಲ್ಲ..?
ಅರ್ಧ ಊಟ ಬಿಟ್ಟು ಬಂದು...
ಮಾತಾಡುವ ಅವರ ಉತ್ಸಾಹ...ನೋಡಿ ನಾನು ದಂಗಾಗಿದ್ದೆ...
ಖುಷಿಯೂ ಆಗುತ್ತಿತ್ತು...
"ಚಪಾತಿ ಪ್ರಕಾಶಣ್ಣ" ಅಂದಾಗ ಧರೆಗೆ ಇಳಿದಿದ್ದೆ...!
ಹ್ಹಾ..ಹ್ಹಾ..!
ಎಲ್ಲವೂ ಬ್ಲಾಗಿನಿಂದ .. ಅಲ್ಲವಾ..?
ನಿಮ್ಮ ಬ್ಲಾಗಿಗೆ ಬರಲಾಗದಿದ್ದರೂ...
ಪ್ರೋತ್ಸಾಹಿಸುವ ನಿಮ್ಮ ಪ್ರೀತಿಗೆ
ತುಂಬುಹೃದಯದ ಧನ್ಯವಾದಗಳು...
ರಾಘವ ಶರ್ಮ....
ನಿಮ್ಮ ಪತ್ರಿಕೆಯಲ್ಲಿ ಬರುವ ನಿಮ್ಮ ಲೇಖನಗಳನ್ನು ನಾನು ತಪ್ಪದೇ ಓದುತ್ತೇನೆ..
ಬಹಳ ಚೆನ್ನಾಗಿ, ಅಭ್ಯಸಿಸಿ ಬರೆಯುತ್ತೀರಿ.. ಅಭಿನಂದನೆಗಳು...
ಬಹಳ ದಿನಗಳ ನಂತರ ಬಂದಿದ್ದೀರಿ...
ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳು
ನನಗೆ ಇನ್ನಷ್ಟು ಉತ್ಸಾಹ ಕೊಟ್ಟಿದೆ...
ತುಂಬಾ... ತುಂಬಾ ಥ್ಯಾಂಕ್ಸ್..! ಬರುತ್ತಾ ಇರಿ...
ಚೇತನಾ....
ಲಂಡನ್ನಿನ ಮೈಕೊರೆಯುವ ಛಳಿಯಲ್ಲೂ
ನನಗೆ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್..!
ನನಗೆ "ಚಪಾತಿ ಪ್ರಕಾಶಣ್ಣ" ಅಂದಿದ್ದಕ್ಕೆ ಖುಷಿ ಆಯಿತಾ..?
ಹ್ಹಾ,,,ಹ್ಹಾ..!
ತಮಾಷೆಗೆ ಹೇಳಿದ್ದು....
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಥ್ಯಾಂಕ್ಸ್.. ಥ್ಯಾಂಕ್ಸ್... ಥ್ಯಾಂಕ್ಸ್...!
ನಮಸ್ಕಾರ
ಬ್ಲಾಗ್ ಲೋಕದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ನಮ್ಮ ಬ್ಲಾಗ್ (ಮಲೆನಾಡಿನ ವಿನೋದ ಪ್ರಸಂಗ) ಓದಿ ಕಾಮೆಂಟ್ ಮಾಡಿದ್ದು ಸಂತೋಷವಾಯಿತು. ದಯವಿಟ್ಟು follower ಆಗಿ ನಿಮ್ಮ ಅನಿಸಿಕೆ ತಿಳಿಸುತ್ತಿರಿ.
many happy returns of the day(17th)
found out your birthday from Mahesh's blog
Enjoy
:-)
malathi S
"ಪ್ರಕಾಶಣ್ಣನ ಫಜೀತಿ!" ಚೆನ್ನಾಗಿದೆ :)
Post a Comment