Saturday, June 20, 2009

" ಯಾರದ್ದೇ.. ದೇಹದ ಬಣ್ಣ.... ಅವರಿಷ್ಟವಲ್ಲ..."..

part ... 1


ರಾಜಿ ಎನ್ನುವ ಮಿಂಚು ...
ಇಡೀ ಕಾಲೇಜಿನಲ್ಲಿ ಸಂಚಲನ ಉಂಟು ಮಾಡಿ ಬಿಟ್ಟಿದ್ದಳು...
ಅವಳ ವಯ್ಯಾರ, ಬಿನ್ನಾಣ..
ಸೊಕ್ಕಿನ ನಡೆ...

ಕಪ್ಪಗಿದ್ದರೂ ಆಕರ್ಷಕ ಕಣ್ಣುಗಳು...!!

ಹುಡುಗರ ಒಂದು ನೋಟ ಅವಳ ಕಡೆಗೆ ಇರುತ್ತಿತ್ತು...

ಅವಳ ನೋಟ...
ಉಪ್ಪು.. ಹುಳಿ... ಮಸಾಲೆ ಹಾಕಿದ ಹಸಿಮೆಣಸಿನ ಕಾಯಿಯಂತೆ ಇತ್ತು....

ಅದು ಅವಳಿಗೂ ಗೊತ್ತಿತ್ತು...

ಒಮ್ಮೆ ನಮ್ಮ ಗುಂಪಿನ ಹುಡುಗ ಮಾತನಾಡಿಸಲು ಹೋಗಿ ಎಲ್ಲರೆದುರು
ಅವಳಿಂದ ಚೆನ್ನಾಗಿ ಉಗಿಸಿಕೊಂಡಿದ್ದ...

ಅವಳು ಹೇಗೆ ಉಗಿದಿದ್ದಳು ಎಂದರೆ...
ಹುಡುಗ ಅವಮಾನದಿಂದ... ನಾಲ್ಕು ದಿನ ಕಾಲೇಜಿಗೆ ಚಕ್ಕರ್ ಹಾಕಿಬಿಟ್ಟಿದ್ದ...
ಹುಡುಗರೆಲ್ಲ ವಯಕ್ತಿಕವಾಗಿ ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಿದ್ದರು....

ಇದಕ್ಕೊಂದು ಪ್ರತಿಕಾರ ತೆಗೆದುಕೊಳ್ಳವ ಅಗತ್ಯ ಇತ್ತು...

ಸೇಡು ತೀರಿಸಿ ಕೊಳ್ಳಲೇ ಬೇಕಿತ್ತು....

ಹುಡುಗರೆಲ್ಲ ನಾಗುವಿನ ಮೊರೆ ಹೊಕ್ಕರು...
ನಾಗು ಒಂದುದಿನದ ಟೈಮ್ ತೆಗೆದು ಕೊಂಡ...

"ಪ್ರಕಾಶು .... ಒಂದು ಕವನ ಬರೆದು ಕೊಡು..."

ಎಂದು ಅದರ ರೂಪು ರೇಷೆಗಳನ್ನು ಕೊಟ್ಟ...
ಅವನ ರೀತಿಯಂತೆ ಕವನ ಬರೆದು ಕೊಟ್ಟೆ...

ಮರುದಿನ ಕಾಲೇಜಿನ ನೋಟಿಸ್ ಬೋರ್ಡಲ್ಲಿ ಉಗಿಸಿಕೊಂಡ ಹುಡುಗನ ಹೆಸರಲ್ಲಿ
ಒಂದು ಕವನ ಹಾಕಲಾಯಿತು...

ನಾಗು ಎಲ್ಲರನ್ನು ಕರೆದು ಹೇಳಿದ....

"ನೋಡ್ರೊ .. ಕನಿಷ್ಠ ..
ಐದು.. ಆರು.. ಹುಡುಗರಾದರೂ ನೋಟಿಸ್ ಬೋರ್ಡ್ ಮುಂದೆ ನಿಂತಿರಬೇಕು...
ಹೆಣ್ಣು ಮಕ್ಕಳು ಬಂದ ಕೂಡಲೇ..
ಆಸಕ್ತಿಯಿಂದ ಬೋರ್ಡ್ ನೋಡಿ..
ಓದಿ ನಗಬೇಕು.. ದೊಡ್ಡದಾಗಿ...
ಸಾಧ್ಯವಾದಷ್ಟು ಸಭ್ಯತೆಯಿಂದ.. ಜೋರಾಗಿ..."

ಹುಡುಗರು ಸರದಿಯಂತೆ ನೋಟಿಸ್ ಬೋರ್ಡ್ ಮುಂದೆ ನಿಂತು ನಗಲು ಶುರು ಮಾಡಿದರು...

ಎಲ್ಲ ಹೆಣ್ಣುಮಕ್ಕಳಿಗೂ ಆಶ್ಚರ್ಯ...!
ಉಗಿಸಿಕೊಂಡ ಹುಡುಗ ಕವನ ಬರೆದಿದ್ದಾನೆ..!
ಕೆಲವರು ಓದಿಕೊಂಡು ಹೋದರು...

ರಾಜಿಗೂ ಸುದ್ಧಿ ಮುಟ್ಟಿತು....!

ತನ್ನ ಗೆಳತಿಯರ ಸಂಗಡ ದೊಡ್ಡ ಗುಂಪಿನೊಂದಿಗೆ ಓದಲು ಬಂದಳು...

ಎಲ್ಲ ಗಂಡು ಮಕ್ಕಳು ನೋಟಿಸ್ ಬೋರ್ಡಿನ ಮುಂದೆ ಜಮಾಯಿಸಿದ್ದರು....

"ಪಕ್ಕಕ್ಕೆ ಬರ್ರೋ... ಓದುವವರು ಓದಿಕೊಳ್ಳಲಿ"

ಅಂತ ಉಗಿಸಿಕೊಂಡ ಹುಡುಗ ದೊಡ್ಡದಾಗಿ ಹೇಳಿದ...
ತನ್ನ ಕೈಯಲ್ಲಿದ್ದ ಕವನದ ಜೆರಾಕ್ಸ್ ಕಾಪಿಯನ್ನು ಎಲ್ಲರಿಗೂ ಹಂಚಿದ....

ಹೆಣ್ಣು ಮಕ್ಕಳೂ ತೆಗೆದು ಕೊಂಡರು...

ಹುಡುಗರ ನಗು ತಾರಕಕ್ಕೆ ಏರಿತ್ತು....

ರಾಜಿ ಅವಮಾನದಿಂದ...
ಉಕ್ಕಿಬಂದ ಅಳುವನ್ನು ನುಂಗುತ್ತಿದ್ದು ನಮಗೆಲ್ಲ ಕಾಣಿಸುತ್ತಿತ್ತು...

ಅವಳ ಅಳು ಮುಖವನ್ನು ನೋಡಿ ನಮಗೆಲ್ಲ ಒಂಥರಾ ಆಯಿತು...
ತಪ್ಪು ಮಾಡಿ ಬಿಟ್ಟೆವೇನೋ ಅನಿಸಿತು...

ಉಗಿಸಿಕೊಂಡವ ಖುಷಿಯಾಗಿದ್ದ....

ನಾವೆಲ್ಲ ಕ್ಲಾಸಿಗೆ ಹೋಗಿ ಕುಳಿತೆವು...

ರಾಜಿ ಸೀದಾ ಪ್ರಿನ್ಚಿಪಾಲರ ಬಳಿ ದೂರು ಕೊಟ್ಟಳು..
ನೋಟಿಸ್ ಬೋರ್ಡಿನ ಕವನ ಸ್ಟಾಫ್ ರೂಮಿಗೂ ತಲುಪಿತು.....

ನಮ್ಮನೆಲ್ಲ ಅಲ್ಲಿಗೆ ಕರೆಸಲಾಯಿತು..

ವಿಚಾರಣೆ ಶುರುವಾಯಿತು.... ಪ್ರಿನ್ಸಿಪಾಲರು ತುಂಬಾ ಗರಂ ಆಗಿದ್ದರು...

"ಯಾಕೆ ಈ ಹುಡುಗಿಯ ಬಗೆಗೆ ಕವನ ಬರೆದು ಬೋರ್ಡಿಗೆ ಬರೆದು ಹಾಕಿದ್ದು..?"

"ಸರ್.... ಅದೊಂದು ತಮಾಷೆ ಕವಿತೆ...
ಹೀಗೆ ಸುಮ್ಮನೆ ..
ಯಾರಿಗೂ ಉದ್ದೇಶಿಸಿ ಹಾಕಿಲ್ಲ..."

ರಾಜಿಯ ಸಪ್ಪೆ ಮೊರೆ ನೋಡಿ ಖೇದವೆನಿಸಿತು...
ಹೆಣ್ಣುಮಕ್ಕಳ ಅಳುಮೋರೆ, ಕಣ್ಣೀರಿಗೆ ಬಹಳ ಶಕ್ತಿ ಇದೆ...

"ಅದು ನನ್ನ ಕಪ್ಪು ಬಣ್ಣದ ಕುರಿತು ಹಾಕಿದ್ದು..
ಇಡೀ ಕಾಲೇಜೇ ಹೇಳ್ತಾ ಇದೆ...
ಅದರಲ್ಲೂ ನಾನು ಓದಲು ಹೋದಾಗ ...
ನನಗೆ ಅವಮಾನವಾಗುವಂತೆ ಜೋರಾಗಿ ನಗುತ್ತಿದ್ದರು.."

ನಾಗು ಪ್ರತಿ ಸವಾಲು ಹಾಕಿದ....
"ನಾವ್ಯಾಕೆ ನಿಮ್ಮ ಬಗ್ಗೆ ಬರೆಯಲಿ...?
ನಮಗೇನು ಹುಚ್ಚುನಾಯಿ ಕಚ್ಚಿದೆಯಾ...?
ಇಷ್ಟಕ್ಕೂ ನೀವು ನಮಗೇನೂ ಮಾಡಿಲ್ಲವಲ್ಲ...!"

" ಮತ್ತೆ ಗಂಡು ಮಕ್ಕಳೆಲ್ಲ ಗುಂಪು ಸೇರಿಸಿ ..
ನೋಟೀಸ್ ಬೋರ್ಡಿನ ಬಳಿ ನನ್ನನ್ನು ನೋಡಿ ನಕ್ಕಿದ್ದು ಯಾಕೆ..?"

"ಅದೇ ಹೇಳಿದೆವಲ್ಲ... ಅದು ತಮಾಷೆ ಕವನ...
ನಾವು ನಿಮ್ಮ ಬಗೆಗೆ ಯಾಕೆ ನಗಬೇಕು...?
ನೀವೇನೂ ಮಾಡಿಲ್ಲವಲ್ಲ...."

ನಾಗು ಪ್ರಿನ್ಸಿಪಾಲರಿಗೆ ಹೇಳಿದ......
"ಸರ್ ನಮ್ಮ ಕವನದಿಂದ ಯಾರಿಗಾದರೂ ಬೇಜಾರಾದಲ್ಲಿ ಅದಕ್ಕೆ ನಮ್ಮ ವಿಷಾದವಿದೆ...
ಯಾರಿಗೂ ನೋಯಿಸುವ ದ್ರಷ್ಟಿಯಿಂದ ಅದನ್ನು ಹಾಕಿದ್ದಲ್ಲ..."

ನಾಗುವಿನ ಲೆಕ್ಕಾಚಾರದ, ಬುದ್ಧಿವಂತಿಕೆಯ ಮಾತು ರಾಜಿಗೆ ಬಿಸಿ ತುಪ್ಪದಂತಾಯಿತು....
ಇತ್ತ ಪ್ರಿನ್ಸಿಪಾಲರಿಗೆ ತಲೆ ಕೆಟ್ಟು ಹೋಯಿತು...

"ಏನಮ್ಮ ಅದು ಅಶ್ಲೀಲ ಕವನವಾ...? ಕೆಟ್ಟ ಭಾಷೆಯಲ್ಲಿ ಬರೆದಿದ್ದಾರಾ..?"

"ಇಲ್ಲ... ಸ... ನನ್ನ ಕಪ್ಪು ಬಣ್ಣದ ಬಗ್ಗೆ ಹೀಯಾಳಿಸಿದ್ದಾರೆ.."

ನಾಗು ನೇರವಾಗಿ ಹೇಳಿದ....
"ಸರ್ ಅದರಲ್ಲಿ ಯಾರ ಹೆಸರೂ ಇಲ್ಲ...
ಸುಂದರವಾದ ಹಾಸ್ಯ ಕವನ.. ಅಷ್ಟೆ.."

ಈಗ ರಾಜಿ ಇಕ್ಕಟ್ಟಿಗೆ ಸಿಲುಕಿದಳು...
"ಸರ್... ನಾಲ್ಕು ದಿನಗಳ ಹಿಂದೆ... ಇವರಲ್ಲಿ ಒಬ್ಬ ಹುಡುಗನಿಗೆ ನಾನು ಚೆನ್ನಾಗಿ ಬಯ್ದಿದ್ದೆ...
ಅದಕ್ಕೆ ಹೀಗೆ ಸೇಡು ತೀರಿಸಿ ಕೊಳ್ತಿದ್ದಾರೆ"

"ಯಾಕೆ ಬಯ್ದದ್ದು..? ಆತ ಏನು ಮಾಡಿದ...?"

"ಆತ ಸುಮ್ಮನೆ ನನ್ನ ಹಿಂದೆ ಬಿದ್ದಿದ್ದ...ಪೋಲಿ ಥರ ನನ್ನನ್ನೇ ನೋಡ್ತಿದ್ದ...
ಕೊನೆಗೆ ನನ್ನನ್ನೇ ಮಾತಾಡಿಸಲು ಬಂದ... ನಾನು ಚೆನ್ನಾಗಿ ಬಯ್ದು ಕಳಿಸಿದ್ದೆ....."

ಈಗ ನಾಗು ಮಧ್ಯ ಮಾತಾಡಿದ....
"ಆತ ಏನು ಮಾತಾಡಿದ...? ಏನು ಕೇಳಿದ...? ತಪ್ಪಾಗಿ ನಡೆದು ಕೊಂಡನಾ..?
ಇಲ್ಲಾ.. ಅಶ್ಲೀಲ ಮಾತಾಡಿದನಾ...?
ನಿಮ್ಮ ಬಳಿ ಸಹಜ ಸ್ನೇಹದಿಂದ ಮಾತಾಡಲು ಬಂದಿರ ಬಹುದಲ್ಲವಾ..?
ನೀವು ನೇರವಾಗಿ ಇದೆಲ್ಲ ನನಗಿಷ್ಟ ಆಗಲ್ಲ ಅನ್ನೋದು ಬಿಟ್ಟು..
ಎಲ್ಲ ಹುಡುಗರ ಎದುರಿಗೆ ಜೋರಾಗಿ ಸಿಕ್ಕಾಪಟ್ಟೆ ಅವಾಚ್ಯ ಶಬ್ಧದಿಂದ ಬಯದದ್ದು ತಪ್ಪಲ್ಲವಾ...?"

"ಇಲ್ಲ ಆತ ಕೆಲಸವಿಲ್ಲದೆ ನನ್ನ ಹಿಂದೆ ಬರುತ್ತಿದ್ದ..
ನನ್ನ ಪರಿಚಯ ಮಾಡಿಕೊಳ್ಳಲು ಮಾತಾಡಲು ಬಂದಿದ್ದ..
ನನ್ನ ಹಿಂದೆ ಯಾಕೆ ಬರಬೇಕಿತ್ತು...?"

ಈಗ ಪ್ರಿನ್ಸಿಪಾಲರಿಗೆ ಎಲ್ಲದೂ ಅರ್ಥವಾಯಿತು....

"ಎಲ್ಲ್ರೂ ಸುಮ್ನೆ ಇರಿ...
ಓದುವದು ಬಿಟ್ಟು ಹೆಣ್ಣುಮಕ್ಕಳ ಹಿಂದೆ ಹೋಗಿ ಪರಿಚಯ ಮಾಡಿಕೊಳ್ಳುವ ನಾಟಕ ಏಕೆ ಮಾಡ್ತೀರಿ..?
ಇದೆಲ್ಲ ತಪ್ಪು... ಯಾರು ಆ ಹುಡುಗ... ?
ಬಾರೋ... ಇಲ್ಲಿ ಇವರ ಬಳಿ ಸ್ಸಾರಿ ಕೇಳು..."

ಪ್ರಿನ್ಸಿಪಾಲರಿಗೆ ಹೆದರಿದ ಆತ.. ಸ್ಸಾರಿ ಕೇಳಿದ...

"ಮತ್ತೆ ಏನು ಕವನ ಅದು... ನೋಟಿಸ್ ಬೋರ್ಡಿನಿಂದ ತಗೋಂಡು ಬನ್ನಿ..."
ತಂದು ಕೊಡಲಾಯಿತು...
ಪ್ರಿನ್ಸಿಪಾಲರೂ ಸ್ವತಹ ಕವಿಗಳು...

ಓದಿದರು..

" ಭದ್ರಾವತಿ... ಬಂಗಾರಿಗೆ...."

ನಿನ್ನೆ ಕನಸಲ್ಲಿ ...
ಹೆಜ್ಜೆಗೆಜ್ಜೆಯ ಸದ್ದಲ್ಲಿ ನೀನು...
ನನ್ನ ಕನಸಲ್ಲಿ ಬಂದಿದ್ದೆ...

ನಿನ್ನ ಮುದ್ದು ಮುಖ ನೋಡಲಾಗಲಿಲ್ಲ...
ಸುತ್ತಲೂ ಕವಿದಿತ್ತು...
ಮುಸ್ಸಂಜೆಯ ಮಂದ ಕತ್ತಲು..
ಏನು ಮಾಡಲಿ ನಾನು..?
ನನ್ನ ಕೈಯ್ಯಲ್ಲಿ ಬ್ಯಾಟರಿ ಇತ್ತಿಲ್ಲ......

ಇನ್ನೊಮ್ಮೆ ಬಾ.. ಗೆಳತಿ...
ಹಗಲಿನಲ್ಲಿ..

ಕಣ್ಣು ತುಂಬಿಸಿಕೊಳ್ಳುವೆ...
ಹ್ರದಯದಲ್ಲಿ ಇರಿಸಿಕೊಳ್ಳುವೆ..
ಕತ್ತಲಲ್ಲೂ ಬೆಳಕಾಗುವಂತೆ ಮಾಡುವೆ....
ಸೀಮೆ ಸುಣ್ಣವ ಸಾರಿಸಿ...
ರೇಡಿಯಂ ಬಳಿದು....
ಮತ್ತೆ ನಿನ್ನನ್ನು ರಾತ್ರಿ ಕನಸಲ್ಲಿ ನೋಡಲು......

ಅವರು ನಗು ಬಂದರೂ ತಡೆದು ಕೊಡಿದ್ದು ಸ್ಪಷ್ಟವಾಗಿತ್ತು...

ತಮ್ಮ ಚಷ್ಮದಿಂದಲೇ ನಮ್ಮನ್ನು ಕೆಕ್ಕರಿಸಿ ನೋಡಿ...
"ಇದು ಯಾರು ಬರೆದದ್ದು...?"

ನಾಗು ಹೇಳಿದ... "ನಾನು "

"ನೀನು ಹೋಗಮ್ಮ..."
ರಾಜಿ ಹೋದಳು...

" ಈ ಹುಡುಗಾಟಿಕೆ ವಯಸ್ಸಲ್ಲಿ ಸ್ವಲ್ಪ ವೀವೇಕ ಇಟ್ಟುಕೊಳ್ಳಿ..
ಯಾರದೇ ದೇಹದ.. ಬಣ್ಣ ಅವರ ಇಷ್ಟವಲ್ಲ...
ಅದನ್ನು ಹೀಯಾಳಿಸುವ ಅಧಿಕಾರ ನಿಮಗೆ ಇಲ್ಲ...
ಪಬ್ಲಿಕ್ಕಿನಲ್ಲಿ ಒಬ್ಬ ಹೆಣ್ಣುಮಗಳಿಗೆ ಈ ರೀತಿಯಾಗಿ ಹೀಯಾಳಿಸುವದು ಅಕ್ಷಮ್ಯ ಅಪರಾಧ...
ನಿಮ್ಮ ತಂಗಿ ಕಪ್ಪಿದ್ದರೆ....
ಯಾರಾದರೂ ಹೀಯಾಳಿಸಿದರೆ ನಿಮಗೆ ಏನು ಅನ್ನಿಸ್ತದೆ..?
ಇದೇ ಕೊನೆಯ ವಾರ್ನಿಂಗ್...
ಅಪ್ಪ, ಅಮ್ಮ ಓದಲಿಕ್ಕೆ ಕಳಿಸ್ತಾರೆ.. ಇಲ್ಲಿ ನೀವು ಈ ಥರಹ ಮಾಡ್ತೀರಿ..
ನಾಚಿಕೆ ಆಗ್ಬೇಕು ನಿಮಗೆ..
ಮುಂದಿನ ವಾರ ರಕ್ಷಾಬಂಧನ ಕಾರ್ಯಕ್ರಮ ಅದ್ದೂರಿಯಾಗಿ ಮಾಡುವ ಅವಶ್ಯಕತೆ ಇದೆ...
ಅದಕ್ಕೆ ಕಡ್ಡಾಯವಾಗಿ ಎಲ್ಲರೂ ಬರಲೇ ಬೇಕು...

ಈಗ ಕ್ಲಾಸಿಗೆ ಹೋಗಿ... "


ನಾನು ನಾಗುವಿನ ಮುಖ ನೋಡಿದೆ...
ನಾಗು ನನ್ನ ಕೈ ಅಲ್ಲಿಯೇ ಗಟ್ಟಿಯಾಗಿ... ಹಿಡಿದುಕೊಂಡ...
ಕೈ ಅದುಮಿದ....
ಸಣ್ಣಗೆ ನನ್ನ ಕಿವಿಯಲ್ಲಿ ಪಿಸುಗುಟ್ಟಿದ...

"ಪ್ರಕಾಶು...
ನನಗೆ ಇನ್ನಷ್ಟು ಕವನ ಬೇಕು ಕಣೋ...
ನನ್ನ ಸ್ನೇಹದ ಮೇಲೆ ಆಣೆ ...
ಇಲ್ಲ ಅನ್ನಬೇಡ.."

ಅವನಿಗೆ ಇನ್ನಷ್ಟು ಕವನ ಬರೆದು ಕೊಟ್ಟಿದ್ದು ದೊಡ್ಡ ಕಥೆ....(ದಯವಿಟ್ಟು "ರಾಜಿ ಬಲು ಸುಂದರಿ " ಓದಿ...76 comments:

NiTiN Muttige said...

ನಿಮ್ಮಷ್ಟು ಕಿಲಾಡಿ ಗ್ಯಾಂಗ್ ಈ ಜಗತ್ತಲ್ಲೇ ಇಲ್ಲವೆನೋ!!! ಏನೇನ್ ಮಾಡಿದ್ದಿರಪ್ಪಾ!!! :)ಹೋಲಿಕೆಗಳು ತುಂಬಾ ಚೆನ್ನಾಗಿವೆ..!

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
"ಬಧ್ರಾವತಿ ಬಂಗಾರಿಗೆ" ಕವನ ನಿಜವಾಗಿಯೂ ತುಂಬ ಚೆನ್ನಾಗಿದೆ.
ನಾನು ಹೈಸ್ಕೂಲು ಓದುವಾಗಿನ ದಿನಗಳು ನೆನಪಾದವು.
ನಾನು ಮತ್ತು ನನ್ನ ಗೆಳತಿ ಶೋಭಾ ಇಬ್ಬರೂ ಒಟ್ಟಿಗೇ ಇರುತ್ತಿದ್ದೆವು. ಅವಳು ಬೆಳ್ಳಗಿನ ಚೆಲುವೆ. ನಾನು ಕಪ್ಪಗಿದ್ದೇನಲ್ಲ. ನಮ್ಮ ಹೈಸ್ಕೂಲು ಹುಡುಗರು ನನಗೆ ಅಮವಾಸ್ಯೆ ಅಂತಲೂ ಅವಳಿಗೆ ಹುಣ್ಣಿಮೆ ಅಂತಲೂ ಹೆಸರಿಟ್ಟುಕೊಂಡಿದ್ದರು. ನಾವಿಬ್ಬರೂ ಒಟ್ಟಿಗೆ ನಡೆದಾಡುವೆಗೆಲ್ಲ ‘ಏನಾ...ಹುಣ್ಮೆ, ಅಮವಾಸ್ಯೆ ಎರಡೂ ಒಟ್ಟಿಗೇ ಬಂದದ್ಯಲ್ಲೋ’ ಅಂತ ಅವರು ತಮ್ಮತಮ್ಮಲ್ಲೇ ಮಾತಾಡುವಾಗ ನನಗೆ ತಣ್ಣಗೆ ನಗು ಬರುತ್ತಿತ್ತು :-)

ಚೆಂದದ ಬರಹ, ಇಷ್ಟವಾಯಿತು.

ಕೃಷಿಕನ ಕಣ್ಣು said...

Le Prakaashaa, kaalejnal abhyaasaa yaavaag maadtidrale?.Ningla bhaangadi ella ondonde horag beeltaiddalo eega!.Teera hendtihatra baiskolladrolage
tidkyalad olledana kaantu!... ,noodu enmaadte heli!!.kavananuu barite ant gottittilee. Inmel kavigloo padchanena...anaa!..

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
"ರಾಜಿ ಬಲು ಸುಂದರಿ" ಅನ್ನುತ್ತಲೇ ಕಪ್ಪು ಬಣ್ಣವೆನ್ನುತ್ತೀರ. ರೇಖಾ ತರಹ ಇರಬಹುದಾ ನಿಮ್ಮ ರಾಜಿ?
ನೀವೂ, ನಿಮ್ಮ ನಾಗೂ , ನಿಮ್ಮ ಕಿತಾಪತಿಗಳೂ, ಅದನ್ನು ನೆನಪಿಟ್ಟುಕೊಂಡು ಸ್ವಾರಸ್ಯವಾಗಿ ಹೀಗೆ ನಮಗೆಲ್ಲಾ ತಿಳಿಸುವುದೂ ....ನಿಮಗೆ ನೀವೇ ಸಾಟಿ.
ಕಮಲಹಾಸನ್, "ಮುಂದ..ಮುಂದ..." ಅನ್ನುವ ಹಾಗೆ ಮುಂದೇನಾಯ್ತು ಅಂತ ಕಾಯುತ್ತಿರುವೆವು ಸರ್.

Ittigecement said...

ನಿತಿನ್.....

ಕವನವೇನೋ ತಮಶೆಯಾಗಿ ಬರೆದು ಬಿಟ್ಟಿದ್ದೆ...
ರಾಜಿಯ ಅಳು ಮುಖ ನೋಡಿ ಮನಸ್ಸಿಗೆ ಬೇಸರವಾಗಿತ್ತು..
ಕಪ್ಪು ಬಣ್ಣ ಅವರ ಇಷ್ಟವಲ್ಲವಲ್ಲ....
ನನಗಂತೂ ಗಿಲ್ಟಿ ಫೀಲಿಂಗ್ ಆಗಿತ್ತು....
ಈ ನಾಗು ನಾನೆಲ್ಲಿ ಪ್ರಿನ್ಸಿಪಾಲರ ಬಳಿ ಬೈಯ್ಸಿಕೊಳ್ಳು ಬಿಡುತ್ತೀನೋ ಅಂತ..
ಕವಿತೆ ಬರೆದದ್ದು "ತಾನು" ಅಂದಿದ್ದ...

ಎಲ್ಲಕಡೆಯೂ ಹಾಗೆ...
ಅವನ ಬಗೆಗೆ ತಪ್ಪು ಕಲ್ಪನೆಗಳೇ ಜಾಸ್ತಿ....

ನಿತಿನ್ ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ಶಾಂತಲಾ...

ಒಂದು ವಿಚಿತ್ರವನ್ನು ಗಮನಿಸ ಬೇಕು...

ನಾವು ನೋಡುವ ಟಿವಿ ಸೀರಿಯಲ್ ನಲ್ಲಿ.., ಸಿನೇಮಾದಲ್ಲಿ ಚಂದ ಇರುವವರು ಅಭಿನಯಿಸಬೇಕು ಅನ್ನುವದು...
ಕಪ್ಪಗಿದ್ದವರು.. ವಿಲನ್ ಆಗಿರುತ್ತಾರೆ...
ನೈಜತೆಯನ್ನು ಮನಸ್ಸು ಯಾಕೆ ಒಪ್ಪುವದಿಲ್ಲ...

ಕಪ್ಪಗಿದ್ದವರು ಹೀರೋ, ಹೀರೋಯಿನ್ ಆದರೆ ನಾವು ನೋಡುವದಿಲ್ಲವೇಕೆ...?

ನಮ್ಮ ಪ್ರಿನ್ಸಿಪಾಲರು ಅಂದು ಹೇಳಿದ ಮಾತು ಇನ್ನೂ ನನ್ನ ಕಿವಿಯಲ್ಲಿದೆ...

"ಯಾರದ್ದೇ ದೇಹದ ಬಣ್ಣ ಅವರಿಷ್ಟವಲ್ಲ..
ಅದನ್ನು ಟೀಕಿಸುವ ಅಧಿಕಾರವೂ ನಿಮಗಿಲ್ಲ..."

ಬಹುಷಃ ನಾನು ಬರೆದ ಮೊದಲ ಕವನ ಇದಾಗಿರಬಹುದು...
ಇನ್ನೂ ಎರಡು ಸಾಲು ಇತ್ತು..
ಅದು ನೆನಪಾಗುತ್ತಿಲ್ಲ...

ಭದ್ರಾವತಿಯ ಬಂಗಾರಿ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

Ittigecement said...

ಅರೇ..... ನಾಗೇಂದ್ರ....!!!!

ಬ್ಲಾಗ್ ಲೋಕಕ್ಕೆ ಸ್ವಾಗತ....

ನೀನು ಹಾಕಿದ ಮೊದಲ ಫೋಟೊ ಸಕತ್ ಆಗಿದೆ....
ಕ್ರಷಿಕನ ಕ್ಯಾಮರಾ ಕಣ್ಣು...
ಚಂದದ ಬರವಣಿಗೆಯ ಪೆನ್ನು...
ಎರಡೂ ಗೊತ್ತು... ಬರಿ ಮಾರಾಯಾ...!
ನಾವೆಲ್ಲ ಕಾಯುತ್ತೇವೆ....

ಇದು ಸಿದ್ದಾಪುರದಲ್ಲಿ ನಡೇದದ್ದು...
ಅಲ್ಲಿ ಸರಿಯಾಗಿ ಅಭ್ಯಾಸ ಮಾಡದೆ ಫೇಲ್ ಆಗಿ ಮನೆಗೆ ಬಂದೆನಲ್ಲ ಮಾರಾಯಾ...!
ಅದನ್ನೂ ಬರೆದಿದ್ದೇನೆ ಓದು..
(ನಗುವವರ ಮುಂದೆ ಎಡವಿ ಬೀಳಬೇಡ)

ನನ್ನ ಮಡದಿಗೆ ಇದೆಲ್ಲ ಭಾನಗಡಿ ಗೊತ್ತು ಮಾರಾಯಾ...
ಈ ತರಲೆ ನಾಗು ಇದ್ದಾನಲ್ಲ ಹೇಳಲಿಕ್ಕೆ...

ಈ ಲೇಖನದ ಮೊದಲ ಓದುಗರು ನನ್ನಾಕೆ...

ಬಹುಷಃ ನಾಲ್ಕುಜನ ಓದಿದ ಮೊದಲ ಕವನ ಇದು...!!

"ಭದ್ರಾವತಿ ಬಂಗಾರಿ" ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ಮಲ್ಲಿಕಾರ್ಜುನ್....

ರಾಜಿ... ಬ್ಲ್ಯಾಕ್ ಬ್ಯೂಟಿ..
ಕಪ್ಪು ಸುಂದರಿ...

ತಾನು ಚಂದವಿದ್ದೇನೆಂದು ಅವಳಿಗೆ ಗೊತ್ತಿತ್ತು....
ಸಿಲ್ಕ್ ಸ್ಮಿತಾ ಥರಹ ಇತ್ತು ಕಣ್ಣುಗಳು... ಅರ್ಥವಾಯಿತಲ್ಲ...

ಇನ್ನು ನಾಗೂ ರಾಜಿ ಲವ್ವು,
ಅದಕ್ಕೂ ಮೊದಲು ನಡೆದ ಇನ್ನೊಂದು ಘಟನೆ ಹೇಳುವದಿದೆ ಮುಂದಿನ ಕಂತುಗಳಲ್ಲಿ....

ಕಾಲೇಜು ದಿನಗಳ ಪುಂಡಾಡಿಕೆ, ತುಂಟತನಗಳು
ಭದ್ರಾವತಿಯ ಬಂಗಾರಿ ತಮ್ಮ (ಗ)ಮನ ಸೆಳೆದಿದ್ದಕ್ಕೆ
ಧನ್ಯವಾದಗಳು...

sunaath said...

ಪ್ರಕಾಶ,
ಚಿಕ್ಕ ವಯಸ್ಸಿನಲ್ಲಿ ಏನೇನೊ ತುಂಟತನ ಮಾಡಿದ್ದೀರಿ. ಇನ್ನು ಮೇಲಾದರೂ.......

umesh desai said...

ಹೆಗಡೆ ಅವರೆ ಕಪ್ಪು ಬಣ್ಣ ದೈವದತ್ತವಾದದ್ದು ಟೀಕಿಸುವ ಹಕ್ಕು ಇಲ್ಲ ಎಂದಿಲ್ಲ ಯಾಕೋ ನಮ್ಮಲ್ಲಿ ಕಪ್ಪು ಕವಿತೆಗಳೇ ಇಲ್ಲ
ನಿಮ್ಮ ಕವಿತಾ ಛಲೋ ಇತ್ತು ಅಂತ ರಾಜಿ ಹೇಳಲಿಲ್ಲೇನು...ಆದ್ರೂ ಈ ಹಾಡು ನೆನಪಾತು..
"ನಾ ಕರಿಯಳೆಂದು ನೀ ಜರಿಯ ಬೇಡ ಬಿಳಿಗೆಳತಿ ಗರ್ವದಿಂದ ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳಾವ ತರದಿಂದ...."

ಸವಿಗನಸು said...

Prakashanna,
nimma baravanige nale gothaguthe neevu collegenali estu aata aadidhira antha...idhella nimma pathni odhali.....nanna banna saha rajee banna ve...aadru naavu saha rajee tharada obbarige krishna sundari antha heltha idhwi college daysnali.....innu nimma aatagalu ondhondagi hora barali....

Ittigecement said...

ಸುನಾಥ ಸರ್....

ತುಂಟತನ ಸ್ವಭಾವ....
ಆ ವಯಸ್ಸಿನಲ್ಲಿ ಸಹಜ........

ಈ ವಯಸ್ಸಿನಲ್ಲಿ ಜವಾಬ್ದಾರಿ...
ಸಂಸಾರ... ವ್ಯವಹಾರ....
ಅದೆಲ್ಲ ನೆನಪು ಮಾಡಿಕೊಳ್ಳುವದೇ ಸಂತೋಷ....

ತುಂಟ ಮನಸು ಯಾವಾಗಲೂ ನಮ್ಮಲ್ಲಿ ಸುಪ್ತವಾಗಿರಬೇಕು.. ...
ಅದು ಬದುಕಿನ ಸ್ವಾರಸ್ಯ ಹೆಚ್ಚಿಸುತ್ತದೆ ಅಂತ ನನ್ನ ಗುರುವಿನ ಗುರು "ಖುಷ್ವಂತ್ ಸಿಂಗ್" ಹೇಳಿದ್ದಾನೆ....

ನಿಮ್ಮಲ್ಲೂ ತುಂಟತನ ನಾನು ಕಂಡಿದ್ದೇನೆ....

ನಾನೀಗ ಅಂಥಹ ಭಾನಗಡಿ ಮಾಡೋದು ಬಿಟ್ಟು ಬಿಟ್ಟಿದ್ದೇನೆ...

ಸುನಾಥ ಸರ್....
ನಿಮ್ಮ ಸಣ್ಣ ಪ್ರತಿಕ್ರಿಯೆ ...
ಉದ್ದದ ಉತ್ತರ ,ಕಷ್ಟದ ವಿವರಣೆ ಬರೆಸಿ ಬಿಡುತ್ತದೆ...
ನಿಮ್ಮದು ತುಂಟತನದ ಪ್ರತಿಕ್ರಿಯೆ...

ಧನ್ಯವಾದಗಳು...

ಕೃಪಾ said...

ನಮಸ್ತೆ ಪ್ರಕಾಶ್ ಅವರೇ.,

ನಿಮ್ಮ ಹಿಂದಿನ ನಾಲಕ್ಕೂ ಲೇಖನವನ್ನೂ ಒಮ್ಮೆಗೇ ಓದಿ ಬಿಟ್ಟೆ .

೧.ಅದ್ಭುತವಾಗಿದೆ ನಿಮ್ಮ ಪರಕಾಯ ಪ್ರವೇಶ.ಸಲೂನ್ ಅಂಗಡಿಯವನ ಸಹಾಯಕನಾಗಿ!

೨. ಪ್ರೇಮ ಕವಿಯ ಮೈಸೂರು mallige ಹಾಡುಗಳು ನನಗೆ ತುಂಬಾ ಇಷ್ಟ. ನನ್ನ ಮದುವೆಗೆ ನನ್ನ ಕಸಿನ್ ವಾಣಿ ೪ ಭಾವ ಗೀತೆ ಕ್ಯಾಸೆಟ್ ಉಡುಗೊರೆ ನೀಡಿದ್ದಳು. ನಿಮ್ಮ ಅಣ್ಣ ಹೇಳಿದ ಹಾಗೆ ಆ ನಾಟಕ ನೋಡಿದ ನೀವೇ ತುಂಬಾ ಪುಣ್ಯವಂತರು.

೩. ಮೊಗೆಕಾಯಿ ಎಂದು ರಾಜಿಗೆ ಹೆಸರಿಟ್ಟಿದ್ದು ಯಾಕೆ? ನಾಗು ಪಾತ್ರಕ್ಕೆ ಕಮಲಹಾಸನ್ ಸರಿ. ಪಾಪ ರಾಜಿ!!! ಈ ಜಗತ್ತು ಚರ್ಮದ ಮೇಲಿನ ಬಣ್ಣಕ್ಕೆ ಮೊದಲು ಪ್ರಾಶಸ್ತ್ಯ ನೀಡುತ್ತೆ. ಆ ನಂತರ ಸ್ವಭಾವ ತಿಳಿದ ಮೇಲೆ, ಅವರ ಸ್ನೇಹ, ಒಡನಾಟ ಬೆಳೆದಂತೆ ದೇಹದ ಬಣ್ಣಕ್ಕೆ ಅಲ್ಲಿ ಪ್ರಾಮುಖ್ಯತೆ ಇರೋಲ್ಲ.

SSK said...

ನಿಮ್ಮ ಗ್ಯಾಂಗಿನ ಲೀಡರ್ 'ನಾಗು' ಅವರಿಗೆ ಸಖತ್ ಧೈರ್ಯ ಇದೆ !

ಬಿಸಿಲ ಹನಿ said...

ಪ್ರಕಾಶ್ ಅವರೆ,
ರಾಜಿಯ ಬಗ್ಗೆ ಬರೆದ ಕವನ ಹಾಗು ಅದರಿಂದುಂಟಾದ ಅವಾಂತರಗಳನ್ನು ತುಂಬಾ ತಮಾಷೆಯಾಗಿ ವಿವರಿಸಿದ್ದೀರಿ. ನಾವು ಕಾಲೇಜಿನಲ್ಲಿ ಮಾಡುತ್ತಿದ್ದ ಇಂಥ ಕೀಟಲೆಗಳು ನೆನಪಾದವು. ನಾನು ಹುಡುಗಿಯರ ಪರವಾಗಿ ಬರೆಯುತ್ತಿದ್ದ ಕವನಗಳನ್ನು ಓದಿ ಹುಡುಗಿಯರೆಲ್ಲಾ ನನ್ನನ್ನು ಹುಡುಕಿಕೊಂಡು ಬಂದು ಮಾತನಾಡಿಸುತ್ತಿದ್ದುದು ನೆನಪಾಯಿತು. ಇಂಥ ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು.

ಇನ್ನೊಂದು ವ್ಯಯಕ್ತಿಕ ವಿಷಯ. ನಾನು ಈ ಸಾರಿ ಬೆಂಗಳೂರಿಗೆ ಬಂದಾಗ ಒಂದು ಮನೆಯನ್ನಾಗಲಿ ಅಥವಾ ಸೈಟ್ ನ್ನಾಗಲಿ ಖರಿದಿಸಬೇಕೆಂದಿರುವೆ. ಈಗ ರಿಶೆಷನ್ ಪಿರಿಯಡ್ ಇರುವದರಿಂದ ಇವುಗಳ ಬೆಲೆ ಸ್ವಲ್ಪ ಕಡಿಮೆಯಾಗಿದೆ ಎಂದು ಕೇಳಿರುವೆ. ಆದ್ದರಿಂದ ಈಗಿನ ಸ್ಥಿತಿಯಲ್ಲಿ ಸೈಟನ್ನು ತೆಗೆದುಕೊಳ್ಳುವದು ಒಳಿತೋ ಇಲ್ಲ ಮನೆಯನ್ನು ಖರಿದಿಸುವದು ಒಳಿತೋ? ನಿಮ್ಮ ಅಭಿಪ್ರಾಯ ತಿಳಿಸಿ. ನನಗೆ ಚೆಂದವಾಗಿರುವ ಮನೆಕೊಳ್ಳಲು ಆಸೆ. ನಾನು ವಾಸ್ತು ಗಿಸ್ತು ನೋಡುವದಿಲ್ಲ. ದಯವಿಟ್ಟು ನಿಮಗೆ ಗೊತ್ತಿದ್ದರೆ ತಿಳಿಸಿ. ನೀವು ಇದೇ fieldನಲ್ಲಿ ಕೆಲಸ ಮಾಡುತ್ತಿರುವದರಿಂದ ನಿಮಗೆ ಈ ವಿಷಯದ ಬಗ್ಗೆ ಚನ್ನಾಗಿ ಗೊತ್ತಿರುತ್ತದೆಂದುಕೊಂಡು ನಿಮ್ಮನ್ನು ಕೇಳುತ್ತಿದ್ದೇನೆ. ದಯವಿಟ್ಟು ಅನ್ಯಥಾ ಭಾವಿಸಬೇಡಿ. ನಿಮಗೆ ಗೊತ್ತಿರುವ ಮನೆ ಅಥವಾ ಸೈಟ್ ಬಗ್ಗೆ ಗೊತ್ತಿದ್ದರೆ ತಿಳಿಸಿ. ಈ ಸಾರಿ ಜುಲೈ ಕೊನೆವಾರ ಅಥವಾ ಅಗಷ್ಟ್ ತಿಂಗಳ ಮೊದಲವಾರ ಬೆಂಗಳೂರಿಗೆ ಬರುವವನಿದ್ದೇನೆ. ಅಲ್ಲಿ ಒಂದೂವರಿ ತಿಂಗಳ ಕಾಲ ಇರುತ್ತೇನೆ. ಈ ಅವಧಿಯಲ್ಲಿ ಈ ಕಾರ್ಯವನ್ನು ಮುಗಿಸಬೇಕೆಂದಿದ್ದೇನೆ. ನಿಮಗೆ ಗೊತ್ತಿರುವ ಮನೆಯ ಬಗ್ಗೆ ಡಿಟೇಲ್ಸ್ ನ್ನು ನನ್ನ ಈ ಮೇಲ್ ಗೆ ಕಳಿಸಿದರೆ ನಾನು ಆ ನಿಟ್ಟಿನಲ್ಲಿ ಮುಂದುವರೆಯುತ್ತೇನೆ. ಅಂದಹಾಗೆ ಮನೆ ಖರಿದಿಸಲು NRI ಗೆ ಏನೇನು documents ಬೇಕಾಗುತ್ತೆ ಅನ್ನುವದನ್ನು ಸಹ ತಿಳಿಸಿ. ನನ್ನ ಈ ಮೇಲ್ uday_itagi@rediffmail.com

Prabhuraj Moogi said...

ಪ್ರಕಾಶ್ ಸರ್.. ಸೂಪರ್ ಕವನ... ರೇಡಿಯಂ ಬಳಿದು ಸುಣ್ಣ ಸಾರಿಸಿ... ಹ ಹ... ಕಲ್ಪನೆ ಮಾಡೊಕಾಗಲ್ಲ... ಬಣ್ಣ ಕಪ್ಪಗಿರಬಹುದು, ಆದರೆ ಗುಣ ಹಾಗಿರಬಾರದಲ್ಲವೇ. ರಾಜಿ ವರ್ತನೆಗೆ ನಾಗು ತಕ್ಕ ಪ್ರತಿಕ್ರಿಯೆ ಅನಿಸಿತು.

ರೂpaश्री said...

ಪ್ರಕಾಶ್ ಅವರೆ,
ನಿಮ್ಮ "ಭದ್ರಾವತಿ ಬಂಗಾರಿ" ಕವನ ಇಷ್ಟವಾಯಿತು. ಈ ಪ್ರಪಂಚ ಚರ್ಮದ ಬಣ್ಣಕ್ಕೆ ಮೊದಲು ಪ್ರಾಶಸ್ತ್ಯ ನೀಡುತ್ತೆ. ಕೃಷ್ಣ ಕೂಡ ಕಪ್ಪಲ್ಲವೇ? ನಿಮ್ಮ ಕವನ ಓದುತ್ತಾ ನನಗಿದು ನೆನಪಾಯ್ತು...
This poem was nominated poem of 2005 for the best poem, written by an African kid....amazing thought!!!

When I born, I Black,
When I grow up, I Black,
When I go in Sun, I Black,
When I scared, I Black,
When I sick, I Black,
And when I die, I still black..
And you White fella,
When you born, you Pink,
When you grow up, you White,
When you go in Sun, you Red,
When you cold, you Blue,
When you scared, you Yellow,
When you sick, you Green,
And when you die, you Gray..
And you calling me Colored ??


ಕಪ್ಪಾಗಿದವರನ್ನು ಜರಿಯುವುದು ಸಾಮಾನ್ಯ... ಆದರೆ ನನ್ನ ಕಥೆಯೇ ಬೇರೆ, ಚಿಕ್ಕಂದಿನಲ್ಲಿ ಬಹಳಾನೇ ಬೆಳ್ಳಗಿದ್ದ ನನ್ನನ್ನು ಕ್ಲಾಸಿನಲ್ಲಿ ಹುಡುಗರೆಲ್ಲಾ ’ಬಿಳಿಹೆಂಡ್ತಿ’ ’ಬಿಳಿಜಿರ್ಲ” ’ಕೆಂಚಿ’ ’ಕೆಂಚ್ ಕೋತಿ’ ಅಂತೆಲ್ಲಾ ರೇಗಿಸ್ತಾಯಿದ್ದ್ರು. ಅದರಿಂದಾಗಿ ಸ್ಕೂಲಿನಲ್ಲಿ ಜಗಳವಾಡಿ ಬರ್ತಾಯಿದ್ದೆ. ಈಗಲೂ ಹಳೆಯ ಸ್ನೇಹಿತರು ಸಿಕ್ಕರೆ ಏನೇ ಕೆಂಚಿ ಅಂತಲೇ ಮಾತಾಡಿಸೋದು!

ನಮ್ಮನೆ.. SWEET HOME..... said...

ನಿಮ್ಮ ತುಂಟತನಕ್ಕೆ ಚೆನ್ನಾಗಿ ಬಯ್ದವರು ಯಾರೂ ಇಲ್ಲವಾ..?

ಇಲ್ಲಿ ಪಾಪದ ನಾಗು ಪಾರುಮಾಡಿದ ಅಲ್ಲವಾ...?

Ittigecement said...

ಉಮೇಶ್ ದೇಸಾಯಿಯವರೆ.....

ನಿನ್ನೆ ರಂಗಶಂಕರದಲ್ಲಿ ನಿಮ್ಮನ್ನು ನೋಡಿ ಖುಷಿ ಆಯ್ತು...
ಈ ಕವಿತೆ ರಾಜಿಯ ಇಷ್ಟದ ಕವಿತೆಗಳಲ್ಲಿ ಒಂದು....
ಇದರಲ್ಲಿ ಇನ್ನೂ ಎರಡು ಸಾಲುಗಳಿತ್ತು ಮರೆತು ಹೋಗಿದೆ...

ಕಪ್ಪು, ಕುರೂಪಕ್ಕಿಂತ ಹ್ರದಯ, ಮನಸ್ಸು ದೊಡ್ಡದು....
ನಮ್ಮ ಪ್ರಿನ್ಸಿಪಾಲರು ಹೇಳಿದ ಮತು ಅಕ್ಷರಸಹ ಸತ್ಯ...

ನಿಮ್ಮ ಕವನ ಕೂಡ ಚೆನ್ನಾಗಿದೆ...
ಕಪ್ಪಿನ ಬಗೆಗೆ ಕ್ರ್‍ಅಷ್ಣನ ಹಾಡುಗಳು ಚೆನ್ನಾಗಿವೆ...
ಭದ್ರಾವತಿಯ ಬಂಗಾರಿ ಇಷ್ಟವಾಗಿದ್ದಕ್ಕೆ ವಂದನೆಗಳು...

Ittigecement said...

ಮಹೇಶ್...(ಕನಸುಮನಸು).....

ನನ್ನ ಬರಹಗಳ ಮೊದಲ ಓದುಗ ನನ್ನ ಮಡದಿ...
ಈ ಕಥೆಗಳೆಲ್ಲ "ನಾಗೂ" ನಮ್ಮನೆಯಲ್ಲಿ ಹೇಳಿ ಬಿಟ್ಟಿದ್ದಾನೆ...
ಎಲ್ಲವೂ ಗೊತ್ತು...

ಕಾಲೇಜಿನ ತುಂಟತನಗಳು..
ಆ ಗೆಳೆಯರು ಮಜವಾಗಿತ್ತು.. ಆ ದಿನಗಳು...

ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮ್ಮ ಬ್ಲಾಗಿನಲ್ಲಿ ಬರಹಗಳನ್ನು ಎದುರು ನೋಡುತ್ತಿದ್ದೇನೆ....
ಬರೆಯ ಬಲ್ಲಿರಿ ... ಬರೆಯಿರಿ... ಓದಲು ನಾವಿದ್ದೇವೆ...

Ittigecement said...

ಕ್ರಪಾರವರೆ....

ತುಂಬಾ ಖುಷಿಯಾಯಿತು ನಿಮ್ಮ ಪ್ರತಿಕ್ರಿಯೆ ಕಂಡು...

ಸಲೂನಿನಲ್ಲಿ ನನ್ನ ಅನುಭವ ಮುಂದಿನ ಭಾಗ ಬರೆಯಲು ಬಹಳ ಜನ ಹೇಳುತ್ತಿದ್ದಾರೆ...
ಬರೆಯುವೆ...

ನಿನ್ನೇ ರಂಗಶಂಕರದಲ್ಲಿ ನಾಟಕ ಬಹಳ ಚೆನ್ನಾಗಿ ಆಯಿತು...

ಬಣ್ಣಗಳು ಮಹತ್ವ ಅಲ್ಲ..
ಗುಣಗಳು...ನಮ್ಮನೆಯಲ್ಲಿ ನನ್ನಣ್ಣ ಬೆಳ್ಳಗೆ ಇದ್ದಾನೆ..
ನಾನು ನನ್ನಮ್ಮನಿಗೆ ರೇಗಿಸುತ್ತ ಇರುತ್ತೇನೆ..
"ಬಣ್ಣದ ವಿಚಾರದಲ್ಲಿ ನನಗೆ ಬಹಳ ಅನ್ಯಾಯ ಆಗಿದೆ..
ಸ್ವಲ್ಪ ಬಣ್ಣ ನನಗೂ ಕೊಡ ಬೇಕಿತ್ತು..ಅಣ್ಣನಿಗೆ ಮಾತ್ರ ಕೊಟ್ಟು ಬಿಟ್ಟಿದ್ದೀಯಾ.."
ಅಮ್ಮನ ನಸುನಗುತ್ತಾಳೆ ಅಷ್ಟೆ...
ಬಣ್ಣಗಳು ಮಹತ್ವ ಅಲ್ಲ..
ಗುಣ... ಮುಖ್ಯ..
ಒಡನಾಟವಾಗುತ್ತ ಹೋದಂತೆ ಬಣ್ಣದ ಮಹತ್ವ ಕಳೆದುಕೊಳ್ಳುತ್ತದೆ...

"ಮೊಗೆಕಾಯಿ" ವಿಚಾರ ಮುಂದಿನ ಭಾಗದಲ್ಲಿ ಬರೆಯುವ ಪ್ರಯತ್ನ ಮಾಡುವೆ..

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..

shivu.k said...

ಪ್ರಕಾಶ್ ಸರ್,

ಆಗಿನ ಕಾಲೇಜು ದಿನಗಳಲ್ಲಿ ಮೂಡಿದ ಭದ್ರಾವತಿ ಬಂಗಾರಿ ಕವನ ಸೂಪರ್....

ಜೊತೆಗೆ ನಿಮ್ಮ ಆಟ ಪಾಟಗಳು, ತರಲೇ ತಾಪತ್ರಯಗಳು ಓದಲು ಖುಷಿಕೊಡುತ್ತವೆ...

ಕಪ್ಪು ಬಣ್ಣವನ್ನು ಎಲ್ಲರೂ ಹೀಗೆ ಹೀಗಳೆಯುವುದು ಏಕೆ ? ಕಸ್ತೂರಿ ಕೂಡ ಕಪ್ಪು ಬಣ್ಣವಲ್ಲವೇ....

ಆದರೆ ನಿಮ್ಮ ಲೇಖನದಲ್ಲಿ ಕಪ್ಪು ಬಣ್ಣ ಹೀರೋ ಪಾತ್ರ ವಹಿಸಿದೆಯೆಂದಮೇಲೆ ಅದನ್ನು ಹೀಗೆಳೆಯಬಾರದಲ್ವಾ...

ಇದರ ಮುಂದಿನ ಭಾಗ ಹೇಗಿರಬಹುದು ಅಂದುಕೊಳ್ಳುತ್ತಿದ್ದೇನೆ...

ಧನ್ಯವಾದಗಳು..

ವಿನುತ said...

ಮತ್ತೊ೦ದು ಹಾಸ್ಯಲೇಪಿತ, ಸ೦ದೇಶಭರಿತ ಬರಹ. ಇಷ್ಟವಾಯಿತು. ಜನಪದ ಸಾಲುಗಳು ನೆನಪಾದವು.

ಕಪ್ಪು ಹೆ೦ಡತಿಯೆ೦ದು ಕಳವಳ ಪಡಬೇಡ
ನೇರಳೆ ಹಣ್ಣು ಬಲು ಕಪ್ಪು, ಆದರೂ|
ತಿ೦ದು ನೋಡಿದರ ರುಚಿ ಬಹಳ||

ಸೌ೦ದರ್ಯ ನೋಡುವವರ ಕಣ್ಣಿನಲ್ಲಿರುತ್ತದೆ ಎ೦ಬುದು ಬಲ್ಲವರ ಅ೦ಬೋಣ.

ಕ್ಷಣ... ಚಿಂತನೆ... said...

ಸರ್‍, ಲೇಖನ ಚೆನ್ನಾಗಿತ್ತು. ತಮಾಷೆಯಾಗಿತ್ತು.

ಕಪ್ಪೂ ಸಹ ಸುಂದರ ಬಣ್ಣ ಎಂದು ಜನ ಯಾಕೆ ತಿಳಕೊಳ್ಳಲ್ಲ. ಶ್ರೀ ಕೃಷ್ಣನ ಬಣ್ಣ ಅವನ ಹೆಸರಲ್ಲೇ ಇಲ್ಲವೇ? ಹಾಗೆಯೇ ಕೃಷ್ಣಸುಂದರಿ ಎಂದು ಕರೆದಿದ್ದರೆ ಸಾಕಿತ್ತು. ಆಗ ಆಕೆಗೆ ಬೇಸರ ಅಥವಾ ಅಳು ಬರುತ್ತಿರಲಿಲ್ಲವೇನೋ ಅನ್ನಿಸಿತು.

ವಿಶ್ವಾಸದೊಂದಿಗೆ,

ಬಾಲು said...

ಪರವಾಗಿಲ್ಲ ಕಣ್ರೀ, ಸಿಕ್ಕಾಪಟ್ಟೆ ಡಿಸೆಂಟ್ ಆಗಿ ಹಾಸ್ಯ ಮಾಡಿದ್ದಿರಿ. ಆದರೆ ನಾವು ಗಳು, ಹುಡುಗಿರು ಬಗ್ಗೆ ಅಲ್ಲ, ಲೆಕ್ಚರ್ ಬಗ್ಗೆ ನೆ, ಕಾಮಿಡಿ ಮಾಡಿ ಸಿಕ್ಕಾಪಟ್ಟೆ ತೊಂದರೆ ಅನುಭವಿಸಿದ್ವಿ!!! ನಾನಂತು ಲ್ಯಾಬ್ ಎಕ್ಸಾಂ ನಲ್ಲಿ ಅದರ ಫಲ ಅನುಭವಿಸಿದೆ.

ಒಂದು ತಮಾಷೆ ವಿಷ್ಯ ಅಂದ್ರೆ ನಾನು ಡಿಗ್ರೀ ಓದಿದ್ದು ಭದ್ರಾವತಿ ಲಿ... ನಿಮ್ ಬಂಗಾರದ ಕವನ ಚೆನ್ನಾಗಿದೆ.

Ittigecement said...

ಎಸಸ್ಕೆಯವರೆ......

ನಾಗು ಬಲು ಕಿಲಾಡಿ ಮನುಷ್ಯ....
ಆದರೆ ಹ್ರದಯದಿಂದ ತುಂಬಾ ಒಳ್ಳೆಯ ಮನುಷ್ಯ....
ಇಲ್ಲಿ ಕವನ ಬರೆದದ್ದು ನಾನೆಂದು ಗೊತ್ತಾದರೆ ಪ್ರಿನ್ಸಿಪಾಲರು ಬಯ್ಯುತ್ತಾರೆಂದು
ತನ್ನಮೇಲೇ ತೆಗೆದು ಕೊಳ್ಳುತ್ತಾನೆ....

ಜೀವದ ಗೆಳೆಯರೆಂದರೆ ಇದು...

ಇವನ ತುಂಟಾಟ ಇನ್ನೂ ಇದೆ... ಮುಗಿದಿಲ್ಲ....

ಬ್ಲಾಗ್ ನೋಡುತ್ತಾ ಇರಿ....

ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

Prakashanna,
Bhadravatiya bangari tumba chennagide.neevu collegenalli tumba enjoy madiddira.andina dinagalannu nenapisikondu bareda lekhana tumba chennagide.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ಎಲ್ಲೂ ಕಳೆದು ಹೋಗಿರಲಿಲ್ಲ, ಇಗೋ ಬಂದೇ ಬಿಟ್ಟೆ.
ಭದ್ರಾವತಿ ಬಂಗಾರಿ ಸೂಪರ್ರೋ ಸೂಪರ್.... ತಿಳಿ ಹಾಸ್ಯ ಅಂದ್ರೆ ಇದೇನಾ...
ಸಕತ್ತಾಗಿದೆ ಬಿಡಿ, ಪಾಪ ಹೆಣ್ಣು ಮಕ್ಕಳನ್ನು ಅದೆಷ್ಟು ಕಾಡಿಸ್ತಿದ್ರೋ ಏನೋ, ಇದೆಲ್ಲ ಓದಿ ಯೋಚಿಸ್ತಿದ್ರೆ ಪಾಪ ಅವರೆಲ್ಲ ಅನ್ಸುತ್ತೆ. ಎಲ್ಲಾ ಸೇರಿ ಮಾನ ನಷ್ಟ ಮೊಕದ್ದಮೆ ಹೂಡಿದ್ರೆ ಕಷ್ಟ ಹುಷಾರು...

ಬಿಸಿಲ ಹನಿ said...

ಪ್ರಕಾಶ್ ಸರ್,
ನಿಮ್ಮಿಂದ ನನಗೆ ಒಂದು ಬ್ಯಾಂಿಕಕ್ ಮೇಲ್ ಬಂದಿದೆ. ಅದರಲ್ಲಿ ಯಾವುದೇ ಡಿಟೇಲ್ಸ್ ಇಲ್ಲ. ದಯವಿಟ್ಟು ಡಿಟೆಲ್ಸ್ ತಿಳಿಸಿ.

Shy said...

nimma barha dalli iruwa punch chanagidee...nanna ge nagu thadiya lu agallilla....eyes got welled..wil use u r friends trick to derail the LOVE thoughts from my freinds mind...thanks to u r friend Nagu.

Umesh Balikai said...

ಹ್ಹ ಹ್ಹ ಹ್ಹಾ .. ಹ್ಹೊ ಹ್ಹೊ ಹ್ಹೋ..... ಅಯ್ಯಯ್ಯಪ್ಪಾ... ನಿಮ್ಮ ಕವನ ಓದಿ ನಕ್ಕೂ ನಕ್ಕೂ ಹೊಟ್ಟೆ ನೋಯ್ತಾ ಇದೆ.. ಏನ್ ಸಾರ್, ಹುಡುಗೀರನ್ನು ಆ ಪರಿ ಗೋಳು ಹೂಯ್ಕೊಳೋದು ಯಾರು ಹೇಳಿಕೊಟ್ರೂ ನಿಮಗೆ... ಯಾರದ್ದೇ ದೇಹ , ಬಣ್ಣ ಅವರಿಷ್ಟವಾದದ್ದಲ್ಲವಾದರೂ ಆ ಹುಡುಗಿ ಅಷ್ಟೊಂದು ರಂಪ ಮಾಡೋದು ಬೇಕಿರಲಿಲ್ಲ.. ಸುಮ್ನೇ 'ಇದೆಲ್ಲ ನಂಗೆ ಇಷ್ಟ ಆಗೋಲ್ಲ' ಅಂದ್ರೆ ಸಾಕಿತ್ತಪ್ಪ...

ಚಿತ್ರಾ said...

ಪ್ರಕಾಶಣ್ಣ,

ಲೇಖನ ಸುಂದರವಾಗಿದೆ. ಕವನವೂ ಸಖತ್ತಾಗಿದೆ.ಹಿ ಹಿ ಹಿ ...
ನನ್ನ ಕ್ಲಾಸ್ ಮೇಟ್ ಒಬ್ಬಳಿದ್ದಳು. ಹೀಗೆಯೇ, ಬಲು ಕಪ್ಪು ಆದರೆ ತುಂಬಾ ಲಕ್ಷಣವಾಗಿದ್ದಳು. ಆದರೆ ಯಾರೂ ಅವಳ ಬಣ್ಣದ ಬಗ್ಗೆ ಅಪ್ಪಿತಪ್ಪಿಯೂ ಸೊಲ್ಲೆತ್ತುತ್ತಿರಲಿಲ್ಲ . ಹಾಗಿತ್ತು ಅವಳ ಬಾಯಿ. ನಿಮ್ಮ ಪ್ರಿನ್ಸಿಪಾಲರು ಹೇಳಿದಂತೆ ಯಾರೊಬ್ಬರ ದೇಹದ ಬಣ್ಣವೂ ಅವರಿಷ್ಟವಲ್ಲ ಎನ್ನುವುದು ಮಾತ್ರ ನಿಜ .

Ittigecement said...

ಉದಯರವರೆ......

ನಾನು ಹೆಣ್ಣುಮಕ್ಕಳನ್ನು ಟಿಕೇ ಮಾಡಿ ಬರೆದದ್ದು ಕಡಿಮೆ...
ಅವರು ಎಂದಿದ್ದರೂ ಸ್ಪೂರ್ತಿನೇ....

ಇಲ್ಲಿ ಆ ಸಂದರ್ಭ ಹಾಗಿತ್ತು....

ನನ್ನ ಕಾಲೇಜು ಜೀವನದಲ್ಲಿ ಸಾರ್ವತ್ರಿಕವಾಗಿ "ಪ್ರಕಾಶಣ್ಣ" ಆಗಿಬಿಟ್ಟಿದ್ದೆ...
ನಾನು "ಎಂಗೇಜ್ " ಆಗಿದ್ದ ವಿಷಯ "ನಾಗೂ" ಡಂಗುರ ಸಾರಿ ಬಿಟ್ಟಿದ್ದ...
ನಾನು ಎಲ್ಲರಿಗೂ "ಅಣ್ಣ" ನಾಗಲಿಕ್ಕೆ ಅದೂ ಒಂದು ಕಾರಣ..

ಕಾಲೇಜಿನ ಅನುಭವ ಖುಷಿಯಾಗಿದ್ದಕ್ಕೆ ವಂದನೆಗಳು....

ನಾನು ನಿಮಗೆ ಜಿಮೇಲ್ ಗೂ ಸಹ ಮೇಲ್ ಕಳಿಸಿದ್ದೇನೆ ನೋಡಿ....
(ನನ್ನ ಈಮೇಲ್ .....
kash531@gmail.com
kash521@yahoo.com)

ನಿಮ್ಮ ಪ್ರೀತಿ , ವಿಶ್ವಾಸಕ್ಕೆ ಹ್ರದಯ ಪೂರ್ವಕ ಕ್ರತಜ್ಞತೆಗಳು

ನಮ್ಮನೆ.. SWEET HOME..... said...
This comment has been removed by a blog administrator.
ಶಿವಪ್ರಕಾಶ್ said...

ನಿಮ್ಮ ಕವಿತೆ, ಲೇಖನ, ಹಾಗು ನಿಮ್ಮ ನಾಗುವಿನ ಬುದ್ದಿವಂತಿಕೆ ತುಂಬಾ ಚನ್ನಾಗಿದೆ...
ಸೂಪರ್....

Ittigecement said...

ರೂಪಶ್ರೀಯವರೆ....

ನಿಮ್ಮ ಪ್ರತಿಕ್ರಿಯೆ ಕಂಡು ಬಹಳ ಖುಷಿಯಾಯಿತು...
ಉತ್ತರಿಸುವದಕ್ಕೆ ತಡ ಆಗುತ್ತಿದೆ ... ಕೆಲಸದ ಒತ್ತಡ...

ಆ.... ಅಫ್ರಿಕನ್ ಮಗು ತನ್ನ ಬಣ್ಣದ ಬಗೆಗೆ ಎಷ್ಟೊಂದು ನೊಂದಿರ ಬಹುದು... ಅಲ್ಲವಾ...?
ಆ ಮಗುವಿನ ಹೊಸ ರೀತಿಯ ವಿಚಾರ ಸಕತ್ ಆಗಿದೆ....

ಕ್ರ್‍ಅಪಾರವರು ಹೇಳಿದ ಹಾಗೆ ..
ಒಡನಾಟ ಆದಂತೆ ಬಣ್ಣ ತನ್ನ ಮಹತ್ವ ಕಳೆದು ಕೊಳ್ಳುತ್ತದೆ...
ಆಂತರ್ಯದ ಪ್ರೀತಿ ಭಾವದ ಬಣ್ಣ ಕಂಡಾಗ
ಈ ತ್ವಚೆಯ ಬಣ್ಣ ಗೌಣವಾಗಿಬಿಡುತ್ತದೆ....

ಕಪ್ಪನೆಯ ಬಣ್ಣದ ಸಲುವಾಗಿ..
ತಾನು ಇಷ್ಟ ಪಟ್ಟ ಹುಡುಗ ತನ್ನನ್ನು ನೋಡದೇ ಇರುವಾಗ..
ಹುಡುಗಿಯ ಮನಸ್ಸಿನ ತರಂಗ ಅರ್ಥವಾಗುತ್ತದೆ...

ಎಲ್ಲರಿಗೂ ಬಿಳಿ ತ್ವಚೆಯ ಮೋಹ ಏತಕೆ...?

ನಿಮ್ಮ ಅನುಭವವೂ ಕುತೂಹಲಕಾರಿಯಾಗಿದೆ...
ನಾನಂತೂ ಬಿಳಿಯ ಬಣ್ಣದ ಅವಹೇಳನೆ ಮೊದಲ ಬಾರಿಗೆ ಕೇಳಿದೆ
ಅಶ್ಚರ್ಯವೂ ಆಯಿತು....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

June 23, 2009 5:57 AM

Ittigecement said...

ಪ್ರಭು....

ಆದರೂ ಬಣ್ಣದ ಬಗೆಗೆ ಚಾಳಿಸಿದ್ದು ನನಗಂತೂ ಬೇಸರವಾಯಿತು...
ನಾಗೂವಿಗೂ ಪಶ್ಚತ್ತಾಪ ಆಯಿತು...

ನಾವು ಇನ್ನೊಂದು ಕವನ ಬರೆದು ಕ್ಷಮೆ ಕೇಳಿದ್ದು ಬೇರೆ ಕಥೆ....
ಅವಳಿಗೆ ಗೊತ್ತಾಗಲ್ಲ ಅಂತ...

"ನೀನು ಭದ್ರಾವತಿ ಬಂಗಾರಿಯಲ್ಲ....
ಅಪ್ಪಟ ಅಪರಂಜಿ..."

ಅಂತ ಕವಿತೆ ಬರೆದಿದ್ದೆ ನಾಗು ಹೆಸರಲ್ಲಿ..

ಬಂಗಾರಿ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

June 23, 2009 5:48 AM

Ittigecement said...

ಆಶಾರವರೆ...

ನಿಮಗೆ ನನ್ನ ತುಂಟತನದಿಂದ ಸ್ವಲ್ಪ ಹೊಟ್ಟೆಕಿಚ್ಚಾಗಿದ್ದರೆ ಅದು ಸಹಜ...
ಹ್ಹಾ...ಹ್ಹಾ...!

ಈ ನಾಗು ನನಗಂತೂ ಪಾಪ ಅಂತ ಅನ್ನಿಸುವದಿಲ್ಲ....
ಅವನು ಹೇಳಿದ್ದಕ್ಕೇ ನಾನು ಕವನ ಬರೆದದ್ದು...
ಬೇಕಿದ್ದರೆ ಅವನನ್ನೇ ಕೇಳು...

ಇನ್ನು ಪ್ರಿನ್ಸಿಪಾಲರ ಬಳಿ ತಪ್ಪನ್ನು ತನ್ನ ಮೇಲೆ ಎಳೆದು ಕೊಂಡಿದ್ದು...
ಅದು ನಿಜ.. ನನ್ನನ್ನು ಬಚಾವ್ ಮಾಡಲಿಕ್ಕೆ ಹಾಗೆ ಹೇಳಿದ....

ಹಾಗೆ ನಾನೂ ಕೂಡ ಅವನಿಗಾಗಿ ರಿಸ್ಕ್ ತೆಗೆದು ಕೊಂಡಿದ್ದು ಇದೆ...
ಮಿಲಿಟರಿ ಸುಬ್ಬುರಾಯರನ್ನು ಎದುರಿಸಿದ್ದೇನೆ...(ರಾಜಿ ಅಪ್ಪ)
ಅದೂ ಬರಿಗಯ್ಯಲ್ಲಿ...

ಮನೆಯಲ್ಲಿ ಅಲ್ಲದೇ...
ಅಂತೂ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....

Ittigecement said...

ಶಿವಶಂಕರ್....

ನಿಮ್ಮ ಬ್ಲಾಗಿನ
ಶಾಯರಿ, ಎಸ್ಸೆಮ್ಮೆಸ್ ಜೋಕುಗಳು ಬಹಳ ಜನಪ್ರಿಯ ಆಗಿವೆ...
ನಿಮ್ಮ ಜೋಕುಗಳ ಎಸ್ಸೆಮ್ಮೆಸ್ ಗಳು ನನಗೆ ಬಹಳ ಬರುತ್ತಿವೆ
ಅಭಿನಂದನೆಗಳು....

ಈ ಭದ್ರಾವತಿ ಬಂಗಾರಿ ಸಾಮಾನ್ಯಳಲ್ಲ...
ಮುಂದೆ ಓದುತ್ತಾ ಇರಿ ಗೊತ್ತಾಗುತ್ತದೆ....
ಅವಳ ಕಪ್ಪು ಬಣ್ಣದ ಬಗೆಗೆ ಬರೆದದ್ದು ತಪ್ಪು..
ಹಾಗೇ ಕೀಳಾಗಿ ಅವರ ಬಣ್ಣದ ಬಗೆಗೆ ಬರೆದದ್ದು ತಪ್ಪು...
ಅದಕ್ಕೆ ಇನ್ನೊಂದು ಕವಿತೆ ಬರೆದು
ನೋಟಿಸ್ ಬೋರ್ಡಿಗೆ ಹಾಕಿದ್ದೆವು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವು ಸರ್....

ನಮಗೆ ಎಷ್ಟೇ ಸಿಟ್ಟು ಬಂದರೂ ಬಣ್ಣ ಹಳಿದು ಸೇಡು ತೀರಿಸಿಕೊಳ್ಳಬಾರದು...
ಅಂದು ನನಗೆ ಬಹಳ ಪಿಚ್ಚೆನಿಸಿತು...
ಅದಕ್ಕೆ ಕ್ಷಮೆಯನ್ನೂ ನಾವು ಕೇಳಿದೆವು...

ಹುಡುಗಾಟಿಕೆ ದಿನಗಳಲ್ಲಿ ನಡೆದದ್ದು...
ಆದರೂ ತಪ್ಪು.... ತಪ್ಪೇ...

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ವಿನುತಾ....

ನಿಜ...
Beauty lies in gayers eyes.....

ಗುಣ ಮುಖ್ಯ ಅಂದಾಗ ಬಣ್ಣ ಗೌಣವಾಗುತ್ತದೆ....
ಆದರೆ ...
ಬೆಳ್ಳಗಿನ ಮೋಹ ಹೆಚ್ಚಿನವರನ್ನು ಕಾಡುತ್ತದೆ....
ತಾವು ಕಪ್ಪಗಿದ್ದರೂ ಬೆಳ್ಳದು ಬೇಕೆನ್ನುತ್ತದೆ ಮನಸು...

ರೂಪಶ್ರೀಯವರು ಹೇಳಿದ ಹಾಗೆ..
ಬಿಳಿ ಬಣ್ಣ ಬದಲಾಗುತ್ತ ಇರುತ್ತದೆ...
ಕಪ್ಪು ಹಾಗಲ್ಲ ಯಾವಾಗಲೂ ಕಪ್ಪಾಗಿಯೇ ಇರುತ್ತದೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

Reply

ನಮ್ಮ ಮೆಚ್ಚಿನ ಲೇಖಕ,
ಪರಿಸರ ಪ್ರೇಮಿ...
ನಾಗೇಶ್ ಹೆಗಡೆಯವರು ಹೀಗೆ ಹೇಳುತ್ತಾರೆ....


Nagesh Hegde to me
11:47 PM (7 hours ago)
ಆಕರ್ಷಕವಾಗಿ ಮೂಡಿಬಂದಿವೆ 'ಬಳೆಗಾರ ಚೆನ್ನಯ್ಯ' ಮತ್ತು 'ಕಪ್ಪು ಹುಡುಗಿಯ ಕೀಟಲೆ ಕವನ' ಎರಡೂ.

ಆದರೆ ಅನ್ಯಾಯ...!!

1. ನಾಟಕದ ಸುಂದರ ಚಿತ್ರಗಳನ್ನು ಯಾರು ತೆಗೆದಿದ್ದು ಎಂಬುದನ್ನು ಬರೆಯಲಿಲ್ಲ. ಅನ್ಯಾಯ
2. ಉಪ್ಪುಹುಳಿ ಮಸಾಲೆ ಹಾಕಿದ ಆ ಹಸಿ ಮೆಣಸಿನಕಾಯಿಯ ಚಿತ್ರವನ್ನೂ ಹಾಕಲಿಲ್ಲ.

Unknown said...

ಚೊಲೋ ಇದ್ದು ಪ್ರಕಾಶಣ್ಣ. shallow ಲೇಖನವಾದರೂ ಸರಳವಾಗಿ, ಖುಷಿಯಾಗಿ ಓಡಿಸಿಕೊಂಡು ಹೋಗ್ತು. ಕವನ ಇಷ್ಟ ಆತು. ಇದನ್ನು ಓದಿ, ಕಾಲೇಜು ದಿನದ ಎಷ್ಟೋ ಘಟನೆ ನೆನಪಾಗುವ ಹಾಗೆ ಮಾಡಿದ್ರಿ. ಥ್ಯಾಂಕ್ಸ್
ಅಚ್ಚುಹೆಗ್ಡೆ

paapu paapa said...

thumbaa thamaasheyaagide.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಸೂಪರ್, ನನ್ನ ಕಾಲೇಜಿನ ನೆನಪುಗಳು ಜಾಗ್ರತವಾದವು

Ittigecement said...

ಕ್ಷಣ ಚಿಂತನೆ....

ನಿವೆನ್ನುವದು ಸರಿ...
ಕಪ್ಪು ಕೂಡ ಒಂದು ಬಣ್ಣ...
ಅದಕ್ಕೆ ಚಂದ ಇರುವಿಕೆಯ ವಿವರಣೆ ಬೇಕಾ...?

ನಿಜ ಹೇಳ ಬೇಕೆಂದರೆ ಭಾರತೀಯರೆಲ್ಲ ಕಪ್ಪು....

ಶ್ರೀ ಕ್ರಷ್ಣ ಕಪ್ಪಲ್ಲ ನೀಲಿ ಅಂತ ನನ್ನ ಭಾವನೆ...
ನಮಗೆ ಇಷ್ಟವಾದರೆ ಬಣ್ಣ ಗಮನಕ್ಕೆ ಬರುವದಿಲ್ಲ...

ಏನಂತೀರಿ...?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಬಾಲು ಸರ್....

ನೀವೊಬ್ಬರಾದರೂ "ಡೀಸೆಂಟ್" ಅಂದರಲ್ಲ...
ಖುಷಿಯಾಯಿತು...

ಆ ಕವನ ನೋಟಿಸ್ ಬೋರ್ಡಿಗೆ ಹಾಕಿ..
ಅದಕ್ಕಾಗಿ ವಿಷೇಶ ತಯಾರಿ ಮಾಡಿಕೊಂಡಿದ್ದೇವು...
ರಾಜಿ ಖಂಡಿತವಾಗಿ "ಪ್ರಿನಿಸಿಪಾಲರ ಬಳಿ ಹೋಗುತ್ತಾಳೆ...
ಅದಕ್ಕಾಗಿ ನಾವು ಏನೇನು ಮಾತಾಡ ಬೇಕು... ಎಂದೆಲ್ಲ ತಯಾರಿ ಮಾಡಿಕೊಂಂಡಿದ್ದೇವು...

ಆದರೆ "ರಾಜಿ" ಅಳುಮುಖ ಮಾತ್ರ ಅನೀರಿಕ್ಷಿತವಾಗಿತ್ತು...
ನಮಗೆಲ್ಲರಿಗೂ ನಮ್ಮ ಕೆಲಸದ ಬಗೆಗೆ ಬೇಸರವಾಯಿತು...
ನಾಗು ಬಹಳ ಫೀಲ್ ಮಾಡಿಕೊಂಡು ಬಿಟ್ಟಿದ್ದ...

ಉಗಿಸಿಕೊಂಡವ ಮಾತ್ರ ಖುಷಿಯಾಗಿದ್ದ...

ಧನ್ಯವಾದಗಳು...

Ittigecement said...

ವಿನೂತಾ....

ಹಾಲಂಡ್ ದೇಶದ ಛಳಿಯಲ್ಲಿ ನಿಮ್ಮಕಾಲೇಜಿನದಿನಗಳ ನೆನಪಾಗಲಿಲ್ಲವಾ..?

ಈ ಕವನವನ್ನು ಹಿಂದಿಗೆ ಭಾಷಾಂತರಿಸಿದ್ದೆ..
ನನ್ನ ಹಿಂದಿ ಮಿತ್ರರಿಗಾಗಿ...

"ಕಲ್ ಖ್ವಾಬ್ ಮೆ ತುಮ್ ಆಯಿ ಥೀ...
ಕ್ಯಾ ಕರೂ ಮೇ ದೇಖ್ಃ ನಹಿ ಸಖಾ....
ತೇರಾ ಪ್ಯಾರಾಸಾ ಚೆಹರಾ...

ಮೇರೆ ಪಾಸ್ ಬ್ಯಾಟರಿ ನಹಿ ಥಿ...!!.."


ವಾ..!!.ವ್ವಾ...!!

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ರಾಜೇಶ್....

ನಿಮಗೊಂದು ವಿಷಯ ಹೇಳ ಬೇಕು...

ಕಾಡಿಸಿಕೊಳ್ಳೋದೂ ಕೂಡ ಹೆಣ್ಣುಮಕ್ಕಳಿಗೆ ಇಷ್ಟವಂತೆ..
ಆದರೆ "ಡೀಸೆಂಟ್" ಆಗಿರಬೇಕು...

ರಾಜಿ ಕೊನೆಗೆ... ನಮ್ಮೆಲ್ಲರ ಪರಿಚಯ ಆದಮೇಲೆ
ಈ ಕವನದ ಬಗೆಗೂ ಇಷ್ಟ ಪಟ್ಟಳು...

"ನೀನಲ್ಲ ಭದ್ರಾವತಿ ಬಂಗಾರಿ...
ನೀನೊಂದು ಶುದ್ಧ ಚಿನ್ನ ಅಪರಂಜಿ..
ನಿನ್ನ ಒಂದು ಕುಡಿನೋಟದ ಮಿಂಚಲ್ಲಿ..
ಕುಣಿಸಿ ಬಿಟ್ಟೆಯಲ್ಲ ಎದೆಯಲ್ಲಿ ಸಂತಸದ ಕಾರಂಜಿ.."

ಅಂತ ಬೇರೊಂದು ಕವನ ಬರೆದು ನೋಟೀಸ್ ಬೋರ್ಡಿಗೆ ಹಾಕಿದ್ದೇವು....

ಇದಕ್ಕೆ ಯಾರದ್ದೂ..
ಯಾವ ತಕರಾರು ಇರಲಿಲ್ಲ....

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Kishan said...

The title itself speaks volumes... and a very supportive writing to add color to it. Great.

bhadra said...

ಹೆ ಹೆ ಹೆ - ಬಹಳ ಚೆನ್ನಾಗಿದೆ

ಮೂರನೆಯ ಬಿ.ಕಾಂ. ಓದುವಾಗ (೧೯೭೯) ನಾವೂ ನಮ್ಮ ಲೆಕ್ಚರರ್ (ಅವರ ಹೆಸರು ಸುನಂದ) ಒಬ್ಬರ ಬಗ್ಗೆ ಲೇವಡಿ ಮಾಡಿದ್ದೆವು

ಆ ಬರಹದ ಒಕ್ಕಣಿಗೆ ಹೀಗಿತ್ತು

ಸುನಂದ
ಏನಂದ?
ನಿನ್ನ ಹೊಟ್ಟೆಯಲಿರುವ ಕಂದ
ಬಲು ಮಂದ

(ಆಕೆ ಒಂದು ವಾರಗಳವರೆವಿಗೆ ಅತ್ತಿದ್ದೇ ಅತ್ತಿದ್ದು)
ಆಕೆಯ ಗೋಳಾಟ ನೋಡಿ ಲೇವಡಿ ಮಾಡಿದವರಿಗೂ ಬಹಳ ಬೇಸರ ಆಗಿತ್ತು

ಭಾರ್ಗವಿ said...

ತುಂಬಾ ಚೆನ್ನಾಗಿದೆ ಕವನ.
ಶಾಂತಲಾರವರು ಹೇಳಿದಂತೆ ನಮ್ಮನೆಯಲ್ಲಿ ಅಮಾವಾಸ್ಯೆ ಹುಣ್ಣಿಮೆ ಅಂತ ಕರೆಸಿಕೊಂಡವರು ನನ್ನ ಚಿಕ್ಕಮ್ಮಂದಿರು. ಒಬ್ಬಳು ಬೆಳ್ಳಗೆ.ಮತ್ತೊಬ್ಬಳು ಸ್ವಲ್ಪ ಕಪ್ಪು. ನೀವಂತೂ ತುಂಬಾನೇ ಚೆನ್ನಾಗಿ ಕಾಲೇಜ್ ದಿನಗಳನ್ನೂ ಕಳೆದಿದ್ದೀರಿ.ಭದ್ರಾವತಿ ಬಂಗಾರ ಒಳ್ಳೆ ಕಲ್ಪನೆ.

ಚಂದಿನ | Chandrashekar said...

ಭದ್ರಾವತಿ ಬಂಗಾರಿಯ ಮೂಲಕ ನನ್ನ ಶಾಲಾ ದಿನಗಳ ಚೇಷ್ಟೆಗಳನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

PARAANJAPE K.N. said...

ನಿಮ್ಮ ಶಾಲಾದಿನಗಳಲ್ಲಿ ಅದೆಷ್ಟು ಕೀಟಲೆ ಮಾಡಿದ್ದಿರಿ ಮಾರಾಯರೇ, ಬಹಳ ಚೆನ್ನಾಗಿದೆ ಭದ್ರಾವತಿ ಬ೦ಗಾರಿ ಕುರಿತಾದ ಬರಹ, ಕವನ ಏಲ್ಲವೂ. ಬಹಳ ತಡವಾಗಿ ಬ೦ದೆ.

Ranjana Shreedhar said...

ಪ್ರಕಾಶಣ್ಣ...
ಸೂಪರ್ ಬರಹ....
ನಿಮ್ಮಂತ ಕಿಲಾಡಿ ಹುಡುಗರ ಗ್ಯಾಂಗ್ ನಮ್ಮ ಕಾಲೇಜ್ನಲ್ಲಿ ಇಲ್ಲ ಬಿಡಿ...
ಭದ್ರಾವತಿ ಬ೦ಗಾರಿ ತುಂಬಾ ಸೂಪರ್...

Geetha said...

ಹಹಹಹ.............ತುಂಬಾ ಚೆನ್ನಾಗಿದೆ ಸರ್..ನಿಮ್ಮ ಬರಹ, ಕವನ ಎರಡೂ ಕೂಡ..

ಅನಿಲ್ ರಮೇಶ್ said...

ಚೆಂದದ ಬರಹ.

ಜಲನಯನ said...

ಪ್ರಕಾಶ್, ನಿಮ್ಮ ಈ ನವಿರು ಪ್ರಹಸನ ಓದಿ ನನಗೆ ನಮ್ಮ ಕಾಲೇಜಿನ ವಾರ್ಷಿಕೋತ್ಸವದ toast giving to out-going ನೆನಪಾಗುತ್ತೆ. ಆ ಸಂದರ್ಭದಲ್ಲಿ ಹೊರ ಹೋಗುವ ಪದವೀಧರ, ಸ್ನಾತಕೊತ್ತರರಿಗೆ ಹೊಸ ಮತ್ತು ಶಿಕ್ಷಣ ಮುಂದುವರೆಸುವ ವಿದ್ಯಾರ್ಥಿಗಳು ವಿವಿಧ ರೀತಿಯ ಟೀಕೆ ಟಿಪ್ಪಣೆ ಮಾಡ್ತಾರೆ ಅದಕ್ಕೆ ಅವರೂ ಸೂಕ್ತವಾಗಿ ಉತ್ತರಿಸುತ್ತಾರೆ...ಎಲ್ಲಾ ನವಿರು ಹಾಸ್ಯಕ್ಕೆ...
ಚನ್ನಾಗಿದೆ ಪ್ರಹಸನ ಮತ್ತು ಅದಕ್ಕೆ ತಕ್ಕ ಕವನ..........

Ittigecement said...

bisila hani (uday )

dhanyavaadagaLu....

baruttaa iri...

Ittigecement said...

ಶೈಲಾ..(ಹಾಗಂದು ಕೊಂಡಿದ್ದೇನೆ)

ನಿಮ್ಮ ಉತ್ಸಾಹದ ಪ್ರತಿಕ್ರಿಯೆಯನ್ನು ಓದಿ ಖುಷಿಯಾಗುತ್ತದೆ..
ನನ್ನ ಬ್ಲಾಗ್ ಫಾಲೋ ಮಾಡುತ್ತಿರುವದಕ್ಕೆ ಧನ್ಯವಾದಗಳು....

ಬಹುಷಃ ನೀವೇ ಮೊದಲಿಗರು...
ನಾಗುವಿಗೆ ಧನ್ಯವಾದ ಹೇಳಿದ್ದವರಲ್ಲಿ...

ಖಂಡಿತ ಅವನಿಗೆ ತಿಳಿಸುವೆ....

ಬರುತ್ತಾ ಇರಿ...

Ittigecement said...

ಉಮೇಶ್....

ನಿಜ... ಅಷ್ಟೊಂದು ರಂಪ ಮಾಡುವ ಅಗತ್ಯ ಇರಲಿಲ್ಲ.....
ಆದರೂ ನಾವು ಬಣ್ಣ ಹೇಳಿ ಹಳಿದದ್ದು ತಪ್ಪು...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಚಿತ್ರಾರವರೆ.....

ಬಹಳ ದಿನಗಳ ನಂತರ ಬಂದಿದ್ದೀರಿ...

ಪ್ರತಿಕ್ರಿಯೆಗಳು ಮತ್ತಷ್ಟು ಬರೆಯಲಿಕ್ಕೆ ಉತ್ಸಾಹ ಕೊಡುವದಂತೂ ನಿಜ...
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಶಿವಪ್ರಕಾಶ್....

ಕವಿತೆಯ ಬಗೆಗೆ ನಾಗುವಿನ ವಾಖ್ಯಾನ ಚಂದ ಇದೆ

ಮುಂದಿನ ಭಾಗದಲ್ಲಿ ಓದಿ...

ಮೆಚ್ಚುಗೆಗೆ ವಂದನೆಗಳು...

Ittigecement said...

ನಾಗೇಶ್ ಹೆಗಡೆ ಸರ್.....

ನಿಮ್ಮ ಪ್ರತಿಕ್ರಿಯೆ ನನಗೊಂದು ಹೆಮ್ಮೆ....
ನೀವು ಕೊಡುವ ಸಲಹೆ ಸೂಚನೆಗಳು...
ನನಗೆ ಬಹಳ ಸಹಾಯಕಾರಿಯಾಗಿದೆ....

ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ....

ಧನ್ಯವಾದಗಳು....

Ittigecement said...

ಅರ್ಚನಾರವರೆ....

ನನ್ನ ಬ್ಲಾಗಿಗೆ ಸ್ವಾಗತ...

ನಿಜ ಕಾಲೇಜಿನ ಬಣ್ಣದ ದಿನಗಳೇ ಹಾಗೆ...
ಬಹಳ ಮಜವಾಗಿರುತ್ತದೆ...
ನಂತರ ಕೆಲಸ, ಸಂಸಾರದ ಒತ್ತಡಗಳಲ್ಲಿ
ನಾವು ನಗುವದನ್ನು ಮರೆತೇ ಬಿಡುತ್ತೇವೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತ ಇರಿ...

Ittigecement said...

ಪ್ರೀತಿಯವರೆ....

ಕಾಲೇಜಿನ ದಿನಗಳ
ಅನುಭವವನ್ನು ಮೆಚ್ಚಿಕೊಂಡಿದ್ದಕ್ಕೆ
ಧನ್ಯವಾದಗಳು...

ನಿಮ್ಮ ರೇಖಾ ಚಿತ್ರಗಳು ಚೆನ್ನಾಗಿರುತ್ತದೆ....

Ittigecement said...

ಡಾ. ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)

ಜವಾಬ್ದಾರಿ ಇಲ್ಲದ ದಿನಗಳ ಮಜವೇ ಬೇರೆ...
ಆ ಬಣ್ಣದ ದಿನಗಳ ಖುಷಿಯೇ ಬೆರೆ...

ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು...

Ittigecement said...

ಕಿಶನ್...

ನಿಮ್ಮ ಪ್ರತಿಕ್ರಿಯೆಗಳು...
ಸ್ವೀಟ್ ಮತ್ತು ಶಾರ್ಟ್...
ಹೇಳ ಬೇಕಿದ್ದನೆಲ್ಲವನ್ನೂ ಹೇಳಿ ಬಿಡುತ್ತವೆ....

ಕೆಲವುಬಾರಿ ನನ್ನ ಲೇಖನಗಳಿಗಿಂತ
ನಿಮ್ಮ ಪ್ರತಿಕ್ರಿಯೆಗಳು ಬಲು ಚೆನ್ನ...

ಧನ್ಯವಾದಗಳು..

Ittigecement said...

ಶ್ರೀನಿವಾಸ... ಸರ್....

ನನ್ನ ಬ್ಲಾಗಿಗೆ ಸ್ವಾಗತ....

ನೀವೂ ತುಂಟರಿದ್ದಿದ್ದೀರಿ ಅಂದಹಾಗಾಯಿತು....
ನಿಮ್ಮ ಕವನವೂ ಚೆನ್ನಾಗಿದೆ....

ಮತ್ತೆ ಕಾಲೇಜಿನದಿನಗಳನ್ನು ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ನನಗೆ ಟಾನಿಕ್ ಥರಹ...

Ittigecement said...

ಭಾರ್ಗವಿಯವರೆ...

ನಾನೇದ್ದರೂ ನಾಗುವಿನ ಹಿಂಬಾಲಕ....

ಭದ್ರಾವತಿ ಬಂಗಾರಿ ಆವನ ಪ್ರೇಮ....

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

ಬಹುದಿನಗಳಿಂದ ಬರಲಿಲ್ಲ...

ಬರುತ್ತಾ ಇರಿ....

Ittigecement said...

ಚಂದಿನ...

ಕಾಲೇಜಿನ ಚೇಷ್ಟೆಗಳು...
ಸಭ್ಯತೆಯ ಗಡಿಯೊಳಗೇ ಇದ್ದಲ್ಲಿ..
ಮಜವಾಗಿರುತ್ತವೆ...

ನಮ್ಮ ಗುಂಪಿನಲ್ಲಿ ದಿವಾಕರ ನಮ್ಮನ್ನೆಲ್ಲ ಹತೋಟಿಯಲ್ಲಿಡುತ್ತಿದ್ದ...

ನಾವು ದಿವಾಕರನ ಮಾತಿಗೆ ಗೌರವಕೊಡುತ್ತಿದ್ದೇವು....

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪರಾಂಜಪೆಯವರೆ....

ಯಾವಾಗಲಾದರೂ ಬನ್ನಿ....
ಪ್ರತಿಕ್ರಿಯೆ ಟಾನಿಕ್ ಥರಹ...
ಬರೆಯಲು ಉತ್ಸಾಹ ತರುತ್ತದೆ...

ಧನ್ಯವಾದಗಳು...

Ittigecement said...

ರಂಜನಾ....

ಪರಿಕ್ಷೆಯ ನಡುವೆಯೂ ಬಂದು..
ಪ್ರತಿಕ್ರಿಯೆ ಕೊಟ್ಟಿದ್ದು ಖುಷಿಯಾಯಿತು....

ಸಭ್ಯತೆಯ ಗಡಿ ದಾಟದಿದ್ದಲ್ಲಿ ..
ಯಾವ ಚೇಷ್ಟೆಯೂ ಮಜವಾಗಿರುತ್ತದೆ...

ರಾಜಿಯ ಸೊಕ್ಕನ್ನೂ..
ತಮಗೆ ಗೊತ್ತಿಲ್ಲದಂತೆಯೇ ನಮ್ಮ ಹುಡುಗರು
ಇಷ್ಟಪಡುತ್ತಿದ್ದರು...
ಎಲ್ಲ ಹೆಣ್ಣುಮಕ್ಕಳಿಗೂ ಆ ಥರ ಇರಲಿಕ್ಕೆ ಆಗುವದಿಲ್ಲ ಬಿಡಿ....

ವಂದನೆಗಳು...

Ittigecement said...

ಗೀತಾರವರೆ.....

ನಮ್ಮ ಕಾಲೇಜಿನದಿನಗಳನ್ನು ಇಷ್ಟಪಟ್ಟಿದ್ದಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅನಿಲ್....

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಜಲನಯನ....

ನಿಮ್ಮ ಕಾಲೇಜಿನ ದಿನಗಳನ್ನು ಹಂಚಿಕೊಂಡಿದ್ದು ಖುಷಿಯಾಯಿತು...

ರಾಜಿಗೆ ಬಣ್ಣವಿಲ್ಲದಿದ್ದರೂ...
ಚಂದವಾದ..
ಅತ್ಯಕರ್ಷಕವಾದ ಕಣ್ಣುಗಳಿದ್ದವು...
ತಾನು ಹೇಗೆ ಚಂದಕಾಣುತ್ತೇನೆ..
ಎನ್ನುವ ಸೌಂದರ್ಯ ಪ್ರಜ್ಞೆ ಅವಳಿಗಿತ್ತು....

ಸೌಂದರ್ಯ ಪ್ರಜ್ಞೆ ಎಲ್ಲರಿಗೂ ಇರುವದಿಲ್ಲ...
ಖರ್ಚುಮಾಡಿದರೂ ..
ಒಪ್ಪುವ ಫ್ಯಾಷನ್ ಮಾಡಿಕೊಳ್ಳುವದು.. ಒಂದು ಕಲೆ....

ಅದು ರಾಜಿಗೆ ತಿಳಿದಿತ್ತು...
ಹುಡುಗರನ್ನು ಆಟ ಆಡಿಸುತ್ತಿದ್ದಳು....

ಪ್ರತಿಕ್ರಿಯೆಗೆ ಧನ್ಯವಾದಗಳು...