Monday, January 19, 2009

" ರಾಜಿ."..ಬಲು ಸುಂದರ ಹುಡುಗಿ....!!

ಪರೀಕ್ಷೆಗೆ ಇನ್ನೂ ಕೇವಲ ಒಂದು ತಿಂಗಳು ಬಾಕಿ....

ಇದ್ದಕ್ಕಿದ್ದಂತೆ ಹುಡುಗರೆಲ್ಲ ಗಂಭೀರರಾಗಿಬಿಟ್ಟಿದ್ದರು...

ನಾನು ಮತ್ತು ಉಮಾಪತಿ ಸಿದ್ಧಾಪುರದ...
"ಪದ್ಮನಾಭ ಭಟ್ಟರಮನೆಯ " ಮಹಡಿಯಲ್ಲಿ ರೂಮ್ ಮಾಡಿದ್ದೇವು....

ಅಲ್ಲಿ ಇನ್ನೂ ನಾಲ್ಕಾರು ರೂಮುಗಳಿದ್ದವು....


ಉಮಾಪತಿ ಏನೋ ಟೆನ್ಷನ್ ನಲ್ಲಿದ್ದ.....

ಸುಮ್ಮನಿರುವ, ನಾಚಿಕೆ ಸ್ವಭಾವದ ವ್ಯಕ್ತಿ...

ಏನನನ್ನೂ ಮನಸ್ಸು ಬಿಚ್ಚಿ ಹೇಳಲಾರ...

ನಾನೇ ಕೆದಕಿ , ಕೆದಕಿ ಕೇಳಿದರೆ ಹೇಳುತ್ತಿದ್ದ...

ತುಂಬ ಒಳ್ಳೆಯ.... ಸಾಧು ಮನುಷ್ಯ....

ಆದರೆ ಇಂದು ಅವನೇ ಮಾತನಾಡುವ ಉತ್ಸುಕತೆ ತೋರುತ್ತಿದ್ದ....

" ಪ್ರಕಾಶು.... ಒಂದು ವಿಷಯ ನಿನ್ನ ಹತ್ರ ಮಾತಾಡಬೇಕು...

ಯಾರಿಗೂ ಹೇಳಬಾರದು.. ನಗಬಾರದು...!!..."

ಕಂಡಿಷನ್ ಇಡುತ್ತಲೇ ಶುರು ಮಾಡಿದ...

" ಉಮಿ... ನೀನು ಹೇಳು ಮೊದಲು.....
ನನ್ನಿಂದ ಆದ ಸಹಾಯ ಮಾಡುತ್ತೇನೆ..
ಹಣದ ವಿಷಯ ಬಿಟ್ಟು"

ಎಂದೆ...

ಮತ್ತೇನಿಲ್ಲ.. ಮತ್ತೇನಿಲ್ಲ..ಅದು ಹೇಗೊ ಹೇಳುವದು...?."

ಮುಂದೆ ಹೋಗುತ್ತಲೇ ಇಲ್ಲ ಅವನ ಮಾತು..

" ಲೋ.. ಉಮಿ.. ನಿನಗೆ ಹೊತ್ತು ಹೋಗದಿದ್ದರೆ...
ಹೊರಗಡೆ ತೆಂಗಿನಕಾಯಿತಲೆ ಇದ್ದಾನೆ ಅವನ ಹತ್ರ ಹೋಗು..
ಸುಮ್ಮನೆ ನನ್ನ ಟೈಮ್ ವೇಸ್ಟ್ ಮಾಡಬೇಡ್ವೊ.. ಗುರುವೆ.."
ಅಂದೆ


" ಅದು ಏನಿಲ್ಲ.....

..ನೀನು... ಯಾರಿಗೂ ಹೇಳಬಾರದು ಕಣಪ್ಪಾ.."


" ಲೋ..... ಹೇಳೊ ಮೊದ್ಲು...!"

" ನೋಡು .... ನಗಬಾರದು... ಅದು...

ಅದೂ ....ನಾನು...


" ಮೊಗೆಕಾಯಿ " ಲವ್ವ್ ಮಾಡ್ತಾ ಇದ್ದೀನಿ...!! ??"

ಅಂದ...

" ಮೊಗೆಕಾಯಿ... !! "

ಇದು ನಾಗು ಒಂದು " ಹುಡುಗಿಗೆ " ಇಟ್ಟ ಹೆಸರು...!

ನನಗೆ ಎಚ್ಚರ ತಪ್ಪಿ ಬೀಳುವದೊಂದು ಬಾಕಿ...!

ಅವಳು 'ಮಾಧುರಿ" ಥರ ಚಂದವಾಗಿ ಇದ್ದ ಹುಡುಗಿ....!

ಈ .. ಉಮಾಪತಿಯ... ಲವ್ವಾ..?

ನಾವೆಲ್ಲ... ಇವನಿಗೇ " ಮುರಾರ್ಜಿ ದೇಸಾಯಿ" ಅನ್ನುತ್ತಿದ್ದೇವು...

ಕಪ್ಪಗೆ.. ದಪ್ಪ ತುಟಿ.....

ಬೆನ್ನು ಆಗಲೇ ಬಾಗಿತ್ತು..

ದಪ್ಪನೆಯ.. ಸೋಡಾ ಗ್ಲಾಸ್ ಕೂಡ.. ಬಂದಿತ್ತು...


"ಲೋ.. ಆರಾಮಿದ್ದೀಯೇನೋ..?

ಆ ಸುಂದರ.. ಮೊಗೆಕಾಯಿ ಎಲ್ಲಿ..?

ನೀನೆಲ್ಲಿ...? ಇದು ಆಗೋ ಹೋಗೊ ಮಾತಲ್ಲ...

ಆಗೋ ಕೆಲ್ಸ ಮಾಡು..."

ನನಗೆ ಕೋಪಾನೂ ಬಂದಿತ್ತು...

" ನಂಗೊತ್ತು.. ಪ್ರಕಾಶು...?

ಏನು ಮಾಡಲಿ... ನನಗೆ .".ಲವ್ವು .." ..ಆಗಿಬಿಟ್ಟಿದೆ...!..."


" ನಿನ್ ತಲೆ.... ಕನ್ನಡಿಯಲ್ಲಿ ಮುಖಾ ನೋಡಿದೀಯಾ...?

ಅವಳೆಷ್ಟು ಚಂದ .. ಇದ್ದಾಳೆ..?.!!..

ನಿನ್ನನ್ನು ಒಪ್ತಾಳೇನೋ...?"


" ನನ್ನ ಸಮಸ್ಯೆ ಅದಲ್ಲೋ.... ಪ್ರಕಾಶು....!

ನನಗೆ... ಪರೀಕ್ಷೆಗೆ... ಓದಲು ಆಗ್ತಾ ಇಲ್ಲ..!

ಪುಸ್ತಕ... ತೆರೆದರೆ...ಅವಳ ಮುಖಾನೆ ಎದುರಿಗೆ ಬರ್ತದೆ....! "ಉಮಾಪತಿ ಧ್ವನಿಯಲ್ಲಿ ಒಂದು ಥರ ಕಂಪನ ಇತ್ತು...

ಬಹಳ ಸೀರಿಯಸ್ ಆಗಿ ಹೇಳ್ತಿದ್ದ....

" ಪ್ರಕಾಶು.. ನೀನೆ ಸಹಾಯ ಮಾಡೊ...

ಪುಸ್ತಕ ಹಿಡಿದಾಗಲೆಲ್ಲ ಅವಳ ಮುಖಾನೆ ಕಣ್ಣಿಗೆ ಬರುತ್ತದೆ...

ಮಲಗಿದಾಗಲೂ ಅವಳೇ.... ನೆನಪಿಗೆ... ಬರ್ತಾಳೆ....!

ಅವಳು ನಕ್ಕಿದಂಗೇ ಕಾಣ್ತದೆ..!

ನಾನು ಎಲ್ಲಿ ಹೋದ್ರು.. ಅವಳು ಮುಖ ಎದುರಿಗೆ ಬರ್ತದೆ...!

ದೇವರ ಪೂಜೆ ಮಾಡುವಾಗಲೂ...

ಅವಳದೇ ನೆನಪು... ಮಾರಾಯಾ..!!

ನಾನು ಪಾಸ್ ಆಗುವದು ಡೌಟ್ ಕಣೊ....

ನೀನೆ ಏನಾದರು ಸಹಾಯ ಮಾಡೋ... ಪ್ಲೀಸ್..."

ಉಮಾಪತಿ ಗೋಗರೆದ..

ಎಲಾ ಇವನಾ..!

ನನಗೂ ಏನು ಮಾಡಬೇಕೆಂದು ಗೊತ್ತಾಗಲಿಲ್ಲ...

ಈ ಉಮಾಪತಿ... ಬಹಳ... ಮುಗ್ಧ.....

ಸಿನೇಮಾ ನೋಡಿ ಹೀಗಾಗಿ ಬಿಟ್ಟಿದೆ ಅನ್ನಿಸಿತು...

ಇವನ ಸಮಸ್ಯೆಗೆ "ನಾಗೂ " ನೇ ಪರಿಹಾರ ಕೊಡಬಲ್ಲ ಅನ್ನಿಸಿತು...

"ನಾಗೂ ಬಳಿ ಹೆಳ್ಕೊ ಮಾರಾಯಾ.. ಏನಾದ್ರೂ ಮಾಡ್ತಾನೆ..."

ನಾಗು ಏನೆ ಸಮಸ್ಯೆ ಬಂದ್ರೂ ಪರಿಹಾರ ಮಾಡ್ತಿದ್ದ...

" ಅವನ ಬಾಯಿ ಬೊಂಬಾಯಿ ಮಾರಾಯಾ.. !

ಟಿವಿ ಬ್ರೇಕಿಂಗ್ ನ್ಯೂಸ್ ಥರ .. ಅವನೆಲ್ಲಿ ಸುಮ್ನಿರ್ತಾನೋ..?

ಎಲ್ಲರಿಗೂ ಡಂಗುರ.. ಸಾರಿ ಬಿಡ್ತಾನೆ..ಮಾರಾಯಾ..!"

ಉಮಾಪತಿಯ ಆತಂಕ ಸಹಜವಾಗಿತ್ತು...

ನಾಗು ಸ್ವಲ್ಪ ಹಾಗೇನೇ...

" ನೀನು ಸುಮ್ನಿರು ನಾನು ಮಾತಾಡ್ತಿನಿ...."

ಮರುದಿವಸ ನಾಗು ನಮ್ಮ ರೂಮ್ ಗೆ ಬಂದಾಗ.. ವಿಷಯ ಎಲ್ಲ ಹೇಳಿದೆ...


" ಲೊ ಯಾಕೊ ಹಾಳಾಗ್ತೀರಾ...!

ಈ...ಹುಡ್ಗಿಯರ ಹಿಂದೆ ಬಿದ್ದು....!

ಮನೆಯಲ್ಲಿ ಓದು ಅಂತ ಕಾಲೇಜಿಗೆ ಕಳಿಸಿದ್ರೆ ಇದೇನಾ ಮಾಡೋದು...?

ಸರಿ... ಪರಿಹಾರ ಇದೆ...

ನಾನು ಕೊಡ್ತೀನಿ...

ಪಕ್ಕದ ರೂಮಿನ ತೆಂಗಿನಕಾಯಿ ತಲೇನೂ ಕರ್ಕೊಂಡು ಬಾ....."


"ಲೇ ನಾಗೂ.. ಇಲ್ಲಿ ತೆಂಗಿನಕಾಯಿ ತಲೆ ಯಾಕೊ..?

ಇದನ್ನು.. ಗುಟ್ಟಾಗಿ ಇಡಬೇಕು ಮಾರಾಯಾ..!"


" ನೀನು ಕರಿ ಮೊದ್ಲು... ನಾನು ಆಮೇಲೆ ಎಲ್ಲ ಹೇಳ್ತೀನಿ..."

ಉಮಾಪತಿ ಆತಂಕದಿಂದಲೇ.. .. ಹೋಗಿ ಸೀತಾರಾಮ (ತೆಂಗಿನಕಾಯಿತಲೆ) ಕರೆದು ಕೋಂಡು ಬಂದ...

"ನೋಡ್ರಪಾ..ಪಾಪ... ಆ.." ಮೊಗೆಕಾಯಿ."....!.

ಒಬ್ರು ಲವ್ ಮಾಡಿದ್ರೆ ಸಾಕಿತ್ತು ಕಣ್ರೊ....!

ನಿವಿಬ್ರೂ.... ಅವಳನ್ನೇ...ಲವ್.. ಮಾಡ್ತಾ ಇದ್ದೀರಲ್ಲೋ...!

ಇನ್ನೇಷ್ಟು ಜನ ಮಾಡ್ತಾ ಇದ್ದಾರೋ... !

ನೋಡ್ರಪಾ... ಸೀತಾರಾಮು.... ಉಮಾಪತಿ..!

ನಿಮ್ಮ ಸಮಸ್ಯೆ ಪರಿಹಾರ ನಾನು.... ಮಾಡಿಕೊಡ್ತೇನೆ.....

ಆದ್ರೆ ಒಂದು ಕಂಡೀಷನ್ ಇದೆ..."


ತೆಂಗಿನಕಾಯಿತಲೆಗೆ ಕೋಪ ಬಂತು...


"ಈ ಉಮಾಪತಿ ಸಂಗಡ ನನ್ನ ಇಡಬೇಡ್ರೋ...

ನನ್ನದು ಪ್ಯುವರ್ ಲವ್...!

ಹ್ರದಯದಿಂದ ಲವ್ ಮಾಡ್ತಾ ಇದೀನಿ....!

ಆದ್ರೆ ಪರಿಕ್ಷೆ ಹತ್ರ ಬಂತಲ್ಲ..ಓದ್ಲಿಕ್ಕೆ ಆಗ್ತಾ ಇಲ್ಲ...!

ಪರೀಕ್ಷೆ ಮುಗಿದಮೇಲೆ ಅವಳಿಗೆ ಹೇಳಿ ಬಿಡ್ತಿನ್ರೊ.....!

ಇದೇ ತಲೆಯಲ್ಲಿ ಪಾಸಾಗೋದು ಕಷ್ಟ....ಮಾರಾಯ್ರಾ...!

ಏನು...ಎಂಥಾ ಕಂಡೀಷನ್ನೊ.. ಹೇಳು.."


"ನಂಗೂ.. ಪ್ರಕಾಶಂಗೂ ನಿರ್ಮಲಾ ಹೋಟ್ಲಲ್ಲಿ ನಾವು ತಿನ್ನುವಷ್ಟು ಮಸಾಲೆ ದೋಸೆ ತಿನ್ನಿಸ ಬೇಕು...

ಪ್ರತೀ ದಿನ ಮಧ್ಯಾನ್ಹದ ಮೇಲೆ ನಮಗಿಬ್ಬರಿಗೂ ....

ಲಕ್ಕಣ್ಣನ... ಅಂಗಡಿಯಲ್ಲಿ ಮಸಾಲೆ ಮಂಡಕ್ಕಿ, ಚಹ ಕುಡಿಸಬೇಕು..!

ಲಕ್ಷ್ಮೀ.. ಟಾಕೀಸ್ ನಲ್ಲಿ ಸಿನೆಮಾ ತೋರಿಸ.. ಬೇಕು...!

ಇನ್ನೊಂದು ವಿಷಯ...

ನಾನು ಹೇಳೊ ಪರಿಹಾರ ಯಾರಿಗೂ ಹೇಳಬಾರದು...!!


ಇದಕ್ಕೆಲ್ಲ... ಓಕೆ ಅಂದ್ರೆ ಮುಂದಿನ ಮಾತು ಅಡುವಾ..!"


ಇಬ್ಬರೂ ಕಂಜೂಸ್ ನನ್ನ್ ಮಕ್ಕಳು...

ಆದರೂ....ಒಪ್ಪಿದರು...ಪರೀಕ್ಷೆ ಪಾಸಾಗ ಬೇಕಲ್ಲ....!

ಮಧ್ಯಾನ್ಹದ ಮೇಲೆ ನಿರ್ಮಲ ಹೋಟೆಲ್ಲಿಗೆ ಹೋಗಿ..

ಗಡದ್ದಾಗಿ ತಿಂದು....

ಸಿನೆಮಾನು ನೋಡಿ....

"ಐನ್ ಕೈ" ಕೂಲ್ ಡ್ರಿಂಕ್ಸ್ ನಲ್ಲಿ ಜ್ಯೂಸ್ ಕುಡಿದೆವು ...

ಇಬ್ಬರಿಗೂ ನಮ್ಮ ಬಿಲ್ಲ ನೋಡಿ ಹೊಟ್ಟೆ ಉರುದು ಹೋಯಿತು....


" ನಾಗೂ.... ಒಂದುವೇಳೆ ನಿನ್ನತ್ರೆ ....

ಪರಿಹಾರ ಕೊಡಲಿಕ್ಕೆ ಆಗದೇ ಇದ್ರೆ... ?? !... "


ಈ... ಉಮಾಪತಿಯೇ... ಹಾಗೆ... ...

ಅವನಿಗೆ ಅನುಮಾನ ಬರುತ್ತದೆ.....!

ಆದರೆ ಕೆಲಸ ಮುಗಿಯುವ ಹೊತ್ತಿನಲ್ಲಿ.......!


ನಾಗು ಸುಮ್ಮನೆ ನಕ್ಕ.....

"ನಿನ್ನ ಸಮಸ್ಯೆ... ನನ್ನದು ಅಂದು ಕೊಳ್ತೀನಿ...ಕಣ್ರೊ...!

ನನ್ನ ಮೇಲೆ ನಂಬಿಗೆ ಇಡಿ.. ಸಾಕು..!!..!..."

ಬಾಯಿ ಮುಚ್ಚಿಸಿದ...

ನನಗೂ ಸಹ ಸಂಶಯ ಬಂತು...

ಈ ನಾಗು ಏನು ಮಾಡಬಹುದು....?


ಆದರೆ ನಂಬಿಕಸ್ಥ .....ಹೇಳಿದ ಮೇಲೆ ಮಾಡಿ ತೋರಿಸ್ತಾನೆ...!

ಎಂದು ಸುಮ್ಮನಾದೆ...

ರೂಮಿಗೆ ಮರಳಿದೆವು....

ಕತ್ತಲೆಯಾಗಿತ್ತು....

" ಲೋ... ತೆಂಗಿನಕಾಯಿ... ನನ್ನ ಸಂಗಡ ಬಾ..

ಸೀತಾರಾಮನಿಗೆ ಆತಂಕ...

"ಎಲ್ಲಿಗೋ..."

ಸುಮ್ನೆ ಬಾರೊ.."

ಆಮೇಲೆ ಉಮಾಪತಿಗೆ ಹೇಳಿದ..

" ಮೊದಲು ಈ ತೆಂಗಿನಕಾಯಿಗೆ ಪರಿಹಾರ ಕೊಡ್ತೇನೆ..

ಆಮೇಲೆ ನಿನಗೆ....

ಈತ ಬಹಳ ಡೀಪಾಗಿ ಹಚ್ಕೊ ಬಿಟ್ಟಿದಾನೆ..

ಇವಂದೇ ಕಷ್ಟ...

ಉಮಾಪತಿದು ಕಷ್ಟವೇನಿಲ್ಲ..

ಪ್ರಕಾಶು ನೀನು ಇಲ್ಲೇ ಇರು.."


ಒಳ್ಳೆ ಡಾಕ್ಟರ ಥರ ಮಾತಾಡಿ....

ಸೀತಾರಾಮನನ್ನು ಕರೆದು ಕೋಡು ಭಟ್ಟರ ಮನೆಯ ಹಿಂದೆ ಬೆಟ್ಟಕ್ಕೆ ಹೋದ....

ಅಮವಾಸ್ಯೆ ಬೇರೆ...!

ಈ ಕತ್ತಲಲ್ಲಿ ಸೀತಾರಾಮನಿಗೆ ಏನು ಮಾಡ್ತಾನೆ...?

ನನ್ನ ತಲೆಯಲ್ಲ ಧಿಮ್ಮ್ ಎಂದಿತು....

ನಂಗೆ ಗೊತ್ತಿಲ್ದೇ ಇರೋದು ಇವ ಏನು ಮಾಡ್ತಾನೆ...?

ಹದಿನೈದು ನಿಮಿಷ.. ಆಯಿತು....

ಅರ್ಧ ತಾಸು ಆಯಿತು...

ಬರಲಿಲ್ಲ.....


ಒಂದು ತಾಸಾಯಿತು......

ಸೀತಾರಾಮ ಓಡೋಡಿ ಬಂದ...

ತಲೆಯನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದ...

ಏನೂ ಮಾತಾಡೋ ಸ್ಥಿತಿಯಲ್ಲಿರಲಿಲ್ಲ.....

"ಏನೋ ಆಯಿತು...!!?? ?
ಯಾಕೋ ಒಂಥರಾ ಇದ್ದೀಯಾ..?

ನಾಗು ಎಲ್ಲೋ..?"

ನಾವು ಗಾಭರಿಯಿಂದ... ಕೇಳಿದೇವು...

ಸೀತಾರಾಮ ಲಗುಬಗೆಯಿಂದ ರೂಮಿನ ಬಾಗಿಲು ಹಾಕಿಕೋಂಡ....!

" ನೋಡ್ರೊ ನನ್ನ ಏನೂ ಕೇಳ್ಬೇಡಿ...

ನೀವಿಬ್ಬರೂ ಬೆಟ್ಟದ ಮೇಲೆ ಹೋಗಿ.....

ನಾಗೂ ಬರ್ಲಿಕ್ಕೆ ಹೇಳಿದಾನೆ..."

ರೂಮಿನ ಒಳಗಿಂದಲೆ ಹೇಳಿದ...

ಉಮಾಪತಿಗೆ ಆತಂಕ...!

" ಯಾಕೊ ಏನು ಪರಿಹಾರ ಕೊಟ್ಟಿದ್ದಾನೆ..?

ಏನಾದರೂ .. ಎಡವಟ್ಟು ಆಯಿತೇನೋ...? .?"

ಜೋರಾಗಿ ಕೂಗಿ ಕೇಳಿದ...


" ಆ ನಾಗೂನೊ....!

ಅವನ ಐಡಿಯಾನೊ..!

ಅದೆಂಥಾ.... ಪರಿಹಾರನೊ..!

ಗೊತ್ತಾಗ್ತಾಇಲ್ಲ.. !

ಆದ್ರೆ ಆ ಹುಡುಗಿನ ತಲೆಯಿಂದ ತೆಗಿದಿದ್ದಾನೆ...!

ಹೊಗ್ರೊ... ನನಗೆ ಓದ್ಕೊ ಬೇಕು..."

ಸೀತಾರಾಮ... ಮತ್ತೆ... ಕೂಗಿ ಹೇಳಿದ...

" ಆ ಮೊಗೆಕಾಯಿ ....

ನನಗೆ ಇಂದಿನಿಂದ .". ಅತ್ತಿಗೆ.." ಕಣ್ರೊ...

ನನಗಂತೂ... ಆ ಹುಡುಗಿ ಬೇಡವೆ ಬೇಡ ಕಣ್ರೋ..!!.!..."

ಒಂಥರಾ ಮಾತಾಡಿದ...

ನಮಗೆ ಆಶ್ಚರ್ಯವೋ.. ಆಶ್ಚರ್ಯ...!!

ನಮಗೆ ಇನ್ನೂ ಒಗಟಾಗಿಯೇ ಉಳಿಯಿತು...

ಉಮಾಪತಿಗೆ ಖುಷಿಯಾಯಿತು..

ಅವನು " ಅತ್ತಿಗೆ " ಅಂದಿದ್ದಕ್ಕೊ ...

ಅಥವಾ ನಾಗು ಪರಿಹಾರ ಕೊಟ್ಟಿದ್ದಕ್ಕೊ ..

ಗೊತ್ತಾಗಲಿಲ್ಲ....

ನಾನು ಉಮಾಪತಿ ಲಗುಬಗೆಯಿಂದ ಬೆಟ್ಟ ಹತ್ತಿ ಬಂದೆವು ..

ನಾಗು ಒಂದು ಮರದ ಕೆಳಗೆ ಕುಳಿತು ಕೋಂಡಿದ್ದ...

" ಉಮಾಪತಿ... ಇಲ್ಲಿ ಬಾ... ಕುತ್ಗೊ..."

ನಾಗು ಅವನನ್ನು ತನ್ನ ಬಳಿ ಕುಳ್ಳಿರಿಸಿ ಕೊಂಡ...

" ನೋಡು ನಾನು ಹೇಳುವದನ್ನು ನಿಧಾನವಾಗಿ ಕೇಳ ಬೇಕು ..

... ಕಣ್ಣು ಮುಚ್ಚಿಕೊಂಡು...

ಏಕಾಗ್ರತೆಯಿಂದ.. ಕೇಳ ಬೇಕು......"


ಉಮಾಪತಿ ಹಾಗೆ ಮಾಡಿದ...

ಸುತ್ತಲೂ ಕತ್ತಲು...

ಅಗಾಧ ಮೌನ....

ನಾಗುವಿನ ಮಾತೊಂದೆ ಅಲ್ಲಿ... ಶಬ್ಧ....

ನಾಗು ಬಹಳ ಗಂಭಿರವಾದ ಧ್ವನಿಯಲ್ಲಿ ..ಹೇಳ ತೊಡಗಿದ....

" ಕಣ್ಮುಚ್ಚು... ಉಮಾಪತಿ....

ನಾನು ಹೇಳುವದನ್ನೆ ಕೇಳು...

ಆ ಮೊಗೆಕಾಯಿಯ ಮುಖ ನೆನಪು ಮಾಡಿಕೊ.....

ಅವಳು ಬಾಯಿ ತೆಗೆಯುತ್ತಿದ್ದಾಳೆ...ಅಂದು ಕೊ....

ಬಾಯೆಲ್ಲ... ಗಲೀಜು...

ಹಲ್ಲಿನ ಒಸಡು.. ಹುಳಿತ ಹಲ್ಲು...

ಬಾಯಿ ನಾರಿ ಗಬ್ಬು ವಾಸನೆ... ..

ಅವಳ ಮೂಗು... ನೆಗಡಿಯಾಗಿದೆ...

ಗೊಣ್ಣೆ... ಮೂಗಿನಲ್ಲಿದೆ....

ಆ ಗೊಣ್ಣೆ...ಅರ್ಧ ಹೊರಕ್ಕೆ ಬಂದಿದೆ...

ಗಟ್ಟಿಯಾಗಿ.. ಹಳದಿ ಕಲರ್ ಆಗಿದೆ...

ಅದು ಮೇಲಿನ ತುಟಿಯ ಹತ್ತಿರ ಬಂದಿದೆ....

ಸುರಕ್ಕನೆ ಒಳ್ಗೆ ಎಳೆದು ಕೋಂಡಿದ್ದಾಳೆ...

ಗೊಣ್ಣೆ ಮೂಗಿನ ಸುತ್ತಲೂ.. ತಾಗಿದೆ.....

ಆ... ಸಿಂಬಳ...ಆ ಜೋಲುತ್ತಿರುವ.. ಲೋಳೆ....

ಗಲೀಜಾಗಿದೆ.... ಆ ಆಮೊಗೆಕಾಯಿ.ಮುಖ... .."

ಮತ್ತೆ ಅವಳ.. ಕೈ ಕಾಲ ಮೇಲೆ ಕಜ್ಜಿಯಾಗಿದೆ....

ಹುಳು ಕಜ್ಜಿ ರಸಿಕೆಯಾಗಿದೆ.....

ಕೀವು ಎಲ್ಲ ಮೈಯಲ್ಲಿ ತುರುಕೆ ಆಗುತ್ತಿದೆ...

ಮೈ ತುರಿಸಿ ಕೊಳ್ಳುತ್ತಿದ್ದಾಳೆ....

ಈಗ ಅವಳು ಟೊಯ್ಲೆಟ್ ನಲ್ಲಿದ್ದಾಳೆ....

ಕಜ್ಜಿ...ಯಾಗಿದೆ..

ಅದೇ ಕೀವು ,,,ರಸಿಗೆ.......!!

ಒಂದುಸಾರಿ ಎಲ್ಲ ....

ನೆನಪಿಸಿಕೊ.....

ಅಮಾಪತಿ....

ಅವಳ.... ಈ.. ಸ್ಥಿತಿಯಾ....!!..."

ನಾಗು ಇನ್ನು ಹೇಳುವವನಿದ್ದ......


ಉಮಾಪತಿ...ಹಾರಿ ಜಿಗಿದ....!!

ತಲೆಯನ್ನು ಗಟ್ಟಿಯಾಗಿ .. ಎರಡೂ...ಕೈಯಿಂದ..ಹಿಡಿದು ಕೊಂಡಿದ್ದ...!


" ಸಾಕೊ... ಮಾರಾಯಾ... ಸಾಕು.....!

ನಿಲ್ಲಿಸು... ಮಾರಾಯಾ..!

ನನ್ನಿಂದ ತಡೆದು ಕೊಳ್ಳಲಾಗುತ್ತಿಲ್ಲ...!!..."

ಎನ್ನುತ್ತ ಉಮಾಪತಿ....

ಎದ್ದೂ ಬಿದ್ದೂ ಓಡಿದ... ರೂಮಿನ ಕಡೆಗೆ........


ನಾಗು... ನನ್ನ ಕಡೆ...ನೋಡಿ

"ನಿನಗೆ " ವಿಜಯಾ...".... ತೊಂದರೆ ಇದೆಯೇನೋ..?...!.."

ಕೇಳಿದ...


" ಇಲ್ಲೊ ....ಪುಣ್ಯಾತ್ಮಾ...!

ಛೇ... ..ಎಂಥಾ ಮನುಷ್ಯನೊ... ನೀನು...?

ಉಮಾಪತಿಗೆ ಐದು ನಿಮಿಷ...ಮಾತಾಡಿದೆ...!

ಓಡಿ ಹೋಗಿಬಿಟ್ಟ...!

ಆ ಸಿತಾರಾಮನಿಗೆ ಒಂದು .. ತಾಸು..ಕೊರಿದ್ದಿಯಾ....!

ಏನಾಗಿರ ಬಹುದು ಅವನಸ್ಥಿತಿ..?... "ನಾಗು ಹತ್ತಿರ ಬಂದು ನನ್ನ ಕೈಯನ್ನು ಹಿಡಿದು ಕೊಂಡು....

"ಲೋ ಪ್ರಕಾಶು... ಆ ... " ಮೊಗೆಕಾಯಿ " ನಾನು ಪ್ರೀತಿಸುತ್ತೇನೆ ಕಣೊ...

ನನಗೆ ಅವಳು ಬೇಕು ಕಣೊ..!!

ನೀನು ಸಹಾಯ ಮಾಡೊ.!!..."

ನನ್ನ ದುಂಬಾಲು ಬಿದ್ದ...!


.. ಆ..ಮೊಗೆಕಾಯಿಯ.. .. ಹೆಸರು... ".. ರಾಜಿ.."..!!..

ಬೊಗಸೆ ಕಣ್ಣಿನ...

ಬಲು ಸುಂದರ ಹುಡುಗಿ....!


ನಾಗೂ..ದೂ ಅವಳದೂ... ದೊಡ್ಡ ಕಥೆಯೇ..ಇದೆ...!!

ಪಾಪ......!!

ಆ ಸಿತಾರಾಮಾ, ಉಮಾಪತಿ..

ಇಬ್ಬರೂ....

ಮತ್ತೆ ಆ " ಮೊಗೆಕಾಯಿಯ.. " ಹೆಸರು ಹೇಳಲಿಲ್ಲ...!!


( ಈ .. ಮೊದಲು ಬರೆದ...

ನಾಗುವಿನ ಹಾಡು ಮತ್ತು ಚಪಾತಿ..
http://ittigecement.blogspot.com/2008/12/blog-post_23.html
ನನಗೊಂhttp://ittigecement.blogspot.com/2008/11/blog-post_07.htmlದು ಮಹದಾಸೆ..."

ನಗುವವರ ಮುಂದೆ ಎಡವಿ ಬೀಳ ಬೇಡ...
http://ittigecement.blogspot.com/2008/12/blog-post_14.html

ಓದಿದರೆ "ನಾಗು " ಪರಿಚಯ ಆಗುತ್ತದೆ...)

51 comments:

Kishan said...

keke...keke....
keke...kkekeke.. :)

Kishan said...

the suspense well kept till the end and narrated very well in your usual humorous and hilarious manner! You seem to have censored few other details which happened in reality ;)

Ashok Uchangi said...

ಮಸ್ತ್ ಆಗಿದೆ.ಓದುವಾಗ ಕ್ಲೈಮಾಕ್ಸ್ ಅನ್ನು ಕಲ್ಪಿಸಿಕೊಂಡಿದ್ದೆ....ನಾಗು-ಮೊಗೆಕಾಯಿ ‘ನಡುವಣ’ಸರಸ ಸಲ್ಲಾಪದ ಲೈವ್ ಟೆಲಿಕಾಸ್ಟ್ ನೋಡಿ ಇಬ್ಬರ ಬುದ್ದಿಯೂ ನೆಟ್ಟಗಾಗುತ್ತೆ ಅಂದುಕೊಂಡಿದ್ದೆ...ಆದರೆ ನಿಮ್ಮ ನಾಗು
" ಖರಾಬ್ " ಕಂಡ್ರಿ!!
ಕಡೆಗೆ ಮೊಗೆಕಾಯಿ ಯಾರ ಬುಟ್ಟಿಗೆ?
ಅಶೋಕ ಉಚ್ಚಂಗಿ
http://mysoremallige01.blogspot.com/

ಸಿಮೆಂಟು ಮರಳಿನ ಮಧ್ಯೆ said...

ಕಿಶನ್.....

ಈ ನಾಗು ಬಲು "ಪಾಕಡ" ಇದ್ದಾನೆ....

ನನಗಂತೂ ದೊಡ್ಡ "ಷಾಕ್"

ಅವನ ಮತ್ತು "ರಾಜಿ" ಲವ್..!

ಕೆಲವೊಂದನ್ನು ಸೆನ್ಸರ್ ಮಾಡಲೇ ಬೇಕಾಯಿತು..

ಅದು ಅನಿವಾರ್ಯ ಕೂಡ.. ಆಗಿತ್ತು...

ನಿಮಗೆ ನಾಗುವಿನ "ಪರಿಹಾರ" ಇಷ್ಟವಾಗಿದ್ದಕ್ಕೆ ಧನ್ಯವಾದಗಳು...!

ಸಿಮೆಂಟು ಮರಳಿನ ಮಧ್ಯೆ said...

ಅಶೋಕ್.....

ನಾಗು "ರಾಜಿ " ಇಷ್ಟಪಟ್ಟಿದ್ದು ನಮಗೆಲ್ಲ... ಷಾಕ್..!

ಉಮಾಪತಿ, ಹಾಗೂ ಸೀತಾರಾಮ್ ಇಬ್ಬರೂ ಪಾಸ್ ಆದರು...

ನಾನು ಫೇಲ್ ಆಗಿದ್ದೆ...

ಅನಂತರ ನಾವೆಲ್ಲ ಸಿರ್ಸಿ ಕಾಲೇಜಿಗೆ ಹೋಗಿದ್ದು...

"ರಾಜಿ, ಮತ್ತು ನಾಗುವಿನ ಪ್ರೇಮ ಕಥೆ " ಇನ್ನೊಮ್ಮೆ ಬರೆಯುವೆ...

ನಾಗುವಿನ ಪರ್ಮಿಷನ್ ತಗೊ ಬೇಕು.. ಸರ್.....

ಪ್ರತಿಕ್ರಿಯೆ ಧನ್ಯವಾದಗಳು...

sunaath said...

ಪ್ರೇಮರೋಗಕ್ಕೆ ಒಳ್ಳೆ effective ಪರಿಹಾರ ಕಂಡು ಹೀಡಿದಿದ್ದೀರಿ. Good prescription!

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ನಿಮ್ಮ ಮೆಚ್ಚುಗೆ ನನಗೊಂದು ಗರಿಮೆ....

ಸರ್ ...

ಆ ಕಾಲೇಜಿನ ದಿನಗಳೇ ಹಾಗೆ....
ಬಹಳ ಮಜ ಇದ್ದವು...

ಆ ನಾಗುವಿನ "ತುಂಟತನ" ಲೆಕ್ಕವಿಲ್ಲದಷ್ಟು...

ಉಮಾಪತಿಯೂ ಸಿದ್ದಾಪುರ ಬಿಟ್ಟು ಸಿರ್ಸಿ ಕಾಲೇಜಿಗೆ ಬಂದ..
ಹಾಗೆಯೇ ಸೀತಾರಾಮ ಕೂಡ...
ಇನ್ನೊಂದು ಮಜಾ ಅಂದರೆ...

" ರಾಜೀಯೂ " ಸಿರ್ಸಿ ಕಾಲೇಜಿಗೆ ಬಂದು ಬಿಟ್ಟಿದ್ದಳು...!

ಮತ್ತೆ ಬೇಡ ಬೇಡವೆಂದರೂ ನಾವೆಲ್ಲ ಸಿರ್ಸಿಯಲ್ಲಿ ಸೇರಿಬಿಟ್ಟಿದ್ದೇವು...

ಸರ್...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹಿತ್ತಲಮನೆ said...

ಹಹ್ಹಹ್ಹ... ಎಂಥಾ twistu !

shivu said...

ಹ....ಹ....ಹ....

"ಹೀಗೂ ಉಂಟೇ"........

ಎಲ್ಲವೂ ಲೈವ್ ಆಗಿ ನೋಡಿದಂತಾಯ್ತು.....

ಮೊಗೆಕಾಯಿ ಹೆಸರು ತುಂಬಾ ಚೆನ್ನಾಗಿದೆ....ನಮ್ಮ ದಿನಪತ್ರಿಕೆಯ ಯಾವುದಾದರೂ ಏಜೆಂಟರಿಗೋ ಅಥವ ಹುಡುಗರಿಗೊ ಇಡಲು ಸೂಕ್ತವಾಗಿದೆ.....

ಒಬ್ಬ ವ್ಯಕ್ತಿಯ ಚಿತ್ರವನ್ನೇ ತಲೆಯಿಂದ ತಲೆಗೆ ಬದಲಾಯಿಸಿಬಿಡುತ್ತಾನೆಂದರೆ ನಿಮ್ಮ ನಾಗು ಅಸಮಾನ್ಯನೇ ಸರಿ....ಇಂಥವರು ಪ್ರಸ್ತುತ ಪ್ರಪಂಚಕ್ಕೆ ಬೇಕೆ ಬೇಕು...

ಲೇಖನ ನಿಮ್ಮ ಶೈಲಿಗೆ ಧೀರ್ಘವಾದರೂ ಓದಿಸಿಕೊಂಡು ಹೋಗುತ್ತದೆ.....ಮುಂದುವರಿಸಿ...ಥ್ಯಾಂಕ್ಸ್...

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಕ್ಕು ನಕ್ಕು ಸಾಕಾಯ್ತು, ಹೇಗಾದರು ಮಾಡಿ ನಾಗು ರವರ ಅನುಮತಿ ಪಡೆದು ಮುಂದುವರಿಸಿ ಬಿಡಿ. ಕ್ಲೈಮ್ಯಾಕ್ಸ್ ಅಂತು ಮುಂದೇನಾಗುತ್ತೆ ಎಂಬ ಹಂತದಲ್ಲಿ ನಿಲ್ಲಿಸಿ ನಮ್ಮಲ್ಲಿ ಕುತೂಹಲ ಹೆಚ್ಚಿಸಿ ಬಿಟ್ಟಿದ್ದೀರಿ. ಬೇಗ ಬರೆಯಿರಿ ಕಾಯುತ್ತಿರುತ್ತೇವೆ.
-ರಾಜೇಶ್ ಮಂಜುನಾಥ್

ಸಿಮೆಂಟು ಮರಳಿನ ಮಧ್ಯೆ said...

ಹಿತ್ತಲಮನೆಯ ಬೀಗಣ್ಣನವರೆ....

ನಿಮಗೆ ಒಮ್ಮೆ "ಒಗ್ಗರಣೆ" ಇಲ್ಲದೆ...

ಇದನ್ನು ಹೇಳಿದ್ದ ನೆನಪಿದೆ...

ಬಹಳಷ್ಟು ಸೆನ್ಸರ್ ಮಾಡಿದೆ....

ನಾಗು ಮತ್ತು ರಾಜಿಯ ಪ್ರೇಮ ಕಥೆ ಬರೆಯಲು ಒತ್ತಡ ಇದೆ...

ಬರೆಯೋಣ .. ಮತ್ತೆ ಯಾವಗಾಲಾದರೂ...

ಉಮಾಪತಿಯ "ಲವ್ " ಇಷ್ಟ ಪಟ್ಟಿದ್ದಕ್ಕೆ ಅಭಿನಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್....

ಈ ನಮ್ಮ ನಾಗು ಯೋಗಾಭ್ಯಾಸದ ...

ಯಾವುದೊ ಕೋರ್ಸ್ ಮಾಡಿದ್ದ...

ಅಲ್ಲಿ ಧ್ಯಾನ ಮಾಡಲು ಹೇಳಿಕೊಟ್ಟಿದ್ದನ್ನು ..

ಇಲ್ಲಿ " ಉಮಾಪತಿ, ಸೀತಾರಾಮನ" ಮೇಲೆ ಪ್ರಯೋಗಿಸಿದ್ದ...

ನಾಗು " ಮೊಗೆಕಾಯಿಯ " ಹಿಂದೆ ಬಿದ್ದುದು ಪರೀಕ್ಷೆಯ ಮೊದಲೆ ..
ಎಲ್ಲರಿಗೂ ಗೊತ್ತಾಗಿ ಹೋಯಿತು...

ಉಮಾಪತಿ, ಹಾಗು ಸೀತಾರಾಮ...
ನಾಗು ಹತ್ತಿರ "ಡಬಲ್" ವಸೂಲಿ ಮಾಡಿದರು...

ನಾಗೂ ಪ್ರಯೋಗ "ENJOY.. " ಮಾಡಿದ್ದಕ್ಕೆ ವಂದನೆಗಳು...

ಮನಸು said...

ಪ್ರೇಮರೋಗಕ್ಕೆ ಒಂದು ಮದ್ದು.........
ಹ ಹ ಹ ಬಲು ವಿಶೇಷವಾಗಿದೆ ನಿಮ್ಮ ಕಾಲೇಜಿನ ಜೀವನ ಹ ಹ ... ಅಂದಿನ ಅವರೆಲ್ಲರ ಸ್ಥಿತಿ ಪಜೀತಿ ಆದರೆ ನಿಮ್ಮ ಇಂದಿನ ಲೇಖನದ ಮೂಲಕ ನಮಗೆ ನಗು ಕುಶಿ ಹಾಸ್ಯ ಎಲ್ಲವನ್ನು ಒಮ್ಮೆಲೇ ಕೊಟ್ಟಿದ್ದೀರಿ...

ಕಛೇರಿಯಲ್ಲಿ ಕೂತು ನಗುವಾಗ ಎಲ್ಲರ ಕಣ್ಣು ನನ್ನ ಮೇಲಿತ್ತು ಹ ಹ ಹ ........ನಿಮ್ಮ ಬಂಡಾರದಲ್ಲಿ ಇನ್ನು ಎಷ್ಟು ಕಥೆಗಳಿವೆ........

ವಂದನೆಗಳು...

ಚಂದ್ರಕಾಂತ ಎಸ್ said...

ಕಥೆ ತುಂಬಾ ಚೆನ್ನಾಗಿದೆ. ಮನಸ್ಸಿನ ಮೂಲೆಯಲ್ಲಿ ನಾಗು ರಾಜಿಯನ್ನು ಇಷ್ಟಪಟ್ಟಿರುತ್ತಾನೆ ಅನ್ನಿಸಿತ್ತು. ಆದರೂ ಓದಿಸಿಕೊಂಡು ಹೋಯಿತು

)ಕನ್ನಡಪ್ರಭ ಪತ್ರಿಕೆಯ ವಿದ್ಯಾ ಅವರು ನಿಮ್ಮ e - mail ಕೇಳಿದ್ದರು ನಿಮ್ಮ profile ನಲ್ಲಿದ್ದ id ಕೊಟ್ಟಿರುವೆ. ಅವರು ನಿಮಗೆ ಮೇಲ್ ಕಳಿಸಬಹುದು.)

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್...

ಯೋಗ ಕ್ಲಾಸ್ ನಲ್ಲಿ ಕಣ್ಣು ಮುಚ್ಚಿಸಿ ಕೆಲವಷ್ಟನ್ನು ಕಲ್ಪಿಸಿ ಕೊಳ್ಳಲು ಹೇಳುತ್ತಾರೆ..

"ಆಕಾಶ, ಪರಮಾತ್ಮಾ, ದೇವರು ಅಂತೆಲ್ಲ ಹೇಳಿ ಧ್ಯಾನ ಮಾಡಿಸುತ್ತಾರೆ..

ಅದೇ ಥರ ಈ ನಾಗು ..

ರಾಜಿಯ ಪ್ರೇಮಿಗಳಿಬ್ಬರ ಮೇಲ್ " ಇದನ್ನು " ಪ್ರಯೋಗಿಸಿದ...

ಮಹಾ ಚಾಲು ನನ್ಮಗ..!

ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು...

ನಾನು ಗೆದ್ದೆ...

ಏಕೆ ಗೊತ್ತಾ..?

ನನ್ನೀ ಬರಹಕ್ಕೆ ಹೆಣ್ಣುಮಕ್ಕಳು ಪ್ರತಿಕ್ರಿಯೆ....
ಕೊಡುವದಿಲ್ಲ ಎಂದು ನನಗೂ , ನನ್ನ ಮಡದಿಗೂ ಬೆಟ್ ಇತ್ತು...

ನೀವು ಅದನ್ನು ಸುಳ್ಳು ಮಾಡಿದ್ದಕ್ಕೆ ಧನ್ಯವಾದಗಳು..

ನನ್ನನ್ನು "ಪ್ರಕಾಶಣ್ಣ " ಎನ್ನುವ ಬ್ಲೊಗ್ ಸಹೋದರಿಯರು ಈಮೇಲ್ ಕಳಿಸಿದ್ದರು...
(ಅವರಮೇಲೆ ಖಂಡಿತ.. ಬೇಜಾರಿಲ್ಲ..! ದೇವರಾಣೆಗೂ..!!)
ಆದರೆ ಇಲ್ಲಿ ಪ್ರತಿಕ್ರಿಯೆ ಕೊಟ್ಟು ..
ಮಸ್ತ್ ಮಜಾ ಮಾಡಿದ್ದಕ್ಕೆ ..(ನನ್ನನ್ನು ಗೆಲ್ಲಿಸಿದ್ದಕ್ಕೆ)
ಕ್ರತಜ್ನತೆಗಳು..
ಧನ್ಯವಾದಗಳು...

ನಿಮಗೊಂದು ಕುತೂಹಲಕಾರಿ ವಿಷಯ ಹೇಳುವೆ ಕೇಳಿ...

"ರಾಜಿ" ನನಗೆ.. ಈಮೇಲ್ ಮಾಡಿ.. ಮುನಿಸಿ ಕೊಂಡಿದ್ದಾರೆ...

ಹೀಗೆ ಬರುತ್ತಾ ಇರಿ..

ಮತ್ತೊಮ್ಮೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚಂದ್ರಕಾಂತರವರೆ...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...

ಇದೂ ಕೂಡ ಸತ್ಯ ಘಟನೆ..
ಸ್ವಲ್ಪ ಒಗ್ಗರಣೆ, ಮಸಾಲೆ ಸೇರಿಸಿದ್ದೇನೆ...
ಬಹಳಷ್ಟು " ಸೆನ್ಸಾರ್" ಮಾಡಿದ್ದೇನೆ...

ನೀವು ಕೊಡುವ ಪ್ರೋತ್ಸಾಹಕ್ಕೆ..

ಹೇಗೆ ಕ್ರತಜ್ನತೆ ಅರ್ಪಿಸಲಿ..?

ಗೊತ್ತಾಗುತ್ತಿಲ್ಲ...

ಧನ್ಯ...

ಧನ್ಯವಾದಗಳು...

Lakshmi S said...

ಸಕತ್ ಖಿಲಾಡಿ ನಿಮ್ಮ ಸ್ನೇಹಿತ !ಒಳ್ಳೇ ಕಥೆ.

ಪಾಲಚಂದ್ರ said...

:) ಕಾಲೇಜು ದಿನಗಳೆಲ್ಲಾ ನೆನಪು ಮಾಡ್ತಾ ಇದೀರಲ್ರಿ

ಸಿಮೆಂಟು ಮರಳಿನ ಮಧ್ಯೆ said...

ಲಕ್ಶ್ಮೀಯವರೆ...

ಹೆಣ್ಣುಮಕ್ಕಳು ಇದಕ್ಕೆ ಪ್ರತಿಕ್ರಿಯೆ ಕೊಡುವದಿಲ್ಲ....

ಎನ್ನುವದನ್ನು ಸುಳ್ಳಾಗಿಸಿ...!

ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು..!


ನಮ್ಮ ನಾಗು ಇಲ್ಲೇ ಬೆಂಗಳೂರಲ್ಲೇ ಇದ್ದಾನೆ...

ದಿನಾಲೂ ನನ್ನ ಬ್ಲೋಗ್ ನೋಡುತ್ತಾನೆ...

ಆದರೆ..
ಸಂಸಾರದ ಜಂಜಡದಲ್ಲಿ, ಸಿಲುಕಿ...

ಮೊದಲಿನ... ಹಾಸ್ಯ, ಹರಟೆ.. ಕಡಿಮೆಯಾಗಿಬಿಟ್ಟಿದೆ...

ನಗುವೂ ಕಡಿಮೆಯಾಗಿಬಿಟ್ಟಿದೆ...

ತೇಜಸ್ವಿನಿ ಹೆಗಡೆ- said...

ಪ್ರಕಾಶಣ್ಣ,

ನಾನು ಮೈಲ್ ಮಾಡ್ತಾ ಇಲ್ಲಾ.. ಡೈರೆಕ್ಟ್ ಕಮೆಂಟ್ ಹಾಕ್ತಾ ಇದ್ದೀನಿ. ಅತ್ತಿಗೆಗೆ ಬೇಜಾರಿಲ್ಲ ತಾನೇ? (ಅವರನ್ನು ಸೋಲಿಸಿದ್ದಕ್ಕೆ:) ).

ಇನ್ನು ಮುಂದೆ ಮೊಗೆಕಾಯಿ ಕಲ್ಲಜ್ಜಿಯನ್ನೋ, ಹುಳಿಯನ್ನೋ ಮಾಡುವಾಗಲೆಲ್ಲಾ ರಾಜಿಯೊಮ್ಮೆ ನೆನಪಾಗುತ್ತಾರೆ. ಜೊತೆಗೆ ನಾಗು ಕೂಡಾ...ಮೊಗೆಕಾಯಿಯಮೇಲಾಣೆ :)

ತುಂಬಾ ಕುತೂಹಲದಿಂದ ಓದಿಸಿಕೊಂಡಿತು. ಭರ್ತಿ ಊಟ ಮಾಡಿಕೊಂಡು ಓದಲು ಕುಳಿತಿದ್ದೆ. ಕೊನೆ ಕೊನೆಗೆ ಬರುವಾಗ ಹೊಟ್ಟೆಯೊಳಗಿಂದೆಲ್ಲಾ ಒಮ್ಮೆ ಹೊರಬರುವಂತಾಗಿ ಬಿಟ್ಟಿತ್ತು!!!

ಸರಸತ್ತೆ ಪೋಸ್ಟ್ ಯಾವತ್ತು?! :)

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪ್ರಕಾಶ್, ಸಿಕ್ಕಾಪಟ್ಟೆ ನಗು ಬರ್ತಾ ಇದ್ದು.. ಕಲೀಗ್ಸು ನನ್ನೇ ಕೆಕ್ಕರಿಸಿಗ್ಯಂಡು ನೋಡ್ತಾ ಇದ್ದ - ಎಂತಾ ಆತು ಇದ್ಕೆ ಹೇಳಿ.. :)
ನಾಗು, ತೆಂಗಿನಕಾಯಿ ತಲೆಯವ್ವ, ಉಮಿ, ನೀವು - ನಿಂಗಳ ಪಟಾಲಮ್ಮು ಸೂಪರ್ರು!

ಸಿಮೆಂಟು ಮರಳಿನ ಮಧ್ಯೆ said...

ಪಾಲಚಂದ್ರ...

ಉಮಾಪತಿ ಬಹಳ ಸಭ್ಯ ಮನುಷ್ಯ..

ನಾಗುವಿನ "ಟ್ರೀಟ್ಮೆಂಟ್" ನಂತರ ಮಂಕಾಗಿ ಬಿಟ್ಟಿದ್ದ..

ಇನ್ನು ಸೀತಾರಾಮ ಎರಡು, ಮೂರು ದಿನಗಳವರೆಗೂ ...

ಯಾರಬಳಿಯೂ ಮಾತಾಡುತ್ತಿರಲಿಲ್ಲ..

ಆಗಾಗ.."ಛೇ.. ಛೇ.." ಅನ್ನುತ್ತ ತಲೆ ಕೊಡವಿ ಕೊಳ್ಳುತ್ತಿದ್ದ...

ಪ್ರತಿಕ್ರಿಯೆಗೆ ಧನ್ಯವಾದಗಳು..

ಚಿತ್ರಾ said...

ಅಯ್ಯಯ್ಯೋ ಪ್ರಕಾಶ್,
ನಂಗೆ ಮೊಗೆಕಾಯಿ ಪಳಿದ್ಯ ರಾಶಿ ಪ್ರೀತಿ. ನಿಮ್ಮ ವರ್ಣನೆ ಓದಿ , ನಂಗೆ ಈಗ ’ಮೊಗೆಕಾಯಿ ’ನೋಡಿದ್ರೆ ಹೊಟ್ಟೆಲೆಲ್ಲ ಒಂಥರ ಆಗ ನಮನಿ.
ನಿಮ್ಮ ನಾಗೂ ಪರಿಹಾರ ಚೊಲೋ ಇತ್ತು. ಮತ್ತೆ ನೀವೂ ಲಿಸ್ಟಲ್ಲಿ ಸೇರ್ಕ್ಯಂಡಿದ್ರೆ ಇನ್ನೂ ಮಜಾ ಬರ್ತಿತ್ತೇನ !!! ಹ ಹ ಹ

ಮನಸು said...

ಸರ್....

ಹೆಣ್ಣಾಗಲಿ ಗಂಡಾಗಲಿ ವಾಸ್ತವ ಅರ್ಥ ಮಾಡಿಕೊಳ್ಳಲೇ ಬೇಕಲ್ಲವೇ...? ಅಂದು ನಡೆದಿದ್ದು ಹೆಣ್ಣಿಗಾಗಿ ... ಇದರಲ್ಲಿ ಮುಜುಗರವೇ ಇಲ್ಲ.
ತಮ್ಮದನ್ನು ಬೇರೆಯವರು ಪಡೆಯುತ್ತಾರೆಂದು ನಿಮ್ಮ ಸ್ನೇಹಿತ ಹೇಗೋ ಮಾಡಿ ಅವರಿಂದ ತಪ್ಪಿಸಲು ಮಾಡಿದ ಅವಾಂತರ ಬಲು ಚೆನ್ನ ...

ಸಿಮೆಂಟು ಮರಳಿನ ಮಧ್ಯೆ said...

ತೇಜಸ್ವಿನಿ....

ಚಂದವಿರುವ ಹೆಣ್ಣುಮಕ್ಕಳನ್ನು ಮರೆಯುವದು ಹೇಗೆ...?

" ಇದು " ನಾಗುವೇ ಕಂಡು ಕೊಂಡ ದಾರಿ...

ಹೆಣ್ಣುಮಕ್ಕಳೂ....ಇದೇ..ತತ್ವ ಉಪಯೋಗಿಸಿಕೊಳ್ಳಬಹುದಲ್ಲ...!

"ನೆಗಡಿಯಷ್ಟು " ಗಲೀಜು , ಅಸಹ್ಯಕರವಾದದ್ದು ಇನ್ನಿಲ್ಲ ಅಂದುಕೊಂಡಿದ್ದೇನೆ...

ಎಷ್ಟೇ ಚಂದವಿರಲಿ...

ಐಶ್ವೈರ್ಯ ರೈ ಇರಲಿ...

ನೆಗಡಿಯಾದರೆ.. ಬಲು ಅಸಹ್ಯ... ಅಲ್ಲವಾ..?

ನಾಗುವಿನ ಸರಳ ಉಪಾಯ ನನಗಂತೂ ಇಷ್ಟವಾಗಿತ್ತು...

ದೈರ್ಯದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪೂರ್ಣಿಮಾ...


ಪ್ರೀತಿಗೆ "ಚಂದ" ಬೇಕೆ ..?

ಒಂದು ಒಳ್ಳೆಯ ಗ್ರಾಸದ ವಸ್ತು ಇದು...

ರಾಜಿಯಮುಖ ಅಸಹ್ಯಕರವಾಗಿ ಕಲ್ಪಿಸಿ ಕೊಂಡಾಗ...

ಇಅವರ "ಲವ್" ಹೊರಟು ಹೋಯಿತೆ...?

ಅಷ್ಟಾವಕ್ರನಿಗೂ "ಚಂದದ ಹುಡುಗಿಯ " ಕನಸು ಬೇಕು...!

ಚಂದ ಅಂದರೆ ಏನು..?
ಅವರವರ... ಭಾವ...

ಅವರವ ಕಣ್ಣು...

ನೀವಾದರೆ ಒಂದು ಕವನ ಬರೆದು ಬಿಡುತ್ತೀರೇನೋ...

ಬರೆಯಿರಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರಾ...

ನಾನು ನಗಿಷ್ಟವಾದ.. ನೆನಪುಗಳನ್ನು...

ಬೆಚ್ಚಗೆ ಕಾಯ್ದಿರಿಸಿ ಕೊಂಡಿರುವೆ....
ಬಾಲ್ಯದ ಗೆಳೆಯರು, ಘಟನೆಗಳು..,ಶಾಲಾ ದಿನಗಳು...ಇತ್ಯಾದಿ..

ಹಾಗೇಯೆ "ವಿಜಯಾ" ನೆನಪೂ ಕೂಡ...

ಅದೂ ಇರಲಿ...ಅಲ್ಲವಾ..?

ಸಮಯ ಸಿಕ್ಕಾಗಲೆಲ್ಲ..

ಮೆಲುಕು ಹಾಕುವಾಗ...

ಸಿಗುವ ಆನಂದ...ಯಾಕೆ ಕಳೆದು ಕೊಳ್ಳಬೇಕು..?

ನನ್ನ ಬಾಲ್ಯ, ಹರೆಯದಲ್ಲಿ ನಾಗು ಸಿಗದಿದ್ದರೆ ...
ಜೀವನ ಬಹಳ ಬೋರಾಗಿಬಿಡುತ್ತಿತ್ತೇನೋ...

ದೈರ್ಯದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು....

ನಿವೆನ್ನುವದು ನಿಜ...

ನಾನು ಒಪ್ಪುವೆ....

ಇಂದು ನನ್ನ ಮನೆಗೆ ಬಂದ ....
ಆ ದಿನಗಳ ನನ್ನ "ಸ್ನೇಹಿತ."......

ಈ ಘಟನೆಯಿಂದಾದ ಇನ್ನೂ ಕೆಲವು "ಫಜೀತಿ" ನೆನಪಿಸಿ ಹೋಗಿಬಿಟ್ಟಿದ್ದಾನೆ...

ಅದನ್ನೂ ಬರೆಯುವೆ...

ಪ್ರೋತ್ಸಾಹ ಹೀಗೆ ಇರಲಿ...

ಮತ್ತೊಮ್ಮೆ ಧನ್ಯವಾದಗಳು...

ಮುತ್ತುಮಣಿ said...

ಕಾಲೇಜು ದಿನಗಳನ್ನು ಬಹಳ ಎಂಜಾಯ್ ಮಾಡಿದ್ದೀರ ಅನ್ನಿಸುತ್ತೆ...

ಹೊಸ ರೀತಿ ಇದೆ, ನಿಮ್ಮ ಬರಹ.

ಸಿಮೆಂಟು ಮರಳಿನ ಮಧ್ಯೆ said...

ಮುತ್ತುಮಣಿ....

ನನ್ನ ಬ್ಲೋಗಿಗೆ ಸುಸ್ವಾಗತ...!

ಹಳೆಯದೆಲ್ಲ ಓದಿ....

ಖುಷಿ ಪಟ್ಟರೆ ಖುಷಿಯುಂಟು...

ಖುಷಿ ಪಡುವ ಮನಸ್ಸಿರಬೇಕು....

ಬದುಕಿದ...
ಬದುಕಿನ ಬಗೆಗೂ ಖುಷಿ ಪಡಬಹುದು....

ಸಾಯದ...

ಸಾವಿನ ಬಗೆಗೂ ಖುಷಿ ಪಡಬಹುದು....

ಖುಷಿ ಪಡುವ ಮನಸ್ಸಿರಬೇಕು....

ಪ್ರತಿಕ್ರಿಯೆಗೆ ಧನ್ಯವಾದಗಳು

ಬರುತ್ತಾ ಇರಿ...

Rams said...

Excellent, Looks like a film story !!!

ಸಿಮೆಂಟು ಮರಳಿನ ಮಧ್ಯೆ said...

ರಮೇಶ್....

ನನ್ನ ಬ್ಲೋಗಿಗೆ ಸುಸ್ವಾಗತ..

ನೀವು ನಕ್ಕಿದ್ದೀರಲ್ಲ....

ಬಂದು ಪ್ರತಿಕ್ರಿಯೆ ಕೊಟ್ಟಿದ್ದೀರಲ್ಲ...

ಬಹಳ ಖುಷಿಯಾಗುತ್ತದೆ...

ಮತ್ತೂ ಬರೆಯಬೆಕೆಂಬ ಉತ್ಸಾಹ ಬರುತ್ತದೆ...
ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

ಸುಧೇಶ್ ಶೆಟ್ಟಿ said...

abbaa... konevaregu usiru bigi hididukondu odide naagu enu plan maadabahudu antha....
heege officinalli iruvaaga neevu enu baredirabahudu kannu haayisidare idee lekanavanne oduvanthe maadithu neevu hidithitta suspense:)

Mohan said...

Chennagide sir ,Any way Happy New year SIR,

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್....

ಪ್ರತಿಕ್ರಿಯೆಗೆ ಧನ್ಯವಾದಗಳು...

ಈ ಸಾರಿ ಊರಿಗೆ ಹೋದಾಗ ಎಲ್ಲ ಸ್ನೇಹಿತರನ್ನೆಲ್ಲ ಸೇರಿಸಬೆಕು ಎಂದು ನಾಗು ಪ್ಲಾನ್ ಮಾಡಿದ್ದಾನೆ...

ನಿನ್ನೆ ಮಾತಾಡುತ್ತ ಹೇಳಿದ..

ಅವನಿಗೆ ಕ್ಷಮೆ ಕೇಳ ಬೇಕಂತೆ..( ಮತ್ತೆಂತಾ ಐಡಿಯಾನೋ..!)

ನಾಗುವಿನ ಐಡಿಯ ಮಜಾಮಾಡಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಮೋಹನ್...
ವಂದನೆಗಳು... ನಿಮಗೂ ಹೊಸವರ್ಷದ ಶುಭಾಶಯಗಳು...

odigondublog said...

ಪ್ರಕಾಶಣ್ಣ ಒಂದು ಡೌಟು.... ರಾಜಿ ಲವ್ ಮಾಡಿದವರ ಲಿಸ್ಟ್ನಲ್ಲಿ ತಮ್ಮ ಹೆಸರು ಕಾಣ್ಸ್ತಾ ಇಲ್ಲ..... ಸ್ವಲ್ಪ clarification please..... :)

ಸಿಮೆಂಟು ಮರಳಿನ ಮಧ್ಯೆ said...

ತಮ್ಮಾ....

ನನ್ನ ಬ್ಲೋಗಿಗೆ ಸುಸ್ವಾಗತ...

ರಾಜಿ "ನಾಗುವಿನ" ನವಳಾಗಿದ್ದಳು...

ನಾನಾಗ "ವಿಜಯಾ" ಳ ಕನಸಲ್ಲಿದ್ದೆ... ಮಾರಾಯಾ..!

ಆ... ರಾಜಿ ಈಗಲೂ ನನ್ನ ಬೆಸ್ಟ್ ಪ್ರೆಂಡು....

ನಮ್ಮನೆಗೆ ಬರುತ್ತಾಳೆ...

ತಮ್ಮಾ...

ಜೀವನದಲ್ಲಿ...

ಚಂದ ಇದ್ದವರೆನ್ನಲ್ಲ "ಲವ್" ಮಾಡಲಾಗುವದಿಲ್ಲ...

ಅವಳ ಬಗೆಗೆ ಆ ಥರಹದ ಭಾವನೆ ಬರಲಿಲ್ಲ..ಮಾರಾಯಾ..!

ಇದರ ಬಗೆಗೆ ಇನ್ನೂ ಹೆಚ್ಚಿಗೆ ಹೇಳಲಾರೆ...

ಬ್ಲೋಗ್ ನೋಡ್ತಾ ಇರಿ.. ಗೊತ್ತಾಗಿಬಿಡುತ್ತದೆ...

ಹೀಗೆ ಬರುತ್ತಾ ಇರಿ...

ಅಂತರ್ವಾಣಿ said...

ಹೆಣ್ಣಿನ ವರ್ಣನೆ ಈ ರೀತಿ ಮಾಡಿರೋ ನಾಗು ದೊಡ್ದ ಕವಿಯಾಗಿರಬೇಕು.. :D :D :D

ನಕ್ಕು ನಕ್ಕು ಸಾಕಾಯಿತು..

ಮನಸ್ವಿ said...

ಪ್ರಕಾಶ್ ಅವರೆ ತುಂಭಾ ಚನ್ನಾಗಿದೆ ಲೇಖನ.. ಕೊನೆಯವರೆಗೂ ಕುತೂಹಲ ಮೂಡಿಸಿತು, ಪ್ರೇಮ ರೋಗಕ್ಕೆ ಇದೇ ಮದ್ದಾ?.. ಊಹೂಂ ಪ್ರೇಮಕ್ಕೆ ಕಣ್ಣಿಲ್ಲ ಅಂತ ತಿಳಿದವರು ಹೇಳಿದ್ದಾರೆ... ನಾಗು ತಾನು ಇಷ್ಟ ಪಡುವ ಹುಡುಗಿಯನ್ನು ಆ ತರಹ ವರ್ಣಿಸಿ ಹೇಗೆ ಪ್ರೀತಿಸಬಹುದು?.. ನಾಗುವಿನ ಪ್ರೇಮ ಪ್ರಸಂಗ ಮುಂದುವರೆಸಿ...!

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿ...

ನಿಜವಾಗಿಯೂ ನಾಗು ಕವಿ ಆಗಿದ್ದ...

ಅದರೆ ಬೇರೆ ಕವಿಗಳು ಬರೆದ ಕವನ ತಿರುಚಿ ಅದರ ಅರ್ಥ "ಎಡವಟ್ಟಾಗುವಂತೆ" ಹೇಳುತ್ತಿದ್ದ...

ಅವನ ಎಡವಟ್ಟು ಕವನಗಳು ನೆನಪಾದರೆ ನಗು ಬರುತ್ತದೆ..

ನಾಗುವಿನ ಉಪಾಯ ಮಜಾ ಮಾಡಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸ್ವಿ....

ಈ ನಾಗು ಮನಶ್ಯಾಸ್ತ್ರ ಓದಿದ್ದ...

ಸ್ವಲ್ಪ ಮಟ್ಟಿಗೆ...

ಅವನಿಗೆ ಅದ್ರಷ್ಟ ಇರಲಿಲ್ಲ...

ಅಷ್ಟೆಲ್ಲ ಪ್ರತಿಭೆ ಇದ್ದರೂ "ಅನಾಮಿಕನಾಗಿ" ಜೀವನ ನಡೆಸುತ್ತಿದ್ದಾನೆ...

ವಂದನೆಗಳು...

hema said...

ಈ ಬರಹ ಓದಿ ನಿಜಕ್ಕೂ ನಿಮ್ಮ ಫ್ಯಾನ್ ಆಗಿಬಿಟ್ಟೆ! (ಗಾಳಿ ಜೋರಾಗಿ ಬಂತಾ?!) ನಿಮ್ ನಾಗು ತುಂಬ ಬುದ್ದಿವಂತರು, ಕಡೆಗೆ ಅವರಿಬ್ಬರ ಲವ್ ಸ್ಟೋರಿ ಏನಾಯಿತು?
ಸರ್ ನಿಮ್ಮದೊಳ್ಳೆ ಗೆಳೆಯರ ಗುಂಪು ಇರೋ ಹಾಗಿದೆ, ಇಷ್ಟು ದಿನವಾದ ಮೇಲು ಇನ್ನು ಎಲ್ಲರೊಂದಿಗೆ ಟಚ್ ನಲ್ಲಿದ್ದೀರಲ್ಲ ತುಂಬಾ ಖುಷಿಯಾಗುತ್ತೆ.

ಸಿಮೆಂಟು ಮರಳಿನ ಮಧ್ಯೆ said...

ಹೇಮಾರವರೆ....

ಕೆಲವೌ ಗೆಳೆಯರು ಈ ಜನಜಂಗುಳಿಯಲ್ಲಿ ಕಳೆದು ಹೋಗಿದ್ದಾರೆ...

ನಮ್ಮ ಗೆಳೆಯರ ಗುಂಪು ಮಜವಾಗಿತ್ತು...

ನಮ್ಮಲ್ಲೇ ಜೋಕೆ ಮಾಡಿಕೊಳ್ಳುತ್ತಿದ್ದೇವು...

ಈಗಲೂ "ಆದಿನಗಳನ್ನು ಎಲ್ಲರೂ ಸೇರಿ ನೆನಪಿಸಿಕೊಳ್ಳುವಾಗ ಮಜ ಇರುತ್ತದೆ...

ರಾಜಿ- ನಾಗುವಿನ ಕಥೆ ಬರೆಯುವೆ...

ಮತ್ತೆಯಾವಾಗಾಲಾದರೂ..

ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರ ರುಣಿ...
ಬರಹಗಾರನಲ್ಲದ ನನಗೆ ನಿಮ್ಮ ಪ್ರತಿಕ್ರಿಯೆ ಮತ್ತೂ ಉತ್ಸಾಹ ತಂದಿದೆ...

ಮತ್ತೂ ಬರೆಯೋಣ ಅನ್ನಿಸುತ್ತದೆ..
ಹೀಗೆ ಬರುತ್ತಾ ಇರಿ...

ಇಮ್ಮ ಅಭಿಮಾನದ "ಗಾಳಿ" ನನಗೂ ಖುಷಿಯಾಗಿದೆ...

ಧನ್ಯ...
ಧನ್ಯವಾದಗಳು...

Rajendra Bhandi said...

ಕಥೆ ಮಾತ್ರ ಸುಪ್ಪರ್ ಆಗಿ ಇದ್ದು. ಇವತ್ತು ಸೌತೆಕಾಯಿ ಹಶಿ ಊಟ ಮಾಡಕಾದ್ರೆ ಮೊಗೆಕಯಿದೆ ನೆನಪಾಗ್ತಾ ಇತ್ತು.

ಸಿಮೆಂಟು ಮರಳಿನ ಮಧ್ಯೆ said...

ರಾಜೇಂದ್ರ..

ಮೊಗೆಕಾಯಿ ನೀವು ನೋಡಿದ್ದರೆ.. ಯಾವಾಗಲೂ ನೆನಪಿಗೆ ಬರ್ತಿತ್ತು..

ನಿಜವಾಗಿಯೂ ಬಹಳ ಸುಂದರಿ..

ಸಿನೇಮಾ ನಟಿಯರನ್ನ ಅವಳೆದುರಿಗೆ "ನೀವಾಳಿಸಿ" ತೆಗೆಯಬೇಕು..

ಅಷ್ಟು ಸುಂದರ..!

ಮೊಗೆಕಾಯಿ "ENJOY.. " ಮಾಡಿದ್ದಕ್ಕೆ
ಅಭಿನಂದನೆಗಳು..

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಒಳ್ಳೆ ಬುದ್ದಿವಂತ ರೀ ನಿಮ್ಮ ನಾಗು

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್.....

ನಾಗು ಬುದ್ಧಿವಂತ ಅಷ್ಟೇ ಅಲ್ಲ..
ಹ್ರದಯವಂತ ಕೂಡ....

ಸಿಕ್ಕಾಪಟ್ಟೆ ಖಿಲಾಡಿ ಬುದ್ಧಿ...
ಚಾಲು ನನ್ಮಗ...

ಅವನಿಗೆ ರಾಜಿ ಮೇಲೆ ಮನಸ್ಸಿತ್ತು ಅನ್ನೋದು
ನಮಗೆಲ್ಲ ಗೊತ್ತೇ ಇರಲಿಲ್ಲ...

ಬ್ಲಾಗ್ ಓದುತ್ತಾ ಇರಿ ಅವನ ಬಗೆಗೆ ಇನ್ನೂ ವಿಷಯಗಳಿವೆ....

ನಾಗುವಿನ ಪ್ರಯೋಗ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Supreet Katti ಸುಪ್ರೀತ್ ಕಟ್ಟಿ said...

ಒಳ್ಳೆ ಐಡಿಯಾ, ಯಾರಿಗಾದರೂ ಇಂಥಃ ಸಮಸ್ಯೆ ಇದ್ದರೆ, ಆರಾಮಾಗಿ ಪರಿಹರಿಸಬಹುದು... ಸರ್, ಆಫೀಸಿನಲ್ಲಿ ಇದ್ದೀನಿ, ನಗು ತಡಿಯಕ್ಕೆ ಆಗ್ತಾ ಇಲ್ಲ, ಓದದೇ ಇರೋಕೂ ಆಗ್ತಾ ಇಲ್ಲ....

manju said...

ಛೇ ಎಂಥ ಮನುಷ್ಯ ರೀ ನಾಗು ....ಹುಡುಗಿರನ್ನ ಎಷ್ಟು ಕೆಟ್ಟದಾಗಿ ಕಲ್ಪನೆ ಮಾಡ್ಕೋತಾನೆ,,,