Tuesday, January 27, 2009

ಹೀಗೊಂದು.. ಕಾಗೆ ಪುರಾಣ...

ನ್ನೂರು ಬೆಳಗಾವಿ..ರೀ...
ಮೊನ್ನೆ ರಾಜಕಾರಣಿಗಳು ಬೆಳಗಾವಿಗೆ ಬಂದು ಗಲಾಟೆ ಮಾಡಿದ್ದು ನೋಡಿ..
ಇನ್ನು ನನಗೆ ಅಲ್ಲಿ ಕೆಲಸ ಇಲ್ಲ ಅಂದುಕೊಂಡು...
ರಂಗನ ತಿಟ್ಟು .. ಬಂದೆ...
ಇಲ್ಲಿ
ನನಗೊಬ್ಬ ಗೆಳತಿ ಇದಾಳ...!
ಭಾಳ .. ಛಂದ... ಅದಾಳ್ರೀ.. !!
ನಿಮ್ಮ
ಮನುಷ್ಯ ಜಾತಿಗೆ ಚಂದ ಅಂದ್ರ ಬೆಳ್ಳಗ ಇರಬೇಕ್ರಿ...
ನಮ್ಮ ಚಂದ ಹಂಗಲ್ರೀ.. ಬ್ಯಾರೆನೇ ಅದ..
ನಮಗ ಕಪ್ಪೆ ಚಂದ ರೀ....

ಇಲ್ಲಿ ರಂಗನ ತಿಟ್ಟುನಲ್ಲಿ ಬಣ್ಣಬಣ್ಣ ಹಕ್ಕಿ ನೋಡಿ ನನ್ನ ತಲಿ ಕೆಟ್ಟು ಹೋತ್ರಿ..

ಹಂಗೆ... ಬೇಜಾರ್ರೂ... ಆತ್ರಿ.. ಯಪಾ..!

ಜನ ಎಲ್ಲ ಬಂದು ಬಿಳೀ ... ಹಕ್ಕಿ ಫೋಟೋ ತೆಗಿತಾರೆ...

ನನ್ನದು ಯಾಕೆ ತೆಗಿಯೂದಿಲ್ಲ...?


ನೋಡ್ರಿ ಇಲ್ಲಿ ಕುಂತಾನಲ್ಲ ಅಂವ..

"
ನಾಗೇಂದ್ರ .. ಮುತ್ತುಮುರಡು.." ...ಹೇಳ್ರಿ....

ಭಾಳ .. ಛಂದ.. ಫೋಟೋ ತೆಗಿತಾನ್ರಿ.... ಯಪ...

ಸಾಹಿತ್ಯಾನೂ ಓದಾದಿದಾನ್ರಿ..

ರಾಷ್ಟ್ರ ಮಟ್ಟದಲ್ಲಿ
...ಬಹಳ ಬಹುಮಾನ ಕೂಡ ಬಂದೈತ್ರಿ....!
" ಲೇ.. ತಮ್ಮಾ... ನಾಗೇಂದ್ರ..

ನನ್ನ
ಫೋಟೋನೂ ತೆಗಿಯೋ ಮಾರಾಯಾ..!...

ಜಗತ್ತಿನ್ಯಾಗ ಎಲ್ಲಾನೂ ಬೆಳ್ಳಗೆ.. ಇರವಲ್ದು...

ಕಂಡಿದ್ದೆಲ್ಲ ಬೆಳಿ ಅಲ್ಲಪಾ....

ಮನಸ್ಸಿನೋಳಕ್ಕೂ ಕರ್ರಗೆ ಇರ್ತಾರಪಾ..

ನೋಡು ನಂದೂ ಒಂದು ಫೋಟೋ ತೆಗ್ಯಪಾ..! ನೋಡೋನು...!

ಏನಪಾ.. ! ಇಂವ ನನ್ನ ನೋಡ್ತಾನೆ ಇಲ್ಲಪಾ..!

ಪಕ್ಕ ಹೋಗಿ ನೋಡ್ತೀನಿ...ಇರ್ರಿ...


ನೋಡಪಾ.. ನಾಗೇಂದ್ರ..!

ನಾನು ಕಪ್ಪಗಿದಿನಿ ಅಂತ ಫೋಟೋ ತೆಗ್ಯುದಿಲ್ಲ.....
ಇದು ಭಾಳ.. ಅನ್ಯಾಯ ನೋಡಪಾ....!

ನಾನೂ ದೇವರ ಸ್ರಷ್ಟಿ.. ಅಲ್ಲೆನಪಾ..? ನಂದೂ ಫೋಟೋ ತೆಗಿ....


ಅಂತೂ .. ದೊಡ್ಡ ಮನಸ್ಸು ಮಾಡಿದೇ ಕಣಪಾ...

ದೇವ್ರು ನಿನ್ನ ತಂಪಾಗಿ ಇಟ್ಟಿರ್ಲಿ

ಮೊದ್ಲು.. ಎದುರಗಡೆ ತೇಗಿ...
ಫುಲ್
.. ಬರಬೇಕಪಾ..
ಕಾಲು.., ತಲಿ ಎಲ್ಲಾ ಬರಬೇಕಪಾ..!




ಈಗೊಂದು ಕ್ಲೋಸ್ ಅಪ್ ತೇಗಿ.. ಯಪಾ..!

ಮುಖ ಅಷ್ಟೆ ಬರ ಬೆಕಪಾ..!




ಹಾಗೆ ಒಂದು ಸೈಡ್.. ಪೋಸ್ ತೆಗಿಯಪಾ...

ಫೋಟೋ ಛಂದ ಬರಬೇಕಪಾ...

ಫೋಟೋ ಛಂದ ಬಂದದೆ.. ಅಂತ..

ನನ್ .. ಕಿವಿಯಲಿ... "ಹೂ...." ಇದಬ್ಯಾಡ .. ನೋಡು...!

ಭಾಳ ಜನರು ಇಡಲಿಕ್ಕೆ ನೋಡ್ಯಾರ...!

ಏನ್ ... ಮಾಡೋದೂ ... ನಂ ಜನ್ಮಾನೆ ಹಂಗೈತಿ..

ನೀ.. ಒಳ್ಳೆ ಮನಶ್ಯಾ ಇದಿಯಪಾ......

ಫೋಟೋ.. ಛಂದ.. ತೆಗಿಯಪಾ..!




ಆಕಡೆ .. ಸಾಕು.. .. ಸೈಡ್ ಬಾರಾಪಾ...
ಸ್ವಲ್ಪ ಕುತ್ತಿಗಿನೂ .ಬರಬೇಕು.. ಹಂಗೆ ತೇಗಿ ,
ರೆಕ್ಕೆ ಪುಕ್ಕನೂ...ಬರೋ.. ಹಂಗೆ...ಒಂದು
ಫೋಟೋ...

ನೋಡು
.. ನಂಗೆ... ನಗಲಿಕ್ಕ ಬರೋದಿಲ್ಲ...
ಇಷ್ಟು..... ನಕ್ಕರೆ.. .. ಸಾಕೆನಪಾ.!






ಈಗ ಕಡೆ ಸೈಡ್ ಫುಲ್ ತೆಗಿಯಪಾ..
ಮೊನ್ನೆ ನಿಂಗೆ ರಾಷ್ಟ್ರ ಮಟ್ಟದಲ್ಲಿ ಅವಾರ್ಡು ಬಂತಲ್ಲಪಾ..
ಭಾಳ ಚೊಲೋ ಆತು ನೋಡು...!

ಅದೇನೋ " ವೈಪಿಎಸ್..".. ಅವಾರ್ಡ್ ಅಂತೆ ..

ನಿಂಗೆ ಬಂತಲ್ಲಪಾ...ಖುಷಿ ಆತು.. ನೋಡು...

ನಮ್ಮೆಲ್ಲರ
ಕಡಿಯಿಂದ.. ನಿನಗೆ "ಅಭಿನಂದನೆಗಳು ಕಣಪಾ..!







ನೋಡು ನಾಗೇಂದ್ರ... ನೀನು ಕ್ರಷಿ...ಮಾಡ್ಕೊಂಡು..
ಹೊಲದಲ್ಲಿ ಕೆಲಸಾನೂ ಮಾಡ್ಕೊಂಡು..
ಫೋಟೋನೂ ಹಚ್ಚಗೊಂಡು ...

ಬಹಳ
ಸಾಧನೆ ಮಾಡಿದೀಯಪಾ..
ದೇವರು
ನಿನಗೆ ಒಳ್ಳೇದು ಮಾಡ್ಲಿ..

ಮತ್ತ.. ಫೋಟೋ ತೋರ್ಸೂದ.. ಮರಿ ಬೇಡಪಾ ..!

ನಾನ್.... ಬರ್ತಿನಪಾ.. ಮತ್ತ ಸಿಗ್ತೀನಿ..!


(" ನಾಗೇಂದ್ರ " ಬಹ ಳ ಒಳ್ಳೆಯ ಛಾಯ ಗ್ರಾಹಕ.. ಹಳ್ಳಿಯಲ್ಲಿದ್ದರೂ...
ಛಾಯಾಗ್ರಹಣವನ್ನು ಹವ್ಯಾಸ ಮಾಡಿಕೊಂಡು..
ಬಹಳ ಸಾಧನೆ ಮಾಡಿದ್ದಾರೆ..
೧೫ -೨೦ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ..

ಸ್ವತಹ.. ತೋಟದಲ್ಲಿ ಕೆಲಸ ಮಾಡುತ್ತಾರೆ....
ಉತ್ತಮ ಪ್ರಗತಿ ಪರ.. ಕ್ರಷಿಕರೆಂದು ಪ್ರಸಿದ್ದರು..

ಹಳ್ಳಿಯಲ್ಲಿದ್ದುಕೊಂಡು ಆವರು ಮಾಡಿದ..

ಸಾಧನೆಗೆ ನಮ್ಮ " ಅಭಿನಂದನೆ "ತಿಳಿಸೋಣ....

ಈ ಘಟನೆ..

ಕಾಗೆ ಮನುಷ್ಯನ ಹತ್ತಿರ ಬರೋದೇ ಇಲ್ಲ..
ಅದರ ಕಣ್ಣು ವಿಶಿಷ್ಟವಾಗಿರುವದರಿಂದ..
ಬಹಳ ಹೆದರಿಕೆ ಅದಕ್ಕೆ..

ಇಲ್ಲಿ ತುಂಬಾ ಹತ್ತಿರದಲ್ಲಿದೆ...!..!

ನಾನೂ ಅವರೂ ...ರಂಗನ ತಿಟ್ಟು ಗೆ ಹೋದಾಗ ಆದದ್ದು )






52 comments:

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಅಪರೂಪದ ಫೋಟೋಗಳು. ಅದಕ್ಕೆ ಹೊಂದುವ ನುಡಿ. ನಿಜವಾಗಿಯೂ ಕಾಗೆಯೇ ಹೇಳುತ್ತಿದೆಯೇನೋ ಅನ್ನಿಸುವಂತಿವೆ ನುಡಿಗಳು. ಕಾಗೆಯ ಭಾವವೂ ಹಾಗೆಯೇ ಇದೆ.

ಒಳ್ಳೆಯ ಛಾಯಾಗ್ರಾಹಕರೊಬ್ಬರನ್ನು ಚೆಂದದ ಬರಹದೊಂದಿಗೆ ಪರಿಚಯಿಸಿದ್ದೀರಿ. ಧನ್ಯವಾದಗಳು.
ನಾಗೇಂದ್ರ ಮುತ್ಮುರ್ಡು ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿ.

Ittigecement said...

ಶಾಂತಲಾ...

ನಾಗೇಂದ್ರ.. ನನ್ನ ಗೆಳೆಯ..

ಹೊಸ ಕ್ಯಾಮರಾ ಖರೀದಿಸಿದ್ದ...
ನಮ್ಮನೆಯವರೂ ಅವರೂ.. ರಂಗನತಿಟ್ಟುವಿಗೆ ಹೋದಾಗ.. ಈ ಘಟನೆ ಘಟಿಸಿತು...

ಕಾಗೆಯ ಕಣ್ಣು ಗ್ಲಾಸಿನ ಚೂರಗಳ ಹಾಗೆ..!
ಪ್ರತಿಫಲನದಿಂದ...
ಎಲ್ಲೇ ಒಂದು ಹುಲ್ಲು ಕಡ್ಡಿಯೂ ಅಲ್ಲಡಿದರೂ ಕಾಗೆಗೆ ಗೊತ್ತಾಗಿಬಿಡುತ್ತದೆ..!

ಹಾಗಾಗಿ ಅದು ಬಹಳ ಪುಕ್ಕಲು..!
ನಮಗೆ ಆಶ್ಚರ್ಯವೆಂದರೆ ಆ ಕಾಗೆ "ನಾಗೇಂದ್ರನ " ಬಳಿ ಇಷ್ಟು ಹತ್ತಿರ ಹೋದದ್ದು..!

ಚಂದದ ಪ್ರತಿಕ್ರಿಯೆಗೆ ವಂದನೆಗಳು..

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಇದನ್ನು ಓದುತ್ತ ಹೋದಾಗ, ನೀವು ಬರೆದಿದ್ದು ಅನ್ನುವುದು ಮರೆತೇ ಹೋಗಿ, ಕಾಗೆನೆ ಮಾತನಾಡುತ್ತಿದೆ ಅಂತ ಅನ್ನಿಸಿ ಬಿಡುತ್ತೆ. ನಿಮ್ಮ ಪ್ರತಿ ಬಾರಿಯ ಬರಹವು ಮನಸ್ಸಿಗೆ ಮುದ ನೀಡುತ್ತದೆ, ಮತ್ತು ನಗಿಸಿ ಖುಷಿ ಕೊಡುತ್ತೆ.
ನಾಗೇಂದ್ರ ಮುತ್ಮುರ್ಡುರವರಿಗೆ ನನ್ನ ಕಡೆಯಿಂದಲೂ ನಮಸ್ಕಾರ ಮತ್ತು ಅಭಿನಂದನೆಗಳನ್ನು ತಲುಪಿಸಿ ಬಿಡಿ.
-ರಾಜೇಶ್ ಮಂಜುನಾಥ್

Ittigecement said...

ರಾಜೇಶ್...

ನಾಗೇಂದ್ರ ಒಂದು ದೈತ್ಯ ಪ್ರತಿಭೆ...

ಪ್ರಯತ್ನ, ಛಲವಿದ್ದರೆ ಎಲ್ಲಿದ್ದರೂ ..
ಸಾಧಿಸ ಬಹುದು ಎನ್ನುವದಕ್ಕೆ ..
ಅವರೊಂದು ಉದಾಹರಣೆ..

ಅವರು "ಮಾನಸ ಸರೋವರಕ್ಕೆ ಹೋಗಿದ್ದರು..

ಅಲ್ಲಿನ ಮನೋಹರ ದ್ರ್‍ಅಶ್ಯವನ್ನು ಎಷ್ಟು ನೋಡಿದರೂ ಸಾಲದು...
ಅಂಥಹ ಮನಮೋಹಕ ಫೋಟೊ ತೆಗೆದಿದ್ದಾರೆ..

ಅವರಿಗೆ ಇಂಟರ್ನೆಟ್ ಸಮಸ್ಯೆ ಇಲ್ಲದಿದ್ದಲ್ಲಿ...

ನಮ್ಮ " ಶಿವು, ಮಲ್ಲಿಕಾರ್ಜುನ್ "

ಅವರಿಗೊಂದು ಬ್ಲೋಗ್..ಮಾಡಿ ಕೊಟ್ಟು ಬಿಡುತ್ತಿದ್ದರು...!

ಇವರಿಬ್ಬರ ಪರಮ ಆಪ್ತ ಗೆಳೆಯ "ನಾಗೇಂದ್ರ"!

ನಿಮ್ಮ "ಅಭಿನಂದನೆಗಳನ್ನು " ಅವರಿಗೆ ತಿಳಿಸುವೆ...

ಪ್ರತಿಕ್ರಿಯೆಗೆ ಧನ್ಯವಾದಗಳು..

shivu.k said...

ಪ್ರಕಾಶ್ ಸರ್,

ಫೋಟೊ ಮೊದಲು ನೋಡಿದ್ದೆ.....

ಬ್ಲಾಗಿನಲ್ಲಿ ನೀವು ಅದನ್ನು ಹಾಕಿದ ರೀತಿ, ಅದಕ್ಕೊಂದು ಸಣ್ಣ ಸಂಭಾಷಣೆಯನ್ನು ಸೃಷ್ಟಿಸಿದ್ದು........ತುಂಬಾ ಚೆನ್ನಾಗಿದೆ........

ಪ್ರತಿಯೊಂದು ಚಿತ್ರಗಳಿಗೂ ಈ ಜೀವ, ಭಾವ ಕೊಡುವುದು ಒಂದು ಕಲೆಯೇ ಸರಿ......ಅದನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ......

ನಾಗೇಂದ್ರ ಬಹುಮಾನ ಬಂದ ದಿನವೇ ಅಭಿನಂದಿಸಿದ್ದೆ.....

ಈಗ ನಿಮ್ಮ ಬ್ಲಾಗಿನ ಮೂಲಕ ಮತ್ತೊಮ್ಮೆ ಅಭಿನಂದನೆಗಳನ್ನು ತಿಳಿಸುತ್ತೇನೆ....ಥ್ಯಾಂಕ್ಸ್.....

Prabhuraj Moogi said...

ಕಾಗೆ ಗುಬ್ಬಚ್ಚಿ ಕಥೆ ಕೇಳಿದ್ದ ನಮಗೆ, ಇದೊಂಥರ ಆಧುನಿಕ ಕಾಗೆ ಕಥೆ ಹಾಗೆ ಇತ್ತು.. ಚೆನ್ನಾಗಿ ಬರೆದಿದ್ದೀರಿ... ನಿಮ್ಮ ಹಲವು ಲೇಖನ ಓದಿದ್ದೇನೆ ಪ್ರತಿಯೊಂದೂ ವಿಭಿನ್ನ... ಬರೆಯುತ್ತಿರಿ... ಕಲ್ಪನೆ ಅದ್ಭುತ

ಮನಸು said...

ಕಾಗೆಗೂ ಒಂದು ಮನಸು ಇದೆ ಅದಕ್ಕೂ ಆಸೆ ಇದೆ ಎಂದು ತೋರಿಸಿದೀರಿ, ನಿಜಕ್ಕೂ ಅವುಗಳು ಸಹ ಯೋಚಿಸಿರಬೇಕಲ್ಲವೇ?

ಛಾಯಾಗ್ರಾಹಕರಿಗೆ ಈ ಮೂಲಕ ಹೃತ್ಪೂರ್ವಕ ವಂದನೆಗಳನ್ನ ತಿಳಿಸುತ್ತೇವೆ......

ಇನ್ನು ನಿಮ್ಮ ಲೇಖನದ ಶೈಲಿ ಹಾಗು ಸಂಧರ್ಭಕ್ಕೆ ತಕ್ಕ ಹಾಗೆ ವಿಶ್ಲೇಷಣೆ ಎಲ್ಲವೋ ರಾಗಕ್ಕೆ ತಕ್ಕ
ತಾಳ ಅನ್ನೋ ತರಹದಲ್ಲಿ ಬಿತ್ತರವಾಗಿದೆ.......ನಿಜಕ್ಕೋ ಚೆನ್ನಾಗಿವೆ ಚಿತ್ರಕ್ಕೆ ತಕ್ಕ ನುಡಿಗಟ್ಟು ನಿಮಗೆ ಅಭಿನಂದನೆಗಳು ಹೀಗೆ ಛಾಯಾಗ್ರಹಣ ಅದಕ್ಕೊಂದು ನುಡಿ ಚಿತ್ರಣ ಮೂಡಿ ಬರಲಿ..

ವಂದನೆಗಳು

Umesh Balikai said...

ಭಾಳ ಛಂದ ಐತ್ರೀ ... ಖರೆವಂದ್ರೂ ಕಾಗೀನ ಮಾತಾಡಿದಂಗ ಅನ್ನಿಸ್ತ್ರೆಪಾ... ಚಿತ್ರಗಳೂ ಸೂಪರ್.. ಏನ್ ಕಾಗೀಗ ಫೋಟೋ ಸೆಶನ್ ಟ್ರೈನಿಂಗ್ ಕೊಟ್ಟ ಕುಂದರಿಸಿದಂಗ ಐತೀ...ನಾಗೇಂದ್ರರವರಿಗೆ ನನ್ನ ಅಭಿನಂದನೆಗಳನ್ನ ತಿಳಸ್ರೀ

Anonymous said...

ಸೂಪರ್...
ಫೋಟೋ ತುಂಬ ಚೆನ್ನಾಗಿವೆ ಮತ್ತು ಬರಹ ತುಂಬ ಹೊಂದಿಕೊಂಡಿದೆ..
ಮೊದಲೇ ಯೋಚಿಸಿ ಫೋಟೋ ತೆಗೆದಿರೇನು?

Ittigecement said...

ಶಿವು ಸರ್...

ಅದು ಡಿಜಿಟಲ್ ಕ್ಯಾಮರಾದಲ್ಲಿ ತೆಗೆದ ಫೋಟೊ ಅಲ್ಲ..
ಪೋಸ್ಟಕಾರ್ಡ್ ಸೈಜಿನ ಫೋಟೊ ಅದಾಗಿತ್ತು..
ಅದನ್ನು ಸ್ಕ್ಯಾನ್ ಮಾಡಿ ಸ್ವಲ್ಪ ಸಂಸ್ಕಾರ ಮಾಡಿಹಾಕಬೇಕಾಯಿತು..

ಬ್ಲೋಗಿಗೆ ಪೋಸ್ಟ್ ಮಾಡಲಾಗದೆ ಒದ್ದಾಡುತ್ತಿರುವಾಗ..

"ಬಾಳದೋಣಿಯ " ಬ್ಲಾಗಿನ ಮಿತ್ರ.. "ಹರೀಷ್" ಸಹಾಯ ಮಾಡಿದರು..
ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಪ್ರಭುರವರೆ...

ನನ್ನ ಬ್ಲೋಗಿಗೆ ಸುಸ್ವಾಗತ...

ನಾಗೇಂದ್ರ ಮತ್ತು ನಾವು ದೋಣಿಯಲ್ಲಿ ಹೋಗಿ ಹಕ್ಕಿಗಳನ್ನು ನೋಡಿ ಬಂದಾಗಿತ್ತು..

ಆಗ ಈ ಕಾಗೆ ಬಹಳ ಹತ್ತಿರದಲ್ಲಿ ಕುಳಿತು ಏನೋ ಹೇಳುವಂತಿತ್ತು..

ಆಗ ಚಕಚಕನೇ ಈ ಫೋಟೊ ತೆಗೆದೆ...

ಆ ಕಾಗೆಗೆ ಏನು ಹೇಳಬೇಕಿತ್ತೋ.. ಗೊತ್ತಾಗಲಿಲ್ಲ..
ನಾವು ಬರುವವವರೆಗೂ ನಮ್ಮ ಹಿಂದೆ ಬರುತಿತ್ತು..

ಒಟ್ಟಿನಲ್ಲಿ "ಅಕಸ್ಮಾತ್ " ಆಗಿ ನನ್ನ ಕ್ಯಾಮರಕ್ಕೆ ಈ ಕ್ಷಣಗಳು ಸಿಕ್ಕಿದ್ದು ಅದ್ರಷ್ಟ...

ಹೀಗೇ ಬರುತ್ತಾ ಇರಿ..

ವಂದನೆಗಳು..

Ittigecement said...

ಮನಸು...

ಆ ಕಾಗೆ ಯಾಕೆ ನಮ್ಮ ಬೆನ್ನ ಹಿಂದೆ ಬಿದ್ದಿತ್ತು..? ಗೊತ್ತಿಲ್ಲ..

ಅದಕ್ಕೆ ಬ್ರೆಡ್ ಚೂರುಗಳನ್ನು ಹಾಕಿದರೂ ಹೋಗಲಿಲ್ಲ..

ಅದರ ಮನಸ್ಸು ನಮಗರ್ಥವಾಗಲಿಲ್ಲ..

ನಾಗೇಂದ್ರನಿಗೆ ಹೊಸ ಕ್ಯಾಮರಾ ತೆಗೆದು ಕೊಂಡಿದ್ದ ಹುರುಪು.. ಇತ್ತು..

ಅಲ್ಲಿ ನೀರಿನ ಮೇಲ್ಮೈಯಲ್ಲಿ ಇರುವ ಮೀನುಗಳನ್ನು ಹಿಡಿಯಲು
ಬರುವ ಹಕ್ಕಿಗಳ ಫೋಟೊ ತೆಗೆಯಲು ಕಾಯುತ್ತಿದ್ದ..

ಹಕ್ಕಿ..., ನೀರಿನಲ್ಲಿ ಅದರ ಬಿಂಬ.. ! ಈ ಸಮಯಕ್ಕಾಗಿ ಕಾಯುತ್ತಿದ್ದ...

ಆದರೆ ಹಕ್ಕಿ ಬರಲಿಲ್ಲ..
ಈ ಕಾಗೆ "ಕಾ.. ಕಾ" ಅನ್ನುತಿತ್ತು..


ಆಗ ನಾನು ತೆಗೆದದ್ದು ಈ ಫೋಟೊಗಳನ್ನು..

ಪ್ರತಿಕ್ರಿಯೆಗೆ ಧನ್ಯವಾದಗಳು..

ಚಿತ್ರಾ said...

ಆಹಾಹಾ ,
ಕಾಗೀ ಕಥಿ ಭಾಳ ಛೊಲೊ ಐತಿ ಬಿಡ್ರೆಪಾ,ಮತ್ತ ಅದು ಹೇಳಿದ್ದೂನೂ ಖರೇನ ಅದ ಅಲ್ರೀ? ನೋಡ್ಲಾಕ ಬಿಳೀ ಇದ್ರ ಸಾಕೇನ್ರಿ? ಮನಸ್ಸು ಹಂಗೇ ಸ್ವಚ್ಛ ಬೇಕಲ್ರೀ?

ನನ್ನ ಫೋಟೋ ತಗೀ ಅಂತ ಈ ಕಾಗೀ ಅಷ್ಟು ನಿಮ್ಮ ಬೆನ್ನು ಬೀಳಲಾಕ ಹತ್ತಿತ್ತಂದ್ರ , ಹಿಂದಿನ ಜನ್ಮದಾಗ ಯಾವುದೋ ಸೆಲೆಬ್ರಿಟಿ ಇತ್ತೇನೂ ಅಂತ ನಂಗ ಸಂಶಯ ಬರತದ್ರೀ .
ಏನೇ ಇದ್ರೂ ಭಾಳ ಛೊಲೋ ಬರೆದೀರಿ ಬಿಡ್ರೀ.

Ashok Uchangi said...

ಕಾಗೆ ಪುರಾಣ ಚೆನ್ನಾಗಿದೆ.ನಾಗೇಂದ್ರರು ಫೋಟೋ ತೆಗಿವಾಗ ನಿಮಗೆ ಈ ಐಡಿಯಾ ಹೊಳೆದು ನೀವು ಆಕರ್ಷಕವಾದ ಫೋಟೋ ತೆಗೆದಿರುವುದರಿಂದ ನಿಮ್ಮ ಛಾಯಾಗ್ರಹಣ ಕಲೆಯನ್ನೂ ಮೆಚ್ಚಬೇಕು.
ನಾಗೇಂದ್ರ ಮುತ್ಮರ್ಡು ಎಂದೊಡನೆ ಇಬ್ಬನಿಯ ಚಿತ್ರಗಳು ನೆನಪಾಗುತ್ತವೆ.ಇವು ಹಿಂದೆ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಹಾಗೂ ಸುಧಾದಲ್ಲಿ ಪ್ರಕಟವಾಗಿತ್ತು.
ನಾಗೇಂದ್ರ ಮುತ್ಮರ್ಡು ಅದ್ಭುತ ಛಾಯಾಗ್ರಾಹಕ.ಇವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ

ಅಶೋಕ ಉಚ್ಚಂಗಿ
http://mysoremallige01.blogspot.com/

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಪ್ರಕಾಶ್, ತುಂಬಾ ಖುಷಿ ಕೊಟ್ಟಿತು ಚಿತ್ರ-ಲೇಖನ.
ನಾಗೇಂದ್ರ ಮುತ್ಮುರ್ಡು ನಂಗೆ ಸಂಬಂಧಿ. ಈ ಬಾರಿ ಉರಿಗೆ ಹೋದಾಗ ಅವರನ್ನು ಭೇಟಿ ಆಗೋ ಸಂದರ್ಭ ಬಂದಿತ್ತು. ಆಗ ಮಾನಸ ಸರೋವರದ ಚಿತ್ರಗಳನ್ನು ನೋಡಿದ್ದೆ. ಒಂದಕ್ಕಿಂತ ಒಂದು ಅದ್ಭುತ! ಈ ಮಹಾಶಯನಿಗೆ photography ನೀರು ಕುಡಿದಷ್ಟೇ ಸಲೀಸು ಎನ್ನಿಸಿತ್ತು ಆಗ :-).
'ನಮ್ಮ ಮನೆಯ/ ಊರಿನ ಮಕ್ಕಳೇ ನನ್ನ ಮಾಡೆಲ್ ಗಳು - ಊರಿನ ಕೆರೆ ದಂಡೆಯೇ ನನ್ನ ಸ್ಟುಡಿಯೋ' ಎನ್ನುವಾಗ ಅವರಿಗೆ ಹೇಳತೀರದ ಸಂಭ್ರಮ!
ನಾವು ಚಿಕ್ಕವರಿರುವಾಗ ನಮ್ಮನ್ನು ಅವರ ಊರಿನ ಹತ್ತಿರ ಇರುವ 'ಭತ್ತ ರಾಶಿ ಗುಡ್ಡ'ಕ್ಕೆ ಕರ್ಕೊಂಡು ಹೋಗಿ ಮುಳುಗುವ ಸೂರ್ಯ ಬೊಗಸೆಯಲ್ಲಿ ಬರುವ ಹಾಗೆ ತೆಗೆದ ಚಿತ್ರ, ನನ್ನ ಪುಟಾಣಿ ಅಣ್ಣಂದಿರು ಅಡಿಕೆ ಮರ ಹತ್ತುತ್ತಿರುವ ಚಿತ್ರ... ಓಹ್ಹ್ - ಅದು ಮುಗಿಯದ ಲಿಸ್ಟ್ ಬಿಡಿ.. :-)

ಕ್ಷಮಿಸಿ, ಪ್ರತಿಕ್ರಿಯೆಯ ಬದಲು ಒಂದು ಲೇಖನವನ್ನೇ ಬರ್ದು ಬಿಟ್ಟಿ.
ಚೆನ್ನಾಗಿ ಬಂಜು ಈ ಬರಹ.

Geetha said...

ತುಂಬ ಚೆನ್ನಾಗಿದೆ ಸರ್ ಕಾಗೆ ಪುರಾಣ, very innovative!.ಫೋಟೋಗಳು ಚೆನ್ನಾಗಿವೆ, ನಿಮ್ಮ ಬರಹಕ್ಕೆ ಅದು ಪೋಸ್ ಕೊಟ್ಟ ಹಾಗಿದೆ! ಆ ಕಾಗೆಗೆ ಓದಕ್ಕೆ ಬಂದಿದ್ದರೆ ಎಷ್ಟು ಖುಶಿ ಪಟ್ಟಿರೊದೋ ಎನೋ...!

ಪ್ರಶಸ್ತಿ ಪಡೆದ ಛಾಯಾಗ್ರಾಹಕರಿಗೆ ಅಭಿನಂದನೆಗಳನ್ನು ತಿಳಿಸಿರಿ

Ittigecement said...

ಉಮಿ ಸಾಹೇಬರ...

ನಮಸ್ಕಾರ್ರೀ..

ಇದೆಲ್ಲ ಲಕ್ ಬಿಡ್ರಿ..

ಆ ಟೈಮ್ ನಾಗೆ ಕ್ಯಾಮರಾ ಕೈಲಿತ್ತು..,
ಫೋಟೊ ತೆಗೆದೆ...

ಹೀಂಗ ಬಂತು ನೋಡ್ರಿ..

ಎಲ್ಲ "ದೇವರ ಕ್ರಪಾ " ರೀ...

ನಿಮ್ಮ ಪ್ರತಿಕ್ರಿಯೆ ನಮಗ ಭಾಳ ಸಂತೋಷ ಕೊಟ್ಟದರಿ..

ಹೀಂಗ ಬರ್ತ ಇರ್ರಲಾ...!!

ಧನ್ಯವಾದಾರಿ..!

shivu.k said...

ಪ್ರಕಾಶ್ ಸರ್,

ಬೆಳಿಗ್ಗೆ ಅವಸರದಲ್ಲಿದ್ದೇ ಅದಕ್ಕೆ ನಾಗೇಂದ್ರ ಬಗ್ಗೆ ಹೇಳಲಿಕ್ಕೆ ಆಗಲಿಲ್ಲ.....

ನಿಮ್ಮ ಪರಿಚಯವಾಗಿದ್ದು ನಾಗೇಂದ್ರ ಮತ್ಮರ್ಡು ಮುಖಾಂತರವಲ್ಲವೇ......

ನಾಗೇಂದ್ರ ಬಗ್ಗೆ ಹೇಳಬೇಕೆಂದರೆ ಅದೊಂದು ದೈತ್ಯ ಪ್ರತಿಭೆ. ಕಾನ್ಸೂರಿನಿಂದ ಮತ್ಮರ್ಡು ತಲುಪಬೇಕೆಂದರೆ ಆ ಮಣ್ಣಿನ ರಸ್ತೆಯಲ್ಲಿ.........ಸಾಧನೆಯೇ ಸರಿ.........ಆಡಿಕೆ, ವೆನಿಲಾ...ಇತ್ಯಾದಿ ಬೆಳೆಯುವ ರೈತಾಪಿ ಮಗ....ಬೆಳಿಗ್ಗೆ ಐದು ಗಂಟೆಗೆ ಎದ್ದು ಆಕಳ ಹಾಲು ಕರೆಯುವಲ್ಲಿ ಪ್ರಾರಂಭವಾಗಿ........ರಾತ್ರಿ ತನ್ನ ಎರಡನೆ ಮಗ ವಿಕಾಸನಿಗೆ ಕಥೆ ಹೇಳಿ ಮಲಗಿಸುವಲ್ಲಿಗೆ ರಾತ್ರಿ ಹನ್ನೊಂದು.....ಈತನ ಜೊತೆಗೆ ಆತನ ಶ್ರೀಮತಿ ನಾಗರತ್ನರ ಪಾತ್ರವೂ ದೊಡ್ಡದು[ಪೂರ್ತಿ ಕುಟುಂಬ ನಮ್ಮ ಮನೆಯಲ್ಲಿ ಒಂದು ದಿನ ಇದ್ದರು . ರಾತ್ರಿ ಊಟ ಮಾಡುವಾಗ ಸುಹಾಸ ರಾಗಿ ಮುದ್ದೆ ನುಂಗುವಲ್ಲಿ ನಿಮ್ಮಂತೆಯೇ ಅವನಿಗೂ ಗೊಂದಲ. ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ].......ಇದೆಲ್ಲ ಬದುಕಿನ ನಡುವೆ ಕ್ಯಾಮೆರಾದಂತ ಮತ್ತೊಬ್ಬ ಗೆಳೆಯನನ್ನು ಕಟ್ಟಿಕೊಂಡು.......ಪಾತ್ರದಾರಿಗಳಾಗಿ ತನ್ನ ಊರಿನ ಪುಟ್ಟಮಕ್ಕಳನ್ನು ಬಳಸಿಕೊಂಡು ಫೋಟೋಗ್ರಫಿಯಲ್ಲಿ ಮಾಡಿರುವ ಸಾಧನೆ......ಆತನಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನಗಳ ಸುರಿಮಳೆಯಾಗಿದೆ......

ಈಗ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಛಾಯಾ ಚಿತ್ರ ಸ್ಪರ್ಧೆಯಲ್ಲಿ ಆತನಿಗೆ ಮೊದಲ ಬಹುಮಾನ ಬಂದಿದೆ...

ಈತನಿಗೆ ಕಳೆದ ವರ್ಷ ಸ್ವಲ್ಪ ಆರೋಗ್ಯದ ತೊಂದರೆ ಇದ್ದರೂ ಚಲದಿಂದ ಹಿಮಾಲಯದ ಮಾನಸ ಸರೋವರಕ್ಕೆ ಹೋಗಿ ಅಲ್ಲಿ ಕ್ಲಿಕ್ಕಿಸಿದ್ದ ಫೋಟೋಗಳು ಅಮೋಘ......ಅದ್ಭುತ.........ಒಂದೊಂದು ಚಿತ್ರವೂ ಕೂಡ ದೃಶ್ಯ ಕಾವ್ಯ.........ಈತನ ಚಿತ್ರಗಳು ಯುರೋಪಿನ ಆಷ್ಟ್ರೀಯಾ ದೇಶದಲ್ಲಿ ನಡೆಯುವ ದೊಡ್ಡ ಫೋಟೋಗ್ರಫಿ ಸ್ಪರ್ದೆಯಲ್ಲಿ ಪ್ರದರ್ಶಿತವಾಗಿವೆ...

ಹಳ್ಳಿಯಾದ್ದರಿಂದ ಆವನಿಗೆ ಇಂಟರ್‌‍ನೆಟ್‍ ಸೌಲಬ್ಯವಿಲ್ಲ...
ಇದ್ದೀದ್ದರೆ ನಮಗೆಲ್ಲರಿಗೂ ಅತ್ಯುತ್ತಮ ಲೇಖನದ ಜೊತೆಗೆ ಫೋಟೋಗಳು ದೊರೆಯುತ್ತಿದ್ದವು...
ಒಳ್ಳೆಯ ಬರಹಗಾರನಾದ ಆತನ ನುಡಿ ಚಿತ್ರಗಳು ಸುಧಾ ಮತ್ತು ಪ್ರಜಾವಾಣಿಯಲ್ಲಿ ಸುಮಾರು ಪ್ರಕಟವಾಗಿವೆ........

ಪ್ರಕಾಶ್ ಸರ್ ಆತನನ್ನು ಇಲ್ಲಿ ಈ ರೀತಿ ಪರಿಚಯಿಸಿದ್ದಕ್ಕೆ ದನ್ಯವಾದಗಳು........

Ittigecement said...

ಕೋಗಿಲೆ...

ನಾನು ನಿಮಗೆ ಹಾಂಗೇ ಕರೀತೀನ್ರೀ..

ಬೇಜಾರು ಮಡ್ಕೊ ಬ್ಯಾಡ್ರಿ......

ಇದು ಆಗಿದ್ದು "ಅಕಸ್ಮಾತ್" ರೀ..

ತೆಗಿತಾ..ತೆಗಿತಾ.. ಹೀಂಗ ಆಯಿತು ನೋಡ್ರಿ...

ಆ ಕಾಗೀಗ ಏನ್ ಬೇಕಾಗಿತ್ತೋ ..ಏನೋ..

ಒಂದೇ ಸಮನೆ ನಮ್ಮ ನೋಡಿ ಕೋಗಾಕ ಹತ್ತಿತ್ತು ನೋಡ್ರಿ..

ನಿಮಗ ಖುಷಿ ಆಯ್ತು.. ಹೌದಲೊ..

ಇಷ್ಟು ಸಾಕು ನೋಡ್ರಿ..ನಮಗ...

ನಿಮ್ಮ ಪ್ರೋತ್ಸಾಹ ಹೀಂಗ ಇರ್ಲಿ...

ವಂದನೆಗಳು.. ರೀ...

Ittigecement said...

ಚಿತ್ರವ್ವಾ..

ಶರಣ್ರೀ..

ನಿಮಗ ಖುಷಿ ಆಗಿದ್ದು ನೋಡಿ ನಮಗೂ ಆಗೈತ್ರಿ..

ನೀವು ಹೇಳು ಪ್ರಕಾರ.. ಇವತ್ತಿನ ಸಿಲೆಬ್ರಿಟಿಗಳು..

ಮುಂದಿನ ಜಲ್ಮದಾಗ.."ಕಾಗಿ" ಆಗ್ತಾರೇನು..?

ಭಾಳ ಚೆನ್ನಾಗಿ ಮಾತಾಡ್ತಿ ..ನನ್ನವ್ವಾ..!

ಯಾರಿಗಾದ್ರೂ ನಗು ಬರ್ಬೇಕ ..ಆ ಥರ ಮಾತಾಡ್ತಿರ್ರೀ ..ನೀವು...!

ನಿಮ್ಮ ಪ್ರೋತ್ಸಾಹ ಹೀಗ ಇರ್ಲಿ ..ನನ್ನವ್ವಾ...

ಮತ್ತೊಮ್ಮೆ ನಮಸ್ಕಾರ್ರೀ...!

Ittigecement said...

ಅಶೋಕ್...

ಈ ಫೋಟೊಗಳು ಸಿಕ್ಕಿದ್ದು ಒಂದು ಅಕಸ್ಮಿಕ..

ಇದನ್ನು ಒಂದು ಕನ್ನಡವಾರ ಪತ್ರಿಕೆಗೆ ಸಿದ್ದಪಡಿಸಿದ್ದೆ...

ಅವರು ಇದರಲ್ಲಿ "ಸ್ರಜನ ಶೀಲತೆ" ಇಲ್ಲ ಅಂತ.. ನಿರಾಕರಿಸಿದರು..

ಈ ಬ್ಲೋಗಿನಿಂದಾಗಿ ಮತ್ತೆ ಹೊರಗೆ ಬಂದಿತು...

ಇದನ್ನು ಇಷ್ಟಪಟ್ಟ ನಿಮಗೆಲ್ಲ ಅನಂತಾನಂತ

ಧನ್ಯವಾದಗಳು..

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

Ittigecement said...

ಪೂರ್ಣಿಮಾ

ಅವರು ವಿನಯವಂತರು, ಸಜ್ಜನರು..

ಸರಳ ವ್ಯಕ್ತಿತ್ವದವರು..

ನೀವು ಛಾಯಾಗ್ರಹಣದ ಬಗೆಗೆ ಅಥವಾ ಅವರಿಗೆ ತಿಳಿದ ಏನೇ ವಿಷಯವಿರಲಿ..

ವಿನಯದಿಂದ ತಿಳಿಸಿ ಹೇಳುತ್ತಾರೆ..

ಸ್ವಲ್ಪವೂ ದೊಡ್ಡಸ್ತಿಕೆಯಾಗಲಿ.., ಅಹಂಭಾವವಾಗಲೀ ಇಲ್ಲ..

ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸುವಾ..

ಪ್ರತಿಕ್ರಿಯೆಗೆ ಧನ್ಯವಾದಗಳು..

PaLa said...
This comment has been removed by the author.
PaLa said...

ಪ್ರಕಾಶ್,
ಕಾಗೆ ಪುರಾಣದೊಂದಿದೆ "ನಾಗೇಂದ್ರ"ರ ಪರಿಚಯ ಮಾಡಿಕೊಟ್ಟಿದ್ದಕ್ಕೆ ವಂದನೆಗಳು. ನಿಮ್ಮ ಚಿತ್ರ, ಅದಕ್ಕೆ ತಕ್ಕ ಪದ ಬಳಕೆ ತುಂಬಾ ಮುದ ನೀಡಿತು.
ಶಿವುಗೆ ನೀವು ಕೊಟ್ಟ ನಕ್ಷೆ, ಬಕ್ಕ ತಲೆಯ ಉಪಾಯ ತುಂಬಾ ಚೆನ್ನಾಗಿದೆ. ಅದನ್ನ ಶಿವು ತುಂಬಾ ತಾಳ್ಮೆಯಿಂದ ನಮ್ಮೆಲ್ಲರಿಗೂ ತೋರಿಸಿದ್ದಾರೆ. ನಿಮ್ಮಿಬ್ಬರಿಗೂ ಮತ್ತೊಮ್ಮೆ ವಂದನೆ.

--
ಪಾಲ

sunaath said...

ಪ್ರಕಾಶ,
ಸಿಕ್ಕಾಪಟ್ಟೆ ಅಭಿನಂದನೆಗಳು ನಿಮಗೆ ಹಾಗೂ ನಾಗೇಂದ್ರರಿಗೆ.
ಹ್ಞಾ, ಆ ಕಾಗೆಯೂ ಸಹ ನಿಮ್ಮೊಂದಿಗೆ ಸಹಕರಿಸಿದೆ. ಅದಕ್ಕೂ
ಸಹ ನನ್ನ ಅಭಿನಂದನೆಗಳು.

Kishan said...

Timing of those shots were spot on! Well done with a matching story, within another story!

ಮೂರ್ತಿ ಹೊಸಬಾಳೆ. said...

ಪ್ರಕಶಣ್ಣ,
ಕಾಗೆ ಕುಳಿತಿರುವುದು ಫೊಸ್ ಕೊಡುವುದು, ಅದಕ್ಕೆ ನೀವು ಕೊಟ್ಟ ಸಮಯೊಚಿತ ಸಂಭಾಷಣೆ,ಎಲ್ಲವೂ ನೋಡುವಾಗ ಕಾಗೆಗೆ ಒಳ್ಳೆಯ ರಿಹರ್ಸಲ್ ಕೊಟ್ಟಂತಿದೆ.

Ittigecement said...

ಗೀತವ್ವಾ..

ಶರಣ್ರೀ....

ಭಾಳ ದಿನಗಳ ನಂತರ ಇಲ್ಲಿಗೆ ಬಂದೆಯಲ್ಲವ್ವ..

ಹೀಂಗ .. ಸುಮ್ಮನ...ತೆಗದ ಫೋಟೊಗಳು ಅವು...

ಆಮೇಲೆ ಕುತೊಗೊಂಡು ಕಥಿ ಬರೆದ್ನವ್ವ...

ನಮ್ಮ ಕನ್ನಡ ಭಾಷೇ ಎಷ್ಟು ಛಂದ ಅದ..

ನೋಡ ತಾಯಿ..

ನೀವು ಧಾರವಾಡದ ಕಡಿ ಹೋದ್ರ ಮಾತು, ಊಟ ತಿಂಡಿ,

ಕನ್ನಡ ಮಾತಾಡೋ ರೀತಿ ಬೇರೇನೇ ಅವ...

ಹಾಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಹಾಸನ..

ಕೊಡಗು ನೀವು ಎಲ್ಲೆ ಹೋದರೂ ಬೇರೇನೇ ಅದ...

ಎಷ್ಟು ವೈವಿದ್ಯ..ಅಲ್ಲೇನ ನನ್ನವ್ವ..?

"ಉತ್ತರ ಕರ್ನಾಟಕದವರಿಗೆ "

ನಾನು ಅವರ ಹಾಗೆ ಮಾತಾಡಿ ..

ಅವರಿಗೊಂದು ಗೌರವ ಕೊಡೋನು ಅಂತ

ಹೀಂಗ ಬರೆದೆ...


ನೀವು ಖುಷಿ ಪಟ್ಟದ್ದಕ್ಕ..ನನ್ನ ವಂದನೆಗಳು...

Ittigecement said...

ಶಿವು ಸರ್...

ನನಗೆ ನಿಮ್ಮ ಪರಿಚಯವಾಗಿದ್ದು "ನಾಗೇಂದ್ರರಿಂದ..."

ನಿಮ್ಮ, ಅವರ ಹಾಗೂ ಮಲ್ಲಿಕಾರ್ಜುನ ರವರ ಸ್ನೇಹ ಹೀಗೆ ಇರಲಿ..

ಗೆಳೆಯರ ಬೆನ್ನುತಟ್ಟಿ, ಪ್ರೋತ್ಸಾಹಿಸಿ.., ಖುಷಿಪಡುವ...

ನಿಮ್ಮ ಮೂವರ ಹ್ರ್‍ಅದಯವೈಶಾಲ್ಯಕ್ಕೆ ನಾನು ಮೂಕನಾಗಿದ್ದೇನೆ...

ನಿಮ್ಮ ಸ್ನೇಹ ಹೀಗೆಯೆ ಇರಲಿ ಎಂದು ಪ್ರಾರ್ಥಿಸಿ...

ಶುಭ ಹಾರೈಸುವೆ...

Ittigecement said...

ಪಾಲಚಂದ್ರ...

ನೀವು ಮೆಚ್ಚಿ ದ್ದಕ್ಕೆ ವಂದನೆಗಳು..
ನೀವು ಹೇಳಿದಹಾಗೆ ಬರೆದರೆ ಇಲ್ಲಿ ಹಾಗೆ ಬರುತ್ತಾ ಇಲ್ಲ..
ಅದು ಯಾಕೆ ಎಂದು ಬಹಳ ತಲೆಕೆಡಿಸಿ ಕೊಂಡಿದ್ದೇನೆ...

ಕಾಗೆ ಪುರಾಣ ಖುಷಿ ಪಟ್ಟಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು..

ನೀವು ಬರೆದ "ರವಿಕೆಕಣದ" ಕಥೆಯ ಸ್ಪೂರ್ತಿಯಿಂದ....

ಈರೀತಿ ಬರೆದೆ...

ಶಿವು ಅಪರೂಪದ ವ್ಯಕ್ತಿ...

ಆಮನುಷ್ಯನ ಹ್ರದಯ ವೈಶಾಲ್ಯತೆಗೆ ನಾನು ಮಾರು ಹೋಗಿದ್ದೇನೆ..

ನನ್ನ ಹೆಸರು ಹೇಳದಿದ್ದರೆ ನನಗೇನೂ ಅಭ್ಯಂತರ ಇರಲಿಲ್ಲ..

ನಾನು ಹಾಗೇಯೇ ಹೇಳಿದ್ದೆ...

ಇದು ಅವರ ದೊಡ್ಡ ಗುಣ..

ಅವರ ಸಜ್ಜನಿಕೆ..

ನಿಮಗೂ , ಅವರಿಗೂ ..

ನನ್ನದೊಂದು ..ಸಲಾಮ್...!

Ittigecement said...

ಸುನಾಥ..ಸರ್...

ಉತ್ತರ ಕರನಾಟಕದವರ "ಗಂಡು ಮೆಟ್ಟಿನ ಭಾಷೆ" ಎಂದರೆ ..

ನನಗೆ ಬಹಳ ಖುಷಿ..

ನಾನು ಕಷ್ಟಪಟ್ಟು ಕಲಿತು ಮಾತಾಡಿರುವೆ..

" ತಪ್ಪಿದ್ದಲ್ಲಿ ಕ್ಷಮ ಮಾಡ್ರಿ..."

ಕಾಗೆ ಪುರಾಣ ಖುಷಿ ಪಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು...

ನಾಗೆಂದ್ರರಿಗೆ..ನಿಮ್ಮೆಲ್ಲರ ಶುಭ ಹಾರಕೆ ತಿಳಿಸುವೆ...

ಹಾಗೂ ಒಮ್ಮೆ ಅವರು ತೆಗೆದ...

ಸುಂದರ ಫೋಟೊಗಳನ್ನು

ನನ್ನ ಬ್ಲಾಗಿನಲ್ಲಿ ಹಾಕುವೆ
(ಅವರ ಅನುಮತಿ ಪಡೆದು)

ಧನ್ಯವಾದಗಳು..

Ittigecement said...

ಕಿಶನ್ ಸಾಹೇಬರ...

ಶರಣ್ರೀ ಸರ....

ನೀವು ಭಾಳ ಸೂಕ್ಷ್ಮ ಇದೀರ್ರಿ...

" ಕಥಿ.. ಒಳಗಿನ .. ಕಥಿ.".. ಕಂಡು ಹಿಡಿದು ಬಿಟ್ರಲಾ...!

ನಾಗೇಂದ್ರ.. ಒಂದು ..ಕಾಡಿನ " ಹೂ."....ರ್ರೀ..

ಅವರು ತೆಗೆದ ಫೋಟೊ ಒಮ್ಮೆ ಬ್ಲಾಗಿಗೆ ಹಾಕ್ತೀನಿ... ನೋಡ್ರಿ...

ಆಮೇಲ ನಿಮಗೇ ಗೊತ್ತಗ್ತೈತ್ರಿ...

ನಮ್ಮ "ಕಾಗೀ' ಪುರಾಣ ಖುಷಿ ಪಟ್ಟಿದ್ದಕ್ಕ...

ನಿಮಗ.. ಸಿಕ್ಕಾಪಟ್ಟೆ ನಮಸ್ಕಾರ್ರೀ...

Ittigecement said...

ಮೂರ್ತಿ....

ಆ ಕಾಗೆಗೆ ನಮ್ಮ ಹತ್ತಿರ ಏನೋ ಹೇಳ ಬೇಕು ಅನ್ನಿಸಿತ್ತೇನೋ..

ನಮ್ಮ ಬಿಟ್ಟು ಹೋಗ್ತಾನೇ ಇರ್ಲಿಲ್ಲ..

ಏನೋ ಐಡಿಯಾದಿಂದ ತೆಗೆದೆ..

ನೀವು ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

Shankar Prasad ಶಂಕರ ಪ್ರಸಾದ said...

ಫೋಟೋಗಳು ಚೆನ್ನಾಗಿವೆ.
ಕ್ಯಾಮೆರ ಸಖತ್ತಾಗಿದೆ ಅನ್ಸುತ್ತೆ. ಯಾವ್ದು ಸಾರ್?
ಕ್ಯಾನನ್ or ನಿಕಾನ್ ?

Ittigecement said...

ಶಂಕರ್....


ನಿಕೋನ್ ಕ್ಯಾಮರಾ.. ಡಿಜಿಟಲ್.

ನಿಜವಾಗಿಯೂ ಅದ್ಭುತ ಕ್ಯಾಮರಾ..!

ಕಾಗಣ್ಣನ ಪುರಾಣ ಮಜಾ ಮಾಡಿದ್ದಕ್ಕೆ ವಂದನೆಗಳು....

ಬರುತ್ತಾ ಇರಿ...

b.saleem said...

ಪ್ರಕಾಶ ಸರ್
ನಾನು ನಿಮ್ಮ ಬ್ಲಾಗನ್ನು ತಪ್ಪದೆ ಒದುತ್ತೇನೆ ಆದರೆ ಪ್ರತಿಕ್ರಿಯಿಸಿದ್ದಿಲ್ಲ.ನಾಗೆಂದ್ರ ಅವರೊಂದಿಗಿನ ಕಾಗೆ ಪುರಾಣ ಒದಿದ ಮೇಲೆ ಪ್ರತಿಕ್ರಿಯಿಸದಿರಲು ಆಗಲಿಲ್ಲ.ಕಾಗೆ ಪುರಾಣ ತುಂಬಾ ಚನ್ನಾಗಿದೆ.ನಾಗೇಂದ್ರ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಅಭಿನಂದನೆಗಳನ್ನು ತಿಳಿಸಿ. ಅವರ ಫೊನ್ ನಂಬರ ತಿಳಿಸಿ

Unknown said...

ಪ್ರಕಾಶ್ ಅವರೇ
ನೀವು ಹಾಗೂ ಶಿವೂ ಸೇರಿ, ಕನ್ನಡ ಬ್ಲಾಗ್ ಲೋಕಕೆ ಹೊಸ ಆಯಾಮ ತರುತ್ತಿದ್ದಿರ..ನಿಜಕ್ಕೂ ಒಳ್ಳೆಯಾ ಸಂಗತಿ..ಸುಂದರ ಲೇಖನ..ಮತ್ತೆ ರಂಗು ರಂಗಿನ ಫೋಟೋಗಳು..ಎಲ್ಲ ಸೂಪರ್
ಸುನಿಲ್ ಮಲ್ಲೇನಹಳ್ಳಿ

Unknown said...

nova maresi malagisuva raatri kappu, krishna nalida yamune kappu,tanna jwalisi uriyaneeva iddilihudu kappu,,kappu kaageyalu kate kanda ninna baraha chitrakoppu,-------yes true writer is one who recognise a matter which nobody can realise it.RAVI KANADDU KAVI KANDA, KAVI KANADDANU NEE KANDEYA!!!!!!!!!!

ಕೃಪಾ said...

Namaskara Prakash Hegde Avare……

Nimma blog nalli kaage purana nanu first odididhu. A nanthara yendamoori virendranath avara book na omme hiddhare kelage idadhe odhthivalla haage odhi bitte. Nimma barahakke banda comments odhadidre gatane apoorna anthanisuthe… comments saha nimma barahadhaste sundara nimma uthara kooda. Nanna colleagues nanna nagu thadedha mukhavannu nodi enadharu annabahudhu ennuva bhaavavannu meeri….oodhidini.

Bahala Yochicsi ondu nirdharakke bandhidhini nimma blogna prathi ondhu ghataneyannu aadharisi 1 Hasya pradhaana cinema thayaarissodu…….

Cinema Hesaru :- Guththigedharana khathaa prasanga

Mukhya paathradhaarigalu:-

Prakash Hegde : Ramesh

Nim Aayi:Lilavathi

Nim Appa: Kalyan Kumar

Nim Wife: Sudhaarani

Nim Maga: Master Kishan

Nim Akka: Vinaya prasadh

Nim Anna: Ramesh Bhat

Bhava: Ananthnag

Nagu: Kamalahasan

Vinayaka: Mohan

Chikkappa: Shrinivasa Muthi

Sarasathe: Girija Lokesh

Nama haakida
Photographer: Saadhu Kokila

Avana wife: Umashri



Nivuntu nim
Misses untu: Komal

Moge kaayi Raaji: Daisi Bopanna

Left right yajamana :Mukyamanthri chandru

Ulidha pathravargavannu nive soochisi.

Ondu request nimma template thumba dark aythalwa… kannige olledhalla… adru biduva haagu illa change maduva iradhe enadru idre namma kannu and manasu eradakku full kushi.

Hegde's said...

Too good Prakashanna

Ittigecement said...

ಸಲೀಮ್....

ನನ್ನ ಬ್ಲೋಗಿಗೆ ಸುಸ್ವಾಗತ...

ನೀವು ಓದಿ ಖುಷಿ ಪಟ್ಟು ಬರೆದ ಒಂದೆರಡು ವಾಕ್ಯ..

ಮತ್ತೂ ಬರೆಯಲು ಉತ್ಸಾಹ ತರುತ್ತದೆ...

ಹೀಗೆ ಪ್ರತಿಕ್ರಿಯೆ ಕೊಡುತ್ತಾ ಇರಿ...


ನಾಗೇಂದ್ರರವರಿಗೆ ನಿಮ್ಮ ಧನ್ಯವಾದಗಳನ್ನು ತಿಳಿಸುವೆ...

ಅವರ ಒಂದು ಬ್ಲಾಗು ಸಧ್ಯದಲ್ಲೇ ಬರಲಿದೆ...

ಧನ್ಯವಾದಗಳು.

Ittigecement said...

ಸುನಿಲ್.....

ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಬ್ಲಾಗಿಗೂ ನಾನು ಬಂದಿದ್ದೆ..

ನೀವು ಚೆನ್ನಾಗಿ ಬರೆಯುತ್ತೀರಿ...

ಅಭಿನಂದನೆಗಳು..

ಪ್ರತಿಕ್ರಿಯಿಸಿದ್ದಕ್ಕೆ...

ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

Ittigecement said...

ವಾಣಿ ಮೇಡಂ...

ನಮಸ್ಕಾರ್ರೀ..ಯವ್ವ...

ನನ್ನ ಲೇಖನಕ್ಕಿಂತ ನಿಮ್ಮ ಕವನ...

ಭಾಳ ಛಂದ ಐತಲ್ರೀ...!

ನೀವು ನಿಮ್ಮ ಬ್ಲಾಗಿನಲ್ಲಿ ಹೀಗೆ ಬರೀರಿ...

ನೀವು ಒಳ್ಳೆಯ ಬರಹಗಾರ್ತಿ ಅಂತ ಕೇಳೇನ್ರಿ... ಮೇಡಂ..

ನಿಮ್ಮ ಬ್ಲಾಗಿನ ಬರಹಕ್ಕ ನಾವೆಲ್ಲ ಕಾದು ಕುಳಿತೇವ್ರಿ...!

ನಿರಾಶಾ.. ಮಾಡಬೇಡ್ರಿ..ತಾಯಿ...

ನಿಮ್ಮ ಪ್ರತಿಕ್ರಿಯೆಗೆ ಶರಣ್ರೀ ...

ಮತ್ತ ಹೀಗೆ ಬರ್ತಾ ಇರ್ರೀ...

Ittigecement said...

ಕ್ರಪಾ...

ನಿಮ್ಮ ಪ್ರತಿಕ್ರಿಯೆ ಓದಿ ಬಹಳ ..ಬಹಳ ಖುಷಿ ಆಯಿತು...

ಬರಹಗಾರನಲ್ಲದ ನನಗೆ ಇಂಥಹ ಪ್ರತಿಕ್ರಿಯೆಗಳು...

ಉತ್ಸಾಹ ತರುತ್ತದೆ...

ಮತ್ತೆ ಬರೆಯೋಣ ಅನಿಸುತ್ತದೆ...

ನಿಮ್ಮ ಆಯ್ಕೆಗಳು ಸೂಪರ್...!

ನೀವೆ ಸಿನೇಮಾ ಮಾಡುವಷ್ಟು ಹಣ ನಿಮಗೆ ಸಿಗಲೆಂದು ಪ್ರಾರ್ಥಿಸುವೆ...

ನಿಮಗೆ ಇನ್ನೊಂದು ಮಜಾ ವಿಷಯ ಹೇಳ ಬೇಕು...

ನನಗೂ ಸಿನೇಮಾದಲ್ಲಿ ಪಾರ್ಟು ಮಾಡಬೇಕೆಂದು ಆಸೆ ಇತ್ತು...
ಅದಕಾಗಿ "ಗಾಂಧಿನಗರದಲ್ಲಿ" ಒಡಾಡಿದ್ದೆ..

ಅದನ್ನು ಇನ್ನೊಮ್ಮೆ ಬರೆಯುವೆ...

ಇಂಥದೊಂದು ವಿಷಯ ಜ್ಞಾಪಿಸಿದ್ದಕ್ಕೆ ವಂದನೆಗಳು...

ನಿಮಗೆ ಹ್ರದಯಪೂರ್ವಕವಾಗಿ...
ಧನ್ಯ..
ಧನ್ಯವಾದಗಳು...

Ittigecement said...

ಹೆಗಡೆಯವರೆ...

ಬಹಳ ದಿನಗಳ ನಂತರ ಮತ್ತೆ ಸ್ವಾಗತ...

ನಿಮ್ಮ ಪ್ರತಿಕ್ರಿಯೆ...

ಹೊಸ ಕಾರು ಖರಿದಿಸಿದಷ್ಟು ಸಂತಸ ತಂದಿದೆ...!

ಹೇಗಿದೆ ನಿಮ್ಮ ಹೊಸ ಕಾರು..?

ಹೀಗೆ ಬರುತ್ತಾ ಇರಿ...

ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ನನ್ನ ಹೆಂಡತಿ ಮಗನೊಂದಿಗೆ ವಿದೇಶ ಪ್ರವಾಸ ಮಾಡಿಲ್ಲ, ಪಂಚತಾರಾ ರಿಸಾರ್ಟ್ ಗೆ ಹೋಗಿಲ್ಲ. ಆದರೆ, ಅವಕ್ಕಿಂತಲೂ ಅತ್ಯುತ್ತಮವಾದ ಸ್ಥಳಕ್ಕೆ ಹೋಗಿದ್ದೇವೆ ಎಂಬ ಹೆಮ್ಮೆ ಇದೆ. ಅದೇ ಮುತ್ಮುರ್ಡು. ಉತ್ತರ ಕನ್ನಡ ಶೈಲಿಯ ವಿಶಾಲವಾದ ಹೆಂಚು ಹೊದಿಸಿದ ಮನೆ. ಮುಂದೆ ಅಡಿಕೆ ತೋಟ, ಹಿಂದೆ ಕಾಡು, ಅದರ ಪಕ್ಕ ಹೊಳೆ. ಸ್ವರ್ಗದ ಒಂದು ತುಂಡು ಕತ್ತರಿಸಿ ತಂದಿರಿಸಿದಂತಿದೆ. ಇನ್ನು ನಾಗೇಂದ್ರ - ಪುಟ್ಟ ಹಳ್ಳಿಯಲ್ಲಿದ್ದು ವಿಶ್ವಮಾನ್ಯ ಸಾಧನೆ ಮಾಡುವುದು ಸಣ್ಣ ಮಾತಲ್ಲ. ಉತ್ತಮ ಪಿಕ್ಟೋರಿಯಲ್ ಫೋಟೋಗ್ರಾಫರ್, ಸೃಜನಶೀಲ ಮತ್ತು ಸಹೃದಯಿ. ಆದಿಕೈಲಾಸ ಮತ್ತು ಮಾನಸಸರೋವರ ಯಾತ್ರೆ ಮಾಡಿ ಬಂದಿರುವ ಪುಣ್ಯಜೀವಿ. ಯಾವಾಗಲೂ ನಮ್ಮೊಂದಿಗೆ ಮಾತನಾಡುತ್ತ ಇರುತ್ತಿದ್ದ ಅವರ ಪತ್ನಿ ನಾಗರತ್ನ ಅವರು ಅನ್ನಪೂರ್ಣೇಶ್ವರಿ. ಯಾವಾಗ ಅಡುಗೆ ಮಾಡುತ್ತಿದ್ದರೋ ದೇವರಿಗೇ ಗೊತ್ತು. ಎಷ್ಟೊಂದು ವಿಧವಿಧ, ಹೊತ್ತಿಗೊತ್ತಿಗೂ ಸಿಹಿ ತಿಂಡಿ. ನಾನಾ ಬಗೆಯ ಉತ್ತರ ಕನ್ನಡ ಶೈಲಿಯ ಅಡುಗೆಯ ರುಚಿಯನ್ನು ಮೂರು ದಿನದಲ್ಲೇ ಸವಿದೆವು. ಅವರ ಮಕ್ಕಳು ಸ್ವರ್ಗದಂತಹ ಸ್ಥಳದಲ್ಲಿರುವುದರಿಂದ "ಚಿಲ್ಡ್ರನ್ ಆಫ್ ಹೆವೆನ್" ಅನ್ನಲು ಅಡ್ಡಿಯಿಲ್ಲ. ಅವರು, ಅವರ ಮನೆಯವರು, ತಂದೆ, ತಾಯಿ, ನಾವು, ಮಕ್ಕಳು ಎಲ್ಲರೂ ಸೇರಿಕೊಂಡು ಎಲೆಯಡಿಕೆ ತಿನ್ನುವುದೇನು, ಕ್ರಿಕೆಟ್ ಆಡುವುದೇನು.... ನಮಗೆಲ್ಲಾ ವಯಸ್ಸಿನ ಪೊರೆ ಕಳಚಿತ್ತು... ಎಲ್ಲರೂ ಮಕ್ಕಳಾಗಿ ಹಾಡಿ ನಲಿದೆವು. ಇಷ್ಟೆಲ್ಲಾ ಸೊಗಸಿದ್ದ ಮೇಲೆ ನಾವಲ್ಲಿ ಮಾಡಿದ ಫೋಟೋಗ್ರಫಿ ಚೆಂದವಿರಲೇಬೇಕಲ್ಲವೇ?

Ittigecement said...

ಮಲ್ಲಿಕಾರ್ಜುನ್...

ನಿಮ್ಮ ಪ್ರತಿಕ್ರಿಯೆ ಓದಿ.. ಮತ್ತೆ ಹಳ್ಳಿಗೆ ಹೋಗಿ ಬಂದೆ..

ನಿಮ್ಮ ಬರವಣಿಗೆ ಸೊಗಸಾಗಿದೆ..

ಅಂಥಹ "ಕುಗ್ರಾಮದಲ್ಲಿದ್ದು" ಸಾಧನೆ ಮಾಡಿದ..

ನಾಗೇಂದ್ರರವರಿಗೆ ಅಭಿನಂದನೆ ಹೇಳೋಣ..

ಪ್ರತಿಕ್ರಿಯೆಗಾಗಿ ವಂದನೆಗಳು...

Guruprasad said...

ಹೊಸ ಕಾಗೆ ಕಥೆ ನೋಡಿ,, ತುಂಬ ಖುಷಿ ಆಯಿತು,, ಫೋಟೋಗಳು ಅದಕ್ಕೆ ಪೂರಕವಾಗಿ ಇರುವ ನಿಮ್ಮ ಕಲ್ಪನಾ ಬರಹ ,,, ವೆರಿ ನೈಸ್.... ಗುಡ್ ಸರ್ ತುಂಬ ಚೆನ್ನಾಗಿ ಇದೆ...
ಗುರು

Ittigecement said...

ಗುರುರವರೆ..

ನನ್ನ ಬ್ಲಾಗಿಗೆ ಸ್ವಾಗತ...

ಕಾಗೆಯನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು

ಹೀಗೆ ಬರುತ್ತಾ ಇರಿ...

ಕ್ಷಣ... ಚಿಂತನೆ... said...

ನಮಸ್ಕಾರ ಪ್ರಕಾಶ್ ಅವರೆ.

ಕಾಗೆ ಪುರಾಣದ ಬರಹ ಮತ್ತು ಛಾಯಾಚಿತ್ರಗಳು ತುಂಬಾ ಚೆನ್ನಾಗಿವೆ. ಛಾಯಾಗ್ರಾಹಕರಿಗೆ ಧನ್ಯವಾದಗಳು.

Ittigecement said...

ಕ್ಷಣ ಚಿಂತನೆ..

ನನ್ನ ಬ್ಲಾಗಿಗೆ ಸ್ವಾಗತ..

ಮೆಚ್ಚಿಕೊಂಡಿದ್ದು ಖುಷಿಯಾಯಿತು..

ನಿಮ್ಮ ಧನ್ಯವಾದಗಳನ್ನು ನಾಗೇಂದ್ರ ಅವರಿಗೆ ತೀಳಿಸುವೆ..

ಪ್ರತಿಕ್ರಿಯೆಗೆ ಧನ್ಯವಾದಗಳು...

Jagadeesh Balehadda said...

ತುಂಬಾ ಸೊಗಸಾಗಿದೆ.