Friday, January 16, 2009

ಪ್ರಕ್ರತಿ... ಬಲು ಸುಂದರ.....!!


ನನ್ನೂರು ಮಲೆನಾಡಿನ ತಪ್ಪಲು...

ದಟ್ಟವಾದ ಬೆಟ್ಟ, ಗಿಡ, ಮರಗಳ ಮಧ್ಯೆ ಕಳೆದ ಬಾಲ್ಯ...

ಸಣ್ಣವನಿದ್ದಾಗ ಪಾಟಿ ಚೀಲ...

ಹೆಗಲಿಗೇರಿಸಿ
... ಶಾಲೆಗೆ ಹೋಗುವಾಗ..

ಬಣ್ಣ.... ಬಣ್ಣದ ಹಕ್ಕಿ .....

ನೋಡಿ
.... ಸೋಜಿಗ ನಾಗುತ್ತಿದ್ದೆ.....!!

ಅದರಂತೆ ಕೂಗಲು ..... ಪ್ರಯತ್ನಿಸುತ್ತಿದ್ದೆ...!!

ಅದರಂತೆ ನನಗೂ ಹಾರಲು ಬಂದಿದ್ದರೇ.....!! ? ..

ಗಿಡಗಳ ಮೇಲೆ ಕುಳಿತು.. ಹಣ್ಣುಗಳನ್ನು ತಿನ್ನ ಬಹುದಲ್ಲ..!

ಅವುಗಳನ್ನು ನೋಡಿ ಅಸೂಯೆ ಕೂಡ ಆಗುತ್ತಿತ್ತು...!


ಶಾಲೆಯ ದಾರಿಯಲ್ಲಿ ದೊಡ್ಡದಾದ ಬಸರಿ ಮರ...!

ಬೆಟ್ಟದ ಹಣ್ಣುಗಳು...!

ಅವುಗಳ ರುಚಿ...!! ನೆಲ್ಲಿಕಾಯಿ...

ಮಾವಿನ ಹಣ್ಣು..ಸಳ್ಳೆ ಹಣ್ಣು....

ನೆರಳ
ಹಣ್ಣು.. ನುರುಕಲು ಹಣ್ಣು...

ಹಲಿಗೆ ಹಣ್ಣು... ರಂಜಲೇ ಹಣ್ಣು....

ಒಂದೇ.. ಎರಡೇ...?

ಒಹ್......!!

ಅದೆಲ್ಲಾ... ಈಗೊಂದು... ಕನಸಂತೆ.. ಕಾಣುತ್ತದೆ...!

ಪರೀಕ್ಷೆಯ ಸಮಯದಲ್ಲಿ ಮನೆಯ ಹಿಂದಿನ .....

ಬೆಟ್ಟದ
.... ಹಲಸಿನ ...ಮರದ ಕೆಳಗೆ ಓದಲು ಹೋಗುತ್ತಿದ್ದೆವು..

ಅಲ್ಲಿ ಶಾಂತ ವಾತಾವರಣ ಅನ್ನುವದೇ ಇಲ್ಲ... !

ಹಕ್ಕಿಗಳ ಚಿಲಿಪಿಲಿ... ಸದ್ದು...!!

ಒಣಗಿದ ಎಲೆಗಳ ಚರ ಚರ ಸದ್ದು...!!

ಅದೆಲ್ಲ ... ಒಂದು ರೀತಿಯ ಸಂಗೀತ...!!

ಅಲ್ಲಿಯ ಮೌನವೂ ಬಲು ಹಿತವಾಗಿರುತ್ತದೆ......!!


ಕೆಲವು ದಿನಗಳ ಹಿಂದೆ ಸಿಂಗಾಪುರ ಹೋಗಿ ಬಂದೆ...

ಸಿಂಗಾಪುರದ ಪಕ್ಷಿಧಾಮದಲ್ಲಿ ಕಂಡ ಕೆಲವು ಹಕ್ಕಿಗಳು ಇವು...

ಅಲ್ಲಿ ದಿನ ಪೂರ್ತಿ ಓಡಾಡಿದೆ...

ಮನದಣಿಯೆ.. ಹಕ್ಕಿಗಳನ್ನು ನೋಡಿದೆ...

ಅದು ಸ್ವರ್ಗ...!

ಪ್ರಾಕ್ರತಿಕವಾಗಿ ಅಲ್ಲಿ ಏನು ಇಲ್ಲ...!

ಎಲ್ಲ ಮಾನವ ನಿರ್ಮಿತ.... !

ಅವರ ಕೆಲಸ, ದಕ್ಷತೆ ನೋಡಿ ಮೂಕನಾದೆ....

ಅಲ್ಲಿಯ ವ್ಯವಸ್ಥೆ..,

ಇಚ್ಚಾ ಶಕ್ತಿಗೆ ತಲೆ ದೂಗಿದೆ....!


ಇದೆಲ್ಲ ನೋಡಿದ ಮೇಲೆ ನನ್ನ ಮಗ ಕೇಳಿದ...

"ಅಪ್ಪಾ... ಇವೆಲ್ಲ ನಮ್ಮಲ್ಲಿ ಇಲ್ಲವಾ...?

ಇಲ್ಲಿರುವ ಎಲ್ಲ ಹಕ್ಕಿಗಳ ಹೆಸರು ನಿನಗೆ ಗೊತ್ತಲ್ಲ...!

ಅಲ್ಲಿ ನನಗೇಕೆ ತೋರಿಸಿಲ್ಲ...?...? "


ನಮ್ಮುಉರಲ್ಲಿ ನಾನು ಏನು ತೋರಿಸಲಿ... ಇವನಿಗೆ...?

ಬೋಳು ಬೆಟ್ಟದಲ್ಲಿ...! ಮರಗಳೇ ಇಲ್ಲದ ಕಾಡಿನಲ್ಲಿ...!


ನನ್ನೂರು ಮಲೆನಾಡು...

ಈಗ ಹೆಸರಿಗೆ... ಮಾತ್ರ....!

ಹಳೆಯ ಸೊಬಗು ಈಗ... ನಶಿಸುತ್ತಿದೆ....

ಮಳೆ
ಕಡಿಮೆಯಾಗುತ್ತಿದೆ...

ಮೊದಲಿನ ಹಾಗೆ ಹಗಲು ರಾತ್ರಿ.......

ಒಂದೇ ಸವನೆ ಸುರಿಯುವ ಮಳೆ ಈಗಿಲ್ಲ....!

ಮುಂದಿನ ಪೀಳಿಗೆಗೆ... ನಾವು ಏನು ಕೊಡುತ್ತಿದ್ದೇವೆ...?

ಏನು ಉಳಿಸುತ್ತಿದ್ದೇವೆ...?

ಭವಿಷ್ಯ... ಭಯಾನಕವಾಗಿದೆ...!

ಊಹಿಸಲು ಹೆದರಿಕೆಯಾಗುತ್ತದೆ...!

ಚಂದದ ಪ್ರಕ್ರತಿಯ ಮೇಲೆ ಅತ್ಯಾಚಾರ,, ಆಕ್ರಮಣ...

ಬಹಳ...
ದುಃಖ ತರಿಸುತ್ತದೆ...

45 comments:

Ashok Uchangi said...

ಇಬ್ಬರೂ ಒಂದೇ ಸಮಯದಲ್ಲಿ ಪೋಸ್ಟ್ ಮಾಡಿದ್ದೇವೆ.ಸಾಮ್ಯತೆಯೆಂದರೆ ಹಕ್ಕಿಗಳ ಬಗ್ಗೆ.
ಇನ್ನೊಂದು ಸಾಮ್ಯತೆಯೆಂದರೆ ನಮ್ಮಿಬ್ಬರ ಊರಿನ ಪರಿಸ್ಥಿತಿ ಒಂದೇ ಬಗೆಯದು.ನಿಮ್ಮ ದುಃಖದಲ್ಲಿ ನಾನೂ ಭಾಗಿ.
ಅಶೋಕ ಉಚ್ಚಂಗಿ
http://mysoremallige01.blogspot.com/

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಚೆಂದದ ಚಿತ್ರಗಳು. ಹಾಗೂ ಸುಂದರ ನುಡಿ ಅವಕ್ಕೆ ಹೊಂದುವಂತೆ.
ಲೇಖನ ಮನ ಮುಟ್ಟುವಂತಿದೆ.

ನಿಜ, ಈಗ ಮಲೆನಾಡು ಹೆಸರಿಗಷ್ಟೇ ಆಗಿದೆ. ಮರಗಿಡಗಳೂ ಇಲ್ಲ. ಮಳೆಬಂದಾಗ ಪುರ್ರನೆ ಹಾರಿ ಗೂಡುಸೇರುವ ಹಕ್ಕಿಗಳೂ ಇಲ್ಲ. ಮಳೆಯೂ ಇಲ್ಲ. ಅಕ್ಕಿ ಆರಿಸುವವರೂ ಕಡಿಮೆ. ಅಕ್ಕಿ ಆರಿಸುತ್ತಿದ್ದರೂ ಪುರ್ರೆಂದು ಹಾರಿಬರುವ ಗುಬ್ಬಕ್ಕಿಗಳಿಲ್ಲ.
ಗಿಡದೊಳಗಿನ ಹೂ-ಹಣ್ಣುಗಳೇ ಕಾಣಿಸುತ್ತಿಲ್ಲವಲ್ಲ ಅಂತ ನೋಡಿದರೆ ಇದೀಗ ಗಿಡವೂ ಇಲ್ಲ.
ಗುಬ್ಬಕ್ಕಿಗಳೆಲ್ಲ ಹಾರಿಹೋಗಿ ಚಿತ್ರದಲ್ಲಿ ಕುಳಿತಿವೆ. ಮಕ್ಕಳಿಗೆ ಇಲ್ಲಿವೆ ನೋಡಿ ಗುಬ್ಬಕ್ಕಿಗಳು ಅಂತ ಚಿತ್ರದಲ್ಲಿ ತೋರಿಸಿ ಅಚ್ಚರಿಪಡುವ ಕಾಲಬಂದಿದೆ.ಬೇಸರವಾಗುತ್ತದೆ.

ಚೆಂದದ ಬರಹಕ್ಕೆ ಹಾಗೂ ಅತೀ ಸುಂದರ ಚಿತ್ರಗಳಿಗೆ ಧನ್ಯವಾದ.

Rajendra Bhandi said...

ಹ್ವಾ, ಸರಸತ್ತೆಮನೆ ನಾಯಿ ಬುಸುಕ್ ಅಂದಿದ್ದನ್ನ ಮತ್ತೊಂದ್ಸಲ ನೋಡನ ಹೇಳಿ ಬಂದಿ. ಮಸ್ತ್ ಮಸ್ತ್ ಹೊಸ ಫೋಟೋಸ್ ಬಂದಿಗಿದು.ಮಸ್ತ್ ಫೋಟೋ.
ಊರಬದಿ ಬ್ಯಾಣ ಬೆಟ್ಟಕ್ಕೆ ಹೋದ್ರೆ ನಾವೆಲ್ಲ ಶಣ್ಣಿದ್ದಾಗ ನೋಡ್ದಂತಾದು ಎಂತುದು ಕಾಣ್ತಿಲ್ಲೆ ಖರೆಯಾ.
ಬ್ಲಾಗ್ ಓದ್ತಾ ಇದ್ದಿ. ಖುಷಿ ಆಗ್ತು ಓದಲ್ಲೆ.

ತೇಜಸ್ವಿನಿ ಹೆಗಡೆ said...

ಪ್ರಕಾಶ್ ಅವರೆ,

ತುಂಬಾ ಮುದ್ದಾಗಿವೆ, ಕಣ್ಸೆಳೆಯುವಂತಿವೆ ಮುದ್ದು ಹಕ್ಕಿಗಳು. ನನಗೂ ಹಕ್ಕಿಗಳೆಂದರೆ ತುಂಬಾ ಇಷ್ಟ. ಚಿಕ್ಕದಿರುವಾಗ ನಾನೂ ಹೇಳುತ್ತಿದ್ದೆ. "ಅಪ್ಪಾ ನಾ ಹಕ್ಕಿಯಾಗಕಾಗಿತ್ತು. ಹಾರ್ಕತ್ತಾದ್ರೂ ಹೋಪಲೆ ಬತ್ತಿತ್ತು ಅಲ್ದಾ.." ಎಂದು ಕೇಳುತ್ತಿದ್ದೆ. ಆಗೆಲ್ಲಾ ಅಪ್ಪ.."ಪಾಪ ಅದ್ರ ಕಷ್ಟ ಅದ್ಕೆ ಮರಿ.. ಅದ್ಕೆ ದಿನಾ ಒಂದೆಲ್ಲಾ ಒಂದು ಭಯ ಇರ್ತು. ತಿಂಬಲೂ ಅದ್ಕೆ ಭಯನೇಯಾ.. ಅಂಥ ಭಯದ ನೆರಳಲ್ಲಿ ನಿಂಗೆ ಬದ್ಕವಾ..?" ಎಂದಾಗ ಬೇಡವೆಂದೆನಿಸುತ್ತಿತ್ತು. ಮುಂದೆ ಹಕ್ಕಿ ಸಾಕಬೇಕೆನಿಸಿದಾಗಲೂ ಅಪ್ಪಾ "ಪಂಜರದೊಳ್ಗೆ ಹಕ್ಕಿ ಕೂಡಿ ಹಾಕಿಟ್ರೆ ದಿನಾ ಅದು ಶಾಪ ಹಾಕ್ತು.. ನಿನ್ನ ಕೂಡಿ ಹಾಕ್ದ್ರೆ ಎಂತಾ ಅನಿಸ್ತು.. ಅದೇಯ ಅದ್ಕೂವಾ.." ಎಂದಾಗ ಮುಕ್ತವಾಗಿ ಹಾಕುವ ಹಕ್ಕಿಗಳೇ ಬಲು ಚೆಂದ ಎನಿಸಿದವು.

ಸುಮಾರು ಆರು ವರುಷದಿಂದೀಚೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ದಾರಿಯಂಚಿನಲ್ಲಿ ಕಂಡುಬಂದ ಕರುಣಾಜನಕ ಚಿತ್ರಣವನ್ನು ನನ್ನ ಬ್ಲಾಗಲ್ಲೂ ಕಾಣಿಸಿದ್ದೆ. ಅದೆಷ್ಟೋ ಹಕ್ಕಿಗಳು ತಮ್ಮ ಗೂಡುಗಳನ್ನು ಕಳೆದುಕೊಂಡ ದೃಶ್ಯ ಮನಮಿಡಿಯುವಂತಿತ್ತು. ಸಮಯವಾದಾಗ ಭೇಟಿ ಕೊಡಿ...

http://manasa-hegde.blogspot.com/2008/08/blog-post.html

ಸುಂದರ ಚಿತ್ರಗಳನ್ನೊಳಗೊಂಡ ಕಣ್ತೆರೆಯುವ ಲೇಖನ....ಚೆನ್ನಾಗಿದೆ.

sunaath said...

ಸಿಂಗಾಪುರದ ಹಕ್ಕಿಗಳು ಬಲು ಮುದ್ದಾಗಿವೆ. ಅವುಗಳನ್ನು ಫೋಟೋ ಮೂಲಕ ತೋರಿಸಿದ್ದಕ್ಕಾಗಿ ಧನ್ಯವಾದಗಳು.
ನಮ್ಮೂರಲ್ಲೂ ಸಹ ಈಗ ಬೋಳು ಗುಡ್ಡಗಳಷ್ಟೇ ಇರೋದು!

ಮನಸು said...

ಪ್ರಕಾಶ್ ಸರ್..

ಮಲೆನಾಡ ಹಸಿರ ಸಿರಿ ಕಣ್ಣಿಗೆ ಸೂರೆಗೊಳ್ಳುತ್ತೆ..... ತುಂಬಾ ಚೆನ್ನಾಗಿದೆ ನಿಮ್ಮ ಬಾಲ್ಯದ ಚಿತ್ರಣ

ಚಂದ್ರಕಾಂತ ಎಸ್ said...

ಮೊದಲನೆಯದಾಗಿ ಹಕ್ಕಿಗಳು ಮನಸೂರೆಗೊಂಡವು.ಹಕ್ಕಿಗಳ ಹೆಸರು ಕೊಟ್ಟಿದ್ದರೆ ಬಹಳ ಚೆನ್ನಾಗಿತ್ತು. ನಾನು ಯಾವಾಗಲೂ ಟೀಕಿಸುವೆ ಅಂದುಕೊಳ್ಳಬೇಡಿ. ಅಷ್ಟು ಸುಂದರ ಹಕ್ಕಿಗಳು ! ಆದ್ದರಿಂದ ಹೆಸರು ತಿಳಿಯಬೇಕಿತ್ತೆನಿಸಿತು.

ಅವೆಲ್ಲವೂ ಸಿಂಗಾಪುರದ ಹಕ್ಕಿಗಳು ಎಂದು ತಿಳಿದು ಆಶ್ಚರ್ಯವಾಯಿತು.

ಇಲ್ಲಿ ಪ್ರತಿಕ್ರಿಯಿಸುವವರೆಲ್ಲಾ ಒಂದಲ್ಲಾ ಒಮ್ದು ಪ್ರಕೃತಿ ಸೌಂದರ್ಯದ ಬೀಡಿಂದ ಬಂದವರು. ಆದರೆ ನಾನಂತೂ ಅಂತಹ ಸುಂದರ ಹಕ್ಕಿಗಳನ್ನು ಕಂಡೇ ಇಲ್ಲ.

PaLa said...

ಪ್ರಾಕಾಶ್,
ಹಕ್ಕಿಯ ಚಿತ್ರಗಳು ಸುಂದರವಾಗಿವೆ. ನೀವು ಹೇಳಿದ್ದು ನಿಜ, ನಾವು ಪ್ರಕೃತಿಯ ಮೇಲೆ ಮಾಡುತ್ತಿರುವ ಅತ್ಯಾಚಾರ ನೋಡಿದ್ರೆ ಭಯ ಆಗುತ್ತೆ.
ಕಣ್ಣಿಗೆ ಎದ್ದು ಕಾಣಿಸೋ ಇವುಗಳೇ ಇಷ್ಟೋಂದು ನಶಿಸಿ ಹೋಗ್ತಾ ಇರಬೇಕಾದ್ರೆ ಎಷ್ಟೋಂದು ಬಗೆಯ ಗುರುತಿಸದ ಕೀಟಗಳು ಸಶಿಸಿ ಹೋಗಿರಬಹುದಲ್ವ?
ಅವುಗಳ ಜೀವನವೂ ವೈವಿಧ್ಯವಾದದ್ದು, ಮೊಟ್ಟೆ, ಲಾರ್ವ, ಪ್ಯೂಪ, ಕೀಟ ಒಂದೇ ಜನ್ಮದಲ್ಲಿ ಎಷ್ಟೊಂದು ಅವತಾರ, ಅದೂ ಸುಂದರ ವರ್ಣ ಸಂಯೋಜನೆಯೊಂದಿಗೆ.

ಕೀಟಗಳ ಬಗ್ಗೆ ಏನಕ್ಕೆ ಬಂತಪ್ಪಾ ಅಂದ್ರೆ, ಕೀಟ ಮತ್ತು ಹಣ್ಣು ಹಕ್ಕಿಗಳ ಸಾಮಾನ್ಯ ಆಹಾರ. ಒಂದು ನಾಶ ಆದ್ರೆ ಇನ್ನೊಂದು.. ಬಹುಷ: ನಾವು ನಾಶ ಆದ್ರೆ ಏನೂ ನಾಶ ಆಗದೇನೋ!

--
ಪಾಲ

ಚಿತ್ರಾ said...

ಪ್ರಕಾಶ್ ,
ನಂಗೂ ಸಣ್ಣಕಿದ್ದಾಗಿಂದೆಲ್ಲ ನೆನಪಾತು . ಈಗ ಊರಿಗೆ ಹೋದ್ರೆ ,ಬರೀ ಬೋಳು ಬೋಳು !ಯಾವ ಹಣ್ಣು ಇಲ್ಲೆ, ಹೂವೂ ಇಲ್ಲೆ.ಗಿಡ-ಮರ ಇದ್ರಲ್ದ ಅದೆಲ್ಲ ಕಾಣದು ?
ಚಳಿಗಾಲದ ಬೆಳಗಿನಲ್ಲಿ ಎಲೆಕ್ಟ್ರಿಕ್ ತಂತಿಮೇಲೆ ಸಾಲಾಗಿ ಕೂತು ಬಿಸಿಲು ಕಾಸ್ತಿದ್ದಿದ್ದ ಹಕ್ಕಿಗಳು ,ಪುಟ್ಟ ಪುಟ್ಟ ಗುಬ್ಬಚ್ಚಿಗಳು, ಎಂತದೂ ಈಗ ಕಾಣಿಸ್ತ್ವಿಲ್ಲೆ .ಸಣ್ಣಕಿದ್ದಾಗ ನಮ್ಮನೆ ಎದುರು ದೊಡ್ಡ ಕೆರೆ ,ಅದರಾಚೆಗೆ ದೊಡ್ಡ ಕಾಡು ಇತ್ತು. ಈಗ ೨-೩ ವರ್ಷದ ಹಿಂದೆ ನೋಡಿದಾಗ ಕೆರೆ ಆಚೆಗೆ ಒಂದು ಮರಾನೂ ಕಾಣ್ತಿಲ್ಲೆ . ಅದನ್ನ ನೋಡಿ ನಂಗೆಒಂಥರಾ ಸಂಕಟ ಆಗೋತು .

ಸಿಂಗಾಪುರದ ಪಕ್ಷಿಧಾಮ ನೋಡಿದಾಗ ನಂಗೂ ರಾಶಿ ಖುಷಿಯಾಗಿತ್ತು. ಪ್ರಪಂಚದ ಎಲ್ಲ ಭಾಗಗಳಿಂದ ಹಕ್ಕಿ ತಗಬಂದು ,ಆ ಪ್ರದೇಶದಲ್ಲಿರ ತರಾದ್ದೇ ಮರಗಿಡನೂ ನೆಟ್ಟು ,ಕಾಪಾಡುವ ರೀತಿ ನೋಡಿ, ನಮ್ಮೂರ ಹಕ್ಕಿಗಳನ್ನು ನೆನೆಸಿಕ್ಯಂಡು ಬೇಜಾರೂ ಆಗಿತ್ತು.

ಚಿತ್ರಾ ಸಂತೋಷ್ said...

ಪ್ರಕಾಶ್ ಸರ್..ಪ್ರಕೃತಿ ಸಿರಿಗೆ ಸರಿಸಾಟಿ ಏನಿದೆ? ಕ್ರೂರ ಮನುಷ್ಯ ಅದ ಹಾಳುಮಾಡುವಾಗ ತುಂಬಾ ಬೇಜಾರಾಗುತ್ತೆ ಅಲ್ವೇ? ಹಕ್ಕಿಗಳ ಫೋಟೋ ಸೂಪರ್..
-ಚಿತ್ರಾ

shivu.k said...

ಪ್ರಕಾಶ ಸಾರ್,

ತಡವಾಗಿ ಬರುತ್ತಿರುವುದರಿಂದ ಕ್ಷಮಿಸಿ.....ನಿನ್ನೆ ಮತ್ತು ಇವತ್ತು .. ಯಾರ ಬ್ಲಾಗಿಗೂ ಹೋಗಿರಲಿಲ್ಲ....

ನಿಮ್ಮ ಹಕ್ಕಿ ಫೋಟೊಗಳು ಚೆನ್ನಾಗಿವೆ....ತಾಂತ್ರಿಕವಾಗಿಯೂ ಉತ್ತಮವಾಗಿಯೆ ಇವೆ... ನಾನು ಕಾನ್ಸೂರಿನ ಗೆಳೆಯನ ಮನೆಗೆ ಹೋದಾಗ ಮಲೆನಾಡು ದೊಡ್ಡ ಆಶ್ಚರ್ಯವೆನಿಸಿತ್ತು...ಅದಕ್ಕೆ ಗೆಳೆಯ " ಇದು ಮೊದಲಿನದಷ್ಟು ದೊಡ್ಡದೇನಲ್ಲ ಬಿಡು..." ಅಂದಾಗ ಬೇಸರವಾಗಿತ್ತು.....ಈ ಅರ್ಥಿಕ ಬಿಕ್ಕಟ್ಟಿನಿಂದಾಗಿ ಮುಂದೆ ಪ್ರಾಣಿ ಪಕ್ಷಿಗಳಿಗೆ ಒಳ್ಳೆಯದಾಗಬಹುದೇನೋ....

Greeshma said...

ಹಾಯ್,

ತುಂಬ ತುಂಬ ಚೆಂದದ ಬರಹ ;ಓದುತ್ತಿದ್ದಂತೆ ನನ್ನೂರು, ಬಾಲ್ಯದ ಚಿತ್ರಗಳು ಕಣ್ ಮುಂದೆ ಬಂದವು. ಯಾಕೆಂದರೆ ನಾನೂ ಮಲೆನಾಡಿನಲ್ಲೇ ಹುಟ್ಟಿ ಬೆಳೆದಿದ್ದು,ಹಲಗೆ,ನಂಜಲೆ,ಸಂಪಗೆ ಹೀಗೇ ಹಲವು ಕಾಡುಹಣ್ಣುಗಳ ರುಚಿ ಈಗಲೂ ನೆನಪಿದೆ ನನಗೆ;ತುಂಬ ಸುಂದರ ದಿನಗಳವು.

ಬರಹ ಲವಲವಿಕೆಯಿಂದ ಶುರುವಾಗಿ ಕೊನೆಗೆ ಗಾಢ ವಿಷಾದದಿಂದ ಮುಗಿಯುತ್ತದೆ . . .ದುರಂತ ವಾಸ್ತವವನ್ನು ಕಣ್ಣ ಮುಂದಿಡುತ್ತದೆ . . .

ಭಾರ್ಗವಿ said...

ಎಲ್ಲರಿಗೂ ಬಾಲ್ಯ ನೆನಪಿಸಿದ್ದೀರಿ.ನನಗೂ ಸಹ.ಹಾಗಿತ್ತು ಹೀಗಿತ್ತು ಅಂತ ಕೇಳೋಕೆ ಚೆಂದ ಅನ್ಸುತ್ತೆ. ನಿಮ್ಮೂರ ವರ್ಣನೆಯಲ್ಲಿ ಖುಷಿಯಿಂದ ಪ್ರಾರಂಭವಾದ ಲೇಖನವನ್ನು ಈಗ ಹೇಗಿದೆ ಅಂತ ಬೇಸರದಲ್ಲಿ ಮುಗಿಸಿದ್ದೀರಿ. ಪಕ್ಷಿಗಳ ಫೋಟೋ ಒಂದಕ್ಕಿಂತ ಒಂದು ಚೆನ್ನಾಗಿವೆ.

Lakshmi Shashidhar Chaitanya said...

hakkigaLA nODidd takhsna :) :) santOSha...

malenaaDIna mElina aakramaNakke :( :( :( :( :(

Ittigecement said...

ಅಶೋಕ.....

ಹೌದಲ್ಲ... ನೀವೂ ಕೂಡ ಚಂದವಾದ ಲೇಖನ ಬರೆದಿದ್ದೀರಿ....
ಇಬ್ಬರೂ ಏಕಕಾಲದಲ್ಲಿ....

ನಾನು ಸ್ವಲ್ಪ ಕೆಲಸದ ಒತ್ತಡದಲ್ಲಿರುವೆ... ಸೋಮವಾರದಿಂದ ಪ್ರತಿಕ್ರಿಯೆ ಕೋಡುವೆ ..

ದಯವಿಟ್ಟು ಕ್ಷಮಿಸಿ....

ನಿಮ್ಮ ಪ್ರತಿಕ್ರಿಯೆಗೆ ಧನ್ಯ ವಾದಗಳು....

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಾನು ಧಿಡೀರ್ ಅಂತ ತುರ್ತು ಕೆಲಸದಲ್ಲಿ ತೊಡಗಿಕೊಂಡಿದ್ದೆ, ಹಾಗಾಗಿ ಓದಿದರು ಪ್ರತಿಕ್ರಿಯಿಸಲು ಆಗಿರಲಿಲ್ಲ. ಚಿತ್ರಗಳು ಸೊಗಸಾಗಿವೆ, ಜೊತೆಗೆ ಬರಹ ಕೂಡ, ನನ್ನ ಬರಹಗಳೆಂದು ಈ ಹಂತವನ್ನು ತಲುಪುತ್ತೋ, ನಿಮ್ಮ ಬರಹಗಳು ಅದಕ್ಕೆ ಪೂರಕವಾದ ಚಿತ್ರಗಳು, ಒಟ್ಟಿನಲ್ಲಿ ನನಗೆ ನಿಮ್ಮ ಬಗ್ಗೆ ಹೊಟ್ಟೆಕಿಚ್ಚಾಗುತ್ತಿದೆ. ಇತ್ತೀಚಿಗೆ ಪಕ್ಷಿ ಸಂಕುಲಗಳು ಹಠಾತ್ ಕ್ಷೀಣಿಸಲು ಕಾರಣ ಮೊಬೈಲ್ ಸ್ಥಾವರಗಳು ಪ್ರಸರಿಸುವ ತೀಕ್ಷ್ಣ ಪ್ರಕಿರಣಗಳು ಅಂತ ಓದಿದ್ದೆ. ಮಲೆನಾಡು ಬೋಳು ಗುಡ್ದಗಳಾಗಿ ಪರಿವರ್ತಿತವಾಗುತ್ತಿರುವುದಕ್ಕೆ ಖೇದವಿದೆ. ಬರಹ ಸಾಮಾಜಿಕ ಕಾಳಜಿಯನ್ನು ಮೂಡಿಸುವತ್ತ ಸಾಗಿದೆ, ಇಷ್ಟವಾಯಿತು.
-ರಾಜೇಶ್ ಮಂಜುನಾಥ್

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ನಿನ್ನೆ ನಾನು ಓದುವಾಗ ಈ ಪೋಸ್ಟ್ ಅಲ್ಲಿ ಈಗ ಮೊದಲಿರುವ ಫೋಟೋ ಇರಲಿಲ್ಲವ, ಅಥವಾ ನಾನೇ ನೋಡಿರಲಿಲ್ಲವ ಅಂತ ಚಿಕ್ಕ ಸಂದೇಹ ಬರ್ತಿದೆ.
ಅದಿರಲಿ.

ಪ್ರೀತಿಯ ಚಿಕ್ಕಪ್ಪಾ...
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಿನಗೆ.


ಪ್ರೀತಿಯಿಂದ,
ಶಾಂತಲಾ.

shivu.k said...

ಪ್ರಕಾಶ್ ಸರ್,

ನಿಮಗೆ ಹುಟ್ಟುಹಬ್ಬದ ಶುಭಾಶಯಗಳು......

ನೀವು ಹುಟ್ಟುವಾಗ ಒಂದೇ ಸಮನೆ ಮಳೆ ಹೊಯ್ಯುತ್ತಿತ್ತು...

ಏಕೆ ಗೊತ್ತೆ ?

ತನ್ನದೊಂದು ನಕ್ಷತ್ರವನ್ನು ಭೂಮಿಗೆ

ಬಿಟ್ಟುಕೊಡುತ್ತಿರುವುದಕ್ಕೆ ಆಕಾಶ ಆಳುತ್ತಿತ್ತು...

ಅವೆರಡಕ್ಕೂ ಬೇರೆ ಕೆಲಸವಿಲ್ಲ...

ನಮಗೆ ನೀವು ಸಿಕ್ಕಿದಿರಲ್ಲ ಆಷ್ಟು ಸಾಕು.....

ಶಿವು....

Geetha said...

ತುಂಬಾ ತುಂಬಾ ಚೆನ್ನಾಗಿವೆ ಪಕ್ಷಿಗಳ ಫೋಟೊಗಳು. ಲೇಖನ ಕೂಡಾ ತುಂಬ ಚೆನ್ನಾಗಿದೆ ಸರ್.

ಮತ್ತು ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು... ಸ್ವಲ್ಪ ತಡವಾಗಿ. ನೀವು ಸಂಕ್ರಾಂತಿ ಕಾಲದಲ್ಲಿ ಹುಟ್ಟಿದ್ದಕ್ಕೆ ಅನ್ಸತ್ತೆ.......ನಿಮ್ಮ ಬರಹಗಳೆಲ್ಲ ಎಳ್ಳು- ಬೆಲ್ಲ, ಸಕ್ಕರೆ ಅಚ್ಚು ಥರ ರುಚಿಯಾಗಿರತ್ತೆ!

Ittigecement said...

ಅಶೋಕ್....

ಕ್ಷಮಿಸಿ... ನಿಮ್ಮ ಬ್ಲೊಗ್ ಬರಲು ತಡವಾಯಿತು...

ನಾವು ಪರಿಸರದ ಬಗೆಗೆ ಏನಾದರೂ ಮಾಡಬೇಕು... ಅಲ್ಲವಾ..?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಾಂತಲಾ...

ನಿಜ ಈಗಿನ ಮಲೆನಾಡು ಮೊದಲಿನಂತಿಲ್ಲ...

ಜನರೂ ಬದಲಾಗುತಿದ್ದಾರೆ..
ಮೊದಲಿನ ಆದರ, ಸತ್ಕಾರ ಈಗ ಕಾಣುವದು ದುಸ್ತರ...
ಎಲ್ಲರೂ ತಮ್ಮ ತಮ್ಮ ಕಂಪೌಂಡ್ ಕಟ್ಟಿಕೊಂಡು..
ಪೇಟೆಯ ಜನರ ಥರಹ ಇರುವದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ...

ಕಾಡು ನಾಶವಾಗಿ... ಮನಸ್ಥಿತಿಯೂ ಬದಲಾಗುತ್ತಿದೆ...

ಬೇಸರವಾಗುತ್ತದೆ ...ಅಲ್ಲವಾ..?

Ittigecement said...

ರಾಜೇಂದ್ರ...

ಸುಸ್ವಾಗತ...
ಮನೆ ಅಂಗಳದಿಂದ "ನಮ್ಮನೆ " ಇಣುಕಿದ್ದಕ್ಕೆ...

ನಿಮಗಾದ ಖುಷಿ ನಿಮ್ಮ ಪ್ರತಿಕ್ರಿಯೆಯಲ್ಲಿ ಕಾಣಬಹುದು..

ಇಂಥಹ ಪ್ರತಿಕ್ರಿಯೆ.. ಹೊಸ "ಹುರುಪು" ಕೊಡುತ್ತದೆ..

ಹೊಸ "ತುರುಪು" ಬಿಡೋಣ ಅನ್ನಿಸುತ್ತದೆ...!

ಹೀಗೆ ಬರುತ್ತಿರಿ...

ಮೊಮ್ಮಗನಿಗೆ ಶುಭಾಶಯಗಳು...

Ittigecement said...

ರಾಜೇಂದ್ರ...

ಸುಸ್ವಾಗತ...
ಮನೆ ಅಂಗಳದಿಂದ "ನಮ್ಮನೆ " ಇಣುಕಿದ್ದಕ್ಕೆ...

ನಿಮಗಾದ ಖುಷಿ ನಿಮ್ಮ ಪ್ರತಿಕ್ರಿಯೆಯಲ್ಲಿ ಕಾಣಬಹುದು..

ಇಂಥಹ ಪ್ರತಿಕ್ರಿಯೆ.. ಹೊಸ "ಹುರುಪು" ಕೊಡುತ್ತದೆ..

ಹೊಸ "ತುರುಪು" ಬಿಡೋಣ ಅನ್ನಿಸುತ್ತದೆ...!

ಹೀಗೆ ಬರುತ್ತಿರಿ...

ಮೊಮ್ಮಗನಿಗೆ ಶುಭಾಶಯಗಳು...

Ittigecement said...

ತೇಜಸ್ವಿನಿಯವರೆ...

"ಭಯದ ನೇರಳಲ್ಲಿನ ಬದುಕು.." ನಿಮ್ಮ ತಂದೆಯವರ ಮಾತು ಬಹಳ ಇಷ್ಟವಾಯಿತು...

ನಿಮ್ಮ " ಮಾನಸ" ಬಹಳ ಚೆನ್ನಾಗಿ ಬರುತ್ತಿದೆ...

ಹಕ್ಕಿಗಳ "ಚಿಲಿ ಪಿಲಿ " ಕಲರವ.. ಬಲು ಚಂದ...

ಮಲೆನಾಡಿನ ಕಾಡು.. , ಅಲ್ಲಿಯ ಮಳೆ...

ಈಗ ನಾಶವಾಗಿದೆ ನಿಜ...

ಇನ್ನೂ ಕಾಲ ಮಿಂಚಿಲ್ಲ...

ಈಗಲಾದರೂ ಎಚ್ಚೆತ್ತು ಕೊಂಡರೆ ಎಲ್ಲರಿಗೂ ಒಳಿತು...
ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುನಾಥ ಸರ್...

ನಿಮ್ಮ ಕಡೇ ಮಣ್ಣು ಬಹಳ ಫಲವತ್ತಾಗಿದೆ..

ನಿಮ್ಮಲ್ಲಿಯ ಫಸಲು ಬಂದ ಹೊಲದ ಫೋಟೊ ನನ್ನಲ್ಲಿದೆ..

ಬಹಳ ಚಂದ..
ಬಹು ಸುಂದರ...
ಎಷ್ಟೊಂದು ವೈವಿದ್ಯ ನಮ್ಮ ನಾಡಿನಲ್ಲಿ...!

ಅಲ್ಲವಾ..?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮನಸು....

ಮಲೆನಾಡಿನ ದಟ್ಟವಾದ ಕಾಡು...
ಅಲ್ಲಿಯ ಜನ.. ಹಳ್ಳಿಯ ಸೊಬಗು..
ಬಹಳ ಚಂದ...

ಕುವೆಂಪು, ಕರಂತರ " ಕ್ರತಿಗಳಲ್ಲಿ ಮಲೆನಾಡಿನ ಪ್ರಭಾವ ಕಾಣಬಹುದು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಚಂದ್ರಕಾಂತರವರೆ....

ನನಗೆ ಈ ಲೇಖನದಲ್ಲಿ ಪರಿಸರದ ಬಗೆಗೆ ಹೇಳ ಬೇಕಿತ್ತು...

ಇನ್ನೂ ಬಹಳ ಫೋಟೊಗಳಿವೆ ...
ಹಕ್ಕಿಗಳ ಬಗೆಗೆ ಇನ್ನೊಮ್ಮೆ ಬರೆಯುವೆ...
ಕ್ಷಮೆ ಇರಲಿ...

ಒಮ್ಮೆ ಮಲೆನಾಡಿನ "ಮಳೆಗಾಲ" ನೋಡಿ ಬನ್ನಿ...

ಬಹಳ "ರುದ್ರ ರಮಣೀಯವಾಗಿರುತ್ತದೆ"

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಿರಿ...

Ittigecement said...

ಪಾಲಚಂದ್ರರವರೆ....

ಬಹುಷಃ ಬೆಳೆಗಳಿಗೆ ಸಿಂಪಡಿಸುವ "ಕೀಟನಾಶಕಗಳು" ಹಕ್ಕಿಗಗಳ ಮೇಲೆ ಪರಿಣಾಮ ಬೀರ್‍ಇರಬಹುದಲ್ಲ...!!

ಆ ಪುಟ್ಟ ಸುಂದರ ಹಕ್ಕಿಗಳಿಗೆ ಈ ಕ್ರೂರ ಮನುಷ್ಯನಿಂದ ತೊಂದರೆಯೇ ಜಾಸ್ತಿ,,,

ಈ ಮನುಷ್ಯ ನಾಶ ಆದರೆ "ಜೀವ ಸಂಕುಲ" ನೆಮ್ಮದಿಯಿಂದ ಇರಬಹುದೇನೋ...

ಧನ್ಯವಾದಗಳು...

Ittigecement said...

ಚಿತ್ರಾ....

ಸಿಂಗಾಪುರದಲ್ಲಿ ಮಣ್ಣನ್ನೂ ಸಹ ಬೇರೆ ದೇಶದಿಂದ "ಆಮದು" ಮಾಡಿಕೊಳ್ಳುತ್ತಾರಂತೆ...

ನೀರನ್ನು ಸಹ...!

ಆಮದು ನೀರಿನ... ಒಂದು ದೊಡ್ಡ ಕೆರೆಯ ಪಕ್ಕದಲ್ಲಿ .
.
ಈ ಪಕ್ಷಿಧಾಮ.., ಪ್ರಾಣಿ ಸಂಗ್ರಹಾಲಯ ಇದೆ...

ಜಗತ್ತಿನ ಎಲ್ಲಕಡೆಯ ಪ್ರಾಣಿ ಪಕ್ಷಿಗಳು..ಅಲ್ಲಿವೆ... ಸ್ವತಂತ್ರವಾಗಿ...

ಮಜಾ ಅಂದರೆ ಅಲ್ಲಿ "ಗೂಬೆ" ಪಾರ್ಕ್ ಕೂಡ ಇದೆ...

ನಮ್ಮಲ್ಲೇಕೆ ಆ ಥರ ಮಾಡಲಾಗುತ್ತಿಲ್ಲ..!..??

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಚಿತ್ರಾ ಕರ್ಕೇರಾರವರೆ....

ಮಲೆನಾಡಿನ ಕಾಡು ಹಣ್ಣುಗಳು ಬಹಳ ರುಚಿ...

ಅದಕ್ಕೆ ದುಡ್ಡು ಕೊಡ ಬೇಕಾಗಿಲ್ಲ..

ಪ್ರಕ್ರತಿದತ್ತವಾಗಿ ಸಿಗುತ್ತಿತ್ತು..
ಮಾನವನ ದುರಾಸೆಯ ಅತ್ಯಾಚಾರ.. ಮಿತಿಮೀರಿದೆ..

ಬಹಳ ಬೇಸರವಾಗುತ್ತದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಿವುಸರ್....

ಕಾನಸೂರಿನ ಪಕ್ಕದಲ್ಲಿ ನನ್ನೂರಿದೆ....

ಪೇಟೆಯವರಿಗೆ ಈಗಲೂ ದೊಡ್ಡ ಕಾಡಿದೆ ಅನಿಸಬಹುದು...

ಮೊದಲಿನಷ್ಟು ಇಲ್ಲ...

ಹೊಳೆ ಕೊಳ್ಳಗಳಲ್ಲಿ ನೀರು ಬತ್ತುತ್ತಿದೆ...

ಸಹಜವಾಗಿ.. ಜೀವಸಂಕುಅಲದ ಮೇಲೆ
ಪ್ರತಿಕೂಲ ಪರಿಣಾಮ ಆಗೇ ಅಗುತ್ತದೆ...

ಫೋಟೊ ಇಷ್ಟವಾಗಿದ್ದಗೆ...
ಧನ್ಯವಾದಗಳು...

Ittigecement said...

ಗ್ರೀಷ್ಮ....

ನನ್ನ ಬ್ಲೋಗಿಗೆ ಸುಸ್ವಾಗತ....

ಮಲೆನಾಡಿನಲ್ಲಿ ಮೊದಲಿನ ಸೌಂದರ್ಯ ಈಗಿಲ್ಲ...

ಜನರೂ ಬದಲಾಗಿದ್ದಾರೆ...

ಕಾಡು ನಾಶ ಭಯ ತರುತ್ತದೆ...

ಬಯಲು ಸೀಮೆಯಷ್ಟು ಬಿಸಿಲು ಇರುತ್ತದೆ..
ಮಳೆಯೂ ಕಡಿಮೆ...
ಭವಿಷ್ಯ ಭಯಾನಕ... ಖಂಡಿತ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಿರಿ...

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ನ,
ನೀವು ಹೇಳಿದ ಹಾಗೆ ಈಗ ಪಕ್ಷಿಧಾಮ ಗಳಲ್ಲಾದರೂ ಹಕ್ಕಿ ಗಳನ್ನು ನೋಡಬಹುದು.
ನಮ್ಮ ಮುಂದಿನ ತಲೆಮಾರುಗಳಿಗೆ ಮರ.ಕೆರೆ,ಕಾಡು,ಪಕ್ಷಿ,ಇವನ್ನೆಲ್ಲ ನಾವು ಫೊಟೊ ಗಳಲ್ಲಿ ಮಾತ್ರ ತೋರಿಸುವ ಪರಿಸ್ತಿತಿ ನೆನಸಿಕೊಂಡರೆ ಆತಂಕವಾಗುತ್ತದೆ.
ನಿಮ್ಮ ಪರಿಸರಪ್ರೇಮವನ್ನ ಮನಮುಟ್ಟುವಂತೆ ವಿವರಿಸಿದ್ದೀರಿ.
ಧನ್ಯವಾದಗಳು.

Ittigecement said...

ಭಾರ್ಗವಿಯವರೆ....

ಬಾಲ್ಯದ ನೆನಪೇ ಹಾಗೆ...

ಮೆಲುಕು ಹಾಕಿದಷ್ಟೂ ಚೆನ್ನ....

ನನ್ನ "ಕೇಂಪಜ್ಜಿಯೂ" ಹೀಗೆ ಹೇಳುತ್ತಿದ್ದರು....

" ಈಗ ಕಾಲ ಹಾಳಾಗುತ್ತಿದೆ.." ಎಂದು....

ಅಂದರೆ ಯಾವಾಗಲೂ "ಕಾಲ" ಹಾಳಾಗುತ್ತಿದೆ...
ಜನರೂ ಹಾಳಾಗುತ್ತಿದ್ದಾರೆ..

ಮೌಲ್ಯಗಳು ಬದಲಾಗುತ್ತದೆ...

ನಿರ್ಣಯಕ್ಕೆ ಬರುವದು ಕಷ್ಟ...

ಯವುದು ಸರಿ..? ಯಾವುದು ತಪ್ಪು...

ಭವಿಶ್ಯದ ಕಾಲಘಟ್ಟವೇ ನಿರ್ಣಯ ಕೊಡಬಲ್ಲದು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಲಕ್ಷ್ಮೀಯವರೆ...

ಹಕ್ಕಿಗಳೇ ಹಾಗೆ ..ಬಲು ಚಂದ...

ಕವಿಗಳು, ಕಲಾಕಾರರಿಂದ ಹೊಗಳಿಸಿ ಕೊಂಡಿದೆ..

ನಮ್ಮ ರಂಗನತಿಟ್ಟುವಿನಲ್ಲೂ ಚಂದದ ಹಕ್ಕಿಗಳು ಬರುತ್ತವೆ...

ಆದರೆ... ಅಲ್ಲಿ ಸೌಲಭ್ಯಗಳು ಕಡಿಮೆ...
ಸರಕಾರದ ಹಣ ಪೋಲಾಗುತ್ತದೆ..

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಾಂತಲಾ....

ಮೊದಲಿನ ಫೋಟೊ ಮೊದಲು ಹಾಕಿರಲಿಲ್ಲ...
ಓದುಗರ... ಪ್ರೋತ್ಸಾಹಕ್ಕೆ, ಬರುವ ಪ್ರತಿಕ್ರಿಯೆಗೆ ಖುಷಿಯಾಗಿ ...
ಮತ್ತೊಂದು ಫೋಟೋ ಸೆರಿಸಿದೆ.....


ಹುಟ್ಟಿದ ಹಬ್ಬ ಎಂದರೆ...

ತಾಯಿಗೆ ಬಲು ಹೆಮ್ಮೆಯ ದಿನ...

ಮಗ ದೊಡ್ಡವನಾಗುತ್ತಿದ್ದಾನೆ....

ಕಾಲನಿಗೂ ಖುಷಿಯಂತೆ...

ತನ್ನ ಬಳಿ ಬರುವ ದಿನ ಮತ್ತೂ ಹತ್ತಿರವಾಗುತ್ತಿದೆಯೆಂದು....

ಖುಷಿ ಪಟ್ಟರೆ ಖುಷಿಯುಂಟು...

ಬದುಕಿದ...
ಬದುಕಿನ ಬಗೆಗೂ ಖುಷಿ...

ಸಾಯದ..
ಸಾವಿನ ಬಗೆಗೂ ಖುಷಿ...

ಖುಷಿ ಪಟ್ಟರೆ.. ಖುಷಿಯುಂಟು...

ಮಗಳೆ....

ನಾನು ಹುಟ್ಟಿದ ದಿನ ಯಾರೂ ಖುಷಿ ಪಟ್ಟಿರಲಿಕ್ಕಿಲ್ಲ..

ನನ್ನಮ್ಮನಿಗೂ...

ತನ್ನ ಕುಂಕುಮದ ನೆನಪಾಗಿರಲು ಸಾಕು...

ಇಂದೂ ನೆನಪಾಗ ಬಹುದು...

ಸಾಯದ.. ಸಾವಿನ ಬಗೆಗೂ ಖುಷಿಯಿದೆ..

ಪಟ್ಟರೆ ಖುಷಿಯುಂಟು...



ಶುಭಾಶಯಗಳಿಗೆ ಧನ್ಯವಾದಗಳು...

Ittigecement said...

ಶಿವು ಸರ್....

ನಿಜ ನಿಮಗೂ ನಾನು ನನ್ನ ಹುಟ್ಟಿದ ದಿನದ ಬಗೆಗೆ ಹೇಳಲಿಲ್ಲ...

ನನಗೇ ಮರೆತು ಹೋಗಿತ್ತು...

ನನ್ನ "ಸತ್ಯ" ಮತ್ತು ನನ್ನ ಮಡದಿ, ಮಗ ಎಲ್ಲ ಸೇರ್‍ಇ ಗುಟ್ಟಾಗಿ ..
ನನ್ನಲ್ಲೋ ಕರೆದು ಕೊಂಡು ಹೋಗಿ ಖುಷಿ ಪಟ್ಟರು...

ಅವರಿಗೆ ಖುಷಿಯಾಯಿತಲ್ಲ..

ನನಗೆ ಮೊಬೈಲ್, ಕಂಪ್ಯೂಟರ್ ಸಹ ಕೊಡಲಿಲ್ಲ...

ಕ್ಷಮಿಸಿ ನಿಮ್ಮ ಫೋನ್ ಕಾಲ್ ಕೂಡ ತೆಗೆದು ಕೊಳ್ಳಲಾಗಲಿಲ್ಲ..

ಬೇಜಾರಾಗಬೇಡಿ...

ದಯವಿಟ್ಟು ಕ್ಷಮಿಸಿ...

ಶುಭಾಶಯಗಳಿಗೆ ವಂದನೆಗಳು...

Ittigecement said...

ಗೀತಾರವರೆ...

ಹಕ್ಕಿಗಳು ಫೋಟೊ ತೆಗೆಯುವಾಗ ನನಗೂ ಬಹಳ ಖುಷಿಯಾಗಿತ್ತು..

ಹಾಗೆ ನಮ್ಮ ಪರಿಸರ ನೆನೆದು ಬೇಜಾರೂ ಆಯಿತು...

ನನ್ನ ಹುಟ್ಟಿದ ದಿನದ ಬಗೆಗೆ ನೀವು ಹೇಳಿದ ಹೊಸ ವಿಚಾರ..

ನಿಜವಾಗಿಯೂ " ಮಜಾ" ಇದೆ...

ಖುಷಿ ಪಟ್ಟರೆ ಖುಷಿಯುಂಟು...

ಖುಷಿಗೆ ಕಾರಣವೂ ಸಿಗುತ್ತದೆ...

ಖುಷಿ ಕಾಣುವ, ಪಡುವ ಮನಸ್ಸು ನಮ್ಮಲ್ಲಿದ್ದರೆ...!!



ಶುಭಾಶಯಗಳಿಗೆ ಧನ್ಯವಾದಗಳು...

Ittigecement said...

ಮೂರ್ತಿ.....

ಊರಿಗೆ ಹೋದಾಗ ಬೇಸರ ಆಗುತ್ತದೆ...

ಪೂರ್ತಿ ಹಾಳಾಗುವ ಮುನ್ನ ..
ಎಚ್ಚೆತ್ತು ಕೊಳ್ಳದಿದ್ದರೆ ಅಪಾಯ ಖಂಡಿತ...

ಪ್ರತಿಕ್ರಿಯೆಗೆ ಧನ್ಯವಾದಗಳು...

shivu.k said...

ಪ್ರಕಾಶ್ ಸರ್,

ನೀವು ನಮಗ್ಯಾರಿಗೂ ಹೇಳದೇ ತಪ್ಪಿಸಿಕೊಂಡು ಹೋಗಿಬಿಟ್ಟಿರಿ...ಹೇಮಾಶ್ರೀ... ನೀವು ಸಿಕ್ಕಲಿ ಅಂತ ಕಾಯುತ್ತಿದ್ದಾಳೆ..

ನೀವು ಕಳೆದ ಬಾರಿ ನನ್ನ ಮನೆಗೆ ಬಂದಾಗ ನನ್ನಿಬ್ಬರೂ ಗೆಳೆಯರು ಸೇರಿದಂತೆ ಒಟ್ಟಾಗಿ ಊಟ ಮಾಡಿ ಅದೆಷ್ಟು ಸಂತೋಷ ಪಟ್ಟಿದ್ದೆವು.... ಅವತ್ತು ನೀವು ನನ್ನ ಬರ್ಥ್ ಡೇ ವಿಭಿನ್ನವಾಗಿ ಅಚರಿಸಿಕೊಳ್ಳುತ್ತೇನೆ ಅಂದಿದ್ದಿರಿ...ಹೋಗಲಿ ಬಿಡಿ ಸಂತೋಷ ಪಟ್ಟಿರಲ್ಲ...ಆಷ್ಟು ಸಾಕು.....

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ನಿಮ್ಮ ಬರಹ ಮನಸಿಗೆ ತಟ್ಟಿತು. ಈ ಮರನಾಶ ಮಾಡುವವರ ಹಾವಳಿಯನ್ನು ಹೇಗೆ ತಡೆಯುವುದೋ... ಸರಕಾರ ಬೇರೆ ರಸ್ತೆ ಅಗಲೀಕರಣದ ನೆಪದಲ್ಲಿ ಇದಕ್ಕೆ ಕೊಡುಗೆ ನೀಡಿದೆ....

Ittigecement said...

ಶಿವು ಸರ್...

ನನಗೆಲ್ಲ ಎಂಥಹ ಹುಟ್ಟುಹಬ್ಬದ ಆಚರಣೆ...?

ಆದರೂ ನಿಮಗೆ ತಿಳಿಸಲಾಗಲಿಲ್ಲ...
ಕ್ಷಮಿಸಿ...

ಹೇಮರವರಿಗೂ "SORRY.. " ಹೇಳಿ....

ಕ್ಷಮಿಸಿದ್ದೀರಿ ತಾನೇ...?

Ittigecement said...

ಸುಧೇಶ್....

ಪರಿಸರ ಬಹಳ ಬಗೆಯಿಂದ ನಾಶವಾಗುತ್ತಿದೆ...

ನಾವೆಲ್ಲ ಎಚ್ಚೆತ್ತುಕೊಳ್ಳಬೇಕು...

ಪ್ರತಿಕ್ರಿಯೆಗೆ ಧನ್ಯವಾದಗಳು...

ಅಂತರ್ವಾಣಿ said...

ಪ್ರಕಾಶಣ್ಣ,

ಚಿತ್ರಗಳು, ವಿವರಣೆ.. ಸೂಪರ್. ಏನೇ ಆಗಲಿ ಪ್ರಕೃತಿ ಯಾವತ್ತಿಗೂ ಸೂಪರ್. ಅದನ್ನು ಉಳಿಸಿ ಕೊಳ್ಳ ಬೇಕು..

Ittigecement said...

ಅಂತರ್ವಾಣಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...