Monday, October 6, 2008

ನಂಬಿಕೆ ವಿಶ್ವಾಸಗಳ ಬಗೆಗೆ ಬಹಳ ದುಬಾರಿ ಪಾಠ

ಇದು ತೀರಾ ವಯಕ್ತಿಕ ವಿಚಾರ,...
ಇದನ್ನ ಬ್ಲೊಗನಲ್ಲಿ ಹಾಕಬೇಡಿ ಎಂದು ನನ್ನ ಗೆಳೆಯ ಶಿವು ಹೇಳಿದ್ದರು.
ಇದು ದೂಷಣೆಗಾಗಿ ಅಲ್ಲ....
ಒಂದು ಅನುಭವ, ಹಂಚಿಕೊಳ್ಳಲಿಕ್ಕೆ.

ಅವರು ನನ್ನ ದೂರದ ಸಂಬಂಧ.
ಬಹಳ ಗೌರವಾನ್ವಿತರು...

ಅವರು ಅದರ ಬಗೆಗೆ ಬಹಳ ಬಹಳ ಮಾತಾನಾಡಿ,...
ನನ್ನ ಬಳಿ ಮನೆ ಕಟ್ಟುವ ವಿಚಾರವಾಗಿ ಮಾತಾಡಿದರು. ...
ನನಗೂ ಖುಶಿಯಾಯಿತು....

ಎರಡು ಬೆಡ್ ರೂಮ್, ಒಂದು ಹಾಲ್, ಎರಡು ಬಾಥರೂಮ್, ನೆಲ ಮಾಳಿಗೆ ಕಟ್ಟುವದು ಎಂದು ಪ್ಲಾನ್ ತಯಾರಾಯಿತು.
ಎಸ್ಟಿಮೇಶನ್ ೧೨ ಲಕ್ಷ. ...
ಕೆಲಸ ಶುರುವಾಯಿತು...
ದಿನಾ ಸಾಯಂಕಾಲ ಮನೆಗೆ ಬಂದು ಕೊರೆಯವದು,...
ಅವಲಕ್ಕಿ, ಕಾಫಿ ಇತ್ಯಾದಿ ಮಾಮೂಲಾಯಿತು....
ಆಗ ತಾನೆ ಮೊಬೈಲು ಬಂದಿತ್ತು....
ಇವರು ಮನೆಗೆ ಹೋಗಿ ಮತ್ತೆ ಕೊರೆಯುತ್ತಿದ್ದರು....
ಆಗ ಒಳಬರುವ ಕರೆಗಳಿಗೂ ೫೦ ಪೈಸೆ ಚಾರ್ಜ್ ಮಾಡುತಿದ್ದರು. ...
ಆಫೀಸಿನಿಂದಲೂ ಕೊರೆಯುತ್ತಿದ್ದರು....
ದಿನಾಲು ಪ್ಲಾನ್ ಬದಲಾಗುತಿತ್ತು....
ಗೋಡೆ ಕಟ್ಟುವದು, ಒಡೆಯುವದು ಮಾಮೂಲಾಗಿತ್ತು. ...

.. ಕಟ್ಟುವದಕ್ಕಿಂತ... ... ಹೆಚ್ಚಿಗೆ ಆಲಿ ಒಡೆಯುವ ಕೆಲಸ ಜಾಸ್ತಿ ಇರುತ್ತಿತ್ತು....

ಹಾಗೆ ನಗರದಲ್ಲಿ ೩೦* ೪೦ ಜಾಗ ಇತ್ತು....
ಅಲ್ಲೂ ನನ್ನ ಬಳಿ ಕೆಲಸ ಶುರು ಮಾಡಿಸಿದರು...!

ಎಸ್ತಿಮೆಶನ್ ಜಾಸ್ತಿಯಾಗುತ್ತಿದೆ ಎಂದು ಹೆಳಿದರೂ ಲಕ್ಷ ಮಾಡಲಿಲ್ಲ....

ನಾನು ಸ್ವಲ್ಪ ಪಾಪ ಪುಣ್ಯದ ವ್ಯಕ್ತಿ. ಇವರು ಮೋಸ ಮಾಡಲಾರರು ಅಂದು ಕೊಂಡೆ.

ಆಗ ೩೦ ಮನೆ ಕಟ್ಟಿದರೂ ಬಾಡಿಗೆ ಮನೆಯಲ್ಲೆ ಇದ್ದೆ.....
ಶುರುವಿನಲ್ಲಿ ಬಿಲ್ಲು ಕೊಟ್ಟ ಹಾಗೆ ಹಣ ಕೊಟ್ಟರು ...
ಗ್ರಹಪ್ರವೇಶದ ದಿನ ಬಂತು....
.೬೦ಲಕ್ಷ ಬಿಲ್ಲು ಆಗಿತ್ತು....
ಸಪ್ಲೈದಾರರು ಬಾಕಿ ಹಣ ಕೇಳುತಿದ್ದರು.

"
ನೋಡಪ್ಪ ಪೂಜಾ ಮಾಡಿ ನಂತರ ಬಾಕಿ ಕೊಡುತ್ತೇನೆ. ದಯವಿಟ್ಟು ಆಗಲ್ಲ ಅನ್ನಬೇಡ" ಅಂದರು.

ನನಗೆ ಬಹಳ ತೊಂದರೆ ಆಗುತ್ತಿದ್ದರೂ,..
ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.

ಗ್ರಹಪ್ರವೇಶ ಅದ್ದೂರಿಯಾಗಿಯೆ ಆಯಿತು.....

ನಂತರ ನನ್ನ ಕಣ್ಣು ತಪ್ಪಿಸಲು ಶುರು ಮಾಡಿದರು....
ನಾನು ಬಿಲ್ಲ್ ಕೊಟ್ಟೆ. ಲಕ್ಷದ ಮೆಲೆ ಆಗಿತ್ತು.
ಹಣ ಕೊಡುವ ಮಾತೆ ಇಲ್ಲವಾಗಿತ್ತು....

ಕೇಳಿದರೆ ಹೆಂಡತಿಯ ಹೆಸರು ಹೇಳಲಿಕ್ಕೆ ಶುರು ಮಾಡಿದರು...

. "ಮಾರಾಯರೆ, ನಿಮ್ಮ ಬಿಲ್ಲು ತುಂಬಾ ಜಾಸ್ತಿ ಆಯಿತಂತೆ....
ಹೆಂಡತಿ ಹೆಳ್ತಾಳೆ.. ಅವಳು ಒಪ್ಪಿದರೆ.. ತಕ್ಷಣ ವ್ಯವಸ್ತೆ ಮಾಡ್ತೇನೆ"
ಎಂದು ಹೊಸ ರಾಗ ಶುರು ಮಾಡಿದರು.

ನಿಮಗೆ ಇನ್ನೂ ಒಂದು ವಿಷಯ ಹೇಳಬೆಕು.

ಅವರ ಮನೆ ಮುಗಿಯುವಷ್ಟರಲ್ಲಿ ರೂಮುಗಳು, ಹಾಲುಗಳು, ಬಾಥರೂಮುಗಳು, ಒಂದು ಡಾರ್ಕ್ ರೂಮ್ ( ಅವರ ಫೊಟೊ ಕೆಲಸಕ್ಕೆ), ಒಂದು ಸ್ಟೇರಕೇಸ್ ಹೆಚ್ಚಾಗಿ ಮಾಡಿಸಿದ್ದರು....

ನಗರದ ಮನೆಯೂ ಸೆರಿ ನಾನು ೧೭ ಲಕ್ಷದ ಬಿಲ್ಲ್ ಕೊಟ್ಟಿದ್ದೆ.

ಕೆಲಸ ನಡೆಯುವಾಗ ಕಡೆ ತಲೆ ಹಾಕಿರದ ಮಹಾತಾಯಿ...
ಮಾತಲ್ಲಿ ಜೋರಾಗಿಯೇ... ಇದ್ದರು.
"
ನೋಡಪ್ಪ ನಿನ್ನ ಬಿಲ್ಲು ಜಾಸ್ತಿ... ಅದೆಲ್ಲಾ ಕೊಡಕಾಗಲ್ಲ. ೫೦ ಸಾವಿರಕ್ಕೆ ಅಡ್ಜಸ್ಟು ಮಾಡಿಕೊ"
ಎಂದು ಬಹಳ ಗತ್ತಿನಿಂದ ಹೇಳಿದರು.

ಕೊನೆಯದಾಗಿ ಹೆಂಡತಿ ಹೆಗಲ ಮೇಲೆ ಗನ್ ಇಟ್ಟು ನನಗೆ ಹೊಡೆಯುವ ಕೆಲಸದಲ್ಲಿ ಯಶಸ್ವಿಯಾದರು.
ಹಣ ಬರಲಿಲ್ಲ...

ನಂಬಿ ಕೆಟ್ಟವರಿಲ್ಲ ಎಂದು ಹೇಳುತ್ತಾರೆ....
ವ್ಯವಹಾರವೇ ಬೇರೆ... ಸಂಬಂಧ, ಭಾವುಕತನವೆ ಬೇರೆ... !

ಹೀಗೆ ನನಗೆ ಬೇಡವಾದ ಪಾಠ ಬಹಳ ನೋವಿನಲ್ಲಿ ಕಲಿತೆ. ...

. ಲಕ್ಷ ಕೊಟ್ಟು ಕಲಿಯ ಬೇಕಾಯಿತು !!!

ಘಟನೆಯಿಂದ ಮನಸ್ಸಿಗೆ ಘಾಸಿಯಾಗಿದೆ..
ಬಹಳ ನೋವಾಗಿದೆ..

ಬಹಳ ದಿನಗಳಿಂದ ನನ್ನಲ್ಲಿರುವ ಮಗುವನ್ನು ಜತನವಾಗಿ ಇರಿಸಿಕೊಂಡಿದ್ದೆ....!

ಘಟನೆಯ ನಂತರ ಮಗುವಿನ ಆರೊಗ್ಯ ಆಗಾಗ ಕೆಟ್ಟು ಹೋಗುತ್ತದೆ....

ಮತ್ತೆ ಮಗುವನ್ನು ಆರೋಗ್ಯವಗಿಡಲು ಬಹಳ ಹೆಣಗ ಬೇಕಾಗುತ್ತದೆ.....

ಎಲ್ಲರ ಜೀವನದಲ್ಲೂ ಇಂಥಹ ಘಟನೆ ನಡೆದಿರುತ್ತದೆ. ...

ಹೆಸರು ಮಾತ್ರ ಬೇರೆ ಇರುತ್ತದೆ. ಅಲ್ಲವಾ ??




7 comments:

sunaath said...

ತಪ್ಪು ಮಾಡಿದ್ದಂತೂ ಅಗಿ ಹೋಯಿತು. ಒಳ್ಳೆ costly lesson ಆಯ್ತು ಇದು. ಇನ್ನಾದರೂ ಜಾಗೃತೆಯಾಗಿರಿ.

Ittigecement said...

SUNAATH SIR...
AFTER THAT I HAVE FACED A LOTS OF PROBLEMS..NOW I STARTED DOUDTS EVERY OWNER! ACTUALY I DONT WANT.. BUT I DO..!
THANK YOU...SIR..

ಹಿತ್ತಲಮನೆ said...

ನನಗೂ ಇಂಥ ಅನುಭವಗಳಾಗಿವೆ...ಜೀವನ ಪೂರ್ತಿ ಕಲಿತರೂ ಇಂಥದ್ದು ಮುಗಿಯದು ಅನ್ನಿಸುತ್ತದೆ. ಒಂದೇ ಬೇಸರವೆಂದರೆ ಇಂಥವರ ಮಧ್ಯೆ ಪ್ರಾಮಾಣಿಕರನ್ನೂ ನಾವು ಕೆಲವೊಮ್ಮೆ ಅನುಮಾನಿಸಬೇಕಾಗಿ ಬರುವಂಥದ್ದು....

ಚಂದ್ರಕಾಂತ ಎಸ್ said...

ಬದುಕಿನ ದುರಂತ ಹಾಗು ಸತ್ಯವೆಂದರೆ ನಂಬಿರುವವರೇ ಮೋಸಮಾಡುವುದು. ನಂಬದಿದ್ದರೆ ಮೋಸಮಾಡಲಿಕ್ಕಾಗದು ನೋಡಿ !!ಎಲ್ಲರಿಗೂ ಇಂತಹ ಅನುಭವಗಳಾಗಿದ್ದರೂ ಅದು ಚಿಕ್ಕ ಪುಟ್ಟದ್ದಾಗಿರುತ್ತದೆ. ಆದರೆ ಕೆಲವೊಮ್ಮೆ ಪಾಠಕಲಿಯಲು ದೊಡ್ಡ ಘಟನೆಗಳೇ ಆಗಬೇಕಾಗುತ್ತದೆ.
ಅದಕ್ಕೇ ಇರಬಹುದು ಬಹಳಷ್ಟು ಜನ ಗೃಹಪ್ರವೇಶಕ್ಕೆ ಮುಂಚೆಯೇ ಬಿಲ್ ಸೆಟಲ್ ಮಾಡಬೇಕೆಂದು ಮೊದಲೇ ಹೇಳಿರುತ್ತಾರೆ.

Harisha - ಹರೀಶ said...

"ನಂಬಿ ಕೆಟ್ಟವರಿಲ್ಲವೋ" ಎಂಬ ದಾಸವಾಣಿಯನ್ನು ಬದಲಾಯಿಸಬೇಕಾಗಿದೆ. ಕಲಿಗಾಲ! ಕಲಿಗಾಲ!!

Ittigecement said...

you are right..harish...

ಶಿವಪ್ರಕಾಶ್ said...

ಈ ನಿಮ್ಮ ಲೇಖನವನ್ನು ಮುಂಚಿ ಓದಿದ್ದೆ. ಪ್ರತಿಕ್ರಿಯೆ ಬರಿದಿರಲಿಲ್ಲ.
ಇಂದು ಮತ್ತೊಮ್ಮೆ ಓದಿದೆ. ಓದಿ ಬಹಳ ಬೇಸರವಾಯಿತು....