Thursday, October 23, 2008

ನಾನು ಬರಲ್ಲ.. ಸರ್.. ಇವತ್ತು ನನ್ನಜ್ಜನ ತಿಥಿ ಇದೆ...


ಸಿರ್ಸಿ ಹತ್ತಿರ ಕಾನಸೂರ್ ಹೈಸ್ಕೂಲ್.. ...
ಮಧ್ಯಾನ್ಹ ಕೊನೆಯ ಕ್ಲಾಸು......
ನಾಗು ಕೊನೆಯ ಬೇಂಚಿನ ಸರದಾರ. ...
ಭೂಗೊಳ ಟೀಚರ್ ತಮಾಷೆಯಾಗಿ ಪಾಠ ಮಾಡಲಿಕ್ಕೆ ಹೆಸರುವಾಸಿ.

ನಮ್ಮ ಹೊಟ್ಟೆ ಚುರ್ ಗುಡುತ್ತಿದೆ.. .
ಬೆಲ್ಲಾಗುವದನ್ನೇ ಕಾಯುತ್ತಿದ್ದೆವು....
ಭೂಗೊಳ ಟೀಚರ್ ಕ್ಲಾಸ್ ಟೀಚರ್ ಕೂಡ ಆಗಿದ್ದರು.

ಬಂದವರೆ ...

"ಇವತ್ತು ನಾವು ಆಫ್ರಿಕಾ ಖಂಡಕ್ಕೆ ಹೋಗಿ ಬರೋಣ....."
ಅಂದರು....

ಅವರು ಪಾಠ ಶುರು ಮಾಡುವ ರೀತಿಯೆ ಹಾಗೆ..
ಸ್ವಲ್ಪ ತಮಾಶೆಯಾಗಿ ಪಾಠ ಮಾಡುತ್ತಿದ್ದರು.....

" ಸರ್.. ನಂಗೆ ಬರ್ಲಿಕ್ಕೆ ಆಗಲ್ಲ ...!!"

ನಾಗರಾಜ ಜೋರಾಗಿ ಹೇಳಿದ....!
ನಾಗು ಕೊನೆಯ ಬೇಂಚಿನ ಸರದಾರ. ...!!

"ಯಾಕೊ.. ಏನಾಯ್ತೊ.."
ಅವರೂ ತಮಾಷೆಯಾಗಿಯೇ ಕೇಳಿದರು.

" ಇವತ್ತು...ನನ್ನಜ್ಜನ..ತಿಥಿ.....
ನೆಂಟರೆಲ್ಲ ಬರ್ತಾರೆ..
ಮಧ್ಯಾನ್ಹದ ಮೇಲೆ ಶಾಲೆಗೆ ಹೊಗ್ಬೇಡ ಅಂತ ನನ್ನಪ್ಪ ಹೇಳಿದಾರೆ..ಸಾರ್.."

ನಾಗರಾಜ ಒಂದೆ ಕಲ್ಲಿಂದ ಎರಡು ಹಕ್ಕಿ ಹೋಡೆದಿದ್ದ. ...!!
ಕ್ಲಾಸ್ ಟೀಚರ್ ಬಳಿ ರಜೇನೂ ಕೇಳಿದಹಾಗಿತ್ತು ....!!

"ಅಷ್ಟರೊಳಗೆ ಬಂದು ಬಿಡೊಣ ಮಾರಾಯ.. !!.."

" ಲಂಚ್ ಟೈಮ್ನಲ್ಲಿ ಬಿಟ್ಟು ಬಿಡಿ ಸಾರ್...ಪ್ಲೀಸ್...."

" ಸರಿ ಮಾರಾಯಾ.. ಕುತ್ಗೋ...!!"

ನಾವೆಲ್ಲಾ ನಕ್ಕು ನಕ್ಕು ಸುಸ್ತಾದ್ವಿ....
ನಮ್ಮ ಹಸಿವೆ ಮರೆತು ಹೋಯ್ತು....

ನಮಗೆ ಕಲಿಸಿದ ಅವರು, ...
ಸ್ನೇಹಿತ ನಾಗು ಇನ್ನೂ ಆ ಘಟನೆ ನೆನಪಿಸಿಕೊಂಡು ನಗುತ್ತಿರುತ್ತೇವೆ..

.. ದಿನಗಳನ್ನು ಮರೆಯಲಿಕ್ಕುಂಟೆ...?
ಹಾಗಿತ್ತು.. ಗುರು ಶಿಷ್ಯರ ಸಂಬಂಧ.. ಆನುಬಂಧ....!


7 comments:

shivu.k said...

ಭಲೇ ಚೆನ್ನಾಗಿ ಬರೀತ್ತಿದ್ದೀರಿ. ಒಳ್ಳೆ ಬೆಳೆವಣಿಗೆ.ಮತ್ತು ಚುಟುಕಾಗಿರುವುದು ಪ್ಲಸ್ ಪಾಯಿಂಟ್ ! ಒಳ್ಳೆ ಮಜಾ ಬರ್ತಾ ಇದೆ. ಬರೀರಿ.....

ಶಿವು.ಕೆ.

Kishan said...

sakhathagide...writing ishtylu..

ಮಲ್ಲಿಕಾರ್ಜುನ.ಡಿ.ಜಿ. said...

ಎಷ್ಟು ಚೆನ್ನಾಗಿ ಬರೀತೀರ್ರೀ ಮಾರಾಯ್ರೇ. ಆಂಜನೇಯನಿಗೆ ತನ್ನ ಶಕ್ತಿ ತಿಳಿಯಲು ಲಂಕೆಗೆ ಹಾರಲು ಮಿಕ್ಕ ಮಂಗಗಳು ಹೊಗಳಬೇಕಾಯ್ತಂತೆ!

ಚಂದ್ರಕಾಂತ ಎಸ್ said...

ಚಿಕ್ಕ ಚೊಕ್ಕ ಬರವಣಿಗೆ. ಹಿತಮಿತವಾದ ಹಾಸ್ಯ.

sunaath said...

ನಿಮ್ಮ ವಿನೋದಪೂರ್ಣ ಲೇಖನ ಒದಿ ಖುಶಿಯಾಯಿತು.

Unknown said...

ya gud joke e story namagu school n college daysna nenapu madthu .

Pratima said...

Prakashanna, SR Bhatru avru!!!!