ಅಂದು ಮೇ ಫ್ಲವರ್ ಮಿಡಿಯಾ ಆಫಿಸಿನಲ್ಲಿ ನಾನು ಹೇಳಿದ್ದು ಇಷ್ಟು.
"ಎಷ್ಟೊಂದು ಬ್ಲಾಗರ್ಸ್ ಇದ್ದಾರೆ ನಮ್ಮ ಕನ್ನಡದಲ್ಲಿ...!
ಕೆಂಡ ಸಂಪಿಗೆ, ಸಂಪದ, ದಟ್ಸ್ ಕನ್ನಡ,
ಬನವಾಸಿ ಗೆಳೆಯರ ಬಳಗ, ....ಸಾಂಗತ್ಯ...
ಅವಧಿ,....ಇತ್ಯಾದಿ....
ಬಹಳ ಬಹಳ ಇವೆ...
ಇದನ್ನು ಬಿಟ್ಟು ವಯಕ್ತಿಕವಾಗಿ ಸಾವಿರಾರು ಬ್ಲಾಗುಗಳಿವೆ...
ಇವರೆಲ್ಲರನ್ನು ಒಟ್ಟು ಸೇರಿಸಿ ಒಂದು ಸಮ್ಮೇಳನ ಮಾಡಬೇಕು...
ಕೆಲವೇ.. ಗೆಳೆಯರ ಕೂಟ ಆಗಬಾರದು....
ಇದನ್ನೆಲ್ಲಾ ಬಹಳ ವ್ಯವಸ್ಥಿತವಾಗಿ ಮಾಡ ಬೇಕು "
ಇದಕ್ಕೆ ಸಹಮತವಾಗಿ ಗೆಳೆಯ ಶಿವು, ಮತ್ತಿತರರು ಮಾತನಾಡಿದರು..
ಎಲ್ಲರ ಅಭಿಪ್ರಾಯವು ಒಂದೆ ಆಗಿತ್ತು !!
"ಈ ಸಮ್ಮೇಳನ ವ್ಯವಸ್ಥಿತವಾಗಿ, ಯಶಸ್ವಿಯಾಗಿ..
ಎಲ್ಲರೂ ಸೇರಿ ಸಂಭ್ರಮದ ಸಂತೋಷದ ಹಬ್ಬದಂತೆ ಮಾಡಬೇಕು..."
ಇದಕ್ಕೆ ಜಿ. ಎನ್. ಮೋಹನರು ತಮ್ಮ ಅಭಿಪ್ರಾಯವನ್ನು ಸೇರಿಸಿದರು...
" ಈಗ ಇರುವ ಸಮಯದಲ್ಲಿ ಇದನ್ನು ವ್ಯವಸ್ಥಿತವಾಗಿ ಮಾಡಲು ಕಷ್ಟ..
(ಅಗಸ್ಟ್ ೨೨)
ಅಂದು ಶಿವು ಮತ್ತು ಆಜಾದರ ಕೃತಿಗಳ ಬಿಡುಗಡೆ ಸಮಾರಂಭವಾಗಲಿ..
ಅದು ನಮ್ಮ ಕನ್ನಡ ಬ್ಲಾಗರ್ಸ್ ಕೃತಿಗಳ ಬಿಡುಗಡೆ ಸಮಾರಂಭ..
ಅಂದು ಎಲ್ಲರೂ ಸೇರೋಣ..
ಬಿಡುಗಡೆ ಸಮಾರಂಭಾವಾದಮೇಲೆ ಒಂದು ವಿಚಾರ ಸಂಕಿರಣ ಇಟ್ಟುಕೊಳ್ಳೋಣ..
ಆಗ ಒಂದು ಕಮಿಟಿಯನ್ನು ರಚಿಸಿ...
ಮುಂದಿನ ಕಾರ್ಯಕ್ರಮದ ಬಗೆಗೆ ಸಮಗ್ರವಾಗಿ ಚರ್ಚಿಸಿ ನಿರ್ಧಾರ ತೆಗೆದು ಕೊಳ್ಳೋಣ.
ಈ ಹಿಂದೆ ಬ್ಲಾಗರ್ಸ್ ಕೂಟ ನಡೆಸಿದ "ಪ್ರಣತಿ" ಸಂಸ್ಥೆಯ ಅನುಭವ..ಮಾರ್ಗದರ್ಶನ ಎಲ್ಲವನ್ನೂ ಪಡೆಯೋಣ.."
ತಮ್ಮ ಪೂರ್ಣ ಸಹಕಾರದ, ಮಾರ್ಗದರ್ಶನದ ಭರವಸೆಯನ್ನು ಕೊಟ್ಟರು...
ಇದಕ್ಕೆ ಎಲ್ಲರ ಸಹಮತ ವ್ಯಕ್ತವಾಯಿತು....
ನಾವೆಲ್ಲರೂ ಅಗಸ್ಟ ೨೨ ಕ್ಕೆ ಕನ್ನಡ ಭವನದಲ್ಲಿ ಸೇರೋಣ..
ಗೆಳೆಯರಾದ ಶಿವು ಮತ್ತು ಆಜಾದರ ಕೃತಿಗಳ ಬಿಡುಗಡೆಯ ಸಂಭ್ರಮದಲ್ಲಿ ಪಾಲ್ಗೊಂಡು ಮುಂದಿನ ಕಾರ್ಯಗಳ ಬಗೆಗೆ ಚರ್ಚಿಸೋಣ..
ಎಲ್ಲವೂ ಮುಗಿದ ಮೇಲೆ ಗೆಳೆಯ ಶಿವಪ್ರಕಾಶ್ ನನ್ನನ್ನು ಕೇಳಿದರು..
"ಪ್ರಕಾಶಣ್ಣ ..
ನಿಮ್ಮ ಎರಡನೇ ಕೃತಿ ಯಾವಾಗ ಬರುತ್ತದೆ...?
ಪ್ರಕಾಶಕರು ಯಾರು..?"
"ಪ್ರಕಾಶಕರು ಯಾರೆಂದು ಇನ್ನೂ ನಿರ್ಣಯವಾಗಿಲ್ಲ...
ಮುಖ ಪುಟ " ಅಪಾರ" ಮಾಡುತ್ತಿದ್ದಾರೆ...
ಈ ಬಾರಿ ನಾಡಿನ ಹೆಸರಾಂತ ವ್ಯಂಗ ಚಿತ್ರಕಾರರು ಚಿತ್ರ ಬಿಡಿಸಿಕೊಡುತ್ತಾರೆ..."
"ಈ ಪುಸ್ತಕದಲ್ಲಿ ಏನಿರುತ್ತದೆ...?"
"ಮೊದಲಿನ ಹಾಗೆ ಬ್ಲಾಗಿನಲ್ಲಿ ಪ್ರಕಟವಾದ ಲೇಖನಗಳು.."
" ಪ್ರಕಾಶಣ್ಣ..
ಒಂದು ಸಲಹೆ...
ಇದರಲ್ಲಿ ನಾವು ಓದಿರದ ಕೆಲವು ಲೇಖನ ಸೇರಿಸಿ...
ನೀವು ಬೀಡಿ ಸೇದಿದ್ದು...
ಕುಷ್ಟನ,...
ನಾಗುವಿನ , ರಾಜಿಯರ ಲವ್ವು.... ಇತ್ಯಾದಿ...."
ನನಗೂ ಹೌದೆನಿಸಿತು...
"ಪ್ರಕಾಶಣ್ಣ...
ಈ ಪುಸ್ತಕದ ಹೆಸರೇನು.....?..? "
" ಇದೇ... ಇದರ ಹೆಸರು...!"
" ಏನು ?? !!.. "
" ಎರಡನೇ.. ಪುಸ್ತಕದ ಹೆಸರು...
" ಇದೇ... ಇದರ ಹೆಸರು....!!! "
(ಅಗಸ್ಟ್ ೨೨ಕ್ಕೆ .... ಕನ್ನಡ ಭವನದಲ್ಲಿ ಗೆಳೆಯರಾದ "ಆಜಾದ್"ರ ಕವನ ಸಂಕಲನ
"ಜಲನಯನ"
ಹಾಗೂ ...
ನನ್ನನ್ನು ಬ್ಲಾಗ್ ಲೋಕಕ್ಕೆ ಕರೆ ತಂದ ಮತ್ತೊಬ್ಬ ಗೆಳೆಯ
ಕೆ. ಶಿವುರವರ ....
ಪುಸ್ತಕ ಬಿಡುಗಡೆ ಸಮಾರಂಭಕ್ಕೆ ನಾವೆಲ್ಲಾ ಸೇರೋಣ...
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ...)
Saturday, June 26, 2010
Tuesday, June 1, 2010
ಪ್ರೇಮ.. ಆಕರ್ಷಣೆ.. ಅಗತ್ಯ.....
ನಾನು ಸ್ವಲ್ಪ ತುಂಟಿ...
ಗೆಳತಿಯರೊಡನೆ ಹರಟೆ.... ಮಾತುಕಥೆ..
ನಗು ..,
ಹಾಸ್ಯ ಇವೆಲ್ಲ ನನ್ನ ಅಗತ್ಯ....
ನನ್ನ ಆಸೆ..ನನ್ನ ಇಷ್ಟ..
ಮತ್ತು ನನ್ನ ಬದುಕು... ಇವೆಲ್ಲಕ್ಕೂ ಸಂಬಂಧವೇ.. ಇಲ್ಲ..
ಏನಾಯ್ತು ಗೊತ್ತಾ ?
ಅಪ್ಪ, ಅಮ್ಮ ತೋರಿಸಿದ ಹುಡುಗ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ..
ಅವನ ಹಣೆಯ ಮೇಲೆ ಕೂದಲೇ.. ಇಲ್ಲ..!
ಬಾಂಡ್ಲಿ..!
ಬಣ್ಣವೂ ಸ್ವಲ್ಪ ಕಪ್ಪು..
ಮುಖದಲ್ಲಿ ಗೆಲುವೇ.. ಇಲ್ಲ..
ನಗದೇ ವರ್ಷಗಳೇ ಆಯಿತೇನೋ ಎನ್ನುವಂಥಹ ಮುಖ...
ಇಂಥಹವನೊಡನೆ ಹೇಗೆ ಜೀವನ ಪೂರ್ತಿ ಇರುವದು ?
ಅಮ್ಮ ನನಗೆ ತಿಳುವಳಿಕೆ ಹೇಳುವ ಪ್ರಯತ್ನ ಮಾಡಿದರು..
"ನೋಡು.... ಪುಟ್ಟಿ..
ನೀನಗೆ ವಾಸ್ತವದ ಅರಿವು ಇಲ್ಲ..
ಚಂದದ ನಗುವಿನ ಬದುಕಿಗೆ ಅಂದ ಬೇಕಿಲ್ಲ ಮಗಳೆ...
ಅದು ನಿನ್ನ ವಯಸ್ಸಿನ, ಹರೆಯದ ತಪ್ಪು.. ಚಂದ ಬಯಸುತ್ತದೆ..
ಆದರೆ..
ದಾಂಪತ್ಯದಲ್ಲಿ ನೀನು ಸ್ವಭಾವದೊಡನೆ ಬದುಕ ಬೇಕಾಗುತ್ತದೆ...
ಅಲ್ಲಿ ಚಂದದ ಅಗತ್ಯ ಬಲು ಕಡಿಮೆ...
ಹುಡುಗ.... ತುಂಬಾ ಒಳ್ಳೆಯವ..
ಒಳ್ಳೆಯ ಸಂಪಾದನೆ ಇದೆ..
ಸುಸಂಕೃತ ಮನೆತನ..
ಹುಡುಗನಿಗೆ ಯಾವುದೇ.. ಚಟ ಇಲ್ಲ..
ಕಟ್ಟು ಮಸ್ತಾಗಿ...ಆರೋಗ್ಯವಾಗಿದ್ದಾನೆ..
ಬದುಕಲಿಕ್ಕೆ ಇನ್ನೇನು ಬೇಕು ?"
"ಅಮ್ಮಾ.. ..
ಈ ಮುಖ ನೋಡಿದರೆ ಪ್ರೀತಿಸ ಬೇಕು ಅಂತಾನೇ ಅನ್ನಿಸುವದಿಲ್ಲ..
ಸ್ವಲ್ಪವಾದರೂ ಚಂದ ಬೇಡವೇ..?
ಕಣ್ಣಲ್ಲೋ.. ಮಾತಲ್ಲೋ ಏನಾದರೂ ಆಕರ್ಷಣೆ ಬೇಡವೆ..?
ಇವನಿಗೆ ಯಾವುದೇ ಹವ್ಯಾಸಗಳೂ ಇಲ್ಲವಂತೆ....
ಸಿನೇಮಾ..ಹಾಡು.. ಸಾಹಿತ್ಯ ಯಾವುದೂ ಗೊತ್ತಿಲ್ಲವಂತೆ.. !
ತಾನಾಯಿತು.. ತನ್ನ ಕೆಲಸವಾಯಿತು...
ಅವನಿಗೆ ಒಂದು ಸಂಬಳವಿಲ್ಲದ ಕೆಲಸದವಳಾಗಿ ಇರಬೇಕಷ್ಟೆ..
ಈ ಮದುವೆ ನನಗೆ ಬೇಕಿಲ್ಲವಮ್ಮ.."
" ಪುಟ್ಟಿ...
ನೀನು ಯಾರನ್ನಾದರೂ ಇಷ್ಟಪಟ್ಟಿದ್ದೀಯೇನೆ..?"
"ಛೇ.. ಇಲ್ಲಮ್ಮ..
ನನಗೆ ನನ್ನ ಮದುವೆಯ ಬಗೆಗೆ..
ಬದುಕಿನ ಬಗೆಗೆ ಒಂದು ಕನಸಿದೆ..
ನನಗೆ ನಾನು ಬಯಸಿದಂಥಹ ಗಂಡು ಬೇಕಮ್ಮ..
ಮದುವೆಯಾಗುವ ಗಂಡನ್ನು ನೋಡಿದರೆ...
ಪ್ರೀತಿ ಹುಟ್ಟುವಂತಿರ ಬೇಕು..
ಹೃದಯದಲ್ಲಿ ಭಾವನೆಗಳನ್ನು ಹುಟ್ಟಿಸುವನಂತಾಗಿರ ಬೇಕು..
ನನ್ನ...
ಅವನ ಬೇಕು ಬೇಡಗಳು ಹೊಂದಿಕೆಯಾಗಿರಬೇಕು.. .."
"ನೋಡು..
ನಿನ್ನ ಪ್ರೀತಿ.. ಪ್ರೇಮ ಎಲ್ಲ ಹೃದಯದಲ್ಲಿ ಅಲ್ಲ...
ಅವಶ್ಯಕತೆ.. ಅವಲಂಬನೆ...
ಮತ್ತು ತಲೆಯಲ್ಲಿ ಹುಟ್ಟುತ್ತವೆ...
ಹೃದಯದಲ್ಲಿ ಪ್ರೇಮ ಹುಟ್ಟುತ್ತದೆ ಅನ್ನುವದು ಶುದ್ಧ ಸುಳ್ಳು..
ಸ್ವಲ್ಪ ದಿನ ಕತ್ತೆಯೊಡನೆ ಇದ್ದರೂ ಕುರುಡು ಪ್ರೀತಿ ಹುಟ್ಟುತ್ತದೆ..
ಮಗಳೆ...
ಈ ಹುಡುಗ ನಿನಗೆ ತಕ್ಕ ಜೋಡಿ.."
"ಅದು ಹೇಗೆ ಸಾಧ್ಯ ಅಮ್ಮಾ ?
ಇವನನ್ನು ...
ಯಾವ ದೃಷ್ಟಿಯಲ್ಲಿ...ಹೇಗೆ ಪ್ರೀತಿ ಮಾಡಲಿ ?"
"ನೋಡೂ ಪುಟ್ಟಿ...
ನಿನ್ನ ಅಪ್ಪನನ್ನು ನೋಡಿದ್ದೀಯಾ ?
ಇಡೀ ದಿನ ಗುಟ್ಕಾ ಜಗಿದು...
ಕಪ್ಪಾಗಿರುವ ಹಲ್ಲಿನೊಡನೆ ನಾನು ಮುವತ್ತು ವರ್ಷ ಸಂಸಾರ ಮಾಡಿಲ್ಲವೆ..?
ಅಂದ ಚಂದದೊಡನೆ ಬದುಕು ಇರುವದಿಲ್ಲವಮ್ಮ...
ಭಾವನೆಗಳನ್ನು ಹಂಚಿಕೊಂಡು..
ತ್ಯಾಗ ಹೊಂದಾಣಿಕೆಯಲ್ಲಿ ಬದುಕು ಇದೆಯಮ್ಮ...
ನೀನು ಇವನನ್ನೇ ಮದುವೆಯಾಗು...
ಈತ ಒಳ್ಳೆಯ .. ಚಟ ಇಲ್ಲದ ಹುಡುಗ..."
ನನ್ನ ಅಭಿಪ್ರಾಯಗಳಿಗೆ..
ಮಾತುಗಳಿಲ್ಲವಾಯಿತು..
ಶಬ್ಧಗಳಿಲ್ಲವಾಯಿತು...
ನೋಡು.. ..
ನೋಡುತ್ತಿದ್ದಂತೆ..
ಅಪ್ಪನ ಮಾತಿಗೆ ಎದುರಾಡಲಾಗದೆ ಅದೇ ಹುಡುಗನ ಮಡದಿಯಾದೆ...
ಮನಸ್ಸಿಗೆ ಬೇಕಿರದ ಬದುಕು..
ಬೇಡದ ಗಂಡಿನೊಡನೆ ಬಾಳು.. ಬಹಳ ಕಷ್ಟವಾಯಿತು...
ಯಾವಾಗಲೂ ನಗುನಗುತ್ತ..
ಗಂಡುಬೀರಿಯಂತಿದ್ದ ನನಗೆ.. ಬದುಕು ಹಿಂಸೆಯಾಗತೊಡಗಿತು...
ಈತ ಯಾವಾಗಲೂ ಸುಮ್ಮನೇ.. ಮೌನವಾಗಿ ಇರುತ್ತಿದ್ದ.....
ಅದು ಸಹಿಸಲು ಆಸಾಧ್ಯ ಮೌನ....!
ಆ ಮೌನದಷ್ಟು ದೊಡ್ದಾದಾದ ಶಬ್ದ .., ಗಲಾಟೆ ಇನ್ನೊಂದಿಲ್ಲ..
ನನಗೆ ಮಾತು ಬೇಕು.. ನಗು ಬೇಕು..
ಈತ ಮನೆಗೆ ಬಂದ ಮೇಲೂ ತನ್ನ ಲಾಪ್‍ಟಾಪ್ ತೆಗೆದು ಅದರಲ್ಲಿ ಮುಳುಗಿ ಹೋಗುತ್ತಿದ್ದ...
ಇವನೋ..
ಇವನ ದೈನಂದಿನ ಚಟುವಟಿಕೆಗಳೋ... ನನಗೆ ಹಿಡಿಸದಾಯಿತು...
ನನಗೆ ಬೆಳಿಗ್ಗೆ ಎದ್ದು ಬೆಡ್ ಕಾಫಿ ಕುಡಿದು ಅಭ್ಯಾಸ..
"ಅದು ಆರೋಗ್ಯಕ್ಕೆ ಹಾಳು...
ಮೊದಲು ಬ್ರಷ್ ಮಾಡಿ ಕಾಫಿ ಕುಡಿ.."
ಇವನಿಗೆ ಬೆಳಿಗ್ಗೆ ಅಕ್ಕಿ ದೋಸೆಯೇ ಆಗಬೇಕು...
ನನಗೆ ನೂಡಲ್ಸ್..,
ಪೂರಿ ಚಪಾತಿ ಎಂದರೆ ಇಷ್ಟ..
ಇವೆಲ್ಲ ಆತನಿಗೆ ಸೇರುವದಿಲ್ಲ...
ನನ್ನಾಸೆ.. ಇಷ್ಟಗಳಿಗೂ.. ಅವನ ಅಭಿರುಚಿಗಳಿಗೂ ಬಹಳ ವ್ಯತ್ಯಾಸವಿತ್ತು..
ಇಷ್ಟವಿಲ್ಲದವರೊಡನೆಯ ಬದುಕು ಬಲು ಕಷ್ಟ...
ಬೆಳಗು.. ಸಂಜೆ..
ರಾತ್ರಿಗಳೆಲ್ಲ ನೀರಸವಾಗಿ...
ಯಾಂತ್ರಿಕವಾಗಿ..... ಉರುಳುತ್ತಿತ್ತು...
ನಾವಿದ್ದಿದ್ದು ಮೊದಲ ಅಂತಸ್ಥಿನಲ್ಲಿ...
ಅಂದು ಬೆಳಿಗ್ಗೆ ಯಾವತ್ತಿನಂತೆ ಮೌನವಾಗಿಯೇ ದಿನ ಶುರುವಾಯಿತು..
ಯಾರೋ ಬೆಲ್ ಮಾಡಿದ್ದರು..
ನಾನು ಬಂದು ಬಾಗಿಲು ತೆಗೆದೆ..
ಎತ್ತರದ...
ನಗುಮುಖದ ವ್ಯಕ್ತಿಯೊಬ್ಬ ನಿಂತಿದ್ದ....
"ನಾನು.. ಕೆಳಗಡೆ ಇರ್ತೇನೆ.. ಈ ಮನೆ ಓನರ್..
ಇವತ್ತು ನನ್ನ ಮಡದಿಯ ಸೀಮಂತ..
ಡೆಲಿವರಿ ದಿನ ಹತ್ತಿರ ಬಂದಿವೆ..
ಸಮಯದ ಅಭಾವ.... ಹಾಗಾಗಿ ಇವತ್ತೇ ಇಟ್ಟುಕೊಂಡಿದ್ದೇನೆ..
ಸಾಯಂಕಾಲ ನೀವೆಲ್ಲ ನಮ್ಮನೆಗೆ ಬರಬೇಕು..
ನಮ್ಮ ಮನೆಯಲ್ಲೇ ಊಟ.."
"ಬನ್ನಿ...ಒಳಗೆ.. ಬನ್ನಿ.. "
ನನ್ನ ಗಂಡ ಅವರು ಬಂದೊಡನೆ ಎದ್ದು ನಿಂತ..
"ನೋಡಿ.... ನೀವು ಇವತ್ತು ನಿಮ್ಮ ಕೆಲಸದಿಂದ.. ಸ್ವಲ್ಪ ಬೇಗ ಬನ್ನಿ.."
ನನ್ನ ಗಂಡ ಕಂಡೂ ಕಾಣದ ಮುಗುಳುನಗೆ ನಕ್ಕ..
ಅವರ ನಗುವೇ.. ಹಾಗೆ..
"ಆಯ್ತು ಸರ್.."
ನಾನು ಅವರಿಗೆ ಉಪಚಾರ ಮಾಡಿದೆ..
".. ಕುತ್ಕೊಳ್ಳಿ .. ಕಾಫಿ ಮಾಡ್ತೇನೆ.."
"ಇಲ್ಲಾರಿ ಕಾಫೀ ಕುಡಿದರೆ ...
ನನ್ನ ದೈನಂದಿನ ಸಿಸ್ಟಮ್ ಸರಿ ಇರೋದಿಲ್ಲ..
ಇನ್ನು..ಟೀ..ಈಗ ಕುಡಿದರೆ ರಾತ್ರಿ ನಿದ್ದೆ ಬರೋದಿಲ್ಲ..!
ದಯವಿಟ್ಟು ಏನೂ ಬೇಡ.."
ಅವರ ಮಾತಿನಲ್ಲಿರುವ ಹಾಸ್ಯ ನನಗೆ ಇಷ್ಟವಾಯಿತು...
"ಇರಿ ...
ಬಿಸಿ.. ಬಿಸಿ ಹಾಲು ಹಾರ್ಲಿಕ್ಸ್ ತರ್ತೇನೆ.."
ಆತ ಮಾತನಾಡುವಾಗ ಕಣ್ಣನ್ನೇ... ನೋಡುತ್ತಿದ್ದ..
ಸಣ್ಣ ಮುಗುಳು ನಗು ತುಟಿಯಲ್ಲಿರುತ್ತಿತ್ತು...
"ಅಯ್ಯೋ..
ಹಾರ್ಲಿಕ್ಸು ಹಾಗೆ ಕುಡಿಯೋದಿಲ್ಲಾರಿ...
ಅದನ್ನು ಕುಡಿಯ ಬೇಕಾದರೆ..
ನನಗೆ ಬಾಟಲಿ ಮತ್ತು ನಿಪ್ಪಲ್ಲು ಬೇಕು..
ಹ್ಹ್ಹಾ..ಹ್ಹಾ.. !!
ತಮಾಶೆ ಮಾಡಿದೇರಿ..
ಹಾಲು ನನಗೆ ಇಷ್ಟವಿಲ್ಲ.. ಪ್ಲೀಸ್.. ಏನೂ ಬೇಡ..
ನೀವು ಇವತ್ತು ನಮ್ಮನೆಗೆ ಬನ್ನಿ.."
ನನಗೂ ನಗು ಬಂತು... ನಕ್ಕೆ..
ನಗದೇ.. ಬಹಳದಿಗಳಗಿದ್ದವು ..
"ಆಯ್ತು ಸರ್..
ನಾವು ಇಬ್ಬರೂ ಬರ್ತೇವೆ..."
ಬಂದವ ಕೆಲವೇ ಹೊತ್ತಿನಲ್ಲಿ ನನ್ನನ್ನು ಇಂಪ್ರೆಸ್ ಮಾಡಿಬಿಟ್ಟಿದ್ದ...
ಸಾಯಂಕಾಲ ನಾನು ಚೆನ್ನಾಗಿಯೇ ತಯಾರಾದೆ...
ಕಿವಿಗೆ ದೊಡ್ಡ ರಿಂಗು..
ಕೈ ತುಂಬಾ ಬಳೆ..
ಹಳದಿ ರೇಷ್ಮೇ ಸೀರೆ.. ಚಿಕ್ಕ ತೋಳಿನ ಬ್ಲೌಸ್...
ಕನ್ನಡಿಯಲ್ಲೊಮ್ಮೆ ನನ್ನನ್ನೇ ನೋಡಿಕೊಂಡೆ...
ಒಂದು ರಸಿಕ ಮನಸ್ಸಿನ ಮಡದಿ ನಾನಾಗ ಬೇಕಿತ್ತು...!!
ಮಾಡುವ ವಿಚಾರ ಕೆಟ್ಟದಾಗಿದ್ದರೂ...
ಬೇಡವೆಂದು ಹೇಳಲು ಮನ ಒಪ್ಪುತ್ತಿಲ್ಲ..
ನನ್ನ ಗಂಡ ಆ ದಿನವೂ ತಡವಾಗಿಯೇ ಬಂದ..
ನಾವು ಅವರ ಮನೆಯೊಳಗೆ ಹೋಗುವ ಹೊತ್ತಿನಲ್ಲಿ ಎಲ್ಲ ನೆಂಟರಿಷ್ಟರು ಖಾಲಿಯಾಗಿದ್ದರು..
"ಬನ್ನಿ... ಬನ್ನಿ.. ನಿಮಗೇ...
ಕಾಯುತ್ತಿದ್ದೆ..."
ಅದೇ ತುಂಟ ಕಣ್ಣಿನಿಂದ ಮೆಚ್ಚುಗೆಯ ನೋಟ... !
ನಾನು ಮುಗುಳು ನಗೆ ನಕ್ಕೆ..
ಅತನ ಮಡದಿಯನ್ನೊಮ್ಮೆ ನೋಡಿದೆ..
ತುಂಬು ಬಸುರಿ..
ಲಕ್ಷಣವಾಗಿದ್ದಳು.. ಮೈತುಂಬ ಬಂಗಾರ...
ಅವಳ ತಾಯಿತನ... ಅವಳಿಗೊಂದು ಕಳೆ ಕೊಟ್ಟಿತ್ತು...
ತುಂಬಾ ಮುಗ್ಧೆ ಅನಿಸುತ್ತಿತ್ತು....
"ನಮ್ಮನೆಯವರು... ನಿಮ್ಮನ್ನು ತುಂಬಾ ಹೊಗಳಿದ್ದಾರೆ..
ಮನೆಯನ್ನು ತುಂಬಾ ಚೆನ್ನಾಗಿ ಇಟ್ಟು ಕೊಂಡಿದ್ದೀರಂತೆ....
ನಿಮ್ಮ ಚಂದದಷ್ಟೆ..
ಚಂದ ನಿಮ್ಮ ಮನೆಯ ಅಲಂಕಾರ...ಎಂದೆಲ್ಲ ಹೊಗಳಿದ್ದಾರೆ..
ಅವರು ಹೇಳಿದ ಹಾಗೆ ನೀವು ಸುಂದರವಾಗಿದ್ದೀರಾ ...!!
ನನಗೆ ನಿಮ್ಮ ಮನೆಯನ್ನೂ ನೋಡ ಬೇಕಲ್ಲ.."
ನನಗೆ ನಾಚಿಕೆಯೂ...
ಸಂತೋಷವೂ ಆಯಿತು..
ಬಹಳ ದಿನಗಳ ನಂತರ ನನ್ನ ಚಂದವನ್ನು ಒಬ್ಬರು ಗುರುತಿಸಿದ್ದರು.. !
ಆತ ಮತ್ತೆ ಬಂದ...
ಕೈಯಲ್ಲಿ ಸ್ವೀಟು.. ಖಾರ ಹಿಡಿದು...
"ನೋಡಿ...
ಇದನ್ನು.. ಬೇಡವೆನ್ನಬೇಡಿ..
ಮದುವೆಯಾದ ಬ್ರಹ್ಮಚಾರಿಯ ಉಪಚಾರ,..ಇದು..
ಸಂಗಡ ಜ್ಯೂಸ್ ಇದೆ.. ನೀವು ಮಾತನಾಡುತ್ತಾ ಇರಿ.."
ಹೆಂಡತಿಯ ಮುಖನೋಡಿ...
" ಚಿನ್ನಾ....
ನಿನಗೇನು ಕೊಡಲಿ...?"
ನನ್ನ ಗಂಡ ಇಂಥಹ ಭಾಷೆ..
ತಮಾಷೆ... ಒಮ್ಮೆಯಾದರೂ ಮಾಡಬಹುದಾ ?
ಆತ ಹೆಂಡತಿಯ ಬಳಿ ಮಾತನಾಡಿದರೂ...
ಮೆಚ್ಚುಗೆಯ ನೋಟ ನನ್ನಮೇಲಿತ್ತು..!
ತನ್ನ ಅಲಂಕಾರ, ಚಂದದ ಪ್ರಶಂಸೆ ಯಾವ ಹೆಣ್ಣಿಗೆ ತಾನೆ ಇಷ್ಟವಾಗುವದಿಲ್ಲ ?
ನಾನು ಮುಖ ತಿರುಗಿಸಿ ನನ್ನ ಗಂಡನ ಬಳಿ ಬಂದೆ...
ಆತ ಪಾದ ರಸದಂತೆ ಓಡಾಡುತ್ತಿದ್ದ..
ಆಗಾಗ ನಮ್ಮ ಬಳಿ ಬಂದು ಮಾತನಾಡಿಸುತ್ತಿದ್ದ...
ತಾನು ದೂರದಲ್ಲಿದ್ದರೂ ...
ಮೆಚ್ಚುಗೆಯ ನೋಟವನ್ನು ನನ್ನ ಮೇಲೆ ಇಡುತ್ತಿದ್ದ...
ನಾವು ಅಲ್ಲಿ ಊಟವನ್ನೂ ಮುಗಿಸಿ ಹೊರಟೆವು...
ಬೀಳ್ಕೊಡಲು ಬಾಗಿಲವರೆಗೂ ಆತ ಬಂದ...
"ನೀವು ಬಂದಿದ್ದು ಬಹಳ ಖುಷಿಯಾಯಿತು..
ನಮ್ಮನೆಗೆ ಕಳೆ ಬಂದಿತ್ತು..
ನೀವು ಬರುತ್ತಾ ಇರಿ..
ನಮ್ಮನೆಯವರಿಗೂ ಸಮಯ ಕಳೆಯಲು ಅನುಕೂಲವಾಗುತ್ತದೆ.."
ಆತ ನನ್ನ ಬಳಿ ಮಾತನಾಡಿದ ..
ವಿಷಯವೇ.....ಬೇರೆ...!
ಕಣ್ಣಲ್ಲಿ ಹೇಳಿದ ವಿಷಯವೇ.. ಬೇರೆ....!
ನಾನು ತಲೆಯಾಡಿಸಿದೆ...
ಮನೆಗೆ ಬಂದವಳಿಗೆ ಮನಸೆಲ್ಲ ಕಸಿವಿಸಿ...
ನನ್ನ ವಿಚಾರಗಳು ತಪ್ಪಲ್ಲವೆ...?
ಜಾರುವ ಮನಸ್ಸು..
ಹಿಡಿತವಿಲ್ಲದೆ ...ಹೋಗುವಾಗಲೂ..
ಮಧುರ ಆಸೆಯ..
ಕುತೂಹಲದ....
ರೋಮಾಂಚನದ ಕಾತುರ... !
ನನ್ನ ದಾರಿ... ಜಾರುತ್ತಿದೆಯಾ ??
ನಾನು ಬೀಳುತ್ತಿರುವೆನಾ ?
ಮಧ್ಯ ರಾತ್ರಿ ಬಾಗಿಲು ತಟ್ಟಿದ ಶಬ್ಧ...!
ನನ್ನವರು ಲಗುಬಗೆಯಿಂದ ಬಾಗಿಲು ತೆಗೆದರು..
ಆತ ಗಾಭರಿಯಲ್ಲಿದ್ದ..!
"ರೀ.... ನನ್ನಾಕೆಗೆ ಹೆರಿಗೆ ನೋವು ಶುರುವಾಗಿದೆ..
ದಯವಿಟ್ಟು ನೀವೂ ಬನ್ನಿ...
ಅಂಬ್ಯುಲೆನ್ಸ್ ಈಗ ಬಂದು ಬಿಡುತ್ತದೆ.."
ನನ್ನವರು ಅದೇ ಲುಂಗಿಯ ಮೇಲೆ ಶರಟು ಹಾಕಿ ಹೊರಟರು..
ಅವರಿಗೆ ಸಹಾಯ ಮಾಡುವದೆಂದರೆ..... ಬಹಳ ಇಷ್ಟ......
ಅವರು ಹೋದ ಮೇಲೆ..
ನನಗೆ ಒಬ್ಬಳಿಗೆ ನಿದ್ದೆಯೇ ಬರಲಿಲ್ಲ...
ಆಚೆ ಈಚೆ ಹೊರಳಾಡಿದೆ...
ಆತನ ರಸಿಕ ಮಾತು...
ತುಂಟ ನೋಟ... ಎಲ್ಲವೂ ನೆನಪಾಗುತ್ತಿತ್ತು....
ಅಪ್ಪ.. ಅಮ್ಮ ಕೊಟ್ಟ ಸಂಸ್ಕಾರಕ್ಕಿಂತ...
ದೈಹಿಕ ಆಕರ್ಷಣೆ ದೊಡ್ಡದೇ...?
ಅಷ್ಟರಲ್ಲಿ ಫೋನ್ ರಿಂಗಾಯಿತು...
ನನ್ನವರು ಫೋನ್ ಮಾಡಿದ್ದರು...
" ನೋಡೇ...
ಡೆಲಿವರಿ ನಾರ್ಮಲ್ ಆಯಿತು.. ಗಂಡು ಮಗು..
ಆದರೆ..."
"ಏನು ಆದರೆ..?"
"ಮತ್ತೇನಿಲ್ಲ..
ಪಾಪುವಿಗೆ ಎರಡು ಕಿವಿಗಳೇ ಇಲ್ಲ..!
ಆದರೆ ಕಿವಿಯಲ್ಲಿ ತೂತು ಇದೆ!
ಕಿವಿ ಕೇಳ ಬಹುದು !!"
ನನಗೆ ಏನು ಹೇಳ ಬೇಕೆಂದೇ ತೋಚಲಿಲ್ಲ...
ಆಶ್ಚರ್ಯವೂ ಆಯಿತು...!
ಬೇಸರವೂ ಆಯಿತು... ಯಾಕೆ ಹೀಗೆ ?
ಅವರು ಆಸ್ಪತ್ರೆಯಿಂದ ಬಂದಾಗ ಬೆಳಗಾಗಿತ್ತು...
ಅವರು ಗಂಭೀರವಾಗಿದ್ದರು...
ಅವರು ಸ್ನಾನ ಮಾಡಿಯಾದ ಮೇಲೆ ನಾಷ್ಟಾ ಇಟ್ಟೆ....
ಅವರು ಇನ್ನೂ ಗಂಭೀರವಾಗಿಯೇ ಇದ್ದರು...
ಮಗು ಹಾಗೆ ಇದ್ದಿದ್ದಕ್ಕೆ ಬೇಸರ ಆಗಿರ ಬಹುದಾ ?
ನನಗೆ ಕುತೂಹಲ ತಡೇಯಲಾಗುತ್ತಿಲ್ಲ..
ಕಿವಿಯಿಲ್ಲದ ಪಾಪು.....!
ನಾನು ತುಸು ಧೈರ್ಯ ಮಾಡಿದೆ...
" ತಾಯಿ ಮಗು ಆರೋಗ್ಯವಾಗಿದ್ದಾರಾ ?"
"ಹುಂ...
ಚೆನ್ನಾಗಿದ್ದಾರೆ...
ಇನ್ನೊಂದು ಬೇಸರದ ವಿಷಯವಿದೆ...! "
"ಏನು ?? !!"
"ಪಾಪು ಹೃದಯದಲ್ಲಿ ತೂತು ಇದೆ.. !!
ಹಾರ್ಟಿನಲ್ಲಿ ಹೋಲ್ ಇದೆ.. !!"
" ಅಯ್ಯೋ...!!
ಹೌದಾ ? !!
ಯಾಕೆ ಹೀಗೆ ಇಂಥಹ ಪಾಪು ಹುಟ್ಟುತ್ತವೆ ?"
"ನೋಡು...
ಇದಕ್ಕೆ.. ಹಲವಾರು ಕಾರಣ ಇದೆಯಂತೆ...
ಅಲ್ಲಿನ ನರ್ಸ್ ಕೇಳಿದೆ....
ಅವಳು ಹೇಳಿದ ಕಾರಣ ಕೇಳಿ ಬಹಳ ಬೇಸರವಾಯಿತು..."
"ಏನದು ??"
"ಹೆಂಡತಿ ಬಸುರಿಯಿದ್ದಾಗ..
ಗಂಡ ಬೇರೆ ಹೆಂಗಸರ ಸಹವಾಸ ಮಾಡುತ್ತಿದ್ದರೆ...
ಇನ್ಫೆಕ್ಷನ್ ಆಗಿ..ಹೀಗೆಲ್ಲ ಆಗುತ್ತದಂತೆ.....!
ಅಷ್ಟು ಚಂದದ ಹೆಂಡತಿ...!
ಮೋಸ ಮಾಡುವ ಮನಸ್ಸು ಹೇಗೆ ಬರುತ್ತದೋ...?
ಏನೋ...
ಛೇ...
ಅವರ ಮೇಲಿನ ಗೌರವ ಹೊರಟು ಹೋಯಿತು ನೋಡು...!!"
ನನಗೆ ದೊಡ್ಡ ಷಾಕ್....!
ಗಂಡನ ಮುಖವನೊಮ್ಮೆ ನೋಡಿದೆ...
ಹಣೆಯ ಮೇಲೆ ಕೂದಲು ಇರದಿದ್ದರೂ...
ಒಂದು ಥರಹ ಚಂದವೇ ಕಾಣುತ್ತಿದ್ದ...!
ಬಕ್ಕ ತಲೆಯ ಮೇಲೆ ಕೈಯಾಡಿಸ ಬೇಕು ಎನಿಸಿತು....!
ಅವನನ್ನೊಮ್ಮೆ ...
ಹಿಂದಿನಿಂದ...ತಬ್ಬಿ...
ಹಣೆಯ ಮೇಲೆ ಮುತ್ತಿಡಬೇಕೆಂದೆನಿಸಿತು....!
ಸಂಭಾವಿತ .. ಸಭ್ಯಸ್ಥ ..
ನನ್ನ..
ಗಂಡನನ್ನು ಮುದ್ದಿಸ ಬೇಕೆನಿಸಿತು....!
(ಬಹಳ ..
ಸುಂದರ... ಒಳ್ಳೆಯ.. ಪ್ರತಿಕ್ರಿಯೆಗಳಿವೆ....
ದಯವಿಟ್ಟು ಪ್ರತಿಕ್ರಿಯೆಗಳನ್ನೂ.. ಓದಿ...
ಎಲ್ಲ ಪ್ರತಿಕ್ರಿಯೆಗಳಿಗೂ ಉತ್ತರಿಸುವೆ.. ಸ್ವಲ್ಪ ಕಾಲಾವಕಾಶ ಕೊಡುವಿರಲ್ಲವೇ?...)

Thursday, May 27, 2010
ಬ್ಲಾಗಿಗರ ಮೊದಲ ಮೆಟ್ಟಿಲು.... ಇದೇ ಶನಿವಾರ..!
ಆತ್ಮೀಯ ಬ್ಲಾಗ್ ಬಂಧುಗಳೇ...
ಇದೇ.. ಬರುವ ಶನಿವಾರ ( 29/5/2010)
ಮೇ ಫ್ಲವರ್ ಮೀಡಿಯಾ ಹೌಸಿನಲ್ಲಿ ಒಂದು ಮೀಟಿಂಗನ್ನು ಏರ್ಪಡಿಸಲಾಗಿದೆ..
ದಯವಿಟ್ಟು ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸ ಬೇಕಾಗಿ ವಿನಂತಿ..
ಅಲ್ಲಿ ಶ್ರೀ. ಜಿ.ಎನ್. ಮೋಹನ್ ...
ಮತ್ತು ನಾವೆಲ್ಲರೂ ಸೇರಿ.. ಮುಂದಿನ ರೂಪು ರೆಷೆಯ ಬಗೆಗೆ ಒಂದು ನಿರ್ಧಾರಕ್ಕೆ ಬರೋಣ...
ದೂರದ ಊರಲ್ಲಿರುವ ಆಜಾದ್ ಉತ್ಸಾಹ..
ನಮಗೆಲ್ಲ ಒಂದು ಟಾನಿಕ್...
ಅಲ್ಲಿ.. ನಾವೆಲ್ಲರೂ ಸೇರಿ ...
ಇದುವರೆಗೆ ಆದ developments ಬಗೆಗೆ....
ಇನ್ನು ಮುಂದೆ ಆಗ ಬೇಕಾದ ವಿಷಯಗಳ ಬಗೆಗೆ ಚರ್ಚಿಸಿ ಒಂದು ಸೂಕ್ತ ನಿರ್ಧಾರಕ್ಕೆ ಬರೋಣ....
ಬ್ಲಾಗಿಗರ ಕೂಟದ ಬಗೆಗೆ ಬಹಳ ಉತ್ಸಾಹದ ವಾತಾವರಣ ಕಾಣುತ್ತಾ ಇದೆ..
ಇಂಥಹ ಒಂದು ಕೂಟದ ಬಗೆಗೆ ಉತ್ಸಾಹ, ಪ್ರೋತ್ಸಾಹ ಸಿಗುತ್ತಾ ಇದೆ....
ನಾನು ಸಿರ್ಸಿಗೆ ಹೋಗಿದ್ದರಿಂದ ಎಲ್ಲರ ಈಮೇಲಿಗೆ ಉತ್ತರಿಸಲಾಗಲಿಲ್ಲ....
ದಯವಿಟ್ಟು ಬೇಸರಿಸದಿರಿ...
ಬನ್ನಿ ಎಲ್ಲರೂ ಒಂದೆಡೆ ಸೇರೋಣ..
ಇದು ನಮ್ಮ ಮೊದಲ ಮೆಟ್ಟಿಲು...
ದೂರದಲ್ಲಿರುವವರು ತಮ್ಮ ಸಲಹೆ ಸೂಚನೆಗಳನ್ನು ಈ ಮೇಲ್ ಮುಖಾಂತರ ತಿಳಿಸಿದ್ದಿರಿ..
ಮತ್ತೇನಾದರೂ ಇದ್ದಲ್ಲಿ ಮತ್ತೆ ಈ ಮೇಲ್ ಮಾಡಿ..
ಸಂಪರ್ಕಿಸುವ ಫೋನ್ ..
080 / 22374436 ಮೇ ಪ್ಲವರ್ ಮೀಡಿಯಾ ಹೌಸ್...
ಶನಿವಾರ ಸಾಯಂಕಾಲ ಐದು ಗಂಟೆಗೆ... (5 pm)
ಸ್ಥಳ : ಮೇಫ್ಲವರ್ ಮೀಡಿಯಾ ಹೌಸ್...
ದಯವಿಟ್ಟು ಬನ್ನಿ....
( ನಮ್ಮ ಪ್ರಿಯ ಮಿತ್ರ "ಗೌತಮ್ " ಒಂದು ವಿಷಯ ನಮ್ಮೆಲ್ಲರ ಗಮನಕ್ಕೆ ತಂದಿದ್ದಾರೆ...
ಅದು..
ಈ ಮೊದಲು ೨೦೦೮ ರಲ್ಲಿ "ಬ್ಲಾಗಿಗರ ಕೂಟ" ನಡೆದಿತ್ತು .. ಎಂದು..
ಪ್ರಣತಿ ಬಳಗ ಅದನ್ನು ಯಶಸ್ವಿಯಾಗಿ ನಡೆಸಿತ್ತು.. !!
ನಾನೂ ಒಮ್ಮೆ ಅದರ ಬಗೆಗೆ ಕೇಳಿದ್ದೆ..
ವಿವರ ತಿಳಿದಿಲ್ಲವಾಗಿತ್ತು..
ಹಿಂದಿನ ಲೇಖನ ಬರೆಯುವಾಗ ನೆನಪಾಗಲಿಲ್ಲ...
ದಯವಿಟ್ಟು ಕ್ಷಮಿಸಿ..
ಆ ಬ್ಲಾಗ್ ಕೂಟ ನಡೆಸಿದ ಮಿತ್ರರಿಂದ ಅವರ ಅನುಭವ ಪಡೆದು..
ಅವರ ಸಹಕಾರ...
ಸಹಯೋಗದಿಂದ ...
ಎಲ್ಲರೂ ...
ಒಂದೆಡೆ.. ಸೇರಿ...
ಸಂಭ್ರಮಿಸೋಣ....!!
ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ...!
ನನ್ನ ಮರೆವಿಗಾಗಿ ಮತ್ತೊಮ್ಮೆ " sorrryyyy..."
ದಯವಿಟ್ಟು ಶನಿವಾರ ಬನ್ನಿ... )

Sunday, May 16, 2010
ಬ್ಲಾಗಿಗರ.. ಬ್ಲಾಗ್ ಓದುಗರ... ಕೂಟ...
ಕೆಲವು ತಿಂಗಳ ಹಿಂದೆ ...
ನಮ್ಮ ಬ್ಲಾಗ್ ಮಿತ್ರ ಆಝಾದ್ ( ಜಲನಯನ ಬ್ಲಾಗ್) ತಮ್ಮ ಬ್ಲಾಗಿನಲ್ಲಿ..
ಒಂದು ಪ್ರಸ್ತಾಪ ಇಟ್ಟಿದ್ದರು..
ಬ್ಲಾಗಿಗರೆಲ್ಲರೂ ಒಂದು ಕಡೆ ಸೇರ ಬೇಕು...
ತುಂಬಾ ಜನರಿಗೆ ಇದರ ಬಗ್ಗೆ ಒಲವಿದೆ...
ಆದರೆ..
ಹೇಗೆ..?
ಎಲ್ಲಿ..?
ಇತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರವಿರಲಿಲ್ಲ..
ನನ್ನ ಬಳಿಯೂ ತುಂಬಾ ಜನ ಇದನ್ನು ಪ್ರಸ್ತಾಪ ಮಾಡಿದ್ದರು..
ದೂರದ ಊರಲ್ಲಿರುವ ಸ್ನೇಹಿತ "ಉದಯ ಇಟಿಗಿ" ( ಬಿಸಿಲ ಹನಿ ಬ್ಲಾಗ್ )
ಒಂದು ಬ್ಲಾಗಿಗರ ಸಂಜೆ"ಯನ್ನು ಏರ್ಪಡಿಸಿದ್ದರು..
ನಾವೆಲ್ಲ ಹೋಗಿದ್ದೇವು ..
ಅದೊಂದು ಅಪೂರ್ವ ಅನುಭವ..!
ಅಂಥಹದೊಂದು ಸಂಜೆಗಾಗಿ ಅವರಿಗೆ ಕೃತಜ್ಞತೆಗಳು..
ಮತ್ತೆ ಮತ್ತೆ ಈ ಥರಹದ "ಬ್ಲಾಗಿಗರೆಲ್ಲರೂ ಒಂದೆಡೆ ಸೇರಬೇಕು ಎನ್ನುವ" ಮಾತು ಕೇಳಿ ಬರುತ್ತಲೇ ಇದೆ..
ದೂರದ ಅಮೆರಿಕಾದಲ್ಲಿರುವ ನಮ್ಮ ಸ್ನೇಹಿತೆ
"ಜ್ಯೋತಿ ಮಹಾದೇವ್" ಕೂಡ ಇಂಥಹ ಪ್ರಯತ್ನ ಮಾಡಿದ್ದಾರೆ..
ನನಗೆ ಅಲ್ಲಿಗೆ ಹೋಗಲಾಗಲಿಲ್ಲ..
ಈಗ "ಜಲನಯನ" ಮತ್ತೆ ಮರು ಹುಟ್ಟು ಹಾಕಿದ್ದಾರೆ...
ಬ್ಲಾಗಿಗರೆಲ್ಲರೂ ಒಂದೆಡೆ ಯಾಕೆ ಸೇರಬಾರದು ?
ಅವರು ಮೊದಲು ನನ್ನ ಬಳಿ ಈ ಪ್ರಶ್ನೆ ಇಟ್ಟಾಗ ನಾನು ಕೆಲವು ಸಲಹೆ ಇಟ್ಟಿದ್ದೆ...
"ಇದು ನಿಜ ಅರ್ಥದಲ್ಲಿ ಎಲ್ಲ ಬ್ಲಾಗಿಗರ ಕೂಟ ಆಗಬೇಕು...
ಎಲ್ಲರನ್ನೂ ಒಟ್ಟಿಗೆ ಸೇರಿಸ ಬೇಕು...
ಯಾರೊಬ್ಬರಿಗೂ ಬೇಸರವಾಗಬಾರದು..
ಮುಂದೊಂದು ದಿನ ಈ ಕೂಟ ಎಲ್ಲರಿಗೂ ಮಾದರಿಯಾಗಿರಬೇಕು...
ಶ್ರೀ ಜಿ.ಎನ್.ಮೋಹನ್ ಇದರ ಬಗೆಗೆ ಸೂಕ್ತ ವ್ಯಕ್ತಿ..
ಅವರ ಸಲಹೆ ಸೂಚನೆ, ಮಾರ್ಗದರ್ಶನ ಪಡೆದು ಕೊಳ್ಳಬೇಕು.."
"ಜಿ.ಎನ್. ಮೋಹನರನ್ನು ನೀನೆ ಮಾತನಾಡಿಸು"
ಅಂತ ಆಝಾದ್ ನನಗೆ ಹೇಳಿದರು...
ಇದು ಬಹಳ ಕಷ್ಟದ ಕೆಲಸ...
ಪ್ರಯತ್ನಿಸಿದೆ...
ನಾನು ಅವರನ್ನು ಫೋನಿನಲ್ಲಿ ಸಂಪರ್ಕಿಸಿದೆ...
" ಪ್ರಕಾಶ್..
ತುಂಬಾ ಖುಷಿಯಾಗುತ್ತದೆ..
ಸುಶ್ರುತ.., ನಿಧಿ.. ಇನ್ನೂ ಹಲವರೆಲ್ಲರೂ ಸೇರಿ ಒಂದು ಮೀಟಿಂಗ್ ನಾವು ಮಾಡಿದ್ದೇವೆ..
ಕಾರಣಾಂತರಗಳಿಂದ ಮತ್ತೆ ಭೇಟಿಯಾಗಲು ಸಾಧ್ಯವಾಗಿಲ್ಲ..
ನೀವು ಮಾಡುವದಾದರೆ ನಮ್ಮ ಬೆಂಬಲವಿದೆ" ಎಂದರು..
"ಸರ್ ಇದು ನಿಮ್ಮ ಮುಂದಾಳತ್ವದಲ್ಲಿ ನಡೇದರೆ ಉತ್ತಮ"
ಎಂದು ನಾನು ಹೇಳಿದೆ..
ಮತ್ತೆ ಇದರ ಬಗೆಗೆ ಭೇಟಿಯಾಗಬೇಕೇಂದು ಮಾತನಾಡಿಕೊಂಡೆವು...
ಆದರೆ ಅದಕ್ಕೆ.. ಇನ್ನೂ ಸಮಯ ಕೂಡಿ ಬಂದಿಲ್ಲ..
ಅದಕ್ಕೆ ಕಾರಣ ನಾನು ಬ್ಯೂಸಿಯಾಗಿರುವದು...
ಪ್ರಿಯ..
ಬ್ಲಾಗಿಗರೇ..
ಬ್ಲಾಗ್ ಓದುಗರೇ...
ಈಗ ನೀವು ಹೇಳಿ..
ಇಂಥಹದೊಂದು ಕೂಟ ಆಗ ಬೇಕಲ್ಲವೆ ?
ಆ ಕೂಟದಲ್ಲಿ ಏನೇನು ಕಾರ್ಯಕ್ರಮ ಆಗ ಬೇಕು ?
ಹೇಗೆ ಆಗಬೇಕು..?
ಎಲ್ಲಿ ಆಗಬೇಕು ?
ಯಾವಾಗ ಆಗಬೇಕು...?
ದಯವಿಟ್ಟು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ...
ಇದು ನಿಜ ಅರ್ಥದಲ್ಲಿ....
ಸಮಸ್ತ ಬ್ಲಾಗಿಗರ ಒಕ್ಕೂಟ ಆಗಬೇಕು...
ನಮ್ಮೆಲ್ಲರ..
ಸಂಭ್ರಮದ ,, ಸಂತೋಷದ ಕ್ಷಣಗಳಾಗಬೇಕು...
ಅಲ್ಲವೇ...?
ಹಾಗಾಗುವಂತೆ ಮಾಡೋಣ...
(ಮೋಹನಸರ್, ಆಜ್ಹಾದ್, ಶಿವು, ಸುಶ್ರುತ ದೊಡ್ಡೇರಿ.. ಇನ್ನೂ ಹಲವರ ಒಂದು ಕಮಿಟಿ ಮಾಡೋಣ.. ಕಾರ್ಯಕ್ರಮದ ಕುರಿತು ಮಾತಾಡಿ ಒಂದು ನಿರ್ಣಯ ತೆಗೆದು ಕೊಳ್ಳೋಣ....
ಮೋಹನ್ ಸರ್ ಹಾಗೂ ಆಜ್ಹಾದ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ..)
ಜೈ... ಹೋ... !!

Saturday, May 8, 2010
ಮತ್ತೆ ಸಿಕ್ಕಿತ್ತು .... ಪೆಪ್ಪರಮೆಂಟು....!
part 3...
ಮೀಸೆ ಮಂಜಣ್ಣನ ಮನೆಯ ಜಗುಲಿಯಲ್ಲಿ ವಿಚಾರಣೆ ಶುರುವಾಯಿತು..
ಚಿಕ್ಕಪ್ಪ.. ಟಮ್ಮಟಿ ಅಪ್ಪ..
ಎಲ್ಲರಿಗೂ... ನಮ್ಮ ಮೇಲೆ ಅನುಮಾನ .. !
"ಈಗ ಸಣ್ಣ ಗಾಯವಾಗಿದೆ ಸರಿ...
ಕೈ, ಕಾಲು ಮುರಿದ್ದಿದ್ದರೆ ಏನು ಗತಿ ?
ತಿನ್ನಲಿಕ್ಕೆ ತೋತಾ ಪುರಿ ಮಾವಿನ ಕಾಯಿ ಬಿಟ್ಟು..
ಈಶಾಡಿಯ ಕಾಯಿ ಯಾಕೆ ತಿನ್ನುವದು ?"
ಅಲ್ಲಿಯವರೆಗೆ ಸುಮ್ಮನಿದ್ದ ಟಮ್ಮಟಿ...
"ಇಲ್ಲ .... ಮಂಜಣ್ಣ..
ಇವರು ಮರ ಹತ್ತಿ ಏನನ್ನೋ ನೋಡ್ತಾ ಇದ್ರು.. !
ನಾನು ಎಷ್ಟು ಕೇಳಿದ್ರೂ.. ನನಗೆ ಹೆಳ್ಳಿಲ್ಲ.. !
ಇಲ್ಲಿ ನಂದೇನೂ ತಪ್ಪಿಲ್ಲ... ! "
ನಾಗೂಗೆ ಕೋಪ ಬಂತು...
"ಮಂಜಣ್ಣ..
ಇವ ಸುಳ್ಳು ಹೇಳ್ತಾನೆ..
ನಾವು ಇವನಿಗೆ ಮಾವಿನ ಕಾಯಿ ಕೊಡ್ಲಿಲ್ಲ ಅಂತ...!
ಇವನೇ.. ಬಂದು ನಮ್ಮನ್ನು ಬೀಳ್ಸಿದ್ದು... !"
ಅಷ್ಟರಲ್ಲಿ ನನ್ನ ಚಿಕ್ಕಪ್ಪನ ಕಣ್ಣು ಕೆಂಪಾಯಿತು...
"ಮಂಜಣ್ಣ...
ಇವರು ಸುಮ್ಮನೆ ಬಾಯಿ ಬಿಡುವದಿಲ್ಲ...
ಇವರ ಅಂಡಿನ ಮೇಲೆ ನಾಲ್ಕು ಪೆಟ್ಟು ಕೊಡಬೇಕು...
ಆಗ ಬಾಯಿ ಬಿಡ್ತಾರೆ.... ! "
ನನ್ನ ಚಿಕ್ಕಪ್ಪ ಶಿಕ್ಷೆ ಕೊಡುವದರಲ್ಲಿ ನಿಸ್ಸೀಮ..!
ನಾನು ಎಷ್ಟೇ... ಹಾರಾಡುತ್ತಿದ್ದರೂ..
ತಾನು...ತಾಳ್ಮೆ ಕಳೆದುಕೊಳ್ಳದೇ..
ನಿಧಾನವಾಗಿ ಚಡ್ಡಿ ಬಿಚ್ಚಿಸಿ..
ಅಂಡಿನ ಮೇಲೆ ಬಲವಾಗಿ ಒಂದರ ಮೇಲೆ.. ಒಂದು..
ಮತ್ತೊಂದು...
ಹೊಡೆದ ಜಾಗಲ್ಲಿಯೇ.. ಹೊಡೆಯುತ್ತಿದ್ದ...!
ಅವನ ಉರಿ ಕೈ.. ಹೊಡೆತ ....!
ಅಬ್ಭಾ.. !
ತುಂಬಾ.. ಜೋರಾಗಿರುತ್ತಿತ್ತು !
ನಮ್ಮಿಂದ ಕೈಯನ್ನು ಹೊಡೆದ ಜಾಗದಲ್ಲಿ ತಿಕ್ಕಿ ಕೊಳ್ಳಲು ಕೊಡುತ್ತಿರಲಿಲ್ಲ...!!
ತಿಕ್ಕಿ ಕೊಂಡರೆ ಉರಿ ಕಡಿಮೆ ಆಗುತ್ತಿತ್ತು...!!
ನಮ್ಮ ಚಿಕ್ಕಪ್ಪನ ಬಳಿ ಹೊಡೆತ ತಿನ್ನುವದಾ ??
ಕುಷ್ಟ ಚಿಕ್ಕಪ್ಪನ ಹೊಡೆತಕ್ಕೆ ಹೆದರಿದ...
ಒಮ್ಮೆ ನಮ್ಮ ಚಿಕ್ಕಪ್ಪನ ಬಳಿ ಕುಷ್ಟ ಚೆನ್ನಾಗಿ ಪೆಟ್ಟು ತಿಂದಿದ್ದ...
ಅವನ ಚಡ್ಡಿ ಒದ್ದೆಯಾಗಿತ್ತು !
" ಪಕ್ಕೇಶ್.. ಹೆಗ್ಡೇರೆ..
ಎಲ್ಲ ಹೇಳಿ ಬಿಡೋಣ್ರಾ..
ಅವರ ಅವರ.. ಪ್ರೀತಿ..
ಅವರ ಅವರ ಲೆಟರ್ರು..
ನಾವ್ಯಾಕೆ ಪೆಟ್ಟು ತಿನ್ನೋದು ?"
ಅಲ್ಲಿಯೇ ನಾಗು ಪಿಸು ಗುಡುತ್ತ ಗದರಿದ....
"ಸುಮ್ನಿರು ಕುಷ್ಟಾ..!
ನೀ.. ಮಾತಾಡ ಬೇಡ.."
ಮಂಜಣ್ಣ ಮೀಸೆಯ ಮೇಲೆ ಕೈ ಹಾಕಿ ತಿರುವತ್ತ ನಮ್ಮತ್ತ ನೋಡಿದ..
" ಏನೋ ಕುಷ್ಟಾ...?
ನೀನು ನಿಜ ಹೇಳಿದ್ರೆ.. ನಿನ್ನ ಬಿಟ್ಟು ಬಿಡ್ತೇವೆ ನೋಡು..."
"ಮಂಜಣ್ಣ ಹೆಗ್ಡೇರೆ...
ನಾವು ಏನೂ ತಪ್ಪು ಮಾಡ್ಲಿಲ್ರ...
ಎಲ್ಲದೂ.. ಟಮ್ಮಟಿ ಮಾಡಿದ್ದು...!
ಅವ್ರು ಬರದೇ ಇದ್ರೆ...
ನಾವು ಹಾಡು ಕೇಳ್ಕೊಂಡು ಬರ್ತಾ ಇದ್ರು..!.."
"ಏನು... ??..
ಈಶಾಡಿ ಮರದ ಮೇಲೆ ಹಾಡಾ.. ?
ಅಲ್ಲಿ ಎಂತಾ ಹಾಡು..?.."
"ಮಂಜಣ್ಣ ಹೆಗ್ಡೇರೆ..
ಅದು ದೊಡ್ಡ ಕಥೇರ್ರಾ...!!.."
"ಏನು ಕಥೆ.. ?.. "
ಮಂಜಣ್ಣನ ಹುಬ್ಬು ಮೇಲಕ್ಕೆ ಏರಿತು....!
ಅಷ್ಟರಲ್ಲಿ ಎಂಕಟು ಬಂದ...!
ಅಯ್ಯೋ ದೇವರೆ..!
ಈ ಯಂಕಟು ಇಲ್ಲಿ ಯಾಕೆ ಬಂದ ?
ಕುಷ್ಟ ಎಲ್ಲವನ್ನೂ ಬಾಯಿ ಬಿಡ್ತಾ ಇದ್ದಾನೆ..!!
ಯಾಕೊ ನಮ್ಮ ಗ್ರಹಚಾರವೇ.. ಸರಿ ಇಲ್ಲ.. !
"ಮಂಜಣ್ಣ..
ಇಲ್ಲಿ ಏನಾಗ್ತಿದೆ ?"
"ಏನಿಲ್ಲ ಯಂಕಟು...
ಇವರು ನಾಗು ಮನೆ ಈಶಾಡಿ ಮರ ಹತ್ತಿ ಬಿದ್ದಿದ್ದಾರೆ..
ಇವರು ಹೇಳುವದು ಮಾವಿನಕಾಯಿ ತಿನ್ನಲಿಕ್ಕೆ ಅಂತ..
ಟಮ್ಮಟಿ ಹೇಳುವದು..
ಇವರು ಏನೋ .. ನೋಡ್ತಾ ಇದ್ರು ಅಂತ.. !
ಕುಷ್ಟ ಹೇಳ್ತಾ ಇದ್ದಾನೆ..
ಏನೋ ಹಾಡು ಕೇಳ್ತಿದ್ರಂತೆ..
ಇಲ್ಲಿ ಏನೋ ಎಡವಟ್ಟು ಆಗಿದೆ... !
ಇದು ಖಂಡಿತ.. !
ಒಂದೆರಡು ಪೆಟ್ಟು ಕೊಟ್ಟರೆ ಬಾಯಿ ಬಿಡ್ತಾರೆ..."
ಯಂಕಟು.. ದುರು ಗುಡುತ್ತ ನಮ್ಮನ್ನು ನೋಡಿದ....!
ನಮಗೆ ತಿರುಗಿ ನೋಡುವ ಧೈರ್ಯ ಇರಲ್ಲಿಲ್ಲ..
"ಮಂಜಣ್ಣಾ..
ಇವರು ದಿನಾ ಆ ಮಾವಿನ ಮರ ಹತ್ತಿ ..
ಮಾವಿನ ಕಾಯಿ ತಿನ್ನೋದೆ ಕೆಲಸ..
ನಾನು ದಿನಾ ನೋಡ್ತಿನಿ..
ತಿನ್ನೋದು ಅಲ್ದೆ...
"ಶಂಕರ್ ಗುರು" ಸಿನೇಮಾದ ಹಾಡು ಹೇಳ್ತಾರೆ....!
ನಾನು ಕಣ್ಣಾರೆ ನೋಡಿದ್ದೇನೆ..
ಇವರಿಗೊಂದು.. ಬೇರೆ ಕೆಲಸ ಇಲ್ಲ...!
ನಿಮಗೂ ಇಲ್ಲವಾ ಮಂಜಣ್ಣಾ..?
ಇವರು ಹೇಳ್ತಿರೋದು ಸತ್ಯ... !
ಇವರು ಆ ಕಹಿ ಮಾವಿನ ಕಾಯಿನೇ.... ದಿನಾ ತಿಂತಾರ್ರೆ..!"
ಯಂಕಟು ನಮ್ಮ ಪಾಲಿನ ದೇವರ ಹಾಗೆ ಕಾಣಿಸಿದ..
" ಆ ಕಹಿ.. ಒಗರಿನ ಮಾವಿನ ಕಾಯಿಯಲ್ಲಿ ಏನು ರುಚಿನೋ..?
ರಾಮ ರಾಮಾ.. ಏನು ಹುಡುಗ್ರೋ...!
ಯಂಕಟು...
ನೀನು ಬರದೇ ಇದ್ರೆ ಇವರಿಗೆ ಚೆನ್ನಾಗಿ ಪೆಟ್ಟು ಬೀಳ್ತಿತ್ತು ನೋಡು.."
ಮಂಜಣ್ಣನ ಮಾತು ಮುಗಿತಾ ಇದ್ದ ಹಾಗೆ..
ಮಾಸ್ತರು ಬಂದರು...!
" ಈ ಹುಡುಗರ ಉಪಟಳ ನನಗಂತೂ ಸಾಕಾಗಿ ಹೋಗಿದೆ..
ಮಾರಾಯ್ರೆ..
ಇವತ್ತು ನೀವೆಲ್ಲ ಸೇರಿದ್ದೀರಿ..
ನೀವೇ ಹೇಳಿ ಇವರಿಗೆಲ್ಲ ಏನು ಮಾಡ್ಬೇಕು ?"
"ಇವರು.. ಏನು ಮಾಡಿದ್ದಾರೆ..?"
"ಅದೊಂದು ದೊಡ್ಡ ಕಥೆ...
ಈ ಕುಷ್ಟ.. ಈ ನಾಗು.. ಸಂಗಡ ಪ್ರಕಾಶು..!
ನಾನು ಯಾಕಾದ್ರೂ...
ಮಾಸ್ತರ್ ಆದೆ ಅನ್ನಿಸಿ ಬಿಟ್ಟಿದೆ...!
ಇವತ್ತು ಇಸ್ಪೀಟು ಆಡುವಾಗ ಹೇಳ್ತೀನಿ.."
ಮಾಸ್ತರು ನಮ್ಮ ಕಡೆಗೆ ನೋಡಿ..
"ಇಲ್ಲೇನು ಹಲ್ಕಿಸಿತಾ ಇದ್ದೀರಿ.. ?
ಹೋಗಿ..... ಓದ್ಕೊಳ್ಳಿ...!"
"ಮಂಜಣ್ಣನವರೆ.. ಕಂಬಳಿ ಹಾಕಿ...
ಇವತ್ತು ಇಸ್ಪೀಟು ಆಡುವಾ..."
ಅನ್ನುತ್ತ ನಮ್ಮನ್ನೆಲ್ಲ ಹೊರಗೆ ಕಳಿಸಿದರು...
ನಾವು ಅಲ್ಲಿಂದ ಓಟ ಕಿತ್ತೇವು...
ಮರುದಿನ ಶಾಲೆ( ಸ್ಕೂಲ್) ಬಿಟ್ಟು ಬರುವಾಗ...
ಪದ್ದಕ್ಕ ಒಬ್ಬಳೇ ಬರ್ತಿದ್ದಳು..!
ನನಗೆ ಮಾತನಾಡಲು ಧೈರ್ಯ ಸಾಲಲಿಲ್ಲ..
ಅನಾಯಾಸವಾಗಿ ಸಿಗುತ್ತಿದ್ದ "ನಿಂಬೆ ಪೆಪ್ಪರ ಮೆಂಟು" ತಪ್ಪಿ ಹೋಯಿತಲ್ಲಾ.. !
"ಪ್ರಕಾಶು ಇಲ್ಲಿ ಬಾರೋ.."
ನಾನು ಹೆದರುತ್ತ ಬಂದೆ..
"ನೀನು ಒಳ್ಳೆಯ ಹುಡುಗ ಅಂದ್ಕೊಂಡು ಬಿಟ್ಟಿದ್ದೆ...
ಆ ನಾಗು ಜೊತೆ ಸೇರಿ..
ಕೆಟ್ಟು.. ಹಾಳಾಗಿ ಹೋಗ್ತೀಯಾ..
ನಿಜ ಹೇಳು ಪ್ರಕಾಶು..
ಯಾಕೆ ಹೀಗೆ ಮಾಡಿದ್ದು ??"
ನಾನು ಸುಮ್ಮನಿದ್ದೆ....
ಏನು ಅಂತ ಹೇಳಲಿ..?
"ನೋಡು.. .. ಪುಟ್ಟಾ...
ನಂಗೆ ಗೊತ್ತು ನೀನು ಜಾಣ..
ಯಾಕೆ ಹೀಗೆ ಮಾಡಿದ್ದು..?"
"ಪದ್ದಿ... ನೀನು... ಬಯ್ಯ ಬಾರದು..!"
"ಓಕೆ.. ನಾನು ಬಯ್ಯುವದಿಲ್ಲ.. ಹೇಳು.."
"ಪದ್ದಿ...
..ಪದ್ದಿ.. ಅದು...
ಅದೂ..
ನೀನೂ.. ಮತ್ತು ಯಂಕಟು....
ಪ್ರೀತಿ ಮಾಡುವಾಗ ಹೇಗೆ ಹಾಡು ಹೇಳ್ತೀರಿ.. ? !!
ಅಂತ ನೋಡೋಕೆ ಹೀಗೆ ಮಾಡಿದ್ದು..
ನೀವು ಸಿನೇಮಾ ಹಾಗೆ ಹಾಡು ಹೇಳ್ತೀರಾ ??"
ಪದ್ದಿಗೆ ಎಲ್ಲಿಲ್ಲದ ಕೋಪ ಬಂತು...!
ಪಕ್ಕದಲ್ಲಿದ್ದ ಕೋಲು ತೆಗೆದು ಕೊಂಡು ನನ್ನನ್ನು ಅಟ್ಟಿಸಿಕೊಂಡು ಬಂದಳು...!
"ಹಾಕ್ತೀನಿ ನೋಡು..!
ಹಾಡು ಕೇಳ್ಳಿಕ್ಕೆ ಬಂದಿದ್ನಂತೆ...!
ಹಲ್ಕಟ್ಟು.... ! "
ನಾನು ಅಲ್ಲಿಂದ ಹಿಂದೆ ಮುಂದೆ ನೋಡದೆ ಓಡಿದೆ...
ಓಡಿದೆ...
ಮನೆಯ ಹತ್ತಿರ ನಾಗು ಸಿಕ್ಕಿದ..
"ಪ್ರಕಾಶೂ....
ತಗೋಳ್ಳೋ.. ಪೆಪ್ಪರ ಮೆಂಟು..!!"
"ಹಾಂ.. !
ಎಲ್ಲಿ ಸಿಕ್ಕಿತೋ.. ಇದು ?? !!"
"ಪ್ರಕಾಶು...
ಯಂಕಟು ಕೊಟ್ಟಿದ್ದಾನೆ....!
ನಾವು ಮರ ಹತ್ತಿ...
ನೋಡಿದ ಈ ಕಥೆಯನ್ನು ಯಾರಿಗೂ ಹೇಳ ಬಾರದಂತೆ.... !
ದಿನಾ ಕೊಡ್ತಾನಂತೆ...!
ನೀನು ಏನೇ.. ಹೇಳು ಯಂಕಟು ಒಳ್ಳೆಯವನು ಕಣೋ...
ನಿನ್ನೆ ಮಂಜಣ್ಣ ಹತ್ತಿರ ಅವ ಸುಳ್ಳು ಹೇಳ್ದೆ ಇದ್ರೆ...
ನೀನು ಮತ್ತೊಮ್ಮೆ ತೊಟ್ಟಿಲು ಕಟ್ಟ ಬೇಕಾಗಿತ್ತು ನೋಡು......!!..
ತಗೋ ಪೆಪ್ಪರಮೆಂಟು..!"
ನಾನು ಪೆಪ್ಪರ ಮೆಂಟು ಬಾಯಲ್ಲಿ ಹಾಕಿ ಕೊಂಡೆ..
ನಿಂಬೆ ಹಣ್ಣಿನ ಸುವಾಸನೆ ಸಂಗಡ....
ಹುಳಿ ಹುಳಿಯಾಗಿ...
ಸಿಹಿ.. ಸಿಹಿಯಾಗಿತ್ತು... !
ಬಾಯಿ ಚಪ್ಪರಿದೆ.. !!
ಆಹಾ...!

Thursday, April 22, 2010
ತೊಟ್ಟಿಲು ಕಟ್ಟಿ.. ತೂಗಿದ..ಹಾಗೆ..... !!
part... 2
ನಿಂಬೆ ಹುಳಿ ಪೆಪ್ಪರ ಮೆಂಟಿನ ಆಸೆಗಾಗಿ ಚೀಟಿ ವ್ಯವಹಾರಕ್ಕೆ ಒಪ್ಪಿಕೊಂಡಿದ್ದೆ..
ಈಗ ನಾವೇ ಬರೆದ ಚೀಟಿಯನ್ನು ಹೇಗೆ ಮುಟ್ಟಿಸುವದು..?
ಅವರಿಬ್ಬರ ಅಕ್ಷರವನ್ನು ಬಹಳ ಅಭ್ಯಾಸ ಮಾಡಿ..
ನಾಗು ಬರೆದಿದ್ದ..
ಕುಷ್ಟನ ಬಳಿ ಬರೆಯಲು ಆಗಲಿಲ್ಲ..
ಚೀಟಿ ನೋಡಿದ ಕೂಡಲೇ.. ಅವರಿಬ್ಬರಿಗೂ ಗೊತ್ತಾಗಿ ಬಿಡುತ್ತದಲ್ಲವೆ..?
" ಗೊತ್ತಾಗುವ ಛಾನ್ಸೇ...ಇಲ್ವೋ...!
ಅವರಿಬ್ಬರೂ ಲವ್ವಲ್ಲಿ ಮುಳುಗಿ ಹೋಗಿದ್ದಾರೆ..
ಚೀಟಿಯಲ್ಲಿ ಇರೋ ವಿಷಯ ಅವರಿಗೆ ಮುಖ್ಯ..
ಅಕ್ಷರದ ಕಡೆಗೆ ಗಮನ ಇರುವದಿಲ್ಲ..
ನೀನು ಸುಮ್ಮನೆ ಕೊಟ್ಟು ಬಾ..."
ಪದ್ದಿ ಒಬ್ಬಳೇ ಇರುವ ಸಮಯ ನೋಡಿ ಅವಳಿಗೆ ಚೀಟಿ ಕೊಟ್ಟೆ..
" ಈ ಹೊತ್ತು.. ... ಚೀಟಿನಾ..?? !! "
ಬಹಳ ಆಸಕ್ತಿಯಿಂದ ತಗೊಂಡು ಓದಿದಳು..
ಅವಳಿಗೆ ಆಶ್ಚರ್ಯ ಆಗಿರಬೇಕು..
"ತಗೊ .. ಪ್ರಕಾಶು..
ಇವತ್ತು ಪೆಪ್ಪರ್ ಮೆಂಟು ಇಲ್ಲ..
ಉಪ್ಪು ಹಾಕಿದ ಜೀರಿಗೆ ಅಪ್ಪೆ ಮಾವಿನ ಮಿಡಿ ಇದೆ..
ಇದನ್ನೇ... ತಗೋ.."
ನನಗೆ ಮತ್ತೆ ಬಾಯಲ್ಲಿ...
ಅಪ್ಪೆ ಮಿಡಿ ಹುಳಿಯ ನೀರು ಬಂದಂತಾಯಿತು...
"ಈ ಪದ್ದಕ್ಕ ಎಷ್ಟು ಒಳ್ಳೆಯವಳು..!
ಹೀಗೆಲ್ಲ ಮಾಡ ಬಾರದಿತ್ತು.."
ಅನಿಸಿತು...
ಅವಳು ಕೊಟ್ಟ ಅಪ್ಪೆ ಮಿಡಿ ತೆಗೆದು ಕೊಂಡು ಅಲ್ಲಿಂದ ಓಡಿದೆ...ಹಾಗೆ ಯಂಕಟಣ್ಣನಿಗೂ ಕೊಟ್ಟು ಬಂದೆ...
ನಾವು ಬರೆದಂತೆ ..
ಭಾನುವಾರ ಮೂರುಗಂಟೆಗೆ ಅಶ್ವತ್ಥ ಮರದ ಕೆಳಗೆ ಬರಲು ಹೇಳಿದ್ದೆವು..
ನಾವು ಎರಡುವರೆಗೆ ಅಲ್ಲಿ ಈಶಾಡಿ ಮರದ ರೆಂಭೆ ಹತ್ತಿ ಕುಳಿತ್ತಿದ್ದೆವು..
ಮೂರುಗಂಟೆಯ ಸುಮಾರಿಗೆ ಪದ್ದಿ ಬಂದಳು...!
ಸ್ವಲ್ಪ ದೂರದಲ್ಲಿ.. ಯಂಕಟೂನೂ ಬರುತ್ತಿದ್ದ......!!
"ಏಯ್.. ಪ್ರಕಾಶು ....!!
ಅಲ್ಲಿ ಈಶಾಡಿ ಮಾವಿನ ಮರದ ಮೇಲೆ ಏನು ಮಾಡ್ತೀರೋ..?"
ಕೆಳಗೆ ನೋಡಿದೆ...
ಟಮ್ಮಟಿ... ಬಂದಿದ್ದ...!
ಅಯ್ಯೋ... ರಾಮಾ... !!
ಟಮ್ಮಟಿ ಅಂದ್ರೆ ಯಂಕಟಿ ತಮ್ಮ...!!
"ಏನೂ ಇಲ್ವೊ..!.
ತಿನ್ನಲಿಕ್ಕೆ ಮಾವಿನ ಕಾಯಿ ಕೊಯ್ತಾ ಇದ್ದೇವೆ...
ನೀನು ಹೋಗು.. ನಾವು ಬರ್ತೇವೆ..."
ನಾಗು ಬಹಳ ಸಮಯ ಪ್ರಜ್ಞೆಯಿಂದ ಹೇಳಿದ...
"ಹೋಗ್ರೋ..
ಇಲ್ಲಿ ಪಕ್ಕದಲ್ಲಿ ತೋತಾಪುರಿ ಮಾವಿನ ಗಿಡ ಇದೆ..
ಇದನ್ನು ಬಿಟ್ಟು ಅಲ್ಲಿ ಒಗರು ಮಾವಿನ ಕಾಯಿ ಕೊಯ್ತೀರಾ ?
ನೀವೂ..... ಏನೋ .. ನೋಡ್ತಾ ಇದ್ದೀರಿ..?
ಏನದು ?"
"ಏನೂ ಇಲ್ವೊ... ನೀನು ಹೋಗು ..
ನಾವು ಬಂದು ಬಿಡ್ತೇವೆ..."
ಇತ್ತ...
ಯಂಕಟಿ... ಪದ್ದಿಯ ಹತ್ತಿರ.. ಹತ್ತಿರ ಬರುತ್ತಿದ್ದ...!!
"ಇಲ್ಲಾ.. ನಾನು ಹೋಗೋದಿಲ್ಲ..
ನೀವೇನೋ.. ನೋಡ್ತಾ ಇದ್ದೀರಿ..
ನಾನೂ ನೋಡ್ಬೇಕು....!!..."
"ಏನೂ ಇಲ್ವೊ.. ನೀನು ಹೋಗು.. !!.."
ಇತ್ತ...
ಯಂಕಟಿ ... ಇನ್ನೂ ಹತ್ತಿರ ಬಂದ...!!
"ನೀವು ಸುಳ್ಳು ಹೇಳ್ತಾ ಇದ್ದೀರಿ..!!
ಇರಿ ..... ನಾನೂ ನೋಡಿಯೇ... ಬಿಡ್ತೇನೆ.."
ಎನ್ನುತ್ತ... ಮರದ ರೆಂಭೆಗೆ ಜೋತು ಬಿದ್ದ..!
ಇಲ್ಲಿ ...
"ಯಂಕಟು ಮತ್ತೆ ಪದ್ದಿ " ಮುಖ .. ಮುಖ..
ನೋಡಿ ಮುಗುಳು ನಗೆ ಸೂಸಿದರು..!!.
ಏನೋ ಮಾತಾಡುತ್ತಿದ್ದ ಹಾಗೆ... ಅನಿಸಿತು...
ಟಮ್ಮಟಿ ಮರದ ರೆಂಭೆ ಹಿಡಿದು ಹತ್ತುತ್ತಿದ್ದ...!
ಛೇ... ಇವನೊಬ್ಬ ತಲೆ ಹರಟೆ...
"ಜಟ್.. ಪಟ.. ಪಟ್... ರ್...!!!
ನಾವು ನಿಂತಿದ್ದ ಹೆಣೆ ಮುರಿಯುತ್ತಿತ್ತು...!
"ಇಳಿಯೋ.. ! ಇಳಿಯೋ.!. ಟಮ್ಮಟಿ ..!!...
ಎಲ್ಲರೂ ಬಿದ್ದು ಹೋಗ್ತೀವೋ..!!."
ನಾವು ಹೇಳಿದ್ದನ್ನು ಲೆಕ್ಕಿಸದೇ ಮೇಲೆ ಹತ್ತಲು ಕಸರತ್ತು ಮಾಡುತ್ತಿದ್ದ...!
ಇಲ್ಲಿ ...
ಪದ್ದಿ ..ಯಂಕಟು.. ಅತ್ತಿತ್ತ ..
ಸುತ್ತಲೂ ನೋಡಿದರು.. ಅವರಿಗೆ ಅನುಮಾನ ಬಂದಿರ ಬೇಕು...!!
ನಾವು ನಿಂತಲ್ಲೇ ಕುಳಿತು ಕೊಂಡೆವು...
ಅಷ್ಟರಲ್ಲಿ ಮಾವಿನ ಮರದ ರೆಂಭೆ ಮುರಿದೇ.. ಹೋಯಿತು....!!
ಎಲ್ಲರೂ ನೆಲಕ್ಕೆ ಮುಳ್ಳಿನ ಪೊದೆಯ ಮೇಲೆ ಬಿದ್ದೇವು....!!
ಮೈಯೆಲ್ಲ ತರಚಿ.... ಪರಚಿ ಗಾಯವಾಯಿತು...
ಅಲ್ಲಲ್ಲಿ ರಕ್ತವೂ ಬಂದು ನೋವಾಗತೊಡಗಿತು...!
"ಯಾಕೆ .. ಇಲ್ಲಿ ಮಾವಿನ ಮರ ಹತ್ತಿದ್ದು ?.. ??.."
ದರ್ಪದ ಧ್ವನಿ ಕೇಳಿಸಿತು...
ತಲೆಯೆತ್ತಿ ನೋಡಿದರೆ... ಮಂಜಣ್ಣ.. !!
ಅಯ್ಯೋ.... !!
ಮೀಸೆ ಮಂಜಣ್ಣ ಪದ್ದಿಯ ಅಪ್ಪ... !!
"ಮಂಜಣ್ಣ...
ಮಾವಿನ ಕಾಯಿ ಕೊಯ್ಲಿಕ್ಕೆ.. ಉಪ್ಪು ಹಚ್ಚಿ ತಿನ್ನಲಿಕ್ಕೆ... !!."
"ಪಕ್ಕದಲ್ಲಿದ್ದ..
ತೋತಾ ಪುರಿ ಬಿಟ್ಟು..
ಕಹಿ ಮಾವಿನ ಕಾಯಿ ತಿಂತೀರಾ..?
ಸುಳ್ಳು ಹೇಳ್ತಿದ್ದೀರಿ..!..
ಖರೆ... ಹೇಳಿ...? ಏನು ಮಾಡ್ತಾ ಇದ್ದಿದ್ರಿ ?"
ಅವನ ಮೀಸೆ...!
ದರ್ಪದ ಕಂಠ ...!
ಸ್ವಲ್ಪ ಹೆದರಿಕೆ ಆಗತೊಡಗಿತು...
"ಏ..ಯ್.. ಪ್ರಕಾಶು... !
ಇತ್ತೀಚೆಗೆ ನಿನ್ನ ತುಂಟತನ ಜಾಸ್ತಿ ಆಗಿದೆ...
ಮೊನ್ನೆ..
ನಾನು ಕುಡಿಯೋ...ಬೀಡಿಯಲ್ಲಿ ಕೇಪು (ಸಣ್ಣ ಪಟಾಕಿ) ಇಟ್ಟಿದಿದ್ದೆ..
ಇವತ್ತು ಇಲ್ಲಿ ಸುಳ್ಳು ಹೇಳ್ತ್ತಿದ್ದೀಯಾ..
ಎಲ್ಲರೂ ನಡಿ..ರಿ...!
ನಿನ್ನ ಚಿಕ್ಕಪ್ಪ ಬಳಿ...
ಒಮ್ಮೆ ಅವನ ಬಳಿ ಪೆಟ್ಟು ಕೊಡಿಸಿದರೆ ಸರಿ ಆಗ್ತೀಯಾ..."
"ಬೇಡ ಮಂಜಣ್ಣ... ನಿನ್ನ ದಮ್ಮಯ್ಯ...
ಚಿಕ್ಕಪ್ಪ.. ಬಳಿ ಬೇಡ..
ನಿನ್ನ ಬೀಡಿಯಲ್ಲಿ ಇನ್ನು ಏನೂ ಮಾಡುವದಿಲ್ಲ.."
"ಸಾಧ್ಯವೇ.. ಇಲ್ಲ...
ಅಪ್ಪ ಇಲ್ದಿರೋ ಹುಡುಗ...
ಈ ನಾಗೂ ಜೊತೆ ಸೇರಿ...
ನೀನು ಕೆಟ್ಟು ಹಾಳಾಗುವದನ್ನು ನನ್ನಿಂದ ನೋಡಲು ಆಗುವದೇ ಇಲ್ಲ..!...
ಎಲ್ಲರೂ ನಡೆಯಿರಿ.."
ಟಮ್ಮಟಿಗೆ ನಮಗಿಂತ ಹೆಚ್ಚಿಗೆ ಪೆಟ್ಟಾಗಿತ್ತು...
ಮಂಜಣ್ಣನ ಬಳಿ ಟಮ್ಮಟಿ ಗೋಗರೆದ...
" ಮಂಜಣ್ಣ..
ನನ್ನನ್ನು ಬಿಟ್ಟು ಬಿಡು...
ಇವರು ಮರ ಹತ್ತಿ ಕಿತಾಪತಿ ಮಾಡ್ತಾ ಇದ್ದವರು...
ನಾನು ಏನೂ ಮಾಡ್ಲಿಲ್ಲ...!
ಇವರು...
ಮರ ಹತ್ತಿ ಏನನ್ನೋ ನೋಡ್ತಾ ಇದ್ದರು..!
ಏನೂ ಅಂತ ನನಗೂ ಹೇಳ್ಳಿಲ್ಲ..!.."
"ಇವರು ಮರ ಹತ್ತಿ ನೋಡ್ತಾ ಇದ್ರಾ..?.. !!
ಏನು ನೋಡ್ತಾ ಇದ್ರೊ...?.."
"ಏನೂ ಇಲ್ಲ ಮಂಜಣ್ಣ...!.."
"ಇವರು ಹೀಗೆಲ್ಲ ಸುಮ್ಮನೆ ಬಾಯಿ ಬಿಡೋದಿಲ್ಲ...
ಎಲ್ರೂ ನಡೆಯಿರಿ... ನಮ್ಮನೆಗೆ..
ನಾಗು ..ಮತ್ತು ಟಮ್ಮಟಿ..ಇಬ್ಬರ ಅಪ್ಪಂದಿರನ್ನೂ ಕರೆಸುತ್ತೇನೆ...
ನಿನ್ನ ಚಿಕ್ಕಪ್ಪನಿಗೂ ಬರಲಿಕ್ಕೆ ಹೇಳ್ತೇನೆ..!!...
ಶಾಲೆಯ ಮಾಸ್ತರರಿಗೂ... ಹೇಳ್ತೇನೆ...!!..
ಹೀಗೆ ಬಿಟ್ರೆ ನೀವೆಲ್ಲ ಹಾಳಾಗಿ ಹೋಗ್ತಿರಿ..."
ಅಯ್ಯೋ...!
ಇದೇನು ಆಗ್ತಾ ಇದೆ..?? !!
ಟಮ್ಮಟಿ ಯಂಕಟುನ ತಮ್ಮ...!
ಮಂಜಣ್ಣ ಪದ್ದಿಯ ಅಪ್ಪ...!
ಮಾಸ್ತರ್ರು...!ಚಿಕ್ಕಪ್ಪ...!
ಎಲ್ಲರೂ ಒಟ್ಟಿಗೆ ಸೇರಿದರೆ...?? !!
ಏನು ಅಂತ ಹೇಳುವದು ????
ಚಿಕ್ಕಪ್ಪ...!
ಮಂಜಣ್ಣನ ಮೀಸೆ...!
ದರ್ಪದ ಮಾತುಗಳು...!
ಬಯ್ಗಳು..!
ಮಾಸ್ತರ್ರು...!
ಹೊಡೆತ...! ಪೆಟ್ಟು...!!
ಚಡ್ಡಿ...
ಒದ್ದೆಯಾದ ಅನುಭವ ಆಗತೊಡಗಿತು......
ಕೆಳಗಡೆ...
ಯಾಕೋ....
ತೊಟ್ಟಿಲು ಕಟ್ಟಿ.. ತೂಗಿದ..ಹಾಗೆ...... ಭಾಸವಾಗತೊಡಗಿತು.........!!
( ತೊಟ್ಟಿಲು ಕಟ್ಟುವದು... ?? !!
ಗೊತ್ತಾಗದಿದ್ದಲ್ಲಿ... ಇಲ್ಲಿ ನೋಡಿ...
post_23.htmlhttp://ittigecement.blogspot.com/2009/05/blog-post_23.html
(ನಾನು .. ಶಾರಿಯ ಗಂಡ " ಗಣಪ್ತಿ.." ಅಂತ.. )
ಪ್ರೀತಿಯ ಓದುಗರೇ...
ನನ್ನ ಬ್ಲಾಗ್ ಅನುಸರಿಸಿ...
ಪ್ರೋತ್ಸಾಹಿಸುವವರ ಸಂಖ್ಯೆ... ಎರಡು ನೂರು ದಾಟಿದೆ...
It is 200+ now !!!!
ತುಂಬಾ ಖುಷಿಯಾಗುತ್ತಿದೆ...
ನಿಮ್ಮ ಒಂದೊಂದು ಪ್ರೋತ್ಸಾಹದ ನುಡಿ..
ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...
ಓದುವ ಎಲ್ಲ ಆತ್ಮೀಯರಿಗೆ ನನ್ನ ಹೃದಯ ಪೂರ್ವಕ ವಂದನೆಗಳು...

Subscribe to:
Posts (Atom)