Tuesday, June 1, 2010

ಪ್ರೇಮ.. ಆಕರ್ಷಣೆ.. ಅಗತ್ಯ.....

ನಾನು ಸ್ವಲ್ಪ ತುಂಟಿ...

ಗೆಳತಿಯರೊಡನೆ ಹರಟೆ.... ಮಾತುಕಥೆ..
ನಗು ..,
ಹಾಸ್ಯ ಇವೆಲ್ಲ ನನ್ನ ಅಗತ್ಯ....


ನನ್ನ ಆಸೆ..ನನ್ನ ಇಷ್ಟ..
ಮತ್ತು ನನ್ನ ಬದುಕು... ಇವೆಲ್ಲಕ್ಕೂ ಸಂಬಂಧವೇ.. ಇಲ್ಲ..


ಏನಾಯ್ತು ಗೊತ್ತಾ ?


ಅಪ್ಪ, ಅಮ್ಮ ತೋರಿಸಿದ ಹುಡುಗ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ..


ಅವನ ಹಣೆಯ ಮೇಲೆ ಕೂದಲೇ.. ಇಲ್ಲ..!
ಬಾಂಡ್ಲಿ..!
ಬಣ್ಣವೂ ಸ್ವಲ್ಪ ಕಪ್ಪು..
ಮುಖದಲ್ಲಿ ಗೆಲುವೇ.. ಇಲ್ಲ..
ನಗದೇ ವರ್ಷಗಳೇ ಆಯಿತೇನೋ ಎನ್ನುವಂಥಹ ಮುಖ...


ಇಂಥಹವನೊಡನೆ ಹೇಗೆ ಜೀವನ ಪೂರ್ತಿ ಇರುವದು ?

ಅಮ್ಮ ನನಗೆ ತಿಳುವಳಿಕೆ ಹೇಳುವ ಪ್ರಯತ್ನ ಮಾಡಿದರು..


"ನೋಡು.... ಪುಟ್ಟಿ..
 ನೀನಗೆ ವಾಸ್ತವದ ಅರಿವು ಇಲ್ಲ..
ಚಂದದ ನಗುವಿನ ಬದುಕಿಗೆ ಅಂದ ಬೇಕಿಲ್ಲ ಮಗಳೆ...
ಅದು ನಿನ್ನ ವಯಸ್ಸಿನ, ಹರೆಯದ ತಪ್ಪು.. ಚಂದ ಬಯಸುತ್ತದೆ..
ಆದರೆ..
ದಾಂಪತ್ಯದಲ್ಲಿ  ನೀನು ಸ್ವಭಾವದೊಡನೆ ಬದುಕ ಬೇಕಾಗುತ್ತದೆ...
ಅಲ್ಲಿ  ಚಂದದ ಅಗತ್ಯ  ಬಲು ಕಡಿಮೆ...
ಹುಡುಗ.... ತುಂಬಾ ಒಳ್ಳೆಯವ..
ಒಳ್ಳೆಯ ಸಂಪಾದನೆ ಇದೆ..
ಸುಸಂಕೃತ ಮನೆತನ..
ಹುಡುಗನಿಗೆ ಯಾವುದೇ.. ಚಟ ಇಲ್ಲ..
ಕಟ್ಟು ಮಸ್ತಾಗಿ...ಆರೋಗ್ಯವಾಗಿದ್ದಾನೆ..
ಬದುಕಲಿಕ್ಕೆ ಇನ್ನೇನು ಬೇಕು ?"


"ಅಮ್ಮಾ.. ..
ಈ ಮುಖ ನೋಡಿದರೆ ಪ್ರೀತಿಸ ಬೇಕು ಅಂತಾನೇ ಅನ್ನಿಸುವದಿಲ್ಲ..
ಸ್ವಲ್ಪವಾದರೂ ಚಂದ ಬೇಡವೇ..?
ಕಣ್ಣಲ್ಲೋ.. ಮಾತಲ್ಲೋ ಏನಾದರೂ ಆಕರ್ಷಣೆ ಬೇಡವೆ..?
ಇವನಿಗೆ ಯಾವುದೇ ಹವ್ಯಾಸಗಳೂ ಇಲ್ಲವಂತೆ....
ಸಿನೇಮಾ..ಹಾಡು.. ಸಾಹಿತ್ಯ ಯಾವುದೂ ಗೊತ್ತಿಲ್ಲವಂತೆ.. !
ತಾನಾಯಿತು.. ತನ್ನ ಕೆಲಸವಾಯಿತು...
ಅವನಿಗೆ ಒಂದು ಸಂಬಳವಿಲ್ಲದ ಕೆಲಸದವಳಾಗಿ ಇರಬೇಕಷ್ಟೆ..
ಈ ಮದುವೆ ನನಗೆ ಬೇಕಿಲ್ಲವಮ್ಮ.."


" ಪುಟ್ಟಿ...
ನೀನು ಯಾರನ್ನಾದರೂ ಇಷ್ಟಪಟ್ಟಿದ್ದೀಯೇನೆ..?"


"ಛೇ.. ಇಲ್ಲಮ್ಮ..
ನನಗೆ ನನ್ನ ಮದುವೆಯ ಬಗೆಗೆ..
ಬದುಕಿನ ಬಗೆಗೆ ಒಂದು ಕನಸಿದೆ..
ನನಗೆ ನಾನು ಬಯಸಿದಂಥಹ ಗಂಡು ಬೇಕಮ್ಮ..
ಮದುವೆಯಾಗುವ ಗಂಡನ್ನು ನೋಡಿದರೆ...
 ಪ್ರೀತಿ ಹುಟ್ಟುವಂತಿರ ಬೇಕು..
ಹೃದಯದಲ್ಲಿ ಭಾವನೆಗಳನ್ನು  ಹುಟ್ಟಿಸುವನಂತಾಗಿರ ಬೇಕು..
ನನ್ನ...
ಅವನ  ಬೇಕು ಬೇಡಗಳು  ಹೊಂದಿಕೆಯಾಗಿರಬೇಕು.. .."

"ನೋಡು..
ನಿನ್ನ ಪ್ರೀತಿ.. ಪ್ರೇಮ ಎಲ್ಲ ಹೃದಯದಲ್ಲಿ ಅಲ್ಲ...
ಅವಶ್ಯಕತೆ.. ಅವಲಂಬನೆ...
ಮತ್ತು ತಲೆಯಲ್ಲಿ ಹುಟ್ಟುತ್ತವೆ...
ಹೃದಯದಲ್ಲಿ ಪ್ರೇಮ ಹುಟ್ಟುತ್ತದೆ ಅನ್ನುವದು ಶುದ್ಧ ಸುಳ್ಳು..
ಸ್ವಲ್ಪ ದಿನ ಕತ್ತೆಯೊಡನೆ ಇದ್ದರೂ ಕುರುಡು ಪ್ರೀತಿ ಹುಟ್ಟುತ್ತದೆ..
ಮಗಳೆ...
ಈ ಹುಡುಗ ನಿನಗೆ ತಕ್ಕ ಜೋಡಿ.."


"ಅದು ಹೇಗೆ ಸಾಧ್ಯ ಅಮ್ಮಾ ?
ಇವನನ್ನು ...
ಯಾವ ದೃಷ್ಟಿಯಲ್ಲಿ...ಹೇಗೆ ಪ್ರೀತಿ ಮಾಡಲಿ ?"


"ನೋಡೂ ಪುಟ್ಟಿ...
ನಿನ್ನ ಅಪ್ಪನನ್ನು ನೋಡಿದ್ದೀಯಾ ?
ಇಡೀ ದಿನ ಗುಟ್ಕಾ ಜಗಿದು...
ಕಪ್ಪಾಗಿರುವ ಹಲ್ಲಿನೊಡನೆ ನಾನು ಮುವತ್ತು ವರ್ಷ ಸಂಸಾರ ಮಾಡಿಲ್ಲವೆ..?
ಅಂದ ಚಂದದೊಡನೆ ಬದುಕು ಇರುವದಿಲ್ಲವಮ್ಮ...
ಭಾವನೆಗಳನ್ನು ಹಂಚಿಕೊಂಡು..
ತ್ಯಾಗ ಹೊಂದಾಣಿಕೆಯಲ್ಲಿ ಬದುಕು ಇದೆಯಮ್ಮ...
ನೀನು ಇವನನ್ನೇ ಮದುವೆಯಾಗು...
ಈತ ಒಳ್ಳೆಯ .. ಚಟ ಇಲ್ಲದ ಹುಡುಗ..."


ನನ್ನ ಅಭಿಪ್ರಾಯಗಳಿಗೆ..
ಮಾತುಗಳಿಲ್ಲವಾಯಿತು..
ಶಬ್ಧಗಳಿಲ್ಲವಾಯಿತು...


ನೋಡು.. ..
ನೋಡುತ್ತಿದ್ದಂತೆ..
ಅಪ್ಪನ ಮಾತಿಗೆ ಎದುರಾಡಲಾಗದೆ ಅದೇ ಹುಡುಗನ ಮಡದಿಯಾದೆ...


ಮನಸ್ಸಿಗೆ ಬೇಕಿರದ ಬದುಕು..
ಬೇಡದ ಗಂಡಿನೊಡನೆ ಬಾಳು.. ಬಹಳ ಕಷ್ಟವಾಯಿತು...


ಯಾವಾಗಲೂ ನಗುನಗುತ್ತ..
ಗಂಡುಬೀರಿಯಂತಿದ್ದ ನನಗೆ.. ಬದುಕು ಹಿಂಸೆಯಾಗತೊಡಗಿತು...

ಈತ ಯಾವಾಗಲೂ ಸುಮ್ಮನೇ.. ಮೌನವಾಗಿ  ಇರುತ್ತಿದ್ದ.....
ಅದು ಸಹಿಸಲು  ಆಸಾಧ್ಯ ಮೌನ....!

ಆ ಮೌನದಷ್ಟು  ದೊಡ್ದಾದಾದ ಶಬ್ದ .., ಗಲಾಟೆ ಇನ್ನೊಂದಿಲ್ಲ..


ನನಗೆ ಮಾತು ಬೇಕು.. ನಗು ಬೇಕು..


ಈತ ಮನೆಗೆ ಬಂದ ಮೇಲೂ ತನ್ನ ಲಾಪ್‍ಟಾಪ್ ತೆಗೆದು ಅದರಲ್ಲಿ ಮುಳುಗಿ ಹೋಗುತ್ತಿದ್ದ...


ಇವನೋ..
ಇವನ ದೈನಂದಿನ ಚಟುವಟಿಕೆಗಳೋ... ನನಗೆ ಹಿಡಿಸದಾಯಿತು...

ನನಗೆ ಬೆಳಿಗ್ಗೆ ಎದ್ದು ಬೆಡ್ ಕಾಫಿ ಕುಡಿದು ಅಭ್ಯಾಸ..


"ಅದು ಆರೋಗ್ಯಕ್ಕೆ ಹಾಳು...
ಮೊದಲು ಬ್ರಷ್ ಮಾಡಿ ಕಾಫಿ ಕುಡಿ.."


ಇವನಿಗೆ ಬೆಳಿಗ್ಗೆ ಅಕ್ಕಿ ದೋಸೆಯೇ ಆಗಬೇಕು...
ನನಗೆ ನೂಡಲ್ಸ್..,
ಪೂರಿ ಚಪಾತಿ ಎಂದರೆ ಇಷ್ಟ..


ಇವೆಲ್ಲ ಆತನಿಗೆ ಸೇರುವದಿಲ್ಲ...


ನನ್ನಾಸೆ.. ಇಷ್ಟಗಳಿಗೂ.. ಅವನ ಅಭಿರುಚಿಗಳಿಗೂ ಬಹಳ ವ್ಯತ್ಯಾಸವಿತ್ತು..
ಇಷ್ಟವಿಲ್ಲದವರೊಡನೆಯ ಬದುಕು ಬಲು ಕಷ್ಟ...


ಬೆಳಗು.. ಸಂಜೆ..
ರಾತ್ರಿಗಳೆಲ್ಲ ನೀರಸವಾಗಿ...
ಯಾಂತ್ರಿಕವಾಗಿ..... ಉರುಳುತ್ತಿತ್ತು...


ನಾವಿದ್ದಿದ್ದು ಮೊದಲ ಅಂತಸ್ಥಿನಲ್ಲಿ...

ಅಂದು ಬೆಳಿಗ್ಗೆ ಯಾವತ್ತಿನಂತೆ ಮೌನವಾಗಿಯೇ ದಿನ ಶುರುವಾಯಿತು..
ಯಾರೋ ಬೆಲ್ ಮಾಡಿದ್ದರು..
ನಾನು ಬಂದು ಬಾಗಿಲು ತೆಗೆದೆ..

ಎತ್ತರದ...
ನಗುಮುಖದ ವ್ಯಕ್ತಿಯೊಬ್ಬ ನಿಂತಿದ್ದ....


"ನಾನು.. ಕೆಳಗಡೆ ಇರ್ತೇನೆ.. ಈ ಮನೆ ಓನರ್..
ಇವತ್ತು ನನ್ನ ಮಡದಿಯ ಸೀಮಂತ..
ಡೆಲಿವರಿ ದಿನ ಹತ್ತಿರ ಬಂದಿವೆ..
ಸಮಯದ ಅಭಾವ.... ಹಾಗಾಗಿ ಇವತ್ತೇ ಇಟ್ಟುಕೊಂಡಿದ್ದೇನೆ..
ಸಾಯಂಕಾಲ ನೀವೆಲ್ಲ ನಮ್ಮನೆಗೆ ಬರಬೇಕು..
ನಮ್ಮ ಮನೆಯಲ್ಲೇ ಊಟ.."


"ಬನ್ನಿ...ಒಳಗೆ.. ಬನ್ನಿ.. "


ನನ್ನ ಗಂಡ ಅವರು ಬಂದೊಡನೆ ಎದ್ದು ನಿಂತ..


"ನೋಡಿ.... ನೀವು ಇವತ್ತು ನಿಮ್ಮ ಕೆಲಸದಿಂದ.. ಸ್ವಲ್ಪ ಬೇಗ ಬನ್ನಿ.."


ನನ್ನ ಗಂಡ ಕಂಡೂ ಕಾಣದ ಮುಗುಳುನಗೆ ನಕ್ಕ..
ಅವರ ನಗುವೇ.. ಹಾಗೆ..


"ಆಯ್ತು ಸರ್.."


ನಾನು ಅವರಿಗೆ ಉಪಚಾರ ಮಾಡಿದೆ..
".. ಕುತ್ಕೊಳ್ಳಿ .. ಕಾಫಿ ಮಾಡ್ತೇನೆ.."


"ಇಲ್ಲಾರಿ ಕಾಫೀ ಕುಡಿದರೆ ...
ನನ್ನ ದೈನಂದಿನ ಸಿಸ್ಟಮ್ ಸರಿ ಇರೋದಿಲ್ಲ..
ಇನ್ನು..ಟೀ..ಈಗ ಕುಡಿದರೆ ರಾತ್ರಿ ನಿದ್ದೆ ಬರೋದಿಲ್ಲ..!
ದಯವಿಟ್ಟು ಏನೂ ಬೇಡ.."


ಅವರ ಮಾತಿನಲ್ಲಿರುವ ಹಾಸ್ಯ ನನಗೆ ಇಷ್ಟವಾಯಿತು...


"ಇರಿ ...
ಬಿಸಿ.. ಬಿಸಿ ಹಾಲು ಹಾರ್ಲಿಕ್ಸ್ ತರ್ತೇನೆ.."


ಆತ ಮಾತನಾಡುವಾಗ ಕಣ್ಣನ್ನೇ... ನೋಡುತ್ತಿದ್ದ..
ಸಣ್ಣ ಮುಗುಳು ನಗು ತುಟಿಯಲ್ಲಿರುತ್ತಿತ್ತು...


"ಅಯ್ಯೋ..
ಹಾರ್ಲಿಕ್ಸು ಹಾಗೆ ಕುಡಿಯೋದಿಲ್ಲಾರಿ...
ಅದನ್ನು ಕುಡಿಯ ಬೇಕಾದರೆ..
ನನಗೆ ಬಾಟಲಿ ಮತ್ತು ನಿಪ್ಪಲ್ಲು ಬೇಕು..
ಹ್ಹ್ಹಾ..ಹ್ಹಾ.. !!
ತಮಾಶೆ ಮಾಡಿದೇರಿ..
ಹಾಲು ನನಗೆ ಇಷ್ಟವಿಲ್ಲ.. ಪ್ಲೀಸ್.. ಏನೂ ಬೇಡ..
ನೀವು ಇವತ್ತು ನಮ್ಮನೆಗೆ ಬನ್ನಿ.."


ನನಗೂ ನಗು ಬಂತು... ನಕ್ಕೆ..
ನಗದೇ.. ಬಹಳದಿಗಳಗಿದ್ದವು ..


"ಆಯ್ತು ಸರ್..
ನಾವು ಇಬ್ಬರೂ ಬರ್ತೇವೆ..."


ಬಂದವ ಕೆಲವೇ ಹೊತ್ತಿನಲ್ಲಿ ನನ್ನನ್ನು ಇಂಪ್ರೆಸ್ ಮಾಡಿಬಿಟ್ಟಿದ್ದ...


ಸಾಯಂಕಾಲ ನಾನು ಚೆನ್ನಾಗಿಯೇ ತಯಾರಾದೆ...


ಕಿವಿಗೆ ದೊಡ್ಡ ರಿಂಗು..
ಕೈ ತುಂಬಾ ಬಳೆ..
ಹಳದಿ ರೇಷ್ಮೇ ಸೀರೆ.. ಚಿಕ್ಕ ತೋಳಿನ ಬ್ಲೌಸ್...


ಕನ್ನಡಿಯಲ್ಲೊಮ್ಮೆ ನನ್ನನ್ನೇ ನೋಡಿಕೊಂಡೆ...


ಒಂದು ರಸಿಕ ಮನಸ್ಸಿನ ಮಡದಿ ನಾನಾಗ ಬೇಕಿತ್ತು...!!


ಮಾಡುವ ವಿಚಾರ ಕೆಟ್ಟದಾಗಿದ್ದರೂ...
ಬೇಡವೆಂದು ಹೇಳಲು ಮನ ಒಪ್ಪುತ್ತಿಲ್ಲ..


ನನ್ನ ಗಂಡ ಆ ದಿನವೂ ತಡವಾಗಿಯೇ ಬಂದ..
ನಾವು ಅವರ ಮನೆಯೊಳಗೆ ಹೋಗುವ ಹೊತ್ತಿನಲ್ಲಿ ಎಲ್ಲ ನೆಂಟರಿಷ್ಟರು ಖಾಲಿಯಾಗಿದ್ದರು..


"ಬನ್ನಿ... ಬನ್ನಿ.. ನಿಮಗೇ...
 ಕಾಯುತ್ತಿದ್ದೆ..."


ಅದೇ ತುಂಟ ಕಣ್ಣಿನಿಂದ ಮೆಚ್ಚುಗೆಯ ನೋಟ... !


ನಾನು ಮುಗುಳು ನಗೆ ನಕ್ಕೆ..


ಅತನ ಮಡದಿಯನ್ನೊಮ್ಮೆ ನೋಡಿದೆ..
ತುಂಬು ಬಸುರಿ..
ಲಕ್ಷಣವಾಗಿದ್ದಳು.. ಮೈತುಂಬ ಬಂಗಾರ...
ಅವಳ ತಾಯಿತನ... ಅವಳಿಗೊಂದು ಕಳೆ ಕೊಟ್ಟಿತ್ತು...
ತುಂಬಾ  ಮುಗ್ಧೆ ಅನಿಸುತ್ತಿತ್ತು....


"ನಮ್ಮನೆಯವರು... ನಿಮ್ಮನ್ನು ತುಂಬಾ ಹೊಗಳಿದ್ದಾರೆ..
ಮನೆಯನ್ನು ತುಂಬಾ ಚೆನ್ನಾಗಿ ಇಟ್ಟು ಕೊಂಡಿದ್ದೀರಂತೆ....
ನಿಮ್ಮ  ಚಂದದಷ್ಟೆ..
ಚಂದ ನಿಮ್ಮ  ಮನೆಯ ಅಲಂಕಾರ...ಎಂದೆಲ್ಲ ಹೊಗಳಿದ್ದಾರೆ..
ಅವರು ಹೇಳಿದ ಹಾಗೆ ನೀವು ಸುಂದರವಾಗಿದ್ದೀರಾ ...!!
ನನಗೆ ನಿಮ್ಮ ಮನೆಯನ್ನೂ ನೋಡ ಬೇಕಲ್ಲ.."


ನನಗೆ ನಾಚಿಕೆಯೂ...
ಸಂತೋಷವೂ ಆಯಿತು..
ಬಹಳ ದಿನಗಳ ನಂತರ ನನ್ನ  ಚಂದವನ್ನು ಒಬ್ಬರು ಗುರುತಿಸಿದ್ದರು..  !


ಆತ ಮತ್ತೆ ಬಂದ...
ಕೈಯಲ್ಲಿ ಸ್ವೀಟು.. ಖಾರ ಹಿಡಿದು...


"ನೋಡಿ...
ಇದನ್ನು.. ಬೇಡವೆನ್ನಬೇಡಿ..
ಮದುವೆಯಾದ ಬ್ರಹ್ಮಚಾರಿಯ ಉಪಚಾರ,..ಇದು..
ಸಂಗಡ ಜ್ಯೂಸ್ ಇದೆ.. ನೀವು ಮಾತನಾಡುತ್ತಾ ಇರಿ.."

ಹೆಂಡತಿಯ ಮುಖನೋಡಿ...
" ಚಿನ್ನಾ....
ನಿನಗೇನು ಕೊಡಲಿ...?"

ನನ್ನ ಗಂಡ ಇಂಥಹ ಭಾಷೆ..
ತಮಾಷೆ... ಒಮ್ಮೆಯಾದರೂ ಮಾಡಬಹುದಾ ?


ಆತ ಹೆಂಡತಿಯ ಬಳಿ ಮಾತನಾಡಿದರೂ...
ಮೆಚ್ಚುಗೆಯ ನೋಟ ನನ್ನಮೇಲಿತ್ತು..!


ತನ್ನ ಅಲಂಕಾರ, ಚಂದದ ಪ್ರಶಂಸೆ ಯಾವ ಹೆಣ್ಣಿಗೆ ತಾನೆ ಇಷ್ಟವಾಗುವದಿಲ್ಲ ?


ನಾನು ಮುಖ ತಿರುಗಿಸಿ ನನ್ನ ಗಂಡನ ಬಳಿ ಬಂದೆ...


ಆತ ಪಾದ ರಸದಂತೆ ಓಡಾಡುತ್ತಿದ್ದ..
ಆಗಾಗ ನಮ್ಮ ಬಳಿ ಬಂದು ಮಾತನಾಡಿಸುತ್ತಿದ್ದ...


ತಾನು ದೂರದಲ್ಲಿದ್ದರೂ ...
ಮೆಚ್ಚುಗೆಯ ನೋಟವನ್ನು ನನ್ನ ಮೇಲೆ ಇಡುತ್ತಿದ್ದ...


ನಾವು ಅಲ್ಲಿ ಊಟವನ್ನೂ ಮುಗಿಸಿ ಹೊರಟೆವು...
ಬೀಳ್ಕೊಡಲು ಬಾಗಿಲವರೆಗೂ ಆತ ಬಂದ...


"ನೀವು ಬಂದಿದ್ದು ಬಹಳ ಖುಷಿಯಾಯಿತು..
ನಮ್ಮನೆಗೆ ಕಳೆ ಬಂದಿತ್ತು..
ನೀವು ಬರುತ್ತಾ ಇರಿ..
ನಮ್ಮನೆಯವರಿಗೂ ಸಮಯ ಕಳೆಯಲು ಅನುಕೂಲವಾಗುತ್ತದೆ.."

ಆತ ನನ್ನ ಬಳಿ  ಮಾತನಾಡಿದ ..
ವಿಷಯವೇ.....ಬೇರೆ...!
ಕಣ್ಣಲ್ಲಿ ಹೇಳಿದ ವಿಷಯವೇ.. ಬೇರೆ....!


ನಾನು ತಲೆಯಾಡಿಸಿದೆ...


ಮನೆಗೆ ಬಂದವಳಿಗೆ ಮನಸೆಲ್ಲ ಕಸಿವಿಸಿ...


ನನ್ನ ವಿಚಾರಗಳು ತಪ್ಪಲ್ಲವೆ...?


ಜಾರುವ ಮನಸ್ಸು..
ಹಿಡಿತವಿಲ್ಲದೆ ...ಹೋಗುವಾಗಲೂ..
ಮಧುರ ಆಸೆಯ..
ಕುತೂಹಲದ....
ರೋಮಾಂಚನದ ಕಾತುರ... !


ನನ್ನ ದಾರಿ... ಜಾರುತ್ತಿದೆಯಾ ??
ನಾನು ಬೀಳುತ್ತಿರುವೆನಾ  ?


ಮಧ್ಯ ರಾತ್ರಿ ಬಾಗಿಲು ತಟ್ಟಿದ ಶಬ್ಧ...!
ನನ್ನವರು ಲಗುಬಗೆಯಿಂದ ಬಾಗಿಲು ತೆಗೆದರು..

ಆತ  ಗಾಭರಿಯಲ್ಲಿದ್ದ..!


"ರೀ.... ನನ್ನಾಕೆಗೆ ಹೆರಿಗೆ ನೋವು ಶುರುವಾಗಿದೆ..
ದಯವಿಟ್ಟು ನೀವೂ ಬನ್ನಿ...
ಅಂಬ್ಯುಲೆನ್ಸ್ ಈಗ ಬಂದು ಬಿಡುತ್ತದೆ.."


ನನ್ನವರು ಅದೇ ಲುಂಗಿಯ ಮೇಲೆ ಶರಟು ಹಾಕಿ ಹೊರಟರು..
ಅವರಿಗೆ  ಸಹಾಯ ಮಾಡುವದೆಂದರೆ..... ಬಹಳ ಇಷ್ಟ......


ಅವರು ಹೋದ ಮೇಲೆ..
ನನಗೆ ಒಬ್ಬಳಿಗೆ ನಿದ್ದೆಯೇ ಬರಲಿಲ್ಲ...
ಆಚೆ ಈಚೆ ಹೊರಳಾಡಿದೆ...


ಆತನ ರಸಿಕ ಮಾತು...
ತುಂಟ ನೋಟ... ಎಲ್ಲವೂ ನೆನಪಾಗುತ್ತಿತ್ತು....

ಅಪ್ಪ.. ಅಮ್ಮ ಕೊಟ್ಟ  ಸಂಸ್ಕಾರಕ್ಕಿಂತ...
ದೈಹಿಕ ಆಕರ್ಷಣೆ ದೊಡ್ಡದೇ...?


ಅಷ್ಟರಲ್ಲಿ ಫೋನ್ ರಿಂಗಾಯಿತು...
ನನ್ನವರು ಫೋನ್ ಮಾಡಿದ್ದರು...


" ನೋಡೇ...
ಡೆಲಿವರಿ ನಾರ್ಮಲ್ ಆಯಿತು.. ಗಂಡು ಮಗು..
ಆದರೆ..."


"ಏನು ಆದರೆ..?"


"ಮತ್ತೇನಿಲ್ಲ..
ಪಾಪುವಿಗೆ ಎರಡು ಕಿವಿಗಳೇ ಇಲ್ಲ..!
ಆದರೆ ಕಿವಿಯಲ್ಲಿ ತೂತು ಇದೆ!
ಕಿವಿ ಕೇಳ ಬಹುದು !!"


ನನಗೆ ಏನು ಹೇಳ ಬೇಕೆಂದೇ ತೋಚಲಿಲ್ಲ...
ಆಶ್ಚರ್ಯವೂ ಆಯಿತು...!
ಬೇಸರವೂ ಆಯಿತು... ಯಾಕೆ ಹೀಗೆ ?


ಅವರು ಆಸ್ಪತ್ರೆಯಿಂದ ಬಂದಾಗ ಬೆಳಗಾಗಿತ್ತು...
ಅವರು ಗಂಭೀರವಾಗಿದ್ದರು...


ಅವರು ಸ್ನಾನ ಮಾಡಿಯಾದ ಮೇಲೆ ನಾಷ್ಟಾ ಇಟ್ಟೆ....


ಅವರು ಇನ್ನೂ ಗಂಭೀರವಾಗಿಯೇ ಇದ್ದರು...
ಮಗು ಹಾಗೆ ಇದ್ದಿದ್ದಕ್ಕೆ ಬೇಸರ ಆಗಿರ ಬಹುದಾ ?
ನನಗೆ ಕುತೂಹಲ ತಡೇಯಲಾಗುತ್ತಿಲ್ಲ..

ಕಿವಿಯಿಲ್ಲದ  ಪಾಪು.....!


ನಾನು ತುಸು ಧೈರ್ಯ ಮಾಡಿದೆ...


" ತಾಯಿ ಮಗು ಆರೋಗ್ಯವಾಗಿದ್ದಾರಾ ?"


"ಹುಂ...
 ಚೆನ್ನಾಗಿದ್ದಾರೆ...
ಇನ್ನೊಂದು ಬೇಸರದ ವಿಷಯವಿದೆ...! "


"ಏನು ?? !!"


"ಪಾಪು ಹೃದಯದಲ್ಲಿ ತೂತು ಇದೆ.. !!
ಹಾರ್ಟಿನಲ್ಲಿ ಹೋಲ್ ಇದೆ.. !!"


" ಅಯ್ಯೋ...!!
ಹೌದಾ ? !!
ಯಾಕೆ ಹೀಗೆ ಇಂಥಹ ಪಾಪು ಹುಟ್ಟುತ್ತವೆ ?"


"ನೋಡು...
 ಇದಕ್ಕೆ.. ಹಲವಾರು ಕಾರಣ ಇದೆಯಂತೆ...
ಅಲ್ಲಿನ  ನರ್ಸ್ ಕೇಳಿದೆ....
ಅವಳು ಹೇಳಿದ ಕಾರಣ ಕೇಳಿ ಬಹಳ ಬೇಸರವಾಯಿತು..."

"ಏನದು  ??"


"ಹೆಂಡತಿ ಬಸುರಿಯಿದ್ದಾಗ..
ಗಂಡ ಬೇರೆ ಹೆಂಗಸರ ಸಹವಾಸ ಮಾಡುತ್ತಿದ್ದರೆ...
ಇನ್ಫೆಕ್ಷನ್  ಆಗಿ..ಹೀಗೆಲ್ಲ ಆಗುತ್ತದಂತೆ.....!
ಅಷ್ಟು ಚಂದದ ಹೆಂಡತಿ...!
ಮೋಸ ಮಾಡುವ ಮನಸ್ಸು  ಹೇಗೆ ಬರುತ್ತದೋ...?
ಏನೋ...
ಛೇ...
ಅವರ ಮೇಲಿನ ಗೌರವ ಹೊರಟು ಹೋಯಿತು ನೋಡು...!!"


ನನಗೆ  ದೊಡ್ಡ  ಷಾಕ್....!


ಗಂಡನ ಮುಖವನೊಮ್ಮೆ ನೋಡಿದೆ...
ಹಣೆಯ ಮೇಲೆ ಕೂದಲು ಇರದಿದ್ದರೂ...
ಒಂದು ಥರಹ ಚಂದವೇ ಕಾಣುತ್ತಿದ್ದ...!


ಬಕ್ಕ ತಲೆಯ ಮೇಲೆ ಕೈಯಾಡಿಸ ಬೇಕು ಎನಿಸಿತು....!


ಅವನನ್ನೊಮ್ಮೆ ...
ಹಿಂದಿನಿಂದ...ತಬ್ಬಿ...
ಹಣೆಯ ಮೇಲೆ ಮುತ್ತಿಡಬೇಕೆಂದೆನಿಸಿತು....!

ಸಂಭಾವಿತ .. ಸಭ್ಯಸ್ಥ ..
ನನ್ನ..
ಗಂಡನನ್ನು ಮುದ್ದಿಸ ಬೇಕೆನಿಸಿತು....!


(ಬಹಳ ..
ಸುಂದರ... ಒಳ್ಳೆಯ.. ಪ್ರತಿಕ್ರಿಯೆಗಳಿವೆ....
ದಯವಿಟ್ಟು ಪ್ರತಿಕ್ರಿಯೆಗಳನ್ನೂ.. ಓದಿ...

ಎಲ್ಲ ಪ್ರತಿಕ್ರಿಯೆಗಳಿಗೂ ಉತ್ತರಿಸುವೆ.. ಸ್ವಲ್ಪ  ಕಾಲಾವಕಾಶ ಕೊಡುವಿರಲ್ಲವೇ?...)


95 comments:

ಓ ಮನಸೇ, ನೀನೇಕೆ ಹೀಗೆ...? said...

ತುಂಬಾ ಚೆಂದದ ನೀತಿಯುಕ್ತ ಕಥೆ ಪ್ರಕಾಶಣ್ಣ.... ಎಲ್ಲಕ್ಕಿಂತ ದೊಡ್ಡದು ಮನುಷ್ಯನ ವ್ಯಕ್ತಿತ್ವ. ಸೌಂದರ್ಯ , ಹಣ ಎಲ್ಲಾ ಇದ್ದು ಒಳ್ಳೆಯ ಗುಣ , ವ್ಯಕ್ತಿತ್ವವೇ ಇರದ ವ್ಯಕ್ತಿಯಾದರೆ ಏನು ಪ್ರಯೋಜನ. ಒಳ್ಳೆಯ ನೀತಿ ಸಾರಾಂಶ ಇರುವ ಕಥೆ. ಇಷ್ಟವಾಯ್ತು.

Ittigecement said...

ಓ ಮನಸೆ...

ಪ್ರೀತಿಯಿಂದ ಓದಿ..ಸ್ವಲ್ಪ ಉದ್ದವಾಗಿದ್ದರೂ ಪ್ರತಿಕ್ರಿಯೆ ಕೊಟ್ಟ ನಿಮಗೆ ಅಭಿನಂದನೆಗಳು...

ಕಾರಂತಜ್ಜ ಹೇಳಿದ್ದು ನೆನಪಾಗುತ್ತಿದೆ..
"ಪ್ರತಿ ದಾಂಪತ್ಯದ ಬದುಕಿನಲ್ಲಿ ವಿರುದ್ಧ ಆಕರ್ಷಣೆ ಬಂದೇ ಬರುತ್ತದೆ..
ಆಗ..
ವಿವೇಕ ಕೆಲಸ ಮಾಡಿದರೆ ದಾಂಪತ್ಯ ಸುಭದ್ರವಾಗಿರುತ್ತದೆ.." ಅಂತ..

ಜೀವನದಲ್ಲಿ ಪ್ರೇಮ ಮತ್ತು ಆಕರ್ಷಣೆಯನ್ನು ನಾವು ಹುಡುಕಿಕೊಳ್ಳ ಬೇಕು..

ಪ್ರೇಮಕ್ಕೆ ಚಂದ ಬೇಕು..
ಆಕರ್ಷಣೆ ಬೇಕು...
ಹಾಗಾಗಿ ಅದು ಹೃದಯದಲ್ಲಿ ಅಲ್ಲ...

ತಲೆಯಲ್ಲಿ ಹುಟ್ಟುತ್ತದೆ... ಏನಂತೀರಿ ?

ಚಂದದ ಪ್ರತಿಕ್ರಿಯೆಗೆ ಮತ್ತೊಮ್ಮೆ ಧನ್ಯವಾದಗಳು...

Dr.D.T.Krishna Murthy. said...

ಕಥೆ ತುಂಬಾ ಚೆನ್ನಾಗಿದೆ.ಸೊಗಸಾದ ನಿರೂಪಣೆ.ಪತ್ರಿಕೆಗಳಿಗೆ
ಕಳಿಸಿ.ಧನ್ಯವಾದಗಳು.

Unknown said...

ಅದ್ಭುತವಾದ ಕಥೆ ಪ್ರಕಾಶಣ್ಣ, ಇಂತಹ ಭಾವನೆ ಎಷ್ಟೋ ಜನರ ಮನಸ್ಸಿನಲ್ಲಿ ಮೂಡಿರಬಹುದು.. ಆದರೆ ಜೀವನದ ವಾಸ್ತವಿಕತೆ,, ಮನುಷ್ಯನ ಎರಡೂ ಮುಖಗಳನ್ನು ನೋಡಿದಾಗ ಮಾತ್ರ ತಿಳಿಯುವುದು.. ಹೊಳೆಯುವುದೆಲ್ಲಾ ಚಿನ್ನವಲ್ಲ ಎನ್ನುವುದನ್ನ ನಿಜವಾಗಲು ಅರ್ಥ ಮಾಡಿಕೊಳ್ಳಬೇಕಿದೆ.... ಯುವ ಪೀಳಿಗೆ ಓದಲೇ ಬೇಕಾದ ಕಥೆ... thanks for such a wonderfull story ...

Ittigecement said...

ಕೃಷ್ಣ ಮೂರ್ತಿಯವರೆ...

ಮೊದಲಿನಿಂದಲೂ ನನಗೆ ಬಹುವಾಗಿ ಕಾಡಿದ್ದು...
ಈ ಪ್ರೀತಿ, ಪ್ರೇಮಗಳು ಹುಟ್ಟುವದು ಹೃದಯದಲ್ಲಿ ಅಲ್ಲ...
ತಲೆಯಲ್ಲಿ...!! ಅಂತ...

ಈ ಪ್ರೇಮಕ್ಕೆ ಒಂದು ಚಂದದ ಮುಖ...
ಬಣ್ಣ...
ಕಣ್ಣು ..
ಮಾತು,,..
ಹಾಡು.. ನಗು.. ಇನ್ನೂ ಏನೇನೋ ಬೇಕು...

ನಮ್ಮ ಹಿರಿಯರ ದಾಂಪತ್ಯವನ್ನು ಗಮನಿಸಿ..
ಅವರೂ ಸಂತೋಷದಿಂದ ಇರುತ್ತಿದ್ದರು (ನಾನು ಸಮರ್ಥಿಸುತ್ತಿಲ್ಲ)
ಅವರ ಇಳಿ ವಯಸ್ಸಿನ ಪ್ರೇಮ.. ನಮಗೆ ಆದರ್ಷ... ಅಲ್ಲವೆ ?

ಆದರೆ ಈಗಿನ ಹದಿ ಹರೆಯದ ಕನಸೇ.. ಬೇರೆ..
ನಮ್ಮ ಪರಿಚಯದ ಹುಡುಗಿಯೊಬ್ಬಳು ಒಬ್ಬ ಹುಡುಗನನ್ನು ನಿರಾಕರಿಸಿದಳು..
ಕಾರಣ ಏನು ಗೊತ್ತೆ ?

ಹುಡುಗನ ಹೆಸರು "ತಿಮ್ಮಪ್ಪ" ಅಂತ...
ಇಷ್ಟು ಹಳೆಯ ಹೆಸರನ್ನು ನನ್ನ ಗೆಳತಿಯರಿಗೆ ಹೇಗೆ ಪರಿಚಯಿಸಲಿ ಅಂತ ಬೇಡ ಅಂದು ಬಿಟ್ಟಳು !!

ಇದು ನಿಜ !!

ಪ್ರೀತಿ, ಪ್ರೇಮ ಹುಟ್ಟುವದಿಲ್ಲ....
ಹೆಚ್ಚಿನ ಸಂದರ್ಭದಲ್ಲಿ ಹುಟ್ಟಿಸಿಕೊಳ್ಳ ಬೇಕು.. ಅಲ್ಲವೆ ?

ಹಾಗೆ ಬದುಕಿನಲ್ಲಿ ಆಕರ್ಷ್ಣೆಯನ್ನೂ ಕೂಡ...
ನಾವೆ ಹುಟ್ಟಿಸಿಕೊಳ್ಳ ಬೇಕು...

ಸರ್ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸವಿಗನಸು said...

ಪ್ರಕಾಶಣ್ಣ,
ಭಾವನಾತ್ಮಕ ಕಥೆ....ಅದ್ಭುತವಾಗಿದೆ....ಸೊಗಸಾದ ನಿರೂಪಣೆ....
ಕಥೆ ದೊಡ್ಡದಾದರೂ ಸುಲಭವಾಗಿ ಓದಿಸಿಕೊಡು ಹೋಯಿತು....
ಒಳ್ಳೆ ನೀತಿಕಥೆಗೆ ಅಭಿನಂದನೆಗಳು....

AntharangadaMaathugalu said...

ಪ್ರಕಾಶ್ ಸಾರ್...
ಕಥೆ ತುಂಬಾ ಚೆನ್ನಾಗಿದೆ. ನಿಜ ಬಾಹ್ಯ ರೂಪ ಮುಖ್ಯವೇ.. ಆದರೆ ಅಂತರಂಗದ ಸೌಂದರ್ಯಕ್ಕಿಂತ ಏನೂ ದೊಡ್ಡದಲ್ಲ. ಒಬ್ಬ ವ್ಯಕ್ತಿಯನ್ನು ಪೂರ್ಣ ಅರಿಯುವುದಕ್ಕೆ ಮುಂಚೆಯೇ ಬಾಹ್ಯ ರೂಪ ನೋಡಿ ನಾವು ಅವರ ಅಂತರಂಗವನ್ನೂ ಅಳೆದು ಬಿಡುತ್ತೇವೆ. ಇದು ಎಷ್ಟು ತಪ್ಪು ಎಂಬ ಒಂದು ಸಂದೇಶ ಕೂಡ ಕೊಟ್ಟಿದ್ದೀರ ನಿಮ್ಮ ಕಥೆಯಲ್ಲಿ. ಎಂದಿನಂತೆ ನಿಮ್ಮ ಬರಹ ಓದಲು ಸರಾಗ... ಸರಳ ನಿರೂಪಣೆ.. ಇಷ್ಟವಾಯಿತು....

Ittigecement said...

ಶುಭಾ...

ಹದಿ ಹರೆಯದಲ್ಲಿ ದೈಹಿಕ ಆಕರ್ಷಣೆಯೇ ಮಹತ್ವ ಪಡೆಯುತ್ತದೆ...
ಅದೇ ನಿರ್ಧಾರ ತೆಗೆದು ಕೊಳ್ಳಲು ಪ್ರೇರೇಪಿಸುತ್ತದೆ...

ಪ್ರೀತಿ..
ಪ್ರೇಮ ಆಕರ್ಷಣೆ.. ವಾಸ್ತವದ ಬದುಕು ಕಟ್ಟಲು ಕಷ್ಟ ಪಡುತ್ತದೆ...

ಇನ್ನೊಂದು ವಿಷಯ..

ಮಾನಸಿಕವಾಗಿ ಎಲ್ಲರೂ ವ್ಯಭಿಚಾರರೇ...!
ಆದರೆ ಸಮಯಕ್ಕೆ ಸರಿಯಾಗಿ ಬರುವ ವಿವೇಕ.. ತಪ್ಪುಗಳನ್ನು ಸರಿಪಡಿಸುತ್ತದೆ..
ಅಲ್ಲವೆ ?

ಚಂದದ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

Unknown said...

ತುಂಬಾ ಚೆಂದಾಗಿದೆ ಸಾರ್. ಮುಂದೆ ಏನೀರಬಹುದು ಎಂಬ ಕುತೂಹಲದ ನಡುವೆ ಸುಂದರ ಸಂಸಾರ ದಾರಿ ತಪ್ಪಲು ಬಿಡದೆ ಓದಿಸಿದೀರಿ... ಥ್ಯಾಂಕ್ಸ್

Ittigecement said...

ಸವಿಗನಸು (ಮಹೇಶ್..)

ಬದುಕೇ.. ಹಾಗೆ...
ಇಲ್ಲ
ಬೇಡದುದರುಗಳ ನಡುವಿನ ಒಂದು ಹೊಂದಾಣಿಕೆ...

ಬೇಕುಗಳೇ... ಹಾಗೆ..
ಸಿಕ್ಕಿದರೆ
ಸಿಕ್ಕೀತು...
ಇಲ್ಲದಿದ್ದರೆ ಸುಂದರ ಕನಸು...

ಇದೆಲ್ಲವೂ ಒಂದು ಮನಸ್ಥಿತಿ...

ಬದುಕೂ ....
ಒಂದು ಕಥೆ..
ಉದ್ದವಾಗಿದ್ದರೂ..
ಆಸಕ್ತಿಯನ್ನುಳಿಸಿಕೋಂಡು... ಓದಲೇ.. ಬೇಕಲ್ಲ.. ಅಲ್ಲವಾ ?

ಚಂದದ ಪ್ರತಿಕ್ರಿಯೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Vani Satish said...

ಪ್ರೀತಿಯ ಪ್ರಕಾಶಣ್ಣ,ಮತ್ತೊಮ್ಮೆ ಬಹಳ ಸೊಗಸಾಗಿರುವ ಕಥೆಯನ್ನು ನೀಡಿದ್ದೀರಿ. ಈ ಕಥೆಯಲ್ಲಿ ವಾಸ್ತವಿಕತೆ ಇದೆ,ಒಳ್ಳೆಯ ನಿರೂಪಣೆ,ಒಳ್ಳೆಯ ನೀತಿ ಕೂಡಾ ಇದೆ.ನಿಮಗೆ ತುಂಬಾ ತುಂಬಾ ಧನ್ಯವಾದಗಳು.hats off.

ಮನದಾಳದಿಂದ............ said...

ಪ್ರಕಾಶಣ್ಣ
ಇಂದಿನ ಹದಿಹರೆಯದ ಪ್ರೇಮಿಗಳಿಗೆ ಇದೊಂದು ಪಾಠ. ನೀತಿಯುಕ್ತ ಕತೆ ತುಂಬಾ ಇಷ್ಟವಾಯಿತು. ಪ್ರೀತಿ-ಪ್ರೇಮ ಕೇವಲ ಆಕರ್ಷಣೆ. ಹೃದಯದಿಂದ ಹುಟ್ಟುವ ಪ್ರೀತಿ ತುಂಬಾ ಕಡಿಮೆ. ಇದಕ್ಕೆ ನಾನೇ ಸ್ವಂತ ಉದಾಹರಣೆ. ಅದನ್ನು ಇನ್ನೊಮ್ಮೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ.

ದಿನಕರ ಮೊಗೇರ said...

ಪ್ರಕಾಶಣ್ಣ,
ಎಂದಿನಂತೆ ತುಂಬಾ ಸುಂದರ ನಿರೂಪಣೆ....... ನಿಮ್ಮ ಕಥೆಯಲ್ಲಿ ಒಳ್ಳೆಯ ಸಂದೇಶ ಇರತ್ತೆ.... ಅದೇ ಒಂದು ಸೊಗಸು........... ಅದನ್ನ ತುಂಬಾ ಗಟ್ಟಿಯಾಗಿ ಹೇಳ್ತೀರಾ........... ಓದಿದವರ ಮನಸ್ಸು ತಟ್ತತ್ತೆ........ಧನ್ಯವಾದ ಒಳ್ಳೆಯ ಕಥೆ ಕೊಟ್ಟಿದ್ದಕ್ಕೆ.......

Raghu said...

ಪ್ರಕಾಶಣ್ಣ. ಸುಂದರವಾದ ಕಥೆ..ಈಗಿನ ಶೈಲಿಗೆ..ವಾಸ್ತವಕ್ಕೆ ಹತ್ತಿರವಾಗಿದೆ.
ನಿಮ್ಮವ,
ರಾಘು.

sunaath said...

ನಿಜವಾದ ಚೆಲುವು ಯಾವುದು ಎನ್ನುವದನ್ನು ತುಂಬ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ. ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

ಒ೦ದೇ ಉಸಿರಿಗೆ ಓದಿಸಿಕೊ೦ದು ಹೋಯಿತು ಕಥೆ! ತು೦ಬಾ ಚೆನ್ನಾಗಿ ನಿಮ್ಮದೇ ಶೈಲಿಯಲ್ಲಿ ನವಿರಾಗಿ ನಿರೂಪಿಸಿದ್ದೀರಿ :)

Anonymous said...

ಪ್ರಕಾಶಣ್ಣ,,

ಕಥಾ ಹಂದರ, ನಿರೂಪಣೆ, ಕಥೆಯಲ್ಲಿ ಅಡಗಿರುವ ನೀತಿ ಪಾಠ ಎಲ್ಲವೂ ಸೊಗಸಾಗಿವೆ..

ನೀವಂದಿದ್ದು ನಿಜ ಪ್ರಕಾಶಣ್ಣ, ಮನುಷ್ಯನ ಆಸೆ, ಆಕಾಂಕ್ಷೆಗಳಿಗೆ ಮಿತಿ ಎಂಬುದೇ ಇಲ್ಲ..ಒಂದಿದ್ದರೆ ಇನ್ನೊಂದು, ಇನ್ನೊಂದಿದ್ದರೆ ಮತ್ತೊಂದು...

ಕವಿ ಗೋಪಾಲಕೃಷ್ಣ ಅಡಿಗರು ಎನ್ನುವಂತೆ ' ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...'
ಎಂತಹ ತಾತ್ವಿಕವಾದ ಸಾಲುಗಳಲ್ಲವೇ?

ಒಂದು ವಸ್ತು ತನ್ನದಲ್ಲ, ತನ್ನದಾಗಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಅದರ ಬಗ್ಗೆಯೇ ತುಡಿತ, ಮಿಡಿತ..

ಇಂಗ್ಲೀಶ್ ನಲ್ಲಿ ಒಂದು ಮಾತಿದೆ,,

"All desirable things in life are either expensive, illegal or fattening"

ನೀವು ಹೇಳಿದ ಹಾಗೆ ವಿವೇಚನೆಯಿಂದ ಕೆಲಸ ಮಾಡಿದರೆ ಎಲ್ಲವೂ ಸರಿಯಾದ ದಾರಿಯನ್ನು ಹಿಡಿಯುತ್ತವೆ..

ಅಂದ ಹಾಗೆ ಹುಡುಗನ ಹೆಸರು " ತಿಮ್ಮಪ್ಪ" ಎಂದು ಇರುವುದರಿಂದ ಆತನನ್ನು ನಿರಾಕರಿಸಿದ ಹುಡುಗಿಯ ಕಥೆ ಕೇಳಿ ನಗು ಬಂತು..

ನಿಮ್ಮ ಬರವಣಿಗೆ ಹೀಗೆಯೇ ಮುಂದುವರೆಯಲಿ..

Ranjana H said...

ಪ್ರಕಾಶಣ್ಣಾ,
ಪ್ರೀತಿಸುವ ಪತಿಯಿರಲು, ಬೆಚ್ಚನೆಯ ಮನೆಯಿರಲು, ನಸುನಗುವ ಮನವಿರಲು, ವೆಚ್ಚಕ್ಕೆ ಕಾಸಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದಳು ರಂಜನಾ....:)
ಸುಂದರ ಬರಹ. ನಿಜ ಜೀವನದಲ್ಲಿ ನಡೆಯುವ ಘಟನೆಯನ್ನು ಸಂದರ್ಭಸಹಿತವಾಗಿ ಕಣ್ಣಿಗೆ ಕಟ್ಟುವಂತೆ ಕಥೆಯಾಗಿ ಪೋಣಿಸಿದ್ದೀರಿ.
ಬಾಹ್ಯ ಸೌಂದರ್ಯವಿದ್ದು ಮನದಲ್ಲಿ ಕಲ್ಮಶವಿದ್ದೊಡೆ ಪ್ರೀತಿ ಎಂಬ ಹೆಸರು ಪಡೆದ ಆಕರ್ಶಣೆ ಎಷ್ಟು ದಿನ ಅಲ್ಲಿ ನಿಲ್ಲಬಲ್ಲದು? ಆದರೆ ಆಂತರಿಕ ಸೌಂದರ್ಯ ಒಮ್ಮೆಲೆ ಕಣ್ಣಿಗೆ ಗೋಚರವಾಗದಿದ್ದರೂ ಸಮಯ ಕಳೆದಂತೆ ಒಳ್ಳೆಯತನಕ್ಕೆ, ಪ್ರೀತಿಗೆ, ಕಾಳಜಿಗೆ, ವಿಶ್ವಾಸಕ್ಕೆ ಒಲಿಯದ, ಪ್ರೀತಿ ಹುಟ್ಟದ ಮನ ಯಾವುದು?

Ittigecement said...

ಅಂತರಂಗದ ಮಾತುಗಳು...

ಬಹಳ ಚಂದದ ಮಾತುಗಳನ್ನಾಡಿದ್ದೀರಿ...

ದಂಪತಿಗಳು ಎಷ್ಟೇ ಚಂದವಾಗಿದ್ದರೂ...
ಮನುಷ್ಯ ದಾಂಪತ್ಯದಲ್ಲಿ ಬದುಕುವದು..
ಸ್ವಭಾವದ ಜೊತೆಗೆ ಅಲ್ಲವೆ ?

ಹಾಗಾಗಿ ಸಂಸಾರದಲ್ಲಿ ಸ್ವಭಾವ ಮುಖ್ಯವಾಗುತ್ತದೆ..
ನಮ್ಮ ಹಿರಿಯರು ಇದನ್ನು ಚೆನ್ನಾಗಿ ಅರಿತಿದ್ದರು...

"ಸ್ವಲ್ಪ ದಿನ ಕತ್ತೆಯೊಡನೆ ಇದ್ದರೂ..
ಕುರುಡು ಪ್ರೀತಿ ಹುಟ್ಟುತ್ತದೆ..."

ಪ್ರೀತಿಯನ್ನು ಹುಟ್ಟಿಸಿಕೊಳ್ಳ ಬಹುದು...
ಆದರೆ ಒಳ್ಳೆಯ ಸ್ವಭಾವವನ್ನು ರೂಢಿಸಿಕೊಳ್ಳುವದು ಬಲು ಕಷ್ಟ...

ಹಾಗಾಗಿ..ನಮ್ಮ ಹಿರಿಯರು..
ಒಳ್ಳೆಯ ಮನೆತನ..
ಚಟ ಇಲ್ಲದ "ಗಂಡನ್ನು" ನೋಡುತ್ತಿದ್ದರು..

ಬಹಳ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪುರುಷೋತ್ತಮ...

ದಾಂಪತ್ಯ ಜೀವನದಲ್ಲಿ.... ಪ್ರತಿಯೊಂದು ಜೋಡಿಗೂ..
ಪ್ರತಿಸ್ಪರ್ಧಿ ಜೋಡಿಯೊಂದು ಎದುರಾಗುತ್ತದೆ...

ತನ್ನವನಿಗಿಂತ(ತನ್ನವಳಿಗಿಂತ).. ಇವರು ಚಂದ ಎನ್ನುವಂಥಹ ಭಾವನೆ..!
ಆಗ..
ವಿವೇಕ ಕೆಲಸ ಮಾಡಿದರೆ...
ಬದುಕು ಸುಂದರವಾಗಿರುತ್ತದೆ...
ಇದನ್ನು ಹೇಳಿದವರು ಶಿವರಾಮ ಕಾರಂತಜ್ಜ..

ನಾವು ಕಾಲೇಜಿನಲ್ಲಿರುವಾಗ "ಪ್ರೇಮ ವಿವಾಹದ " ಬಗೆಗೆ ಮಾತನಾಡಿದ್ದರು...

ಪ್ರತಿಯೊಬ್ಬರಿಗೂ ದಾರಿ ತಪ್ಪುವಾಗ
ಒಳಗಿನ "ಅಂತರಾತ್ಮ" ಸತ್ಯವನ್ನು ಹೇಳುತ್ತದೆ...

ನಾವು ನಮಗೆ ಮೋಸವನ್ನು ಮಾಡಿಕೊಂಡು "ತಪ್ಪುಗಳನ್ನು" ಮಾಡುತ್ತೇವೆ...

ಪ್ರೋತ್ಸಾಹಕ್ಕೆ, ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾ ಇರಿ..

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಪ್ರಕಾಶ ರವರೆ,ಸು೦ದರ ಕಥೆ.ಈಗೀಗ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲವಲ್ಲಾ ಎನ್ನುವುದೇ ವ್ಯಥೆ.
ಮನಸ್ಸಿನ ಮಾತನ್ನು ಹೃದಯ ಕೇಳಿದರೆ ಎಲ್ಲವೂ ಸು೦ದರ.
ಅಬಿನ೦ದನೆಗಳು.

Ittigecement said...

ವಾಣಿ...

ಜಗತ್ತಿನಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಸೌಂದರ್ಯವಿರುತ್ತದೆ...
ಕೆಲವುಗಳ "ಕುರೂಪವೇ.." ಅದರ ಸೌಂದರ್ಯವಾಗಿರುತ್ತದೆ..

ಇದನ್ನು ಎಲ್ಲೋ ಓದಿದ ನೆನಪು..

ನನ್ನ ಗೆಳೆಯನೊಬ್ಬ.. ಹುಡುಗಿ ಕಪ್ಪೆಂದು ಬೇದವೆಂದಿದ್ದ..
ಆಗ ಅವನ ತಂದೆಯವರು..

"ಕಪ್ಪನೆಯ ನಿಗ್ರೋಗಳ ನಾಡಿನಲ್ಲೂ ಪ್ರೇಮವಿವಾಹ ಇದೆ ..."
ಎಂದಿದ್ದರು..

ಎಷ್ಟು ನಿಜ ಅಲ್ಲವಾ ?

ಚಂದದ ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು...

umesh desai said...

ಹೆಗಡೇಜಿ ತುಂಬಾ ಛಲೋ ಕತೆ ಅಶೋಕ್ ಕುಮಾರ್ ನ " ಮೇರಿ ಸೂರತ್ ತೇರಿ ಆಂಖೆ" ಚಿತ್ರ ನೆನಪಿಗೆ ಬಂತು ಅದರಲ್ಲೂ ಹೀಗೆ
ಮನಸ್ಸಿನ ಸೌಂದರ್ಯದ ಮುಂದೆ ಬೇರೆ ಏನು ಹಂಸಲೇಖ ಒಂದು ಕಡೆ ಬರೀತಾರೆ " ಬೆವರಾಡೋ ಮೈಗೆ ಪುನುಗು ಯಾತಕೋ....."

ಸೀತಾರಾಮ. ಕೆ. / SITARAM.K said...

ಚೆ೦ದವಾದ ನೀತಿಯುಕ್ತ ನೀಳ್ಗತೆ ಸರಾಗವಾಗಿ ಓದಿಸಿಕೊ೦ಡು ಹೋಗೋ ನಿರೂಪಣೆ ಅದರ ಜೊತೆಗೆ. ಮರ್ಕಟ ಮನದ ಚೆಲ್ಲಾಟವನ್ನ ಬದುಕಿನ ವಾಸ್ತವವನ್ನ ಚೆನ್ನಾಗಿ ಹೇಳಿದ್ದಿರಾ... ಆದರೇ ಕಿವಿ ಇರದ ಮತ್ತು ಹೃದಯ ತುತಾಗೋ ಮಕ್ಕಳು ನೀವೂ ಹೇಳಿದ ಕಾರಣಕ್ಕೆ ಹುಟ್ಟೋದು ವೈಜ್ಞಾನಿಕವಾಗಿ ನಿಜವೇ??

PaLa said...

practical ಮಾತುಗಳು.. ಆದರೆ ಸೀತಾರಾಮ ಅವರ ಸಂಶಯವೇ ನನ್ನದು. ಮಗುವಿನ ದುಃಸ್ಥಿತಿಗೆ ನೀವು ಕೊಟ್ಟ ಕಾರಣ ವೈಜ್ಞಾನಿಕವೇ, ಅಥವಾ ಇನ್ನೊಂದು ಮಾತಿನಲ್ಲಿ ಕೇಳುವುದಾದರೆ ಅಪ್ಪನ ನಡವಳಿಕೆಯೊಂದೇ ಅದಕ್ಕೆ ಕಾರಣವೇ ಇಲ್ಲಾ ಬೇರೆ ಇನ್ನಾವುದಾದರೂ ಕಾರಣಗಳಿವೆಯೇ?

ಮನಸು said...

ಪ್ರಕಾಶಣ್ಣ,
ಕಥೆ ಚೆನ್ನಾಗಿದೆ.... ಕಥೆಯ ಹಿಂದಿನ ನೀತಿಯೂ ಚೆನ್ನಾಗಿದೆ. ತಿಮ್ಮಪ್ಪ ಎಂಬ ಹೆಸರು ಚೆಂದವಿಲ್ಲ ಎಂಬ ಕಾರಣಕ್ಕೇ ಆ ಹುಡುಗಿ ಗಂಡು ಬೇಡವೆಂದಿದ್ದು ಬೇಸರವೆನಿಸಿತು... ತಕ್ಷಣದ ಪರಿಸ್ಥಿತಿ ಯೋಚಿಸದೆ ಮುಂದಿನ ಜೀವನವದ ಬಗ್ಗೆ ಯೋಚಿಸಬೇಕಾಗಿತ್ತು.....
ಧನ್ಯವಾದಗಳು ಒಳ್ಳೆಯ ಕಥೆಗಾರರು ನೀವು.

pavs said...

ಕಥೆಯ ಸಂದೇಶ ಚೆನ್ನಾಗಿದೆ,ಪ್ರಕಾಶಣ್ಣ.

ಬಾಹ್ಯ ಸೌಂದರ್ಯ ತಾತ್ಕಾಲಿಕ ಆಕರ್ಷಣೆ.ಏನಿದ್ದರು ಜೀವನದ ಕೊನೆವರೆಗೆ ಇರುವುದು ಆಂತರಿಕ ಸೌಂದರ್ಯ / ಮನುಷ್ಯನ ಗುಣಗಳು.
ಇಲ್ಲಿ ಹೇಳಿದಂತೆ ,ಬದುಕಬೇಕಾಗಿರುವುದು ಸ್ವಭಾವದ ಜೊತೆಗೇ.ಒಳ್ಳೆ ಸ್ವಭಾವ ಇದ್ದಾರೆ ಆಕರ್ಷಣೆ ಸಹಜವಾಗೇ ಬರುತ್ತದೆ.
ನಿರೂಪಣೆಯೂ ಚೆನ್ನಾಗಿದೆ.

prtumbemane said...

ಪ್ರತಿ ಹೆಣ್ಣು, ಮತ್ತೆ ಗ೦ಡು ಈ ರೀತಿಯ ಆಕರ್ಶಣೆಗೆ ಒಳಗಪ್ಪದು ಬಹಳ ಸಹಜವಾದ,,,,,,, ನಮ್ಮ ಸಮಾಜ ಒಪ್ಪದ ಗುಣ....
ಆದರೆ ಅದನ್ನೇ ವಿಶಯವಾಗಿಟ್ಟೂ ಚ೦ದದ ನಿರೂಪಣೆಯೊ೦ದಿಗೆ ಸು೦ದರವಾದ ಕಥೆ ನೀಡಿದ್ದಕ್ಕೆ ದನ್ಯವಾದಗಳು.........

Unknown said...

Uttama kathe..

Ittigecement said...

ಮನದಾಳದಿಂದ.. (ಪ್ರವೀಣ್..)

ಮದುವೆಯ ನಂತರದ ವಾಸ್ತವದ ಬದುಕು ...
ಒಂದು ವ್ಯಕ್ತಿಯ ಸ್ವಭಾವದೊಂದಿಗೆ...
ಅವನ(ಳ) ಬೇಕು ಬೇಡಗಳು.. ಸ್ವಭಾವದ ಜೊತೆ ಇರಬೇಕಾಗುತ್ತದೆ...
ಅಂದರೆ ಪರಸ್ಪರ ಹೊಂದಾಣಿಕೆ.. ತ್ಯಾಗ.. ಇದ್ದರೇನೇ ಇದು ಸಾಧ್ಯ..

ಒಂದು ಒಳ್ಳೆಯ ಸ್ವಭಾವದ ಜೊತೆಯಿದ್ದರೆ ಸ್ನೇಹ, ವಿಶ್ವಾಸ...ಪ್ರೀತಿ... ಇತ್ಯಾದಿಗಳೆಲ್ಲ..
ಚಂದದ ಪ್ರೇಮವಾಗ ಬಲ್ಲದು.. ಅಲ್ಲವೆ ?

ನಿಮ್ಮ ಅನುಭವ ಆದಷ್ಟು ಬೇಗ ಬರೆಯಿರಿ..

ಪ್ರತಿಕ್ರಿಯೆಗೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

Anonymous said...

Wow, anna nice iddu... Thanks for Good Story :)

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಮನಸ್ಸಿಗೆ ತಟ್ಟುವ ಬರಹ
ಚಂದ ನಾಲಕ್ಕು ದಿನ ಮಾತ್ರ
ಆದರೆ ಒಳ್ಳೆಯತನ ಕೊನೆ ತನಕ
ಸುಂದರ ಬರಹ

Ittigecement said...

ದಿನಕರ್...

ಮನವೆಂಬ ಮರ್ಕಟ ಎಂದು ಹಿರಿಯರು ಹೇಳಿದ್ದಾರೆ..
ಮನಸ್ಸು ಮಂಗನಂತೆ...
ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಹಾರುತ್ತಿರುತ್ತದೆ...

ಇರುವದೆಲ್ಲವ ಬಿಟ್ಟು ಇರದುದನ್ನು ಬಯಸುತ್ತದೆ..
ಆದರೆ ..
ವಿವೇಕ ಇದ್ದರೆ ಎಲ್ಲವೂ ಸುಂದರ.. ಅಲ್ಲವಾ ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ರಘು....

ಇಲ್ಲಿ ಹೆಣ್ಣು ಮಗಳಿಗೆ ತನ್ನದೇ ಆದ ಕನಸಿತ್ತು...
ಅದು ಹರೆಯದ ಹಸಿ ಹಸಿಯಾದ ವಿಚಾರವಾದರೂ..
ಮದುವೆಯಾದದ್ದು ಹಿರಿಯರ ಒತ್ತಾಯಕ್ಕೆ...
ಅವಳ ವಿರುದ್ಧ ಸ್ವಭಾವದ ವ್ಯಕ್ತಿತ್ವದೊಡನೆ,,...

ಇಲ್ಲಿ ಹೊಂದಾಣಿಕೆಯಾಗುವದು ಬಲು ಕಷ್ಟ..
ಆ ಸಂದರ್ಭದಲ್ಲಿ ಕೆಟ್ಟ ವಿಚಾರಕ್ಕೆ ಆಕರ್ಷಣೆಯಾದರೆ ಆಶ್ಚರ್ಯವಿಲ್ಲ...

ಆದರೆ...
ಇಲ್ಲಿ ಹಲವರು ಪ್ರತಿಕ್ರಿಯೆ ಕೊಟ್ಟ ಹಾಗೆ..
ಬಾಹ್ಯ ಸೌಂದರ್ಯಕ್ಕಿಂತ...
ತನಗೆ ನಿಷ್ಠೆಯಿರುವ... ನಂಬಿಕಸ್ಥ.. ಸಭ್ಯಸ್ಥ ಜೊತೆಗಾರ ಸಹಜವಾಗಿ ಇಷ್ಟವಾಗುತ್ತಾನೆ...

ತನ್ನವ ತನ್ನೊಡನೆ ಇದ್ದಾನೆ ಎನ್ನುವ ಭರವಸೆ ...
ಹೆಣ್ಣಿಗೆ ಬಲುದೊಡ್ಡ.. ಆಸರೆ....
ಇದೇ ಬದುಕಿನ ಸಾರ್ಥಕತೆ ಎಂದು ಹೆಣ್ಣು ನಂಬಿರುತ್ತಾಳೆ...

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಸುನಾಥ ಸರ್...

ಅಂದ ನೋಡುವವನ ಕಣ್ಣಿನಲ್ಲಿರುತ್ತದೆ ....

ನಮಗೆ ಇಷ್ಟವಾದವರು ಹೇಗೆ ಇದ್ದರೂ ಚಂದವೇ....
ಅವರ ಮಾತು ಹೇಗಿದ್ದರೂ ಸಂಗೀತ...

ಜೊತೆಯಲ್ಲಿರುವವರು.. ಇಷ್ಟವಾಗಿಬಿಟ್ಟರೆ.. ಮತ್ತೇನು ಬೇಕು ಅಲ್ಲವಾ ?

ನಿಮ್ಮ ಪ್ರೋತ್ಸಾಹಕ್ಕೆ...
ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು..

Ittigecement said...

ಸುಧೇಶ್...

ದಾಂಪತ್ಯಕ್ಕೆ ಚಂದವೇ ಬೇಡವೇ... ?
ಬೇಡ ಅಂತಿಲ್ಲ..
ಆದರೆ..
ಯಶಸ್ವಿ ದಾಂಪತ್ಯ ಬದುಕಿಗೆ ಒಳ್ಳೆಯ ಸ್ವಭಾವ ಅಗತ್ಯ...
ಅದು ನಮ್ಮ ಕೈಯಲ್ಲಿದೆ ಅಲ್ಲವಾ ?

ಓಹೊ...
ನೀವು ಇನ್ನೂ ಬ್ರಹ್ಮಚಾರಿಗಳು...
ನಿಮಗೇಕೆ ಇದೆಲ್ಲ ಅಲ್ಲವಾ ?

ಹಾ..ಹ್ಹಾ... !!

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಅನುರಾಗ said...

ಸರ್,

ಗಂಭೀರವಾದ ಮಾತನ್ನು ನವಿರಾದ ಶೈಲಿಯಲ್ಲಿ ಹೇಳಿದ್ದು ತುಂಬಾ ಇಷ್ಟವಾಯಿತು. ಸೌಂದರ್ಯಕ್ಕೆ ಹೆಚ್ಚು ಒತ್ತುನೀಡುವ ಹೆಣ್ಮಕ್ಕಳ ಮನಸ್ಸು, ಹಿರಿಯರ ಅನುಭವದ ಮಾತು ಎಲ್ಲವನ್ನೂ ಚೆಂದವಾಗಿ ನಿರೂಪಿಸಿದ್ದೀರಿ. ಕಥೆಯಲ್ಲ ಇದು ಜೀವನ ಎಂದು ಹೇಳುವಂತಿದೆ ನಿಮ್ಮ ಕಥೆಯ ಸಾರ. ಒಳ್ಳೆಯದಾಗಲಿ...

ನಲ್ಮೆಯಿಂದ,
ರಶ್ಮಿ. ಕಾಸರಗೋಡು

Dr manjunath P Matad said...

ಪ್ರಕಾಶ್ ಸರ್.........
ಕಥೆ ತು೦ಬಾಚನ್ನಾಗಿದೆ,
ಈಗಿನ ಕಾಲದ ಹುಡುಗಿಯರು ಬಾಹ್ಯ ಸೌ೦ದರ್ಯ ನೊಡಿ ಹುಡುಗನನ್ನ ಸೆಲೆಕ್ಟ್ ಮಾಡ್ತಾರೆ ಆದ್ರೆ ಹಿ೦ದೆ "ಕೊಡು ದೇವರೆ ವರವ ಕುಡುಕನಲ್ಲದ ಗ೦ಡನ" ಅ೦ತ ಕೇಳ್ಕೊಳ್ತಿದ್ರು...ಅದ್ರೆ ಈಗ ಹುಡುಗಿನು ಜೊಥೆಯಲ್ಲಿ ಕುಳಿತು ಕುಡಿಯುವ ಸ್ವಾತ೦ತ್ರ್ಯ ಕೊಡುವ ಗ೦ಡನನ್ನು ಕೆಳ್ತಾರೆ............ಯೆ೦ಥಾ ವಿಪರ್ಯಾಸ ಅಲ್ಲವೆ.....

ಅದಕ್ಕೆ ನಾನು ಆ ದೆವರಲ್ಲಿ ಬೆಡ್ಕೊಳ್ಳೊದು ಇಸ್ಟೆ..."ಕೊಡೂ ದೇವರೆ ವರವ ಒಳ್ಳೆ ಭಾವನೆಗಳು ಇರುವ ಹುಡುಗಿಯ.......

ಅಲೆಮಾರಿ said...

ಮಾತೇ ಇಲ್ಲ :)

Ittigecement said...

ಆಕಾಶ ಬುಟ್ಟಿ...

ಪ್ರತಿ ಮನದಲ್ಲೂ ದ್ವಂದ್ವ ಇರುತ್ತದೆ..
ಇಲ್ಲುದುದರ..
ಬಗೆಗೆ ಆಸೆ ಸಹಜ...
ಆದರೆ ವಿವೇಕ...
ವಾಸ್ತವದ ಕಲ್ಪನೆಯೂ ಇರಬೇಕಲ್ಲವೆ ?

ಇನ್ನೊಂದು ವಿಷಯ...
ಹುಡುಗನ ಹೆಸರು "ತಿಮ್ಮಪ್ಪ" ಎಂದು ಇದೆ..
ಅದಕ್ಕೆ ಆ ಹ್ಡುಗ ತನಗೆ ಬೇಡವೆಂದ ಹುಡುಗಿಗೊಂದು ವರನನ್ನು ನಮ್ಮ ಮನೆಯಲ್ಲೂ ನೋಡುವ ಸಂದರ್ಭ ನಡೆಯಿತು..
ಹುಡುಗ ಅಮೇರಿಕಾದಲ್ಲಿದ್ದ..
ಒಬ್ಬನೇ ಮಗ..
ಸುಸಂಕೃತ.. ಸಭ್ಯಸ್ಥ..

ಆದರೆ ಹುಡುಗಿ ಮತ್ತೆ ಬೇಡವೆಂದಳು...!!

ಯಾಕೆ ಗೊತ್ತಾ ?

"ಹುಡುಗ ತಲೆಗೆ ಎಣ್ಣೆ ಹಾಕಿ ಕೂದಲು ಬಾಚುತ್ತಾನೆ.." !!

ನಾನೂ ಗಮನಿಸಿದೆ..
ನಿಜ ಆ ಹುಡುಗ ...
ಸ್ನಾನವಾದ ಮೇಲೆ ಸ್ವಲ್ಪ ತೆಂಗಿನೆಣ್ಣೆ ಹಾಕಿ ಕೂದಲು ಬಾಚುವ ಹವ್ಯಾಸ ಇತ್ತಂತೆ!!

ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಬರೆಯಲು ಇನ್ನಷ್ಟು ಸ್ಪೂರ್ತಿ ಕೊಟ್ಟಿದೆ...

ಧನ್ಯವಾದಗಳು... ಚಂದದ ಪ್ರತಿಕ್ರಿಯೆಗೆ...

Ittigecement said...

ರಂಜನಾ....

ಬಹಳ ಸುಂದರವಾದ ಪ್ರತಿಕ್ರಿಯೆ.. !!
ಪ್ರೀತಿಗೆ.. ಒಳ್ಳೆಯ ಸ್ವಭಾವಕ್ಕೆ ಒಲಿಯದ ಮನ ಎಲ್ಲಿದೆ?

ಬದುಕುವದು ಸ್ವಭಾವದ ಜೊತೆಗೆ ಅಂದಾಗ ಅಲ್ಲಿ ಚಂದದ ಕೆಲಸ ಸ್ವಲ್ಪ ಕಡಿಮೆ...
ಚಂದ ಬೇಡ ಅಂದಲ್ಲ...

ನಿಗ್ರೊ ನಾಡಿನಲ್ಲೂ ಪ್ರೇಮ ವಿವಾಹ ಇದೆ ಅಂದ ಮೇಲೆ ಚಂದದ ಡೆಫಿನೇಷನ್ ಬದಲಾಗ ಬಹುದು .. ಅಲ್ಲವಾ ?

ದಾಂಪತ್ಯ ಒಂದು ಜವಾಬ್ದಾರಿ...
ಅದನ್ನು ಜತನವಾಗಿ ಸಂಭಾಳಿಸಿಕೊಂಡು ಹೋಗುವ ಜವಾಬ್ದಾರಿ ಇಬ್ಬರಿಗೂ ಇರಬೇಕು...
ಆಗ ಬಾಳು ಸುಂದರ...


ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮ್ಮ ಬ್ಲಾಗ್ ಬಹಳ ಸೊಗಸಾಗಿದೆ...

ಶರಶ್ಚಂದ್ರ ಕಲ್ಮನೆ said...

ನಾನು ಹೇಳಕ್ಕೂ ಅನ್ಕಂಡಿದ್ದನ್ನ ಈಗಾಗ್ಲೇ ಎಲ್ಲರು ಹೇಳಿದ್ದ ಪ್ರಕಾಶಣ್ಣ... ಚಂದದ ಬರಹ... ಎಲ್ಲರೂ ನೀ ಹೇಳಿದ ವಿಷಯನ ಅರ್ಥ ಮಾಡ್ಕಂದ್ರೆ ಜೀವನ ಎಷ್ಟು ಸುಂದರ ಅಲ್ದಾ ?

Ittigecement said...

ಕುಸು ಮಲಿಯಾಳ...

ಇಂದಿನ ಸಮಸ್ಯೆ ಏನೆಂದರೆ ಪರಸ್ಪರ ಅರ್ಥ ಮಾಡಿಕೊಳ್ಳುವದು...
ಯಾರಿಗೂ ಜೊತೆಯವರ ಮನ ಅರ್ಥ ಮಾಡಿಕೊಳ್ಳುವಷ್ಟು ಪುರುಸೊತ್ತೇ.. ಇಲ್ಲ...
ತಾವು..
ತಮ್ಮದು...
ಅವರದೇ... ವರ್ತುಳ...!

ಪರಸ್ಪರ ಪ್ರೀತಿ...
ಕಾಳಜಿ...
ಹೊಂದಾಣಿಕೆ... ಇದ್ದಲ್ಲಿ ಅದೊಂದು ಸುಂದರ ಕುಟುಂಬ... ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ದೇಸಾಯಿಯವರೆ....

ವಾಹ್...
ಎಂಥಹ ಮಾತು...!!

"ಬೆವರಾಡೋ ಮೈಗೆ ಪುನುಗು ಯಾತಕೊ.....?"

ನಮ್ಮ
ಅಂತರಂಗದ..
ಆಂತರ್ಯದಲ್ಲಿ..
ಇರುವಷ್ಟು...
ಹೊಲಸು ಇನ್ನೆಲ್ಲಿದೆ?
ಎದುರಿಗೆ ...
ಬಣ್ಣ ಬಣ್ಣದ
ಬಟ್ಟೆ...
ಒಳೊಗೊಳಗೆ..
ಕೆಟ್ಟ
ಹೊಲಸಿನ..
ಗುಡ್ಡೆ...

ಬಹಳ ಚಂದವಾದ ಮಾತುಗಳು ಉಮೇಶ್... !

ನಿಮ್ಮಪ್ರೀತಿ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

Anonymous said...

ಬದುಕ ಬಗೆಗಿನ ಬಹಳ ಅರ್ಥಪೂರ್ಣ ಕಥೆಯೊಂದ ಬರೆದಿದ್ದೀರಿ ಸರ್....

Anonymous said...

ಕತೆ ಚೆನ್ನಾಗಿದೆ. ಆದರೆ ಮಗುವಿನ ನ್ಯೂನತೆಗೆ ಕಡಾಖಂಡಿತವೆನ್ನುವ ಹಾಗೆ ಕಾರಣ ಸೂಚಿಸಿರುವುದು ಸರಿ ಕಾಣಲಿಲ್ಲ.

Ittigecement said...

ಸೀತಾರಾಮ್ ಸರ್...

ನಾನು ಕಥೆಯಲ್ಲಿ ಹೇಳಿರುವ ಹಾಗೆ ...
ಹೀಗೆ ಆಗಿರುವದಕ್ಕೆ.. ಹಲವಾರು ಕಾರಣಗಳಿವೆ..
ಇದೂ ಒಂದು ಕಾರಣ..

ಇಲ್ಲಿ ಈ ಕಥೆಯಲ್ಲಿ..
ಮನೆಯ ಮಾಲಿಕ ನೋಡುವ ಪರಿಯಲ್ಲಿ ಅವನು ಕಾಮುಕ ಎನ್ನುವದನ್ನು ಹೇಳಿದ್ದೇನೆ...
ಅವನ ಹೆಂಡತಿ ಮುಗ್ಧೆಯಂತಲೂ ಚಿತ್ರಿಸಿದ್ದೇನೆ...

ಸೋಂಕು ತಗುಲಿದ್ದರೆ ಅದು ಗಂಡನಿಂದ ಎನ್ನುವ ಸೂಕ್ಷ್ಮ ಇಲ್ಲಿದೆ..

ಕಥೆಯಲ್ಲಿ ಹೇಳಿರುವ ಕಾರಣ ಈ ಕಥೆಗೆ ಸೂಕ್ತ ಅನಿಸಿತು ಹಾಗಾಗಿ ಬಳಸಿದ್ದೇನೆ..

ಎಲ್ಲದುದಕ್ಕಿಂತ ಹೆಚ್ಚಾಗಿ ಇದು ಕಥೆ..
ಇದನ್ನು ಓದಿ ಮುಗಿಸಿದಮೇಲೆ ಏನು ಪರಿಣಾಮ.. ಆಗಬೇಕಿತ್ತೋ.. ಅದು ಇಲ್ಲಿ ಯಶಸ್ವಿಯಾಗಿದೆ ಅಂತ ಅಂದುಕೊಂಡಿದ್ದೇನೆ..

ಏನಾದರೂ ತಾಂತ್ರಿಕವಾಗಿ ತಪ್ಪಿದ್ದಲ್ಲಿ ಬೇಸರಿಸ ಬೇಡಿ...
ಕ್ಷಮಿಸಿ ಬಿಡಿ..

ಹೊಸಬ ಬರೆದ ಕಥೆಯಾದರೂ ಬೆನ್ನು ತಟ್ಟಿದ್ದೀರಲ್ಲ..
ನಿಮಗೆಲ್ಲ ನಾನು ಕೃತಜ್ಞನಾಗಿದ್ದೇನೆ.....

ಸೀತಾರಾಮ್ ಸರ್ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಪಾಲ...

ಸುಮಾರು ೬ ವರ್ಷಗಳ ಹಿಂದೆ ನನ್ನ ಬಳಿ ಒಬ್ಬ ಮೇಸ್ತ್ರಿ ಕೆಲಸ ಮಡುತ್ತಿದ್ದ..
ಅವನಿಗೆ ಇಂಥಹ ಕಿವಿಯಿರದ..
ಹಾರ್ಟಿನಲ್ಲಿ ತೂತು ಇರುವ ಮಗು ಹುಟ್ಟಿತ್ತು...
ಆ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲೇ ಬೇಕಿತ್ತು...

ಮಣಿಪಾಲ್ ಹಾರ್ಟ್ ಫೌಂಡೇಷನ್ ಗೆ ಕರೆದು ಕೊಂಡು ಹೋಗಿದ್ದೆ..

ಹಣದ ಕೊರತೆಯನ್ನು ಮಣಿಪಾಲ್ ಆಸ್ಪತ್ರೆಯವರೇ ನಿವಾರಿಸಿದರು..
ಎಮ್.ಜಿ. ರೋಡಿನಲ್ಲಿರುವ ಈಶ್ವರ ಮೂರ್ತಿಗೆ ನೀವೆಲ್ಲ ಕಾಣಿಕೆ ಹಾಕುತ್ತಿದ್ದರೆ ..
ದಯವಿಟ್ಟು ಇನ್ನಷ್ಟು ಹಾಕಿ...
ಯಾಕೆಂದರೆ ಅಲ್ಲಿ ಸಂಗ್ರವಾಗುವ ಕಾಣಿಕೆಗಳು ಇಂಥಹ ಹಣಕಾಸಿನ ತೊಂದರೆ ಇರುವ ರೋಗಿಗಳಿಗೆ ಕೊಡುತ್ತಾರೆ..

ನಾನು ಹೇಳಹೊರಟಿರುವದು ಇದಲ್ಲ...

ನಾನು ಅಲ್ಲಿ ಕಾರಣ ವಿಚಾರಿಸಿದಾಗ..
"ಸೋಕು(ಇನ್‍ಪೆಕ್ಷನ್)ಗೆ ಇದೇ.. ಕಾರಣ ಕೊಟ್ಟಿದ್ದರು..."

ನನಗೆ ತಿಳಿದ ಹಾಗೆ..
ಬಸಿರು ಇರುವಾಗ..
೧) ಅಲ್ಕೋಹಾಲ್, ಸ್ಮೋಕಿಂಗ್ ಮಾಡಿದರೆ..
೨)ಗಂಡ, ಅಥವಾ ಹೆಂಡತಿ ಬೇರೆ ಲೈಂಗಿಕ ಸಂಪರ್ಕದಿಂದ..

ಇನ್ನೂ ಹಲವಾರು ಕಾರಣ ಹೇಳೀದ್ದರು..

ಪ್ರೋತ್ಸಾಹಕ್ಕಾಗಿ...
ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.. ಪಾಲ...

PARAANJAPE K.N. said...

ನಿಮ್ಮ ಎ೦ದಿನ ಶೈಲಿಯಲ್ಲಿ ಮನೋಸಹಜ ಕಾಮನೆಗಳು, ದ್ವ೦ದ್ವಗಳು ತುಮುಲಗಳು ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿ ನೀತಿ ಎ೦ಬ ಒಗ್ಗರಣೆಯೊ೦ದಿಗೆ ಉಣಬಡಿಸಿದ್ದೀರಿ. ಚೆನ್ನಾಗಿದೆ.

Shashi jois said...

ಪ್ರಕಾಶ್ ,
ಕತೆ ಸ್ವಲ್ಪ ದೊಡ್ಡದಾದರೂ ಚೆನ್ನಾಗಿ ಓದಿಸಿಕೊಂಡು ಹೋಗಿದೆ..ನಿಮ್ಮ ಕತೆಯ ಸಂದೇಶ ಒಳ್ಳೆ ಅರ್ಥಪೂರ್ಣ ವಾಗಿತ್ತು..ನಿಜ ದಾಂಪತ್ಯದಲ್ಲಿ ಇಬ್ಬರ ನಡುವೆ ಅನ್ಯೋನ್ಯತೆಇರಬೇಕು ಆಲ್ವಾ!! .ಚಂದ ಕ್ಷಣಿಕ .ಸಂಗಾತಿಯ ಗುಣ -ನಡತೆಯೇ ಮುಖ್ಯ ಆಲ್ವಾ ...

Umesh Balikai said...

ಪ್ರಕಾಶ್ ಸರ್,

ಕಥೆ ತುಂಬಾ ಚೆನ್ನಾಗಿದೆ.. ನೀತಿಯುಕ್ತ ಕಥೆ.. ಮನುಷ್ಯನ ಬಾಳಿಗೆ ಅಂದ ಚಂದದ ಅಗತ್ಯಕ್ಕಿಂತ ಒಳ್ಳೆಯ ಮನಸ್ಸಿನ ಅಗತ್ಯ ಜಾಸ್ತಿ ಅಂತ ತುಂಬಾ ಆಪ್ತವಾಗಿ ಕಥೆಯಲ್ಲಿ ತೋರಿಸಿದ್ದೀರಿ.. ಓದುತ್ತಾ ಹೋದಂತೆ ಎಲ್ಲಿ ಬೇಗ ಮುಗಿದು ಹೋಗಿಬಿಡುತ್ತೋ ಅಂತ ನಿಧಾನವಾಗಿ ಓದಿದೆ.. ಇಂಥ ನೀತಿ ಕಥೆಗಳು ಇನ್ನಷ್ಟು ನಿಮ್ಮಿಂದ ಬರಲಿ.. ಅವೆಲ್ಲವುಗಳ ಸಂಕಲನವೂ ಸಹ ಇನ್ನೊಂದು ಸುಂದರ ಪುಸ್ತಕ ರೂಪದಲ್ಲಿ ನಮಗೆಲ್ಲ ದೊರಕುವಂತಾಗಲಿ.

ಧನ್ಯವಾದಗಳು,
ಉಮೇಶ್

ಜಲನಯನ said...

ಮನಸು ಮರ್ಕಟ ಅನ್ನೋದು ಇದಕ್ಕೇ...ಆದರೆ ಬಾಂಧವ್ಯ ಬಂಧಗಳನ್ನು ಕಿತ್ತು ಹುಚ್ಚೆದ್ದು ಹೋಗುವಂತೆ ಮಾಡುವ ಧೈರ್ಯ ಆ ಮನದ ಮನುವಿಗಿರೊಲ್ಲ ಅನ್ನೋದು ಅಷ್ಟೇ ಸತ್ಯ ಮತ್ತು ಸ್ವಾಭಾವಿಕ ಕೂಡ...ಪ್ರಕಾಶ್ ಕಥೆಯಲ್ಲಿ ಭಾವನೆಯನ್ನು ಯಾವುದೇ ಮುಜುಗರವಿಲ್ಲದೇ ಪ್ರಚುರಗೊಳಿಸಿದ್ದೀರಿ...ಹಾಗೆಯೇ ..ಸಂಭಾಷಣೆಯುಕ್ತ ನಿಮ್ಮ ಲೇಖನ ಶೈಲಿ ಸ್ವಾಭಾವಿಕವಾಗಿ ಓದಿಸಿಕೊಂಡು ಹೋಗುತ್ತೆ..ಅಂತರಂಗದಲ್ಲಿ ಮನಸಿನ ಮಂಡಿಗೆಗೆ ಕಡಿವಾಣವಿರದು ಅನ್ನೋದನ್ನ ಜಗ್ಗೇಶ್ ಚಿತ್ರ ಜಿತೇಂದ್ರದಲ್ಲಿ ವಿಭಿನ್ನ ಶೈಲಿಯಲ್ಲಿ ಪ್ರಸ್ತುತವಾಗಿದೆ ಅದನ್ನು ಬಹಿರಂಗಗೊಳಿಸಿದರೆ ಇಲ್ಲ ಹುಚ್ಚ-ಹುಚ್ಚಿ ಅಂತಾರೆ ಇಲ್ಲ ನಾಚಿಕೆಯಿಲ್ಲದ ಲಂಪಟತನ ಎನ್ನುತ್ತಾರೆ...
ನಮ್ಮಲ್ಲಿ ಇದೇ ಕಾರಣಕ್ಕೆ ಬಂಧಗಳಿಗೆ ಬಾಂಧವ್ಯಗಳಿಗೆ ಮಹತ್ವವಿದೆ..ಕುರೂಪಿಯಾದರೂ ಗಂಡನಲ್ಲಿ ಸದಾ ಇರ್ಬೇಕಾದ ಗುಣ ನೋಡಿದ್ದು ನಿಮ್ಮ ಕಥಾನಾಯಕಿ..ಇದೇ ಬಂಧಗಳ ಕಾರಣ ಅಲ್ಲವೇ...??
ಬಹಳ ಚನ್ನಾಗಿದೆ...ಕಥೆ...ಜೈ..ಹೋ...

BHASKAR BHAT said...

hello sirjeee... i like your blogs/stories because they are good... moreover, I appreciate you for the fact that you have so much time in 24 hours of a day!!! It is very easy to complain about not having enough time, people should follow your blogs and also your work ethics...
sorry i din't have kannada typing enable on my computer:) keep going...

Pratima said...

Prakashanna,

Kathe chennagi odisikondu hoyitu. Neevu eegina hudugiyara mansthitiyannu bahaLa chennagi artha maDikonDiddeeri. Ee katheyannu oduttiddare nanage eegina havyaka hudugiyara bedikegaLoo, "nakhraa"galoo nenapaadavu.."Appayya yange beku chandaagiddava..oLLe huddeliddu naukari maaDava.." (http://www.youtube.com/watch?v=pNGeiaZseMk)

Ittigecement said...

ಮನಸು...

ಈ ಹಿಂದೆ "ದೃಷ್ಟಿ.. ಭಾವ" ಅಂತ ಒಂದು ಕಥೆ ಬರೆದಿದ್ದೆ..
ಅದರಲ್ಲಿ ಗಂಡಿನ ತುಮಲಗಲನ್ನು ಚಿತ್ರಿಸಿದ್ದೆ...

ನನ್ನ ಪ್ರಕಾರ... ಇಂಥಹ ಸಂದರ್ಭಗಳಲ್ಲಿ ಗಂಡಿಗಿಂತ.. ಹೆಣ್ಣು ಸಂಯಮ ಹೊದಿರುತ್ತಾಳೆ..
ದಾರಿ ತಪ್ಪುವ ಸಂದರ್ಭ ಕಡಿಮೆ ಅಂತ ನನ್ನ ಭಾವನೆ..

ಹಾಗಾಗಿ ಈ ಕಥೆಯಲ್ಲಿ ಹೆಣ್ಣು ದಾರಿ ತಪ್ಪುವದಿಲ್ಲ...
ತನ್ನವನಲ್ಲೇ "ಪ್ರೀತಿ., ಪ್ರೇಮವನ್ನು" ಕಂಡುಕೊಳ್ಳುತ್ತಾಳೆ...

ನನ್ನ ಗೆಳೆಯರು ಇಲ್ಲಿ ಒಂದು ವಿಚಿತ್ರವನ್ನು ಗಮನಿಸಿದ್ದಾರೆ...
ಈ ಕಥೆಗೆ ..
ಹೆಣ್ಣುಮಕ್ಕಳ ಪ್ರತಿಕ್ರಿಯೆ ಕಡಿಮೆ ಬರುತ್ತಿದೆ !!

ಮನಸು ಮೇಡಮ್ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸೀತಾರಾಮ. ಕೆ. / SITARAM.K said...

ಪ್ರಕಾಶರವರೇ,
ಕಥೆ ಏನು ಹೇಳಬೇಕೆ೦ದು ರಚಿತವಾಗಿದೆಯೋ ಅದನ್ನು ಸಮಗ್ರವಾಗಿ ಸ್ಫಷ್ಟವಾಗಿ ಮಾರ್ಮಿಕವಾಗಿ ಮನೋಜ್ಞ್ವಾಗಿ ಓದುಗರ ಮನದಾಳದಲ್ಲಿ ಉಳಿಯುವ೦ತೆ ಹೇಳುವದರಲ್ಲಿ ತನ್ನ ಕೆಲಸ್ ಸ೦ಪೂರ್ಣ ಪೂರೈಸಿದೆ. ಬಾಹ್ಯ ಸೌ೦ದರ್ಯಪ್ರೇಮ ಹಾಗೂ ಹಣಹೊ೦ದಿದವರ ಸುತ್ತ ಬದುಕು ತಿರುಗುತ್ತಾ ಗುಣಗಳು ಕಡೆಗಣಿಸಿ ಸ೦ಭ೦ಧಗಳು ಬೆಳೆಯುವಾಗ ಕಥೆಯಲ್ಲಿನ ಆಶಯ ಸಮಾಜದ ಸ್ವಾಸ್ಥ್ಯಕ್ಕೆ ಅವಶ್ಯಕತೆಯಾಗಿದೆ.
ಮಗುವಿನ ಅ೦ಗವಿಕಲತೆಯ ಬಗೆಯಲ್ಲಿನ ನನ್ನ ಪ್ರಶ್ನೇ ಕೇವಲ ಕುತೂಹಲದ್ದಾಗಿದ್ದು ಯಾವದೇ ತಾ೦ತ್ರಿಕ ದೃಷ್ಟಿಯಿ೦ದ ಅಲ್ಲ. ತಾವು ಅನ್ಯಥಾ ಭಾವಿಸಬಾರದು. ತಮ್ಮ ಸ್ಪಷ್ಟನೆ ಹಾಗೂ ಬೇರೆ ಬೇರೆ ಪ್ರತಿಕ್ರಿಯೆಗೆ ತಮ್ಮ ಮರು ಪ್ರತಿಕ್ರಿಯೆಯಲ್ಲಿ ಒ೦ದು ಸಮಗ್ರ ಕಾವ್ಯಾದ ಹರಿವು ತಮ್ಮ ಬದುಕಿನ ಅಪಾರ ಅನುಭವದ ಸ೦ಗ್ರಹವೇ ಹರಿದಿದೆ. ತಮ್ಮ ಕಥೆ ಕಾವ್ಯಾ ಅದ್ಭುತ್ ಆಮೇಲೆ ಅದಕ್ಕೆ ಪೂರಕವಾಗಿ ಬರುವ ಮರುಪ್ರತಿಕ್ರಿಯೆಗಳು ಅತ್ಯದ್ಭುತ!
ಧನ್ಯವಾದಗಳು. ತಾವೂ ಸಾಹಿತ್ಯಕ್ಕೆ ಹೊಸಬರಲ್ಲ! ಹಾ ತಮ್ಮ ಸಾಹಿತ್ಯ ಹೊಸ ಬಗೆಯದು! ವಿಭಿನ್ನದ್ದು! ಎಲ್ಲ ಓದುಗರಿಗೂ ಹೆಚ್ಚಿನದಾಗಿ ಸಾಮಾನ್ಯ ಓದುಗರಿಗೆ ತು೦ಬಾ ಪ್ರೀತಿಯ ಪ್ರಕಾರದ್ದು! ಹೀಗಾಗಿ ತಮ್ಮನ್ನು ಹೊಸಬರೆ೦ದು ನಮಗೆ ಮುಜುಗುರ ಉ೦ಟು ಮಾಡಬೇಡಿ! ತಮ್ಮ ಸಾಹಿತ್ಯ ಓದಿ ನಮಗನಿಸಿದ ಸ೦ತಸವನ್ನು ಸಮಗ್ರವಾಗಿ ಹೇಳಲಾಗದೇ ಬರೆದ ಎರಡು ಸಾಲುಗಳನ್ನು ತಾವೂ ಪ್ರೋತ್ಸಾಹ ಅ೦ದುಕೊಳ್ಳುವದು ತಮ್ಮ ದೊಡ್ಡತನ. ಆದರೆ ನಾವು ಹೇಳಿರುವದು " less than- what you deserve & what we wanted to say"
Thanks
with love

Sathya said...

ಅದ್ಭುತವಾದ ತುಂಬಾ ಚೆಂದದ ಭಾವನಾತ್ಮಕ ಕಥೆ....ಪ್ರಕಾಶಣ್ಣ.... ತುಂಬಾ ಇಷ್ಟವಾಯ್ತು. Great n thanks for Awesome story.

Veena DhanuGowda said...

ನಮಸ್ಕಾರ ಪ್ರಕಾಶಣ್ಣ,

ತುಂಬ ಅದ್ಭುತವಾದ moral story
ivattina jagathige intha katte gala avshykathe thumbbba ide prakashanna ....

small request from my side
i expect same kind of moral stories more in your blog

ಧನ್ಯವಾದಗಳು :)

ಚಿತ್ರಾ said...

ಪ್ರಕಾಶಣ್ಣ ,
ಚಂದದ ಕಥೆ. ಸುಂದರ ನಿರೂಪಣೆ ,ಎಂದಿನಂತೆ ಸುಲಲಿತವಾದ ಶೈಲಿ .
ನೋಡಲು ಚಂದವಿಲ್ಲ ಎಂದು ಇಷ್ಟವಿಲ್ಲದೆ ಸಂಸಾರ ಮಾಡುತ್ತಾ , ಹೊರ ಆಕರ್ಷಣೆಯತ್ತ ವಾಲಿದ ಮನಸನ್ನು ನೇರಗೊಳಿಸಲು ಇಂಥಾದ್ದೊಂದು ಕಾರಣ ಬೇಕಾಯಿತು !
ರಸಿಕ ಮನಸ್ಸನ್ನು ಬಯಸಿದವಳು ಅತಿ ರಸಿಕತೆಯ ಪರಿಣಾಮದ ಬಗ್ಗೆ ಯೋಚಿಸಲಿಲ್ಲ !

ಬಾಲು said...

ಹ್ಞೂ, ಸರಿ ಇದೆ.
ಈಗಿನ ಹದಿ ಹರೆಯದವರ ಪ್ರಕಾರ ಸುಂದರವದವರು ಮಾತ್ರ ಮದುವೆಯಾಗಲು ಅರ್ಹತೆ ಹೊಂದಿರುವವರು! ಹಾಗಾದ್ರೆ ಉಳಿದವರು ಏನು ಮಾಡಬೇಕು?
ಕಥೆ ನ ಪತ್ರಿಕೆಗಳಿಗೆ ಕಳ್ಸಿ. :)

Guruprasad said...

ಪ್ರಕಾಶಣ್ಣ...
ತುಂಬಾ ಚೆಂದದ,, ಅದ್ಬುತ ನಿರೂಪಣೆಯ , ವಾಸ್ತವದ ಕತೆ ಯನ್ನು,,, ಎಲ್ಲರಿಗೂ ಇಷ್ಟ ಆಗುವ ರೀತಿ ನಲ್ಲಿ ಹೇಳಿದ್ದಿರ, ಎಂದಿನಂತೆ ನಿಮ ಬರಹದ ಶೈಲಿ ತುಂಬಾ ಇಷ್ಟ ಆಯಿತು..... ಒಳ್ಳೆಯ ಬರಹಕ್ಕೆ ಧನ್ಯವಾದಗಳು........
ಹೌದು ಇವಗಿನ ಯುವ ಪೀಳಿಗೆ ಬರಿ ವ್ಯಾಮೋಹ, ಆಸ್ತಿ ಅಂತಸ್ತು,,, ಅಂತಾದರ ಹಿಂದೆ ಹೋಗುತ್ತಾ ಇದೆ... ಮನುಷ್ಯತ್ವ , ಒಳ್ಳೆ ಗುಣ, ಇವುಗಳ ಕಡೆ ಗಮನವೇ ಇಲ್ಲದಂತಾಗಿದೆ...... (ಇದು ನನ್ನ ಅನುಭವದ ಮಾತು,)

Ittigecement said...

ಪಾವ್ಸ್... (ಪಾವನಾ...)

ನಮಗೆಲ್ಲರಿಗೂ ಗೊತ್ತು...
ನಾವು ಎಲ್ಲರೊಂದಿಗೂ ಸ್ವಭಾವದೊಡನೆ ಬದುಕುತ್ತೇವೆ ಅಂತ...
ಅಲ್ಲಿ...
ಪ್ರೀತಿಗಾಗಿ ಹುಡುಕಾಟ ನಡೆದಿರುತ್ತದೆ...
ಪ್ರೀತಿ ಕೊಡು...
ಪ್ರೀತಿ..
ತೆಗೆದುಕೊ...

ಅಂದರೆ..
ಇವೆಲ್ಲ ಒಂದು ರೀತಿಯ ವ್ಯವಹಾರ ಅಲ್ಲವೆ ?
ವ್ಯವಹಾರ ತಲೆಗೆ ಸಂಬಂಧಿಸಿದ್ದು...

ಏನಂತೀರಾ ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು... ಪಾವನಾ...

Ittigecement said...

ಪಿ.ಅರ್.ತುಂಬೆಮನೆ...

ಪ್ರೀತಿ.., ಪ್ರೇಮ ಇದ್ದಲ್ಲಿ...
ಸಂಶಯ ಇದ್ದೇ ಇರುತ್ತದೆ...
ಇದು ಎಲ್ಲರಿಗೂ ಗೊತ್ತು...

ಮತ್ತದೆ ತಲೆ ಕೊರೆಯುವ ವಿಚಾರ..

ಈ ಸಂಶಯ...
ವಿಶ್ವಾಸ.. ..
ಹೊಂದಾಣಿಕೆಯಿಂದ ಇರಬೇಕು.....
ಎಲ್ಲವೂ ಬುದ್ಧಿಗೆ ..ತಲೆಗೆ ಸಂಬಂಧಪಟ್ಟದ್ದು..

ಹೃದಯಕ್ಕಲ್ಲ...

ಇಂಥಹ ಸಂದರ್ಭದಲ್ಲಿ ಹೃದಯವೊಂದೇ ಇದ್ದಿದ್ದರೆ..
ವಿಚಾರ ಮಾಡುವ ಪ್ರಮೆಯವೇ ಬರುತ್ತಿರಲಿಲ್ಲ..

ಅಲ್ಲವಾ ?

ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

Ittigecement said...

ರವಿಕಾಂತ್ ಗೋರೆ....

ಹೆಣ್ಣಿಗೆ ಇರುವ ತಾಳ್ಮೆ...
ಸಂಯಮ ಗಂಡಿಗೆ ಇರುವದಿಲ್ಲ...

ಪ್ರೀತಿ.. ಪ್ರೇಮಕ್ಕೆ ಮೊದಲಿಗೆ ನ್ಯಾಯ ಸಲ್ಲಿಸುವಳು ಹೆಣ್ಣು..

ತನ್ನ ಬದುಕಿನ ಬಗೆಗೆ..
ಎಷ್ಟೇ ದೂರುಗಳಿದ್ದರೂ...
ಹೊರ ಜಗತ್ತಿಗೆ ತೋರಿಸದೆ...
ಎಲ್ಲ ನೋವುಗಳನ್ನು ನುಂಗಿ..
ನಗು ಮುಖದೊಡನೆ ಬದುಕುವ ಸಾಮರ್ಥ್ಯ ಹೆಣ್ಣಿಗೆ..
ಪ್ರಕೃತಿದತ್ತವಾಗಿದೆ...

ಅಲ್ಲವೆ ?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ಶ್ರೀ...

ಸಂಯಮ ತಪ್ಪಿದಾಗ...
ಆ ವ್ಯಕ್ತಿ ತನ್ನ
ಜೊತೆಗಾತಿ(ರ)ಗಲ್ಲದೆ...
ತನಗೂ...
ತನ್ನ ಬದುಕಿಗೂ...
ಮೋಸ ಮಾಡಿಕೊಂಡಿರುತ್ತಾನೆ (ಳೆ)

ಇದನ್ನು ..
ಸರಿಪಡಿಸಿ.. ಮತ್ತೆ ಸರಿದಾರಿಗೆ ತರುವದು ಕಷ್ಟ..

ಹಾಗಾಗಿ ನಮ್ಮ ಪೂರ್ವಜರು..
ತಾಳ್ಮೆ, ಸಂಯಮಕ್ಕೆ
ಒತ್ತು ನೀಡಿದ್ದರು...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು.. ಶ್ರೀ...

Ittigecement said...

ಸಾಗರದಾಚೆಯ ಇಂಚರ...

ಡಾ. ಬಿ.ವಿ.ರಾಜರಾಮರ "ಮೈಸೂರು ಮಲ್ಲಿಗೆ " ನಾಟಕ ನೋಡಿ...
ಅಲ್ಲಿ ಇಳಿವಯಸ್ಸಿನ
ಪಕ್ವ ಪ್ರೇಮದ ಸಂದರ್ಭಗಳು...!
ನಿಜಕ್ಕೂ ನಾನಂತೂ ಮಾರು ಹೋಗಿದ್ದೇನೆ.. !

ಅಂಥಹ ಪರಸ್ಪರ ನಂಬಿಕೆ.. ವಿಶ್ವಾಸದ ಬದುಕು..
ನಾವು ನಮ್ಮ ಹಿರಿಯರಲ್ಲಿ ಇವತ್ತಿಗೂ ಕಾಣಬಹುದು...

ಹಾಗಾಗಿ

ಹೊಂದಿಕೊಂಡು ಬಾಳುವದರಲ್ಲೇ ಸುಖವಿದೆ....

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Unknown said...

ಕಥೆಯ ಸಂದೇಶ ತುಂಬಾ ಚೆನಾಗಿದ್ದು..........ಪ್ರಕಾಶ ಅಣ್ಣ

ವನಿತಾ / Vanitha said...

ಪ್ರಕಾಶಣ್ಣ, ಕಥೆಯ ಮೂಲಕ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ..
ಆಮೇಲೆ ನಿಮ್ಮ ಕಾಮೆಂಟ್ಸ್ ಓದ್ತಾ ಇದ್ದೆ, ಹೇಳೋಣ ಅನ್ನಿಸ್ತು.ಇಲ್ಲಿ ನನ್ನ supervisor, colleague ಇಬ್ಬರೂ ನೀಗ್ರೋಗಳು.ಶ್ರೇಯಳ ಫ್ರೆಂಡ್ಸ್ ಗಳೂ ಕೂಡ ನೀಗ್ರೋಗಳು.ಅವರೆಲ್ಲರೂ ಇಲ್ಲಿರುವ ಕೆಲವು ಭಾರತೀಯರಿಗಿಂತ ಹೆಚ್ಚು ಸ್ನೇಹ ಪರರು.

shivu.k said...

ಸರ್,

ಹಿರಿಯರ ಮಾತುಗಳು ಮೊದಲು ಕಹಿ ಎನಿಸಿದರೂ, ಅಮೇಲೆ ಅದೇ ಬದುಕಿಗೆ ಸವಿಜೇನು ಅನ್ನಿಸುವುದು ಬದುಕು ಚಲಿಸಿದಾಗ, ನಮ್ಮ ಹೊರ ಆಕರ್ಷಣೆಯನ್ನು ಅದುಮಿಟ್ಟುಕೊಂಡುಬಿಟ್ಟರೆ ಬದುಕಿನಲ್ಲಿ ಆಗುವ ಆನಾಹುತಗಳನ್ನು ತಪ್ಪಿಸಬಹುದು. ಒಂದು ತಿಳಿವಳಿಕೆಯ ಕತೆಯನ್ನು ಓದಿ ಖುಷಿಯಾಯ್ತು..

Kishan said...

Nice weaving of incidents and the flow of thoughts. Describing the story being a 'woman' is commendable! Presentation of soliloquy by a shaky mind is simply superb.

Its just that I felt ending was slightly rushed... could have been ended in a little more slow pace?
---------
Sorry, was not able to visit/comment your blogs as often as I would have liked to.

Unknown said...

ಬಾಹ್ಯ ಆಕರ್ಷಣೆ ಮದುವೆಯಾದ ಒಂದೆರಡು ವರ್ಷ ಅಷ್ಟೇ....ಇದನ್ನ ಕತೆಯಲ್ಲಿ ಚೆನ್ನಾಗಿ ಮೂಡಿಸಿದ್ದೀರಿ.

Ittigecement said...

ಅನುರಾಗ (ರಶ್ಮೀ..)

ಈ ಕಥೆ ನನ್ನ ಸ್ನೇಹಿತನ ತಂಗಿಯೊಬ್ಬಳ ಜೀವನದಲ್ಲಿ ನಡೆದ ಘಟನೆಯಿಂದ ಪ್ರೇರೇಪಿತ..
ತನ್ನ ಗಂಡನ ಮೇಲೆ ಪ್ರೀತಿ ಹುಟ್ಟಲು...
ತನಗಿಷ್ಟ ಸ್ವಭಾವದ ಗಂಡು ಸರಿಯಿಲ್ಲ ಎಂದಾಗ ಪ್ರೀತಿ ಹುಟ್ಟಿತೇ..?
ಇಬ್ಬರ ನಡುವಿನ ಸ್ವಭಾವದ ಹೋಲಿಕೆಯಿಂದಾಗಿ ಪ್ರೀತಿ ಹುಟ್ಟಿತೆ ?..
ಪರಸ್ಪರ...
ಅವಲಂಬನೆ..
ಅಗತ್ಯ..ಅವಶ್ಯಕತೆ..
ಆದರ..
ಹೋಲಿಕೆಯಿಂದಲೂ ಪ್ರೀತಿ ಹುಟ್ಟುತ್ತದೆ ಎಂದಾಯಿತು...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಮಂಜುನಾಥ....

ಮೊದಲೊಂದು ಕಾಲವಿತ್ತು...
ಅಪ್ಪ, ಅಮ್ಮ ನೋಡಿ ಮದುವೆ ನಿಶ್ಚಿತಾರ್ಥ ಮಾಡುತ್ತಿದ್ದರು..
ನನಗೆ ಪರಿಚಯದ ಹಿರಿಯರೊಬ್ಬರು.. ಮದುವೆಯ..
ದಾಂಪತ್ಯದ ಹೊಂದಾಣಿಕೆಯ ಬಗೆಗೆ ಹೇಳುತ್ತಿದ್ದರು...

"ಮದುವೆ ನಂತರ ಹೊಂದಾಣಿಕೆಯೇನು...
ಎರಡು ಮೂರು ಹಡೆದ ಮೇಲೆ ತನ್ನಿಂದ ತಾನೆ ..
ಗಂಡ ಹೆಂಡತಿಯರ ಮಧ್ಯೆ ಹೊಂದಾಣಿಕೆ ಆಗಿಯೇ ಬಿಡುತ್ತದೆ..."

ಆದರೆ ಇಂದು ಹಾಗಿಲ್ಲ...
ಇಂದು ನಮ್ಮ ನಿರ್ಧಾರಗಳು ಮಾಧ್ಯಮ ಪ್ರೇರಿತ...

ನೀವು ಹೇಳೀದ ಮಾತು ಬಹಳ ಇಷ್ಟವಾಯಿತು..

ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾ ಇರಿ.....

Ittigecement said...

ಅಲೇ ಮಾರಿ...

ಪ್ರೀತಿ ಹುಟ್ಟಿದ ಬಗೆ...
ಪ್ರೀತಿ ಇಲ್ಲದ ಮೇಲೆ...

ಎಲ್ಲವೂ ಭಾವನಾತ್ಮಕ...

ಹುಟ್ಟು.., ಸಾವಿನ ಹಾಗೆ..

ಅಲೇಮಾರಿಯವರೆ ...
ನೀವು ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ಶರತ್...

ಪ್ರೀತಿಯ ಬಗೆಗೆ
ನಮ್ಮ ಬದ್ಧತೆಗಿಂತ..
ನಮ್ಮ ನಿರೀಕ್ಷೆಗಳೇ ಜಾಸ್ತಿ...

ಹಾಗಾಗಿ ನಿರಾಸೆ..ದುಃಖ ..

ಪ್ರೀತಿಯನ್ನು ಜತನವಾಗಿ ..
ಮಕ್ಕಳ ಹಾಗೆ ಪೋಷಿಸ ಬೇಕು..
ನಿರೀಕ್ಷೆಯನ್ನು ಇಟ್ಟುಕೊಳ್ಳದೆ..
ದೂರದಿಂದಲೇ ಸಂತೋಷ ಪಡಬೇಕು..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ರಾಘವೇಂದ್ರರವರೆ...

ಪ್ರೀತಿ, ಪ್ರೇಮ..
ಅಂದಚಂದವಿಲ್ಲದಿದ್ದರೂ...
ಒಳ್ಳೆಯ ಸ್ವಭಾವದ ಕಾರಣಕ್ಕೂ ಹುಟ್ಟುತ್ತದೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಬೆಂದ ಕಾಳೂರು (ರಾಧಿಕ )

ನನ್ನ ಬ್ಲಾಗಿಗೆ ಸ್ವಾಗತ...

ಬಸುರಿ ಹೆಂಡತಿಯ ಗಂಡ...
ಚಂದದ ಹೆಣ್ಣಿಗಾಗಿ ಹಲ್ಲುಗಿಂಜುವದು..
ಅವನ ಕಾಮುಕತೆಯ ಸಂಕೇತ...
ಅಲ್ಲಿ ಇವಳ ..ಇಷ್ಟವಿಲ್ಲದ ಮದುವೆಗೆ ಹೊಂದಿಕೊಳ್ಳುವ ಸಂದರ್ಭ...
ತೊಳಲಾಟ.. ಮುಖ್ಯವೆಂದು ಭಾವಿಸಿದೆ...

ನಾನು ಹೇಳಿದ ಕಾರಣವೂ ಒಂದು..

ಏಡ್ಸ್ ರೋಗದ ಕಾರಣ ಕೊಡಲು ಮೊದಲು ಇಷ್ಟಪಟ್ಟಿದ್ದೆ..

ನೀವು ಹೇಳಿದ ಹಾಗೆ ಸ್ವಲ್ಪ ತಾಂತ್ರಿಕ ದೋಷವಿದೆ ಎಂದು ನನಗೂ ಅನ್ನಿಸುತ್ತಿದೆ...


ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ಪರಾಂಜಪೆಯವರೆ...

ದಿನಗಳು ಉರುಳಿದ ಹಾಗೆ..
ಪ್ರೀತಿ..ಪ್ರೇಮಗಳು ಹಳಸ ಬಹುದಾ ?
ಅಥವಾ ಅಲ್ಲೇ .. ಹೊಸತನ ಹುಡುಕಿಕೊಳ್ಳುವ ಬಗೆ ಹೇಗೆ ?
ಇದರ ಬಗೆಗೂ ಒಂದು ಕಥೆ ತಲೆಯಲ್ಲಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಶಶಿಯವರೆ...

ಕ್ಷಣಿಕ ಸುಖದ ಆಸೆಯ ತಪ್ಪು ಅರಿಯಲು...
ಒಂದು ಘಟನೆ ..
ಒಂದು ಸಂದರ್ಭ ಬೇಕಾಯಿತು...

ಒಳಗಿರುವ ಅಂತರಾತ್ಮದ..
ವಿವೇಕವನ್ನು ಕೇಳಿಸಿಕೊಂಡರೆ ಸಾಕಿತ್ತಲ್ಲವೆ ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು

Ittigecement said...

ಉಮೇಶ್ ಬಾಳಿಕಾಯಿಯವರೆ...

ಬಹಳ ದಿನಗಳ ನಂತರ ನಿಮ್ಮ ದರ್ಶನ !!
ನಿಮ್ಮ ಬ್ಲಾಗನ್ನು ನಾವೆಲ್ಲ ಬಹಳ ಮಿಸ್ ಮಾಡಿಕೊಂಡಿದ್ದೇವೆ...
ದಯವಿಟ್ಟು ಮುಂದುವರೆಸಿ...

ಒಂದು ಸ್ವಭಾವದೊಡನೆ...
ಬದುಕುವಾಗ ಹೊಂದಾಣಿಕೆಯೇ ಮಹತ್ವವಾಗುತ್ತದೆ..

ಬಹಳ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Nisha said...

ತುಂಬಾ ಚೆಂದದ ನೀತಿಯುಕ್ತ ಕಥೆ.

Medically, maguvina dusthithige karana, 1) hereditary 2) STD (sexually transmitted diseases).

Sexually transmitted diseases can cause devastating consequences to the baby that include: stillbirth, low birth weight, an eye infection called conjunctivitis, pneumonia,
an infection in the blood called neonatal sepsis, neurologic damage such as brain damage or motor function disorder, blindness, deafness, or other congenital abnormalities, acute hepatitis
meningitis, chronic liver disease, cirrhosis.

Transmission of sexually transmitted diseases from the pregnant women to her fetus, newborn, or infant can occur before, during, or after birth.

ಗಿರೀಶ ರಾಜನಾಳ said...

ಹಾಯ್ ಪ್ರಕಾಶ..
ನಿಮ್ಮ ಇಟ್ಟಿಗೆ ಸಿಮೆಂಟಿಗೆ ಇದು ನನ್ನ ಮೊದಲ ಭೇಟಿ ಅನ್ನಿಸುತ್ತದೆ...
ಫುಲ್ ಫ್ಲ್ಯಾಟ್....

Anonymous said...

ಪ್ರಕಾಶ್, ಇದೇನು ಚೆಂದದ ಕಥೆ ಬರೆದಿದ್ದೀರ...ಸಕತ್ತಾಗಿದೆ..
ನನ್ನ ಅಪ್ಪ ಒಂದು ಮದ್ವೆ ಆಗ್ಬೇಕಾದ್ರೆ ಯಾರ್ಯಾರು ಏನೇನು ನೋಡ್ತಾರೆ ಅಂತ ಹೇಳ್ತಿದ್ರು.. "ಹುಡುಗಿಯ ಅಪ್ಪ ಹುಡುಗನ ಮನೆತನ ನೋಡ್ತಾರಂತೆ; ಅಮ್ಮ ಅವನು ಮಗಳನ್ನ ಸುಖವಾಗಿ ಇಟ್ಕೊಳ್ತಾನ ಅಂತ ನೋಡ್ತಾಳಂತೆ; ಬಂಧುಗಳು ಊಟ ಉಪಚಾರ ಚೆನ್ನಗಿತ್ತ ಅಂತ ನೋಡ್ತಾರಂತೆ; ಅದೇ ಹುಡುಗಿ ಹುಡುಗ ಸುಂದರವಾಗಿದ್ದಾನ ಅಂತ ನೋಡ್ತಾಳಂತೆ!" ಈ ಮಾತು ನಿಮ್ಮ ಕಥೆಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ! ಹೀಗೆ ಸುಂದರ ಕಥೆಗಳ ಗುಚ್ಛ ನಿಮ್ಮಿಂದ ನಮಗೆ ಸಿಗುತ್ತಿರಲಿ ಅಂತ ಹಾರೈಸುತ್ತೇನೆ!

ಶಿವಪ್ರಕಾಶ್ said...

Super story prakashanna :)

mcs.shetty said...

hello ..dir..

gud afternun..
today first time i read ur blog..

all are excellent t opics..
But i learnt a lesson from this topic..

thank u so much for the "prema akarshane agatya...."

daari thappodralli sariyaa darinat thorisi kotoddoeera... hEge thankx helbekantha gottagthilla...

aadru thumbu hrudyada kruthajnathegaLu..

© ಹರೀಶ್ said...

ಪ್ರಕಾಶ್ ಸರ್ ನೀವು ಹೆಣೆದಿರುವ ಕತೆ ತುಂಬಾ ಚನ್ನಾಗಿದೆ.
ನಿಮ್ಮ ಸ್ನೇಹಿತನ ತಂಗಿಯ ಬಾಳಲ್ಲಿ ನಡೆದಿರುವುದನ್ನ ಕತೆಯ ರೂಪಕ್ಕೆ ತಂದು ಅದರಲ್ಲಿ ನಾವು ತಿಳಿದುಕೊಳ್ಳುವುದನ್ನು ಹೇಳಿರುವುದು ತುಂಬಾನೆ ಚನ್ನಾಗಿದೆ. ಇಂದಿನ ಯುವ ಜನ ಪ್ರೀತಿಗಿಂದ ಸೌಂದರ್ಯ ಹಾಗೂ ಕಾಮಕ್ಕೆ ಮಾರು ಹೋಗುತ್ತಿದ್ದು, ವಿಪರ್ಯಾಸವೆ ಸರಿ. ಮುಂದಿನ ಪೀಳಿಗೆಯಲ್ಲಿ ಪ್ರೀತಿ-ಮಮತೆಯಲ್ಲವು ಹೇಗೆ ಉಳಿದಿರುತ್ತದೆ ಎಂಬುದನ್ನ ಕಲ್ಪನೆ ಮಾಡಿಕೊಂಡರು ಭಯವಾಗುತ್ತದೆ.

ಚಿತ್ರಾ ಸಂತೋಷ್ said...

ಸರ್ ಕಥೆ ಚೆನ್ನಾಗಿದೆ

Rajeev K V said...
This comment has been removed by the author.
Anonymous said...

ಯುವ ಮನಸ್ಸಿನ ಆಸೆಗಳನ್ನ, ಮನಸ್ಥಿತಿಯನ್ನ ಚೆಂದವಾಗಿ ಹರವಿದ್ದಿರಿ ಶುಭಾಶಯಗಳು

Unknown said...

ಪ್ರಕಾಶ್ರವರೆ,, ಎಲ್ಲರ ಜೀವನದಲ್ಲಿ.. ಈ ತರಹದ ಸಂದಿಗ್ಧ ಪರಿಸ್ತಿತಿ...ಬಂದೇ ಬರುತ್ತದೆ.. ಆದರೆ..ಅದನ್ನು ಹೇಗೆ ನಿಭಾಯಿಸುವರೆನ್ನುವದು..ಅವರವರ..ವ್ಯಕ್ತಿತ್ವದ..ಮೇಲೆ ಅವಲಂಬಿತವಾಗಿದೆ.

kavya said...

Thumba chennagide sir......... :)

veenahegde said...

ಕಥೆಯನ್ನು ಓದಿ ಪಕ್ಕದಲ್ಲಿ ಕುಳಿತಿದ್ದ ಯಜಮಾನರ ತಲೆ ನೇವರಿಸಬೇಕು ಎನಿಸಿತು.

Niharika said...

Thumba Chennagide. Difference between real and imaginary world is explained well.

ಪ್ರವೀಣ್ ಭಟ್ said...
This comment has been removed by the author.
chaithra said...

super