Thursday, May 27, 2010

ಬ್ಲಾಗಿಗರ ಮೊದಲ ಮೆಟ್ಟಿಲು.... ಇದೇ ಶನಿವಾರ..!

ಆತ್ಮೀಯ  ಬ್ಲಾಗ್  ಬಂಧುಗಳೇ...

ಇದೇ.. ಬರುವ ಶನಿವಾರ ( 29/5/2010)
ಮೇ ಫ್ಲವರ್ ಮೀಡಿಯಾ ಹೌಸಿನಲ್ಲಿ  ಒಂದು ಮೀಟಿಂಗನ್ನು ಏರ್ಪಡಿಸಲಾಗಿದೆ..
ದಯವಿಟ್ಟು ತಾವೆಲ್ಲರೂ ಸಕ್ರಿಯವಾಗಿ ಭಾಗವಹಿಸ ಬೇಕಾಗಿ ವಿನಂತಿ..

ಅಲ್ಲಿ ಶ್ರೀ. ಜಿ.ಎನ್. ಮೋಹನ್ ...
ಮತ್ತು ನಾವೆಲ್ಲರೂ ಸೇರಿ.. ಮುಂದಿನ ರೂಪು ರೆಷೆಯ ಬಗೆಗೆ  ಒಂದು ನಿರ್ಧಾರಕ್ಕೆ    ಬರೋಣ...

ದೂರದ ಊರಲ್ಲಿರುವ ಆಜಾದ್ ಉತ್ಸಾಹ..
  ನಮಗೆಲ್ಲ   ಒಂದು ಟಾನಿಕ್...

ಅಲ್ಲಿ.. ನಾವೆಲ್ಲರೂ ಸೇರಿ ...
ಇದುವರೆಗೆ  ಆದ  developments ಬಗೆಗೆ....
ಇನ್ನು ಮುಂದೆ ಆಗ ಬೇಕಾದ  ವಿಷಯಗಳ ಬಗೆಗೆ ಚರ್ಚಿಸಿ ಒಂದು ಸೂಕ್ತ ನಿರ್ಧಾರಕ್ಕೆ ಬರೋಣ....

ಬ್ಲಾಗಿಗರ ಕೂಟದ ಬಗೆಗೆ  ಬಹಳ ಉತ್ಸಾಹದ ವಾತಾವರಣ  ಕಾಣುತ್ತಾ  ಇದೆ..
ಇಂಥಹ ಒಂದು ಕೂಟದ ಬಗೆಗೆ  ಉತ್ಸಾಹ, ಪ್ರೋತ್ಸಾಹ ಸಿಗುತ್ತಾ ಇದೆ....

ನಾನು  ಸಿರ್ಸಿಗೆ ಹೋಗಿದ್ದರಿಂದ ಎಲ್ಲರ ಈಮೇಲಿಗೆ ಉತ್ತರಿಸಲಾಗಲಿಲ್ಲ....
ದಯವಿಟ್ಟು ಬೇಸರಿಸದಿರಿ...

ಬನ್ನಿ ಎಲ್ಲರೂ ಒಂದೆಡೆ ಸೇರೋಣ..

ಇದು ನಮ್ಮ  ಮೊದಲ ಮೆಟ್ಟಿಲು...

ದೂರದಲ್ಲಿರುವವರು  ತಮ್ಮ  ಸಲಹೆ ಸೂಚನೆಗಳನ್ನು ಈ ಮೇಲ್ ಮುಖಾಂತರ ತಿಳಿಸಿದ್ದಿರಿ..
ಮತ್ತೇನಾದರೂ ಇದ್ದಲ್ಲಿ ಮತ್ತೆ ಈ ಮೇಲ್ ಮಾಡಿ..

ಸಂಪರ್ಕಿಸುವ ಫೋನ್ ..
080 / 22374436  ಮೇ ಪ್ಲವರ್  ಮೀಡಿಯಾ ಹೌಸ್...

ಶನಿವಾರ ಸಾಯಂಕಾಲ ಐದು ಗಂಟೆಗೆ... (5 pm)
ಸ್ಥಳ : ಮೇಫ್ಲವರ್  ಮೀಡಿಯಾ ಹೌಸ್...

ದಯವಿಟ್ಟು ಬನ್ನಿ....

( ನಮ್ಮ ಪ್ರಿಯ ಮಿತ್ರ "ಗೌತಮ್ " ಒಂದು ವಿಷಯ  ನಮ್ಮೆಲ್ಲರ ಗಮನಕ್ಕೆ ತಂದಿದ್ದಾರೆ...
ಅದು..
ಈ ಮೊದಲು ೨೦೦೮ ರಲ್ಲಿ  "ಬ್ಲಾಗಿಗರ ಕೂಟ" ನಡೆದಿತ್ತು .. ಎಂದು..

ಪ್ರಣತಿ  ಬಳಗ ಅದನ್ನು ಯಶಸ್ವಿಯಾಗಿ ನಡೆಸಿತ್ತು..  !!
ನಾನೂ ಒಮ್ಮೆ ಅದರ ಬಗೆಗೆ ಕೇಳಿದ್ದೆ..
ವಿವರ ತಿಳಿದಿಲ್ಲವಾಗಿತ್ತು..
ಹಿಂದಿನ ಲೇಖನ ಬರೆಯುವಾಗ  ನೆನಪಾಗಲಿಲ್ಲ...

ದಯವಿಟ್ಟು  ಕ್ಷಮಿಸಿ..

ಆ  ಬ್ಲಾಗ್  ಕೂಟ ನಡೆಸಿದ ಮಿತ್ರರಿಂದ ಅವರ ಅನುಭವ ಪಡೆದು..
ಅವರ ಸಹಕಾರ...
 ಸಹಯೋಗದಿಂದ ...
ಎಲ್ಲರೂ ...
ಒಂದೆಡೆ.. ಸೇರಿ...
ಸಂಭ್ರಮಿಸೋಣ....!!
ಕಾರ್ಯಕ್ರಮವನ್ನು  ಯಶಸ್ವಿಗೊಳಿಸೋಣ...!

ನನ್ನ  ಮರೆವಿಗಾಗಿ  ಮತ್ತೊಮ್ಮೆ  " sorrryyyy..."

ದಯವಿಟ್ಟು  ಶನಿವಾರ  ಬನ್ನಿ... )

8 comments:

ಗೌತಮ್ ಹೆಗಡೆ said...

ಶನಿವಾರದ ಮೀಟಿಂಗ್ ಗೆ ಬರಲಾಗುತ್ತಿಲ್ಲ:(

ನನ್ನದೊಂದಿಷ್ಟು ಅಭಿಪ್ರಾಯಗಳಿವೆ.ಇಲ್ಲೇ ಅದನ್ನ ಹೇಳಿ ಬಿಡುತ್ತೇನೆ.

ಪುಸ್ತಕ ಬಿಡುಗಡೆ ಎಂಬ ವಿಚಾರ ಒಳ್ಳೆಯದೇ.ಆದರೆ ಅಲ್ಲಿ ಕೆಲವಷ್ಟು ತೊಡಕುಗಳು ಜಡಕುಗಳು ಇವೆ.ಪುಸ್ತಕದ ಸಲುವಾಗಿ ಬ್ಲಾಗರ್ಸ್ಗಳಿಂದ ಬಂದ ಬರಹಗಳು ಜಾಸ್ತಿ ಸಂಖ್ಯೆಯಲ್ಲಿ ಇದ್ದರೆ ಖ್ಯಾತ ಲೇಖಕರ ಮುಖೇನ ಆಯ್ಕೆ ಮಾಡಲಾಗುವುದು ಎಂಬ ಪ್ರಸ್ತಾಪ ಇದೆ..

ಖ್ಯಾತ ಲೇಖಕರು ಎಂದಾಕ್ಷಣ ಅವರ ಸಮಯದ ಅಭಾವವೂ ಖ್ಯಾತಿಗೆ ತಕ್ಕ ಹಾಗೆ ಇರುತ್ತೆ.ಲೇಖನಗಳೆಲ್ಲ ಅವರ ಬಳಿ ಹೋಗಿ ,ಎಲ್ಲರಿಂದ ಓಕೆ ಎಂದಾಗಿ ಪುಸ್ತಕವಾಗುವ ಪ್ರಕ್ರಿಯೆ ಬಹುಶಃ ಧೀರ್ಘ ಹಾಗು ಶ್ರಮದಾಯಕವಾಗುತ್ತೆ.ಆಗ ಈಗ ಅಂದುಕೊಂಡಂತೆ ಆಗಸ್ಟ್ನಲ್ಲಿ ಈ ಕಾರ್ಯಕ್ರಮ ನಡೆಯಲು ಸಾಧ್ಯವ?

ಮತ್ತೆ ಈ 'ಬರಹಗಳ ಆಯ್ಕೆ' ಎಂಬ ಮಾತು ಎಲ್ಲರನ್ನೂ ಒಗ್ಗೂಡಿಸುವಲ್ಲಿ ತಡೆಯನ್ನ ತಂದಿಡುತ್ತೆ.ಆಯ್ಕೆಯಾದ ಬರಹದ ಬ್ಲಾಗಿಗರು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ.ಉಳಿದವರು ದೂರವೇ ಉಳಿಯುತ್ತಾರೆ.ಎಷ್ಟು ವಿಶಾಲವಾಗಿ ಯೋಚಿಸುತ್ತೇವೆ ಎಂದರೂ ಕೊನೆಗೆ ನಾವು ಮನುಷ್ಯರೇ.ಸಣ್ಣ ಕೊರಗು ,ಅಸಹನೆ ಅಸಹಾಕಾರಕ್ಕೆ ಕಾರಣವಾಗುತ್ತೆ.ಹಾಗೆ ಯಾರೊಬ್ಬರು ಕಾರ್ಯಕ್ರಮಕ್ಕೆ ಬೆನ್ನು ಹಾಕಿ ಬಾರದೆ ಇದ್ದು ಬಿಟ್ಟರೂ ಕಾರ್ಯಕ್ರಮದ ಆಶಯ ನೆರವೇರಿದಂತೆ ಆಗುವುದಿಲ್ಲ.

ಎಲ್ಲೋ ದೂರ ದೂರವೇ ಇದ್ದುಕೊಂಡು ಈ ಬ್ಲಾಗ್ ಜಗತ್ತಿನ ಮೂಲಕ ನಾವೆಲ್ಲಾ ಹತ್ತಿರಾಗಿದ್ದೇವೆ.ನಮ್ಮ ನಡುವೆ ಈ ಅಂತರ ಬೆಳೆಯುವುದು ಬೇಡ.ಹಾಗೆ ಸುಮ್ಮನೆ ಎಲ್ಲರೂ ಸೇರಲಿ.ಖುಷಿಯಿಂದ ಆ ಒಂದು ದಿನ ಕಳೆದುಹೋಗಲಿ.:):)

ಆಮೇಲೆ ಕೊನೆಯದಾಗಿ ನನ್ನದೊಂದು ಆರೋಗ್ಯಕರ ಆಕ್ಷೇಪ :):)

ಹಿಂದೆ ನಡೆದ ಹಲವು ಬ್ಲಾಗ್ಗರ್ಸ್ ಮೀಟ್ ಬಗ್ಗೆ ಪ್ರಸ್ತಾಪ ಆಗಿದೆ.ಆದರೆ ೨೦೦೮ರಲ್ಲಿ ನಡೆದ ಬ್ಲಾಗ್ಗರ್ಸ್ ಮೀಟ್ ಬಗ್ಗೆ ಪ್ರಸ್ತಾಪವೇ ಇಲ್ಲ:( ಇಲ್ಲಿತನಕ ನಡೆದ ಬ್ಲಾಗ್ಗರ್ಸ್ ಮೀಟ್ ಗಳಲ್ಲಿ ಅದು ಪ್ರಮುಖವಾದ್ದು.ಕ್ರಮದಂತೆ ಅದರ ಪ್ರಸ್ತಾಪ ಆಗಲೇ ಬೇಕಿತ್ತು.ಅದೇ ಮೊದಲ ಮೆಟ್ಟಿಲು.ಮಾದರಿ ಕೂಡ.

ದಿನಕರ ಮೊಗೇರ said...

ಪ್ರಕಾಶಣ್ಣ,
ತುಂಬಾ ಖುಷಿಯಾಗುತ್ತಿದೆ........... ನಿಮ್ಮನ್ನು ಭೇಟಿಯಾದಾಗಲೇ ತುಂಬಾ ಖುಷಿಯಾಗಿತ್ತು.............. ಏನೇ ಆದರೂ ಒಮ್ಮೆ ಎಲ್ಲರೂ ಸಿಗೋದು ಗ್ಯಾರಂಟಿ ಅಂದ ಹಾಗೆ ಆಯ್ತು......... ಪುಸ್ತಕ ಮಾಡುವುದೋ ಬಿದೊದೋ, ನೀವೇ ನಿರ್ಧಾರ ಮಾಡಿ........... ಎಲ್ಲರ ಅಭಿಪ್ರಾಯ ಪಡೆದು, ನಿರ್ಧಾರ ಮಾಡಿ,................ ನನ್ನದು ಮಾತ್ರ, ಎಲ್ಲರ ಅಭಿಪ್ರಾಯದ ಸಂಗದ ಇದೆ........... ಬೆಸ್ಟ್ ಆಫ್ ಲಕ್.... ಒಳ್ಳೆಯ ಸುದ್ದಿ ಕೊಡಿ...............

ಜಲನಯನ said...

ಪ್ರಕಾಶ್, ನಿಮ್ಮ ಈ ಮೊದಲ ಸಭೆ ಎಲ್ಲ ಕಾರ್ಯ ಸುಸೂತ್ರವಾಗುವಂತೆ ಮಾಡಲಿ ಎಂದೇ ಆಶಯ. ಗೌತಮ್ ಮಾತನ್ನು ಅಕ್ಷರಶಃ ಒಪ್ಪುತ್ತೇನೆ...ಇಲ್ಲಿ ನಾವು ಒಂದೆಡೆ ಸೇರುವುದು ಮತ್ತು ಒಬ್ಬರನೊಬ್ಬರು ಅರಿಯುವುದು ಮತ್ತು ನಮ್ಮ ಬ್ಲಾಗಿಗರ ಒಕ್ಕೂಟದ ಮುಂದಿನ ಚಟುವಟಿಕೆಗಳಿಗೆ ಚಾಲನೆನೀಡುವುದು ಪ್ರಮುಖವಾಗಬೇಕು....ಆ ಕಾರಣಕಾಗಿ ಈಗಾಗಲೇ ಹಲವರಿಗೆ ತಿಳಿಸಿರುವಂತೆ ಪ್ರತಿ ಇಚ್ಛುಕರ ಗರಿಷ್ಟ ಎರಡು ಪುಟಗಳ ಲೇಖನ on payment basis for meeting the expenses partially, ಮತ್ತು ಜೂನ್ 15 ಅಂತಿಮ ಗಡುವು ಲೇಖನ ಕಳುಹಿಸಲು ಈ ಎಲ್ಲವನ್ನೂ ನಮೂದಿಸಿ...ಬಂದ ಎಲ್ಲ ಲೇಖನಗಳನ್ನು ಒಮ್ದು ಪುಸ್ತಕದ ರೂಪದಲ್ಲಿ ಮುದ್ರಿಸಿ ಈಗಾಗಲೇ ನಿರ್ಧರಿಸಿರುವ ಆಗಸ್ಟ್ 22 ಕ್ಕೆ ಬಿಡುಗಡೆಗೊಳಿಸಿ ಒಮ್ದು ವೇದಿಕೆಗೆ ಅಡಿಪಾಯ ಹಾಕುವುದು ಸೂಕ್ತ ಎಮ್ದು ನನ್ನ ಅನ್ಸಿಕೆ. ಇಲ್ಲಿ ಗೌತಮ್ ಹೇಳಿರುವಂತೆ ಹಿಂದೆ ನಡೆದಿರುವ ಇಂತಹುದೇ ಸಮಾವೇಶದ ಬಗ್ಗೆ ಮಾಹಿತಿ ಪಡೆಯೋಣ ಅದರಲ್ಲಿ ಸಕ್ರಿಯರಾಗಿದ್ದ ಮಿತ್ರರನ್ನೂ ಒಳಗೊಂಡ ಒಂದು ಸಮಿತಿಯ ರಚನೆಗೆ ಆಗಸ್ಟ್ ನ ಸಮಾವೇಶ ಒಮ್ದು ಪೂರ್ವಭಾವಿ ಸಿದ್ಧತೆ ಎಂದುಕೊಳ್ಳೋಣ. ಅಲ್ಲವೇ..?

ಇಲ್ಲಿ ಹಲವು confusion ಗೆ ನನ್ನ ಸ್ಪಷ್ಟೀಕರಣ ಹೀಗಿದೆ...
ನಮ್ಮ ಆಗಸ್ಟ್ 22 ರ ಸಮಾವೇಶ ಒಂದು ವ್ಯವಸ್ಥಿತ ಬ್ಲಾಗಿಗರ ಸಮಾವೇಶವನ್ನಾಗಿ ಪರಿಗಣಿಸಲು ತೊಡಕುಗಳು ಇದ್ದರೆ ಇದನ್ನು ಬ್ಲಾಗಿಗಗರ ಸಂತೋಷಕೂಟವಾಗಿಯೂ ಇದರ ನೆನಪಿನ ಸಂಚಿಕೆಯಾಗಿ ಜೂನ ೧೫ ರ ಒಳಗಾಗಿ ತಲಪುವ ಲೇಖನಗಳ ಸಂಗ್ರಹದ ಪುಸ್ತಿಕೆಯ ಬಿಡುಗಡೆ ಮತ್ತು ನಮ್ಮಲ್ಲಿ ಕೆಲ ಬ್ಲಾಗಿಗರ ಉದ್ದೇಶಿತ ಪುಸ್ತಕಗಳ ಬಿಡುಗಡೆಗೆ ವೇದಿಕೆಯಾಗಿ ಪರಿಗಣಿಸಿ..ಇದೇ ಸಂದರ್ಭದಲ್ಲಿ ಈ ವೇದಿಕೆಯ ಮೂಲಕ ಕನ್ನಡ ಬ್ಲಾಗಿಗಳ ನಿಯತಕಾಲಿಕ ಸಮಾವೇಶಗಳ ಆಯೋಜನೆಗೆ ತಕ್ಕ ಸಂಘಟನೆಯ ಸ್ಥಾಪನೆಗೆ ಸಿದ್ಧತೆಗಳನ್ನು ಮಾಡುವಂತಾಗಲಿ...ಹಾಗಾಗಿ ಬ್ಲಾಗಿಗಳ ಮಿಲನ, ಪರಸ್ಪರ ಪರಿಚಯ ಮತ್ತು ಸಂಘಟನೆಯ ಉದಯವಾಗುತ್ತದೆ.

SSK said...

ಪ್ರಕಾಶ್ ಹೆಗ್ಡೆ ಅವರೇ,

ನನಗೆ ಗೌತಮ್ ಹೆಗಡೆ ಅವರ ಮಾತು ಅಕ್ಷರಃ ಸಹ ಸತ್ಯ ಎನಿಸುತ್ತದೆ.

ದೊಡ್ಡ ದೊಡ್ಡ ಅನುಭವಿ ಲೇಖಕರಿಂದ ಒಳ್ಳೆ ಒಳ್ಳೆಯ ಲೇಖನಗಳೇನೋ ಸಿಗುತ್ತವೆ ನಿಜ ಆದರೆ ಈ ಜಂಜಾಟದಲ್ಲಿ ಪಕ್ಷಪಾತವೆಂಬ ಭೂತ ಹುಟ್ಟಿಕೊಂಡು ಒಬ್ಬೊಬ್ಬರಲ್ಲಿಯೂ ಭಿನ್ನಾಭಿಪ್ರಾಯ ಏರ್ಪಡ ಬಹುದೆಂಬುದು ನನ್ನ ಅಭಿಪ್ರಾಯ ಕೂಡ.

ಆದ್ದರಿಂದ ಈ ಬ್ಲಾಗಿಗರ ಕೂಟವನ್ನು ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತಾ ಒಂದು "ಸಂತೋಷ ಕೂಟವಾಗಿ" ಏರ್ಪಡಿಸಿದರೆ ಅದಕ್ಕಿಂತಾ ಸಂತೋಷ ಬೇರೆ ಇಲ್ಲ.
ಬಾಕಿ ನಿರ್ಧಾರಗಳು ತಿಳಿದವರಿಗೆ ಬಿಟ್ಟಿದ್ದು!

ಹಾಗೆ ಒಂದು ಮನವಿ, ನನ್ನ ಬ್ಲಾಗ್ ನಲ್ಲಿ ಇರುವ ಈ ಒಂದು ಪುಟ್ಟ ಕವನವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಮನದಾಳದಿಂದ............ said...

ಪ್ರಕಾಶಣ್ಣ,
ಗೌತಮ್ ಹೆಗಡೆಯವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ. ಎಲ್ಲರಲ್ಲೂ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆಗಳಿರುವುದರಿಂದ ಸ್ವಲ್ಪ ಯೋಚಿಸುವುದು ಒಳಿತು ಎಂದು ನನ್ನ ಅನಿಸಿಕೆ. ಅಜಾದ್ ಸರ್ ಹೇಳುವಂತೆ ಮಾಡುವದು ಕ್ಷೇಮ ಅನಿಸುತ್ತದೆ.
ನಾನಂತೂ ನಿಮ್ಮೆಲ್ಲರ ತಿರ್ಮಾನಗಳಿಗೆ ಬದ್ಧನಾಗಿರುತ್ತೇನೆ.

ಸೀತಾರಾಮ. ಕೆ. / SITARAM.K said...

ನನ್ನ ಕೆಲವು ಅಭಿಪ್ರಾಯಗಳು.

- ಎಲ್ಲ ಬ್ಲೊಗ್ ಮಿತ್ರರ ಬರಹಗಳಿರಲಿ ಸ೦ಚಿಕೆಯಲ್ಲಿ. ಆಯ್ಕೆ-ಸ್ಪರ್ಧೆ ಅ೦ಥಾ-ತೆಗೆದುಹಾಕುವದು ಬೇಡ. ಸ್ಮರಣ ಸ೦ಚಿಕೆ ಭಾಗ ಒ೦ದು-ಎರಡು ಅ೦ಥಾ ಆದರೂ ಪರವಾಗಿಲ್ಲ. ಸಮಾನ ಅವಕಾಶ ಸರ್ವ ಆಸಕ್ತ ಬ್ಲೊಗಿಗರಿಗಿರಲಿ.

-ಸಮಯಕೊಟ್ಟು ಓಡಾಡಿ ಕೆಲಸ ಮಾಡುವ ಮಿತ್ರರಿಗೆ ಧನ ಕೊಡುಗೆ ಕಡ್ಡಾಯವಾಗದಿರಲಿ. ಅವರ ಸಮಯ ಸೇವೆ ಅಮೂಲ್ಯ ಮತ್ತು ತು೦ಬಿಕೊಡಲಾಗದ್ದು ಈ ನಿಟ್ಟಿನಲ್ಲಿ ಅವರಿಗೆ ಧನಸೇವೆಯ ಭಾರವಿರದಿರಲಿ.

-ಪರಸ್ಪರರ ಪರಿಚಯಕ್ಕೆ ಪ್ರಥಮ ಭೇಟಿ ಪೂರಕವಾಗಿರಲಿ ಹಾಗೂ ಬ್ಲೊಗಿಗರ ಕೂಟಕ್ಕೆ ರೂಪುರೇಷೆ ನೀಡುವಲ್ಲಿ ಮಿದುಳಕಸರತ್ತಿಗೆ ಸ್ವಲ್ಪ್ ಸಮಯ ಮೀಸಲಿರಲಿ.

-ಗಾಯನಕ್ಕೆ, ಚಿತ್ರಕಲೆ ಪ್ರದರ್ಶನಕ್ಕೆ ಸ್ವಲ್ಪ್ ಸಮಯವೂ ಇರಲಿ. ಹಲವು ಬ್ಲೂಗಿಗರ ರೇಖಾಚಿತ್ರಗಳನ್ನು ಮತ್ತು ಛಾಯಾಚಿತ್ರಗಳನ್ನು ಕೂಟದ ಆಯೋಜಿತ ಸ್ಥಳದಲ್ಲಿ ಪ್ರದರ್ಶಿಸಿದರಾಯಿತು.

- ಎಲ್ಲ ಬ್ಲೊಗಿಗರ ಹೆಸರು-ವಿಳಾಸ-ವೆಬಸೈಟ-ಅ೦ಕಣದ ಹೆಸರಿನ ಮಾಹಿತಿಯ ಕೈಪಿಡಿಯೂ ಇದ್ದಲ್ಲಿ ಒಳ್ಳೆಯದು.

- ನಮ್ಮ ಅಡುಗೆ ಬ್ಲೊಗಿಗರ ಹೊಸರುಚಿಗಳು ಆಯೋಜಿತ ಅ೦ಕಣದಲ್ಲಿ ಅವರ ಇಚ್ಚೆಯನುಸಾರ ಕೇವಲ ರುಚಿ ಮಟ್ಟಿಗೆ ಪ್ರದರ್ಶಿತವಾದರೂ ಸರಿಯೇ!

- ಹಲವು ವಾಗ್ಮಿಗಳ ಕಥಾನಕವೂ ಇರಲಿ.

-ಕಾರ್ಯಕ್ರಮ ಫ಼ಾರ್ಮಲ್ ಆಗಿರದೇ ವ್ಯವಸ್ತಿತ ನಾನ್-ಫ಼ಾರ್ಮಲ್ ಆಗಿರಲಿ.

- ಹೆಸರು ನೊ೦ದಾವಣೆ ಮಾಹಿತಿಗಾಗಿ ಬ್ಲೊಗಿಗರ ಕೂಟದ ಪ್ರಾರ೦ಭದ ಮು೦ಚೆ ನಡೆದರೆ ಮಾಹಿತಿಗೆ ಸೂಕ್ತ.

Vivek said...

ಬಹಳ ಸಂತೋಷ ಆಯ್ತು ಕನ್ನಡದ ಬ್ಲಾಗಿಗರೆಲ್ಲ ಒಂದು ಕಡೆ ಸೇರೋದು ಅಂದ್ರೆ ಖುಷಿ ಆಗುತ್ತೆ. ಆದ್ರೆ ನಾನು ಇದನ್ನ ತುಂಬಾ ತಡವಾಗಿ ನೋಡಿದೆ. ಅದಕ್ಕೆ ಬೇಸರ ಆಗ್ತಾ ಇದೆ. ನನ್ನದು ಒಂದು ಪುಟ್ಟ ಬ್ಲಾಗ್ ಇದೆ ulidamaatu.blogspot.com . ಮತ್ತೆ ಸೇರೋ ಹಾಗಿದ್ರೆ ವಿಷಯ ತಿಳಿಸಿ ಭೆಟ್ಟಿಯಾಗುವ.
- ವಿವೇಕ್

ದೀಪಸ್ಮಿತಾ said...

ಗೌತಮ್ ಅವರ ಅಭಿಪ್ರಾಯ ಸರಿಯಿದೆ. ಸೀತಾರಾಮ್ ಸರ್ ಹೇಳಿದಂತೆ ಸ್ಮರಣಸಂಚಿಕೆಯನ್ನು ಎರಡು ಭಾಗ ಮಾಡಬಹುದು, ಬಂದಿರುವ ಲೇಖನಗಳು ಜಾಸ್ತಿ ಇದ್ದರೆ. ನನ್ನ ಲೇಖನ ಆಯ್ಕೆ ಆಗಲಿ ಬಿಡಲಿ, ಬ್ಲಾಗಿಗರ ಕೂಟಕ್ಕೆ ಬರಲು ನಾನಂತೂ ಉತ್ಸುಕನಾಗಿದ್ದೇನೆ