Friday, August 3, 2012

ನಮ್ಮನ್ನು ನಾವು ಸಾಯಿಸಿಕೊಳ್ಳುವದಕ್ಕೆ... ಬೇಕಾದಷ್ಟು ಮಾರ್ಗಗಳಿವೆ !!....."


ಮಹಾಭಾರತದ ಘನ ಘೋರ ಯುದ್ಧ ನಡೆಯುತ್ತಿತ್ತು....


ಕರ್ಣನಿಗೆ ಸಾರಥಿಯಾಗಿ ಶಲ್ಯ ಸಿಕ್ಕಿದ್ದ..
ಆತ ಪಾಂಡವರ ಸೈನ್ಯವನ್ನು ಧ್ವಂಸಗೊಳಿಸುತ್ತ ಸಾಗಿದ್ದ..


ಮಧ್ಯದಲ್ಲಿ ಧರ್ಮರಾಜ ಎದುರಾದ...


ಕರ್ಣ ಧರ್ಮರಾಜನನ್ನು ಸೋಲಿಸಿ...
ಆತನಿಗೆ ಬೀಳಿಸಿ ..
ಚೆನ್ನಾಗಿ ಒದ್ದು ಹೋಗಿಬಿಟ್ಟ...!


ಧರ್ಮರಾಜನಿಗೆ ಬಹಳ ಅಪಮಾನವಾಯಿತು...


ಆಗ ..
ಅಣ್ಣನನ್ನು ಹುಡುಕುತ್ತ ಅರ್ಜುನ ಧರ್ಮರಾಜನ ಬಳಿ ಬಂದ..


ಅರ್ಜುನ ತನ್ನ "ಗಾಂಢೀವ" ಧನಸ್ಸುನ್ನು ಹಿಡಿದಿದ್ದ...


ಅಪಮಾನದಿಂದ ಉರಿಯುತ್ತಿದ್ದ ಧರ್ಮರಾಜ .....


"ಬೆಂಕಿ ಹಾಕು ...
ನಿನ್ನ "ಗಾಂಢೀವ" ಧನುಸ್ಸಿಗೆ...!


ನಮ್ಮ ಮರ್ಯಾದಿ ಕಾಪಾಡಲಾಗದ ..
ಇದೆಂಥಹ ಗಾಂಢೀವ...! .. " 


ಎಂದು ಹೀಗಳೆದ..


ಅರ್ಜುನನ ಒಂದು ಪ್ರತಿಜ್ಞೆಯಿತ್ತು..


" ಗಾಂಢೀವವನ್ನು ..
ಯಾರಾದರೂ ಬಯ್ದರೆ ಅವರನ್ನು ನಾನು ಕೊಲ್ಲುತ್ತೇನೆ...!"


ಅರ್ಜುನ ಖಡ್ಗ ಹಿಡಿದು ...
ಧರ್ಮರಾಜನನ್ನು ಕೊಲ್ಲಲು ಮುಂದಾಗುತ್ತಾನೆ...


ಚತುರ  ಕೃಷ್ಣ ಅಡ್ಡ ಬರುತ್ತಾನೆ...


"ನೋಡು ...
ನಿನ್ನ ಪ್ರತಿಜ್ಞೆಯನ್ನು ಬೇರೆ ರೀತಿಯಿಂದಲೂ ಪೂರೈಸ ಬಹುದು....


ಒಬ್ಬ ಘನವೆತ್ತ ಮರ್ಯಾದಸ್ಥನಿಗೆ ..
ಅವಮಾನವಾಗುವ ಹಾಗೆ ಬಯ್ದು..
ಮರ್ಯಾದೇ  ತೆಗೆದರೆ ...


ಆತನನ್ನು ಹತ್ಯೆ ಮಾಡಿದ ಹಾಗೆ...!


ನೀನು ಧರ್ಮರಾಜನನ್ನು ಬಯ್ಯಿ...! 
ತೆಗಳು...!


ಆಗ ಧರ್ಮರಾಜ ಸತ್ತ ಹಾಗೆಯೇ ..


ನಿನ್ನ ಪ್ರತಿಜ್ಞೆ ನೆರವೇರಿದಂತಾಗುತ್ತದೆ...!!


ಅರ್ಜುನ ಧರ್ಮರಾಜನಿಗೆ ಯದ್ವಾತದ್ವಾ  ಬಯ್ಯತೊಡಗಿದ...


"ನೀನೆಂಥಹ ಅಣ್ಣ...?
ನಿನ್ನ ..
ಜೂಜಾಟದ ತೆವಲಿಗೆ  ನಮ್ಮನ್ನೆಲ್ಲ ವನವಾಸಕ್ಕೆ ಕರೆದೊಯ್ದೆ...
ಮಹಾರಾಣಿಯಾಗಿದ್ದ ದ್ರೌಪದಿಗೆ ನಾರುಮಡಿಯನ್ನುಡಿಸಿದೆ...


ನನ್ನನ್ನು ಬ್ರಹನ್ನಳೆಯನ್ನಾಗಿಸಿದೆ....
ಭೀಮನನ್ನುಅಡುಗೆ ಭಟ್ಟನನ್ನಾಗಿ  ಮಾಡಿದೆ .


ನಿನೆಂಥಹ ಅಣ್ಣ .. !


ಡ..ಡ.. ಡ್ಡಾ.. ಡ್ಡಾ....."


ಅಂತೆಲ್ಲ ಬಹಳ ಹೀನಾಯವಾಗಿ ಹೀಗಳೆದ...


ಅಣ್ಣನಿಗೆ ಚೆನ್ನಾಗಿ ಬಯ್ದ ಮೇಲೆ ..
ಅರ್ಜುನನಿಗೆ ಪಶ್ಚಾತ್ತಾಪವಾಯಿತು....


"ಮನುಕುಲಕ್ಕೇ ಆದರ್ಶ ಪ್ರಾಯವಾದಂಥಹ..
ಧರ್ಮ ದೇವತೆಯಂಥಹ ...
ದೇವರಂಥಹ ..
ನನ್ನಣ್ಣನನ್ನು ಬಯ್ದುಬಿಟ್ಟೇನಲ್ಲ....!


ಛೆ ...
ನಾನಿನ್ನು ಬದುಕಿರಬಾರದು...   ! "


ಎಂದು ಖಡ್ಗ ಹಿಡಿದು ತನ್ನನ್ನು ತಾನು ಸಾಯಿಸಿಕೊಳ್ಳಲಿಕ್ಕೆ ಹೊರಟ...


 ಮತ್ತೆ ಚಾಣಾಕ್ಷ್ಯ ಕೃಷ್ಣ ಅಡ್ಡ ಬಂದ...


"ನೋಡು ಮತ್ತೆ ತಪ್ಪು ಮಾಡುತ್ತಿದ್ದೀಯಾ...


ನಮ್ಮನ್ನು ..
ನಾವು ಸಾಯಿಸಿಕೊಳ್ಳುವದಕ್ಕೆ ಬೇಕಾದಷ್ಟು ಮಾರ್ಗಗಳಿವೆ..."


"ಏನದು....?  !!..."


" ಎಲ್ಲ ಕ್ರಮಗಳಿಗೂ ಕೆಲವು ಸೂಕ್ಷ್ಮಗಳಿವೆ...
ಸಾಧನೆ ಮಾಡಿರುವ ವ್ಯಕ್ತಿ ತನ್ನನ್ನು ತಾನು ಆತ್ಮ ಪ್ರಶಂಸೆ ಮಾಡಿಕೊಂಡರೆ..
ಆತ ಸತ್ತ ಹಾಗೆಯೇ....


ನೀನು ನಿನ್ನನ್ನು ಸಾಯಿಸಿಕೊಳ್ಳಬೇಕಾಗಿಲ್ಲ...
ಬೇಕಾದಷ್ಟು ಹೊಗಳಿಕೊ... 


ಆಗ ನೀನು ಸತ್ತ ಹಾಗೆಯೇ...!..


ಆತ್ಮ ಹತ್ಯೆ ಮಾಡಿಕೊಂಡ  ಹಾಗೆಯೇ ! .."


ಅರ್ಜುನ ಶುರು ಹಚ್ಚಿಕೊಂಡ...


"ನಾನು ..
ನಾನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದೆ...!


ಗಂಧರ್ವರೊಡನೆ ಹೋರಾಡಿ ಕೌರವ, ಪಾಂಡವರನ್ನು ಬಿಡಿಸಿದ್ದೇನೆ.....!


ನಾನು " ಅದು" ಮಾಡಿದ್ದೇನೆ...!!


ನಾನು "ಇದು" ಮಾಡಿದ್ದೇನೆ... !!


ಮೆಂತೆ ಕದ್ದಿದ್ದೇನೆ.. !!


ಡ..ಡ..ಡ್ಡಾ..ಡ್ಡ... !!... "


ಅಂತೆಲ್ಲ ಹೊಗಳಿಕೊಂಡ...


.... ..... ............. ....... ...  


ಈ ಮಹಾಭಾರತದ ಕಥೆ ಇನ್ನೂ ಇದೆ.. !


ಮುಗಿಯುವಂಥದ್ದಲ್ಲ...!


ಎಂಥಹ ಮಹಾಕಾವ್ಯ ಇದು...!!


ಆಸ್ತಿಕರಿಗೆ ಪವಿತ್ರಗ್ರಂಥವಾದರೆ...
ಓದುಗನಿಗೆ ಒಳ್ಳೆಯ ಕಾದಂಬರಿಯೂ ಹೌದು... !


ಮಾನವ ಬದುಕಿನ ಎಲ್ಲ ಸಂಗತಿಗಳಿಗೆ ...
ಸಮಸ್ಯೆಗಳಿಗೆ ಇಲ್ಲಿ ಉತ್ತರ ಇದೆ ... !


ನಮ್ಮ ಬದುಕಿನ ಎಲ್ಲ ಪಾತ್ರಗಳು ಇಲ್ಲಿ ಸಿಗುತ್ತವೆ !!!


..........   ....  ....  ..........  ............  ..........


ನಮ್ಮ ದೇಶದ ಒಬ್ಬ ಮಹಾಪುರುಷನಿಗೆ ..
ಕೆಲವರು ಹೋಗಿ ವಿನಂತಿಸಿದರಂತೆ ....


"ಗುರೂಜಿಯವರೆ...
ನೀವ್ಯಾಕೆ ರಾಜಕೀಯಕ್ಕೆ ಬರಬಾರದು...?...


ನಿಮ್ಮಂಥವರು ರಾಜಕೀಯಕ್ಕೆ ಬಂದರೆ..
ಈ..
ಕೊಳಚೆ ನೀರನ್ನು ಪವಿತ್ರಗೊಳಿಸ ಬಹುದಲ್ಲ... !"


ಆಗ ಆ ಮಹಾಪುರುಷ ಕೊಟ್ಟ ಉತ್ತರ ಇಂದಿಗೂ ಪ್ರಸ್ತುತ.... !


"ನೋಡಿ...


ಈ ರಾಜಕೀಯದಲ್ಲಿ  ದಿನ ನಿತ್ಯ ...
ಪ್ರತಿಕ್ಷಣ  "ಪರನಿಂದೆ " ಮಾಡಬೇಕು...!


ಯಾವಾಗಲೂ ....ಆತ್ಮ ಪ್ರಶಂಸೆ ಮಾಡಕೊಳ್ಳುತ್ತಿರಬೇಕು... !


ಬೇರೆಯವರನ್ನು ಸಾಯಿಸುತ್ತ...
ನನ್ನನ್ನೂ ಸಾಯಿಸಿಕೊಳ್ಳುತ್ತ ಇರುವದು ನನ್ನಿಂದ ಸಾಧ್ಯವಿಲ್ಲ...!


ಹಾಗಾಗಿ ನಾನು ರಾಜಕೀಯಕ್ಕೆ ಬರುವದಿಲ್ಲ....!  ..."







31 comments:

anitha said...

Thumba chennagide.....

Harisha - ಹರೀಶ said...

ಹಹ್ಹ.. ಪ್ರಕಾಶಣ್ಣ.. ನಿಜಕ್ಕೂ ಮಹಾಭಾರತದ ಪ್ರತಿ ಕಥೆಯಿಂದನೂ ಕಲಿಯದು ಇದ್ದು..

ಈಶ್ವರ said...

ಪ್ರಕಾಶಣ್ಣಾ, ಒಳ್ಳೆಯ ಸಂದೇಶ.. ಈ ಸಂವಾದ ಒಂದು ಯಕ್ಷಗಾನಲ್ಲಿ ಕೇಳಿದಾಂಗೆ ಫೀಲ್ ಆತು.

ಬೃಹನ್ನಳೆ ಆಗಬೇಕು ಎನ್ನಿಸುತ್ತದೆ.

Srikanth Manjunath said...

ನಮ್ಮ ಜಗತ್ತು ಕಂಡ ಅತ್ಯಂತ ಚಾಣಾಕ್ಷ...ಕೃಷ್ಣ...ಕೃಷ್ಣನ ಒಂದು ನೆನಪು ಸಾಕು..ಮನಸನ್ನು ಚೇತನ ಗೊಳಿಸಲು..
"ಸಾಧನೆ ಮಾಡಿರುವ ವ್ಯಕ್ತಿ ತನ್ನನ್ನು ತಾನು ಆತ್ಮ ಪ್ರಶಂಸೆ ಮಾಡಿಕೊಂಡರೆ..
ಆತ ಸತ್ತ ಹಾಗೆಯೇ...." ಇದು ನಿಜಕ್ಕೂ ಅದ್ಭುತ ವಾಕ್ಯ...
ಮಹಾಭಾರತದಲ್ಲಿ ಇಲ್ಲದೆ ಇರುವುದು ಪ್ರಪಂಚದಲ್ಲಿ ಇರಲು ಸಾಧ್ಯವಿಲ್ಲ!!! ಅನ್ನುವ ನಾಣ್ಣುಡಿ ಇದೆ.
ಇದು ಜೀವನವನ್ನು ಹೇಗೆ ಸಾಗಿಸಬೇಕು?..ಹೇಗಿದ್ದರೆ ಹೇಗೆ?...ಎಲ್ಲವು ಸಾರುತ್ತದೆ...
ಪ್ರಕಾಶಣ್ಣ ನೀವು ಮಹಾಭಾರತಕ್ಕೆ ಲಗ್ಗೆ ಇಟ್ಟಿರುವುದು ನನ್ನ ಬಾಯಲ್ಲಿ ನೀರೂರುಸುತ್ತಿದೆ....ಈ ಮಹಾಕಾವ್ಯ ಕೊಡುವ ಪ್ರೇರಣೆ ನಿಜಕ್ಕೂ ಅನನ್ಯ..
ಇಂತಹ ಮಹಾಕಾವ್ಯ ನಡೆದ ಭೂಮಿಯಲ್ಲಿ ಹುಟ್ಟಿರುವುದು ನಮ್ಮ ಭಾಗ್ಯವೇ ಸರಿ..
"ಆತ್ಮ" (ನಿಂದನೆ/ಪ್ರಶಂಸೆ) ಹತ್ಯೆ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಮುಂದುವರೆಯಲು ಸಾಧ್ಯ ಎನ್ನುವ ತಿಳಿ ಸಂದೇಶ ಎಷ್ಟು ಸೊಗಸಾಗಿ ಕೊಟ್ಟಿದ್ದೀರ..ಧನ್ಯೋಸ್ಮಿ...

Ittigecement said...

ಅನಿತಾರವರೆ...

ಇಂದು ಅಣ್ಣ ಹಜಾರೆಯವರು "ರಾಜಕೀಯಕ್ಕೆ" ಪರ್ಯಾಅಯ ಕೊಡುತ್ತೇವೆ ಅಂದಾಗ ಈ ಕಥೆ ನೆನಪಾಯಿತು....

ಈ ಕೊಳಚೆ ಕೂಪದಲ್ಲಿ ಪರಿವರ್ತನೆ ಸಾಧ್ಯವೇ?

ಸಧ್ಯವಿಲ್ಲ ಅಂತ ಸುಮ್ಮನಿರಲು ಸಾಧ್ಯವೆ?

ಬಹಳಷ್ಟು ಪ್ರಶ್ನೆಗಳಿವೆ...

ಉತ್ತರ ಸಧ್ಯಕ್ಕೆ ಸಿಗುವದಿಲ್ಲ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Mohan V Kollegal said...

ತುಂಬಾ ಚೆನ್ನಾಗಿದೆ ಸಂದೇಶ... ಓದಿಸಿಕೊಂಡು ಓಡಿಸಿಕೊಂಡು ಹೋಯಿತು... ಖುಷಿಯಾಯಿತು...

LAxman said...

ತುಂಬಾ ಚೆನ್ನಾಗಿದೆ.ಈ ಸನ್ನಿವೇಶ ನಾನು ಓದಿರಲಿಲ್ಲ

Ittigecement said...

ಹರೀಷಾ..

ಮಹಾಭಾರತ ಕಾವ್ಯ ಒಂದು ಅದ್ಭುತ !

ಅದನ್ನುಪ್ರತಿ ಬಾರಿಯೂ ಓದುವಾಗ...
ನಮ್ಮ ಮನಸ್ಸಿನ ಮೂಡಿಗೆ ತಕ್ಕಂತೆ ಅಲ್ಲಿಯ ಪಾತ್ರಗಳು ಕುಣಿಯುತ್ತವೆ.... !
ಇಲ್ಲಿನ ಪ್ರತಿಯೊಂದು ಪಾತ್ರಗಳ ಚಿತ್ರಣ.. ಪೋಷಣೆಗಳು ಹಾಗಿವೆ...

ನಿಜಕ್ಕೂ ಅದೊಂದು ವಿಸ್ಮಯ !

ಅಣ್ಣಾ ಹಜಾರೆ ನಮ್ಮ ರಾಜಕೀಯಕ್ಕೊಂದು ಪರ್ಯಾಯ ಕೊಡುತ್ತೇವೆ ಎಂದಾಗ ನನಗೆ ಇದು ನೆನಪಾಯಿತು...

ಹಣ..
ಹೆಂಡ.. ಸೀರೆ.. ಮೂಗುತಿಗಳಿಗೆ ವ್ಯಾಪಾರವಾಗುವ ಮತಗಳಿಗೆ..

ಈ ಅಜ್ಜ ಹೇಗೆ ಪರ್ಯಾಯ ಕೊಡಲು ಸಾಧ್ಯ?

ಪ್ರತಿಕ್ರಿಯೆಗೆ ಧನ್ಯವಾದಗಳು..

Badarinath Palavalli said...

ಮನೋ ವಿಶ್ಲೇಷಕ ಬರಹ ಸಾರ್. ಹೊಗಳಿಕೆ ಮತ್ತು ತೆಗಳಿಕೆಯು ಮನುಷ್ಯನನ್ನು ಮಾನಸಿಕವಾಗಿ ಹೇಗೆ ಕೊಲ್ಲಬಲ್ಲದು ಎಂದು ಚೆನ್ನಾಗಿ ವಿಶ್ಲೇಷಿಸಿದ್ದೀರ.

ಏನು ಸಾಧಿಸದ ನನ್ನಂತಹ ಎಳೆ ನಿಂಬೆ ಕಾಯಿಗಳು ಏನೋ ಭಾರೀ ಕವಿ ಕಾಳಿದಾಸರಂತೆ ಸ್ವ ಪ್ರಶಂಸೆ ಮಾಡಿಕೊಳ್ಳುವುದು ತಪ್ಪು ಎನ್ನುವುದು ಅರಿವಾಯಿತು. ಧನ್ಯವಾದಗಳು.

ಅಂತೆಯೇ ರಾಜಕಾರಣಿಗಳ ಜನುಮವನ್ನೂ ಜಾಲಾಡಿದ್ದೀರ ಖುಷಿಯಾಯಿತು.

ನೀವೂ ಮತ್ತು ಈಶ್ವರಭಟ್ಟರು ಪುಣ್ಯಾತ್ಮರು ಸಾರ್, ನಿಮ್ಮ ಒತ್ತಡದ ಕೆಲಸಗಳ ಮಧ್ಯೆಯೂ ಯಕ್ಷಗಾನ ನೋಡಲು ಹೋಗುತ್ತೀರಲ್ಲ, ನಿಮಗೆ ಶರಣು.

ಶ್ರೀಕಾಂತ್ ಸಾರ್ ಹೇಳುವಂತೆ ಕೃಷ್ಣನನ್ನು ಕೇಂದ್ರವಾಗಿಟ್ಟುಕೊಂಡು ನಾವು ಆತ್ಮ ಚಿಕಿತ್ಸಕ ಲೇಖನಗಳನ್ನು ಬರೆಯಬಹುದು.

ಅಜ್ಜನ ಅನಿವಾರ್ಯತೆ ನಿಜ ಸಾರ್.

Dr.D.T.Krishna Murthy. said...

ಪ್ರಕಾಶಣ್ಣ;ಬದರಿಯವರು ತಮ್ಮನ್ನು ತಾವು 'ಎಳೆನಿಂಬೆಕಾಯಿ'ಎಂದು ಕರೆದು ಕೊಂಡಿದ್ದಾರೆ!!ಪ್ರತಿಭಾವಂತರು ತಮ್ಮನ್ನು ತಾವು ತೆಗಳಿ ಕೊಳ್ಳುವುದೂ ತಪ್ಪಲ್ಲವೇ?

umesh desai said...

ಅಣ್ಣಾ ರಾಜಕೀಯಕ್ಕೆ ಬರುವುದಕ್ಕೆ ವಿರೋಧ ನಿಮಗೆ ಇದೆ ಅಂತ ಗೊತ್ತಾತು
ಅಥವ ಅವರೂ ಈ ಹೊಲಸಲ್ಲಿ ಹಾಳಾಗಬಹುದು ಅನ್ನುವ ಕಳಕಳಿ ಇದೆ ಅಂತಾನೂ ಅನಬಹುದು.
ಇದು ನನ್ನ ಹಾಗೂ ಕೇವಲ ನನ್ನೊಬ್ಬನದಿರಲಿಕ್ಕಿಲ್ಲ..
ಅವರಿಗೊಂದು ಚಾನ್ಸು ಕೊಡುವ ಅವರ ದುಕಾನಿನಲ್ಲಿ ಒಳ್ಳೆ ಸರಕು ಸಿಕ್ಕರೂ ಸಿಕ್ಕೀತು..
ಕೊಂಡು ನೋಡೋಣ..

Unknown said...

ಇಂದಿನ ಕಥೆ ಅಣ್ಣಾ ಹಜಾರೆ ಅವರ ಇವತ್ತಿನ ನಿರ್ಣಯದ ಹಿನ್ನೆಲೆಯಲ್ಲಿ ತುಂಬ ಪ್ರಸ್ತುತ ಅನಿಸುತ್ತಿದೆ.

Unknown said...

ಇಂದಿನ ಕಥೆ ಅಣ್ಣಾ ಹಜಾರೆ ಅವರ ಇವತ್ತಿನ ನಿರ್ಣಯದ ಹಿನ್ನೆಲೆಯಲ್ಲಿ ತುಂಬ ಪ್ರಸ್ತುತ ಅನಿಸುತ್ತಿದೆ.

ಸಂಧ್ಯಾ ಶ್ರೀಧರ್ ಭಟ್ said...

ಮಹಾಭಾರತ ಸರ್ವಕಾಲಕ್ಕೂ ಸಲ್ಲುವ ಕಥೆ. ರಾಜಕೀಯ ತಂತ್ರ ಕುತಂತ್ರಗಳ ಎಲ್ಲ ಮಜಲುಗಳನ್ನು ಅಲ್ಲಿ ಕಾಣಬಹುದು.. ಪ್ರಸ್ತುತ ರಾಜಕೀಯದ ಆಯಾಮಗಳನ್ನು ಮಹಾಭಾರತದ ಮೂಲಕ ಹೇಳಿದ್ದು ಚೆನ್ನಾಗಿದೆ. ಇನ್ನೊಬ್ಬರನ್ನು ಸಾಯಿಸುತ್ತ .. ನಮ್ಮನ್ನು ಸಾಯಿಸಿಕೊಳ್ಳುವಂತಹ ಪರಮ ನರಕದ ದಾರಿ ಯಾರಿಗೂ ಬೇಡ...

Poornima Hegde said...

ಡ..ಡ.. ಡ್ಡಾ.. ಡ್ಡಾ..... Super :) :)

ದಿನಕರ ಮೊಗೇರ said...

Da DDa...DDDaa DDDaaa.......... super super.....


indina raajakIyakke super holike..... andina mahabhaaratadalli, indina kaalakke bEkaada nidarshana ide alvaa..?

shubha hegde said...

super writing....

sunaath said...

ಭಾರತಕ್ಕೆ ಹಾಗು ಮಹಾಭಾರತಕ್ಕೆ ತುಂಬಾ ಹೋಲಿಕೆ ಇದೆ, ಅಲ್ಲವೆ!

Unknown said...

ಬಹಳ ಸಮಯದ ನಂತರ ಓದಿದೆ; ಬಹಳ ಚೆನ್ನಾಗಿ ಬರೆದಿದ್ದೀರಾ ...

Badarinath Palavalli said...

ಸುನಾತ್ ಕಾಕ, ನಿಜ ಭಾರತ ಮಹಾಭಾರತದ ಅಣುಕು ರೂಪ.

Ittigecement said...

ಈಶ್ವರ್....

ಅಣ್ಣ ಹಜಾರೆ ತಾನು ಅಣ್ಣಾ ತಂಡವನ್ನು ವಿಸರ್ಜನೆ ಮಾಡಿದ್ದು..
ತಾನು ರಾಜಕೀಯ ಚಟುವಟಿಕೆಗಳಿಂದ ದೂರವಿದ್ದಿದ್ದು ನನಗಂತೂ ನಿಜಕ್ಕೂ ಖುಷಿಯಾಯಿತು...

ಇದೆಲ್ಲ ರಾಜಕಿಯದ ತಂತ್ರಗಾರಿಕೆಯ ಬುದ್ಧಿವಂತಿಕೆಯೋ..
ಅಥವಾ ನಿಜವಾಗಿಯೂ ನಿರ್ಣಯ ತೆಗೆದು ಕೊಂಡಿದ್ದೊ..
ಕಾಲವೇ ಉತ್ತರಕೊಡಬೇಕಿದೆ...

ಗಂಡಾಗಿ ಹುಟ್ಟಿ "ಬ್ರಹನ್ನಳೆಯಾಗಬೇಕಾಗಿದೆ"....ಎನ್ನುವ ಮಾತು ಆಸಕ್ತಿದಾಯಕ...
ಆ ಸ್ಥಿತಿ..
ಮನಸ್ಥಿತಿ ಅರಿಯ ಬೇಕೆಂಬ ಕುತೂಹಲಕ್ಕೆ ಜೈ ಹೋ !
ನನಗೂ ಆಸೆಯಿದೆ...

ಪ್ರತಿಕ್ರಿಯೆಗೆ ವಂದನೆಗಳು...

Badarinath Palavalli said...
This comment has been removed by the author.
Badarinath Palavalli said...

ಅಣ್ಣಾ ಹಾಜಾರೆಯವರ ಈ ನಡೆಯ ಅಂತರಗದ ಗುಟ್ಟು ಸದ್ಯದಲ್ಲೇ ಅನಾವರಣವಾಗಲಿದೆ.

ಜನ ಸಮೂಹದಿಂದ ನಾಯಕನೋ? ಅಥವಾ ನಾಯಕನಿಂದ ಜನ ಸಮೂಹವೋ ಎನ್ನುವ ಪ್ರಶ್ನೆಗೂ ಉತ್ತರ ಸಿಗಲಿದೆ.

ushodaya said...

thumbaa chennaagiddu lekhana....

Vinoda hegde said...

Sooooperb

Chethan K said...

ನಿಜಕ್ಕೂ ಅದ್ಭುತ ಸನ್ನಿವೇಶ ಇದು... ಅರ್ಜುನ ತನ್ನನ್ನು ತಾನು ಸಾಯಿಸಿಕೊಳ್ಳಲು ಹೊರಟಾಗ... ಕೃಷ್ಣ ಅಡ್ಡ ಬ೦ದು ಅರ್ಜುನನ್ನು ಬಯ್ದುಕೊಳ್ಳಲು ಹೇಳುವನೇನೋ ಅ೦ದುಕೊ೦ಡೆ... ಆದರೆ ಎ೦ದಿನ೦ತೆ ಮಹಾಭಾರತದ ಕಥೆಗಳೇ ಕೌತುಕ..
ಅ೦ದುಕೊ೦ಡ೦ತೆಯೇ ಹೋಗುತ್ತವೆ... ಕೊನೆಗೆ ಅಬ್ಬಾ!! ಅನ್ನುವಷ್ಟರ ಮಟ್ಟಿಗೆ ಮುಗಿತಯುತ್ತವೆ... ಈ ಸು೦ದರ ಕಥೆಯನ್ನು ಪ್ರಸ್ತುತ ರಾಜಕೀಯ ವಿಡ೦ಬನೆಗೆ ಬಳಸಿಕೊ೦ಡಿದ್ದ ರೀತಿ ಇಷ್ಟವಾಯಿತು. ಧನ್ಯವಾದಗಳು ಪ್ರಕಾಶ್ ಸಾರ್

balasubramanya said...

ನಿಮ್ಮ ಬತ್ತಳಿಕೆಯಲ್ಲಿ ಎಂತೆಂತಹ ವಿಚಾರಗಳಿವೆ ಸ್ವಾಮೀ . ಮಹಾಭಾರತದಲ್ಲಿನ ವಿಭಿನ್ನ ವಿಚಾರಗಳ ದರ್ಶನ . ಬಹಲ ಇಷ್ಟಾ ಆಯ್ತು. ಜೈ ಜೈ ಜೈ ಹೋ ಸಾರ್.

Unknown said...

Sooper saar!!

Dayananda said...

ha ha fentastic

Shruthi B S said...

ನಿಜ ಮಹಾಭಾರತದಲ್ಲಿ ನಮ್ಮೆಲ್ಲಾ ಗೊ೦ದಲಗಳಿಗೆ ಉತ್ತರವಿದೆ. ನಿಜಕ್ಕೂ ಬಹಳ ಚನ್ನಾಗಿ ಬರೆದಿದ್ದೀರಿ ಪ್ರಕಾಶಣ್ಣ....

ಸೀತಾರಾಮ. ಕೆ. / SITARAM.K said...

ಅದ್ಭುತ ಕಥೆ... ಕೊನೆಯ ಪ೦ಚ್ ವಃ!