Friday, August 24, 2012

ಪ್ರಿಯ... ಓದುಗ ಗೆಳೆಯಾ.......


ಪ್ರಿಯ... ಓದುಗ ಗೆಳೆಯಾ.......

ಮತ್ತೊಮ್ಮೆ ಸಂಭ್ರಮ... ಖುಷಿ ಪಡುವ ಸಂದರ್ಭ ಬಂದೊದಗಿದೆ...!

ನನ್ನ ಮೂರನೆಯ ಪುಸ್ತಕ ಬಿಡುಗಡೆಯಾಗುತ್ತಲಿದೆ...

ಜೊತೆಗೆ ಗೆಳೆಯರಾದ ಆಜಾದನ..
ಉಮೇಶ ದೇಸಾಯಿಯವರ..
ಚಿಂವ ಚಿಂವ್ ಗೆಳೆಯ "ಸತೀಶನ" ಪುಸ್ತಕಗಳೂ ಬಿಡುಗಡೆಯಾಗುತ್ತಲಿದೆ...

ನಮ್ಮೆಲ್ಲ ಪುಸ್ತಕಗಳನ್ನು ಪ್ರಕಟಿಸಿರುವದು  
ಗೊಮಿನಿ ಪ್ರಕಾಶನದ "ಸತೀಶ್ ಗುಬ್ಬಚ್ಚಿ"

ಇದಲ್ಲದೇ..

ಸಹೋದರಿ ಚೇತನಾ ತೀರ್ಥಹಳ್ಲಿ ಮತ್ತು ತಮ್ಮ ಸುಶ್ರುತ ದೊಡ್ಡೇರಿ..
ಇವರು ಸಂಪಾದಿಸಿದ..
ಸೃಷ್ಟಿ ನಾಗೇಶ್  ಪ್ರಕಟಿಸಿರುವ...

ಬ್ಲಾಗಿಗರ ಹೆಮ್ಮೆಯ "ಬ್ಲಾಗಿಸು ಕನ್ನಡ ಡಿಂಡಿಮವ" ಎನ್ನುವ ಪುಸ್ತಕವೂ ಬಿಡುಗಡೆಯಾಗುತ್ತಲಿದೆ...

"ಇದರ ಹೆಸರು... ಇದಲ್ಲಾ...!"
ಇದು ನನ್ನ ಮೂರನೆಯ ಪುಸ್ತಕ...

ಎಷ್ಟೇ ಸಹಜವಾಗಿರಬೇಕು ಅಂತ ಅಂದು ಕೊಡರೂ..
ಸಣ್ಣ ಆತಂಕ... !!
ಒಳಗೊಳಗೇ ತಡೆಯಲಾಗದ ಖುಷಿ...!

ನೀವೆಲ್ಲ ಇದನ್ನು ಹೇಗೆ ಸ್ವೀಕಾರ ಮಾಡುತ್ತೀರೋ ಎನ್ನುವ "ಢವ...ಢವ.." !

ಪ್ರಿಯ ಓದುಗ ಗೆಳೆಯಾ...

೨೦೦೮ರಲ್ಲಿ ಶುರುವಾದ ಈ ಬ್ಲಾಗ್ ನನ್ನನ್ನು ಎಷ್ಟು ಬದಲಿಸಿದೆ ಗೊತ್ತಾ ? 

ನನಗೇ ಆಶ್ಚರ್ಯವಾಗುತ್ತಿದೆ... !

ಎಲ್ಲೋ ಬೆಂಗಳೂರಿನ ಹೊರವಲಯದಲ್ಲಿ ...
ಮನೆ.. 
ಅಪಾರ್ಟಮೆಂಟು ಕಟ್ಟುತ್ತ...
ಮೇಸ್ತ್ರಿಯೊಡನೆ ಲೆಕ್ಕಾಚಾರ ಮಾಡುತ್ತ...

ಪ್ರತಿ ಶನಿವಾರ ಹಣ ಹೊಂದಿಸುವ ಜಂಜಾಟದಲ್ಲಿ ಕಳೆದು ಹೋಗುತ್ತಿದ್ದ 
ನನ್ನನ್ನು...
ಈ ಬ್ಲಾಗ್ ಎಲ್ಲೋ ತಂದು ನಿಲ್ಲಿಸಿಬಿಟ್ಟಿದೆ...!!

ನನ್ನ ಮಗ..
ಮಡದಿಯೊಡನೆ...
ಟಿವಿಯ ಸೀರಿಯಲ್...

ಗೆಳೆಯ ಸತ್ಯ ಕುಟುಂಬದವರೊಡನೆ ವರ್ಷಕ್ಕೊಂದೆರಡು   ಬಾರಿ ಪ್ರವಾಸ ಹೋಗುತ್ತ..

ನನ್ನ ದೈನಂದಿನ ವ್ಯವಹಾರಿಕ ಬದುಕಿನಲ್ಲಿ ಕಳೆದು ಹೋಗುತ್ತಿದ್ದೆ...

ಈ ಬ್ಲಾಗ್ ನನಗೊಂದು ಹೊಸ ಪ್ರಪಂಚ ಸೃಷ್ಟಿಸಿಕೊಟ್ಟಿದೆ...!!

ನಾನು ಬರೆದದ್ದು ಬರಹ.. 
ಲೇಖನಗಳಲ್ಲ...
ನನ್ನೊಳಗೆ ಉಳಿದು ಹೋಗಿದ್ದ ಮಾತುಗಳು...

ನಾನು ಮಾತನಾಡಬೇಕೆಂದಿದ್ದ ಧ್ವನಿಗಳು..

ನನ್ನ ಭಾವಗಳಿಗೆ ನೀವು ಸಾಕ್ಷಿಯಾದಿರಿ...!

ಎಷ್ಟೊಂದು ಪ್ರೋತ್ಸಾಹಗಳು..
ಪ್ರತಿಕ್ರಿಯೆಗಳು !!
ಪ್ರೀತಿ ಮಮತೆ ತೋರಿಸಿದ್ದೀರಿ... !

ನಿಜಕ್ಕೂ ಆಶ್ಚರ್ಯವಾಗುತ್ತದೆ...!

ಇದಕ್ಕೆಲ್ಲ ನಾನು ಅರ್ಹನಾ? ..........
ನನಗೆ ಯೋಗ್ಯತೆ ಇದೆಯಾ?.........

ಎಲ್ಲೋ ಒಂದುಕಡೆ ನಿಂತ ನೀರಾಗಿಬಿಡುತ್ತಿದ್ದ ನನ್ನನ್ನು ...
ಪ್ರವಹಿಸುವಂತೆ ಮಾಡಿದ್ದು  ನೀವು...!

ನಿಮ್ಮ ಪ್ರೀತಿಯ ಓದು...!

ನಿಮ್ಮ ಈ ಪ್ರೀತಿ ..
ಮಮತೆ ಹೀಗೆಯೇ ಇರಲಿ...

ಬ್ಲಾಗ್ ಲೋಕದ ನನ್ನೆಲ್ಲ ಗೆಳೆಯರಿಗೆ...
ಪ್ರೀತಿಯ ಸಹೋದರಿಯರಿಗೆ...

ಹಿರಿಯರಿಗೆ.. ಎಲ್ಲರಿಗೂ... ಪ್ರೀತಿಯ ವಂದನೆಗಳು...

ಇಂದು (25/8 2008) ವಾಡಿಯಾ ಸಭಾಂಗಣಕ್ಕೆ ದಯವಿಟ್ಟು ಬನ್ನಿ...

ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳಿ...

ರುಚಿಕಟ್ಟಾದ ತಿಂಡಿ.....
ಬಿಸಿ ಬಿಸಿ
ಕಾಫೀ...
ಟೀ .. ಮತ್ತು 

ನಾನು...
ನನ್ನ ಬ್ಲಾಗ್ ಕುಟುಂಬ ನಿಮಗಾಗಿ ಕಾಯುತ್ತೇವೆ...


ಬೆಳಿಗ್ಗೆ ಹತ್ತುಗಂಟೆಗೇ ಬನ್ನಿ ಹರಟೋಣ....

ಕಾಯುತ್ತಾ ಇರುತ್ತೇವೆ...
ನಮ್ಮ 
ಕ್ಯಾಮರಾಗಳೊಡನೆ  .........................


17 comments:

umesh desai said...

illairedಹೆಗಡೇಜಿ ನಿಮ್ಮ ಮಾತು ನೂರಕ್ಕೆ ನೂರು ನಿಜ
ಇದೊಂದು ಹೊಸ ಲೋಕ ..ಬ್ಲಾಗ್ ಲೋಕ
ಅಂದ ಹಾಗೆ ನಾನೂ ವಾಡಿಯಾಕ್ಕೆ ಬರಬೇಕೆಂದಿರುವೆ......!!!!

Srikanth Manjunath said...

ಮನೆ ಕಟ್ಟಲು ಎಷ್ಟೇ ಇಟ್ಟಿಗೆ ಉಪಯೋಗಿಸಿದರು ಪ್ರತಿಯೊಂದು ಇಟ್ಟಿಗೆಯೂ ಪ್ರಮುಖ..ಹಾಗೆಯೇ ಪ್ರತಿ ಇಟ್ಟಿಗೆಗೂ ಹೆದರಿಕೆ, ಕಳವಳ, ಆತ್ಮ ವಿಶ್ವಾಸ ಎಲ್ಲವು ಇರುತ್ತದೆ..
ಮೂರನೆಯ ಕಾಣಿಕೆ ಓದಲು ಕಾತುರನಾಗಿರುವ ಅಸಂಖ್ಯಾತ ಓದುಗರಲ್ಲಿ ಮೊದಲ ಸಾಲಲ್ಲೇ ನಿಲ್ಲಲು ಹೊಡೆದಾಡುತ್ತಿರುವ ನಿಮ್ಮ ಅಭಿಮಾನಿ.....
ಶುಭವಾಗಲಿ...ಪ್ರಕಾಶಣ್ಣ...

Sudeepa ಸುದೀಪ said...

ಎಲ್ಲರ ಹಾರೈಕೆ ನಿಮ್ಮೊಂದಿಗಿದೆ...ಒಳ್ಳೆಯದಾಗಲಿ ಪ್ರಕಾಶ್ ಸರ್.. :)

Dr.D.T.Krishna Murthy. said...

ನಮ್ಮೆಲ್ಲರ ಹಾರೈಕೆ ನಿಮ್ಮೊಂದಿಗಿದೆ.wishing the function a grand success!!!

Mahesh Gowda said...

all the best annaya :) DOM :) jai hoooooo

Rajesh said...

Shubhavaagali Prakashanna

dinesh maneer said...

all the best Prakash avare

viju said...

Congrats Prakashanna..............Jayavagali.........:)

Vani Satish said...

ಗುಡ್ ಲಕ್ , Congrats ಪ್ರಕಾಶಣ್ಣಾ , "ಅದು -ಇದು-ಹೆಸರು " ಎಂಬ "ಹೆಸರು " ಗಲೊಳಗೊಂಡ ಇನ್ನಸ್ಟು ಪುಸ್ತಕಗಳು ಬರಲಿ ಎಂಬ ಆಶಯ.

Badarinath Palavalli said...

ಮೂರನೇ ಪುಸ್ತಕವಲ್ಲ ನಿಮ್ಮ ಮೂವತ್ತನೇ ಪುಸ್ತಕಕ್ಕೂ ನಿಮಗೆ ಇದೇ ಕಾಯುವಿಕೆ ನಿಮಗೆ ಇದ್ದೇ ಇರುತ್ತದೆ ಪ್ರಕಾಶಣ್ಣ. ಏಕೆಂದರೆ, ಪ್ರತಿ ಪುಸ್ತಕವೂ ನಿಮಗೆ ಹೊಸತರ ಅನ್ವೇಷಣೆಯೇ.

ಉತ್ತಮ ಲೇಖಕನ ಲಕ್ಷಣವೇ ಇದು.

V.R.BHAT said...

ಅನಾರೋಗ್ಯದ ನಿಮಿತ್ತ ನಾನು ಬರಲಾಗುತ್ತಿಲ್ಲ, ಕಾರ್ಯಕ್ರಮಕ್ಕೆ ಶುಭಕೋರುತ್ತೇನೆ. ಎಲ್ಲಾ ನವ, ಯುವ ಕವಿ-ಸಾಹಿತಿಗಳಿಗೆ ಶುಭಾಶಯಗಳು.

Narayan Bhat said...

ಶುಭ ಹಾರೈಕೆಗಳು.

ಚಿನ್ಮಯ ಭಟ್ said...

ಹೊಸದನ್ನು ಕಲಿಯುವ ಆಸೆಯಿದ್ದರೂ ಹಳೆಯದು ಕಲಿತು ಮುಗಿಯುವ ತನಕ ಬರುವ ಹಾಗಿಲ್ಲ.....ಒಳ್ಳೆಯ ಕಲಿಕೆಯ ಅವಕಾಶವನ್ನು ತಪ್ಪಿಸಿಕೊಂಡ ಬೇಸರದೊಂದಿಗೆ,ಶುಭ ಹಾರೈಸುತ್ತಿದ್ದೇನೆ...ನಮಸ್ತೆ....

sunaath said...

ತುಂಬು ಹೃದಯದ ಶುಭಾಶಯಗಳು!

Ashok.V.Shetty, Kodlady said...

Karyakrama Chennagittu Prakashanna...Jai ho...

ಸೀತಾರಾಮ. ಕೆ. / SITARAM.K said...

tadavaagi noduttiruve... innu pustakagalu barali.

Unknown said...

Congrats sir.. Aadare ee date 25/8 2008 yaake anta gottagalilla :-)