Friday, January 6, 2012

ಬೆತ್ತಲೆಯಾಗುವದು ಅನಿವಾರ್ಯ ಎಂದಾಗ . .. ನಮ್ಮವರ ಬಳಿಯೇ.. ಬೆತ್ತಲಾಗಬೇಕು .. !!


ಭಾಗ:: ಎರಡು..PART :: 2 
(ಹಿಂದಿನ  ಭಾಗ ಓದಿ.. ದಯವಿಟ್ಟು  ಇದನ್ನು ಓದಿ..)


ನಾನು  ಕೆಲವು ದಿನಗಳ ಹಿಂದೆ ಕೇರಳದ ಕೊಚ್ಚಿ   ಹೋಗಿದ್ದೆ..


ರೂಮಿನಲ್ಲಿ ಹೆಂಡತಿ ಮಗನನ್ನು ಬಿಟ್ಟು..
ಕ್ಯಾಮರಾ ಹೆಗಲಿಗೆ ಹಾಕ್ಕೊಂಡು ತಿರುಗಾಡಲು ಹೋಗಿದ್ದೆ..
ಅಲ್ಲಿ  ..
ಬಸ್ ನಿಲ್ದಾಣದಲ್ಲಿ ಒಬ್ಬ ಕಾರಿನಿಂದ ಇಳಿದ...


ಹೌದು.. !!
ಆತ ನಮ್ಮ ಗ್ಯಾಸ್ ನಮ್ಮ ಮಹಾದೇವ.. !..!..!! "


ಮಹಾದೇವು ಕಾರನಲ್ಲಿ ತಿರುಗ್ತಿದ್ದಾನಾ...?.. !!"


ಹೆಚ್ಚಿಗೆ ಬದಲಾಗಿರಲಿಲ್ಲ.. 
ಅಲ್ಲಲ್ಲಿ ಕೂದಲು ಹಣ್ಣಾಗಿತ್ತು...
ನನ್ನನ್ನು ನೋಡಿದವನೆ ಓಡಿ ಬಂದು ತಬ್ಬಿಕೊಂಡು ಬಿಟ್ಟ...


ಅವನ ಸ್ವಭಾವವೂ ಬದಲಾಗಿರಲಿಲ್ಲ.. !! 


ಅವನ ಸ್ನೇಹದ ಆ ಅಪ್ಪುಗೆ ಹಾಗಿತ್ತು... !!


ಖುಷಿಆಯ್ತು.. !!


ನನಗೂ ಅವನನ್ನು ನೋಡಿದಾಗ ನೆನಪಾದದ್ದು ಅವನ "ಗ್ಯಾಸ್ ಸಮಸ್ಯೆ.." 


ಆತ ನನ್ನನ್ನು ಆತನ ಮನೆಗೆ ಕರೆದ..


ನಾನು ಹಿಂದೆ ಮುಂದೆ ನೋಡಿದೆ...ಅನುಮಾನಿಸಿದೆ..


" ಪ್ರಕಾಶು...
ಹೆದರ್ ಬೇಡ್ವೋ... 
ನನಗೆ ಈಗ ಗ್ಯಾಸಿನಿಂದ  ಸಮಸ್ಯೆ ಇಲ್ವೇ ಇಲ್ಲ... !!.."


ನನಗೆ ನಂಬಿಕೆ ಬರಲಿಲ್ಲ...


ಸರಿ ಎನ್ನುತ್ತ ಅವನ ಕಾರಿನಲ್ಲಿ ಕುಳಿತೆ... 


ಯಾವದಕ್ಕೂ ಇರಲಿ ಅಂತ ಕರ್ಚೀಫ್ ಕೈಯಲ್ಲಿ ಇಟ್ಟುಕೊಂಡೆ...



ನನಗೆ ಮಹಾದೇವನನ್ನು ಕಂಡು ತುಂಬಾ ಖುಷಿಯಾಗಿತ್ತು...
ಆತನ ದುಬಾರಿ ಕಾರು ನೋಡಿ ದಂಗಾಗಿ ಹೋಗಿದ್ದೆ...


ಆತ ದಾರಿಯಲ್ಲಿ ತನ್ನ ಸುದ್ಧಿ ಹೇಳುತ್ತ ಹೊರಟ..."


ನನಗೆ ಕುತೂಹಲ ಜಾಸ್ತಿ ಆಯ್ತು...


" ಪ್ರಕಾಶು..
ನನಗೆ ಈಗ ಗ್ಯಾಸಿನಿಂದ ಏನೂ ತೊಂದರೆ ಇಲ್ಲಪ್ಪಾ...
ಎಲ್ಲವೂ ನಮ್ಮ ನಾಗುವಿನ ಉಪಾಯ... !!
ಅವನ ಕೃಪೆ...!!..."


ನನಗೆ ಎಚ್ಚರ ತಪ್ಪಿ ಬೀಳುವದೊಂದು ಬಾಕಿ...!


ಈ ನಾಗು ಎಲ್ಲೆಲ್ಲಿ ಏನೇನು ಮಾಡಿದ್ದಾನೆ...?.. !!


"ಮುಂದೆ ಹೇಳೊ... " 


 ಮಹಾದೇವು ತುಂಬಾ ಸಮಾಧಾನದಲ್ಲಿದ್ದ...


"ನಿಜಕ್ಕೂ ನಮ್ಮ ನಾಗು ದೇವರ ಹಾಗೆ ಕಣೊ...
ನಿನಗೆ ನೆನಪಿದೆಯಾ...?


ನಾವು ಓದುವಾಗ ಒಬ್ಬ ವಿಜ್ಞಾನಿಯ ಪಾಠ ಬಂದಿತ್ತು..
ಲೂಯಿ ಪ್ಯಾಸ್ಚರ್ ಯಾರೋ ಒಬ್ಬ.. 
ಆತ ಒಂದು ರೋಗ ನಿರೋಧಕ ಕಂಡು ಹಿಡಿಯುತ್ತಾನೆ...


ಯಾವುದೋ ಒಂದು  ರೋಗಕ್ಕೆ ..
ಅದೇ ರೋಗದ ವೈರಸ್ ಇಂಜೆಕ್ಷನ್ ಚುಚ್ಚಿ ರೋಗ ನಿರೋಧಕ ಕಂಡುಹಿಡಿಯುತ್ತಾನೆ...!.."


ನಾನು ತಲೆ ಕೆರೆದು ಕೊಂಡೆ..
ಅರ್ಥ ಆಗಲಿಲ್ಲ..


"ಹೌದು.. 
ಅದಕ್ಕೂ ನಾಗುವಿಗೂ ಏನು ಸಂಬಂಧ...?"


"ನಮ್ಮ ನಾಗು ಪ್ರತಿಭಾವಂತ ಕಣೊ..
ನಮ್ಮ ನಾಗು ನನಗೆ ಹೇಳಿದ್ದು ಇಷ್ಟು...


"ಮಹಾದೇವು...
ಬೆಂಕಿಗೆ ಬೆಂಕಿಯೇ ಮದ್ದು...!
ನಿನ್ನ ಗ್ಯಾಸಿಗೆ... ಗ್ಯಾಸೇ ಮದ್ದು...!


ನೀನು ದಿನಾಲೂ ಬೆಳಿಗ್ಗೆ...
ಮಧ್ಯಾಹ್ನ .. ಸಾಯಂಕಾಲ  ...
ಖಾಲಿ ಹೊಟ್ಟೆಯಲ್ಲಿ...
ಹಸಿ  ಆಲೂಗಡ್ಡೆ.....!
ಹಿಂದಿನ ದಿನ ನೆನೆಸಿಟ್ಟ... ದೊಡ್ಡ ಕಡ್ಲೆ... !
ಸಣ್ಣ ಕಡ್ಲೆ..!
ಶೇಂಗಾ ಬೀಜ..!
ಮೂಲಂಗಿ... !
ಇವನ್ನೆಲ್ಲ... ಸಮನಾಗಿ ಸೇರಿಸಿ..ಸ್ವಲ್ಪ ಸೋಡಾ ಬೆರೆಸಿ... 


ಬರೊಬ್ಬರಿ ಎರಡು ಗ್ಲಾಸು ಜ್ಯೂಸ್ ಕುಡಿ... !!


ಬೇಕಿದ್ದಲ್ಲಿ ರಾತ್ರಿ ಮಲಗುವಾಗಲೂ ಕುಡಿ...!!..


ಹದಿನೈದು ದಿನ ತಗೋ... 
ನಿನ್ನ ಗ್ಯಾಸ್ ಸಮಸ್ಯೆ ಹೊರಟು ಹೋಗುತ್ತದೆ ನೋಡು".....
ಅಂತ ಅಂದಿದ್ದ.....!! "


ನನ್ನ ತಲೆ ಹಾಳಾಗಿ ಹೋಯ್ತು...!! 


ಚಚ್ಚಿ ಕೊಳ್ಳೋಣ ಅಂದರೆ ಪಕ್ಕದಲ್ಲಿ ಗೋಡೆಯೂ ಇರಲಿಲ್ಲ...!!


"ಏನ್ ಎಡಬಟ್ಟ್ ಇದ್ದಿಯೋ ನೀನು...?.. !..


ಆ ನಾಗು ಹೇಳಿದ್ನಂತೆ... !
ಇವನು ಹಸಿ ಆಲೂಗಡ್ಡೇ ಜ್ಯೂಸ್ ಕುಡಿದ್ನಂತೆ... !!.."


" ಪ್ರಕಾಶು..
ಇಲ್ಲಿ ಕೇಳೊ ಮಾರಾಯ್ನೆ...
ಕಳೆದು ಕೋಳ್ಳಲಿಕ್ಕೆ ಏನೂ ಇಲ್ದೇ ಇರುವಾಗ ರಿಸ್ಕ್ ತೆಗೆದು ಕೊಳ್ಳಬಹುದು ಕಣೊ...!
ನಾನು ರಿಸ್ಕ್ ತೆಗೆದು ಕೊಂಡೆ... 


ಈಗ ನೋಡು ನಾನೀಗ ಗ್ಯಾಸ್ ಫ್ರೀ ಮಹಾದೇವ..."


ನನ್ನ ಮೈಯಲ್ಲಿರುವ ಕೂದಲುಗಳೆಲ್ಲ ನಿಮಿರಿನಿಂತ ಅನುಭವ !!


ನಿಜವಾ... !!


ನಿಜವಾ...?


ಮಹಾದೇವನನ್ನು ಮುಟ್ಟಿ ... ಮುಟ್ಟಿ..
ಅಲುಗಾಡಿಸಿ ಕೇಳಿದೆ..


"ಲೇ... 
ಲೇ..ಗ್ಯಾಸು... !!
ತಮಾಶೆ ಮಾಡಬೇಡ್ವೋ... ನಿಜ ಹೇಳೊ...??.."


"ನಿಜ ಕಣೊ..
ನಾನೀಗ ಸ್ವಂತ ಬಿಜಿನೆಸ್ ಮಾಡ್ತಿದಿನಿ...
ಮದುವೆಯಾಗಿದೆ... !
ಎರಡು ಮಕ್ಕಳಿದ್ದಾರೆ.. !!
ಬದುಕಿನಲ್ಲಿ ಸಂತೋಷ ಇದೆ ಕಣೊ..."


ನನಗೂ ಹೇಳಲಾರದಷ್ಟು ಖುಷಿಆಯಿತು...


ಸ್ವಲ್ಪ ದೂರ ಹೋದ ಮೇಲೆ ಮಹಾದೇವು ಕಾರ್ ನಿಲ್ಲಿಸಿದ...


"ಇರು ಬಂದೆ...
ಕಾರಿನ ಗ್ಲಾಸ್ ತೆಗೆಯ ಬೇಡ..."


ಮಹಾದೇವು ಕಾರಿನಿಂದ ಇಳಿದು  ಹೊರಗಡೆ ಸ್ವಲ್ಪ ಹೋಗಿ... 
ಕೈ ಕಾಲು ಅಲ್ಲಾಡಿಸಿದ...
ಮೈ ..
ಹೊಟ್ಟೆ ಕುಲುಕಾಡಿಸಿ... 
ಕಾಲು ಅಗಲಿಸಿಕೊಂಡು ಸಾವಕಾಶವಾಗಿ  ನಡೆಯುತ್ತ ಬಂದ...!!..


ಕಾರ್ ಸ್ಟಾರ್ಟ್ ಮಾಡಿದ...


"ಪ್ರಕಾಶು...
ನನಗೆ ಗ್ಯಾಸ್ ಪೂರ್ತಿಯಾಗಿ ವಾಸಿಯಾಗಲಿಲ್ಲ...


ಆದರೆ ನಾಗುವಿನ ಔಷಧಿಯಿಂದ ನನ್ನ ಗ್ಯಾಸನ್ನು 
ಒಂದು ತಾಸು....
ಮುಕ್ಕಾಲು ತಾಸು ಏನೂ ತೊಂದರೆ ಇಲ್ಲದೆಯೇ ತಡೆ ಹಿಡಿದುಕೊಳ್ಳ ಬಲ್ಲೆ...!.."


ನನಗೆ ನಗಬೇಕೋ ಅಳಬೇಕೊ ಗೊತ್ತಗಲಿಲ್ಲ...


"ಮತ್ತೆ ...
ನಿನ್ನ ಸಮಸ್ಯೆ ಹೇಗೆ ಪರಿಹಾರವಾಯ್ತೋ.....??..
ಮದುವೆಯಾಗಿದೆ... ಮಕ್ಕಳಿವೆ ಅಂತಿಯಲ್ಲೋ..!!"


"ನಾನೀಗ ತಾಸುಗಟ್ಟಲೆ ಗ್ಯಾಸ್ ಬಿಡದೆ ಇರ್ತಿನಲ್ಲೋ..


ಗುಂಪಿನಲ್ಲಿ ಇರುವಾಗ ..
ಒಂದು ತಾಸು ಬಿಟ್ಟು ಹೊರಗಡೆ ಹೋಗಿ ಗ್ಯಾಸ್ ಬಿಟ್ಟು ಬರ್ತಿನಿ...
ಯಾರಿಗೂ ಗೊತ್ತೇ ಆಗುವದಿಲ್ಲ....!


ನನ್ನ ಮನೆಯವರಿಗೆ...
ಊರಿನ ಜನರಿಗೆ.. ನೆಂಟರಿಗೆ ...
ಎಲ್ಲರಿಗೂ "ನನಗೆ ನಾಗುವಿನ ಔಷಧದಿಂದ ಗ್ಯಾಸ್ ವಾಸಿಯಾಯಿತು" ಎಂದೆ..
ಎಲ್ಲರೂ ನಂಬಿದರು.."


"ಒಟ್ಟಿನಲ್ಲಿ ನಿನಗೆ ಒಳ್ಳೆಯದಾಯ್ತಲ್ಲ.. ಬಿಡು...
ಅದು ಸರಿ..
ಮದುವೆ ಹೇಗಾಯ್ತೋ...??.."


"ನನಗೆ ಗ್ಯಾಸ್ ರೋಗ ವಾಸಿ ಆಯ್ತು ಅಂದ ಕೂಡಲೆ ಮನೆಯವರೆಲ್ಲ ಹೆಣ್ಣು ಹುಡುಕಿದರು...
ನಾನೂ ನೊಡಲು ಹೋಗಿದ್ದೆ... 
ಹುಡುಗಿ ಚೆನ್ನಾಗಿದ್ದಳು.."


"ಹುಡುಗಿಗೆ ಹೇಳಲಿಲ್ಲವೇನೋ.. ನಿನ್ನ ಗ್ಯಾಸ್ ಸಮಸ್ಯೆಯನ್ನು..??.."


" ನಾನು ಹೇಳೋದನ್ನು ಸ್ವಲ್ಪ ಕೇಳು...


ಹಿರಿಯರ ಬಳಿ "ನಾನು ಹುಡುಗಿಯೊಡನೆ ಪ್ರತ್ಯೇಕವಾಗಿ ಮಾತನಾಡಬೇಕು " ಅಂತ ಕೇಳಿದೆ..
ಅವರೆಲ್ಲ ಒಪ್ಪಿದರು..
ನಾವು ಟೆರ್ರೆಸಿಗೆ ಹೋದೆವು...


ಹುಡುಗಿ ತುಂಬಾ ನಾಚಿಕೊಂಡಿದ್ದಳು..


"ನೋಡಿ..
ನನಗೆ ನೀವು ತುಂಬಾ ಇಷ್ಟವಾಗಿದ್ದೀರಿ...
ಒಂದು ಸಮಸ್ಯೆ ಇದೆ...


ನಾನು ಗ್ಯಾಸ್ ಪ್ರಕೃತಿಯವ..
ನನಗೆ ಗ್ಯಾಸ್ ಸಮಸ್ಯೆ ಇದೆ...
ಅದನ್ನು ನೀವು ಸಹಿಸಿ ಕೊಳ್ತೀರಿ ಅಂದರೆ.. ಮದುವೆಯಾಗೋಣ..."


ನನಗೆ ಸಮಾಧಾನ ಆಯ್ತು...


"ಒಳ್ಳೆ ಕೆಲಸ ಮಾಡಿದೆ ಕಣೊ..
ಹುಡುಗಿ.. ಏನಂದಳೋ...?"


"ಹುಡುಗಿ ಮೊದಲೇ ನಾಚಿಕೊಂಡಿದ್ದಳು.. 
ಈಗ ಮತ್ತೂ ನಾಚಿಕೊಂಡಳು...!!


"ಇಷ್ಯೀ...
ಈಶ್ಯೀ.... ರಾಮಾ.. ರಾಮಾ.. !!..
ಇದನ್ನು ಹೇಳಲಿಕ್ಕೆ ಇಲ್ಲಿ ಕರೆದುಕೊಂಡು ಬಂದ್ರಾ ?..


ನನ್ನ ಅಪ್ಪನಿಗೂ ಗ್ಯಾಸ್ ತೊಂದರೆ ಇದೆ...!
ನನ್ನ ಅಮ್ಮನಿಗೆ ಆರು ಜನ ಮಕ್ಕಳು.... !!.."


"ಅಬ್ಭಾ... 
ಹುಡುಗಿ ಜೋರಿದ್ದಾಳೆ ಕಣೊ..."


"ತುಂಬಾ ಒಳ್ಳೆಯವಳು ಕಣೊ..!!.."


ನನಗೆ ಮತ್ತೊಂದು ಸಂಶಯ ಹುಟ್ಟಿತು...


"ಮಹಾದೇವು...!!
ಮೊದಲ ರಾತ್ರಿ ಏನು ಮಾಡಿದೆಯೋ...??.. !!.."


"ಪ್ರಕಾಶು...


ನಾಲ್ಕೈದು ಫ್ಲಾಸ್ಕಿನಲ್ಲಿ ಚಹ ಮಾಡಿ ಇಟ್ಕೊಂಡಿದ್ದೆ...


ಚಹ ಕುಡಿಯುತ್ತ... 
ಆಗಾಗ ಏಳುತ್ತ... ನಿದ್ರೆ ಮಾಡದೆ ಬೆಳಗು ಮಾಡಿದೆ...!


ಮಧ್ಯ ಮಧ್ಯದಲ್ಲಿ..
ಅವಳನ್ನು ಪ್ರೀತಿನೂ ಮಾಡಿದೆ ಕಣೊ...!
ಅವಳಿಗೆ ಏನೂ ಗೊತ್ತಾಗಲಿಲ್ಲ..."


ನಮ್ಮ ಮಹಾದೇವು ಬುದ್ಧಿವಂತ ಅನ್ನಿಸಿತು...


"ಮಹಾದೇವು...
ಅವಳೊಡನೆ ಬದುಕುತ್ತಾ ಇದ್ದೀಯಾ...
ಗೊತ್ತಗಲಿಲ್ಲವೆ...?


ಆತ ಉತ್ತರ ಕೊಡುವಷ್ಟರಲ್ಲಿ  ಅವನ ಮನೆ ಬಂತು...


ದೊಡ್ಡ ಮನೆ.. ಕಲ್ಲಿನಲ್ಲಿ ಕಟ್ಟಿಸಿದ್ದಾನೆ...
ಒಳಗೆ ಹೋದೆವು...
ದೊಡ್ಡ ಹಾಲ್...
ಮಹಾದೇವನ ಬಗೆಗೆ ಹೆಮ್ಮೆಯೂ ಮೂಡಿತು... ಪ್ರೀತಿಯೂ ಉಕ್ಕಿತು...


ಅವನ ಹೆಂಡತಿ ಪ್ರೀತಿಯಿಂದ ಮಾತನಾಡಿಸಿದಳು...


"ನೀವು ಪ್ರಕಾಶಣ್ಣ ಅಲ್ಲವಾ...
ನಿಮ್ಮ ಸುದ್ಧಿ ಎಲ್ಲ ಹೇಳ್ತಾ ಇರ್ತಾರೆ...


ನನಗೆ ಒಮ್ಮೆ ನಿಮ್ಮ ಗೆಳೆಯ ನಾಗುವನ್ನು ನೋಡಬೇಕು...


ಇವರು ಇನ್ನೂ ಕರೆದು ಕೊಂಡು ಹೋಗೇ ಇಲ್ಲ..."


ನಾನು ಮಹಾದೇವನ ಮುಖ ನೋಡಿದೆ...


ಆತ ನನ್ನ ಕಣ್ಣು ತಪ್ಪಿಸಿ ಬೇರೆ ಎಲ್ಲೋ ನೋಡುತ್ತಿದ್ದ...


ಅವಳು ಬಿಸಿ.. ಬಿಸಿ  ಚಹ ಕೊಟ್ಟು ಒಳಗೆ ಹೋದಳು...


"ಪ್ರಕಾಶು ಮನೆ ತೋರಿಸ್ತಿನಿ ಬಾರೊ..."


ನಾನು ಅವನನ್ನು ಹೊಂಬಾಲಿಸಿದೆ...


"ನೋಡೋ... 
ಇದು ಮಾಸ್ಟರ್ ಬೆಡ್ ರೂಮ್..."


ತುಂಬಾ ಚೆನ್ನಾಗಿತ್ತು... ಅಲಂಕಾರಗಳು ಭರ್ಜರಿಯಾಗಿಯೇ ಇದ್ದವು...


ಗೋಡೆ ತುಂಬಾ ಕಿಡಕಿಗಳೇ ಇದ್ದವು..


ಇನ್ನೊಂದು ರೂಮಿಗೆ ಕರೆದುಕೊಂಡು ಬಂದ...


"ಪ್ರಕಾಶು ...
ಇದು ಮಾಸ್ಟರಣಿ ರೂಮ್...!!.."


ಏನಪಾ ... ಇದು..??... !!


ನಾನು ತಲೆ ಕೆರೆದು ಕೊಂಡೆ..!


"ನೋಡೊ...
ಇದು ತುಂಬಾ ಸಿಂಪಲ್ ಕಣೋ..


ನಾವು ರಾತ್ರಿ  ಊಟ ಮಾಡಿದ ನಂತರ ..
ಪ್ರೀತಿ ಮಾಡ್ಲಿಕ್ಕೆ ಆ  ರೂಮ್...!


ಪ್ರೀತಿ ಮುಗಿದ ಮೇಲೆ ಅವಳು ಈ ರೂಮಿಗೆ ಬರ್ತಾಳೆ....!!!..


ಜಾಸ್ತಿ ಪ್ರೀತಿ ಬೇಕು ಅಂದಾಗ ಮಧ್ಯದಲ್ಲಿ ಎದ್ದು ಬರ್ತಾಳೆ...!!.."


ನಾನು ಮತ್ತೆ ಎಚ್ಚರ ತಪ್ಪಿ ಬೀಳುವವನಿದ್ದೆ..!!..


ಹೇಗೋ..
ಹೇಗೊ ಸಂಭಾಳಿಸಿಕೊಂಡೆ...!


ಆತ ಹೆಚ್ಚು ಹೊತ್ತು ಮನೆಯಲ್ಲಿ ಇರಗೊಡಲಿಲ್ಲ...


ನನ್ನನ್ನು ಬಸ್ಟ್ಯಾಂಡಿಗೆ ಕರೆದುಕೊಂಡು ತಂದು ಬಿಟ್ಟ...


"ಪ್ರಕಾಶು..
ಎಲ್ಲರಿಂದ  ದೂರವಾಗಿ.. 
ಇಲ್ಲಿ ಭಾಷೆ ಬರದ ನಾಡಿನಲ್ಲಿ ಹಾಯಾಗಿದ್ದೇನೆ..!


ಬೆತ್ತಲಾಗ ಬೇಕು ..
ಬೆತ್ತಲೆಯಾಗುವದು ಅನಿವಾರ್ಯ ಎಂದಾಗ .  
ನಮ್ಮವರ ಬಳಿಯೇ.. ಬೆತ್ತಲಾಗಬೇಕು ಕಣೋ..!


ನನ್ನ ಹೆಂಡತಿ ಒಳ್ಳೆಯವಳು.."


ಎನ್ನುತ್ತಾ ನನ್ನನ್ನು ತಬ್ಬಿಕೊಂಡ...
ಆ ಅಪ್ಪುಗೆಯಲ್ಲಿ ಹೇಳಲಾಗದ ತುಂಬಾ ಮಾತುಗಳಿದ್ದವು...


ನಾನು ರೂಮಿಗೆ ಬಂದೆ..
ನಾನು ನನ್ನ ಮಡದಿಗೆ ಈ ಕಥೆಯನ್ನೆಲ್ಲ ಹೇಳಿದೆ...


ಬಿದ್ದೂ ಬಿದ್ದೂ ನಕ್ಕಳು...


"ಅಲ್ಲಾರಿ...
ಅವನಿಗೆ ಎರಡು ಮಕ್ಕಳು ಅಂದ್ರಲ್ಲ...
ಮಕ್ಕಳು ಹೇಗಿದ್ದಾರೆ...?
ಪಾಪ..!!..
ಮಕ್ಕಳಿಗೆ ಗ್ಯಾಸ್ ಸಮಸ್ಯೆ ಇದೆಯಂತಾ...?"


"ಮಕ್ಕಳಿಗೆ ಗ್ಯಾಸ್ ಸಮಸ್ಯೆ ಇಲ್ಲಂತೆ ಕಣೆ...!
ಅವರು ಚೆನ್ನಾಗಿದ್ದಾರೆ..


ಆದರೆ...


ಆ ಮಕ್ಕಳಿಗೆ ಮುಖದ ತುಂಬ ದೊಡ್ಡ ಮೂಗು ಇದೆ ಕಣೆ...!!


ದೊಡ್ಡ... ದೊಡ್ಡ... ಮೂಗು.. !!.."


ನನ್ನಾಕೆ... 
ನಗು ತಡೇಯಲಾರದೆ ಹೊರಕ್ಕೆ ಓಡಿದಳು...!!


ನನಗೂ  ನಗು ತಡೆಯಲಾಗಲಿಲ್ಲ...


ಜೋರಾಗಿ ನಕ್ಕು ಬಿಟ್ಟೆ...!!...








(ಈ "ಆಲುಗಡ್ಡೆ ಜ್ಯೂಸ್ " ಬಗೆಗೆ ನನಗೆ ವಿವರಗಳು ಗೊತ್ತಿಲ್ಲ..


ನನ್ನ ಗೆಳೆಯ ಇನ್ನೂ ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ..
ಅದರಿಂದಲೂ ವಾಸಿಯಾಗಿರ ಬಹುದು..")


51 comments:

mshebbar said...

ಗ್ಯಾಸ್ ಸಮಸ್ಯೆ ಹುಟ್ಟುಹಾಕಿ, ಅದಕ್ಕೂ ಪರಿಹಾರ ಹುಡುಕಿದ್ದಕ್ಕೆ ಧನ್ಯವಾದಗಳು. ಅಂತೂ ನಾವೂ,ನೀವೂ ಎಲ್ಲಾರೂ ಗ್ಯಾಸ್ ಫ್ರೀ ಆಗಿರಬಹುದು.

Ittigecement said...

ಪ್ರೀತಿಯ ಹೆಬ್ಬಾರ್ ಸರ್...

ನೀವು ಪ್ರತಿಕ್ರಿಯೆ ಕೊಟ್ಟಿದ್ದು ಹೆಮ್ಮೆಯ ವಿಷಯ..

ಸರ್..
ಇಲ್ಲೊಂದು ವಿಷಯವಿದೆ..
ಆತ ಹಲವಾರು ಔಷಧಿ ತೆಗೆದುಕೊಳ್ಳುತ್ತಿದ್ದ..

ಮಧ್ಯದಲ್ಲಿ ನಮ್ಮ ನಾಗುವಿನ ಆಲೂಗಡ್ಡೆ ಜ್ಯೂಸನ್ನು ತೆಗೆದು ಕೊಂಡಿದ್ದ..

ಯಾವುದರ ಪರಿಣಾಮವೋ ಗೊತ್ತಿಲ್ಲ
ಗ್ಯಾಸ್ ಬಿಡುವ ಸಮಯವನ್ನು ಜಾಸ್ತಿ ಮಾಡಿಕೊಂಡಿದ್ದ..

ದಯವಿಟ್ಟು ಯಾರೂ "ಆಲೂಗಡ್ಡೆ ಜ್ಯೂಸ್" ಬಗೆಗೆ ತಲೆಕೆಡಿಸಿಕೊಳ್ಳಬೇಡಿ...

ಮಹಾದೇವು ಉಳಿದ ಔಷಧಗಳನ್ನೂ ತೆಗೆದು ಕೊಳ್ಳುತ್ತಿದ್ದ ಅಂದರೆ ಹಾಸ್ಯ ಕಡಿಮೆಯಾಗಾಬಹುದೆಂಬ ಸಂಶಯದಲ್ಲಿ ಅದನ್ನು ಸೇರಿಸಿಲ್ಲವಾಗಿತ್ತು..
ಸರ್..

ಆಲೂಗಡ್ಡೆ ಜ್ಯೂಸ್ ಇಷ್ಟಪಟ್ಟಿದ್ದಕ್ಕೆ..
ಪ್ರೀತಿ ಪೂರ್ವಕ ಆಶೀರ್ವಾದಕ್ಕೆ ಧನ್ಯವಾದಗಳು..

ಪ್ರತಿಕ್ರಿಯೆಗಳು ಟಾನಿಕ್ ಥರಹ..

ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತವೆ..

ಮೌನರಾಗ said...

ಗ್ಯಾಸ್ ಪುರಾಣದಲ್ಲಿ.. ಲಾಫಿಂಗ್ ಗ್ಯಾಸ್ ನ ನಮಗೆ ಕೊಟ್ಟು ಬಿಟ್ಟಿರಿ ಪ್ರಕಾಶಣ್ಣ...

Srikanth Manjunath said...

ಸಮಸ್ಯೆ ಎನ್ನುವು ಹಾಳು ಬಾವಿ ಇದ್ದ ಹಾಗೆ...ಅದರೊಳಗೆ ಇದ್ದಾರೆ ಇನ್ನೂ ಜಟಿಲ ಸಮಸ್ಯೆಯಾಗುತ್ತದೆ
ಅದರಿಂದ ಹೊರಗೆ ಬಂದು ನಿಂತರೆ ಮಾತ್ರ ಪರಿಹಾರ ದೊರೆಯುತ್ತದೆ..
ಹೌದು ಮಹಾದೇವ ಹೇಳಿದ ಹಾಗೆ..ನಮ್ಮವರ ಮುಂದೆ ಬೆತ್ತಲಾಗುವುದು ತುಂಬಾ ಸರಳ ಪರಿಹಾರ..
ಗೊಮ್ಮಟನ ಮುಂದೆ ನಿಂತಾಗ ನಮಗೆ ನಾಚಿಕೆಯಾಗುವುದರ ಬದಲು ಗೊಮ್ಮಟನ ಆತ್ಮ ವಿಶ್ವಾಸವನ್ನು ಕೊಂಡಾಡುವ ಬಯಕೆ ಆಗುತ್ತದೆ..
ಇಲ್ಲಿ ಮಹಾದೇವನ ವ್ಯಕ್ತಿತ್ವ ಚಿತ್ರಿಸಿರುವ ರೀತಿ ನನಗೆ ಅದೇ ಗೊಮ್ಮಟನ ಮೂರ್ತಿ ನೆನಪಿಗೆ ಬಂತು..
ಕ್ಲಿಷ್ಟಕರವಾದ ಸಮಸ್ಯೆಗಳಿಗೆ ಯಾವಾಗಲು ಅಷ್ಟೇ ಸುಲಭವಾದ ಪರಿಹಾರ ದೊರೆಯುತ್ತದೆ...
ಸಮಸ್ಯೆಗೆ ಹೊಂದಾಣಿಕೆ ಮಾಡಿಕೊಂಡರೆ ಎಲ್ಲವು ಸರಾಗ ಎನ್ನುವ ಮನೋಭಾವ ಮಹಾದೇವನ ಹೆಂಡತಿ, ಹಾಗು ಮಕ್ಕಳ ಪಾತ್ರದಲ್ಲಿ ಮೂಡಿಬಂದಿದೆ (ದೊಡ್ಡ ಮೂಗು=ದೊಡ್ಡ ಮನಸು)
ಇದು ನಿಮ್ಮ ಕತೆಯಲ್ಲಿನ ಒಟ್ಟಾರೆ ಸಾರಾಂಶ ಅಂತ ನನ್ನ ಅನಿಸಿಕೆ
ಒಳ್ಳೆಯ ಬರವಣಿಗೆ..ಸುಲಲಿತವಾಗಿ ಕರೆದುಕೊಂಡು ಹೋಗುವ ನಿರೂಪಣೆ..ಅಭಿನಂದನೆಗಳು

ಸಂಧ್ಯಾ ಶ್ರೀಧರ್ ಭಟ್ said...

ಸೂಪರ್ ಆಗಿದೆ ಕಥೆ.. ನಿಮ್ಮ ನಾಗು doctor ಕೂಡ ಎಂಬುದನ್ನು ಕೇಳಿ ಖುಷಿ ಆಗುತ್ತಿದೆ..
ಲೂಯಿ ಪ್ಯಾಶ್ಚರನಿಗೂ ಗೊತ್ತಿರಲಿಕ್ಕಿಲ್ಲ ನಾಗುವಿನ ಔಷಧಿ..!!!! ಆಲುಗಡ್ಡೆ ಜ್ಯೂಸ್ ಹೆಂಗಿತ್ತೋ ಏನೋ..:)
(ಪ್ರಯೋಗ ಮಾಡುವ ಧೈರ್ಯವಿಲ್ಲ..!!)
ಮಾಸ್ಟರ್ ಬೆಡ್ ರೂಂ ಮತ್ತು ಮಸ್ಟರಿಣಿ ಬೆಡ್ ರೂಂ ಕಾನ್ಸೆಪ್ಟ್ ಮಜವಾಗಿದೆ....
ಮಕ್ಕಳ ಮೂಗಿನ ಬಗ್ಗೆ ಓದಿ.. ನಕ್ಕು ನಕ್ಕು ನನ್ನ ಬಾಯಿ ಅಗಲವಾಗಿ ಹೋಯ್ತಾ ಎನ್ನುವ ಅನುಮಾನ ಶುರುವಾಗಿದೆ.. ನನಗೆ..
ನಕ್ಕು ಸುಸ್ತಾಗಿದೆ ನಿನ್ನ ಆಲುಗಡ್ಡೆ ಜ್ಯೂಸ್ ಬಗ್ಗೆ ಓದಿ.. ಇವಾಗ ಯಾವದಾದರೂ ಹಣ್ಣಿನ
ಜ್ಯೂಸ್ ಅಗತ್ಯವಾಗಿ ಬೇಕು..:)

ಅಡಪೋಟ್ರು said...

ಕಥೆಯ ತಲೆಬರಹದಡಿಯಲ್ಲಿ ಒಂದು ನೀತಿ. ಬದುಕು ವಾಸ್ತವ ನಾವಂದಂತೆ ಯಾವುದು ನಡೆಯದು. ಇರುವುದನ್ನು ಇರುವಂತೆ ಸ್ವೀಕರಿಸುವುದು ಜಾಣತನ.

viju said...

ಮಜಾ ಇದ್ದೊ ಪ್ರಕಾಶಣ್ಣ....ಟೈಟಲ್ ಮಸ್ತ್ ಇದ್ದು....!!

Ittigecement said...

ಮೌನ ರಾಗ....

ಹ್ಹಾ... ಹ್ಹಾ...!!
ಗ್ಯಾಸ್ ಪುರಾಣಕ್ಕೆ ಸಾಕ್ಷಿಯಾದ ನನ್ನ ಸ್ಥಿತಿ ಹೇಗಾಗಿರ ಬೇಡ..!!

ಮಧ್ಯ ಮಧ್ಯದಲ್ಲಿ...
ಆತ ಸಮಸ್ಯೆಯನ್ನು ಎದುರಿಸಲು ಮಾಡಿರುವ ಉಪಾಯಗಳು.. !!

ಒಂದೇ... ಎರಡೆ..?

ಒಂದುಕಡೆ ..ಆತ ಜೀವನದಲ್ಲಿ ನೆಲೆ ಕಂಡುಕೊಂಡಿದ್ದಾನೆ ಎನ್ನುವ ಖುಷಿ..!

ಹೇಳಲಾಗದ ಅನುಭವ ಅದು..

ಲಾಫಿಂಗ್ ಗ್ಯಾಸ್ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

ಪ್ರತಿಕ್ರಿಯೆಗಾಗಿ ಜೈ ಹೋ !!

ಬರುತ್ತಾ ಇರಿ..

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಯಾವದನ್ನ ತಡೆಗಟ್ಟಲು ಸಾಧ್ಯವಿಲ್ಲವೋ ಅದರೊಂದಿಗೆ ಸುಖವಾಗಿ ಬದುಕವ ಕಲೆಗಾರಿಕೆ ಬೇಕು....ತಮ್ಮ ನಾಗುವಿನ ಕತರನಾಕ ಐಡಿಯಾ ಗಳು, ಮಹಾದೇವನ ಕಲೆಗಾರಿಕೆ... ತಮ್ಮ ಲೇಖನಗಾರಿಕೆ...ಎಲ್ಲವು ತುಂಬಾ ಚೆನ್ನಾಗಿ ಮೂಡಿ ಒಳ್ಳೆ ಹಾಸ್ಯ-ಹೂರಣವನ್ನ ತಮ್ಮ ಬ್ಲಾಗ್ ಓದುಗರಿಗೆ ಒದಗಿಸಿವೆ...
ಧನ್ಯವಾದಗಳು...

Ittigecement said...

ಶ್ರೀಕಾಂತ್ ಮಂಜುನಾಥ್ ಸರ್...

ನಿಮ್ಮ ಪ್ರತಿಕ್ರಿಯೆ ತುಂಬಾ ಖುಷಿಕೊಡುತ್ತದೆ..
ಬಹಳ ಚಂದದ ವಿಮರ್ಶೆ.. ಮತ್ತು ಅದರ ಒಳನೋಟ ಇಷ್ಟವಾಗುತ್ತದೆ..

ಬರೆದದ್ದು ಸಾರ್ಥಕವಾಯಿತೆನ್ನುವ ಭಾವ ತಂದುಕೊಡುತ್ತದೆ..

ಜೀವನ ಪುರ್ತಿ "ಗ್ಯಾಸಿನಿಂದ" ಅವಹೇಳನೆ ಅನುಭವಿಸಿದ ಮಹಾದೇವ..
ಭಾಷೆ ಬರದ ನಾಡಿನಲ್ಲಿ ಮರೆಯಾಗಿ ಬದುಕುವ ನಿರ್ಧಾರ ಸರಿ ಎನ್ನುವದು ನನ್ನ ನಿಲುವು..

ಇವನಿಗೆ ಪೂರ್ತಿಯಾಗಿ ವಾಸಿಯಾಗಿದ್ದರೂ..

"ಗ್ಯಾಸ್ ಮಹಾದೇವ" ಎನ್ನುವ ಅಡ್ಡ ಹೆಸರು ಹೋಗುತ್ತಲೇ ಇರಲಿಲ್ಲ..!!

"ಈತ "ಗ್ಯಾಸ್ ಮಹಾದೇವನ ಮಗ" ಅಂತ ಮಕ್ಕಳಿಗೂ ಹಣೆ ಪಟ್ಟಿ ಕೊಡುತ್ತಿತ್ತು ನಮ್ಮ ಸಮಾಜ...ಮತ್ತು...
ನಾವುಗಳು..

ಪಲಾಯನವಾದ ಅನ್ನಿಸಿದರೂ.. ಆತನ ನಿರ್ಧಾರ ಸರಿ..

ಇನ್ನು ಮಡದಿಯೊಡನೆ ತನ್ನ ಕಷ್ಟವನ್ನು ಹೇಳಿ..
ಅವಳೆದುರು ಬೆತ್ತಲೆಯಾಗಿದ್ದು...

ಎಲ್ಲಕ್ಕಿಂತ ಅವಳು ಅವನನ್ನು ಸ್ವೀಕಾರಮಾಡಿದ್ದು ಖುಷಿಕೊಡುವಂಥಾದು ಅಲ್ಲವೆ?

ಅವನ ಬಾಳು ತಣ್ಣಗಿರಲಿ..

ನಿಮ್ಮ ಒಳನೋಟದ ಪ್ರತಿಕ್ರಿಯೆಗಾಗಿ..
ಪ್ರೋತ್ಸಾಹಕ್ಕಾಗಿ ಹೃದಯಪೂರ್ವಕ ವಂದನೆಗಳು...

Ittigecement said...

ಸಂಧ್ಯಾ...

ಹ್ಹೇ.. ಹ್ಹೇ... !!

ವಾಯುವಿಗೆ ... ವಾಯುವೇ ಮದ್ದು !!

ಈ ನಾಗುವಿಗೆ ಎಲ್ಲಿಂದ ಹೊಳೆಯಿತೋ ಈ ಔಷಧಿ.. ದೇವರಿಗೆ ಗೊತ್ತು !!

ಆಲೂಗಡ್ಡೆ ಜ್ಯೂಸಿಗೆ ಸೋಡಾ ಹಾಕಿ ಕುಡಿದ ಮಹಾಷಯನಿಗೆ ಏನನ್ನಬೇಕು?

"ಕಳೆದುಕೊಳ್ಳಲಿಕ್ಕೆ ಏನೂ ಇಲ್ಲದಿರುವಾಗ.. ರಿಸ್ಕ್ ತೆಗೆದುಕೊಳ್ಳುವದು ಸುಲಭ..."

ನಿಜ..

ಮಹಾದೇವ ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿ ಗ್ಯಾಸ್ ಬಿಟ್ಟು ಬಂದ ರೀತಿ ನನಗೆ ಷಾಕ್ ಆಗಿತ್ತು... !

ನಿಮಗೆ ಗ್ಯಾಸ್ ಮಹಾದೇವ ಇಷ್ಟವಾಗಿದ್ದಕ್ಕೆ...
ಚಂದದ ಟಾನಿಕ್ ಥರಹದ ಪ್ರತಿಕ್ರಿಯೆಗೆ ಧನ್ಯವಾದಗಳು..

ನಿಮ್ಮ ಕವನದ ಬ್ಲಾಗ್ ಜಲ್ದಿ ಬರಲಿ..

ಪ್ರೀತಿಯಿಂದ...
ಪ್ರಕಾಶಣ್ಣ.

Ittigecement said...

ಅಡಪೋಟ್ರು ಕೂಸೆ...

ಬರಲೇ ಬೇಕಾದದ್ದನ್ನು ಎಷ್ಟು ಹೊತ್ತು ಹಿಡಿತ್ತುಕೊಳ್ಳಬಹುದು?

ನಮ್ಮ ಪರಿಚಯದಲ್ಲಿ ಒಬ್ಬರಿದ್ದಾರೆ..

"ಟುಂಯ್.. ಟುಸ್ ಮಾಂಕಾಳಕ್ಕ" ಅಂತ...!

ಅವರಿಗೆ ಗ್ಯಾಸ್ ಪ್ರಕೃತಿ.. ವಾಯು ಪ್ರಕೋಪ ಇದೆ.. !

ಅವರು ಊಟಕ್ಕೆಲ್ಲ ಬಡಿಸಲು ಬರುವದಿಲ್ಲ..

ಎಲ್ಲರೂ ಸೇರಿರುವಾಗ ಗ್ಯಾಸ್ ಬಂದಾಗ ದೂರಕ್ಕೆ..
ಬಚ್ಚಲು ಮನೆಗೋ..
ಕೊಟ್ಟಿಗೆಗೊ.. ಹೊಗಿ ಬಿಡುತ್ತಿದರು..
ಶಬ್ಧವಾಗಬಾರದೆಂಬ ಆಶಯದಲ್ಲಿ ಬಿಗಿಹಿಡಿದು ಬಿಡುವಾಗ "ಟುಂಯ್,...ನ್ಂಯೀ.." ಅನ್ನುತ್ತ ಶಬ್ಧ ಬಂದುಬಿಡುತ್ತಿತ್ತು...
ನಮಗೆಲ್ಲ ನಗೆ ಉಕ್ಕಿಸುತ್ತಿತ್ತು...

ಗಂಡಸರೇನೋ... ಅಂಡು ಎತ್ತಿ "ಡುರ್ರುಕ್." ಅಂತ ಗ್ಯಾಸ್ ಬಿಟ್ಟು ಬಿಡುತ್ತಾರೆ..

ಆದರೆ ಪಾಪ ಹೆಂಗಸರಿಗೆ...?

ಯಾರದರೂ ಗ್ಯಾಸ್ ಬಿಟ್ಟರೆ ಯಾಕೆ ಅಷ್ಟೆಲ್ಲ ನಗು ಬರುತ್ತದೆ...?

ಹ್ಹಾ.. ಹ್ಹಾ.. !!


ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ... ನಕ್ಕಿದ್ದಕ್ಕೆ..
ಮಜಾಮಾಡಿ ಎಂಜಾಯ್ ಮಾಡಿದ್ದಕ್ಕೆ ಧನ್ಯವಾದಗಳು...

Ittigecement said...

ವಿಜು...

ಈ ಗ್ಯಾಸ್ ಮಹಿಮೆ ಬರೆಯುವಾಗ ಸಣ್ಣದಾದ ಅಳುಕು ಇತ್ತು...
ಹಾಸ್ಯ ಹೋಗಿ ಎಲ್ಲಿ ಅಪಹಾಸ್ಯವಾಗಿ ಬಿಡುತ್ತೋ ಅಂತ..

ಸಧ್ಯ ಹಾಗಾಗಲಿಲ್ಲ..

ನೀವೆಲ್ಲ ಇಷ್ಟಪಟ್ಟಿದ್ದು...
ನಕ್ಕಿದ್ದು ಇನ್ನಷ್ಟು ಉತ್ಸಾಹ ಕೊಟ್ಟಿದೆ..

ಈ ಗ್ಯಾಸ್ ಮಹಿಮೆ ಇನ್ನಷ್ಟಿದೆ..
ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸೋಣ.. ಮುಂದೆ ಮತ್ತೆ ಬರೆಯುವದಿದೆ..

ಈ ಗ್ಯಾಸ್ ಮಹಾದೇವನ ಮಹಿಮೆ ಇನ್ನೂ ಒಂದು ಇದೆ.. !!


ಒಂದು ಎಡವಟ್ಟು ಕಥೆ ತಲೆಯಲ್ಲಿ ಕೊರಿತಾ ಇದೆ.. ಮುಂದಿನದು ಕಥೆ...

ನಿಮ್ಮೆಲ್ಲರ ಪ್ರೀತಿ..
ಪ್ರೋತ್ಸಾಹ ಪ್ರತಿಕ್ರಿಯೆ ಹೀಗೆಯೇ ಇರಲಿ...
ಬರುತ್ತಾ ಇರಿ... ಧನ್ಯವಾದಗಳು..

ಚುಕ್ಕಿಚಿತ್ತಾರ said...

ಪ್ರಕಾಶಣ್ಣ ..
”ಕಸದಲ್ಲಿ ರಸ”
ತ್ಯಾಜ್ಯವಸ್ತುಗಳನ್ನು ವಿಸ್ತರಿಸಿ ವಿವರಿಸಿ ಚ೦ದದ ಚೌಕಟ್ಟು ಹಾಕಿಟ್ಟಿದ್ದೆ...!

ನಗುನ ನಿಲ್ಲಿಸಲಾಗದೆ ಒದ್ದಾಡಿದೆ..:)))))

Ashwini Dasare said...

tumba chennagide pakku mama..:) i loved it :)

Dr.D.T.Krishna Murthy. said...

ಪ್ರಕಾಶಣ್ಣ;ನಿಮ್ಮ ಮಹಾದೇವನ ಗ್ಯಾಸ್ ಪುರಾಣ,ನಾಗುವಿನ ಅದ್ಭುತ ವೈದ್ಯಕೀಯ ಸಲಹೆ ತುಂಬಾ ಚೆನ್ನಾಗಿ ಮೂಡಿಬಂದಿದೆ.ಇನ್ನು ನಾನೂ 'ಗ್ಯಾಸ್ಟ್ರಿಕ್'ಟ್ರಬಲ್ ಅಂತ ಬರುವ ರೋಗಿಗಳಿಗೆ ಒಮ್ಮೆ ನಿಮ್ಮ ನಾಗುವಿನ ರಾಮಬಾಣ ಪ್ರಯೋಗ ಮಾಡಿ ನೋಡಬೇಕು!

Asha said...

ha ha ha....kathe chennagide prakashanna....

Ittigecement said...

ಸೀತಾರಾಮ್ ಸರ್ ಜೀ...

ಈ ಮಹಾದೇವನ ಗ್ಯಾಸ್ ಘಟನೆಯಲ್ಲಿ ಇನ್ನೂ ಇತ್ತು...
ಅದೆಲ್ಲ ಇಲ್ಲಿ ಹೇಳಾಗುವದಿಲ್ಲ..

ಮೂಲಂಗಿ.., ಆಲೂಗಡ್ಡೆ, ಕಡ್ಲೆ ಬೀಜ.. ಶೇಂಗಾ ಎಲ್ಲ ಬೀಸಿದ ಜ್ಯೂಸ್ ಕುಡಿದರೆ ಏನಾಗ ಬಹುದು?

ಅವರ ಹೊಟ್ಟೆಯಲ್ಲಿ ಏನಾಗ ಬಹುದು?

ಅದೂ ಮೂರೂ ಹೊತ್ತು ಕುಡಿದರೆ...?

ಊಹಿಸಲೂ ಅಸಾಧ್ಯ..

ಜೀವನ ಪೂರ್ತಿ "ಗ್ಯಾಸ್ ಮಹಾದೇವ" ಎಂದು ಕರೆಸಿಕೊಳ್ಳುವದಕ್ಕಿಂತ
ಅಜ್ಞಾತ ಜಾಗದಲ್ಲಿ ಹೊಸ ಜೀವನ ಆರಂಭಿಸಿದ್ದು ಆತನಿಗೆ ಅನಿವಾರ್ಯವೂ ಆಗಿತ್ತು ಅಲ್ಲವಾ?

ನನಗೆ ವಿಚಿತ್ರ ಅನುಭವ ಕೊಟ್ಟ ಘಟನೆ ಇದು...

ಸೀತಣ್ಣ ನಿಮ್ಮ ಪ್ರೀತಿ, ಸ್ನೇಹಕ್ಕೆ ತುಂಬು ಹೃದಯದ ವಂದನೆಗಳು...

ಜೈ ಹೋ !!

Ittigecement said...

ಚುಕ್ಕಿ ಚಿತಾರ.. ವಿಜಯಾ...

ತ್ಯಾಜ್ಯ ಅನಿವಾರ್ಯ ವಾಯು ಅಲ್ಲವಾ?

ಇದು ಗಂಡಸರ ಡಿಪಾರ್ಟಮೆಂಟ್ ಒಂದೇ ಅಲ್ಲ...
ಊಟ, ತಿಂಡಿ ಮಾಡುವ ಎಲ್ಲ ಪ್ರಾಣಿಗಳ ಸಮಸ್ಯೆ...

ನಾನು ಸಣ್ಣವನಿದ್ದಾಗ ನಮ್ಮನೆಯಲ್ಲಿ "ಚೆನ್ನೀ" ಎಂಬ ನಾಯಿ ಇತ್ತು...

ಅದು "ಡುರ್ರುಕ್" ಅಂತ ಹುರುಕೆ ಬಿಟ್ಟು..
ಹೆದರಿ..
"ಬೌ.. ಬೌ.." ಅಂತ ಹಿಂದೆ ನೋಡಿ ಕೂಗುತ್ತಿತ್ತು... !!

ಪುಟ್ಟ ಹಸುಗುಸುಗಳೂ ಹೂಸು ಬಿಡುತ್ತವೆ..

ಇದು ಎಲ್ಲರ ತ್ಯಾಜ್ಯ ಗ್ಯಾಸ್ ಅಲ್ಲವಾ?

ನೀವು ನಕ್ಕಿದ್ದಕ್ಕೆ...
ಪ್ರತಿಕ್ರಿಯೆಯೆಗೆ ಧನ್ಯವಾದಗಳು... ಜೈ ಹೋ !!

Kanthi said...

Maja iddu Gas puraana..

Gubbachchi Sathish said...

Prakashanna, Wonderful Ending.

Ittigecement said...

ಅಶ್ವಿನಿ...

ಸುದೀಪನ "ಮೈ ಆಟೋಗ್ರಾಫ್" ಸಿನೇಮಾದಲ್ಲಿ..
ಮಾಸ್ತರ್ ಒಬ್ಬರಿಗೆ ಗ್ಯಾಸ್ ಸಮಸ್ಯೆ ಇತ್ತು...

ಅದನ್ನು ತುಂಬಾ ಸುಂದರ ಹಾಸ್ಯವಾಗಿ ಚಿತ್ರಿಸಿದ್ದಾರೆ...

ಈ ಲೇಖನ ಬರೆಯುವಾಗ ಅದು ತುಂಬಾ ನೆನಪಾಗುತ್ತಿತ್ತು...

ಪ್ರತಿಕ್ರಿಯೆಗೆ..
ಮೆಚ್ಚಿ ನಕ್ಕಿದ್ದಕ್ಕೆ ಧನ್ಯವಾದಗಳು.. ಜೈ ಹೋ !!

Ittigecement said...

ಪ್ರೀತಿಯ ಡಾಕ್ಟ್ರೆ...

ನಾಗುವಿನ ಔಷಧಿ ಯಾರಿಗೂ ಹೇಳ್ ಬೇಡಿ ಮಾರಾಯ್ರೆ... !!

ಹ್ಹಾ.. !! ಹ್ಹಾ.. !!

ನಮ್ಮ ನಾಗೂ..ಹಾಗೆನೇ...
ಅವನ ಬಳಿ ಎಲ್ಲ ಸಮಸ್ಯೆಗಳಿಗೆ ಏನಾದರೊಂದು ತುಂಟ ಪರಿಹಾರ ಸಿಕ್ಕೇ ಸಿಗುತ್ತದೆ..!

ನನ್ನ ಗೆಳೆಯರಿಬ್ಬರು ಹುಡುಗಿಯನ್ನು ಪ್ರೀತಿಸಲು ಪ್ರಾರಂಭಿಸಿದರು..
ಇಬ್ಬರೂ ಪ್ರೀತಿಸಿದ್ದು ಒಬ್ಬಳನ್ನೇ..!

ಪರಿಕ್ಷೆ ಸಮಾಯ ಬಂದಿತ್ತು...
ಆ ಹುಡುಗಿಯಿಂದಾಗಿ ಓದಲು ಕಷ್ಟವಾಗುತ್ತಿತ್ತು..

ನಾಗು ಅದಕ್ಕೆ ಪರಿಹಾರ ಕೊಟ್ಟಿದ್ದ..
ನಿಜಕ್ಕೂ ಅದ್ಭುತ ಪರಿಹಾರ "ಹೇಗೆ ಪ್ರೀತಿಸಿದ ಹುಡುಗಿಯನ್ನು ಮರೆಯಬೇಕು?" ಅಂತ..!!

ಮಸ್ತ್ ಆಗಿದೆ..

ನಾನು ಬರೆದ ಮೊದಲ ಪುಸ್ತಕದಲ್ಲಿ ಆ ಘಟನೆ ಇದೆ..

ಸರ್..

ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು..
ಜೈ ಹೋ !!

umesh desai said...

ಹೆಗಡೇಜಿ ನಿಮ್ಮ ಅಥವಾ ನಮ್ಮೆಲ್ಲರ ನಾಗುವಿನ ಔಷಧಿನ ಪೇಟೆಂಟ್ ಮಾಡ್ಸಿ
ಹೊಸವರ್ಷ ಜೋರಾಗಿತ್ತು ಎರಡೂ ಭಾಗ ಸರಾಗವಾಗಿದ್ವು..

chetana said...

ಭಗವಂತಾ! ಮಜಾ ಅಂದ್ರೆ, ಇವೆಲ್ಲ ಜೀವನದ ಪ್ರತಿದಿನದ ಸಂಗತಿಗಳು. ಏನೇನೋ ಬಿಡುಬೀಸಾಗಿ ಮಾತಾಡೋ ನಾವು ಇಂಥದರ ಬಗ್ಗೆ ನಾಜೂಕಿನ ಮೌನದಲ್ಲಿ ಇರ್ತೀವಿ. ನಿಮ್ಮಂಥ ಕೆಲವ್ರು ಹೀಗೆ ಅದನ್ನೂ ಚೆಂದಗಾಣಿಸಿ ಬರೀತಾರೆ :-)
ಬರೀತಾ ಇರಿ ಪ್ರಕಾಶಣ್ಣ...
- ಚೇತನಾ

ಮನಸು said...

ಚೆನ್ನಾಗಿದೆ ಮಹದೇವ್ ಅವರ ಕಥೆ... ನಾಗು ಅವರ ಐಡಿಯ ಚೆನ್ನಾಗಿ ವರ್ಕ್ ಆಗಿದೆ.

suragi \ ushakattemane said...

ಸೂ..ಪರ್ ಆಗಿದೆ. ಗ್ಯಾಸ್ ಸಮಸ್ಯೆಗೆ ಹಸಿ ಅಲೂಗಡ್ಡೆ ತಿನ್ನುವ ಪರಿಹಾರವನ್ನು ಯಾರೋ ಹೇಳಿದಂತೆ ನೆನಪು...ಸಿರಿಯಸ್ ಸಮಸ್ಯೆ ಅಲ್ಲದ ಕಾರಣದಿಂದಾಗಿ ಪ್ರಯೋಗಿಸಿಲ್ಲ..!
ನಿಮ್ಮ ಬರಹ ಓದುತ್ತಿದ್ದಂತೆ ಈಟೀವಿ ಸೂರಿಯವರ ’ನಾತಲೀಲೆ’ ಕಥೆ ನೆನಪಿಗೆ ಬಂದು ನಗುವುಕ್ಕಿ ಬರುತ್ತಿತ್ತು..

Unknown said...

ಮಸ್ತ್..! ಕಥೆ ತು​ಂಬಾ ಚೆನ್ನಾಗಿದೆ ಪ್ರಕಾಶಣ್ಣ..

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ ಅಂತು ಗ್ಯಾಸ್ ಗೆ ಪರಿಹಾರ ಸಿಗ್ತಲ್ಲ :)
ತುಂಬಾ ಚೆಂದದ ಕಥೆ
ಎಂದಿನಂತೆ ನವಿರಾದ ನಿರೂಪಣೆ
ಜೈ ಹೋ

Shruthi B S said...

ಪ್ರಕಾಶಣ್ಣ ಏನೇ ಆಗಲಿ ನಿಮ್ಮ ಫ್ರೆ೦ಡ್ ನಾಗು ಅವರಿಗೆ ಒ೦ದು ನೊಬೆಲ್ ಪ್ರೈಜ್ ಕೊಡ್ಲಕ್ಕು....:)

Jagadeesh Balehadda said...

ನಿಮ್ಮ ಕಥೆ ಸಕತ್ತಾಗಿದೆ. ಬ್ಲಾಗ್ ಗೆ ಬಂದ ಕಮೆಂಟುಗಳೂ ಅಷ್ಟೇ ಮಜವಾಗಿದೆ. ನಕ್ಕು ನಗಿಸಿ ಗ್ಯಾಸನ್ನು ನಮ್ಮೆದುರು (ಬಿಟ್ಟಿದ್ದಕ್ಕೆ) ಬರೆದಿದ್ದಕ್ಕೆ ಧನ್ಯವಾದಗಳು.

balasubramanya said...

೨೦೧೨ ರ ಹೊಸ ಪಾತ್ರ ಗ್ಯಾಸ್ ಮಹಾದೇವ ಅದ್ಭುತ ವಾಗಿದ್ದಾನೆ. ಜೊತೆಗೆ ತನ್ನ ದೌರ್ಬಲ್ಯವನ್ನು ಹತ್ತಿಕ್ಕಿ ಜೀವನದಲ್ಲಿ ಯಶಸ್ಸು ಕಂಡು ಇತರರಿಗೆ ಮಾದರಿಯಾಗಿದ್ದಾನೆ. ಇದು ಎಷ್ಟೋಜನರಿಗೆ ಮಾದರಿಯಾಗಿದೆ. ಹೌದಲ್ವಾ, ನಾವು ನೋಡುವ ಎಷ್ಟೋಜನ ತಮ್ಮ ದೌರ್ಬಲ್ಯದಿಂದ ಕೀಳರಿಮೆ ಬೆಳಸಿಕೊಂಡು ಜೀವನದಲ್ಲಿ ಯಶಸ್ಸಿನ ಸಾಧನೆ ಕಾಣದೆ ಒದ್ದಾಡುತ್ತಾರೆ. ನಿಮ್ಮ ಲೇಖನದಲ್ಲಿ ನಗೆಯ ಹೂರಣ ಬಹಳವಾಗಿದ್ದರೂ ಅದರಲ್ಲಿ ಅಡಗಿರುವ ಈ ಸತ್ಯ ಹಲವರ ಅರಿವಿಗೆ ಬಾರದೆ ಇರಬಹುದು. ಅದು ಈ ಲೇಖನದ ಬಗ್ಗೆ ಬಂದಿರುವ ಕಾಮೆಂಟ್ ಗಳಲ್ಲಿ ಗೋಚರಿಸಿದೆ. ಲೇಖನ ಓದಿ ನಕ್ಕು ಮರೆತು ಹೋಗುವ ಬದಲು ಮತ್ತೊಮ್ಮೆ ಓದಿ ಅದರಲ್ಲಿನ ಜೀವನ ಸತ್ಯದ ಅನಾವರಣ ಕಾಣುವುದು ಒಳ್ಳೆಯದು . ಆದರೆ ಲೇಖನ ನಕ್ಕು ನಲಿಸಿ ಓದುಗರ ಆರೋಗ್ಯ ಹೆಚ್ಚಿಸಿರುವ ವಿಚಾರ ಸತ್ಯ. ನಗುವಿನ ಗಾಳಿಯ ಹಬ್ಬಿಸಿ ನಗಿಸಿದ ನಿಮಗೆ ಜೈ ಜೈ ಹೋ .

sumathi said...

ಗ್ಯಾಸ್ ಪುರಾಣದ ಮು೦ದುವರೆದ ಭಾಗ....ಚನ್ನಾಗಿತ್ತು.
ನಾನೂ ಕೂಡ ಮನೆಯವರ ಜೊತೆ ಕೂತು ಇದನ್ನು ವಾಚಿಸಿದೆ.
ನಕ್ಕೂ ನಕ್ಕೂ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಬರುವ ಭಯವಿದೆ..
ತು೦ಬಾ ಮಜಾ ಇತ್ತು...ಹ್ಹ..ಹ್ಹ..! ಹೀಗೆ ನಮ್ಮ ಮನ ರ೦ಜಿಸುತ್ತಾ ಇರಿ.
ಥ್ಯಾ೦ಕ್ ಯು...

ashwini said...

papa mahadeva :)

Ittigecement said...

ಅಶಾ...

ನಮ್ಮ ದೌರ್ಬಲ್ಯದ ಸಂಗಡ ಹೊಂದಿಕೊಂಡು ಬಾಳುವದು ಕಷ್ಟ...
ಅದಕ್ಕೆ ಹೊಂದಿಕೊಂಡು ..
ನಾಚಿಕೆ..
ಕೀಳರಿಮೆ ಬಿಟ್ಟು ಬದುಕಿದರೆ ಅದೊಂದು ಗೆಲುವು...

ಮಹಾದೇವ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಕಾಂತಿ...

ಗ್ಯಾಸ್ ಮಹಾದೇವನ ಇನ್ನೊಂದು ಮಹತ್ವವಾದ ಘಟನೆಯೊಂದಿದೆ...
ಅದನ್ನು ಇನ್ನೊಮ್ಮೆ ಹೇಳುವೆ..

ಬದುಕು ಬಂದಂತೆ ಸ್ವೀಕರಿಸಿ..
ಹೊಂದಿಕೊಂಡು ಹೋಗುವದು ಅನಿವಾರ್ಯ ಕೂಡ...

ಮಹಾದೇವನ ಗ್ಯಾಸನ್ನು ...
ತನ್ನ ಬದುಕಿನ ಅನಿವಾರ್ಯ ಅಂತ ನಿರ್ಣಯ ತೆಗೆದುಕೊಂಡ ಅವನ ಹೆಂಡತಿ ಬಹಳ ಇಷ್ಟವಾಗುತ್ತಾಳೆ...
ಅಲ್ಲವೆ?

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !!

Ittigecement said...

ಗುಬ್ಬಚ್ಚಿ ಸತೀಶು...

ಆತ ನನ್ನನ್ನು ಬೀಳ್ಕೊಡುವಾಗ ಇನ್ನೂ ಒಂದಷ್ಟು ಮಾತು ಹೇಳಿದ್ದ..

"ಮರ್ಯಾದೆ ಹೋಗುವದಾದರೆ ನಮ್ಮ ಹತ್ತಿರದವರೊಡನೆಯೇ ಹೋಗಲಿ..
ದಿನಾಲೂ ನಾನು ಸಾರ್ವಜನಿಕರ ಹಾಸ್ಯವಾಗುವ ಬದಲು..
ಭಾಷೆ ಬರದ ನಾಡಿನಲ್ಲಿ "ಅಪರಿಚಿತನಾಗಿ" ಬದುಕುವದು ಒಳ್ಳೆಯದು.."

ಆತ ಮಾತಾನಾಡುತ್ತ ಭಾವೋದ್ವೇಗಕ್ಕೆ ಒಳಗಾಗುತ್ತಾನೆ..
ಇಬ್ಬರಿಗೂ ಕಣ್ಣಲ್ಲಿ ನೀರು ಬಂದಿತ್ತು..

ಅದೆಲ್ಲ ಬರೆದರೆ ನಗು ಕಡಿಮೆಯಾಗುತ್ತದೆಂದು..
ಬರೆದದ್ದನ್ನು ತೆಗೆದು ಹಾಕಿದೆ...

ನಿಮ್ಮ ಪ್ರೀತಿ.. ಸ್ನೇಹ ಹೀಗೆಯೇ ಇರಲಿ....

ಪ್ರತಿಕ್ರಿಯೆಗೆ ಧನ್ಯವಾದಗಳು..

Badarinath Palavalli said...

ವರ್ಷದ ಅತ್ಯುತ್ತಮ ಶೀರ್ಷಿಕೆ ಅಂತ ವರ್ಷಾರಂಬದಲ್ಲೇ ಕೊಟ್ಟು ಬಿಡುತ್ತಿದ್ದೇವೆ.

ಅಹ್ಹಹ್ಹಾ ಡಬಲ್ ಬೆಡ್ ರೂಂ ಮನೆ ಈ ತರವೂ ಉಪಯೋಗಕ್ಕೆ ಬರುತ್ತೆ ಅಂತ ಈಗ ಗೊತ್ತಾಯ್ತು!

ಶೃತಿ ರಾವ್ ಬರೆದಂತೆ:
"ಪ್ರಕಾಶಣ್ಣ ಏನೇ ಆಗಲಿ ನಿಮ್ಮ
ಫ್ರೆ೦ಡ್ ನಾಗು ಅವರಿಗೆ
ಒ೦ದು ನೊಬೆಲ್ ಪ್ರೈಜ್
ಕೊಡ್ಲಕ್ಕು....:)"

Ittigecement said...

ಉಮೇಶ್ ದೇಸಾಯಿಯವರೆ..

ನಿನ್ನೆ ಒಬ್ಬರು ನನಗೆ ಫೋನ್ ಮಾಡಿ "ಆಲೂಗಡ್ಡೆ" ಜ್ಯೂಸ್ ತೆಗೆದುಕೊಳ್ಳುವದರ ಬಗೆಗೆ ವಿಚಾರಿಸಿದರು...

"ನಿಮ್ಮ ಗೆಳೆಯನಿಗೆ ಗ್ಯಾಸ್ ಸಮಸ್ಯೆ ಕಡಿಮೆ ಆಗಿದೆಯಂತೆ ನನ್ನ ಮಗಳು ಹೇಳಿದ್ದಾಳೆ"
ಅಂತ ದುಂಬಾಲು ಬಿದ್ದರು..

ಅವರಿಗೆ ಪರಿಸ್ಥಿತಿ ವಿವರಿಸುವಷ್ಟರಲ್ಲಿ ಸಾಕು ಸಾಕಾಯಿತು...

"ಈ ಆಲುಗಡ್ಡೆ ಜ್ಯೂಸ್ ಬಗೆಗೆ ನನಗೆ ವಿವರಗಳು ಗೊತ್ತಿಲ್ಲ..
ನನ್ನ ಗೆಳೆಯ ಇನ್ನೂ ಇತರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ..
ಅದರಿಂದಲೂ ವಾಸಿಯಾಗಿರ ಬಹುದು.."

ದೇಸಾಯಿ ಸಾಹೇಬರೆ..
ಮಹಾದೇವನ ಘಟನೆ ಇಷ್ಟಪಟ್ಟಿದ್ದಕ್ಕೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Raghunandan K Hegde said...

ನಿಜ ಪ್ರಕಾಶಣ್ಣ...,

ಬೆತ್ತಲಾಗ ಬೇಕು ..
ಬೆತ್ತಲೆಯಾಗುವದು ಅನಿವಾರ್ಯ ಎಂದಾಗ .
ನಮ್ಮವರ ಬಳಿಯೇ.. ಬೆತ್ತಲಾಗಬೇಕು

ನಮ್ಮ ಬೆತ್ತಲೆಯನ್ನ ಅಸಹ್ಯಿಸಿಕೊಳ್ಳದೇ ಒಪ್ಪಿಕೊಳ್ಳುವವರೂ ಇರುತ್ತಾರಲ್ಲವೆ.. ಅಂತವರೊಡನೆ ಬದುಕು ಸಹ್ಯ
ಮಹದೇವನ ಹೆಂಡತಿ ಒಳ್ಳೆಯವಳೇ...!!

ಬದಲಿಸಲಾಗದ ಸಮಸ್ಯೆಯನ್ನ ಅಪ್ಪಿಕೊಂಡು ಒಪ್ಪಿಕೊಂಡು ಬದುಕುವುದು ಅನಿವಾರ್ಯವಾದಾಗ ಸಂತೋಷವನ್ನ ಅದರಲ್ಲೇ ಕಂಡುಕೊಳ್ಳುವುದು ಕೂಡ ಅನಿವಾರ್ಯವಾಗುತ್ತದೆ.

ಮಹದೇವನ ಜೀವನ ಸುಖವಾಗಿರಲಿ ಎನ್ನುವ ಆಶಯ ನಂದು..

ಬರಹಕ್ಕೆ ಬಂದರೆ - ಚಂದನೆಯ ನಗೆ ಬರಹ,ಓದುತ್ತಿರುವಷ್ಟು ಹೊತ್ತೂ ನಗೆ ನೆಗೆಯುತ್ತಲೇ ಇತ್ತು

ಗ್ಯಾಸ್ ಬರಹ ಸಪ್ಲೈ ಮಾಡಿ ನಗೆ ಉಕ್ಕಿಸಿದ್ದಕ್ಕೆ ಧನ್ಯವಾದ..

Ashok.V.Shetty, Kodlady said...

ಪ್ರಕಾಶಣ್ಣ,

ಈ ತರಹದ ಜ್ಯೂಸ್ ಸಿಗುತ್ತೆ ಅಂತ ಈಗಲೇ ಗೊತ್ತಾಗಿದ್ದು....ಈ ಜ್ಯೂಸ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದೆ(ನಮಗೆ ಗ್ಯಾಸ್ ಪ್ರಾಬ್ಲಮ್ ಇಲ್ಲ, ಆದರೂ ಬೇರೆಯವರಿಗೆ ಸಹಾಯ ಮಾಡೋಣ ಅನ್ನೋ ದೃಷ್ಟಿಯಿಂದ..ಹಹಹಹ ).

ಕಥೆನ ನನ್ ವೈಫ್ ಜೊತೆ ಕುತ್ಕೊಂಡು ಓದಿದೆ....ಅವಳು ನಕ್ಕು ನಕ್ಕು ಫುಲ್ ಸುಸ್ತು ....ಎಂದಿನಂತೆ ನಿರೂಪಣೆ ಸೂಪರ್ ....ಜೈ ಹೊ.....

Vinayak Hegde said...

ಚೊಲೋ ಇದೆ ಪ್ರಕಾಶಣ್ಣ... ಇನ್ನೂ ನಗ್ತಾನೆ ಇದ್ದಿ. :D

vandana shigehalli said...

ಚಲೋ ಇದ್ದು ಪ್ರಕಾಶಣ್ಣ ...
ಮಹಾದೇವ ಮತ್ತೆ ಆಲೂಗಡ್ಡೆ .............
ಎಲ್ಲೋ ಸಮಾಧಾನ ...
ಮಹಾದೇವ -- ಮಹಾದೇವ ನಗೆ ಉಳಿದಿದ್ದಕ್ಕೆ
ಬದುಕಿನಲ್ಲಿ ಕೆಲವು ನಿರ್ಧಾರ ಗಳು ಸಮಾಧಾನದ
ಬದುಕಿಗೆ ನಾಂದಿ ಯಗಿಬಿಡುತ್ತವೆ.....
ಆತ ..... ಊರಿನಲ್ಲೇ ಉಳಿದಿದ್ದರೆ....... ಪಾಪ
ಎನಗಿ ಬಿಡುತ್ತಿದ್ದನೂ......ಗುಡ್ .....ಸುಂದರ ಕತೆ..

ಪದ್ಮಾ ಭಟ್ said...

prakashanna tumba chennagi barediddeera

ಸವಿಗನಸು said...

ಗ್ಯಾಸ್ ಪುರಾಣಕ್ಕೆ ನಾಂದಿ ಚೆನ್ನಾಗಿದೆ...
ನಾಗುವಿನ ಕತರನಾಕ ಐಡಿಯಾಗಳು ಸೂಪರ್....
ಮಹಾದೇವನ ಕಲೆಗಾರಿಕೆ ಮೆಚ್ಚಲೆಬೇಕು.....

ಜಲನಯನ said...

hahaha...
ಗ್ಯಾಸು ಗ್ಯಾಸಿಗೊಂದು
ಗ್ಯಾಸು ಪರಿಹಾರವಹುದು
ಗ್ಯಾಸುಬಿಡಲಾಗದಿದ್ದರದು
ಗ್ಯಾಸು ಸಿಲಿಂಡರ್ ಒಡೆದು
ಚರ್ಚೆಗೆ ಗ್ರಾಸವಾದಂತೆ ಮಹದೇವ.

ಹಹಹಹಹ

shubha hegde said...

concept yavadadru story antu super..

ramya said...

namaste prakash sir.. na sumaru aaru tingalinda nimma blog odta bandiddini. Tumba hasya ide. Idanna odida mele, prati dina na jeevanavanna hasyamayavagi nodoke , hasya gurutisoke shuru madiddene.. e ella credit nimge serbeku..

Bharath R Bhat said...

ಹಹಹ !!! ಸಕ್ಕತ್ತಾಗಿದೆ ಮಾರಾಯ್ರೆ !!! ನಗು ಸಿಕ್ಕಾಪಟ್ಟೆ .... !!! ಕೊನೆಯಲ್ಲಿ ನಿಮ್ಮ ಕಮೆಂಟ್ನಲ್ಲಿ ನಾಯಿ ಚೆನ್ನಿ ಗ್ಯಾಸ್ ಹೊಡೆದು "ಬೌ ಬೌ " ಓದಿ ಹುಚ್ಚಾ ಪಟ್ಟೆ ನಗು ....

prashasti said...

ನಿಮ್ಮ ಹಾಸ್ಯ ರಸಾಯನಕ್ಕೆ ನಾನೂ ಬಿದ್ದು ಬಿದ್ದು ನಗಾಡಿದೆ ಪ್ರಕಾಶಣ್ಣ.
ಮಾಸ್ಟರಿಣಿ ರೂಮು...
>>ಪ್ರೀತಿ ಮುಗಿದ ಮೇಲೆ ಅವಳು ಈ ರೂಮಿಗೆ ಬರ್ತಾಳೆ....!!!..
ಜಾಸ್ತಿ ಪ್ರೀತಿ ಬೇಕು ಅಂದಾಗ ಮಧ್ಯದಲ್ಲಿ ಎದ್ದು ಬರ್ತಾಳೆ...!!.."<<
ಅಬ್ಬಾ .. ಚೆನ್ನಾಗಿದೆ :-)