ಆ ಹುಡುಗ ಮೊದಲ ನೋಟದಲ್ಲೇ.. ನನಗಿಷ್ಟವಾಗಿದ್ದ...
ಆ ಹಸಿ.. ಹಸಿ ನೋಟ..
ಹಸಿದು ತಿನ್ನುವ ಭಾವ...
ನಾನೊಬ್ಬ ಹೆಣ್ಣು...
ನನ್ನಲ್ಲಿನ ಹೆಣ್ಣುತನವ ಜಾಗ್ರತ ಗೊಳಿಸುವ ಆ ಹುಡುಗನ ಕಣ್ಣಲ್ಲಿ ಬೆತ್ತಲಾಗುವದರಲ್ಲಿ ಖುಷಿಯಾಗುತ್ತಿತ್ತು..
ಆತನ ನೋಟವನ್ನು ನನ್ನ ಏಕಾಂತದಲ್ಲಿ ನೆನಪಿಸಿಕೊಳ್ಳುವದರಲ್ಲೂ.. ಸೊಗಸಿತ್ತು...
ಅವನ ಪೋಲಿತನದ ಮಾತುಗಳು...
ವಯಸ್ಸಿನ ಸಹಜ ಕುತೂಹಲದ..
ಹೆಣ್ಣಿನ ಬಗೆಗಿನ ಹುಚ್ಚು ಹುಚ್ಚಾದ ಪ್ರಶ್ನೆಗಳು..
ಹೆಣ್ಣಿನ ಬಗೆಗಿನ ಅವನ ಮುಗ್ಧತನ ನನಗೆ ಹುಚ್ಚು ಹಿಡಿಸಿದ್ದವು...
ಅವನೊಬ್ಬ ಚಿತ್ರಕಾರ...
ಮಧುರ ಕಂಠದ ಹಾಡುಗಾರ..
ಜೇನು ಮೀಸೆಯ ಹುಡುಗ ನನಗಂತೂ ಸಿನೇಮಾ ಹೀರೋ ಥರಹವೇ ಕಾಣುತ್ತಿದ್ದ...
" ನನಗೆ ಒಂದು ಆಸೆ ಇದೆ...
ನನ್ನ
ಭಾವಗಳನ್ನು ತುಂಬಿ..
ನಿನ್ನದೊಂದು ಚಿತ್ರ ಬಿಡಿಸಲಾ ..?"
ಅವನ ಬೇಡಿಕೆ ಕೇಳಿ ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು...
"ನಿನ್ನ ...
ಕೆನ್ನೆಯ ಉಬ್ಬು..
ತುದಿಗಲ್ಲದ ನುಣುಪು...
ಅರೆತೆರೆದ ಕಣ್ಣು..
ನಿನ್ನ...
ಆ ಭಾವಗಳನ್ನು ನನ್ನ ಕುಂಚದಲ್ಲಿ ಸೆರೆ ಹಿಡಿದಿಡುವ ಆಸೆ ಕಣೆ......"
ನಾನು ಚಂದ ಇದ್ದೇನೆ ಅಂತ ನನಗೆ ಗೊತ್ತು...
ನನ್ನ ಅಂದವನ್ನು ಹುಡುಗನ ಬಾಯಲ್ಲಿ ಕೇಳುವದೂ ಸೊಗಸೆಂದು ಗೊತ್ತಿರಲಿಲ್ಲ...
"ನೀನು ..
ಮೂಗಿಗೊಂದು ರಾಜಸ್ತಾನಿ ದೊಡ್ಡ ರಿಂಗು...
ಕೆನ್ನೆ ಸರಪಳಿ...ಕಿವಿಯ ತನಕ..
ಕಿವಿಗೆ ದೊಡ್ಡ ಪದಕದ ರಿಂಗು..
ತಲೆ ತುಂಬಾ ಹೂವು ಮುಡಿದು ಬಾ......."
ಹುಡುಗನ ಬೇಡಿಕೆಗೆ ಇಲ್ಲವೆನ್ನಲಾಗಲಿಲ್ಲ..
ಮನೆಯಲ್ಲಿ ಸುಳ್ಳು ಹೇಳಿ ಹುಡುಗ ಹೇಳಿದಂತೆ ತಯಾರಾಗಿ ಬಂದೆ...
ಅಮ್ಮನ ಸಂಶಯದ ಕಣ್ಣಿಗಳಿಗೆ ಉತ್ತರವನ್ನೂ ಕೊಟ್ಟು ಬಂದಿದ್ದೆ..
ಹುಡುಗ ನನಗೊಂದು ಭಂಗಿಯಲ್ಲಿ ಕುಳ್ಳಿರಿಸಿ ಚಿತ್ರ ಬಿಡಿಸಲು ಶುರುಮಾಡಿದ...
ಅವನು ನನ್ನನ್ನು ನೋಡುವ ರೀತಿ...
ನನ್ನಲ್ಲಿನ ಭಾವಗಳನ್ನು ಹುಚ್ಚೆಬ್ಬಿಸುತ್ತಿತ್ತು...
ಹುಡುಗ ಚಿತ್ರ ಬಿಡಿಸಿ ಮುಗಿಸಿದ...
"ಹುಡುಗಿ...
ನಿನ್ನ ಅಲಂಕಾರಗಳನ್ನು ಬಿಚ್ಚಿಕೊಡಲಾ....?"
ನನಗೆ ಈಗಲೂ ಒಳಗಿಂದೊಳಗೇ ಸಂತೋಷ...!
ಹುಡುಗ ತುಂಬಾ ಚಾಲೂಕು ಇದ್ದ..
ಆತ ಒಂದೊಂದಾಗಿ ನನ್ನ ಆಭರಣಗಳನ್ನು ಕಳಚುತ್ತಿದ್ದ...
ತಲೆಗೆ ಮುಡಿದ ಹೂಗಳ ಸುವಾಸನೆ ಹೀರುತ್ತಿದ್ದ...
"ನಿನ್ನ ..
ಆಭರಣಗಳನ್ನು ಬಿಚ್ಚಿಡುತ್ತಿರುವೆ...
ನಿನಗೆ ಬೇಸರವಾ...?"
ನನಗೆ ಮೌನವಾಗಿ ಈ ಸಮಯವನ್ನು ಅನುಭವಿಸುವ ಆಸೆ ಇತ್ತು...
ಆದರೂ ಮಾತನಾಡಿದೆ..
"ಬೇಸರ ಇಲ್ಲ...
ನಾನು ಚಂದವಾಗಿ ತಯಾರಾಗಿ ಬಂದಿದ್ದು...ಇದಕ್ಕಾಗಿಯೇ..
ನೀನು ಅಲಂಕಾರವನ್ನು ಹಾಳು ಮಾಡಲೆಂದೆ ಅಲಂಕರಿಸಿಕೊಂಡಿದ್ದೇನೆ...
ಚಂದದ ತಯಾರಿಗಿಂತ ..
ಅಲಂಕಾರ ಹಾಳು ಮಾಡಿಕೊಳ್ಳುವದರಲ್ಲೇ ಹೆಚ್ಚು ಸುಖ..
ಹೆಣ್ಣಿನ ಮನಸ್ಥಿತಿ ನಿನಗೆ ಅರ್ಥವಾಗುವದಿಲ್ಲ...ಬಿಡು ...
ನೀನು...
ಮಾಡುತ್ತಿರುವದು ತಪ್ಪಲ್ಲವಾ?"
"ತಪ್ಪಿಲ್ಲ ಕಣೆ......
ನೀನು ಪ್ರಕೃತಿಯ ಹಾಗೆ...
ಹೆಣ್ಣು ಭೋಗಿಸುವದಕ್ಕಾಗಿಯೇ ಇರುವದು...
ಅತ್ಯಾಚಾರಕ್ಕೂ ಒಂದು ಚಂದದ "ಬಂಧನದ, ಬಾಂಧವ್ಯದ" ಹೆಸರುಕೊಟ್ಟು ಭೋಗಿಸುತ್ತಾರೆ..
ಹೆಂಡತಿಯಾದರೂ..
ಗೆಳತಿಯಾದರೂ ಹೆಣ್ಣು ಇರುವದು ಭೋಗಿಸುವದಕ್ಕೇನೇ.."
ನನಗೆ ಕೋಪ ಬಂತು......
"ಎಷ್ಟು ಹೊಲಸಾದ ಮಾತುಗಳನ್ನಾಡುತ್ತೀಯಾ.......?
ನಿನಗೆ ನಾನು ಭೋಗದ ವಸ್ತುವಾಗಿ ಕಾಣಿಸುತ್ತೇನೆಯೇ..?
ನನ್ನೋಳಗಿನ ಹೃದಯ...
ಅದರಲ್ಲಿನ ಪವಿತ್ರವಾದ ಪ್ರೇಮ ಕಾಣಿಸುವದಿಲ್ಲವಾ?
ಕೆಟ್ಟ ಮನಸ್ಸಿನವನು ನೀನು .....
ಛೇ..."
"ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡ..
ನಮ್ಮ
ಪುರುಷ ಸಮಾಜ ಇರುವದೇ ಹೀಗೆ..
ನೀನು .
ನಿನ್ನ ಪ್ರೀತಿ, ..
ಬಾಂಧವ್ಯಕೂಡ ಭೋಗಿಸುವದಕ್ಕಾಗಿಯೇ ಇದೆ..
ಮದುವೆಯೆಂಬ ಬಂಧನವೂ ಒಂದು ಅತ್ಯಾಚಾರ ಕಣೆ.....
ಅತ್ಯಾಚಾರಕ್ಕೆ ..
ಸುಸಂಕೃತ ಪುರುಷ ಸಮಾಜದ ..
ಪರವಾನಿಗೆ ಪತ್ರ "ಈ ಮದುವೆ" ...!
ಆದರೆ..
ನಾನು ಹಾಗಿಲ್ಲ..
ನಿನ್ನನ್ನು ನನ್ನ ಬದುಕಿನಷ್ಟು ಪ್ರೀತಿಸುತ್ತೇನೆ..."
"ನೋಡು.....
ಬಣ್ಣದ ಮಾತುಗಳು ಬೇಡ...
ನೀನು ನನ್ನನ್ನು ಮದುವೆಯಾಗುವದಿಲ್ಲವೇ...?
ನನಗೆ ನಮ್ಮ ಪ್ರೀತಿಗೊಂದು ಚೌಕಟ್ಟು ಹಾಕಿ..
ಬದುಕಿನುದ್ದಕ್ಕೂ ಪೂಜಿಸುವ ಆಸೆ..
ನಮ್ಮ ಪ್ರೀತಿಯನ್ನು ನನ್ನ ಪುಟ್ಟ ಸಂಸಾರದ ಬಂಧನದಲ್ಲಿ ಕಟ್ಟಿಡುವಾಸೆ..
ಆದರೆ....
ನೀನು ಕೇವಲ ನನ್ನ ಅಂದವನ್ನು ಭೋಗಿಸುವದಕ್ಕಾಗಿ ..
ಇಷ್ಟೆಲ್ಲ ನಾಟಕ ಆಡಿದೆಯಾ ...?
ಛೇ.."
ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..
"ನೋಡು ..
ಗಂಡು ಒಂದು ಸಂಬಂಧವನ್ನು ..
ಸಂದರ್ಭಕ್ಕಾಗಿ..
ಕೇವಲ ಒಂದು ಸಮಯಕ್ಕಷ್ಟೇ ಬಳಸುವದಕ್ಕೆ ಇಷ್ಟಪಡುತ್ತಾನೆ..
ಬದ್ಧತೆ ಇಲ್ಲದ ಬಂಧಗಳೆಂದರೆ ಗಂಡಿಗೆ ಇಷ್ಟ..
ನಾನು ಹಾಗಿಲ್ಲ ಕಣೆ....
ನಿನ್ನೊಡನೆ ನನ್ನ ಬದುಕಿನ ಕನಸನ್ನು ಕಟ್ಟುತ್ತೇನೆ..
ನಿನ್ನ ಬದುಕಿನ ಭರವಸೆ ನಾನಾಗುತ್ತೇನೆ..
ನಾವಿಬ್ಬರೂ ಮದುವೆಯಾಗೋಣ..
ನಾಳೆಯೇ... ನಿನ್ನ ಮ್ಮ ಅಪ್ಪನ ಬಳಿ ಬಂದು ಮಾತನಾಡುತ್ತೇನೆ...
ನನ್ನ ಮೇಲೆ ಅನುಮಾನ ಬೇಡ..
ಹುಡುಗಿ..
ಈಗ ಇಷ್ಟು ಹತ್ತಿರ ಬಂದು ಹೇಗೆ ಸುಮ್ಮನಿರಲಿ...?
ಈ ಕೆನ್ನೆ... ಗಲ್ಲ...
ನನ್ನ ಕೈಯೊಳಗಿನ ಈ ಮುದ್ದು ಮುಖವನ್ನು ಸುಮ್ಮನೆ ಹೇಗೆ ಬಿಡಲಿ...?"
ಹುಡುಗ ತನ್ನ ಅಪ್ಪುಗೆಯನ್ನು ಇನ್ನೂ ಬಿಗಿ ಮಾಡಿದ...
ಮಾತು ಬೇಕಿರದ ಸಂದರ್ಭದಲ್ಲಿ ಏದುಸಿರು ಮಾತನಾಡಿತು..
ಬಯಸಿದಾಗ ಸಿಗುವ..
ಸಾಮಿಪ್ಯದ ಸುಖ ಬಲು ರೋಮಾಂಚಕಾರಿ...
ನಾನು ಕಣ್ಮುಚ್ಚಿ ಅನುಭವಿಸುತ್ತಿದ್ದೆ...
ಅನುಭವಿಸಿದೆ...
ಆತನ ಉನ್ಮತ್ತತೆಯಲ್ಲಿ ಬೆವರಾಗಿ ಸೋತು ಹೋದೆ....
ನಮ್ಮ ಸಂಬಂಧವನ್ನು ಎಷ್ಟು ದಿನ ಅಂತ ಮುಚ್ಚಿಡಲು ಸಾಧ್ಯ...?
ಹುಡುಗನ ಬಗೆಗೆ ಅಪ್ಪನ ಬಳಿ ಮಾತನಾಡಿದೆ...
"ನೋಡಮ್ಮ..
ಹುಡುಗನನ್ನು ಮನೆಗೆ ಕರೆದುಕೊಂಡು ಬಾ..
ಮಾತನಾಡುವೆ..."
ಮರುದಿನ ಹುಡುಗ ನಮ್ಮನೆಗೆ ಬಂದ...
ಅಪ್ಪ ಹುಡುಗನ ಬಳಿ ಮಾತನಾಡಿದ...
ಹುಡುಗ ಹೋದ ಮೇಲೆ ಅಪ್ಪ ನನ್ನ ಬಳಿ ಹೇಳಿದ...
"ಈ..ಹುಡುಗ ...
ದಾಂಪತ್ಯ ಬದುಕಿಗೆ ಸರಿ ಇಲ್ಲಮ್ಮ..
ಅವನ ಬಳಿ ಅರ್ಧ ಗಂಟೆ ಮಾತನಾಡಿದೆ..
ಆತ ಮಾತನಾಡಿದ್ದು ಸಲ್ಮಾನ್ ಖಾನ್, ಶಾರೂಖ್ ಖಾನ್ ಬಗೆಗೆ..
ಸಿನೆಮಾ ಕಥೆಗಳು..
ಹಾಡುಗಳು.. ಬದುಕಲು ಬೇಕಾಗುವ ಅಗತ್ಯ ಅಲ್ಲಮ್ಮ..
ಮದುವೆಯಾಗುವ ಹುಡುಗನ ಜವಾಬ್ಧಾರಿ ಅವನ ಮಾತುಗಳಲ್ಲಿ ಇಲ್ಲಮ್ಮ.."
"ಅಪ್ಪಾ..
ಆ ಹುಡುಗ ಹುಟ್ಟು ಪ್ರತಿಭಾವಂತ..
ಹಾಡುಗಾರ... ಚಿತ್ರಕಾರ.."
"ನೋಡಮ್ಮಾ..
ಹಾಡು...
ಬಣ್ಣದ ಬದುಕು ತುಂಬಾ ಕಷ್ಟದ್ದು.....
ದೂರದಿಂದ ಚಂದ ಈ ಬಣ್ಣ ಬಣ್ಣದ ಮಾತುಗಳ ಬದುಕು..
ಬಣ್ಣದ ಮಾತುಗಳು.. ಹಾಡುಗಳು.. ನಟನೆಗಳು ಬದುಕು ಕಟ್ಟುವದಿಲ್ಲವಮ್ಮ..
ನಿನಗೆ ಯೋಗ್ಯವಾದ ಗಂಡನನ್ನು ನಾನು ಹುಡುಕುವೆ..
ಈ ಹುಡುಗ ಮದುವೆ ಜೀವನಕ್ಕೆ ಯೋಗ್ಯ ಇಲ್ಲ..."
ಅಪ್ಪನ ಅಭಿಪ್ರಾಯಕ್ಕೆ ಎದುರಾಡುವ ಸಂದರ್ಭವೇ ಬರಲಿಲ್ಲ..
ಅಂದು ನಮ್ಮ ವಿದಾಯದ ದಿನ ಆತ ಅತ್ತು ಬಿಟ್ಟಿದ್ದ..
ನನಗಂತೂ ಹೃದಯ ದೃವಿಸಿಹೋಗಿತ್ತು..
ಅವನಿಗೆ ಮೋಸ ಮಾಡಿದ ಅಪರಾಧಿ ಭಾವನೆ ಕಾಡತೊಡಗಿತು..
ಅಪ್ಪ ಹುಡುಕಿದ ಹುಡುಗನೊಡನೆ ನನ್ನ ಮದುವೆಯಾಯಿತು..
ಮದುವೆಯಾದ ಗಂಡು ನನ್ನ ಅಂದ ಚಂದಗಳ ಆರಾಧಕ...
ನನ್ನ ಅಂದ, ಚಂದಗಳನ್ನು ಕೃತಜ್ಞತಾಭಾವದಿಂದ ಅನುಭವಿಸುತ್ತಿದ್ದ...
ನನ್ನ ಗಂಡನ ಆರಾಧನಾ ನೋಟಕ್ಕಿಂತ..
ಹುಡುಗನ ಬೆತ್ತಲೆಗೊಳಿಸುವ ನೋಟ ನನಗೆ ಇಷ್ಟವಾಗುತ್ತಿತ್ತು...
ಆತ ಬಹಳ ನೆನಪಾಗುತ್ತಿದ್ದ..
ನಾನು ಆತನಿಗೆ ಮೋಸ ಮಾಡಿದ ಭಾವದಿಂದ ನನಗೆ ಹೊರಗೆ ಬರಲಿಕ್ಕೆ ಆಗಲಿಲ್ಲ..
ಆ ಚಿತ್ರಕಾರನ ಚಿತ್ರಗಳನ್ನು ಮನೆಯ ಗೋಡೆಯ ತುಂಬಾ ಹಾಕಿದ್ದೆ..
ಅವನು ಬಿಡಿಸಿದ ಹೆಣ್ಣಿನ ಚಿತ್ರಗಳಲ್ಲಿ ನನ್ನನ್ನೇ ಕಾಣುತ್ತಿದ್ದೆ..
ಆತನೂ ಒಮ್ಮೆ ನನಗೆ ಹೇಳೀದ್ದ..
" ನಾನು ಬಿಡಿಸುವ ಚಿತ್ರಗಳಲ್ಲಿ..
ನೀನು..
ನಿನ್ನ ಕಣ್ಣು.. ಕೆನ್ನೆ.. ಗಲ್ಲಗಳೇ ಇರುತ್ತವೆ ಕಣೆ..."
ಆಗ ನಾನು ಅವನನ್ನು ಬಿಗಿಯಾಗಿ ತಬ್ಬಿಕೊಂಡಿದ್ದೆ..
ದಿನ ಕಳೆಯುತ್ತಿತ್ತು..
ನನಗೊಬ್ಬ ಮಗಳು.. ಹುಟ್ಟಿದಳು..
ನನ್ನಷ್ಟೇ ಸುಂದರಿ..
ನನ್ನ ಹಾಗೆ ಕಣ್ಣು.. ಕೆನ್ನೆ.. ಗಲ್ಲ.. ಮಾತು..!
ಪುಟ್ಟ ಹುಡುಗಿ ಕಾಲೇಜಿಗೆ ಹೋಗವಷ್ಟು ದೊಡ್ಡವಳಾಗಿದ್ದು..
ಸಮಯ ಸರಿದದ್ದು ಗೊತ್ತೇ ಆಗಲ್ಲಿಲ್ಲ..
ನಾನು ಯಾವಾಗಲೂ ಚಿತ್ರಕಾರನ ಧ್ಯಾನದಲ್ಲಿ ಇರುತ್ತಿದ್ದರಿಂದಲೋ..
ಗೊತ್ತಿಲ್ಲ..
ನನ್ನ ಮಗಳಿಗೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಬೆಳೆಯಿತು...
ಒಂದು ದಿನ ನನ್ನ ಗಂಡ ನನಗೆ ಒಂದು ಆಶ್ಚರ್ಯ ತಂದ..
"ನೋಡೆ...
ನಿನ್ನ ಮೆಚ್ಚಿನ ಚಿತ್ರಕಾರನನ್ನು ಮಾತನಾಡಿಸಿದ್ದೇನೆ...
ನಮ್ಮ ಮಗಳಿಗೆ ಚಿತ್ರ ತರಬೇತಿ ಕೊಡಲು ಆತ ಒಪ್ಪಿದ್ದಾನೆ..
ಆತ ಇದುವರೆಗೆ ಯಾರಿಗೂ ತನ್ನ ಕಲೆಯನ್ನು ಹೇಳಿಕೊಟ್ಟಿಲ್ಲ..
ಇದು ನಮ್ಮ ಮಗಳ ಭಾಗ್ಯ ಕಣೆ.."
ಬದುಕಿನ ತಿರುವಗಳಲ್ಲಿ ಅತೀತಗಳು ಧುತ್ತೆಂದು ಎದುರಿಗೆ ಬಂದು ಬಿಡುತ್ತವೆ..
ನನ್ನ ಪ್ರತಿಕ್ಷಣದ ಪ್ರೀತಿ..
ಆ ಹುಡುಗ ಮತ್ತೊಮ್ಮೆ ನನ್ನ ಬಾಳಲ್ಲಿ ಭೇಟಿಯಾದ..
ನನಗೂ ಒಮ್ಮೆ ಅವನನ್ನು ಭೇಟಿಯಾಗುವ ಸುಪ್ತ ಆಸೆ ಮನದೊಳಗೇ ಇತ್ತು..
ಇನ್ನೊಮ್ಮೆ ಆತನ ಕ್ಷಮೆ ಕೇಳಬೇಕು ಅನ್ನಿಸುತ್ತಿತ್ತು..
ಬಹು ದಿನಗಳ ನಂತರ..
ಬಹಳ ಆಸಕ್ತಿಯಿಂದ ಅಲಂಕರಿಸಿಕೊಂಡು ತಯಾರಾಗಿದ್ದೆ..
ಇದು ಯಾಕೆ?
ಮೋಸಮಾಡಿದ ಹುಡುಗನ ಎದುರಲ್ಲಿ ಮತ್ತೆ ನನ್ನ ಅಂದವನ್ನು ತೋರಿಸುವ ಬಯಕೆ...!!
ಆ ಹುಡುಗನ ಮೆಚ್ಚಿನ ಬಣ್ಣದ ಸೀರೆ ಉಟ್ಟುಕೊಂಡಿದ್ದೆ..
ನಾನು ನನ್ನ ಗಂಡ ಇಬ್ಬರೆ ಆತನ ಮನೆಗೆ ಹೋಗಿದ್ದೆವು..
ಆತ ಸ್ವಾಗತಿಸಿದ..
ನನಗೆ ವಿಶ್ವಾಸವಾಗಲಿಲ್ಲ...
ಅವನ ಅದೇ.. ಹಸಿ ಹಸಿ ನೋಟ..
ನನ್ನನ್ನು ಬೆತ್ತಲೆ ಮಾಡಿ ನೋಡುವ ಹಸಿದ ಕಂಗಳ ನೋಟ... !!
ಇಷ್ಟು ವರ್ಷಗಳಾದರೂ ಹೆಣ್ಣಿನ ಮೇಲಿನ ಆಸಕ್ತಿ ಕಡಿಮೆ ಆಗಲಿಲ್ಲವೆ?
"ಬನ್ನಿ ಬನ್ನಿ..
ಇದು ಬ್ರಹ್ಮಚಾರಿ ಮನೆ..
ಅಡಿಗೆಯವರ ಕೈ ಊಟ..
ನಿಮಗೆ ಏನು ಮಾಡಿಸಲಿ...? ಚಹ.. ಕಾಫೀ...?"
ಅಯ್ಯೋ ದೇವರೆ... !
ಈತ ಮದುವೆ ಆಗಲೇ ಇಲ್ಲವೆ?
ನನ್ನೊಳಗಿನ ಆಪರಾಧಿ ಮನೋಭಾವ ಮತ್ತೂ ಜಾಸ್ತಿಯಾಯಿತು...
ನನಗೆ ಮಾತಾಡುವ ಆಸಕ್ತಿಯೇ ಹೊರಟು ಹೋಯಿತು..
ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗಲಿಲ್ಲ...
ನಾನು ಮೌನಕ್ಕೆ ಶರಣಾದೆ..
ಹುಡುಗ ಮತ್ತು ಗಂಡ ಇಬ್ಬರೆ ಮಾತನಾಡಿದರು..
ನನ್ನ ಮಗಳಿಗೆ ಚಿತ್ರ ಕಲೆಯನ್ನು ಧಾರೆ ಎರೆಯಲು ಆತ ಒಪ್ಪಿದ..
ನನ್ನ ಗಂಡ ಬಹಳ ಖುಷಿಯಲ್ಲಿದ್ದ...
ಮಗಳು ಬಹಳ ಖುಷಿಯಿಂದ ಚಿತ್ರ ಕಲೆ ಕಲಿಯಲು ಹೋಗುತ್ತಿದ್ದಳು..
ಯಾವಾಗಲೂ ತನ್ನ ಗುರುವನ್ನು ಹೊಗಳುತ್ತಿದ್ದಳು..
ಒಂದು ದಿನ ಅವಳನ್ನು ಮಾತನಾಡಿಸಿ.. ಅವಳ ಗುರುವಿನ ಫೋನ್ ನಂಬರ್ ತೆಗೆದುಕೊಂಡೆ..
"ಹುಡುಗಾ..
ನಿನ್ನನ್ನೊಮ್ಮೆ ಭೇಟಿ ಮಾಡಬೇಕು..
ಕ್ಷಮೆಗೆ ನಾನು ಅರ್ಹಳಲ್ಲದಿದ್ದರೂ.. ಇನ್ನೊಮ್ಮೆ ಭೇಟಿಗೆ ಅವಕಾಶ ಮಾಡಿಕೊಡು..."
ನಾನು ದುಃಖದಿಂದ ಅಳುತ್ತಿದ್ದೆ..
" ನನ್ನ ಬದುಕೇ.. ಹೀಗೆ..
ಹೀಗೆ ಇರುತ್ತದೆ..
ಬಯಸಿದ್ದೆಲ್ಲ ಸಿಕ್ಕಿದರೆ..ಬವಣೆಗಳಿಗೆ ಬೆಲೆ ಎಲ್ಲಿ?
ನಮ್ಮ ನಿರ್ಧಾರಗಳ ಸರಿ, ತಪ್ಪುಗಳ ಬೆಲೆಯನ್ನು ಸಮಯ ಕಟ್ಟುತ್ತದೆ..
ಸರಿದು ಹೋದ ಸಮಯ ಮತ್ತೆ ತರಲಾಗದು..
ಮತ್ತೆ ಸಿಕ್ಕಿದ್ದೀಯಲ್ಲ..
ನಿನ್ನ ಖುಷಿ ಸಂಸಾರ ನೋಡಿ ಖುಷಿಯಾಯಿತು ...
ನೀನು ಸುಖವಾಗಿದ್ದೀಯಾ... ಸಂತೋಷದಿಂದಿರು..."
"ನಿನ್ನನ್ನು ಭೇಟಿಯಾಗಬೇಕು ಯಾವಾಗ ಬರಲಿ?"
ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..
"ಕೂದಲು ಹಣ್ಣಾದರೂ.. ಮತ್ತದೆ ನೆನಪುಗಳು...
ಬಯಕೆಗಳು ಗರಿಗೆದರುತ್ತವೆ..
ನಿನ್ನನ್ನು ನೋಡಿ..
ಮತ್ತೆ ನನ್ನ ನೀಯತ್ತು ಸಡಿಲಗೊಂಡರೆ ಕಷ್ಟವಲ್ಲವೆ...?..
ನೀನು ಈಗ ಸಂಸಾರಸ್ಥೆ..."
"ಹುಡುಗಾ..
ಹಾಗೇನೂ ಆಗುವದಿಲ್ಲ..
ನಾನು ಪ್ರಬುದ್ಧಳಾಗಿದ್ದೇನೆ..
ನನಗೂ ವಯಸ್ಸಾಯಿತು..ಯಾವಾಗ ಬರಲಿ..?"
ಹುಡುಗ ಸ್ವಲ್ಪ ವಿಚಾರ ಮಾಡಿದ..
"ಹುಂ..
ನಾಳೆ ಬೇಡ.. ನಾನು ಬಿಡುವಾಗಿಲ್ಲ ..
ನಾಡಿದ್ದು ಬಾ..."
ನಾನು ಸಣ್ಣ ಹುಡುಗಿಯಂತೆ ನಲಿದೆ...
ಕುಣಿಯುವಾಸೆ ಆಯಿತು....
ಅಪ್ಪ ಮಗಳಿಗೆ ಆಶ್ಚರ್ಯವಾಯಿತು...
"ಏನು ಬಹಳ ಖುಷಿಯಲ್ಲಿದ್ದೀಯಾ...?"
"ಏನೂ ಇಲ್ಲ..
ನನ್ನ ಹಳೆಯ ಗೆಳತಿಯೊಬ್ಬಳು ..
ನಾಡಿದ್ದು ಭೇಟಿಯಾಗುತ್ತೇನೆ ಅಂದಿದ್ದಾಳೆ..
ಅವಳ ಮನೆಗೆ ಹೋಗಬೇಕು..."
"ಅಮ್ಮಾ..
ನಿನ್ನ ಬಳಿ ಮೂಗಿಗೆ ಹಾಕುವ ರಾಜಸ್ತಾನದ ದೊಡ್ಡ ರಿಂಗು..
ಕೆನ್ನೆ ಸರಪಳಿ.. ಇದೆಯೇನಮ್ಮಾ...?"
"ಯಾಕೆ ಮಗಳೇ..?"
"ಅಮ್ಮಾ..
ಚಿತ್ರಕಾರರ ಚಿತ್ರದ ಮಾಡೆಲ್ಲು ನಾನು ಆಗುತ್ತಿದ್ದೇನೆ..!
ಅಷ್ಟು ದೊಡ್ಡ ಕಲಾವಿದನ ಮಾಡೆಲ್ಲು ನಾನು.. !!
ನಂಬಲಿಕ್ಕೆ ಆಗ್ತ ಇಲ್ಲ..
ಚಿತ್ರಕಾರರು ನನ್ನ ಚಿತ್ರ ಬಿಡಿಸುತ್ತಾರಂತೆ..!
ನನ್ನ ಕೆನ್ನೆ..
ಗಲ್ಲ..ಕಣ್ಣು.. ಎಲ್ಲ ಅವರಿಗೆ ಸ್ಪೂರ್ತಿಕೊಟ್ಟಿದೆಯಂತೆ..!
ನನ್ನ ಚಂದವನ್ನು ಅವರು ಯಾವಾಗಲೂ ಹೊಗಳುತ್ತಾರೆ...!
ನನ್ನ ಅಲಂಕಾರಗಳನ್ನು ಅವರೇ ಬಿಚ್ಚಿಕೊಡುತ್ತಾರಂತೆ... !
ಅದು ಅವರಿಗೆ ತುಂಬಾ ಖುಷಿಯಂತೆ..
ನಾಳೆ ನಾನು ತಯಾರಾಗಿ ಬರಬೇಕಂತೆ.. "
ಮಗಳು ಇನ್ನೂ ಏನೇನೋ ಹೇಳುತ್ತಿದ್ದಳು...
ನಾನು ಅವಕ್ಕಾಳಾದೆ...!!
ಅಪ್ರತಿಭಳಾದೆ... !!
ತಡೆಯಲಾಗದ ಕೋಪ ಬಂತು...
ಜೋರಾಗಿ ಕೂಗಿದೆ..
"ನೀನು ಚಿತ್ರ ಕಲೆ ಕಲಿಯುವದು ಸಾಕು...!
ಆ ಹಾಳು...
ಕೆಟ್ಟ ಮನುಷ್ಯನ ಮಾಡೆಲ್ಲು ಆಗುವದೂ ಸಾಕು...!
ನಾಳೆಯಿಂದ ಮನೆಯಲ್ಲೇ ಇರು..
ಈ.. ಧರಿದ್ರ ಗಂಡಸರನ್ನು ನಂಬಲಿಕ್ಕೆ ಆಗುವದಿಲ್ಲ...!.."
ನಾನು ಇನ್ನೂ ಆವೇಶದಿಂದ ಕೂಗುತ್ತಲೇ ಇದ್ದೆ...
ಅಪ್ಪ..
ಮಗಳು ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು...!
ಅಸಹಾಯಕತೆಯ ಭಾವ...!!
ನನ್ನ ಮೈಯೆಲ್ಲ ಕೋಪದಿಂದ ಕಂಪಿಸುತ್ತಿತ್ತು..
(ಉತ್ತಮ ಪ್ರತಿಕ್ರಿಯೆಗಳು ಬಂದಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ....)
ಆ ಹಸಿ.. ಹಸಿ ನೋಟ..
ಹಸಿದು ತಿನ್ನುವ ಭಾವ...
ನಾನೊಬ್ಬ ಹೆಣ್ಣು...
ನನ್ನಲ್ಲಿನ ಹೆಣ್ಣುತನವ ಜಾಗ್ರತ ಗೊಳಿಸುವ ಆ ಹುಡುಗನ ಕಣ್ಣಲ್ಲಿ ಬೆತ್ತಲಾಗುವದರಲ್ಲಿ ಖುಷಿಯಾಗುತ್ತಿತ್ತು..
ಆತನ ನೋಟವನ್ನು ನನ್ನ ಏಕಾಂತದಲ್ಲಿ ನೆನಪಿಸಿಕೊಳ್ಳುವದರಲ್ಲೂ.. ಸೊಗಸಿತ್ತು...
ಅವನ ಪೋಲಿತನದ ಮಾತುಗಳು...
ವಯಸ್ಸಿನ ಸಹಜ ಕುತೂಹಲದ..
ಹೆಣ್ಣಿನ ಬಗೆಗಿನ ಹುಚ್ಚು ಹುಚ್ಚಾದ ಪ್ರಶ್ನೆಗಳು..
ಹೆಣ್ಣಿನ ಬಗೆಗಿನ ಅವನ ಮುಗ್ಧತನ ನನಗೆ ಹುಚ್ಚು ಹಿಡಿಸಿದ್ದವು...
ಅವನೊಬ್ಬ ಚಿತ್ರಕಾರ...
ಮಧುರ ಕಂಠದ ಹಾಡುಗಾರ..
ಜೇನು ಮೀಸೆಯ ಹುಡುಗ ನನಗಂತೂ ಸಿನೇಮಾ ಹೀರೋ ಥರಹವೇ ಕಾಣುತ್ತಿದ್ದ...
" ನನಗೆ ಒಂದು ಆಸೆ ಇದೆ...
ನನ್ನ
ಭಾವಗಳನ್ನು ತುಂಬಿ..
ನಿನ್ನದೊಂದು ಚಿತ್ರ ಬಿಡಿಸಲಾ ..?"
ಅವನ ಬೇಡಿಕೆ ಕೇಳಿ ನನಗೆ ಒಳಗೊಳಗೇ ಖುಷಿಯಾಗುತ್ತಿತ್ತು...
"ನಿನ್ನ ...
ಕೆನ್ನೆಯ ಉಬ್ಬು..
ತುದಿಗಲ್ಲದ ನುಣುಪು...
ಅರೆತೆರೆದ ಕಣ್ಣು..
ನಿನ್ನ...
ಆ ಭಾವಗಳನ್ನು ನನ್ನ ಕುಂಚದಲ್ಲಿ ಸೆರೆ ಹಿಡಿದಿಡುವ ಆಸೆ ಕಣೆ......"
ನಾನು ಚಂದ ಇದ್ದೇನೆ ಅಂತ ನನಗೆ ಗೊತ್ತು...
ನನ್ನ ಅಂದವನ್ನು ಹುಡುಗನ ಬಾಯಲ್ಲಿ ಕೇಳುವದೂ ಸೊಗಸೆಂದು ಗೊತ್ತಿರಲಿಲ್ಲ...
"ನೀನು ..
ಮೂಗಿಗೊಂದು ರಾಜಸ್ತಾನಿ ದೊಡ್ಡ ರಿಂಗು...
ಕೆನ್ನೆ ಸರಪಳಿ...ಕಿವಿಯ ತನಕ..
ಕಿವಿಗೆ ದೊಡ್ಡ ಪದಕದ ರಿಂಗು..
ತಲೆ ತುಂಬಾ ಹೂವು ಮುಡಿದು ಬಾ......."
ಹುಡುಗನ ಬೇಡಿಕೆಗೆ ಇಲ್ಲವೆನ್ನಲಾಗಲಿಲ್ಲ..
ಮನೆಯಲ್ಲಿ ಸುಳ್ಳು ಹೇಳಿ ಹುಡುಗ ಹೇಳಿದಂತೆ ತಯಾರಾಗಿ ಬಂದೆ...
ಅಮ್ಮನ ಸಂಶಯದ ಕಣ್ಣಿಗಳಿಗೆ ಉತ್ತರವನ್ನೂ ಕೊಟ್ಟು ಬಂದಿದ್ದೆ..
ಹುಡುಗ ನನಗೊಂದು ಭಂಗಿಯಲ್ಲಿ ಕುಳ್ಳಿರಿಸಿ ಚಿತ್ರ ಬಿಡಿಸಲು ಶುರುಮಾಡಿದ...
ಅವನು ನನ್ನನ್ನು ನೋಡುವ ರೀತಿ...
ನನ್ನಲ್ಲಿನ ಭಾವಗಳನ್ನು ಹುಚ್ಚೆಬ್ಬಿಸುತ್ತಿತ್ತು...
ಹುಡುಗ ಚಿತ್ರ ಬಿಡಿಸಿ ಮುಗಿಸಿದ...
"ಹುಡುಗಿ...
ನಿನ್ನ ಅಲಂಕಾರಗಳನ್ನು ಬಿಚ್ಚಿಕೊಡಲಾ....?"
ನನಗೆ ಈಗಲೂ ಒಳಗಿಂದೊಳಗೇ ಸಂತೋಷ...!
ಹುಡುಗ ತುಂಬಾ ಚಾಲೂಕು ಇದ್ದ..
ಆತ ಒಂದೊಂದಾಗಿ ನನ್ನ ಆಭರಣಗಳನ್ನು ಕಳಚುತ್ತಿದ್ದ...
ತಲೆಗೆ ಮುಡಿದ ಹೂಗಳ ಸುವಾಸನೆ ಹೀರುತ್ತಿದ್ದ...
"ನಿನ್ನ ..
ಆಭರಣಗಳನ್ನು ಬಿಚ್ಚಿಡುತ್ತಿರುವೆ...
ನಿನಗೆ ಬೇಸರವಾ...?"
ನನಗೆ ಮೌನವಾಗಿ ಈ ಸಮಯವನ್ನು ಅನುಭವಿಸುವ ಆಸೆ ಇತ್ತು...
ಆದರೂ ಮಾತನಾಡಿದೆ..
"ಬೇಸರ ಇಲ್ಲ...
ನಾನು ಚಂದವಾಗಿ ತಯಾರಾಗಿ ಬಂದಿದ್ದು...ಇದಕ್ಕಾಗಿಯೇ..
ನೀನು ಅಲಂಕಾರವನ್ನು ಹಾಳು ಮಾಡಲೆಂದೆ ಅಲಂಕರಿಸಿಕೊಂಡಿದ್ದೇನೆ...
ಚಂದದ ತಯಾರಿಗಿಂತ ..
ಅಲಂಕಾರ ಹಾಳು ಮಾಡಿಕೊಳ್ಳುವದರಲ್ಲೇ ಹೆಚ್ಚು ಸುಖ..
ಹೆಣ್ಣಿನ ಮನಸ್ಥಿತಿ ನಿನಗೆ ಅರ್ಥವಾಗುವದಿಲ್ಲ...ಬಿಡು ...
ನೀನು...
ಮಾಡುತ್ತಿರುವದು ತಪ್ಪಲ್ಲವಾ?"
"ತಪ್ಪಿಲ್ಲ ಕಣೆ......
ನೀನು ಪ್ರಕೃತಿಯ ಹಾಗೆ...
ಹೆಣ್ಣು ಭೋಗಿಸುವದಕ್ಕಾಗಿಯೇ ಇರುವದು...
ಅತ್ಯಾಚಾರಕ್ಕೂ ಒಂದು ಚಂದದ "ಬಂಧನದ, ಬಾಂಧವ್ಯದ" ಹೆಸರುಕೊಟ್ಟು ಭೋಗಿಸುತ್ತಾರೆ..
ಹೆಂಡತಿಯಾದರೂ..
ಗೆಳತಿಯಾದರೂ ಹೆಣ್ಣು ಇರುವದು ಭೋಗಿಸುವದಕ್ಕೇನೇ.."
ನನಗೆ ಕೋಪ ಬಂತು......
"ಎಷ್ಟು ಹೊಲಸಾದ ಮಾತುಗಳನ್ನಾಡುತ್ತೀಯಾ.......?
ನಿನಗೆ ನಾನು ಭೋಗದ ವಸ್ತುವಾಗಿ ಕಾಣಿಸುತ್ತೇನೆಯೇ..?
ನನ್ನೋಳಗಿನ ಹೃದಯ...
ಅದರಲ್ಲಿನ ಪವಿತ್ರವಾದ ಪ್ರೇಮ ಕಾಣಿಸುವದಿಲ್ಲವಾ?
ಕೆಟ್ಟ ಮನಸ್ಸಿನವನು ನೀನು .....
ಛೇ..."
"ದಯವಿಟ್ಟು ಬೇಸರ ಪಟ್ಟುಕೊಳ್ಳಬೇಡ..
ನಮ್ಮ
ಪುರುಷ ಸಮಾಜ ಇರುವದೇ ಹೀಗೆ..
ನೀನು .
ನಿನ್ನ ಪ್ರೀತಿ, ..
ಬಾಂಧವ್ಯಕೂಡ ಭೋಗಿಸುವದಕ್ಕಾಗಿಯೇ ಇದೆ..
ಮದುವೆಯೆಂಬ ಬಂಧನವೂ ಒಂದು ಅತ್ಯಾಚಾರ ಕಣೆ.....
ಅತ್ಯಾಚಾರಕ್ಕೆ ..
ಸುಸಂಕೃತ ಪುರುಷ ಸಮಾಜದ ..
ಪರವಾನಿಗೆ ಪತ್ರ "ಈ ಮದುವೆ" ...!
ಆದರೆ..
ನಾನು ಹಾಗಿಲ್ಲ..
ನಿನ್ನನ್ನು ನನ್ನ ಬದುಕಿನಷ್ಟು ಪ್ರೀತಿಸುತ್ತೇನೆ..."
"ನೋಡು.....
ಬಣ್ಣದ ಮಾತುಗಳು ಬೇಡ...
ನೀನು ನನ್ನನ್ನು ಮದುವೆಯಾಗುವದಿಲ್ಲವೇ...?
ನನಗೆ ನಮ್ಮ ಪ್ರೀತಿಗೊಂದು ಚೌಕಟ್ಟು ಹಾಕಿ..
ಬದುಕಿನುದ್ದಕ್ಕೂ ಪೂಜಿಸುವ ಆಸೆ..
ನಮ್ಮ ಪ್ರೀತಿಯನ್ನು ನನ್ನ ಪುಟ್ಟ ಸಂಸಾರದ ಬಂಧನದಲ್ಲಿ ಕಟ್ಟಿಡುವಾಸೆ..
ಆದರೆ....
ನೀನು ಕೇವಲ ನನ್ನ ಅಂದವನ್ನು ಭೋಗಿಸುವದಕ್ಕಾಗಿ ..
ಇಷ್ಟೆಲ್ಲ ನಾಟಕ ಆಡಿದೆಯಾ ...?
ಛೇ.."
ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..
"ನೋಡು ..
ಗಂಡು ಒಂದು ಸಂಬಂಧವನ್ನು ..
ಸಂದರ್ಭಕ್ಕಾಗಿ..
ಕೇವಲ ಒಂದು ಸಮಯಕ್ಕಷ್ಟೇ ಬಳಸುವದಕ್ಕೆ ಇಷ್ಟಪಡುತ್ತಾನೆ..
ಬದ್ಧತೆ ಇಲ್ಲದ ಬಂಧಗಳೆಂದರೆ ಗಂಡಿಗೆ ಇಷ್ಟ..
ನಾನು ಹಾಗಿಲ್ಲ ಕಣೆ....
ನಿನ್ನೊಡನೆ ನನ್ನ ಬದುಕಿನ ಕನಸನ್ನು ಕಟ್ಟುತ್ತೇನೆ..
ನಿನ್ನ ಬದುಕಿನ ಭರವಸೆ ನಾನಾಗುತ್ತೇನೆ..
ನಾವಿಬ್ಬರೂ ಮದುವೆಯಾಗೋಣ..
ನಾಳೆಯೇ... ನಿನ್ನ ಮ್ಮ ಅಪ್ಪನ ಬಳಿ ಬಂದು ಮಾತನಾಡುತ್ತೇನೆ...
ನನ್ನ ಮೇಲೆ ಅನುಮಾನ ಬೇಡ..
ಹುಡುಗಿ..
ಈಗ ಇಷ್ಟು ಹತ್ತಿರ ಬಂದು ಹೇಗೆ ಸುಮ್ಮನಿರಲಿ...?
ಈ ಕೆನ್ನೆ... ಗಲ್ಲ...
ನನ್ನ ಕೈಯೊಳಗಿನ ಈ ಮುದ್ದು ಮುಖವನ್ನು ಸುಮ್ಮನೆ ಹೇಗೆ ಬಿಡಲಿ...?"
ಹುಡುಗ ತನ್ನ ಅಪ್ಪುಗೆಯನ್ನು ಇನ್ನೂ ಬಿಗಿ ಮಾಡಿದ...
ಮಾತು ಬೇಕಿರದ ಸಂದರ್ಭದಲ್ಲಿ ಏದುಸಿರು ಮಾತನಾಡಿತು..
ಬಯಸಿದಾಗ ಸಿಗುವ..
ಸಾಮಿಪ್ಯದ ಸುಖ ಬಲು ರೋಮಾಂಚಕಾರಿ...
ನಾನು ಕಣ್ಮುಚ್ಚಿ ಅನುಭವಿಸುತ್ತಿದ್ದೆ...
ಅನುಭವಿಸಿದೆ...
ಆತನ ಉನ್ಮತ್ತತೆಯಲ್ಲಿ ಬೆವರಾಗಿ ಸೋತು ಹೋದೆ....
ನಮ್ಮ ಸಂಬಂಧವನ್ನು ಎಷ್ಟು ದಿನ ಅಂತ ಮುಚ್ಚಿಡಲು ಸಾಧ್ಯ...?
ಹುಡುಗನ ಬಗೆಗೆ ಅಪ್ಪನ ಬಳಿ ಮಾತನಾಡಿದೆ...
"ನೋಡಮ್ಮ..
ಹುಡುಗನನ್ನು ಮನೆಗೆ ಕರೆದುಕೊಂಡು ಬಾ..
ಮಾತನಾಡುವೆ..."
ಮರುದಿನ ಹುಡುಗ ನಮ್ಮನೆಗೆ ಬಂದ...
ಅಪ್ಪ ಹುಡುಗನ ಬಳಿ ಮಾತನಾಡಿದ...
ಹುಡುಗ ಹೋದ ಮೇಲೆ ಅಪ್ಪ ನನ್ನ ಬಳಿ ಹೇಳಿದ...
"ಈ..ಹುಡುಗ ...
ದಾಂಪತ್ಯ ಬದುಕಿಗೆ ಸರಿ ಇಲ್ಲಮ್ಮ..
ಅವನ ಬಳಿ ಅರ್ಧ ಗಂಟೆ ಮಾತನಾಡಿದೆ..
ಆತ ಮಾತನಾಡಿದ್ದು ಸಲ್ಮಾನ್ ಖಾನ್, ಶಾರೂಖ್ ಖಾನ್ ಬಗೆಗೆ..
ಸಿನೆಮಾ ಕಥೆಗಳು..
ಹಾಡುಗಳು.. ಬದುಕಲು ಬೇಕಾಗುವ ಅಗತ್ಯ ಅಲ್ಲಮ್ಮ..
ಮದುವೆಯಾಗುವ ಹುಡುಗನ ಜವಾಬ್ಧಾರಿ ಅವನ ಮಾತುಗಳಲ್ಲಿ ಇಲ್ಲಮ್ಮ.."
"ಅಪ್ಪಾ..
ಆ ಹುಡುಗ ಹುಟ್ಟು ಪ್ರತಿಭಾವಂತ..
ಹಾಡುಗಾರ... ಚಿತ್ರಕಾರ.."
"ನೋಡಮ್ಮಾ..
ಹಾಡು...
ಬಣ್ಣದ ಬದುಕು ತುಂಬಾ ಕಷ್ಟದ್ದು.....
ದೂರದಿಂದ ಚಂದ ಈ ಬಣ್ಣ ಬಣ್ಣದ ಮಾತುಗಳ ಬದುಕು..
ಬಣ್ಣದ ಮಾತುಗಳು.. ಹಾಡುಗಳು.. ನಟನೆಗಳು ಬದುಕು ಕಟ್ಟುವದಿಲ್ಲವಮ್ಮ..
ನಿನಗೆ ಯೋಗ್ಯವಾದ ಗಂಡನನ್ನು ನಾನು ಹುಡುಕುವೆ..
ಈ ಹುಡುಗ ಮದುವೆ ಜೀವನಕ್ಕೆ ಯೋಗ್ಯ ಇಲ್ಲ..."
ಅಪ್ಪನ ಅಭಿಪ್ರಾಯಕ್ಕೆ ಎದುರಾಡುವ ಸಂದರ್ಭವೇ ಬರಲಿಲ್ಲ..
ಅಂದು ನಮ್ಮ ವಿದಾಯದ ದಿನ ಆತ ಅತ್ತು ಬಿಟ್ಟಿದ್ದ..
ನನಗಂತೂ ಹೃದಯ ದೃವಿಸಿಹೋಗಿತ್ತು..
ಅವನಿಗೆ ಮೋಸ ಮಾಡಿದ ಅಪರಾಧಿ ಭಾವನೆ ಕಾಡತೊಡಗಿತು..
ಅಪ್ಪ ಹುಡುಕಿದ ಹುಡುಗನೊಡನೆ ನನ್ನ ಮದುವೆಯಾಯಿತು..
ಮದುವೆಯಾದ ಗಂಡು ನನ್ನ ಅಂದ ಚಂದಗಳ ಆರಾಧಕ...
ನನ್ನ ಅಂದ, ಚಂದಗಳನ್ನು ಕೃತಜ್ಞತಾಭಾವದಿಂದ ಅನುಭವಿಸುತ್ತಿದ್ದ...
ನನ್ನ ಗಂಡನ ಆರಾಧನಾ ನೋಟಕ್ಕಿಂತ..
ಹುಡುಗನ ಬೆತ್ತಲೆಗೊಳಿಸುವ ನೋಟ ನನಗೆ ಇಷ್ಟವಾಗುತ್ತಿತ್ತು...
ಆತ ಬಹಳ ನೆನಪಾಗುತ್ತಿದ್ದ..
ನಾನು ಆತನಿಗೆ ಮೋಸ ಮಾಡಿದ ಭಾವದಿಂದ ನನಗೆ ಹೊರಗೆ ಬರಲಿಕ್ಕೆ ಆಗಲಿಲ್ಲ..
ಆ ಚಿತ್ರಕಾರನ ಚಿತ್ರಗಳನ್ನು ಮನೆಯ ಗೋಡೆಯ ತುಂಬಾ ಹಾಕಿದ್ದೆ..
ಅವನು ಬಿಡಿಸಿದ ಹೆಣ್ಣಿನ ಚಿತ್ರಗಳಲ್ಲಿ ನನ್ನನ್ನೇ ಕಾಣುತ್ತಿದ್ದೆ..
ಆತನೂ ಒಮ್ಮೆ ನನಗೆ ಹೇಳೀದ್ದ..
" ನಾನು ಬಿಡಿಸುವ ಚಿತ್ರಗಳಲ್ಲಿ..
ನೀನು..
ನಿನ್ನ ಕಣ್ಣು.. ಕೆನ್ನೆ.. ಗಲ್ಲಗಳೇ ಇರುತ್ತವೆ ಕಣೆ..."
ಆಗ ನಾನು ಅವನನ್ನು ಬಿಗಿಯಾಗಿ ತಬ್ಬಿಕೊಂಡಿದ್ದೆ..
ದಿನ ಕಳೆಯುತ್ತಿತ್ತು..
ನನಗೊಬ್ಬ ಮಗಳು.. ಹುಟ್ಟಿದಳು..
ನನ್ನಷ್ಟೇ ಸುಂದರಿ..
ನನ್ನ ಹಾಗೆ ಕಣ್ಣು.. ಕೆನ್ನೆ.. ಗಲ್ಲ.. ಮಾತು..!
ಪುಟ್ಟ ಹುಡುಗಿ ಕಾಲೇಜಿಗೆ ಹೋಗವಷ್ಟು ದೊಡ್ಡವಳಾಗಿದ್ದು..
ಸಮಯ ಸರಿದದ್ದು ಗೊತ್ತೇ ಆಗಲ್ಲಿಲ್ಲ..
ನಾನು ಯಾವಾಗಲೂ ಚಿತ್ರಕಾರನ ಧ್ಯಾನದಲ್ಲಿ ಇರುತ್ತಿದ್ದರಿಂದಲೋ..
ಗೊತ್ತಿಲ್ಲ..
ನನ್ನ ಮಗಳಿಗೂ ಚಿತ್ರಕಲೆಯಲ್ಲಿ ಬಹಳ ಆಸಕ್ತಿ ಬೆಳೆಯಿತು...
ಒಂದು ದಿನ ನನ್ನ ಗಂಡ ನನಗೆ ಒಂದು ಆಶ್ಚರ್ಯ ತಂದ..
"ನೋಡೆ...
ನಿನ್ನ ಮೆಚ್ಚಿನ ಚಿತ್ರಕಾರನನ್ನು ಮಾತನಾಡಿಸಿದ್ದೇನೆ...
ನಮ್ಮ ಮಗಳಿಗೆ ಚಿತ್ರ ತರಬೇತಿ ಕೊಡಲು ಆತ ಒಪ್ಪಿದ್ದಾನೆ..
ಆತ ಇದುವರೆಗೆ ಯಾರಿಗೂ ತನ್ನ ಕಲೆಯನ್ನು ಹೇಳಿಕೊಟ್ಟಿಲ್ಲ..
ಇದು ನಮ್ಮ ಮಗಳ ಭಾಗ್ಯ ಕಣೆ.."
ಬದುಕಿನ ತಿರುವಗಳಲ್ಲಿ ಅತೀತಗಳು ಧುತ್ತೆಂದು ಎದುರಿಗೆ ಬಂದು ಬಿಡುತ್ತವೆ..
ನನ್ನ ಪ್ರತಿಕ್ಷಣದ ಪ್ರೀತಿ..
ಆ ಹುಡುಗ ಮತ್ತೊಮ್ಮೆ ನನ್ನ ಬಾಳಲ್ಲಿ ಭೇಟಿಯಾದ..
ನನಗೂ ಒಮ್ಮೆ ಅವನನ್ನು ಭೇಟಿಯಾಗುವ ಸುಪ್ತ ಆಸೆ ಮನದೊಳಗೇ ಇತ್ತು..
ಇನ್ನೊಮ್ಮೆ ಆತನ ಕ್ಷಮೆ ಕೇಳಬೇಕು ಅನ್ನಿಸುತ್ತಿತ್ತು..
ಬಹು ದಿನಗಳ ನಂತರ..
ಬಹಳ ಆಸಕ್ತಿಯಿಂದ ಅಲಂಕರಿಸಿಕೊಂಡು ತಯಾರಾಗಿದ್ದೆ..
ಇದು ಯಾಕೆ?
ಮೋಸಮಾಡಿದ ಹುಡುಗನ ಎದುರಲ್ಲಿ ಮತ್ತೆ ನನ್ನ ಅಂದವನ್ನು ತೋರಿಸುವ ಬಯಕೆ...!!
ಆ ಹುಡುಗನ ಮೆಚ್ಚಿನ ಬಣ್ಣದ ಸೀರೆ ಉಟ್ಟುಕೊಂಡಿದ್ದೆ..
ನಾನು ನನ್ನ ಗಂಡ ಇಬ್ಬರೆ ಆತನ ಮನೆಗೆ ಹೋಗಿದ್ದೆವು..
ಆತ ಸ್ವಾಗತಿಸಿದ..
ನನಗೆ ವಿಶ್ವಾಸವಾಗಲಿಲ್ಲ...
ಅವನ ಅದೇ.. ಹಸಿ ಹಸಿ ನೋಟ..
ನನ್ನನ್ನು ಬೆತ್ತಲೆ ಮಾಡಿ ನೋಡುವ ಹಸಿದ ಕಂಗಳ ನೋಟ... !!
ಇಷ್ಟು ವರ್ಷಗಳಾದರೂ ಹೆಣ್ಣಿನ ಮೇಲಿನ ಆಸಕ್ತಿ ಕಡಿಮೆ ಆಗಲಿಲ್ಲವೆ?
"ಬನ್ನಿ ಬನ್ನಿ..
ಇದು ಬ್ರಹ್ಮಚಾರಿ ಮನೆ..
ಅಡಿಗೆಯವರ ಕೈ ಊಟ..
ನಿಮಗೆ ಏನು ಮಾಡಿಸಲಿ...? ಚಹ.. ಕಾಫೀ...?"
ಅಯ್ಯೋ ದೇವರೆ... !
ಈತ ಮದುವೆ ಆಗಲೇ ಇಲ್ಲವೆ?
ನನ್ನೊಳಗಿನ ಆಪರಾಧಿ ಮನೋಭಾವ ಮತ್ತೂ ಜಾಸ್ತಿಯಾಯಿತು...
ನನಗೆ ಮಾತಾಡುವ ಆಸಕ್ತಿಯೇ ಹೊರಟು ಹೋಯಿತು..
ನನ್ನನ್ನು ನಾನು ಕ್ಷಮಿಸಿಕೊಳ್ಳಲಾಗಲಿಲ್ಲ...
ನಾನು ಮೌನಕ್ಕೆ ಶರಣಾದೆ..
ಹುಡುಗ ಮತ್ತು ಗಂಡ ಇಬ್ಬರೆ ಮಾತನಾಡಿದರು..
ನನ್ನ ಮಗಳಿಗೆ ಚಿತ್ರ ಕಲೆಯನ್ನು ಧಾರೆ ಎರೆಯಲು ಆತ ಒಪ್ಪಿದ..
ನನ್ನ ಗಂಡ ಬಹಳ ಖುಷಿಯಲ್ಲಿದ್ದ...
ಮಗಳು ಬಹಳ ಖುಷಿಯಿಂದ ಚಿತ್ರ ಕಲೆ ಕಲಿಯಲು ಹೋಗುತ್ತಿದ್ದಳು..
ಯಾವಾಗಲೂ ತನ್ನ ಗುರುವನ್ನು ಹೊಗಳುತ್ತಿದ್ದಳು..
ಒಂದು ದಿನ ಅವಳನ್ನು ಮಾತನಾಡಿಸಿ.. ಅವಳ ಗುರುವಿನ ಫೋನ್ ನಂಬರ್ ತೆಗೆದುಕೊಂಡೆ..
"ಹುಡುಗಾ..
ನಿನ್ನನ್ನೊಮ್ಮೆ ಭೇಟಿ ಮಾಡಬೇಕು..
ಕ್ಷಮೆಗೆ ನಾನು ಅರ್ಹಳಲ್ಲದಿದ್ದರೂ.. ಇನ್ನೊಮ್ಮೆ ಭೇಟಿಗೆ ಅವಕಾಶ ಮಾಡಿಕೊಡು..."
ನಾನು ದುಃಖದಿಂದ ಅಳುತ್ತಿದ್ದೆ..
" ನನ್ನ ಬದುಕೇ.. ಹೀಗೆ..
ಹೀಗೆ ಇರುತ್ತದೆ..
ಬಯಸಿದ್ದೆಲ್ಲ ಸಿಕ್ಕಿದರೆ..ಬವಣೆಗಳಿಗೆ ಬೆಲೆ ಎಲ್ಲಿ?
ನಮ್ಮ ನಿರ್ಧಾರಗಳ ಸರಿ, ತಪ್ಪುಗಳ ಬೆಲೆಯನ್ನು ಸಮಯ ಕಟ್ಟುತ್ತದೆ..
ಸರಿದು ಹೋದ ಸಮಯ ಮತ್ತೆ ತರಲಾಗದು..
ಮತ್ತೆ ಸಿಕ್ಕಿದ್ದೀಯಲ್ಲ..
ನಿನ್ನ ಖುಷಿ ಸಂಸಾರ ನೋಡಿ ಖುಷಿಯಾಯಿತು ...
ನೀನು ಸುಖವಾಗಿದ್ದೀಯಾ... ಸಂತೋಷದಿಂದಿರು..."
"ನಿನ್ನನ್ನು ಭೇಟಿಯಾಗಬೇಕು ಯಾವಾಗ ಬರಲಿ?"
ಹುಡುಗ ಸ್ವಲ್ಪ ಹೊತ್ತು ಸುಮ್ಮನಿದ್ದ..
"ಕೂದಲು ಹಣ್ಣಾದರೂ.. ಮತ್ತದೆ ನೆನಪುಗಳು...
ಬಯಕೆಗಳು ಗರಿಗೆದರುತ್ತವೆ..
ನಿನ್ನನ್ನು ನೋಡಿ..
ಮತ್ತೆ ನನ್ನ ನೀಯತ್ತು ಸಡಿಲಗೊಂಡರೆ ಕಷ್ಟವಲ್ಲವೆ...?..
ನೀನು ಈಗ ಸಂಸಾರಸ್ಥೆ..."
"ಹುಡುಗಾ..
ಹಾಗೇನೂ ಆಗುವದಿಲ್ಲ..
ನಾನು ಪ್ರಬುದ್ಧಳಾಗಿದ್ದೇನೆ..
ನನಗೂ ವಯಸ್ಸಾಯಿತು..ಯಾವಾಗ ಬರಲಿ..?"
ಹುಡುಗ ಸ್ವಲ್ಪ ವಿಚಾರ ಮಾಡಿದ..
"ಹುಂ..
ನಾಳೆ ಬೇಡ.. ನಾನು ಬಿಡುವಾಗಿಲ್ಲ ..
ನಾಡಿದ್ದು ಬಾ..."
ನಾನು ಸಣ್ಣ ಹುಡುಗಿಯಂತೆ ನಲಿದೆ...
ಕುಣಿಯುವಾಸೆ ಆಯಿತು....
ಅಪ್ಪ ಮಗಳಿಗೆ ಆಶ್ಚರ್ಯವಾಯಿತು...
"ಏನು ಬಹಳ ಖುಷಿಯಲ್ಲಿದ್ದೀಯಾ...?"
"ಏನೂ ಇಲ್ಲ..
ನನ್ನ ಹಳೆಯ ಗೆಳತಿಯೊಬ್ಬಳು ..
ನಾಡಿದ್ದು ಭೇಟಿಯಾಗುತ್ತೇನೆ ಅಂದಿದ್ದಾಳೆ..
ಅವಳ ಮನೆಗೆ ಹೋಗಬೇಕು..."
"ಅಮ್ಮಾ..
ನಿನ್ನ ಬಳಿ ಮೂಗಿಗೆ ಹಾಕುವ ರಾಜಸ್ತಾನದ ದೊಡ್ಡ ರಿಂಗು..
ಕೆನ್ನೆ ಸರಪಳಿ.. ಇದೆಯೇನಮ್ಮಾ...?"
"ಯಾಕೆ ಮಗಳೇ..?"
"ಅಮ್ಮಾ..
ಚಿತ್ರಕಾರರ ಚಿತ್ರದ ಮಾಡೆಲ್ಲು ನಾನು ಆಗುತ್ತಿದ್ದೇನೆ..!
ಅಷ್ಟು ದೊಡ್ಡ ಕಲಾವಿದನ ಮಾಡೆಲ್ಲು ನಾನು.. !!
ನಂಬಲಿಕ್ಕೆ ಆಗ್ತ ಇಲ್ಲ..
ಚಿತ್ರಕಾರರು ನನ್ನ ಚಿತ್ರ ಬಿಡಿಸುತ್ತಾರಂತೆ..!
ನನ್ನ ಕೆನ್ನೆ..
ಗಲ್ಲ..ಕಣ್ಣು.. ಎಲ್ಲ ಅವರಿಗೆ ಸ್ಪೂರ್ತಿಕೊಟ್ಟಿದೆಯಂತೆ..!
ನನ್ನ ಚಂದವನ್ನು ಅವರು ಯಾವಾಗಲೂ ಹೊಗಳುತ್ತಾರೆ...!
ನನ್ನ ಅಲಂಕಾರಗಳನ್ನು ಅವರೇ ಬಿಚ್ಚಿಕೊಡುತ್ತಾರಂತೆ... !
ಅದು ಅವರಿಗೆ ತುಂಬಾ ಖುಷಿಯಂತೆ..
ನಾಳೆ ನಾನು ತಯಾರಾಗಿ ಬರಬೇಕಂತೆ.. "
ಮಗಳು ಇನ್ನೂ ಏನೇನೋ ಹೇಳುತ್ತಿದ್ದಳು...
ನಾನು ಅವಕ್ಕಾಳಾದೆ...!!
ಅಪ್ರತಿಭಳಾದೆ... !!
ತಡೆಯಲಾಗದ ಕೋಪ ಬಂತು...
ಜೋರಾಗಿ ಕೂಗಿದೆ..
"ನೀನು ಚಿತ್ರ ಕಲೆ ಕಲಿಯುವದು ಸಾಕು...!
ಆ ಹಾಳು...
ಕೆಟ್ಟ ಮನುಷ್ಯನ ಮಾಡೆಲ್ಲು ಆಗುವದೂ ಸಾಕು...!
ನಾಳೆಯಿಂದ ಮನೆಯಲ್ಲೇ ಇರು..
ಈ.. ಧರಿದ್ರ ಗಂಡಸರನ್ನು ನಂಬಲಿಕ್ಕೆ ಆಗುವದಿಲ್ಲ...!.."
ನಾನು ಇನ್ನೂ ಆವೇಶದಿಂದ ಕೂಗುತ್ತಲೇ ಇದ್ದೆ...
ಅಪ್ಪ..
ಮಗಳು ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು...!
ಅಸಹಾಯಕತೆಯ ಭಾವ...!!
ನನ್ನ ಮೈಯೆಲ್ಲ ಕೋಪದಿಂದ ಕಂಪಿಸುತ್ತಿತ್ತು..
(ಉತ್ತಮ ಪ್ರತಿಕ್ರಿಯೆಗಳು ಬಂದಿವೆ..
ದಯವಿಟ್ಟು ಪ್ರತಿಕ್ರಿಯೆಗಳನ್ನೂ ಓದಿ....)
61 comments:
anna illi yara banna bayalayithu ...........? kathe matra super
ಮಹೇಶು...
ಎಲ್ಲ ಸಂಬಂಧಗಳು....ಬಾಂಧವ್ಯಗಳು ಕೆಲವು ನಿರೀಕ್ಷೆಗಳಲ್ಲೇ ಕಳೆದು ಹೋಗುತ್ತವೆ... ಅಲ್ಲವೆ?
ನಮಗೆ ಅನ್ನಿಸಿದ ಭಾವಗಳಲ್ಲಿ ವ್ಯಕ್ತಿಯನ್ನು...
ಸಂಬಂಧವನ್ನು ನೋಡುತ್ತೇವೆ...
ಎಲ್ಲರೂ ಅವರವರ ಅನುಕೂಲಕ್ಕಷ್ಟೆ ವಿಚಾರ ಮಾಡುತ್ತಾರೆ...
ಇಲ್ಲಿ ನಾಯಕಿಗೆ ತಾನು ಪ್ರೀತಿಸಿದ ಹುಡುಗನ ಬಣ್ಣ ಎಷ್ಟೋ ವರ್ಷಗಳ ನಂತರ ಗೊತ್ತಾಗುತ್ತದೆ...
ಬಹಳ ಕಷ್ಟ ಮನಸ್ಸಿಗೆ...
ನಾವು ಅಂದುಕೊಂಡತ್ತೆ...
ನಮ್ಮ ನಿರೀಕ್ಷೆಗೆ ತಕ್ಕ ಸ್ಪಂದನೆಗಳು ಸಿಗದಿದ್ದಾಗ...
ಮೊದಲ ಪ್ರತಿಕ್ರಿಯೆಗಾಗಿ ಧನ್ಯವಾದಗಳು... ಜೈ ಹೋ !!
ವಸಂತ್...
ಪ್ರೀತಿಗೆ..
ಸಂಬಂಧಕ್ಕೊಂದು ಚೌಕಟ್ಟು ಹಾಕುವ ಹೆಣ್ಣು...
ಬದ್ಧತೆಗಳನ್ನು ಬೇಡದ ಗಂಡು..
ಇವರಿಬ್ಬರ ಸಂಬಂಧಗಳು.. ನಿರೀಕ್ಷೆಗಳು...
ನಿರಾಸೆಯಲ್ಲಿ ಕೊನೆಗೊಳ್ಳುವದು ಸಹಜ ಅಲ್ಲವಾ?
ಪ್ರತಿಕ್ರಿಯೆಗೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಕಥೆ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ. ಹುಡುಗ ಹುಡುಗಿಯರಿಬ್ಬರ ಬಣ್ಣವನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
ಕಥೆ ಚೆನ್ನಾಗಿ ಮೂಡಿ ಬಂದಿದೆ ಪ್ರಕಾಶಣ್ಣ. ಮನುಷ್ಯರನ್ನು ಅರ್ಥಮಾಡಿಕೊಳ್ಳುವುದು, ಅಳೆಯುವುದು ತುಂಬಾ ಕಷ್ಟ. ಮುಖ ನೋಡಿ ಮನಸ್ಸನ್ನು ಅಳೆಯಲು ಸಾಧ್ಯವಿಲ್ಲ ..ಹಾಗೆಯೇ ಕೆಲವೇ ಸಮಯದ ಒಡನಾಟ ಕೂಡ ವ್ಯಕ್ತಿಯ ನಿಜವಾದ ವ್ಯಕ್ತಿತ್ತ್ವವನ್ನು ತೆರೆದಿಡುವುದಿಲ್ಲ. ಮನುಷ್ಯ ಎಂದು ತನ್ನತನವನ್ನು ಬಿಟ್ಟುಕೊಡದೆ ಸಂಬಂಧಗಳ ಜೊತೆ ವ್ಯವಹಾರಿಸುತ್ತಾನೋ ಆತ ಅಥವಾ ಆಕೆ ಎಂದಿಗೂ ಗೌರವಾನ್ವಿತರಾಗುತ್ತಾರೆ ಅಲ್ವಾ. ಸಂಬಂಧಗಳು ಮತ್ತು ಪ್ರೀತಿ ಎಂಬ ಭಾವನೆ ಖುಷಿ ಕೊಟ್ಟಷ್ಟೆ ನೋವನ್ನು ಕೂಡ ಕೊಡುತ್ತವೆ. ಇದು ನಿತ್ಯ ಸತ್ಯ.
ಸತೀಶ...
ಸಂಬಂಧಗಳ..
ಬಾಂಧವ್ಯಗಳ ಬಣ್ಣಗಳನ್ನು ಗುರುತಿಸುವದು ಕಷ್ಟ...
ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ಅವುಗಳನ್ನು ನೋಡುತ್ತೇವೆ...
ನಮ್ಮ ಭಾವಗಳಿಗೆ..
ನಿರೀಕ್ಷೆಗಳಿಗೆ ತಕ್ಕಂತೆ ಸಂಬಂಧಗಳು.. ಬಾಂಧವ್ಯಗಳು ನಮಗೆ ಕಾಣುತ್ತವೆ ಅಲ್ಲವೆ?
ಪ್ರತಿಕ್ರಿಯೆಗೆ ಪ್ರೋತ್ಸಾಹಕ್ಕೆ ಧನ್ಯವಾದಗಳು..
ಬರುತ್ತಾ ಇರಿ...
ಓ.. ಮನಸೇ.. ನೀನೇಕೆ ಹೀಗೆ...
ಇದಕ್ಕೆ ಕಾರಣ...
ಎಲ್ಲರೂ ಅವರವರ ಪರಿಧಿಯೊಳಗೇ.. ಇದ್ದು ವಿಚಾರ ಮಾಡುವದು...
ಪ್ರೀತಿ..
ಪ್ರೇಮ..
ಸ್ನೇಹ ಎಲ್ಲವೂ ನಿರೀಕ್ಷೆಗಳ ಮೂಟೆಯನ್ನೇ ಹೊತ್ತು ಬಂದಿರುತ್ತವೆ...
ಆದರೆ ನಿರೀಕ್ಷೆಗಳಿಲ್ಲದೆ ವಿರಕ್ತವಾಗಿರಲು ಸಾಧ್ಯವೇ...?
ಬಹಳ ಚಂದದ ಪ್ರತಿಕ್ರಿಯೆಗಾಗಿ ತುಂಬಾ ತುಂಬಾ ಧನ್ಯವಾದಗಳು..
ಪ್ರೀತಿ.. ಪ್ರೋತ್ಸಾಹ ಹೀಗೆಯೇ ಇರಲಿ...
ಪ್ರೀತಿಯಿಂದ
ಪ್ರಕಾಶಣ್ಣ..
ಬಯಸಿದಾಗ ಸಿಗುವ..
ಸಾಮಿಪ್ಯದ ಸುಖ ಬಲು ರೋಮಾಂಚಕಾರಿ.....
ಸುಸಂಕೃತ ಪುರುಷ ಸಮಾಜದ ..
ಪರವಾನಿಗೆ ಪತ್ರ "ಈ ಮದುವೆ" ...!
ಈ ಮಾತುಗಳು ಮನಸಿಗೆ ತಟ್ಟಿದವು.. ಹಸಿ ಹಸಿ ನೋಟಕ್ಕೆ ..ಹಸಿದು ತಿನ್ನುವ ಭಾವಕ್ಕೆ ಅನಂತ ಧನ್ಯವಾದ ಅಣ್ಣ
ಸಂಬಂಧಗಳ ವಿಚಕ್ಷಣ ಪರಿಚಯ.
ಚಿತ್ರಕಾರ ಕಡೆಗೂ ಅವನ ಮನೋ ಕಾಮದ ಅಮಲ ಬಿಡಲಿಲ್ಲ, ಅವನಿಗೆ ಸಂಬಂಧಗಳಿಗಿಂತಲೂ ಸಂಪರ್ಕಗಳೇ ಮುಖ್ಯವಾಗುತ್ತವೆ.
ನಿರೂಪಣಾ ಶೈಲಿಯಲ್ಲೇ, ಕಥನದ ಕುಲೂಹಲವನ್ನು ಜಾರಿಯಲ್ಲಿಟ್ಟು ಗೆದ್ದು ಬಿಡುತ್ತೀರಿ, ಇದೂ ನಿಮ್ಮ ಬರವಣಿಗೆಯ ಶಕ್ತಿ.
ವಾರೇವಾ! ಒಂದು ಅನುಭೂತಿ, ಅವರ್ಣನೀಯ...
ಪ್ರಕಾಶಣ್ಣ
ಸಂಬಂಧಗಳೇ ಹಾಗೆ
ಬಹಳ ವಿಚಿತ್ರ ಆದದ್ದು
ವಿನಾಕಾರಣ ಸಂಶಯ
ಸಂಶಯ ಇರುವಲ್ಲಿ ನಂಬಿಕೆ
ದುಷ್ಟನಲ್ಲಿ ಸಂಘ
ಮಿತ್ರನಲ್ಲಿ ಜಗಳ
ಬದುಕು ವಿಚಿತ್ರತೆಯ ಸರಮಾಲೆ
ನಿಮ್ಮ ಬರಹ ಬಹಳ ಪ್ರಭುದ್ದವಾಗಿದೆ
ರಾಜೇಶ್...
ಈ ಕಥೆ ಬರೆದು ಹಾಗೆ ನಾಲ್ಕುದಿನ ಇಟ್ಟಿದ್ದೆ...
ಒಂದೆರೆಡು ಸ್ನೇಹಿತರಿಗೆ ಕಳಿಸಿದ್ದೆ...
ಹೆಚ್ಚಿನವರು "ಕಥವಸ್ತು" ಸರಿ ಇಲ್ಲ ಅಂದರು..
"ಗಂಡು ಸಂಬಂಧವನ್ನು ಸಂದರ್ಭಕ್ಕಷ್ಟೆ.. ಸಮಯಕ್ಕಷ್ಟೆ ಬಳಸಲು ಬಯಸುತ್ತಾನೆ" ಇದು ಜೀರ್ಣವಾಗಲಿಲ್ಲ ಅಂದರು...
ಬರೆದು ಬಿಟ್ಟಿದ್ದೆ... ಇಟ್ಟುಕೊಳ್ಳಲು ಮನಸ್ಸು ಬರಲಿಲ್ಲ...
ನೀವೆಲ್ಲ ಇಷ್ಟಪಟ್ಟಿದ್ದು ಖುಷಿಯಾಯಿತು...
ಮೆಚ್ಚಿನ ಲೇಖಕಿ "ಉಷಾ ಕಟ್ಟೆ ಮನೆಯವರೂ" ಇಷ್ಟಪಟ್ಟು ಹೋಗಿದ್ದು ಮತ್ತಷ್ಟು ಸಂತೋಷ ತರಿಸಿದೆ...
ಪ್ರೀತಿ..
ಪ್ರೋತ್ಸಾಹ ಹೀಗೆಯೇ ಇರಲಿ...
ಪ್ರತಿಕ್ರಿಯೆಗೆ ಧನ್ಯವಾದಗಳು..
ಬದುಕಿನ ಮೌಲ್ಯಗಳು ಎಲ್ಲಕ್ಕಿಂತ ದೊಡ್ಡದು.ಮೌಲ್ಯಗಳಿಲ್ಲದ ಬದುಕು ಸೂತ್ರ ಕಿತ್ತ ಗಾಳಿಪಟದಂತೆ.ಮೌಲ್ಯಗಳ ಚೌಕಟ್ಟು ಕೆಲವೊಮ್ಮೆ ಬಂಧನ ವೆನಿಸಿದರೂ ಸಾಮಾಜಿಕ ಹಿತದೃಷ್ಟಿಯಿಂದ ಅದು ಅವಶ್ಯಕ.ಚಿತ್ರ ಕಲೆ,ಸಂಗೀತ ಇವೆಲ್ಲಕ್ಕಿಂತ ಬದುಕಿನ ಕಲೆ ದೊಡ್ಡದು.ಅವೆಲ್ಲಾ ಬದುಕನ್ನು ಹಿರಿದಾಗಿಸಬೇಕು.ಕಲೆಯ ಹೆಸರಿನಲ್ಲಿ ನಡೆಯುತ್ತಿರುವ ಲಂಪಟತನವನ್ನು ಅನಾವರಣಗೊಳಿಸುವ ಸುಂದರ ಕಥೆ.ಕಥೆಯ ಕೊನೆಯಲ್ಲಿ ಆ ಕಲಾವಿದನ ಬಗ್ಗೆ ಅನಾದರ,ಅವನ ನಿಜವಾದ ಬಣ್ಣವನ್ನು ಮೊದಲೇ ಅರಿಯದೆ ಅವನನ್ನು ಆರಾಧಿಸುವ ನಾಯಕಿಯ ಬಗ್ಗೆ ಅನುಕಂಪ ಮೂಡುತ್ತದೆ. ನಿರೂಪಣೆಯಲ್ಲಿ ನೀವು ಎತ್ತಿದ ಕೈ.ಜೈ ಹೋ ಪ್ರಕಾಶಣ್ಣ.
ಪ್ರೀತಿಯ ಬದರಿ ಭಾಯ್...
ಕೆಲವರು ಹೆಣ್ಣಿನ ವಿಷಯದಲ್ಲಿ ಯಾಕೆ ಹಾಗಿರುತ್ತಾರೆ..?
ಸ್ಪೂರ್ತಿಗೋಸ್ಕರನಾ?
ಅದಕ್ಕೆ ತಾಯಿ ಆದರೇನು..? ಮಗಳಾದರೇನು?
ಒಟ್ಟಿನಲ್ಲಿ ಹೆಣ್ಣು ಬೇಕು... ಅಸಹ್ಯ ಎನಿಸಿಬಿಡುತ್ತದೆ ಅಲ್ಲವಾ?
ಒಂದು ಹಂತ ದಾಟಿದ ಮೇಲೆ ಮಧ್ಯಮ ವರ್ಗದ ಮಾನಸಿಕ ಸ್ಥಿತಿಯನ್ನು ದಾಟಿರುತ್ತವೆ.. ಕೆಲವು ಸಂಬಂಧಗಳು...
ಕಲಾವಿದರ ಕಲೆಯನ್ನು ಮಾತ್ರ ಆರಾಧಿಸಬೇಕು...
ವೈಯಕ್ತಿಕ ಜೀವನವನ್ನಲ್ಲ... ಅಲ್ಲವಾ?
ಪ್ರೀತಿ..
ಪ್ರೋತ್ಸಾಹಕ್ಕೆ ಧನ್ಯವಾದಗಳು... ಜೈ ಹೋ !!
ಕಥೆ ಓದೋವಾಗ ಮೊದಮೊದಲು ಚಿತ್ರಕಾರನ ಮೇಲೆ ಕೋಪ ಬರುತ್ತಿತ್ತು.. ಕಥೆ ಪೂರ್ತಿ ಓದಿದ ಮೇಲೆ ಕಥೆ ತುಂಬಾ ಚೆನ್ನಾಗಿದೆ ಅನಿಸ್ತು...
ಸಂಬಂಧಗಳ ಅರ್ಥ ಅದೆಷ್ಟು ಬಾಲಿಶ ಅಲ್ಲವೇ?ಓದುತ್ತ ಹೋದಂತೆ ಕತೆ ಪೂರ್ತಿಯಾಗಿ ಓದುಗನನ್ನು ಆವರಿಸಿ ಬಿಡುತ್ತದೆ,..
ಇಷ್ಟ ಆಯಿತು...
super story.. like this one much.. u ended beautifuly..
ಪ್ರಕಾಶ್ ನಿಮಗೆ ಬರವಣಿಗೆಯ ಮಾಂತ್ರಿಕ ಶಕ್ತಿ ಇದೆ...ಹೀಗೆ ಮುಂದುವರೆಸಿ...
ಕಥೆ ಎಲ್ಲೋ ಅಶ್ಲೀಲ ಜಾಡು ಹಿಡಿಯುತ್ತಿದೆ ಎನ್ನುವಾಗ ಮತ್ತೆ ಸರಿಯಾದ ದಾರಿಗೆ ಬಂದು ಮುಂದೆ ತಲುಪುತ್ತ ಹೋಗುತ್ತೆ...
ಒಳ್ಳೆಯ ನಿರೂಪಣೆ...ಎಲ್ಲೋ ಒಡ್ಡಿದ ನೆನಪು..ನಮ್ಮ ತಪ್ಪು ಬೇರೆಯವರಲ್ಲಿ ನೋಡಿದಾಗ ನಮಗೆ ಕೋಪ ಬರುತ್ತೆ..ಕತೆಯ ಅಂತ್ಯ ಈ ಸತ್ಯವನ್ನು ತಮಟೆ ಸದ್ದು ಮಾಡಿ ಹೇಳುತ್ತೆ..
ಹಿರಿಯರ ನಿರ್ಧಾರಗಳು ಅನುಭವಗಳಿಂದ ಬಂದದ್ದು ಎನ್ನುವ ಸತ್ಯ ಅಪ್ಪನ ನಿರ್ಧಾರದಲ್ಲಿ ಇಣುಕುತ್ತದೆ..
ವಯಸ್ಸಿನ ಚಾಪಲ್ಯಗಳು ಬಾಳಿನ ಹಳಿಯನ್ನ ತಪ್ಪಿಸುತ್ತೆ ಎನ್ನುವುದು ಹುಡುಗಿಯ ಹಾಗು ಮಗಳ ನಡುವಳಿಕೆಯಲ್ಲಿ ಗೋಚರವಾಗುತ್ತದೆ..
ಅದ್ಭುತ ಬರವಣಿಗೆ...ಹಾಗು ತಾರ್ಕಿಕ ಅಂತ್ಯ..ಇಷ್ಟವಾಯಿತು..
ಪುಟ್ಟಣ್ಣ ಕಣಗಾಲ್ ಹೆಮ್ಮೆಯ ಕಲಾಕೃತಿ ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ನೋಡಿದ ಅನುಭವ ಆಯಿತು..
ishtavaayitu prakashanna.. kateyannu parinamakaariyaagi roopisiddiri
ಬಣ್ಣಗಳು ಬೇರೆ ಬೇರೆ ಇದ್ದ೦ತೆ, ಮನುಷ್ಯನ ರುಚಿ, ಅಭಿರುಚಿ, ಮನಸ್ಥಿತಿ ಎಲ್ಲವು ಬೇರೆ ಬೇರೆ...ಪ್ರತಿ ಮನುಷ್ಯನ ದ್ರುಷ್ಟಿಕೋನಗಳು ಬೇರೆ ಬೇರೆ ಇರುತ್ತದೆ. ಕೆಲವರು ಸ೦ಬ೦ಧಕ್ಕೆ ಹೆಚ್ಚು ಮಹತ್ವ ಕೊಟ್ಟರೆ, ಕೆಲವರು ಕೇವಲ ಭೊಗಾಕಾ೦ಕ್ಷೆಗಳಿಗೆ ಮಹತ್ವ ಕೊಡುತ್ತಾರೆ.....ಆಕೆ ಆತನನ್ನು ಸ್ವಲ್ಪ ಅಳೆದು ನೋಡಿದ್ದರೆ, ಆತನ ಮನಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದ್ದರೆ ಚನ್ನಾಗಿತ್ತೇನೋ...........
ಪ್ರಕಾಶಣ್ಣ ಕತೆ ತು೦ಬಾ ಚನ್ನಾಗಿದೆ.....:)
ಇಲ್ಲಿ ಚಿತ್ರಕಾರ ಯಾಕೆ ತಪ್ಪಾಗುತ್ತಾನೆ? ಅವನು ಸೌಂದರ್ಯದ ಆರಾಧಕ ಮತ್ತು ಎಲ್ಲವನ್ನೂ ನೇರವಾಗಿ ಹೇಳುತ್ತಾನೆ.
ಅವನು ಅ ಪುಟ್ಟ ಹುಡುಗಿಯನ್ನೂ ಬೋಗಿಸುತ್ತಾನೆ ಎಂದು ಏಕೆ ಭಾವಿಸಬೇಕು? ಆ ಮಗು ಅವನ ಕಣ್ಣುಗಳಲ್ಲಿ ಹಸಿ ಬಯಕೆಯನ್ನು ಕಂಡಿಲ್ಲವಲ್ಲ, ಅವಳು ಅವನನ್ನು ಬಯಸಿಲ್ಲವಲ್ಲ. ತಾಯಿ ಅವನನ್ನು ಬಯಸಿದ್ದಕ್ಕೆ, ಅವಳಿಗೆ ಅವನ ಕಣ್ಣಲ್ಲಿ ಕಾಮ ಕಾಣಿಸಿದೆ. ಮಗಳಿಗೆ ಬೇರೇನೋ ಕಾಣಿಸಿರಬಹುದು, ಮಗಳನ್ನು ಅವನು ಬೇರೆಯೇ ದೃಷ್ಟಿಯಲ್ಲಿ ನೋಡಿರಬಹುದು.
ನಾವು ಯಾಕೆ ಗಂಡನ್ನೇ ತಪ್ಪು ಎನ್ನುತ್ತೇವೆ? ಅವನನ್ನು ಬಯಸಿದ ಹೆಣ್ಣೂ ಅಷ್ಟೇ ಅಲ್ಲವೇ?
ಕಥೆ ಚೆನ್ನಾಗಿದೆ. ಬಣ್ಣ ಬಯಲಾಗಿದ್ದು ಆ ತಾಯಿಯದೇ ಹೊರತು ಚಿತ್ರಕಾರನದಲ್ಲ. ಚಿತ್ರಕಾರ ಮೊದಲಿಂದಲೂ ಹಾಗೇ ಇದ್ದಾನೆ. ನನ್ನ ಅನಿಸಿಕೆ.
ಕುತೂಹಲ ಇನ್ನೂ ಉಳಿದಿದೆ.
ಗುರು... ( ಸಾಗರದಾಚೆಯ ಇಂಚರ)..
ವ್ಯಕ್ತಿಯನ್ನು, ಸಂಬಂಧವನ್ನು ನಾವು ನಮ್ಮ ನೇರಕ್ಕಷ್ಟೇ ನೋಡುತ್ತೇವೆ...
ಚಷ್ಮ ಹಾಕಿಕೊಂಡು ನೋಡುತ್ತೇವೆ...
ಪೂರ್ವಗ್ರಹ ಪೀಡಿತರಾಗಿ ನೋಡುತ್ತೇವೆ..
ಈತ ಒಳ್ಳೆಯವನು ಅಂತ ಯಾರೋ ಹೇಳಿರುತ್ತಾರೆ...
ಅದೇ ಚಷ್ಮ ಹಾಕಿಕೊಂಡು ನೋಡುತ್ತೇವೆ...
ಅಥವಾ "ಆತ ಅಷ್ಟೇನೂ ಒಳ್ಳೆಯ ಮನುಷ್ಯನಲ್ಲ" ಅಂತ ಯಾರೋ ಅಂದಿರುತ್ತಾರೆ..
ಆಗಲೂ ನಾವು ಯಾರೋಹೇಳಿದ ಚಷ್ಮವನ್ನೇ ಹಾಕಿಕೊಂಡು ವ್ಯಕ್ತಿಯನ್ನು/ ಸಂಬಂಧವನ್ನು ನೋಡುತ್ತೇವೆ..
ನಮ್ಮ ಅನುಭವದ ತಿಳುವಳಿಕೆಯಲ್ಲಿ ಆ ವ್ಯಕ್ತಿ ಹೇಗೆ ಅಂತ ಸ್ವ ವಿಮರ್ಶೆ ಮಾಡುವ ಗೋಜಿಗೆ ಹೋಗುವದಿಲ್ಲ..
ಬರೆಯಲು ಸ್ಪೂರ್ತಿ ಕೊಡುವಂಥಹ ಪ್ರತಿಕ್ರಿಯೆ...!!
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಡಾ.ಕೃಷ್ಣಮೂರ್ತಿಯವರೆ...
ನಾನು ಬರೆದ ಕಥೆಗಳಿಗೆ ತಪ್ಪದೆ ಪ್ರತಿಕ್ರಿಯೆ ನೀಡಿ...
ಮತ್ತೆ ಫೋನಾಯಿಸಿ ಕಥೆಯ ಬಗೆಗೆ ಚರ್ಚಿಸಿ ನನಗೆ "ಟಿಪ್ಸ್" ಕೊಡುವ ನಿಮ್ಮ ಸಹೃದಯತೆಗೆ ತುಂಬು ಹೃದಾಯದ ಕೃತಜ್ಞತೆಗಳು...
ಮೌಲ್ಯಗಳು ಬದುಕಿಗೆ ಅವಶ್ಯಕತೆ ನಿಜ...
ಆದರೆ ಸಮಾಜ ಎರಡು ಸ್ತರಗಳಲ್ಲಿ ನಾವು ಹೇಳುತ್ತಿರುವ, ಪ್ರತಿಪಾದಿಸುವ "ಮೌಲ್ಯಗಳಿಗೆ" ಬೆಲೆಯೇ ಇಲ್ಲ...
ಸಮಾಜದ ಅತ್ಯಂತ ಶ್ರೀಮಂತ ಸಮುದಾಯ..
ಅತ್ಯಂತ ಆರ್ಥಿಕವಾಗಿ ಕೆಳಸ್ಥಿತಿಯಲ್ಲಿರುವ ಸಮುದಾಯ..
ಇಲ್ಲಿ "ಹೆಣ್ಣು-ಗಂಡಿನ ಸಂಬಂಧಗಳ "ಮೌಲ್ಯ" ಬಹಳ ಬಹಳ ಕಡಿಮೆ...
( ಇವರಿಬ್ಬರೊಂದಿಗೆ ನನ್ನ ದೈನಂದಿನ ವ್ಯಾವಹಾರವಿದೆ...
ನನ್ನ ಬದುಕು ಇವರೊಡನೆಯೇ ಸೇರಿದೆ...
ಮೊದ ಮೊದಲು ಸೋಜಿಗವಾದರೂ ಈಗ ತೀರಾ ಸಹಜ ಎನ್ನಿಸುವಷ್ಟು... ಅನುಭವ)
ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ..
ಬದಲಾಗಬೇಕು..
ನಿಮ್ಮ ವೈಚಾರಿಕ ದೃಷ್ಟಿಕೋನದಲ್ಲಿ ಇನ್ನೊಂದು ಕಥೆ ಬರೆಯುವ ಮನಸ್ಸಿದೆ..
ನಿಮ್ಮ ಪ್ರೀತಿ.. ಪ್ರೋತ್ಸಾಹಕ್ಕೆ ತಲೆಬಾಗಿದ್ದೇನೆ..
ಆಶೀರ್ವಾದ ಹೀಗೆಯೇ ಇರಲಿ...
ರಂಜಿತಾ..
ಈ ಕಥೆ ಬರೆದು ಮೊದಲು ನನ್ನ ಮಡದಿಗೆ ಓದಿ ಹೇಳಿದೆ..
ಚೆನ್ನಾಗಿ ಬಯ್ಯಿಸಿಕೊಂಡೆ...
ವೀಣಾ, ಚಿತ್ರಾ.. ಅವರದ್ದೂ ನನ್ನ ಮಡದಿಯ ಅಭಿಪ್ರಾಯ..
ಒಟ್ಟೂ ಐದು ಜನರಿಗೆ ಕಳಿಸಿದ್ದೆ...
ಮಹೇಶ್ ಗೌಡ್ರು.., ಶುಭಾ ಇವರಿಬ್ಬರೇ "ಕಥೆ ಚೆನ್ನಾಗಿದೆ.. ಬ್ಲಾಗಿನಲ್ಲಿ ಹಾಕಿ" ಅಂದಿದ್ದು...
ಮೊದಲ ಮೂವರ ಅಭಿಪ್ರಾಯದಲ್ಲಿ ಇಲ್ಲಿ ನೀವು ಹೇಳಿದ ಅಭಿಪ್ರಾಯವೇ ಬಂದಿತ್ತು...
ನಮ್ಮನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಜನ ಯಾವ ರೀತಿ ಮಾತನಾಡುತ್ತಾರೆ ಅಂತ ಊಹಿಸುವದು ಕಷ್ಟ..
"ಜಗತ್ತು ಹೀಗಿದೆ..
ನಾನು ಹಾಗಿಲ್ಲ" ಎನ್ನುತ್ತಲೇ ಕಿವಿಯಲ್ಲಿ ಹೂವಿಡುವ ಜನರೂ ಇದ್ದಾರೆ..
ನಿಮಗೆ ಕೋಪ ಬಂದಿದ್ದು ಸಹಜ..
ಪ್ರೋತ್ಸಾಹಕ್ಕೆ... ಪ್ರತಿಕ್ರಿಯೆಗೆ ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಪ್ರೀತಿಯಿಂದ
ಪ್ರಕಾಶಣ್ಣ..
ಮೌನರಾಗ....
ಸಂಬಂಧಗಳ ಅರ್ಥ "ಬಾಲಿಶ" ಅಂದಿರಲ್ಲ..
ಅದು ನಿಜ...
ಇಲ್ಲಿ ..
ತನ್ನ ಚಂದವನ್ನು ಆರಾಧಿಸುವ ಗಂಡ...
ಮುದ್ದಿನ ಮಗಳಿದ್ದರೂ..
ಹಳೆಯ ಗೆಳೆಯನ ನೆನಪಲ್ಲಿ ಬದುಕು ಸವೆಸುವ ನಾಯಕಿ...
ಇಷ್ಟು ವರ್ಷವಾದರೂ ಆತನನನ್ನೊಮ್ಮೆ ಭೇಟಿಮಾಡುವಾಸೆ.. !
ಇಲ್ಲಿನ ನಾಯಕಿಯಂಥಹ ಹೆಣ್ಣುಮಗಳೊಬ್ಬಳು ನನಗೆ ಪರಿಚಯವಿದೆ..
ಅವಳ "ಹಳೆಯ ಪ್ರೀತಿಯ ಹುಚ್ಚುತನ" ಈ ಕಥೆ ಬರೆಯಲು ಸ್ಪೂರ್ತಿ...
ಹಳೆಯ ಗೆಳೆಯನನ್ನು ಮರೆಯದೆ..
ತಮ್ಮ ಬಾಳಲ್ಲಿ ಪ್ರತಿ ಹೆಜ್ಜೆಗೂ ನೆನಪಿಸಿಕೊಂಡು ಬದುಕು ನರಕ ಮಾಡಿಕೊಳ್ಳುವ ಹೆಣ್ಣು ಮಕ್ಕಳು ನಮ್ಮೆದುರಿಗೆ ಇದ್ದಾರೆ...
ಪ್ರೀತಿಸುವ ಪತಿ, ಮಕ್ಕಳ ಸಂಗಡ ಬದುಕು ಹಸಿರಾಗಿಸಲೆಂಬುದು ಮನದಾಳದ ಹಾರೈಕೆ...
ಉಳಿದದ್ದೆಲ್ಲವೂ ಕಲ್ಪನೆ..
ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು..
ನಾನು ಯಾವಾಗಲೂ ಯೋಚಿಸುತ್ತೇನೆ..ಯಾರಾದರೂ ಗಂಡು ಹೆಣ್ಣು ಸುಮ್ಮನೆ ಒಂದು ಚಂದ ಗೆಳೆತನ ಇರಿಸಿಕೊಳ್ಳಲು ಸಾಧ್ಯನೇ ಇಲ್ವಾ ಅಂತ?? ಸಂಬಂಧ ಗಳು ಏಕೆ ದೈಹಿಕ ಬಯಕೆಗಳಿಗೆ ಸೀಮಿತವಾಗಬೇಕು ಅಂತ ನನಗೆ ಬಹಳಷ್ಟು ಸಾರಿ ಅನಿಸಿದೆ....ನಾವು ಬಹಳಷ್ಟು ಹೆಂಗಸರು ಹೀಗೇ ಯೋಚಿಸುತ್ತೇವೆ...ಆದರೆ ಗಂಡಸರು ಮಾತ್ರ????????????????????
"ನೋಡಮ್ಮಾ..
ಹಾಡು...
ಬಣ್ಣದ ಬದುಕು ತುಂಬಾ ಕಷ್ಟದ್ದು.....
ನಿಜ !!!
ಶುಭಾ...
ಒಬ್ಬರು ನಮಗೆ ಇಷ್ಟವಾಗಿಬಿಟ್ಟರೆ..
ಅವರನ್ನು ಕಣ್ಮುಚ್ಚಿ ನಂಬಿಬಿಡುತ್ತೇವೆ..
ಅವರ ಗುಣ,ದೋಷಗಳು ನಮಗೆ ಕಾಣುವದಿಲ್ಲ..
ಕಂಡರೂ ಅದನ್ನು ಪರಾಮರ್ಶಿಸಲು ಹೋಗುವದಿಲ್ಲ.. ಇದು ನಾವು ಮಾಡುವ ತಪ್ಪು..
ಇಷ್ಟವಾದರೂ..
ಆಗಾಗ ಚಷ್ಮ ತೆಗೆದು ಜಗತ್ತನ್ನು ನೋಡಬೇಕು ಅಲ್ವಾ?
ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು..
ಪ್ರೀತಿಯ ಶ್ರೀಕಾಂತ್ ಮಂಜುನಾಥ್...
ನಿಮ್ಮ ಪ್ರತಿಕ್ರಿಯೆ ಇನ್ನೂ ಬರಲಿಲ್ಲವಲ್ಲ ಅಂತ ಕಾಯುತ್ತಿದ್ದೆ..
"ನಮ್ಮ ತಪ್ಪು ಬೇರೆಯವರಲ್ಲಿ ನೋಡಿದಾಗ ಕೋಪ ಬರುತ್ತದೆ"
ನೀವು ಹೇಳಿದ ಮಾತು ಸತ್ಯ...
ಇಲ್ಲಿ ಮಗಳು ಕಲಾಕಾರನ ಕಾಮದಾಸೆಗೆ ತುತ್ತಾದಳೆ? ಅನ್ನುವದಕ್ಕಿಂತ..
ತನ್ನನ್ನು ಹಾಗೆ ಮಗಳನ್ನು ನೋಡಿಬಿಟ್ಟನಾ ಎನ್ನುವ ಆತಂಕ..
ತಾನು ಕೆಟ್ಟು ಹೋದ ಹಾಗೆ ಮಗಳು ಕೆಡಬಾರದು ಎನ್ನುವ ಆಶಯ...
ಅಥವಾ..
ತಾನೊಬ್ಬಳೇ ಅವನ ಜೀವನದಲ್ಲಿ ಅಲ್ಲಾ..
ಇನ್ನೂ ಅನೇಕರು ಇದ್ದಿರ ಬಹುದು ಅನ್ನುವ ಕೋಪ ಇದ್ದಿರ ಬಹುದಾ?
ಒಟ್ಟಿನಲ್ಲಿ ಈ ಎಲ್ಲ ಗುಣಗಳು ಹೆಣ್ಣಿನ ಸಹಜ ಗುಣಧರ್ಮಗಳು...
ನೀವು ಕಣಗಾಲರನ್ನು ಜ್ಞಾಪಿಸಿದ್ದು..
ಅವರೊಬ್ಬ ಅದ್ಭುತ ನಿರ್ದೇಶಕರು.. ನೆನಪಿಸಿದ್ದಕ್ಕೆ ಧನ್ಯವಾದಗಳು..
ಕಥೆಯ ಪ್ರತಿ ಹಂದರವನ್ನು ಎಳೆ ಎಳೆಯಾಗಿ ಬಿಡಿಸಿ..
ವಿಮರ್ಶಿಸುವ ನಿಮ್ಮ ಪರಿ ನನಗೆ ಬಹಳ ಇಷ್ಟ...
ಪ್ರೀತಿ, ಪ್ರೋತ್ಸಾಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತವೆ...
ತುಂಬಾ ತುಂಬಾ ಧನ್ಯವಾದಗಳು...
ಪ್ರೀತಿಯಿಂದ..
ವಾಣಿಶ್ರೀ....
ಎಷ್ಟೋ ಬಾರಿ ಯಾವುದೋ ಕಲ್ಪನೆಯಲ್ಲಿ ಇದ್ದು ಬಿಡುತ್ತೇವೆ ಅಲ್ಲವಾ?
ನಮ್ಮ ಅನುಭವದ ವ್ಯಕ್ತಿಗಳು..
ಸಂಬಂಧಗಳು ಹೀಗೆ ಇದ್ದಾರೆ ಅಂತ ನಮ್ಮಷ್ಟಕ್ಕೇ ನಾವು ಕಲ್ಪಿಸಿ ಕೊಂಡುಬಿಡುತ್ತೇವೆ..
ಖಂಡಿತ ಅದು ಅವರ ತಪ್ಪಲ್ಲ..
ಅವರು ಹಾಗೇಯೇ ಇದ್ದಿರುತ್ತಾರೆ..!
ನಮ್ಮ ತಪ್ಪು... ನಾವು ಆಗಾಗ "ಚಷ್ಂಅ" ತೆಗೆದು ನೋಡಬೇಕು...
ಇಲ್ಲಿ ಕಥಾ ನಾಯಕಿಯ ಹಾಗೆ ಆಗಬಾರದೆಂಬುದು ಆಶಯ..
ಪ್ರತಿಕ್ರಿಯೆ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
tumba chennagi moodi bandide hegdeyavre.. nimma saalugalu engineering pustakagalinda nimmatta seleyuttive.....
Love is an energy... it can neither be created nor b destroyd.... it can only b transferered from person to person....
ಈ ಚಿತ್ರಕಾರನ ವಿಚಿತ್ರ ಮನಸಿನ ಹಸಿ ಹಸಿ ಭಾವ ನಿಮ್ಮ ಕುಂಚದಲಿ ಮೂಡುವ ಹೊತ್ತಿನಲಿ ಏಕೋ ಕಾಮವೇ ಈ ಜಗದ ಆಧಾರ ಆಗುತಿದೆ ಅನಿಸಿತು...
ಪ್ರಕಾಶಣ್ಣ ಕಥೆ ಮಾತ್ರ ತುಂಬಾ ತುಂಬಾ ಇಷ್ಟವಾಯ್ತು... ಕಲಾವಿದರ ಬಣ್ಣ ಚೆನ್ನಾಗಿ, ಅರ್ಥಪೂರ್ಣವಾಗಿ ಮೂಡಿ ಬಂದಿದೆ....! ಆ ಹುಡುಗಿ ಮದುವೆ ಆದಾಗಿನಿಂದ ಅದೇನೋ ಒಂದು ರೀತಿಯಲ್ಲಿ ಆತನ ನೋಟವನ್ನು ನೆನೆಸಿಕೊಂಡು ಕುಶಿಯನ್ನು 'ಅನುಭವಿಸಿದ್ದಾಳೆ'... ಅಂತಹ ಒಳ್ಳೆಯ ಹೆಂಡತಿಯನ್ನು ಆರಾಧಿಸುವ ಗಂಡನಿಗೆ ಅವಳು ಅಷ್ಟು ವರ್ಷಗಳ ಕಾಲ ಒಂದು ರೀತಿಯ ಮೋಸವನ್ನೇ ಮಾಡಿದ್ದಾಳೆ.... ಅವಳಿಗೆ ಅಂದದ ಬದುಕನ್ನು ಅವಳ ಅಪ್ಪ ಕಟ್ಟಿ ಕೊಟ್ಟರೂ ಅದನ್ನು ಸಂಪೂರ್ಣವಾಗಿ ಅನುಭವಿಸಲು ಅಶಕ್ತಳಾಗಿ ಕೊನೆಗೆ ಅವನ ಬಯಲಾದ ಬಣ್ಣಕ್ಕೆ ಮರುಗುತ್ತಿದ್ದಾಳೆ.... ಎಂತಹ ವಿಪರ್ಯಾಸ...!!
ನೋಡಮ್ಮ ಹಾಡು, ಬಣ್ಣದ ಬದುಕು ತುಂಬಾ ಕಷ್ಟದ್ದು..... ಅಪ್ಪನ ನಿರ್ಧಾರಕ್ಕೆ ಜೈ ಹೋ....
ಪ್ರಕಾಶ,
ತುಂಬ ಸಂಯಮದಿಂದ ಈ ಕತೆಯನ್ನು ಬರೆದಿದ್ದೀರಿ. ಬಾಣ ಗುರಿಯನ್ನು ಸರಿಯಾಗಿ ತಲುಪುವಂತಿದೆ ರಚನೆ. ಅಭಿನಂದನೆಗಳು.
ಶೃತಿ....
ನಮ್ಮ ಅನುಭವದ ಹತ್ತಿರದ ವ್ಯಕ್ತಿಗಳನ್ನು.. ಸಂಬಂಧಗಳನ್ನು..
ನಾವು ನಮ್ಮ ನೇರಕ್ಕೆ ನೋಡದೆ...
ಚಶ್ಮ ತೆಗೆದು ನೋಡಬೇಕು...
ಆಗ ಸರಿಯಾದ ಬಣ್ಣ ಕಾಣುವದು..
ಯಾಕೆಂದರೆ ವ್ಯಕ್ತಿಗಳು..
ಅವರ ಸ್ವಭಾವಗಳು ಬದಲಾಗದೇ.. ಹಾಗೆಯೇ ಇದ್ದಿರುತ್ತದೆ..
ಆಗ ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳ ಬಹುದು..
ಪ್ರೀತಿಯ ಪ್ರೋತ್ಸಾಹಕ್ಕೆ ಧನ್ಯವಾದಗಳು..
ಪ್ರತಿಕ್ರಿಯೆಗಳು ಟಾನಿಕ್ ಥರಹ... ಇನ್ನಷ್ಟು ಬರೆಯಲು ಉತ್ಸಾಹಕೊಡುತ್ತದೆ..
ಪ್ರೀತಿಯ "ಭಾಶೇ" ಯವರೆ.....
ನಿಮ್ಮ ವಾದ ಸರಣಿ ನನಗೆ...
ನನ್ನ ಮನೆಯವರಿಗೆ ಇಷ್ಟವಾಯಿತು...
ಇಲ್ಲಿ ಎಲ್ಲರೂ..(ನನ್ನನ್ನೂ ಸೇರಿಸಿ) ನಿಮ್ಮ ದೃಷ್ಟಿ ಕೋನದಲ್ಲಿ ವಿಚಾರ ಮಾಡಲಿಲ್ಲ...
ಇಲ್ಲಿ ಕಥಾನಾಯಕಿ ಪವಿತ್ರವಾಗಿ ಕಲಾಕಾರನನ್ನು ಪ್ರೀತಿಸುತ್ತಾಳೆ..
ತನ್ನ ಸೌಂದರ್ಯವನ್ನು ಆರಾಧಿಸುವ ಪತಿಯಿದ್ದರೂ..
ಹಳೆಯ ಗೆಳೆಯನ ನೆನಪಿನಿಂದ ಹೊರ ಬರಲು ಆಗಲಿಲ್ಲ...
ಮಗಳಿಗೂ ತನ್ನ ಹಾಗೆ "ಚಂದವಾಗಿ ತಯಾರಾಗಿ" ಬರಲು ಹೇಳೀದ್ದನ್ನು ಕೇಳಿ...
"ಇವನ ಬಾಳಿನಲ್ಲಿ ತಾನೊಬ್ಬನೇ ಅಲ್ಲ..
ನನಗಾಗಿ ಈತ ಮದುವೆಯಾಗದೆ ಉಳಿದಿಲ್ಲ...
ಈತ ಹೀಗೆ ಹಲವರಿಗೆ ಹೇಳಿರ ಬಹುದು... ಹಾಗೆಯೇ ಮಗಳಿಗೂ ಹೇಳೀದ್ದಾನೆ..
ಈತನೊಬ್ಬ ಹೆಣ್ಣು ಲಂಪಟ..!!.."
ಅಂತ ವಿಚಾರ ಮಾಡಿರ ಬಹುದಲ್ಲವೆ?
ತನ್ನನ್ನು ನೋಡಿದ ಹಾಗೆಯೇ ತನ್ನ ಮಗಳನ್ನೂ "ಕೆಟ್ಟ" ದೃಷ್ಟಿಯಿಂದ ನೋಡಿದರೆ...?
ಯಾಕೆಂದರೆ ಬಹಳ ವರ್ಷಗಳ ನಂತರ ಇವಳನ್ನು ನೋಡಿದ್ದು "ಹಸಿ ಹಸಿ ನೋಟದಿಂದ..
"ಹೆಣ್ಣಿನ ಮೇಲಿನ ಆಸಕ್ತಿ ಕಡಿಮೆಯಾಗಿಲ್ಲ" ಅನ್ನುವದು ಅವಳಿಗೆ ಮನವರಿಕೆ ಆಗಿರುತ್ತದೆ..
"ಆತನ ಹಸಿ.. ಹಸಿ ಕೆಟ್ಟ ನೋಟ.. ತನಗಾಗಿ ಮಾತ್ರ" ಅಂದುಕೊಂಡಿದ್ದು ತಪ್ಪಾಯಿತೇನೋ" ಎನ್ನುವ ತೊಳಲಾಟದಲ್ಲಿ ಅವಳಿರ ಬಹುದು..
ಒಂದು ರೀತಿಯಲ್ಲಿ ನೀವಂದಿದ್ದು ನಿಜ..
"ಬಯಲಾದದ್ದು ಆಕೆಯ ಬಣ್ಣ"...
ಇಲ್ಲಿನ ಸಂವಾದವನ್ನು ಹೊಸ ದೃಷಿಯಿಂದ ನೋಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..
ವಿಚಾರಕ್ಕೆ ತೊಡಗಿಸುವ ಪ್ರತಿಕ್ರಿಯೆಗಾಗಿ..
ಇಷ್ಟು ಉದ್ದದ "ವಿವರಣೆ" ಕೊಡಿಸಿದ್ದಕ್ಕಾಗಿ ಧನ್ಯವಾದಗಳು..
ಬರುತ್ತಾ ಇರಿ..
ಪ್ರೀತಿಯಿಂದ
ಪ್ರಕಾಶಣ್ಣ..
ಪ್ರೀತಿಯ "ಸಿಂಧೂ ಚಂದ್ರ"...
ಇಲ್ಲಿ ಕಥೆಯಲ್ಲಿ ಕಥಾನಾಯಕಿ ಕಲಾಕಾರನಿಂದ ಆಕರ್ಷಣೆಗೆ ಒಳಗಾಗಿರುತ್ತಾಳೆ..
ಪ್ರೀತಿಯ ಬಲೆಗೆ ಬಿದ್ದಿರುತ್ತಾಳೆ..
ಹಾಗಾಗಿ ಅಲ್ಲಿ ಗಂಡು ಹೆಣ್ಣಿನ ನಡುವಿನ ಸ್ನೇಹದ ವಿಚಾರ ಬರುವದಿಲ್ಲ.. ಅಲ್ಲವೆ?
ಸಿಂಧೂ..
ನನ್ನ ಕಾಲೇಜಿನ ದಿನಗಳಲ್ಲಿ ನನಗೆ ಕಾಲೇಜಿನ ಹೆಣ್ಣು ಮಕ್ಕಳೆಲ್ಲರೂ..
ಸಾರ್ವತ್ರಿಕವಾಗಿ "ಪ್ರಕಾಶಣ್ಣ" ಅಂತ ಕರೆಯುತ್ತಿದ್ದರು..
ನಾನು ಇಷ್ಟ ಪಡುವ ಹುಡುಗಿ ಕಾಲೇಜಿಗೆ ಬರುತ್ತಿರವಾದ್ದರಿಂದ ನನಗೆ ಅಂಥಹ ಸಮಸ್ಯೆ ಇರಲಿಲ್ಲ..
ಆದರೂ ಒಬ್ಬ ಹುಡುಗಿ ನನ್ನ ಹತ್ತಿರ "ಪ್ರಕಾಶಣ್ನ" ಅಂತ ಕರೆಯದಿರಲಿ.....
ಒಂದು ಒಳ್ಳೆಯ ಸ್ನೇಹ..
ಗಂಡು ಮಕ್ಕಳಲ್ಲಿ ಇರುವ ಸ್ನೇಹದ ಹಾಗೆ ಅವಳೊಡನೆ ಇರಬೇಕಿತ್ತು..
ಎನ್ನುವದು ನನ್ನ ಮಹದಾಸೆಯಾಗಿತ್ತು...
ಇದಕ್ಕೆ ನನ್ನ ಪರಮಾಪ್ತ ಗೆಳೆಯ "ನಾಗೂ" ನನಗೆ ಸಹಾಯ ಮಾಡಿದ್ದ ಕೂಡ..
ಈ ಘಟನೆಯನ್ನು ನನ್ನ ಬ್ಲಾಗಿನಲ್ಲಿ ಬರೆದಿರುವೆ.. ನೀವೂ ಓದಿರ ಬಹುದು...
"ದೈಹಿಕ ಆಕರ್ಷಣೆಗೆ ಒಳಗಾಗದ "ಸ್ನೇಹ" ಗಂಡು ಹೆಣ್ಣಿನ ನಡುವೆ ಸಾಧ್ಯ..."
ನನ್ನ ಅನುಭವದಲ್ಲಿ ಇದು ಸಾಧ್ಯವಾಗಿದೆ..
ನನಗೆ ಒಳ್ಳೆಯ ಗೆಳೆಯರ ಹಾಗೆ ಸ್ನೇಹಿತೆಯರೂ ಇದ್ದಾರೆ..
ಗಂಡು ಹೆಣ್ಣಿನ ನಡುವಿನ ಆಕರ್ಷಣೆ ಪ್ರಕೃತಿ ಸಹಜವಾದದ್ದು..
ಅದಕ್ಕೊಂದು ನಿರ್ಬಂಧವಿರದ್ದಿದ್ದರೆ..
ಪ್ರಾಣಿಗಳಿಗೂ ನಮಗೂ ವ್ಯತ್ಯಾಸವಿಲ್ಲ ಅಲ್ಲವಾ?
ನೀವು ಕೇಳೀದ ಪ್ರಶ್ನೆಗೆ ಉತ್ತರವಾಗಿ ಸಧ್ಯದಲ್ಲಿ ಒಂದು ಕಥೆಯ ರೂಪದಲ್ಲಿ ಉತ್ತರ ಕೊಡುವೆ...
ಒಂದು ಒಳ್ಳೆಯ ಕಥಾವಸ್ತು ಕೊಟ್ಟಿದ್ದಕ್ಕಾಗಿ ನಿಮಗೆ ಸಿಕ್ಕಾಪಟ್ಟೆ...
ತುಂಬಾ ತುಂಬಾ ಧನ್ಯವಾದಗಳು...
ನಿಮ್ಮ ಪ್ರತಿಕ್ರಿಯೆ...
ಪ್ರೋತ್ಸಾಹಕ್ಕೆ ಧನ್ಯವಾದಗಳು.. ಜೈ ಹೋ !!
ಉತ್ತಮ ಕಥೆ , ಉತ್ತಮ ಪ್ರತಿಕ್ರಿಯೆಗಳು. ಬಹಳ ದಿನಗಳ ನಂತರ ತುಂಬಾ ಒಳ್ಳೆ ಕಥೆ ಓದಿದೆ. ಆದರೆ ನನಗನ್ನಿಸುವಂತೆ "ಭಾಶೇ" ಅವರು ಹೇಳಿದಂತೆ ಬಯಲಾದದ್ದು ನಾಯಕಿಯ ಬಣ್ಣ. ಚಿತ್ರಕಾರ ಇರುವುದೇ ಹಾಗೆ. ಆತ ಮಾಡಿದ್ದೂ ತಪ್ಪು. ಆದರೆ ಜೀವನ ಪೂರ್ತಿ ಪ್ರೀತಿಸುವ ಗಂಡನಿಗೆ ಮೋಸ ಮಾಡಿದ ನಾಯಕಿಯ ತಪ್ಪೇ ದೊಡ್ದದೆನಿಸುತ್ತದೆ ಮತ್ತು ಅಸಹ್ಯವೆನಿಸುತ್ತದೆ ನನಗೆ.
"ನೋಡು ..
ಗಂಡು ಒಂದು ಸಂಬಂಧವನ್ನು ..
ಸಂದರ್ಭಕ್ಕಾಗಿ..
ಕೇವಲ ಒಂದು ಸಮಯಕ್ಕಷ್ಟೇ ಬಳಸುವದಕ್ಕೆ ಇಷ್ಟಪಡುತ್ತಾನೆ.."
ಇದು ನನಗೆ ಇಷ್ಟವಾಗಲಿಲ್ಲ. ಇತಿಹಾಸವನ್ನೊಮ್ಮೆ ತೆಗೆದು ನೋಡಿದರೆ ಹೆಣ್ಣಿನ ಮಾನ ಪ್ರಾಣ ಕಾಪಾಡುವುದಕ್ಕಾಗಿ ಪ್ರಾಣ ಕೊಟ್ಟ ಎಷ್ಟೋ ಗಂಡಸರು ಕಾಣುತ್ತಾರೆ. ಪ್ರಾಣವನ್ನು ಭೋಗಿಸುವುದಕ್ಕಾಗಿ ಕೊಡುವುದಿಲ್ಲ ಅಲ್ಲವೇ? ಮದುವೆಯಾದ ಹೆಂಡತಿಯನ್ನು ಗೌರವದಿಂದ ಕಾಣುವವರೂ ಬಹಳ ಜನರಿರುತ್ತಾರೆ. ಸಹಜ ಕಾಮವನ್ನು ಅತ್ಯಾಚಾರವೆನ್ನಲಾಗದು. ಕಥೆಯ ಪ್ರಾರಂಭದಲ್ಲಿ ಚಿತ್ರಕಾರನಿಗೂ ನಾಯಕಿಗೂ ನಡೆದ ಸಂಭಂದಕ್ಕೆ ಇಬ್ಬರೂ ಸಮಾನ ಜವಾಬ್ದಾರರು. ಅದಕ್ಕಾಗಿ ಸ್ತ್ರೀ ಸಮಾಜ ಇರುವುದೇ ಹೀಗೆ ಎನ್ನಬಹುದೇ? ಭೋಗಿಸುವ ಉಪಯೋಗಿಸುವ ಮೋಸ ಮಾಡುವ ಬುದ್ಧಿ ಸ್ತ್ರೀ ಪುರುಷರಲ್ಲಿ ಸಮಾನವಗಿರುತ್ತದೆ ಎಂದು ನನ್ನ ಭಾವನೆ. ಆದರೆ ಮಹಿಳೆಗೆ ಪುರುಷನಷ್ಟು ಸ್ವಾತಂತ್ರ್ಯ ಇರದ್ದರಿಂದ ಮತ್ತು ಆಕೆಯ ಚಲನ ವಲನಗಳ ಬಗೆಗೆ ಮನೆಯವರು ನಿಗಾ ವಹಿಸುವದರಿಂದ ಆಕೆ ತಪ್ಪು ಮಾಡುವ ಸಾದ್ಯತೆ ಕಡಿಮೆ ಇರಬಹುದು.
ಪ್ರಕಾಶ್, ನಾನು ಇಲ್ಲಿ ಹೇಳಿದ್ದು ನಿಮ್ಮ ಕಥಾನಾಯಕಿಯ ಮಗಳ ಬಗ್ಗೆ ಆಗಿತ್ತು...ಇರಲಿ ಬಿಡಿ...ನಿಮಗೆ ಮತ್ತೆ ಕನ್ ಫ್ಯೂಜನ್ ಬೇಡ....ಮತ್ತೆ ಇನ್ನೊಂದು ಮಾತು....ನಿಮಗೆ ಪ್ರಕಾಶಣ್ಣ ಎಂದು ಕರೆಯದಿರುವ ಗೆಳತಿ ನಿಮಗೆ ಪುನ: ಸಿಗುವಂತಾಗಲಿ ...ಇದು ನನ್ನ ಆಶಯ...
ಗಂಡು ಹೆಣ್ಣಿನ ಸಂಬಂಧದ ಬಗ್ಗೆ ಹಲವು ಲೇಖನಗಳು ನಿಮ್ಮಿಂದ ಬಂದಿವೆ.ಆದರೂ ಈ ಲೇಖನ ವಿಚಾರ ಪ್ರಚೋದನೆ ಮಾಡುತ್ತದೆ. ಒಮ್ಮೊಮ್ಮೆ ಗಂಡು ಹೆಣ್ಣಿನ ಸಂಬಂಧ ಪರಿಸ್ಥಿತಿಗೆ ಅನುಗುಣವಾಗಿ ಬಣ್ಣ ಬದಲಿಸುವ ಗೋಸುಂಬೆ ತರಹ ಅನ್ನಿಸುತ್ತದೆ. ಇಂತಹ ಸಮಯದಲ್ಲಿ ಯಾವುದೋ ಆಕರ್ಷಣೆಗೆ ಒಳಗಾಗಿ ಆಡುವ ಪ್ರೀತಿ, ಪ್ರೇಮದ , ಜೀವನ ಕಟ್ಟುವ ಮಾತುಗಳು ಪ್ರೀತಿಲೇಪಿತ ಸ್ವಾರ್ಥ ತುಂಬಿದ ಆಸೆ ತುಂಬಿಸಿಕೊಳ್ಳುವ ಮಾತೆ ಆಗಿರುತ್ತವೆ .ಲೇಖನದಲ್ಲಿ ತಾಯಿ , ಮಗಳು, ಹಾಗು ಕಲಾವಿದನ ಪಾತ್ರ ಪೋಷಣೆ ಚೆನ್ನಾಗಿದೆ. ಜೈ ಹೋ
ಪ್ರೀತಿಯ ನಮನಾ (ಗಣೇಶ್... ಬಜಗುಳಿ)
ನಮಗೆಲ್ಲ ಬಣ್ಣದ ಕೆಲಸ ಮಾಡುವವರ ಮೇಲೆ ಏನೋ ಆಕರ್ಷಣೆ..
ನಾಟಕ, ಸಿನೇಮಾ,ಟಿವಿ, ಚಿತ್ರಕಲೆ... ಇತ್ಯಾದಿ...
ಅಲ್ಲಿನ ಬದುಕು...
ಅಲ್ಲಿನ ರಂಗು ರಂಗಿನ ಯಶಸ್ಸಿನ ಹಿಂದಿನ ಕಷ್ಟ...
ನಮಗನ್ನಿಸುವ ಹಾಗೆ ಎಲ್ಲವೂ ಯಶಸ್ಸಿನ... ಗೆಲುವಿನ ಕಥೆಯಲ್ಲ ಅಲ್ಲಿ......
ಉಳಿದ ರಂಗಗಳಿಗಿಂತ ಹೆಚ್ಚಿನ ಶ್ರಮ, ಶೋಷಣೆ ಅಲ್ಲಿರುತ್ತದೆ ಅಂತ ನನ್ನ ಗೆಳೆಯರೊಬ್ಬರ ಅನುಭವ..
ಆದರೆ ಹದಿಹರೆಯದ ಮನಸ್ಸು ಅಲ್ಲಿ ಸುಲಭವಾಗಿ ಆಕರ್ಷಣೆಗೆ ಒಳಗಾಗುವದೂ ಸತ್ಯ..
ಹೀಗಾಗಿ ಇಲ್ಲಿನ "ಅಪ್ಪನ" ಮಾತು ಬಹಳ ಮಹತ್ವದ್ದು ಅಲ್ಲವೆ?
ಗಣೇಶ್ ಜಿ... ತುಂಬಾ ತುಂಬಾ ಧನ್ಯವಾದಗಳು..
ನೀವು ನನ್ನ ಬ್ಲಾಗನ್ನು ಮರೆತುಬಿಟ್ಟಿದ್ದಿ ಎಂದುಕೊಂಡಿದ್ದೆ..
ಪ್ರೀತಿಗೆ.., ಸ್ನೇಹಕ್ಕೆ ಧನ್ಯವಾದಗಳು ಜೈ ಹೋ !!
ಕಥೆ ಇಷ್ಟ ಆಯ್ತು ಪ್ರಕಾಶಣ್ಣ..
ಆದರೆ ನನಗೆ ಅನ್ನಿಸುವುದು, ಬರೀ ಪ್ರೀತಿಸುತ್ತೀನಿ, ನಾನು ಪ್ರೀತಿಲಿದ್ದೀನಿ ಅಂತ ಬರೀ ಬಾಯಿ ಮಾತಿನಲ್ಲಿ ಹೇಳಿಕೊಂಡರೆ ಆಗದು ಅಲ್ಲವ?..ಪ್ರೀತಿಸಿದ ಮೇಲೆ ನಾವು ಪ್ರೀತಿಸುವ ವ್ಯಕ್ತಿಯ ಗುಣಗಳನ್ನು ತಿಳಿದುಕೊಳ್ಳೋದು ಅಷ್ಟೇ ಮುಕ್ಯ ಆಗುತ್ತೆ. ಆಕೆ ಅವನ ಬಿಟ್ಟ ಮೇಲೂ, ಗಂಡನ ಜೊತೆ ಇರುವಾಗಲೂ ಹಳೆ ಪ್ರಿಯತಮನನ್ನೇ ನೆನೆಸಿಕೊಳ್ಳುತ್ತಿದ್ದರೆ, ಕಟ್ಟಿಕೊಂಡ ಗಂಡನಿಗೆ ಮಾನಸಿಕವಾಗಿ ಮೋಸ ಮಾಡಿದಂತೆ ಆಗಲಿಲ್ಲವೆ? ಹಾಗೇ, ನಾವು ಆಕರ್ಷಣೆಗೆ ಒಳಗಾಗಿದಿವಿ ಅಂದ ಮಾತ್ರಕ್ಕೆ ಯಾವುದೇ ಒಂದು ಚೌಕಟ್ಟು ಅಥವ ಭದ್ರತೆ ಇರದವರನ್ನೇ ಮದುವೆಯೂ ಆಗಬೇಕೆಂದು ತೀರ್ಮಾನಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳೂ ಮನಸ್ಸಿನಲ್ಲಿ ಬಂದವು. ಕಥೆ ವಾಸ್ತವಕ್ಕೆ ಹತ್ತಿರ ಇದೆ ಅನ್ನಿಸುತ್ತೆ. ಬರಿತಾ ಇರು.
ಲೋಕೇಶ್ ....
ನಿಮ್ಮ ಪ್ರೀತಿಪೂರ್ವಕ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು..
ಈ ವಿಷಯ ಬರೆಯುವಾಗ ನನಗೆ ಅಳುಕು ಇದ್ದಿದಂತೂ ನಿಜ..
ಹಾಗಾಗಿ ನಾಲ್ಕೈದು ಮಿತ್ರರಿಗೆ ಕಳುಹಿಸಿದೆ..
ಬದ್ಧತೆಯಿಲ್ಲದ ಗಂಡಿನೊಡನೆಯ ಪ್ರೀತಿಸುವ ಹೆಣ್ಣುಮಕ್ಕಳು ನಮ್ಮಲ್ಲಿ ಬಹಳಷ್ಟಿದ್ದಾರೆ..
ದಾಂಪತ್ಯ ಬದುಕು ಕೂಡ ಭದ್ರವಾಗಿರಲಿ..
ಮದುವೆಯಾಗುವ ಗಂಡು ಮಗಳನ್ನು ಆರ್ಥಿಕವಾಗಿ.. ಎಲ್ಲದೃಷ್ಟಿಯಿಂದಲೂ ಚೆನ್ನಾಗಿ ನೋಡಿಕೊಳ್ಳಲಿ ಎಂದು ಅಪ್ಪ ಬಯಸುವದು ತಪ್ಪಲ್ಲವಲ್ಲ..
ಇದರ ತಾತ್ಪರ್ಯವಿಷ್ಟೆ..
ಪ್ರೀತಿಯನ್ನೂ ಕೂಡ"ವಿಚಾರ" ಮಾಡಿ ಮಾಡಬೇಕು ಅಂತಾಯಿತು ಅಲ್ಲವೆ?
ಹ್ಹಾ..ಹ್ಹಾ.. !!
ಪ್ರೀತಿ ಹೃದಯದಲ್ಲಿ ಹುಟ್ಟುವದು..
ಪ್ರೀತಿ ಕುರುಡು.. ಎನ್ನುವದೆಲ್ಲ ಏನು ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು.. ಬರುತ್ತಾ ಇರಿ...
ಆರ್.ಕೆಯವರೆ..
ನನಗೂ ಎಷ್ಟೋ ಬಾರಿ ಹಾಗೆ ಅನ್ನಿಸಿದೆ..
ಮೊದಲೂ ಮುಕ್ತ ಕಾಮವಿತ್ತಲ್ಲವೆ?
ನಮ್ಮ ದೇವಾಲಯಗಳ ಶಿಲ್ಪ ಕಲೆಯನ್ನು ಗಾಅಮನಿಸಿದರೆ ಇದು ವೇದ್ಯವಾಗುತ್ತದೆ...
ಕೋಣಾರ್ಕದ ದೇವಾಲಯದಲ್ಲಿ ಶಿಲ್ಪ ಕಲೆಯನ್ನು ನೋಡಲು ನಾಚಿಕೆಯಾಗುವಷ್ಟು ಇದೆ..
ಪೂಜಿಸುವ ದೇವಾಲಯಗಳಲ್ಲಿ ಕಾಮ ಶಿಲ್ಪಗಳು.. !!
"ಇಲ್ಲಿ ಒಳಗೆ ಬರುವ ಮೊದಲು ಕಾಮವನ್ನು ಬಿಟ್ಟು ಬಾ" ಅನ್ನುವ ಸಂದೇಶವಂತೆ...
ಓದಿದ ಜ್ಞಾನಿಗಳಿಗೆ ಇದು ಓಕೆ..
ಜನಸಾಮಾನ್ಯರ ಕಥೆ ಏನು?...
ವಿಷಯಾಂತರವಾದರೂ...
ಕಾಮ ಜಗದ ತುಂಬೆಲ್ಲ ತುಂಬಿದೆ...
ಸಹಿಸಿಕೊಳ್ಳಲೇ ಬೇಕು..ಇದು ಸಹಜವಾಗುತ್ತಿದೆ...
ನೀವು ಬರೆದ ಸಾಲುಗಳು ಇಷ್ಟವಾದವು..
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾ ಇರಿ...
ಕಾವ್ಯಾ ಕಾಷ್ಯಪ್...
ಹೆಚ್ಚಿನ ಬದುಕುಗಳಲ್ಲಿ ನನಸಾಗದ ಕನಸುಗಳಿರುತ್ತವೆ...
ಕೆಲವರಿಗೆ ಅದು ಹೊಸ ಕನಸನ್ನು ಚಿಗುರಿಸುತ್ತಿರುತ್ತವೆ..
ಇನ್ನು ಹಲವರಿಗೆ ಬದುಕು ದುರ್ಧರ ಮಾಡಿರುತ್ತದೆ..
ಹಳೆಯ ಪ್ರೀತಿಯನ್ನು ಜಾತನವಾಗಿಟ್ಟುಕೊಂಡು...
ದಾಂಪತ್ಯ ಬದುಕಿಗೆ ಮೋಸವಾಗದ ಹಾಗೆ ಬದುಕಿದ ಹೆಚ್ಚಿನ ಜನರಿದ್ದಾರೆ..
ಮನದೊಳಗಿನ ಆಸೆ..
ನನಸಾಗದ ಕನಸು ಬಾಳು ಹಾಳುಮಾಡದಿದ್ದರೆ ಸಾಕು..
ವೈಯಕ್ತಿಕವಾಗಿ ಅದು ನನಗೆ ಮೋಸ ಎಂದು ಅನ್ನಿಸುತ್ತಿಲ್ಲ..
ಮಕ್ಕಳ ಬದುಕಿನ ಬಗೆಗೆ ತಂದೆತಾಯಿಯರ ಕನಸು ಬೆಟ್ಟದಷ್ಟಿರುತ್ತದೆ..
ಜೀವನ ಸಂಗಾತಿಯನ್ನು ಅಳೆದು ತೂಗಿ ನೋದ ಬಲ್ಲರು..
ಬದುಕನ್ನು ಅನುಭವಿಸಿದ ಹಿರಿಯರ ಜ್ಞಾನದ ಲಾಭ ತುಂಬಾ ಸೊಗಸು.....
ಕಥೆಯನ್ನು ಇಷ್ಟಪಟ್ಟು..
ಪ್ರೀತಿಯಿಂದ ಹಾಕಿದ ಪ್ರತಿಕ್ರಿಯೆಗೆ ಹೃದಯ ಪೂರ್ವಕ ಧನ್ಯವಾದಗಳು...
ಬರುತ್ತಾ ಇರಿ..
ಪ್ರೀತಿಯಿಂದ
ಪ್ರಕಾಶಣ್ಣ...
ಪ್ರೀತಿಯ ಸುನಾಥ ಸರ್....
ಭೈರಪ್ಪನವರ "ಮಂದ್ರ" ಕಾದಂಬರಿ ನೆನಪಾಯಿತು...
ಅದರಲ್ಲೊಬ್ಬ ಸಂಗೀತಕಾರನ ಕಾಮಲಂಪಟ ಚೆನ್ನಾಗಿ ಚಿತ್ರಿತವಾಗಿದೆ..
ಚಾರಿತ್ರ್ಯವನ್ನು ಶುದ್ಧವಾಗಿಟ್ಟುಕೊಂಡು ಕಲಾರಾಧನೆಯನ್ನು ಮಾಡಿದವರು ಕಡಿಮೆ..
ಕುಡಿತ.., ಹೆಣ್ಣು, ತಂಬಾಕು...
ಏನಾದರೊಂದು ಚಟ ಇಟ್ಟುಕೊಂಡು ಬದುಕುತ್ತಾರೆ..
ಕಲೆಗೂ.. ಚಟಕ್ಕೂ ಯಾಕೆ ಇಷ್ಟು ಹತ್ತಿರದ ಸಂಬಂಧ....?
(ಚಟವಿಲ್ಲದೆ ಕಲಾರಾಧಾನೆ ಮಾಡಿದವರೂ ಇದ್ದಾರೆ)
ಪ್ರೀತಿಪೂರ್ವಕ ಪ್ರೋತ್ಸಾಹಕ್ಕೆ ವಂದನೆಗಳು...
ಅಶ್ವಿನಿಯವರೆ...
ಹೆಣ್ಣಿಗಾಗಿ ಪ್ರಾಣಕೊಟ್ಟ ಇತಿಹಾಸ..
ಈಗಲೂ ಅಂಥಹ ಹೆಚ್ಚಿನ ಗಂಡಸರು ಸಿಗುತ್ತಾರೆ..
ನಟ ದರ್ಶನ್ ಅವರ ಪತ್ನಿಯಂಥವರೂ ಇದ್ದಾರೆ..
ಗಂಡನ ತಪ್ಪನ್ನು ಕ್ಷಮಿಸಿ ದೊಡ್ಡ ತನವನ್ನು ಮೆರೆದವರು..
ಚಿತ್ರಕಾರ ಮೊದಲಿನಿಂದಲೂ ಹುಡುಗಿಯನ್ನು ಕಾಮ ದೃಷ್ಟಿಯಿಂದಲೇ ನೋಡಿದ್ದಾನೆ..
ಜಗತ್ತು ಹೀಗಿದೆ..
ನಾನು ಹಾಗಿಲ್ಲ ಅನ್ನುತ್ತ.. ಅವಳನ್ನು ಉಪಯೋಗಿಸಿಕೊಂಡಿದ್ದಾನೆ...
ಒಮ್ಮೆ ಹದಿಹರೆಯದ ಹುಚ್ಚು ಕನ್ನಡಕ ಹಾಕಿಕೊಂಡು ಹುಡುಗನನ್ನು ನೋಡಿದ ಹುಡುಗಿ ಅದೇ ಗುಂಗಿನಲ್ಲಿರುತ್ತಾಳೆ..
ಹುಡುಗ ತನ್ನಿಂದಾಗಿ ಇನ್ನೊಂದು ಮದುವೆಯಾಗಿಲ್ಲ..
ಮತ್ತಷ್ಟು ಬೇಸರ ಪಡುತ್ತಾಳೆ..
ತನ್ನನ್ನು ನೋಡಿದ ಹಾಗೆ ಮಗಳನ್ನೂ ಚಿತ್ರಕಾರ ನೋಡಬೇಕು ಎಂದಾಗ ಚಶ್ಮ ಕೆಳಕ್ಕೆ ಬಿದ್ದಿರುತ್ತದೆ..
ನಿಜ ...
ಬಯಲಾದದ್ದು ಹುಡುಗಿಯ ಆಂತರ್ಯದ ಬಣ್ಣ..
ನನ್ನ ಕಥೆಯನ್ನು ಬೇರೊಂದು ಆಯಾಮದಿಂದ ನೋಡಿದ ನಿಮಗೆಲ್ಲ ತುಂಬು ಹೃದಯದ ಧನ್ಯವಾದಗಳು...
ಇಷ್ಟೊಂದು ವಿಸ್ತೃತವಾದ ಸಂವಾದಗಳು ತುಂಬಾ ಖುಷಿಕೊಡುತ್ತದೆ...
ಇನ್ನೊಂದು ಆಶ್ಚರ್ಯದ ಮತ್ತು ಸಂತೋಷದ ಸಂಗತಿ ಎಂದರೆ..
ಹೆಣ್ಣುಮಕ್ಕಳೇ ಹುಡುಗಿಯ ಪಾತ್ರವನ್ನು ಈ ರೀತಿಯಾಗಿ ವಿಮರ್ಶೆ ಮಾಡಿರುವದು...!!
ತಲೆಗೆ ಕೆಲಸಕೊಡುವಂಥಹ ಪ್ರತಿಕ್ರಿಯೆಗಾಗಿ...
ಕಥೆಯನ್ನು ಇಷ್ಟಪಟ್ಟಿದ್ದಾಗಿ ತುಂಬಾ ತುಂಬಾ ಧನ್ಯವದಾಗಳು...
ಬರುತ್ತಾ ಇರಿ..
ಸಿಂಧೂ...
ನನ್ನ ಕಾಲೇಜಿನ ದಿನಗಳ ಆ ಹುಡುಗಿ ನನಗೆ ಎಂದೂ "ಪ್ರಕಾಶಣ್ಣ" ಅಂತ ಕರೆದಿಲ್ಲ..
ಕರೆಯುವದೂ ಇಲ್ಲ..
ಆ ಘಟನೆಯನ್ನು ನನ್ನ ಮೊದಲ ಪುಸ್ತಕ "ಹೆಸರೇ.. ಬೇದ... !!" ದಲ್ಲಿ ಬರೆದಿರುವೆ...
ದಯವಿಟ್ಟು ಓದಿ..
ನನಗೆ ಕಾಲೇಜಿನ ಎಲ್ಲ ಹೆಣ್ಣು ಮಕ್ಕಳು "ಪ್ರಕಾಶಣ್ಣ" ಅಂತ ಕರೆಯುತ್ತಿರುವಾಗ ನನ್ನ ಗೆಳೆಯ ನಾಗು ಕೊಟ್ಟ ಸಲಹೆ ಏನು ಗೊತ್ತಾ?
" ನಿನ್ನ ಹೆಸರನ್ನೇ.. ಪ್ರಕಾಶಣ್ಣ. ಅಂತ ಮಾಡಿಕೊ !!.."
ಆಗ ಸಮಸ್ಯೆಯೇ ಇರುವದಿಲ್ಲ..
ಇನ್ನೊಂದು ವಿಷಯ..
ನಮ್ಮೂರಿನಲ್ಲಿ ಒಂದು ಅಜ್ಜ, ಅಜ್ಜಿ ಇದ್ದರು...
ಅಜ್ಜನ ಹೆಸರು "ಅಣ್ಣಣ್ಣ.."
ಅಜ್ಜಿಯ ಹೆಸರು "ಅಕ್ಕಕ್ಕ"..
ಇವರಿಬ್ಬರೂ ಏಕಾಂತದಲ್ಲಿ ಏನಂತ ಕರೆಯುತ್ತಿರ ಬಹುದು...?
ಇದು ನನ್ನ ನಾಗುವಿನ ಪ್ರಶ್ನೆ... !!
ಹಾಗಾಗಿ ಅಂದಿನ ದಿನಗಳಲ್ಲಿ "ಪ್ರಕಾಶಣ್ಣ" ಅಂತ ಕರೆದರೆ ಬೇಸರ ಆಗುತ್ತಿರಲಿಲ್ಲ.. !
ಈಗ ನಾನೇ ಸ್ವತಃ "ಪ್ರಕಾಶಣ್ಣ" ಅಂತ ಕರೆಯಿರಿ ಅಂತ ವಿನಂತಿಸುತ್ತೇನೆ..
ಯಾಕೋ ಖುಶಿಯಾಗುತ್ತದೆ ಹಾಗನ್ನಿಸಿಕೊಳ್ಳಲು....
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಅದಕ್ಕೆ ಹಿರಿಯರು ಹೇಳಿದ್ದು "ಕಾಮಾತುರಾಣಾಂ ನ ಭಯಂ ನ ಲಜ್ಜಾ"
ಉತ್ತಮವಾದ ಲೇಖನ...... ಧನ್ಯವಾದಗಳು....
ಹೆಗಡೇಜಿ ಕಥೆ ಸೊಗಸಾಗಿದೆ. ನಿಮ್ಮ ಶೈಲಿ ನಿರಮ್ಮಳ. ಇನ್ನುಕಥಾವಸ್ತು ಸಹ ಹೊಸದು
ಹಾಗೂ ಉತ್ತೇಜನಕಾರಿ ಬೆಳವಣಿಗೆ ಕೂಡ. ಇನ್ನು ನಾಯಕಿ ಅವಳ ಮನೋಕಾಮನೆಗಳು..
ತಾನು ಮಾಡುವಾಗ ಸರಿ..ಮಗಳೂ ಅದೇ ದಾರಿ ತುಳಿಯುತ್ತಾಳೆ ಎಂಬ ಹೆದರಿಕೆ ಅವಳದನ್ನು ವಿರೋಧಿಸುವುದು
ಎಷ್ಟು ಸರಿ ಇದು ಚರ್ಚಾಸ್ಪದ ಈಗಾಗಲೇ ಅನೇಕ ಸಹವರ್ತಿಗಳು ನನ್ನ ಅಭಿಮತವೇ ಹೇಳಿದ್ದಾರೆ ಕೂಡ.
nija baNNa.....
jIvamaana bekagatte nija baNNa tiLiyalu alvaa prakaashaNNa..
chennaagi heNediddiri katheyanna..
ಪ್ರಕಾಶಣ್ಣ,
ಮೊದಲು ನೀನು ನನಗೆ ಕಳಿಸಿದ್ದು ಅರ್ಧ ಕಥೆ ಮಾತ್ರವೇ. ಅದನ್ನು ಓದಿದಾಗ , ಕಥಾವಸ್ತು ವಿನಲ್ಲಿ ಏಕತಾನತೆ ಬರುತ್ತಿದೆ ಎನಿಸಿತು ನನಗೆ. ಅದನ್ನೇ ಹೇಳಿದೆ ಕೂಡ.
ಈಗ , ಪೂರ್ತಿ ಕಥೆ ಓದಿದಾಗಲೂ ನನ್ನ ಅಭಿಪ್ರಾಯದಲ್ಲಿ ಹೆಚ್ಚು ಬದಲಾವಣೆಯಿಲ್ಲ ! ಕಥೆಯ ಉತ್ತರಾರ್ಧಕ್ಕೆ ಬರುವಷ್ಟರಲ್ಲಿ ಮುಂದೇನಾಗಬಹುದು ಎನ್ನುವುದನ್ನು ಊಹಿಸಿದ್ದೆ !
ಕೆಲವು ಪ್ರಶ್ನೆಗಳು !
ಚಿತ್ರಕಾರ ಆಕೆಯ ಮೇಲಿನ ಪ್ರೀತಿಯನ್ನು ಇಷ್ಟು ವರ್ಷಗಳೂ ಕಾಪಾಡಿಕೊಂಡಿದ್ದಾನ? ಅದಕ್ಕಾಗಿಯೇ ಆತ ಮದುವೆಆಗಲಿಲ್ಲವೇ? ಅಕಸ್ಮಾತ್ ಹಾಗೇ ಎಂದು ಕೊಂಡರೆ ಬಹುಶ ಅವನ ಮನಸ್ಸಿನಲ್ಲಿ ಆ ಪುಟ್ಟ ಹುಡುಗಿಯ ಬಗ್ಗೆ ಕೆಟ್ಟ ಭಾವನೆ ಇರಲಿಕ್ಕಿಲ್ಲ !
ಕಥಾನಾಯಕಿ ಮದುವೆಯಾದಮೇಲೂ ತನ್ನ ಪ್ರೀತಿಯನ್ನು ಮರೆಯಲಾಗದೆ ಒಳಗೊಳಗೇ ಬೇಯುವುದು ಅಪರಾಧೀ ಪ್ರಜ್ಞೆಯಿಂದ ಬಳಲುವುದು ಕನಿಕರ ತರುತ್ತದೆ. ಆಕೆ ಅವನನ್ನು ಒಮ್ಮೆ ಒಬ್ಬಳೇ ಭೇಟಿಯಾಗುವ ಉದ್ದೇಶ ಏನು ಎನ್ನುವುದು ಅಸ್ಪಷ್ಟವಾಗಿದೆ ! ಅದೇನೇ ಇದ್ದರೂ ಮಗಳು ಗುರುವಿನ ಕೋರಿಕೆಯ ಬಗ್ಗೆ ಹೇಳಿದಾಗ ಆತನ ಉದ್ದೆಶವೇನೆ ಇದ್ದರೂ ತಾಯಿಯಾಗಿ ಆಕೆ ಕೆರಳುವುದು ಸಹಜವೇ ಆಗಿದೆ . , ತನಗಾದ ಯಾವುದೇ ಕೆಟ್ಟ ಅನುಭವ , ನೋವುಗಳು ಮಕ್ಕಳಿಗೆ ಆಗಬಾರದು ಎನ್ನುವುದು ಎಲ್ಲಾ ಅಪ್ಪ-ಅಮ್ಮಂದಿರ ಕಾಳಜಿ ಅಲ್ಲವೇ?
ಕಥೆ ನಿನ್ನ ಎಂದಿನ ಶೈಲಿಯಿಂದ ಮನಸೆಳೆದರೂ , ಮುಂದಿನ ಕಥೆಗಳ ವಸ್ತು ಬೇರೆಯಾದರೆ ಖುಷಿ !!!
ಬಾಲೂ ಸರ್...
ಹೆಣ್ಣುಗಂಡಿನ ನಡುವಿನ ಸಂಬಂಧಗಳ ಬಗೆಗೆ ಬರೆದಿದ್ದೇನಾದರೂ..
ಪ್ರತಿ ಸಂದರ್ಭ..
ವಿಷಯ, ತಾತ್ವಿಕ ವಿಶ್ಲೇಷಣೆ..
ಸಂದರ್ಭಕ್ಕೆ ಅನುಸಾರವಾಗಿ ಎಲ್ಲವೂ ವಿಭಿನ್ನವಾಗಿದೆ...
ಎಲ್ಲಿಯೂ ಸಾಮ್ಯತೆ ಇಲ್ಲ..
ಹದಿಹರೆಯದಲ್ಲಾದ ಆಕರ್ಷಣೆಯನ್ನೇ ಪ್ರೀತಿಯೆಂದು ತಿಳಿದು ಮೋಸ ಹೋಗುವದರ ಬಗೆಗೆ ಈ ಕಥೆ...
ಆ ಹದಿಹರೆಯದಲ್ಲಿ ಒಂದಷ್ಟು ಆಕರ್ಷಣೆಗಳು ಸಹಜ...
ಆದರೇ ಅದೇ ನಿಜವಾದ ಪ್ರೀತಿ ಆಗಬೇಕೆಂದೇನೂ ಇಲ್ಲ..
ಆ ಚಿತ್ರಕಾರ ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆಯೇ.. ಇಲ್ಲವೇ ಎನ್ನುವದು ಮಹತ್ವದಲ್ಲ..
ತನ್ನ ಮಗಳ ಸಲುವಾಗಿ ಇವಳ ಕಾಳಜಿಯಿಂದಾಗಿ.....
ಆ ಚಿತ್ರಕಾರನ ಮೇಲೆ ಸಂಶಯ ಬಂದಿರಲೂ ಸಾಕು..
ಯಾಕೆಂದರೇ "ಪ್ರೇಮಕ್ಕೂ, ಸಂಶಯಕ್ಕೂ ಅವಿಭಾಜ್ಯ ನಂಟು.." !!
ಎಷ್ಟೇ ಆಳವಾದ ಪ್ರೀತಿಯಿರಲಿ ಸಂಶಯ ಇಣುಕ್ಕುತ್ತದೆ..
ಅದು ಸಹಜ..
ನಿಮ್ಮ ಪ್ರೀತಿ..
ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...
ಪ್ರಕಾಶೂ ಕಥೆ ಹೇಳುವ ಶೈಲಿಯಲ್ಲಿ ನಿನ್ನದೇ ಛಾಪು ಎಲ್ಲೆಲ್ಲೂ...ಕಥೆ ಕುತೂಹಲ, ಆಸೆಗಳ ಸಹಜತೆಯಲ್ಲಿ ಮೂಡಿದೆ. ನನದೂ ಅದೇ ಡೌಟ್,,,ಇಷ್ಟು ದಿನ ಮದುವೆಯಾಗದೇ ಇದ್ದನಾ? ಅದು ಅವಳ ಕಾರಣ ಆಗಿದ್ರೆ ನಾಯಕಿ ಮಗಳ ಮಾತಿಗೆ ನಾಯಕಿ ಆತಂಕ ಪಟ್ಟಿದ್ದು ಸಹಜವೇ ಯಾಕಂದ್ರೆ ಅವನು ಅದೇ ಹಾದಿಲಿ ಮುಂದುವರೆದಿರಬಹುದು...ವಿಕೃತತೆಯ ಹಾದಿ?? ಆಕರ್ಷಣೆಯನ್ನು ಮೂಡಿಸುವ ಹಾದಿ, ವಶೀಕರಣ... ನಾಯಕಿ ಬೆಳೆದ ಮಗಳಿದ್ದರೂ ಅವನನ್ನು ನೋಡಬೇಕೆನಿಸಿದ್ದು, ಆ ದಿನ ಮತ್ತೆ ಕಂಡಾಗ ಅವಳ ಮನಸು ಯೋಚಿಸಿದ ರೀತಿ ಅವನಲ್ಲಿದ್ದ ವಶೀಕರಣ ಗುಣಕ್ಕೆ ಸಾಕ್ಷಿ ಹಾಗಾಗಿ ಸಹಜವಾಗಿ ಮಗಳು ಆಕರ್ಷಣೆಗೆ ಒಳಗಾಗದಿರಲಿ ಎನ್ನೋ ಭಾವ ಮತ್ತು ದಿಗಿಲು ಸಹಜ...
ಮನಸಿನ ಭಾವನೆಗಳ ಅನಾವರಣ ಇಷ್ಟ ಆಯ್ತು...
ಜೈ ಹೋ..ಒಟ್ಟಾರೆ ಕಥೆ ಇಷ್ಟ ಆಯ್ತು...
ಚೆಂದದ ಕಲ್ಪನೆ ವಾಸ್ತವ ಕೆ ಅಂದವಾಗಿ ಮೂಡಿ ಬಂದಿದೆ
ಬಣ್ಣ ದಾ ಕನಸುಗಳಿಗೆ ಹಾಳೆಯಾದ ನಿಮ್ಮ ಮನಸಿನ ಪುಟಗಳೇ ಧನ್ಯ
ತುಂಬ ಒಳ್ಳೆ ಒಳ್ಳೆ ಪ್ರತಿಕ್ರಿಯೇಗಳಿವೆ ಓದೋಕೆ ಮಜವಾಗಿದೆ
ಒಳ್ಳೆ ಲೇಖನ ಗೆಳೆಯ ಮುಜುಗರ ಇಲ್ಲದ ಹಾಲು ಮನಸು ಮುಚ್ಚುಮರೆ ಇಲ್ಲದೆ ಬಿಚ್ಚಿಟ್ಟ ಭಾವನೆಗಳು ತಾಜಾ ತಾಜಾ ಕಾಣಿಸ್ತವೆ :)
ಸಿಕ್ಕಾಪಟ್ಟೆ ಇಷ್ಟ ಪಟ್ಟೇ
ಪ್ರಕಾಶಣ್ಣ, ಯಾಕೋ ಸ್ವಲ್ಪ ಹೆಚ್ಚಿನ ಶ್ರಮತೆಗೆದುಕೊಂಡು ಮಿಸುಕಾಡುತ್ತಾ ಬರೆದ ಹಾಗೇ ಅನಿಸಿತು ಈ ಕಥೆ. ನಿಮ್ಮ ಎಂದಿನ ಸಹಜ ಫ್ಲೋ ಇಲ್ಲಿ ಕಾಣಲಿಲ್ಲ! ಅದಕ್ಕೇ ಸೂಚ್ಯವಾಗಿ ಬಾಣ ಗುರಿತಲುಪುವಂತಿದೆ ಎಂದು ಸುನಾಥರು ಹೇಳಿದ್ದಾರೆಂದು ಭಾವಿಸುತ್ತೇನೆ. ಇನ್ನೂ ಸುಂದರ ಬರಹಗಳ ನಿರೀಕ್ಷೆಯಲ್ಲಿರುತ್ತೇನೆ, ಧನ್ಯವಾದಗಳು.
kathe chennagide prakash avare... ishta aayitu
ಪ್ರಕಾಶರೆ,
ಬಹಳ ದಿನಗಳಿಂದಲೂ ತಮ್ಮ ಬ್ಲಾಗ್ ಗೆ ಭೇಟಿ ನೀಡಲಾಗಿಲ್ಲ. ಇಂದು ಇಲ್ಲಿ ನಿಮ್ಮ ಕಥೆ ಓದಿ ಖುಷಿಯಾಯಿತು. ಸತ್ಯದರ್ಶನದ ಕಥೆ. ನಮ್ಮ ವಿಚಾರಗಳು ನಮ್ಮಲ್ಲಿಯೇ ವಿರೋಧಾಭಾಸ ತಾಳುವ ಈ ಪರಿ ಚಿತ್ರಣದ ಕಥೆ ನಿಜಕ್ಕೂ ಒಂದು ಅದ್ಭುತ !!
ಇಲ್ಲಿ ಬಣ್ಣ ಬ್ನಯಲಾದದ್ದು ಚಿತ್ರಕಾರನದ್ದಲ್ಲ.... ಕಥಾನಾಯಕಿಯದು....
ನನ್ನ ಅಲಂಕಾರ ಮಾಡಿ ನೋಟದಲ್ಲಿ ತಿನ್ನುವ ಚಿತ್ರಕಾರ ನನಗೆ ಇಷ್ಟ್ಟ...
ಅದೇ ಚಿತ್ರಕಾರ ನನ್ನ ಮಗಳನ್ನೂ ಹಾಗೆ ನೋಡುವದು ನನಗೆ ಕಷ್ಟ ಅನ್ನುವ ನಾಯಕಿಯ ಧೋರಣೆ... ವಿರೋಧಾಭಾಸವೇ...
ತಾನು ಅವನಿಂದ ಸುಖ ಪಟ್ಟು ಬೇರೆಯಾವನನ್ನು ಮದುವೆಯಾದರೂ ಅವನ ಆಕರ್ಷತೆಯಿಂದ ವಿಮುಖಳಾಗಿಲ್ಲ...
ಅವನು ಅವಳನ್ನು ಮರೆತು ಅವಳ ಮಗಳೊಡನೆ ಜೀವನದಲ್ಲಿ ಮುಂದುವರೆಯುವ ಭಾವ ತಪ್ಪೇ?
ಅವನು ಹೆನ್ನುಗಳನ್ನೆಲ್ಲಾ ಭೋಗದ ವಸ್ತುವನ್ನಾಗಿಸಿದನೆ?
ಹೆಣ್ಣು ಭೋಗಕ್ಕೆ ಇಚ್ಚುಕಳಿಲ್ಲವೇ?
ಹೀಗೆ ಹತ್ತು ಹಲವು ಯೋಚನೆಗಳೆಲ್ಲಾ ತಲೆಯಲ್ಲಿ ಹುಟ್ಟಿ ಚಿಟ್ಟು ಹಿಡಿದು.. ಕಡೆಗೆ “ಬಂದತೆ ಸ್ವೀಕರಿಸು ಬದುಕ” ಎಂದು ತಲೆ ಕೊಡವಿ ಎದ್ದಿದ್ದೇನೆ.. ಕಥೆ ಓದಿದ ನಂತರ..
nanage kate tumba andare tumbane istavayitu..
Post a Comment