ಕೆಲವು ಸಂದರ್ಭಗಳಲ್ಲಿ..
ನಮ್ಮ ನಡತೆಗಳಿಗೆ ...ನಮ್ಮ ಬಳಿಯೇ ಉತ್ತರವಿರುವದಿಲ್ಲ....
ನಮ್ಮ ಮನಸ್ಸಿಗೆ ಇಷ್ಟವಿಲ್ಲದಿದ್ದರೂ..
ಕೆಲವೊಂದು ಕಠಿಣ ನಿರ್ಧಾರಕ್ಕೆ ಬಂದುಬಿಡುತ್ತೇವೆ...
ಇದೆಲ್ಲ ಯಾಕೆ ಅಂತೀರಾ?
ನಾನು ನನ್ನ ಹುಟ್ಟಿದ ಊರಿಗೆ ಹೋಗದೇ ಬಹಳ ವರ್ಷಗಳೇ ಆದವು..
ಅಲ್ಲಿ ಅಪ್ಪ, ಅಮ್ಮ ಇರದಿದ್ದರೂ...
ಒಬ್ಬ ಒಡಹುಟ್ಟಿದ ತಮ್ಮನಿದ್ದ..
ಮೊನ್ನೆ ನನ್ನ ತಮ್ಮ ಆಸ್ಪತ್ರೆಯಲ್ಲಿ ತೀರಿಕೊಂಡನಂತೆ...
ತಮ್ಮನ ಹೆಂಡತಿಯ ಅಣ್ಣನ ಫೋನ್ ಬಂದಿತ್ತು...
" ನಿಮ್ಮ ತಮ್ಮ ತೀರಿಕೊಂಡಿದ್ದಾರೆ...
ವಾಸಿಯಾಗದ ಖಾಯಿಲೆಯಿಂದ..
ನಿಮ್ಮ ಬಳಿ ಮಾತನಾಡಬೇಕೆಂದು ಪ್ರಯತ್ನಿಸಿದರೂ..
ನೀವು ಮಾತನಾಡಲೇ ಇಲ್ಲ.."
ಅವರ ಧ್ವನಿಯಲ್ಲಿ ಆಕ್ಷೇಪಣೆಯಿತ್ತು .. ..
ನಾನು ಸುಮ್ಮನಿದ್ದೆ...
ನನಗೆ ಅವರ ಬಳಿ ಮಾತಿನ ಅವಶ್ಯಕತೆಯೂ ಇರಲಿಲ್ಲ...
"ನೋಡಿ ..
ಬದುಕಿದ್ದಾಗ ದ್ವೇಷ... ಹಗೆತನ...
ಈಗ ನಿಮ್ಮಿಬ್ಬರ ಜಮೀನು ಮಾರಾಟಮಾಡುವಂಥಹ ಸ್ಥಿತಿ ಇದೆ...
ಸಿಕ್ಕಾಪಟ್ಟೆ ಸಾಲವಿದೆ.."
ಓಹೋ...!
ಇದಕ್ಕೆ ಇಷ್ಟೆಲ್ಲ ಪೀಠಿಕೆ..!
ನನಗೆ ಕೋಪ ಬಂತು...
"ಮಾರಾಟ ಮಾಡಿಕೊಳ್ಳಿ..
ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ..
ನನ್ನದೂ.. ಅಂತ ಅಲ್ಲಿ ಯಾವದೂ... ಇಲ್ಲ...
ಯಾರೂ.... ಇಲ್ಲ.."
"ನೋಡಿ...
ನಿಮಗೆ ಬೇಡದಿದ್ದರೂ..
ಕಾಗದ ಪತ್ರಗಳಿಗೆ ಸಹಿ ಹಾಕಲು ನೀವೊಮ್ಮೆ ಬರಬೇಕಾಗುತ್ತದೆ..
ನಿಮ್ಮ ಸಹಿ ಇಲ್ಲದಿದ್ದರೆ ಯಾರೂ ಖರಿದಿಗೆ ಬರುತ್ತಿಲ್ಲ..
ದಯವಿಟ್ಟು ಇಲ್ಲವೆನ್ನಬೇಡಿ...
ನನ್ನ ತಂಗಿ.. ಮಕ್ಕಳ ಬಾಳಿನ ಪ್ರಶ್ನೆ...
ದಯವಿಟ್ಟು ಬನ್ನಿ.."
ಬಹಳ ಗೋಗರೆದರು...
ನಾನು ನನ್ನ ಮಡದಿಯ ಸಂಗಡ ಚರ್ಚಿಸಿದೆ...
"ಹೋಗಿ ಬನ್ನಿ...
ಸುಮ್ಮನೇ.. ಸಹಿ ಹಾಕಬೇಡಿ...
ಮನೆ ಸಾಲ ಇನ್ನು ತೀರಿಸಿಲ್ಲ...
ಮಕ್ಕಳು ದೊಡ್ದವರಾಗ್ತಾ ಇದ್ದಾರೆ...
ಅವರ ಓದಿಗೂ.. ಖರ್ಚುಗಳಿವೆ...
ಅಲ್ಲಿಂದ ಏನಾದರೂ "ನಮ್ಮ ಪಾಲನ್ನು" ಕಿತ್ತುಕೊಂಡು ಬನ್ನಿ..
ನಮ್ಮ ಕಷ್ಟದ ದಿನಗಳು ನಿಮಗೆ ನೆನಪಿದೆಯಲ್ಲವೆ...?"
ನಿಜ...
ನನಗೆ ಆ ದಿನಗಳು ಬೇಡವೆಂದರೂ ನೆನಪಾದವು....
ಆಗ ನಾನು ನನ್ನ ಸ್ನೇಹಿತನ ಸಾಲದ ಪತ್ರಕ್ಕೆ ಸಹಿ ಹಾಕಿ ಬಹಳ ತೊಂದರೆಗೆ ಸಿಲುಕಿದ್ದೆ...
ಸ್ನೇಹಿತ ನಾಪತ್ತೆಯಾಗಿ...
ಅವನ ಸಾಲವನ್ನೆಲ್ಲ ನಾನು ತೀರಿಸುವಂಥಹ ಅನಿವಾರ್ಯ ಸ್ಥಿತಿ ಬಂದಿದ್ದೆ...
ದಿನಾ ಬೆಳಗಾದರೆ.. ಸಾಲಗಾರರ...
ರೌಡಿಗಳ ಕಾಟ..!
ನಾನು ಮಾಡದ ತಪ್ಪಿಗೆ ಮರ್ಯಾದೆ ಹೋಗುತ್ತಿದೆ...!
ಆತ್ಮ ಹತ್ಯೆ ಮಾಡಿಕೊಳ್ಳುವಂಥಹ ಹೀನ ಸ್ಥಿತಿ... !!
ಆಗ ನೆನಪಾದದ್ದು ನನ್ನ ತಮ್ಮ...!
ಆಪತ್ತಿನಲ್ಲಿ ನೆನಪಾಗುವವರು ನಮ್ಮವರು ತಾನೆ?
"ಅಣ್ಣಾ...
ಇಲ್ಲಿ ಜಮೀನನಲ್ಲಿ ಏನೂ ಬೆಳೆ ಆಗುತ್ತಿಲ್ಲ..
ಈ ಕೂಲಿ ರೇಟು...
ಬೆಳೆಗೆ ಬೆಲೆ ಇಲ್ಲ...
ಈ ವರ್ಷ ಊಟ ಮಾಡಿಕೊಂಡು ಹೋಗುವದೇ.. ಕಷ್ಟವಾಗಿದೆ..."
ಪಕ್ಕದಲ್ಲಿದ್ದ ನನ್ನ ತಮ್ಮನ ಹೆಂಡತಿಯ ಮುಖದಲ್ಲಿನ ನಗು .. ...
ನನಗೆ ಬೇಡವೆಂದರೂ ಕಾಣುತ್ತಿತ್ತು...!
ಅದು ಅಪಹಾಸ್ಯದ ನಗು...! !
ಛೇ....
ಇದೆಂಥಹ... ಅವಮಾನ !!
ಸಾವಿರಾರು ಭರ್ಚಿಗಳಿಂದ ಮೈಯನ್ನು ಚುಚ್ಚಿದ ಅನುಭವ... !
ಮದುವೆಯಾದ ಮೇಲೆ ಈ... ರಕ್ತ ಸಂಬಂಧಗಳು...
ಬಾಂಧವ್ಯಗಳು ...
ಯಾಕೆ ಬದಲಾಗಿ ಬಿಡುತ್ತವೆ...?
ನಾನು ಕಣ್ಣೀರಿಡುತ್ತಿದ್ದರೆ..
ನನ್ನ ತಮ್ಮನ ಹೆಂಡತಿಗೆ ಇದು ಹಾಸ್ಯವಾಗಿ ಕಾಣುತ್ತಿದೆಯಾ?
ನನ್ನ ತಮ್ಮ ಮತ್ತು ಇವಳು ...
ಇಬ್ಬರೂ ಸೇರಿ ಮಾಡಿದ ಉಪಾಯವಲ್ಲವಾ?
ಕಷ್ಟದಲ್ಲಿ ಕಣ್ಣೀರು ಒರೆಸದ ಬಾಂಧವ್ಯ ಯಾಕೆ ಇರಬೇಕು...?
ಅದೇ.. ಕೊನೆ...!
ನಾನು ಮತ್ತೆ ಊರಿಗೆ ಹೋಗಲೇ ಇಲ್ಲ...!
ಅಲ್ಲಿನ ಆಸ್ತಿ... ಹಣ...
ರಕ್ತ ಸಂಬಂಧ ಎಲ್ಲವನ್ನೂ ಬಿಟ್ಟು ಬಂದೆ...!
ಈಗ ಮತ್ತೆ ಊರಿಗೆ ಹೋಗಬೇಕಾಗಿದೆ...
ಊರಿಗೆ ಬಂದಾಗ ಬೆಳಿಗ್ಗೆ ಏಳು ಗಂಟೆ...
ನಾನು ಹೊಟೆಲ್ಲಿನಲ್ಲಿ ನಾಷ್ಟ ಮಾಡಿಕೊಂಡು ನಮ್ಮೂರ ಗೌಡರ ಮನೆಗೆ ಬಂದೆ...
ಅವರು ನನ್ನ ತಂದೆಯ ಮಿತ್ರರು...
"ನೋಡಪ್ಪಾ...
ನಿನ್ನ ತಮ್ಮನ ಸಂಸಾರ ಬೀದಿಗೆ ಬಂದಿದೆ...
ಜಮೀನು ಪರ ಭಾರೆ ಆಗ್ತ ಇದೆ...
ನಿನ್ನ ತಂದೆಯವರು.. ನಾನೂ ಸ್ನೇಹಿತರು... ಇದೆಲ್ಲ ನೋಡಕ್ಕೆ ಆಗಲ್ಲಪ್ಪ...
ಮನೆಯ ದೊಡ್ಡ ಮಗ...
ನೀನೆ ಏನಾದ್ರೂ ಮಾಡು..."
"ನೋಡಿ... ಗೌಡ್ರೆ...
ಮುರಿದ ಮನಸ್ಸನ್ನು ಸೇರಿಸುವದು ಬಲು ಕಷ್ಟ....
ಆಸ್ಪತ್ರೆಗಳಲ್ಲಿ ನಡೆಯೋ ಅಪರೇಷನ್ ತರಹ ಅಲ್ಲವಲ್ಲ...
ನನ್ನ ತಮ್ಮ ಇದ್ದಾಗಲೇ...
ಎಲ್ಲ ಸಂಬಂಧವನ್ನೂ ನಾನು ಬಿಟ್ಟು ಬಿಟ್ಟಿದ್ದೇನೆ..
ಈಗ ಬಂದಿದ್ದು ಕಾಗದ ಪತ್ರಗಳಿಗೆ ಸಹಿ ಹಾಕಲು..
ಆ ಕೆಲಸ ಪೂರೈಸಿ ....
ನನಗೆ ವಾಪಸ್ಸು ಇವತ್ತೇ ಹೋಗಬೇಕು..."
"ಆಯ್ತಪ್ಪಾ..."
ಅವರು ಹೆಚ್ಚು ಮಾತನಾಡಲಲಿಲ್ಲ..
ಅವರು ತಮ್ಮನ ಹೆಂಡತಿಯನ್ನು ಕರೆಸಿದರು...
ಅವಳ ಮುಖನೋಡಲೂ ನನಗೆ ಇಷ್ಟವಿರಲಿಲ್ಲ...
ಅವಳೊಂದಿಗೆ ಸಣ್ಣ ಸಣ್ಣ ಮಕ್ಕಳೂ ಬಂದರು....
ಬದುಕು ಎಂಥಹ ಅನೀರೀಕ್ಷಿತ ತಿರುವುಗಳನ್ನು ತಂದಿಡುತ್ತದೆ... !
ತಮ್ಮನ ಹೆಂಡತಿ ತಲೆ ತಗ್ಗಿಸಿಯೇ ನಿಂತಿದ್ದಳು..
"ಭಾವ...
ಅವರ ಖಾಯಿಲೆಗೆ ಬಹಳ ಖರ್ಚಾಯಿತು..
ಅವರು ಬದುಕಿದರೆ ಸಾಕೆಂದು ಬಹಳ ಪ್ರಯತ್ನಿಸಿದೆ..
ಏನೂ ಪ್ರಯೋಜನ ಆಗಲಿಲ್ಲ...
ನಮ್ಮನ್ನೆಲ್ಲ ಬಿಟ್ಟು ಹೋಗಿ ಬಿಟ್ರು..."
ಅವಳಿಗೆ ಮುಂದೆ ಮಾತನಾಡಲಾಗಲಿಲ್ಲ... ದುಃಖ ಉಮ್ಮಳಿಸಿ ಬಂತು...
ನನಗೆ ಆ ಸನ್ನಿವೇಶ ಒಂಥರಾ ಮುಜುಗರವಾದರೂ...
"ನೋಡಮ್ಮ...
ನನಗೆ ಕಾಗದ ಪತ್ರಗಳನ್ನು ತಂದು ಕೊಡು..
ಸಹಿ ಹಾಕಿ ನನಗೆ ಇವತ್ತೇ ವಾಪಸ್ಸು ಹೋಗಬೇಕು.."
ನನ್ನ ಮಾತುಗಳು ನನಗೇ ಆಶ್ಚರ್ಯ ತರಿಸಿದವು...
ಇಷ್ಟು ಕಠಿಣವಾಗಿ ನಾನು ಮಾತನಾಡ ಬಲ್ಲೇನಾ ?
ಅನುಭವಿಸಿದ ಅಂದಿನ ಅಪಹಾಸ್ಯದ ಸಂದರ್ಭ ಬೇಡವೆಂದರೂ ನೆನಪಾಗುತ್ತಿತ್ತು...
ಅಷ್ಟರಲ್ಲಿ ಗೌಡರು ಚಹ ತರಿಸಿದರು..
ನಾನು ಚಹ ಕುಡಿಯುತ್ತಿದ್ದೆ...
ಕಾಲಿಗೆ ಏನೋ ತಡಕಿದಂತಾಯಿತು...
ಅದು ಒಂದು ಪುಟ್ಟ ಮಗು... !
" ದೊಡ್ಡಪ್ಪಾ...!
ಬೆಂಗಳೂರು ದೊಡ್ಡಪ್ಪಾ...
ನಾನು...!..
ನಾನು.. !.."
ಕೆದರಿದ ...
ಎಣ್ಣೆಯಿಲ್ಲದೆ ಜಿಡ್ಡುಗಟ್ಟಿದ ಕೂದಲು..!
ಅತ್ತೂ... ಅತ್ತು ಬಾಡಿದ.. ದೈನ್ಯ ಮುಖ..!
ಆದರೂ ಮಗು ಮುದ್ದಾಗಿತ್ತು... ಎತ್ತಿಕೊಂಡೆ...
"ನೀನು ಬೆಂಗಳೂರು ದೊಡ್ಡಪ್ಪ ಅಲ್ವಾ?
ಅಮ್ಮ ಹೇಳ್ತಾ ಇರ್ತಾಳೆ..."
ನಾನು ಹೌದು ಎನ್ನುವಂತೆ ತಲೆಯಾಡಿಸಿದೆ...
"ದೊಡ್ಡಪ್ಪಾ... ದೊಡ್ಡಪ್ಪಾ..
ಅಪ್ಪ ಎಲ್ಲಿಗೆ ಹೋಗಿದ್ದಾರೆ...?.."
ನನಗೆ ಉತ್ತರಿಸಲು ಆಗಲಿಲ್ಲ...
"ದೊಡ್ಡಪ್ಪಾ...
ದೊಡ್ಡಪ್ಪಾ...!
ಅಪ್ಪ... ಬೆಂಗಳೂರಿಗೆ ಹೋಗಿದ್ದಾನಂತೆ ಹೌದಾ?..
ಅಮ್ಮ ಬಹಳ ಕೆಟ್ಟವಳು ದೊಡ್ಡಪ್ಪಾ..
ಏನು ಕೇಳಿದರೂ ಕೊಡಿಸ್ತಾನೆ ಇಲ್ಲ.."
ಯಾಕೊ ನನ್ನ ಬಾಯಿಂದ ಮಾತೇ.. ಬರುತ್ತಿಲ್ಲ...
ಮಗು ಮಾತನಾಡುತ್ತಲೇ ಇತ್ತು...
" ದೊಡ್ಡಪ್ಪಾ..
ಅಪ್ಪ ಯಾವಾಗ ಬರ್ತಾನೆ..?...
ನಿನ್ನ ಸಂಗಡ.. ನನ್ನನ್ನೂ ಕರ್ಕೊಂಡು ಹೋಗು ದೊಡ್ಡಪ್ಪಾ...
ನನಗೆ ಅಪ್ಪನ್ನ ತೋರಿಸು..."
ಅಷ್ಟರಲ್ಲಿ ತಮ್ಮನ ಹೆಂಡತಿ ಕಾಗದ ಪತ್ರಗಳನ್ನು ತಂದಳು...
ಆಗ ಗೌಡರೆ.. ಕೇಳಿದರು...
"ನೋಡಪಾ..
ಇದರಲ್ಲಿ ನಿನಗೇನಾದರೂ ಪಾಲು ಬೇಕಿದ್ದರೆ ಈಗಲೇ ಹೇಳು...
ಇದು ಪಿತ್ರಾರ್ಜಿತ ಆಸ್ತಿ..
ನಿನ್ನ ಪಾಲಿನದು ನೀನು ಇಟ್ಟು ಕೊಳ್ಳ ಬಹುದು..."
ನನಗೆ ಮಡದಿಯ ಮಾತು ನೆನಪಾಯಿತು...
ಈ ಪುಟ್ಟ ಕಂದ..
ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿತ್ತು...!
ನಾನು ಹೇಳಿದೆ..
"ಗೌಡರೆ...
ನಾನು ಸಹಿ ಹಾಕುವದಿಲ್ಲ...
ನನಗೆ ಪಾಲೂ ಬೇಕಿಲ್ಲ..
ನನ್ನ ತಮ್ಮನ ಸಂಸಾರವನ್ನು ಎತ್ತಿ ನಿಲ್ಲಿಸುತ್ತೇನೆ...
ಎಷ್ಟು ಸಾಲವಿದೆ ಹೇಳಿ.. ಎಲ್ಲ ತೀರಿಸುತ್ತೇನೆ....."
ನಾನು ಏನು ಹೇಳ್ತಾ ಇದ್ದೇನೆ ಅಂತ ನನಗೆ ಗೊತ್ತಾಗ್ತಾ ಇಲ್ಲವಾಗಿತ್ತು....!
ಕಣ್ಣೆಲ್ಲ ಮಂಜಾಗಿದ್ದವು...
ಪುಟ್ಟ ಮಗುವನ್ನು ಬಿಗಿಯಾಗಿ ..
ಮತ್ತೂ ಜೋರಾಗಿ ಅಪ್ಪಿಕೊಂಡೆ....!
ನನಗೆ ನನ್ನ ತಮ್ಮ ನೆನಪಾದ...!
ಅವನೂ..
ಈ.. ಕಂದನ ಹಾಗೆಯೇ... ಇದ್ದ..!.
(ಇದು ಕಥೆ)
(ಒಳ್ಳೆಯ ಪ್ರತಿಕ್ರಿಯೆ ಗಳಿವೆ... ದಯವಿಟ್ಟು ಓದಿ...)
94 comments:
ಚೆನ್ನಾಗಿದೆ ಪ್ರಕಾಶ್ ಅವರೇ... ಬೇಗ ಮುಂದುವರಿಸಿ ಓದಲು ಕುತೂಹಲವಾಗಿದೆ....
ಪುಟ್ಟ ಮಕ್ಕಳ ಮುಗ್ಧತೆ ಎ೦ತಹ ಕಲ್ಲು ಹೃದಯವನ್ನೂ ಕರಗಿಸಿ ಬಿಡುತ್ತದೆ, ಮಾನವ ಸಹಜ ರೋಷ ಕ್ರೋಧ ಗಳನ್ನೂ ತಣಿಸುತ್ತದೆ, ಹದಗೆಟ್ಟ ಸ೦ಬ೦ಧಗನ್ನು ಬೆಸೆಯುತ್ತದೆ ಎ೦ಬುದಕ್ಕೆ ಉದಾಹರಣೆಯಾಗಿದೆ ನಿಮ್ಮ ಕಥೆ ಓದಿದಾಗ ನನಗೆ ಒಂದು ನಿಜ ಘಟನೆ ನೆನಪಿಗೆ ಬಂತು. ಒಂದು ಬ್ರಾಹ್ಮಣ ಕುಟು೦ಬವಿತ್ತು. ಅವರ ಒಬ್ಬಳೇ ಮಗಳು ಅನುರೂಪ ಲಾವಣ್ಯವತಿ. ಅನ್ಯ ಜಾತಿಯ ಒಬ್ಬನನ್ನು ಪ್ರೀತಿಸಿ ಮನೆಯಿ೦ದ ಓಡಿ ಹೋಗಿ ಮದುವೆಯಾದಳು. ತ೦ದೆತಾಯಿಗೆ ಅದೆಷ್ಟು ಬೇಸರ ವಾಯಿತೆ೦ದರೆ , ತಮಗೆ ಮಗಳೇ ಇಲ್ಲ, ಅವಳು ಸತ್ತು ಹೋದಳು ಎ೦ದು ಅಪರ ಕರ್ಮ ಗಳನ್ನೂ ಮಾಡಿ ಮುಗಿಸಿದರು. ಆದರೆ ಒ೦ದೇ ವರ್ಷದಲ್ಲಿ ಅವಳಿಗೊ೦ದು ಪುಟ್ಟ ಕ೦ದಮ್ಮ ಹುಟ್ಟಿದ ಮೇಲೆ ಈ ತ೦ದೆ-ತಾಯಿಗೆ ಆ ಮಗುವನ್ನು ನೋಡಬೇಕೆ೦ಬ ಅದಮ್ಯ ಆಸೆ. ಸಿಟ್ಟು ಸೆಡವು ಮರೆತು ಅದೇ ಊರಿನಲ್ಲಿದ್ದ ಮಗಳ ಮನೆಗೆ ಹೋಗಿ ಮಗುವನ್ನು ನೋಡಿ ಪುಲಕಿತರಾದರು. ಈಗ ಎರಡು ಮನೆಗಳ ಸ೦ಬ೦ಧ ಮತ್ತೆ ಬೆಸೆದಿದೆ. ಇದು ಅನೇಕ ಕಡೆ ನಡೆಯುತ್ತಿರುವ ವಿಷಯ. ಬಹಳ ಚೆನ್ನಾಗಿದೆ ಕಥೆ.
ಅದ್ಭುತವಾಗಿದೆ ಕತೆ ಪ್ರಕಾಶಣ್ಣ... ಏನಂತ ಪ್ರತಿಕ್ರಿಯಿಸಬೇಕೋ ಗೊತ್ತಾಗ್ತಾ ಇಲ್ಲ... ಕಣ್ಣು ತುಂಬಿ ಬಂದ ಅನುಭವ.. ಮಾತುಗಳು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಂತೆ ಅನ್ನಿಸ್ತಾ ಇದೆ..
ಅದೆಷ್ಟೋ ಮುರಿದು ಹೋದ ಮತ್ತು ಹೋಗಲಿರುವ ಹೃದಯಗಳನ್ನ, ಸಂಬಂಧಗಳನ್ನ ಮುಗ್ದ ಮಕ್ಕಳೇ ಮತ್ತೆ ಜೋಡಿಸುತ್ತವೆ ಅನ್ನೋದು ಈ ಸ್ವಾರ್ಥ ಸಮಾಜದಲ್ಲಿ ಮತ್ತೆ ಮತ್ತೆ prove ಆಗ್ತಾನೆ ಇರತ್ತೆ.. ಆದರೆ ಅದೇ ಮುಗ್ದ ಮಕ್ಕಳು ಮುಂದೆ ದೊಡ್ದವರಾಗ್ತಾ ಆಗ್ತಾ ಸ್ವಾರ್ಥ, ಅಸೂಯೆ, ದ್ವೇಷ ಕಲಿತು ಬಿಡ್ತಾವೆ ಅನ್ನೋದು ಅಷ್ಟೇ ಖೇದಕರ..
ಮತ್ತಷ್ಟು ಬರಲಿ ಇಂತಾ ಕತೆಗಳು.. ಈ ಚೆಂದದ ಕತೆ ಕಟ್ಟಿಕೊಟ್ಟಿದ್ದಕ್ಕೆ ಧನ್ಯವಾದಗಳು.
ಪ್ರೀತಿಯ ಗುರು ಪ್ರಸಾದ.
ಮದುವೆಯಾದ ಮೇಲೆ ಅಣ್ಣ ತಮ್ಮ ಸಂಬಂಧಗಳು ಯಾಕೆ ಬದಲಾಗಿ ಹೋಗುತ್ತವೆ?
ಯಾಕೆ ಬದಲಾಗಬೇಕು?
ತನ್ನ ಹೆಂಡತಿ... ಮಕ್ಕಳು ಸಂಸಾರದ ಜೊತೆಯಲ್ಲಿ...
ಒಡ ಹುಟ್ಟಿದವರನ್ನು ಯಾಕೆ ಮರೆಯುತ್ತೇವೆ?
ಯಾಕೆ ಮರೆಯಬೇಕು?
ಸಂಸಾರ ಶುರುವಾದ ಮೇಲೆ ಕೆಟ್ಟ ಸ್ವಾರ್ಥ ಯಾಕೆ ಜಾಸ್ತಿ ಆಗುತ್ತದೆ?
ನಾನೂ ಕೂಡ ಒಬ್ಬ ಅಣ್ಣನ ತಮ್ಮನಾಗಿ ಈ ಪ್ರಶ್ನೆಯನ್ನು ಹಲವು ಬಾರಿ ಕೇಳಿಕೊಂಡದ್ದಿದೆ...
ನಾವು ಬೆಳೆದಂತೆ ಮಾನಸಿಕವಾಗಿ ಯಾಕೆ ಬೆಳೆಯುವದಿಲ್ಲ...?
ಕಥೆ ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
Really Very Nice ... no comments ...
ಪರಾಂಜಪೆಯವರೆ...
ಮುಗ್ದತೆಯನ್ನು ಎಲ್ಲರೂ ಇಷ್ಟಪಡುತ್ತಾರೆ...
ಬಯಸುತ್ತಾರೆ...
ಆದರೆ ನಾವು ನಮ್ಮ ಮುಗ್ಧತೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ...
ನಾವೆಲ್ಲ ಬುದ್ಧಿವಂತರಾಗಿ ಬಹಳಷ್ಟು ಖುಷಿಯನ್ನು...
ಸಂಭ್ರಮ ಸಂತೋಷವನ್ನು ಕಳೆದುಕೊಂಡಿದ್ದೇವೆ...
ನಮ್ಮ ಹಿರಿಯರ ಬದುಕು ಬಹಳ ಕಷ್ಟವಿತ್ತು... ಆರ್ಥಿಕವಾಗಿ..
ಅದರೆ ಅವರು ನಮಗಿಂತ ಹೆಚ್ಚು ಸಂತೋಷವಾಗಿದ್ದರು...
ಸಣ್ಣ ಪುಟ್ಟ ವಿಷಯಗಳಲ್ಲಿ ಸಂಭ್ರಮ ಪಡುತ್ತಿದ್ದರು...
ನಾವು ನಾಗರಿಕರಾಗಿ ಅದನ್ನೆಲ್ಲ ಕಳೆದುಕೊಂಡಿದ್ದೇವೆ...
ನೀವೆನ್ನುವದು ನಿಜ...
ಮಕ್ಕಳು ಅದೆಷ್ಟೋ ಬಾಳನ್ನು ಒಂದುಗೂಡಿಸಿದ್ದಾರೆ...
ಜಾತಿ , ಮತಗಳನ್ನು ಒಂದುಗೂಡಿಸಿದ್ದಾರೆ...
ಚಂದದ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು... ಜೈ ಹೋ.. !
ಕಥೆ ತು೦ಬಾ ಚೆನ್ನಾಗಿದೆ..ಎ೦ದಿನ೦ತೆ ಓದಿಸಿಕೊ೦ಡು ಹೋಯಿತು.
ಈ ಕಥೆಯಲ್ಲಿನ ಅಣ್ಣ ತು೦ಬಾ ಒಳ್ಳೆಯವರು....
ಪ್ರಕಾಶಣ್ಣ ಇದು ಖಂಡಿತಾ ಕಥೆಯಲ್ಲ.ಹಲವಾರು ಗ್ರಾಮೀಣ ಕುಟುಂಬಗಳಲ್ಲಿ ಕಂಡುಬರುವ ಘಟನೆ. ಇಂತಹ ವಿಚಾರಗಳಿಂದ ಹಲವು ಕುಟುಂಬಗಳು ಬೀದಿಗೆ ಬಿದ್ದಿರುವುದನ್ನು ನಾನು ನೋಡಿದ್ದೇನೆ. ನಿರೂಪಣೆ ಚೆನ್ನಾಗಿದೆ .ಓದಿ ಮನಸ್ಸು ಭಾರವಾಯಿತು.ಕಥಾನಾಯಕ ದೊಡ್ಡತನ ಮೆರೆದು ಘಟನೆ ಸುಖಾಂತ್ಯ ವಾಗಿದ್ದು ಸಮಾಧಾನಕರ ವಿಚಾರ.
ಪ್ರಕಾಶಣ್ಣನವರು ಕತೆಗಾರರಾಗಿ ಬೆಳೆಯುತ್ತಿದ್ದಾರೆ. ಅದು ಖುಷಿಯ ವಿಚಾರ. ಮತ್ತಷ್ಟು ಕತೆಗಳು ಬರಲಿ. ಕತೆಗಾರರು ಸಹೃದಯವಂತರಾಗಿರುವಂತೆ ಕಥೆಯ ನಾಯಕನೂ ಇದ್ದಾನೆ. ಧನ್ಯವಾದಗಳು.
ಪ್ರಕಾಶಣ್ಣ;ಕಥೆ ಚೆನ್ನಾಗಿದೆ.ಬಾಂಧವ್ಯಗಳ ವಿಶ್ಲೇಷಣೆ ಸುಂದರವಾಗಿ ಮೂಡಿ ಬಂದಿದೆ.
ದಿಲೀಪ..
ಬಹಳ ಚಂದದ ಪ್ರತಿಕ್ರಿಯೆ...
ಇದು ನನ್ನ ಮನದಲ್ಲಿ ಬಂದಿದ್ದವುಗಳು..
ಮುಗ್ಧ ಮಕ್ಕಳು ದೊಡ್ಡವರಾದ ಮೇಲೆ.. ಮತ್ತೆ ಸ್ವಾರ್ಥ.. ದ್ವೇಷಗಳನ್ನು ಯಾಕೆ ಬೆಳೆಸಿಕೊಳ್ಳುತ್ತಾರೆ..?
ಆದರೂ ರಕ್ತ ಸಂಬಂಧಗಳನ್ನು ಒಂದು ಸಣ್ಣ ಎಳೆ ಬಂಧಿಸಿಟ್ಟುರತ್ತದೆ.. ಅಲ್ಲವೆ?
ಇಂಥಹ ಚಂದದ ಪ್ರತಿಕ್ರಿಯೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ..
ತುಂಬಾ ತುಂಬಾ ಧನ್ಯವಾದಗಳು... ಜೈ ಹೋ !
ನನ್ನೊಳಗಿನ ಕನಸು...
ಕಷ್ಟ ಯಾರಿಗಿರುವದಿಲ್ಲ ಹೇಳಿ...
ನಮ್ಮ ಹಿರಿಯರ ಬದುಕೇ... ನಮಗೆ ಆದರ್ಶ...
ಅಂಥಹ ಕಷ್ಟಗಳು ಇದ್ದಾಗಲೂ ತಮ್ಮ ಹತ್ತಿರದವರ ನೋವುಗಳಿಗೆ ಓಡಿ ಬರುತ್ತಿದ್ದರು..
ನಾವು ಬಹಳ ಬದಲಾಗಿ ಹೋಗಿದ್ದೇವೆ... ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಕವಿತಾ...
ನಮ್ಮೂರ ಕಡೆ ಇನ್ನೊಂದು ಪಿಡುಗು ಜಾಸ್ತಿಯಾಗಿದೆ...
ಪಟ್ಟಣದಲ್ಲಿ ಸಾಕಷ್ಟು ಸ್ಥಿತಿವಂತರಾಗಿರುವವರು..
ಊರಿಗೆ ಹೋಗಿ ತಮ್ಮ ಪಿತ್ರಾರ್ಜಿತ ಆಸ್ಥಿಯಲ್ಲಿ "ಪಾಲು" ಕೇಳುವದು..
ನಿಜಕ್ಕೂ ರೈತನ ಬದುಕು ಯಾರಿಗೂ ಬೇಡ..
ಬೆಳೆದ ಬೆಳೆಗೆ ಸರಿಯಾದ ರೇಟು ಇಲ್ಲ... ಕೂಲಿ ಸಮಸ್ಯೆ...
ಅಂಥಹ ಸಂದರ್ಭದಲ್ಲಿ "ಪಾಲು" ಕೇಳುವ ರಕ್ತ ಸಂಬಂಧಗಳು !!
ನಮಗೆ ವಯಸ್ಸಾದಂತೆ ಮಾನಸಿಕವಾಗಿ ಯಾಕೆ ಬೆಳೆಯುತ್ತಿಲ್ಲ... ?
ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಬಾಲೂ ಸರ್...
ನೀವೆನ್ನುವದು ನಿಜ...
ತಮ್ಮವರೆಂದರೆ.. ನಿರೀಕ್ಶೆಗಳು ಬಹಳ...
ಅವರಿಂದ ಸ್ವಲ್ಪವೂ ತಪ್ಪು ಆಗಲೇ ಬಾರದು.. ಇವರ ನಿರಿಕ್ಷೆಗೆ ತಕ್ಕ ಹಾಗೆ ಅವರು "ಸಹಾಯ" ಮಾಡಲೇ ಬೇಕು..
ಇಲ್ಲವಾದಲ್ಲಿ ಸಂಬಂಧಗಳು" ಕಟ್ !!
ಮಕ್ಕಳು ಸಂಬಂಧಗಳನ್ನು ಜೋಡಿಸ ಬಲ್ಲರು... ಅಲ್ಲವೆ?
ಚಂದದ ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ವಂದನೆಗಳು... ಜೈ ಹೋ.. !
ಹೆಗಡೇಜಿ ಕತೆ ಚೆನ್ನಾಗಿದೆ. ವಾಸ್ತವ ಬಿಂಬಿಸುತ್ತದೆ.
ಅಂತ್ಯ ಸ್ವಲ್ಪ ನಿರೀಕ್ಷಿತ ಅನಿಸ್ತು
ಪ್ರಕಾಶಣ್ಣ,
ಓದುತ್ತಾ ಓದುತ್ತಾ ಭಾವುಕಳಾದೆ..ಕಥೆ ತು೦ಬಾ ಚೆನ್ನಾಗಿದೆ.
ಗುಬ್ಬಚ್ಚಿ ಸತೀಶ್...
ನಿಮ್ಮ ಪ್ರೀತಿಗೆ ನನ್ನ ಅನಂತ ವಂದನೆಗಳು..
ತಮ್ಮನ ಮಗನನ್ನು ನೋಡಿ ದೊಡ್ಡಪ್ಪನಿಗೆ ...
ತನ್ನ ತಮ್ಮನ..
ತಮ್ಮಿಬ್ಬರ ಬಾಲ್ಯದ ನೆನಪಾಗಿ ತನ್ನ ನಿರ್ಧಾರ ಬದಲಿಸುತ್ತಾನೆ...
ತಮ್ಮನ ಮಗನ ಮುಗ್ಧ ಮಾತುಗಳಲ್ಲಿ..
ಅವರ ಕಷ್ಟಗಳು ವೇದ್ಯವಾಗುತ್ತವೆ...
ಎಷ್ಟೆಂದರೂ ತನ್ನ ಸ್ವಂತ ತಮ್ಮ..ಒಡಹುಟ್ಟಿದವರಲ್ಲವೆ?
ಹಾಗಾಗಿ ತನ್ನ ನಿರ್ಧಾರ ಬದಲಿಸುತ್ತಾನೆ..
ನಿಮ್ಮ ಪ್ರೋತ್ಸಾಹಕ್ಕೆ... ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು...
ಪ್ರಕಾಶಣ್ಣ, ಈ ಕಥೆ ವರ್ತಮಾನಕ್ಕೆ, ನೈಜತೆಗೆ ಕನ್ನಡಿಯಂತಿದೆ. ಈಗಿನ ಕಾಲದಲ್ಲಿ ಮೊದಲಿನಂತೆ ಒಟ್ಟು ಕುಟುಂಬವಾಗಲಿ, ಜೊತೆಗೆ ಬಾಳುವ ಪರಿಪಾಠ ಇಲ್ಲದಂತಾಗಿದೆ.
ಮುಂದಿನ ಜನಾಂಗಕ್ಕೆ ಒಟ್ಟು ಕುಟುಂಬ ಎನ್ನುವ ಕಥೆ ಓದಿ ಹೇಳಬೇಕಿದೆ. ನಿಮ್ಮ ಕಥೆ ತುಂಬಾ ಹಿಡಿಸಿತು. ಮುಂದಿನ ಭಾಗಕ್ಕೆ ಕಾಯುತ್ತಿರುವೆ.
ಜೈ ಹೊ...
ಸರಾಗ, ಸುಲಲಿತ... ಸುಂದರವಾಗಿದೆ ಪ್ರಕಾಶ್... ಹೀಗಿಂದು ಇನ್ನಷ್ಟು ಬರಲಿ...
-ಚಾಂದ್
ಕತೆ ತುಂಬ ಚೆನ್ನಾಗಿದೆ ಪ್ರಕಾಶಣ್ಣ . ಚಿಕ್ಕದಾಗಿದ್ದರೂ ಬಹಳಷ್ಟು ಹೇಳುತ್ತದೆ.
Kathe chennagide. Odutta hodante yenella nenapaythu. Makkala niskalmasa bhava beladante kalushita vatavaranadinda kalmasa vaytu.
ಪ್ರಕಾಶಣ್ಣಾ'
" ನನಗೆ ನನ್ನ ತಮ್ಮ ನೆನಪಾದ...!
ಅವನೂ..
ಈ.. ಮಗುವಿನ ಹಾಗೆಯೇ... ಇದ್ದ..!."
ತಾವು ಬರೆದ ಈ ಮೇಲಿನ ಸಾಲುಗಳು ನಿಜಕ್ಕೂ ಹೃದಯಕ್ಕೆ ತಟ್ಟುವಂತಿದೆ.
ಉತ್ತಮ ಕಥೆಗೆ ಅಭಿನಂದನೆಗಳು.
ಪ್ರಕಾಶಣ್ಣಾ,
ನನಗೆ ನನ್ನ ತಮ್ಮ ನೆನಪಾದ...!
ಅವನೂ..
ಈ.. ಮಗುವಿನ ಹಾಗೆಯೇ... ಇದ್ದ..!.
ತಾವು ಬರೆದ ಈ ಮೇಲಿನ ಸಾಲುಗಳು ನಿಜಕ್ಕೂ ಹೃದಯಕ್ಕೆ ತಟ್ಟುವಂತಿದೆ.
ಉತ್ತಮ ಕಥೆಗೆ ಅಭಿನಂದನೆಗಳು.
realy its truth
paalu kathe thumba chennagihde brother
idhu halligalalli nadeyua naija gatane enu ariyadha makkalu entha katina manasannu karagisuthe
dhoddavaru maadidha thappu makkalindha anthyavguthe
kelavomme namma nirdhara namage gothilladhe badhalagibiduthe
realy nice story brother
ಪ್ರಕಾಶಣ್ಣ ತುಂಬಾ ಸೊಗಸಾಗಿದೆ. ರಾಶಿ ಖುಷಿ ಆತು....
ಸರಳವಾಗಿ ಚಂದ ಬರೀದೆ.....
ಹೌದು.... ಇದು ನಿನ್ನ ಕಥೇನಾ...... ಇಲ್ಲಾ ನೀ ಬರೆದ ಕಥೇನಾ.....
ಕಥೆ ಸು೦ದರವಾಗಿದೆ.
ಕ್ರೋಧ ಮುಗ್ಧತೆಯೆದುರು ಸೋತಿದ್ದು ಉತ್ತಮ ಅ೦ತ್ಯ..
ಪ್ರಕಾಶ,
ಮನ ಮಿಡಿಯುವ ಕತೆ.
ಕೃಷ್ಣಮೂರ್ತಿಯವರೆ..
ಯಾರ್ಯಾರನ್ನೋ.. ನಂಬುತ್ತೇವೆ...!
ವಿಶ್ವಾಸದಿಂದ ವ್ಯವಹಾರ ಮಾಡುತ್ತೇವೆ...!
ಆದರೆ ಒಡಹುಟ್ಟಿದವರನ್ನು ನಂಬುವದಿಲ್ಲ...
ದೂರ ಇಟ್ಟಿರುತ್ತೇವೆ...
ಮದುವೆಯಾದ ಮೇಲೆ ಒಡಹುಟ್ಟಿದವರು ದೂರದವರಾಗಿಬಿಡುತ್ತಾರೆ..
ಯಾಕೆ ಹೀಗೆ?
ಪ್ರತಿಕ್ರಿಯೆಗೆ ಧನ್ಯವಾದಗಳು..
SUPER
jai ho
ಉಮೇಶ ದೇಸಾಯಿಯವರೆ..
ಎಲ್ಲರೂ ಅಂತರಂಗದಲ್ಲಿ ಒಳ್ಳೆಯವರೇ ಇರ್ತಾರೆ ಅನ್ನೋದನ್ನು ಹೇಳಲಿಕ್ಕೆ ..
ಮಗುವಿನ ಮಾತಿನಿಂದ ಮನಸ್ಸು ಪರಿವರ್ತನೆ ಆಗುವಂತೆ ಚಿತ್ರಿಸಿದೆ...
ಮಗುವಿನ ಮಾತಿನಿಂದ ದೊಡ್ಡಪ್ಪನಿಗೆ ಅವರ ಕಷ್ಟಗಳು ಗೊತ್ತಾಗುತ್ತದೆ..
ಸಹಜವಾಗಿ ತನ್ನ ಮತ್ತು ತನ್ನ ತಮ್ಮನ ಒಡನಾಟ ನೆನಪಾಗುತ್ತದೆ..
ಹಾಗಾಗಿ ಆತ ತನ್ನ ನಿರ್ಧಾರ ಬದಲಿಸುತ್ತಾನೆ...
ಇದು ಎಷ್ಟು ಪರಿಣಾಮಕಾರಿಯಾಗಿದೆ ಅನ್ನುವದನ್ನು ಓದಗರು ಹೇಳಬೇಕು..
ಹಳ್ಳಿ ಕಡೆ ಇಂಥಹ ಪ್ರಕರಣ ಜಾಸ್ತಿ ಆಗ್ತ ಇದೆ..
ಅಂಥವರು ಯಾರಾದರೂ ಓದಿ ....
ಪರಿಣಾಮ ಬೀರಿದಲ್ಲಿ ಬರೆದದ್ದು ಸಾರ್ಥಕ...
ಚಂದದ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು...
ಜೈ ಹೋ !
This is not just a story but most of elder brother's real life.
ಮನಮುಕ್ತಾ...
ಹಳ್ಳಿಯಲ್ಲಿರಲಿ... ಪಟ್ಟಣದಲ್ಲಿರಲಿ...
ಮನುಷ್ಯ ದೊಡ್ಡವನಾದ ಹಾಗೆ ತನ್ನ ಅಣ್ಣ, ತಮ್ಮಂದಿರ ಬಾಂಧವ್ಯವನ್ನು ಮರೆಯಲು ಶುರುಮಾಡುತ್ತಾನೆ...
ಆದರೆ..
ಅವರಿಂದ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾನೆ.. ಇದು ವಿಪರ್ಯಾಸ.. !
ತನ್ನವರು ಯಾವಾಗಲೂ ತನ್ನವರೆನ್ನುವ ವಿಶ್ವಾಸ ಯಾಕೆ ಹೊರಟು ಹೋಗುತ್ತದೆ...?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು...
ಚೆನ್ನಾಗಿದೆ ಕಥೆ ಪ್ರಕಾಶಣ್ಣ.. ಜೈ ಹೊ..
nanu a parstitili iddidare mostly adane madtidde Praklashanna .....
ಪ್ರೀತಿಯ ನಂಜುಂಡ...
ತಾನು...
ತನ್ನದು ಅನ್ನುವ ಭಾವ ಜಾಸ್ತಿಯಾಗಿ...
ನಮ್ಮ ಒಟ್ಟಿಗೆ ಬಾಳುವ ಕುಟುಂಬ ಪದ್ಧತಿ ಈಗ ಇಲ್ಲ...
ಅದರಿಂದ ಲಾಭವೂ ಇದೆ...
ಹಾನಿಯೂ ಜಾಸ್ತಿಯಾಗಿದೆ..
ಪರಸ್ಪರ ನಂಬಿಕೆಯೇ.. ಹೊರಟುಹೋಗಿದೆ...
ಕೊನೆ ಪಕ್ಷ ಒಡಹುಟ್ಟಿದವರಲ್ಲಾದರೂ ವಿಶ್ವಾಸ ಬೆಳೆಯಲಿ ಅನ್ನುವಂಥಹ ಆಶಯ ನಮ್ಮದು...
ಈ ಕಥೆಯನ್ನು ಮತ್ತೆ ಮುಂದುವರಿಸಬೇಕಾ...?
ಆ... ವಿಚಾರ ಸಧ್ಯಕ್ಕಂತೂ ನನ್ನಲ್ಲಿಲ್ಲ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಪ್ರೀತಿಯಿಂದ
ಪ್ರಕಾಶಣ್ಣ...
ಪ್ರಕಾಶ್ ಮಾಮ,
ನಿಮ್ಮ ಕಥೆ ಹೇಳುವ ರೀತಿ ತುಂಬಾ ಹಿಡಿಸುತ್ತೆ.. ಒಂದು GRIP ಕಥೆಯಲ್ಲಿರುತ್ತೆ.
--
ಪಾಲು, ನಿಜವಾಗಿಯೂ ಇದು ಮನೆ ಮನೆಯ ಕಥೆ..
ಆದ್ರೆ, ಅಲ್ಲಿ ಮನಸಿನ ಮಾತುಗಳು ತುಂಬಾ ಮುಖ್ಯ.
ಕೆಲವು ಸಲ,
ಸಿಟಿ ಯಲ್ಲಿರುವ ಅಣ್ಣನೋ/ತಮ್ಮನೋ ತುಂಬಾ ಸುಖಿ ನಾನೇ ಅವನಿಗೆ ಓದಿಸಿದ್ದು, ನನ್ನದೇ ಬೆವರು ಸುರಿದದ್ದು.
ಈ ತರಹ ಮಾತುಗಳು ಬರುತ್ತೆ (ಹೆಣ್ಣಿನ ಮೂಲಕವೂ)..
ಸಿಟಿಯಲ್ಲಿರುವನು ಪರಮ ಸುಖಿ, ಹಳ್ಳಿಯವನು ಬೆವರು ಹರಿಸಿದ್ದು.. ಇವೆಲ್ಲ, ಮಾತುಗಳು ವಿವೇಚನೆ ಇಂದ ಬರೋದಿಲ್ಲ..
ಯಾವುದೋ ಹಳೆಯ ಗಾಯದ ನೋವಿನ ನೆನಪು.. ಇಲ್ಲ ಅವನೇ/ಇವನೇ ಸುಖಿ ಎನ್ನುವ ಒಂದು ಹೊಟ್ಟೆ ಕಿಚ್ಚು. ಅವನಿಗೆ ಕಷ್ಟನೆ ಇಲ್ಲ ಅನ್ನೋ ತಪ್ಪು ಕಲ್ಪನೆ. ಅಷ್ಟೇ..
ಏನೇ ಆದರು, ನಾನೊಬ್ಬನೇ ಎಲ್ಲಾ ಮಾಡಿದ್ದು, ಮಾಡ್ತೀನಿ ಅನ್ನುವುದು ಕಷ್ಟ ಸಾಧ್ಯ..
ಇಲ್ಲಿ ಎಲ್ಲರು ಬೇಕು, ಇದು ಗೊತ್ತಾಗಲು ಸ್ವಲ್ಪ ಸಮಯ ಹಿಡಿಯಬಹುದು ಆದ್ರೆ ಮತ್ತೇ ಸೇರಲೇಬೇಕು..
ಮಗುವಿನ ವಿವರಣೆ.. ಸೂಪರ್..
- ಪ್ರೀತಿ ಬೆಳೆಯಲಿ.
ಪ್ರಕಾಶ..ಹೃದಯ ಮುಟ್ಟುವ ಕಥೆ...
ಮಕ್ಕಳ ಮುಂದೆ ನಮ್ಮೆಲ್ಲ ವೈಮನಸ್ಸ.ಮಾಯವಾಗುತ್ತೆ...ನಿಜವಾಗಿಯೂ ನಮ್ಮ ಹೃದಯ ಕಪಟವರಿಯದೇ ಇದ್ದರೆ...ಯಾಕಂದ್ರೆ ದಯಾಮಯಿ ಹೃದಯದಲ್ಲಿ ಮುಗ್ಧರನ್ನು ಕಂಡು ದ್ವೇಷಮರೆಯುತ್ತೆ...ಇಲ್ಲಿ ಅದು ಮಗು..ಅಪ್ಪನ ಕಪಟವನ್ನೂ ಅರಿಯದೂ ಅಮ್ಮನ ವಂಚನೆಯ ಅರಿವಿಲ್ಲ..ಸೋ..ಸೋಲೋದು ನಾವೇ..ಮಗುವಿಗೆ..ಮಮತೆಗೆ..ಒಳ್ಳೆ ಕಥೆ
prakashanna manasige tagtu.....egina halli paristiti kan edrige bandangatu....!!
ತುಂಬಾ ಚೆನ್ನಾಗಿದೆ... ಆದರೆ,, ಈಗಲೂ ಇಂತಹ ಒಳ್ಳೆಯತನಕ್ಕೆ ಬೆಲೆ ಇದೆಯಾ.. ಒಳ್ಳೆಯತನಕ್ಕೆ ದಡ್ಡತನ ಅಂತ ಹಣೆಪಟ್ಟಿ ಕೊಡುವುದೇ ಜಾಸ್ತಿ ಅನಿಸುತ್ತದೆ.. ಕಥೆ ಚೆನ್ನಾಗಿದೆ.. ಸ್ವಾರ್ಥ ದ ಬದುಕಿನಲ್ಲಿ ಸಂಬಂಧಗಳನ್ನು ಅದರ ಭಾವನೆಗಳನ್ನು ನೆನೆಪಿಸುವಂತಿದೆ.. practical ಜೀವನದಲ್ಲಿ ಕಳೆದು ಹೋಗುವ ಈ ಕಾಲದಲ್ಲಿ ಒಳಗಿನ ಒಳ್ಳೆತನವನ್ನು ಎಬ್ಬಿಸುವಂತಿದೆ.. ನಿಮ್ಮ ಬರವಣಿಗೆಯ ಶೈಲಿ ತುಂಬಾ ಇಷ್ಟ ಆಗುತ್ತದೆ.. ಜೈ ಹೋ..
ಚಂದ್ರಮುಖಿ.... (ಚಾಂದ್)...
ಒಟ್ಟುಕುಟುಂಬದಲ್ಲಿನ ಒಗ್ಗಟ್ಟು ಈಗ ಇಲ್ಲ...
ಆದರೆ ...
ಒಡ ಹುಟ್ಟಿದವರಲ್ಲಿಯೂ ಒಗ್ಗಟ್ಟು ಕಾಣುತ್ತಿಲ್ಲ..
ಇದು ದುಃಖದ ವಿಚಾರ..
ಅದು ಸಹಜವಾಗಿ ಇರಬೇಕು... ವಿಶ್ವಾಸ ಮಮತೆ ಅಲ್ಲಿದ್ದರೆ ಚನ್ನ..
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಸುಮಾ...
ಮಕ್ಕಳು...
ಅವರ ಮುಗ್ಧ ಮನಸ್ಸು ಎಂಥಹ ಕಟು ಹೃದಯಗಳನ್ನೂ ಕರಗಿಸ ಬಲ್ಲದು....
ಕಪಟವರಿಯದ ಆ ಮುಗ್ಧ ನಗುವೇ.. ಹಾಗೆ..!
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ನಿಹಾರಿಕಾ...
ದಿಲೀಪ ಹೇಳಿದ ಹಾಗೆ ಮುಗ್ಧವಾದ ಮಕ್ಕಳು ಬೆಳೆದಂತೆ ಮುಗ್ಧತೆಯನ್ನು ಕಳೆದುಕೊಳ್ಳುವದು ವಿಪರ್ಯಾಸ..!
ಕಷ್ಟದಲ್ಲಿದ್ದಾಗ ಸಹಾಯ ಮಾಡಲು ಆಗದಿದ್ದರೂ..
ಸಾಂತ್ವನ... ಧೈರ್ಯದ ಮಾತುಗಳಾದರೂ ಇರಬೇಕು...
ತಮ್ಮನ ಹೆಂಡತಿಯ ಹಾಗೆ "ಅಪಹಾಸ್ಯದ" ನಗುವಿರಬಾರದು ಅಲ್ಲವೆ?
ಮನಸ್ಸಿಗೆ ಆದ ಗಾಯ ಮರೆಯಲು ಬಹಳ ಕಷ್ಟ...
ಮಕ್ಕಳು ಎಂಥಹ ನೋವನ್ನಾದರೂ ಮರೆಸಬಲ್ಲರು...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...
ಪ್ರಕಾಶಣ್ಣ,
ಕೊನೆಯಲ್ಲಿ ಕಣ್ಣಲ್ಲಿ ಹನಿಉದುರಿತು . ಇದೇ ರೀತಿ ಆಗಬಹುದೆಂಬ ಸುಳಿವಿದ್ದರೂ ಕೂಡ ...
ನಿನ್ನ ಬರವಣಿಗೆಯ ಶೈಲಿಯೇ ಹಾಗೆ. ಮನಸಿಗೆ ನಾಟುವಂಥಾದ್ದು ...
ಪಾಲು ಕೇಳುವುದು ಎಷ್ಟೋ ಕಡೆ ಪದ್ಧತಿಯಾಗಿಬಿಟ್ಟಿದೆ . ತಮ್ಮಲ್ಲಿ ಬೇಕಾದಷ್ಟು ಕೊಳೆಯುತ್ತಿದ್ದಾಗಲೂ . ಪಿತ್ರಾರ್ಜಿತ ಎಂಬ ನೆವ ಬೇರೆ. ಬರೀ ಗಂಡು ಮಕ್ಕಳಷ್ಟೇ ಅಲ್ಲ , ಶ್ರೀಮಂತಿಕೆಯಲ್ಲಿ ಮೆರೆಯುತ್ತಿರುವ ಹೆಣ್ಣುಮಕ್ಕಳೂ ಕೂಡ ಅಪ್ಪನ ಮನೆ ಆಸ್ತಿಗಾಗಿ ಹೊಡೆದಾಡುವುದಿದೆ . ಅದನ್ನೆಲ್ಲ ನೋಡಿದಾಗ, ಅಪ್ಪ-ಅಮ್ಮ ಮಕ್ಕಳಿಗಾಗಿ ಆಸ್ತಿಯನ್ನೇ ಮಾಡಿಡಬಾರದು ಎನಿಸುತ್ತಿದೆ.
ಆದರೆ .. ಮದುವೆಯಾದಮೇಲೂ ಬದಲಾಗದ , ಸಂಬಂಧಗಳು ಇನ್ನಷ್ಟು ಗಟ್ಟಿಗೊಂಡ ಮನೆಗಳೂ ಇವೆ . ಸಂಖ್ಯೆ ಕಡಿಮೆಯಿದ್ದರೂ ಅಂಥಾ ಕುಟುಂಬಗಳನ್ನು ನೋಡುವಾಗ ಖುಷಿಯಾಗುತ್ತದೆ .
ಪ್ರಿಯ ಪ್ರಕಾಶ್ ಸರ್ ಸಾಮಾನ್ಯವಾಗಿ ನಾವುಗಳು ಮದುವೆ ಆಗುವವರೆಗೂ ನಮ್ಮ ಎಲ್ಲಾ ಸಂಬಂಧಗಳು ಅನುಬಂಧಗಳಾಗೇ ಇರುತ್ತವೆ.
ಆದ್ರೆ ವೈವಾಹಿಕ ಜೀವನಕ್ಕೆ ಕಾಲಿಟ್ಟನಂತರ ಅಣ್ಣ-ತಮ್ಮ, ಅಕ್ಕ-ತಂಗಿ, ಅಪ್ಪ-ಅಮ್ಮ ಎಲ್ಲಾ ಕೊಂಡಿಗಳು ಒಂದೊಂದಾಗಿ ಕಳಚುತ್ತವೆ ಅಥವಾ ಅವುಗಳ ಗಟ್ಟಿತನ ಟೊಳ್ಳಾಗುತ್ತಾ ಬರುತ್ತದೆ. ಮಧ್ಯೆ ಮಧ್ಯೆ ಇಂತಹ ಭಾವನಾತ್ಮಕ ಸನ್ನಿವೇಶಗಳು ಸಂಬಂಧಗಳಿಗೆ ಬೆಸುಗೆಯಾಗುತ್ತವೆ. ಅದು ನಿಮ್ಮ ಕಥೆಯಲ್ಲಿ ನವಿರಾಗಿ ಮೂಡಿ ಬಂದಿದೆ
ಪ್ರಕಾಶ್ ರವರೇ,ಕಥೆಯ೦ತೂ ಚೆನ್ನಾಗಿದೆ.ಆದರೆ ಈ ಕಾಲಘಟ್ಟದಲ್ಲಿ ಆಧುನಿಕತೆ ಕೃತಕತೆಯ ಸೋಗಿನಲ್ಲಿ ಆ ಕ್ಶಣಕಾಲದ ಚಿ೯ತನೆ ಆ ಕ್ಷಣದ ದೌರ್ಬಲ್ಯವೂ ಆಗಬಹುದಲ್ಲವೇ..? ಬದ್ಧತೆಗೆ ಅ೦ಟಿಕೊಳ್ಳುವುದು,ಇನ್ನೊ೦ದೆಡೆ ಒತ್ತಡಕ್ಕೆ ಸಿಲುಕುವುದೂ ಆಗಬಹುದಲ್ಲವೇ..?
ಓಟ್ಟಿನಲ್ಲಿ ದ್ವ೦ದ್ವ...!!!
ನಿಜಕ್ಕೂ ಕಣ್ಣೀರು ತರಿಸಿತು ನಿಮ್ಮ ಈ ಕಥೆ ಪ್ರಕಾಶಣ್ಣ...ಜೀವನ ಎಷ್ಟು ಕ್ಷಣಿಕ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಮನುಷ್ಯ ಒಮ್ಮೊಮ್ಮೆ ಎಷ್ಟು ಕ್ರೂರವಾಗಿ ಅಮಾನವೀಯವಾಗಿ ನಡೆದುಕೊಳ್ಳುತ್ತಾನಲ್ಲ. ಹಣ, ಆಸ್ತಿ, ಅಸೂಯೆ, ಮತ್ಸರ ಗಳಿಗೋಸ್ಕರ ಬೇರೆಯವರ ನೋವಿಗೆ ಕಣ್ಣೀರಿಗೆ ಕಾರಣವಾಗುತ್ತಾನಲ್ಲ. ನಿಮ್ಮ ಕತೆಯಲ್ಲಿನ ಅಣ್ಣನಿಗೆ ಮಾನವೀಯ ಮನಸ್ಸಿದ್ದುದರಿಂದ ಹಿಂದೆ ತಮ್ಮ ಮಾಡಿದ ಅವಮಾನವನ್ನೂ ಸಹ ಮರೆತು ಮಗುವಿನ ಅಳುವಿಗೆ ಸ್ಪಂದಿಸಿದ. ಆದರೆ ನಿಜ ಜೀವನದಲ್ಲಿ ಇಂಥವರು ಸಿಗುವುದು ಅಪರೂಪ ಅನಿಸುತ್ತಿದೆ...ಚೆಂದದ ಅಂತ್ಯ. ಕಥೆ ತುಂಬಾ ತುಂಬಾ ಇಷ್ಟವಾಯ್ತು ಪ್ರಕಾಶಣ್ಣ.
Anna naneg yen helbekanthane gothagthella, yake andre yellavanu snhetharu egagale helidare.
Thumba chennagide anna vasthavake thumba athiravagide kathe, ethege cementh nasthe jodisthera ankondidhe. Bhavanegalanuu e mathake jodise godu kathi nam kannali ner tharisthera antha evathe gothagidu
mana muttuva vishleshane, prakash sir. muktayavannu guess madidde..:)
ananth
ಜಗದೀಶ ಬಾಳೆಹದ್ದ...
ಆವೇಶಕ್ಕೆ ಒಳಗಾಗಿ ಕಠಿಣ ನಿರ್ಧಾರ ತೆಗೆದುಕೊಂಡು ಬಿಡುತ್ತೇವೆ..
ಆದರೆ...
ಒಡಹುಟ್ಟಿದ ಬಾಂಧವ್ಯ... ಒಳಗೊಳಗೆ ಹಾಗೆ ಸುಪ್ತವಾಗಿದ್ದಿರುತ್ತದೆ...
ಪುಟ್ಟ ಹುಡುಗ ಮಾತನಾಡಿದಾಗ ಮತ್ತೆ ..
ತಮ್ಮನ ಮಮತೆ ಜಾಗ್ರತವಾಗಿದೆ...
" ಪ್ರತಿಯೊಬ್ಬರ ಅಂತರಂಗದಲ್ಲಿ ಒಳ್ಳೆತನ ಇದ್ದೇ.. ಇದ್ದಿರುತ್ತದೆ.." ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಪ್ರೀತಿಯ ಸಹೋದರಿ ಪುಷ್ಪಾರವರೆ...
ಕೆಲವೊಮ್ಮೆ ಯಾಕೆ ಹಾಗೆ ನಿರ್ಧಾರಕ್ಕೆ ಬರುತ್ತೇವೆ..?
ಕೆಲವೊಂದು ಘಟನೆಗಳಲ್ಲಿ ನಮ್ಮ ನಿರ್ಧಾರ ನಮ್ಮ ವಿವೇಚನೆಯಲ್ಲಿ ಇರೋದಿಲ್ಲ..
ನನಗಂತೂ ಹಲವು ಬಾರಿ ಆಗಿದೆ..
ಇಲ್ಲಿ ದೊಡ್ಡಪ್ಪ ಹೆಂಡತಿ ಹೇಳಿದ ಹಾಗೆ "ಸಿಕ್ಕಿದಷ್ಟು ಪಾಲು" ತರಲು ಹೋದವ..
ತಮ್ಮನ ಹೆಂಡತಿಯಿಂದ ಆದ ಅವಮಾನ ಮರೆಯದೆ ನೆನಪಲ್ಲಿದೆ..
ಆದರೂ...
ಪುಟ್ಟ ಕಂದನ ಮಾತಿಗೆ "ಪಾಲು ಬೇಡ" ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಾನೆ..
(ತನಗೂ ಆರ್ಥಿಕ ಸಮಸ್ಯೆ ಇದ್ದಿರುತ್ತದೆ..
ಮಕ್ಕಳ ವಿಧ್ಯಾಭ್ಯಾಸ.. ಇತ್ಯಾದಿ..)
ನಮ್ಮ ನಿರ್ಧಾರಗಳು ಕೆಲವೊಮ್ಮೆ ನಮ್ಮ ಕೈಯಲ್ಲಿ ಇರೋದಿಲ್ಲ... ಅಲ್ಲವಾ?
ಚಂದದ ಪ್ರತಿಕ್ರಿಯೆಕೊಟ್ಟು.. ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು..
ಪ್ರಕಾಶಣ್ಣ..
prakaash ravare,nishkapata preetige , entahaa bandeyannaadaru karagisibiduva shakti ide...!
ಪ್ರಕಾಶ್ ರವರೆ,ನಿಮ್ಮ ಬರಹ ಹೃದಯಸ್ಪರ್ಶಿಯಾಗಿದೆ.ಅಭಿನಂದನೆಗಳು
tumba channagi baradde prakashanna....
manassige bahala ishta aatu..:-)
after reading tis my eyes wet....really touching....still tears in my eyes..
AFTER READING THIS MY EYES WET...REALLY TOUCHING...STILL TEARS IN MY EYES....
ಪ್ರೀತಿಯ ಪ್ರಕಾಷ್, ಮಾನವೀಯತೆಯ ವ್ಯಕ್ತಿತ್ವವನ್ನು ಸೊಗಸಾಗಿ ಅನಾವರಣಗೊಳಿಸಿದ್ದೀರಿ. ದ್ವೇಷ, ಅಸೂಯೆಗಳು ತಾತ್ಕಾಲಿಕ ಮತ್ತು ಪ್ರೀತಿ, ಮಮಕಾರಗಳು ಶಾಶ್ವತ ಎಂದು ಸಾಬಿತುಪಡಿಸಿದ್ದೀರಿ. ನಿಮ್ಮ ನಿರೂಪಣೆ ಚೆನ್ನಾಗಿದೆ. ಅಭಿನಂದನೆಗಳು.
touching story ri....
houdhanna entha katina hrudhaya iruvavarigu ondhu olleya manasu idhe iruthe anna nishkalmasha manasina maguvina moga nodidha yaaradharu karaguthare aa maguvina nagu nammanne maresuthe huttutha anna thamma beleyutha dhayadhiagthare adhu nija yaakandhre anna thamma ibbaru ondhe raktha but
madhuve adha mele badhalaguthare
yaakandhre madhveadha hennu makkalu bere maneyindha bandhirtharalva avarige avara samsaradha mele mathra olavu anna thammara preethi avrige bekagola
adhre thamma illadhe hodhru avana maguvina nagu namma balya nenapu maadi koduthe aga entha katina manasu karaguthe
naavu beledhu bandha dharina nenapisuthe realy good story
neevhelidh nija idhna baredhadhakku sarthaka agbeku ellaru arithu baalabeku
idhe thara olleya sandheshagalu baruthirali anna
realy so nice........
Prakashnna,
superbbbb..very touching....tumbaane ishta aitu....Jai Ho....
hi sir,
Nimma kate tumba chennagi bandidde,magu hatra bandu matado vishya ella odidaga tumba manssige novu agutte makle hage entha katina manasannu bekadru kargiso shakthhi ide..allva..asthi samasye elli illa..ellla kade ide idu ondu samjakke antikonda roga..
ಬಿಂದಾಸ್ ಬರಹ , ಪ್ರಕಾಶಣ್ಣ
ಕನಸು ಕಂಗಳ ಹುಡುಗ...
ಇದು ಕಲ್ಪನೆಯ ಕಥೆ...
ಮದುವೆ ಆಗುವವರೆಗೆ ...
ಪ್ರೀತಿಯಿಂದ ಅಣ್ಣ ತಂಮಂದಿರು ಇರುತ್ತಾರೆ..
ಆಗ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡುವದಿಲ್ಲ...
ಆದರೆ ...
ಮದುವೆಯಾದ ದಿನಂದಿಂದ ಪೂರ್ತಿಯಾಗಿ ಬದಲಾಗಿ ಬಿಡುತ್ತಾರೆ..
ತಮ್ಮ ಸಂಸಾರದ ಭದ್ರತೆ..
ತನ್ನ ಹೆಂಡತಿ ಮಕ್ಕಳು.. ಇಷ್ಟೇ ತಮ್ಮ ಪ್ರಪಂಚವನ್ನಾಗಿಸಿಕೊಂಡು ಬಿಡುತ್ತಾರೆ..
ಕಥೆಯನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..
CHUKKICHITTARA...
Thank u very much...
ತಮ್ಮ ಸಂಸಾರದ ಭವಿಷ್ಯದ ಭದ್ರತೆ ಮಾಡಿಕೊಳ್ಳಲಿ..
ಆದರೆ ಒಡ ಹುಟ್ಟಿದವರನ್ನು ಯಾಕೆ ದೂರ ಮಾಡಿಕೊಳ್ಳ ಬೇಕು...
ಅಪನಂಬಿಕೆ... ವಿಶ್ವಾಸವನ್ನು ಯಾಕೆ ಕಳೆದುಕೊಳ್ಳಬೇಕು?
ಮದುವೆಯಾದ ಮೇಲೆ ಹೆಂಡತಿ ಬದಲಿಸಿಬಿಟ್ಟಿದ್ದಾಳೆ ಎಂದುಕೊಳ್ಳುತ್ತಾರೆ..
ಅದಲ್ಲ..
ಮೂಲತಹಃ ಇವನೇ.. ಸ್ವತಹ ಬದಲಾಗಿಬಿಟ್ಟಿರುತ್ತಾನೆ..
ಅಲ್ಲವೆ?
ಕಥೆ ಇಷ್ಟವಾಗಿದ್ದಕ್ಕೆ .. ಪ್ರತಿಕ್ರಿಯೆಗೆ ಧನ್ಯವಾದಗಳು..
ಹೌದು ಸಾರ್, ಅನುಭವವಾಗಿದೆ.
ಭಾವನೆಗಳು ಜಡ್ಡು ಗಟ್ಟಿ ಒಮ್ಮೊಮ್ಮೆ ಕಠಿಣ ನಿರ್ಧಾರ ಕೈಗೊಂಡಿರುತ್ತೇವೆ.
ಆದರೆ ಕರಗಿಸಲು ಒಂದು ಸಣ್ಣ ಕಿಡಿ ಸಾಕು.
ಸುನಾಥ ಸರ್...
ಪ್ರತಿಯೊಬ್ಬನ ಅಂತರಂಗದಲ್ಲಿ...
ಒಳ್ಳೆಯವನಿರುತ್ತಾನೆ...
ಅವನು ತನ್ನಷ್ಟಕ್ಕೇ.. ಮಾತನಾಡುತ್ತಿರುತ್ತಾನೆ...
ಹೆಚ್ಚಿನ ಸಂದರ್ಭಗಳಲ್ಲಿ ಇತರರ ಶಬ್ಧಗಳಿಗೆ ಬೆಲೆ ಕೊಡುವದು ಜಾಸ್ತಿಯಾಗಿ...
ಈ ಒಳ್ಳೆಯವನ ಮಾತನ್ನು ಕೇಳುವದಿಲ್ಲ...
ಕೆಲವು ಸಂದರ್ಭಗಳಲ್ಲಿ..
ಈ ಒಳ್ಳೆಯವನ ಮಾತು ಕೇಳಲೇ ಬೇಕಾಗುತ್ತದೆ.. ಅಲ್ಲವೆ?
ಸರ್ ಪ್ರೋತ್ಸಾಹಕ್ಕೆ ಧನ್ಯವಾದಗಳು..
Bopasandagaitallo.........next katege jai ho....
ಮಹಬಲಗಿರಿ ಭಟ್ಟರೆ..
ಹೆಂಡತಿ.. ಮಕ್ಕಳು ಜೊತೆಯಾದ ಮೇಲೆ...
ಅಣ್ಣ ತಮ್ಮಂದಿರ ಬಾಂಧವ್ಯ ಮೊದಲಿನಂತೆ ಇರಲಿ ಎನ್ನುವದು ಆಶಯ...
ಇದಕ್ಕೂ ತುಂಬಾ ಉದಹರಣೆಗಳಿವೆ...
ಅದರೂ ಹಿರಿಯರು ಗಾದೆ ಹೇಳುತ್ತಾರೆ...
"ಹುಟ್ಟುತ್ತ... ಹುಟ್ಟುತ್ತ,... ಸಹೋದರರು...
ಬೆಳೆದಂತೆ.. ದೊಡ್ಡವರಾದಂತೆ... "ದಾಯಾದಿಗಳು" !!
ಕಥೆ ಬರೆದಾದ ಮೇಲೆ ನಿಮಗೂ.. ದಿಗ್ವಾಸ್ ಅವರಿಗೂ ಕಳುಹಿಸಿ ಕೊಟ್ಟಿದ್ದೆ...
ನೀವು ಹೇಳಿದ ಬದಲಾವಣೆ ಮಾಡಿದ್ದೇನೆ...
ನಿಮ್ಮ ಪ್ರೀತಿಗೆ... ಸ್ನೇಹಕ್ಕೆ ವಂದನೆಗಳು... ಜೈ ಹೋ !
ಓಮ್ ಪ್ರಕಾಶ್...
ಅಣ್ಣ.. ತಮ್ಮಂದಿರುಗಳಲ್ಲಿ ಹಿರಿಯ ಅಣ್ಣ ಬಹಳ ತ್ಯಾಗ.. ಮಾಡ ಬೇಕಾಗುತ್ತದೆ...
ಕುಟುಂಬಕ್ಕಾಗಿ ಬಹಳ ಸೇವೆಯನ್ನೂ ಮಾಡಬೇಕಾಗುತ್ತದೆ..
ಇದೆಲ್ಲ ಹೇಗೆ ಗೊತ್ತಾಯಿತು ಅಂತೀರಾ?
ನಮ್ಮನೆಯಲ್ಲಿ ನಾನು ಕಿರಿಯವನು...
ನನ್ನ ಅಣ್ಣ ನನ್ನ ಓದಿಗಾಗಿ ಮುರಿಯಾಳು ಕೆಲಸ ಮಾಡಿದ್ದಾರೆ...
ಅಂದರೆ
"ನಾನು ನಿಮ್ಮನೆಗೆ ಕೆಲಸಕ್ಕೆ ಬರುತ್ತೇನೆ...
ನಮ್ಮನೆ ಕೆಲಸಕ್ಕಾಗಿ ನೀವು ನಮ್ಮನೆಗೆ ಬನ್ನಿ"
ಕೂಲಿ ಸಮಸ್ಯೆ ಇರುವ ನಮ್ಮ ಹಳ್ಳಿಯಲ್ಲಿ ಇಂದಿಗೂ ಈ ಪದ್ಧತಿ ಇದೆ..
ನನ್ನ ಅಣ್ಣ ನನ್ನ ವಿದ್ಯಾಭ್ಯಾಸಕ್ಕಾಗಿ ಬೇರೆಯವರ ಮನೆಯಲ್ಲೂ ದುಡಿದಿದ್ದಾರೆ...
ನನ್ನ ತಂದೆಯವರು ಬಲುಬೇಗ ಇಹಲೋಕ ಬಿಟ್ಟು ಹೋಗಿದ್ದರಿಂದ...
ನನ್ನ ಚಿಕ್ಕಪ್ಪ ತಮ್ಮ ಎಷ್ಟೋ ಆಸೆಗಳನ್ನು ಬದಿಗಿಟ್ಟು...
ತನ್ನ ಅಣ್ಣನ ಮಕ್ಕಳ (ನಮ್ಮ) ಬದುಕಿಗಾಗಿ ದುಡಿದಿದ್ದಾರೆ...
ಇದೆಲ್ಲ ಈ ಕಥೆ ಬರೆಯಲು ಪ್ರೇರಣೆಗಳು...
ಸಂಬಂಧಗಳ...
ಬಾಂಧವ್ಯಗಳ ಮೂಲ ಬೇರುಗಳು ಯಾವಾಗಲು ಘಟ್ಟಿಯಾಗಿ..
ಆಳವಾಗಿ ಬೇರೂರಿರಬೇಕು......
ಆಗ ಬದುಕಿನಲ್ಲಿ ಬಹರವಸೆ...
ಕಷ್ಟವನ್ನು ಧೈರ್ಯವಾಗಿ ಎದುರಿಸುವ ಛಲ ಬರುತ್ತದೆ...
ಇರುತ್ತದೆ...
ಓಮ್ ಪ್ರಕಾಶ್ ಸರ್...
ನಿಜ ಇದು ಹೆಚ್ಚಿನ ಹಿರಿಯಣ್ಣನ ಕಥೆ...
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಹೌದಲ್ವಾ ಪ್ರಕಾಶಣ್ಣ,
ಎಲ್ಲರೂ ಅಂತಾರೆ, ಮದುವೆಯಾದ ಮೇಲೆ ಬದಲಾದೆ ಅಂತಾರೆ..... ನನಗೂ ಇದರ ಅನುಭವ ಆಗಿದೆ... ಅನುಭವಕ್ಕೆ ಬಂದ ಕೂಡಲೇ ಸರಿ ಪಡಿಸಿಕೊಂಡಿದ್ದೇನೆ.... ಎಲ್ಲರ ಮನೆಯ ಕಥೆ ಇದು... ಆದರೆ ಒಪ್ಪಿಕೊಳ್ಳಲು ಯಾರೂ ತರಾರಿರಲ್ಲ..... ವಿಚಿತ್ರ ಇದೇ..... ಎಲ್ಲರೂ ತಮ್ಮ ತಮ್ಮ ಕಣ್ಣಿನ ನೇರಕ್ಕೆ ನೋಡುತ್ತಿರುತ್ತಾರೆ.... ಮನ ತಟ್ಟುವ ಕಥೆ...... ಮನ ತಟ್ಟಿದೆ.......
ಪ್ರಗತಿ...
ಮದುವೆಯ ಸಂಬಂಧ ಮತ್ತು ಒಡಹುಟ್ಟಿದವರ ಬಾಂಧವ್ಯ..
ಎರಡನ್ನೂ ಚೆನ್ನಾಗಿ ನೋಡಿಕೊಂಡು ಹೋಗುವವರು ಬಹಳಷ್ಟು ಜನ ಸಿಗುತ್ತಾರೆ..
ಸ್ವಲ್ಪ ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳುವ ಸ್ವಭಾವ ಇರಬೇಕಷ್ಟೇ...
ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.. ಜೈ ಹೋ... !
ಪ್ರೀತಿಯ ಮಹೇಶ..
ಕೆಲವು ಸಂದರ್ಭಗಳು ಹಾಗೆಯೇ ಇರುತ್ತೇವೆ..
ನಾವೇನೋ ಯೋಚಿಸಿಕೊಂಡು ಹೋಗಿರುತ್ತೇವೆ...
ಆದರೆ ಅಲ್ಲ ಘಟಿಸುವದೇ ಬೇರೆ..
ಇಲ್ಲಿ ಹುಡುಗನ ದೊಡ್ಡಪ್ಪನಿಗೆ ಆದ ಹಾಗೆ...
ಪ್ರತಿಯೊಬ್ಬರ ಅಂತರಂಗದ "ಒಳ್ಳೆಯವ" ಜಾಗ್ರತನಾದರೆ ಎಷ್ಟು ಒಳ್ಳೆಯದಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಲ್ಲದೆ...
ನಿಮ್ಮ ಗೆಳೆಯರೊಡನೆ ಹಂಚಿಕೊಂಡಿದ್ದಕ್ಕೆ.. ಪ್ರೋತ್ಸಾಹಕ್ಕೆ ತುಂಬಾ ತುಂಭಾ ಧನ್ಯವಾದಗಳು...
ಅನಿಲ...
ತುಂಬಾ ಚಂದವಾದ ಪ್ರತಿಕ್ರಿಯೆ..
ಪಿತ್ರಾರ್ಜಿತ ಆಸ್ತಿಯಲ್ಲಿ ಸಿಕ್ಕಿದಷ್ಟು "ಪಾಲು" ಕಿತ್ತುಕೊಂಡು ಬನ್ನಿ ಅಂತ ಪತ್ನಿ ಹೇಳೀದ್ದಳು..
ಇವನು ತಂದಿದ್ದು.. ಕೂಡ ಪಿತ್ರಾರ್ಜಿತ ಆಸ್ತಿಯೇ...
ಆದರೆ ಬೆಲೆ ಕಟ್ಟಲಾಗದಷ್ಟು ಮೌಲ್ಯದ್ದು...
ತಮ್ಮವರ ಪ್ರೇಮ.. ವಾತ್ಸಲ್ಯದ ಮುಂದೆ "ಆಸ್ತಿಗೆಷ್ಟು" ಬೆಲೆ?
ಅನಿಲ ...
ಪ್ರೀತಿಯ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ !
ಆಜಾದು...
ಮಕ್ಕಳ ಮಾತಿನ ಮೋಡಿಗೆ ಸಿಲುಕದವರ್ಯಾರು?
ದೊಡ್ಡವರಾಗುತ್ತ.. ನಾಗರಿಕರಾಗುತ್ತ...
ಆ ಮುಗ್ಧತೆಯನ್ನು ಕಳೆದುಕೊಂಡು...
ಅದೇ ಮುಗ್ಧತನವನ್ನು ಮೆಚ್ಚಿಕೊಳ್ಳುವ.. ಅಂತರಂಗದಲ್ಲಿ ಇಷ್ಟಪಡುವ ನಮ್ಮಂಥವರ ಮನಸ್ಥಿತಿಯೇ ಅಂಥಾದ್ದು... !
"ಮಗು ತುಂಬಾ ಇಷ್ಟವಾಗಿಬಿಡುತ್ತದೆ.."
ಪಿತ್ರಾರ್ಜಿತ ಆಸ್ಥಿಯಲ್ಲಿ "ಪಾಲು" ತರಲು ಬಂದವನಿಗೆ ಸಿಕ್ಕಿದ್ದೇನು?
ಬೆಲೆ ಕಟ್ಟಲಾಗದ "ಪಾಲು" ಅಲ್ಲವೆ?
ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಜೈ ಹೋ...
ಧನ್ಯವಾದಗಳು...
ಪ್ರಕಾಶ್ ಸರ್......,
ನಿಮ್ಮ ಅಷ್ಟೂ ಕಥೆ ಚಿತ್ರ ರೂಪದಲ್ಲಿ ನನ್ನ ಮನಸಿನಲ್ಲಿ ಮೂಡಿ ಬ೦ದಿತು.....ಮನ ಕಲಕುವ ಸ೦ದರ್ಭ..ಚೆನ್ನಾಗಿದೆ ಮು೦ದುವರೆಸಿ......ಈ ಕಥೆ ನಿಮ್ಮ ಬ್ಲಾಗ್ ನ ಹೆಸರಿನ೦ತೆಯೇ ಇದೆ.....ಮನುಷ್ಯನ ಮನಸ್ಸು ಕೆಲವೊಮ್ಮೆ 'ಇಟ್ಟಿಗೆ ಸಿಮೆ೦ಟಿನಷ್ಟೇ' ಕಠಿನವಿದ್ದರೂ 'ಸೆ೦ಟಿಮೆ೦ಟಿ' ಗೆ ಕರಗಿ ನೀರಾಗುತ್ತದೆ ಅಲ್ಲವೇ,....!!!
ಪ್ರೀತಿಯ ವಿಜಯೇಂದ್ರ.
ಬಾಂಧವ್ವ್ಯಕ್ಕೆ ಬೆಲೆ ಕೊಡದೆ.. ಬರಿ ಆಸ್ಥಿಪಾಸ್ತಿಗಾಗಿ ಇರುವ ಸಂಬಂಧವನ್ನು ಮುರಿದುಕೊಳ್ಳುವದೇ.. ಜಾಸ್ತಿಯಾಗಿದೆ..
ದರ ಬೇಂದ್ರೆಯವರ ಹಾಡು ನೆನಪಾಗುತ್ತಿದೆ..
"ಕುರುಡು ಕಾಂಚಾಣ ಕುಣಿಯುತಲಿತ್ತೋ..
ಕಾಲಿಗೆ ಬಿದ್ದವರ ತುಳಿಯುತಲಿತ್ತೋ.."
ಪ್ರತಿಕ್ರಿಯೆಗೆ ಧನ್ಯವಾದಗಳು..
Good narration Daada... Keep up the good work :)
ಶುಭಾ..
ಒಳ್ಳೆಯತನಕ್ಕೆ "ದಡ್ಡತನದ" ಪಟ್ಟಿ ಹಚ್ಚುವವರೇ ಜಾಸ್ತಿ..
ಇದು ನಿಜ..
ಒಳ್ಳೆಯತನ ಲಾಭ ಪಡೆಯುವವರೂ ಜಾಸ್ತಿ..
ಎಲ್ಲದುದಕ್ಕಿಂತ ಬೇಕಾಗಿರುವದು ಬಂಧುಗಳ ಒಡನಾಟ..
ಎಲ್ಲವೂ ಇದ್ದು ಜನರನ್ನುಗಳಿಸದೇ ಏನು ಪ್ರಯೋಜನ..
ತುಂಬಾ ಚಂದದ ಪ್ರತಿಕ್ರಿಯೆ.. ಧನ್ಯವಾದಗಳು..
ಬರುತ್ತಾ ಇರಿ..
ಚಿತ್ರಾ...
ಅಪರೂಪಕ್ಕೆ ಅಪವಾದಗಳು ಸಿಗುತ್ತವೆ..
ನಮ್ಮೂರಿನಲ್ಲೇ ಇಂಥಹ ನಾಲ್ಕಾರು ಘಟನೆಗಳಿವೆ..
ಇಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡು..
ಕಷ್ಟಪಟ್ಟು ದುಡಿದು ತಿನ್ನುವ ಮನೆಯವರ "ಎರಡು ಎಕರೆ" ಪಿತ್ರಾರ್ಜಿತ ಆಸ್ತಿಯ" ಮೇಲೆ ಆಸೆ.. !
ನಿಜಕ್ಕೂ ಬೇಸರ ಹುಟ್ಟಿಸುತ್ತದೆ...
"ಹಣದ, ಆಸ್ತಿಯ ವಿಚಾರವನ್ನು ವ್ಯವಹಾರಿಕವಾಗಿ ನಿಭಾಯಿಸಿಕೊಂಡರೆ..
ಬಾಂಧವ್ಯವೂ ಚೆನ್ನಾಗಿರುತ್ತದೆ..."
ಸಧ್ಯದಲ್ಲಿಯೇ ಇನ್ನೊಂದು "ಸತ್ಯ" ಘಟನೆ ಆಧಾರಿತ ಕಥೆ ಬರೆಯುವ ವಿಚಾರವಿದೆ...
ಚಂದದ ಪ್ರತಿಕ್ರಿಯೆಗೆ..
ಸ್ಪೂರ್ತಿ ಕೊಡುವಂಥಹ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರತಿಕ್ರಿಯೆಗಳು ಉತ್ಸಾಹ ಕೊಡುತ್ತವೆ..
ಇನ್ನಷ್ಟು ಬರೆಯಲು ಪ್ರೇರಣೆ ಕೊಡುತ್ತದೆ..
ಮತ್ತೊಮ್ಮೆ ಧನ್ಯವಾದಗಳು..
ಜೈ ಹೋ.. !
yaavatto odidde.. aadre comment haakalu aagiralilla...
thumba chanda idhe prakashanna... aadre thumba aparoopa inthaha aNNandiru :(
Hmm.. maanaveeyateya munde berenu kanuvudilla.. nijavada kalakali iruvavarige.. nice one
Pravi
kathe tumbane chennagide... odisikondu hoyitu... heege bareyuttiri prakashanna...:)
ಸಂಬಂಧಗಳು ಈಗ ಸಂ- ಬಂಧ ಗಳಾಗುತ್ತಿವೆ. ಅತಿಯಾಸೆ, ಸ್ವಾರ್ಥ ಮನುಷ್ಯನ ಮನಸನ್ನು ದಿಕ್ಕು ತಪ್ಪಿಸುತ್ತವೆ. ಈ ರೀತಿಯ ದಿಕ್ಕುತಪ್ಪುವಿಕೆ ಹೆಚ್ಚಾಗಿ ಗಂಡಾಗಲಿ ಹೆಣ್ಣಾಗಲಿ ಮದುವೆಯ ನಂತರವೇ ಶುರುವಾಗುತ್ತವೆ. ಇದು ಕಾಕತಾಳಿಯನೋ ಏನೋ ಗೊತ್ತಿಲ್ಲ. ಮದುವೆಯಾದ ತಕ್ಷಣ ಮೊದಲು ಬರುವುದು ಸ್ವಾರ್ಥ, ನನಗೆ ನನ್ನ ಮಕ್ಕಳು ಹೆಂಡತಿಗೆ, ಉಳಿದರೆ ನನ್ನ ಮಮ್ಮಕ್ಕಳಿಗೆ ಹೀಗೆ...
ಕೆಲವರು ಇದಕ್ಕೆ ಅಪವಾದ. ಅವಿಭಕ್ತ ಕುಟುಂಬದಲ್ಲಿಯೇ ಇದ್ದು, ಆ ಮನೆಯ ಕರ್ತನ ಅಣತಿಯಂತೆ, ಆತನ ಸಲಹೆ ಸೂಚನೆಗಳನ್ನು ಚಾಚು ತಪ್ಪದಂತೆ ಪಾಲಿಸುತ್ತಾ ಒಂದಾಗಿ ಬಾಳುತ್ತಿರುವ ಸಂಸಾರಗಳು ಸಹ ಇವೆ. ಆದರೆ ಅವುಗಳು ಬೆರಳೆಣಿಕೆಯಷ್ಟು ಮಾತ್ರ. ನಮ್ಮ ಮುಂದಿನ ಪೀಳಿಗೆಗಾದರು ಈ ಅವಿಭಕ್ತ ಕುಟುಂಬ ಸ್ನೇಹ ಪ್ರೀತಿ ಭ್ರಾತ್ರತ್ವ ಇವುಗಳನ್ನು ಬೆಳಸಿ ಉಳಿಸಿಕೊಂಡು ಹೋಗುವಂತೆ ನಾವು ಮುನ್ನುಡಿಯನ್ನು ಹಾಕಿ ಬೆಳೆಸೋಣ.
ಪ್ರಕಾಶ್ಗೆ ಪ್ರಕಾಶೇ ಸಾಟಿ. ಚಿಕ್ಕ ಕತೆ, ಒಳ್ಳೆ ಕತೆ. ಮನುಷ್ಯ ಸಂಬಂಧಗಳ ಮೇಲೆ ತುಂಬಾ ಚನ್ನಾಗಿ ಬರೆಯುತ್ತೀರಿ. ನಿಮ್ಮ ಈ ಸ್ಟೈಲನ್ನು ನೀವು ಪೇಟೆಂಟ್ ಮಾಡಿಸಿಕೊಳ್ಳಬೇಕು.
ಕಥೆ ತುಂಬ ಇಷ್ಟವಾಯಿತು ಪ್ರಕಾಶಣ್ಣ...
ಧನ್ಯವಾದಗಳು
ಸರ್,
ಕತೆ ತುಂಬಾ ಚೆನ್ನಾಗಿದೆ. ಮನುಷ್ಯನ ಬಗೆಗಿನ ಸಂಭಂದಗಳ ಬಗೆಗೆ ನೀವು ಬರೆದಿರುವ ವಿಚಾರಗಳು ಮನಸ್ಸಿನಲ್ಲಿ ಉಳಿಯುತ್ತವೆ. ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ..ಮುಂದುವರಿಸಿ....
ಪ್ರಕಾಶಣ್ಣ
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ತುಂಬಾ ಸುಂದರ ಕಥೆ
ಸಂಭಂಧಗಳೇ ಹೀಗೆ
ಬಿಡಲೂ ಹೋದರು ಬಿಡದೆ ನಮ್ಮೊಂದಿಗೆ ಇರುತ್ತವೆ
ಸುಂದರ ಕಥೆ
ಮನ ಮುಟ್ಟುವ ಬರಹ
ಒಂದು ಮಾತಿನಿಂದ, ಘಟನೆ ಇಂದ ಹಾಳಾಗುವ ಸಂಬಂಧ, ಅದು ಸಂಬಂಧವಲ್ಲ..ನಾವು ಭಾರತೀಯರು, ಕರುಣೆ, ಅಂತಃಕರಣಗಳಿಗೆ ಹೆಸರಾದವರು...ಅದು ನಮ್ಮ ರಕ್ತದಲ್ಲಿಯೇ ಇರುತ್ತದೆ...ನಿಮ್ಮ ಸಂಭಾಷಣೆಯ ಸರಪಳಿ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ....ಬೆಳೆಯಲಿ, ಉಳಿಯಲಿ ನಿಮ್ಮ ಕ್ರಿಯಾ ಶೀಲತೆ
very nice........ heart touching lines.
halavaaru bhaavanegaLannu sukshmavagi artha maDkoNDu bareeteera. you really make a very appealing story teller!
ತುಂಬಾ ಇಷ್ಟ ಆತು.. ದ್ವೇಷವನ್ನ ಪ್ರೀತಿಯಿಂದ ಗೆಲ್ಲಬಹುದು ಅನ್ನೋದಕ್ಕೆ ಈ ಕಥೆ ಪೂರಕ
ಅವತ್ತು ಪಾರ್ಲೆ -ಜಿ ಗಾಗಿ ಕಿತ್ತಾಡಿ ತಿನ್ನುವದರಲ್ಲಿದ್ದ ಖುಷಿ
ಇಂದು ನಾವೇ ಕೊಂಡು ತಿನ್ನುವದರಲ್ಲಿಲ್ಲ.....
ತುಂಬಾನೇ ಮಿಸ್ ಮಾಡುತ್ತೀನಿ ಕಳೆದು ಹೋದ ಬದುಕನ್ನ
ಇವತ್ತು ನಾವೆಲ್ಲ ಮುಖವಾಡ ಗಳು ಮಾತ್ರ ...
ನಾನು ನನ್ನದು ಬರೇ ಇದರಲ್ಲೇ ಕಳೆದು ಹೋಗುತ್ತಿದ್ದಿವಿ ..
ಎಲ್ಲಿ ಇದೇ ಮುಖವಾಡವೇ ನನ್ನ ಮುಖ ವಾಗುತ್ತಾ..
ನಗುವು ಕ್ರತಕವ? ಯೋಚನೆ ಶುರುವಾಯಿತು ...
ಸುಂದರ ವಾಗಿದೆ ಕತೆ ....
Tumba Chanda ide Prakashanna ...
Post a Comment