Saturday, March 19, 2011

ಹೆಸರು ಬದಲಾದರೆ.... ಮನುಷ್ಯ ಬದಲಾಗಿಬಿಡ್ತಾನಾ...?
ಈ ಶನಿವಾರ ಬಂತು ಅಂದ್ರೆ ನನ್ನಂಥವರಿಗೆ ಟೆನ್ಷನ್ ಜಾಸ್ತಿ..


ಕೆಲಸಗಾರರಿಗೆ..
ಸಪ್ಲೈದಾರರಿಗೆ ಹಣ ಕೊಡಬೇಕಲ್ಲ... !


ಪ್ರತಿವಾರ ಹಣ ಹೊಂದಿಸೋದು ...
ಲೆಕ್ಕಾಚಾರ ಮಾಡಿ ಅವರಿಗೆಲ್ಲ  ಹಣ  ಹಂಚೋದು ಸಣ್ಣ ವಿಷಯವಲ್ಲ...


ಫೋನ್ ಬಡ್ಕೋತಾ ಇದೆ....!


ಇನ್ಯಾರದ್ದೂ ಬರೋದಿಲ್ಲ...
ಮಾಮೂಲಿ  ಸಪ್ಲೈದಾರರು...!


" ಅಣ್ಣಾ...
ನಾಳೆ ಶನಿವಾರ... 
ವೀಕ್ನೆಸ್ಸೂ... 
ಅಶಕ್ತತೆ ಜಾಸ್ತಿ  ಆಗಿಬಿಟ್ಟಿದೆ......


ನಾಳೆ...ಸ್ವಲ್ಪ "ಟಾನಿಕ್ಕು"  ಸಿಗಬಹುದಾ?"


" ನಾಳೆ ಜ್ವರ ಬಂದವರಿಗೆ ಮಾತ್ರ ಔಷಧ...!
ಟಾನಿಕ್ಕು ಮುಂದಿನವಾರದ ಮಧ್ಯದಲ್ಲಿ.. !"


ಹಣ ವ್ಯವಸ್ಥೆ ಆಗದಿದ್ದಲ್ಲಿ ನಾನು ಕೊಡುವ ಉತ್ತರ ಇದು...


ಈ ವಾರವೂ .. ಹಣದ ವ್ಯವಸ್ಥೆ ಏನೂ ಆಗಿರಲಿಲ್ಲ....


 ಮತ್ತೆ ಫೋನ್ ಬಡ್ಕೋತಾ ಇದೆ.... !!


" ಆಡಿಸಿ ನೋಡು..
ಬೀಳಿಸಿ ನೋಡು ಉರುಳಿ ಹೋಗದು..." 


ಇದು ನನ್ನ  ಮೊಬೈಲ್ ರಿಂಗ್ ಟೋನ್...


ನಾನು ಫೋನ್ ತಗೊಂಡೆ...


" ಹಲೋ...."


ಅತ್ತ ಕಡೆಯಿಂದ ಯಾರದ್ದೋ ಅಪರಿಚಿತ ಸ್ವರ... !


"ಹಲೋ... 
ಸ್ವಾಮಿ...
ನಾನು  ಮಾತಾಡ್ತಿರೋದು..
ನಾನು ಹಣ ಕಳಿಸ್ತಾ ಇದ್ದೀನಿ..."


ನನಗೆ ಆಶ್ಚರ್ಯ.. !


"ಹಲೋ... ! 
ಯಾರು ತಾವು..?.. !!..
ಏನು ಹಣ ಕಳಿಸ್ತಾ ಇದ್ದೀರಾ..?.!!..."


"ಸ್ವಾಮಿ...
ತುಂಬಾ... ತಡ ಆಗೋಯ್ತು...!
 ಒಪ್ಕೋತೀನಿ...
ನನ್ನಿಂದ ತಪ್ಪಾಗಿದೆ..
ಮನಸ್ಸಲ್ಲಿ ಏನೂ ಇಟ್ಕೋಬೇಡಿ..
ಈಗ ಹಣವನ್ನು ಕಳಿಸ್ತಾ ಇದ್ದೀನಿ... 
ತಗೋಬಿಡಿ..."


ಎಲಾ ಇವರಾ... ! 


ಯಾರು ಇದು...? !!...


" ಸರ್.. 
ನಿವ್ಯಾರು ಅಂತ ಗೊತ್ತಾಗಲಿಲ್ಲ...
ಬಹುಷಃ ...
ರಾಂಗ್ ನಂಬರ್ ಇರಬಹುದು !"


"ಸ್ವಾಮಿ...
ನಿಮಗೆ ಬೇಜಾರಾಗಿದ್ದೂ.. ಸಹಜ...
ಬೇಕು ಅಂತ ಯಾರಾದ್ರು ತಪ್ಪು ಮಾಡ್ತಾರಾ...? 
ನೀವೇ.. ಹೇಳಿ..
ತಪ್ಪು ನನ್ನಿಂದ ಆಗಿದೆ.. ಹೊಟ್ಟೆಗೆ ಹಾಕ್ಕೊಳ್ಳಿ.."


ಹೊಟ್ಟೆಗೆ ಹಾಕ್ಕೊಂಡು .. ಹಾಕ್ಕೊಂಡು ಇಷ್ಟು ದೊಡ್ಡದಾಗಿ ಬಿಟ್ಟಿದೆ ನನ್ನ ಹೊಟ್ಟೆ...!


ಸ್ವಲ್ಪ ಕೋಪ ಬಂತು ನನಗೆ.....


" ರೀ...
ಯಾರ್ರಿ.. ನೀವು...?
ಯಾರಿಗೆ  ಫೋನ್ ಮಾಡ್ತಾ ಇದ್ದೀರಿ...?"


" ಸ್ವಾಮಿ...
ಇಷ್ಟು ವರ್ಷ ವ್ಯವಹಾರ ಮಾಡಿದಿನಿ...
ಇದೇ ಮೊದಲ ಬಾರಿಗೆ  ತಪ್ಪಾಗಿ ಬಿಟ್ಟಿದೆ...
ಕ್ಷಮಿಸಿ..
ಏನೋ ತೊಂದರೆ ಆಯ್ತು...
ನಮ್ಮ.... ನಿಮ್ಮ  ಸ್ನೇಹ ಹೀಗೆಯೇ ಮುಂದುವರಿಲಿ..."


ನನಗೆ ಪಿಕಾಲಾಟಕ್ಕಿತು...


ಕುತೂಹಲವೂ... ಜಾಸ್ತಿಯಾಯಿತು....!


"ಸರ್..
ಎಷ್ಟು  ಹಣ ಕಳಿಸ್ತಾ ಇದ್ದೀರಿ..?"


" ಇನ್ನೂ ಬೇಸರ ಇಳಿದಿಲ್ವಾ?
ಹೋಗ್ಲಿ ಬಿಡಿ...
ಪೂರ್ತಿಯಾಗಿ  ಹತ್ತು  ಲಕ್ಷ... !.. !!.."


ಈಗ ನನಗೆ ಸಣ್ಣಗೆ ಗಾಭರಿ ಆಗಲಿಕ್ಕೆ ಶುರುವಾಯಿತು...!


ಯಾರು ಇದು.? !


ನನಗೆ  ಹತ್ತು  ಲಕ್ಷ ಕೊಡುವ ಪಾರ್ಟಿ...!.. ??..


"ಸರ್...
ನಾನು  ಪ್ರಕಾಶ ಹೆಗಡೆ ಅಂತ...


ನಿಮಗೆ ಏನೋ.... ಸ್ವಲ್ಪ  ಗೊಂದಲ  ಆಗಿದೆ ಅಂತ ಅನ್ನಿಸ್ತಿದೆ...."


" ಅಯ್ಯೋ .. ಸ್ವಾಮಿ...!


ಹೆಸರು ಬದಲಾಯಿಸಿಕೊಂಡರೆ ಮನುಷ್ಯ ಬದಲಾಗಿ ಬಿಡ್ತಾನಾ...?


ನಿಮ್ಮ  ತಮಾಷೆ ನನಗೆ ಗೊತ್ತಿಲ್ವಾ...?


ತಪ್ಪಾಯ್ತು ಅಂದೇನಲ್ಲ.. ಕ್ಷಮೆ ಕೂಡ ಕೇಳ್ದೆ...


ಇನ್ನು ಸತಾಯಿಸ ಬೇಡಿ..
ಬೇಸರ ಏನೂ ಇಟ್ಕೊಳ್ದೇ.. ತಗೊ ಬಿಡಿ..."


ಇದೇನಪ್ಪಾ... !!..?..


ಯಾವ ಆಸಾಮೀ ಈತ... ?


" ಸರ್...


ಎಲ್ಲಿಗೆ ಕಳಿಸ್ತಾ ಇದ್ದೀರಿ...?


ಯಾರ ಸಂಗಡ ಕಳಿಸ್ತಾ ಇದ್ದೀರಿ...?"


"  ಇನ್ನೆಲ್ಲಿ ಕಳಿಸ್ತೀನಿ ಸ್ವಾಮಿ...
ನಿಮ್ಮ ಅಂಗಡಿಗೆ..ಕಳಿಸ್ತೀನಿ..
ನನ್ನ  ಮಗನೇ.. ಬರ್ತಾನೆ...


ನಿಮ್ಮ ಕೋಪ ಎಲ್ಲಾ ಸೇರ್ಸಿ ಅವನಿಗೂ  ಜೋರಾಗಿ ಬಯ್ದು ಬಿಡಿ...
ನೀವು ಒಂದು ಪೆಟ್ಟು ಕೊಟ್ರೂ.. ನನ್ನ ಮಗ  ಮಾತನಾಡಲ್ಲ..."


ಛೇ....!


ಈ ಮನುಷ್ಯನ ಹತ್ತಿರ ಇನ್ನು ಏನು ಮಾತಾಡುವದು...?


"ಆಯ್ತು... 


ಧಾರಾಳವಾಗಿ ಕಳ್ಸಿ... !!... !.."


ಬಹುಷಃ ... ಈಗ ಆತನಿಗೆ ಸಮಾಧಾನವಾಗಿರಬೇಕು...


"ಸ್ವಾಮಿ..
ಹೊಸಾ.. ಫಾರಿನ್ ಮಾಲು ಬಂದಿದೆ...
ಕಳಿಸ್ಲಾ...?.."


ಸ್ವಲ್ಪ ಸಣ್ಣ ಧ್ವನಿಯಲ್ಲಿ..
ಗುಟ್ಟಾಗಿ ಹೇಳುವಂತೆ...... ಕೇಳಿದ... !


ನನಗೆ ಮತ್ತೆ ಟೆನ್ಷನ್ ಶುರುವಾಯ್ತು...


"ಕಳ್ಸಿ...! 


ಸ್ವಾಮಿ... ಕಳ್ಸಿ...!


ಫಾರಿನ್.. ಮಾಲು..!!
ದೇಶೀ... ಮಾಲು...ಯಾವ ಮಾಲು ಇದ್ರೂ ಕಳ್ಸಿ...!


ಏನೇ.. ಮಾಲೂ.. ಇದ್ರೂ ಕಳ್ಸಿ... !"


ನನಗೂ ಕೋಪ ಬಂದಿತ್ತು...


ಗಂಟಲು ಹರಿದು ಹೋಗವ ಹಾಗೆ ಜೋರಾಗಿ ಹೇಳಿದೆ...


ಅಡಿಗೆ ಮನೆಯಿಂದ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡು ...
ನನ್ನ ಯಜಮಾನರು ಬಂದರು...


" ಏನ್ರೀ.....ಅದೂ...?
ಫಾರಿನ್.. ಮಾಲು?
ಏನು ವಿಷಯಾ...?


ಲಕ್ಷಣವಾಗಿ ಮನೆ ಕಟ್ಟೋದು ಬಿಟ್ಟು..
ಇದೇನೋ ಹೊಸ ದಂಧೆ ಶುರು ಮಾಡಿದ ಹಾಗಿದೆ...?"


ನನ್ನಾಕೆ ನನ್ನನ್ನೇ ದಿಟ್ಟಿಸಿ ನೋಡತೊಡಗಿದಳು..


ಕೆಲವೊಮ್ಮೆ  ನಾವು ಸರಿ ಇದ್ದರೂ ಹೆಂಡತಿಯನ್ನು ನೋಡಲಿಕ್ಕೆ ...
ಧೈರ್ಯ ಸಾಕಾಗುವದಿಲ್ಲ....


ಅವಳಿಗೆನೋ....


ಸಂಶಯ...??...
ಅನುಮಾನ... ??
ಸಂದೇಹ...!..?


ಒಮ್ಮೊಮ್ಮೆ ...
ಎಲ್ಲವೂ ಒಟ್ಟಿಗೇ .....ನನಗೇ...  ಯಾಕೆ  ವಕ್ರಿಸಿಕೊಳ್ಳುತ್ತವೆ....?


ಛೇ...!40 comments:

mahabalagiri said...

ಹೆಸರು ಬದಲಾದರೆ.... ಮನುಷ್ಯ ಬದಲಾಗಿಬಿಡ್ತಾನಾ?

ಪ್ರಕಾಶಣ್ಣಯ್ಯ ನೀನು ಬರೆಯುವ ಕಥೆಯಲ್ಲಿ ಸ್ವಲ್ಪ ಮಾತಿನ ಝಳಕ್.... ಮತ್ತೆ ನೀರೂಪಿಸುವ ಶೈಲಿಯಲ್ಲಿನ ಭಿನ್ನತೆ ಮತ್ತು ಸರಳತೆ ..... ಮತ್ತೆ ಕಥೆಯನ್ನ ನೇಯುವ ಕಲೆಗಾರಿಕೆ ಸಂಭಾಷಣೆಯ ಶೈಲಿ ............. ಇವೆಲ್ಲವೂ ಸೇರಿ ಜನರ ಮನದಲ್ಲಿ ಕಥೆಯು ಅಚ್ಚೊತ್ತಿನಿಲ್ಲಲು ಕಾರಣವಾಗುತ್ತದೆ

ಮುದ್ದಾದ ರಾಂಗ ನಂಬರ್ ಕಥೆ .....ಅಲ್ಲ ನಂ ಒನ್ ಕಥೆ

Ittigecement said...

ಪ್ರೀತಿಯ ಮಹಾಬಲ...

ಅದು ಯಾರು ಯಾರಿಗೆ ಹಣ ಕೊಡಬೇಕಾಗಿತ್ತೋ... ಏನೋ...?
ಅವರ ವ್ಯವಹಾರವೇನೋ ಗೊತ್ತಿಲ್ಲ...!

ಸ್ವಲ್ಪ ಹೊತ್ತು ನಾನಂತೂ ಗೊಂದಲಕ್ಕೀಡಾಗಿದ್ದೆ...

"ಅಂಗಡಿಗೆ.. ತನ್ನ ಮಗನ ಸಂಗಡ ಕಳುಹಿಸುತ್ತೇನೆ" ಅಂದಾಗ ನನಗೂ ಸಮಾಧಾನವಾಯಿತು..

ನನ್ನಾಕೆ ಹೇಳಿದರೂ ಮತ್ತೆ ಆ ಪಾರ್ಟಿಗೆ ಫೋನ್ ಮಾಡಲಿಲ್ಲ...

ರಾಂಗ್ ನಂಬರ್ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಪ್ರೋತ್ಸಾಹ ಹೀಗೆಯೇ.. ಇರಲಿ...

sunaath said...

ಪ್ರಕಾಶ,
ನಿಮ್ಮ ಕತೆಗಳಲ್ಲಿಯ ವಿನೋದ ಹಾಗು ರಹಸ್ಯಗಳ ಮೇಳ ಯಾವಾಗಲೂ ಮನಸ್ಸಿಗೆ ಖುಶಿ ಕೊಡುವಂತಹದು. ಮುಂದುವರೆಸಿ.

balasubramanya said...

ಹ ಹ ಹ ಪ್ರಕಾಶ್ ಅಣ್ಣ ಏನು ನಿಮ್ಮ ಬ್ಲಾಗಿನ ಮಹಿಮೆ. ಒಟ್ಟಿನಲ್ಲಿ ಯಾರೋ ಪಾಪ ನಿಮ್ಮನ್ನೇ ದೇವರೂ ಅನ್ಕೊಂಡು ದುಡ್ಡು ಕಳುಹಿಸಲು ನಿಮ್ಮ ಬಳಿ ಕ್ಸಮೆ ಕೋರಿದ್ದಾರೆ. ನಿಮ್ಮ ಪುಣ್ಯ ನಿಮ್ಮ ಕೆಲಸಗಾರರಿಗೆ ಇದು ಕೇಳಿಸಿಲ್ಲಾ!!!! ಪಾಪ ಅತ್ತಿಗೆ ಯಜಮಾನರ ಟೆನ್ಶನ್ ಗೆ ತಾವು ಕೊಡುಗೆ ನೀಡಿದ್ದಾರೆ. ಅದ್ಸರಿ ಫಾರಿನ್ ಮಾಲು ಬಂತಾ ??? ಎಲ್ಲಾ ಉಲ್ಟಾ ಪಲ್ಟಾ ಕಥೆ ಚೆನ್ನಾಗಿದೆ.

Ittigecement said...

ಸುನಾಥ ಸರ್...

ಯಾರದ್ದೋ ದುಡ್ಡು !!
ಯಾರಿಗೋ ಹೋಗ್ಬೇಕಿತ್ತು...!

ಅವರಿಗೇ.. ಹೋಗಿರ ಬಹುದು...!

ಮಧ್ಯದಲ್ಲಿ ನನ್ನಾಕೆಗೆ " ಫಾರಿನ್ ಮಾಲ್" ಬಗ್ಗೆ ವಿವರಣೆ ಕೊಡ ಬೇಕಾಗಿದ್ದು ನನ್ನ ದುರ್ದವ್ಯ...!

ಸರ್..

ನಿಮ್ಮ ಪ್ರೋತ್ಸಾಹಕ್ಕೆ ಅನಂತ ಕೃತಜ್ಞತೆಗಳು...
ಇನ್ನಷ್ಟು ಬರೆಯಲು "ಟಾನಿಕ್" ಥರಹ...
ಧನ್ಯವಾದಗಳು...

Anonymous said...

ರಾಂಗ್ ನಂಬರ್ ಕೂಡಾ ಉತ್ತಮ ಕಥಾ ವಸ್ತು... ಚೆನ್ನಾದ ನಿರೂಪಣೆ....

Anonymous said...
This comment has been removed by the author.
ಶುಭಾ:-) said...

ಹಹ್ಹಾ ಪ್ರಕಾಶಣ್ಣ ಕಥೆ ಚೊಲೋ ಇದ್ದು... ಆದ್ರೆ ಅವ್ರ ಲಕ್ ರಾಂಗ್ ನಂಬರ್ ಆದ್ರೂ ಸರಿಯಾದ ವ್ಯಕ್ತಿಗೆ ಮಾಡಿದ್ದ.. ಕೆಲವರು ಅದನ್ನ ರಾಂಗ್ ಆಗೇ ಉಪಯೋಗಿಸ್ಕತಿದ್ದ.. .. ನಿಮ್ಮ ಕಥೆಯಲ್ಲಿಯ ಸರಳತೆ ಅದರ ನಿರೂಪಣೆ ಮತ್ತು ಮತ್ತು ಇಷ್ಟ ಆಗ್ತು..

Deep said...

ಕಥಾವಸ್ತು , ನಿರೂಪಣೆ ಚನ್ನಾಗಿದೆ. ಕೊನೆಯವರೆಗೂ ಕುತೂಹಲ ಕಾಯ್ದುಕೊಂಡು ಬಂದಿರಿ ....
ನಿಜ ಹೇಳ್ಬೇಕು ಅಂದ್ರೆ, ಕಥೆ ಓದುತ್ತ ಓದುತ್ತ ಸ್ವಲ್ಪ ಕಳೆದು ಹೋಗಿದ್ದೆ..
ಯಜಮಾನ್ರ ಸೀನ್ ಬಂದ ಮೇಲೆ ವಾಸ್ತವಕ್ಕೆ ಬಂದೆ..

ಹಿಂಗೆ ಬತ್ತಾ ಇರ್ಲಿ!

ಓ ಮನಸೇ, ನೀನೇಕೆ ಹೀಗೆ...? said...

ಹ್ಹ ಹ್ಹ ಹ್ಹ ಕಥೆ ತುಂಬಾ ಇಷ್ಟವಾಯ್ತು ಪ್ರಕಾಶಣ್ಣ..ಈ ಥರ ರಾಂಗ್ ನಂಬರ್ ಕಥೆಗಳು ಕೇಳೋಕೆ ಮಾಜವಾಗಿರುತ್ವೆ. ಮತ್ತೆ ಯೆಜಮಾನ್ರು ಹೇಗಿದಾರೆ.:))

ಜಲನಯನ said...

ಪ್ರಕಾಶಾ, ಹೊಟ್ಟೆಗೆ ಹಾಕೊಂಡ್...ನೆಟ್ಟಗೆ ಕಳ್ಸೋರ್ ಇರ್ತಾರೆ..ಆದ್ರೆ ಮಾಲ್ ಯಾವ್ದು ಅನ್ನೋದನ್ನ ಬೇಗ ತಿಳ್ಸು...ನನಗೆ ಬರಬೇಕಾದ್ದು ನಿನ್ನ ಕಡೆ ರಾಂಗ್ ಡೈರೆಕ್ಟ್ ಆಗ್ತಾ ಇದ್ಯಾ ಅಂತ...ಡೌಟು..!!!!
ಯಾವ್ದಕ್ಕೂ ಉಸಾರು ಕಣಣ್ಣೋ...ಅಮ್ಯಾಕೆ ..ಫಾರಿನ್ ಮಾಲು ಅಂತ ಬಲ್ ಗಿಲ್ಯಾಕ್ ಬಿದ್ದೀಯಾ ಆಮ್ಯಾಕ್ಕೆ...ಹೂಂ... ಅತ್ಗ್ಯಮ್ಮ ಅಮ್ಯಾಕ್ಕೆ ಮಾಂಕಾಳ್ಯಮ್ಮ ಅಗ್ಬುಟ್ಟಾಳು...ಊಂ...

Ittigecement said...

ಬಾಲೂ ಸಾರ್...

ಅದೇನು ಕೇಳ್ತೀರಿ.. ಈ ಫಾರಿನ್ ಮಾಲಿನ ಬಗ್ಗೆ?
ನಾನು ಏನು ಹೇಳಿದ್ರು ಸಮಾಧಾನ ಆಗಬೇಕಲ್ಲ...!

ಆ ಪುಣ್ಯಾತ್ಮಾ ಏನು ವ್ಯಾವಹಾರ ಮಾಡ್ತಿದ್ನೊ.. ಏನೋ..?
ಅವನೊಂದಿಗೆ ಮಾತಾಡಿ ಮಾತಾಡಿ ತಲೆ ಕೆಟ್ಟು ಹೋಯ್ತು..

"ಫಾರಿನ್ ಮಾಲೊಂದೇ ಅಲ್ಲ..."
ಏನೇ ಮಾಲಿದ್ರೂ ಕಳ್ಸಿ ಸ್ವಾಮಿ" ಅಂತ ಕೂಗಿಬಿಟ್ಟಿದ್ದೆ...!

ನನ್ನ ಗ್ರಹಾಚಾರಕ್ಕೆ ನನ್ನಾಕೆಗೆ ಅದುಕೇಳಿಸಿ ಬಿಟ್ಟಿತ್ತು...!

ಕೆಲವೊಮ್ಮೆ ಪರಿಸ್ಥಿತಿಗಳು ನಮ್ಮ ನಿಯಂತ್ರಣದಲ್ಲಿ ಇರೋದಿಲ್ಲ ಬಿಡಿ...

ರಾಂಗ್ ನಂಬರ್ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Dr.D.T.Krishna Murthy. said...

ಪ್ರಕಾಶಣ್ಣ;ಫಾರಿನ್ ಮಾಲು ಬಂತಾ?ಪಾಪ ನೀವು ಇಂತದ್ದನೆಲ್ಲಾ ಹೊಟ್ಟೆಗೆ ಹಾಕಿಕೊಳ್ಳಬೇಕಲ್ಲಾ ಎನ್ನುವುದೇ ನನ್ನ ಚಿಂತೆ.

Ittigecement said...

ಶಾಲ್ಮಲಿಯವರೆ...

ನನ್ನ ಬ್ಲಾಗಿಗೆ ಸ್ವಾಗತ...

ನನಗಂತೂ ಈ ರಾಂಗ್ ನಂಬರ್ ಎಂದರೆ ಬಹಳ ಖುಷಿ...
ಮನಸೋ ಇಚ್ಛೆ ಮಾತನಾಡುತ್ತೇನೆ...

ಅವರೇ ಫೋನ್ ಮಾಡಿ "ನೀವ್ಯಾರು?" ಎಂದು ಕೇಳುವ ಜನರ ತಲೆ ತಿನ್ನುವದೆಂದರೆ ಬಹಳ ಖುಷಿ...

ರಾಂಗ್ ನಂಬರ್ ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸು...

ಪ್ರೋತ್ಸಾಹ ಹೀಗೆಯೇ ಇರಲಿ...

Chinnu said...

Superob Anna........Sakathagide... ..nem busy Schedulenalu edakella time ertheralla great.. Wrong number andre nemeg eshtha andidiralla ... en mele naneg baro wrong numbers nu nemege kalisthene..

ಚಿತ್ರಾ said...

ಉಹು ಉಹು ! ( ಗಂಟಲು ಸರಿ ಮಾಡ್ಕ್ಯತಾ ಇದ್ದಿ )
ಪ್ರಕಾಶಣ್ಣ , ಹೆಸರು ಬದಲಾಯಿಸಿಕೊಂಡು ಏನೋ ಹೊಸಾ ಬಿಸಿನೆಸ್ಸ್ ಶುರು ಮಾಡಿದಂಗೆ ಕಾಣಿಸ್ತಾ ಇದ್ದು . ಅದೂ " ಫಾರಿನ್ ಮಾಲು ' ಬೇರೆ !!! ಏನ್ಸಮಾಚಾರ?
ನಿಮ್ಮ "ಯಜಮಾನ್ರು" ಸೆರಗು ಬಿಗಿದದ್ರಲ್ಲಿ ಏನೇನೂ ಅನುಮಾನ ಇಲ್ಲ . ಮತ್ತೆ , ಈ ಬ್ಲಾಗ್ ಪಬ್ಲಿಶ್ ಆದ್ಮೇಲೆ ನಿಂಗೆ ಎಷ್ಟು ಫೋನ್ ಬಂತು ? " ಹೊಸಾ ಬಿಸಿನೆಸ್ಸ್ " ಇಂಪ್ರೂವ್ ಮೆಂಟಿಗೆ ? ಹಿ ಹಿ ಹಿ ...
ಓದಿ ಮಜಾ ಬಂತು

viju said...

ha...ha...mast maja iddo kathe....wordings ella super....

ಸುಧೇಶ್ ಶೆಟ್ಟಿ said...

ಒಳ್ಳೆ ಪಜೀತಿ :)

ಚೆನ್ನಾಗಿತ್ತು :)

Sandeep K B said...

ಪ್ರಕಾಶಣ್ಣ,
ನಿಮಗೂ ಕೂಪ ಬರುತ್ತೆ ಅಂತ ಗೊತ್ತಾಯ್ತು.
ತುಂಬಾ ಚೆನ್ನಾಗಿ WRONG ನಂಬರ್ , ನಿಬಾಯಿಸಿದ್ದೀರ .
ಆದ್ರೆ ಮನೇಲಿರೋ STRONG MEMBER ಹತ್ರ ಸಿಗಕೊಂದ್ರಲ್ಲ...
ಮುಂದಿನ ಸರಿ ಹೀಗೆ ಕಾಲ್ ಬಂದ್ರೆ
" ಆವಾ.......ಜ ನೀಚೆ "

ವೆಂಕಟೇಶ್ ಹೆಗಡೆ said...

ಹಾ ಹಾ ಪ್ರಕಾಶಣ್ಣ ... ತುಂಬ ಚೆನ್ನಾಗಿದೆ ,,, ಮುಂದೆ ????

ಚುಕ್ಕಿಚಿತ್ತಾರ said...

negyaadi negyaadi itti....:)

Ashok.V.Shetty, Kodlady said...

Prakashanna,

ha ha ha.....intaha anubhavagalannu keloke kushi aagutte. Wrong numbers galu kelavomme nammannu pechige sikkisihaakuttave, kelavomme olledu aagodu untu....Chennagide....jai ho...

Ittigecement said...

ಶುಭಾ...

ಇದ್ದಕ್ಕಿದ್ದಂತೆ ಒಬ್ಬ ಫೋನ್ ಮಾಡಿ..
ನಿಮಗೆ ಹತ್ತು ಲಕ್ಷ ಕಳಿಸುತ್ತಿದ್ದೇನೆ ಅಂದರೆ ನನ್ನ ಸ್ಥಿತಿ ಏನಾಗ ಬೇಡ?
ಆಅತ ಯಾರೋ ಏನೋ...?
ಅವರ ನಡುವೆ ಇದ್ದ ವ್ಯವಹಾರಗಳೇನೋ?

ನೀವು ರಾಂಗ್ ನಂಬರಿಗೆ ಫೋನ್ ಮಾಡಿದ್ದೀರಿ ಅಂದರೆ ನಂಬಲಿಕ್ಕೇ ತಯಾರಿಲ್ಲ ಆತ..!!

ನಾನು ಇನ್ನೇನು ಮಾಡಲಿ? "ಆಯಿತು ಕಳಿಸಿ ಮಾರಾಯರೆ.." ಅಂದೆ..

ಬಹುಷಃ ಸರಿಯಾದ ವಿಳಾಸಕ್ಕೇ ಹಣ ಹೋಗಿರುತ್ತದೆ ಬಿಡಿ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಪ್ರೀತಿಯ ದೀಪ್...

ಈ ರಾಂಗ್ ನಂಬರ್ ಬಳಿ ಮಾತಾಡುತ್ತಿದ್ದ ನನಗೆ ಅವನಿಂದ ಕಳಚಿಕೊಂಡರೆ ಸಾಕು ಅನ್ನಿಸಿಬಿಟ್ಟಿತ್ತು..
ಕೊನೆಗೆ ಈ ಸಂಭಾಷಣೆ ಮುಕ್ತಾಯವಾಯಿತು ಅಂದುಕೊಳ್ಳುವಷ್ಟರಲ್ಲಿ
"ಸರ್.. ಫಾರಿನ್ ಮಾಲಿದೆ ಕಳುಹಿಸಿ ಕೊಡ್ಲಾ?" ಅಂದಾಗ ಮತ್ತೆ ಕೋಪ ಉಕ್ಕಿತು !!

" ಎಲ್ಲಾನೂ .. ಫಾರಿ ಮಾಲು ಕಳ್ಸಿ ಮಾರಾಯ್ರೆ" ಅಂತ ಜೋರಾಗಿ ಕೂಗಿದೆ..

ಅಡಿಗೆ ಮನೆಯಲ್ಲಿದ್ದ ನನ್ನಾಕೆದೆ ಇದು ಕೇಳಿದ್ದು ದುರಾದೃಷ್ಟ...!

ಮತ್ತೆ ಅರ್ಧ ಗಂಟೆ ಅವಳಿಗೆ ..
"ಅದು ಹಾಗಲ್ಲ... ಇದು ಹೀಗಲ್ಲ..." ಅಂತ ವಿವರಣೆ ಕೊಡಬೇಕಾಗಿದ್ದು.. ಮತ್ತೊಂದು ದುರಾದ್ರಷ್ಟ...

ಲೇಖನವನ್ನು ಪ್ರೋತ್ಸಾಹಿಸಿದ್ದಕ್ಕೆ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಓ ಮನಸೇ.. ನೀನೇಕೆ ಹೀಗೆ...?

ಯಜಮಾನ್ರು ಯಜಮಾನಿಕೆ ಮಾಡ್ಕೊಂಡು ಹಾಯಾಗಿದಾರೆ..
ತೊಂದರೆ..
ಕಷ್ಟಗಳು ಏನಿದ್ದರೂ ನನ್ನಂಥವನಿಗೆ ಮಾರಾಯ್ರೆ...
ಯಾಕೆಂದರೆ "ಯಜಮಾನ ಯಾವಾಗಲೂ ಸರಿ" !!

ನಿಮ್ಮ ಮನೆಯಲ್ಲಿ ನೀವೇ ತಾನೆ ಯಜಮಾನರು...?

ರಾಂಗ್ ನಂಬರ್ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಜೈ ಹೋ !!

ಮನಸು said...

ಹಹಹ ಪ್ರಕಾಶಣ್ಣ ಏನು ಕಥೆ... ಚೆನ್ನಾಗಿದೆ ಯಾರೋ ಆಸಾಮಿ ಚೆನ್ನಾಗಿ ಮಾತಾಡಿದರೆ... ಹೆಸರು ಬದಲಾದರೆ ಮನುಷ್ಯ ಬದಲಾಗೋಲ್ಲ ನಿಜ..!!

Asha said...

prakashanna nimagu tension agatta..? sittu baratta..?

kathe chennagide...continue...

ಮನಮುಕ್ತಾ said...

ರಾ೦ಗ್ ನ೦ಬರ್ರಿನ್ ಕಥೆ..ಚೆನ್ನಾಗಿದ್ದು. :))..

geeta bhat said...

Haa Haa haa.....!! nimma pachiti keli nagu barta ide...nanentu oodi enjoy maddi...nice.

Gubbachchi Sathish said...

ಈ ರಾಂಗ್ ನಂಬರ‍್ಗಳು ಕೆಲವೊಮ್ಮೆ ನಮ್ಮವರು ರಾಂಗ್ ಆಗುವಂತೆ ಮಾಡುತ್ತವೆ. ನಾನೊಮ್ಮೆ ಇದೇ ರೀತಿ ಒಸಮಾ ಬಿನ್ ಲಾಡೇನ್ ಆಗಿದ್ದೆ.

ಅನಿಲ್ ಬೇಡಗೆ said...

ಪ್ರಕಾಶ್ ಮಾಮ,
ಏನಿದು....? ಹ ಹ ಹ...
ಫಾರಿನ್ ಮಾಲ್....!?
ಅಯ್ಯೋ.. ಹ ಹ ಹ..
ಪಾಪ ನಿಮ್ಮ ಪರಿಸ್ತಿತಿ ಹೆಂಗಿತ್ತೋ ಏನೋ..
"ಕಂಫುಸಿಯನ್ ಕಾಲು, ಫಾರಿನ್ ಮಾಲು..
ನಿಮ್ಮ ತಲೆ ಕಿಡಿ ಕಿಡಿ, ಒಳ್ಳೆ ಕಾಮಿಡಿ.. "
ಹ ಹ, ಮಸ್ತ್..

ದಿನಕರ ಮೊಗೇರ said...

ಹ್ಹ ಹ್ಹಾ...
ನಿರೂಪಣೆ ಚೆನ್ನಾಗಿದೆ ಪ್ರಕಾಶಣ್ಣ..... ನನಗೂ ಇನ್ಥಹ ಅನುಭವ ಆಗಿದೆ..... ಆದ್ರೆ ಫಾರಿನ್ ಮಾಲಿನ ಬಗ್ಗೆ ಬಂದಿಲ್ಲ.... ಹ್ಹ ಹ್ಹ....

PARAANJAPE K.N. said...

ಆಹಾ, ಪುಕ್ಸಟ್ಟೆ ಹಣ, ಫಾರಿನ್ ಮಾಲು.ಯಾರಿಗು೦ಟು ಯಾರಿಗಿಲ್ಲ. ಏನಿದು ಗೋಲ್ಮಾಲು? ಚೆನ್ನಾಗಿದೆ ಪ್ರಕಾಶರೆ. ಓದಿ ನಗುವ ಸರದಿ ನನ್ನದಾಗಿತ್ತು.

SpoorthyMurali said...

yaava topic sikkaru tamasheyagi, nirargaLavaagi bariya balliri! ur writings are really revitalizing :)

ತೇಜಸ್ವಿನಿ ಹೆಗಡೆ said...

Interesting :)ಮುಂದಿನ ಭಾಗ ಯಾವತ್ತು ಪ್ರಕಾಶಣ್ಣ? :)

ಅಂದ ಹಾಗೆ.. ನಂಗೂ ಎಷ್ಟೋ ಸಲ ಅನ್ನಿಸಿದ್ದು.. ಹೀಗೇ...

ಒಮ್ಮೊಮ್ಮೆ ...ಎಲ್ಲವೂ ಒಟ್ಟಿಗೇ .....ನನಗೇ... ಯಾಕೆ ವಕ್ರಿಸಿಕೊಳ್ಳುತ್ತವೆ....? ಛೇ...!

ಕಾವ್ಯಾ ಕಾಶ್ಯಪ್ said...

prakashanna, nimma baravanigeya saralate, ella lekhanadalliruva kutoohala, odisikondu hoguva aa shaili... ellavoo ee lekhanadallo munduvaredide....
chennagide...

AntharangadaMaathugalu said...

ಹ್ಹ ಹ್ಹ... ಪ್ರಕಾಶ್ ಸಾರ್...

ಹೆಸರು ಬದಲಾದರೆ... ಮನುಷ್ಯ ಮಾತ್ರ ಬದಲಾಗೊದಲ್ಲ... ಇಲ್ಲಿ ನಿಮ್ಮ ಕಥೆಯಲ್ಲಿ... ವ್ಯವಹಾರ ಕೂಡ ಬದಲಾದಂತೆ ಕಾಣುತ್ತೆ. ಮುಂದಿನ ಭಾಗ ಯಾವಾಗ ಹಾಕ್ತಿರ? ಮಡದಿಗೆ ವಿವರಣೆ ಕೊಡುವಂತಹ ಪರಿಸ್ಥಿತಿಯಲ್ಲೂ.. ನಿಮ್ಮ ಹಾಸ್ಯ ಪ್ರಜ್ಞೆ ಸಕತ್ತಾಗೆ ಕೆಲಸ ಮಾಡುತ್ತೆ... :-)

ಶ್ಯಾಮಲ

SATHYAPRASAD BV said...

ಪ್ರೀತಿಯ ಪ್ರಕಾಶ್, ನಿಮ್ಮ ರಾಂಗ್ ನಂಬರ್ ಪ್ರಹಸನ ತುಂಬಾ ಚೆನ್ನಾಗಿದೆ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.

KalavathiMadhusudan said...

prakaash ravare,raang namber shaili chennaagide.vandanegalu.

ಕನಸು ಕಂಗಳ ಹುಡುಗ said...

ಪ್ರಕಾಶಣ್ಣಾ ತುಂಬಾ ಮಜಾ ಬಂತೋ ಓದ್ಲೆ....
ಕೊನೆವರೆಗೂ ಕುತೂಹಲ ಿದ್ದಿತ್ತು ಇವ ಏನ್ ಹೇಳ್ತಾ ಅಂತ......

ಕೊನೆಗೆ ಮಾತ್ರ ಸಕತ್ ನಗು ಬಂತು ನಂಗೋಕೆಲ್ಲಾ....
ಪ್ರಕಾಶಣ್ಣಂಗೇ ಎಂತಕ್ಕೆ ಎಲ್ಲಾ ವಕ್ಕರಿಸಿಕೊಳ್ತು ಹೇಳಿ....

ಹ್ಹ ಹ್ಹ ಹ್ಹಾ......