ನಲ್ಲನ ಬರುವಿಕೆಗೆ ಕಾದು ಕುಳಿತಿಹೆ
ಘಂಟೆಗಳು ಉರುಳುತಿದೆ
ರವಿಯ ಕಿರಣ ಸರಿಯುತಿದೆ
ಬರದ ನಲ್ಲನಿಗೆ ಮನಸು ಕಾಯುತಿದೆ.....
ಸಂಜೆ ನೆರಳು ನೀರೊಳು ಬೆರೆತು
ಅಲೆಯ ಉಂಗುರಕೆ ಸೇರಿತು
ಹೊತ್ತು ಕಳೆದರು ಏಕೋ ಕಾಣಲಿಲ್ಲ
ನನ್ನಿಯನ ಹೆಜ್ಜೆ ಗುರುತು....
ಪ್ರಜ್ವಲಿಸಿ ಬಿಂಬಿಸುವ ಮುಖ ಬಾಡಿ
ಬೇಸರಿಸಿದರೂ ಕೂತ ಬಂಡೆಯಲೆ
ನಿನ್ನೆಸರ ಕೆತ್ತಿ ಚಿತ್ರಿಸಿದೆ ಈ ನನ್ನ ಬೆರಳು
ಇದ ನೋಡಲೊಮ್ಮೆ ಇತ್ತ ನೀ ಮರಳು......
ನಿನ್ನೆಸರ ಪಟಿಸುವ ನನ್ನೀ ಹೃದಯ
ಒದ್ದೆಯಾಗದಂತಿರಲು ಬಾ ನನ್ನಿಯ....
ಕಣ್ಣ ಹನಿ ನೀರ ಅಲೆಯಾಗುವ ಮುನ್ನ
ನಲ್ಲ ನೀ ಬಂದು ಸೇರಿ ಬಿಡು ನನ್ನ
(ಕವಯಿತ್ರಿ.. ಶ್ರೀಮತಿ ಸುಗುಣಾ ಮಹೇಶ್)
ಇಳಿಸ೦ಜೆ ಹೊತ್ತಿನಲ್ಲಿ, ಇನಿಯನ ನೆನಪಿನಲಿ
ನೀರ ಅಲೆಗಳ ಕಲಕಿ ಏನ ನೀ ಹುಡುಕುತಿಹೆ
ಹೊನ್ನಬಣ್ಣದ ನೀರು ತ೦ಪೆರೆವ ತ೦ಗಾಳಿ
ಮನಕೆ ಮುದ ನೀಡುತಿದೆ ಹಿತಮಿತದ ಚಳಿಯು
ಎಲ್ಲಿ ನೀ ಕು೦ತಿರುವೆ ಯಾರ ನೀ ಕಾಯುತಿಹೆ
ನೀರ ಕಲರವದಲ್ಲಿ ನೋವುಗಳ ಮರೆತು
ನೆನಪಿನ೦ಗಳದಲ್ಲಿ ನೂರು ಕಾಮನೆ ಮೆರೆದು
ಬಚ್ಚಿಟ್ಟ ಭಾವಗಳ ಮೊಗೆದು ಸುರಿದು
ನೀರಿನೋಕುಳಿಯಲ್ಲಿ ಮನಭಾವವದು ಅರಳಿ
ನೆನಪಿಸಿವೆ ಯೌವ್ವನದ ನೆನಪ ಸುರುಳಿ
ನೀರ ಪುಳಕವನು೦ಡು ಬಿಟ್ಟು ಬಿಗುಮಾನವನು
ಒ೦ದಾಗು ನಲ್ಲನಲಿ ಮರೆತೆಲ್ಲ ದುಗುಡ..
ನೀರ ಅಲೆಗಳ ಕಲಕಿ ಏನ ನೀ ಹುಡುಕುತಿಹೆ
ಹೊನ್ನಬಣ್ಣದ ನೀರು ತ೦ಪೆರೆವ ತ೦ಗಾಳಿ
ಮನಕೆ ಮುದ ನೀಡುತಿದೆ ಹಿತಮಿತದ ಚಳಿಯು
ಎಲ್ಲಿ ನೀ ಕು೦ತಿರುವೆ ಯಾರ ನೀ ಕಾಯುತಿಹೆ
ನೀರ ಕಲರವದಲ್ಲಿ ನೋವುಗಳ ಮರೆತು
ನೆನಪಿನ೦ಗಳದಲ್ಲಿ ನೂರು ಕಾಮನೆ ಮೆರೆದು
ಬಚ್ಚಿಟ್ಟ ಭಾವಗಳ ಮೊಗೆದು ಸುರಿದು
ನೀರಿನೋಕುಳಿಯಲ್ಲಿ ಮನಭಾವವದು ಅರಳಿ
ನೆನಪಿಸಿವೆ ಯೌವ್ವನದ ನೆನಪ ಸುರುಳಿ
ನೀರ ಪುಳಕವನು೦ಡು ಬಿಟ್ಟು ಬಿಗುಮಾನವನು
ಒ೦ದಾಗು ನಲ್ಲನಲಿ ಮರೆತೆಲ್ಲ ದುಗುಡ..
( ಕವಿ.. ಶ್ರೀ. ಪರಾಂಜಪೆ)
ಮೌನರಾಗ
ಶಾಂತ ನಾ ಏಕಾದೆ
ಕಾಡಿತೇ ನನಗೇಕಾಂತ ?
ಮನದ ಗ್ಲಾನಿಯ ಹರಳು
ನಿಂತ ನೀರಲಿ ಸಣ್ಣ ನವಿರಲೆ
ಮೌನಮಾನಸದಲ್ಲಿ ಇರುಳು
ಕರುಳಹಿಂಡುಯಾತನೆ ಬಲು
ಪೀಡಿಸೋ ದುಗುಡ, ಎಲ್ಲಿ? ಏಕೆ?
ಹೀಗೆ ಇನಿಯನ ಕಾಣದೆ ದಿಗಿಲು?
ಬರುವನೆಂದು ಇಡೀ ದಿನಕಾದೆ
ಬಂದಂತೆ ಮಾಯವಾದ ನೆಳಲು
ತಾಪದ ಒಂದು ದಿನದ ನಿರೀಕ್ಷೆ
ಏಕೆ ಈ ಪರಿ ತಪಿತ ಪರೀಕ್ಷೆ ?
ಅಸಹಜವಲ್ಲ ವನಿತೆಗಿದು
ತ್ರೇತಾ ಸೀತೆಗಂದು ಹದಿನಾಲ್ಕು
ದ್ರೌಪದಿಗಾಯ್ ತು ಹನ್ನೆರಡು
ಶಬರಿಯೋ ಸಹನೆಯೇ ಮೂರ್ತಿ
ನನ್ನದು ಆಗಲಿಲ್ಲ ದಿನವಿನ್ನೂ ಪೂರ್ತಿ
ಹೌದು ಅಲೆಯೆದ್ದು ಮತ್ತೆ ಶಾಂತ
ನಿಂತನೀರಿಗೆ ಆಗಿ ಇದು ನಿರಂತ
ನಾನೂ ಕಲಿಯಬೇಕು ಹೀಗೇ
ಹಿಗ್ಗಿನಲಿ ಹಿಗ್ಗುತ ಮ್ಲಾನದಿ ತಗ್ಗುತ
ಅಲೆ ನಿಂತಲೆ ಮಾನಸ ಶಾಂತ
(ಕವಿ.. ಜಲನಯನ(ಆಜಾದ್ )
ನೀರೆ ಯಾಕೆ ನೀರಮೇಲೆ ಮೋಹ ಹುಟ್ಟಿದೆ
ನೀರಿನಲ್ಲಿ ನಿನ್ನ ಬಿಂಬ ಹುಡುಕುವಾಸೆಯೇ
ನೀರಿನಲ್ಲಿ ಮತ್ಸ್ಯ ನಡೆಯ ಜಾಡು ಹಿಡಿದರೂ
ನಿನ್ನ ಮನದ ತಪನೆ ಮಾತ್ರ ಯಾರು ತಿಳಿಯರು
ಚಂಚಲಾಂಗಿ ವಾರಿ ನೋಡಿ ಭಾರಿ ಮೋಹವೇ
ಸುತ್ತಿಬರುವ ಸುಳಿಯ ಒಮ್ಮೆ ನೋಡುವಾಸೆಯೇ
ಸರಸಿಯಲ್ಲಿ ಏಳ್ವ ಅಲೆಯು ಲೆಕ್ಕ ಸಿಕ್ಕರೂ
ಸರಸಿಜಾಕ್ಷಿ ನಿನ್ನ ಭಾವ ಯಾರು ಬಲ್ಲರು?
ನೀರಿನಲ್ಲಿ ನಿನ್ನ ಬಿಂಬ ಹುಡುಕುವಾಸೆಯೇ
ನೀರಿನಲ್ಲಿ ಮತ್ಸ್ಯ ನಡೆಯ ಜಾಡು ಹಿಡಿದರೂ
ನಿನ್ನ ಮನದ ತಪನೆ ಮಾತ್ರ ಯಾರು ತಿಳಿಯರು
ಚಂಚಲಾಂಗಿ ವಾರಿ ನೋಡಿ ಭಾರಿ ಮೋಹವೇ
ಸುತ್ತಿಬರುವ ಸುಳಿಯ ಒಮ್ಮೆ ನೋಡುವಾಸೆಯೇ
ಸರಸಿಯಲ್ಲಿ ಏಳ್ವ ಅಲೆಯು ಲೆಕ್ಕ ಸಿಕ್ಕರೂ
ಸರಸಿಜಾಕ್ಷಿ ನಿನ್ನ ಭಾವ ಯಾರು ಬಲ್ಲರು?
(ಕವಿ.. ಶ್ರೀ. ಮಹಾಬಲಗಿರಿ ಭಟ್)
ಪಡುವಣಕೆ ರವಿ ಹೊರಟ
ಸುತ್ತೆಲ್ಲ ಮುಸ್ಸಂಜೆ ಮಬ್ಬು
ಮೆಲ್ಲ ಮೆಲ್ಲನೆ ಮೆಲ್ಲುತಿದೆ ಮನ
ನಲ್ಲ ನಿನ್ನ ನೆನಪ ಸಿಹಿ ಕಬ್ಬು
ತೊಡಿಸೆ ಕಾದು ಕುಳಿತಿಹೆನು
ಹೊನ್ನ ನೀರಿನಲೆಯ ಉಂಗುರ
ಮಿಡಿವ ಎದೆಯ ಮಿಡಿತವೆಲ್ಲ
ನಲ್ಲ ನಿನ್ನ ಹೆಸರ ಡಂಗುರ
ಕಾಯಲಾರೆ ಸಾಕು ಇನ್ನು
ವಿರಹದುರಿಯು ಸುಡುತಿದೆ
ತಾಳಲಾರೆ ಬೇಕು ನೀನು
ಆಡೋ ಮಾತು ನೂರಿದೆ..
(ಕವಿ.. ಶ್ರೀ. ದಿಲೀಪ್..)
ನೀ.. ನಿರದ..
ಈ..
ನೀರವದಲಿ....
ಗೆಳೆಯಾ...
ನಿನ್ನ
ನೆನಪಿನ
ಕಲರವ..
ನನ್ನ... ಹೃದಯದತುಂಬಾ...!
ಹೊತ್ತು ಮುಳುಗುವ ಹೊತ್ತು
ಇಬ್ಬನಿ ಜಾರುತಲಿತ್ತು
ಇನಿಯ
ನಾ ಕಾದೆ ನಿನಗಾಗಿ
ಈ ಲೋಕವ ಮರೆತು..........
ಯಾಕೋ ಮನದಲ್ಲಿ ಅಲೆಗಳು ಏಳುತಿವೆ
ನೆನಪುಗಳು ಬಹಳ ಕಾಡುತಿವೆ
ಕ್ಷಣವು ಉರುಳಿ ದಿನಗಳಾಗಿ
ದಿನಗಳು ಯುಗವಾಗುತ್ತಿದೆ
ಆದರೂ ನಿನ್ನ ನೆನಪು ಕಾಡುತಿದೆ........
ಯಾತನೆ ಯ ಸಹಿಸಲು ಆಗದ ಗಳಿಗೆ
ನೆನಪಾಯ್ತು ನಿನ್ನ ಪ್ರೀತಿ ಸಲುಗೆ
ನಿಂತ ನೀರಿಗೆ ಕಲ್ಲೆಸೆದು ನೀನು
ಹೊರಟು ಹೋದೆಯಲ್ಲ ದೂರ ದೂರಕೆ............... ...
ಕಾದಿರುವೆ ಗೆಳೆಯ ನೀ ಬರುವೆಯೆಂದು.......
ಬೈಗು ಹೊತ್ತಿನಲಿ ಹಾದಿಯ ಕಾದು
ಕುಳಿತಿಹೆ ನೂರಾರು ನೆನಪುಗಳ ಹೊತ್ತು
ಮರೆಯದಿರು ಎಂದೆಂದೂ ನಾ ನಿನ್ನ ಸ್ವತ್ತು............. ...
(ಕವಿ..ಪ್ರವೀಣ ಗೌಡ..)
"ಅಲೆ"
ಮುತ್ತು
ಮುನಿಸು
ಮುತ್ತಿಕ್ಕಿ
ಮುನಿಸಿಕೊಂಡು
ಮತ್ತೆ ಮುತ್ತಿಕ್ಕಿ
ಮತ್ತೆ...
ಮುತ್ತಿಕ್ಕುವ ಬಾಲೆ.... !
(ಕವಿ .. ಗುಬ್ಬಚ್ಚಿ ಸತೀಶ್)
ಕನಸುಗಳ ಕಾವಲಿದ್ದ
ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!
(ಕವಯಿತ್ರಿ.. ಸೌಮ್ಯಾ ಭಾಗವತ್.. )
ಹರಿಯುತ್ತಿದೆ ನದಿ ನಮ್ಮಿಬ್ಬರ ನಡುವಿನಲಿ...
ನಾನೊಂದು ದಡದಲ್ಲಿ, ನೀನೊಂದು ದಡದಲಿ.....
ಕುಳಿತಿರುವ ದಡದಲ್ಲಿ ದೋಣಿಯಿಲ್ಲ....
ಕಾಡುತಿರುವ ನೆನಪುಗಳಿಗೆ ಬರವಿಲ್ಲ......
ಬಿಕ್ಕಿದ್ದು, ಅತ್ತಿದ್ದು ಯಾರೂ ಕೇಳಲಿಲ್ಲ....
ನನ್ನೆದೆಯ ಪ್ರೀತಿ ತೇರು ನೀನೂ ಎಳೆಯಲಿಲ್ಲ...
ಕರಕಲಾದ ಕಣ್ಣೀರು ಕಾಣಿಸಲೇ ಇಲ್ಲ...
ನನ್ನ ಒಬ್ಬಂಟಿ ರಾತ್ರಿ ತಿಳಿಯಲೇ ಇಲ್ಲ...
ಹರಸಿಕೊಂಡ ಹರಕೆಗಳಿಗೆ ಲೆಕ್ಕವಿರಲಿಲ್ಲ...
ಸಲ್ಲಿಸಿದ ಕಾಣಿಕೆಗೆ ರಶೀತಿಯಿರಲಿಲ್ಲ..
ಜಾರಿಹೋದ ಹನಿಗಳ ಕುರುಹೇ ಇಲ್ಲ...
ನಿನ್ನನ್ನು ಮರೆತ ನೆನಪೇ ಇಲ್ಲ...
ನಿನ್ನನ್ನೇ ನೆನಪಿಸುತ್ತೇನೆ,
ಬಿಕ್ಕಳಿಕೆಗೆ ಮಾತ್ರ ಅರ್ಥವಾಗುವವರೆಗೂ....
ಕಾಯುತ್ತೇನೆ ನಿನ್ನನ್ನೇ,
ಮೊದಲ ನಕ್ಷತ್ರದ ಬೆಳಕಿನವರೆಗೂ....
ಕೊನೆಯದಾಗಿ....
ಎಲ್ಲರ ಪ್ರೀತಿಯೂ ತೀರ ಮುಟ್ಟಿದ್ದಿದ್ದರೆ......
ತಾಜ್ ಮಹಲ್ ಹುಟ್ಟುತ್ತಿರಲಿಲ್ಲ....
(ಕವಿ... ದಿನಕರ್ ಮೊಗೆರ...)
ಇಬ್ಬನಿ ಜಾರುತಲಿತ್ತು
ಇನಿಯ
ನಾ ಕಾದೆ ನಿನಗಾಗಿ
ಈ ಲೋಕವ ಮರೆತು..........
ಯಾಕೋ ಮನದಲ್ಲಿ ಅಲೆಗಳು ಏಳುತಿವೆ
ನೆನಪುಗಳು ಬಹಳ ಕಾಡುತಿವೆ
ಕ್ಷಣವು ಉರುಳಿ ದಿನಗಳಾಗಿ
ದಿನಗಳು ಯುಗವಾಗುತ್ತಿದೆ
ಆದರೂ ನಿನ್ನ ನೆನಪು ಕಾಡುತಿದೆ........
ಯಾತನೆ
ನೆನಪಾಯ್ತು ನಿನ್ನ ಪ್ರೀತಿ ಸಲುಗೆ
ನಿಂತ ನೀರಿಗೆ ಕಲ್ಲೆಸೆದು ನೀನು
ಹೊರಟು ಹೋದೆಯಲ್ಲ ದೂರ ದೂರಕೆ...............
ಕಾದಿರುವೆ ಗೆಳೆಯ ನೀ ಬರುವೆಯೆಂದು.......
ಬೈಗು ಹೊತ್ತಿನಲಿ ಹಾದಿಯ ಕಾದು
ಕುಳಿತಿಹೆ ನೂರಾರು ನೆನಪುಗಳ ಹೊತ್ತು
ಮರೆಯದಿರು ಎಂದೆಂದೂ ನಾ ನಿನ್ನ ಸ್ವತ್ತು.............
(ಕವಿ..ಪ್ರವೀಣ ಗೌಡ..)
"ಅಲೆ"
ಮುತ್ತು
ಮುನಿಸು
ಮುತ್ತಿಕ್ಕಿ
ಮುನಿಸಿಕೊಂಡು
ಮತ್ತೆ ಮುತ್ತಿಕ್ಕಿ
ಮತ್ತೆ...
ಮುತ್ತಿಕ್ಕುವ ಬಾಲೆ.... !
(ಕವಿ .. ಗುಬ್ಬಚ್ಚಿ ಸತೀಶ್)
ಕನಸುಗಳ ಕಾವಲಿದ್ದ
ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!
(ಕವಯಿತ್ರಿ.. ಸೌಮ್ಯಾ ಭಾಗವತ್.. )
ಹರಿಯುತ್ತಿದೆ ನದಿ ನಮ್ಮಿಬ್ಬರ ನಡುವಿನಲಿ...
ನಾನೊಂದು ದಡದಲ್ಲಿ, ನೀನೊಂದು ದಡದಲಿ.....
ಕುಳಿತಿರುವ ದಡದಲ್ಲಿ ದೋಣಿಯಿಲ್ಲ....
ಕಾಡುತಿರುವ ನೆನಪುಗಳಿಗೆ ಬರವಿಲ್ಲ......
ಬಿಕ್ಕಿದ್ದು, ಅತ್ತಿದ್ದು ಯಾರೂ ಕೇಳಲಿಲ್ಲ....
ನನ್ನೆದೆಯ ಪ್ರೀತಿ ತೇರು ನೀನೂ ಎಳೆಯಲಿಲ್ಲ...
ಕರಕಲಾದ ಕಣ್ಣೀರು ಕಾಣಿಸಲೇ ಇಲ್ಲ...
ನನ್ನ ಒಬ್ಬಂಟಿ ರಾತ್ರಿ ತಿಳಿಯಲೇ ಇಲ್ಲ...
ಹರಸಿಕೊಂಡ ಹರಕೆಗಳಿಗೆ ಲೆಕ್ಕವಿರಲಿಲ್ಲ...
ಸಲ್ಲಿಸಿದ ಕಾಣಿಕೆಗೆ ರಶೀತಿಯಿರಲಿಲ್ಲ..
ಜಾರಿಹೋದ ಹನಿಗಳ ಕುರುಹೇ ಇಲ್ಲ...
ನಿನ್ನನ್ನು ಮರೆತ ನೆನಪೇ ಇಲ್ಲ...
ನಿನ್ನನ್ನೇ ನೆನಪಿಸುತ್ತೇನೆ,
ಬಿಕ್ಕಳಿಕೆಗೆ ಮಾತ್ರ ಅರ್ಥವಾಗುವವರೆಗೂ....
ಕಾಯುತ್ತೇನೆ ನಿನ್ನನ್ನೇ,
ಮೊದಲ ನಕ್ಷತ್ರದ ಬೆಳಕಿನವರೆಗೂ....
ಕೊನೆಯದಾಗಿ....
ಎಲ್ಲರ ಪ್ರೀತಿಯೂ ತೀರ ಮುಟ್ಟಿದ್ದಿದ್ದರೆ......
ತಾಜ್ ಮಹಲ್ ಹುಟ್ಟುತ್ತಿರಲಿಲ್ಲ....
(ಕವಿ... ದಿನಕರ್ ಮೊಗೆರ...)
ಕಾದು ಕುಳಿತೆ ಇನಿಯಾ...
ಇರದೆ ನಿನ್ನ ಸನಿಹ...
ಅವಕಾಶ ಸಿಕ್ಕಂತೆ ನೇಸರ ಎನ್ನ ತಬ್ಬಿ
ಮುತ್ತಿನ ಮಳೆಗರೆಯುತ್ತಿದ್ದ
ಮಾತು ಮಾತಿಗೂ ನಿನ್ನ ನೆನಪ
ಎನ್ನ ಎದೆಯೊಳಗೆ ಪಸರಿಸುತ್ತಾ...
ಆರದ ಬಿಸಿಯುಸಿರು, ಮುತ್ತಿನ ಮತ್ತು
ಕಾಡಿದೆ...ಹಂಬಲಿಸಿದೆ... ಕನವರಿಸಿದೆ....
ಆದರೆ ನಿನ್ನ ಸನಿಹವಿರಲಿಲ್ಲ...
ಕಂಡ ಕನಸ ಬರದಾಗಿಸುತ್ತಾ...
ಕೊಟ್ಟ ಮಾತ ಯಾಕೆ ಮರೆತೆ
ಗುಗುಡದಿಂದ ಯಾಕೆ ಕುಳಿತೆ...
ಹೇಳು ನನ್ನ ಇನಿಯಾ...
ಮುಸ್ಸಂಜೆ ಮಬ್ಬಿನಲಿ ಒಂಟಿ ನಾನು
ಕತ್ತಲೊಳಗೆ ಮನೆಯ ಹೊಸಿಲು
ತುಳಿಯದಿರೆ...
ಇರಿಯುವುವು... ಎದುರುಗೊಳ್ಳುವವು...
ನೂರೆಂಟು ಪ್ರಶ್ನೆಗಳು
ಮನದ ತುಮುಲ ಅರಿಯಲಾರೆಯಾ....
(ಕವಿ... ಶಶಿ ಬೆಳ್ಳಾಯರು..)
ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನು
ನೀ
ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನು
ಮ
ಮನದೊಳಗೆ ಕೆರೆಯ ನೀರ ಮೇಲಿನಲೆಗಳಂತೆ
ತಲ್ಲಣದ ತರಂಗಗಳು ಸದಾ ಕಾಡುತಿರುವವಂತೆ
ಬಂಧಿಸಲು ನಾವೆಷ್ಟೇ ಯತ್ನಿಸಿ ಸೋತರೇನಂತೆ
ಕಣ್ಣ ಮುಚ್ಚಾಲೆಯಾಟ ಸದಾ ಸಾಗುತಿರುವುದಂತೆ
ಜೀವನದೀ ಏರು ಪೇರುಗಳು ದಾಖಲಾಗದಿವೆಲ್ಲೂ
ನಗು ಮುಖದ ಸೋಗು ಪ್ರತಿಯೊಂದು ಚಿತ್ರದಲ್ಲೂ
ಸಂತಸವಿರಲಿ ನಮ್ಮ ಚಿತ್ರಗಳ ಕಂಡವರ ನೆನಪಲ್ಲೂ
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ
(ಕವಿ.. ಅತ್ರಾಡಿ ಸುರೇಶ)
*************
ನೆನಪಾಗುತ್ತಿದ್ದಾನೆ
ಅವನು
ಎಲ್ಲಿಂದಲೋ ಹೇಗೋ ಬಂದು
ಎದೆಯ ಕದವ
ಮೆಲ್ಲಗೆ
ತಟ್ಟಿದವನು ..
ತಿಳಿಯಾದ ಮನದ ಕೊಳದೊಳಗೆ
ಪ್ರೀತಿಯ ಕಲ್ಲೆಸೆದು
ಮಧುರ ಭಾವದಲೆಗಳ
ಎಬ್ಬಿಸಿದವನು
ಕಣ್ಣಲ್ಲಿ ಕನಸು ತುಂಬಿ
ಹೃದಯ ಗರಿ ಬಿಚ್ಚಿ
ಹಾಡುತ್ತಿದ್ದಾಗಲೇ ,
ಮಾಯವಾದವನು ..
ಮತ್ತೆ ಬರುವೆನೆಂದು
ಮಾತು ಕೊಟ್ಟವನ
ಬರವ ಕಾಯುತ್ತಿರುವೆ
ಸಂಜೆ ಇಳಿದು
ಕತ್ತಲಾಗುತ್ತಿದ್ದರೂ ..
(ಕವಯಿತ್ರಿ.. ಶ್ರೀಮತಿ ಚಿತ್ರಾಂಜಲಿ ಪುಣೆ..)
बेखरारी के लम्हे और सह न पाऊं यह तन्हाई
आह्ट का कर रहा दिल इंतजार बार बार
गर्म सांसॊं कॊ फिर से परखने का मन
मचल रहा दिल - पर, उफ. यह तन्हाई
वादे तो करते हैं, और दिल जलाने वाले
बातें तो करते हैं, और वादा न निभाने वाले
इंतजार और बेताबी हॊती क्या चीज है
भला वह क्या जाने, वादा करके भुलाने वाले
बेचैन हॊ उठी है झील भी तिल मिला कर
उठा रही है हलकी सी लहरॆं गेहराई पाकर
आ भी जा मेरे दिलबर और न सता यॊं
दर्द कॊ पहचान ने वाले बेदर्दि इस कदर क्यॊं?
ಕವಿ.. ಆಜ್ಹಾದ್ ಸಾಹೇಬ್..
"ಮಗನಾಗೋ ಮುಕುಂದ"
ಮನ ಮಡಿಯಾಗಿಸಿ
ಜೇಡಿಮಣ್ಣಲಿ ನಿನ್ನ ಬಂಧಿಸಿರುವೆ, ಪೂಜಿಸಲಲ್ಲೋ
ಮುದ್ದಿಸಲು ಮಗನೆ
ನನ್ನ ಸೆರಗೆಳೆದು
ಬೆಣ್ಣೆಗಾಗಿ ಕೈ ಚಾಚಲು ಬಾರೋ
ಕಾಡಿ-ಬೇಡಿ ಹುಸಿಮುನಿಸ
ಕಣ್ಣೀರ ತರಲು ಬಾರೋ
ನಡುಮನೆಯಲ್ಲಿ ಬೆಣ್ಣೆ
ಮುಚ್ಚಿಟ್ಟಿರುವೆ, ಕದಿಯಲು
ಕಳ್ಳ ಹೆಜ್ಜೆಯಲಿ ಬಾರೋ
ಬಂದಾರು ಬಾರೋ ಹಾಲುಗೆನ್ನೆಯ ಕಂದ
ರಗಳೆಯಾಗಲಿ
ಚೆಲ್ಲಾಟವಾಗಲಿ ಏನಾದರಾಗಲಿ,
ನಿನ್ನದೇ ಗೆಲುವಾಗಲಿ ಬಾರೋ
ನನ್ನೆದೆಯಲಿ ಹಾಲ್ಗಡಲ ಜಿನುಗಿಸಲು
ಒಡಲಿಗೆ ಚಿಗುರಾಗಿ ಜಾರೋ
ಹಠ ಬಿಟ್ಟು,
ಬಾಯ್ತುಂಬ ಅಮ್ಮಾ ಎಂದು ಕರೆಯೋ
ಮಣ್ಣ ಮುಕುಂದ, ಮುದ್ದು ಮುಕುಂದ
ಕವಿ ಕೆ. ನಾಗರಾಜ..
पता नहि..
आ रहे हो किस रास्ते, पता नहीं.
लोग सिर्फ भगवान को केहते,
उसके आने में देर है, अंधेर नहीं.
लेकिन मे जानती हु.
तुम्हारे आने मे, तुम्हारे प्यार में
कॊई हॆर नहीं, कॊई फॆर नहीं..
मैं उसी नदी किनारे बैठी हूं.
जिसके रेत पर हम दोनों ने लिखी है
अपनी ही प्यार कि दास्ताँ.
ताजी हैं आज भी यादें हमारे प्यार की,
इस बहती नदी के पानी कि तरह..
देखि अभी मैंने तुम्हारी तसवीर,
इसी बहते पानी में, खुद कि नहीं..!
नादां हुं दर्पण और आईने क्या हैं, पता नहि..!
मुझ में तुम ऐसे बसे हो यह जानती हूं,
पर साया और परछाई का फर्क पता नहि..!
अभी अभी एक मचली ने किनारे आके मुझसे पुछा,
किसकी याद में डूबी हो ?
मैंने प्यार से उसे समझाया,
डूबी नहि- अब तक तैर रही हूं..!
तुम्हारे इन्त्जार में मुझे दॆख,
डूब रहा सूरज थम गया है.
शायद जल भी रहा हॊ.! पता नहीं..
उफ यह बेचैनी मुझे और न सतावो
जल्दी से आवो अपनी बाहों में ले लो,
इसी सॊच में शायद तुम भी हो.
और तुम कितने बेताब हो, पता नहीं..
ಕವಿ ಅನಿಲ ಬೆಡಗೆ...
ಮೈಂ ಬೈಠೀ ಕಿನಾರೆ ಝೀಲ್ ಕೆ
ಕಿ ಖಾಮೋಶೀ ಭೀ ಚುಭ್ ರಹೀ ಥೀ
ಮೇರೀ ಬೇಚೈನಿ ಕೆ ಕಂಪನ್
ಹಲ್ಕೆ ಸೆ ತರಂಗ್ ಶಾಂತ್ ಸತಹ್ ಪರ್
ಪರ್ ಉಸ್ ಪರ್ ಕ್ಯೋಂ ಮೆರಾ ಗುಸ್ಸಾ?
ಮೇರಾ ತಡ್ ಪನ್ ಮೇರೀ ಬೇಚೈನೀ ಕೋ
ನಹೀಂ ಹೋರಹಾ ಸಹನ್
ಸರ್ ಪರ್ ಕಾ ಸೂರಜ್ ಸುನಹ್ರಾ ಹುವಾ
ಢಲ್ ಸುನಹ್ರೀ ಶಾಮ್ ಛಾಯೆಗಾ ಅಂಧೇರಾ
ವಾದಾ ತೊ ಕಿಯಾ ಹೈ,,ಆಯೆಗಾ ಪಿಯಾ
ಭಲೇ ಹೀ ರಾತ್ ಢಲ್ ಜಾಯ್
ಔರ್ ರ್ಕ್ಯೋಂ ನ ಹೋ...
ಆ
ಯೆಗಾ ಸವೇರಾ
ಕವಿ "ಜಲನಯನ (ಆಜಾದ್)
ನೆನಪೇ ಘಾಸಿಗೊಳಿಸದಿರು.. ಈ ಮನವನ್ನ
ಮತ್ತೆ ಮತ್ತೆ ಬಂದು ...
ನಿನ್ನ ಮರೆಯಲೇ ಓಡುತ್ತಿರುವುದು ಬಲುದೂರ
ಹೊಸ ಕನಸು ಹೊಸ ಆಕಾಂಕ್ಷೆ ಗಳೊಡನೆ ...
ಆದರೂ ಮತ್ತೆ ಬಂದು ನೋಯಿಸದಿರು ,
ತಾಳಿಕೊಳ್ಳದು ಈ ಹೃದಯ ....
ಮತ್ತೆ ಮತ್ತೆ ಬರುವ ನಿನ್ನ ನೆಪುಗಳ
ಸಾವಿರ ಹೋಳಾಗುವುದು ಖಚಿತ ..
ಏನು ಮಾಡಲಿ ಆ ಸಾವಿರ ಚೂರುಗಳು ....
ಸಾವಿರ ನೆನಪುಗಳಾಗಿ ಕಾಡಿಸಿದರೆ..???
ಎಲ್ಲಿ ಹೋಗಲಿ ನಿನ್ನಿಂದ ತಪ್ಪಿಸಿಕೊಂಡು..
ಹಕ್ಕಿಯಾಗಿ ಹಾರಿ ಹೋಗೋಣವೆಂದರೆ ,,, ಬಿರುಗಾಳಿಯಾಗಿ
ಬಂದು ದಿಕ್ಕು ತಪ್ಪಿಸುವೆ ....
ಭೋರ್ಗರೆಯುವ ನೀರಾಗಿ ಹರಿದು ಬಿಡಲೆಂದರೆ
ಹೆಬ್ಬಂಡೆಯಾಗಿ ತಡೆಯುವೆ ...
ಕತ್ತಲಲಿ ಕಣ್ಣು ತಪ್ಪಿಸಿ ಹೋಗೋಣವೆಂದರೆ
ಬೆಳದಿಂಗಳ ನೆರಳಿನಂತೆ ಹಿಂಬಾಲಿಸುವೆ...
ಎಲ್ಲಿ ಹೋದರು ಬೆಂಬಿಡದೆ ಬರುವೆ ....ನೆರಳಾಗಿ ...
ಏಕೆಂದರೆ ನೀನು ನೆನಪಲ್ಲವೇ ?
ವೆಂಕಟೇಶ್ (ನನ್ನೊಳಗಿನ ಕನಸು)
ನೀರೊಳಗರಳಿ
ನೀರ್ಕಲ್ಲ ಮೇಲೊಂದು ಕಲ್ಲುಗೊಂಬೆ
ಮೇಲಿಂದುದುರಿ
ಆರಿದ್ದು ನೀರೊಳಗೆ
ಹರಿವ ನೀರೀಗ
ಹರಿಯದೇ ಹರಳು
ನಕ್ಷತ್ರ ನೀರೊಳಗಾರಿದ ನೆನಪು
ನೀರೊಳಗರಳಿ
ಹರಿದಷ್ಟಕ್ಕೂ
ನೆನಪೀಗ ನುಣುಪು
ಹರಿದಷ್ಟಕ್ಕೂ ಹೊಳಪು ನೆನಪ ಕಲ್ಲಿನದು
ಕಲ್ಲಗೊಂಬೆಯದು
ನಿರ್ಭಾವಜೀವ ಕಲ್ಲುಗೊಂಬೆಯದು
ಪಾದದಡಿಯ
ಕೈಯೊಳಗಿರದ ಜೀವವೀಣೆ
ಎಲ್ಲವೂ ಹೊಸತು
ಮೊದಲ ಮುತ್ತಿಗೂ
ಮಿಗಿಲಾದ ಮೊದಲ ಕಾಣಿಕೆ
ಕಳೆದುಹೋಗಿದೆ ಕಲೆತು
ನಿಂತ ನೀರೊಳಗೆ
ಕೆಂಗೆಟ್ಟ ಕನಸು ಉರಿದುರಿದು
ಕಳೆದ ಕ್ಷಣದ ಮರೆಯ ಸ್ತಬ್ಧ
ಭಾವ ನೀರವ ನಿಶ್ಶಬ್ಧ
ಮಬ್ಬು ಮಂಪರಿನ ಮನೆ ಸುತ್ತ
ನೀ ಬರುವ ಈ ಕ್ಷಣಕ್ಕೆ
ಮತ್ತೆ ಬರಬೇಡ
ಎಬ್ಬಿಸದಿರು
ನಿಂತ ನೀರಲೆಗಳನ್ನು
ದೂರ ನಿಲ್ಲು ಮತ್ತೆ
ಹುಡುಕುತ್ತಿದ್ದೇನೆ
ನೀರೊಳಗೆ ಬಿದ್ದ
ಆ ನಕ್ಷತ್ರವನ್ನು
ದೂರವೇ ನಿಲ್ಲು ಮತ್ತೆ
ಇರಲಿಬಿಡು ಆ ಕಾಲ್ಗೆಜ್ಜೆ
ಅಲ್ಲಿಯೇ ಹರಿದು ಚೆಲ್ಲಿ
ಮತ್ತೆ ಪೋಣಿಸಿ
ತೊಡಿಸಿದೆಯೋ ಜೋಕೆ!
ಕವಯಿತ್ರಿ ಶಾಂತಲಾ ಭಂಡಿ
(ನೆನಪು ಕನಸುಗಳ ನಡುವೆ)
(ಗೆಳೆಯರೇ..
ಇನ್ನೂ ಫೋಟೋಗಳಿವೆ...
ನೀವು ಬರೆದಷ್ಟು ಕವನಗಳಿಗೆ ....
ನೀವು ಬರೆಯುವ ..ಸಾಲುಗಳಿಗೆ...
ನೀವು ಇಲ್ಲಿರುವ ಫೋಟೋಗಳಿಗೆ ಸಂಬಂಧಿಸಿದಂತೆ ..
ಕವಿತೆಗಳನ್ನು.. ಸುಂದರ ಸಾಲುಗಳನ್ನು ಬರೆದರೆ ಈ ಚಿತ್ರ ಲೇಖನದಲ್ಲಿ ಹಾಕುವೆ..
ಹೊಸ ಫೋಟೋ ಸಂಗಡ..!)
ನೀವು ಇಲ್ಲಿರುವ ಫೋಟೋಗಳಿಗೆ ಸಂಬಂಧಿಸಿದಂತೆ ..
ಕವಿತೆಗಳನ್ನು.. ಸುಂದರ ಸಾಲುಗಳನ್ನು ಬರೆದರೆ ಈ ಚಿತ್ರ ಲೇಖನದಲ್ಲಿ ಹಾಕುವೆ..
ಹೊಸ ಫೋಟೋ ಸಂಗಡ..!)
( ನನ್ನ ಫೋಟೋಗ್ರಫಿ ಸುಧಾರಿಸಲು ಪ್ರಯತ್ನಿಸುತ್ತಿರುವವರು
ಶ್ರೀ. ದಿಗ್ವಾಸ್ ಹೆಗಡೆ..
ಇಲ್ಲಿರುವ ಫೋಟೋಗಳು ಚಂದವಾಗಿದ್ದರೆ.. ಅದಕ್ಕೆ ದಿಗ್ವಾಸ್ ಕಾರಣ..
ತಪ್ಪು ಕಂಡು ಬಂದಲ್ಲಿ.. ನಾನೇ.. ಕಾರಣ...)
50 comments:
Jai ho....
ಉದಯ..
ಬಜ್ಜಿನಲ್ಲಿ ಒಂದು ಫೋಟೊ ಹಾಕಿದ್ದೆ..
ಅದಕ್ಕೆ ಒಳ್ಳೊಳ್ಳೆ ಕವನಗಳು ಬಂದವು...
ಗೆಳೆಯರೆಲ್ಲ ಆ ಫೋಟೊಗಳನ್ನು ಬ್ಲಾಗಿನಲ್ಲಿ ಹಾಕಿ ಆ ಕವನಗಳನ್ನು ಬ್ಲಾಗಿನಲ್ಲಿ ಹಾಕಿ ಎಂದು ಸಲಹೆ ಕೊಟ್ಟರು..
ಕವನ ಬರೆದ ಎಲ್ಲಾ ಕವಿ ಮಿತ್ರರಿಗೂ..
ಫೋಟೊಗ್ರಫಿಗೆ ಸಹಾಯ ಮಾಡುತ್ತಿರುವ ಗೆಳೆಯನಂಥಹ ಗುರು ದಿಗ್ವಾಸ್ ಅವರಿಗೂ ನನ್ನ ವಂದನೆಗಳು...
ಇಷ್ಟಪಟ್ಟ ನಿಮಗೂ ಧನ್ಯವಾದಗಳು..
ಸೂಪರ್. ಈಗ ಸಕತ್ ಆಗಿದೆ. ಎಲ್ಲ ಫೋಟೋಗಳೂ ತುಂಬಾ ಚೆನ್ನಾಗಿವೆ.ಅದರಂತೆ ಕವನ ಕೂಡ. ಜೈ ಹೊ.
ಪಕ್ಕುಮಾಮ,
ಒಂದಕಿಂತ ಒಂದು ತುಂಬ ಸುಂದರ
ಚಂದಕಿಂತ ಚಂದ ಕವನಗಳ ಹಂದರ.....
ಎಲ್ಲವೂ ಫೋಟೋ ಕವನಗಳೆಲ್ಲವೂ ಲಾಜವಾಬ್............!
nice photos
and poetry...
ಪ್ರೀತಿಯ ನಂಜುಂಡ...
ಈ ಸಲಹೆಯನ್ನು ..
ಬೆಳಿಗ್ಗೆ ಫೋನ್ ಮಾಡಿ ಮೊದಲಿಗೆ ಕೊಟ್ಟವರು ನೀವು...
ನಿಮಗೆ ಮೊದಲ ಧನ್ಯವಾದಗಳು..
ಫೋಟೊಗಳನ್ನೂ..
ಕವನಗಳನ್ನೂ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... Jai Ho !!
ಸೂಪರ್ ಫೋಟೋಗಳಿಗೆ ತಕ್ಕ ಸೂಪರ್ ಕವನಗಳು.ಜೈ ಹೋ ಪ್ರಕಾಶಣ್ಣ!
photogalu,haagu kavanagalu... tumbaa chennaagive.
ನವೀನ ಪ್ರಯೋಗ...ತುಂಬಾ ಚೆನ್ನಾಗಿದೆ..ಜೈ ಹೊ.
Kavanakke takka photos...!! olle combination.....!! good work.!!
ಹೊಸ ಬಗೆ... ಅಂಥ ಯಾವುದೋ ಹಳೆಯ ಹಾಡು ಸರಿಯಗಿ ನೆನೆಪಾಗುತ್ತಿಲ್ಲ. ಎಲ್ಲ ಕವಿ ಮನಗಳಿಗೂ ಅಭಿನಂದನೆಗಳು.
ಚಿತ್ರದ ಅಲೆಗಳನ್ನು ನೋಡಿ, ನನ್ನ ಕವನ ಸಂಕಲನದ ಒಂದು ಚುಟುಕು:
"ಅಲೆ"
ಮುತ್ತು
ಮುನಿಸು
ಮುತ್ತಿಕ್ಕಿ
ಮುನಿಸಿಕೊಂಡು
ಮತ್ತೆ ಮುತ್ತಿಕ್ಕಿ
ಮತ್ತೆ...
ಮುತ್ತಿಕ್ಕುವ ಬಾಲೆ!
ಹೆಸರು ಬರಿಯಡಾ ಅ೦ದ್ರು ಬರಿತೆ...ಆ "ಶ್ರೀ" ಎಲ್ಲ ತೆಗದು ತಮ್ಮನ೦ತ ಗೆಳೆಯ ಮಾಡಿದ್ರೆ ಬಾರಿ ಖುಶಿ....
ಮನದಾಳದಿಂದ.. ( ಪ್ರವೀಣ..)
ಫೋಟೊಗ್ರಫಿ ಬಗೆಗೆ ಅಷ್ಟೇನೂ ಸಮಯ ಸಿಗುತ್ತಿರಲಿಲ್ಲ..
ಗೆಳೆಯನಂಥಹ ತಮ್ಮ... ಗುರು... ನನ್ನನ್ನು ಹುರಿದುಂಬಿಸಿ..
ಫೋಟೊ ತೆಗೆಯುವಂತೆ ಮಾಡಿದ "ದಿಗ್ವಾಸ್" ಅವರಿಗೆ ಅನಂತ ವಂದನೆಗಳು...
ಗೆಳೆಯರಾದ ನಂಜುಂಡ.. ಆಜಾದು.. ಈ ಐಡಿಯಾ ಕೊಟ್ಟರು...
ಇನ್ನೇನು?
ಯಾರೂ ಬರೆದರೂ.. ಸುಂದರ ಸಾಲುಗಳನ್ನು..
ಕವಿತೆಗಳನ್ನು ಹಾಕುವೆ ಈ ಚಿತ್ರ ಲೇಖನದಲ್ಲಿ...
ನಿಮ್ಮೆಲ್ಲರ ಪ್ರೀತಿಗೆ ತುಂಬಾ... ತುಂಬಾ ಧನ್ಯವಾದಗಳು..
ಪ್ರಕಾಶ
ಏನಿದು ಚಿತ್ರ ಕವನವೇ?
ನನಗನ್ನಿಸಿದ್ದು
ಪಕ್ಕು ಕೃತಿಗಿಳಿಸಿದ್ದು
ಚಿತ್ರ ಹೇಳಿದ್ದು
ಕಥೆಯಾದದ್ದು
ಚಿತ್ರಾರಾಗದ್ದು
ಕವಿಹಾಡಾದದ್ದು
ಮತ್ತೆ ಸಿಗದ್ದು
ಆಶುವಾದದ್ದು
ಅಲ್ಲ ಕದ್ದದ್ದು
ಮನದಲ್ಲಿ ಎದ್ದದ್ದು
ಮನ ಗೆದ್ದದ್ದು
ಕ್ಯಾಮರಾ ಕಣ್ಣಿಂದು
ಸ್ಫುರಿಸಿ ಅನಿಸಿದ್ದು
ಒಬ್ಬರಿಗೊಬ್ಬರದ್ದು
ಸ್ಫೂರ್ತಿಯಾದದ್ದು
ಪೂರ್ತಿಯಾದದ್ದು
ಅಪೂರ್ವವಾದದ್ದು
ಇಲ್ಲದಂತೆ ಹದ್ದು
ಕಲ್ಪನೆಯ ಸದ್ದು
ಚಿತ್ರದಲ್ಲಿ ಗುದ್ದು
ಕವನದಲ್ಲಿ ಮುದ್ದು.
ondu photo da mEle ishtondu kavanagaLu.... thumba oLLeya prayoga.. :) yella kavanagaLu ishta aadavu prakashanna... kavi/kavayithriyarige abhinandanegaLu.... :)
Very nice..:-) Ishta aatu ella kavanagalu..:-)
ಪ್ರಕಾಶಣ್ಣ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
hegadeji a new beginning in your blog jai ho...! i likes mahababal giri bhats poem it lends a new dimension
ಪ್ರಕಾಶ,
ತುಂಬ ಪ್ರಶಂಸನೀಯವಾದ ಕಾರ್ಯ ಮಾಡಿರುವಿರಿ. ನಿಮಗೆ, ಚಿತ್ರಕಾರರಿಗೆ ಹಾಗು ಕವಿಗಳಿಗೆ ಅಭಿನಂದನೆಗಳು.
ಈ ದಿನಾಂತ ಸಮಯದಲಿ...
ಉಪವನ ಏಕಾಂತದಲಿ ...
ಗೋಧೂಳಿ ಹೊನ್ನಿನಲಿ ...
ಬರದೇ ಹೋದೆ ನೀನು ...
ಮರೆತು ಹೋದೆ ನೀನು...
ಸುಂದರ ಛಾಯಾಚಿತ್ರಗಳು, ಅದಕ್ಕೆ ತಕ್ಕ ಕವನಗಳು...
ಸುಂದರ ಭಾವಗೀತೆಯೊಂದರ ನೆನಪು ತಂದು ಕೊಟ್ಟಿತು ಇವುಗಳೆಲ್ಲ ಸೇರಿ...
ಧನ್ಯವಾದ
Wov kavanagaligoo.. photogaligoo jugal bandi.. bhava bandhi.. super salugalu.. sooper photogalu
Pravi
Verry nice....photokkagi kavana.kavanakkagi photo...........
ಜೈ ಹೋ !!
ಪ್ರಕಾಶಣ್ಣ ಅತಿ ಅದ್ಭುತ. ದಿಗ್ವಾಸ್ ಅಣ್ಣಂಗೆ ನಾನೂ ಥ್ಯಾಂಕ್ಸ್ ಹೇಳೋ ... :))
ಕನಸುಗಳ ಕಾವಲಿದ್ದ
ಮನದ ತಿಳಿಗೊಳದಲ್ಲಿ
ನನ್ನ ಬಿಂಬವ ನೋಡುತ್ತಾ ಕುಳಿತಿದ್ದೆ ..
ಯಾರೋ ಬಂದು ಇಣುಕಿ ನೋಡಿದರು..
ಪ್ರೀತಿಯ ಕಲ್ಲೆಸೆದರು..
ಭಾವನೆಗಳ ಅಲೆಯೆದ್ದಿತು..
ಕನಸುಗಳ ಗೋಪುರದೊಳಗೆ ಭಾವನೆಗಳ ಗುಸು-ಗುಸು ...
ಕಲ್ಲು ತಳ ಸೇರಿದೆ
ಅಲೆಗಳು ಶಾಂತವಾಗಿವೆ ..
ಆದರೆ ...
ನನ್ನ ಬಿಂಬ ಮಾತ್ರ ನಾಪತ್ತೆ.. !!!
nijavaada kavana sante.....
ellaa kavanagaLU chennaagive....
chandada phoTogaagi nanna abhinandane....
ಹರಿಯುತ್ತಿದೆ ನದಿ ನಮ್ಮಿಬ್ಬರ ನಡುವಿನಲಿ...
ನಾನೊಂದು ದಡದಲ್ಲಿ, ನೀನೊಂದು ದಡದಲಿ.....
ಕುಳಿತಿರುವ ದಡದಲ್ಲಿ ದೋಣಿಯಿಲ್ಲ....
ಕಾಡುತಿರುವ ನೆನಪುಗಳಿಗೆ ಬರವಿಲ್ಲ......
ಬಿಕ್ಕಿದ್ದು, ಅತ್ತಿದ್ದು ಯಾರೂ ಕೇಳಲಿಲ್ಲ....
ನನ್ನೆದೆಯ ಪ್ರೀತಿ ತೇರು ನೀನೂ ಎಳೆಯಲಿಲ್ಲ...
ಕರಕಲಾದ ಕಣ್ಣೀರು ಕಾಣಿಸಲೇ ಇಲ್ಲ...
ನನ್ನ ಒಬ್ಬಂಟಿ ರಾತ್ರಿ ತಿಳಿಯಲೇ ಇಲ್ಲ...
ಹರಸಿಕೊಂಡ ಹರಕೆಗಳಿಗೆ ಲೆಕ್ಕವಿರಲಿಲ್ಲ...
ಸಲ್ಲಿಸಿದ ಕಾಣಿಕೆಗೆ ರಶೀತಿಯಿರಲಿಲ್ಲ..
ಜಾರಿಹೋದ ಹನಿಗಳ ಕುರುಹೇ ಇಲ್ಲ...
ನಿನ್ನನ್ನು ಮರೆತ ನೆನಪೇ ಇಲ್ಲ...
ನಿನ್ನನ್ನೇ ನೆನಪಿಸುತ್ತೇನೆ,
ಬಿಕ್ಕಳಿಕೆಗೆ ಮಾತ್ರ ಅರ್ಥವಾಗುವವರೆಗೂ....
ಕಾಯುತ್ತೇನೆ ನಿನ್ನನ್ನೇ,
ಮೊದಲ ನಕ್ಷತ್ರದ ಬೆಳಕಿನವರೆಗೂ....
ಕೊನೆಯದಾಗಿ....
ಎಲ್ಲರ ಪ್ರೀತಿಯೂ ತೀರ ಮುಟ್ಟಿದ್ದಿದ್ದರೆ......
ತಾಜ್ ಮಹಲ್ ಹುಟ್ಟುತ್ತಿರಲಿಲ್ಲ......
Prakashanna, tumba sundaravaada chitragalu haagu kavitegalu.
ಕಾದು ಕುಳಿತೆ ಇನಿಯಾ...
ಇರದೆ ನಿನ್ನ ಸನಿಹ...
ಅವಕಾಶ ಸಿಕ್ಕಂತೆ ನೇಸರ ಎನ್ನ ತಬ್ಬಿ
ಮುತ್ತಿನ ಮಳೆಗರೆಯುತ್ತಿದ್ದ
ಮಾತು ಮಾತಿಗೂ ನಿನ್ನ ನೆನಪ
ಎನ್ನ ಎದೆಯೊಳಗೆ ಪಸರಿಸುತ್ತಾ...
ಆರದ ಬಿಸಿಯುಸಿರು, ಮುತ್ತಿನ ಮತ್ತು
ಕಾಡಿದೆ...ಹಂಬಲಿಸಿದೆ... ಕನವರಿಸಿದೆ....
ಆದರೆ ನಿನ್ನ ಸನಿಹವಿರಲಿಲ್ಲ...
ಕಂಡ ಕನಸ ಬರದಾಗಿಸುತ್ತಾ...
ಕೊಟ್ಟ ಮಾತ ಯಾಕೆ ಮರೆತೆ
ಗುಗುಡದಿಂದ ಯಾಕೆ ಕುಳಿತೆ...
ಹೇಳು ನನ್ನ ಇನಿಯಾ...
ಮುಸ್ಸಂಜೆ ಮಬ್ಬಿನಲಿ ಒಂಟಿ ನಾನು
ಕತ್ತಲೊಳಗೆ ಮನೆಯ ಹೊಸಿಲು
ತುಳಿಯದಿರೆ...
ಇರಿಯುವುವು... ಎದುರುಗೊಳ್ಳುವವು...
ನೂರೆಂಟು ಪ್ರಶ್ನೆಗಳು
ಮನದ ತುಮುಲ ಅರಿಯಲಾರೆಯಾ.....
ಗುರು... ಎಲ್ಲಾ ಕವನ ಮತ್ತು ಚಿತ್ರ ತುಂಬಾನೇ ಚೆನ್ನಾಗಿದೆ... ಈ ಚಿತ್ರವನ್ನು ನೋಡುತ್ತಾ ಇದ್ದರೆ ಭಾವನೆಗಳು ರೆಕ್ಕೆ ಬಿಚ್ಚಿ ಹಾರಿದ ಅನುಭವ... ,ಮನದ ಮೂಲೆಯಲ್ಲಿ ಅವಿತಿರುವ ಕವಿ ಜಾಗೃತನಾದಂತೆ... ತೋಚಿದ್ದು ಬರೆದಿದ್ದೇನೆ...ಸಮಯದ ಅಭಾವದಿಂದ... ಕ್ಷಮೆ ಇರಲಿ... ಗುರು... ಇನ್ನೂ ಹೆಚ್ಚೆಚ್ಚು ಬರೆಯುತ್ತಿರಿ...ಜೈ ಹೋ...!!!!
JAI HO.............
Photos tumba tumba chennagide..Adakke sari honduva kavanagalu..jai ho prakashanna !
i like all u r kavana
and photoes
very nice-photoes--------------very nice poetry.
neevu bareyuva ondhondhu saalu thumba chennagive nanage thumba ista aythu
Prakashnna,
naveena aadre yashaswi prayoga...Jai ho....
mast photogalu, mast kavanagalu...
andahaage last line reverse idre channagittu... ha ha ha
"ಇಲ್ಲಿರುವ ಫೋಟೋಗಳು ಚಂದವಾಗಿದ್ದರೆ.. ನಾನೇ.. ಕಾರಣ..
ತಪ್ಪು ಕಂಡು ಬಂದಲ್ಲಿ.. ಅದಕ್ಕೆ ದಿಗ್ವಾಸ್ ಕಾರಣ...)
ಪ್ರಕಾಶಣ್ಣ ತುಂಬಾ ಚಂದಿದ್ದಪಾ....
ಆ ಸಿಮೆಂಟು ಮರಳಿನ ಮಧ್ಯೆ ಇಂಥಾ ಫೋಟೋ ಎಲ್ಲಿ ಹಿಡೀತ್ಯೋ ಮಾರಾಯಾ......
ಅದ್ಭುತದ ಚಿತ್ರದ ಅತ್ಯದ್ಭುತ ಭಾವ ಸಂಕಲನ..
ಕವಿತೆಗಳೊಳಗಿನ ಭಾವನೆಗಳು ನನ್ನವೇ ಅನ್ನಿಸಿತು...ತುಂಬ ಸೊಗಸಾಗಿವೆ ಚಿತ್ರಗಳು ಅಷ್ಟೇ ಸೊಗಸಾಗಿವೆ
Ek se badh kar ek...
Thumba chennagive
Superb n super idea............
ತಿಳಿಗೊಳದ ತಡದಲ್ಲಿ ಕುಳಿತು
ಮನದೆಡೇಯಲ್ಲಿ ಮೂಡಿದ ದುಗುಡಗಳ
ಹಿಡಿದಾರಿಸಿದ ಕಲ್ಲ೦ದೆಣಿಸಿ
ಹೊರಎಸೆದು ಕೊಳವನ್ನ ಮನವಾಗಿಸಿ
ಮನವನ್ನ ಕೊಳವನ್ನಾಗಿಸುವ
ಭಾರ ಮನದ ನೀರೆ....
ದುಗುಡ ಪಡದಿರು
ಮನವಾಗುವದು ತಿಳಿಗೊಳ
ತಮವನ್ನ ಹರಿದೆಸೆವ೦ತೆ ನೇಸರನ ಬಿಸಿ
ಬ೦ದಾನು ಕಾಯುತಿರುವವನು....
ಬಹಳ ದಿನಗಳ ಮೇಲೆ ನನ್ನಿ೦ದ ಕವಿತೆ ಬರೆಯಿಸಿದಿರಿ ಪ್ರಕಾಶಣ್ಣ. ನಿಮ್ಮ ಚಿತ್ರಗಳು ಅದಕ್ಕೆ ಪೂರಕವಾಗಿ ಹರಿದ ವಿಭಿನ್ನ ಕವಿಮನಗಳಲ್ಲಿನ ವೈವಿಧ್ಯ ಕಾವ್ಯಲಹರಿ.... ಒ೦ದಕ್ಕೊ೦ದು ಪೂರಕವಾಗಿ ಓದುಗರನ್ನು ರ೦ಜಿಸುವಲ್ಲಿ ಯಶಸ್ವೀಯಾಗಿವೆ. ತಮಗೂ ತಮ್ಮ ಜೊತೆಗೂಡಿದ ಕವಿಮನಗಳಿಗೂ ಜೈ ಹೋ!
"ಯಾವ ಕವಿತೆ ಬರೆಯಲಿ ಗೆಳತಿ "
ಯಾವ ಕವಿತೆ ಬರೆಯಲಿ ಗೆಳತಿ
ನೀನಾಗಿರೆ ನನ್ನ ಬಾಳಸಂಗಾತಿ .
1. ಕೊಳದ ದಡದಿ ನೀ ಕುಳಿತು, ಕೇಳು ತಂಗಾಳಿಯ ಪಿಸು ಮಾತು . ನೀರಿನ ಅಲೆಗಳ ಪ್ರೀತಿಯ ಹಾಡಿಗೆ ಹೊರಟಿದೆ ಪ್ರೀತಿಯ ಮೆರವಣಿಗೆ. ೨]ಯಮುನೆಯ ತೀರದಿ ಆ ರಾಧೇ, ಕಾದಿದ್ದಳು ಕೃಷ್ಣನ ಕೊಳಲಿಗೆ . ಕೊಳದ ತೀರದಿ ಈ ರಾಧೇ , ಕಾದಿರುವಳು ನನ್ನ ಕೊರಳಿಗೆ . ೩] ಕೊಳದ ತೀರದ ಪ್ರೇಮ ಪಲ್ಲವಿಗೆ , ಅರಳಿ ಬಿಟ್ಟಿತು ಪ್ರೀತಿ ಮಲ್ಲಿಗೆ . ರಂಗಾದ ಚಿತ್ತಾರದ ನೀರಿನ ಮೇಲೆ ಪ್ರೀತಿ ಪ್ರಣಯದ ಶೃಂಗಾರದ ಸರಮಾಲೆ. ೪] ಕೊಳದ ಪ್ರೀತಿಯ ನೆನಪು ಮೂಡಿ , ನಲಿದಿಹುದು ಮನ ನಲಿದು ಹಾಡಿ. ಹಾಡಿನ ಪಲ್ಲವಿ ನೀನಾಗಿ ನಿಂತಿರಲು. ಕವಿತೆ ಪೂರ ಪ್ರೇಮದ ಹೊನಲು.
ಯಾವ ಕವಿತೆ ಬರೆಯಲಿ ಗೆಳತಿ "
ಯಾವ ಕವಿತೆ ಬರೆಯಲಿ ಗೆಳತಿ
ನೀನಾಗಿರೆ ನನ್ನ ಬಾಳಸಂಗಾತಿ .
1. ಕೊಳದ ದಡದಿ ನೀ ಕುಳಿತು, ಕೇಳು ತಂಗಾಳಿಯ ಪಿಸು ಮಾತು . ನೀರಿನ ಅಲೆಗಳ ಪ್ರೀತಿಯ ಹಾಡಿಗೆ ಹೊರಟಿದೆ ಪ್ರೀತಿಯ ಮೆರವಣಿಗೆ. ೨]ಯಮುನೆಯ ತೀರದಿ ಆ ರಾಧೇ, ಕಾದಿದ್ದಳು ಕೃಷ್ಣನ ಕೊಳಲಿಗೆ . ಕೊಳದ ತೀರದಿ ಈ ರಾಧೇ , ಕಾದಿರುವಳು ನನ್ನ ಕೊರಳಿಗೆ . ೩] ಕೊಳದ ತೀರದ ಪ್ರೇಮ ಪಲ್ಲವಿಗೆ ಅರಳಿ ಬಿಟ್ಟಿತು ಪ್ರೀತಿ ಮಲ್ಲಿಗೆ, . ರಂಗಾದ ಚಿತ್ತಾರದ ನೀರಿನ ಮೇಲೆ ,
, ಪ್ರೀತಿ ಪ್ರಣಯದ ಶೃಂಗಾರದ ಸರಮಾಲೆ. ೪] ಕೊಳದ ಪ್ರೀತಿಯ ನೆನಪು ಮೂಡಿ , ನಲಿದಿಹುದು ಮನ ನಲಿದು ಹಾಡಿ. ಹಾಡಿನ ಪಲ್ಲವಿ ನೀನಾಗಿ ನಿಂತಿರಲು. ಕವಿತೆ ಪೂರ ಪ್ರೇಮದ ಹೊನಲು
honnina bannadha neerale....
images so good beautiful
kavanakku imagesgu super matching
i like all images & kavana
ಕವಿಭಾವಗಳಿಗೆ ಕವಿಮನಗಳಿಗೆ ಬರವಿಲ್ಲ. ಕೈಯ್ಯಲ್ಲಿ ಕ್ಯಾಮೆರಾ ಇದ್ದರೆ ಪ್ರಕೃತಿಯ ಪ್ರತೀ ಮಗ್ಗುಲು ಸುಂದರವಾಗಿಯೇ ಕಾಣುತ್ತದೆ. ಕವಿತೆಗಳೂ ಬೊಂಬಾಟ್, ಚಿತ್ರಗಳೂ ಸೂಪರ್...
This is a great idea and creative use of Blog indeed... collaborative exhibition of talent !
*** WELL DONE ***
** AWESOME **
* !! **
ಮುದ್ದಿನ ಪ್ರಕಾಶಣ್ನ...
ನಾನೊಬ್ಬ ವಿದೇಶಿ ಕ೦ಪನಿಯಲ್ಲಿ ಕೆಲಸ ಮಾಡುವಾತ.. ಇತ್ತೀಚಿನ ದಿನಗಳಲ್ಲಿ ನನ್ನ ಪ್ರೇಯಸಿ ಮಾಡಿದ ಮೋಸಕ್ಕೆ ನಾನು ನನ್ನ ಕೆಲನವನ್ನು ತೊರೆಯಬೇಕಾಗಿ ಬ೦ತು, ಆಕೆ ನನ್ನ ಬಳಿಯಲ್ಲೆ ಇದ್ದರು ಅವಳ ಅಹ೦ಕಾರದ ಮಾತುಗಳು ನನ್ನನ್ನು ಕೊಲ್ಲುತ್ತಿತ್ತು. ಕನಿಷ್ಟ ೩೦ ದಿನಗಳಿ೦ದ ಒ೦ಟಿಯಾಗಿ ಕುಳಿತಿದ್ದೆ. ಇ೦ದು ನನ್ನ ಕಡೆಯ ದಿನ, ಸುಮ್ಮನೆ ಕುಳಿತಿದ್ದ ನನಗೆ ನಿಮ್ಮ ಬ್ಲೋಗ್ ನ ಪರಿಚಯವಾಯಿತು ನಿಮ್ಮ ಸಹನೆ ಬರಿತ ಮಾತುಗಳು ಎಲ್ಲಾ ಕಥೆಗಳನ್ನು ಹೆಣೆದಿರುವ ರೀತಿ ಬಹಳ ಖುಶಿ ತ೦ದು ಕೊಟ್ಟಿತು. ನಿಮ್ಮ ಮೌಲ್ಯ ತು೦ಬಿದ, ವಿವೇಚನೆಯುಳ್ಳ, ಸರಳ ನುಡಿಗಳು ಅದ್ಬುತವಾಗಿ ಮೂಡಿಬ೦ದಿವೆ. ಹೀಗೆ ನಿಮ್ಮ ಅಭಿರುಚಿಯನ್ನು ಮು೦ದುವರಿಸಿ ಕನ್ನಡಿಗರ ಮನಕ್ಕೆ ಮುದ ನೀಡಿ.
ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ನಿಮ್ಮ೦ತ ಎಲ್ಲಾ ಕನ್ನಡ ಪ್ರೇಮಿಗಳಿಗೆ ನನ್ನ ತು೦ಬು ಹೃದಯದ ಧನ್ಯವಾದಗಳು.
ಕನ್ನಡ ಪ್ರೇಮಿ ಮತ್ತು ಪ್ರೀತಿಯ ಆರಾಧಕ....
Post a Comment