Saturday, August 7, 2010

ನಾನು..! ನನ್ನದು...!! ಭಾವುಕರಿಗೆ ಅಲ್ಲ... ಈ ಜಗತ್ತು !!

ನಾನು  ಹೂ...
ನನ್ನ  ಪರಿಮಳ..
ಅಂದ.. ಚಂದ..
ಮಕರಂದದ ಬಗೆಗೆ ನನಗೆ ಹೆಮ್ಮೆ..

ನನ್ನಂದ.. ಬಯಸುವರು...
ನನ್ನ ಮಕರಂದ ಹಿರುವವರು..
ನನ್ನ ಅಂತರಂಗದ ಬಗೆಗೆ ಯೋಚಿಸುವದೇ ಇಲ್ಲ...
                                                                                        
     
ನನ್ನಿಷ್ಟ.. ಬೇಕು..ಬೇಡಗಳ ..
ಗೊಡವೆ...
ಯಾರಿಗೂ ಬೇಕಿಲ್ಲ...!
ನನ್ನ ಈ ಚಂದ ನನಗೆ ಒಂದು ಶಾಪವೇ..?      
                              
    
ಯಾರ್ಯಾರೋ.. ಬರುವರು..
ನನ್ನ..ಹೊಗಳುವರು...
ಮೂಸಿ..
ಮಕರಂದ ಹಿರಿ.. ಹಾರಿ ಹೋಗುವರು...!

ಇದು ಎಂಥಹ ಜಗತ್ತು...?
ನನ್ನಾಸೆ...
ಭಾವಗಳಿಗೆ ಬೆಲೆಯಿಲ್ಲವೇ??
                                     
                     ನನಗೂ ಒಬ್ಬ ಗೆಳೆಯನಿದ್ದಾನೆ...!
ಹೃದಯದಲ್ಲಿ  ನೂರಾರು ...
ಸುಂದರ.. ಸುಮಧುರ..
ಕನಸುಗಳ ಕಟ್ಟಿ..
ನನ್ನ ಬದುಕನ್ನು ಸಾರ್ಥಕ ಗೊಳಿಸಿದವ... !

ನನ್ನಂದ..
ಚಂದಗಳನ್ನು ಅವನಿಗೊಬ್ಬನಿಗೆ..
ಕೊಡಬೇಕೆಂಬ ಮಹದಾಸೆ ನನ್ನದು...!

ಯಾರೂ.. ನನ್ನ ಮಾತುಗಳಿಗೆ  ಬೆಲೆ ಕೊಡುವದಿಲ್ಲ..
ಬಣ್ಣ..ಬಣ್ಣದ...
ಬೆಡಗಿನ  ಮಾತುಗಳನ್ನಾಡುತ್ತಾರೆ...

ನನ್ನಂದ  ...
ಚಂದಗಳ ಹಾಡಿ..
ಹೊಗಳಿ..
ಮಕರಂದ ಹೀರಿ.. ಹಾರಿ ಹೋಗುತ್ತಾರೆ...

 
ನನ್ನ ಭಾವದ ಗೆಳೆಯ...!
ನನ್ನ ಅಂತರಂಗದ ಪ್ರೇಮ..!
ಅವನ ಮಾತೇ.. ಸಂಗೀತ...!!
ಅವನ ಸ್ಪರ್ಶ..!
ಆ...ಆಲಿಂಗನ..!
ಚುಂಬನ...
ಬದುಕಿನ ಸಾರ್ಥಕತೆಯ ರೋಮಾಂಚನ...!!

ನನ್ನ ಗೆಳೆಯ ಬಲು ರಸಿಕ...!
ಹತ್ತಾರು..
ಚಂದದ  ಹೂವುಗಳ ಮನಗೆದ್ದವ...!


ನನ್ನ ಗೆಳೆಯನ  ಮೆಚ್ಚದವರು ಯಾರು  ??
ನೂರಾರು..
ಹೂವುಗಳ  ಮನಗಳ...
ಮನಗೆದ್ದ ಮನ್ಮಥ  .... 
ನನ್ನ ಗೆಳೆಯ...!

ನನ್ನ ಕಣ್ಣುಗಳು..
ಮೃದು ಕೆನ್ನೆಗಳು..
ಅವನು ಕಿವಿಯಲ್ಲಿ ಉಸುರುವ..
ಪಿಸು ಮಾತುಗಳಿಗೆ..
ಬೆಚ್ಚನೆಯ ಆಲಿಂಗನಕೆ..
ಮನಸಾರೆ ಅವನ ಬರುವೆಕೆಯನ್ನು ಕಾತರಿಸುತ್ತವೆ...!

ದಿನವೂ...  ಬರುವ ಗೆಳೆಯ ಇಂದು ಬರಲೇ ಇಲ್ಲ ಯಾಕೆ  ??

ಆರೇ..  !!
ಇದು ಯಾರು  ??
ಮುಖ ನೋಡಿದರೆ.. ಹೃದಯದಂತಿದೆ...!
ಎಷ್ಟು ಒಳ್ಳೆಯವರಿರ ಬಹುದು..  !!
ಒಮ್ಮೆ ಮಾತನಾಡಿಸಿ ಬಿಡುತ್ತೇನೆ...

" ಸುಂದರಾ..
ಹೃದಯ ವದನಾ...!
ನೀನ್ಯಾರು.. ? ...
ಮಕರಂದ ಬೇಕಿತ್ತಾ..?
ನೋಡು...
ನಾನು ನನ್ನ ಗೆಳೆಯನಿಗಾಗಿ   ಮಕರಂದ ಇಟ್ಟು ಕೊಂಡಿರುವೆ..
ಅವಾನಾಸೆ  ನಂತರ ದಯವಿಟ್ಟು ನೀನು ಬಾ...."
"ಎಲೆ... ಸುಮವೇ...
ಕಾಣುವ ಮುಖಕ್ಕೂ...
ಮಾಡುವ ಕೆಲಸಕ್ಕೂ.. ಯಾವ ಸಂಬಂಧವೂ... ಇಲ್ಲ  !!
ನಿನ್ನಂದ.. ಚಂದ ..
ಮಕರಂದ ನನಗೆ ಬೇಕಿಲ್ಲ...
ನನ್ನ ...
ಈ..ಹೃದಯದ ಮುಖಕ್ಕೂ.. "ಹಸಿವೆ" ಎನ್ನುವದು ಇದೆಯಲ್ಲ...  !!
ಹಸಿವಿನಿಂದಲೇ.. ಜಗತ್ತು  !!
ನಿನ್ನ ಮಕರಂದವನ್ನು..
ನಿನ್ನ ಗೆಳೆಯನಿಗೆ ಕೊಡು... ನನಗೆ ಬೇಕಿಲ್ಲ..."


"ನನ್ನ ಆಹಾರ ಹುಡುಕುತ್ತಿರುವೆ...
ಸುಮ್ಮನೆ ಮಾತನಾಡಿಸ.. ಬೇಡ....
 ನನ್ನ ಸಮಯ ಹಾಳುಮಾಡ ಬೇಡ..
ಹೂವುಗಳು... ಯಾವಾಗಲೂ ಭಾವ ಲೋಕದಲ್ಲಿರುತ್ತವೆ ಅನ್ನುತ್ತಾರೆ...
ನಿನ್ನ ಕನಸಲ್ಲಿಯೇ...
ನೀನಿರು......"

"ಇದು ನಿಜ... !
ನಾವು ಹೂವುಗಳು...
 ಭಾವನಾ.. ಪ್ರಪಂಚದಲ್ಲಿರುತ್ತೇವೆ...!
ನೋಡು ಹೃದಯ ವದನಾ..... !
ನೀನು ತುಂಬಾ ಒಳ್ಳೆಯವ... !
ನೀನು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಟ್ಟೆಯಲ್ಲ  !!
ಇಷ್ಟು ಸಾಕು ನನಗೆ  !!.."
ಆಹಾ... !
ಇದೋ...ಬಂದನಲ್ಲ..  !!
 ನನ್ನ ಕನಸಿನ ರಾಜಾ... !
ಕಾಯುವ ಸಮಯಕ್ಕೂ..
ಒಂದು ಸಾರ್ಥಕತೆ ತಂದವ ...!!
ಈ..ನನ್ನಿನಿಯಾ..  !!
ಬಾ,, !
ಬಾ... ಗೆಳೆಯಾ..!.. !
ಯಾರೋ..ಹೀರಿ...ಹಾರಿಹೋಗುವ ಮುನ್ನ...!
ಕೊಟ್ಟುಬಿಡು..!
ನಿನ್ನ ಸಿಹಿ ಚುಂಬನ...!
ಆಲಿಂಗನ...!
ಕ್ಷಣ.. ಕ್ಷಣವೂ...!
ಮರೆತು ...
ಬೆರೆತು...
ಹೋಗುವ.. ಆ.. ರೋಮಾಂಚನ  !!





"ಅಯ್ಯೋ...!!
ಇದೇನಿದು ??
ಹೃದಯ ವದನಾ..
ನೀನ್ಯಾಕೆ.. ಇಲ್ಲಿ ಬಂದೆ ??
ನಮ್ಮ ಪ್ರೇಮ ಸಲ್ಲಾಪದ ಮಧ್ಯೆ..?

ಅಯ್ಯೋ...!!
   ನನ್ನ ಗೆಳೆಯನನ್ನು ಹಿಡಿದು ಬಿಟ್ಟನಲ್ಲಾ..  !!
ಏನು ಮಾಡಲಿ??"

" ಹೃದಯವಂತಾ..!!
ಇತ ನನ್ನ ಗೆಳೆಯ..!
ಈತನನ್ನು ಬಿಟ್ಟು ಬಿಡು...!! "


"ಎಲವೋ...
ಚಂದದ ಹೂವೆ...
ನಿನ್ನಿನಿಯ..
ನನ್ನ ಮೃಷ್ಟಾನ್ನ .. !!
ಭೋಜನ...!!
ಹೇಗೆ ಬಿಡಲಿ..?"


"ನಿನ್ನ ಪ್ರೇಮದ ಕಥೆ ಕೇಳಲು ಚಂದ...
ನನ್ನ ಹಸಿವೆ ನಿನ್ನ ಪ್ರೇಮದಿಂದ  ತುಂಬುವದಿಲ್ಲವಲ್ಲ..  !! "

"ಅಯ್ಯಾ...  ನನ್ನ ಗೆಳೆಯನನ್ನು ಬಿಟ್ಟು ಬಿಡು..
ನಮ್ಮ ಪ್ರೇಮ ಫಲವಾಗಲು ಬಿಡು.."

" ಎಲೆ.. ಸುಮವೇ...
 ನಿನ್ನ ಪ್ರೇಮದ ಗೊಡ್ಡು ಕಥೆ  ನನಗೆ ಬೇಕಿಲ್ಲ..."
ನನಗೆ ನನ್ನ ಹಸಿವು ದೊಡ್ಡದು..  !!"


"ನಿನ್ನ ಭಾವದ ಗೆಳೆಯ.
ನನಗೆ ಬಾಯಲ್ಲಿ ನಿರುಕ್ಕಿಸುತ್ತಾನೆ...!
ಎಷ್ಟು ರುಚಿಯಾಗಿದಾನೆ.. ಈ ನಿನ್ನ ಗೆಳೆಯಾ..  !

ಕಣ್ಮುಚ್ಚಿ ಕಾಣುವ ಕನಸು ಬದುಕಲ್ಲ.. !"


ನಿನ್ನ ಗೆಳೆಯನಿಗೂ ಹತ್ತಾರು...ಗೆಳತಿಯರು...!
ಇಲ್ಲಿ.. ಎಲ್ಲವೂ...
"ನಾನು...!
 ನನ್ನದು...!
ಭಾವುಕರಿಗೆ ಅಲ್ಲ ಈ ಜಗತ್ತು...!!.."
ಮೊದಲು ಹಸಿವೆ...
ಅದಕ್ಕಾಗಿ ಏನಾದರೂ.. ಸರಿಯೇ...!!


ನಾವು ಹೂವುಗಳು...
ಹೂವಿನಂಥಹ  ಮನಸ್ಸು...
ಹೂವಿನಂಥಹ ಹೃದಯ..

ನಮಗೂ..... ಒಂದು ಮನಸಿದೆ  !!


ಜಿವವಿದ್ದರೆ... ಭಾವದ ಬದುಕು.. !
ಪ್ರೇಮ...
ಕನಸು..
ಸೊಗಸು...!

ಮೊದಲು  ಹಸಿವು...
ಆಮೇಲೆ ಬದುಕು.. !!
ಇದೇ ನಮ್ಮ.. ಈ..   ಜಗತ್ತು.. !!






(ಒಳ್ಳೆಯ ಪ್ರತಿಕ್ರಿಯೆಗಳಿವೆ... ದಯವಿಟ್ಟು ನೋಡಿ....)

99 comments:

Mohan Hegade said...

ನಮಸ್ತೆ,
ಸುಂದರವಾದ ಫೋಟೋಗಳಿಗೆ ಅಸ್ತೆ ಸುಂದರ ಒಕ್ಕಣೆಯಿಂದ ಇನ್ನೂ ಸುಂದರವಗಿಸಿದ್ದಿರಿ. ಎಷ್ಟೊಂದು ಬಾವನೆಗಳಿವೆ ಅಲ್ವ!!!!!!!!!

ದನ್ಯರಿ,

ಮೋಹನ್ ಹೆಗಡೆ

ದಿನಕರ ಮೊಗೇರ said...

ಪ್ರಕಾಶಣ್ಣ...
ಓದುತ್ತಾ ಹೋಗಿ... ಮುಗಿದೊಡನೆ ನಿಟ್ಟುಸಿರು ಬಂತು.... ಎಲ್ಲಿಯ ಹೂವು, ಅದರ ಭಾವನೆ ಅರಿತು ಬರೆದು ಫೋಟೋ ಸಮೇತ ಬರೆದಿದ್ದೀರಲ್ಲ... hats off ಅಣ್ಣ....... ಅದನ್ನೂ ಮಾಮೂಲಾಗಿ ಬರೆಯದೆ, ಕಾವ್ಯ ರೂಪದಲ್ಲಿ ಬರೆದು ವಿಭಿನ್ನ ಸ್ಪರ್ಶ ಕೊಟ್ಟಿದ್ದೀರಿ..... sooopar ಫೋಟೋ.... ಅದ್ಭುತ.... ಅದ್ಭುತ ....

Ittigecement said...

ಮೋಹನ್ ಹೆಗಡೆಯವರೆ...

ಡಿಸ್ಕವರಿ ಚಾನೆಲ್ಲಿನಲ್ಲಿ..
"ಜಿಂಕೆಯನ್ನು ಅಟ್ಟಿಸಿಕೊಂಡು ಹೋಗುವ ಚಿರತೆ" ಸಂದರ್ಭವನ್ನು ನೋಡುವಾಗ...
ನನಗೆ ಬಹಳ ಬೇಸರವಾಗುತ್ತಿತ್ತು..
ಈ ಶೂಟಿಂಗ್ ಮಾಡುವ ಬದಲು ಆ ಬಡಪಾಯಿ ಜಿಂಕೆಯನ್ನು ರಕ್ಷಿಸ ಬಹುದಿತ್ತಲ್ಲಾ ಎಂದು...

ಇದು ನನ್ನ ಕಣ್ಣೆದುರೇ ನಡೆದ ಘಟನೆ... !
ಆಗ ನಾನು ಅಸಹಾಯಕನಾಗಿದ್ದೆ..

ಜಗತ್ತಿನಲ್ಲಿ "ಹೊಟ್ಟೆ ತುಂಬಿಸಿಕೊಳ್ಳುವ ಒಂದು ಕ್ರಿಯೆಗೆ ಮೂಕ ಸಾಕ್ಷಿಯಾಗಿದ್ದೆ...!"

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ದಿನಕರ...

ಊರಿಗೆ ಹೋದಾಗ ..
ನನ್ನ ಅಮ್ಮನ ತೋಟದಲ್ಲಿ ಕ್ಯಾಮರಾ ಹಿಡಿದು ನೋಡುತ್ತಾ ಫೋಟೊ ತೆಗೆಯುತ್ತಿದ್ದೆ...
ಆ ಕೀಟ ಹಿಡಿದ ಚಿಟ್ಟೆಯನ್ನು ಬಹಳ ಹೊತ್ತಿನಿಂದ ನೋಡುತ್ತಾ.. ಫೋಟೊ ತೆಗೆಯುತ್ತಾ ಇದ್ದೆ...
ಎಲ್ಲಿಂದಲೋ ಬಂದ ಆ ಕೀಟ ಈ ಸುಂದರ ಚಿಟ್ಟೆಯನ್ನು ತಿನ್ನುವದನ್ನು ಸುಮ್ಮನೆ ನೋಡ ಬೇಕಾಯಿತು..
ಅಸಹಾಯಕನಾಗಿ...!

ಒಂದೇ ಸೆಕೆಂಡಿಗೆ ಆ ಚಂದದ ಚಿಟ್ಟೆಯ ಕುತ್ತಿಗೆಯನ್ನು ಹಿಡಿದು ಜೀವ ತೆಗೆದು ಬಿಟ್ಟಿತ್ತು.. !!

ಆ ಹೃದಯದಾಕಾರದ ಕೀಟದಲ್ಲೂ ಕ್ರೂರ ಭಾವವನ್ನು ಕಂಡೆ. !

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಜಲನಯನ said...

ಚಿಟ್ಟೆ ಬೆಂಕಿ ಬಳಿಸುಳಿದರೆ ನೀ ಕೆಟ್ಟೆ
ನಿನಗಿದೆ ಬಣ್ಣದ ಹೂವು ಅದನೇಕೆ ಬಿಟ್ಟೆ
ಚಂದ ಹೂವಿನ ಅಂದ ನಿನ್ನ ರೆಕ್ಕೆ
ಯಾವುದಕೆ ಕಮ್ಮಿ ಅದಕೆ ನಿನಗೆ ಸೊಕ್ಕೆ
ಹೂವಮೇಲ್ಕುಳಿತು ಹೀರುವೆ ಮಕರಂದ
ಕೇಳು ಹೂವಿನ ಅಳಲ ಮನದಿಂದ............

ಪ್ರಕಾಶು..ಹೌದು ಇಟ್ಟಿಗೆ ಬಿಟ್ಟು ಕ್ಯಾಮರಾ ಲೇಖನಿಯ ವರಸೆ..ಭಲಾ..ಯಾವಾಗಿಂದ...?? ಚನ್ನಾಗಿದೆಯೋ ಮಾರಾಯ,,,

Dr.D.T.Krishna Murthy. said...

ಪ್ರಕಾಶ್ ಹೆಗ್ಡೆಯವರೇ;ಅದ್ಭುತ ಚಿತ್ರಗಳು !ಅದ್ಭುತ ಭಾವನಾ ಪಯಣ!ಹಾರ್ದಿಕ ಅಭಿನಂದನೆಗಳು ಸರ್.

PARAANJAPE K.N. said...

ಎಷ್ಟೊ೦ದು ಚಿಟ್ಟೆ ಗಳು, ಜೊತೆಗೆ ನಿಮ್ಮ ಅಡಿ ಟಿಪ್ಪಣಿಗಳು. ತು೦ಬಾ ಚೆನ್ನಾಗಿದೆ. ಹೂವಿನ ಚಿತ್ರ ನೋಡಿದರೆ ಕವನ ಬರೆಯುವ ಹುಮ್ಮಸ್ಸು ಬರುತ್ತೆ.

nenapina sanchy inda said...

Dear Prakash!!
super photographs!! ನೀವೆ ತೆಗಿದಿದ್ದಾ?/
praying mantis ನ camouflage ಎಷ್ಟು ಆಶ್ಚರ್ಯಕರ ಅಲ್ವಾ?? our nature is so wondrous!!
:-)
malathi S

ಮನದಾಳದಿಂದ............ said...

ಪ್ರಕಾಶಣ್ಣ,
ಒಂದು ಕ್ಷಣ ನಾನು ಬಾವುಕನಾಗಿಬಿಟ್ಟೆ,
ಹೂವಿಗೆ ತನ್ನಿನಿಯನ ಚಿಂತೆ, ಕೀಟಕ್ಕೆ ಊಟದ ಚಿಂತೆ........
ಚಂದದ ಚಿತ್ರಕ್ಕೆ ಸುಂದರ ಬರಹ,

ಸುಮ said...

ಪ್ರಕಾಶಣ್ಣ ಚೆಂದದ ಫೋಟೋ ಹಾಗೂ ಸಾಲುಗಳು. ಪ್ರಕೃತಿ ನಿಯಮವೇ ಹಾಗಲ್ಲವೆ ? ಕೀಟಗಳು ಕಪ್ಪೆಗೆ , ಕಪ್ಪೆ ಹಾವಿಗೆ , ಹಾವು ಹದ್ದಿಗೆ ಆಹಾರವಾಗಲೇ ಬೇಕು ...ಅದರ ಮುಖಾಂತರ ಸಮತೋಲನ ಕಾಯ್ದುಕೊಳ್ಳಲೇಬೇಕು......ಭಾವನೆಗಳಿಗಿಲ್ಲಿ ಬೆಲೆಯಿಲ್ಲ.

Ittigecement said...

ಪ್ರಿಯ ಆಜಾದ್...

ನನ್ನ ಚಿತ್ರ ಲೇಖನಕ್ಕಿಂತ ನಿಮ್ಮ ಪ್ರತಿಕ್ರಿಯೆ ಸೂಪರ್ !!

ಹೂವಿನ ಮನಸ್ಸು.. ಭಾವಗಳು ಏನೇ ಇದ್ದರೂ..
ಆ ಕೀಟಕ್ಕೇನು?
ಅದಕ್ಕೆ ಅದರ ಹಸಿವು ಇಂಗುವದು ಮುಖ್ಯ.. !

ಜಗತ್ತಿನ ಒಬ್ಬರ ನ್ಯಾಯ ಇನ್ನೊಬ್ಬರಿಗೆ ಅನ್ಯಾಯ..!

ಎಷ್ಟೋ ಸಂದರ್ಭದಲ್ಲಿ ಅನ್ನಿಸುತ್ತದೆ..
"ಭಾವುಕರಿಗಲ್ಲ ಈ ಜಗತ್ತು ಅಂತ" !!

ವಾಸ್ತವ..
ವಾಸ್ತವಿಕರು ಹೆಚ್ಚು ಸುಖವಾಗಿ ಈ ಜಗತ್ತಿನಲ್ಲಿರಬಲ್ಲರು ಅಲ್ಲವೆ..??..

ಆಜಾದ್.. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಕೃಷ್ಣಮೂರ್ತಿಯವರೆ...

ಕ್ಯಾಮರಾದಿಂದ ಈ ಘಟನೆ ನೋಡುತ್ತಿದ್ದ ನಾನು ಹೌಹಾರಿದೆ.. !!

ಸ್ವಲ್ಪವೂ ನಿರಿಕ್ಷೆ ಇರದ ಘಟನೆ ಇದು !

ದಿನವಿಡಿ ಯಾಕೊ ಮನದಲ್ಲಿ ಆ ಬಣ್ಣದ ಚಿಟ್ಟೆಯೇ.. ಕಾಡುತ್ತಿತ್ತು...

ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ ...

Ittigecement said...

ಪರಾಂಜಪೆಯವರೆ...

ನಾನು ತೆಗೆದ ಫೋಟೊ ನಿಮಗೆ ಸ್ಪೂರ್ತಿ ಕೊಟ್ಟರೆ ನನಗೆ ತುಂಬಾ ಸಂತೋಷ..!

ಡಿಸ್ಕವರಿ ಚಾನೆಲ್ಲಿನಲ್ಲಿ ಇಂಥಹ ಹಲವಾರು ಘಟನೆಗಳನ್ನು ನೋಡುತ್ತೇವೆ....
ಕ್ರೂರ ಸಿಂಹಗಳು.. ಹುಲಿಗಳು..
ಬಡಪಾಯಿ ಜಿಂಕೆ ಹಸುಗಳನ್ನು ಹಿಡಿಯುವದು..
ಅವುಗಳ ಜೀವ ಹೋಗುವ ದೃಶ್ಯಗಳನ್ನು ನೋಡಿ ಮನ ಕಲಕಿ ಹೋಗುತ್ತಿತ್ತು...

ಆದರೆ..

ಆ ಹುಲಿ/ಸಿಂಹ ಉಪವಾಸ ಬಿದ್ದು ಸಾಯ ಬೇಕೆ?
ಜಿಂಕೆ/ಹಸುಗಳು ಅವುಗಳ ಆಹಾರ ಆಷ್ಟೆ....

ಇಲ್ಲಿ ಕ್ರೂರತನ ಎಲ್ಲಿಂದ ಬಂತು?

ಕ್ರೂರತೆ ಎಂದರೆ ಏನು?
ಜೀವ ಇರುವ ಸಸ್ಯಗಳನ್ನು ಸಾಯಿಸುವದು..
ಆಹಾರವಾಗಿ ತಿನ್ನುವದೂ ಕ್ರೂರತನ ಅಲ್ಲವೆ?

ಪರಾಂಜಪೆಯವರೆ..
ನಿಮ್ಮ ಕವನಕಾಗಿ ಕಾಯುವೆವು..

ಪ್ರೋತ್ಸಾಹದ ನುಡಿಗಳಿಗಾಗಿ ಧನ್ಯವಾದಗಳು...

Ittigecement said...

ಮಾಲತಿಯವರೆ...(ನೆನಪಿನ ಸಂಚಿಯಿಂದ)

ಖಂಡಿತ ..ಅನುಮಾನವೇ ಬೇಡ..
ಇವೆಲ್ಲ ಫೋಟೊಗಳನ್ನು ನಾನು ತೆಗೆದದ್ದು..

ಇವೆಲ್ಲ ತಾಂತ್ರಿಕವಾಗಿ ಉತ್ತಮ ಫೋಟೊಗಳಲ್ಲ...

ನಮ್ಮ ಬ್ಲಾಗಿಗರಾದ..
ಡಿ.ಜಿ. ಮಲ್ಲಿಕಾರ್ಜುನ..
ಪಾಲಚಂದ್ರ.. ಕೃಷ್ಣ ಭಟ್.. ಉದಯ್..ಮನಸ್ವಿ.. ಕೆ. ಶಿವು ಸರ್..
ಇವರೆಲ್ಲ ತೆಗೆಯುವ ಮಟ್ಟದಲ್ಲಿಲ್ಲ...

ನಮ್ಮ "ಹೆಬ್ಬಾರ್ ಸರ್" ಹೆಸರು ಫೋಟೊಗಳಂತೂ ಸೂಪರ್ ಇರುತ್ತವೆ..

ಇನ್ನೂ ಹಲವು ಗೆಳೆಯರ ಹೆಸರು ಬಿಟ್ಟುಹೋಗಿದ್ದರೆ ಅದು ನನ್ನ ತಪ್ಪು...
ದಯವಿಟ್ಟು ಬೇಸರಿಸಬೇಡಿ..

ನಮ್ಮಊರಿನ ಕಡೆ ಈ ಕೀಟಕ್ಕೆ "ಎಲೆ ಶೆಟ್ಟಿ" ಅನ್ನುತ್ತೇವೆ...

ವೈಜ್ಞಾನಿಕ ಹೆಸರು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು...

ಈ ಜೀವ ಜಗತ್ತಿನ ವೈವಿದ್ಯಮಯ..
ಕುತೂಹಲ ಜೀವಜಾಲ ಬಹಳ ಆಶ್ಚರ್ಯ ತರುತ್ತವೆ ಅಲ್ಲವೆ?

ಮಾಹಿತಿಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು..

Subrahmanya said...

ತುಂಬಾ ಚೆನ್ನಾಗಿದೆ. ಚಿತ್ರಗಳ ಜೊತೆಗಿನ ಭಾವಮೇಳ ಮುದನೀಡುವಂತಿದೆ.

Ittigecement said...

ವಸಂತ್...

ನನಗೆ ಫೋಟೊ ತೆಗೆಯುವಾಗ..
ಆ ಚಿಟ್ಟೆಯಲ್ಲಿ ಒಂದು "ಸ್ಟ್ರಾ" ಇದ್ದಿರುವದು ಕಂಡಿತು...
ಅದು ಎಷ್ಟು ಚಂದವಾಗಿ ಚಕ್ಕುಲಿ ಥರಹ ಮಡಚಿ...
ಹೂವಿನೊಳಗೆ ಹಾಕಿ ಕುಡಿಯುವದು...
ಇದೆಲ್ಲವೂ ಫೋಟೊದಲ್ಲಿ ಬಂದಿದೆ...!!

ವಾಹ್ !
ಇದೆಂಥಹ ಸೃಷ್ಟಿ..!!

ಆ ಚಿಟ್ಟೆಗೆ ತನ್ನ ಆಹಾರ ಇಂಥಹ ಹೂವುಗಳಲ್ಲೇ ಇರುತ್ತದೆ ಅನ್ನುವದು ಹೇಗೆ ಗೊತ್ತಾಗುತ್ತದೆ?

ಸೃಷ್ಟಿಯ ಸೋಜಿಗದಲ್ಲಿ ಇದೂ ಒಂದು ಅಲ್ಲವಾ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮನದಾಳದಿಂದ.. (ಪ್ರವೀಣ್)

ಈ ಪ್ರಪಂಚದಲ್ಲಿ ಎಲ್ಲವೂ ತಮಗೆ ಬೇಕಾಗಿದ್ದನ್ನು ಹುಡುಕುತ್ತಲೇ ಇರುತ್ತಾರೆ..
ಸಿಕ್ಕಿದಾಗ ತೆಗೆದು ಕೊಳ್ಳುತ್ತಾರೆ.. ಅಲ್ಲವೆ?

ಹಸಿವೆ ಇಲ್ಲದಿದ್ದರೆ ಜಗತ್ತಿನಲ್ಲಿ ಸ್ವಾರಸ್ಯವೇ ಇರುತ್ತಿರಲಿಲ್ಲವಾಗಿತ್ತು ಅಲ್ಲವೆ?

ಹಸಿವೆಯಿಂದಾಗಿ ಈ ಹುಡುಕಾಟ...
ಹೊಡೆದಾಟ...!!

ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರವೀಣ್...

Ittigecement said...

ಸುಮಾ...

ಪ್ರಕೃತಿ ತನ್ನ ಸಮತೋಲನವನ್ನು ತಾನು ಕಾಪಾಡಿಕೊಳ್ಳುತ್ತದಂತೆ..
ನಿಜವಿರಬಹುದು...

ಆದರೂ..
ಚಿಟ್ಟೆಯಂಥಹ ಸಾಧುಜೀವಿಗಳನ್ನು ಬೇಟೇಯಾಡುವದನ್ನು ನೋಡುವಾಗ
ಎಲ್ಲೊ ಒಂದುಕಡೆ "ಚುರ್ರ್" ಎನಿಸುತ್ತದೆ..
ಪಾಪ ಎಂದು ಮನ ಕರಗುತ್ತದೆ..

ಇದು ವಾಸ್ತವವಾದಿಗಳ ಜಗತ್ತು...!
ಭಾವುಕರಿಗಲ್ಲ ಈ ಪ್ರಪಂಚ.. ಅಲ್ಲವಾ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಪ್ತವರ್ಣ said...

Ultimate ಫೋಟೋಗಳು...!

ಮನಸು said...

super .....

Ittigecement said...

ಸುಬ್ರಮಣ್ಯ...

ಈ ಸಂದರ್ಭ ಘಟಿಸಿದಾಗ..
ನನಗೆ ಸಮಯ ಸಾಲಲಿಲ್ಲ..
ಚಕ ಚಕನೆ ಫೋಟೊ ತೆಗೆಯತೊಡಗಿದೆ..
ಅದು ಫೋಕಸ್ ಆಗಿದೆಯಾ..?
ಯಾವ ಎಂಗಲ್ ಬೇಕು.. ಎಂದು ಯೋಚಿಸುವಷ್ಟು ಸಮಯ,ವ್ಯವಧಾನ ಇರಲಿಲ್ಲ..
ಬಹುಷಃ ಇರುವದೂ ಇಲ್ಲ..

ಇಂಥಹ ಸಂದರ್ಭಗಳಲ್ಲಿ ಫೋಟೊ ತೆಗೆದು ಅನುಭವವಿರುವವರಿಗೆ ಅವೆಲ್ಲ ಸಾಧ್ಯವೇನೊ...

ಫೋಟೊ ತೆಗೆದಾದ ಮೇಲೆ ಆ ಬಣ್ಣದ ಚಿಟ್ಟೆ ಬಗೆಗೆ ನೆನಪಾಗಿ ಬೇಸರವಾಗುತ್ತಿತ್ತು..

ಇಲ್ಲಿರುವ ಪ್ರತಿಫೋಟೊವನ್ನು ಎನ್ಲಾರ್ಜ್ ಮಾಡಿನೋಡಿ..
"ಎಲೆಶೆಟ್ಟಿ" ಕೀಟದ ಮುಖದಲ್ಲಿ ಕ್ರೂರ ಭಾವ ಕಾಣಿಸುತ್ತದೆ...

ಧನ್ಯವಾದಗಳು..

sunaath said...

ಪ್ರಕಾಶ,
ಹೂವಿನ ಪ್ರೇಮಭಾವನೆಯನ್ನು ಓದುತ್ತ ಹೋಗುತ್ತಿದ್ದಾಗ ಎಂಥಾ
ಖುಶಿ ಆಗ್ತಾ ಇತ್ತು. ಕೊನೆಗೊಮ್ಮೆ ಹೃದಯವದನನು ಚಿಟ್ಟೆಯನ್ನು ಭಕ್ಷಿಸುವದನ್ನು ನೋಡಿದಾಗ ಅಷ್ಟೇ ವ್ಯಥೆಯಾಯಿತು. ಬಹಳ ತಾಳ್ಮೆಯಿಂದ ತೆಗೆದ ಉತ್ತಮ ಚಿತ್ರಗಳನ್ನು ಕೊಟ್ಟಿದ್ದೀರಿ. ಅಷ್ಟೇ ಉತ್ತಮ ವ್ಯಾಖ್ಯಾನ ನೀಡಿದ್ದೀರಿ. ಅಭಿನಂದನೆಗಳು.

Ittigecement said...

ಸುಪ್ತವರ್ಣ...

ಒಂದು ದೊಂಬಿ,ಗಲಾಟೆ ನಡೆಯುತ್ತಿದೆ ಅಂದುಕೊಳ್ಳೋಣ..
ಅಲ್ಲಿ ನಾಲ್ಕಾರು ಜನ ಸೇರಿ ಒಬ್ಬನಿಗೆ ಹೊಡೆಯುತ್ತಿದ್ದಾರೆ..

ಅದರ ಫೋಟೊತೆಗೆಯುವ ಫೋಟೊಗ್ರಾಫರನ ಮನಸ್ಥಿತಿ ಹೇಗಿರ ಬಹುದು?

ಆ ಜಗಳ ತಪ್ಪಿಸುವದು ಬಿಟ್ಟು..
ತನ್ನ ಊಟಕ್ಕಾಗಿ ಆ ಜಗಳದ ಒಳ್ಳೆಯ ಫೋಟೊ ತೆಗೆಯುವ ಗುರಿಯಲ್ಲಿರುತ್ತಾನೆ...
ಚಂದದ ಫೋಟೊ ತೆಗೆದು ತನ್ನ ಸಂಪಾದಕರಿಂದ "ಶಭಾಸ್" ತೆಗೆದುಕೊಳ್ಳುವ ತವಕದಲ್ಲಿರುತ್ತಾನೆ...

ಎಲ್ಲವೂ ಹೊಟ್ಟೆಗಾಗಿ...
ಹಸಿವಿನ ತೃಪ್ತಿಗಾಗಿ.. ಅಲ್ಲವೆ?

ಇದು ವಾಸ್ತವವಾದಿಗಳ ಜಗತ್ತು... ನಿಜ ತಾನೆ?

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಮನಸು....

ಮಹಾಭಾರತದ ಮಹಾ ಯುದ್ಧದ ವೀಕ್ಷಕ ವಿವರಣೆಯನ್ನು "ಸಂಜಯ" ಕುರುಡ ಧೃತರಾಷ್ಟ್ರನಿಗೆ ಕೊಡುತ್ತಿದ್ದನಂತೆ..

ಭೀಮ ದುಃಷ್ಯಾಸನನ ಕರುಳು ಕಿತ್ತು...
ರಕ್ತ ಕುಡಿದು.. ದ್ರುಪದಿಯ ಮುಡಿಯನ್ನು ಕಟ್ಟುವ ಸನ್ನಿವೇಶವನ್ನು ಹೇಗೆ ಹೇಳಿರ ಬಹುದು...?

ತನ್ನ ಮಗನ ಅಂತ್ಯದ ವಿವರಣೆಯನ್ನು ಧೃತರಾಷ್ಟ್ರ ಹೇಗೆ ಕೇಳಿರ ಬಹುದು ?

ಈ ಜಗತ್ತು ವಾಸ್ತವಿಕದ ತಳಹದಿಯ ಮೇಲಿದೆ...

ಏನು ಆಗುತ್ತಿದೆಯೋ ಅದು ಆಗುತ್ತಿರುತ್ತದೆ..
ನಮ್ಮದನ್ನು ಮಾತ್ರ ನೋಡಿಕೊಳ್ಳಬೇಕು...
ನಾನು..!
ನನ್ನದು ಮಾತ್ರ...

ಭಾವುಕರಿಗಲ್ಲ .. ಈ ಜಗತ್ತು.. !!
ಅಲ್ಲವೆ??


ಪ್ರತಿಕ್ರಿಯೆಗೆ ಧನ್ಯವಾದಗಳು...

viju said...

anna gr8 photos and gr8 poem.......

Kishan said...

Nice series of photos with fitting poem... hats off !!!

Anonymous said...

ಅಗಾಧ ಪ್ರತಿಭೆಯ ಪ್ರಕಾಶ್...ಮತ್ತೆ ಮತ್ತೆ ನೋಡಬೇಕೆನ್ನಿಸುವ ಚಿತ್ರಗಳೊಡನೆ ಅಷ್ಟೇ ನವಿರಾದ ವಿವರಣೆ ಈ ಬರಹವನ್ನ ಸೊಗಸಾಗಿಸಿದೆ! ನೀವು ನಮ್ಮವರೆನ್ನುವ ಹೆಮ್ಮೆ ನನಗಾಗುತ್ತಿದೆ!
"ಜಿವವಿದ್ದರೆ... ಭಾವದ ಬದುಕು.. !ಪ್ರೇಮ...ಕನಸು..ಸೊಗಸು...!
ಮೊದಲು ಹಸಿವು...ಆಮೇಲೆ ಬದುಕು.. !!ಇದೇ ನಮ್ಮ.. ಈ.. ಜಗತ್ತು.. !!" ಎಂತಹ ಸಾಲುಗಳಿವು!! Hats off to u!

ಬೆಳೆದು ದೊಡ್ಡವರಾಗಿ ಎಂಬ ಹಾರೈಕೆ ಒಡನೆ...

Ittigecement said...

ಸುನಾಥ ಸರ್...

ಬಹಳಷ್ಟು ಸಂದರ್ಭದಲ್ಲಿ ನನಗನ್ನಿಸಿದೆ..
"ಈ ಜಗತ್ತಿನಲ್ಲಿ ವಾಸ್ತವವಾದಿಗಳು ಹೆಚ್ಚು ಖುಷಿಯಿಂದ ಇರುತ್ತಾರೆ" ಅಂತ...

ಬದುಕು ಹೇಗೆ ಸಿಗುತ್ತೊ ಹಾಗೆ ಇದ್ದು ಬಿಡುವದು...
ಏನೇ ಆದರೂ ಅದಕ್ಕೊಂದು ಪ್ರಾಕ್ಟಿಕಲ್ ಆಗಿ ಅರ್ಥ ಮಾಡಿಕೊಂಡುಬಿಡುವದು...

ಭಾವುಕರ ಹಾಗೆ ಇಲ್ಲದೆ ಇರೋದನ್ನು ಕಲ್ಪಿಸಿಕೊಂಡು...
ಮನಸ್ಸಿಗೆ ಕಷ್ಟ ತೆಗೆದುಕೊಳ್ಳುವದಿಲ್ಲ ಅಂತ...

" ಈ ಜಗತ್ತು ಭಾವುಕರಿಗಲ್ಲ..." ಅಲ್ಲವೆ??

ಸರ್ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ವಿಜಯೇಂದ್ರ...

ಈ ಚಿಟ್ಟೆ ಎಷ್ಟು ಸಂಭ್ರಮದಿಂದಿತ್ತು ಗೊತ್ತಾ?

ಇಲ್ಲಿ ಎರಡು ಮೂರು ಫೋಟೊಗಳನ್ನು ಹಾಕಿರುವೆ ನೋಡಿ..

ತೋಟದಲ್ಲಿರುವ ಎಲ್ಲ ಬಣ್ಣ ಬಣ್ಣದ ಹೂವುಗಳಿಗೆ ಹಾರುತ್ತಿರುವ ಈ ಚಿಟ್ಟೆ ನೋಡಿ ಸಂತೋಷವಾಗುತ್ತಿತ್ತು...
ಆದರೆ ಎಲ್ಲಿಂದಲೋ ಬಂದ "ಎಲೆ ಶೆಟ್ಟಿ" ಕೀಟ ಇದರ ಕುತ್ತಿಗೆಯನ್ನೇ ಹಿಡಿದು ಬಿಟ್ಟಿತ್ತು...!!

ನಮ್ಮ ಬದುಕೂ ಹೀಗೆ ಅಲ್ಲವೆ?

ನಾವು ಹುಟ್ಟಿದ ಕ್ಷಣದಿಂದ "ಸಾವು" ನಮ್ಮ ಪಕ್ಕದಲ್ಲಿಯೇ ಇದ್ದಿರುತ್ತದೆ..
ನಾವು ಉಸಿರಡುವ ಶ್ವಾಸದ ಹಾಗೆ...!

ಇದು ಗೊತ್ತಿದ್ದೂ ನಾವು ಎಷ್ಟೆಲ್ಲ ಹಾರಾಡುತ್ತೇವೆ ಅಲ್ಲವಾ?

ಗೊತ್ತಿದ್ದೂ..
ಈ ಶೃಂಗಾರ..
ವೈಭವ... ಆಡಂಬರ... ಆತ್ಮವಂಚನೆ.. !!

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Shashi jois said...

ತುಂಬಾ ಚೆನ್ನಾಗಿದೆ

ವಿ ಡಿ ಭಟ್ ಸುಗಾವಿ said...

ಚಿತ್ರಗಳು ಮತ್ತು ಅದರೊಂದಿಗಿನ ಸಾಲುಗಳು ಇವೆರಡೂ ಸುಂದರವಾಗಿವೆ.ಪ್ರಕಾಶಣ್ಣಾ,

Joshi Poornachandra said...

sakkataagide..

V.R.BHAT said...

ಜೀವೋ ಜೀವಸ್ಯ ಜೀವನಂ ಎಂಬುದು ಸಂಸ್ಕೃತದ ಉಲ್ಲೇಖ--ಇದರರ್ಥ ಎಷ್ಟೋ ಜೀವಿಗಳು ಇನ್ನೊಂದು ಜೀವವನ್ನು ಬಲಿತೆಗೆದುಕೊಂಡು ಆಹಾರವಾಗಿ ಸೇವಿಸಿ ಬದುಕುತ್ತವೆ, ಕೆಲವೊಮ್ಮೆ ನೋಡಿದಾಗ ಜೀವನವೇ ನರಕವೇನೋ ಎನ್ನುವಷ್ಟು ಬೇಸರ ಸಹ ಉಂಟಾಗುತ್ತದೆ, ಬದುಕುವಿಕೆಗಾಗಿ ಕೊನೇಕ್ಷಣದ ವರೆಗೂ ಸಾಯುವ ಜೀವಿ ಹೊರಾಡುತ್ತಿರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ, ಒಮ್ಮೊಮ್ಮೆ ನಾನು ಚಿಂತಿಸುವುದಿದೆ-- ಈ ಹೋರಾಟವನ್ನು ತಪ್ಪಿಸಿದರೆ ಒಂದು ಪಾರ್ಟಿಗೆ ಆಹಾರ ತಪ್ಪಿಸಿ ಉಪವಾಸ ಕೆಡವಿದ ಪಾಪ ಮತ್ತು ಇನ್ನೊಂದಕ್ಕೆ ಜೀವದಾನ ಒದಗಿಸಿದ ಪುಣ್ಯ---ಈ ಎರಡರಲ್ಲಿ ನನಗೆ ಯಾವುದು ಬರುತ್ತದೆ ಎಂದು, ಆದರೆ ಅದನ್ನು ಹಾಗೇ ಬಿಡಿಸಲಾಗಲೀ, ಬದುಕಿಸಲಾಗಲೀ ನಮ್ಮಿಂದ ಎಷ್ಟು ಸಂಖ್ಯೆಯಲ್ಲಿ ಸಾಧ್ಯ, ಬುದ್ಧಿ ತಿಳಿದಿರುವ ಮನುಷ್ಯರೇ ಮಾತೆಯಾಗಿರುವ ಗೋವನ್ನೂ ಹಾಗೂ ಕುರಿ, ಕೋಳಿಗಳನ್ನೂ ಕ್ರೂರವಾಗಿ ತರಿದು ತಿನ್ನುವಾಗ ಮತಿಹೀನ ಮೂಕಜೀವಿಗಳು, ಕೀಟಗಳು ಹೇಗೆ ಮಾಡಿಯಾವು? ತಮ್ಮ ಛಾಯಾಚಿತ್ರಗಳು ಮತ್ತು ಒಕ್ಕಣೆಗಳು ತುಂಬಾ ಹಿಡಿಸಿದವು, ಧನ್ಯವಾದ

ಮನಸಿನ ಮಾತುಗಳು said...

Prakashanna,

tumba chanaagiddu ee lekhana.. ishta aatu... :-)

Ittigecement said...

ಕಿಶನ್...

ಇಂಥದೊಂದು ಸಂದರ್ಭ ನನಗೆ ಸಿಕ್ಕಿದ್ದು ನನ್ನ ಅದೃಷ್ಟ..

ಕೆಲವೊಮ್ಮೆ ನಾವು ಇಂಥಹ ಸನ್ನಿವೇಶ ನೋಡುತ್ತಿದ್ದರೂ..
ನಮ್ಮ ಬಳಿ ಕ್ಯಾಮರಾ ಇರ್‍ಒದಿಲ್ಲ..

ಇಂಥಹ ಇನ್ನೊಂದು ಅಪೂರ್ವ ಸಂದರ್ಭಕ್ಕೆ ನಾನು ಸಾಕ್ಷಿಯಾಗಿದ್ದೆ.

ಕೆಲವು ದಿನದ ನಂತರ ಬ್ಲಾಗಿನಲ್ಲಿ ಹಾಕುವೆ...

ಚಿಟ್ಟೆ ಪ್ರಕರಣ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಸುಮನಾ..

ನಮ್ಮ ಬದುಕು ವಾಸ್ತವದ ತಳಹದಿಯ ಮೇಲೆಯೇ ನಿಂತಿದೆ...
ಕಲ್ಪನೆಯ ಕನಸು ಭಾವಲೋಕದೊಳಗೆ ಚಂದ...

ವಾಸ್ತವದ ಕ್ರೂರತೆ..
ಕಟು ಸತ್ಯದ ಕಹಿ..

ಭಾವುಕರಿಗೆ ಅರಗಿಸಿಕೊಳ್ಳುವದು ಬಹಳ ಕಷ್ಟ...

ಹಾಗಾಗಿ " ಈ ಜಗತ್ತು ಭಾವುಕರಿಗಲ್ಲ" ಅಲ್ಲವೆ..?

ನಿಮ್ಮ ಕುಟುಂಬದ ಪರಿಚಯವಾಗಿ..
ನೀವೆಲ್ಲರೂ ನಮ್ಮ ಸ್ನೇಹಿತರಾದದ್ದು ಈ ಬ್ಲಾಗ್ ಕಾರಣ..
ಇದಕ್ಕೂ ಮೊದಲು ಪರಿಚಯವೇ ಇರಲಿಲ್ಲವಾಗಿತ್ತು..
ಈಗ ಎಷ್ಟೋದಿನಗಳ ಪರಿಚಯ ಅನ್ನಿಸುತ್ತಿದೆ..ಅಲ್ಲವೆ?

ನಿಮ್ಮಂಥಹ ಅನೇಕ ಸ್ನೇಹಿತರು ಸಿಕ್ಕಿದ್ದಕ್ಕೆ ಈ ಬ್ಲಾಗ್ ಲೋಕಕ್ಕೆ "ಥ್ಯಾಂಕ್ಸ್" ,, ಹೇಳಲೇ ಬೇಕು..

ಚಿತ್ರ,ಲೇಖನ ಇಷ್ಟವಾಗಿದ್ದಕ್ಕೆ...
ನಿಮ್ಮ ಪ್ರೀತಿಗೆ ನನ್ನ ನಮನಗಳು...

Ittigecement said...

ಶಶಿಯವರೆ..

ಚಿಟ್ಟೆಯ ಸಾವು ನೋಡಿ ನನಗನ್ನಿಸಿದ್ದು ಇಷ್ಟು..

ಹುಟ್ಟಿನಿಂದ ಸಾವೂ ಕೂಡ ನಮ್ಮ ಬೆನ್ನ ಹಿಂದೆಯೇ ಬಂರುತ್ತದೆ..
ಯಾವ ಸಮಯದಲ್ಲಾದರೂ..
ಘಳಿಗೆಯಲ್ಲಾದರೂ ಬರಬಹುದು..
ಖಂಡಿತ ಬಂದೇ ಬರುತ್ತದೆ..

ನಿನ್ನೆ ಒಂದು ಸುಂದರ ಸುಭಾಷಿತ ಓದಿದೆ..

"ಅನಾಯಾಸೇನ ಮರಣಂ..
ವಿನಾ ದೈನ್ಯೇನ ಜೀವನಂ..."

ಮರಣವೆಂಬುದು ಅನಾಯಾಸವಾಗಿ ಬರಬೇಕಂತೆ..
ಬದುಕು ದೈನ್ಯವಾಗಿ, ಪರಾವಂಬಿಯಾಗಿ ಇರಬಾರಂದಂತೆ.."

ಹುಟ್ಟೂ ನಮ್ಮ ಕೈಯಲ್ಲಿಲ್ಲ..
ಸಾವು ಕೂಡ ನಮ್ಮ ಎಣಿಕೆಯಲ್ಲಿಲ್ಲ..

ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು..

ಮನಮುಕ್ತಾ said...

ಸು೦ದರ ಚಿತ್ರ..ಸು೦ದರ ಭಾವ...ಜೊತೆಯೇ ಕ್ರೂರತೆಯ ಚಿತ್ರ..ಭಾವ..ಪ್ರಕೄತಿಯ ವಿಭಿನ್ನ ಮುಖಗಳು..
ತು೦ಬಾ ಚೆನ್ನಾಗಿ ವಿವರಿಸಿದ್ದಿರಿ.

Ranjana H said...

nija prakashanna, prapanchadalli hasive ellakkinta doddadu, adu enthavanindalu eneno kelasa maadisibiduttade. sundara baraha.

ಸಾಗರಿ.. said...

ಬಹಳ ಸುಂದರವಾದ photo ಗಳು. ಒಂದಕ್ಕಿಂತ ಇನ್ನೊಂದು ಚೆಂದ. ಹಾಗೆಯೇ ಬರಹ ಕೂಡ.

Ittigecement said...

ವಿ.ಡಿ.ಭಟ್..

"ಯಾವುದೋ ಬಗೆಯಲ್ಲಿ ಎಲ್ಲರಿಗೂ ಅನ್ನ.." ಅಂದಿದ್ದಾನೆ ಕವಿ..

ಒಬ್ಬರ ಅನ್ನ..!
ಇನ್ನೊಬ್ಬರ ಪ್ರಾಣ.. ! ಇದು ಸೋಜಿಗ ಅಲ್ಲವೆ?

ಹೃದಯ ಮುಖದ "ಎಲೆಶೆಟ್ಟಿ ಹುಳ" ಚಿಟ್ಟೆತಿನ್ನುವಾಗ ಮಾಡುವ ಕ್ರೂರ ಮುಖ
(ಫೋಟೊ ನ್ಂ. ೨೨/೨೩/ ಕೊನೆಯ ಫೋಟೊ ನೋಡಿ) ನೋಡಿ ನಾನು ದಂಗಾಗಿ ಹೋಗಿದ್ದೆ..!
(ಫೋಟೊಗಳ ಮೇಲೆ ಕ್ಲಿಕ್ ಮಾಡಿ, ಎನ್ ಲಾರ್ಜ್ ಮಾಡಿ ನೋಡಿ)

ಹಾಗೆಯೆ ಎಲೆ ಶೆಟ್ಟಿ ಹುಳದ ಮೊದಲ ಫೋಟೊ ನೋಡಿ ಎಷ್ಟು ಮುದ್ದಾಗಿದೆ..!

ಅವುಗಳಲ್ಲೂ ಭಾವನೆಗಳಿವೆಯಾ?

ಫೋಟೊ ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

Shobha Hegde said...

ಪ್ರಕಾಶಣ್ಣ...

ನೈಜತೆಯ ಚಿತ್ರಣ..ಬಹಳ ಸುಂದರವಾಗಿದೆ!!

Ittigecement said...

ಜೋಶಿ.ಪಿ.

ನನ್ನ ಬ್ಲಾಗಿಗೆ ಸ್ವಾಗತ..

ನಿರುಪದ್ರವಿಗಳಾದ ಚಿಟ್ಟೆ, ಜಿಂಕೆಗಳನ್ನು ಎಲೆಶೆಟ್ಟಿ. ಚಿರತೆಗಳು ಕ್ರೂರವಾಗಿ ಆಟ್ಟಾಡಿಸಿ ಹಿಡಿಯುವದನ್ನು ನೋಡಿದಾಗ ಮನಸ್ಸಿಗೆ ಖೇದವಾಗುತ್ತದೆ..
ಅವುಗಳ ಜೀವ ಹೋಗುವ ಕ್ಷಣಗಳನ್ನು ನೋಡಲಾಗುವದಿಲ್ಲ...

ಬೇಸರವಾಗುತ್ತದೆ.. ದುಃಖವಾಗುತ್ತದೆ..

ಆದರೆ ವಾಸ್ತವಿಕವಾಗಿ ಅವು ನಮ್ಮನಿಮ್ಮಂತೆಯೆ ಊಟಮಾಡುತ್ತಿವೆ..
ಚಿಟ್ಟೆ/ಜಿಂಕೆಗಳು ಅವುಗಳ ಆಹಾರ... !!

ಹಸಿವೆಗೆ ಊಟಮಾಡುವದು ತೀರಾ ಸಹಜ ಕ್ರಿಯೆ ಅಲ್ಲವೆ?

ಪ್ರೋತ್ಸಾಕ್ಕಾಗಿ ಧನ್ಯವಾದಗಳು...

Ittigecement said...

ವಿ.ಆರ್.ಭಟ್...

ನೀವೆನ್ನುವದು ನಿಜ...
ಒಂದು ಪ್ರಾಣಿಗೆ ಆಹಾರ ಕೊಡಬೇಕೆಂದರೆ..
ಇನ್ನೊಂದು ಪ್ರಾಣಿಯನ್ನು ಸಾಯಿಸ ಬೇಕಾಗುತ್ತದೆ...

ನನಗೆ ಒಬ್ಬ ಚೀನಾ ದೇಶದ ಸ್ನೇಹಿತನಿದ್ದಾನೆ..
ನಾನು ಕತಾರ್ ದೇಶದಲ್ಲಿದ್ದಾಗ ಒಂದು ವೀಡಿಯೋ ತೋರಿಸಿದ...

ಅಲ್ಲಿ ಒಂದು ಕ್ರೀಡಾಂಗಣದಲ್ಲಿ ಹಸಿದ ಹುಲಿಯನ್ನು ಬಿಡುತ್ತಾರೆ...
ಹಾಗೆಯೆ ಒಂದು ಕೊಬ್ಬಿದ ಹೋರಿ(ಎತ್ತು) ನ್ನೂ ಬಿಡುತ್ತಾರೆ..

ಹಸಿದ ಹುಲಿ ಹಸುವನ್ನು ಕೃರವಾಗಿ ಕಚ್ಚಿ ಸಾಯಿಸುವದನ್ನು ಜನ ಕೇಕೆ ಹಾಕಿ ನೋಡುತ್ತಾರೆ...

ನನಗೆ ಪೂರ್ತಿಯಾಗಿ ನೋಡಲಾಗಲಿಲ್ಲ...

ಆತ ವಿಡಿಯೋ ಆಫ್ ಮಾಡಿದ..
ನಾನು ಚೀನಾ ದೇಶದ ಸ್ನೇಹಿತನನ್ನು ಕೇಳೀದೆ...

"ಇದು ಹಿಂಸೆಯಲ್ಲವೆ? ಈ ಹಿಂಸೆಯನ್ನು ನೋಡಿ ಹೇಗೆ ಎಂಜಾಯ್ ಮಾಡುತ್ತೀರಿ?"

ಆತನ ಉತ್ತರ ಬಹಳ ಮಾರ್ಮಿಕವಾಗಿತ್ತು..
"ನೀವು ಗೋವುಗಳನ್ನು ಪೂಜಿಸುತ್ತೀರಿ..
ಅದಕ್ಕೆ ನೋಡಲಿಕ್ಕೆ ಕಷ್ಟವಾಗುತ್ತದೆ..
ಅದು ಹುಲಿಯ ಆಹಾರ...
ನಾವು ಕೊಡದಿದ್ದರೂ ಅದು ಅಂಥಹ ಪ್ರಾಣಿಯನ್ನು ಹಾಗೆಯೇ ತಿನ್ನುತ್ತದೆ...
ತೀರಾ ಸಹಜವಾಗಿ...
ನಾವು "ಮೃಷ್ಟಾನ್ನ ಭೋಜನ ಮಾಡುವ ಹಾಗೆ"

ನಾವು ಮಾಂಸಹಾರಿಗಳು.. ನಮಗೆ ಗೋಮಾಂಸ ರುಚಿಯಾದ ಆಹಾರ...

ಬದುಕಲು ತಿನ್ನುವದು..
ತಿನ್ನುವಾಗ ರುಚಿಯನ್ನು ಬಯಸುವದು ಸಹಜ...

ನೀವು ಸಸ್ಯಹಾರಿ ಕುಟುಂಬದಲ್ಲಿ ಹುಟ್ಟಿದ್ದೀರಿ..
ಮಾಂಸಹಾರ ಅಸಹ್ಯವಾಗಿ.
ಕ್ರೂರವಾಗಿ ಕಾಣುತ್ತದೆ..

ನೆನಪಿಡಿ ನೀವು ತಿನ್ನುವ ಸೊಪ್ಪಿಗೂ ಜೀವವಿದೆ..

ಅವನ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟರೂ...
ಅವನ ಮಾತುಗಳ ಸತ್ಯ ಇಂದಿಗೂ ನನ್ನನ್ನು ಕಾಡುತ್ತಿರುತ್ತದೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

Prakashanna....tumba sundara chitragalu...chandada bhavanegalu!!!!!Awesome!!!!!!!!

* ನಮನ * said...

ತುಂಬಾ ಚೆನ್ನಾಗಿದೆ,ಬಾಲ್ಯದ ಆಹಾರ ಸರಪಣಿಯ ಪಾಠ ನೆನಪಾಗುತ್ತದೆ.

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಸುಂದರ ಛಾಯಾಚಿತ್ರಗಳು ಮತ್ತು ಒಕ್ಕಣೆ.
ಪ್ರಾರಂಭದಲ್ಲಿ ರಸಮಯವಾಗಿ ಆರಂಬಿಸಿ ಕೊನೆಗೆ ಬದುಕಿನ ಸತ್ಯಗಳಾದ ಹಸಿವು, ಸಾವಿನೊಂದಿಗೆ ಅಂತ್ಯವಾಗಿ ಭಾವ ದರ್ಶನವನ್ನೇ ಮಾಡಿಸಿತು. ಚಿತ್ರಕಾವ್ಯ ನನ್ನಿಷ್ಟದ ಪ್ರಾಕಾರ.ಅದನ್ನು ತಾವು ಅದ್ಭುತವಾಗಿ ಉಣಬದಿಸಿದ್ದಿರಾ ಧನ್ಯವಾದಗಳು.
ಕಾರ೦ತರ ಮೂಕಜ್ಜಿಗೆ ಮೊಮ್ಮಗ ಹಾಕಿದ ಪ್ರಶ್ನೆ ಇಲ್ಲಿ ಪ್ರಸ್ತುತ-"ಅಜ್ಜಿ ಪುಣ್ಯಕೋಟಿಯ ಸತ್ಯಸಂಧತೆಯನ್ನು ನೋಡಿ ಚಂಡವ್ಯಾಘ್ರನು ಅದನ್ನು ತಿನ್ನದೇ ಬಿಟ್ಟದ್ದು ಸರಿ ಆದರೆ ಬೆಟ್ಟದ ಮೇಲಿಂದ ಅದು ಹಾರಿ ಪ್ರಾಣ ಬಿಡಬೇಕೇಕೆ?" ಅಜ್ಜಿ ಉತ್ತರ - "ಹುಲ್ಲು ತಿಂದು ಹುಲಿ ಬದುಕದು,ಅದು ಕ್ರುರತೆಯಿಂದ ಬೇಟೆಯಾಡಿ ಹಸಿವನ್ನು ನೀಗಬೇಕು, ಯಾವಾಗ ಅದರಲ್ಲಿ ದಯೆ ಬಂದರೆ ಅದು ಬೇಟೆಯಾಡಲಿಕ್ಕೆ ಅಸಮರ್ಥ, ಅದರಿಂದಾಗಿ ಅದು ಉಪವಾಸದಿಂದ ಸಾಯಬೇಕು ಅದಕ್ಕಾಗಿಯೇ ದಯೆ ಹೊಂದಿದ ತಾನು ಹುಲಿಯಾಗಿ ಬಾಳಲು ಅಸಮರ್ಥ ಎಂದುಕೊಂಡು ತನ್ನ ಜೀವನ ಅಂತ್ಯ ಮಾಡಿತು"

ಆಹಾರ ಸರಪಳಿ ಬದುಕಿನ ಸತ್ಯ!

AntharangadaMaathugalu said...

ಪ್ರಕಾಶ್ ಸಾರ್
ಚಿತ್ರಗಳು ತುಂಬಾ ಚೆನ್ನಾಗಿವೆ. ತಾಳ್ಮೆಯಿಂದ ಕಾದು ಚಿತ್ರಗಳನ್ನು ತೆಗೆದಿರುವಿರಲ್ಲಾ... ಅಭಿನಂದನೀಯ. ಚಿತ್ರಗಳ ಜೊತೆಗೆ ಪ್ರಕ್ರಿಯೆಯ ವಿವರಣೆ ಮನ ಮುಟ್ಟುವಂತಿದೆ. ಕಥೆ ಮನ ಕಲಕುವಂತಿದ್ದರೂ... ಪ್ರಕೃತಿ ಧರ್ಮವಲ್ಲವೇ.....

ಶ್ಯಾಮಲ

Nisha said...

Sundaravada chitra kavya.

Unknown said...

ನಿಜ..ದೇಹದ ಹಸಿವು..ಹೊಟ್ಟೇಯ ಹಸಿವು.. ಯಾರನ್ನೂ ಕೇಳುವದಿಲ್ಲ..ಹಸಿವಿಗಾಗಿ. ಮಗುವನ್ನು.. ಮಾರುವವರು ನಮ್ಮಲ್ಲಿದ್ದಾರೆ..ಅಂದ ಮೇಲೆ ಈ ಪ್ರಾಣಿಗಳು.. ಏನು ಮಹಾ ಅನ್ನಿಸುತ್ತದೆ..ಅದೇ.. ಭಾವುಕರಿಗೆ.. ಈ ಪ್ರಪಂಚವಲ್ಲಾ..

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ಅದ್ಭುತ ಕವಿತೆಗೆ ಅತ್ಯದ್ಬ್ಭುತ ಫೋಟೋಗಳು

ಚಿತ್ರಾ said...

ಪ್ರಕಾಶಣ್ಣ ,
ಫೋಟೋ ಗಳಿಗೆ ಹೊಂದಿಕೆಯಾಗುವಂತೆ ಹೆಣೆದ ಸಾಲುಗಳ ಭಾವ ಹಿಡಿಸಿತು. ಒಂಥರಾ , ಫೋಟೋ ತೆಗೆದ ಮೇಲೆ ಬರೆದೆಯೋ , ಬರೆದ ಮೇಲೆ ಫೋಟೋ ತೆಗೆದೆಯೋ ಎಂದು ಒಮ್ಮೆ ನನಗೆ ಗೊಂದಲವಾಯ್ತು.
ಓದುತ್ತ ಹೋದಂತೆ ಯಾವುದೋ ಹಳೆಯ ಸಿನೆಮಾದಲ್ಲಿ ಧೀರೇಂದ್ರ ಗೋಪಾಲ್ ( ಹಾಗೆಂದು ನೆನಪು) ' ಒಬ್ರು ಬದುಕಬೇಕು ಅಂದ್ರೆ , ಇನ್ನೊಬ್ರು ಸಾಯಲೇ ಬೇಕು ' ಅಂತ ಹೇಳಿದ ಡೈಲಾಗ್ ನೆನಪಾಯ್ತು . ಒಂದರ್ಥದಲ್ಲಿ ಅದು ಪ್ರಾಕ್ಟಿಕಲ್ ಅಲ್ಲವೇ? ಇದು ನಮ್ಮ ಕಣ್ಣ ಮುಂದೆ ಪ್ರತಿನಿತ್ಯ ನಡೆಯುವ ಕಥೆ. ಒಂದಲ್ಲ ಒಂದು ರೀತಿಯಿಂದ ಒಬ್ಬರ ತಲೆಯ ಮೇಲೆ ಇನ್ನೊಬ್ಬರು ಕಾಲಿಟ್ಟು ಮೇಲೇರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ.
ತುಂಬಾ ಚಂದದ ಬರಹ . ಇಷ್ಟವಾಯ್ತು . ' ಭಾವುಕರಿಗಲ್ಲ ಈ ಜಗತ್ತು ! ' ತುಂಬಾ ನಿಜವಾದ ಮಾತು ಪ್ರಕಾಶಣ್ಣ !

ಕ್ಷಣ... ಚಿಂತನೆ... said...

ಪ್ರಕಾಶಣ್ಣ, ಈ ಪುಟದ ತಲೆಬರಹ ಓದಿದಾಗಲೇ ಏನೋ ವಿಶೇಷ ಇದೆ ಎನಿಸಿತು. ಚಿತ್ರ-ಬರಹ ಓದುತ್ತಾ ಹೋದಂತೆ... ಭಾವುಕತೆ ತುಂಬುತ್ತದೆ. ಆದರೆ, ಕೊನೆಯಲ್ಲಿನ ನಿಮ್ಮ ನುಡಿಗಳು... ಹಾಗೂ ತಲೆಬರಹ, ಅಡಿಬರಹ ಎಲ್ಲ ಯೋಚನೆಗೀಡು ಮಾಡುತ್ತವೆ.

ಜಗನಿಮಯವೇ ಹಾಗಲ್ಲವೇ??? ಇದು ಸಾರ್ವಕಾಲಿಕ ಸತ್ಯ...

ಅನಂತ್ ರಾಜ್ said...

ಶೀರ್ಷಿಕೆ, ಚಿತ್ರಗಳು, ಚಿತ್ರಣಗಳೂ, ನಿರೂಪಣೆ ಎಲ್ಲವೂ ಸೂಪರ್..

ಅನ೦ತ್

Ittigecement said...

ದಿವ್ಯಾ...

ಹುಲಿಯ ಆಹಾರ ಜಿಂಕೆ...
ಜಿಂಕೆ ಸಾಧು ಪ್ರಾಣಿ..
ಪಾಪ,ಪುಣ್ಯ ನೋಡುತ್ತಿದ್ದರೆ.. ಹುಲಿಗೆ ಆಹಾರ ಸಿಗದಿದ್ದಲ್ಲಿ..
ಹುಲಿ ಈ ಜಗತ್ತಿನ್ನಲ್ಲಿ ಹೇಗೆ ಬದುಕಲು ಸಾಧ್ಯ?

ಜಿಂಕೆಯನ್ನು ಸೃಷ್ಟಿಸಿದವನೇ.. ಹುಲಿಯನ್ನೂ ಸೃಷ್ಟಿಸಿದ್ದಾನೆ..
ಇವೆರಡೂ ಈ ಜಗತ್ತಿನಲ್ಲಿ ಬದುಕಲೇ ಬೇಕು ಅಲ್ಲವ?

ಹಾಗಾಗಿಯೇ "ನಾನು..
ನನ್ನದು.. ಮಾತ್ರ..

ಭಾವುಕರಿಗಲ್ಲ ಈ ಜಗತ್ತು..."

ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಮನಮುಕ್ತಾ...

ಇಲ್ಲಿ ಹೂ ಒಂದು ಪ್ರಶ್ನೆ ಕೇಳಿದೆ...

"ಚಂದ ಒಂದು ಶಾಪವೇ..?" ಅಂತ...
ಎಲ್ಲರೂ ಚಂದವನ್ನೇ ನೋಡುತ್ತಾರೆ...
ಬಯಸುತ್ತಾರೆ...
ತಮಗೇ ಬೇಕೆಂದು ಹಂಬಲಿಸುತ್ತಾರೆ..
ಆದರೆ..
ಆ ಚಂದಕ್ಕೊಂದು (ಹೂ) ಮನಸ್ಸಿರುವದಿಲ್ಲವೇ..?
ಅದಕ್ಕೂ ಬೇಕು ಬೇಡಗಳಿಲ್ಲವೆ,..?

ಯಾಕೆ ಈ ಬಲತ್ಕಾರ ?

ಪ್ರತಿಕ್ರಿಯೆಗೆ ಧನ್ಯವಾದಗಳು..
ಬರುತ್ತಾ ಇರಿ...

Ittigecement said...

ರಂಜನಾ...

ಹಸಿವು ಇಷ್ಟೆಲ್ಲ ಮಾಡಿಸುತ್ತದೆ .. ಸರಿ..

ಆದರೆ ....
ಹಸಿವೇ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲ..

ಹಸಿವಿಂದಾಗಿಯೇ ಈ ಜಗತ್ತಿನ ಸಮಸ್ತ ಆಸಕ್ತಿ ಉಳಿದುಕೊಂಡಿದೆ...

ಎಲ್ಲ ಬಗೆಯ ಹಸಿವು ಇರಲೇ ಬೇಕು...

ಹಸಿವು ಅತೀ...ಸುಂದರ...
ಆನಂದ..
ಬದುಕಿನ ಅತ್ಯಗತ್ಯ.. ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಸಾಗರಿ...

ಕ್ಯಾಮರಾದಿಂದ ...
ಚಿಟ್ಟೆಯ ಅಂದ ಚಂದ..
ಹೂವಿಂದ ಹೂವಿಗೆ ಹಾರುವದನ್ನು ನೋಡುತ್ತ .. ಫೋಟೊ ತೆಗೆದುಕೊಳ್ಳುತ್ತ ನನ್ನೊಳಗೆ ಆನಂದಿಸುತ್ತಿದ್ದೆ..

ಹಠಾತ್ತನೆ "ಎಲೆಶೆಟ್ಟಿಯ " ದಾಳಿ..
ಚಿಟ್ಟೆಯ ಕುತ್ತಿಗೆಯನ್ನೇ ಹಿಡಿದ ಪರಿ..
ನನ್ನನ್ನು ಮೂಕನ್ನನ್ನಾಗಿಸಿತು..

ಕ್ಷಣಾರ್ಧದಲ್ಲಿ ಚಿಟ್ಟೆಯ ಪ್ರಾಣ ಹಾರಿಹೋಗಿತ್ತು...!!

ನಮ್ಮ ಬದುಕೂ ಹೀಗೆ ಅಲ್ಲವೇ..?

ನಮ್ಮ ಹುಟ್ಟಿನಿಂದ... ನಮ್ಮ ಸಾವು ನಮ್ಮ ಪಕ್ಕದಲ್ಲಿಯೇ.. ಹತ್ತಿರದಲ್ಲಿಯೇ ಇದ್ದಿರುತ್ತದೆ..
ಯಾವಕ್ಷಣದಲ್ಲಿ ಬೇಕಾದರೂ ಬರಬಹುದು..

ಆದರೂ ಈ ಸತ್ಯವನ್ನು ನಮ್ಮ ಮನ ಒಪ್ಪುವದಿಲ್ಲ..
ಇದೂ ಕೂಡ ಸೋಜಿಗ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸ್ನೇಹ ಸಿಂಚನ...

ನನ್ನ ಬ್ಲಾಗಿಗೆ ಸ್ವಾಗತ..


ಹೂವಿಂಥಹ ಮನಸ್ಸಿನವರು..
ಹೃದಯವಂತರು...

ಈ ವಾಸ್ತವದ ಕಹಿ ಸತ್ಯದ ಜಗತ್ತಿನಲ್ಲಿ ಬದುಕುವದು ಬಲು ಕಷ್ಟ..

ವಾಸ್ತವ ವಾದಿಗಳು ಈ ಜಗತ್ತಿನಲ್ಲಿ ಹೆಚ್ಚು ಸುಖವಾಗಿರಬಲ್ಲರು...
ಎಲ್ಲ ಸಮಸ್ಯೆಗಳಿಗೂ..
ಸಂತೋಷಗಳಿಗೂ.. ಅವರ ಬಳಿ ಕಟು ವಾಸ್ತವದ ಸಮರ್ಥನೆ ಇದ್ದಿರುತ್ತದೆ..

ಎರಡೂ ವಿಷಯದಲ್ಲೂ "ಸ್ಥಿತ ಪ್ರಜ್ಞರಂತೆ" ಇರಬಲ್ಲರು.. ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತಾ ಇರಿ...

Ittigecement said...

ಶುಭಾ...

ಪ್ರಾಣಿಗಳು ಒಂದು ಜೀವಿಯನ್ನು ಸಾಯಿಸಿ ಬದುಕತ್ತವೆ..
ಸರಿ..
ಆದರೆ ಮನುಷ್ಯನಿಗೆ ಅದು ಅಗತ್ಯವಲ್ಲವಲ್ಲ..
ಮನುಷ್ಯನ ದೇಹ ರಚನೆ ಸಸ್ಯಹಾರಕ್ಕಾಗಿ ಮಾಡಲ್ಪಟ್ಟಿದೆ..

ಪ್ರಾಣಿ ಹಿಂಸೆ ಮಾಡಿ ತಿನ್ನುವ ಅಗತ್ಯ ನಮಗಿಲ್ಲ..

ಆದರೆ ಸಾವಿರಾರು ವರ್ಷಗಳಿಂದ "ರುಚಿ"ಗಾಗಿ ರೂಢಿಯಾಗಿದೆಯಲ್ಲ..

ಇನ್ನೊಂದು ಮಜಾ ಘಟನೆಯಿದೆ..
ಕಲ್ಕಾತ್ತಾದಲ್ಲಿದ್ದಾಗ ಒಂದು ದೇವತಾ ಒಬ್ಬ ಸ್ನೇಹಿತರ ಮನೆಯ ದೇವತಾ ಕಾರ್ಯಕ್ರಮಕ್ಕೆ ಹೋಗಿದ್ದೆ..

ಅಲ್ಲಿ ಎಲೆ ಅಡಿಕೆ ತಾಂಬುಲದ ಜೊತೆ "ಮೀನ"ವನ್ನು ಇಟ್ಟು ಕೊಟ್ಟಿದ್ದರು...

ಆ ವಾಸನೆ ತಡೇಯಲಾರದೇ.. "ಉವ್ವೇ.. ಉವ್ವ್ವೇ.." ಆಯಿತು !!

ಹ್ಹಾ..ಹ್ಹಾ..!!
ಅಂದರೆ ಅಲ್ಲಿ ಮೀನ ಅಷ್ಟು "ಪವಿತ್ರ"ವಾದದ್ದು ..
ನಮ್ಮಲ್ಲಿಯ ತೆಂಗಿನ ಕಾಯಿಯ ಹಾಗೆ !!

ಧನ್ಯವಾದಗಳು..
ಬರುತ್ತಾ ಇರಿ..

ಶಿವಪ್ರಕಾಶ್ said...

Nice photos prakashanna :D

Ramesh said...

ತುಂಬಾ ಚೆನ್ನಾಗಿದೆ ಪ್ರಕಾಶಣ್ಣ.. ಅದ್ಭುತವಾದ ವರ್ಣನೆ ಹಾಗು ಚಿತ್ರಗಳು..

prabhamani nagaraja said...

ಓಹ್ ಅದ್ಭುತ! ಒ೦ದು ಸು೦ದರ ಚಿತ್ರ ಕಾವ್ಯವನ್ನೇ ನಮ್ಮ ಮು೦ದೆ ಇಟ್ಟಿದ್ದೀರಿ. ಪ್ರಾರ೦ಭದಲ್ಲಿ ಭಾವನಾತ್ಮಕವಾಗಿ ಸಾಗಿದ ಸ೦ತಸದ ಹರಿವು ಮು೦ದೆ ಸಾಗಿದ೦ತೆ ರಭಸವಾಗಿ ಧುಮ್ಮಿಕ್ಕುತ್ತಾ ಹಿ೦ಸೆ, ಕ್ರೂರತೆಯಿ೦ದ ಕೂಡಿ ತಲ್ಲಣಗೊಳಿಸಿತು. ಎಲ್ಲಾ ಸ್ವಾಭಾವಿಕವಾದ ಕ್ರಿಯೆ, 'ಆಹಾರ ಸರಪಳಿ' ಎ೦ದು ತಿಳಿದಿದ್ದರೂ ಮನಸ್ಸಿಗೆ ಬಹಳ ನೋವೆನಿಸುತ್ತದೆ.

ಪ್ರಗತಿ ಹೆಗಡೆ said...

ಪ್ರಕಾಶಣ್ಣ...ಫೋಟೋ ಒಂದಕ್ಕಿಂತ ಒಂದು ಸುಂದರವಾಗಿದೆ... ಕವನ ವಾಸ್ತವಕ್ಕೆ ಕನ್ನಡಿ... "ಭಾವುಕರಿಗಲ್ಲ ಈ ಜಗತ್ತು " !!

ದೀಪಸ್ಮಿತಾ said...

ಹೂವಿನ ಭಾವನೆಯನ್ನು ಸೊಗಸಾಗಿ ತೆರೆದಿಟ್ಟಿದ್ದೀರಿ. ಫೋಟೋಗಳು ಅಷ್ಟೇ ಸುಂದರ

Unknown said...

ನಾನು..! ನನ್ನದು!! ಭಾವುಕರಿಗೆ ಅಲ್ಲ. ಈ ಜಗತ್ತು !! thumba channagi baredidhera. Very good series .....of awesome pics, with gr8 poem... keep it up!!!

Ittigecement said...

ನಮನ "ಗಣೇಶ್"

ಜಗತ್ತಿನ ಆಹಾರ ಸರಪಣಿಯೇ ಹಾಗಿದೆ...

ಕೀಟಗಳನ್ನು ಕಪ್ಪೆ...
ಕಪ್ಪೆಗಳನ್ನು ಹಾವು...

ಹಾವುಗಳನ್ನು... ಮುಂಗುಸಿ...

ಇಲ್ಲಿ ಯಾವುದೇ ಏರುಪೇರಾದರೂ ಕಷ್ಟ..

ಹೇಗಿದೆ ಸೃಷ್ಟಿ .... ಅಲ್ಲವೆ?

ಜನಸಂಖ್ಯಾ ಸ್ಪೋಟವನ್ನೂ ಪ್ರಕೃತಿಯೇ ನಿಯಂತ್ರಿಸುತ್ತದೆ....

ಈ ತಾಪಮಾನ.. ಜಗತ್ತಿನ ವೈರುದ್ಯಗಳು..
ವೈಪರಿತ್ಯಗಳು... ಎಲ್ಲವನ್ನೂ ನೋಡಿದರೆ ಹಾಗೆಯೇ ಅನ್ನಿಸುತ್ತದೆ..

ಧನ್ಯವಾದಗಳು "ಗಣೇಶ್.." ಬರುತ್ತಾ ಇರಿ..

Ittigecement said...

ಸೀತಾರಾಮ್ ಸರ್...

ಕಾರಂತಜ್ಜನ "ಮೂಕಜ್ಜಿಯ ಕನುಗಳನ್ನು" ನೆನಪಿಸಿದ್ದಕ್ಕೆ ಧನ್ಯವಾದಗಳು...

ಮೂಕಜ್ಜಿಯ ತಾರ್ಕಿಕ ಬುದ್ಧಿಯ ಮಾತುಗಳು ಬಲು ಸೊಗಸಾಗಿವೆ.. ಅಲ್ಲವೆ?

ಜೀವಿಯನ್ನು ಕೊಂದು ತಿನ್ನುವ ಪ್ರಾಣಿ ಹುಲಿ..
ಬೇರೆಯವರು ಹಿಡಿದು ಬಿಟ್ಟ ಪ್ರಾಣಿಯನ್ನು ಅದು ತಿನ್ನುವದಿಲ್ಲ..
ತಾನೇ ಹಿಡಿಯ ಬೇಕು.. ತಿನ್ನಬೇಕು..ಹಸಿವನ್ನು ಇಂಗಿಸಿಕೊಳ್ಳ ಬೇಕು..

ಸಸ್ಯಾಹಾರವಾಗಲಿ...
ಮಾಂಸಾಹಾರವಾಗಲಿ...
ಅವೆಲ್ಲ ಕೇವಲ ಹೊಟ್ಟೆ ತುಂಬುವದಕ್ಕೆ ಅಂದುಕೊಂಡರೂ...

ಆಹಾರ ನಮ್ಮ ಸ್ವಭಾವನ್ನು ರೂಪಿಸುತ್ತದೆ..

ಹಾಗಾಗಿ ಸಾತ್ವಿಕ ಆಹಾರ ತಿನ್ನುವದು ಒಳಿತು..

ನನ್ನ ಒಂದು ಸಂಶಯ ಇನ್ನೂ ನಿವಾರಣೇಯಾಗಲಿಲ್ಲ...

ಜಗತ್ತಿಗೆ ಅಹಿಂಸೆಯ ಸಂದೇಶ ಸಾರಿ ಹೇಳಿದ ಮಹಾಪುರುಷ.." ಗೌತಮ ಬುದ್ಧ" ಮತ್ತು ಅವನಾನುಯಾಯಿಗಳು ಮಾಂಸವನ್ನೂ ತಿನ್ನುತ್ತಿದ್ದರು...

ಮಾಂಸ ಹಿಂಸೆಯಲ್ಲವೆ?
ಯಾರದರೂ ತಿಳಿದವರು ಸಂಶಯ ನಿವಾರಣೆ ಮಾಡ ಬಲ್ಲರೆ?

ಸರ್ ಒಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶ್ಯಾಮಲಾ...

ಹಸಿವೆಯನ್ನು ಇಂಗಿಸಿಕೊಳ್ಳುವದು ಸಹಜ...
ಹೇಗೆ ಅನ್ನುವದು ಪ್ರಶ್ನೆ...

ಮಾಂಸತಿನ್ನುವದು ಕೂಡ ನಮ್ಮಲ್ಲಿತ್ತು ಎನ್ನುವದನ್ನು ಪುರಾಣದಲ್ಲಿ/ಇತಿಹಾಸದಲ್ಲಿ ನಾವು ಓದುತ್ತೇವೆ..
ಅಲ್ಲೂ ಕೂಡ ಕೆಲವು ನಿಯಮಗಳನ್ನು ಹಾಕಿಕೊಳ್ಳುತ್ತೇವೆ...
ಗುರುವಾರ.. ಹಬ್ಬದದಿನಗಳಲ್ಲಿ...
ದೇವತಾ ಕಾರ್ಯಕ್ರಮಗಳ ಊಟದಲ್ಲಿ... ಮಾಂಸದೂಟ ನಿಷಿದ್ಧ.. ಯಾಕೆ?

ದೇವತೆಯನ್ನು ಒಲಿಸಿಕೊಳ್ಳುವದಕ್ಕೆ ಕುರಿಕೋಳಿಯನ್ನು ಬಲಿಕೊಡುವ ಸಂಪ್ರದಾಯದ ಬಗೆಗೆ ಮೂಕಜ್ಜಿ(ಕಾರಂತಜ್ಜ) ಒಂದು ಪ್ರಶ್ನೆಯನ್ನು ಕೇಳುತ್ತಾರೆ..

ಕುರಿ...ಕೋಳಿಯಂಥಹ ಸಾಧು ಪ್ರಾಣಿಗಳನ್ನೇ ಯಾಕೆ ಬಲಿಕೊಡುತ್ತಾರೆ...
ಹುಲಿ ... ಸಿಂಹಗಳನ್ನೇಕೆ ಬಲಿ ಕೊಡುವದಿಲ್ಲ...? ಯಾಕೆ?

ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ...
ತಪ್ಪು ಮೂಲಭೂತವಾಗಿ ನಮ್ಮದೇ ಆಗಿರುತ್ತದೆ.. ಹಾಗಾಗಿ...

ಪ್ರೋತ್ಸಾಹಕ್ಕೆ...
ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ನಿಶಾ...

ಈ ಹಸಿವೆ ಬಗೆಗೆ ನಮ್ಮ ಬ್ಲಾಗ್ ಮಿತ್ರರಾದ
ಡಾ.ಬಿ.ಆರ್.ಸತ್ಯನಾರಾಯಣ್ ಮತ್ತು ಉದಯ್ ಇಟಗಿಯವರು ಹೃದಯವಿದ್ರಾವಕ ಘಟನೆ ಹೇಳೀದ್ದು ನೆನಪಾಗುತ್ತಿದೆ..

ಮರುಭೂಮಿಯಲ್ಲಿ ಅನಿವಾರ್ಯವಾಗಿ ಸಿಕ್ಕು ಹಾಕಿಕೊಂಡ ಗೆಳೆಯರು ಸತ್ತುಹೆಣವಾದ ತಮ್ಮ ಸ್ನೇಹಿತನನ್ನೇ ತಿಂದು ಜೀವ ಉಳಿಸಿಕೊಂಡ ಸತ್ಯ ಕಥೆ !!

ಹಸಿವೆಯನ್ನು ಅನುಭವಿಸಿದವರಿಗೇ ಗೊತ್ತು.. !

ಉಪವಾಸ ಸತ್ಯಾಗ್ರದ ಮೂಲಕ ಬ್ರಿಟಿಷರನ್ನು ನಡುಗಿಸಿದ "ಗಾಂಧಿ ತಾತ" ಹಾಗಾಗಿ ಗ್ರೇಟ್ ಅನ್ನಿಸುತ್ತಾರೆ.. ಅಲ್ಲವೆ?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Prashanth Arasikere said...

hello sir,

NImma chitra lekana hagu adara bavanatmaka baraha erdu tumba chennagide...confuse agutte yavdu modlu antha..

Mohan Hegade said...

ಒಂದು ಕರೆಯೋಲೆ,

ಕರ್ನಾಟಕ ನಾಟಕ ಅಕಾಡೆಮಿಯವರ ತಿಂಗಳ ನಾಟಕದ ಪ್ರಯುಕ್ತ ನಾನು ಅಭಿನಯಿಸುವ ನಮ್ಮ ಹವ್ಯಾಸಿ ನಾಟಕ ತಂಡ ರಂಗಭೂಮಿ (ರಿ) ಉಡುಪಿ ಯವರ ನಾಟಕ, ಇದೆ ಬರುವ ಶನಿವಾರ ಅಂದರೆ 14th Aug 2010 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 .30ಕ್ಕೆ ಇದೆ. ಬೆಂಗಳೂರಿನ ಕೆಲವೆಡೆ ಇದಕ್ಕೆ ಸಂಬದಿಸಿದ ಆಮಂತ್ರಣ ಅಥವಾ ಬ್ಯಾನರ್ ಗಳನ್ನೂ ನೋಡಿರಬಹುದು (ಅಕಾಡೆಮಿಯವರು ಹಾಕಿದ್ದಾಗಿ ಹೇಳಿದ್ದಾರೆ). ಗೆಳೆಯ, ಇದು ನನ್ನ ಕರೆಯೋಲೆ ನಿಮ್ಮ ಬ್ಯುಸಿ ಜೀವನದಲ್ಲಿ ಇದಕ್ಕೆ ಸ್ವಲ್ಪ ವೇಳೆ ಕೊಟ್ಟು ಬನ್ನಿ.
ನಾವು ಮ. ಸು. ಕೃಷ್ಣಮೂರ್ತಿ ಯವರು ಬರೆದಿರುವ, ನಟ ನಿರ್ದೇಶಕ ಶ್ರೀ ಮಂಡ್ಯ ರಮೇಶ ನಿರ್ದೇಶನದಲ್ಲಿ "ಯುಗಾಂತ" ಎನ್ನುವ ಕನ್ನಡ ಪೌರಾಣಿಕ ನಾಟಕ ಮಾಡುತ್ತಿದ್ದೇವೆ.

"ವಿಶೇಷವೆಂದರೆ ಕೌರವ ಪಾಂಡವರ ನಡುವಿನ ಮಾನಸಿಕ ತೊಳಲಾಟ, ಆರೋಪಗಳು ತುಂಬಾ ವಿಚಿತ್ರವಾದ ಸಂಗತಿಗಳು ಕಂಡು ಬರುತ್ತೆ". ಮಹಾಭಾರತದ ಕತೆನೆ ಬೇರೆ ಕಾಣುತ್ತೆ ಅಷ್ಟೇ ಸಾಹಿತ್ಯ ಕೂಡ ಅರ್ಥವತ್ತಾಗಿದೆ.
ಗೆಳೆಯ, ಬ್ಲಾಗ್ ಮಿತ್ರರಲ್ಲಿ ತಿಳಿಸಿ ನಮ್ಮ ಹವ್ಯಾಸಿ ತಂಡವನ್ನು ಬೆಳೆಸಬೇಕಾಗಿ ಕೋರುವೆ.

ನೀವು, ನಿಮ್ಮವರು, ನಾಟಕಾಸಕ್ತರ ನಿರೀಕ್ಷೆಯಲ್ಲಿ,
" FREE ENTRY".

ಮೋಹನ ಹೆಗಡೆ

Ittigecement said...

ಮಾಲತಿ....

ಬಹಳ ಸತ್ಯವಾದ ಮಾತುಗಳು... !

ಹಸಿವು ಏನೂ ಬೇಕಾದರೂ ಮಾಡಿಸುತ್ತದೆ..
ಒಟ್ಟಿನಲ್ಲಿ ಹಸಿವನ್ನು ಇಂಗಿಸಿಕೊಳ್ಳುವದು ಮುಖ್ಯವಾಗಿರುತ್ತದೆ...
ಈ ಜಗತ್ತಿನ ಆಸಕ್ತಿಪೂರ್ಣ ಮತ್ತು ಅವಶ್ಯಕವಾದ ವಿಷಯವೆಂದರೆ "ಹಸಿವು"

ಹಸಿವನ್ನು ನಿವಾರಿಸಿಕೊಳ್ಳುವದು ತಪ್ಪಲ್ಲ...

ಆದರೂ ಮಾನವೀಯತೆ ಅನ್ನೋದು ಕಾಡುತ್ತದೆಯಲ್ಲವೆ?

ಯಾಕೇ..?

ಇದು ವಾಸ್ತವವಾದಿಗಳ ಪ್ರಪಂಚ..!
"ನಾನು..
ನನ್ನದು ಮಾತ್ರ...
ಭಾವುಕರಿಗಲ್ಲ ಈ ಜಗತ್ತು !"

ಹೀಗಿದ್ದರೂ ಒಂದು ಪ್ರಶ್ನೆ...!

ಹಸಿವಿನ ಜೊತೆಗೆ "ಭಾವುಕತೆಯೂ" ಜೊತೆಯಾಗಿದ್ದರೆ ಹೇಗೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

chendada chitragalige chendada kaavya saalugalu prakaashanna...........

ಪ್ರವೀಣ್ ಭಟ್ said...

chandada photo jote andada bhaavanegalu...

dhanyavada

Pravi

Umesh Balikai said...

ಪ್ರಕಾಶ್ ಸರ್,

ಸುಂದರ ಚಿತ್ರಗಳೊಂದಿಗೆ ಮತ್ತು ಅವಕ್ಕಿಂತಲೂ ಸುಂದರ ಪದಗಳಲ್ಲಿ ಜೀವನಗಾಥೆಯನ್ನೇ ನಮ್ಮ ಮುಂದೆ ತೆರೆದಿಟ್ಟಿರಲ್ಲ.

ಮೊದಲು ಹಸಿವು...
ಆಮೇಲೆ ಬದುಕು.. !!


ಎಂಥ ಅರ್ಥಪೂರ್ಣ ಪದಗಳು! ಹಸಿವು ನೀಗಿದ ಮೇಲೆಯೇ ಅಲ್ಲವೇ ನಾವೆಲ್ಲ ಭಾವನೆಗಳು, ಅಂದ ಚಂದ ಮುಂತಾದವಕ್ಕೆ ಬೆಲೆ ಕೊಡುವುದು ಮತ್ತದು ಜೀವನದ ಅವಶ್ಯಕತೆಯೂ ಹೌದು.

ಧನ್ಯವಾದಗಳು

Ittigecement said...

ಸಾಗರದಾಚೆಯ ಇಂಚರ.. (ಗುರುಮೂರ್ತಿ)

ಊರಿಗೆ ಹೋದಾಗ ಸುಮ್ಮನೆ ಕ್ಯಾಮರಾ ಹಿಡಿದು ಕೊಂಡು ಫೋಟೊ ತೆಗೆಯುತ್ತಿದ್ದಾಗ.. ಈ ಘಟನೆ ಸೆರೆ ಸಿಕ್ಕಿತು...
ಇದು ನನ್ನ ಅದೃಷ್ಟ..

ಯಾವುದೇ ಘಟನೆ ನಾವು ಅರ್ಥೈಸಿಕೊಳ್ಳುವ ರೀತಿಯಲ್ಲಿದೆ..
ಚಿಟ್ಟೆಯ ಪ್ರಾಣ ಹೋದದ್ದು ನನ್ನ ಅದೃಷ್ಟದ ಘಟನೆಯೆ..?

ಇಂಥಹ ಘಟನೆ ನಮಗೆ ಬೇಡವೆಂದರೂ ನಡೆಯುತ್ತಿರುತ್ತದೆ..

ಈ ಘಟನೆಗೆ ನಾನು ಸಾಕ್ಷಿಯಾದದ್ದು ನನ್ನ ಅದೃಷ್ಟ..

ಈ ಜಗತ್ತು ಬಾವುಕರಿಗೆ ಅಲ್ಲ...

ಧನ್ಯವಾದಗಳು...

Ittigecement said...

ಚಿತ್ರಾ...

ಭಾವುಕರಿಗಲ್ಲ ಈ ಜಗತ್ತು...

ಬದುಕಿಗೆ ಭಾವನೆಗಳು..
ಸಂವೇದನೆಗಳು ಅಗತ್ಯವೇ... ಇಲ್ಲವೆ?

ಮತ್ತೊಬ್ಬರ ಅಗತ್ಯಗಳು..
ಬೇಕು ಬೇಡಗಳನ್ನು ನಿರಾಕರಿಸಿ..
ನಾವು.. ನಮ್ಮದು ಮಾತ್ರ ನೋಡಿಕೊಳ್ಳುವದೇ ಜೀವನವೇ..?

ಹಾಗಾಗಿ ಅನಿಸುತ್ತದೆ " ಬಾವುಕರಿಗಲ್ಲ ಈ ಜಗತ್ತು..."

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಚಂದ್ರು ....(ಕ್ಷಣ ಚಿಂತನೆ)

ಭಾವನೆಗಳಿಗೆ..
ಪ್ರತಿ ಜೀವಿಯ ಸಂವೇದನೆಗಳಿಗೆ ಬೆಲೆಯೇ ಇಲ್ಲವೆ?

ಒಟ್ಟಿನಲ್ಲಿ ನಮ್ಮ ಬದುಕನ್ನು ಮಾತ್ರ "ಸುಖಮಯವಾಗುವಂತೆ" ನೋಡಿಕೊಳ್ಳುವದೇ ಜಗದ ನಿಯಮವೆ..?
ಬದುಕಲಿಕ್ಕಾಗಿ..

ಹಸಿವೆಯನ್ನು ಇಂಗಿಸಿಕೊಳ್ಳುವದಕ್ಕಾಗಿ..
ಮತ್ತೊಂದು ಜೀವಿಯನ್ನು ಸಾಯಿಸುವದೂ ಸರಿಯಾ?

ನಮ್ಮ ವಯಕ್ತಿಕ ಬದುಕಲ್ಲೂ ಬೇರೆಯವರ "ಸಂವೇದನೆಗಳಿಗೆ" ಬೆಲೆ ಕೊಡದೆ..
ನಮ್ಮದನ್ನು ಮಾತ್ರ ನೋಡಿಕೊಳ್ಳುವ ನಿರ್ದಯಿ ಹೃದಯದವರಾಗಿರುವದು ಸರಿಯೆ?

ಇದು ನಾವೇ ಸೃಷ್ಟಿಸಿಕೊಂಡ ಅನಿವಾರ್ಯತೆಯೆ?

"ಈ ಜಗತ್ತು ಬಾವುಕರಿಗಲ್ಲ" ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ಪ್ರೀತಿಯಿಂದ.. ಪ್ರಕಾಶಣ್ಣ..

Ittigecement said...

ಅನಂತ ರಾಜ್ ಸರ್...

ನನ್ನ ಬ್ಲಾಗಿಗೆ ಸ್ವಾಗತ...

ಹಸಿವು ಅಗತ್ಯವೂ ಹೌದು...
ಆಸಕ್ತಿಯೂ ಹೌದು..
ಹಸಿವಿರದ ಜಗತ್ತನ್ನು ಕಲ್ಪಿಸಿಕೊಳ್ಳುವದೂ ಕಷ್ಟ...

ಈ ಜಗತ್ತಿನ ಎಲ್ಲ ಸ್ವಾರಸ್ಯಗಳು "ಹಸಿವಿನಲ್ಲಿದೆ"

ಹಸಿವು ಸುಂದರವೂ ಹೌದು...

ಈ ಕೆಟ್ಟಮುಖವೂ ಅದರದ್ದೇ.. ಆಗಿದೆ..

ಈ ಕ್ರೂರ ಹಸಿವಿನೊಡನೆ ಬದುಕುವ ಅನಿವಾರ್ಯತೆಯೂ ನಮ್ಮದು...

ನಿಮ್ಮ ಪ್ರತಿಕ್ರಿಯೆ ನನಗೆ ಟಾನಿಕ್ ಥರಹ..
ಇನ್ನಷ್ಟು ಬರೆಯಲು ಖುಷಿಕೊಟ್ಟಿದೆ...

ಸರ್ ಬರುತ್ತಾ ಇರಿ...

Ittigecement said...

ಶಿವಪ್ರಕಾಶ್...

ಕಹಿ.. ಕಟು ವಾಸ್ತವದ ಜಗತ್ತಿನಲ್ಲಿ..
ಭಾವುಕ ಪ್ರಪಂಚಕ್ಕೆ ನೆಲೆಯಿಲ್ಲ..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ರಮೇಶ...

ಡಿಸ್ಕವರಿ, ಮತ್ತು ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲಿನಲ್ಲಿ ಬರುವ ವಿಡಿಯೋಗಳನ್ನು ನೋಡಿ...
ಅದರ ಚಿತ್ರಿಕರಣ ಮಾಡುವವರಿಗೆ ಎಷ್ಟೊಂದು ತಾಳ್ಮೆ..
ಶ್ರದ್ಧೆ ಇದ್ದಿರ ಬಹುದು?

ಇಲ್ಲಿ ನನಗೆ ಈ ಚಿತ್ರಗಳು.. ಅನಾಯಾಸವಾಗಿ ಸಿಕ್ಕಿದೆ..

RAMESH... ನಿಮ್ಮ ಪ್ರೋತ್ಸಾಹಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಪ್ರಭಾಮಣಿಯವರೆ..

ಈ ಆಹಾರ ಸರಪಳಿ ಸಹಜವಾದರೂ..
ಒಂದು ಜೀವಿಯನ್ನು ಸಾಯಿಸಿ ತಿನ್ನುವ ಪ್ರಕ್ರಿಯೆ ನೋವು ಕೊಡುತ್ತದೆ..
ಬಹುಷಃ ನಾವು ಸಸ್ಯಾಹಾರಿಗಳು ಅದಕ್ಕೆ..

ಸಸ್ಯಗಳಿಗೂ ಜೀವವಿದೆ..!!
ಅವೂ ಕೂಡ ಸ್ಪಂದಿಸುತ್ತವೆ..

ಇಷ್ಟೆಲ್ಲ ಆಳವಾಗಿ ವಿಚಾರಮಾಡಲು ಹೋದರೆ..
ಬದುಕಲು ಸಾಧ್ಯವಿಲ್ಲ...

ನಾನು..
ನನ್ನದು ಮಾತ್ರ..
ಭಾವುಕರಿಗಲ್ಲ ಈ ಜಗತ್ತು... !!

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಪ್ರಗತಿ...

ಬಣ್ನ ಬಣ್ಣದ ಚಿಟ್ಟೆ..
ಗರಿಗೆದರಿ ಹಾಡುವ ದೃಶ್ಯದ ಫೋಟೊ ತೆಗೆಯುತ್ತಿದ್ದ ನನಗೆ.. ಈ "ಎಲೆಶೆಟ್ಟಿಯ" ಆಕ್ರಮಣ ಗಾಭರಿತರಿಸಿತು...
ನನಗೆ ಅರಿವಿಲ್ಲದಂತೆಯೆ.. ಒಂದರ ಮೇಲೊಂದು ಫೋಟೊ ತೆಗೆಯುತ್ತಿದ್ದೆ...
ಹಿಂಸೆಯೂ ಆಗತೊಡಗಿತು...
ಇದೆಲ್ಲ ಆಗಿದ್ದು ಕೆಲವೆ ನಿಮಿಷಾರ್ಧದಲ್ಲಿ.. !!

ಸುದ್ದಿ ಚಾನೆಲ್ಲಿನಲ್ಲಿ ನಲ್ಲಿ ಕೆಲವೊಮ್ಮೆ ಯಾರಿಗೋ ಹೊಡೆಯುವ ದೃಶ್ಯ ಬರುವದು ನೆನಪಾಗುತ್ತದೆ..

ಇಂಥಹ ಘಟನೆ ಚಿತ್ರಿಕರಣ ಮಾಡುವವನ ಮನಸ್ಸಿಗೆ ಎಷ್ಟು ಕಷ್ಟವಾಗಬಹುದು?

ಅದು ಅವನ ಉದ್ಯೋಗ..
ಹೊಟ್ಟೆ ತುಂಬಿಸಿಕೊಳ್ಳುವ ಕಾಯಕ..

ನಾನು ನನ್ನದು ಮಾತ್ರ..
ಭಾವುಕರಿಗಲ್ಲ ಈ ಜಗತ್ತು !!

ಧನ್ಯವಾದಗಳು.. ಪ್ರಗತಿ..

Ittigecement said...

ದೀಪಸ್ಮಿತ..

ಮೊದಲು ನಾನು ಇದನ್ನು ಪೃಕೃತಿಯಮೇಲೆ ನಡೆಯುತ್ತಿರುವ ಅತ್ಯಾಚಾರದ ಮೇಲೆ ಬರೆಯ ಬೇಕೆಂದಿದ್ದೆ...
ಹೂವು.. ಪ್ರಕೃತಿಯ ಸಂಕೇತ..

ಆದರೆ.. ಈಗ ಬರೆದಿದ್ದೇ ಈ ಫೋಟೋಗಳಿಗೆ ಸೂಕ್ತ ಅನಿಸಿತು...

ನೀವೆಲ್ಲ ಇಷ್ಟಪಟ್ಟಿದ್ದು ಸಂತೋಷವಾಯಿತು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ನಮೃತಾ..

ಒಬ್ಬರ ಕೊಂದೆ ಒಬ್ಬರು ಬದುಕುವ..
ಒಬ್ಬರ ತುಳಿದು ಇನ್ನೊಬ್ಬರ ಪ್ರಗತಿ ಕಾಣುವ..

ಈ ಕಹಿ, ಕಟು ವಾಸ್ತವದ ಜಗತ್ತಿನಲ್ಲಿ...

ಕೇವಲ..
"ನಾನು..
ನನ್ನದು...
ಭಾವುಕರಿಗೆ ಅಲ್ಲ ಈ ಜಗತ್ತು..."

ನಿಮ್ಮ ಪ್ರತಿಕ್ರಿಯೆ ಖುಷಿ ತಂದಿದೆ...
ಧನ್ಯವಾದಗಳು... ಬರುತ್ತಾ ಇರಿ..

Ittigecement said...

ಪ್ರಶಾಂತ್ ಅರಸಿಕೆರೆ...

ಇಂಥಹ ಘಟನೆಗಳು ಸಿಗಲಿಕ್ಕೆ ಬಹಳ ಕಾಯಬೇಕು...
ಬಹಳ ತಾಳ್ಮೆಯೂ ಬೇಕು...
ಇದು ನನಗೆ ಅನಾಯಾಸವಾಗಿ ಸಿಕ್ಕಿದ್ದು...

ಇಂಥಹುದೇ.. ಇನ್ನೊಂದು ಘಟನೆಗೆ ಸಾಕ್ಷಿಯಾಗಿದ್ದೆ...

ಆದರೆ ಅದು "ಮಾನವೀಯತೆಗೆ" ಸಂಬಂದ್ದಿಸಿದ್ದು...

ಕೆಲವು ದಿನಗಳ ನಂತರ ಹಾಕುವೆ...

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ನನ್ನ ನಮನಗಳು...
ಬರುತ್ತಾ ಇರಿ.. ಪ್ರಶಾಂತ್...

Ittigecement said...

ಪ್ರಿಯ ಮೋಹನ್...

ನಿಮ್ಮ ಆಮಂತ್ರಣವನ್ನು ನಾನು ನನ್ನ ಬಝ್ ನಲ್ಲಿ ಹಾಕಿದ್ದೆ...
ನನ್ನ ಗೆಳೆಯರೇನಕರು ನಿಮ್ಮ ಕಾರ್ಯಕ್ರಮಕ್ಕೆ ಬಂದಿದ್ದರಂತೆ,,,...
ನನಗೆ ಬರಲಾಗಲಿಲ್ಲ...

ನಾನು ಏಡಿಎ ರಂಗ ಮಂದಿರಕ್ಕೆ "ಅಪ್ಪ" ನಾಟಕಕ್ಕೆ ಹೋಗಿದ್ದೆ...

ನಮ್ಮೆಲ್ಲರ ನೆಚ್ಚಿನ ನಟಿ "ಮಂಗಳತ್ತೆ"ಯವರಿಗೆ ಮೊದಲೇ ಮಾತು ಕೊಟ್ಟಿದ್ದೆ...

ಆ ನಾಟಕ ಬಹಳ ಚೆನ್ನಾಗಿತ್ತು..

ಆ ನಾಟಕ ಮುಗಿದ ಮೇಲೆ ರವೀಂದ್ರ ಕಲಾಕ್ಷೇತ್ರಕ್ಕೆ ಬಂದರೆ.. ಅಲ್ಲಿ ಬಾಗಿಲು ಮುಚ್ಚಿತ್ತು...
ನಿಮ್ಮನ್ನು ಭೇಟಿಯಾಗೋಣ ಅಂದು ಕೊಂಡಿದ್ದೆ...

ಆಮಂತ್ರಣಕ್ಕೆ ಧನ್ಯವಾದಗಳು...
ಇನ್ನೊಮ್ಮೆ ಖಂಡಿತ ಸಿಗೋಣ...

Ittigecement said...

ಕೃಷ್ಣ ಭಟ್ಟರೆ..

ಮೊದಲೇ ಹೇಳೀದ ಹಾಗೆ ಈ ಫೋಟೊಗಳು ಸಿಕ್ಕಿದ್ದು ನನ್ನ ಅದೃಷ್ಟ....
ನನಗೆ ಆಶ್ಚರ್ಯವೆನಿಸಿದ್ದು...
ಆ ಎಲೆಶೆಟ್ಟಿಯ "ಮುಖಚರ್ಯೆ"..!!

ಆ ಫೋಟೊಗಳನ್ನು ಕ್ಲೋಸ್ ಅಪ್ ಮಾಡಿ ನೋಡಿ...
ಕ್ರೂರತೆ ಕಾಣುತ್ತದೆ...

ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

Ittigecement said...

ಪ್ರವೀಣ್...

ಕಟು..
ವಾಸ್ತವದ
ಕಹಿ.
ಸತ್ಯದ..
ಹೋರಾಟ..
ಹಾರಾಟ..
ಅನಿಶ್ಚಿತತೆಯ..
ಬದುಕಲ್ಲಿ...
ಭಾವುಕತೆಗೆ ಎಡೇಯೆಲ್ಲಿ ?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಉಮೇಶ್...

ಹಸಿವು ಕಲಿಸಿದ ಮೊದಲ ಪಾಠ ಬದುಕು..

ಜೀವದ..
ಕೊನೆಯವರೆಗೂ
ಕಲಿಸುತ್ತ....
ಹಸಿವು..
ತಿಳಿಸಿದ್ದು..
ಬದುಕು..
ನಿನ್ನೊಬ್ಬನದು..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Guruprasad . Sringeri said...

ಪ್ರಕಾಶ್ ಅವರೇ., ನಾನೇನು ಹೇಳಲಿ..?? ಒಳ್ಳೇ ಚಿತ್ರಗಳ ಜೊತೆಗೆ ಒಳ್ಳೇ ಭಾವನೆಗಳು ತುಂಬಿದ ಕವನ ಬರೆದಿದ್ದೀರಿ ನಿಜವಾಗಿಯೂ ಅದ್ಭುತವಾಗಿದೆ

Mohan Hegade said...

ಪ್ರಕಾಶ್ ಹೆಗಡೆಜಿ,

ನನ್ನ ಅಮಂತ್ರಣಕ್ಕೆ ಓ ಗುಟ್ಟು, ಅದನ್ನು ನಿಮ್ಮ ಬ್ಲಾಗ್ ಮಿತ್ರರಿಗೆ ಕಳುಹಿಸಿದಕ್ಕೆ ದನ್ಯನಾದೆ. ನೀವು ಬಂದಿಲ್ಲ ಎಂದಾಗ ಬೇಸರವಾದರೂ ಕಾರಣ ಹೇಳಿದಕ್ಕೆ ದನ್ಯ. ನಿಮ್ಮ ಸ್ನೇಹಿತರಲ್ಲಿ ನಮ್ಮ ನಾಟಕದ ಬಗ್ಗೆ ಅಬಿಪ್ರಾಯ ಕೇಳಬಹುದಾ?, ಯಾರಾದರು ಬರೆದಿದ್ದರೆ ಯಾವ ಬ್ಲಾಗ್ನಲ್ಲಿ ಅಂತ ತಿಳಿಯಬಹುದಾ?. ನೀವು ನೋಡಿದ ನಾಟಕ ಹೇಗಿತ್ತು? ಅದರ ಬಗ್ಗೆ ಬರಿತಿರ?.

ದನ್ಯರಿ,

ಮೋಹನ್ ಹೆಗಡೆ

Unknown said...

prakasha,ee adbhuta photogaLajote ellarigoobhavanayana mdiside!entha hrudayaheenanoo omme bhavaparavashanaguvante,prati photokkoo ninna chandada haNepatti!tu......mba....channagi bandide .heege prakashisuttiru.

Gubbachchi Sathish said...

ದೃಶ್ಯ ಕಾವ್ಯದಲ್ಲಿ ಜೀವನ ದರ್ಶನ!
ಧನ್ಯವಾದಗಳು.

Unknown said...

ಇದು ವಾಸ್ತವವಾದಿಗಳ ಜಗತ್ತು...!
ಭಾವುಕರಿಗಲ್ಲ ಈ ಪ್ರಪಂಚ.. ಅಲ್ಲವಾ?

ಎಲ್ಲವೂ ಹೊಟ್ಟೆಗಾಗಿ...
ಹಸಿವಿನ ತೃಪ್ತಿಗಾಗಿ.. ಅಲ್ಲವೆ?

ಈ ಜಗತ್ತು ವಾಸ್ತವಿಕದ ತಳಹದಿಯ ಮೇಲಿದೆ...


ಮೊದಲು ಹಸಿವು...
ಆಮೇಲೆ ಬದುಕು.. !!

ಕೆಲವು ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ...
ತಪ್ಪು ಮೂಲಭೂತವಾಗಿ ನಮ್ಮದೇ ಆಗಿರುತ್ತದೆ.. ಹಾಗಾಗಿ...


Really i love the above lines and they are all tru..

ಪ್ರಕಾಶ್ ಜಿ ನಮಸ್ತೆ,

ಬದುಕಿನ ನೈಜ ಚಿತ್ರಣವನ್ನು ನಿಮ್ಮ ಕ್ಯಾಮರದ ಕಣ್ಣು ತೋರಿಸಿ, ನಮ್ಮಗಳ ಅಂತರಂಗವನ್ನು ಕಲಕಿದೆ. ಪ್ರಕೃತಿಯ ತಾಳ ಮೇಳಗಳು ಸರಿಯಾಗಿದ್ದರೆ ನಮ್ಮಗಳ ಉಳಿವು. ಇದರಲ್ಲಿ ಆಹಾರ ಕ್ರಮ ವೂ ಒಂದು. ಇದು ಭಾವುಕತೆಯ ವ್ಯಾಪ್ತಿ ಮೀರಿದ್ದು. ಉಳಿವಿನ , ಅಸ್ತಿತ್ವದ ಪ್ರಶ್ನೆ. ಉತ್ತರ ಸಿಗದ ಪ್ರಶ್ನೆ. ಈ ಪ್ರಶ್ನೆಗೆ ಕೆಲವೊಮೆ ಮುಗ್ದ ಮನಸ್ಸುಗಳು , ಮುಗ್ದ ಜೀವಿಗಳು ಬಲಿಯಾಗುತ್ತವೆ. ಇದರಲ್ಲಿ ಅನುಕಂಪವಿಲ್ಲ , ಪ್ರಕೃತಿಯ ಕಾನೂನಿದೆ. ಆ ಕಾನೂನಿಗೆ ಎಲ್ಲರೂ ತಲೆ ಬಾಗಲೇ ಬೇಕು. ಎಲ್ಲವು ಬಹಳ ಚಂದ ವಿದೆ. ನಿಮ್ಮ ಪ್ರಶ್ನೆಗಳಲ್ಲೇ ನಮ್ಮ ಕಣ್ಣು ತೆರೆಸುತ್ತವೆ. ಸ್ವಲ್ಪವಾದರೂ ಪ್ರಾಣಿ, ಸಸ್ಯ ಪ್ರೀತಿಯನ್ನು , ಅವುಗಳ ರಕ್ಷಣೆಯನ್ನು ನಮ್ಮ ಬದುಕಿನಲ್ಲಿ ರೂಪಿಸಿಕೊಳ್ಳೋಣ.

ಲಿಂಗೇಶ್ ಹುಣಸೂರು
ಬಿಂದುವಿನಿಂದ ಅನಂತದೆಡೆಗೆ..
http://lingeshhunsur.blogspot.com.

Soumya. Bhagwat said...

ಬಣ್ಣ ಬಣ್ಣದ ಚಿಟ್ಟೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ನನ್ನ ಆಸಕ್ತಿಗಳಲ್ಲಿ ಒಂದು... ಚಿಟ್ಟೆಗಳಿಗೆ ಜೀವದ ಜೊತೆ ಭಾವನೆಗಳೂ ಇದ್ದಿದ್ದರೆ ...... ಹಾರಾಡುವ ಹೂವುಗಳವು..... ! ಅತ್ಯಂತ ಸುಂದರ ಚಿತ್ರ ಬರಹ ..

savitri said...

Prakashanna,
Poem is very nice. Really this world is only for them who are competitors but not for moody persons.