Friday, August 20, 2010

ನಮಗೆ.. ನಾವೇ... ನಗಲಿಕ್ಕೆ...! ಸಂಭ್ರಮ ಪಡಲಿಕ್ಕೆ...!

ನಮ್ಮ  ಬದುಕಿನಲ್ಲಿ  ಎಷ್ಟೋ  ಜನರು  ಸಿಗುತ್ತಾರೆ...

ಮರೆಯಾಗುತ್ತಾರೆ...

ಕೆಲವರು  ಮರೆಯಾಗದೆ  ಮನದಲ್ಲೇ ಉಳಿದು ಬಿಡುತ್ತಾರೆ...

ಇನ್ನು  ಹಲವರು...
ಏನೇನೋ ನಮ್ಮಿಂದ ಏನೇನೋ ನಿರೀಕ್ಷೆ ಇಟ್ಟುಕೊಂಡು ಬರುತ್ತಾರೆ...
ನಮ್ಮಲ್ಲಿ ಅದು ಸಿಗದಿದ್ದಲ್ಲಿ ದೂರವಾಗುತ್ತಾರೆ..

ದೂರವಾಗುವಾಗ  ...
ಹೃದಯ ಚುಚ್ಚುವ  ಸಣ್ಣ ನೋವನ್ನೂ  ಉಳಿಸಿ ಹೋಗಿರುತ್ತಾರೆ..

ಬದುಕೇ ಹೀಗೆ ಅಲ್ಲವೇ ?....

ಯಾರಿಂದಲೂ ಏನೂ ನಿರೀಕ್ಷೆ ಇಲ್ಲದೆ ಸ್ನೇಹ ಮಾಡುವ ವ್ಯಕ್ತಿಗಳು ಬಹಳ ಕಡಿಮೆ...

ನನ್ನ ಇಲ್ಲಿಯವರೆಗಿನ  ಬದುಕಿನಲ್ಲಿ  ಅಂಥಹ ಅನೇಕ ವ್ಯಕ್ತಿಗಳು ನನಗೆ ಸಿಕ್ಕಿದ್ದಾರೆ...

ಈ ದೃಷ್ಟಿಯಿಂದ ನಾನು ಭಾಗ್ಯವಂತ...

ಅಪ್ಪನಿಲ್ಲದ  ಬದುಕಿನಲ್ಲಿ ಜಾರುವದು  ಜಾಸ್ತಿ...

ನನಗೆ " ನಾನು ಜಾರುವೆ " ಎನ್ನುವ ಸಂದರ್ಭದಲ್ಲಿ ...
ಬಂಡೆಗಲ್ಲಿನಂತೆ ನನ್ನ ಬಳಿ ನಿಂತ ನನ್ನ ಗೆಳೆಯರನ್ನು ನಾನು  ನೆನಪಿಸಿಕೊಳ್ಳ ಬೇಕು... 

ನನ್ನ ದುಃಖದಲ್ಲಿ..
ನಾನು  ನನ್ನ ನಿರ್ಧಾರಗಳಿಂದ "ಸೋತ"ಸಂದರ್ಭಗಳಲ್ಲಿ ..
ನನ್ನನ್ನು  ಭದ್ರವಾಗಿ   ಹಿಡಿದು ಕೊಂಡವರಿದ್ದಾರೆ ....
ಎದ್ದು  ನಿಲ್ಲಿಸಿದವರಿದ್ದಾರೆ...

ಇದೆಲ್ಲ ನೆನಪಾದಾಗ  ..
ನಮ್ಮ ಬದುಕು  ...
ಎಷ್ಟೊಂದು ಗೆಳೆಯರಿಗೆ...
ಹಿತೈಷಿಗಳಿಗೆ  ಋಣಿಯಾಗಿರುತ್ತದೆ ...  ಅಲ್ಲವೇ?

"ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ ...
ಯಾವುದೇ "ಸಂಬಂಧವನ್ನು  ಕೊನೆಯತನಕ ಇಟ್ಟುಕೊಳ್ಳ ಬಹುದು ...

ನಮ್ಮ ಹತ್ತಿರದವರ ಬಳಿ  ನಾವು "ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ...
ಚಂದವಾಗಿ ...
ನಿಷ್ಕಲ್ಮಶವಾದ.. ...
ಮಗುವಿನಂಥಹ  ನಗು...
ಮುದ್ದಾದ ಮನಸ್ಸು  ನಮ್ಮಲ್ಲಿರುತ್ತದೆ...

ನಮ್ಮ ಅಕ್ಕಪಕ್ಕದ  ಜನರು  ಬಹುಷಃ  ಇದನ್ನೇ ಬಯಸುತ್ತಾರೆ...

"ಎಲ್ಲಿದ್ದಿಯಪ್ಪಾ.. ??
 ಗೋಮಟೇಶ್ವರ ...ದೇವರೇ...!!
ನನಗೆ ಇನ್ನು ಅರ್ಧ ಗಂಟೆ ಸಮಯವಿದೆ...
ಸರಿಯಾಗಿ  ವಿಳಾಸ ಕೊಡು...
ನಿನ್ನನ್ನು ನೋಡಲೇ.. ಬೇಕು"
ಅಂತ  ಅವ  ಫೋನ್ ಮಾಡಿದ...

ನಾನೂ..
ಅವನು ಬರಿ ಚಾಟಿನಲ್ಲಿ ಮಾತನಾಡಿಕೊಂಡು "ಏಕವಚನದಲ್ಲಿ " ಮಾತನಾಡುವ  " ಸ್ಥಿತಿಗೆ "  ಬಂದು ಬಿಟ್ಟಿದ್ದೆವು...

ಎಲ್ಲರ ಬಳಿ  ಇದು  ಹೀಗೆ ..ಸಾಧ್ಯವಿಲ್ಲ...!

ನಾನು ವಿಳಾಸ ಕೊಟ್ಟೆ..

ಸರಿಯಾಗಿ ಅರ್ಧ ಗಂಟೆಯಲ್ಲಿ ಬಂದ...!
ನನಗೂ ಕುತೂಹಲವಿತ್ತು...!

ಕಾರಿನಿಂದ ಇಳಿದು.. ಬಂದವನೇ  ನನ್ನನ್ನು   ಆಲಂಗಿಸಿಕೊಂಡ ...

ಎಷ್ಟೋ ದಿನಗಳ... ಬಾಲ್ಯ ಸ್ನೇಹಿತನ ಹಾಗೆ...!!

ಚಡ್ಡಿ ದೋಸ್ತನ ಹಾಗೆ..!!..

ಬದುಕಿನ ಸಂಬಂಧಗಳಲ್ಲಿ  ...
ಸ್ನೇಹಕ್ಕೆ ಮಾತ್ರ ಈ... ಗುಣವಿದೆ...

ಜಾತಿ, ಮತಗಳ..
ಗೋಡೆಗಳ..
ಗೊಡವೆ ಅದಕ್ಕೆ ಬೇಕಿಲ್ಲ...!  ಅಗತ್ಯವೂ... ಇಲ್ಲ..!

ಸಿಕ್ಕ  ಅಲ್ಪ  ಸಮಯದಲ್ಲೇ  ಹರಟಿದೆವು...
ನಮ್ಮ.. ನಮ್ಮ ಕಾಲೇಜಿನ ತುಂಟ ದಿನಗಳ ನೆನಪು ಮಾಡಿಕೊಂಡೆವು...

ಇಬ್ಬರ ನಡುವೆ "ಗೋಡೆಗಳೇ" ಇರಲಿಲ್ಲ..!
ಯಾವ  ಯಾವುದೇ.. "ನಿರೀಕ್ಷೆಗಳು " ಇದ್ದಿರಲಿಲ್ಲ... !

ಅವುಗಳ ಅಗತ್ಯ ಇಬ್ಬರಿಗೂ ಇರಲಿಲ್ಲ...!

ಆತನಿಗೆ ಬಿಳ್ಕೊಡುವಾಗ ನಾನು ನನ್ನ  "ಹೆಸರೇ.. ಬೇಡ.  !" ಪುಸ್ತಕವನ್ನು ಕೊಟ್ಟೆ..

"ನಮ್ಮ  ಸಂಬಂಧಕ್ಕೂ...."ಹೆಸರೇ.. ಬೇಡ".. ಪ್ರಕಾಶು...! "

ನಾನು  ತಲೆಯಾಡಿಸಿದೆ...
ಕಣ್ಣು ತುಂಬಿ ಬಂದಿತ್ತು...
ಹೇಳಲಾಗದ ಅವ್ಯಕ್ತ ಭಾವಗಳಲ್ಲಿ ಹೃದಯ ಭಾರವಾಗಿತ್ತು...

ಆತ ಹೋಗುವಾಗ ನನಗೆ ಒಂದು  "ಗಣಪತಿಯ" ಮೂರ್ತಿಯನ್ನು ಕೊಟ್ಟ..
ಅದು  ಈಗ  ನಮ್ಮನೆಯ ದೇವರ  ಪೀಠದಲ್ಲಿದೆ ..

ಒಂದು  ಮಗುವಿನಂಥಹ ಸ್ನೇಹಕ್ಕೆ ಇದು  ಸಾಕಲ್ಲವೇ...??

ಅವನೇ  ನನ್ನ ಗೆಳೆಯ  "ಆಜಾದು"

ಸ್ನೇಹಿತರೆ...

ಇದೇ.. ಬರುವ  ಭಾನುವಾರ  ಬೆಳಿಗ್ಗೆ  ನನ್ನ ಗೆಳೆಯನ  "ಜಲನಯನ "  ಪುಸ್ತಕ ಬಿಡುಗಡೆಯಿದೆ...
ದಯವಿಟ್ಟು ಬನ್ನಿ ..

ಹಲವು  ಸ್ನೇಹಿತರ ಭೇಟಿಗಾಗಿ.. 
ಒಂದು ಸಂತೋಷ ಕೂಟಕ್ಕಾಗಿ....
ನಮಗೆ ..
ನಾವೇ... ನಗಲಿಕ್ಕಾಗಿ..
ಒಂದು  ನೆನಪಿನಲ್ಲಿ ಉಳಿಯುವ  ಸಂಭ್ರಮಕ್ಕಾಗಿ...
ದಯವಿಟ್ಟು ಬನ್ನಿ...

ನಿಮಗಾಗಿ ...
ನನ್ನ  ಹಲವಾರು ಗೆಳೆಯರೊಡನೆ ....
ದೊಡ್ಡ ಹೊಟ್ಟೆಯ...
ದೇಶಾವರಿ ನಗುತ್ತ...

ಇದ್ದಷ್ಟು ಹಲ್ಲುಗಳನ್ನು ತೋರಿಸುತ್ತ......

ಕ್ಯಾಮರದೊಡನೆ  ಕಾಯುವೆ......
ಬಾಗಿಲಲ್ಲಿ  ...
ದಯವಿಟ್ಟು  ಬನ್ನಿ...

"ಜೈ .... ಹೋ....!! "
( ಅಂದು...
ನನ್ನನ್ನು ಬ್ಲಾಗ್ ಲೋಕಕ್ಕೆ ಕರೆ ತಂದ ಇನ್ನೊಬ್ಬ ಸ್ನೇಹಿತ...
ಖ್ಯಾತ  ಅಂತರ ರಾಷ್ಟ್ರೀಯ ಛಾಯಾಗ್ರಾಹಕ ಕೆ. ಶಿವುರವರ ಪುಸ್ತಕ ಬಿಡುಗಡೆಯೂ ಇದೆ...
ದಯವಿಟ್ಟು ಬನ್ನಿ)
ಸ್ಥಳ :  ಕನ್ನಡ ಭವನ..
(ರವೀಂದ್ರ ಕಲಾಕ್ಷೇತ್ರ ಪಕ್ಕದಲ್ಲಿ..
ಗೊತ್ತಾಗಲಿಲ್ಲವೇ...?
 ಫೋನ್ ಮಾಡಿ...

27 comments:

ವೆಂಕಟೇಶ್ ಹೆಗಡೆ said...

congrats prakashanna , kandita baruve

ಶಿವಪ್ರಕಾಶ್ said...

idu nammaellara sambrhamada dina. naavu bande barutteve... :)

balasubramanya said...

ಪ್ರಕಾಶ್ ನಿಮ್ಮ ಸ್ನೇಹ ಲೋಕದೊಳಗೆ ಸೇರಲು ನಾನು ಮೈಸೂರಿನಿಂದ ಬರ್ತಾ ಇದ್ದೀನಿ.ಆ ಸಂಭ್ರಮ ದಿನದಾಲಿ ನಾವುಗಳು ಸೇರಲು ಸಂತೋಷವಾಗುತ್ತದೆ.ನಿಮ್ಮ ಬರವಣಿಗೆ ಖುಷಿಕೊಟ್ಟಿದೆ.ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಅಜ್ಯಾದರ ಮತ್ತು ನಿಮ್ಮ ಭೇಟಿಯ ಕ್ಷಣಗಳನ್ನ ಮಧುರವಾಗಿ ಹಂಚಿದ್ದಿರಾ...

ಸಾಗರದಾಚೆಯ ಇಂಚರ said...

Touching Prakashanna

naanu miss madkota idini

wish them all the best

prabhamani nagaraja said...

ನಿಮ್ಮ ಬರವಣಿಗೆಯಲ್ಲಿ ಒಳ್ಳೆಯ ಆಕರ್ಷಕ ಶೈಲಿ ಇದ್ದು ಒದಿಸಿಕೊ೦ಡು ಹೋಗುತ್ತದೆ. ನಿಮ್ಮ ಮತ್ತು ಆಜಾದ್ ಅವ್ರ ಭೇಟಿ ಪ್ರಸ೦ಗ ಚೆನ್ನಾಗಿದೆ! ಪುಸ್ತಕ ಬಿಡುಗಡೆ ಸಮಾರ೦ಭಕ್ಕೆ ಇಲ್ಲಿ೦ದಲೇ ನನ್ನ ಶುಭ ಹಾರೈಕೆಗಳು. ನನ್ನ ಬ್ಲಾಗ್ ಗೆ ಒಮ್ಮೆ ಬಿಡುವು ಮಾಡಿಕೊ೦ಡು ಬನ್ನಿ.

ಚಿತ್ರಾ said...

ಪ್ರಕಾಶಣ್ಣ,

ತುಂಬಾ ಆತ್ಮೀಯವಾದ ಬರಹ .
" ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ ...
ಯಾವುದೇ "ಸಂಬಂಧವನ್ನು ಕೊನೆಯತನಕ ಇಟ್ಟುಕೊಳ್ಳ ಬಹುದು ... '
ತುಂಬಾ ಚಂದದ ಮಾತು .
ಆಜಾದ್ ಹಾಗೂ ಶಿವೂ ಅವರಿಗೆ ನನ್ನ ಶುಭ ಹಾರೈಕೆಗಳು.

Srikanth Manjunath said...

your inking and thinking stands with you all the time..even though the above two words are highly volatile..never goes together..but in your case..you tied them a bond...which is evident in your creation..and relation..

Hats off to you

ಜಲನಯನ said...

Prakasha...ei...ninna blog oduttaa nanna kannu tumbi bantu kano...naaniddaddu Colombo transit Hotel nalli annodoo jnana irlilla nanage....Naanu Sadaa Heluva Ondu Maatu illo helete....KEVALA NISHKALMASHA MANASINA AALADINDA INTHAHA NISHKALMASHA MAATHU HORABARUTTAVE...eko eno nanagoo kelavaru bahu bega aatmeeyaraaguttare antahavaralli bahu kadime samayadalli bahu hattiravaadavaralli GOMMATESHA noo obba...hahaha sorry Pakku Maama sorry..Prakashaa...Ninage ellaroo kottiro ee hesarugale heluttave neenu eshtu ellarigoo ateemya endu....
Thank...sorry..helabardu...snehadalli.....
Ishta Aaitu....
Idakke kannadadalli comment haakteeni English script samaadhana illa...(hotel ninda ee commentu)

Ittigecement said...

ನನ್ನೊಳಗಿನ ಕನಸು (ವೆಂಕಟೇಶ್)..

ನಮ್ಮ ಇದುವರೆಗಿನ ..
ಬದುಕಿನಲ್ಲಿ ಸಿಕ್ಕ ಎಷ್ಟೋ ಒಳ್ಳೆಯ ಜನರು ನಮಗೆ ಹತ್ತಿರವಾಗುವದಿಲ್ಲ..
ನಾವು ಬಯಸಿದರೂ..
ಸಂದರ್ಭಗಳು ಹತ್ತಿರವಾಗುವದಕ್ಕೆ ಕೊಡುವದಿಲ್ಲ...

ಆದರೆ...
ಈ ಮನುಷ್ಯ.. ಎಷ್ಟು ಕಡಿಮೆ ಸಮಯದಲ್ಲಿ ಹತ್ತಿರವಾದ ಅಂದರೆ...
ನನಗೇ ಆಶ್ಚರ್ಯವಾಗುತ್ತದೆ..!

ಬದುಕಿನ ಸಂಬಂಧಗಳಲ್ಲಿ ...

ಸ್ನೇಹವೇ ಹೀಗೆ...
ಜಾತಿ, ಧರ್ಮಗಳ ..
ಗೋಡೆಗಳ ...
ಗೊಡವೆ ಅದಕ್ಕೆ ಬೇಕಿಲ್ಲ...
ಅಗತ್ಯವೂ ಇಲ್ಲ...

ವೆಂಕಟೇಶ್ ನಿಮಗಾಗಿ..
ನನ್ನ ಗೆಳೆಯರ ಬಳಗದೊಡನೆ ಅಲ್ಲಿ ಕಾಯುವೆ...
ದಯವಿಟ್ಟು ಬನ್ನಿ...

Mohan Hegade said...

ಪ್ರಕಾಶಜಿ,

"ಗಣಪತಿ ಬಪ್ಪ ಮುರಾಯ"

ಸುಂದರವಾದ ಸ್ಹೇಹದ ಮಾತುಗಳು.

ಅದರಲ್ಲೂ "ಯಾರಿಂದಲೂ ಏನೂ ನಿರೀಕ್ಷೆ ಇಲ್ಲದೆ ಸ್ನೇಹ ಮಾಡುವ ವ್ಯಕ್ತಿಗಳು ಬಹಳ ಕಡಿಮೆ..." ಅದರೂ ಈ ಬ್ಲಾಗ್ ಲೋಕದಲ್ಲಿ ಅನೇಕ ಸ್ನೇಹಿತರು ಹೀಗೆಯೇ ಆಗಿರುವರು ಅಲ್ಲವ?.

ನಿಮ್ಮ ಹಿಂದನ ಬರಹಕ್ಕೆ ಅನಿಸಿಕೆ ರೂಪದಲ್ಲಿ ನಮ್ಮ ನಾಟಕ ನೋಡಿದವರಲ್ಲಿ ನಾಟಕದ ಬಗ್ಗೆ ಅನಿಸಿಕೆ ಕೇಳಬಹುದ ಎಂದಿದ್ದೆ. ದಯವಿಟ್ಟು ನೋಡಿ ಸಾದ್ಯತೆಗಳಿದ್ದರೆ ತಿಳಿಸಿ ತಪ್ಪಿದಲ್ಲಿ ತಿದ್ದುಕೊಳ್ಳುವ ಅವಕಾಶ ನಮಗೆ.

ಕ್ಷಮಿಸಿ ನಿಮ್ಮ ಕ್ಯಾಮರದಲ್ಲಿ ನ ಸಿಗಲ್ಲ ದೊರದ ಮಣಿಪಾಲದಲ್ಲಿ ಏರುವ ಕಾರಣ.

ದನ್ಯರಿ,

ಮೋಹನ ಹೆಗಡೆ

V.R.BHAT said...

ಎಲ್ಲವೂ ಹಾಗೇ, ಗೆಳೆತನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ, ಬಹಳ ಸಂತೋಷವಾಯಿತು, ಬಹುಶಃ ಹತ್ತಿರ ಇದ್ದರೂ ಕೆಲವೊಮ್ಮೆ ಈ ಸ್ನೇಹವಿರುವುದಿಲ್ಲ, ಆದರೆ ಎಷ್ಟೇ ದೂರವಿದ್ದರೂ ಅದು ಸೆಳೆದು ತರುತ್ತದೆ, ನಿಮ್ ಆ ಸ್ನೇಹ ಅನನ್ಯವಾಗಿ ಅವ್ಯಾಹತವಾಗಿರಲಿ, ನಿಮ್ಮ ಥರದ್ದೇ ಇನ್ನೊಂದು ಹೊಟ್ಟೆ ಮತ್ತು ೩೨ ಹಲ್ಲುಗಳು ಬರುತ್ತಿವೆ ಹುಷಾರು, ಬಂದಾಗ ಸ್ವಾಗತವೇನೂ ಬೇಡ, ಸ್ವಾಗತಿಸಲು ನಿಮ್ಮೊಂದಿಗೆ ನಾನೂ ಸೇರಿಕೊಳ್ಳುವೆ ಆಗದೇ ? ಧನ್ಯವಾದ

ವನಿತಾ / Vanitha said...

Jai Ho Kannada Bloggers :-)

Ittigecement said...

ಶಿವಪ್ರಕಾಶ್...

ಈ ಬ್ಲಾಗ್ ಲೋಕ ಒಂದು ವಿಸ್ಮಯ...!
ಎಷ್ಟೊಂದು ಆತ್ಮೀಯತೆ ಬೆಳೆದು ಬಿಡುತ್ತದೆ !!

ಮೊನ್ನೆ ಈ ಪುಸ್ತಕ ಬಿಡುಗಡೆಗೆ ಅಂತೆನೇ..
ಕುವೈತಿನಿಂದ "ಸವಿಗನಸು" ಬ್ಲಾಗಿನ "ಮಹೇಶ್"
ಮತ್ತು "ಮೃದು ಮನಸು" ಬ್ಲಾಗಿನ "ಸುಗುಣಾ" ಬರುತ್ತಿದ್ದಾರೆ...

ದೆಹಲಿಯಿಂದ "ಪ್ರವೀಣ್ ಗೌಡ" ಮೊದಲೇ ಹಾಜರಿದ್ದಾರೆ..!

ಬಳ್ಳಾರಿಯ "ಸೀತಾರಾಮ್ " ಸರ್..

ಮಂಗಳೂರಿನಿಂದ "ದಿನಕರ್"
ಅರ್ಜ್ಂಟ್ ಕೆಲಸವಿತ್ತೆಂದು "ಪರಾಂಜಪೆಯವರು" ಮಂಗಳೂರಿಗೆ ಹೋಗಿದ್ದರೂ..
ಭಾನುವಾರ ಬೆಳಿಗ್ಗೆ ಕನ್ನಡ ಭವನಕ್ಕೆ ಹಾಜರಿರುತ್ತಾರೆ !!

ನಮ್ಮ ಬ್ಲಾಗ್ ಲೋಕದ "ಸರ್ಜನ್ನರು(ಡಾ. ಕೃಷ್ಣ ಮೂರ್ತಿಯವರು) ತಮ್ಮ ಕಾರ್ಯಕ್ರಮ ಬದಲಿಸಿ..
ಮತ್ತೆ ಬೆಂಗಳೂರಿಗೆ ಬರುವ ಪ್ಲ್ಯಾನ್ ಮಾಡುತ್ತಿದ್ದಾರೆ...

ಅಮೇರಿಕಾದಿಂದ "ನಂಜುಂಡ ಭಟ್, ಮತ್ತು ಚೇತನಾ" ಬಂದಿದ್ದಾರೆ...

ಖ್ಯಾತ ಬರಹಗಾರ್ತಿ .. ನಮ್ಮೆಲ್ಲರ ನೆಚ್ಚಿನ ಶಾಂತಲಾ ಭಂಡಿಯವರೂ" ಈ ಕಾರ್ಯಕ್ರಮದಲ್ಲಿ ಬರುತ್ತಿದ್ದಾರೆ...

ಸಿರ್ಸಿಯಿಂದ ಖ್ಯಾತ ಛಾಯಾಗ್ರಾಹಕರಾದ
ವಿ.ಡಿ. ಭಟ್ ಮತ್ತು ನಾಗೆಂದ್ರ ಮುತ್ತುಮೂರ್ಡು..

ನನಗೆ ಲೆಕ್ಕ ತಪ್ಪುತ್ತಿದೆ...

ಬನ್ನಿ .. ಇದು ನಮ್ಮೆಲ್ಲರ ಕಾರ್ಯಕ್ರಮ...

ನಾವೇ ಸಂಭ್ರಮಿಸೋಣ...
ಸಂತೋಷ ಪಡೋಣ...

ನಮ್ಮ ಬ್ಲಾಗಿಗರ "ಪುಸ್ತಕ" ಆಗುತ್ತಿರುವ ಸಂತೋಷದಲ್ಲಿ ಪಾಲ್ಗೊಳ್ಳೋಣ..

ಶಿವು ನೀವು ನನ್ನ ಪಕ್ಕದಲ್ಲಿರ್ತೀರಿ ತಾನೆ??

umesh desai said...

ಹೆಗಡೇಜಿ ಮೊನ್ನೆ ಧಾರವಾಡಕ್ಕೆ ಹೋಗಿದ್ದೆ ಸುನಾಥಕಾಕಾಅವರನ್ನು ಭೆಟ್ಟಿಯಾಗಿದ್ದೆ. ಅವರೊ ಬರಲಾಗದ್ದಕ್ಕೆ ವಿಷಾದವ್ಯಕ್ತ ಪಡಿಸಿದ್ರು ನಾಅಂತೂ ಬರತೇನಿ. ಆದ್ರ ಒಂದು ಶಿಕಾಯತ್ ಅದ ಅದ್ಯಾಕೆ ನನ್ನ ಬ್ಲಾಗಿಗೆ ನೀವು
ಬರದೇ ಭಾಳ ದಿನ ಆಗಿದೆ..!

Narayan Bhat said...

ಆತ್ಮೀಯ ಲೇಖನದೊಡನೆ, ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಬರಲು ಎಲ್ಲರಿಗೂ ಆತ್ಮೀಯ ಆಮಂತ್ರಣ ನೀಡಿದ್ದೀರಿ..ಕೃತಜ್ಞತೆಗಳು.

jithendra hindumane said...

"ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ ...
ಯಾವುದೇ "ಸಂಬಂಧವನ್ನು ಕೊನೆಯತನಕ ಇಟ್ಟುಕೊಳ್ಳ ಬಹುದು ... ಎಎ ಮಾತು ಸರ್ವಕಾಲಿಕ ಸತ್ಯ...
ಧನ್ಯವಾದಗಳು ಪ್ರಕಾಶಣ್ಣ.

ದಿನಕರ ಮೊಗೇರ said...

ಪ್ರಕಾಶಣ್ಣ,
ಸಣ್ಣ ಅಸೂಯೆಯ ಪರಿವೆಯೆ ಇಲ್ಲದ ಲೇಖನ ಇದು... ಓದಿ ತುಂಬಾ ಖುಷಿಯಾಯಿತು...... ಇದು ನಮ್ಮ ಕಾರ್ಯಕ್ರಮ ... ಇದನ್ನು ನಾವೇ ಯಶಸ್ವಿಗೊಳಿಸಬೇಕು...ನಾನು ಬರುತ್ತಿದ್ದೇನೆ... ಮಂಗಳೂರಿಂದ....

ಸುಧೇಶ್ ಶೆಟ್ಟಿ said...

ನನಗೆ ಬರಲಾಗುತ್ತಿಲ್ಲ ಅ೦ತ ಬೇಸರ ಆಗ್ತಾ ಇದೆ ಪ್ರಕಾಶಣ್ಣ :(
ಕಾರ್ಯಕ್ರಮದ ಬಗ್ಗೆ ಸವಿವರವಾಗಿ ಬ್ಲಾಗಿನಲ್ಲಿ ನೀವು ಬರೆಯಬೇಕು ಮತ್ತೆ :)

ಬರಹ ತು೦ಬಾ ಇಷ್ಟ ಆಯಿತು. ಹೀಗೆ ನಿರಿಕ್ಷೆಗಳಿಲ್ಲದ ಸ್ನೇಹ ನನಗೂ ಕೂಡ ಸಿಕ್ಕಿದೆ ಬ್ಲಾಗ್ ಲೋಕದಿ೦ದಾಗಿ....

Unknown said...

ಪ್ರಕಾಶಣ್ಣ...ನಿನ್ನ ಸ್ನೇಹದ ಸೊಭಗನ್ನು, ಸಂಭ್ರಮವನ್ನು ನಾನೂ enjoy ಮಾಡಿದ್ದೇನೆ. ಒಳ್ಳೆ ಬರಹ...ಒಳ್ಳೆ ಸಾಲು : "ನಿರೀಕ್ಷೆಗಳನ್ನು" ಇಟ್ಟುಕೊಳ್ಳದಿದ್ದರೆ ...
ಯಾವುದೇ "ಸಂಬಂಧವನ್ನು ಕೊನೆಯತನಕ ಇಟ್ಟುಕೊಳ್ಳ ಬಹುದು ...

Ittigecement said...

ಬಾಲು ಜೀ.. (ನಿಮ್ಮೊಳಗೊಬ್ಬ..)

ಬನ್ನಿ ... ನಮ್ಮ ಗೆಳೆಯರ ಬಳಗದ ಜೊತೆ ನೀವೂ ಜೊತೆಗೂಡಿ...

ಯಾವ ನಿರೀಕ್ಷೆಗಳನ್ನಿಟ್ಟುಕೊಳ್ಳದ ಸಂಬಂಧಗಳು ಯಶಸ್ವಿಯಾಗುತ್ತವೆ..
ಹಾಗದರೇ..
ನಮ್ಮ ನಿರೀಕ್ಷೆಗಳೆ ಕೈಕೊಡುತ್ತವೆ.. ಅಂದಂತಾಯಿತು...

ಪ್ರತಿಯೊಬ್ಬರಿಗೂ...
ಅವರವರ ಬದುಕು ಅವರಿಗಿರುತ್ತದೆ..
ಅಲ್ಲಿ ನಮ್ಮ ಪಾತ್ರಗಳು ಬಹಳ ಸೀಮಿತವಾಗಿರುತ್ತವೆ..

ನಮ್ಮದೆಷ್ಟೋ ಅಷ್ಟು ಮಾಡಿ...
ಪ್ರತಿಫಲಾಪೆಕ್ಷೆಯಿಲ್ಲದೆ ಬಂದರೆ.....
ಆಗ ಅವರಿಗೂ ತೊಂದರೆಯಿಲ್ಲ...
ನಮಗೂ ಸಹ..ನಿರಾಳ... . ಅಲ್ಲವೆ?

ನಿಮ್ಮ ಬರುವಿಕೆಗೆ ಕಾಯುವೆ... ಬನ್ನಿ...

sunaath said...

ಪ್ರಕಾಶ,
ಸಂಭ್ರಮದ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು.

Ranjana H said...

prakashanna, nimagu nimma snehatarigu nanna shubha haraike.

Dr.D.T.Krishna Murthy. said...

ಪ್ರಕಾಶಣ್ಣ;ನಾನು ಬರುವುದು ನಿನ್ನೆ ಸಂಜೆಯ ತನಕ ನನಗೇ ಗೊತ್ತಿರಲಿಲ್ಲ.ಅದು ಹೇಗೆ ನಾನು ಬಂದೆ ಬರುತ್ತೇನೆ ಅಂತ ಖಾತ್ರಿಯಿಂದ ಮೊದಲೇ ಕಾಮೆಂಟ್ ಹಾಕಿದ್ದೀರಿ ಅನ್ನುವುದೇ ನನಗೆ ಅರ್ಥ ಆಗುತ್ತಿಲ್ಲ.ನಿಮ್ಮ ಸ್ನೇಹಕ್ಕೆ ಅಷ್ಟು ಶಕ್ತಿಯಿದೆ.It is amazing.Hats off to you sir.Regards.

Ittigecement said...

ಸೀತಾರಾಮ್ ಸರ್...

ಡಾ.ಕೃಷ್ಣಮೂರ್ತಿಯವರ ಹಾಗೆ ನಿಮ್ಮನ್ನೂ ಕೂಡ ಭೇಟಿ ಮಾಡಲು ನಾವೆಲ್ಲ ಉತ್ಸುಕರಾಗಿದ್ದೇವೆ...
ಇಷ್ಟು ದಿನ ನಿಮ್ಮೊಡನೆ ಚಾಟಿನಲ್ಲಿ, ಫೋನಿನಲ್ಲಿ ಮಾತನಾಡುತ್ತಿದ್ದೆವು..
ನಾವೆಲ್ಲ ಒಟ್ಟಿಗೆ ಸೇರಿ ಹರಟುವ ಭಾಗ್ಯ ಬಂದಿದೆ...
ಬನ್ನಿ...
ನಾವೆಲ್ಲ ಉತ್ಸಾಹದಿಂದ ಕಾಯುತ್ತಾ ಇದ್ದೇವೆ...

Ittigecement said...

ಸಾಗರದಾಚೆಯ ಇಂಚರ.. (ಗುರು)..

ಹೊರನಾಡ ಕನ್ನಡಿಗರಿಗೆ ಇದೆ ಸಮಸ್ಯೆಯಾಗಿಬಿಡುತ್ತದೆ..
ನಿಜಕ್ಕೂ ಇದು ಒಳ್ಳೆಯ ಸುಸಂದರ್ಭ..
ನಾವೆಲ್ಲ ಒಟ್ಟಿಗೆ ಸೇರ ಬಹುದಿತ್ತು...

ನಿಮ್ಮ ಶುಭ ಹಾರೈಕೆಗಳನ್ನು ಅವರಿಗೆ ತಿಳಿಸುವೆ...

ಜೈ ಹೋ...!!

ಪಾಚು-ಪ್ರಪಂಚ said...

ಪ್ರಕಾಶಣ್ಣ..,

ಸುಂದರ ಆತ್ಮೀಯ ಕರೆಯೋಲೆ :-)
ಮಧುರ ಭಾವನೆಗಳ ನಿಷ್ಕಲ್ಮಶ ನಿಮ್ಮ ಸ್ನೇಹಕ್ಕೆ ನನ್ನದೊಂದು ಸಲಾಂ.

ಖಂಡಿತ ಬರುವೆ.
-ಪ್ರಶಾಂತ್