part 3
"ಹುಡುಗ ಗಂಡಸೇ ಅಲ್ಲ ಅಂತ ಆರೋಪವಿತ್ತು...
ಎಂಟು ತಿಂಗಳಾದರೂ ಹೊಸ ಸುದ್ಧಿಯಿಲ್ಲ..
ನಾವು ದುಡುಕಿಬಿಟ್ಟೆವಾ.. ಪ್ರಕಾಶು..?
ಒಮ್ಮೆ ಇಲ್ಲಿ ಬಂದು ಏನು ಅಂತ ವಿಚಾರಿಸು...
ಗಣಪ್ತಿ ಭಾವನಿಗೆ ಏನೂ ಗೊತ್ತಾಗೋದಿಲ್ಲ ಮಾರಾಯಾ"
ನನಗೆ ಬೇಕೊ... ಬೇಡವೋ ಮದುವೆ ಮಾತುಕತೆಯಲ್ಲಿ ನಾನಿದ್ದೆ..
ಅದೂ ಶಾರಿ ಅಕ್ಕನ ಕೋರಿಕೆ...
ನನಗೆ ಇಲ್ಲವೆನ್ನಲಾಗಲಿಲ್ಲ..
ನಾಗುವಿನ ಸಹಾಯ ಕೇಳಿದೆ..
ಆತ ನನಗೋಸ್ಕರ ಯಾವತ್ತೂ "ಇಲ್ಲ" ಎಂದವನೇ ಅಲ್ಲ...
ಇನ್ನೇನು?
ಹೊರಟೇ ಬಿಟ್ಟೆವು...
ಹುಡುಗನ ಮನೆ ತಲುಪಿದಾಗ ಬೆಳಿಗ್ಗೆ ಹತ್ತು ಗಂಟೆ..
ಶಾರಿ ಮಗಳಿಗೆ ಬಹಳ ಆಶ್ಚರ್ಯ...
ಸಂತಸ ಹತ್ತಿಕ್ಕಲಾಗಲಿಲ್ಲ...
ಹೆಣ್ಣುಮಕ್ಕಳಿಗೆ ಹಾಗೇನೆ..
ತವರು ಮನೆಯ ಸುವಾಸನೆ ಬಂದರೂ ಕಣ್ಣಲ್ಲಿ ನೀರುಕ್ಕುತ್ತದೆ..
ಕಾಲುತೊಳೆಯಲು ನೀರು...
ಟವೆಲ್ಲು..ಕೊಟ್ಟು..
" ಪ್ರಕಾಶು ಮಾಮಾ...
ಅಡಿಗೆ ಮನೆಗೇ... ಬಂದುಬಿಡಿ...
ಬೆಳಗಿನ ತಿಂಡಿ ತಯಾರಾಗಿದೆ...
ಇವರು ದೇವರ ಪೂಜೆ ಮಾಡುತ್ತಿದ್ದಾರೆ.."
ಕೈಕಾಲು ತೊಳೆದು ಅಡುಗೆ ಮನೆಗೆ ಬಂದೆವು..
ಬಹಳ ಸಂಪ್ರದಾಯಸ್ಥರ ಮನೆ..
ನಮಗೆ ಮಣೆಹಾಕಿ.. ಬಾಳೆ ಎಲೆ ಹಾಕಿ..
ಬಿಸಿ ಬಿಸಿ "ಮೊಗೆಕಾಯಿ ತೆಳ್ಳೆವು" ಹಾಕಿದಳು..!
ಸಂಗಡ.. "ಒಗ್ಗರಣೆ ಬೆಲ್ಲ" !!
ಬಾಯಲ್ಲಿ ನೀರೂರಿತು....!!
ಮನೆಯವರೆಲ್ಲರೂ ಬಾಯಿತುಂಬಾ ಉಪಾಚಾರ ಮಾಡಿದರು..
ನಮ್ಮ ಶಾರಿಯ ಮಗಳನ್ನು ಹೊಗಳಿದರು...
ತವರಿನ ಮನೆಯವರಿಗೆ ಇನ್ನೇನು ಬೇಕು..?
ಹುಡುಗಿ ಹೊಂದಿಕೊಂಡಿದ್ದಾಳಲ್ಲ.. ಬಹಳ ಖುಷಿಯಾಗಿತ್ತು..
ಆದರೆ ....
ಎಲ್ಲರ ಕಣ್ಣಿನಲ್ಲೂ ಆಶ್ಚರ್ಯ..!
ಪ್ರಶ್ನಾರ್ಥಕ ಚಿಹ್ನೆ ಬೇಡವೆಂದರೂ ಎದ್ದು ಕಾಣುತ್ತಿತ್ತು..
ಇವರು ಯಾಕೆ ಬಂದಿದ್ದಾರೆ...? !!.
ಆದರೆ ಯಾರೂ ಬಾಯಿಬಿಟ್ಟು ಕೇಳುತ್ತಿಲ್ಲ..
ಸಂಪ್ರದಾಯಸ್ಥರೇ.. ಹಾಗೆ..
"ಬಂದವರು ಕಾರಣ ಹೇಳಿಯೇ ಹೇಳುತ್ತಾರಲ್ಲ.. ಅಂತ ಸುಮ್ಮನಿದ್ದಾರೆ" ಅಂದುಕೊಂಡೆ..
ನಾವು ತಿಂಡಿ ಮುಗಿಸಿ ಮತ್ತೆ ಜಗುಲಿಗೆ( ಪಡಸಾಲೆ) ಬಂದೆವು..
ಈಗ ಹುಡುಗನೂ ಬಂದ...
"ಮಾಮಾ...ಮತ್ತೇನು ಸುದ್ಧಿ?
ಮನೆಯಲ್ಲಿ ಎಲ್ಲರೂ ಸೌಖ್ಯವಾ?
ನಿನ್ನೆ ರಾತ್ರಿ.. ಯಕ್ಷಗಾನ ನೋಡಲು ಸಿರ್ಸಿಗೆ ಹೋಗಿದ್ದೆ..
"ಲಂಕಾ ದಹನ"
ಕಣ್ಣಿಮನೆಯವರ "ಹನುಮಂತ" ಅಭಿನಯ ಬಹಳ ಸೊಗಸಾಗಿತ್ತು...
ಬೆಳಗಿನವರೆಗೆ ಯಕ್ಷಗಾನ ನೋಡಿ ಬಂದೆ..
ಹಾಗಾಗಿ ಪೂಜೆಗೆ ತಡವಾಯಿತು.."
ಇಲ್ಲಿಯವರೆಗೆ ಸುಮ್ಮನಿದ್ದ ನಾಗು
"ಸ್ವಲ್ಪ ತೋಟದ ಕಡೆ ಹೋಗಿ ಬರೋಣವೆ..?" ಕೇಳಿದ..
ಹುಡುಗನಿಗೆ ತಾನು ಮಾಡಿದ ಕೃಷಿ ಕೆಲಸವನ್ನು ತೋರಿಸುವ ಉತ್ಸಾಹ ಕಂಡಿತು..
ನಾನು ನಾಗು ಎದ್ದು ಅವನನ್ನು ಹಿಂಬಾಲಿಸಿದೆವು...
ನಾನು ಮೆಲ್ಲನೆ ಮಾತಿಗೆ ಶುರು ಹಚ್ಚಿಕೊಂಡೆ...
"ನಾನು ಹೀಗೆ ಹೇಳುತ್ತೇನೆಂದು ತಪ್ಪು ತಿಳಿಯ ಬೇಡಪ್ಪಾ..."
"ಕೇಳೀ .. ಮಾಮ..
ಅದರಲ್ಲಿ ತಪ್ಪು ತಿಳಿಯುವದೇನಿದೆ?"
"ಮತ್ತೇನಿಲ್ಲ..
ಬೇಜಾರೂ ಮಾಡ್ಕೊ ಬಾರ್ದು..
ಮೊದಲೇ.. ನಿನ್ನ ಬಗೆಗೆ ಈ ಆರೋಪ ಇತ್ತು..
ಇಷ್ಟು ದಿನಗಳಾದರೂ ಹೊಸ ಸುದ್ಧಿಯಿಲ್ಲ..
ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ..
ಏನಾಯ್ತು?
ಏನು ಸಮಸ್ಯೆ?
ನಾವು ನಿನ್ನ ಸ್ನೇಹಿತರಿದ್ದಂತೆ..
ಮನ ಬಿಚ್ಚಿ ಮಾತಾಡು..
ಯಾವ ಸಂಕೋಚವನ್ನೂ ಇಟ್ಟುಕೊಳ್ಳ ಬೇಡಪ್ಪಾ.."
ಹುಡುಗ ಸ್ವಲ್ಪ ಹೊತ್ತು ಮಾತನಾದಲಿಲ್ಲ..
"ಮಾಮಾ..
ಇವಳಿಗೆ ತುಂಬಾ.. ನಾಚಿಕೆ... ಹೆದರಿಕೆ...!
ರಾತ್ರಿಯಂತೂ ಮಾತೇ ಆಡುವದಿಲ್ಲ..
ನನಗೆ ಏನು ಮಾತಾಡಬೇಕೆಂದು.. ಗೊತ್ತೇ ಆಗುವದಿಲ್ಲ...
ನಮ್ಮಿಬ್ಬರ ನಡುವೆ ತುಂಬಾ ಪ್ರೀತಿಯಿದೆ..
ಆದರೆ..
ಇಬ್ಬರಿಗೂ ಹೇಳೀಕೊಳ್ಳಲು ಬರುವದಿಲ್ಲ...
ನನಗೂ ಸಂಕೋಚ..."
" ಏನು ಹುಡುಗ್ರೋ ನೀವು..?
ಇಷ್ಟೆಲ್ಲಾ ಸಿನೇಮಾ ನೋಡ್ತೀರಿ.. ಏನೂ ಗೊತ್ತಾಗೋದಿಲ್ವಾ? "
" ಬದುಕಿನಲ್ಲಿ ಪ್ರೀತಿ ಅಂದರೆ ....ಸಿನೇಮ ಅಲ್ಲವಲ್ಲ ಮಾಮಾ...!
ಸಿನೆಮಾದಲ್ಲಿ ಹಾಡು ಕುಣಿತ..ಇರ್ತದೆ...
ಇಲ್ಲಿ ನಿಜ ಜೀವನದಲ್ಲಿ ಅದೆಲ್ಲ ಬಿಟ್ಟು ಉಳಿದೆಲ್ಲವೂ ಇದೆ...
ಇಲ್ಲಿ ಜೀವನದಲ್ಲಿ ಬಹಳ ಕಷ್ಟ..
ಅಲ್ಲಿ ಹೀರೋಗೂ.. ಹೀರೋಯಿನ್ನಿಗೂ ಸಂಕೋಚವೇ ಇರೋದಿಲ್ಲ..
ಪಕ್ಕದಲ್ಲಿ ಡ್ಯಾನ್ಸ್ ಮಾಡ್ತಾರಲ್ಲ ...
ಅವರಿಗೂ ನಾಚಿಕೆ ಅನ್ನೋದೆ ಗೊತ್ತಿರೋದಿಲ್ಲ"
"ನೋಡು..
ಹೆಣ್ಣುಮಕ್ಕಳಿಗೆ ನಾಚಿಕೆ ಸಹಜ..
ನೀನು ಗಂಡು...
ಹೆಣ್ಣು ಪ್ರಕೃತಿ ಇದ್ದ ಹಾಗೆ...
ಅದಕ್ಕೆ ಬೇಕಾಗಿರೊ.. ಗಾಳಿ.. ಬೆಳಕು..
ಬೇರುಗಳಿಗೆ ನೀರು.. ಗೊಬ್ಬರ ...ನೀನೇ... ಕೊಡಬೇಕು...
ನೀನು ಧೈರ್ಯ ಕೊಡಬೇಕು...
ಭರವಸೆ ಹುಟ್ಟಿಸ ಬೇಕು...
ಹೊಸ ಕನಸು ಹುಟ್ಟಿಸ ಬೇಕು...
ಅವಳಲ್ಲಿ ಆಸೆಯ ಚಿಗುರು..
ಚಿಗುರುವ ಹಾಗೆ ನೀನು ಮಾಡಬೇಕು..."
ಹುಡುಗ "ಆಯ್ತು ...ಮಾಮಾ" ಅಂದು ಸುಮ್ಮನಾದ...
ನಾಗು ಹುಡುಗನಿಗೆ ಕೇಳಿದ..
" ನನಗೆ ಸ್ವಲ್ಪ ಸಿರ್ಸಿಯಲ್ಲಿ ಅರ್ಜಂಟ್ ಕೆಲಸವಿದೆ..
ನೀನೂ ನಮ್ಮ ಸಂಗಡ ಬಾ..
ಊಟದ ಸಮಯಕ್ಕೆ ಸರಿಯಾಗಿ ವಾಪಸ್ ಬಂದು ಬಿಡೋಣ.."
ನನಗೆ ಆಶ್ಚರ್ಯವಾದರೂ ಸುಮ್ಮನಿದ್ದೆ...
ಮನೆಯಲ್ಲಿ ಎಲ್ಲರಿಗೂ ಸಿರ್ಸಿಗೆ ಹೋಗಿ ಊಟದ ಸಮಯದೊಳಗೆ ಬಂದು ಬಿಡುತ್ತೇವೆ ಎಂದು ಅಲ್ಲಿಂದ ಹೊರಟೆವು...
ನಾಗು ಸಿರ್ಸಿ "ನಟರಾಜ್" ರೋಡಿನಲ್ಲಿ ಕಾರು ನಿಲ್ಲಿಸಿ ಲಗುಬಗೆಯಿಂದ ಹೋದ...
ಬರುವಾಗ ಕೆಲವು ಪುಸ್ತಕಗಳಿದ್ದವು..
ಸಿಡಿಗಳಿದ್ದವು..!
" ನೋಡಪ್ಪಾ...
ಎಲ್ಲರಿಗೂ..ವಯಸ್ಸಾಗುತ್ತದೆ..
ಪ್ರಾಯವೂ ಬಂದುಬಿಡುತ್ತದೆ...
ಮನೆಯಲ್ಲಿ ಮದುವೆಯನ್ನೂ ಮಾಡುತ್ತಾರೆ..
ಆದರೆ ..
ಆ ಮದುವೆಗೆ ಮಾನಸಿಕವಾಗಿ....
ದೈಹಿಕವಾಗಿ ತಯಾರಾಗೋದೂ ಸಹ ಬಹಳ ಮಹತ್ವ..
ಬದುಕು ಕನಸಲ್ಲ...
ಸಿನೇಮಾವೂ ಅಲ್ಲ...
ದಾಂಪತ್ಯ ಏನೋ.. ಹೇಗೋ .. ಆಗಿಬಿಡುತ್ತದೆ ಅಂತ ಈಗ ಇಲ್ಲ....
ಇದು.. ನಾವು ಬೆಳೆಸಿದಷ್ಟು ಬೆಳೆಯುತ್ತದೆ...
ಬೆಳೆಸಿದ ಹಾಗೆ ಬೆಳೆಯುತ್ತದೆ..
ಕಾಲ ಈಗ ಬದಲಾಗಿದೆ..
ಹೆಣ್ಣಿಗೆ ಏನು ಬೇಕೊ.. ಅದನ್ನು ಕೊಡುವ ಸಾಮರ್ಥ್ಯ ಗಂಡಿಗಿರಬೇಕು..
ಅವಳು ಮಾಡಿದ ಕೆಲಸಕ್ಕೆ ಸ್ವಲ್ಪ ಹೊಗಳಿಕೆ..
ಮುಕ್ತವಾಗಿ ಮಾತನಾಡುವದು..
ಕೆಲವು ರಸಿಕ ಮಾತುಗಳು... ಎಲ್ಲವೂ ಇರಬೇಕಪ್ಪಾ...
ಪ್ರಾಯ ಬಂದಾಗ ಮದುವೆ ಹಕ್ಕು ಒಂದೇ ಅಲ್ಲ..
ಒಂದು ಜವಾಬ್ದಾರಿ ಕೂಡ..
ಉಪದೇಶ ಮಾಡುವದರಿಂದ..ಪ್ರವಚನ ಕೇಳುವದರಿಂದ..
ಗಿಡದಲ್ಲಿ ಹೂವು .. ಹಣ್ಣು ಆಗೋದಿಲ್ಲ..
ಬದುಕು ಸಿನೇಮಾ ಹಾಡಲ್ಲ...
ನಾನು ಕೊಟ್ಟಿದ್ದನ್ನು ಇಬ್ಬರೂ ಓದಿ.. ನೋಡಿ..
ಆದಷ್ಟು ಬೇಗ ನಮಗೆ ಹೊಸ ಸುದ್ಧಿ ಕೊಡಿ..."
ನಾಗುವಿನ ಮಾತು ಹುಡುಗನಲ್ಲಿ ಬಹಳ ನಾಟಿತು...
ನಾವು ಅದೇ ದಿನ ಬೆಂಗಳೂರಿಗೆ ತಿರುಗಿ ಬಂದೆವು..
ಬರುವಾಗ ನಾಗು..
"ಅಲ್ವೊ ಪ್ರಕಾಶು...ಆ ಹುಡುಗನ ಬಳಿ..
ಹೆಣ್ಣೆಂದರೆ ಪ್ರಕೃತಿ..
ಬೇರು ಗೊಬ್ಬರ ಅಂದರೆ ಅವನಿಗೇನು ಅರ್ಥ ಆಗ್ತದೋ..?
ಪ್ರಕೃತಿ.. ಹಸಿರು.... ಚಿಗುರು..
ಇದೆಲ್ಲ ನಿನ್ನ ಬ್ಲಾಗಿನಲ್ಲಿ ಇಟ್ಕೊ ಮಾರಾಯಾ.."
ಅಂತ ನೆಗೆಯಾಡಿದ...
ನನಗೂ ನಗು ಬಂತು...
ಕಳೆದವಾರ ಶಾರಿಯ ಫೋನ್... !!
ನನ್ನಾಕೆ ಶಾರಿಯ ಫೋನ್ ಎಂದರೆ ಓಡೋಡಿ ಬರುತ್ತಾಳೆ...
ನಾವೆಲ್ಲ ಶಾರಿಯ ದೊಡ್ಡ ಫ್ಯಾನ್.. !
ಸ್ಪೀಕರ್ ಫೋನ್ ಚಾಲೂ ಮಾಡಿ
"ಹಲ್ಲೋ.. ಶಾರಿ.. ಏನು ವಿಷಯ?"
"ಪ್ರಕಾಶು...!!!!
ಹೊಸ ಸುದ್ಧಿ ಕಣೊ...!!
ಮಗಳಿಗೆ ನಾಲ್ಕು ತಿಂಗಳಾಗಿದೆ..!
ಇದೆಲ್ಲ ನಿನ್ನಿಂದ ಆಯ್ತು ಕಣೊ...
ನೀನು ಅಲ್ಲಿ ಹೋಗಿ ಏನು ಹೇಳಿದ್ಯೋ..?..!!
ಏನು ಮಾಡಿದ್ಯೊ.!!.
ಅಂತೂ.. ಹೊಸ ಸುದ್ಧಿ ಬಂತು ಕಣೊ...!!
ಇದಕ್ಕೆಲ್ಲ ನೀನೇ.... ಕಾರಣ... ನೋಡು.. !!!!
ನನ್ನಾಕೆ ಬಿದ್ದೂ .. ಬಿದ್ದು..ನಗುತ್ತಿದ್ದಳು...!
"ಅಯ್ಯೊ..!!
ಅಯ್ಯೊ ....ಶಾರಿ ...!
ಹೀಗೆಲ್ಲ ಹೇಳಬೇಡ್ವೆ... !!
ಜನ ಅಪಾರ್ಥ ಮಾಡ್ಕೋತಾರೆ...!!.."
"ಹೇಳುವವರಿಗೇನೋ... ? !
ನಾಲಿಗೆಗೆ ಎಲುಬಿಲ್ಲವಲ್ಲ.. ಏನು ಬೇಕಾದ್ರೂ ಹೇಳ್ತಾರೆ...!
ನೀನು ದೊಡ್ಡ ಶರೀರದವ...!
ತಲೆಯಲ್ಲಿ ಏನೂ ಇರೋದಿಲ್ಲ ಅಂದ್ಕೊಂಡಿದ್ದೆ ಕಣೋ..!! "
ನಾನು ಲಗು ಬಗೆಯಿಂದ ಮಾತು ಕಟ್ ಮಾಡಿ ಫೋನ್ ಇಟ್ಟೆ...
ನನ್ನಾಕೆಗೆ ಹೊಸ ವಿಷಯ ಸಿಕ್ಕಿಬಿಟ್ಟಿತ್ತು...!
" ಏನ್ರೀ ಇದು...? !!
ಹೊಸ ವಿಷಯ..?.. !! "
ಕಾಲೆಳೆಯಯುತ್ತ ನಗು ಶುರು ಮಾಡಿದಳು...
ಅಷ್ಟರಲ್ಲಿ ಅಣ್ಣನ ಫೋನ್..!
"ಪ್ರಕಾಶು...
ಶಾರಿ ಮಗಳದು ಹೊಸ ಸುದ್ಧಿಯಂತಲ್ಲಪ್ಪಾ...!!
ಎಂಟು ತಿಂಗಳಿಂದ ಆಗದೇ ಇದ್ದದ್ದು ..
ನೀನು ಹೋಗಿ ಏನು ಮಾಡಿದ್ಯೋ...?.. !! .."
"ಅಯ್ಯೋ ..
ಅಣ್ಣಯ್ಯಾ..!!.
ನಾನು ಏನೂ ಮಾಡಿಲ್ಲ..!
ಎಲ್ಲವನ್ನೂ ನಾಗು ಮಾಡಿದ್ದು...!!.."
ನನ್ನಾಕೆ ಮತ್ತೆ ಎದ್ದೂ..... ಬಿದ್ದೂ ನಗಲಿಕ್ಕೆ ಶುರು ಮಾಡಿದಳು....
ಅಯ್ಯೋ ರಾಮ...!! ಈ ಶಾರಿ....
ಊರ ತುಂಬ ಡಂಗುರ ಸಾರಿಬಿಟ್ಟಿದ್ದಾಳಾ.. !!
(ಶಾರಿಯ ಅವಾಂತರ ಇನ್ನೊಂದಿದೆ..)
ಇಲ್ಲಿ ನೋಡಿ...
"ಹುಡುಗ ಗಂಡಸೇ ಅಲ್ಲ ಅಂತ ಆರೋಪವಿತ್ತು...
ಎಂಟು ತಿಂಗಳಾದರೂ ಹೊಸ ಸುದ್ಧಿಯಿಲ್ಲ..
ನಾವು ದುಡುಕಿಬಿಟ್ಟೆವಾ.. ಪ್ರಕಾಶು..?
ಒಮ್ಮೆ ಇಲ್ಲಿ ಬಂದು ಏನು ಅಂತ ವಿಚಾರಿಸು...
ಗಣಪ್ತಿ ಭಾವನಿಗೆ ಏನೂ ಗೊತ್ತಾಗೋದಿಲ್ಲ ಮಾರಾಯಾ"
ನನಗೆ ಬೇಕೊ... ಬೇಡವೋ ಮದುವೆ ಮಾತುಕತೆಯಲ್ಲಿ ನಾನಿದ್ದೆ..
ಅದೂ ಶಾರಿ ಅಕ್ಕನ ಕೋರಿಕೆ...
ನನಗೆ ಇಲ್ಲವೆನ್ನಲಾಗಲಿಲ್ಲ..
ನಾಗುವಿನ ಸಹಾಯ ಕೇಳಿದೆ..
ಆತ ನನಗೋಸ್ಕರ ಯಾವತ್ತೂ "ಇಲ್ಲ" ಎಂದವನೇ ಅಲ್ಲ...
ಇನ್ನೇನು?
ಹೊರಟೇ ಬಿಟ್ಟೆವು...
ಹುಡುಗನ ಮನೆ ತಲುಪಿದಾಗ ಬೆಳಿಗ್ಗೆ ಹತ್ತು ಗಂಟೆ..
ಶಾರಿ ಮಗಳಿಗೆ ಬಹಳ ಆಶ್ಚರ್ಯ...
ಸಂತಸ ಹತ್ತಿಕ್ಕಲಾಗಲಿಲ್ಲ...
ಹೆಣ್ಣುಮಕ್ಕಳಿಗೆ ಹಾಗೇನೆ..
ತವರು ಮನೆಯ ಸುವಾಸನೆ ಬಂದರೂ ಕಣ್ಣಲ್ಲಿ ನೀರುಕ್ಕುತ್ತದೆ..
ಕಾಲುತೊಳೆಯಲು ನೀರು...
ಟವೆಲ್ಲು..ಕೊಟ್ಟು..
" ಪ್ರಕಾಶು ಮಾಮಾ...
ಅಡಿಗೆ ಮನೆಗೇ... ಬಂದುಬಿಡಿ...
ಬೆಳಗಿನ ತಿಂಡಿ ತಯಾರಾಗಿದೆ...
ಇವರು ದೇವರ ಪೂಜೆ ಮಾಡುತ್ತಿದ್ದಾರೆ.."
ಕೈಕಾಲು ತೊಳೆದು ಅಡುಗೆ ಮನೆಗೆ ಬಂದೆವು..
ಬಹಳ ಸಂಪ್ರದಾಯಸ್ಥರ ಮನೆ..
ನಮಗೆ ಮಣೆಹಾಕಿ.. ಬಾಳೆ ಎಲೆ ಹಾಕಿ..
ಬಿಸಿ ಬಿಸಿ "ಮೊಗೆಕಾಯಿ ತೆಳ್ಳೆವು" ಹಾಕಿದಳು..!
ಸಂಗಡ.. "ಒಗ್ಗರಣೆ ಬೆಲ್ಲ" !!
ಬಾಯಲ್ಲಿ ನೀರೂರಿತು....!!
ಮನೆಯವರೆಲ್ಲರೂ ಬಾಯಿತುಂಬಾ ಉಪಾಚಾರ ಮಾಡಿದರು..
ನಮ್ಮ ಶಾರಿಯ ಮಗಳನ್ನು ಹೊಗಳಿದರು...
ತವರಿನ ಮನೆಯವರಿಗೆ ಇನ್ನೇನು ಬೇಕು..?
ಹುಡುಗಿ ಹೊಂದಿಕೊಂಡಿದ್ದಾಳಲ್ಲ.. ಬಹಳ ಖುಷಿಯಾಗಿತ್ತು..
ಆದರೆ ....
ಎಲ್ಲರ ಕಣ್ಣಿನಲ್ಲೂ ಆಶ್ಚರ್ಯ..!
ಪ್ರಶ್ನಾರ್ಥಕ ಚಿಹ್ನೆ ಬೇಡವೆಂದರೂ ಎದ್ದು ಕಾಣುತ್ತಿತ್ತು..
ಇವರು ಯಾಕೆ ಬಂದಿದ್ದಾರೆ...? !!.
ಆದರೆ ಯಾರೂ ಬಾಯಿಬಿಟ್ಟು ಕೇಳುತ್ತಿಲ್ಲ..
ಸಂಪ್ರದಾಯಸ್ಥರೇ.. ಹಾಗೆ..
"ಬಂದವರು ಕಾರಣ ಹೇಳಿಯೇ ಹೇಳುತ್ತಾರಲ್ಲ.. ಅಂತ ಸುಮ್ಮನಿದ್ದಾರೆ" ಅಂದುಕೊಂಡೆ..
ನಾವು ತಿಂಡಿ ಮುಗಿಸಿ ಮತ್ತೆ ಜಗುಲಿಗೆ( ಪಡಸಾಲೆ) ಬಂದೆವು..
ಈಗ ಹುಡುಗನೂ ಬಂದ...
"ಮಾಮಾ...ಮತ್ತೇನು ಸುದ್ಧಿ?
ಮನೆಯಲ್ಲಿ ಎಲ್ಲರೂ ಸೌಖ್ಯವಾ?
ನಿನ್ನೆ ರಾತ್ರಿ.. ಯಕ್ಷಗಾನ ನೋಡಲು ಸಿರ್ಸಿಗೆ ಹೋಗಿದ್ದೆ..
"ಲಂಕಾ ದಹನ"
ಕಣ್ಣಿಮನೆಯವರ "ಹನುಮಂತ" ಅಭಿನಯ ಬಹಳ ಸೊಗಸಾಗಿತ್ತು...
ಬೆಳಗಿನವರೆಗೆ ಯಕ್ಷಗಾನ ನೋಡಿ ಬಂದೆ..
ಹಾಗಾಗಿ ಪೂಜೆಗೆ ತಡವಾಯಿತು.."
ಇಲ್ಲಿಯವರೆಗೆ ಸುಮ್ಮನಿದ್ದ ನಾಗು
"ಸ್ವಲ್ಪ ತೋಟದ ಕಡೆ ಹೋಗಿ ಬರೋಣವೆ..?" ಕೇಳಿದ..
ಹುಡುಗನಿಗೆ ತಾನು ಮಾಡಿದ ಕೃಷಿ ಕೆಲಸವನ್ನು ತೋರಿಸುವ ಉತ್ಸಾಹ ಕಂಡಿತು..
ನಾನು ನಾಗು ಎದ್ದು ಅವನನ್ನು ಹಿಂಬಾಲಿಸಿದೆವು...
ನಾನು ಮೆಲ್ಲನೆ ಮಾತಿಗೆ ಶುರು ಹಚ್ಚಿಕೊಂಡೆ...
"ನಾನು ಹೀಗೆ ಹೇಳುತ್ತೇನೆಂದು ತಪ್ಪು ತಿಳಿಯ ಬೇಡಪ್ಪಾ..."
"ಕೇಳೀ .. ಮಾಮ..
ಅದರಲ್ಲಿ ತಪ್ಪು ತಿಳಿಯುವದೇನಿದೆ?"
"ಮತ್ತೇನಿಲ್ಲ..
ಬೇಜಾರೂ ಮಾಡ್ಕೊ ಬಾರ್ದು..
ಮೊದಲೇ.. ನಿನ್ನ ಬಗೆಗೆ ಈ ಆರೋಪ ಇತ್ತು..
ಇಷ್ಟು ದಿನಗಳಾದರೂ ಹೊಸ ಸುದ್ಧಿಯಿಲ್ಲ..
ಜನ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ..
ಏನಾಯ್ತು?
ಏನು ಸಮಸ್ಯೆ?
ನಾವು ನಿನ್ನ ಸ್ನೇಹಿತರಿದ್ದಂತೆ..
ಮನ ಬಿಚ್ಚಿ ಮಾತಾಡು..
ಯಾವ ಸಂಕೋಚವನ್ನೂ ಇಟ್ಟುಕೊಳ್ಳ ಬೇಡಪ್ಪಾ.."
ಹುಡುಗ ಸ್ವಲ್ಪ ಹೊತ್ತು ಮಾತನಾದಲಿಲ್ಲ..
"ಮಾಮಾ..
ಇವಳಿಗೆ ತುಂಬಾ.. ನಾಚಿಕೆ... ಹೆದರಿಕೆ...!
ರಾತ್ರಿಯಂತೂ ಮಾತೇ ಆಡುವದಿಲ್ಲ..
ನನಗೆ ಏನು ಮಾತಾಡಬೇಕೆಂದು.. ಗೊತ್ತೇ ಆಗುವದಿಲ್ಲ...
ನಮ್ಮಿಬ್ಬರ ನಡುವೆ ತುಂಬಾ ಪ್ರೀತಿಯಿದೆ..
ಆದರೆ..
ಇಬ್ಬರಿಗೂ ಹೇಳೀಕೊಳ್ಳಲು ಬರುವದಿಲ್ಲ...
ನನಗೂ ಸಂಕೋಚ..."
" ಏನು ಹುಡುಗ್ರೋ ನೀವು..?
ಇಷ್ಟೆಲ್ಲಾ ಸಿನೇಮಾ ನೋಡ್ತೀರಿ.. ಏನೂ ಗೊತ್ತಾಗೋದಿಲ್ವಾ? "
" ಬದುಕಿನಲ್ಲಿ ಪ್ರೀತಿ ಅಂದರೆ ....ಸಿನೇಮ ಅಲ್ಲವಲ್ಲ ಮಾಮಾ...!
ಸಿನೆಮಾದಲ್ಲಿ ಹಾಡು ಕುಣಿತ..ಇರ್ತದೆ...
ಇಲ್ಲಿ ನಿಜ ಜೀವನದಲ್ಲಿ ಅದೆಲ್ಲ ಬಿಟ್ಟು ಉಳಿದೆಲ್ಲವೂ ಇದೆ...
ಇಲ್ಲಿ ಜೀವನದಲ್ಲಿ ಬಹಳ ಕಷ್ಟ..
ಅಲ್ಲಿ ಹೀರೋಗೂ.. ಹೀರೋಯಿನ್ನಿಗೂ ಸಂಕೋಚವೇ ಇರೋದಿಲ್ಲ..
ಪಕ್ಕದಲ್ಲಿ ಡ್ಯಾನ್ಸ್ ಮಾಡ್ತಾರಲ್ಲ ...
ಅವರಿಗೂ ನಾಚಿಕೆ ಅನ್ನೋದೆ ಗೊತ್ತಿರೋದಿಲ್ಲ"
"ನೋಡು..
ಹೆಣ್ಣುಮಕ್ಕಳಿಗೆ ನಾಚಿಕೆ ಸಹಜ..
ನೀನು ಗಂಡು...
ಹೆಣ್ಣು ಪ್ರಕೃತಿ ಇದ್ದ ಹಾಗೆ...
ಅದಕ್ಕೆ ಬೇಕಾಗಿರೊ.. ಗಾಳಿ.. ಬೆಳಕು..
ಬೇರುಗಳಿಗೆ ನೀರು.. ಗೊಬ್ಬರ ...ನೀನೇ... ಕೊಡಬೇಕು...
ನೀನು ಧೈರ್ಯ ಕೊಡಬೇಕು...
ಭರವಸೆ ಹುಟ್ಟಿಸ ಬೇಕು...
ಹೊಸ ಕನಸು ಹುಟ್ಟಿಸ ಬೇಕು...
ಅವಳಲ್ಲಿ ಆಸೆಯ ಚಿಗುರು..
ಚಿಗುರುವ ಹಾಗೆ ನೀನು ಮಾಡಬೇಕು..."
ಹುಡುಗ "ಆಯ್ತು ...ಮಾಮಾ" ಅಂದು ಸುಮ್ಮನಾದ...
ನಾಗು ಹುಡುಗನಿಗೆ ಕೇಳಿದ..
" ನನಗೆ ಸ್ವಲ್ಪ ಸಿರ್ಸಿಯಲ್ಲಿ ಅರ್ಜಂಟ್ ಕೆಲಸವಿದೆ..
ನೀನೂ ನಮ್ಮ ಸಂಗಡ ಬಾ..
ಊಟದ ಸಮಯಕ್ಕೆ ಸರಿಯಾಗಿ ವಾಪಸ್ ಬಂದು ಬಿಡೋಣ.."
ನನಗೆ ಆಶ್ಚರ್ಯವಾದರೂ ಸುಮ್ಮನಿದ್ದೆ...
ಮನೆಯಲ್ಲಿ ಎಲ್ಲರಿಗೂ ಸಿರ್ಸಿಗೆ ಹೋಗಿ ಊಟದ ಸಮಯದೊಳಗೆ ಬಂದು ಬಿಡುತ್ತೇವೆ ಎಂದು ಅಲ್ಲಿಂದ ಹೊರಟೆವು...
ನಾಗು ಸಿರ್ಸಿ "ನಟರಾಜ್" ರೋಡಿನಲ್ಲಿ ಕಾರು ನಿಲ್ಲಿಸಿ ಲಗುಬಗೆಯಿಂದ ಹೋದ...
ಬರುವಾಗ ಕೆಲವು ಪುಸ್ತಕಗಳಿದ್ದವು..
ಸಿಡಿಗಳಿದ್ದವು..!
" ನೋಡಪ್ಪಾ...
ಎಲ್ಲರಿಗೂ..ವಯಸ್ಸಾಗುತ್ತದೆ..
ಪ್ರಾಯವೂ ಬಂದುಬಿಡುತ್ತದೆ...
ಮನೆಯಲ್ಲಿ ಮದುವೆಯನ್ನೂ ಮಾಡುತ್ತಾರೆ..
ಆದರೆ ..
ಆ ಮದುವೆಗೆ ಮಾನಸಿಕವಾಗಿ....
ದೈಹಿಕವಾಗಿ ತಯಾರಾಗೋದೂ ಸಹ ಬಹಳ ಮಹತ್ವ..
ಬದುಕು ಕನಸಲ್ಲ...
ಸಿನೇಮಾವೂ ಅಲ್ಲ...
ದಾಂಪತ್ಯ ಏನೋ.. ಹೇಗೋ .. ಆಗಿಬಿಡುತ್ತದೆ ಅಂತ ಈಗ ಇಲ್ಲ....
ಇದು.. ನಾವು ಬೆಳೆಸಿದಷ್ಟು ಬೆಳೆಯುತ್ತದೆ...
ಬೆಳೆಸಿದ ಹಾಗೆ ಬೆಳೆಯುತ್ತದೆ..
ಕಾಲ ಈಗ ಬದಲಾಗಿದೆ..
ಹೆಣ್ಣಿಗೆ ಏನು ಬೇಕೊ.. ಅದನ್ನು ಕೊಡುವ ಸಾಮರ್ಥ್ಯ ಗಂಡಿಗಿರಬೇಕು..
ಅವಳು ಮಾಡಿದ ಕೆಲಸಕ್ಕೆ ಸ್ವಲ್ಪ ಹೊಗಳಿಕೆ..
ಮುಕ್ತವಾಗಿ ಮಾತನಾಡುವದು..
ಕೆಲವು ರಸಿಕ ಮಾತುಗಳು... ಎಲ್ಲವೂ ಇರಬೇಕಪ್ಪಾ...
ಪ್ರಾಯ ಬಂದಾಗ ಮದುವೆ ಹಕ್ಕು ಒಂದೇ ಅಲ್ಲ..
ಒಂದು ಜವಾಬ್ದಾರಿ ಕೂಡ..
ಉಪದೇಶ ಮಾಡುವದರಿಂದ..ಪ್ರವಚನ ಕೇಳುವದರಿಂದ..
ಗಿಡದಲ್ಲಿ ಹೂವು .. ಹಣ್ಣು ಆಗೋದಿಲ್ಲ..
ಬದುಕು ಸಿನೇಮಾ ಹಾಡಲ್ಲ...
ನಾನು ಕೊಟ್ಟಿದ್ದನ್ನು ಇಬ್ಬರೂ ಓದಿ.. ನೋಡಿ..
ಆದಷ್ಟು ಬೇಗ ನಮಗೆ ಹೊಸ ಸುದ್ಧಿ ಕೊಡಿ..."
ನಾಗುವಿನ ಮಾತು ಹುಡುಗನಲ್ಲಿ ಬಹಳ ನಾಟಿತು...
ನಾವು ಅದೇ ದಿನ ಬೆಂಗಳೂರಿಗೆ ತಿರುಗಿ ಬಂದೆವು..
ಬರುವಾಗ ನಾಗು..
"ಅಲ್ವೊ ಪ್ರಕಾಶು...ಆ ಹುಡುಗನ ಬಳಿ..
ಹೆಣ್ಣೆಂದರೆ ಪ್ರಕೃತಿ..
ಬೇರು ಗೊಬ್ಬರ ಅಂದರೆ ಅವನಿಗೇನು ಅರ್ಥ ಆಗ್ತದೋ..?
ಪ್ರಕೃತಿ.. ಹಸಿರು.... ಚಿಗುರು..
ಇದೆಲ್ಲ ನಿನ್ನ ಬ್ಲಾಗಿನಲ್ಲಿ ಇಟ್ಕೊ ಮಾರಾಯಾ.."
ಅಂತ ನೆಗೆಯಾಡಿದ...
ನನಗೂ ನಗು ಬಂತು...
ಕಳೆದವಾರ ಶಾರಿಯ ಫೋನ್... !!
ನನ್ನಾಕೆ ಶಾರಿಯ ಫೋನ್ ಎಂದರೆ ಓಡೋಡಿ ಬರುತ್ತಾಳೆ...
ನಾವೆಲ್ಲ ಶಾರಿಯ ದೊಡ್ಡ ಫ್ಯಾನ್.. !
ಸ್ಪೀಕರ್ ಫೋನ್ ಚಾಲೂ ಮಾಡಿ
"ಹಲ್ಲೋ.. ಶಾರಿ.. ಏನು ವಿಷಯ?"
"ಪ್ರಕಾಶು...!!!!
ಹೊಸ ಸುದ್ಧಿ ಕಣೊ...!!
ಮಗಳಿಗೆ ನಾಲ್ಕು ತಿಂಗಳಾಗಿದೆ..!
ಇದೆಲ್ಲ ನಿನ್ನಿಂದ ಆಯ್ತು ಕಣೊ...
ನೀನು ಅಲ್ಲಿ ಹೋಗಿ ಏನು ಹೇಳಿದ್ಯೋ..?..!!
ಏನು ಮಾಡಿದ್ಯೊ.!!.
ಅಂತೂ.. ಹೊಸ ಸುದ್ಧಿ ಬಂತು ಕಣೊ...!!
ಇದಕ್ಕೆಲ್ಲ ನೀನೇ.... ಕಾರಣ... ನೋಡು.. !!!!
ನನ್ನಾಕೆ ಬಿದ್ದೂ .. ಬಿದ್ದು..ನಗುತ್ತಿದ್ದಳು...!
"ಅಯ್ಯೊ..!!
ಅಯ್ಯೊ ....ಶಾರಿ ...!
ಹೀಗೆಲ್ಲ ಹೇಳಬೇಡ್ವೆ... !!
ಜನ ಅಪಾರ್ಥ ಮಾಡ್ಕೋತಾರೆ...!!.."
"ಹೇಳುವವರಿಗೇನೋ... ? !
ನಾಲಿಗೆಗೆ ಎಲುಬಿಲ್ಲವಲ್ಲ.. ಏನು ಬೇಕಾದ್ರೂ ಹೇಳ್ತಾರೆ...!
ನೀನು ದೊಡ್ಡ ಶರೀರದವ...!
ತಲೆಯಲ್ಲಿ ಏನೂ ಇರೋದಿಲ್ಲ ಅಂದ್ಕೊಂಡಿದ್ದೆ ಕಣೋ..!! "
ನಾನು ಲಗು ಬಗೆಯಿಂದ ಮಾತು ಕಟ್ ಮಾಡಿ ಫೋನ್ ಇಟ್ಟೆ...
ನನ್ನಾಕೆಗೆ ಹೊಸ ವಿಷಯ ಸಿಕ್ಕಿಬಿಟ್ಟಿತ್ತು...!
" ಏನ್ರೀ ಇದು...? !!
ಹೊಸ ವಿಷಯ..?.. !! "
ಕಾಲೆಳೆಯಯುತ್ತ ನಗು ಶುರು ಮಾಡಿದಳು...
ಅಷ್ಟರಲ್ಲಿ ಅಣ್ಣನ ಫೋನ್..!
"ಪ್ರಕಾಶು...
ಶಾರಿ ಮಗಳದು ಹೊಸ ಸುದ್ಧಿಯಂತಲ್ಲಪ್ಪಾ...!!
ಎಂಟು ತಿಂಗಳಿಂದ ಆಗದೇ ಇದ್ದದ್ದು ..
ನೀನು ಹೋಗಿ ಏನು ಮಾಡಿದ್ಯೋ...?.. !! .."
"ಅಯ್ಯೋ ..
ಅಣ್ಣಯ್ಯಾ..!!.
ನಾನು ಏನೂ ಮಾಡಿಲ್ಲ..!
ಎಲ್ಲವನ್ನೂ ನಾಗು ಮಾಡಿದ್ದು...!!.."
ನನ್ನಾಕೆ ಮತ್ತೆ ಎದ್ದೂ..... ಬಿದ್ದೂ ನಗಲಿಕ್ಕೆ ಶುರು ಮಾಡಿದಳು....
ಅಯ್ಯೋ ರಾಮ...!! ಈ ಶಾರಿ....
ಊರ ತುಂಬ ಡಂಗುರ ಸಾರಿಬಿಟ್ಟಿದ್ದಾಳಾ.. !!
(ಶಾರಿಯ ಅವಾಂತರ ಇನ್ನೊಂದಿದೆ..)
ಇಲ್ಲಿ ನೋಡಿ...
82 comments:
ಪ್ರಕಾಶಣ್ಣ
ಅಬ್ಬಾ ಎಂತದೋ ಬಿಡಿ, ಒಂದು ಹೊಸ ಸುದ್ದಿ ಕೊಟ್ರಲ್ಲ ಅದೇ ಖುಷಿ ನಮಗೆ!!!
ಒಳ್ಳೆಯ ವಿಚಾರಯುಕ್ತ ಲೇಖನ, ಬರಹ ಎಲ್ಲಾ ಮಜಲುಗಳಿಂದಲೂ ವಿನೋದಮಯವಾಗಿದೆ.
ರಾಜೇಶ್...
ಬಹಳ ದಿನಗಳ ನಂತರ ನಿಮ್ಮ ಪ್ರತಿಕ್ರಿಯೆ...
ತುಂಬಾ ಖುಷಿಯಾಯ್ತು..!
ಇನ್ನು ನಮ್ಮ ಶಾರೀ...
ಯಾವಾಗಲೂ ಹೀಗೇನೇ...
ಮುಗ್ಧೆ.... !
ಹೃದಯದಲ್ಲಿ ಬೆಟ್ಟದಷ್ಟು ಪ್ರೀತಿ,ಮಮತೆ ಇರುವಾಗ ಇದೆಲ್ಲ ಏನು ಅಲ್ಲವಾ?
ಹೊಸ ಸುದ್ದಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಪ್ರಕಾಶಣ್ಣ,
ಕಥೆ ಚೆನ್ನಾಗಿದೆ.... ಸ್ವಲ್ಪ ಹೆಚ್ಚೇ ಅನಿಸ್ವಷ್ಟು ಡಬಲ್ ಮೀನಿಂಗ್...!!!
ಕೃಷ್ಣ ಭಟ್ಟರೆ...
ಮದುವೆಯ ವಯಸ್ಸಾಯಿತು ಎಂದು ಮದುವೆ ಮಾಡಿ ಬಿಡುತ್ತಾರೆ..
ನಾವು ಕಾಲೇಜಿನಲ್ಲಿ ಓದುವಾಗ ಸುಧಾ ವಾರ ಪತ್ರಿಕೆಯಲ್ಲಿ " ಲೈಂಗಿಕಶಿಕ್ಷಣ ನಮ್ಮ ಪಠ್ಯಪುಸ್ತಕಗಲಲ್ಲಿ ಅಗತ್ಯವೇ.." ಎನ್ನುವ ಚರ್ಚೆ ನಡೆದಿತ್ತು..
ಆಗ ಕಾರಂತಜ್ಜ ಕೊಟ್ಟ ಉತ್ತರ ನನಗಿನ್ನೂ ನೆನಪಿದೆ..
""ಕಾಮ ಪ್ರಕೃತಿಯ ಸಹಜ ಕ್ರಿಯೆ...
ಇದನ್ನು ಪಠ್ಯದಲ್ಲಿ ಸೇರಿಸುವ ಅಗತ್ಯವಿಲ್ಲ.
ಏನೂ ತಿಳಿಯದ ನಿಮ್ಮ ಮನೆಯ ಹಸು/ನಾಯಿಗಳಿಗೆ ಯಾರು ಕಲಿಸಿರುತ್ತಾರೆ?
ಇಂಥಹ ಪಾಠಗಳನ್ನು ಒಬ್ಬ ಶಿಕ್ಷಕ ವಿಧ್ಯಾರ್ಥಿಗಳಿಗೆ ಹೇಗೆ ಪಾಠ ಮಡ ಬಲ್ಲ?
ಶಿಕ್ಷಕರ ಬವಣೆಯನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಿ.."
ಎಂದೆಲ್ಲ ಹೇಳೀದ್ದರು..
ಇನ್ನು ಡಬ್ಬಲ್ ಮೀನೀಂಗ್ ವಿಷಯ..
ಇದು ಮುಗ್ಧವಾಗಿ ಹಳ್ಳಿಗಳಲ್ಲಿ ಸಹಜವಾಗಿ ಆಡುವ ಮಾತು..
ಪ್ರತಿಕ್ರಿಯೆಗೆ ಧನ್ಯವಾದಗಳು...
prakashanna,
namma urina kadeya sahaja maatugalannu, adara sandarbhavannu rasavattaagi varnisiddeeri..
ಪ್ರಕಾಶಣ್ಣ;ಅಂತೂ ಕೊನೆಗೆ ಶಾರೀ ಮಗಳಿಂದ ಸಿಹಿ ಸುದ್ದಿ ಬಂದಿದ್ದು ನಮಗೆಲ್ಲಾ ನಿರಾಳವಾಯಿತು.ನೀವು ಮತ್ತು ನಾಗೂ ಊರಿಗೆ ಹೋಗಿದ್ದಾರಲ್ಲಾ --------!? ನೀವು ತಣ್ಣಗೆ narrate ಮಾಡುವ ರೀತಿ ಅದ್ಭುತ!ನೀವು ಕತೆ ಹೇಳುವ ರೀತಿ ತುಂಬಾ ತುಂಬಾ ಖುಷಿ ಕೊಡುತ್ತೆ.HATS OFF TO YOU SIR.You are just marvellous!Warm regards.
ರಂಜನಾ...
ಆಡು ಮಾತುಗಳಲ್ಲಿನ ಸಹಜ ಮುಗ್ಧತೆ..
ಶಾರಿಯ ಬಹಳ ಸಹಜ ಸ್ವಭಾವ...
ಅವಳು ನನ್ನನ್ನು ಚಾಳಿಸಿದರೂ..
ಛೇಡಿಸಿದರೂ...
ಆ ಮುಗ್ಧತೆ ಇಷ್ಟವಾಗಿಬಿಡುತ್ತದೆ..
ದಾಂಪತ್ಯದಲ್ಲಿ ಪರಸ್ಪರ ಇಬ್ಬರೂ ಮುಕ್ತವಾಗಿ ಮಾತನಾಡುವದನ್ನು ಬೆಳೆಸಿಕೊಳ್ಳುವ ಅಗತ್ಯ ಬಹಳವಿದೆ...
ನಮ್ಮ ಹಿರಿಯರು ಇದನ್ನು ಮಾಡಿಲ್ಲ..
ಆಗ ಕಾಲ ಹಾಗಿತ್ತು ಅಂದುಕೊಂಡರೂ..
ಈಗ ಕಾಲ ಬದಲಾಗಿದೆ..
ಪ್ರೋತ್ಸಾಹಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಕೃಷ್ಣಮೂರ್ತಿಯವರೆ...
ನಿಮ್ಮ ಪ್ರೀತಿಗೆ ನನ್ನ "ಸಲಾಮ್"
ಇಲ್ಲಿ ಒಂದು ಗಂಭೀರ ವಿಷಯವಿದೆ..
ಹೆಚ್ಚಾಗಿ ನಮ್ಮ ಗಂಡು ಮಕ್ಕಳು ಹೆಣ್ಣಿಗೇನು ಬೇಕು ಅಂತ ವಿಚಾರ ಮಾಡುವದೇ ಇಲ್ಲ..
ಎಲ್ಲವೂ ತಮ್ಮಿಷ್ಟ..
ತಾನು ಹೇಳಿದಂತೆ..
ಅವಳನ್ನು ಒಲಿಸಿಕೊಳ್ಳ ಬೇಕು..
ಹೊಸ ಕನಸು ಅರಳಿಸ ಬೇಕು..
ಸಹಜ ಸರಸ ದಾಂಪತ್ಯದ ಸೊಗಸಿನ ಬಗೆಗೆ ಏನೂ ಗೊತ್ತೇ ಇದ್ದಿರುವದಿಲ್ಲ...
ಆ ಬಗ್ಗೆ ನಮ್ಮ ಹಿರಿಯರು ನಮಗೆ ಖಂಡಿತ ಆದರ್ಶವಲ್ಲ ಅನ್ನುವದು ನನ್ನ ಅನಿಸಿಕೆ.. ಏನಂತೀರಾ?
ಶಾರಿಯ ಸಹಜ ಮಾತುಗಳು..
ಅವಳ ಮುಗ್ಧತೆ..
ವಯಸ್ಸಾದರೂ ಅದನ್ನು ಉಳಿಸಿಕೊಂಡಿರುವ ಪರಿ..
ಇವೆಲ್ಲ ಇನ್ನೂ ಹಳ್ಳಿಗಳಲ್ಲಿ...
ವಿರಳವಾದರೂ.. ಅಲ್ಲಲ್ಲಿ ಕಾಣಸಿಗುತ್ತದೆ....
ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಟಾನಿಕ್ ..".ಡಾಕ್ಟರ್ರೆ... ! "
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಒಳ್ಳೆಯ ಲೇಖನ ಪ್ರಾಕಾಶಣ್ಣ. ಹಾಸ್ಯಮಯವಾಗಿದ್ದರೂ ವಿಚಾರ ಗಂಭೀರವಾಗಿದೆ.
ಒಟ್ಟಿನಲ್ಲಿ ನೀವು ಮತ್ತೆ ನಾಗು ಸೇರಿ ಹೊಸ ಸುದ್ದಿ ಹುಟ್ಟುಹಾಕಿದ್ರಿ ಅಂತಾಯ್ತು..ಕಥೆ ತುಂಬಾ ಚೆನ್ನಾಗಿತ್ತು..
nice one prakashanna...hego sukantyavaayitalla bidi....
ha ha ಬಹಳ ಚೆನ್ನಾಗಿ ಬಂದಿದೆ ಸರ್ , ಒಟ್ಟಿನಲ್ಲಿ ಈ ಕಾಲದಲ್ಲಿ ಈ ತರದವರೂ ಇರ್ತಾರೆ ಅನ್ನೋದನ್ನ ಬಹಳ ಸೊಗಸಾಗಿ ನಿರೂಪಿಸಿದ್ದೀರ.
ಹೌದು.. ಪ್ರಕಾಶಣ್ಣ..
ಕೆಲವು ಸಲ ಇ೦ದಿನ ಮಕ್ಕಳಿಗೆ ತಿಳುವಳಿಕೆ ಎಷ್ಟು ಕೊಡಬೇಕು ಎನ್ನುವುದು ಗೊ೦ದಲವಾಗುತ್ತದೆ..
"ಬದುಕು ಸಿನೇಮಾ ಹಾಡಲ್ಲ...!"ಈ ವಿಷಯ ಅ೦ತ್ಲೇ ಅಲ್ಲ..
ಇದನ್ನು ಈಗಿನ ...
ಯಾರ್ಯಾರನ್ನೋ ಕಟ್ಟಿಕೊ೦ದು ಓಡಿಹೋಗುವ... ಹೋದ೦ತೆ ಡಬಲ್ ಸ್ಪೀಡಿನಲ್ಲಿ ವಾಪಾಸು ಓಡಿ ಬರುವ ಹೆಣ್ಣುಮಕ್ಕಳು ಅರ್ಥ ಮಾಡಿಕೊಳ್ಳಬೇಕು.. ಅನ್ನಿಸುತ್ತೆ..
ಸು೦ದರ ಬರಹಕ್ಕೆ ವ೦ದನೆಗಳು.
ಹಹಾಹಾ... ಅಂತು ಇಂತೂ ಹೊಸ ಸುದ್ದಿ ಬಂತು ಹೇಳಾಯ್ತು!!... ಜೋಕ್ ಮಾಡ್ತಾನೆ ಸೀರಿಯಸ್ ವಿಷಯಾನೂ ನವಿರಾಗಿ ತಿಳಿಸಿದ ರೀತಿ ಚೆನ್ನಾಗಿದೆ....
ಏನ್ ಹೇಳಿದ್ರೋ.. ಏನ್ ಮಾದಿದ್ರೋ.. ಸಿಹಿ ಸುದ್ದಿ ಬಂದೇ ಬಿಡ್ತು.... ನೀವು ಭಾರೀ ಜೋರು ಬಿಡಿ.....
ಪ್ರಕಾಶಜೀ,
ನಿಮ್ಮ ಬರಹ, ಅದರಲ್ಲಿನ ವಿಷಯ ವಿಶದೀಕರಣ ಒಳ್ಳೆದಗಿದೆ. ಬಾಲ್ಯದ ನೆನಪುಗಳನ್ನು ಮರುಕಳಿಸುತ್ತೆ. ನಿಮ್ಮ ಉರು ಗೊತ್ತಾಗಿಲ್ಲ ? ಸತ್ಯ ಘಟನೆ ಅಂದಿರಿ ಅದರಲ್ಲಿ ಬರುವ "ಜಂಬೆಮನೆ" ಊರು ಎಲ್ಲಿದೆ ? ಕಾರಣ ಇಷ್ಟೇ ನನ್ನ ಮನೆ ಹೆಸರು ಅದೇ, ಆದರೆ ಗಂಗಾ ಅನ್ನುವವರು ಯಾರಿಲ್ಲ. ಈ ಗಂಗಾ ನಂತವರು ಸಾಮಾನ್ಯ ಪ್ರತಿ ಊರಲ್ಲೂ ಇರ್ತಾರೆ, ಮಾಡುವ ಕೆಲಸನು ಅಂತಹದೆ.
ದನ್ಯರಿ,
ಮೋಹನ್ ಹೆಗಡೆ,
ಮಣಿಪಾಲ.
ಅಂತೂ ಸುದ್ಧಿ ಕೊಟ್ಟಿರಲ್ಲ!!! ಸಂತೋಷ!! ಯಾರೇ ಕಾರಣರಾಗಿರಲಿ (ನೀವು, ನಾಗು,ಹುಡುಗ) ಅದು ಅಪ್ರಸ್ತುತ ಆದರೆ ನಮಗೆ ಸಕತ್ ನಗುವಿನೊಂದಿಗೆ ಕೆಲವು ಪಾಠಗಳು ಬದುಕಿಗೆ ಸಿಕ್ಕವು!
ಒಂದು ದೊಡ್ಡ ನಗು :-)
ಪ್ರಕಾಶಣ್ಣ ,
ಹೇಗೋ ಒಟ್ಟಿನಲ್ಲಿ ಹೊಸ ಸುದ್ದಿ ಸಿಕ್ಕಿದ್ದು ಮುಖ್ಯ ! ಯೋಚನೆ ಮಾಡಬೇಕಾದ ಗಂಭೀರ ವಿಷಯವನ್ನು ನವಿರು ಹಾಸ್ಯದ ಲೇಪದೊಂದಿಗೆ ಹಂಚಿಕೊಂಡಿದ್ದೀರ.
ಇಂಥದ್ದೇ ಒಂದು ಪ್ರಸಂಗವನ್ನು ಕೇಳಿದ್ದೆ . ಸ್ನೇಹಿತರ ಸಂಬಂಧಿಯೊಬ್ಬರ ಕಥೆ . ಮದುವೆಯಾಗಿ ಸುಮಾರು ೨ ವರ್ಷಗಳಾದರೂ ಏನೂ ಇಲ್ಲ ಅಂತ ಇಬ್ಬರೂ ಡಾಕ್ಟರ್ ಹತ್ರ ಹೋದರಂತೆ . ಆ ಡಾಕ್ಟರ್ ಕೂಡ ಸಂಬಂಧಿಗಳೇ. ಡಾಕ್ಟರ್ ಚೆಕ್ ಅಪ್ ಮಾಡಿ ಸ್ವಲ್ಪ ವಿಷಯ ವಿಚಾರಿಸಿದವರು " ಹುಚ್ಚು ಹುಡುಗ್ರಾ, ನಿಂಗಕ್ಕೆ ಹ್ಯಾಂಗೆ ಮಕ್ಕಳಾಗಲೇ ಸಾಧ್ಯ ? " ಅಂತ ನಕ್ಕು ಬಿಟ್ಟರಂತೆ. ನಿಜ ಎಂದರೆ , ೨ ವರ್ಷಗಳೇ ಕಳೆದರೂ , ಅವರಿಬ್ಬರ ನಡುವೆ ಏನಾಗಬೇಕಿತ್ತೋ ಅದೇ ಆಗಿರಲಿಲ್ಲ ! ಮುಖ್ಯವೆಂದರೆ ಮಕ್ಕಳು ಹೇಗಾಗುತ್ತವೆ ಎಂಬುದೇ ಅವರಿಗೆ ಗೊತ್ತಿರಲಿಲ್ಲ ! ಮುತ್ತಿಟ್ಟರೆ ಮುಗೀತು ಎಂದು ಅವರ ತಿಳುವಳಿಕೆ . ಆಮೇಲೆ ಆ ಡಾಕ್ಟರ್ ಎಲ್ಲವನ್ನು ವಿವರಿಸಿ ಹೇಳಿದಮೇಲೆ ಒಂದು ವರ್ಷದಲ್ಲಿ ಮಗುವಾಯಿತು. ಕೇಳಲು ತಮಾಷೆಯೆನಿಸಿದರೂ ವಿಷಯ ಗಂಭೀರವೇ ! ಅಕಸ್ಮಾತ್ ಅವರಿಬ್ಬರೂ ಡಾಕ್ಟರರ ಹತ್ತಿರ ಹೋಗದಿದ್ದರೆ? ಮಕ್ಕಳಾಗಲಿಲ್ಲವಲ್ಲ ಎಂಬ ಕೊರಗು ಅವರಿಗಷ್ಟೇ ಅಲ್ಲಾ ,ಮನೆಯವರಿಗೂ ! ಅಷ್ಟಲ್ಲದೇ , ಅವರಿವರಿಂದ ನಾಲ್ಕು ಮಾತು ಕೇಳಬೇಕಾಗಿದ್ದು ಬೇರೆ .! ಕೆಲ ಸಂದರ್ಭಗಳನ್ನು ಗಮನಿಸಿದರೆ , ಈ ಬಗ್ಗೆ ಪ್ರಾಥಮಿಕ ಶಿಕ್ಷಣದ ಅಗತ್ಯವಿದೆ ಎನಿಸುತ್ತದೆ !
ಉತ್ತಮ ಲೇಖನ ಪ್ರಕಾಶಣ್ಣ !
:)..:)...ನಿಜ...ವಿನೋದದೊ೦ದಿಗೆ, ವಿಚಾರ ತು೦ಬಿದ ಬರಹ...ಚೆನ್ನಾಗಿದೆ.
ಅಂತೂ ಒ೦ದು ಹ೦ತಕ್ಕೆ ಬಂತಲ್ಲ ಶಾರೀ ಮಗಳ ಸ೦ಸಾರ, ಅದೇ ಸಮಾಧಾನ. ಮು೦ದ..... ????
ಪ್ರಕಾಶಣ್ಣ,
ನೀವು ಸಿಕ್ಕಿ ,, ನಿಮ್ಮ ಮಾತು ಕೇಳಿ ತುಂಬಾ ದಿನ ಆಗಿತ್ತು,,,, ಅಂತು ಹೊಸ ಸುದ್ದಿಯೊಂದಿಗೆ ಬಂದರಲ್ಲ... ಎಲ್ಲ ಸಮಸ್ಯೆಯನ್ನ , ಪ್ರಕೃತಿ ಬೇರು ಗೊಬ್ಬರದ , ಜೊತೆಯಲ್ಲೇ ಮಾಡಿ , ಮುಗಿಸಿ ಬಂದಿದ್ದಿರಲ್ಲ... ಇದಕ್ಕಿಂತ ಹೊಸ ಸುದ್ದಿ ಏನು ಬೇಕು..... ವಃ.... :-)
ಪ್ರಕಾಶಣ್ಣ........
ಅಂತೂ ನಿಮ್ಮ ಸಲಹೆ, ಪ್ರೋತ್ಸಾಹದಿಂದಾಗಿ ಹೊಸ ಸುದ್ಧಿ ಬಂತಲ್ಲ, ಅಷ್ಟು ಸಾಕು ಬಿಡಿ!
ನಿಮ್ಮ ಗೆಳೆಯ ನಾಗು ಅವರು ಒಳ್ಳೆಯ ಉಡುಗೊರೆಯನ್ನೇ ಕೊಟ್ಟಿರ್ತಾರೆ ಬಿಡಿ!
ಸುಮಾ..
ನಮ್ಮ ಗಂಡುಮಕ್ಕಳು ಅರಸಿಕರಾಗುತ್ತಿದ್ದಾರೆಯೆ...?
ಈ ಸಾರಿ ಊರಿಗೆ ಹೋದಾಗ ಇದು ನನಗನ್ನಿಸಿದ್ದು...
ಗುಟುಕಾ/ ಸಿಗರೇಟ್/ ಕುಡಿಯುವದು.. ಚಟಗಳ ದಾಸರಾಗಿ
ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆಯೆ..?
ಮದುವೆಯಾದ ಮೇಲೆ ಹೇಗಿರಬೇಕು ಎನ್ನುವಂಥಹ ಸೂಕ್ಷ್ಮ ವಿಷಯವನ್ನು ಅವರಿಗೆ ತಿಳಿಸಿಕೊಡುವವರಿಲ್ಲ ಎನ್ನುವದು ನನ್ನ ಭಾವನೆ..
ಪ್ರತಿಕ್ರಿಯೆಗೆ ಧನ್ಯವಾದಗಳು..
ದಿಲೀಪ್..
ಊರಿನ ಕಡೆಯವರೆಲ್ಲ...
" ಪ್ರಕಾಶಾ.. ನೀನು ಶಾರಿ ಮಗಳ ಮನೆಗೆ ..
ಹೋಗಿ ಬಂದ ಮೇಲೆ ಹೊಸ ಸುದ್ಧಿ ಆಯ್ತಂತೆ"
ಅಂದಾಗ ನನಗೆ ಹೇಗಾಗಿರ ಬೇಡ.. !!
ಒಳ್ಳೇ.. ಫಜೀತಿ...!!
ನಿಜ ಹೇಳ ಬೇಕೆಂದರೆ ನನ್ನ ಉಪದೇಶಕ್ಕಿಂತ..
ನಾಗುವಿನ ಪ್ರ್ಯಾಕ್ಟಿಕಲ್ ಉಪದೇಶ ಕೆಲಸ ಮಾಡಿದ್ದು..
"ನಾನು ಮಾಡಿದ್ದಲ್ಲ..
ಇದೆಲ್ಲ ನಾಗು ಮಾಡಿದ್ದು"
ಎಂದರೆ ಕೇಳುವವರಿಲ್ಲ !
ಪ್ರತಿಕ್ರಿಯೆಗೆ ಧನ್ಯವಾದಗಳು...
ಮನಸು....
ಹೇಗೋ ಒಳ್ಳೆಯದಾಯ್ತು ಅಂದು ಕೊಂಡರೂ...
ನಮ್ಮ ಹುಡುಗರಿಗೆ ಈ ಥರಹದ ತಿಳುವಳಿಕೆ..
ಹೆಂಡತಿಯೊಡನೆ ಸ್ವಲ್ಪ ರಸಿಕತೆಯಿಂದ ಮಾತನಾಡುವ..
ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳುವ...
ಸ್ವಭಾವ ಹೇಗೆ.. ತಿಳಿಸಿಕೊಡುವದು..?
ಹೆಚ್ಚಿನ ಮನೆಗಳಲ್ಲಿ
ಹೆಂಡತಿಯೆಂದರೆ "ಸಂಬಳ ರಹಿತ ಕೆಲಸಗಾರ್ತಿ" ಅಲ್ಲವೆ?
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಣ್ಣ,
ಹೊಸ ಸುದ್ದಿಗೆ ಗುದ್ದು ಕೊಟ್ಟಿದ್ದೀರಿ.... ಸೊಗಸಾದ ಬರವಣಿಗೆಯಲ್ಲಿ , ಗಂಭೀರ ವಿಷಯವನ್ನು ಹೇಳಿದ್ದೀರಿ... ಹಳ್ಳಿಗಳಲ್ಲಿ ಈ ರೀತಿ ಶಿಕ್ಷಣ ಅಗತ್ಯ ಇದೆ ಅನಿಸತ್ತೆ...... ಅಂತೂ ಇಂತೂ ಹೊಸ ಸುದ್ದಿ ಕೊಟ್ರಿ..... ಅತ್ತಿಗೆ ಯಾಕೆ ಅಷ್ಟೆಲ್ಲಾ ನಗಾಡುತ್ತಾ ಇದ್ದರು...? ಹ್ಹಾ..ಹ್ಹಾ....
ನನ್ನೊಳಗಿನ ಕನಸು...
ಚಟ ಮಾಡಿಕೊಂಡು ಬದುಕು ಹಾಳು ಮಾಡಿಕೊಳ್ಳುವ ಹುಡುಗರಿಗಿಂತ ಇಂಥವರು ಸಾವಿರ ಪಾಲು ಉತ್ತಮ..
ಮದುವೆ ಇನ್ನು ನಾಲ್ಕೈದು ದಿನ ಇದೆ ಅನ್ನುವಾಗ "ಹುಡುಗ ಗಂಡಸೇ ಅಲ್ಲ" ಅನ್ನುವ ಮಾತು...
ಅದನ್ನು ನಿವಾರಿಸಿ ಮದುವೆ ಮಾಡಿದ ಮೇಲೆ..
ಹೊಸ ಸುದ್ದಿಯಿಯಿಲ್ಲ ಅನ್ನುವ ಅಪವಾದ.. !
ಒಟ್ಟಿನಲ್ಲಿ ಶಾರಿ ಮಗಳ ಮದುವೆ...
ಹೊಸ ಸುದ್ಧಿ ಎಲ್ಲವೂ ಸುಖಾಂತ್ಯ ಆದದ್ದು ಎಲ್ಲರಿಗೂ ಖುಷಿ..
ಶಾರಿ ಹೇಳುವ ಮಾತೊಂದನ್ನು ಬಿಟ್ಟು...
ಹ್ಹಾ..ಹ್ಹಾ..
ಧನ್ಯವಾದಗಳು..
ಬರುತ್ತಾಇರಿ ಸರ್..
ಪ್ರಕಾಶಣ್ಣ
ಎಂದಿನಂತೆ ಉತ್ತಮ ಕಥೆ
ನಿಮ್ಮ ಶೈಲಿ ಮನ ಸೂರೆಗೊಳ್ಳುತ್ತದೆ
ಚುಕ್ಕಿ ಚಿತ್ತಾರ..
ಹೌದು.. ನೀವು ಹೇಳುವ ಸಮಸ್ಯೆ ಕೂಡ ಬಹಳ ಗಂಭೀರವಾದದ್ದು..
ಇದರ ಬಗೆಗೆ ಒಂದು ಸತ್ಯ ಘಟನೆ ಆಧಾರಿತ ಒಂದು ಕಥೆ ಬರೆಯುವ ವಿಚಾರವಿದೆ...
ಇರಲಿ...
ಹೆಣ್ಣಿನ ಮನಸ್ಸನ್ನು ಅರಿಯಲು ಆಗದ ಗಂಡುಗಳು ಜಾಸ್ತಿಯಾಗುತ್ತಿದ್ದಾರೆಯೆ...?
ಇಂದಿನ ಬದಲಾಗುತ್ತಿರುವ ಸಮಾಜ ಓಡುತ್ತಿರುವ ವೇಗದಲ್ಲಿ ಗಂಡು ಹಿಂದೆ ಬೀಳುತ್ತಿರುವನೆ?
ಅಥವಾ...?
ಆರ್ಥಿಕವಾಗಿ ಸಬಲಗೊಳ್ಳುತ್ತಿರುವ ಹೆಣ್ಣು ಅರ್ಥವಾಗದ ಮಟ್ಟಕ್ಕೆ ಏರಿಬಿಟ್ಟಿದ್ದಾಳೆಯೇ..?
ಕ್ಷಮಿಸಿ.. ಇದು "ಕವಲು" ಕಾದಂಬರಿಯ ವಿಮರ್ಶೆ ಥರಹ ಆಗುತ್ತಿದೆ..
ಹೆಣ್ಣು ಗಂಡಿನ ನಡುವೆ ಸಮನ್ವತೆಯ ಕೊರತೆಯಂತೂ ಎದ್ದು ಕಾಣುತ್ತಿದೆ..
ಧನ್ಯವಾದಗಳು ಒಂದು ಗಂಭೀರ ವಿಷಯವನ್ನು ಚರ್ಚಿಸಿ..
ಪ್ರೋತ್ಸಾಹ ಕೊಟ್ಟಿದ್ದಕ್ಕೆ...
ಪ್ರಗತಿ...
ಶಾರಿ ಆ ರೀತಿ ಹೇಳಿದಾಗ ನನ್ನಾಕೆಗಂತೂ ತಡೆಹಿಡಿಯಲಾರದಷ್ಟು ನಗು ಬಂತು...
ಹಿಂದೊಮ್ಮೆ ಇದೇ.. ಶಾರೀ..
"ನನಗೆ ಇಷ್ಟೆಲ್ಲ ಮಕ್ಕಳಾಗಲು.. ನನ್ನ ಮಾವ ಕಾರಣ" ಎಂದು ಬಿಟ್ಟಿದ್ದಳು..
ಒಟ್ಟಿನಲ್ಲಿ ಹೊಸ ಸುದ್ಧಿ ಬಂದಿದ್ದು ಎಲ್ಲರಿಗೂ ನಿರಾಳವಾಯಿತು..
ಧನ್ಯವಾದಗಳು.. ಪ್ರತಿಕ್ರಿಯೆಗೆ...
ಪ್ರಕಾಶ,
ಪಕ್ಕೆ ಹಿಡಿದುಕೊಂಡು ನಕ್ಕೂ ನಕ್ಕೂ ಸಾಕಾಯಿತು. ಒಟ್ಟಿನಲ್ಲಿ ಹೊಸ ಸುದ್ದಿ ಬಂತಲ್ಲ, ಮನಸ್ಸು ನಿರಾಳವಾಯ್ತು ನೋಡಿ.
ಪ್ರಕಾಶ್ ಸಾರ್...
ಸಕ್ಕತ್ ಕ್ಲೈಮಾಕ್ಸ್.... expected ಆದ್ರೂ... ನೀವು ಹೇಳಿರೋ ರೀತಿಗೆ ನಕ್ಕೂ ನಕ್ಕೂ ಸಾಕಾಯ್ತು... ನಿಮ್ಮ ಫಜೀತಿ, ನಿಮ್ಮ ಶ್ರೀಮತಿಯ ಹಾಸ್ಯ ಎಲ್ಲವನ್ನೂ visualise ಮಾಡ್ಕೊಂಡು ನಕ್ಕು ಸುಸ್ತಾಯ್ತು... ಕಥೆ ಹೇಳುವ ನಿಮ್ಮ ಪರಿಗೆ ನೀವೇ ಸಾಟಿ... ಅಂತೂ ಹಳ್ಳಿಯ ಮುಗ್ಧ ಜನರ ಭಾಷೆ ಕೆಲವೊಮ್ಮೆ ಫಜೀತಿ ಮಾಡಿದರೂ.... ಅದೇ ಜೀವನ, ಅದೇ ಸುಂದರ ಅಲ್ವಾ ಸಾರ್... ಧನ್ಯವಾದಗಳು...
ಶ್ಯಾಮಲ
ಗಿರಿಯವರೆ...
ನನ್ನ ಬ್ಲಾಗಿಗೆ ಸ್ವಾಗತ...
ನೀವು ಮಜಾ ಇದ್ದೀರಿ ಬಿಡಿ..
ವಿಷಯ ಗೊತ್ತಾದ ಮೇಲೂ ನನ್ನಣ್ಣ ಹೇಳಿದ ಹಾಗೇ ಹೇಳ್ತೀರಲ್ಲಾ..!!
ಹ್ಹಾ..ಹ್ಹಾ...
(ತಮಾಶೆ ಮಾಡಿದ್ದು ಮಾರಾಯ್ರೆ)
ನಾಗು ಮಾಡಿದ್ದು ಉಪಾಯ.. !!
ಆದರೆ ನನ್ನ ಹೆಸರು ಮುಂದೆ ಬಂತು...
ನಾಗೂ ಸಂಗಡ ಹೋದೆ ಅಂದ್ರೆ ಹಾಗೇನೆ..
ಆತ ಬಚಾವ್ ಆಗಿ ಬಿಡ್ತಿದ್ದ..
ನಮ್ಮ ಹೆಸರು ಬಂದು ಬಿಡ್ತಿತ್ತು..
ಒಟ್ಟಿನಲ್ಲಿ ಒಳ್ಳೆಯ ಹೊಸ ಸುದ್ಧಿ ಬಂತಲ್ಲಾ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರೀತಿಯ ಮೋಹನ್...
ನನ್ನ ಬ್ಲಾಗಿಗೆ ಸ್ವಾಗತ..
ನಿಜ ಹೇಳ ಬೇಕೆಂದರೆ "ಜಂಬೆ ಮನೆ" ಅಂತ ಒಂದು ಊರಿದೆ ಅಂತಾನೇ ನನಗೆ ಗೊತ್ತಿಲ್ಲವಾಗಿತ್ತು..!!
ಸತ್ಯ ಘಟನೆ ಹೆಸರು , ಊರು ಎಲ್ಲವೂ ಕಾಲ್ಪನಿಕ..
ಈಗಲೂ ನಿಮಗೆ ಬೇಸರವಿದ್ದಲ್ಲಿ "ಜಂಬೆಮನೆ " ಹೆಸರನ್ನು ತೆಗೆದು ಹಾಕುತ್ತೇನೆ..
ದಯವಿಟ್ಟು ಬೇಸರಿಸದಿರಿ...
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ...!
ಗಂಗಕ್ಕನಂತವರು ಇದ್ದೇ ಇರುತ್ತಾರೆ ಪ್ರತಿ ಊರಿನಲ್ಲಿ..
ಬೇರೆಯವರಿಗೆ ಕಷ್ಟ ಕೊಟ್ಟು ತಾವು ಸಂತೋಷ ಪಡುವದು...
ನಮ್ಮ ಬಾಲ್ಯ..
ಆಗಿನ ನಮ್ಮ ಗೆಳೆಯರು..
ಆ ತುಂಟಾಟ.. ಹೇಗೆ ಮರೆಯಲು ಸಾಧ್ಯ ಅಲ್ಲವಾ..?
ದಯವಿಟ್ಟು ಬರುತ್ತಾ ಇರಿ..
ಪ್ರೀತಿಯಿಂದ..
ಪ್ರಕಾಶಣ್ಣ... 9449053412
ಸೀತಾರಾಮ್ ಸರ್..
ಮದುವೆಯ ಸಂದರ್ಭ ತುಂಬಾ ನಾಜೂಕಿನ ಸಮಯ..
ಇಂಥಹ ಅಪವಾದ ಬಂತೆಂದರೆ
ಯಾರನ್ನ ನಂಬಬೇಕು?
ಯಾರನ್ನ ನಂಬ ಬಾರದು ಅಂತ ಗೊತ್ತಾಗುವದಿಲ್ಲ.. !
ಮೊದಲು ಹೇಳಿದ ಹಾಗೆ..
ನಮ್ಮ ನಿರ್ಧಾರಗಳ ಫಲ ಭವಿಷ್ಯ/ ಕಾಲವೇ ಹೇಳುತ್ತದೆ..
ನಿರ್ಧಾರದ ಫಲ ಒಳ್ಳೆಯದಾಗಿದ್ದರೆ ಪರವಾಗಿಲ್ಲ...
ಇಲ್ಲವೆಂದರೆ "ದೂಷಣೆ" ಕೇಳಲು ತಯಾರಾಗಿರ ಬೇಕಾಗುತ್ತದೆ..ಅಲ್ಲವೆ?
ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರೀತಿಯ "NRK"
ನನ್ನ ಕಡೆಯಿಂದಲೂ...!
ಇನ್ನೂ ದೊಡ್ಡ ನಗು ... "ಹ್ಹಾ..ಹ್ಹಾ... ಹ್ಹೋ.. ಹ್ಹೋ..."
ಬರುತ್ತಾ ಇರಿ... ಧನ್ಯವಾದಗಳು..
prakaasha MAMA...
ಚಿತ್ರಾ...
ಇನ್ನೂ ಕೆಲವು ಮಾತುಗಳಿದ್ದವು.. ವಿಷಯಗಳಿದ್ದವು...
ಎಲ್ಲವನ್ನೂ ಹೇಳಲಾಗುವದಿಲ್ಲವಲ್ಲ..
ಹಾಗಾಗಿ ಸೂಕ್ಷ್ಮವಾಗಿ ಹೇಳಿರುವೆ...
ನೀವು ಹೇಳೀದಂಥಹುದೇ ಒಂದು ಘಟನೆ ಬೆಂಗಳೂರಲ್ಲಿ ನಡೆದಿದೆ..
ಪರಿಚಯದವರು..
ಇಬ್ಬರೂ ಗೊತ್ತಿದ್ದವರು..
ಮಕ್ಕಳಲಾಗಿಲ್ಲ ಅಂತ ಬೇಸರ ತೋಡಿಕೊಂಡಾಗ ಪರಿಚಯದ ಡಾಕ್ಟರ್ ಬಳಿ ಕಳುಹಿಸಿದಾಗ ವಿಷಯ ಗೊತ್ತಾಗಿದೆ...!!
ಡಾಕ್ಟರ್ ನನಗೆ ಫೋನ್ ಮಾಡಿ ನಗುತ್ತಿದ್ದರು !
ಯಾಕೆಂದರೆ ಇಬ್ಬರೂ ಸಾಫ್ಟವೇರ್ ಇಂಜನೀಯರ್ಸ್.. !!
ಮುಗ್ಧತೆ / ಅಜ್ಞಾನ ಎಲ್ಲ ಕಡೆಯೂ ಇರುತ್ತದೆ..
ತಮ್ಮ ಜೀವನ ಪೂರ್ತಿ ಹಾಗೇ ಇದ್ದು ಬಿಡುತ್ತಿದ್ದರಾ?
ಚಂದದ ಪ್ರತಿಕ್ರಿಯೆಗೆ ..
ಅನುಭವ ಹಂಚಿಕೊಂಡಿದ್ದಕ್ಕೆ... ಧನ್ಯವಾದಗಳು..
ಮನಮುಕ್ತಾ...
ಈ ಘಟನೆಯಿಂದ ನನಗೆ ತಿಳಿದುದು ಏನೆಂದರೆ..
ಮದುವೆ "ಸ್ವರ್ಗದಲ್ಲಿ ನಿರ್ಧಾರವಾಗುವದಿಲ್ಲ...!"
ಅಕ್ಕ ಪಕ್ಕದ ಮನೆಯವರಿಂದಲೂ ನಿರ್ಧಾರವಾಗುತ್ತದೆ !!
ಪ್ರತಿಕ್ರಿಯೆಗೆ ಧನ್ಯವಾದಗಳು...
ಪರಾಂಜಪೆಯವರೆ...
ಮುಂದೇನು ಅಂತೀರಾ ??
ನಲವತ್ತನೆ ವಯಸ್ಸಿನಲ್ಲಿ "ಮೊಮ್ಮಗುವಿನ" ಆಗಮನ ಕಾಯುತ್ತಿರುವೆ..
ಹ್ಹಾ..ಹ್ಹಾ... !!
ಅಜ್ಜನಾಗುವ ಸೌಭಾಗ್ಯ.. !!
ಒಂದು ಮಜಾ ಸಂಗತಿಯಿದೆ.. ಇದನ್ನೊಮ್ಮೆ ಬ್ಲಾಗಿನಲ್ಲಿ ಬರೆಯಲೇ ಬೇಕು..
ನಾನು ಮದುವೆಯಾಗುವಾಗಲೇ "ಅಜ್ಜನಾಗಿದ್ದೆ"
ನನ್ನಾಕೆ ಈಗಲೂ ತಮಾಷೆ ಮಾಡುತ್ತಿರುತ್ತಾರೆ..
" ನೀವು ಅಜ್ಜನೆಂದು ಹೇಳಲೇ ಇಲ್ಲಾ...
"ಅಜ್ಜನೊಂದಿಗೆ" ಮದುವೆಯೆಂದರೆ ನಾನು ಬೇಡವೆನ್ನುತ್ತಿದ್ದೆ...!!"
ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರಕಾಶಜೀ,
ನಿಮ್ಮ ಸುಂದರ ಪ್ರತಿಕ್ರಿಯೆಗೆ ದನ್ಯವಾದ. ನನ್ನ ಊರಿನ ಹೆಸರು ಹಾಕಿದ್ದಕ್ಕೆ ಬೇಸರ ಇಲ್ಲ. ಅದೇ ಹೆಸರಿನದು ಮತ್ತೆಲ್ಲಿದೆ ಎಂದು ತಿಳಿಯುವ ಕುತಹಲಕ್ಕೆ ಕೇಳಿದ್ದು. ನಿಮ್ಮ ಬ್ಲಾಗ್ ಯಾವಾಗಲು ಓದುತ್ತೇನೆ ಆದರೆ ಬರಯಲು ವಿಷಯ ಬಂಡಾರ ಬಡವಾಗಿದೆ. ಅದಕ್ಕೆ ಎಲ್ಲ ಬ್ಲಾಗ್ಗಳ ಉತ್ತಮ ಓದುಗ ಅಷ್ಟೇ.
ದನ್ಯರಿ,
ಮೋಹನ ಹೆಗಡೆ
Yentadu idu maarayre.. Kathe super aagittu :)
nice...
U have given nice information in this story.
Thank you
ಪ್ರಕಾಶಣ್ಣ ಅಂತೂ ಸಿಹಿ ಸುದ್ದಿ ಬಂತಲ್ಲ, ಎಲ್ಲಾ ನಿಮ್ಮಿಂದಲೇ :-). ಸುಖಾಂತ್ಯ ಅಲ್ಲಲ್ಲ, ಸುಖಾದಿ :-) :-)
ಪ್ರಕಾಶಣ್ಣ,
ಅಂತೂ ಎಲ್ಲವೂ ಅವಾಂತರವಿಲ್ಲದೆ .. ಸಾಂಗವಾಗಿ ನೇರೆವೇರಿತಲ್ಲೆ
ಅದೆ ಕುಶಿ.. ಇನ್ನು ಸಿಹಿ ಸುದ್ದಿ ಬೇರೆ ಶಾರಿಯವರು ಡಂಗುರ ಸಾರದೆ ಇರ್ತಾರ್ಯೆ ...
ನೀರೂಪಣೆ ಚೆನ್ನಾಗಿದೆ ..
ಬನ್ನಿ ನಮ್ಮ ಗೂಡಿಗೊಮ್ಮೆ .
ಶ್ರೀಧರ
ಪ್ರಕಾಶ್ ಅವರೇ... ಮೊದಲೆರಡು ಕಂತುಗಳಲ್ಲಿ ಸಸ್ಪೆನ್ಸ್ ತುಂಬಿದ್ದರೂ ಕೊನೆಯ ಕಂತಿನಲ್ಲಿ ಕಥೆಯನ್ನು ಸುಖಾಂತ್ಯ ಮಾಡಿದ್ದೀರಿ. ತುಂಬಾನೇ... ಚೆನ್ನಾಗಿದೆ ಇಷ್ಟವಾಯಿತು :)
ಎಲ್ಲರನ್ನೂ ಕಾಯಿಸುತ್ತಾ ಮೂರು ಕಂತಿನ ತನಕ ಬರೆದ ನಿಮ್ಮ ವಿವರಣೆ ಆಪ್ತವಾಗುತ್ತದೆ, ಸಹಜವಾಗಿ ನಗುತರಿಸುತ್ತದೆ, ಇಂಥದ್ದೇ ಒಂದು ಕಥೆಯನ್ನು ಒಬ್ಬ ಹುಡುಗಿಯ ಬಗ್ಗೆ ಜನ ಕಟ್ಟಿದ್ದು ನನಗೊಬ್ಬರು ಹೇಳಿದ್ದರು, ಪಾದ ಜೀವಗಳು ವಿನಾಕಾರಣ ಅನುಭವಿಸುತ್ತವೆ ! ಹಳ್ಳಿಯ ರಾಜಕೀಯವೇ ಹೀಗೇ ಅಲ್ಲವೇ ? ಕಥೆ ಸಾಂಗವಾಯಿತು, ಮತ್ತಷ್ಟು ಬರಲಿ, ನಮಸ್ಕಾರ.
ಕಥೆ ತುಂಬಾ ಹಾಸ್ಯಭರಿತವಾಗಿದೆ... ಹಾಗೆ ಗಂಭೀರವಾದ ವಿಷಯವನ್ನು ವಿಮರ್ಶಿಸುತ್ತದೆ... ಅಂತು happy end ಆತು.. ಶಾರಿಯ ಮುಗ್ಧತೆ, ಹಾಸ್ಯದ ಮಾತುಗಳು ತುಂಬಾ ನಗು ತರಿಸುತ್ತದೆ.. nice story ಪ್ರಕಾಶಣ್ಣ...
ಗುರು...
ನಿಜ ನಿಮ್ಮೊಂದಿಗೆ ಮಾತನಾಡದೆ ಬಹಳ ದಿನಗಳಾದವು...
ಇಂಥಹ ವಿಷಯ ನೇರವಾಗಿ ಹೇಗೆ ಹೇಳುವದು?
ಹಾಗಾಗಿ "ಪ್ರಕೃತಿ.. ಹಸಿರು.. ಬೇರು..
ಗೊಬ್ಬರ" ಅಂತ ಸುತ್ತು ಬಳಸಿ ಹೇಳಿದೆ..
ನಮ್ಮ ನಾಗು ಮಹಾ ಪ್ರಚಂಡ..
ರೋಗಕ್ಕೆ ಸರಿಯಾದ ಔಷಧ ಅವನಿಗೆ ಗೊತ್ತು..
ಹೇಗೆ ಕೊಡ ಬೇಕೆಂಬುದೂ ಗೊತ್ತು...
ಈಗ ಇದೆಲ್ಲ ಅವನು ಮಾಡಿದ್ದು ಅಂದ್ರೆ.. ಯಾರೂ ನಂಬ್ತಾ ಇಲ್ವೆ... !!
ಎಲ್ಲರೂ ನನ್ನ ತಲೆಗೆ ಕಟ್ತಾ ಇದ್ದಾರೆ..
ಹ್ಹಾ..ಹ್ಹಾ...
ಧನ್ಯವಾದಗಳು ಪ್ರತಿಕ್ರಿಯೆಗೆ....
ಮನದಾಳದಿಂದ.. (ಪ್ರವೀಣ್)
ನಾಗು ಬರದೇ ಇದ್ದಲ್ಲಿ ಇಷ್ಟು ಜಲ್ದಿ ಹೊಸ ಸುದ್ಧಿ ಬರುತ್ತಿರಲಿಲ್ಲ...
ಆ ಸೀಡಿಗಳು.. ಪುಸ್ತಕಗಳು.. ಕೆಲಸ ಮಾಡಿದವು ..
ನಿಜ ...
ಇಂಥಹ ವಿಷಯಗಳನ್ನು/ಅನುಮಾನಗಳನ್ನು ಬೇರೆಯವರ ಬಳಿ ಹೇಳೀಕೊಳ್ಳುವದು ಕಷ್ಟ...
ಸ್ನೇಹಿತರ ಬಳಿ ಹೇಳೀಕೊಳ್ಳ ಬಹುದಲ್ಲ...
ಇದಕ್ಕೂ ಸಂಕೋಚ/ನಾಚಿಕೆಯೆ?
ಒಟ್ಟಿನಲ್ಲಿ ನಾಗು ಮಾನ ಉಳಿಸಿದ..
ಧನ್ಯವಾದಗಳು ಪ್ರತಿಕ್ರಿಯೆಗೆ...
ದಿನಕರ...
ನನ್ನಾಕೆಗೆ ದಿನಾಲೂ ನಗುವದೇ ಕೆಲಸವಾಗಿಬಿಟ್ಟಿದೆ..
ಊರಿನಿಂದ ಪ್ರತಿ ದಿನ ಫೋನ್..!!
"ಪಾಪ.. !! ಪ್ರಕಾಶ ಹೋಗಿ ಬಂದ ಮೇಲೆ ಹೊಸ ಸುದ್ಧಿ ಆಯ್ತಂತೆ..
ಪಾಪ..!! ಪ್ರಕಾಶ ತನ್ನ ಕೆಲಸ ಬಿಟ್ಟು...
ಅಲ್ಲಿಂದ ಬಂದು ಅವರ ಮನೆಗೆ ಹೋಗಿ...."
ಇಷ್ಟು ಸಾಕಲ್ಲವೆ ಅವಳಿಗೆ ದಿನಾ ಪೂರ್ತಿ ಕಾಲೆಳೆಯುವದಕ್ಕೆ?
ಹ್ಹಾ..ಹ್ಹಾ..!!!!
ಹೊಸ ಸುದ್ಧಿಯ ಖುಷಿಯನ್ನು ಸರಿಯಾಗಿ ಎಂಜಾಯ್ ಮಾಡಲಿಕ್ಕೂ ಆಗದಂಥಹ ಸ್ಥಿತಿ ಮಾರಾಯರೆ... !!
ಧನ್ಯವಾದಗಳು ಪ್ರತಿಕ್ರಿಯೆಗೆ....
ಅಂತೂ ಹುಡುಗನಿಗೆ ಗೆಲುವಿನ ದಾರಿಯನ್ನು ತೋರಿದಿರಲ್ಲ !. ಅದರ ಹೊಣೆಯನ್ನು ನೀವು ಹೊರಲೇಬೇಕು. ಅದೆಲ್ಲಾ ನಿಮ್ಮಿಂದಲೇ ಆದದ್ದು!.
ರೋಚಕತೆ, ಹಾಸ್ಯ ಹಾಗೂ ವಿಚಾರದೊಡನೆ ಬಂದ ಕತೆ ತುಂಬ ಚೆನ್ನಾಗಿತ್ತು.
ಹ್ಹಾ ಹ್ಹಾ ಶಾರಿ ಮಾತು ಕೇಳಿ ನಗು ಬಂತು.. ಅಂತೂ ಶಿರ್ಸಿಯ "ನಟರಾಜ" ರಸ್ತೆ ವಿಖ್ಯಾತ ಮಾಡಿದ್ರಿ :)
ಸ್ವಲ್ಪ ತಡವಾಗಿ ಅವರಿಗೆ ಸಂತಾನಫಲವಿದ್ದಿದ್ದರೆ ನೀವೆಲ್ಲಾ ವಿಚ್ಚೇದನ ಕೊಡುಸ್ತಿದ್ರೆನು ಅಂಥಾ ಭಯವಾಗಿತ್ತು !!!
ಸಾಗರದಾಚೆಯ ಇಂಚರ.. (ಗುರುಮೂರ್ತಿ...)
ಈ ಹುಡುಗ ನಿಜವಾಗಿಯೂ "ನಪಂಸಕನಾಗಿದ್ದು"...
"ಜಂಬೆ ಗಂಗಕ್ಕ" ಹೇಳಿದ ಮಾತು ನಿಜವಾಗಿದ್ದರೆ... ??
ನಿಜವಾಗಿದ್ದರೆ...?
????... ??
ನಿಜಕ್ಕೂ... ನನ್ನಲ್ಲಿ ಉತ್ತರವಿರುತ್ತಿರಲಿಲ್ಲ...
ಹಾಗೆ ಆಗಲಿಲ್ಲವಲ್ಲ...
ಅದೇ.. ಸಮಾಧಾನ...
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಸುನಾಥ ಸರ್...
ಜೀವನದಲ್ಲಿ ಏನೇನೋ ಅನುಭವಗಳಾಗುತ್ತವೆ...
ಇದೊಂದು ವಿಚಿತ್ರ ಅನುಭವ..
ಎಂದಿಗೂ ಮರೆಯಲಾರದ್ದು...
ಶಾರಿಯ ಮಾತುಗಳೇ ಹಾಗೆ..
ಅಲ್ಲಿ ಅಪಾರ್ಥವಾದರೂ...
ಭಾವನೆಗಳು ತುಂಬಿರುತ್ತವೆ...
ನಿಮ್ಮ ಜೀವನ ಉತ್ಸಾಹಕ್ಕೆ...
ಪ್ರೋತ್ಸಾಹ ಕೊಡುವ ರೀತಿಗೆ...
ನಿಮ್ಮ ನಿಷ್ಕಲ್ಮಶ ಮನಸಿಗೆ ನನ್ನ ನಮನಗಳು....
ಅಂತರಂಗದ ಮಾತುಗಳು...
ನಿಮ್ಮ ಬ್ಲಾಗಿನ ಹೆಸರಿನ ಹಾಗೆ..
ಹಳ್ಳಿ ಮುಗ್ಧ ಮನಸಿನ ಮಾತುಗಳು..
ಅಂತರಂಗದಿಂದ ಬಂದಿರುತ್ತವೆ..
ಡಬಲ್ ಅರ್ಥವಿದ್ದರೂ..
ಮುಗ್ಧತನ..
ಅವರ ಭಾವನೆಗಳನ್ನು ನೋಡಿದಾಗ ಮತ್ತೂ ರೀತಿ ಜಾಸ್ತಿಯಾಗಿಬಿಡುತ್ತವೆ... ಅಲ್ಲವೆ?
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು...
ನನಗೆ ಟಾನಿಕ್ ಥರಹ...
ಪ್ರಿಯ ಮೋಹನ್...
ನೀವೂ ಬರೆಯಿರಿ...
ಓದಲು ನಾವಿದ್ದೇವೆ...
ನಿಮ್ಮ ಪ್ರತಿಕ್ರಿಯೆಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ..
ಕೆಲಸದ ಒತ್ತಡವಿದೆ..
ಆದರೂ..
ಬರೆಯೋದರಲ್ಲೂ ಒಂದು ಥರಹದ ಸುಖವಿದೆ..
ಇದು ಈ ಬ್ಲಾಗಿನಿಂದ ಗೊತ್ತಾದದ್ದು...
ಇಲ್ಲದಿದ್ದಲ್ಲಿ ನಾನು ಬರೆಯುತ್ತಲೇ ಇರಲಿಲ್ಲ..
ನಿಮ್ಮೆಲ್ಲರ ಪರಿಚಯವೂ ಆಗುತ್ತಿರಲಿಲ್ಲ..
ನಿಮ್ಮ ಇಷ್ಟದ ನುಡಿಗಳು ನನಗೆ
ತುಂತುರು ಮಳೆಯಲ್ಲಿ
ಸಣ್ಣ ಛಳಿಯಲ್ಲಿ..
ಬೆಚ್ಚಗೆ ಬೆಂಕಿ ಕಾಯಿಸುತ್ತ..
ಹಲಸಿನ ಬೇಳೆ ಸುಡುತ್ತ..
ಒಂದು ಬಿಸಿ ಬಿಸಿ...
ಹಬೆಯಾಡುವ... ಚಹ ಕುಡಿದ ಹಾಗೆ... ಉತ್ಸಾಹ ಕೊಡುತ್ತದೆ...
ಇನ್ನಷ್ಟು ಬರೆಯೋಣ ಅನಿಸುತ್ತದೆ..
ಧನ್ಯವಾದಗಳು...
ದಯವಿಟ್ಟು ಬರುತ್ತಾ ಇರಿ..
abba antu kathe mugsidri...ega nirala atu....matte "sashesha".... madbidtrana madididdi.......
abba antu kathe mugsidri...ega nirala atu....matte "sashesha".... madbidtrana madididdi.......
ರವಿಕಾಂತ ಗೋರೆಯವರೆ...
ಏನೋ ಮಾಡಲಿಕ್ಕೆ ಹೋಗಿ ಏನೋ ಆಯಿತು...
ಆದರೆ,, ಫಲಿತಾಂಶ ಸಂತಸ ತಂದಿದೆ...
ಇದೆಲ್ಲ ಆದದ್ದು ನಾಗುವಿನಿಂದ ಮಾರಾಯರೆ...
ಇದರ ಶ್ರೇಯಸ್ಸು ನನ್ನ ಪರಮಾಪ್ತ ಗೆಳೆಯ ನಾಗುವಿಗೆ ಸಲ್ಲಬೇಕು..
ಸಿದ್ದರಾಮಯ್ಯ... ಶ್ರೀರಾಮುಲು.. ಯಡ್ಯೂರಪ್ಪ..
ಎಲ್ಲಸಮಸ್ತ ರಾಜಕಾರಣಿಗಳ ಮೇಲಾಣ್... ನನಗೆ ಬೇಡ...!
ಪ್ರತಿಕ್ರಿಯೆಗೆ ಧನ್ಯವಾದಗಳು..
ಶ್ರೀ...
ಒಟ್ಟಿನಲ್ಲಿ ಇದೊಂದು ವಿಚಿತ್ರ ಅನುಭವ..
ಯಾವಾಗಲೂ ಮರೆಯಲಾರದು..
ಧನ್ಯವಾದಗಳು..
ನಿಹಾರಿಕ (ಪೂರ್ಣಿಮಾ)
ಈ ಘಟನೆ ಸುಖಂತ್ಯವಾದ ಮೇಲೆ ನಗು ಬರುತ್ತಿದೆ..
ಖುಷಿಯೂ ಆಗುತ್ತಿದೆ..
ಆದರೆ ಆ ಮದುವೆಯ ಸಂದರ್ಭ.. ಬಹಳ ಕಷ್ಟವಾಗಿತ್ತು..
ಏನು ನಿರ್ಣಯ ತೆಗೆದುಕೊಳ್ಳಬೇಕು ಎನ್ನುವದು ದೊಡ್ಡ ಸಮಸ್ಯೆಯಾಗಿತ್ತು...
ಒಟ್ಟಿನಲ್ಲಿ ಒಳ್ಳೆಯದಾಯಿತಲ್ಲ.. ಇದು ಖುಶಿಯಾಗುತ್ತದೆ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಬರುತ್ತಾ ಇರಿ..
ನೀವೂ ಬರೆಯಿರಿ...
ಸಾಗರಿ...
ಹಾಂ.. ಸಂತೋಷ ಶುರುವಾಗಿದೆ...
ಮೊದಲೆರಡು ಭಾಗಗಲಲ್ಲಿ ಕಥೆ ಮುಗಿಸಿದಾಗ ಬಹಳಷ್ಟು ಓದುಗರು ..
ಇದು ನೈಜ ಘಟನೆ.. ಇದರಲ್ಲಿ ಯಾಕೆ ಕುತೂಹಲ?" ಅಂತ ಕೇಳಿದ್ದರು..
ಕೆಲವರಂತೂ ಫೋನ್ ಕೂಡ ಮಾಡಿದ್ದರು..
ಈಗ ಹೇಳಿ ಘಟನೆ ಹೇಳೀದ ರೀತಿ ಸರಿಯಾಗಿದೆ ಅಲ್ಲವೆ?
ಇದೆಲ್ಲವನ್ನೂ ಹೇಗೆ ಒಂದು ಅಥವಾ ಎರಡು ಭಾಗಗಳಲ್ಲಿ ಹೇಳಲು ಸಾಧ್ಯ?
ಪ್ರತಿಕ್ರಿಯೆಗೆ ಧನ್ಯವಾದಗಳು...
ಶ್ರೀಧರ್...
ನಿಜ ಶಾರೀಗೆ ಖುಷಿಯಾಗಿದೆ..
ಊರಲೆಲ್ಲ "ಪ್ರಕಾಶ ಬಂದಿದ್ದ.. ಹೊಸ ಸುದ್ಧಿ ಆಗಿದೆ" ಅಂತ..
ನಾನೆಲ್ಲಿ ಹೋಗಲಿ ಮಾರಾಯರೆ...??
ನಿಮ್ಮ ಬ್ಲಾಗ್ ಚೆನ್ನಾಗಿದೆ..
ನಿಮ್ಮ"ಡಿಸ್ಕೌಂಟ್" ಲೇಖನ ತುಂಬಾ ಚೆನ್ನಾಗಿದೆ...
ಪ್ರತಿಕ್ರಿಯೆ ಹಾಕಿದೆ.. ಏನೋ ತಾಂತ್ರಿಕ ಸಮಸ್ಯೆ ಅನಿಸುತ್ತದೆ..
ಎಂಟರ್ ಆಗಲಿಲ್ಲ...
ಪ್ರತಿಕ್ರಿಯೆ ಧನ್ಯವಾದಗಳು... ಬರುತ್ತಾ ಇರಿ..
ಗುರುಪ್ರಸಾದರೇ...
ನಮ್ಮ ಶಾರೀಯ ಗಂಡ "ಗಣಪ್ತಿ ಭಾವನ" ಒಂದಷ್ಟು "ಮಜಾ" ಕಥೆಗಳಿವೆ...
ಬರೆಯಲೇ ಬೇಕು ಅಂಥವುಗಳು..
"ನಮ್ಮ ಗಣಪ್ತಿ ಭಾವ ಶಾರಿ ಮದುವೆಗೆ ಮೊದಲು ಕೆಲವು ಹೆಣ್ಣುಮಕ್ಕಳನ್ನು ನೋಡಿ ಬೇಡ ಅಂತ ಬಿಟ್ಟ ಕಥೆಗಳು....
ಬಹಳ ಸೊಗಸಾದ ಘಟನೆಗಳಿವೆ..
ಬರೆಯುವೆ..
ಶಾರಿಮಗಳ ಮದುವೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ವಿ.ಆರ್. ಭಟ್ಟರೆ..
ನಿಮ್ಮ "ಗುರು ಭಕ್ತಿ" ಲೇಖನಕ್ಕೆ ಮತ್ತೊಮ್ಮೆ ವಂದನೆಗಳು..
ತುಂಬಾ ಚೆನ್ನಾಗಿ ಬರೆದಿರುವಿರಿ...
ಕೆಲವು ಸಂದರ್ಭಗಳಲ್ಲಿ ನಾವು ಹಾಗೆ ಮಾಡಿದ್ದೇವೆ..
ಹೀಗೆ ಮಾಡಿದ್ದೇವೆ ಅಂತೆಲ್ಲ ಬೊಗಳೆ ಬಿಡುತ್ತೇವೆ..
ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ನಿರ್ಧಾರಗಳ ಫಲಗಳನ್ನು "ಕಾಲವೇ" ಉತ್ತರ ಕೊಡ ಬೇಕಾಗುತ್ತದೆ..
ನಿರ್ಧರಿಸುತ್ತದೆ..
ಇಲ್ಲೂ ಹಾಗೆ ಆಗಿದೆ..
ಮದುವೆ ಮಾಡಿದೆವು...
ಒಂದು ವೇಳೆ ಹುಡುಗ "ಜಂಬೆ ಗಂಗಕ್ಕ" ಹೇಳೀದ ಹಾಗೆ ಇದ್ದಿದ್ದರೆ...?? !!
ಜೀವನ ಪೂರ್ತಿ ಒಂದು ಕೊರಗು..
ಯಾವಾಗಲೂ ಭಾದಿಸುತ್ತಿರುತ್ತಿತ್ತು... ಅಲ್ಲವೆ..?
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಪ್ರಕಾಶ್ ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ. ನಿಮ್ಮ ನಿರೂಪಣೆ ತು೦ಬಾ ಮುದ ಕೊಟ್ಟಿತು.
ಶುಭಾಶಯಗಳು
ಅನ೦ತ್
ಹಾಸ್ಯ ಮತ್ತು ವಾಸ್ತವ ಚೆನ್ನಾಗಿ ಮಿಳಿತವಾಗಿದೆ. ನಿಮ್ಮ ಬರವಣಿಗೆ ಶೈಲಿ ನನಗೆ ತುಂಬಾನೇ ಇಷ್ಟ.
3 baganu odji.. chennagiddu..
hmm agalle andre hege sullu suddi habbista.. en madta annodella chenda barde
thanks
pravi
ಅಲ್ಲ ಕಣೋ ಪ್ರಕಾಶ..ನಿನಗೆ ಇಲ್ಲದ ಉಸಾಬರಿ ಯಾಕೆ...? ಈಗ ನೋಡು ಹೆಸರು ಕೆಡಿಸ್ಕ್ಂಡ್ಯಾ..? ಶಾರೀಗೇನು ಹೊಸ ಖುಷಿ ಸುದ್ದಿ ಎಲ್ಲೆಲ್ಲೂ ಮುಟ್ಸೋಕೆ ಆತುರ ಕಾತುರ....ಪ್ರಕಾಶ ಬಂದು ಹೋದದ್ದೇ..ನಮಗೆಲ್ಲಾ ಸಿಹಿ ಸುದ್ದಿ ಸಿಗೋಹಾಗಾಯ್ತು...ಪ್ರಕಾಶನಿಗೆ ಅವನ ಸ್ನೇಹಿತ ನಾಗು ಸಹ ಬಹಳ ಹೆಲ್ಪ ಮಾಡಿದ ..ಇತ್ಯಾದಿ...ಹಹಹ...
ಅಂತೂ ಒಂದು ಸಂಸಾರಕ್ಕೆ ನೆಲೆ ಕೊಟ್ಟೆ ಬಿಡಪ್ಪಾ.
ಶುಭಾ...
ಸಮಸ್ಯೆ ಕಳೆದ ಮೇಲೆ ಎಲ್ಲವೂ ಹಗುರ..
ಸುಂದರ..
ಮದುವೆ ಇನ್ನು ನಾಲ್ಕುದಿನ ಇದೆಯೆನ್ನುವಾಗ "ಹುಡುಗ ಗಂಡಸೇ.. ಅಲ್ಲ" ಎಂದು ಕೇಳೀದಾಗ..
ಆಗುವ ಆತಂಕ ..
ಆನುಭವ ಯಾರಿಗೂ ಬೇಡ..
ಚಂದದ ಪ್ರತಿಕ್ರಿಯೆಗೆ
ಶಾರಿಯನ್ನು ಇಷ್ಟಪಟ್ಟಿದ್ದಕ್ಕೆ... ಧನ್ಯವಾದಗಳು...
ಸುಬ್ರಮಣ್ಯ...
ಹ್ಹಾ..ಹ್ಹಾ...!!
ನೀವು ಹೇಳಿದ ಹಾಗೆ "ಶಾರೀ" ಹೇಳೀಲ್ಲವಲ್ಲ.. !
ನೀವು ಹೇಳಿದ ಹಾಗೆ ಹೇಳಿದ್ದರೆ ನಾನೂ ಖುಷಿಯಿಂದ ಒಪ್ಪಿಕೊಳ್ಳುತ್ತಿದ್ದನೇನೋ..!!
ಆ ಮುಗ್ಧ ಮಾತುಗಳು..
ನಿಶ್ಕಲ್ಮಶ ಭಾವದ ಮನಸು ಇಷ್ಟವಾಗಿಬಿಡುತ್ತದೆ... ಅಲ್ಲವಾ?
ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...
ಪಾಲ...
ನಟರಾಜ್ ರಸ್ತೆಯ ಅಂಗಡಿಗಳು ನಾವು ಕಾಲೇಜಿಗೆ ಹೋಗುತ್ತಿರುವ ಸಮಯದಲ್ಲಿ ಸಿರ್ಸಿಯಲ್ಲಿ ಬಹಳ "ವರ್ಲ್ಡ್ ಫ್ರೇಮಸ್" !!!
ಹಾ..ಹ್ಹಾ... !!
ನಾಗುವಿನ ಚಿಕಿತ್ಸೆಯನ್ನು ಇಷ್ಟಪಟ್ಟಿದ್ದಕ್ಕಾಗಿ..
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಸೀತಾರಾಮ್ ಸರ್..
ನಮ್ಮ ಹಿತೈಶಿಯೊಬ್ಬರು ಇದೇ ಸಲಹೆ ಕೊಟ್ಟಿದ್ದರು..
ಆದರೆ ಹಿರಿಯರು ಯಾರೂ ಒಪ್ಪಲಿಲ್ಲ...
ಒಂದುವೇಳೆ ದುಡುಕಿ ನಿರ್ಧಾರ ತೆಗೆದು ಕೊಂಡುಬಿಟ್ಟಿದ್ದರೆ.. !! ??
ಸಧ್ಯ ಹಾಗಾಗಲಿಲ್ಲವಲ್ಲ...
ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು...
ಹಿ೦ದಿನ ಭಾಗ ಓದಿದಾಗಲೇ ಅ೦ದುಕೊ೦ಡೇ, ಪ್ರಕಾಶಣ್ಣ ಹೋಗಿ ಏನಾದರೂ ಮಾಡಿಯೇ ಮಾಡ್ತಾರೆ... ಅ೦ತೂ ನೀವು ಹೋಗಿ ಮಾಡಿದ್ರಿ :)
ತು೦ಬಾ ಚೆನ್ನಾಗಿತ್ತು ಪ್ರಕಾಶಣ್ಣ :)
ಪ್ರಕಾಶವರೆ ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ. ಓದುತ್ತಾ ಹೋದ ಹಾಗೆ ದೃಶ್ಯಗಳೆಲ್ಲ ಕಣ್ಣ ಮುಂದೆ ಕುಣಿಯುತ್ತವೆ. ಒಂಥರಾ ಕೃಷ್ಣ ಗಾರುಡಿ ನೋಡಿದ ಹಾಗೆ ಅನ್ನಿಸುತ್ತೆ.. ನಿಮ್ಮ ಕವಿತ್ವ ಹಾಗೂ ನಿಮ್ಮ ಕವಿ ಮನಸಿಗೆ ದೂರದಿಂದಲೇ ಒಂದು ನಮನ...
ha ha ha... :)
Prakashanna....
"yanta maadidyo......
Hosa suddi.."
sakat aagi eddu...
Post a Comment