Sunday, May 16, 2010

ಬ್ಲಾಗಿಗರ.. ಬ್ಲಾಗ್ ಓದುಗರ... ಕೂಟ...

ಕೆಲವು ತಿಂಗಳ ಹಿಂದೆ ...
ನಮ್ಮ ಬ್ಲಾಗ್ ಮಿತ್ರ ಆಝಾದ್ ( ಜಲನಯನ ಬ್ಲಾಗ್) ತಮ್ಮ ಬ್ಲಾಗಿನಲ್ಲಿ..
 ಒಂದು ಪ್ರಸ್ತಾಪ ಇಟ್ಟಿದ್ದರು..



ಬ್ಲಾಗಿಗರೆಲ್ಲರೂ ಒಂದು ಕಡೆ ಸೇರ ಬೇಕು...

ತುಂಬಾ ಜನರಿಗೆ ಇದರ ಬಗ್ಗೆ ಒಲವಿದೆ...
ಆದರೆ..
ಹೇಗೆ..?
ಎಲ್ಲಿ..?
ಇತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರವಿರಲಿಲ್ಲ..


ನನ್ನ ಬಳಿಯೂ ತುಂಬಾ ಜನ ಇದನ್ನು ಪ್ರಸ್ತಾಪ ಮಾಡಿದ್ದರು..


ದೂರದ ಊರಲ್ಲಿರುವ ಸ್ನೇಹಿತ "ಉದಯ ಇಟಿಗಿ" ( ಬಿಸಿಲ ಹನಿ ಬ್ಲಾಗ್ )
 ಒಂದು ಬ್ಲಾಗಿಗರ ಸಂಜೆ"ಯನ್ನು ಏರ್ಪಡಿಸಿದ್ದರು..


ನಾವೆಲ್ಲ ಹೋಗಿದ್ದೇವು ..


ಅದೊಂದು ಅಪೂರ್ವ ಅನುಭವ..!
ಅಂಥಹದೊಂದು ಸಂಜೆಗಾಗಿ ಅವರಿಗೆ ಕೃತಜ್ಞತೆಗಳು..


ಮತ್ತೆ ಮತ್ತೆ ಈ ಥರಹದ "ಬ್ಲಾಗಿಗರೆಲ್ಲರೂ ಒಂದೆಡೆ ಸೇರಬೇಕು ಎನ್ನುವ" ಮಾತು ಕೇಳಿ ಬರುತ್ತಲೇ ಇದೆ..

ದೂರದ ಅಮೆರಿಕಾದಲ್ಲಿರುವ  ನಮ್ಮ  ಸ್ನೇಹಿತೆ
 "ಜ್ಯೋತಿ ಮಹಾದೇವ್" ಕೂಡ ಇಂಥಹ ಪ್ರಯತ್ನ ಮಾಡಿದ್ದಾರೆ..
ನನಗೆ ಅಲ್ಲಿಗೆ ಹೋಗಲಾಗಲಿಲ್ಲ..


ಈಗ "ಜಲನಯನ" ಮತ್ತೆ ಮರು ಹುಟ್ಟು ಹಾಕಿದ್ದಾರೆ...


ಬ್ಲಾಗಿಗರೆಲ್ಲರೂ ಒಂದೆಡೆ ಯಾಕೆ ಸೇರಬಾರದು ?


ಅವರು ಮೊದಲು ನನ್ನ ಬಳಿ ಈ ಪ್ರಶ್ನೆ ಇಟ್ಟಾಗ ನಾನು ಕೆಲವು ಸಲಹೆ ಇಟ್ಟಿದ್ದೆ...


"ಇದು ನಿಜ ಅರ್ಥದಲ್ಲಿ ಎಲ್ಲ ಬ್ಲಾಗಿಗರ ಕೂಟ ಆಗಬೇಕು...
ಎಲ್ಲರನ್ನೂ ಒಟ್ಟಿಗೆ ಸೇರಿಸ ಬೇಕು...
ಯಾರೊಬ್ಬರಿಗೂ ಬೇಸರವಾಗಬಾರದು..
ಮುಂದೊಂದು ದಿನ ಈ ಕೂಟ ಎಲ್ಲರಿಗೂ ಮಾದರಿಯಾಗಿರಬೇಕು...
ಶ್ರೀ ಜಿ.ಎನ್.ಮೋಹನ್ ಇದರ ಬಗೆಗೆ ಸೂಕ್ತ ವ್ಯಕ್ತಿ..
ಅವರ ಸಲಹೆ ಸೂಚನೆ, ಮಾರ್ಗದರ್ಶನ ಪಡೆದು ಕೊಳ್ಳಬೇಕು.."


"ಜಿ.ಎನ್. ಮೋಹನರನ್ನು ನೀನೆ ಮಾತನಾಡಿಸು"
ಅಂತ ಆಝಾದ್ ನನಗೆ ಹೇಳಿದರು...

ಇದು ಬಹಳ ಕಷ್ಟದ ಕೆಲಸ...
ಪ್ರಯತ್ನಿಸಿದೆ...


ನಾನು  ಅವರನ್ನು ಫೋನಿನಲ್ಲಿ ಸಂಪರ್ಕಿಸಿದೆ...


" ಪ್ರಕಾಶ್..
ತುಂಬಾ ಖುಷಿಯಾಗುತ್ತದೆ.. 
ಸುಶ್ರುತ.., ನಿಧಿ.. ಇನ್ನೂ ಹಲವರೆಲ್ಲರೂ ಸೇರಿ ಒಂದು ಮೀಟಿಂಗ್ ನಾವು ಮಾಡಿದ್ದೇವೆ..
ಕಾರಣಾಂತರಗಳಿಂದ ಮತ್ತೆ ಭೇಟಿಯಾಗಲು ಸಾಧ್ಯವಾಗಿಲ್ಲ..
ನೀವು ಮಾಡುವದಾದರೆ ನಮ್ಮ ಬೆಂಬಲವಿದೆ" ಎಂದರು..


"ಸರ್ ಇದು ನಿಮ್ಮ ಮುಂದಾಳತ್ವದಲ್ಲಿ ನಡೇದರೆ ಉತ್ತಮ"
ಎಂದು ನಾನು ಹೇಳಿದೆ..


ಮತ್ತೆ ಇದರ ಬಗೆಗೆ ಭೇಟಿಯಾಗಬೇಕೇಂದು ಮಾತನಾಡಿಕೊಂಡೆವು...
ಆದರೆ  ಅದಕ್ಕೆ.. ಇನ್ನೂ ಸಮಯ ಕೂಡಿ ಬಂದಿಲ್ಲ..


ಅದಕ್ಕೆ ಕಾರಣ ನಾನು ಬ್ಯೂಸಿಯಾಗಿರುವದು...


ಪ್ರಿಯ..
 ಬ್ಲಾಗಿಗರೇ..
ಬ್ಲಾಗ್ ಓದುಗರೇ...


ಈಗ ನೀವು ಹೇಳಿ..
ಇಂಥಹದೊಂದು ಕೂಟ ಆಗ ಬೇಕಲ್ಲವೆ ?


ಆ ಕೂಟದಲ್ಲಿ ಏನೇನು ಕಾರ್ಯಕ್ರಮ ಆಗ ಬೇಕು ?
ಹೇಗೆ ಆಗಬೇಕು..?
ಎಲ್ಲಿ ಆಗಬೇಕು ?
ಯಾವಾಗ ಆಗಬೇಕು...?


ದಯವಿಟ್ಟು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ...


ಇದು ನಿಜ ಅರ್ಥದಲ್ಲಿ....
ಸಮಸ್ತ ಬ್ಲಾಗಿಗರ ಒಕ್ಕೂಟ ಆಗಬೇಕು...
ನಮ್ಮೆಲ್ಲರ..
ಸಂಭ್ರಮದ ,, ಸಂತೋಷದ  ಕ್ಷಣಗಳಾಗಬೇಕು...
ಅಲ್ಲವೇ...?

ಹಾಗಾಗುವಂತೆ ಮಾಡೋಣ...

(ಮೋಹನಸರ್, ಆಜ್ಹಾದ್, ಶಿವು,  ಸುಶ್ರುತ ದೊಡ್ಡೇರಿ.. ಇನ್ನೂ ಹಲವರ ಒಂದು  ಕಮಿಟಿ ಮಾಡೋಣ.. ಕಾರ್ಯಕ್ರಮದ ಕುರಿತು ಮಾತಾಡಿ ಒಂದು ನಿರ್ಣಯ ತೆಗೆದು ಕೊಳ್ಳೋಣ....
ಮೋಹನ್ ಸರ್ ಹಾಗೂ ಆಜ್ಹಾದ್  ಬೆಂಬಲ ಆನೆ ಬಲ ತಂದು ಕೊಟ್ಟಿದೆ..)

ಜೈ... ಹೋ... !!
 

24 comments:

ಸುಬ್ರಮಣ್ಯ said...

ಇಂಟರ್ನೆಟ್ನಲ್ಲಿ ಒಟ್ಟಾಗುವುದು ಸುಲಭ. ಬೇರೆಡೆ ಕಷ್ಟ.

ನಾಗರಾಜ್ .ಕೆ (NRK) said...

ತುಂಬಾ ಒಳ್ಳೆಯ ವಿಚಾರ
ಆದಷ್ಟು ಬೇಗ ನೆರವೇರಲಿ.
ಬ್ಲಾಗಿಗರ ಹಬ್ಬವಾಗಲಿ.

Dr.D.T.Krishna Murthy. said...

ಬ್ಲಾಗಿಗರ ಹಬ್ಬ ಬೆಂಗಳೂರಿನಲ್ಲಾದರೆ ಒಳ್ಳೆಯದು.ಅಬ್ಬರವಿರದೆ ,ಆಡಂಬರವಿರದೆ ಸುಮ್ಮನೆ ಸ್ನೇಹಿತರೆಲ್ಲಾ ಒಂದೆಡೆ ಸೇರಿ
ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿ.ಕಾಣದೆ ಇಷ್ಟೊಂದು ಆತ್ಮೀಯತೆ ಬೆಳಸಿಕೊಂಡ ಎಲ್ಲರೂ ಒಂದೆಡೆ ಸೇರುವುದು ಸಂತಸದ ವಿಷಯ.

ಜಿ ಎನ್ ಮೋಹನ್ said...

dear prakash

i am ready
we will meet and chalk out
i was busy with shifting our office to a better and spacious one
regards
g n mohan

PARAANJAPE K.N. said...

ಬ್ಲಾಗಿಗರ-ಬ್ಲಾಗ್ ಓದುಗರ ಒ೦ದು ಕೂಟ ಏರ್ಪಡಿಸುವುದು ಒಳ್ಳೆಯ ಯತ್ನ. ನೀವು ಹೇಳಿದ೦ತೆ ಹಿ೦ದೆ ಬಿಸಿಲ ಹನಿ ಉದಯರು ಏರ್ಪಡಿಸಿದ್ದ ಕೂಟ ದಲ್ಲಿ ನಾನು ಕೂಡ ಭಾಗಿಯಾಗಿದ್ದೆ. ಅದೊ೦ದು ಅಪೂರ್ವ ಅನುಭವ.
ಆದರೆ ಬೇರೆ ಬೇರೆ ಊರುಗಳಲ್ಲಿ ಇರುವ ವಿಭಿನ್ನ ವೃತ್ತಿ -ಪ್ರವೃತ್ತಿ ಹೊ೦ದಿರುವ ಬ್ಲಾಗಿಗರನ್ನು ಒಟ್ಟುಗೂಡಿಸುವುದು ಸ್ವಲ್ಪ ಕಷ್ಟದ ಕೆಲಸವೇ? ನಿಮ್ಮ ಮತ್ತು ಮೋಹನ್ ರವರ ನಾಯಕತ್ವ ದಲ್ಲಿ ಅದೊ೦ದು ಅರ್ಥಪೂರ್ಣ ಕೂಟವಾಗುವುದೆ೦ಬ ಭರವಸೆ ನನಗಿದೆ.ನಾನು ನಿಮ್ಮ ಜೊತೆ ಇದ್ದೇನೆ.

Dileep Hegde said...

ತುಂಬಾ ಉತ್ತಮ ವಿಚಾರ ಪ್ರಕಾಶಣ್ಣ.. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ..

ಸವಿಗನಸು said...

ಪ್ರಕಾಶಣ್ಣ,
ತುಂಬಾ ಒಳ್ಳೆಯ ನಿರ್ಧಾರ...ನಾವು ಸಹ ಅಜಾದ್ ಸರ್ ಹತ್ತಿರ ಹೇಳುತ್ತ ಇದ್ದೇವೆ....
ಹೆಚ್ಚು ಆಡಂಬರವಿಲ್ಲದಿದ್ದರೂ ಒಂದು ಪುಸ್ತಕ ಬಿಡುಗಡೆ ಮಾಡಿದರೆ ಸೂಕ್ತವೆಂದು ನನ್ನ ನಿರ್ಧಾರ....
ಎಲ್ಲಾ ಬ್ಲಾಗಿಗರಿಗೆ ಒಂದೊಂದು ಪುಟದಂತೆ ಮಾಡಿದರೆ ಚೆಂದ ಅನ್ನಿಸುತ್ತೆ....
ಇದು ನನ್ನ ಸಲಹೆ ಅಷ್ಟೇ....
ಎಲ್ಲರೂ ಅಭಿಪ್ರಾಯ ತಿಳಿಸಿದರೆ ಚೆಂದ....
ಮೋಹನ್ ಸರ್ ಮುಂದಾಳತ್ವ ವಹಿಸಿದರೆ ಯಶಸ್ಸು ಖಂಡಿತ....
ಬ್ಲಾಗಿಗರ ಹಬ್ಬವಾಗಲಿ.

Raghu said...

ಜೈ ಹೂ..!
ನಿಮ್ಮವ,
ರಾಘು.

ಜಲನಯನ said...

ಪ್ರಕಾಶ ನೀವು ನಿಜವಾಗ್ಲೂ ಇಟ್ಟಿಗೆ, ಮರಳು ಸಿಮೆಂಟ್ ಎಲ್ಲದರ ಪರಿಪಕ್ವ ಹೊಂದಾಣಿಕೆ ಮಾಡಿಯೇ ಅಖಾಡಾಕ್ಕೆ ಇಳಿಯೋದು ಎನ್ನುವುದು ಇದರಿಂದಲೇ ಗೊತ್ತಾಗುತ್ತೆ...ನಿಮ್ಮ ಬ್ಲಾಗಲ್ಲಿ ಈ ವಿಷಯ ಬರುತ್ತೆ ಬರುತ್ತೆ ಅಂದ್ಕೊಂಡೆ..ಅದಕ್ಕೆ ಈಗ ಮುಹೂರ್ತ ಕೂಡಿ ಬಂತು ಅನ್ಸುತ್ತೆ.
ಮೋಹನ್ ಸರ್ ಅವರನ್ನು ಭೇಟಿ ಮಾಡಿ ಅವರ ಒಪ್ಪಿಗೆ ಪಡೆಯೋ ಪ್ರಯತ್ನ ನಡೆದವು ..ಈ ವರೆಗೂ ಒಂದು ನಿಲುವಿಗೆ ಬರಲಾಗಿಲ್ಲ ....ಈ ಎಲ್ಲ ಹಿನ್ನೆಲೆ ಮತ್ತು ನನ್ನಂತೆ ವಿದೇಶದಲ್ಲಿರುವ ಇತರ ಬ್ಲಾಗಿಗಳು ಸ್ವದೇಶ ಭೇಟಿಗೆ ಬರುವ ಮತ್ತು ಅಲ್ಲಿ ನಾಡಿಗರಿಗೆ ಆಗಸ್ಟ್ ಸೂಕ್ತ ಸಮಯವೆಂದು ತಿಳಿದು ನಮ್ಮ ಕೆಲ ಸ್ನೇಹಿತರ ಸಂತೋಷ ಕೂಟವನ್ನಾದರೂ ಮಾಡೋಣ ಎಂದು ಆಗಸ್ಟ್ 22 ಒಳ್ಳೆಯದೆಂದು ನಾನು ಶಿವು, ದಿನಕರ್, ತೇಜಸ್ವಿನಿ, ಈಶ್, ಶಿವಶಂಕರ್ ಎಳವತ್ತಿ, ಡಾ. ಗುರುಮೂರ್ತಿ, ಊದಯ್ ಇಟ್ಟಿಗಿ ಈ ಎಲ್ಲ ಮಿತ್ರರಿಗೆ ಮತ್ತು ನಿಮಗೂ ಸೂಚಿಸಿದ್ದು.

ಇನ್ನು ಇದನ್ನು ನಮ್ಮೆಲ್ಲ ಬ್ಲಾಗಿಗರ ಸಮ್ಮೇಳನದ ರೂಪದಲ್ಲಿ ಮಾಡಿದರೆ, ಇದರಲ್ಲಿ ನಮ್ಮ ಹಿರಿ ಬ್ಲಾಗಿಗಳು ಮತ್ತು ಅನುಭವಿಗಳೂ ಆದ ಜಿ.ಎನ್.ಮೋಹನ್, ಸುಶೃತ, ನಿಧಿ, ಪ್ರಕಾಶ್, ಶಿವು ಹೀಗೆ ಎಲ್ಲ ಸೇರುವುದಾದರೆ ಇದಕ್ಕಿಂತಾ ಉತ್ತಮ ಪ್ರಯತ್ನ ಮತ್ತೊಂದಾಗದು. ಅಥವಾ ಪೂರ್ವಭಾವಿಯಾಗಿ ನಾವೆಲ್ಲಾ (ಆದಷ್ಟೂ ಬ್ಲಾಗಿಗರು ಮತ್ತು ಬ್ಲಾಗ್ ಮತ್ತು ಇ-ಮೀಡಿಯಾ ಜಗತ್ತಿನ ಹಿರಿಯರು) ಆಗಸ್ಟ್ 22 ಕ್ಕೆ ಸೇರಿ ಮುಂದಿನ ಚಟುವಟಿಕೆಗಳ ರೂಪುರೇಷೆಯನ್ನು ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬರಬಹುದು.
ಇದು ನನ್ನ ಇಂಗಿತ ಮತ್ತು ಹಲವರ ಆಶಯ ಸಹಾ...(ನನ್ನ ಬ್ಲಾಗಿಗೆ ಉತ್ತರಿಸಿದ ಹಲವರು ಇದನ್ನು ವ್ಯಕ್ತಪಡಿಸಿದ್ದಾರೆ ಕೂಡಾ)

ಬಿಸಿಲ ಹನಿ said...

ನನಗೇನೋ ಬರಿ ಒಂದೆಡೆ ಸೇರಿ ಪರಸ್ಪರ ಪರಿಚಯ, ಊಟ, ತಿಂಡಿ ಮಾಡಿ ತೆರಳುವದಕ್ಕಿಂತ ಬ್ಲಾಗ್ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಒಂದೆರಡು ಗೋಷ್ಟಿಗಳಿದ್ದರೆ ತುಂಬಾ ಉಪಯುಕ್ತವೆನಿಸುತ್ತದೆ. ಸಧ್ಯಕ್ಕೆ ಬೆಂಗಳೂರಿನಲ್ಲಿದಾರೆ ಒಳಿತು. ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ನಡೆದರೆ ಒಳಿತು. ಏಕೆಂದರೆ ನನ್ನಂತವರಿಗೆ ಅಂದರೆ ವಿದೇಶದಲ್ಲಿ ಕೆಲಸ ಮಾಡುವವರಿಗೆ ಭಾರತಕ್ಕೆ ಬರಲು ಅದು ಸೂಕ್ತ ಸಮಯವಾಗಿರುತ್ತದೆ. ಇನ್ನುಳಿದಂತೆ ಬೇರೇನೆ ಸಹಾಯ ಬೇಕಾದರು ನಿಮ್ಮೊಂದಿಗಿರುತ್ತೇನೆ.ven

ಮನದಾಳದಿಂದ............ said...

ಪ್ರಕಾಶಣ್ಣ,
ಒಳ್ಳೆಯ ವಿಚಾರ!
ಯಾವುದೇ ಆಡಂಬರಗಳಿಲ್ಲದೆ ಇಂತಹ ಒಂದು ಕಾರ್ಯಕ್ರಮ ನಡೆಯುವುದು ನಮಗೆಲ್ಲರಿಗೂ ಸಂತೋಷದ ಸಂಗತಿ.
ಸಾದಾರಣವಾಗಿ ಬೆಂಗಳೂರಿನಲ್ಲೇ ನಡೆದರೆ ಒಳ್ಳೆಯದು. "ಸವಿಗನಸು" ಹೇಳುವಂತೆ ಬ್ಲಾಗಿಗರ ಒಕ್ಕೂಟ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಾಗಲಿ ಅನ್ನುವುದು ನನ್ನ ಅಭಿಪ್ರಾಯ. ಆದ್ರೆ ಹೆಚ್ಚಿನ ಆಡಂಬರಗಳು ಬೇಡ.
ಮೊದಲು ಒಂದು ಕಮಿಟಿ ರಚನೆಯಾಗಲಿ. ಪ್ರತಿಯೊಬ್ಬ ಬ್ಲಾಗ್ ಗೆಳೆಯರೂ ಕೈ ಜೋಡಿಸಿ ಆರ್ಥಿಕ ಸಹಕಾರವನ್ನು ತೆಗೆದುಕೊಳ್ಳೋಣ. ಒಂದು ಬಡ್ಜೆಟ್ ಮಾಡಿಕೊಳ್ಳೋಣ. ಕಾರ್ಯಕ್ರಮದ ರೂಪುರೆಶುಗಳನ್ನು ಮೊದಲೇ ಮಾಡಿಕೊಂಡು ಪ್ರತಿಯೊಬ್ಬರ ಸಲಹೆ ತೆಗೆದುಕೊಳ್ಳುವುದು ಉತ್ತಮ.
ಈ ಮೂಲಕವಾಗಿ ಬ್ಲಾಗ್ ಗೆಳೆಯರೆಲ್ಲರ ನೇರ ಭೇಟಿಯಾಗಲಿ.

ಗೌತಮ್ ಹೆಗಡೆ said...

ಒಳ್ಳೆಯ ವಿಚಾರ.ಖುಷಿಯ ವಿಚಾರ ಇದು.ಈ ಕಾರ್ಯಕ್ರಮ ಎಲ್ಲರನ್ನೂ ಒಳಗೊಳ್ಳಬೇಕು.ಒಂದು ಹಬ್ಬದಂತೆ ,ಜಾತ್ರೆಯಂತೆ ಇದು ಸಾಕಾರಗೊಳ್ಳಬೇಕು.:):)

ಮತ್ತೆ ನನ್ನದೊಂದು ಸಲಹೆ. ಈಗ ನೋಡಿ ಪ್ರತಿಯೊಬ್ಬ ಬ್ಲಾಗರ್ ಗೆ ಅವನದೇ ಆದ ಒಂದು ಆಪ್ತ ಬಳಗ ಅಂತ ಒಂದಿರುತ್ತೆ.ಅಲ್ಲಿ ಬೇರೆ ಬ್ಲಾಗ್ಗರ್ಸ್ ಇರಬಹುದು ಜೊತೆಗೆ ಬ್ಲಾಗ್ ಓದುಗರು ಕೂಡ.
ಪ್ರತಿಯೊಬ್ಬ ಬ್ಲಾಗರ್ ತನ್ನ ಆ ಆಪ್ತ ಬಳಗವನ್ನ ಕಾಂಟಾಕ್ಟ್ ಮಾಡಿ ಅವರೆಲ್ಲ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕು. ಹೀಗೆ ಎಲ್ಲ ಬ್ಲಾಗ್ಗೆರ್ಸ್ ತಮ್ಮ ಪಾಲಿನ ಈ ಜವಾಬ್ದಾರಿಯನ್ನ ಮಾಡಿಬಿಟ್ಟರೆ ಕಾರ್ಯಕ್ರಮ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ.
ಸುಮ್ಮನೆ ಬ್ಲಾಗಿನಲ್ಲಿ ಇದರ ಬಗ್ಗೆ ಬರೆದು ಬಿಟ್ಟರೆ ತೀರಾ ಪರಿಣಾಮಕಾರಿಯೂ ಅಲ್ಲ. ಪ್ರಯೋಜನವೂ ಇಲ್ಲ..ನಾನು ಈ ಮೇಲೆ ಹೇಳಿದ ಹಾಗೆ ಎಲ್ಲ ಬ್ಲಾಗ್ಗರ್ಸ್ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು.ತಮ್ಮ ಪರಿಚಯದವರನ್ನ ವೈಯಕ್ತಿಕವಾಗಿ ತಲುಪಿ ಅವರನ್ನ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮಾಡಬೇಕು.

SSK said...

ಪ್ರಕಾಶ್ ಅವರೇ,
ಆ ದಿನಕ್ಕಾಗಿ, ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ !! ಆಜಾದ್ ಅವರ ಬ್ಲಾಗಿನಲ್ಲಿ ಈ ವಿಷಯದ ಬಗ್ಗೆ ಓದಿದ್ದೆ ಆದರೆ ಪ್ರತ್ಯುತ್ತರ ಬರೆಯಲಾಗಿರಲಿಲ್ಲ.
ಈಗ ನಿಮ್ಮೆಲ್ಲರ ಪ್ರಯತ್ನದಿಂದ ಬ್ಲಾಗ್ ಲೋಕದ ಬಂಧುಗಳೆಲ್ಲಾ ಒಟ್ಟಾಗಿ ಸೇರುವ ಅವಕಾಶ ಒದಗಿ ಬಂದರೆ ಅದಕ್ಕಿಂತಾ ಸಂತಸದ ಸುದ್ದಿ ಬೇರೆ ಬೇಕೇ?

Ittigecement said...

ಸುಬ್ರಮಣ್ಯ...

ಎಲ್ಲ ಬ್ಲಾಗಿಗರಿಗೂ ಒಂದೆಡೆ ಸೇರ ಬೇಕೆಂಬ ಆಸೆ ಇದೆ..

ನಮಗೆಲ್ಲ ಉತ್ಸಾಹ ತುಂಬುತ್ತಿರುವ ಆಜಾದ್ ಬಗ್ಗೆ ಖುಷಿಯಾಗುತ್ತದೆ..
ಜೊತೆಗೆ ಗೌತಮ್, ದಿನಕರ.., ಶಿವಪ್ರಕಾಶ್, ಮಹೆಶ್, ಶಿವು, ಉದಯ್..
ಎಲ್ಲರ ಹೆಸರು ಹೇಳಲಾಗುತ್ತಿಲ್ಲ..
ಎಲ್ಲ ಉತ್ಸಾಹಿ ಹುಡುಗರ ಸೈನ್ಯವೇ ಬೆಂಬಲಕ್ಕೆ ನಿಂತಿದೆ..
ಸಂಗಡ ಮೋಹನ್, ಸುಶ್ರುತ.. ವಿಕಾಸ, ಸಂದೀಪ್.. ಅನುಭವಿಗಳ ಮುಂದಾಳತ್ವ..

ಎಲ್ಲರೂ ಸೇರಿ..
ಒಂದು ಹಬ್ಬದಂತೆ..
ಸಡಗರ..
ಸಂಭ್ರಮದಿಂದ.. ಕೂಟ ಮಾಡೋಣ..

ಏನಂತೀರಿ ?

ಈಗ ಇಲ್ಲಿ ಬರುತ್ತಿರುವ..
ರಚನಾತ್ಮಕ..
ಧನಾತ್ಮಕ..
ಪ್ರತಿಕ್ರಿಯೆಗಳೇ ಸಾಕ್ಷಿ..

ಇಲ್ಲಿ ಬರುವ ಎಲ್ಲರ ಪ್ರತಿಕ್ರಿಯೆಗಲನ್ನು ಗಮನದಲ್ಲಿಟ್ಟುಕೊಂಡು.. ಒಂದು ನಿರ್ಣಯ ತೆಗೆದು ಕೊಳ್ಳ ಬೇಕು..

ಇಲ್ಲಿ ಒಳ್ಳೊಳ್ಳೆ ಅಭಿಪ್ರಾಯಗಳು ಬರುತ್ತಿವೆ..

ಈ ವೇದಿಕೆಯೇ ಒಂದು ಸಭೆಯಂತಿರಲಿ...

ಎಲ್ಲರೂ ನಿಮ್ಮ ಬ್ಲಾಗಿನಲ್ಲಿ ಈ ವಿಷಯ ದಯವಿಟ್ಟು ಪ್ರಸ್ತಾಪಿಸಿ..

ಬ್ಲಾಗ್ ಓದುಗರೂ ಬಹಳ ಸಂಖ್ಯೆಯಲ್ಲಿದ್ದಾರೆ..

ನಾವು ಇದರ ಬಗೆಗೂ ಯೋಚಿಸ ಬೇಕು...

ಧನ್ಯವಾದಗಳು...

Shweta said...

prakashanna ,

nanna kadeyindalu support eddu ...

Subrahmanya said...

jai hoo. ಮುಂದಿನ ರೂಪುರೇಶೆಗಳು ಸಿದ್ದವಾಗಲಿ. ಎಲ್ಲಾ ಸೇರಿ ಯಶಸ್ವಿಗೊಳಿಸೋಣ

AntharangadaMaathugalu said...

ಪ್ರಕಾಶ್ ಅವರೇ...
ಶಿವು ಸಾರ್ ಅವರ ಬ್ಲಾಗಿನಲ್ಲೂ ಈಗ ಇದೇ ವಿಷಯವನ್ನೇ ನೋಡಿ ಬಂದೆ.... ತುಂಬಾ ಒಳ್ಳೆಯ ಆಲೋಚನೆ.... ವಿವರಗಳನ್ನು ಆದಷ್ಟು ಬೇಗ ತಿಳಿಸಿ...

ದಿನಕರ ಮೊಗೇರ said...

ಪ್ರಕಾಶಣ್ಣ,
ಅಂತೂ ಇಂತೂ ಕೊನೆಗೊಂದು, ರೂಪು ರೇಷೆ ಆಗುವ ಲಕ್ಷಣ ಕಾಣ್ತಾ ಇದೆ............. ತುಂಬಾ ಖುಷಿ ಆಗ್ತಾ ಇದೆ............... ಎಲ್ಲರೂ ಸೇರೋಣ......... ಒಂದಿಷ್ಟು ಒಳ್ಳೆಯ ಸಮಯ ಕಳೆಯೋಣ............ನನ್ನ ಫುಲ್ ಸಪೋರ್ಟ್ ಇದೆ.........

ವನಿತಾ / Vanitha said...

Illindaane Jai ho...:)

umesh desai said...

ಹೆಗಡೇಜಿ ಒಳ್ಳೆಕೆಲಸ ಹಾಗೂ ಆಲೋಚನೆ ಎಲ್ಲರಿಗು ಅನುಕೂಲ ಆಗೋ ಹಾಗೆ ದಿನಾಂಕ ನಿಗದಿ ಮಾಡಬೇಕು.
ಶುಭಾಶಯಗಳು..

Veena DhanuGowda said...

jai hooo :)
olleya kelsa....

All the best :)

ಮನಸಿನ ಮಾತುಗಳು said...
This comment has been removed by the author.
ಸೀತಾರಾಮ. ಕೆ. / SITARAM.K said...

we are there for this good cause. Let us share & enjoy it. i am excited to meet the all.

balasubramanya said...

ನಮಸ್ಕಾರ ಪ್ರಕಾಶ್ , ಅಂತು ಇಂತೂ ಒಂದು ಒಳ್ಳೆಯ ಕೆಲಸಕ್ಕೆ ಚಾಲನೆ ದೊರೆತಿದೆ.ಹಲವಾರು ವಿಷಯಗಳ ಮಂಥನವಾಗಿ, ಚರ್ಚೆಗಳು ಸಾಗಿ, ಎಲ್ಲ ಬ್ಲಾಗಿಗರೂ ಒಂದೆಡೆ ಸೇರಿದರೆ ಅದರ ಖದರ್ ಬೇರೇನೆ!!!ಸ್ವಾಮೀ ಎಲ್ಲಾದರೂ ಮಾಡಿ ಮುಂದೆ ಮಾಡುವ ಕಾರ್ಯ ಎಲ್ಲರೂ ಒಟ್ಟಾಗಿ ಮಾಡಿಬಿಡೋಣ .ನಾನು ಎಷ್ಟೋ ಕೂಟಗಳನ್ನು ನೋಡಿದ್ದೇನೆ ಉತ್ತಮ ಆರಂಭ ಕಂಡು ಬಹಳ ಬೇಗ ಅಸ್ತಂಗತವಾಗಿವೆ.ಆರಂಭದ ಉತ್ಸಾಹ ನಿರಂತರ ಹರಿಯುವಂತೆ ಮಾಡಿದಾಗ ನಿಮ್ಮ ಶ್ರಮ ಸಾರ್ತಕವಾದೀತು.ನಿಮ್ಮ ಕಾರ್ಯಕ್ಕೆ ನನ್ನ ಜೈ ಹೋ