part 3...
ಮೀಸೆ ಮಂಜಣ್ಣನ ಮನೆಯ ಜಗುಲಿಯಲ್ಲಿ ವಿಚಾರಣೆ ಶುರುವಾಯಿತು..
ಚಿಕ್ಕಪ್ಪ.. ಟಮ್ಮಟಿ ಅಪ್ಪ..
ಎಲ್ಲರಿಗೂ... ನಮ್ಮ ಮೇಲೆ ಅನುಮಾನ .. !
"ಈಗ ಸಣ್ಣ ಗಾಯವಾಗಿದೆ ಸರಿ...
ಕೈ, ಕಾಲು ಮುರಿದ್ದಿದ್ದರೆ ಏನು ಗತಿ ?
ತಿನ್ನಲಿಕ್ಕೆ ತೋತಾ ಪುರಿ ಮಾವಿನ ಕಾಯಿ ಬಿಟ್ಟು..
ಈಶಾಡಿಯ ಕಾಯಿ ಯಾಕೆ ತಿನ್ನುವದು ?"
ಅಲ್ಲಿಯವರೆಗೆ ಸುಮ್ಮನಿದ್ದ ಟಮ್ಮಟಿ...
"ಇಲ್ಲ .... ಮಂಜಣ್ಣ..
ಇವರು ಮರ ಹತ್ತಿ ಏನನ್ನೋ ನೋಡ್ತಾ ಇದ್ರು.. !
ನಾನು ಎಷ್ಟು ಕೇಳಿದ್ರೂ.. ನನಗೆ ಹೆಳ್ಳಿಲ್ಲ.. !
ಇಲ್ಲಿ ನಂದೇನೂ ತಪ್ಪಿಲ್ಲ... ! "
ನಾಗೂಗೆ ಕೋಪ ಬಂತು...
"ಮಂಜಣ್ಣ..
ಇವ ಸುಳ್ಳು ಹೇಳ್ತಾನೆ..
ನಾವು ಇವನಿಗೆ ಮಾವಿನ ಕಾಯಿ ಕೊಡ್ಲಿಲ್ಲ ಅಂತ...!
ಇವನೇ.. ಬಂದು ನಮ್ಮನ್ನು ಬೀಳ್ಸಿದ್ದು... !"
ಅಷ್ಟರಲ್ಲಿ ನನ್ನ ಚಿಕ್ಕಪ್ಪನ ಕಣ್ಣು ಕೆಂಪಾಯಿತು...
"ಮಂಜಣ್ಣ...
ಇವರು ಸುಮ್ಮನೆ ಬಾಯಿ ಬಿಡುವದಿಲ್ಲ...
ಇವರ ಅಂಡಿನ ಮೇಲೆ ನಾಲ್ಕು ಪೆಟ್ಟು ಕೊಡಬೇಕು...
ಆಗ ಬಾಯಿ ಬಿಡ್ತಾರೆ.... ! "
ನನ್ನ ಚಿಕ್ಕಪ್ಪ ಶಿಕ್ಷೆ ಕೊಡುವದರಲ್ಲಿ ನಿಸ್ಸೀಮ..!
ನಾನು ಎಷ್ಟೇ... ಹಾರಾಡುತ್ತಿದ್ದರೂ..
ತಾನು...ತಾಳ್ಮೆ ಕಳೆದುಕೊಳ್ಳದೇ..
ನಿಧಾನವಾಗಿ ಚಡ್ಡಿ ಬಿಚ್ಚಿಸಿ..
ಅಂಡಿನ ಮೇಲೆ ಬಲವಾಗಿ ಒಂದರ ಮೇಲೆ.. ಒಂದು..
ಮತ್ತೊಂದು...
ಹೊಡೆದ ಜಾಗಲ್ಲಿಯೇ.. ಹೊಡೆಯುತ್ತಿದ್ದ...!
ಅವನ ಉರಿ ಕೈ.. ಹೊಡೆತ ....!
ಅಬ್ಭಾ.. !
ತುಂಬಾ.. ಜೋರಾಗಿರುತ್ತಿತ್ತು !
ನಮ್ಮಿಂದ ಕೈಯನ್ನು ಹೊಡೆದ ಜಾಗದಲ್ಲಿ ತಿಕ್ಕಿ ಕೊಳ್ಳಲು ಕೊಡುತ್ತಿರಲಿಲ್ಲ...!!
ತಿಕ್ಕಿ ಕೊಂಡರೆ ಉರಿ ಕಡಿಮೆ ಆಗುತ್ತಿತ್ತು...!!
ನಮ್ಮ ಚಿಕ್ಕಪ್ಪನ ಬಳಿ ಹೊಡೆತ ತಿನ್ನುವದಾ ??
ಕುಷ್ಟ ಚಿಕ್ಕಪ್ಪನ ಹೊಡೆತಕ್ಕೆ ಹೆದರಿದ...
ಒಮ್ಮೆ ನಮ್ಮ ಚಿಕ್ಕಪ್ಪನ ಬಳಿ ಕುಷ್ಟ ಚೆನ್ನಾಗಿ ಪೆಟ್ಟು ತಿಂದಿದ್ದ...
ಅವನ ಚಡ್ಡಿ ಒದ್ದೆಯಾಗಿತ್ತು !
" ಪಕ್ಕೇಶ್.. ಹೆಗ್ಡೇರೆ..
ಎಲ್ಲ ಹೇಳಿ ಬಿಡೋಣ್ರಾ..
ಅವರ ಅವರ.. ಪ್ರೀತಿ..
ಅವರ ಅವರ ಲೆಟರ್ರು..
ನಾವ್ಯಾಕೆ ಪೆಟ್ಟು ತಿನ್ನೋದು ?"
ಅಲ್ಲಿಯೇ ನಾಗು ಪಿಸು ಗುಡುತ್ತ ಗದರಿದ....
"ಸುಮ್ನಿರು ಕುಷ್ಟಾ..!
ನೀ.. ಮಾತಾಡ ಬೇಡ.."
ಮಂಜಣ್ಣ ಮೀಸೆಯ ಮೇಲೆ ಕೈ ಹಾಕಿ ತಿರುವತ್ತ ನಮ್ಮತ್ತ ನೋಡಿದ..
" ಏನೋ ಕುಷ್ಟಾ...?
ನೀನು ನಿಜ ಹೇಳಿದ್ರೆ.. ನಿನ್ನ ಬಿಟ್ಟು ಬಿಡ್ತೇವೆ ನೋಡು..."
"ಮಂಜಣ್ಣ ಹೆಗ್ಡೇರೆ...
ನಾವು ಏನೂ ತಪ್ಪು ಮಾಡ್ಲಿಲ್ರ...
ಎಲ್ಲದೂ.. ಟಮ್ಮಟಿ ಮಾಡಿದ್ದು...!
ಅವ್ರು ಬರದೇ ಇದ್ರೆ...
ನಾವು ಹಾಡು ಕೇಳ್ಕೊಂಡು ಬರ್ತಾ ಇದ್ರು..!.."
"ಏನು... ??..
ಈಶಾಡಿ ಮರದ ಮೇಲೆ ಹಾಡಾ.. ?
ಅಲ್ಲಿ ಎಂತಾ ಹಾಡು..?.."
"ಮಂಜಣ್ಣ ಹೆಗ್ಡೇರೆ..
ಅದು ದೊಡ್ಡ ಕಥೇರ್ರಾ...!!.."
"ಏನು ಕಥೆ.. ?.. "
ಮಂಜಣ್ಣನ ಹುಬ್ಬು ಮೇಲಕ್ಕೆ ಏರಿತು....!
ಅಷ್ಟರಲ್ಲಿ ಎಂಕಟು ಬಂದ...!
ಅಯ್ಯೋ ದೇವರೆ..!
ಈ ಯಂಕಟು ಇಲ್ಲಿ ಯಾಕೆ ಬಂದ ?
ಕುಷ್ಟ ಎಲ್ಲವನ್ನೂ ಬಾಯಿ ಬಿಡ್ತಾ ಇದ್ದಾನೆ..!!
ಯಾಕೊ ನಮ್ಮ ಗ್ರಹಚಾರವೇ.. ಸರಿ ಇಲ್ಲ.. !
"ಮಂಜಣ್ಣ..
ಇಲ್ಲಿ ಏನಾಗ್ತಿದೆ ?"
"ಏನಿಲ್ಲ ಯಂಕಟು...
ಇವರು ನಾಗು ಮನೆ ಈಶಾಡಿ ಮರ ಹತ್ತಿ ಬಿದ್ದಿದ್ದಾರೆ..
ಇವರು ಹೇಳುವದು ಮಾವಿನಕಾಯಿ ತಿನ್ನಲಿಕ್ಕೆ ಅಂತ..
ಟಮ್ಮಟಿ ಹೇಳುವದು..
ಇವರು ಏನೋ .. ನೋಡ್ತಾ ಇದ್ರು ಅಂತ.. !
ಕುಷ್ಟ ಹೇಳ್ತಾ ಇದ್ದಾನೆ..
ಏನೋ ಹಾಡು ಕೇಳ್ತಿದ್ರಂತೆ..
ಇಲ್ಲಿ ಏನೋ ಎಡವಟ್ಟು ಆಗಿದೆ... !
ಇದು ಖಂಡಿತ.. !
ಒಂದೆರಡು ಪೆಟ್ಟು ಕೊಟ್ಟರೆ ಬಾಯಿ ಬಿಡ್ತಾರೆ..."
ಯಂಕಟು.. ದುರು ಗುಡುತ್ತ ನಮ್ಮನ್ನು ನೋಡಿದ....!
ನಮಗೆ ತಿರುಗಿ ನೋಡುವ ಧೈರ್ಯ ಇರಲ್ಲಿಲ್ಲ..
"ಮಂಜಣ್ಣಾ..
ಇವರು ದಿನಾ ಆ ಮಾವಿನ ಮರ ಹತ್ತಿ ..
ಮಾವಿನ ಕಾಯಿ ತಿನ್ನೋದೆ ಕೆಲಸ..
ನಾನು ದಿನಾ ನೋಡ್ತಿನಿ..
ತಿನ್ನೋದು ಅಲ್ದೆ...
"ಶಂಕರ್ ಗುರು" ಸಿನೇಮಾದ ಹಾಡು ಹೇಳ್ತಾರೆ....!
ನಾನು ಕಣ್ಣಾರೆ ನೋಡಿದ್ದೇನೆ..
ಇವರಿಗೊಂದು.. ಬೇರೆ ಕೆಲಸ ಇಲ್ಲ...!
ನಿಮಗೂ ಇಲ್ಲವಾ ಮಂಜಣ್ಣಾ..?
ಇವರು ಹೇಳ್ತಿರೋದು ಸತ್ಯ... !
ಇವರು ಆ ಕಹಿ ಮಾವಿನ ಕಾಯಿನೇ.... ದಿನಾ ತಿಂತಾರ್ರೆ..!"
ಯಂಕಟು ನಮ್ಮ ಪಾಲಿನ ದೇವರ ಹಾಗೆ ಕಾಣಿಸಿದ..
" ಆ ಕಹಿ.. ಒಗರಿನ ಮಾವಿನ ಕಾಯಿಯಲ್ಲಿ ಏನು ರುಚಿನೋ..?
ರಾಮ ರಾಮಾ.. ಏನು ಹುಡುಗ್ರೋ...!
ಯಂಕಟು...
ನೀನು ಬರದೇ ಇದ್ರೆ ಇವರಿಗೆ ಚೆನ್ನಾಗಿ ಪೆಟ್ಟು ಬೀಳ್ತಿತ್ತು ನೋಡು.."
ಮಂಜಣ್ಣನ ಮಾತು ಮುಗಿತಾ ಇದ್ದ ಹಾಗೆ..
ಮಾಸ್ತರು ಬಂದರು...!
" ಈ ಹುಡುಗರ ಉಪಟಳ ನನಗಂತೂ ಸಾಕಾಗಿ ಹೋಗಿದೆ..
ಮಾರಾಯ್ರೆ..
ಇವತ್ತು ನೀವೆಲ್ಲ ಸೇರಿದ್ದೀರಿ..
ನೀವೇ ಹೇಳಿ ಇವರಿಗೆಲ್ಲ ಏನು ಮಾಡ್ಬೇಕು ?"
"ಇವರು.. ಏನು ಮಾಡಿದ್ದಾರೆ..?"
"ಅದೊಂದು ದೊಡ್ಡ ಕಥೆ...
ಈ ಕುಷ್ಟ.. ಈ ನಾಗು.. ಸಂಗಡ ಪ್ರಕಾಶು..!
ನಾನು ಯಾಕಾದ್ರೂ...
ಮಾಸ್ತರ್ ಆದೆ ಅನ್ನಿಸಿ ಬಿಟ್ಟಿದೆ...!
ಇವತ್ತು ಇಸ್ಪೀಟು ಆಡುವಾಗ ಹೇಳ್ತೀನಿ.."
ಮಾಸ್ತರು ನಮ್ಮ ಕಡೆಗೆ ನೋಡಿ..
"ಇಲ್ಲೇನು ಹಲ್ಕಿಸಿತಾ ಇದ್ದೀರಿ.. ?
ಹೋಗಿ..... ಓದ್ಕೊಳ್ಳಿ...!"
"ಮಂಜಣ್ಣನವರೆ.. ಕಂಬಳಿ ಹಾಕಿ...
ಇವತ್ತು ಇಸ್ಪೀಟು ಆಡುವಾ..."
ಅನ್ನುತ್ತ ನಮ್ಮನ್ನೆಲ್ಲ ಹೊರಗೆ ಕಳಿಸಿದರು...
ನಾವು ಅಲ್ಲಿಂದ ಓಟ ಕಿತ್ತೇವು...
ಮರುದಿನ ಶಾಲೆ( ಸ್ಕೂಲ್) ಬಿಟ್ಟು ಬರುವಾಗ...
ಪದ್ದಕ್ಕ ಒಬ್ಬಳೇ ಬರ್ತಿದ್ದಳು..!
ನನಗೆ ಮಾತನಾಡಲು ಧೈರ್ಯ ಸಾಲಲಿಲ್ಲ..
ಅನಾಯಾಸವಾಗಿ ಸಿಗುತ್ತಿದ್ದ "ನಿಂಬೆ ಪೆಪ್ಪರ ಮೆಂಟು" ತಪ್ಪಿ ಹೋಯಿತಲ್ಲಾ.. !
"ಪ್ರಕಾಶು ಇಲ್ಲಿ ಬಾರೋ.."
ನಾನು ಹೆದರುತ್ತ ಬಂದೆ..
"ನೀನು ಒಳ್ಳೆಯ ಹುಡುಗ ಅಂದ್ಕೊಂಡು ಬಿಟ್ಟಿದ್ದೆ...
ಆ ನಾಗು ಜೊತೆ ಸೇರಿ..
ಕೆಟ್ಟು.. ಹಾಳಾಗಿ ಹೋಗ್ತೀಯಾ..
ನಿಜ ಹೇಳು ಪ್ರಕಾಶು..
ಯಾಕೆ ಹೀಗೆ ಮಾಡಿದ್ದು ??"
ನಾನು ಸುಮ್ಮನಿದ್ದೆ....
ಏನು ಅಂತ ಹೇಳಲಿ..?
"ನೋಡು.. .. ಪುಟ್ಟಾ...
ನಂಗೆ ಗೊತ್ತು ನೀನು ಜಾಣ..
ಯಾಕೆ ಹೀಗೆ ಮಾಡಿದ್ದು..?"
"ಪದ್ದಿ... ನೀನು... ಬಯ್ಯ ಬಾರದು..!"
"ಓಕೆ.. ನಾನು ಬಯ್ಯುವದಿಲ್ಲ.. ಹೇಳು.."
"ಪದ್ದಿ...
..ಪದ್ದಿ.. ಅದು...
ಅದೂ..
ನೀನೂ.. ಮತ್ತು ಯಂಕಟು....
ಪ್ರೀತಿ ಮಾಡುವಾಗ ಹೇಗೆ ಹಾಡು ಹೇಳ್ತೀರಿ.. ? !!
ಅಂತ ನೋಡೋಕೆ ಹೀಗೆ ಮಾಡಿದ್ದು..
ನೀವು ಸಿನೇಮಾ ಹಾಗೆ ಹಾಡು ಹೇಳ್ತೀರಾ ??"
ಪದ್ದಿಗೆ ಎಲ್ಲಿಲ್ಲದ ಕೋಪ ಬಂತು...!
ಪಕ್ಕದಲ್ಲಿದ್ದ ಕೋಲು ತೆಗೆದು ಕೊಂಡು ನನ್ನನ್ನು ಅಟ್ಟಿಸಿಕೊಂಡು ಬಂದಳು...!
"ಹಾಕ್ತೀನಿ ನೋಡು..!
ಹಾಡು ಕೇಳ್ಳಿಕ್ಕೆ ಬಂದಿದ್ನಂತೆ...!
ಹಲ್ಕಟ್ಟು.... ! "
ನಾನು ಅಲ್ಲಿಂದ ಹಿಂದೆ ಮುಂದೆ ನೋಡದೆ ಓಡಿದೆ...
ಓಡಿದೆ...
ಮನೆಯ ಹತ್ತಿರ ನಾಗು ಸಿಕ್ಕಿದ..
"ಪ್ರಕಾಶೂ....
ತಗೋಳ್ಳೋ.. ಪೆಪ್ಪರ ಮೆಂಟು..!!"
"ಹಾಂ.. !
ಎಲ್ಲಿ ಸಿಕ್ಕಿತೋ.. ಇದು ?? !!"
"ಪ್ರಕಾಶು...
ಯಂಕಟು ಕೊಟ್ಟಿದ್ದಾನೆ....!
ನಾವು ಮರ ಹತ್ತಿ...
ನೋಡಿದ ಈ ಕಥೆಯನ್ನು ಯಾರಿಗೂ ಹೇಳ ಬಾರದಂತೆ.... !
ದಿನಾ ಕೊಡ್ತಾನಂತೆ...!
ನೀನು ಏನೇ.. ಹೇಳು ಯಂಕಟು ಒಳ್ಳೆಯವನು ಕಣೋ...
ನಿನ್ನೆ ಮಂಜಣ್ಣ ಹತ್ತಿರ ಅವ ಸುಳ್ಳು ಹೇಳ್ದೆ ಇದ್ರೆ...
ನೀನು ಮತ್ತೊಮ್ಮೆ ತೊಟ್ಟಿಲು ಕಟ್ಟ ಬೇಕಾಗಿತ್ತು ನೋಡು......!!..
ತಗೋ ಪೆಪ್ಪರಮೆಂಟು..!"
ನಾನು ಪೆಪ್ಪರ ಮೆಂಟು ಬಾಯಲ್ಲಿ ಹಾಕಿ ಕೊಂಡೆ..
ನಿಂಬೆ ಹಣ್ಣಿನ ಸುವಾಸನೆ ಸಂಗಡ....
ಹುಳಿ ಹುಳಿಯಾಗಿ...
ಸಿಹಿ.. ಸಿಹಿಯಾಗಿತ್ತು... !
ಬಾಯಿ ಚಪ್ಪರಿದೆ.. !!
ಆಹಾ...!
Saturday, May 8, 2010
Subscribe to:
Post Comments (Atom)
36 comments:
ಕಥೆ ಚೆನ್ನಾಗಿ ಮೂಡಿ ಬಂದಿದೆ ಪ್ರಕಾಶಣ್ಣ. ತಿಳಿ ಹಾಸ್ಯದ ಜೊತೆಗೆ ಮಕ್ಕಳ ಮನಸ್ಸಿನಲ್ಲಿ ಸಹಜವಾಗಿಯೇ ಮೂಡಬಹುದಾದ ಕುತೂಹಲಗಳ ಬಗ್ಗೆ ಕೂಡ ಒಂದು ಬೆಳಕು ಚೆಲ್ಲಿದ್ದೀರಿ. ಬಾಲ್ಯದ ಆ ಹುಡುಗಾಟಗಳನ್ನು ನಮ್ಮೊಡನೆ ಹಂಚಿಕೊಂಡು ನಮ್ಮನ್ನೂ ನಗಿಸಿದಿರಿ. ಅಂತೂ ನಿಮಗೆ ಪೆಪ್ಪೆರ್ಮೆಂಟ್ ತಪ್ಪಲಿಲ್ಲ ಅಂತ ಓದಿ ನಮಗೂ ಸಂತೋಷ ಆಯ್ತು. ಹ್ಹ ಹ್ಹ ಹ್ಹ.
ಓ ಮನಸೆ ನೀನೆಕೆ ಹೀಗೆ ?
ಆಗ ಯಂಕಟು ಮೇಲೆ ತುಂಬಾ ಅಭಿಮಾನ ಬಂದಿತ್ತು
ಯಂಕಟು ದೇವರಂತೆ ಕಂಡಿದ್ದ
ಆತ ಅಲ್ಲಿ ಬಂದು ಕಾಪಾಡದಿದ್ದರೆ ಚಿಕ್ಕಪ್ಪನ ಬಳಿ ಏಟು ಗ್ಯಾರೆಂಟಿಯಾಗಿತ್ತು....
ಆದರೆ..
ಯಂಕಟು ಯಾಕೆ ಹಾಗೆ ಮಾಡಿದ ಎಂದು ತಿಳಿದದ್ದು ತಡವಾಗಿ...
ಹ್ಹಾ..ಹ್ಹಾ..
ಆತ ನಮ್ಮನ್ನು ಕಾಪಾಡಲಿಲ್ಲ..
ತನ್ನನ್ನು ಬಚಾವ್ ಮಾಡಿಕೊಂಡಿದ್ದ...
ನಮಗಂತೂ...
ಪುಷ್ಕಳವಾಗಿ ಪೆಪ್ಪರ ಮೆಂಟು ಸಿಗುತ್ತಿತ್ತು...
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಬರುತ್ತಾ ಇರಿ....
ಪ್ರಕಾಶ ನೀನು ಬಹಳ ಫಟಿಂಗ ಇದ್ದೆ ಅನ್ಸುತ್ತೆ ಸ್ಕೂಲಿನ ಸಮಯದಲ್ಲಿ.....ಹಹಹ ಯಂಕ್ಟು ..ಪದ್ದು ಡುಯೆಟ್ಟು ನಿಮಗೆಲ್ಲಾ ಎಡವಟ್ಟು ಮಾಡೋದ್ರಲ್ಲಿತ್ತು...ಕುಂಡಿಮೇಲೆ ಬಾಸುಂಡೆ ಬಂದ್ರೆ...ಸ್ಕೂಲಿನ ಬೆಂಚ ಮೇಲೆ ಕೂತ್ಕೊಳ್ಳೋ ತಾಪತ್ರಯ ಅದನ್ನು ಬರಿಸಿಕೊಂಡವರಿಗೇ.. ಗೊತ್ತಿರುತ್ತೆ....ಹಹಹ...ಬಹಳ ಸ್ವಾರಸ್ಯಕರ ಇತ್ತು ತಗೋ...ಪ್ರಕಾಶನ-ಪರಾಕ್ರಮಗಳು ಇನ್ನೂ ಬರಲಿ...ಹೀಗೇ...
ಅಝಾದ್... (ಜಲನಯನ)
ನನ್ನ ಚಿಕ್ಕಪ್ಪನ ಹೊಡೆತದ ಕಥೆ ಏನು ಹೇಳಲಿ ಮಾರಾಯಾ..
ನಾನು ಎಷ್ಟೇ... ಹಾರಾಡಲಿ..
ಕೂಗಾಡಲಿ....
ಬಹಲ ತಾಳ್ಮೆಯಿಂದ ನಿಧಾನವಾಗಿ ಚಡ್ಡಿ ಬಿಚ್ಚಿ...
ಅಂಡಿನ ಮೇಲೆ...
ಒಂದು..
ಮತ್ತೊಂದು..
ಹೊಡೆತ ಹೊಡೆದ ಜಾಗದಲ್ಲಿಯೇ..
ಹೊಡೆಯುವದು... !
ಪೆಟ್ಟು ತಿಂದ ಜಾಗವನ್ನು ತಿಕ್ಕಿಕೊಳ್ಳಲು ಬಿಡುತ್ತಿಲ್ಲವಾಗಿತ್ತು.. !
ತಿಕ್ಕಿಕೊಂಡರೆ ಉರಿ ಕಡಿಮೆಯಾಗುತ್ತಿತ್ತು...
ನಮ್ಮನೆಯಲ್ಲಿ ಚಿಕ್ಕಪ್ಪನ ಬಳಿ ಅತೀ ಹೆಚ್ಚು ಪೆಟ್ಟು ತಿಂದದ್ದು ನಾನೇ..!!
ಅವರ ಪೆಟ್ಟುಗಳು...
ಗದರಿಕೆಗಳು...
ನಾನು ಕೆಟ್ಟದಾರಿಗೆ ಹೋಗುವದನ್ನು ತಪ್ಪಿಸಿದವು....
ಇಷ್ಟಪಟ್ಟಿದ್ದಕ್ಕೆ ..
ಪ್ರೋತ್ಸಾಹಕ್ಕೆ ಧನ್ಯವಾದಗಳು
ಪ್ರಕಾಶ್ ;ನಮಸ್ಕಾರ .ನಿಮ್ಮ ಪೆಪ್ಪರಿಮೆಂಟ್ ಕಥೆ ಬಹಳ ಖುಷಿ ಕೊಡ್ತು.ನಮಗೆ ನಿಮ್ಮ ಹಾಗೆ ಪೆಪ್ಪರಿಮೆಂಟ್ ಕೊಡೋಕೆ ಪದ್ದಿಯೋ ವೆಂಕಟನೋ ಇರಲಿಲ್ಲ.ಆಗೆಲ್ಲಾ, ಬೇಗ ದೊಡ್ಡವರಾಗಿ ,ಚೆನ್ನಾಗಿ ಸಂಪಾದನೆ ಮಾಡಿ ರಾಶಿ ರಾಶಿ ಪೆಪ್ಪೆರ್ಮಿಂಟು ಚಾಕೊಲೇಟು ಕೊಳ್ಳಬೇಕು
ಎನ್ನುವ ಕನಸು !ನೆನಸಿಕೊಂಡರೆ ನಗು ಬರುತ್ತೆ .ನಿಮ್ಮ ಚಿಕ್ಕಂದಿನ ಇನ್ನಷ್ಟು ಸಾಹಸಗಳು ನಿಮ್ಮ ಬ್ಲಾಗಿನಲ್ಲಿ ಬರಲಿ.
ಪ್ರೀತಿಯ ಕೃಷ್ಣಮೂರ್ತಿಯವರೆ...
ನೆನಪಿನ..
ಬುತ್ತಿ..
ಬಿಚ್ಚಿ..
ತೆರೆದಿಷ್ಟಷ್ಟೂ..
ಸವಿದಷ್ಟೂ,...
ಸವಿ...ಸವಿ...!
ಅಲ್ಲವಾ?
ಬಾಲ್ಯದಲ್ಲಿ..
ಕುತೂಹಲ..
ಹರೆಯದಲ್ಲಿ..
ಮಧ್ಯಮದಲ್ಲಿ..
ಮುದಿ..
ವಯಸ್ಸಿನಲ್ಲೂ..
ಕಾಡುವ..
ಕಾಮ
ಬಲು ಸೋಜಿಗ...!
ಒಂದೊಂದು ಹಂತದಲ್ಲೂ..
ಒಂದೊಂದು ಬಣ್ಣ...
ತಣಿಯದ ದಾಹ... !
ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...
ಯಂಕಟುನಾದ್ರೂ ಒಳ್ಳೆ ಬುದ್ದಿ ಹೇಳ್ತಾನೆ ಅಂದುಕೊಂಡ್ರೆ, ಮತ್ತೆ ಪೆಪ್ಪರ್ಮೆಂಟ್ ಕೊಡೋದಾ..:). ಏನೇನೆಲ್ಲಾ ಕರಾಮತ್ತು ನಡೆಸಿದ್ದೀರಿ ಸರ್..!. ಅಂತೂ ನೆನಪಿನ ಬುತ್ತಿ ಬಾಯಿ ಚಪ್ಪರಿಸುವಂತಿತ್ತು..!.
ಸುಬ್ರಮಣ್ಯ...
ಯಂಕಟು ಬುದ್ಧಿ ಹೇಳುತ್ತಿದ್ದನೇನೋ...
ಅಲ್ಲಿ ಲವ್ ಲೆಟರ್ ವಿಷಯ ಬಂದು ಬಿಟ್ಟಿದ್ದರೆ..?
ಬಣ್ಣ ಬಯಲಾಗಿಬಿಡುತ್ತಿತ್ತಲ್ಲ...
ಅವತ್ತು ಯಂಕಟು ನಮ್ಮ ಪಾಲಿನ ದೈವವಾಗಿದ್ದ...!
ಪದ್ದಿ ಬಹಲ ದಿನಗಳ ತನಕ ನನ್ನ ಬಳಿ ಮಾತನಾಡಲಿಲ್ಲ..
ಆಮೇಲೆ ನಾನೇ ಸ್ಸಾರಿ ಹೇಳಿದೆ..
ಆದ್ರೂ..
ಪ್ರೀತಿಸುವಾಗ ಹಾಡು ಹೇಳುತ್ತಾರೆ..
ಅನ್ನುವದು ಮನದಲ್ಲಿ ಕುಳಿತು ಬಿಟ್ಟಿತ್ತು...
ಸಿನೇಮಾದಲ್ಲಿ ಪ್ರೇಮಿಸುವಾಗ ಹಾಡು ಹಾಡಿಸಿದ ಪ್ರಥಮ ಪುಣ್ಯಾತ್ಮ ಯಾರಿರ ಬಹುದು ?
ಆ ನಿರ್ದೇಶಕನನ್ನು ಮೆಚ್ಚಲೇ ಬೇಕು.. ಅಲ್ಲವಾ ?
ಮೆಚ್ಚುಗೆಗೆ ಧನ್ಯವಾದಗಳು ಸುಬ್ರಮಣ್ಯ....
ಹಾ ಹಾ ಹಾ ..
ಅಂತು ಪೆಟ್ಟು ತಪ್ಪಿ ಪೆಪ್ಪರ್ ಮಿಂಟು ಸಿಕ್ತು ಅಂತಾತು. ಪದ್ದಿ ಕೊಟ್ರೇನು ? ಯಂಕಟು ಕೊಟ್ರೇನು ? ಪೆಪ್ಪರ್ ಮೆಂಟು ಸಿಗೋದು ಮುಖ್ಯ !!!
ಆದ್ರೆ, ಯಂಕಟು-ಪದ್ದಿ ಪ್ರೇಮ ಕಥೆ ಮುಂದೇನಾಯ್ತು ಅನ್ನೋ ಕುತೂಹಲ ಹಾಗೇ ಉಳಿದುಹೋಯ್ತು !!!
ತುಂಬಾ ಕುತೂಹಲ ತಿರುವು ಸಿಕ್ಕಿತು. ಆದರೂ ಕಡೆಗೆ ಪೆಪ್ಪರ ಮೆಂಟಿಗೆ ದೋಕ ಆಗಲಿಲ್ಲ ...ಹಹಹ
eega samaadhaana aatu nodu prakashanna.....
3 vaara baari kaadibitta yankatuna prema kathe, cholo iddo.
aadroo sanna doubt iddu...
KADIGE ENTAA AATU?
KUDDAAGI BANDU KELTI....
ಚಿತ್ರಾ...
ಅನಾಯಾಸವಾಗಿ ಸಿಗುತ್ತಿದ್ದ ಪೆಪ್ಪರ್ ಮೆಂಟು ಕೈ ತಪ್ಪಿಹೋಯಿತಲ್ಲಾ ಅನ್ನುವ ಕೊರಗು ಶುರುವಾಗಿತ್ತು..
ಯಂಕಟು ಪೆಪ್ಪರಮೆಂಟು ಕೊಡುವದು ಸೋಜಿಗವಾದರೂ..
ನಾವು ಬೇಡ ಅನ್ನಲಿಲ್ಲ...
ಮುಂದೆ ಅವರಿಬ್ಬರ ಪ್ರಕರಣ ಮತ್ತೆ ಬರೆಯುವೆ...
ಮುಂದಿನ ಲೇಖನದಲ್ಲಿ ....
ಬಹಳ ಖುಷಿಯ ವಿಚಾರಗಳನ್ನು ನಿಮಗೆಲ್ಲ ಹೇಳಬೇಕಿದೆ..
ಅದಕ್ಕಾಗಿ ಮುಂದಿನ ಲೇಖನ..
ಮುಂದಿನವಾರ...
ನಿಂಬೆಹುಳಿ ಪೆಪ್ಪರ ಮೆಂಟು ಬಹಳ ರುಚಿಯಾಗಿರುತ್ತಿತ್ತು...
ಕೃಷ್ಣಮೂರ್ತಿಯವರು ಹೇಳಿದ ಹಾಗೆ..
ದೊಡ್ಡವನಾದ ಮೇಲೆ
ಮನೆ ತುಂಬಾ ನಿಂಬೆ ಹುಳಿ ಪೆಪ್ಪರಮೆಂಟು ಇಟ್ಟುಕೊಳ್ಳಬೇಕು ಎನ್ನುವ ಕನಸಿತ್ತು...
ಈಗ ಸಿರ್ಸಿಯಲ್ಲಿ ಆ ಥರಹದ ಪೆಪ್ಪರಮೆಂಟು ಸಿಗುವದೇ.. ಇಲ್ಲ..
ಆದರೆ..
ಆ ದಿನಗಳ ನೆನಪು..
ಅದರಷ್ಟೇ..
ರುಚಿಯಾಗಿದೆ...
ಪ್ರತಿಕ್ರಿಯೆಗೆ ಧನ್ಯವಾದಗಳು...
ಲೋದ್ಯಾಶಿಯವರೆ...
ಮುಂದೆ ಆ ಪೆಪ್ಪರಮೆಂಟು ಕೂಡ ಸಿಗುವದು ತಪ್ಪಿಹೋಯಿತು...
ಯಂಕಟು ನಮ್ಮನ್ನು ಇನ್ನೊಂದು ಪ್ರಕರಣದಲ್ಲಿ ಸಿಕ್ಕಿಹಾಕಿಸಿ..
ಪೆಪ್ಪರಮೆಂಟು ಕೊಡುವದನ್ನು ತಪ್ಪಿಸಿದ್ದ..
ಅದನ್ನು ಮುಂದೆ ಯಾವಾಗಲಾದರೂ ಹೇಳುವೆ..
ಮಾಸ್ತರ ಕೇಸು ಬಹಳಷ್ಟು ಇದೆ..
ಕುಷ್ಟನ ಕಥೆ ನಿಜಕ್ಕೂ ರೋಚಕವಾಗಿದೆ...
ನಾನು ಕುಷ್ಟ "ಭೂತ" ನೋಡಿದ ಘಟನೆ ಇನ್ನೂ ಹಸಿರಾಗಿದೆ..
ಲೋದ್ಯಾಶಿಯವರೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
hahah chennagide nimma kathe
ಪಿಅರ್ ತುಂಬೆಮನೆ...
ಪದ್ದಿ, ಯಂಕಟು ಪ್ರೇಮ ಕಥೆ ಏನಾಯ್ತು...?
ಅದನ್ನೂ ಹೇಳುತ್ತೇನೆ... ಸ್ವಲ್ಪ ದಿನಗಳ ನಂತರ..
ಒಂದೆರಡು ಕಥೆ ಬರೆಯಬೇಕೇಂಬ ಆಸೆ ಇದೆ..
ಪದ್ದಕ್ಕ, ಎಂಕಟು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಪ್ರಕಾಶ,
ನನಗೂ ತುಂಬ ಸಿಹಿ ಸಿಹಿ-ಹುಳಿ ಹುಳಿ ಪೆಪರ್ ಮೆಂಟು ತಿಂದಂತಾಯಿತು. ಧನ್ಯವಾದಗಳು.
ಪ್ರಕಾಶಣ್ಣ,
ಮಜಾ ಇದೆ ನಿಮ್ಮ ಬಾಲ್ಯ ಕಥೆಗಳು....
ಇನ್ನಷ್ಟು ಬರಲಿ....
ಮನಸು...
ವಯಸ್ಸಿನ..
ಪ್ರತಿ ಹಂತಲ್ಲೂ..
ಕಾತುರದ..
ಕುತೂಹಲವಾಗಿ..
ಕಾಮ..
ಕಾಡುತ್ತದೆ...
ಬಣ್ಣ..
ಬದಲಿಸುತ್ತ..
ಬದುಕಿನ
ಆಸಕ್ತಿಯಾಗಿ..
ತೀರದ ದಾಹವಾಗಿ..
ಹಂಬಲವಾಗಿ..
ಬಲವಾಗಿ..
ಬೇರೂರಿರುತ್ತದೆ..
ಉಳಿದುಬಿಡುತ್ತದೆ..
ರಹಸ್ಯವಾಗಿ..
ಬಾಲ್ಯ ನಮಗೆಲ್ಲ
ಸಿಹಿ ನೆನಪಾಗಿ ಕಾಡುತ್ತದೆ..
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಸುನಾಥ ಸರ್...
ಅಂದು ಸಿಗುತ್ತಿದ್ದ ನಿಂಬೆಹುಳೀ ಪೆಪ್ಪರ್ ಮೆಂಟು ಈಗ ಸಿಗುತ್ತಿಲ್ಲ..
ನಮ್ಮ ಬಾಲ್ಯದ ನೆನಪುಗಳೂ ಹಾಗೇಯೇ ಅಲ್ಲವೇ...
ಸ್ವಲ್ಪ ಹುಳಿ.. ಹುಳಿ..
ಸಿ.. ಸಿಹಿ..
ಸವಿಯುತ್ತ ಚಪ್ಪರಿಸಿದಾಗ..
ನಾಲಿಗೆಯ ತುದಿಯಲ್ಲಿ..
ಅಹಾ...!
ರುಚಿಯೋ ರುಚಿ.. !
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಅಂತೂ ಇಂತೂ ಪೇಪರಮಿಂಟು ರುಚಿಯಾಗಿತ್ತು ಅಲ್ವಾ
ಇರದೆಯೇ ಇರುತ್ತದೆಯೇ ಇಷ್ಟೆಲ್ಲ ಕಷ್ಟ ಪಟ್ಟಿರುವಾಗ.....ಮಜಾ ಬಂತು ನಿಮ್ಮ "ಬಾಲ ಲೀಲೆ" ಓದಿ
ಪ್ರಕಾಶಣ್ಣ,
ಅಂತೂ ಏನೇನೋ ಆಗಿ, ಎಲ್ಲೆಲ್ಲೋ ಹೋಗಿ ಪೆಪ್ಪರಮೆಂಟು ಮತ್ತೆ ಸಿಕ್ತು ಅಲ್ವಾ!
ಹ್ಹ ಹ್ಹ ಹಾ!
ನಿಮ್ಮ ಚಿಕ್ಕಪ್ಪನ ಪೆಟ್ಟಿನ ಗತ್ತು ನನ್ನ ಮಾವನ ಬಾರುಕೊಲಿನ ಹೊಡೆತವನ್ನು ನೆನಪಿಸುತ್ತದೆ. ಬಾರುಕೊಳನ್ನು ನೋಡಿದರೆ ಈಗಲೂ ಕೂಡ ನನ್ನ ಎದೆಯ ಮೂಲೆಯಲ್ಲೊಂದು ಸದ್ದು ಉಂಟಾಗುತ್ತದೆ!
ಏನೂ ಅರಿಯದ ಮುಗ್ದ ಮನಸಿನ ಬಾಲ್ಯ ಮುಗಿಯದಿದ್ದರೆ ಚಂದ ಇರುತ್ತಿತ್ತು ಅನ್ನಿಸುತ್ತದೆ ಅಲ್ವಾ?
ನವ್ಯ ಕವನಗಳೆಲ್ಲ ಸೊಗಸು ಪ್ರಕಾಶಣ್ಣ,ನೇಟಿವಿಟಿಯ ವಿಷಯಕ್ಕೆ ಭಾಷೆಯೂ ಸಹಕರಿಸಿದರೆ, ಬಂಗಾರದ ಹೂವಿಗೆ ಪರಿಮಳ ಬಂದಾಗಿರ್ತು !!
Peppermint kathe super aagide... Antoo intoo nimma chapati oddeyaagalilla alva.. :)
ನಿಮಗೆ ಪೆಪ್ಪರಮೆಂಟು ತಪ್ಪಲಿಲ್ಲ
ನಮಗೆ ಪ್ರತಿ ಸಲದ ಹಾಗೆ ನಗು, ಖುಷಿ ಮಿಸ್ಸಾಗಲಿಲ್ಲ.
ತುಂಬಾ ಸಂತೋಷವಾಯ್ತು, ನಿಮ್ಮ ಬಾಲ್ಯದ ಬಗ್ಗೆ ಇನ್ನು ಬರೀರಿ ತುಂಬಾ ಎಂಜಾಯ್ ಮಾಡ್ತಿವಿ.
aa prema kathe enaithu? avara love success aitha?
nammuralli limbe peppermentu sigutte maraire, story continue madiri bega. :)
wow nice iddu prakash anna :)
ಪ್ರಕಾಶಣ್ಣ...
ಹೇಗೋ ಹೇಗೋ ಪೆಪ್ಪರ್ ಮೆಂಟು ದೊರಕಿಸಿಕೊಂದ್ರಿ.... ಯಂಕಟ ನ ಸಂಕಟ ನೋಡಿ ನಾಗಿ ಬಂತು...... ಅವ ನಿಮಗೆ ಸಹಾಯ ಮಾಡದಿದ್ದರೆ ಅವನದೇ ಪಜೀತಿಯಾಗುತ್ತಿತ್ತು ............ ತುಂಟ ಅನುಭವಗಳ ಖಜಾನೆ ನಿಮ್ಮ ಬ್ಲಾಗ್........ ಹೀಗೆ ಮುಂದುವರಿಯಲಿ............ ನಮಗೆ ಕಚಗುಳಿಕೊಡಲಿ.......
Ha Ha Ha.....
thumba chennaagidhe...Yankatu olle samaya sphoorthi thorisiddaare... illandre thottilu kattuva.... lol :)
yaavaaglu kushi koduva nimma yaavaththina shailiyalli bandha e baraha nange kushi kodthu :)
tumba uttamavaada kathe.. esta aytu...
biduvinalomme beti needi
www.vanishrihs.blogspot.com
ವಾವ್...ಕಥೆ ಚೊಲೋ ಇದ್ದು. ಲಿಂಬು ಪೆಪ್ಪರ್ಮೆಂಟ್ ಮತ್ತೆ ನೆನಪು ಮಾಡಿದ್ದಕ್ಕೆ ತುಂಬಾ thanks..
ಹ್ಹ ಹ್ಹ ..ಪ್ರಕಾಶಣ್ಣ..:)
ಸಕತ್ ಮಜಾ ಇದೆ ನಿಮ್ಮ ಬಾಲ್ಯದ ಹುಡುಗಾಟಿಕೆಗಳು, ಸವಿ ಸವಿ ನೆನಪುಗಳು..:)
ತುಂಬ ಚೆನ್ನಾಗಿದೆ ನಿರೂಪಣೆ .ಬಾಲ್ಯ ಸಹಜ ಕುತೂಹಲ ,ಮುಗ್ಧತೆ ,ತುಂಟತನ ಎಲ್ಲವು ಇದೆ .
ಹೌದು.ಚಿಕ್ಕವರಿದ್ದಾಗ ಸಣ್ಣ ಚಾಕಲೇಟ್ ಗಾಗಿ ಏನು ಮಾಡಲು ತಯಾರಿದ್ದೆವು ಅಲ್ವ?
ಒಯ್ ಪಕಾಸ್ ಹೆಗ್ಡೇರು :) ಮಸ್ತ್ ಐತ್ರ ಇದು:)
ಪ್ರಕಾಶಣ್ಣ,,ನಿಮ್ಮ ಬಾಲ್ಯದ ಅನುಭವಗಳು ಬಲು ಸೊಗಸಾಗಿವೆ..
ನಿಂಬು ಹುಳಿ ಪೆಪ್ಪರ್ಮೆಂಟ್ ಅಂದ ತಕ್ಷಣ ನೆನಪಾಯಿತು..
ಕಳೆದ ಸಲ ಭಾರತಕ್ಕೆ ಬರುವಾಗ ಉಡುಪಿಯ ಹತ್ತಿರ ಯಾವುದೋ ಒಂದು ಅಂಗಡಿಯಲ್ಲಿ ಈ ನಿಂಬೆ ಹುಳಿ ಪೆಪ್ಪರ್ಮೆಂಟ್ ಸಿಕ್ಕಿತು..ನನ್ನ ಮಗನಿಗೆ ಅದನ್ನು ತೋರಿಸುವುದಕ್ಕೋಸ್ಕರ ಅದನ್ನು ಖರೀದಿಸಿದೆ..ಅದನ್ನು ತಿಂದು ಬಿಟ್ಟು ನನ್ನ ಮಗ 'ಇದಕ್ಕಿಂತ 5- Star ಚೆನ್ನಾಗಿದೆ' ಅನ್ನೋದೆ??
ನಿಮ್ಮ ಮುಂದಿನ ಬರಹಕ್ಕಾಗಿ ಕಾಯುತ್ತಿರುವೆ....
ಅಂದ ಹಾಗೆ ಪ್ರತಿಕ್ರಿಯೆ ನೀಡಲು ಸ್ವಲ್ಪ ವಿಳಂಬವಾಯಿತು,, ಬೇಸರಿಸದಿರಿ..
Nice one prakashanna...
ಟಮ್ಮಟಿ ,ಕುಷ್ಟಾ,ಎಂಕಟು hesaru supeerrrb
nagisidake thanks :)
mathe barthini nagodake ;)
Post a Comment