Wednesday, March 10, 2010

ಬ್ಲಾಗ್ ಲೋಕದ "ಪರಿಣಯ..."!!

ಆತ...
ತುಂಬಾ ಒಳ್ಳೆಯ ಹುಡುಗ...
ಸ್ವಲ್ಪ ತುಂಟ...


ಆದರೆ ಸಭ್ಯ...


ಅವನದೂ ಒಂದು ಬ್ಲಾಗ್ ಇದೆ...

ಅವಳೂ...
 ತುಂಬಾ ಒಳ್ಳೆಯ ಹುಡುಗಿ...


ತುಂಬಾ ಚೆನ್ನಾಗಿ ಬರೆಯುತ್ತಾಳೆ...
ಅವಳ ಬರವಣಿಗೆಗೆ ಎಲ್ಲರೂ ತಲೆದೂಗುತ್ತಾರೆ...


ತುಂಬಾ ಜನಪ್ರಿಯ ಬ್ಲಾಗ್... ಇಬ್ಬರದ್ದೂ...

ಇನ್ನೇನು...?

ಪ್ರತಿಕ್ರಿಯೆ ಕೊಡುತ್ತ...  ಕೊಡುತ್ತ...

ಪರಿಚಯವಾಯಿತು...


ಪರಿಚಯದಿಂದ ಪ್ರೇಮ...!


ಈಗ ಮದುವೆಯೂ ಆಯಿತು...!
 ಮೊನ್ನೆ ಧರ್ಮಸ್ಥಳದಲ್ಲಿ...

ಇದೊಂದು ಬ್ಲಾಗ್ ಲೋಕದ "ಪರಿಣಯ..."!!

ಇಬ್ಬರೂ ತುಂಬಾ ಆತ್ಮೀಯತೆಯಿಂದ...
ಪ್ರೀತಿಯಿಂದ...
ನಮ್ಮನೆಗೆ ಬಂದು ಆಮಂತ್ರಣ ಕೊಟ್ಟಿದ್ದರು...
ಹೋಗಲಾಗಲಿಲ್ಲ...
ಇಂದಿನ  ಔತಣಕೂಟಕ್ಕೂ ಹೋಗಲಾಗುವದಿಲ್ಲ...


ಆ ಚಂದದ ಜೋಡಿಗೆ ಇಲ್ಲಿಂದಲೇ ಶುಭ ಹಾರೈಸೋಣ !


ಚಂದದ ಜೋಡಿ..
ಸಂತೋಷ್  ಚಿದಂಬರ್ ಹಾಗೂ.. ಚಿತ್ರಾ ಕರ್ಕೇರಾ....
ಇವರ ವೈವಾಹಿಕ  ಜೀವನ ಸಂತೋಷ, ಸುಖಮಯವಾಗಿರಲಿ.....

ಚಿತ್ರಾ...   ಬಿಡಿಸಿದ ಸಂತೋಷ ನ ಚಿತ್ರ.

ಅಂದು ನಮ್ಮನೆಗೆ 
ಹಾಸ್ಯ ನಾಟಕಗಳ ಸರದಾರ ..
"ಯಶವಂತ್ ಸರದೇಶಪಾಂಡೆ"  ಕೂಡ ಬಂದಿದ್ದರು..!
ಈ ಪ್ರೇಮಿ ಹಕ್ಕಿಗಳಿಗೆ ಅದು  ಆಶ್ಚರ್ಯದ "ಆಘಾತ"!!
ಅವರ ನಾಚಿಕೆ  ನೋಡಿ  ನಾವೆಲ್ಲರೂ    ನಕ್ಕಿದ್ದೆ.. ನಕ್ಕಿದ್ದು ...  !!!

                       ಸಂತೋಷನ ಹೃದಯದ ಚಿತ್ರಾ...!!
 
 
 
ಓದುಗರೇ...
ಇದು  ಬಹುಶಃ  ಬ್ಲಾಗ್ ಲೋಕದ ಮೊದಲ ಮದುವೆ...!
ಇಲ್ಲಿ ಜಾತಿ ಭೇದಗಳಿಲ್ಲ...
ಗುಂಪು, ಪಂಗಡಗಳಿಲ್ಲ .. ಅನ್ನುವದನ್ನು  
ಈ  ....
ಪುಟ್ಟ ಪ್ರೇಮಿ ಹಕ್ಕಿಗಳು ಸಾಬಿತು ಪಡಿಸಿದ್ದಾರೆ...!
 
ಈ ಜೋಡಿ..
ನೂರು ವರುಷ...
ಹರುಷದಿಂದ ಬಾಳಲಿ....
 
ನಮ್ಮೆಲ್ಲರ ಶುಭ ಹಾರೈಕೆಗಳು

44 comments:

ಕ್ಷಣ... ಚಿಂತನೆ... said...

ಪ್ರಕಾಶಣ್ಣ,

ಇಂದು ಪರಾಂಜಪೆ ಸರ್‍ ಜೊತೆಗೆ ಆನ್ಲೈನ್‌ ಮಾತಾಡುವಾಗ ನನಗೆ ಈ ವಿಚಾರ ತಿಳಿಯಿತು.
ಇದೊಂದು ವಿಧದ ಬ್ಲಾಗ್‌ ಲೋಕದಲ್ಲಿ ವಿಹರಿಸುವವರ/ಬರೆಯುವವರ ನಡುವಿನ ಬಂಧನ.

ಅವರಿಗೆ ನನ್ನ ಶುಭಾಶಯಗಳು.
ಸ್ನೇಹದಿಂದ,

ಗೌತಮ್ ಹೆಗಡೆ said...

nandoo ondu wishu avarige:)happy married life.

ವಿನುತ said...

ನಮ್ಮ ಶುಭಹಾರೈಕೆಗಳನ್ನೂ ಸೇರಿಸಿ! ಅಭಿನಂದನೆಗಳು ನವದಂಪತಿಗಳಿಗೆ, ಇನ್ನವರ ಬ್ಲಾಗುಗಳಲ್ಲಿ ಹೊಸ ಅಡುಗೆಯ ರಸದೌತಣ ನಮಗಾಗಲಿ ಎಂದು ಆಶಿಸುತ್ತಾ...

Me, Myself & I said...

ವೈವಾಹಿಕಜೀವನಕ್ಕೆ ಕಾಲಿಟ್ಟ ನವಜೋಡಿಗೆ ಶುಭಾಶಯಗಳು.

ಚಿತ್ರಗಳನ್ನ ಸೇರಿಸಿ ಮತ್ತಷ್ಟು ಅರ್ಥಪೂರ್ಣವಾಗಿಸಿದ್ದೀರಿ. ಬರಹಕ್ಕೆ ಧನ್ಯವಾದಗಳು.

ಮನಸು said...

ನವ ದಂಪತಿಗಳಿಗೆ ಶುಭಾಶಯಗಳು

ಮನಮುಕ್ತಾ said...

ನವದ೦ಪತಿಗಳಿಗೆ ನನ್ನ ಶುಭ ಹಾರೈಕೆಗಳು.

Guruprasad said...

ಚಿತ್ರ ನನಗೆ ಗೊತ್ತಿದ್ದರು,, ಸಂತೋಷ್ ಮುಖ ಪರಿಚಯ ವಿರಲಿಲ್ಲ.... ನನನ್ನು ಕರೆದಿದ್ದರು,, ಆದರೆ ಕೆಲಸದ ಒತ್ತಡದ ನಡುವೆ ಹೋಗಲಾಗಲಿಲ್ಲ....
ನವ ಜೋಡಿಗೆ ನನ್ನದು ಒಂದು ಶುಭ ಹಾರೈಕೆ..... ಹೊಸ ಜೀವನ ಸಂತೋಷ ದಿಂದ ಕೂಡಿರಲಿ...

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಶುಭಾಶಯಗಳು.

Ittigecement said...

ಚಂದ್ರು....(ಕ್ಷಣ ಚಿಂತನೆ..)

ಈ ಪ್ರೀತಿಅನ್ನೋದು...
ಎಲ್ಲಿ.?
ಯಾವಾಗ..?
ಯಾಕೆ ಹುಟ್ಟಿಕೊಳ್ಳುತ್ತದೆ..?
ಅನ್ನೋದು ತುಂಬಾ ವಿಚಿತ್ರ ಅಲ್ಲವಾ?

ನಾನು ಈ ಮೊದಲು ಚಿತ್ರಾರವರನ್ನು ನೋಡಿದ್ದೆ...
ಆದರೆ ಸಂತೋಷ ನೋಡಿ ಪರಿಚಯ ಇಲ್ಲವಾಗಿತ್ತು..

ಅಂದು ಬಹಲ ಕಷ್ಟಪಟ್ಟು ಹುಡುಕಿಕೊಂಡು ಬಂದಿದ್ದರು...
ಅವರು ಬರುವ ವೇಳೆ ನಮ್ಮನೆಯಲ್ಲಿ ಯಶವಂತ್ ಸರದೇಶಪಾಂಡೆಯವರಿದ್ದರು..

ನಾವು ಸರದೇಶಪಾಂದೆಯವರು ಬಂದಿದ್ದನ್ನು ಹೇಳಿರಲಿಲ್ಲ...

ಈ ಜೋಡಿ ಪ್ರೇಮಿ ಹಕ್ಕಿಗಳಿಗೆ ನಾಚಿಕಿಯೋ ನಾಚಿಕೆ...
ಅವರ
ನಾಚಿಕೆ..
ಸಂಭ್ರಮ..
ಸಂತೋಷ ನೋಡಿ ನಮಗ್ಗೆ ಬಹಳ ಖುಷಿಯಾಯಿತು...

ಚಿತ್ರಾ ಮತ್ತು ಸಂತೋಷ್ ಚಿದಂಬರ್ ಅವರ
ವೈವಾಹಿಕ ಜೀವನ ಸುಖಮಯವಾಗಿರಲಿ...

ತುಂಬು ಹೃದಯದ ಶುಭಾಶೀರ್ವಾದಗಳು...

ಇವತ್ತು ನಾನು ಅಲ್ಲಿರಬೇಕಿತ್ತು...
ಸ್ವಲ್ಪ ಆರೋಗ್ಯ ಕೈಕೊಟ್ಟಿದೆ...
ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದಕ್ಕೆ ಬಹಳ ಬೇಸರ ವಾಗುತ್ತಿದೆ...

ದೀಪಸ್ಮಿತಾ said...

ಬ್ಲಾಗ್ ಲೋಕ ಬರೀ ಸ್ನೇಹಿತರನ್ನು ಮಾತ್ರ ಸೃಷ್ಟಿಸುವುದಿಲ್ಲ, ಸಂಬಂಧಗಳನ್ನೂ ಕೂಡಿಸುತ್ತದೆ ಎಂದು ನಿರೂಪಣೆಯಾಯಿತು. ನವ ದಂಪತಿಗಳಿಗೆ ಶುಭ ಹಾರೈಕೆಗಳು. ಇಬ್ಬರಿಂದಲೂ ಇನ್ನೂ ಉತ್ತಮ ಬ್ಲಾಗ್ ಲೇಖನಗಳು ಬರಲಿ

ಸಾಗರದಾಚೆಯ ಇಂಚರ said...

ಹೊಸ ಜೋಡಿಗೆ ನಾವೂ ಇಲ್ಲಿಂದಲೇ ಶುಭ ಹಾರೈಸುತ್ತಿದ್ದೇವೆ
ಮದುವೆಗೆ ಹೋಗಲಾಗಲಿಲ್ಲ ಎಂಬ ಬೇಸರವಿದೆ
ಆದರೆ ಶುಭ ಹಾರೈಕೆಗಳೂ ಸದಾ ಅವರೊಂದಿಗಿದೆ

ದಿನಕರ ಮೊಗೇರ said...

ಪ್ರಕಾಶಣ್ಣ,
ನಾನು ಮತ್ತು ನನ್ನಾಕೆ ಮದುವೆಗೆ ಹೋಗಬೇಕೆಂದು ಪ್ಲಾನ್ ಮಾಡಿದ್ದೆವು...... ಆದರೆ ನಾನು ಚಿತ್ರಾ ಮದುವೆಯ ಮಾರನೆ ದಿನವೇ ಹೊಸ ಜಾಬ್ ಗೆ ಸೇರಬೇಕಾದ್ದರಿಂದ, ಮದುವೆ attend ಮಾಡಲು ಆಗಲಿಲ್ಲ...... ನೀವು ಅವರ ಫೋಟೋ ಹಾಕಿ, ಅವರ ಕಥೆ ಹೇಳಿದಾಗ ಖುಷಿಯಾಯ್ತು....... ಅವರಿಗೆ ಮದುವೆ attend ಮಾಡಲು ಆಗದ್ದಕ್ಕೆ ಸಾರೀ ಕೇಳುತ್ತಾ , ಮದುವೆ ಶುಭಾಶಯ ಇಲ್ಲಿಂದಲೇ ಹೇಳುತ್ತೇನೆ......

sunaath said...

ಪ್ರಕಾಶ,
ನಿಮ್ಮ blog ಮೂಲಕ ಚಿತ್ರಾ-ಸಂತೋಶರಿಗೆ ಶುಭ ಹಾರೈಕೆಗಳು.

Ashok Uchangi said...

ಸಂತೋಷ್ ಮತ್ತು ಚಿತ್ರರಿಗೆ ಈಗಾಗಲೆ ಶುಭಾಶಯ ತಿಳಿಸಿದ್ದೇನೆ..ನಿಮ್ಮ ಬ್ಲಾಗ್ ಮೂಲಕ ಇನ್ನೊಂದು ಶುಭಾಶಯ ಈ ನವಜೋಡಿಗೆ!

ಅಂದ ಹಾಗೆ ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ...ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ...ನೀವು ಬನ್ನಿ....ನಿಮ್ಮ ಸ್ನೇಹಿತರನ್ನೂ ಕರೆತನ್ನಿ...
ಅಶೋಕ ಉಚ್ಚಂಗಿ
http://mysoremallige01.blogspot.com

ಜಲನಯನ said...

ಮತ್ತೊಮ್ಮೆ ಮಗದೊಮ್ಮೆ
ನವ ದಂಪತಿಗಳಿಗೆ ದೇವರು ಆಯುರಾರೋಗ್ಯ ಸುಖ ಸಂತೋಷಗಳನ್ನು ನೀಡಲೆಂದು ಹಾರೈಸೋಣ.
ಚಿತ್ರಾಸಂತೋಷ....ಜೋಡಿಗೆ ಶುಭವಾಗಲಿ

ಜಲನಯನ said...
This comment has been removed by the author.
ಸವಿಗನಸು said...

ನವ ದಂಪತಿಗಳಿಗೆ ಶುಭಾಶಯಗಳು

Subrahmanya said...

ಚೆನ್ನಾಗಿರಲಿ ಪ್ರಕಾಶಣ್ಣ ಅವರ ಮುಂದಿನ ಜೀವನ..All the best

ವನಿತಾ / Vanitha said...

ಮತ್ತೊಮ್ಮೆ ಶುಭಾಶಯಗಳು ಚಿತ್ರ & ಸಂತೋಷ್ ದಂಪತಿಗಳಿಗೆ.
ಪ್ರಕಾಶಣ್ಣ ಥ್ಯಾಂಕ್ಸ್ ಫೋಟೋಕ್ಕೆ..
ಹಾಗೆ ಆಶಕ್ಕ, ಆಶೀಶ್ ಗೆ ಇಲ್ಲಿಂದ ಒಂದು ಹಾಯ್:)

umesh desai said...

ಹೊಸಾ ಜೋಡಿಗೆ ಶುಭಾಶಯಗಳು....

Unknown said...

ಸಂತೋಷ ಮತ್ತು ಚಿತ್ರ ಅವರ ಬದುಕೂ ಸಂತೋಷವಾದ ಚಿತ್ರವಾಗಲೀ ಎಂದು ನಾವೂ ಹಾರೈಸುತ್ತೇವೆ.

ತೇಜಸ್ವಿನಿ ಹೆಗಡೆ said...

ಹೊಸಜೋಡಿಯ ಚಿತ್ರಗಳನ್ನು ಇಲ್ಲಿ ನೋಡಿ ತುಂಬಾ ಸಂತೋಷವಾಯಿತು :) ನನಗೂ ಹೋಗಲಾಗಲಿಲ್ಲ..:( ಇಬ್ಬರಿಗೂ ವೈವಾಹಿಕ ಜೀವನದ ಹಾರ್ದಿಕ ಶುಭಾಶಯಗಳು :) ಅವರನ್ನು ಕಾಣಿಸಿದ ನಿಮಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಹೊಸಬಾಳಿನ ಹೊಸಿಲಲಿ ನಿ೦ದಿರುವಾ ಹೊಸಜೋಡಿಗೆ ಶುಭಾಶಯಗಳು.

UMESH VASHIST H K. said...

ಅಂತೂ ನಮ್ಮ ಕನ್ನಡ ಬ್ಲಾಗ್ ಒಂದು ಮದುವೆಗೆ ಕಾರಣವೈತೆಂದರೆ ಸಂತೋಷವೇ ಅವರ ವೈವಾಹಿಕ ಜೀವನಕ್ಕೆ ನನ್ನ ಶುಭಾಶಯಗಳು

ಅಹರ್ನಿಶಿ said...

ಪ್ರಕಾಶಣ್ಣ,

ಒ೦ದು ಅಪರೂಪದ ಸುದ್ದಿ,ಕೇಳಿ,ನೋಡಿ ತು೦ಬಾ ಸ೦ತೋಷವಾಯ್ತು.ಅವರು ಆಮ೦ತ್ರಣ ವನ್ನು ಮಿ೦ಚಿಸಿದ್ದರು,ಪರ್ದೇಸಿ ಯಾದ್ದರಿ೦ದ ಹೋಗಲಾಗಿಲ್ಲ.ಸ೦ತೋಷ್ ರವರ ಪರಿಚಯವಿಲ್ಲ,ಆದರೆ ಚಿತ್ರಾ ನನ್ನ ಬ್ಲಾಗ್ ಬ೦ಧು.ಅವರ ದಾ೦ಪತ್ಯ ಜೀವನ ಸುಖಮಯವಾಗಿರಲಿ ಎ೦ದು ಹಾರೈಸುವೆ.ಪರವಾಗಿಲ್ವೆ ನಿಮ್ಮ ಇಟ್ಟಿಗೆ ಸೀಮೆ೦ಟು ಬಹಳ ಸ್ಟ್ರಾ೦ಗ್....

Shweta said...

Prakashanna,

bloging annuvadu nammali estu olleya sambhandhagallanna huttuhaakideyalla... tumba khushi aayitu ..

AntharangadaMaathugalu said...

ಹೊಸ ದಂಪತಿಗಳಿಗೆ ಆತ್ಮೀಯ ಶುಭ ಹಾರೈಕೆಗಳು.........

ಬಿಸಿಲ ಹನಿ said...

ibbarigU hArddhika SubhAsayagaLu. aMdahAge saMtOSha avara blAg link koDuttIrA?

shivu.k said...

ಇಬ್ಬರೂ ಈ ವಿಚಾರವಾಗಿ ನನ್ನೊಂದಿಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ನನಗೂ ಕೆಲಸದ ಒತ್ತಡದಿಂದಾಗಿ ಹೋಗಲಾಗಲಿಲ್ಲ. ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರಿಬ್ಬರಿಗೂ ನನ್ನ ಕಡೆಯಿಂದ ಶುಭ ಹಾರೈಕೆಗಳು.

ShivaRam H said...

ನಿಜಕ್ಕೂ ಅಪರೂಪದ ಸಮಾಗಮ. ಹೊಸ ಜೋಡಿಗೆ ಶುಭವಾಗಲಿ

balasubramanya said...

ಬ್ಲಾಗ್ ಲೋಕದ ಈ ಹಕ್ಕಿಗಳು ಜೊತೆಯಾಗಿ ಹಾರುತ್ತಿವೆ , ಈ ಪ್ರಣಯ ಹಕ್ಕಿಗಳಿಗೆ ಶುಭಾಶಯಗಳು.

Thejesh Giri Chikmagalur said...
This comment has been removed by the author.
Thejesh Giri Chikmagalur said...

ನವ ದಂಪತಿಗಳಿಗೆ ಶುಭಾಶಯಗಳು
ಈ ಅಂಕಣದ ಲೇಖನ ಉತ್ತಮವಾಗಿ ಮೂಡಿಬಂದಿದೆ.

Unknown said...

Nava Dampathigalige Shubhashayagalu... Yava bheda bhava villade Preethiyannu ulisi Maduve haagiruva nava jodi galige hrudaya puraka Shubhashayagalu...

ಸುಧೇಶ್ ಶೆಟ್ಟಿ said...

ನೀವು ಬರುತ್ತೀರೆ೦ದು ಅ೦ದು ಕೊ೦ಡಿದ್ದೆ... ಹೇಗಿದ್ದೀರಾ ಈಗ...?

ನಾನು ಹೋಗಿದ್ದೆ ರಿಸೆಪ್ಷನ್ ಗೆ... ಚೆನ್ನಾಗಿತ್ತು.. ವಧು ವರರನ್ನು ಮಾತನಾಡಿಸಿ ಖುಷಿ ಆಯಿತು :)

ಸುಧೇಶ್ ಶೆಟ್ಟಿ said...
This comment has been removed by the author.
Raghu said...

ಒಹ್...ಹಾಗೆ...ಶುಭಾಶಯಗಳು.. ಥ್ಯಾಂಕ್ಸ್ ಪ್ರಕಾಶಣ್ಣ.. :)
ನಿಮ್ಮವ,
ರಾಘು.

ಮನದಾಳದಿಂದ............ said...

ಹೊಸ ಬಾಳಿನ ಅರಮನೆಗೆ ಕಾಲಿಟ್ಟಿರುವ ಸಂತೋಷ್ ಹಾಗೂ ಚಿತ್ರ ಅವರಿಗೆ ಶುಭಾಶಯಗಳು. ಎಲ್ಲೆಗಳನ್ನು ಮೀರಿ ಸಂಬಂಧವನ್ನು ಸೃಷ್ಟಿ ಮಾಡಿದ ನಮ್ಮ ಈ ಬ್ಲಾಗ್ ಲೋಕ ಸಾರ್ಥಕವಾಯಿತು. ಇನ್ನೇನು ಎರಡು ಮಹಾ ಶಕ್ತಿಗಳು ಒಂದಾಗಿವೆ. ನಮಗಂತೂ ಇಒನ್ನು ರಸದೌತಣ.

geeta bhat said...

avaru yaru anta nange gottille. aadre avara photo nodi khushi aatu. avara maduve bagge keli innu khushi aatu. aa jodi hakkige nandu ondu wish 'wish u good luck'.

mshebbar said...

ನಮ್ಮ ಮನೆ ಎದುರು ಒಂದು ಆರ್ಕುಟ್ ಜೋಡಿಗಳು - ಅಂತರ್ಜಾತೀನೆ - ಮದುವೆ ಆದವು. ಹುಡುಗ ಡಾಕ್ಟರ್, ಹುಡುಗಿ ಸಾಫ್ಟ್ ವೇರು,
ಇದೊಂದು ಬ್ಲಾಗ್ ಮದುವೆ - ಅಂತರ್ ಜಾಲದ ಮಹಿಮೆ
ಶುಭವಾಗಲಿ - ಈ ಮದುಮಕ್ಕಳಿಗೆ
-msh

Santhosh Rao said...

Dear Praksh Hegde..

Thank you very much..

Sad part is that you were not in the reception...

And thanks for all our blog friends for wishes...

We carried all your wishes to Kerala... :)

From
Santhosh & Chitra

akshata said...

ತುಂಬ ಸಂತೋಷ ಸರ್,ಹೊಸ ದಂಪತಿಗಳಿಗೆ ನನ್ನದೂ ಶುಭಾಶಯಗಳು.
ಅಕ್ಷತಾ.

ನನ್ ಮನೆ said...

ಬಲು ಅಪರೂಪ ಇಂಥ ಜೋಡಿ..

ಜೋಡಿ ಹಕ್ಕಿಗಳಿಗೆ ಶುಭಾಶಯ....

ಗಿರಿ said...

ನವಜೋಡಿಗೆ ಶುಭಾಶಯಗಳು...