Friday, February 26, 2010

ತಾಯಿ ಮಗು ಸೆಂಟಿಮೆಂಟು..! ಮರಳು .. ಸಿಮೆಂಟು.. ಕಾಂಕ್ರೀಟು...!

ಪ್ರತಿ ಮನೆ ಕಟ್ಟುವಾಗ..
ಇಂತಹದೊಂದು ಬದುಕು ಕಣ್ಣಿಗೆ  ಕಾಣುತ್ತದೆ...
ಕಾಡುತ್ತದೆ..

ಇಲ್ಲಿ ಕಷ್ಟವಿದೆ.. ಬವಣೆಯಿದೆ..
ಮೋಸವಿದೆ..
ಮಮತೆಯಿದೆ..

ಎಲ್ಲ ಇಲ್ಲದುದರಗಳ ನಡುವೆ...
ವಿಷಾದವಿದೆ..
ನಗುವೂ ಇದೆ...

ಈ ತಾಯಿಗೆ ...
ಎಲ್ಲಿರುತ್ತದೆ..ಈ ತಾಳ್ಮೆ...!!  ??
ಇಷ್ಟೊಂದು   ಮಮತೆ.. ವಾತ್ಸ್ಯಲ್ಲ...!!..??ಸುಡು ಬಿಸಿಲು.. ಕಾಂಕ್ರಿಟ್  ಕೆಲಸದ ಭರಾಟೆ.. ನಮ್ಮ ಬಗ್ಗೆ ಗಮನವೆಲ್ಲಿ...? 

ಅಮ್ಮಾ... ಹಸಿವಾಗಿದೆ...! ಬೇಗ ಬಾರಮ್ಮಾ... !!


ಆಡೋಣಾ...ನಾನು... ನೀನು...!!
 ಈ ಮರಳಲ್ಲಿ..
ಈ ಬಿಸಿಲಲ್ಲಿ...!!

ಅಮ್ಮಾ... ಯಾವಾಗ ಕೆಲಸ ಮುಗಿಯುತ್ತದಮ್ಮಾ...?

ಇದು ನನ್ನ  ಆಟ... ನನ್ನ ಪಾಠ.. !


ಈ ಭೂಮಿಯೇ ಹಾಸಿಗೆ..!
ಆಗಸವೇ ಹೊದಿಕೆ...!!
ಇದೆಂಥಹ  ಕೆಟ್ಟದಾದ...   ಕಹಿ ಜಗತ್ತು...!!  ??


ನಿನ್ನ ಜೊತೆ ನಾನೂ  ಬರ್ಲೇನೋ...??

ಮಗುವೆ...
ನಿನ್ನ ಹೂ ನಗೆ...
ಭರವಸೆ  ಎನ್ನ ಬಾಳಿಗೆ....ನನ್ನ ರಾಜ..! ನನ್ನ ಮುದ್ದು ಕಂದ...!

ಹಸಿವೆ ಯಾಗಿದೆಯಾ..? ಸ್ವಲ್ಪ  ಇರು  ..! ಈಗ ಉಟ ಕೊಡುತ್ತೇನೆ...!

ಮರಳು...
ಮರುಳು..
 ಈ ಬದುಕು..!
ಈ ಬಾಲ್ಯ... !

ಬುತ್ತಿ ಕೊಡುವೆನೆಂದ  ಅಮ್ಮ ಬರಲಿಲ್ಲ...!
ಕೆಲಸವಿನ್ನೂ ಮುಗಿದಿಲ್ಲ... !


ಮುದ್ದು ಕಂದನಿಗೆ ಮೊಲೆಯುಣಿಸಿ  ಬರುವೆ...
 ಸ್ವಲ್ಪ ಕಾಯುತ್ತಿರಾ...?

ಏನೂ ಹೇಳಿದ್ರೂ ಸುಮ್ಮನಿರ್ತಾ  ಇಲ್ಲ..
ಈ ತಂಗಿ..!!.
ಅಮ್ಮಾ  ಬೇಗ.. ಬಾರಮ್ಮಾ...!!

ಇದೇ.. ನಿನ್ನ  ಸುಪ್ಪತ್ತಿಗೆ...
ಮೆತ್ತನೆಯ ಹಾಸಿಗೆ... ಮಗುವೆ...!!


ಅಳ ಬೇಡಾ...
ಕಂದಾ  ಅಳ ಬೇಡಾ... !
ನಿನ್ನ ಅಳುವ ಗಮನಿಸುವವರು
ಯಾರೂ... ಇಲ್ಲಿಲ್ಲಾ...!

 ಅತ್ತೂ.. ಅತ್ತೂ..
ಬತ್ತಿ..
ಬರಿದಾಗದಿರಿ...
ಭಾವಗಳೇ....!

ಹಸಿವೆ.. 
ದುಃಖ... ಒತ್ತರಿಸಿದರೂ..
 ಬತ್ತುತ್ತಿದೆ .. ಕಣ್ಣಿರು......!

ಕಮರಿ...
ಕರಗಿ
 ಹೋಗದಿರಿ...
ಕಂದಮ್ಮಗಳೇ..
ನಿಮ್ಮ...
ಕನಸುಗಳ ಜೊತೆ......
ಕಣ್ಣಿರ ಧಾರೆಯಾಗಿ...!

ಅಮ್ಮಾ... ಯಾವಾಗ ಮುಗಿಯುತ್ತದಮ್ಮಾ  ಈ ಕೆಲಸ...?

ಬತ್ತಿದಾ... ಕಣ್ಣಿರಲು ಆಸೆಯಿದೆ.. ಇನ್ನೆಕೋ...?
ದೇಹಕೆ.. ಉಸಿರೇ.. ಸದಾ ಭಾರಾ...
ನೀನೆ..... ಭರವಸೆಯ ಆಧಾರಾ...!

 
ಉಪ್ಪರಿಗೆಯ ಸುಪ್ಪತ್ತಿಗೆ.... ಕಟ್ಟುತ್ತಿರುವೆ ಕಂದಾ...!


ಇದೂ.. ಒಂದು  ಬದುಕು...
ನನ್ನ ಕಂದನಿಗೂ
ಒಂದು ಬದುಕು ಕೊಡ ಬೇಕಿದೆ...
ಕನಸು... ಕಟ್ಟ ಬೇಕಿದೆ...

ತಾಯಿ ಎಂಬ ದೈವಕೆ..
ಬೇರಾರೂ ಸಾಟಿಯೇ...??...!!


ಹಾದಿ.. ಬೀದಿಯ ಬದುಕು...ಅಳ ಬೇಡ.. ಮಗುವೆ...!
ಎತ್ತಿ..
ಎದೆಗಾನಿಸಿ..
ಅಪ್ಪಿಕೊಳ್ಳಲು..  ಸಮಯವಿಲ್ಲ ...!!
ನಮಗೂ..
ಒಂದು..
ಬದುಕಿದೆ...
ಆಸೆಯಿದೆ...
ಕನಸಿದೆ...
ಅರಳುವ  ಭರವಸೆ  ಎಲ್ಲಿದೆ...?

ಇಷ್ಟೆಲ್ಲಾ...
ಕಷ್ಟಗಳ.. ನಡುವೆ..
ಮಗುವನ್ನೂ ಸಮಾಧಾನ ಪಡಿಸುತ್ತಾ..
ನಗುತ್ತ..
ಕನಸು ಕಟ್ಟು ವಿಯೆಲ್ಲ...!!

ಮ್ಹಾ... ತುಜ್ಹೆ  ಸಲಾಂ...!!!!

59 comments:

Ranjita said...

ಸೆಂಟಿಮೆಂಟು ನೋಡಿ ಖುಷಿಪಡಬೇಕೋ .. ಇಲ್ಲಾ.. ಭವಿಷ್ಯವಿಲ್ಲದ ಕಂದಮ್ಮಗಳ ನೋಡಿ ದುಃಖ ಪಡಬೇಕೋ ಗೊತ್ತಾಗ್ತಿಲ್ಲ ! .. ಪ್ರಕಾಶಣ್ಣ !

Ittigecement said...

ರಂಜಿತಾ...

ನಾವು ಬದುಕುವ..
ಈ ಪರಿಸರದಲ್ಲಿ..
ಇಂಥದೊಂದು..
ಜಗತ್ತಿದೆ...!!

ನಿಜ ಇದೆಲ್ಲ ನೋಡಿದ ಮೇಲೆ ವಿಷಾದ ಭಾವ ಆವರಿಸಿಬಿಡುತ್ತದೆ...

ಇಂಥಹ
ಕಷ್ಟಗಳ ನಡುವೆ..
ನಗುತ್ತ..
ಮಗುವನ್ನು ಸಮಾಧಾನ ಪಡಿಸುವ...

ಆ ತಾಯಿ ಹೃದಯಗಳಿಗೆ...

ಸಾವಿರಾರು ನಮಗಳು...!

ಥ್ಯಾಂಕ್ಸ್ ರಂಜಿತಾ....

Subrahmanya said...

ವಾಸ್ತವದ ಚಿತ್ರಗಳಿಗೆ ತಕ್ಕಂತಹ ಭಾವನೆಗಳನ್ನು ಕೊಟ್ಟಿದ್ದೀರಿ ಪ್ರಕಾಶಣ್ಣ. ತುಂಬಾ ಅರ್ಥಪೂರ್ಣವಾಗಿದೆ. ಧನ್ಯವಾದ

Jagadeesh Balehadda said...

ಒಳ್ಳೆಯ ಚಿತ್ರಗಳು.ಭಾವಪೂರ್ಣ ಬರಹ.
ಪ್ರಕಾಶಣ್ಣ ತುಜೆ ಸಲಾಂ.

ಸುಮ said...

ಇಂತಹ ದೃಶ್ಯಗಳು ಮನಕಲುತ್ತವೆ ಪ್ರಕಾಶಣ್ಣ . ತುಂಬಿದ ಬಸುರಿಯರು , ಎಳೇ ಬಾಳಂತಿಯರು , ತಮ್ಮ ಮಕ್ಕಳನ್ನು ಅಲ್ಲೇ ಬಿಟ್ಟು ಹೀಗೆ ಕೆಲಸ ಮಾಡುವುದನ್ನು ನೋಡಿದಾಗ ಆ ದೇವರು ಎಂಬುವವನೇನಾದರೋ ಇದ್ದರೆ ಆತ ನಿಜಕ್ಕೂ ಹಿಂಸಾವಿನೋದಿಯೇನೋ ಅನ್ನಿಸಿಬಿಡುತ್ತದೆ.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಪ್ರಕಾಶರೆ,ನಿಮ್ಮ ಚಿತ್ರಗಳು,ಭಾವಗಳು ನಮ್ಮನ್ನು ಬಹಳಷ್ಟು ಯೋಚಿಸುವ೦ತೆ ಮಾಡುತ್ತದೆ.ಬದುಕ ಕಟ್ಟುವ ಪರಿ ಬದುಕು ಮೆಟ್ಟುವ ಪರಿ....ಜೀವನ ಚಕ್ರ.ಈ ಸಿಮೆ೦ಟು ಮರಳಿನ ಮದ್ಯೆಅದೊ೦ದು ಬದುಕನ್ನು ತೆರೆದಿಟ್ಟೀದ್ದೀರಿ.ಹೇಳಿಕೊಳ್ಳಲಾಗದೆ ಭಾವಗಳು ನಮ್ಮಲ್ಲೇ ಉಳಿಯುವ೦ತೆ ಮಾಡಿದಿರಿ.

ಸೀತಾರಾಮ. ಕೆ. / SITARAM.K said...

ತಮ್ಮ ನೈಜ್ಯ ಚಿತ್ರಕಥಾಮಾಲಿಕೆ ಮನವನ್ನು ಕಲಕಿತು. ದುಡಿವ ಎಳೆಯ ಕ೦ದಮ್ಮಗಳ ಕಥೆ ಚಿತ್ರಗಳಲ್ಲಿ ಕಾವ್ಯವಾಗಿ ಮಿಡಿದಿದೆ. ಜೊತೆಗೆ ತಾಯಿಯ ಪ್ರ್‍ಈತಿ ಯಾವತ್ತಿಗೂ ಮಧುರ ಶಿರಿವ೦ತ-ಬಡವ ಭೇಧ ತೊರೆದು. ಆ ಬಡತನ ಮತ್ತು ಹಸಿವಿನಲ್ಲೂ ಮಕ್ಕಳು ತಾಯ೦ದಿರ ಪ್ರೀತಿ ಮತ್ತು ಅದರಲ್ಲಿ ಹೊ೦ದುವ ಆನ೦ದ ನೋಡಿ ಸ೦ತಸವಾಯಿತು. ಏಷ್ಟೋ ಅನಾಥ ಮಕ್ಕಳು - ಈ ತಯಿ ಪ್ರೀತಿಯಿ೦ದ ವ೦ಚಿತರು. ಅವರನ್ನು ನೋಡಿದಾಗ ಈ ಮಕ್ಕಳು ಪುಣ್ಯವ೦ತರೂ ಎನಿಸುತ್ತದೆ. ಆದರೇ ಒದು ಬರಹ, ಸೌಲಭ್ಯ, ಸೂರು, ಆಹಾರ ವ೦ಚಿತರು ಅನ್ನುವಾಗ ಮನ ಮರುಗತ್ತದೆ. ನಮ್ಮ ದೊರೆಗಳಿಗೆ ಕಣ್ಣು ತೆರೆಯಬೇಕು ಇನ್ನು.
ಲೇಖನಕ್ಕೆ ಧನ್ಯವಾದಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಚಿತ್ರಗಳೇ ಕತೆ ಹೇಳುತ್ತಿವೆ. ಸಾಲು ದೃಶ್ಯಗಳ ಮೆರವಣಿಗೆ ಮನದ ಮುಂದೆ. ಮನದೊಳವಿನಲ್ಲಿ ಆ ಮಕ್ಕಳು ಮರಳಾಡಿ ಕಲಕುತ್ತಿದ್ದಾರೆ ಮನವನ್ನು.

Unknown said...

ಶಿವರುದ್ರಪ್ಪನವರದೋ, ಕೆ.ಎಸ್.ನರಸಿಂಹಸ್ವಾಮಿಯವರದೋ ಸದ್ಯಕ್ಕೆ ಸ್ಪಷ್ಟವಾಗುತ್ತಿಲ್ಲ. ಒಂದು ಪದ್ಯವಿದೆ. ಇವರಿಗೆ ಬೇಕೆನ್ನಿಸುವುದಿಲ್ಲ ನಮಗೂ ಒಂದು ಮನೆ ಎಂದು. ನಾವು ನಿರ್ಮಾಣ ಹಂತದರಲ್ಲಿರುವ ಪ್ರತಿಯೊಂದು ಮನೆಯ ಮುಂದೆ ಹಾದುಹೋಗುವಾಗ ಕಾಣುವ ಸಾಮಾನ್ಯ ದೃಶ್ಯ ಇದು. ಅದು ನಿಮ್ಮ ಕಣ್ಣಿಗಂತೂ ನಿತ್ಯವೂ ಕಾಣುವಂತದ್ದೆ. ಆದರೆ ಅದನ್ನು ನೋಡಿ ದುಃಖ ಪಡಬೇಕೋ ಖುಷಿಪಡಬೇಕೋ ತಿಳಿಯದಂತಹ ಪರಿಸ್ಥಿತಿ. ಆದರೆ ಸಂವೇದನಾಶೀಲ ಬರಹಗಾರ ಕಲಾವಿದನಿಗೆ ಒಂದು ಕ್ಷಣವಾದರೂ ಅದು ಕಾಡದೆ ಬಿಡುವುದಿಲ್ಲ.

PARAANJAPE K.N. said...

ಸಿಮೆ೦ಟು ಮರಳಿನ ನಡುವೆ ಜೀವ ಸವೆಸುವ, ಭವ್ಯ ಮಹಲು ನಿರ್ಮಾಣದಲ್ಲಿ ಬೆವರು ಸುರಿಸಿ ಬಸವಳಿಯುವ ಜನರ, ಅರಳಬೇಕಾದ ಸಮಯದಲ್ಲೇ ಬಾಡಿ ಹೋಗುವವರನ್ನು ಯಥಾವತ್ ಸೆರೆ ಹಿಡಿದಿದ್ದೀರಿ. ಹೌದು, ಇದು ನಾವೆಲ್ಲಾ ನಿತ್ಯ ನೋಡುವ ಜಗತ್ತು, ಆದರೂ ಇ೦ತಹ ಕಷ್ಟಗಳ ನಡುವೆಯೂ "ಅಮ್ಮ" ಅದು ಹೇಗೆ ತನ್ನ ಮಕ್ಕಳಿಗೆ ಪ್ರೀತಿಯ ಧಾರೆ ಎರೆಯುತ್ತಾಳೆ, ಮೊಲೆಯೂಡಿಸುತ್ತಾಳೆ, ಪ್ರೀತಿಯ ರಸಧಾರೆ ಹರಿಸುತ್ತಾಳೆ. ಅಲ್ಲವೇ ? ಆಕೆಯ ಮನದಾಳದಲ್ಲಿ ಅದೆಷ್ಟು ನೋವು ಮಡುಗಟ್ಟಿದೆಯೋ ?

Me, Myself & I said...

ನಿತ್ಯ ಸತ್ಯ.

ಆದರೆ ಈಗ ಕೃಷಿಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ ಅಂತ ಕೇಳಿದ್ದೀನಿ. ನಿಮ್ಮ ಕೆಲಸ (ಮನೆ-ಕಟ್ಟುವ)ಗಳಿಗೆ ಸಹ ಕಾರ್ಮಿಕರನ್ನ ಹೊಂದಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎಂದೆನಿಸಿತ್ತದೆ.

ಎಲ್ಲದಕ್ಕೂ ಯತೇಚ್ಚವಾಗಿ ಯಂತ್ರಗಳನ್ನ ಅಳವಡಿಸಿಕೊಳ್ಳುವ ಅಗತ್ಯತೆ ನಮ್ಮಲ್ಲಿ ಈಗ ಅನಿವಾರ್ಯವಾಗುತ್ತ್ಇದೆ. ಕಾರ್ಮಿಕರ ಕೊರತೆ ಈಗ ಹಿಂದೆಂದಿಗಿಂತಲೂ ಹೆಚ್ಚು ಗಂಭೀರ ಸಮಸ್ಯೆ ಎನಿಸುತ್ತದೆ.

ಬಿಸಿಲ ಹನಿ said...

ಮನೆ ಕಟ್ಟಿಕೊಡುವವರ ನೋವಿನ ಚಿತ್ರಗಳು ಮನವನ್ನು ತಾಕುತ್ತವೆ. ಇದು ಬದುಕಿನ ವಿಪರ್ಯಾಸ!

Shashi jois said...

ಪ್ರಕಾಶ್ ,
ನಿಮ್ಮ ತಾಯಿ -ಮಗುವಿನ ಸೆಂಟಿಮೆಂಟ್ ನ ಲೇಖನ ನನ್ನ ಹೃದಯವನ್ನೇ ಕಲುಕಿಬಿಟ್ಟಿತು.
ನಿಮ್ಮ ಮಾತನಾಡುವ ಚಿತ್ರಗಳನ್ನು ನೋಡಿ ತುಂಬಾ ವೇದನೆ ಆಯಿತು.
ತಾಯಿಯ ಮಮತೆ,ಪ್ರೀತಿಗೆ ,ವಾತ್ಸ್ತಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಬಿಡಿ
ಸಿಮೆಂಟು ,ಕಲ್ಲು,ಮರಳಿನೋಟ್ಟಿಗೆ ಆಡುವಾಗ ಆ ತಾಯಿಗೆ ಎಷ್ಟು ನೋವಾಗಬಹುದಲ್ವ .
ನಿಮ್ಮ ಈ ಲೇಖನಕ್ಕೂ ,ನಿಮಗೂ ದೊಡ್ಡ ಸಲಾಂ .

ಕ್ಷಣ... ಚಿಂತನೆ... said...

prakashanna, ee sentimentina chitragalannu noduttiddante, tumbaa besara aayitu. aadare, jeevanadalli ivella maamoolu. avru itararige maneya kattuttaaraadaroo, tamam makkala bhavishyakke??

chitragalu bhaavanaatmakavaagive.

chandru

Unknown said...

Prakashanna.. This is how the poor people working in such a bad work environment.. what the Govt. people are doing.. they are deaf n dumb..

why they can't make a rule for building contractor to give at least basic woker benefits to those workers.. only by showing sympathy, will not change their problems.. sugesion, taking action somehow we can minimise their problem.. at least you talk in fav. of these worker in your contractor association ..meeting ..

Guruprasad said...

ಪ್ರಕಾಶಣ್ಣ ,
ಮನ ಕಲಕುವ ಲೇಖನ,,,, ಅ ತಾಯಿಯ ಬಗ್ಗೆ , ಸುಡು ಬಿಸಿಲ ಬೇಗೆಯಲಿ ಬೇಯುವ ಮಕ್ಕಳ ಬಗ್ಗೆ... ಯಾರ ಬಗ್ಗೆ ಯೋಚಿಸಬೇಕು....ಇದೇನ ಜೀವನ.....ಕಷ್ಟ ಕೋಟಲೆಗಳ ನಡುವೆ ಒಂದು ಪಯಣ.......

Guru

sunaath said...

ಪ್ರಕಾಶ,
ಕ್ರೂರ ವಾಸ್ತವದ ಚಿತ್ರಗಳನ್ನು ಸೆರೆ ಹಿಡಿದು, ಜೊತೆಗೇ ಬದುಕಿನ ಕನಸುಗಳನ್ನು ಹೆಣೆದು ತೋರಿಸಿದ್ದೀರಿ. ಧನ್ಯವಾದಗಳು.

ಮನದಾಳದಿಂದ............ said...

ಮನ ಕಲಕುವ ಲೇಖನ ಹಾಗೂ ಚಿತ್ರಗಳು. ಉಳ್ಳವರ ವಸತಿಗಾಗಿ ದಿನಾಲೂ ದುಡಿಯುವ ಈ ಜನರು ಬಹುತೇಕ ನಿರ್ಗತಿಕರು! ಎಂತಹ ವಿಪರ್ಯಾಸ ಅಲ್ವಾ ಪ್ರಕಾಶಣ್ಣ. ತಮ್ಮ ಆಸೆ-ಆಕಾಂಕ್ಷೆಗಳನ್ನು ಮನದಲ್ಲೇ ಬಚ್ಚಿಟ್ಟುಕೊಂಡು ಜೀವಿಸಬೇಕಾದಂತ ಪರಿಸ್ತಿತಿ! ಆದರೆ ಬಡತನದಲ್ಲಿ ಪ್ರೀತಿ ಮಮತೆಗಳಿಗೆಲ್ಲಿ ಕೊರತೆ, ತಾಯಿಯ ಮಮತೆಗೆ ಸಾಟಿ ಯಾರು?

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಫೋಟೋ ದಲ್ಲೇ ಜೀವನದ ಅನುಭವ ಹೇಳಿದ್ದಿರಿ
ಬದುಕು ಹೇಗಿರುತ್ತದೆ ಎಂಬುದನ್ನು ನೋಡಲು ಇಂಥವರ ಬದುಕಿನ ಒಳಗೆ ಹೋಗಬೇಕು
ಐಶಾರಾಮಿ ಬಂಗಲೆಯಲ್ಲಿ ಕುಳಿತವರಿಗೆ ಕಷ್ಟ ಅರ್ಥ ಆಗುವುದಿಲ್ಲ,
ನಿಮ್ಮ ಬರಹ ಮನ ಕಲಕಿತು

ಓ ಮನಸೇ, ನೀನೇಕೆ ಹೀಗೆ...? said...

ಅಬ್ಬ..!! ...ಎಂಥ ಹೃದಯ ಸ್ಪರ್ಶಿ ಚಿತ್ರಗಳು ಪ್ರಕಾಶಣ್ಣ.. ಮನಸ್ಸು ಮೂಕವಾಗಿಬಿಡುತ್ತದೆ ಇಂಥ ದೃಶ್ಯಗಳನ್ನು ನೋಡಿದಾಗ..
ಎಸ್ಟಿದ್ದರೂ ಇನ್ನೂ ಬೇಕೆನ್ನುವ ಮನಸ್ಸು... ಆ ತಾಯಿಯರನ್ನು, ಆ ಕಂದಮ್ಮಗಳನ್ನು ನೋಡಿ ಪಾಠ ಕಲಿಯಬೇಕು ..

Anonymous said...

ನಿಜವಾಗಿಯೂ ಎಂಥವರ ಮನಸ್ಸನ್ನು ಕದಡುವ ದೃಶ್ಯಗಳು ಮತ್ತು ಆ ಚಿತ್ರಣದ ಹಿಂದಿನ ದಾರುಣ ಬದುಕನ್ನು ನಿಮ್ಮ ಲೇಖನ ತೋರುತ್ತಿದೆ. ಅಲ್ಲಿ ಮೌನವೇ ಎಲ್ಲವನ್ನು ಮಾತಾಡುತ್ತೆ. ಅವರ ಬದುಕು ಅಲ್ಲಿ ಇಷ್ಟು ಬೇಕು ಅಷ್ಟು ಸಾಕು ಅನ್ನೋದೇ ಇಲ್ಲ, ಇರುವುದರಲ್ಲೇ ಅವ್ರು ಎಲ್ಲವನ್ನು ಕಾಣುತ್ತ ಸಂತೋಷ, ದುಖ ಎರಡರ ಮುಖವನ್ನು ನೋಡುತ್ತಾರೆ. ಎಲ್ಲ ಸೌಕರ್ಯಗಳು ಹೊಂದಿರುವ ಸಿರಿವಂತರ ಮಹಲುಗಳನ್ನು ನಿರ್ಮಿಸಲು ಇವರು ದಿನವಿಡೀ ತಮ್ಮ ಸಂತೋಷ, ಆಗು ಹೋಗುಗಳನ್ನು ಬಿಟ್ಟು ಪ್ರಾಮಾಣಿಕವಾಗಿ ದುಡಿಯುತ್ತಾರೆ ಎಂಥ ವಿಧಿ ವಿಲಸ ಅಲ್ವೇ ! ತಮಗಿರುವ ಆಸೆ ಆಕಾಂಕ್ಷೆಗಳನ್ನು ಮನದಲ್ಲಿಯೇ ಸಮಾಧಿ ಮಾಡಿಕೊಂಡು ತಮ್ಮ ಆಗಿನ ಜೀವನದ ನಿಲುವನ್ನು ಅರೆತು ಜೀವಿಸಬೇಕಾದಂಥ ದುಸ್ತಿತಿ. ಇಂಥವರ ಬದುಕು ಸ್ಥಿತಿವಂತರಿಗೆ ಪಾಠ - ಹೇಗೆಂದರೆ ಅವರ ಬದುಕಿನಲ್ಲಿ ಪ್ರೀತಿನೆ ಆ ದೇವರು ಕೊಟ್ಟ ವರ ಅಲ್ಲಿ ಸ್ವಾರ್ಥ, ಅನುಮಾನ, ಪ್ರತಿಷ್ಠೆಗೆ ಸ್ಥಾನ ಇರೋಲ್ಲ, ಅಲ್ಲಿ ತಾಯಿಯ ಮಮತೆಗೆ ಬೆಳೆಕತ್ತಲು ಸಾಧ್ಯವಿಲ್ಲ. ಹಲವರು ಸ್ಥಿತಿವಂತರು ಆ ಮಾತೃ ಮೂರ್ತಿಗಳನ್ನು ನೋಡಿ ಕಲಿಯಬೇಕಾದು ಬಹಳಷ್ಟಿದೆ. ತಾಯಿ ಪ್ರೀತಿಯ ಮುಂದೆ ದೇವರು ಸಹ ಮೂಕ.

ಚಿತ್ರಾ said...

ಪ್ರಕಾಶಣ್ಣ ,
ಯಾರದೋ ಬಂಗಲೆಗಾಗಿ ಸಿಮೆಂಟು , ಇಟ್ಟಿಗೆ ಹೊರುವ ಇವರಿಗೆ ತಮ್ಮ ಗುಡಿಸಲಿಗಾಗಿ ಮುಷ್ಠಿ ಮಣ್ಣು ತರುವುದೂ ಕಷ್ಟ ಎಂಬ ಯೋಚನೆಯೇ ಸಂಕಟ ತರುತ್ತದೆ.
ಬಿಸಿಲು ಮಳೆ ಚಳಿ ಎನ್ನದೆ , ಮಣ್ಣು , ಮರಳು , ಧೂಳಿನಲ್ಲಿ ಆಡುವ ಪುಟ್ಟ ಪುಟ್ಟ ಕಂದಮ್ಮಗಳ ಭವಿಷ್ಯಕ್ಕಾಗಿ ನಾವೇನು ಮಾಡಬಲ್ಲೆವು ? ಅದೆಷ್ಟೋ ಸಲ , ಕರ್ತವ್ಯದ ಕರೆಗಾಗಿ , ಕರುಳಿನ ಕೂಗನ್ನು ಕಡೆಗನಿಸಬೇಕಾದಾಗ ,ಆ ತಾಯಿ ಮನದಲ್ಲೇ ಎಷ್ಟು ಕಣ್ಣೀರು ಕರೆದಿರಬಹುದು ?
ಪ್ರಕಾಶಣ್ಣ, ಇಂಗ್ಲಿಷ್ ನಲ್ಲಿ ಒಂದು ಮಾತಿದೆ
" ignorance is bliss " ಅಂತ.
ಇಷ್ಟು ದಿನ ಈ ಬಗ್ಗೆ ಹೆಚ್ಚು ಯೋಚಿಸದೆ ಆರಾಮಾಗಿ ಇದ್ದ ನಮ್ಮ ಕಣ್ಣೆದುರು ಈ ಚಿತ್ರಗಳನ್ನಿತ್ತು ನಮ್ಮ ನೆಮ್ಮದಿಯನ್ನು ಕಲಕಿ ಬಿಟ್ಟಿದ್ದೀರಿ .

nenapina sanchy inda said...

visited ur blog after a very long time.
nice pictures, show how soft hearted you are.last phOTo tumbaa ishTavaaytu. Another aspect of our life.
take care
:-)
malathi S

Prabhuraj Moogi said...

ಪ್ರಕಾಶ್ ಸರ್,
ನಮ್ಮ ಕಡೆ ಒಂದು ಗಾದೆ ಹೇಳ್ತಾರೆ "ಕೋಣಿ ಕೂಸು ಕೊಳೀತು, ಓಣಿ ಕೂಸಿ ಬೇಳೀತು" ಅಂತ ಗೊತ್ತಿರಬಹುದು... ಅಂದ್ರೆ ಕೋಣೇಯಲ್ಲೆ ಉಳಿದು ಹೊರಗೆ ಆಟ ಪಾಟ ಆಡದ ಮಗು ಹಾಗೇ ಉಳಿಯಿತು, ಹೊರಗೆ ರಸ್ತೆಗೆ ಆಟಕ್ಕಿಳಿದ ಮಗು ಬೆಳೆಯಿತು ಅಂತ... ಹೀಗೇ ಈ ಮಕ್ಕಳೇ ಸ್ವತಂತ್ರವಾಗಿ ದಷ್ಟಪುಷ್ಟವಾಗಿ ಬೆಳೆದು ನಿಂತು ಬಿಡ್ತವೆ...

AntharangadaMaathugalu said...

ಪ್ರಕಾಶ್ ಸಾರ್...
ಚಿತ್ರಗಳೂ, ಹೊಂದುವ ಅಕ್ಷರ ಸಾಲುಗಳೂ... ಎರಡೂ ಹೃದಯಸ್ಮರ್ಶೀಯವಾಗಿವೆ.....

ದಿನಕರ ಮೊಗೇರ said...

ಪ್ರಕಾಶಣ್ಣ,
ಫೋಟೋ ಮನಕಲಕಿದವು..... ನಾನೂ ಕೆಲಸ ಮಾಡುವಲ್ಲಿ ಇಂಥಹ ದ್ರಶ್ಯ ಕಾಣಸಿಗುತ್ತವೆ...... ಕೆಲವೊಮ್ಮೆ ' ಮಗುಗೆ ಹಾಲು ಕುಡಿಸಿ ಬರುತ್ತೇನೆ ಸರ್' ಎಂದವರಿಗೆಲ್ಲಾ ಹೋಗಲು ಬಿಡುತ್ತಿದ್ದೆ..... ಇದನ್ನೇ ಕೆಲವು ಮದುವೆ ಆಗದವರು ಸಹ ಇದರ ಲಾಭ ಪಡೆದು ಹೋಗುತ್ತಿದ್ದರು..... ನಿನ್ನ ಮದುವೆಯಾಗಿದೆಯಾ ಅಂತ ಕೇಳುವ ಹಾಗಿರಲಿಲ್ಲವಲ್ಲ..... 'ಮಗು ಇದ್ದರೆ ನೀವು ಕೆಲಸಕ್ಕೆ ಬರಬಾರದು, ಮನೆಯಲ್ಲೇ ಕುಳಿತಿರಬೇಕು ' ಎಂದು ನಮ್ಮ ಮ್ಯಾನೇಜರ್ ಹೇಳುತ್ತಿದ್ದರು..... ನಾನು ಮಾತ್ರ ಮ್ಯಾನೇಜರ್ ಹೋದ ನಂತರ ಅವರನ್ನೆಲ್ಲ ಕೆಲಸಕ್ಕೆ ಕರೆಯುತ್ತಿದ್ದೆ..... ಅಮ್ಮ ದುಡಿದರೆ ಮಾತ್ರ ಮಗುವಿಗೆ ತುತ್ತು ಅಂತ ನಮ್ಮ ಮ್ಯಾನೇಜರ್ ಗೆ ಗೊತ್ತಿರಲಿಲ್ಲ..... ಉತ್ತಮ ಫೋಟೋಗಾರಿಕೆ ಪ್ರಕಾಶಣ್ಣ..... ಇಷ್ಟು ಒಳ್ಳೆ ವಿಷಯ ಆರಿಸಿ, ನಮಗೆಲ್ಲಾ ದರ್ಶನ ಮಾಡಿಸಿದ ನಿಮಗೆ ನನ್ನದೊಂದುಸಲಾಂ.....

ಸವಿಗನಸು said...

ಪ್ರಕಾಶಣ್ಣ,
ನಿಮ್ಮ ಚಿತ್ರಗಳು ಹೃದಯವನ್ನೇ ಕಲುಕಿತು....
ತಾಯಿಯ ವಾತ್ಸಲ್ಯ ಅಂತದ್ದು .....
ಒಂದು ಸುಂದರ ಮನೆ ಹಿಂದೆ ಎಷ್ಟೊಂದು ಜನರ ಪರಿಶ್ರಮ ಅಲ್ವ.....

umesh desai said...

ಹೆಗಡೇಜಿ ಚಿತ್ರ ಮನ ಕಲಕುತ್ತವೆ ಕರುಳಕುಡಿಯ ನಾಳೆ ಬೆಳಗಲು ಇಂದು ಬೇಯುತ್ತಿರುವ ತಾಯಿಗೆ ಸಲಾಮ್....!

ಮನಸು said...

oLLe chitragaLannu namma munde ittideeri thnq.

Ittigecement said...

ಸುಬ್ರಮಣ್ಯ...

ದೈಹಿಕವಾಗಿ.. ಮಾನಸಿಕವಾಗಿ ಆಯಾಸ ಹೊಂದುವ ಈ ತಾಯಿ...
ಎಷ್ಟೇ ಕಷ್ಟವಿದ್ದರೂ..
ತನ್ನ ಮಗುವನ್ನು ಮಾತ್ರ ಮರೆಯುವದಿಲ್ಲ..

ಬೆಳಿಗ್ಗೆ ಏಳುಗಂಟೆಗೆ ಕಾಂಕ್ರೀಟ್ ಕೆಲಸ ಶುರುವಾಗುತ್ತದೆ...

ಬೆಳಗಿನ ತಿಂಡಿ ಮಾಡಿ..
ಮಧ್ಯಾಹ್ನದ ಬುತ್ತಿಯನ್ನೂ ಕಟ್ಟಿಕೊಂಡು ...
ಮಗುವನ್ನೂ ನೋಡಿಕೊಳ್ಳುತ್ತ..

ಕೆಲಸ ಮಾಡ ಬೇಕಾಗುತ್ತದೆ..

ಇಲ್ಲಿ ಕಾಂಕ್ರೀಟ್ ಕೆಲಸ ಮುಗಿಸಿ..

ರಾತ್ರಿ ಅಡುಗೆ ಕೆಲಸವೂ ಈ ತಾಯಿಯೇ ಮಾಡ ಬೇಕು...

ಕುಡಿತತ ಗಂಡಂದಿರು... ಇಲ್ಲಿ ಮಾಮೂಲಿ...

ಅದಕ್ಕೇ ಹೇಳಿದ್ದು..

ಮ್ಹಾ... ತುಝೆ... ಸಲಾಮ್.. !!!!!!!!!!!!!!!!!!

ಇದು ಇವರ ಒಂದು ಮುಖ..

ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ಮನಮುಕ್ತಾ said...

ವಾಸ್ತವದ ಕಟು ಸತ್ಯದ ದರ್ಶನ..ಚಿತ್ರಗಳನ್ನು ನೋಡಿ ಮನ ಕಲಕುತ್ತದೆ.ಕೆಲವೊಮ್ಮೆ ಈ ಜಗತ್ತು ಜೀವನ ಎಲ್ಲ ಏನು ಅನ್ನೊ ಪ್ರಶ್ನೆ ಕಾಡುತ್ತದೆ.
ಭಾವನಾತ್ಮಕ ಚಿತ್ರ ಲೇಖನ ..

Ittigecement said...

ಜಗದೀಶ್...

ಥ್ಯಾಂಕ್ಸ್ !

ಇಲ್ಲಿ ಕೇವಲ ಒಂದು ಮುಖ ಮಾತ್ರ ಕಾಣಿಸುತ್ತಿದೆ...
ಇನ್ನೂ ಹಲವಾರು ಮುಖಗಳಿವೆ...

ಎಲ್ಲವನ್ನೂ ನಿಧಾನವಾಗಿ ತಿಳಿಸುವೆ...

ಏನೇ ಆದರೂ...
ಆ ತಾಯಿಗೆ ನಮ್ಮ ಸಲಾಮ್ ಸಲ್ಲಿಸಲೇ ಬೇಕು....

pavana m hegde said...

mama hosa story dina nodatha adre yaru eestu gamanstwille

Ittigecement said...

ಸುಮ....

ದೈಹಿಕವಾಗಿ...
ಮಾನಸಿಕವಾಗಿ ಆಯಾಸ ಹೊಂದಿದರೂ...
ಕುಡಿತದ ಗಂಡನ ಉಪಟಳ ಸಹಿಸುತ್ತ...

ತನ್ನೆಲ್ಲ ಪ್ರೇಮವನ್ನು.., ವಾತ್ಸ್ಯಲ್ಲವನ್ನು..

ಆ ಕಂದಮ್ಮನಿಗೆ ಧಾರೆಯೆರೆಯುವ ..

ಆ ತಾಯಿ ಹೃದಯಕ್ಕೆ ನಮ್ಮೆಲ್ಲರ ನಮನ ಸಲ್ಲಿಸೋಣ ಅಲ್ಲವೆ..?

ಅಂಥಹ ಬಡತನ..
ಕಷ್ಟದಲ್ಲೂ...
ಉತ್ಸಾಹ ಕಾಣುವ "ವಿಷಯ" ಇದೆ ಅಂತಾಯಿತಲ್ಲವೆ?

ಸಂತೋಷಕ್ಕೆ ಹಣವೊಂದೇ ಅಲ್ಲ ಈ ಬದುಕಿನಲ್ಲಿ ಅಲ್ಲವೆ..?

ಧನ್ಯವಾದಗಳು ಸುಮಾ...

ದೀಪಸ್ಮಿತಾ said...

ಪ್ರಕಾಶಣ್ಣ, ಚಿತ್ರಗಳು ಹೃದಯಸ್ಪರ್ಶಿಯಾಗಿವೆ. ನನ್ನ ಬ್ಲಾಗಿನಲ್ಲೂ ಮೂರು ಚಿತ್ರಗಳಿವೆ, ಇದೇ ಥರ - http://ini-dani.blogspot.com/2010/02/blog-post.html#links. ಇದು ಕೂಡಾ ಕಟ್ಟಡ ಕಾರ್ಮಿಕರ ಮನೆಯದ್ದೆ

Unknown said...

Good writing.. Felt sad by seeing those pictures

* ನಮನ * said...

ನಿಜ ಪ್ರಕಾಶ್,ಕೆಲವರಿಗೆ ಅಬ್ಬಾ ಅನಿಸಿದ್ರು ನಮ್ಗೆ ಸಾಮಾನ್ಯ ಅನಿಸುತ್ತೆ,ದಿನಾಲು ಇಂತಹ ದ್ರಶ್ಯ ನೋಡಿ ನೋಡಿ ಅನಿವಾರ್ಯವೆನೊ ಅನಿಸ್ತೆದೆ

ಮೌನಿ said...

ಪ್ರಕಾಶಣ್ಣಾ...
ನಿನ್ನ ವ್ಯವಹಾರದ ಬದುಕಿನಲ್ಲಿ ಇದೆಲ್ಲಾ ದಿನನಿತ್ಯ ನೋಡುವ ಚಿತ್ರಗಳಾದರೂ,ನಿನ್ನನ್ನೂ ಒಂದರೆಘಳಿಗೆ ಹಿಡಿದು ನಿಲ್ಲಿಸಿತು ಎಂತಾದರೆ ಇನ್ನು ನಮ್ಮ ಪಾಡೇನು? ಮಮತೆಯ ನೆರಳಿರುವ ಇವರ ಪಾಡೇ ಹೀಗೆ ಅಂತಾದರೆ.....ತಾಯ ವಂಚಿತ ಕಂದಮ್ಮಗಳ ಬವಣೆ........?

ಗುರು.

ಅವಿನಾಶ್ ಹೆಗ್ಡೆ said...

ಕಟ್ಟಡ ಕಾರ್ಮಿಕರ ಬದುಕೆ ಅ೦ತದ್ದು, ಸಾವಿರಾರು ಜನರಿಗೆ ನೆಲೆ ಕಟ್ಟುವ ಇವರು, ತಮ್ಮದೊ೦ದು ಸ್ವ೦ತ ನೆಲೆ ಕಟ್ಟುಕೊಳ್ಳದ ಅಭಾಗ್ಯರು. ಇ೦ದು ಇಲ್ಲಿ, ನಾಳೆ ಇನ್ನೆಲೊ ಎ೦ದು ಜ೦ಗಮರ೦ತೆ ಬದುಕುವ ಇವರ ಮಕ್ಕಳು ಶಿಕ್ಷಣದಿ೦ದ ವ೦ಚಿತರಾಗುವ ಸಾಧ್ಯತೆಯೆ ಹೆಚ್ಚು......
ಬಳ್ಳಾರಿಯ ಅಪಾರ್ಟ್ ಮೆ೦ಟ್ ಅಡಿಯಲ್ಲಿ ಉಸಿರುಗಟ್ಟಿ ಸತ್ತ ಜೀವಗಳು ಇವರಿಗಿ೦ತ ಭಿನ್ನವಲ್ಲ.. ತಮ್ಮದಲ್ಲದ ತಪ್ಪಿಗೆ ನಿರಾಕಾರಣವಾಗಿ ಪ್ರಾಣ ತೆತ್ತ ಅವರ ಬದುಕಿಗೆ ಬೆಲೆ ಇರಲ್ಲಿಲ್ಲವೆ...? ಈ ಚಿತ್ರಗಳನ್ನು ನೋಡುತ್ತಿದ್ದರೆ ನೆನಪಾಗುವುದು ಆ ಜೀವಗಳೆ
ಆದರು ಬದುಕು ಕಟ್ಟುವ ಅವರ ಛಲಕ್ಕೆ ಸಲಾಮ್

Kishan said...

heart breaking photos, depicting the reality. Great photos and fitting captions.

Ittigecement said...

ಜಗದೀಶ್...

ಕಾಂಕ್ರೀಟ್ ಕೆಲಸ ನಡೆಯುವಾಗ ಇವೆಲ್ಲ ಸಾಮಾನ್ಯ ದೃಶ್ಯಗಳು..
ನಾನು ಮುಂಬೈಯಿನಲ್ಲಿರುವಾಗಲೂ ಇವೆಲ್ಲ ಸಾಮಾನ್ಯವಾಗಿತ್ತು..
ಅಲ್ಲಿಯೂ..
ನಮ್ಮ ಗುಲ್ಬರ್ಗಾದ "ಯಲಬುರ್ಗಿ" ಜನ ಕಾಂಕ್ರೀಟ್" ಹಾಕಲು ಬರುತ್ತಿದ್ದರು..

ಬಹಳ ಕಷ್ಟ ಜೀವಿಗಳು ಇವರು...

ಧನ್ಯವಾದಗಳು..

Ittigecement said...

ಸುಮಾ..

ನಿಜ...
ಆ ಕಂದಮ್ಮಗಳನ್ನು ನೋಡುತ್ತಿದ್ದರೆ ದೇವರ ಇರುವಿಕೆಯ ಬಗೆಗೆ ಸಂಶಯ ಬಂದು ಬಿಡುತ್ತದೆ....

ಆದರೆ...

ಆ ತಾಯಿಯನ್ನು ನೋಡಿದಾಗ ದೇವರಿದ್ದಾನೆ ಅಂತ ಅನ್ನಿಸುತ್ತದೆ....

ಅಲ್ಲವಾ...?

ಅಂಥಹ ಕಿತ್ತು ತಿನ್ನುವ ಬಡತನದಲ್ಲೂ "ಕೆಟ್ಟ" ತಾಯಿ ಹುಟ್ಟಿಲ್ಲವಲ್ಲ...!!!

Ittigecement said...

ಕುಸು ಮಲಿಯಾಲ.. ( ಹೆಸರು ತಪ್ಪಿದ್ದರೆ ಕ್ಷಮಿಸಿ)

ನನ್ನ ಬ್ಲಾಗಿಗೆ ಸ್ವಾಗತ...

ನನ್ನದೊಂದು ಬಲವಾದ ನಂಬಿಕೆಯಿದೆ...
ಸುಖ , ಸಂತೋಷ ಪಡಲಿಕ್ಕೆ..
ನಗಲಿಕ್ಕೆ..
ಬೇರೆ ಏನೂ ಬೇಡ...

ಒಂದು ಒಳ್ಳೆಯ "ಮನಸ್ಥಿತಿ.." ಇದ್ದರೆ ಸಾಕು...

ಎಂಥಹ ಬಡತನದಲ್ಲೂ ನಗ ಬಹದು..
ಕಷ್ಟವಿದ್ದರೂ.. ಸಂತಸದಿಂದಿರ ಬಹುದು..

ಮನಸ್ಸಿರಬೇಕು.. ಅಲ್ಲವಾ..?

ಧನ್ಯವಾದಗಳು...

Ittigecement said...

ಸೀತಾರಾಮ್ ಸರ್...

ಆ ಮಕ್ಕಳನ್ನು ನೋಡಿದಾಗ ನಮ್ಮ ಮಕ್ಕಳ ನೆನಪಾಗಿಬಿಡುತ್ತದೆ...

ನಮ್ಮ ಸರ್ಕಾದವರು ಅವರಿಗಾಗಿ "ಮೊಬೈಲ್ ಸ್ಕೂಲ್" ಮಾಡಿದ್ದಾರೆ..
ಅವರು ಕೆಲಸ ಮಾಡುವ ಜಾಗಕ್ಕೆ ಹೋಗಿ ಅಂಥಹ ಮಕ್ಕಳಿಗೆ ಓದು ಕಲಿಸುತ್ತಾರೆ...

ಆದರೆ ಏನು ಮಾಡೋಣ ಹೇಳಿ...

" ಸರ್ಕಾರಿ ಕೆಲಸ...
ದೇವರ ಕೆಲಸ...!!!!!!!!!!"

Ittigecement said...

ಶಾಂತಲಾ...

ಸುಡು ಬಿಸಿಲಿನ..
ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯದಲ್ಲಿ..
ಕೆಂಡದಂತೆ ಜಾಗದಲ್ಲಿ..
ಆ ಜಲ್ಲಿಗಳ ಮೇಲೆ..

ಆ ಮಕ್ಕಳ ಆಟ.. ಅಳು ಎಲ್ಲವೂ...!

ಮನಸ್ಸಿಗೆ ಬಹಳ ಕಷ್ಟವಾಗುತ್ತದೆ...


ಬಹಳ ದಿನಗಳ ನಂತರ ಬ್ಲಾಗಿಗೆ ಬಂದಿದ್ದು ಖುಷಿಯಾಯಿತು...
ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸತ್ಯನಾರಾಯಣ ಸರ್...

ನನ್ನ ದಿನ ನಿತ್ಯದ ಕೆಲಸ ಅಂಥಹ ಜನಗಳ ನಡುವೆ...
ಅವರೊಡನೆ.. ಜಗಳ ಮಾಡುತ್ತೇನೆ..
ಕೂಗುತ್ತೇನೆ...

ಅದಕ್ಕಾಗಿ ಪಶ್ಚಾತಾಪವೂ ಆಗುತ್ತದೆ...

ಇದೇ ಜೀವನ.. ಇದುವೇ.. ಜೀವನ... ಅಲ್ಲವಾ..?

Ittigecement said...

ಪರಾಂಜಪೆಯವರೆ...

ಅಂಥಹ ಕಿತ್ತು ತಿನ್ನುವ ಬಡತನದಲ್ಲೂ...
ಆ ತಾಯಿಯ..
ಮಮತೆ..
ವಾತ್ಸ್ಯಲ್ಲ.. ಮನ ತಟ್ಟುತ್ತದೆ..

ಅದು ಪ್ರಕೃತಿ ಸಹಜ ಕ್ರಿಯೆ ಅಂತ
ನಿರ್ಭಾವುಕರು ಹೇಳ ಬಹುದೇನೋ...

ಆದರೂ..

"ಆ ತಾಯಿಗೊಂದು ಸಲಾಮ್.."

Ittigecement said...

ಲೋದ್ಯಾಶಿಯವರೆ...

ಕೂಲಿ ಕಾರ್ಮಿಕರ ಸಮಸ್ಯೆ ನಮ್ಮಲ್ಲೂ ಬಹಳ ಇದೆ...

ಅವರ ಇನ್ನೊಂದು ಮುಖಗಳೂ ಇವೆ...

ಆದರೂ..
ಅವರ ಕಷ್ಟದ ಬದುಕು...

ನಮ್ಮ ಊಹೆಗೂ ಮೀರಿದ್ದು !

ಧನ್ಯವಾದಗಳು...

Ittigecement said...

ಉದಯ ಸರ್... (ಬಿಸಿಲ ಹನಿ)

ತಾನು ಕೆಲಸ ಮಾಡುತ್ತಿರುವಾಗ..
ಏನೂ ಅರಿಯದ ಕಂದಮ್ಮಗಳು ಅಳುತ್ತಿರುವಾಗ...
ಸಮಾಧಾನ ಪಡಿಸಲು ..
ಅಸಹಾಯಕ ಸ್ಥಿತಿಯ...

ಆ.. ತಾಯಿಗೆ ನಮನಗಳು...

ಉದಯ ಸರ್..
ಬಹಳ ದಿನಗಳಿಂದ ನಿಮ್ಮ ಬ್ಲಾಗಿಗೆ ಬರಲಾಗಲಿಲ್ಲ..
ಬಂದರೂ ..
ಪ್ರತಿಕ್ರಿಯೆ ಹಾಕಲಾಗಲಿಲ್ಲ..

ದಯವಿಟ್ಟು ಬೇಸರಿಸದಿರಿ...

ಜಲನಯನ said...

ಸಲಾಮ್ ಪ್ರಕಾಶ್ ಮೇರೆ ಭಾಯ್ ....ಮಾ ತುಝೇ ಸಲಾಂ...ವಾವ್...ಎಂತಹ ಮಾತು...ಅವಳಿಗೆ ಮಾ ತುಝೆ ಲಾಖ್ ಲಾಖ್ ಸಲಾಂ ಎಂದರೂ ಕಡಿಮೆಯೇ...ಆದ್ರೆ ಆ ತಾಯಿ ಹೃದಯ ನೋಡಿ...ಮಗು ಒಮ್ಮೆ..ತನಗೆ ಮಾ ತುಝೆ ಸಲಾಂ ಅಂತ ಒಂದು ಬಾರಿ ಹೇಳಿದರೂ ಹೃದಯ ತುಂಬಿ ಬಂದು ಅಪ್ಪಿಕೊಂಡುಬಿಡುತ್ತಾಳೆ...ಬಹಳ ಮನತಟ್ಟುವ ಚಿತ್ರಗಳ ಜೊತೆಗೆ ಭಾವಕಲಕುವ ವಿವರಣೆ...

Guruprasad . Sringeri said...

"ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ" (ಕೆಟ್ಟ ಮಗ ಹುಟ್ಟಬಹುದು, ಆದರೆ ಕೆಟ್ಟ ತಾಯಿ ಎಂದಿಗೂ ಇರುವುದಿಲ್ಲ) ಎಂದು 'ದೇವ್ಯಪರಾಧ ಕ್ಷಮಾಪಣ ಸ್ತೋತ್ರ' ದಲ್ಲಿ ಹೇಳಿರುತ್ತಾರೆ. ಅದನ್ನು ಪ್ರತ್ಯಕ್ಷ ಚಿತ್ರಣಗಳ ಸಹಿತ ವಿವರಣೆ ನೀಡಿರುವಿರಿ. ಚೆನ್ನಾಗಿದೆ.

ಸಾಗರಿ.. said...

ಪ್ರಕಾಶಣ್ಣ
ಸೂರಿಲ್ಲದವರು ಕಟ್ಟುತ್ತಾರೆ ನಮಗೆಂದು
ಮನೆ, ಮಂದಿರ, ಬಂಗಲೆ ಎಲ್ಲವನ್ನ,
ಬೆವರೆಂಬ ಇಟ್ಟಿಗೆ, ಕಂದನ ಹಸಿವೆಂಬ ಜೆಲ್ಲಿ(ಕಲ್ಲು),
ಎಲ್ಲಾ ಬೆರೆಸಿ ಪೊಗದಸ್ತಾಗಿ ಕಟ್ಟುತ್ತಾರೆ
ನಮಗೆಂದು ಮನೆ, ಮಂದಿರ, ಬಂಗಲೆ ಎಲ್ಲವನ್ನ .
ಮನೆಯ ಕನಸಲ್ಲೇ ಬಿಸಿಲಿಗೆ ಗಾರೆದ್ದ ತಗಡಿನಡಿ ಬದುಕನ್ನೇ ಮುಗಿಸಿ ಸಾಗುತ್ತಾರೆ.

ಆದರೂ ಅಣ್ಣ ಅವರ ಮುಖದಲ್ಲಿ ನಗುವರಳಿ, ನಗಲು ಬಂಗಲೆಯೇ ಇರ್ಬೇಕೆಂದಿಲ್ಲ,, ನಾಳೆಯ ಚಿಂತೆ, ಮಕ್ಕಳ ಓದಿನ ಚಿಂತೆ ಯಾವ್ದೂ ಅವ್ರಿಗಿರೊಲ್ಲಾ.

ವಿನುತ said...

ಪದಗಳಿಲ್ಲ ಪ್ರತಿಕ್ರಿಯಿಸಲು! ನಮ್ಮ ಸುತ್ತಲೂ ಇರುವ ಇಂತದೊಂದು ಜೀವನವನ್ನು ನೋಡಲು ಒಳಗಣ್ಣಿನ ಅವಶ್ಯಕತೆಯಿದೆ.

Ramesh said...

Prakashanna... this is my first comment on your blog..

nimma ee blog post nanu kela dinagaLa hinde nodidde.. aadare pratikriye barediralilla... adakke karananu ide.. nanage annisiddannu ondu chikka kavana roopadalli vyaktapadisabekendu annisittu.. eega nanna aa kavanavanna post madiddene.. nimage samaya sikkaaga omme nanna blog ge bheti needi nimma abhipraayavannu thilisi..

nanna aa putta kavanave ee nimma post ge pratikriye anta naanu dedicate madtidene... :-)

http://hrudayantharaala.blogspot.com/

akshata said...

ಅದ್ಭುತ ಚಿತ್ರಗಳೇನೋ ನಿಜ ಆದರೆ ಅವುಗಳನ್ನು ತೆಗೆಯುವಾಗ ನಿಮ್ಮ ಪರಿಸ್ಥಿತಿ ಏನಾಗಿರಬಹುದೆನ್ನುವುದನ್ನು ಉಹಿಸಬಲ್ಲೆ. ಅವುಗಳನ್ನು ನೋಡುವಾಗಲೇ ಕರಳು ಚುರ್ರ್ ಅಂತು, ಇನ್ನು ಎದುರಿನಿಂದ ಚಿತ್ರ ತೆಗೆಯಬೇಕಾದರೆ ಹೇಗನ್ನಿಸಿರಬೇಡ.
ಅಕ್ಷತಾ

Unknown said...

ಮನಮುಟ್ಟುವ ಚಿತ್ರಗಳು..ನೀವು
ಇಂತಹ ನೋಟವ ದಿನವೂ ನೋಡಬೇಕಲ್ಲಾ :(

Nagaraj Bhat said...

Thumba channagide

Guruprasad . Sringeri said...

ಪ್ರಕಾಶ್ ಅವರೇ ತಾಯಿ ಮಗು ಸೆಂಟಿಮೆಂಟು ಚೆನ್ನಾಗಿದೆ, ಮರಳು ಸಿಮೆಂಟು ಕಾಂಕ್ರೀಟಿನ ಕಥೆ ಏನು? :)

World is beautiful(Gopal) said...

ನಿಮ್ಮ ಛಾಯ ಚಿತ್ರಗಳು ಚೆನ್ನಾಗಿವೆ.......ಚಿತ್ರಗಳ ಜೊತೆ ಸಾಗುವ ನಿಮ್ಮ ಪದಗಳು ಇನ್ನೂ ಚೆನ್ನಾಗಿದೆ.