ನಾನೇನೂ ಸಣ್ಣವನಲ್ಲ...
ಹೈಸ್ಕೂಲ್ ಎಂಟನೆಯ ಕ್ಲಾಸ್...
ಎಲ್ಲವು ಅರ್ಥವಾಗುತ್ತದೆ...
ಆದರೆ....
ನನ್ನಪ್ಪ ಮಾತ್ರ ನನಗೆ ಅರ್ಥನೇ.. ಆಗುವದಿಲ್ಲ...
ಯಾವಾಗ ಬೈತಾನೆ... ಯಾವಾಗ ಹೊಗಳುತ್ತಾನೆ.. ಒಂದೂ ಅರ್ಥನೇ ಆಗುವದಿಲ್ಲ.
ನನಗೆ ಒಂದು ಹೊಸ " ಹದಿನೆಂಟು ಗೇರಿನ" ಸೈಕಲ್ ಬೇಕಿತ್ತು..
ನನ್ನ ಎಲ್ಲ ಗೆಳೆಯರ ಬಳಿ ಹೊಸದಾಗಿ ಬಂದಿದೆ...
ನನಗೂ ಆಸೆ ಆಯಿತು..
ನನ್ನಪ್ಪ ನನ್ನಾಸೆಗಳಿಗೆ ಎಂದು ಅಡ್ಡಿ ಬಂದವನಲ್ಲ...
ಹೇಗಿದ್ದರೂ ತೆಗೆಸಿಕೊಡುತ್ತಾರೆ ಅಂತ ನನ್ನ ಗೆಳೆಯರ ಬಳಿ ಬಹಳ ಬಡಾಯಿ ಕೊಚ್ಚಿಕೊಂಡಿದ್ದೆ...
ಸಮಯ ನೋಡಿ ನನ್ನಪ್ಪನನ್ನು ಕೇಳಿದೆ..
" ಈಗ ಆಗೋದಿಲ್ಲ.
ನಮ್ಮ ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ. ಹಣ ಖರ್ಚು ಮಾಡೋ ಹಾಗಿಲ್ಲ.
ಮುಂದೆ ಪರಿಸ್ಥಿತಿ ಸುಧಾರಿಸದ ಮೇಲೆ ನೋಡೋಣ."
"ಇಲ್ಲ.. ಅಪ್ಪ ನನಗೆ ಈ ಸೈಕಲ್ ಬೇಕೇ ಬೇಕು..
ನನ್ನ ಫ್ರೆಂಡ್ಸ್ ಬಳಿ ಹೊಸ ಸೈಕಲ್ ತರುತ್ತೇನೆ ಅಂತ ಹೇಳಿಬಿಟ್ಟಿದ್ದೇನೆ..
ಇಲ್ಲಾ.. ಅಂದ್ರೆ ನನಗೆ ಬಹಳ ಅವಮಾನ ಆಗುತ್ತೆ...
ನನ್ನ ಫ್ರೆಂಡ್ಸ್ ಎಲ್ಲರ ಬಳಿ ಇದು ಇದೆ..
ಪ್ಲೀಸ್ ಅಪ್ಪಾ ನಂಗೆ ಬೇಕು.. ಪ್ಲೀಸ್ ..."
" ನಿನ್ನ ಗೆಳೆಯರ ಹತ್ತಿರ ಇದೆ ಅಂತ ನೀನು ಖರಿದಿಸ ಬೇಕಾ..?
ನಿನ್ನ ಬಳಿ ಒಂದು ಸೈಕಲ್ ಇದೆಯಲ್ಲ..
ಅದನ್ನೇ ಉಪಯೋಗಿಸು..
ನಾನೂ ಕೂಡ ನಮ್ಮ ಹೊಸ ಕಾರು ಕೊಡ್ತಾ ಇದ್ದೀನಿ.
ನಮ್ಮ ಹಳೆ ಕಾರು ಉಪಯೋಗಿಸ್ತಿನಿ..
ನಮ್ಮ ಪರಿಸ್ಥಿತಿ ಕಷ್ಟ ಇದೆ.. ಬಿಸಿನೆಸ್ ಡಲ್ ಆಗಿದೆ.."
ಅಪ್ಪ ಮುಖ ಗಂಟಿಕ್ಕಿ ಖಾರವಾಗಿ ಹೇಳಿದ..
ನಾನು ಮುಂದೆ ಮಾತನಾಡಲಿಲ್ಲ...
ನನ್ನ ಗೆಳೆಯರೆಲ್ಲರ ಬಳಿ ಇದೇ ಸೈಕಲ್ ಇದೆ.
ನನಗೂ ಬೇಕಿತ್ತು...
ನನಗೆ ಬಹಳ ಅವಮಾನ ಆಗುತ್ತಾದಲ್ಲಾ...
ಅದೂ ನನ್ನ ಗೆಳೆಯರ ಮುಂದೆ....!
ನನ್ನ ಮನಸ್ಸೆಲ್ಲ ಹಾಳಾಗಿ ಹೋಯಿತು...
ಊಟವೂ ಸರಿಯಾಗಿ ಮಾಡಲಿಲ್ಲ..
ರಾತ್ರಿಯಾಯಿತು...
ನಾನು ಯಾವಾಗಲೂ ನನ್ನ ಅಜ್ಜಿಯ ಸಂಗಡ ಮಲಗುವದು...
ನನ್ನಜ್ಜಿ ಅಂದರೆ ನನಗೆ ಬಹಳ ಇಷ್ಟ.
ಅವಳಿಗೆ ಕೋಪ ಬರುವದೇ.. ಇಲ್ಲ.
ನಮ್ಮ ಮನೆಯಲ್ಲಿ ನನ್ನ ಪರವಾಗಿ ಯಾರಾದರೂ ಮಾತನಾಡುತ್ತಾರೆ ಅಂದರೆ ಅವರು ನನ್ನಜ್ಜಿ..
ಅಜ್ಜಿಗೆ ನನ್ನ ಕಂಡರೆ ಬಹಳ ಅಕ್ಕರೆ...
ಅಜ್ಜಿ ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ..
ನನಗೆ ಮಲಗುವಾಗ ಕಥೆ ಹೇಳುತ್ತಾರೆ...
ಇಂದು ಹಾಗೇ ಆಯಿತು...
"ಕಥೆ.. ಹೇಳ ಬೇಕೇನೋ.. ಪುಟ್ಟಾ.. "
ಅಂತ ಪ್ರೀತಿಯಿಂದ ತಲೆ ಸವರಿದರು...
ನನಗೆ ಅಳು ಬಂದಂತಾಯಿತು...
"ಅಜ್ಜಿ... ..
ಕಷ್ಟ.. ಯಾಕೆ ಕಷ್ಟ ಆಗೇ ಇರಬೇಕು...
ಈ ಕಷ್ಟಗಳೆಲ್ಲ ಸ್ವಲ್ಪ ಖುಷಿಯಾಗಿ ಯಾಕೆ ಇರಬಾರದು...? "
"ಯಾಕೋ ಕಂದಾ..?
ನಿನಗೆ ಎಂಥಹ ಕಷ್ಟನೋ...?..! "
" ನೋಡು ಅಜ್ಜಿ..
ಅಪ್ಪನಿಗೆ ಹಣಕಾಸಿನ ಕಷ್ಟ ಅಂತೆ..
ನನಗೆ ಮೊದಲಿನ ಹಾಗೆ ಪಿಜ್ಜಾ.. ಪಾನಿ ಪುರಿ,
ಅಯಿಸ್ ಕ್ರೀಮ್ ...
ಏನೂ ಸಿಕ್ತಾ ಇಲ್ಲ..
ಪೆಪ್ಸಿ ಕುಡಿಯದೆ ಬಹಳ ದಿನ ಆಯ್ತು..
ಇವತ್ತು ಹೊಸ ಸೈಕಲ್ಲು ಬೇಕು ಅಂತ ಕೇಳಿದೆ...
ಅದೂ ... ಆಗಲ್ಲ ಅಂತ ಹೇಳಿ ಬಿಟ್ಟರು..
ಈ... ಕಷ್ಟ ಇಷ್ಟೆಲ್ಲ ಕಷ್ಟ ಇರ ಬಾರದು ಅಲ್ಲವಾ...?"
" ಹೌದು ಪುಟ್ಟಾ...
ಕಷ್ಟ ಯಾವಾಗಲೂ ಹಾಗೇನೆ..
ಅವರವರ ಕಷ್ಟ ಅವರವರಿಗೆ ದೊಡ್ಡದು...
ಆನೆಗೆ ಆನೆಯಂಥ ಕಷ್ಟ...
ಇರುವೆಗೆ ಇರುವೆಯಂಥ ಕಷ್ಟ..
ಎಲ್ಲರಿಗೂ ಅವರವರ ಕಷ್ಟ ದೊಡ್ಡದು..."
" ಈಗ ಹೊಸ ಸೈಕಲ್ಲು ಇಲ್ದೇ ಹೊದ್ರೆ...
ನನ್ನ ಗೆಳೆಯರ ಮುಂದೆ ಎಷ್ಟು ಅವಮಾನ ಗೊತ್ತಾ ಅಜ್ಜಿ...?
ಅವರಿಗೆ ನನ್ನ ಮುಖ ಹೇಗೆ ತೋರಿಸಲಿ..??
ತುಂಬಾ ಅವಮಾನ ಆಗುತ್ತದೆ ಅಜ್ಜಿ...
ಅಪ್ಪನಿಗೆ ಇದೊಂದೂ ಅರ್ಥನೇ ಆಗೋದಿಲ್ಲ... ನನ್ನನ್ನು ಅವರು ಅರ್ಥನೇ ಮಾಡಿಕೊಳ್ಳುವದಿಲ್ಲ..."
" ನೋಡು ನಿನ್ನಪ್ಪನಿಗೆ ಬಹಳ ಕಷ್ಟ ಇದೆ...
ಅವರ ಬಿಸಿನೆಸ್ಸ್ ಚೆನ್ನಾಗಿದ್ದಾಗ ನಿನಗೆ ಏನು ಬೇಕೋ ಅದನ್ನೆಲ್ಲ ತೆಗೆಸಿ ಕೊಡಲಿಲ್ಲವಾ..?
ಈಗ ತೊಂದರೆ ಇದೆ...
ಸ್ವಲ್ಪ ಅಡ್ಜಸ್ಟ್ ಮಾಡ್ಕೊ.."
" ಅಜ್ಜಿ ...
ನೀನು ಅಪ್ಪನ ಪರವಾಗಿ ಮಾತಾಡ ಬೇಡ.
ಅಪ್ಪ, ಅಮ್ಮ ಸೇರಿ ನಿಂಗೆ ಅವಮಾನ ಮಾಡಿದ್ದು ನಂಗೆ ಗೊತ್ತಿದೆ ಅಜ್ಜಿ...
ನಾನು ಸಣ್ಣವನಲ್ಲ .. ನಂಗೆ ಎಲ್ಲವೂ ಅರ್ಥ ಆಗ್ತದೆ...
ನಿನಗೆ ಸ್ವಲ್ಪನೂ ಬೆಲೆ ಕೊಡುವದಿಲ್ಲ...
ನಿಂಗೆ ಯಾರೂ ಏನೂ ಕೇಳುವದಿಲ್ಲ..
ನಿನ್ನನ್ನ್ನು ಒಬ್ಬನೆ ಬಿಟ್ಟು ಸಿನೆಮಾಕ್ಕೆ ಹೋಗ್ತಾರಲ್ಲ...
ಪಾರ್ಟಿಗೆ ಹೋಗುವಾಗ ಮನೆಯಲ್ಲಿ ನಿನ್ನ ಒಬ್ಬನೇ ಬಿಟ್ಟು ..
ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಹೋಗ್ತಾರೆ...
ನಿನಗೆ ಅವಮಾನ ಅಲ್ಲವಾ ಅಜ್ಜಿ..?"
ಅಜ್ಜಿ ಸ್ವಲ್ಪ ಹೊತ್ತು ಮಾತನಾಡಲಿಲ್ಲ...
ನನ್ನ ತಲೆ ಸವರುತ್ತಿದ್ದರು...
ನಾನೇ ಮಾತನಾಡಿದೆ..
" ಅಜ್ಜಿ.. ...
ನಿಂಗೆ ಇಷ್ಟೆಲ್ಲ ವಯಸ್ಸಾಗಿದೆ... ನೀನು ಕಷ್ಟ ಅನುಭವಿಸಲಿಲ್ಲವಾ..?"
" ಕಷ್ಟ.. ಅನ್ನೋದು ತುಂಬಾ ವಿಚಿತ್ರ ನೋಡು...
ಎಷ್ಟೇ ಅನುಭವಿಸದರೂ....
ಅದರ ನೆನಪು..
ಅದನ್ನು ದಾಟಿ ಬಂದ ನೆನಪುಗಳು..
ಬಹಳ ಖುಷಿ ಪುಟ್ಟಾ... ತುಂಬಾ ಸುಖ ಕಣೊ..
ನಿಂಗೆ ಇದೆಲ್ಲ ಅರ್ಥ ಆಗೋದಿಲ್ಲ ಬಿಡು..."
" ಅಜ್ಜಿ... ..ಅಜ್ಜಿ....
ನೀನು ಅನುಭವಿಸಿದ ಅತ್ಯಂತ ಕೆಟ್ಟದಾದ ಕಷ್ಟ ಯಾವುದು..?
ಅಪ್ಪ, ದೊಡ್ಡಪ್ಪನವರನ್ನು ಕಷ್ಟ ಪಟ್ಟು ಬೆಳೆಸಿದೆಯಂತೆ..
ಅದು ಕಷ್ಟ ಆಯ್ತಾ..?
ಹೊಲದಲ್ಲಿ ಕೆಲಸ ಮಾಡಿದೆಯಂತೆ..
ಬೆಳೆ ಬೆಳೆಯುತ್ತಿದ್ಯಂತೆ... ಬಡತನ ಇತ್ತಂತೆ...
ಕೈಯಲ್ಲಿ ಹಣ ಇಲ್ಲವಾಗಿತ್ತಂತೆ..
ಇದೆಲ್ಲ ಬಹಳ ಕಷ್ಟ ಅಲ್ಲವಾ..?"
" ಅದೆಲ್ಲ ಕಷ್ಟ ಅನಿಸಲಿಲ್ಲ ನೋಡು ಪುಟ್ಟ...
ಆಗ ನನ್ನ ಕಣ್ಣೆದುರಿಗೆ ನಿನ್ನಪ್ಪ, ದೊಡ್ಡಪ್ಪ ಇದ್ದರಲ್ಲ..
ಅವರಿಗೊಂದು ಭವಿಷ್ಯ ಮಾಡಬೇಕಿತ್ತಲ್ಲ...
ಹಾಗಾಗಿ ಅದು ಕಷ್ಟ ಅಂತ ಅನಿಸಲೇ ಇಲ್ಲ.."
" ಮತ್ತೆ...
ನಿನ್ನ ದೊಡ್ಡ ಕಷ್ಟ ಯಾವುದು ಅಜ್ಜಿ...?"
ಅಜ್ಜಿ ಸ್ವಲ್ಪ ಹೊತ್ತು ಸುಮ್ಮನಾದಳು...
ಅವಳ ಕೈ ನನ್ನ ತಲೆ ಸವರುತ್ತಿತ್ತು...
" ಅವತ್ತೊಂದು ದಿನ ನಮ್ಮನೆಗೆ ಡಾಕ್ಟರ್ ಬಂದು ..
" ನಿನ್ನ ಗಂಡ ಹೆಚ್ಚಿಗೆ ದಿನ ಬದುಕುವದಿಲ್ಲ...
ಈ ರೋಗಕ್ಕೆ ಔಷಧವಿಲ್ಲ..
ನಿಮ್ಮ ಸಮಾಧಾನಕ್ಕೆ ಬೇಕಾದರೆ ಶಿವಮೊಗ್ಗದ ದೊಡ್ಡ ಆಸ್ಪತ್ರೆಗೆ ಹೋಗಿ ಬರಬಹುದು"
ಅಂದು ಬಿಟ್ಟರು..."
ಹೇಳುತ್ತ ಅಜ್ಜಿ ಸ್ವಲ್ಪ ಹೊತ್ತು ಸುಮ್ಮನಾದರು...
ಮತ್ತೆ ಅವರೆ ಹೇಳಿದರು...
" ಬದುಕಿನ ಭರವಸೆಯ ಗಂಡ.. ಸಾಯುತ್ತಾನೆಂದರೂ..
ನಂಬಲು ಕಷ್ಟ...
"ಶಿವಮೊಗ್ಗದ ಡಾಕ್ಟರ್ ಬಳಿ ಔಷಧ ಇದ್ದು ಬಿಟ್ಟರೆ..!
ನನ್ನ ಗಂಡ ಬದುಕಿ ಬಿಟ್ಟರೆ..!!!" ಅಂತ ಆಸೆ ಆಯ್ತು..
ಆದರೆ... ಕೈಯಲ್ಲಿ ಹಣ ಇಲ್ಲ.."
"ಇದು ತುಂಬಾ ಕಷ್ಟ.. ಅಲ್ಲವಾ ಅಜ್ಜಿ...?
ಇದಾ ನಿನ್ನ ದೊಡ್ಡದಾದ ಕಷ್ಟ..?"
" ಅದೂ ಕೂಡ ಕಷ್ಟ ಅನಿಸಲಿಲ್ಲ... ಪುಟ್ಟಾ...
ಕಣ್ಣೆದುರಿಗೆ ಗಂಡ ಇದ್ದನಲ್ಲ...
ಆಗ ನನ್ನ ಸಹಾಯಕ್ಕೆ ಬಂದವರು ...
ನನ್ನ ಗಂಡನ ತಮ್ಮ..
ನಿನ್ನ ಸಣ್ಣಜ್ಜ...
ಆಗ ಅವ ಇನ್ನೂ ಹೈಸ್ಕೂಲ್ ಓದುವ ಹುಡುಗ...
ವಯಸ್ಸಿಗೆ ಮೀರಿದ ತಿಳುವಳಿಕೆ...
ಜವಾಬ್ದಾರಿ ಅವನಿಗೆ....
ಮನೆಯಲ್ಲಿದ್ದ ಚೂರು ಪಾರು ಬಂಗಾರ ಶೆಟ್ಟಿಯ ಹತ್ತಿರ ಇಟ್ಟು ಹಣ ಹೊಂದಿಸಿದೆ..
ಮನೆಯಲ್ಲಿ ಉಳಿದವರಾರೂ ಸಹಾಯಕ್ಕೆ ಬರಲಿಲ್ಲ...
ಒಟ್ಟು ಕುಟುಂಬ ಆದರೂ...
ಒಬ್ಬಂಟಿಯಾಗಿದ್ದೆ.."
" ಹೌದಜ್ಜಿ...
ಒಟ್ಟಿಗೆ ಇದ್ದಾರೆಂದ ಮೇಲೆ ಕಷ್ಟದಲ್ಲೂ ಇರಬೇಕಲ್ಲ ...ಅಜ್ಜಿ...?
ಇದು ತುಂಬಾ ಕಷ್ಟ ಆಯ್ತಾ..??.."
" ಅದೂ ಕೂಡ ಕಷ್ಟ ಅನಿಸಲಿಲ್ಲ.
ನಿನ್ನ ಸಣ್ಣಜ್ಜ ಕಷ್ಟಪಟ್ಟು ಒಂದು ಗಾಡಿ ವ್ಯವಸ್ಥೆ ಮಾಡಿದ...
ಶಿವಮೊಗ್ಗದ ದೊಡ್ಡ ಆಸ್ಪತ್ರೆಗೆ ಬಂದೆ...
ದೊಡ್ಡ ಆಸ್ಪತ್ರೆ... ಪಟ್ಟಣ ಬೇರೆ...
ಅಲ್ಲಿ ಸ್ವಲ್ಪ ತೊಂದರೆ ಆಯ್ತು.."
"ಇದಾ...?? ಅಜ್ಜಿ ನಿನ್ನ ದೊಡ್ಡ ತೊಂದರೆ..?..! "
"ಅಲ್ಲಪ್ಪ.....
ಅಲ್ಲಿ ಡಾಕ್ಟರ್ ಎಲ್ಲ ಪರಿಕ್ಷೆ ಮಾಡಿ
" ಈಗ ಏನೂ ಮಾಡಲಾಗುವದಿಲ್ಲ..ಮನೆಗೆ ಕರೆದು ಕೊಂಡು ಹೋಗಿ.." ಅಂದು ಬಿಟ್ಟರು..
ಹಾಗೆ ಸ್ವಲ್ಪ ಹೊತ್ತಿನಲ್ಲೆಯೆ.. ನನ್ನ ಗಂಡ..
" ಇನ್ನೂ ಸಣ್ಣ ಸಣ್ಣ ಮಕ್ಕಳು..
ಇವರನ್ನೆಲ್ಲ ಹೇಗೆ ದೊಡ್ಡ ಮಾಡ್ತಿಯಾ..?.."
ಅಂತ ನೋವು, ಸಂಕಟ ಪಡುತ್ತ...
ಪ್ರಾಣ ಬಿಟ್ಟು ಬಿಟ್ಟರು...
ಜೀವ ಹೋಗುವಾಗ ಅವರು ನನ್ನ ಕೈ ಹಿಡಿದು ಕೊಂಡಿದ್ದರು...
ಭರವಸೆಯ ಗಂಡನೂ ಒಂಟಿಯಾಗಿ ಬಿಟ್ಟು ಹೋಗಿದ್ದ...
ಆಗ ಕತ್ತಲಾಗುತ್ತಿತ್ತು.....
ಒಂದೇ.. ಒಂದು ಆಸೆ ಇತ್ತು.. ಅದೂ ಕೂಡ ಕರಗಿ ಹೋಯಿತು....."
ಅಜ್ಜಿ ಧ್ವನಿ ಕಂಪಿಸುತ್ತಿತ್ತು...
ಸ್ವಲ್ಪ ಹೊತ್ತು ಸುಮ್ಮನಾದರು...
ಹಳೆಯ ದುಃಖ ಉಮ್ಮಳಿಸಿ ಬಂದಿತ್ತು...
"ಅಜ್ಜಿ... ..
ಆ ದೇವರು ಬಹಳ ಕೆಟ್ಟವನು ..
ಹೌದಜ್ಜಿ... ಇದು ಬಹಳ ಕೆಟ್ಟದಾದ ಕಷ್ಟ.. ಅಲ್ಲವಾ..?"
" ಆಗ ನಂಗೆ ಮುಂದೇನು ..?
ಅನ್ನುವಂಥಹ ಚಿಂತೆ..
ಕಷ್ಟದ ಬಗ್ಗೆ ವಿಚಾರ ಮಾಡುತ್ತ ಕುಳಿತುಕೊಳ್ಳುವಂತಿಲ್ಲ..
ತಿರುಗಿ ಊರಿಗೆ ಹೋಗ ಬೇಕಿತ್ತು..."
" ಆ ಕತ್ತಲೆಯಲ್ಲಿ.. ಪಟ್ಟಣದಲ್ಲಿ ..
ಗಾಡಿ ಹುಡುಕುವದು ಕಷ್ಟ ಆಯ್ತಾ ಅಜ್ಜಿ..?"
"ಇಲ್ಲಪ್ಪ...
ನಿನ್ನ ಸಣ್ಣಜ್ಜ ಇದ್ದಿದ್ದನಲ್ಲ..
ಸಣ್ಣ ಹುಡುಗನಾಗಿದ್ದರೂ...
ವಯಸ್ಸಿಗೆ ಮೀರಿದ ಜವಾಬ್ದಾರಿ ಹೊತ್ತುಕೊಂಡ...
ಎಲ್ಲಿಂದಲೋ ಒಂದು ಗಾಡಿ ವ್ಯವಸ್ಥೆ ಮಾಡಿದ...
ರಾತ್ರಿಯೇ ಊರಿಗೆ ಬಂದೆವು...
ಮನೆಯಲ್ಲಿ ಎಲ್ಲರೂ ಮೌನ..
ಒಬ್ಬರೂ ಮಾತನಾಡಲಿಲ್ಲ ನೋಡು.."
" ಎಂಥಹ ಜನ ಅಜ್ಜಿ..?
ನೀನು ಬೇಜಾರದಲ್ಲಿದ್ದೀಯಾ...
ದುಃಖದಲ್ಲಿದ್ದೀಯಾ..
ಯಾರೂ ಮಾತನಾಡಲಿಲ್ಲವಾ..?
ಇದು ಬಹಳ ಕಷ್ಟ ಅಲ್ಲವಾ ಅಜ್ಜಿ..?
ಬೇಜಾರದಲ್ಲಿದ್ದಾಗ..
ಯಾರದರೂ ಸಮಾಧಾನ ಮಾಡಲಿ ಅಂತ ಮನಸ್ಸು ಹೇಳುತ್ತದೆ.."
" ಆಗ ನನಗೆ ಯಾರ ಸಂತ್ವನವೂ ಬೇಕಿರಲಿಲ್ಲ..
ಪುಟ್ಟಾ...
ಕುಹಕ ಮಾತುಗಳಿಂದ ಸ್ವಾಗತ ಮಾಡ್ತಾರೆ ಅಂತ ಗೊತ್ತಿತ್ತು..
ದುಃಖ ಅನ್ನೋದು ಒಂಟಿ...
ಅದನ್ನು ಒಬ್ಬನೇ ಅನುಭವಿಸ ಬೇಕು .. ಕಂದಾ..!
ಹೆಣವನ್ನು ಬೆಳಿಗ್ಗೆ ಸುಡಬೇಕು ಅಂತ ಊರವರೆಲ್ಲ ನಿರ್ಧಾರ ಮಾಡಿದರು..
ಮನೆ ತುಂಬಾ ಜನ....
ಆದರೆ ರಾತ್ರಿ ಹೆಣದ ಬಳಿ ಕುಳಿತು ಕೊಳ್ಳಲು ಯಾರೂ ಮುಂದೆ ಬರಲಿಲ್ಲ.."
" ಅಜ್ಜಿ...
ಇದು ಬಹಳ ಕಷ್ಟ ಅಲ್ಲವಾ..? ಹೆದರಿಕೆ ಬೇರೆ..
ಅಲ್ಲವಾ ಅಜ್ಜಿ..?"
"ಇಲ್ಲಪ್ಪ...
ಆ ದೇಹದೊಂದಿಗೆ, ಆ ಮನುಷ್ಯನೊಂದಿಗೆ..
ಬದುಕು ಕಳೆದಿದ್ದೆನಲ್ಲ...
ಸುಖ ಸಂತೋಷ ಅಲ್ಲಿ ಇತ್ತಲ್ಲ...
ಅವನ ನೆನಪು ನನ್ನೊಂದಿಗೆ ಇತ್ತು....
ಅದನ್ನು ಕಾಯುವದು ನನಗೆ ಕಷ್ಟ ಆಗಲ್ಲಿಲ್ಲ..
ನಿನ್ನ ಅಪ್ಪ, ದೊಡ್ಡಪ್ಪ ಇನ್ನೂ ಚಿಕ್ಕವರು..
ನನ್ನ ದುಃಖ ಕಂಡು ಅವರೂ ಅಳುತ್ತಿದ್ದರು...
ಅವರನ್ನೂ ಸಮಾಧನ ಪಡಿಸುತ್ತ...
ನಾನೂ ಸಮಾಧಾನ ಪಟ್ಟುಕೊಳ್ಳ ಬೇಕಿತ್ತು..."
"ಛೇ.. ಅಜ್ಜಿ...
ಎಷ್ಟೆಲ್ಲ ಕಷ್ಟ ನೋದಿದ್ದೀಯಾ...? !
ಇದೆಲ್ಲ ಬಹಳ ಕಷ್ಟ ಅಲ್ಲವಾ..?"
" ಪುಟ್ಟಾ.... !
ಕಷ್ಟ ಬಂದಾಗ ಅಳುವದು ಅನ್ನುವದು ಇದೆಯಲ್ಲ.. !
ಅದು ನಮಗೆ ದೇವರು ಮಾಡಿದ ಉಪಕಾರ ಕಣಪ್ಪಾ..
ಅಳೋದು ಗೊತ್ತಿಲ್ಲದೇ.. ಹೋಗಿದ್ರೆ ಹುಚ್ಚಿಯಾಗಿ ಬಿಡ್ತಿದ್ದೆ...
ಕಣ್ಣಲ್ಲಿ ನೀರು ಬರುವಷ್ಟು ಅತ್ತೆ...
ನನ್ನ ಗಂಡನ ದೇಹವಲ್ಲವಾ...?
ಯಾರೂ ಬರದಿದ್ದರೂ ... ಹೆಣವನ್ನು ಕಾದೆ..."
" ಅಜ್ಜಿ....
ಅಜ್ಜನ ಹೆಣದ ಸಂಗಡ ರಾತ್ರಿಯೆಲ್ಲ ಇದ್ದೆಯಲ್ಲ..
ಅಜ್ಜಿ ಅದು ಬಹಳ ಕಷ್ಟ ಅಲ್ಲವಾ..?"
"ಅದೂ... ಅಲ್ಲಪ್ಪ...
ಅಲ್ಲಿ ಕುಳಿತಾಗ ಅಜ್ಜನೊಡನೆ ಕಳೆದ ನೆನಪು ಇತ್ತು...
ಪಕ್ಕದಲ್ಲಿ ಮಕ್ಕಳಿದ್ದರು..
ಮುಂದೆ ಏನು ಅಂತ ಕಾಡುವ ಚಿಂತೆ ಇತ್ತು..
ರಾತ್ರಿ ಮುಗಿದದ್ದೇ ಗೊತ್ತಾಗಲಿಲ್ಲ..
ಬೆಳಗಾಯಿತು.. "
" ಅಜ್ಜಿ...
ಬೆಳಗಾದ ಮೇಲೆ ಹೆಣ ಸುಡುತ್ತಾರಲ್ಲ..
ಅದು ಕೆಟ್ಟದಾದ ಕಷ್ಟ ಅಲ್ಲವಾ..?"
" ಅದು ಅಷ್ಟೆಲ್ಲ ಕಷ್ಟ ಅಲ್ಲಪ್ಪ...
ಬೆಳಗಾಯಿತು...
ಮನೆಯಲ್ಲಿ ಎಲ್ಲರೂ ಬೆಳಗಿನ ತಿಂಡಿಗೆ ತೊಡಗಿದ್ದರು...
ದೋಸೆ ಮಾಡುವ ಶಬ್ದ.. ವಾಸನೆ ಬರ್ತಿತ್ತು..."
ಎನ್ನುತ್ತ ಅಜ್ಜಿಗೆ ದುಃಖವಾಯಿತು...
ಮಾತನಾಡಲಾಗಲಿಲ್ಲ...
ಅವರೇ ಸಮಾಧಾನ ಮಾಡಿಕೊಂಡರು...
" ಮನೆಯ ಒಳಗೆ ಸಿಹಿ ಬೆಲ್ಲದ ದೋಸೆ ಮಾಡಿದ್ದರು..."
" ಎಂಥಹ ಜನ ಅಜ್ಜಿ..!!?
ನೀನು ದುಃಖ ಇದ್ದೀಯಾ...
ಮನೆಯವರು ಬೆಲ್ಲದ ದೋಸೆ ತಿನ್ನುತ್ತಿದ್ದರಾ..?
ಇಂಥಹ ಕಷ್ಟ ಯಾರಿಗೂ ಬೇಡ ಅಜ್ಜಿ...
ಇದಲ್ಲವಾ.. ಅಜ್ಜಿ ಕೆಟ್ಟದಾದ ಕಷ್ಟ..?"
"ಅಲ್ಲಪ್ಪಾ....
ಅವರು ಬೆಲ್ಲದ ದೋಸೆ ತಿಂದರೆ ನನಗೇನು..?
ನನ್ನ ಗಂಡ ವಾಪಸ್ಸು ಬರ್ತಾನಾ...?
ಅದಲ್ಲಪ್ಪ.. ಪುಟ್ಟಾ...
ಇದ್ಯಾವದೂ.. ಕಷ್ಟವೇ.. ಅಲ್ಲ...!
" ಅಜ್ಜಿ...
ಮತ್ತೆ .. ಯಾವುದು ಕಷ್ಟ...?"
ಅಜ್ಜಿಯ ಧ್ವನಿ ಭಾರವಾಯಿತು...
ಅಳುತ್ತಲೇ ಹೇಳುತ್ತಿದ್ದರು...
"ನಮ್ಮ ಜೀವದ ಜೀವ..
ಪ್ರೀತಿಯವರ ಹೆಣ ಇಟ್ಟುಕೊಂಡು...
ಹಸಿವೆಯಾಗುತ್ತದಲ್ಲ...!!
ಅದು ಅತ್ಯಂತ ಕಷ್ಟ ಪುಟ್ಟಾ...!!
ಪುಟ್ಟಾ....!
ಅಳಲು ಕಣ್ಣೀರೂ... ಇರುವದಿಲ್ಲ...
ಸತ್ತವರು ಬದುಕಿ ಬರುವದಿಲ್ಲ...
ಬದುಕಿದ್ದವರಿಗೆ ಹಸಿವೆ ಎನ್ನುವದು ಇದೆಯಲ್ಲ ಪುಟ್ಟ...!
ಆ ಹೆಣದ ಮುಂದೆ ಹಸಿವೆಯಾಗುತ್ತದಲ್ಲ... !
ಅದು ಬಹಳ ಕೆಟ್ಟದಾದ ಕಷ್ಟ...!
ಆಗ ತಿನ್ನುವದು.... ಇದೆಯಲ್ಲ ಅದು ಬಹಳ ಕಷ್ಟ..!
ಪುಟ್ಟಾ.....!
ನಾವು ಯಾಕಾದರೂ ಬದುಕ ಬೇಕು ಎನ್ನಿಸಿ ಬಿಡುತ್ತದೆ..
ನಮ್ಮ ಬಗೆಗೆ ನಮಗೆ ಅಸಹ್ಯವಾಗಿಬಿದುತ್ತದೆ...!
ಕಂದಾ..!!..
ನನ್ನ ಗಂಡನ ಹೆಣ ಇಟ್ಟುಕೊಂಡು ನಾನೂ... ತಿಂದೆ...!"
ಎನ್ನುತ್ತಾ ಅಜ್ಜಿ ಅಳಲು ಶುರು ಮಾಡಿದರು...
ನನಗೂ ಅಳು ಬಂತು....
ಕತ್ತಲಲ್ಲಿ ಅಜ್ಜಿಯ ಕಣ್ಣಿರು ಒರೆಸಲು ತಡಕಾಡಿದೆ...
ಆಗಲಿಲ್ಲ...
ಅಜ್ಜಿಯನ್ನು ಗಟ್ಟಿಯಾಗಿ ತಬ್ಬಿಕೊಂಡೆ...
(ಇದು ಕಥೆ.... )
ಭಾವ ಪೂರ್ಣ ಪ್ರತಿಕ್ರಿಯೆಗಳಿವೆ...
ದಯವಿಟ್ಟು "ಪ್ರತಿಕ್ರಿಯೆಗಳನ್ನೂ ಓದಿ...