Saturday, May 23, 2009

ನಾನು .. ಶಾರಿಯ ಗಂಡ " ಗಣಪ್ತಿ.." ಅಂತ..

ಮದುವೆ ಮನೆಯಲ್ಲಿ ಕ್ಯಾಮರಾ ಹಿಡುಕೊಂಡು ಕಿವಿ ನೋಡ್ತಾ ಕೂತಿದ್ದೆ.....

ಮತ್ತೇರಿಸುವ ಸೌಂದರ್ಯದಲ್ಲಿ ಮುಳುಗಿ ಹೋಗಿದ್ದೆ..

ಯಾರೋ ಸಲುಗೆಯಿಂದ ಬೆನ್ನು ತಟ್ಟಿದರು..

" ಹೊಯ್... ಪ್ರಕಾಶಾ... ?
ಏನೋ ಇಷ್ಟು ದಪ್ಪ ಆಗಿಬಿಟ್ಟಿದ್ದೀಯಾ...?

ಶ್ರವಣಬೆಳಗೊಳದ ಗೊಮಟೇಶ್ವರ ಪ್ಯಾಂಟು ಹಾಕ್ಕೊಂಡ ಹಾಗಿದೆ..."

ಯಾರಪ್ಪ....ಇದು..ಎಂದು ತಿರುಗಿ ನೋಡಿದೆ...!

" ಅರೇ...! ಶಾರೀ....!!
ನನ್ನ ಬಾಲ್ಯದ ಸಹಪಾಠಿ..!
ನನ್ನ ದೊಡ್ಡಪ್ಪನ ಮಗಳು...!
ಇಪ್ಪತ್ತು ವರ್ಷದ ನಂತರ ಸಿಕ್ಕಿದಾಳೆ.. ಈ ಶಾರೀ..

ಬಚ್ಚಿಟ್ಟ ಬಾಲ್ಯದ ಸಿಹಿ ಬುತ್ತಿಯ..
ಮುಗ್ಧ ಶಾರೀ.. ಅವಳ.. ಪ್ರೀತಿವಾತ್ಸಲ್ಯ...
ನೆನಪಾದವು...

ನನಗೆ ಬಹಳ ಖುಷಿಯಾಯಿತು...

"ಏನೇ ಶಾರೀ...ಬಹಳ ಅಪರೂಪ..
ಎಷ್ಟು ವರ್ಷ ಆಯ್ತೆ ನಿನ್ನ ನೋಡ್ದೆ...
ಗಂಡ, ಮಕ್ಕಳು ಅಂತ ಸಂಸಾರದಲ್ಲಿ ಮುಳುಗಿ ಹೋಗಿಬಿಟ್ಟಿದ್ದೀಯೇನೆ..?
ಹೇಗಿದ್ದಾನೆ ಗಂಡ ಮಹಾಶಯ...? ಎಲ್ಲಿ ನಿನ್ನ ಮಕ್ಕಳು..?"

" ಒಂದೇ ಸಾರಿ ಇಷ್ಟೆಲ್ಲ ಪ್ರಶ್ನೆ ಕೇಳಿದರೆ ಹೇಗೊ.. ಗಂಡ ಚೆನ್ನಾಗಿದ್ದಾನೆ..
ಇಲ್ಲೇ ಎಲ್ಲೊ ಇದ್ದಾನೆ...
ಮಕ್ಕಳ ಕಥೆ ಏನು ಕೇಳ್ತೀಯಾ...?
ನೋಡು.. ಇವೆಲ್ಲ ನನ್ನ ಮಕ್ಕಳು..."

ಅಂತ ಅಲ್ಲೇ ಇದ್ದ ಐದಾರು ಹೆಣ್ಣು ಮಕ್ಕಳನ್ನು ತೋರಿಸಿದಳು...

ಶಾರಿಯ ಮಾತಿನಲ್ಲಿ ಮುಗ್ಧತನವಿತ್ತು...
ವಯಸ್ಸಾಗಿದೆ ದೇಹಕ್ಕೆ..,
ಮನಸ್ಸಿಗಲ್ಲ..!

ಮನಸ್ಸು ಮೊದಲಿನಂತೆ ಇದೆ...
ಮಗುವಿನಂತೆ... ಹೂವಿನಂತೆ...


ಅಷ್ಟರಲ್ಲಿ ನನ್ನಾಕೆ ನನ್ನ ಬಳಿ ಬಂದಳು..
ಅವಳಿಗೂ... ಆಶ್ಚರ್ಯ ಆಗಿರಬೇಕು..
" ಯಾವಳಪ್ಪಾ ಇವಳು ತನ್ನ ಗಂಡನನ್ನು ಮೈಮುಟ್ಟಿ ಮಾತಾಡ್ತಾ ಇದ್ದಾಳೆ" ಅಂತ..

ಕಣ್ಣು ಹಾಗೇ ಹೇಳುತ್ತಿತ್ತು..

" ನಾನು ನಿನಗೆ ಹೇಳ್ತಾ ಇರ್ತಿನಲ್ಲ... ನನ್ನ ದೊಡ್ಡಪ್ಪನ ಮಗಳು "ಶಾರೀ"

ಶಾರೀಗೂ ಖುಷಿ ಆಯಿತು.. ಅವಳೂ ನನ್ನಾಕೆಯನ್ನು ಇನ್ನೂ ನೋಡಿರಲಿಲ್ಲ...
ನನ್ನ ಮದುವೆಗೆ ಶಾರಿ ಬಂದಿರಲಿಲ್ಲ..

"ಇವರಿಗೆ ತಮ್ಮ.. ಬಾಲ್ಯದ ನೆನಪಾದಗಾಲಲೆಲ್ಲ...
" ಶಾರಿ" ಹೆಸರು ಬಂದೇ ಬರ್ತದೆ..

ನೀವು ಅಪ್ಪೆ ಕಾಯಿ ಮಾವಿನ ಮಿಡಿಯನ್ನು "ಲಂಗದಲ್ಲಿ ಗುಬ್ಬಿ ಎಂಜಲು" ..
ಮಾಡಿ ಕೊಡುತ್ತಿದ್ದಿರಂತೆ..

ನೀವು ಅಳು ಮುಂಜಿಯಾಗಿದ್ದೀರಂತೆ..
ಯಾವಾಗ್ಲೂ ಅಳ್ತಾನೇ ಇರ್ತಿದ್ರಂತೆ...

ಎಲ್ಲವನ್ನೂ.. ಹೇಳುತ್ತಾ ಇರ್ತಾರೆ.. ನಿಮ್ಮ ಬಗ್ಗೆ.."

"ಅಯ್ಯೊ.. ಈ ಪ್ರಕಾಶ್ ಏನೂ ಕಡಿಮೆ ಇರ್ಲಿಲ್ಲ..
ಎರಡೂ ಮೂಗಿನ ಹೊಳ್ಳೆಯಿಂದ..
ಯಾವಾಗ್ಲೂ " ತುಪ್ಪದ ಹೊಳೆ" ಹರಿತಾನೇ ಇರ್ತಿತ್ತು..

ಶರ್ಟಿನ ತೋಳಿಂದ ಮೂಗನ್ನು ಒರೆಸಿಕೊಳ್ತಿದ್ದ...
ಆ ಶರ್ಟಿನ ತೋಳುಗಳು ಗಟ್ಟಿಯಾಗಿ ಗಂಜಿ ಹಾಕಿದ ಹಾಗೇ ಇರ್ತಿತ್ತು..
ಧಪ್ಪ ಚಾದರದ ಹಾಗೆ..."

ಶಾರಿಯ ಮಾತಿಗೆ ನನ್ನಾಕೆ ತಲೆ ಹಾಕುವದೊಂದೆ ಕೆಲಸವಾಯಿತು..

" ಈ ಪ್ರಕಾಶಾ ಹೇಗಿದ್ದ ಗೊತ್ತಾ..?
ಬಡಕಲು ಕಾಲುಗಳು... ದೊಡ್ಡ ಚಡ್ಡಿ...
ಯಾವಾಗ್ಲೂ ಚಡ್ಡಿಯಲ್ಲಿ ಉಚ್ಚೆ ಹೊಯ್ಕೊತಿದ್ದ..
ಚಡ್ಡಿಯಲ್ಲೇ ತೊಟ್ಟಿಲು ಕಟ್ಕೋತಿದ್ದ..."

ಇನ್ನೂ ಹೇಳ್ತಾನೇ ಇದ್ದಳು..

ಹೀಗೇ ಬಿಟ್ಟರೆ ನನ್ನನ್ನು ಜಾಲಾಡಿ ಬಿಡ್ತಾಳೆ ...
ನಾಲ್ಕು ಕಾಸಿಗೆ ಹರಾಜು ಹಾಕಿ ಬಿಡ್ತಾಳೆ....ಅನಿಸ್ತು...

"ಅಲ್ಲ್ವೆ .. ಶಾರೀ...ಏನೇ ಇಷ್ಟೆಲ್ಲ ಮಕ್ಕಳು ನಿನಗೆ?
ಅದೂ ಈಗಿನ ಕಾಲದಲ್ಲಿ...
ಗಂಡ , ಹೆಂಡ್ತಿ ಏನೂ ಪ್ಲ್ಯಾನ್ ಮಾಡ್ಲಿಲ್ವಾ..?"

"ಅಯ್ಯೋ ಅದೊಂದು ದೊಡ್ಡ ಕಥೆ ಕಣೊ..
ಇಷ್ಟೆಲ್ಲ ಮಕ್ಳು ಆದ್ರಲ್ಲಾ... ಇದರಲ್ಲಿ ನನ್ನ ಗಂಡಂದೇನೂ ತಪ್ಪಿಲ್ಲ...
ಇದಕ್ಕೆಲ್ಲ ನನ್ನ ಮಾವ ಕಾರಣ..."

" ಏನೇ ಹೇಳ್ತಿಯಾ... ಶಾರೀ.."

ಹೌದು ಕಣೊ... ನನ್ನ ಗಂಡ ಪಾಪದವ... ಏನೂ ಗೊತ್ತಾಗಲ್ಲ..
ಇವೆಲ್ಲ ನನ್ನ ಮಾವ ಮಾಡಿದ್ದು..."

"ಲೇ ಶಾರಿ.. ಹಾಗಲ್ಲ ಅನ್ನಬಾರ್ದು.."

"ನಾನು ಬೇಡ ಬೇಡ ಅಂತ ಬಡ್ಕೊಂಡೆ..ಕಣೊ..
ಎಲ್ಲಾ ಅವರೇ ಮಾಡಿದ್ದು.. "

" ಶಾರೀ ಏನು ಹೇಳ್ತಾ ಇದ್ದಿಯಾ...?"

ನನಗೆ ಹೆದರಿಕೆ ಆಯಿತು...ನನ್ನಾಕೆ ಮುಖ ನೋಡೋಣ ಅಂದ್ಕೊಂಡೆ..

"ನನ್ನ... ಮಾವ ..ಬಹಳ ಹಠವಾದಿ..
ನನ್ನ ಗಂಡ ಬಹಳ ಮುಗ್ಧ..
ಏನೂ ಗೊತ್ತಾಗಲ್ಲ.... ಅವರಿಗೆ...!

ನಾನು ಬೇಡ ಅಂದ್ರೂ ನನ್ನ ಮಾವ ಕೇಳ್ಬೇಕಲ್ಲಾ..?
ನನ್ನ ಗಂಡನ ಮಾತನ್ನೂ ಕೇಳ್ಳಿಲ್ಲ..
ಎಲ್ಲಾ.. ನನ್ನ ಮಾವ ಮಾಡಿದ್ದು.."

" ಏನಾಯ್ತು.....?"

" ಮೊದಲನೆಯದು ಹೆಣ್ಣಾಯ್ತು..
ಗಂಡು ಬೇಕು ಅಂದ್ರು..
ಎರಡನೆಯದು ರೆಡಿ ಮಾಡಿದ್ವಿ...
ಎರಡನೆಯದೂ ಹೆಣ್ಣಾಯ್ತು...
ಮತ್ತೆ ಮೂರನೇಯದೂ ಕೂಡ ಹೆಣ್ಣು...
ನನ್ನ ಮಾವಂದು ಒಂದೇ ಹಠ.
ಕುಲಪುತ್ರ ಒಬ್ಬ ಬೇಕು.. ಅಂತ..

ಇದರಲ್ಲಿ ನನ್ನ ಗಂಡಂದೇನು ತಪ್ಪಿಲ್ಲ..
ಬಹಳ ಪಾಪದ ಮನುಷ್ಯ ಅವರು.."


ನನ್ನ ಹೆಂಡತಿ ಮುಖ ನೋಡಿದೆ....

ಕಷ್ಟಪಟ್ಟು ನಗು ತಡೆದು ಕೊಳ್ಳುತ್ತಿದ್ದಳು..

"ಹೀಗೆ ಆರು ಹೆಣ್ಣು ಮಕ್ಕಳಾಗಿ ಬಿಟ್ಟವು ಪ್ರಕಾಶ...."

"ಈಗಿನ ಕಾಲದಲ್ಲಿ ಗಂಡು, ಹೆಣ್ಣು ಸಮಾನರು... ಶಾರೀ.."

"ಇದೆಲ್ಲ ನನ್ನ ಮಾವನಿಗೆ ಅರ್ಥ ಆಗಬೇಕಲ್ಲ.... "
ಪ್ರಕಾಶ.....
ಈ ... "ಮಕ್ಕಳ " ವಿಷಯದಲ್ಲಿ ..
ನೀನೆ..ಸಹಾಯ ಮಾಡಬೇಕು ಮಾರಾಯಾ...!..!!.."


" ನಾನಾ...!! ..ಏನು ಮಾರಾಯ್ತಿ.....???.."

ನನಗೆ ಆತಂಕವಾಯ್ತು...
ನನಗೆ ಮಡದಿಯ ಕಡೆ ನೋಡುವ ಧೈರ್ಯವಿರಲಿಲ್ಲ.....

"ನಿಂಗೆ ಹೇಗೆ ...ಒಂದೇ ಗಂಡು ಮಗ....?
ಅದೂ ಮೊದಲನೆಯ ಪ್ರಯತ್ನದಲ್ಲೇ...? ಏನು ಇದರ ರಹಸ್ಯ...?"

"ಅಯ್ಯೋ ಮಾರಾಯ್ತಿ... ಅದೆಲ್ಲ ದೇವರು ಕೊಡ್ತಾನೆ..
ನಮ್ಮ ಕೈಲಿ ಏನಿಲ್ಲ ಮಾರಾಯ್ತಿ.. ಎಂಥಹ ರಹಸ್ಯನೂ ಇಲ್ಲ...
ಬೇರೇ ವಿಷಯ ಮಾತಾಡು ಶಾರೀ....
ಎಲ್ಲಿ ನಿನ್ನ ಗಂಡ..?
ಪರಿಚಯ ಮಾಡ್ಕೊಡೆ...."


ನನ್ನ ಅವಸ್ಥೆ ಕಂಡು ನನ್ನಾಕೆ ನಗುತ್ತಿದ್ದಳು..

ಅಷ್ಟರಲ್ಲಿ ಬಾಯಿತುಂಬಾ ಎಲೆ ಅಡಿಕೆ ತುಂಬಿಕೊಂಡ ಒಬ್ಬರು ಬಂದರು...
ಶಾರಿ ಅವರಿಗೆ ನನ್ನ ಪರಿಚಯ ಮಾಡಿಸ ತೊಡಗಿದಳು..

"ರೀ ನಾನು ಹೇಳ್ತಾ ಇರ್ತಿನಲ್ಲ.. ಪ್ರಕಾಶ ಅಂತ..
ಇವನೇ ಪ್ರಕಾಶ..."

ಅವರು ತಲೆ ಕೆರೆದು ಕೊಂಡರು...
ಮತ್ತೆ ಶಾರೀನೇ ಹೇಳಿದಳು..

"ಅರ್ಥ ಆಗ್ಲಿಲ್ವಾ...ನಮ್ಮ ಮಕ್ಕಳು ಚಡ್ಡಿಯಲ್ಲಿ ಕಕ್ಕ ಮಾಡ್ಕೊಂಡಾಗ...
ಪ್ರಕಾಶಾ ಅಂತ ಒಬ್ಬ ಇದ್ದ ..
"ತೊಟ್ಟಿಲು ಕಟ್ಟುತ್ತಿದ್ದ ಚಡ್ಡಿಯಲ್ಲಿ" ಅಂತ ಹೇಳ್ತಾಇರ್ತಿನಲ್ವಾ...
ಅದೇ.. ಪ್ರಕಾಶ.. ಇವ್ನು..."

ಈಗ ಅವರಿಗೆ ಜ್ಞಾನೋದಯ ಆದಂತೆ ಬಾಯಿತುಂಬಾ ಕಷ್ಟಪಟ್ಟು ನಕ್ಕರು...

ನನ್ನ ಬಳಿ ಬಂದು.. ನನ್ನ ಕೈ ಹಿಡಿದು..

"ನೋಡಿ ನಂಗೇ ಗೊತ್ತೇ ಆಗ್ಲಿಲ್ಲ.... ನೀವು ಪ್ರಕಾಶಾ ಅಂತ...
ನಾನು ಗಣಪ್ತಿ... ಅಂತ... ಶಾರೀ ಗಂಡ..."

ನನಗೆ ನಗಬೇಕೊ.. ಅಳಬೇಕೊ ಅಂತ ಗೊತ್ತಾಗದೆ ನನ್ನಾಕೆಯ ಮುಖ ನೋಡಿದೆ...
ಮುಖದ ಬೆವರು ಒರಿಸಿಕೊಂಡೆ...

ಅಷ್ಟರಲ್ಲಿ ಶಾರೀ.. " ಪ್ರಕಾಶಾ... ಇವತ್ತು ರಾತ್ರಿ ನಮ್ಮನೆಗೆ ಬರಲೇಬೇಕು.. ..
ನಮ್ಮನೆಯಲ್ಲೇ ಇರಬೇಕು.."

ಅದಕ್ಕೆ ಅವಳ ಗಂಡನೂ ಧ್ವನಿ ಸೇರಿಸಿದ..

ಅವರ ಮುಗ್ಧ ಆತ್ಮೀಯತೆಗೆ ಏನೂ ಹೇಳಬೇಕೆಂದು ಗೊತ್ತಾಗಲಿಲ್ಲ...

ಈಗಲೇ... ನನ್ನನ್ನು ಹರಾಜು ಹಾಕಿಬಿಟ್ಟಿದ್ದಾರೆ..
ಇವರಮನೆಗೆ ಹೋಗಿಬಿಟ್ಟರೆ ಏನು ಕಥೆ...
ಇನ್ನು ಏನೇನು ಹಳೆಯ ಕಥೆಯೆಲ್ಲಾ ಹೇಳಿ...
ಎಲ್ಲಿ ಮಾನ ತೆಗಿತಾಳೋ..

ಅಷ್ಟರಲ್ಲಿ ನನ್ನಾಕೆ "ನಾವು ಬರ್ತೀವಿ.. ಅಡಿಗೆಗೆ ಏನೂ ತೊಂದರೆ ತೆಗೆದು ಕೊಳ್ಳಬಾರದು.."

ಶಾರಿಗೂ ಅವಳ ಗಂಡನಿಗೂ ಬಹಳ ಸಂತೋಷವಾಯಿತು...
ಶಾರೀ ಬಹಳ ಖುಷಿಯಿಂದ ಹೇಳಿದಳು..

" ಈ ಪ್ರಕಾಶಾ ಬಹಳ ವರ್ಷಗಳ ನಂತರ ಸಿಕ್ಕಿದ್ದಾನೆ..
ಇವತ್ತು ಹಿರಿಯರು ಯಾರೂ ಇಲ್ಲ..
ರಾತ್ರಿ ತುಂಬಾ ಮಾತೋಡೋಣ.. ಅಡಿಗೆ ಸಿಂಪಲ್ ಮಾಡ್ತೇನೆ.. ಬನ್ನಿ.."

ಶಾರಿಯ ಸಂಭ್ರಮ ನೋಡಿ ನಮಗೆ ಬರಲು ಆಗುವದಿಲ್ಲವೆಂದು ಹೇಳಲು ಮನಸ್ಸಾಗಲಿಲ್ಲ...

ಅಲ್ಲಿಯವರೆಗೆ.. ಸುಮ್ಮನಿದ್ದ ನನ್ನ ಮಗ ನನ್ನನ್ನು ಕೇಳಿದ..

" ಅಪ್ಪಾ .. ಚಡ್ಡಿಯಲ್ಲಿ.. ತೊಟ್ಟಿಲು ಕಟ್ಟುವದು ಅಂದರೆ ಏನು...? "

"..ನೀನು ಸಿಟಿಯಲ್ಲಿ ಬೆಳ್ದಿದ್ದೀಯಾ...
ನಿಂಗೆ ಅದೆಲ್ಲ ಅರ್ಥ ಆಗಲ್ಲ ಬಿಡು
..
ಸುಮ್ನೆ.. ಇರು..."

ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ...


( ಸಿರ್ಸಿ ಕಡೆ "ಗಣಪತಿ" ಹೆಸರನ್ನು "
"ಗಣಪ್ತಿ.., ಗಪ್ಪತಿ" ಎಂದು ಕರೆಯುವ ರೂಢಿಯಿದೆ)
ಲೇಖನದ ಕೆಲವು ಶಬ್ಧದ ಅರ್ಥ ಆಗಿರದಿದ್ದರೆ...
ಶಂಕರ್ ಪ್ರಸಾದರ ಪ್ರತಿಕ್ರಿಯೆ ಓದಿ...
ಹೊಟ್ಟೆ ತುಂಬಾ ನಕ್ಕುಬಿಡಿ...

99 comments:

PARAANJAPE K.N. said...

ಬಹಳ ಚೆನ್ನಾಗಿದೆ ಪ್ರಕಾಶರೆ, ನಿಮ್ಮ ನವಿರುಹಾಸ್ಯದ ನಿರೂಪಣೆ, ಚೆಡ್ಡಿಯಲ್ಲಿ ತೊಟ್ಟಿಲು ಕಟ್ಟುವುದು, ಮೂಗಲ್ಲಿ ತುಪ್ಪದ ಹೊಳೆ ಸುರಿಸುವುದು, ಚೆಡ್ಡಿಯಲ್ಲಿ ಉಚ್ಚೆ ಹೊಯ್ಕೊಳೋದು, ಬಹಳ ಚೆನ್ನಾಗಿದೆ. ನಿಮ್ಮ ಈ ಲಲಿತಪ್ರಬ೦ಧ ಶೈಲಿಯ ಬರಹ ಎ೦ದಿನ೦ತೆ super.

NiTiN Muttige said...

ಒಹೋ!!! ಅಯ್ಯೋ!! ಚಿಕ್ಕವರಿದ್ದಾಗ ಜೋಕಾಲಿ ಕಟ್ಟದೇ ಇದ್ದವರು ಯಾರು!! ನಾನು ಶಾಲೆಗೆ ಹೋಗುವಾಗ ಮೂಗಿನ ತೂದಿಯಿಂದ ಕೆಲವರದ್ದು ಗಂಗೆ ಇಳಿಯುತ್ತಿತ್ತು. ಅಮೃತಾಂಜನದಂತೆ ಗೋಚರಿಸುತ್ತಿತ್ತು!!! :)
ಇವಾಗ ಇಂಥ ಸೀನೆಲ್ಲಾ ಇಲ್ಲಾ ಬಿಡಿ!!!:)

ಶಾರಿ ಊಟಕ್ಕೆ ಏನೇನ್ ಮಾಡಿದ್ರು??! ಅಲ್ಲೂ ನಿಮ್ಮ ಚಿಕ್ಕಂದಿನ ಘಟನೆಗಳನ್ನಾ ಮನೆಯವರಿಗೆ ದರ್ಶನ ಮಾಡಿಸಿದರೆ!!

Ittigecement said...

ಪರಾಂಜಪೆಯವರೆ....

ಬಹಳ ಮುಗ್ಧ ಹುಡುಗಿ ಶಾರೀ....
ಗುಬ್ಬಿ ಎಂಜಲು ಮಾಡಿ ಕೊಡುತ್ತಿದ್ದ ಅಪ್ಪೆ ಮಿಡಿ ಮಾವಿನ ಕಾಯಿಯ ರುಚಿ ಇನ್ನೂ ಹಸಿರಾಗಿದೆ...
ತನ್ನ ಮುಗ್ಧ ಮಾತಿನಿಂದ ನಮ್ಮನ್ನೆಲ್ಲ ನಗೆಗಡಲಿನಲ್ಲಿ ತೇಲಿಸುತ್ತಿದ್ದಳು ಆ ಹುಡುಗಿ ..
ಬಚ್ಚಿಟ್ಟ ಬಾಲ್ಯದ ನೆನಪುಗಳು ..
ಈ ಸಾರಿ ಊರಿಗೆ ಹೋದಾಗ ನೆನಪಾದವು...

ಮುಗ್ಧ ಮನಸ್ಸಿನ ಶಾರಿಯೆಂದರೆ ನನಗಿಷ್ಟ...
ಶಾರೀ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ನಿತಿನ್....

ಅವಳ ಮನೆಗೆ ಹೋದಾಗಿನ ನಡೆದ ಕಥೆ ತುಂಬಾ ಚೆನ್ನಾಗಿದೆ...
ನಾನಂತೂ ಜೀವನದಲ್ಲಿ ಮರೆಯಲಾರೆ..
ಆ ಮುಗ್ಧ ಮಾತಿನ ಶಾರೀ..
ಅವಳ ಗಂಡ ಗಣಪ್ತಿ...
ಒಬ್ಬರಿಗಿಂತ ಒಬ್ಬರು ಜೋರು ಮಾತಿನಲ್ಲಿ...
ಮಧ್ಯದಲ್ಲಿ ನನ್ನ ಅವಸ್ಥೆ..
ದೇವರಿಗೇ ಪ್ರೀತಿ...
ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು...

ನೀವು ಡಿಗ್ರಿ ಪಾಸಾಗಿದ್ದಕ್ಕೆ, ಅಭಿನಂದನೆಗಳು..
ನಿಮ್ಮ ಹುಟ್ಟು ಹಬ್ಬಕ್ಕೆ ( ೨೪/೫)ಶುಭಾಶೀರ್ವಾದಗಳು..

GOD BLESS YOU...!!

Anonymous said...

ಪ್ರಕಾಶಣ್ಣ,
ಚೆನ್ನಾಗಿದೆ ನಿಮ್ಮ ಕಥೆ.
ಆಮೇಲೆ ಶಾರಿ ಮನೆಗೆ ಹೋಗಿದ್ರ? ಏನಾಯ್ತು?

Ittigecement said...

ಜ್ಯೋತಿಯವರೆ...

ಬಹಳ ದಿನಗಳ ನಂತರ ಬಂದಿದ್ದೀರಿ...
ಶಾರಿಯ ಮನೆಯಲ್ಲಿ ನಡೆದ ಘತನೆಗಳನ್ನು ಮುಂದಿನ ಕಂತಿನಲ್ಲಿ ವಿವರಿಸುವೆ...

ನಾವು ಸಿಟಿಯಲ್ಲಿರುವವರಿಗೆ ಮುಗ್ಧತನ ಯಾಕಿರುವದಿಲ್ಲ..
ಮುಖವಾಡದಲ್ಲಿ ಯಾಕಿರಬೇಕು..?
ಶಾರಿಯನ್ನೇ ನೋಡಿ...
ತನ್ನ ಮಾತಿನಲ್ಲಿ, ನಡತೆಯಲ್ಲಿ ಯಾವುದೇ ತೋರಿಕೆಯ ನಾಟಕವಿಲ್ಲ...
ಅವಳ ಪುಣ್ಯಕ್ಕೆ ಅವಳ ಗಂಡನೂ ಹಾಗೆಯೇ ಇದ್ದಾನೆ..
ಅವನು ಮುಂದಿನ ಕಂತಿನಲ್ಲಿ ಬರುತ್ತಾನೆ ನೋಡಿ...

ನಾವೂ ಮಗುವಂತೆ ಇರಬೇಕು...
ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ...?

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

ಅಂತರ್ವಾಣಿ said...

ಪ್ರಕಾಶಣ್ಣ,
ನಿಮ್ಮ ಪೋಸ್ಟ್ ಓದಿ ನಾನು ಇಷ್ಟು ನಕ್ಕಿದ್ದು ಇಲ್ಲವೇ ಇಲ್ಲ.
ನಿಮ್ಮ ಅಕ್ಕ ಸಕ್ಕತ್ ಸಸ್ಪೆಸ್ ಆಗಿ ಮಾತಾಡಿದರು. ’ಇವೆಲ್ಲ ಮಾಮ ಮಾಡಿದ್ದು. ಗಂಡನ ತಪ್ಪೇನು ಇಲ್ಲ’.

ನಿಮ್ಮ ಬಾಲ್ಯದ ಕಥೆಯನ್ನು Censor ಇಲ್ಲದೆ ಹಾಕಿದ್ದೀರಲ್ಲ. ಯಾಕೆ? ಅವೆಲ್ಲ ಬೇಡ ಅನಿಸಿತ್ತು.

Ittigecement said...

ಅಂತರ್ವಾಣಿ....

ವಯಸ್ಸಾದರೂ ಮುಗ್ಧತನ ಇಟ್ಟುಕೊಳ್ಳುವದು ಬಹಳ ಕಷ್ಟ..
ಹಳ್ಳಿಗಳಲ್ಲಿ ಇನ್ನೂ ಕಾಣ ಬಹುದು...
ಶಾರೀ ಮೊದಲಿನಿಂದಲೂ ಹಾಗೆಯೇ ಇದ್ದಳು..

ಯಾರು ಏನೆಂದುಕೊಂಡರೂ... ತಾನು ಹೇಳುವದನ್ನು..
ಮುಗ್ಧ ಭಾಷೆಯಲ್ಲಿ ಹೇಳಿಯೇ ಬಿಡುತ್ತಿದ್ದಳು...

ಅವಳ ಮಾತುಗಳನ್ನು ಹಾಗೆಯೇ ಇಟ್ಟಿದ್ದೇನೆ...
ಅಶ್ಲೀಲ ಅನಿಸಲಿಲ್ಲ...
ಸಹ್ಯ ಎನಿಸಿತು....

ಶಾರಿಯ ಮಾತುಗಳು ಇಷ್ಟವಾಗಿ
ನಕ್ಕಿದ್ದಕ್ಕೆ ಧನ್ಯವಾದಗಳು....

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ವಸುಧೇಂದ್ರರ ಭಾಷೆಯಲ್ಲಿ ಹೇಳುವುದಾದರೆ ನೀವೂ ಚಡ್ಡಿ rascal. ತುಂಬಾ ಚೆನ್ನಾಗಿತ್ತು. ಮಾವ ಮಾಡಿದ್ದು ಅಂದ್ರೆ ನಾವುಗಳು ಏನೇನೆಲ್ಲಾ ಕಲ್ಪಿಸಿಕೊಳ್ಳಬೇಕು! ಮೂಗಿನ ಡಾಲ್ಡಾ, ಚಡ್ಡಿ ಒದ್ದೆ ಮುಚ್ಚಿಡದೆ ಬರೆದಿದ್ದೀರಿ. ಮುಂದೆ ನಡೆದದ್ದು ಬರೆಯಿರಿ.

ಮನಸು said...

ಪ್ರಕಾಶಣ್ಣ
ಏನು ಇದು ಎಲ್ಲಿ ಹೋದರಲ್ಲಿ ಒಂದೊಂದು ಕಥೆ... ನಿಮ್ಮನ್ನು ಚೆನ್ನಾಗಿಯೇ ಜಾಲಾಡಿಸಿದ್ದಾರೆ..ಹಾ ಹಾ.. ಆಶಾರವಗಿಗೆ ಬೊಂಬಾಟ್ ಕಥೆ ಸಿಕ್ಕಿದೆ ನಿಮ್ಮನ್ನು ರೇಗಿಸಲು....ಅವರ ಮನೆಗೆ ಹೋದಾಗಿನ ಕಥೆಯನ್ನು ಬರೆದುಬಿಡಿ ನೋಡುವ....
ಶಾರೀ ಹಾಗು ಗಣಪ್ತಿರವರ ಮುಗ್ಧತೆ ಎದ್ದು ಕಾಣುತ್ತದೆ.
ವಂದನೆಗಳು ಮತ್ತಷ್ಟು ನಗೆಯ ಚಟಾಕಿಗಳು ಬರಲಿ

sunaath said...

ಪ್ರಕಾಶ,
ಸಣ್ಣವರಿದ್ದಾಗ ಏನೇನಲ್ಲ ಮಾಡಿಕೊಂಡೀರಪ್ಪ! ನಾವೂ ಅಂಥವರೇ ಬಿಡಿ. ನಿಮ್ಮ ಲೇಖನಗಳು ತುಂಬ ಇಷ್ಟ ಆಗ್ತವೆ!

Prabhuraj Moogi said...

ಸೂಪರ ಸೂಪರ... ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು ಊರಿಗೆ ಹೋದಾಗ ನಮ್ಮ ಹಳ್ಳಿಯೂರಿನ ಜನ ಸಿಕ್ಕಾಗ ನನಗೂ ಹೀಗೇ ಅನುಭವ ಆಗಿದ್ದಿದೆ.. ಅದರಲ್ಲೂ ನೀವು ಆ ಶಾರಿ ಅಂತ ಕರೆದಾದ್ದೂ ಅದೂ ಇಶ್ಟು ದೊಡ್ಡವರಾದ ಮೇಲೂ ಅದು ಸಲಿಗೆಯನ್ನು ಎದ್ದು ತೋರಿಸುತ್ತದೆ... ಹೀಗೆ ಬರೀತಿರಿ...

umesh desai said...

ಪ್ರಕಾಶ್ ಅವರೆ ನಾನೂ ಹುಬ್ಬಳ್ಳ್ಯಾಗ ಹುಟ್ಟಿದಾವ "ಚಡ್ಡಿಯೊಳಗ ತೊಟ್ಟಲ ಕಟ್ಟುವುದು" ಗೊತ್ತಾಗಲಿಲ್ಲ ನೀವು ಹೇಳುವುದು ಖರೆ
ಆ ನಿಮ್ಮ ಶಾರಿ ಕಲ್ಮಶ ಇಲ್ಲದವರು...ಆದ್ರೂ ಹೆಂಡಂದಿರ ಮುಂದ ಅನಿಸ್ಕೊದು ಅಷ್ಟು ಸರಿ ಅನಸೂದಿಲ್ಲ ಏನಂತೀರಿ....

ಬಾಲು said...

chanda ide, mundina kanthinalli allenaayithu, Shaari nimma baalya kedaki nimma magana kainalli mattashtu prashne galannu kelisidala?

Innondu secreate prashne: Gandu magu huttisikollodu hege antha enadru salahe kodthiro hege? (Obba consultant thara mathra :) )

Guruprasad said...

ಪ್ರಕಾಶ್,
ಓದ್ತಾ ಓದ್ತಾ ನಗು ತಡಿಯೋಕೆ ಆಗಲಿಲ್ಲಾ,,, ತುಂಬ ಚೆನ್ನಾಗಿ ಬರಿತಿರರೀ ನೀವು......ಹಾ ಹಾ.. ಸಿಂಪಲ್ language ಅಸ್ಟೆ ನವಿರಾದ ಹಾಸ್ಯ.....ಎಲ್ಲ ಲೇಖನಗಳು ಒಂದಕಿಂಥ ಇಂದು ಚೆನ್ನಾಗಿ ಮೂಡಿ ಬರ್ತಾ ಇದೆ..... ಗುಡ್
ಶಾರಿ ಮನೆಯಲ್ಲಿ ಉಟದ ವಿಸ್ಯ (ಅಲ್ಲ ಅಲ್ಲ ನೀವು ಚಿಕ್ಕ ಮಕ್ಕಳಗಿದ್ದಾಗ ಮಡಿದ ತಲೆ ಹರಟೆ ವಿಷ್ಯ ) ಏನ್ ಆಯಿತು ಅಂತ ಹೇಳಿ...ಕೇಳೋಕ್ಕೆ ಒಳ್ಳೆ ಮಜೆ ಇದೆ.....
ಗುರು

SSK said...

ಪ್ರಕಾಶ್ ಹೆಗ್ಡೆ ಅವರೇ, ತುಂಬಾ ಹಾಸ್ಯಮಯ ಲೇಖನ! ಚೆನ್ನಾಗಿ ಬರೆದಿದ್ದೀರ / ನಗಿಸಿದ್ದೀರ.
ಇನ್ನಷ್ಟು ನಗಲು (ಮುಂದಿನ ಲೇಖನಕ್ಕಾಗಿ) ಕಾಯುತ್ತಿದ್ದೇವೆ, ಮುಂದುವರೆಸಿ.

ರೂpaश्री said...

ಪ್ರಕಾಶ್ ಅವರೇ,
ಓದುಗರನ್ನ ಚೆನ್ನಾಗಿ ನಗಿಸಿದ್ದೀರ. ನವಿರಾದ ಹಾಸ್ಯ ಉಳ್ಳ ಲೇಖನ! ಶಾರಿ ಮಾತುಗಳಲ್ಲಿ ಮುಗ್ದತೆ ಮಿಂಚುತ್ತಿತ್ತು..

shivu.k said...

ಪ್ರಕಾಶ್ ಸರ್,

ಬಾಲ್ಯದ ಗೆಳೆಯರು ಸಿಕ್ಕಾಗ ಆಗುವ ಆನಂದವೇ ಬೇರೆ...ಆಗಿನ ಸಲಿಗೆ ಮುಗ್ದತೆ ಈಗ ಇರುವುದಿಲ್ಲ...ಅದು ಈಗಲೂ ಇತ್ತೆಂದರೆ...ಜೀವನವೇ ಸೊಗಸು.

ಮತ್ತೆ ಮೂಗೊಳಗಿನ ವಿಚಾರವನ್ನು ಹಿಂದಿನ ಲೇಖನದಲ್ಲಿ ಬರೆದಿದ್ದಿರಿ...ಆಗ ಓಕೆ...ಮತ್ತೆ ಅದನ್ನೇ [ತುಪ್ಪ ಸುರಿಯುವುದು]ಕಲ್ಪಿಸಿಕೊಂಡಾಗ ನನಗೆ ಆಸಹ್ಯವೆನಿಸಿತು.[ನಾವು ಫೋಟೋಗ್ರಾಫರ್ ಆಗಿರುವುದರಿಂದ ಲೇಖನ ಓದುವಾಗ ಒಂದೊಂದೇ ಚಿತ್ರಗಳು ಮೂಡುತ್ತಿರುತ್ತವೆ..ಅದು ನಮ್ಮ ಅದೄಷ್ಟವೋ..ದುರಾದೃಷ್ಟವೋ ಗೊತ್ತಿಲ್ಲ..]ಇದು ಕೇವಲ ನನ್ನ ವೈಯಕ್ತಿಕ ಅನಿಸಿಕೆಯಷ್ಟೆ.

ಉಳಿದಂತೆ ಬರಹ ಮತ್ತು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

Ittigecement said...

ಹುಡುಕಾಟದ ಮಲ್ಲಿಕಾರ್ಜುನ್....

ಬಾಲ್ಯವೇ ಹಾಗೆ..
ಅಲ್ಲಿ ಮುಗ್ಧತೆಗೆ ಸೆನ್ಸಾರ್ ಇರೋದಿಲ್ಲ....
ವಯಸ್ಸಾದರೂ ಮಗುವಿನ ಹಾಗೆ ಶಾರಿ ಹೇಳಿದ ಮಾತನ್ನು..
ಹೆಂಡತಿ, ಮಗನ ಎದುರಿಗೆ ಸ್ವಲ್ಪ ಮುಜುಗರ ಅನಿಸಿದರೂ...
ಆ ಮಾತುಗಳನ್ನು ಸೆನ್ಸಾರ್ ಮಾಡಲು ಮನಸ್ಸು ಬರಲಿಲ್ಲ...

ಬಾಲ್ಯದಲ್ಲಿ ಹಾಗಿದ್ದೆ.. ಹಳ್ಳಿಯ ಜೀವನ...
ಆಗ ನಾನು ಚಂದ ಇದ್ದೆ ಅನ್ನಲು..
ಮುಖವಾಡ ಹಾಕಲು ಮನಸ್ಸಾಗಲಿಲ್ಲ....

ಶಾರಿಯ ಭೇಟಿ ಮತ್ತೆ ಆ ದಿನಗಳ ನೆನಪನ್ನು ಮಾಡಿತು...

ನಿಮ್ಮ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಮನಸು...

ನನ್ನಾಕೆಗೆ ನನ್ನ ಕಾಲೆಳೆಯಲು ಒಳ್ಳೆಯ ವಿಷಯ ಸಿಕ್ಕಿದೆ...
ಸಣ್ಣವರಿದ್ದಾಗ ನಿಮ್ಮ ವಿಷಯವೆಲ್ಲ ಗೊತ್ತಾಗಿದೆ ಎಂದು ಬಾಯಿಮುಚ್ಚಿಸಲು ನೋಡುತ್ತಾರೆ..

ಶಾರಿಯ ಗಂಡ ಗಣಪ್ತಿಯವರುಊ ಸಹ ಮುಗ್ಧ...

ದೇವರು ಜೋಡಿಯನ್ನು ಹೇಗೆ..
ಹುಡುಕಿ, ಹುಡುಕಿ ಮಾಡುತ್ತಾನೆ.....!!

ಅವರ ಮನೆಗೆ ಹೋಗಿ ಖುಷಿಯಾಯಿತು...

ಪ್ರೋತ್ಸಾಹ ನುಡಿಗಳು ಮತ್ತಷ್ಟು ಬರೆಯಲು ಪ್ರೇರಣೆ ಕೊಡುತ್ತದೆ..
ಧನ್ಯವಾದಗಳು...

Ittigecement said...

ಸುನಾಥ ಸರ್....

ನಾನು ಬೇಳೆದು ದೊಡ್ಡವನಾದದ್ದು ಸಿರ್ಸಿಯ ಬಳಿ ಒಂದು ಕುಗ್ರಾಮ..
ನಮ್ಮೂರಿಗೆ ಈಗಲೂ ಸಹ ಬಸ್ಸಿಲ್ಲ..

ಈ ಪೇಟೆಯ ಮಕ್ಕಳಹಾಗೆ ಶಿಸ್ತಾಗಿ, ನೀಟಾಗಿ ಬೆಳೆಯಲಿಲ್ಲ...
ಆ ಥರಹದ ವಾತಾವರಣವೂ ಅಲ್ಲಿಲ್ಲವಾಗಿತ್ತು...

ಹಾಗೇ ಬೇಳೆದಿರುವದು ನಿಜವಿರುವಾಗ ಹೇಳಿಕೊಳ್ಳುವದಕ್ಕೇನು ನಾಚಿಕೆ...?
ಶಾರೀ ಸಲುಗೆಯಿಂದ, ಪ್ರೀತಿಯಿಂದ..
ನನ್ನಾಕೆ, ಮಗನ ಮುಂದೆ ನನ್ನನ್ನು ಹರಾಜು ಹಾಕಿಬಿಟ್ಟಳು...

ಸರ್..
ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...

Unknown said...

ಶಾರಿ ಮತ್ತು ಗಣಪ್ಪಿಯ ಮುಂದಿನ ಕಂತಿಗೆ ಕಾಯುತ್ತಿದ್ದೇನೆ... :-)

ವಿನುತ said...

ಮುಕ್ತ ಹಾಗು ನೈಜ ಬರವಣಿಗೆ. ಹಾಸ್ಯದ ಲೇಪನ. ಅನುಭವಗಳೇ ಹಾಗೆ. ಮತ್ತೊ೦ದು ತು೦ಟ ಹಾಗು ಸು೦ದರ ಬರವಣಿಗೆಗೆ ಅಭಿನ೦ದನೆಗಳು.

Unknown said...

ಪ್ರಕಾಶ್ ಅದ್ಭುತವಾದ ಬರವಣಿಗೆ. ಓದುವಾಗ ನನ್ನನ್ನು ಎಷ್ಟು ಹಿಡಿದಿಟ್ಟಿತೆಂದರೆ, ನಡುವೆ ಬಂದವರನ್ನು ಕತ್ತು ಸಹ ಎತ್ತಿನೋಡದೆ ಓದಿ ಮುಗಿಸಿದ್ದೆ. ನಂತರ ನೋಡಿದರೆ ಬಂದವರು ನಮ್ಮ ಕಾಲೇಜಿನ ಪ್ರಾಂಶುಪಾಲರು. ಅವರು ಏನು ಅಷ್ಟೊಂದು ಮುಳುಗಿ ಹೋಗಿದ್ದಿರಿ? ಎಂದಾಗ ಅವರನ್ನು ನನ್ನ ಕುರ್ಚಿಯಲ್ಲಿ ಕೂರಿಸಿ ಮೊದಲಿಂದ ಓದಿಸಿದೆ. ಅವರು ಓದಿ ಬಾಯಿತುಂಬಾ ನಕ್ಕು ನನಗೆ ಹೇಳಬಂದಿದ್ದನ್ನು ಮರೆತು ವಾಪಸ್ಸಾದರು! ಇದರಲ್ಲಿ ಒಂದಕ್ಷರವೂ ಉತ್ಪ್ರೇಕ್ಷೆಯಿಲ್ಲ ಮಾರಾಯ್ರೆ!
ಇನ್ನು ನಿಮ್ಮ ಮಗನ ಪ್ರಶ್ನೆಗೆ ನಿಮ್ಮ ಉತ್ತರ ನನಗೆ ಸಮಾಧಾನ ತರಲಿಲ್ಲ. ಬೆಳೆಯುವ ಮಕ್ಕಳ ಕುತೂಹಲವನ್ನು ಹೀಗೆ ಹತ್ತಿಕ್ಕಬಾರದು ಅಲ್ವಾ? ಹೇಳಿಬಿಡಿ. ಅವನಿಗೂ ಒಂದು ಹೊಸತರದ ಕಲ್ಪನೆ ಮೂಡಬಹುದು!

PaLa said...

>>ನೀವು ಅಪ್ಪೆ ಕಾಯಿ ಮಾವಿನ ಮಿಡಿಯನ್ನು "ಲಂಗದಲ್ಲಿ ಗುಬ್ಬಿ ಎಂಜಲು" ..
ನನ್ನಕ್ಕಂದಿರೂ ಹೀಗೇ ಮಾವಿನ ಕಾಯಿ ಕಚ್ಚಿ ಕೊಡ್ತಾ ಇದ್ರು :)

>>ಆ ಶರ್ಟಿನ ತೋಳುಗಳು ಗಟ್ಟಿಯಾಗಿ ಗಂಜಿ ಹಾಕಿದ ಹಾಗೇ ಇರ್ತಿತ್ತು..
ಹ್ಹಿ ಹಿ

ಎಷ್ಟೊಂದ್ ದಿನದ ಮೇಲೆ ಬಾಲ್ಯದಲ್ಲಿ ನೋಡಿದ ಗೆಳೆಯರೋ/ಬಂಧುಗಳೋ ಸಿಕ್ಕಿದ್ರೆ ಹಳೇದೆಲ್ಲಾ ಕೆದಕಿ ಎಷ್ಟು ಹಿತ ಆಗುತ್ತೆ ಅಲ್ವ. ಪಾಪ ೬ ಹೆಣ್ಣು ಮಕ್ಳಿಗೆ ಈಗಿನ ಕಾಲದಲ್ಲಿ ಮದ್ವೆ ಮಾಡ್ಸೋದೆ ದೊಡ್ಡ ಸಮಸ್ಯೆ!

ಹದವಾದ ಹಾಸ್ಯ, ಸವಿನೆನಪುಗಳೊಂದಿಗೆ ಬೆರೆತ ನಿಮ್ಮ ಬರಹ ಚೆನ್ನಾಗಿದೆ.

ಕ್ಷಣ... ಚಿಂತನೆ... said...

ಸರ್‍, ಬರಹದ ಭಾಷೆ, ನಿರೂಪಣೆ, ಜೊತೆಗೊಂದಿಷ್ಟು ಹಾಸ್ಯ, ಸಂಭಾಷಣೆ. ವಿನೋದ ಇವೆಲ್ಲ ಚೆನ್ನಾಗಿ ಮೂಡಿಬಂದಿದೆ.

ಮುಂದೇನಾಯಿತು ಎನ್ನುವ ಕುತೂಹಲ... ಬರೆಯುವಿರಲ್ಲಾ??

Shankar Prasad ಶಂಕರ ಪ್ರಸಾದ said...
This comment has been removed by the author.
Shankar Prasad ಶಂಕರ ಪ್ರಸಾದ said...

ಪ್ರಕಾಸಪ್ಪ,
ನೀವು ಚಿಕ್ಕಂದಿನಲ್ಲಿ ಚಡ್ಡಿಯಲ್ಲಿ ತೊಟ್ಟಿಲು ಕಟ್ತಾ ಇದ್ರಿ.. ನಾನು ಆರನೇ ಕ್ಲಾಸಿನಲ್ಲಿ ಇದ್ದಾಗ ಒಮ್ಮೆ ಕಟ್ಟಿದ್ದೆ.
ಒಮ್ಮೆ ಬೆಳಿಗ್ಗೆ, ಮನೆಯಿಂದ ಸ್ಕೂಲಿಗೆ ಹೋಗಬೇಕಾದ್ರೆ ಹೊಟ್ಟೆ ಗುಡು ಗುಡು ಅಂದಿತು.. ಬರೀ ಗಾಳಿ ಬರುತ್ತೆ ಅನ್ಕೊಂಡು ಪ್ರೆಶರ್ ರಿಲೀಸ್ ಮಾಡಿದೆ.. ದರಿದ್ರದ್ದು, ಚಡ್ಡಿಯಲ್ಲಿ ತೊಟ್ಟಿಲು ಆಗೋಯ್ತು..
ಅವಾಗ ಮನೆ ಮತ್ತು ಸ್ಕೂಲಿನ ಹಾದಿಯಲ್ಲಿ ಕರೆಕ್ಟಾಗಿ ಕರೆಕ್ಟಾಗಿ ಮಧ್ಯದಲ್ಲಿದ್ದೆ...ಯಾವ ಕಡೇ ಹೋಗೋದಕ್ಕೂ ಕಷ್ಟ.. ಕೊನೆಗೆ ಬಹಳ ಕಷ್ಟಪಟ್ಟು ಮನೆಗೆ ನಡೆದುಕೊಂಡು ಹೋಗೋಹಾಗೆ ಆಯ್ತು...ಕಟ್ಟಿದ ತೊಟ್ಟಿಲು ಭಾಗ್ನವಾಗದ ಹಾಗೆ ಒಂದು ವಿಭಿನ್ನ ಸ್ಟೈಲ್ ನಲ್ಲಿ ನಡೆದು ನಡೆದು (ಈ ಸ್ಟೈಲ್ ಗೊತ್ತಿರಬೇಕು ಆಲ್ವಾ ನಿಮ್ಗೆ ? ಕಾಲು, ತೊಡೆ ಫುಲ್ ನೋವು.. ಮನೆಯಲ್ಲಿ ಬೈಗುಳ.. ಆರನೇ ಕ್ಲಾಸಿನಲ್ಲಿ ಕೂಡ ಹೀಗೆ ಮಾಡ್ತ್ಯಲ್ಲ ಅಂತ..
ಏನ್ ಮಾಡ್ಲಿ.. ಎಲ್ಲಾ Miscalculate ಆದ ನನ್ನ ಲೆಕ್ಕಾಚಾರ.. ಗಾಳಿ ಬಿಡಲು ಹೋಗಿ ತೊಟ್ಟಿಲು ಕಟ್ಟಿದ್ದು.. ಇವತ್ತಿಗೂ ಸಖತ್ತಾಗಿ ನಗ್ತೀನಿ.. ಈಗ ಕೂಡ ಗಾಳಿಯ ಪ್ರೆಶರ್ ರಿಲೀಸ್ ಮಾಡಕ್ಕೆ ಮುಂಚೆ ಹತ್ತು ಬಾರಿ ಯೋಚನೆ ಮಾಡಿ ಬಿಡ್ತೀನಿ.
ಹೆಂಗೆ ??
----------------------
ಕಟ್ಟೆ ಶಂಕ್ರ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಮ್ಮ ಹಾಸ್ಯ ಪ್ರಜ್ಞೆ ಅಧ್ಬುತ, ಬರೆಯುವ ಶೈಲಿ ಬಹಳ ಇಷ್ಟವಾಗುತ್ತದೆ,
ಒಳ್ಳೆಯ ಬರಹ ಎಂದಿನಂತೆ

Unknown said...

ಚಡ್ಡಿಲಿ ತೊಟ್ಟಿಲು ಕಟ್ಟೊದು ಗೊತ್ತಿರ್ಲೆ! ನಿಂಗೆ ಬಂದ ಕಾಮೆಂಟ್ ಓದಿ ಗೊತ್ತಾತು :-) ಲೇಖನ ಯಾವತ್ತಿನ ಹಾಗೆ ಚೆನ್ನಾಗಿದ್ದು.

Ranjita said...

ಹ್ಹಿ ಹ್ಹಿ ಹ್ಹಿ ಹ್ಹಿ ಹ್ಹಿ ಪ್ರಕಶಣ್ಣ ಸುಪರ್...ಇನ್ನೆಲ್ಲಾದ್ರೂ ತೊಟ್ಲು ಕ೦ಡ್ರೆ ನಿನ್ನ್ ಲೇಖನ ನೆನಪಾಗ್ತು...ಹ್ಹಿ ಹ್ಹಿ ಹ್ಹಿ

ಅನಿಲ್ ರಮೇಶ್ said...

ಪ್ರಕಾಶ್,
ಬಾಲ್ಯದ ನೆನಪುಗಳು ಅತಿ ಮಧುರ.

ನಿಮ್ಮ ಲೇಖನ ಚೆನ್ನಾಗಿದೆ.

-ಅನಿಲ್

Naveen ಹಳ್ಳಿ ಹುಡುಗ said...

ಪ್ರಕಾಶಣ್ಣ, ಸವಿ ಸವಿ ನೆನಪುಗಳ ಲೇಖನ ಬಹಳ ಚೆನ್ನಾಗಿದೆ....

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

baravaNige ista aaytu
chennagide nimma baravaNigeya shili
bejaru enappa andare
aa banna bannadalli baryodu eno ontara ista aaglilla

Umesh Balikai said...

ಪ್ರಕಾಶ್ ಸರ್,

ಶಾರಿಯವರ ಮುಗ್ಧತೆ ಇಷ್ಟು ದೊಡ್ಡವರಾದ ಮೇಲೂ ಹಾಗೇ ಇದೆ ಎನ್ನುವುದು ಸೋಜಿಗದ ವಿಷಯ. ಮದುವೆ ಆದಮೇಲೆ ಘನ-ಗಾಂಭೀರ್ಯ ತೋರುವ ಬಾಲ್ಯ ಸ್ನೇಹಿತರ ಮುಂದೆ ಶಾರಿ ಮತ್ತು ಅವರ ಗಂಡ ಗಣಪ್ತಿ ವಿಶಿಷ್ಟವಾಗಿ ತೋರುತ್ತಾರೆ.

ಅವರ ಮನೆಗೆ ಹೋಗಿ ಬಂದ ಘಟನೆ ಬಗ್ಗೆ ಹೇಳಿ, ಕಾಯ್ತಾ ಇದೀವಿ.

-ಉಮೀ

Ittigecement said...

ಪ್ರಭು....

ಬಾಲ್ಯದ ಸಲಿಗೆ ಯಾವಾಗಲೂ ಇರುತ್ತದೆ...
ಶಾರಿ ಗುದ್ದು ಕೊಟ್ಟು ಗೊಮಟೇಶ್ವರ ಅನ್ನುವಾಗ ಎಷ್ಟು ಆತ್ಮೀಯತೆ ಫೀಲ್ ಆಯಿತು ಗೊತ್ತಾ...?
ಈಗಲೂ ಆ ವಾತ್ಸಲ್ಯ ಇಟ್ಟುಕೊಂಡಿದ್ದಾಳಲ್ಲ..

ಇವೆಲ್ಲ ಸ್ವಭಾವದ ಮೇಲೆ ಅವಲಂಬಿಸಿರುತ್ತದೆ..
ಕೆಲವರು ಹಳೆಯ ನೆನಪನ್ನು ಯಾವಾಗಲೂ ಜತನವಾಗಿ ಬಚ್ಚಿಟ್ಟು ಕೊಂಡಿರುತ್ತಾರೆ..
ಶಾರಿಯೂ ಒಬ್ಬಳು...

ಚಂದದ ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಉಮೇಶ್....

ತೊಟ್ಟಿಲು ಕಟ್ಟುವದೆಂದರೆ ಅರ್ಥವಾಗಲಿಲ್ಲವೇ...?
ಶಾರಿ ತನ್ನ ಪತಿಗೆ ಪರಿಚಯ ಮಾಡಿಕೊಡುವಾಗ ತಾನೇ ಹೇಳಿದ್ದಾಳೆ ನೋಡಿ..
ಇಲ್ಲಿ ಪ್ರತಿಕ್ರಿಯೆಯಲ್ಲಿ " ಶಂಕರ್ ಪ್ರಸಾದ್" ತಮ್ಮ ಅನುಭವ ಹೇಳಿದ್ದಾರೆ ಅದರಲ್ಲಿ ಗೊತ್ತಾಗುತ್ತದೆ ನೋಡಿ...

ಆತ್ಮೀಯತೆ, ಮುಗ್ಧತೆ ಇರುವಾಗ ಎಲ್ಲವೂ ಸಹ್ಯವಾಗಿರುತ್ತದೆ...
ನನ್ನಾಕೆಯ ಮುಂದೆ ನನಗೇನೂ ಅನ್ನಿಸಲಿಲ್ಲ...
ಮಗನ ಮುಂದೆ ಸ್ವಲ್ಪ ಅನಿಸಿತು...

ನನ್ನಕ್ಕ ಕೂಡ ಇದೇ ರೀತಿ ಮಾತಾಡುವದರಿಂದ ನಮ್ಮಲ್ಲಿ ಎಲ್ಲರಿಗೂ ಸ್ವಲ್ಪ ರೂಢಿ ಇದೆ...

ಉಮೇಶ್ ಧನ್ಯವಾದಗಳು..
ಈಗಲೂ ಅರ್ಥ ಆಗದಿದ್ದರೆ (tottilu) ಈಮೇಲ್ ಮಾಡಿ..
ಸಂಕೋಚ ಬೇಡ...

Ittigecement said...

ಬಾಲು ಸರ್....

ಮುಂದಿನ ಕಂತಿನಲ್ಲೇನಾಯಿತು... ಸ್ವಲ್ಪ ಕಾಯಿರಿ ಪ್ಲೀಸ್...

ಬಹಳ ಆತ್ಮೀಯತೆ ಇರುವವರು ..
ಬಹಳವರ್ಷದ ನಂತರ ಸಿಕ್ಕಿದಾಗ...
ಅವರ ಸ್ವಭಾವ ಬದಲಾಗದೆ ..
ಮೊದಲಿನ ಹಾಗೇ ಇದ್ದಾಗ ಅತ್ಯಂತ ಸಂತೋಷ ಆಗುತ್ತದೆ..
ನನಗೂ ಹಾಗೇ ಆಯಿತು....

ನಿಮ್ಮ ಎರಡನೆ ಪ್ರಶ್ನೆಗೆ ಉತ್ತರ ನನ್ನಲ್ಲಿಲ್ಲ..
ಶಾರಿಗೆ ಕೊಟ್ಟ ಉತ್ತರವೆ ನನ್ನ ಬಳಿ ಇರುವದು...

ಲೇಖನ ಇಷ್ಟಪಟ್ಟಿದ್ದು ಖುಷಿಯಾಯಿತು...
ಧನ್ಯವಾದಗಳು..

Ittigecement said...

ಗುರು...

ಶಾರಿಯಿಂದಾಗಿ...
ನನ್ನ ಚಿಕ್ಕಂದಿನ ಅನುಭವಗಳು ಇದೀಗ ಶುರುವಾಗಿದೆ...
ಬಹುಷಃ ನಾಲ್ಕು ಕಂತುಗಳಾಗ ಬಹುದು...

ಮುಗ್ಧತೆಯಿಂದ ...ಪ್ರಬುದ್ಧತೆ...
ಆ ವಯಸ್ಸಿನ ಅನುಭವ ಹಂಚಿಕೊಳ್ಳುವ ಆಸೆಯಿದೆ..

ಪ್ರೋತ್ಸಾಹಕ್ಕಾಗಿ ವಂದನೆಗಳು...

Ittigecement said...

ಯವರೆ...

ಕೆಲವರು ಹೀಗೆಯೇ ಇರುತ್ತಾರೆ...
ಜಗತ್ತು ಬದಲಾದರೂ ತಮ್ಮ ಮುಗ್ಧತನವನ್ನು ಬಿಡುವದಿಲ್ಲ...
ಅದರಿಂದ ಅಪಾರ್ಥ ಆಗುತ್ತದೆ...
ಜನರು ನಗಬಹುದೆಂಬ ಕಲ್ಪನೆ ಇದ್ದರೂ ಸಹ...
ತನ್ನ "ಆತ್ಮೀಯ" ನಗುವದಿಲ್ಲವಲ್ಲ.. ಎನ್ನುವ ಭರವಸೆ... ಇರುತ್ತದಲ್ಲ...

ಶಾರಿಯ ವಿಷಯದಲ್ಲಿ ಅವಳ ಮಾತಿಗೆ ನಾನು "ಹೋ" ಅಂತ ನಕ್ಕುಬಿಟ್ಟಿದ್ದರೆ...
ಬೇಸರ ಮಾಡಿಕೊಂಡು ಹೋಗಿಬಿಡುತ್ತಿದ್ದಳೊ.. ಏನೊ...

ಈ ಘಟನೆಯನ್ನು ಇಷ್ಟಪಟ್ಟು
ನಕ್ಕಿದ್ದು ನನಗಂತೂ ಖುಷಿಯಾಯಿತು...

ಧನ್ಯವಾದಗಳು...

Ittigecement said...

ರೂಪಶ್ರೀಯವರೆ....

ಶಾರಿಯ ಕೆಲವು ಮಾತುಗಳನ್ನು ಅನಿವಾರ್ಯವಾಗಿ ಸೆನ್ಸಾರ್ ಮಾಡಿದ್ದೇನೆ...
ಪರೀಧಿಯನ್ನು ಮೀರಬಾರದೆಂದು...

ಲೇಖನ ಇಷ್ಟಪಟ್ಟಿದ್ದಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು...

ಬರುತ್ತಾ ಇರಿ...

Ittigecement said...

ಶಿವು ಸರ್....

ನಿಮ್ಮ ಬೆಂಬಲಕ್ಕೆ..
ಪ್ರೋತ್ಸಾಹಕ್ಕೆ ವಂದನೆಗಳು...

ಹೀಗೆಯೇ ಇರಲಿ ನಿಮ್ಮ ಪ್ರೋತ್ಸಾಹ ಯಾವಾಗಲೂ...

ಧನ್ಯವಾದಗಳು...

Ittigecement said...

ರವಿಕಾಂತ್....

ಎಷ್ಟೋ ವರ್ಷಗಳ ನಂತರ ಸಿಕ್ಕು
"ಗೊಮಟೇಶ್ವರ ಪ್ಯಾಂಟು ಹಾಕ್ಕೋಡಾಂಗೆ ಕಾಣ್ತಿಯಲ್ಲೋ" ಅಂದರೆ...
ಅಲ್ಲಿ ಯಾವುದೇ ಅಡ್ಡಿಗಳು..
ಗೋಡೆಗಳಿರಲು ಸಾಧ್ಯವೇ ಇಲ್ಲ....

ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ವಿನೂತಾರವರೆ...

ಇಬ್ಬರೂ ಸಮಾನ ಮನಸ್ಥಿತಿಯಲ್ಲಿರುವಾಗ ಮಾತ್ರ ಈಥರಹ ಹರಟಲು ಸಾಧ್ಯ....
ಎಷ್ಟೋ ವರ್ಷಗಳ ನಂತರ..
ಮದುವೆ, ಸಂಸಾರದ ಜಂಜಡದಲ್ಲಿ
ಬಾಲ್ಯದ ನೆನಪು ವಾತ್ಸ್ಯಲ್ಯವನ್ನು ಜತನವಾಗಿಟ್ಟುಕೊಂಡಿದ್ದರಿಂದ...
ಇದು ಸಾಧ್ಯ ಎನ್ನುವದು ನನ್ನ ಭಾವನೆ...

ಏನಂತೀರಾ...?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಡಾ: ಸತ್ಯನಾರಾಯಣರೆ....

ಇಂಥಹ ಪ್ರೋತ್ಸಾಹದ ನುಡಿಗಳು ಮತ್ತಷ್ಟು ಬರೆಯಲು ಪ್ರೇರಣೆ ಕೊಡುತ್ತದೆ...
ಮೂಲತಃ ಬರಹಗಾರನಲ್ಲದ ನನಗೆ ಇವೆಲ್ಲ ಖುಷಿ ಕೊಡುತ್ತದೆ...

ನನ್ನ ಮಗ ನನ್ನನ್ನು ರೇಗಿಸಲೆಂದೇ ಆ ಪ್ರಶ್ನೆ ಕೇಳಿದ್ದಾನೆ...
ಇಂದೂ ಸಹ ನನ್ನನ್ನು ರೇಗಿಸಿದ್ದಾನೆ.....
ಸ್ವಲ್ಪ ತರಲೆ ಬುದ್ಧಿ... ಆಗಾಗ ತೋರಿಸುತ್ತಾನೆ...

ಪ್ರತಿಕ್ರಿಯೆಗೆ ಹ್ರದಯಪೂರ್ವಕ ವಂದನೆಗಳು...

Veena DhanuGowda said...

namasakara,

nanu innu nagthane iddini...
office nali kuthu nim blog odthide nagu tadeyalagalilla, hoTTe hunagostu nakthide, pakadale ide Colleague[northy kannda thale budda arta agola] avrge nim blog na english nali translate madohothige sakaythu :) :)

ಸುಧೇಶ್ ಶೆಟ್ಟಿ said...

ಗಮ್ಮತ್ತಾಗಿತ್ತು ಪ್ರಕಾಶಣ್ಣ....

ಚಡ್ಡಿಯಲ್ಲಿ ತೊಟ್ಟಿಲು ಕಟ್ಟುವುದು... ಹ್ಹ ಹ್ಹ ಹ್ಹ.....

ಗೌತಮ್ ಹೆಗಡೆ said...

mast iddo haaahaaha

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಸಕತ್ ಮಜವಾಗಿದೆ... :D

Ittigecement said...

ಪಾಲಚಂದ್ರ.....

ಚಿಕ್ಕಂದಿನಲ್ಲಿ ಆಡಿಬೆಳೆದ ಸಹೋದರಿಯರು
ಎಷ್ಟೋ ವರ್ಷಗಳ ನಂತರ ಅದೇ ವಾತ್ಸಲ್ಯದಿಂದ ಕಂಡರೆ..
ಎಷ್ಟೊಂದು ಖುಷಿ..ಅಲ್ಲವಾ...?

ಅದೇ ಸಲಿಗೆ, ಅದೇ ಪ್ರೀತಿ ವಾತ್ಸಲ್ಯ...
ಅಂದಿನ ದಿನಗಳ ಮೆಲುಕು...
ಮಸ್ತ್ ಆಗಿರುತ್ತದೆ...

ಆ ದಿನಗಳಲ್ಲಿ.. ನನ್ನ ಕಾಲರ್ ತುದಿಗಳು, ತೋಳಿನ ತುದಿಗಳು
"ಗಂಜಿ" ಹಾಕಿ ಇಸ್ತ್ರೀ ಮಾಡಿಟ್ಟ... ..
ಕಾಟನ್ ಬಟ್ಟೆಗಳ ಥರಹ ಇರುತ್ತಿದ್ದವು...

ಲೇಖನ ಎಂಜಾಯ್ ಮಾಡಿದ್ದಕ್ಕೆ ಧನ್ಯವಾದಗಳು...

Ittigecement said...

ಕ್ಷಣ ಚಿಂತನೆ....

ಖಂಡಿತ ಬರೆಯುವೆ ಮುಂದಿನ ಕಂತಿನಲ್ಲಿ...

ನನ್ನ ಬಾಲ್ಯದ ನೆನಪುಗಳು ಇನ್ನೂ ನಾಲ್ಕು ಕಂತುಗಳು ಇವೆ...
ನಿಮ್ಮ ಪ್ರೋತ್ಸಾಹದ ಮಾತುಗಳು ನನಗೆ ಬರೆಯಲು ಉತ್ಸಾಹ ನೀಡುತ್ತದೆ..
ಇನ್ನಷ್ಟು ಬರೆಯೋಣ ಅನಿಸುತ್ತದೆ...

ಧನ್ಯವಾದಗಳು..

Ittigecement said...

ಸಂಕ್ರಪ್ಪಣ್ಣಾ..(ಶಂಕರ್ ಪ್ರಸಾದ್)

ನಿಮ್ಮ ಪ್ರತಿಕ್ರಿಯೆ ಓದಿ ಹೊಟ್ಟೆ ನೋವು ಬರುವಷ್ಟು ನಕ್ಕಿದ್ದೇನೆ....

ನನಗೆ ಇಂದು ಅನೇಕ ಫೋನ್ ಬಂದಿದೆ..
ಬಹಳಷ್ಟು ಓದುಗರು ನಿಮ್ಮ ಪ್ರತಿಕ್ರಿಯೆ ಓದಿ ಹೊಟ್ಟೆ ಹುಣ್ಣಾಗುವ ನಕ್ಕಿದ್ದಾರಂತೆ...

"ಚಡ್ಡಿಯಲ್ಲಿ ತೊಟ್ಟಿಲು ಕಟ್ಟುವದು" ಅಂದರೆ ಏನೆಂದು
ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಅನೇಕರಿಗೆ ಅರ್ಥವಾಯಿತಂತೆ.....!!

ನನ್ನ ಕಡೆಯಿಂದ,
ಓದುಗರ ಪರವಾಗಿ ನಿಮಗೆ ಸಾವಿರಾರು ಧನ್ಯವಾದಗಳು..
ಹೊಟ್ಟೆ ತುಂಬಾ ನಗಿಸಿದ್ದಕ್ಕೆ...

ಬರ್ತಾ ಇರಿ ಸಂಕ್ರಪ್ಪಣ್ಣಾ....

Ittigecement said...

ಡಾ. ಗುರುಮೂರ್ತಿಯವರೆ....
(ಸಾಗರದಾಚೆಯ ಇಂಚರ)

ಹೆಂಡತಿ, ಮಗನೆದುರಿಗೆ ನನ್ನ ಬಾಲ್ಯದ ಈ ಥರಹದ ಸಂಗತಿಗಳು...
ಬಯಲಾಗಿ ಬಿಟ್ಟರೆ ಹೇಗೆ...?
ಇಷ್ಟು ವರ್ಷ ಜತನವಾಗಿ ರಹಸ್ಯ ಕಾಯ್ದುಕೊಂಡು ಬಂದಿದ್ದೆ...
ಮನೆಯಲ್ಲಿ ಒಳ್ಳೆಯ ವಿಷಯ ನನ್ನನ್ನು ಛೇಡಿಸಲು...

ನಿಮ್ಮ ಪ್ರೋತ್ಸಾಹಕ್ಕಾಗಿ ವಂದನೆಗಳು...

Ittigecement said...

ಸುಧೀಂದ್ರ....

ನಾನು ಸಣ್ಣವನಿದ್ದಾಗ ನಡೆದ ಘಟನೆಗಳನ್ನು ಇನ್ನೂ ನಾಲ್ಕು ಕಂತುಗಳಲ್ಲಿ ಹೇಳುವೆ...
ಆ ದಿನಗಳ ಸೊಗಸೇ ಬೇರೆ...
ಮಜಾ ಇತ್ತು...
"ಚಡ್ಡಿಯಲ್ಲಿ ತೊಟ್ಟಿಲು ಕಟ್ಟುವ" ಶಬ್ಧ ಯಾರು ಮೊದಲು ಹೇಳಿದರೋ ಗೊತ್ತಿಲ್ಲ....
ಅದು ನನ್ನ ಮೇಲೆ ಮೊದಲು ಪ್ರಯೋಗ ವಾದದ್ದು ನಿಜ.....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಧರಿತ್ರಿ said...

ಪ್ರಕಾಶ್ ಸರ್..

'ಚಡ್ಡಿಯಲ್ಲಿ ತೊಟ್ಟಿಲು ಕಟ್ಟಿದ್ದು'! ದೇವರಾಣೆ ಹೇಳ್ತೀನಿ..ನಂಗೆ ಅರ್ಥಾನೆ ಆಗದೆ..ಕೊನೆಗೆ ಶಂಕ್ರಣ್ಣನ ಪ್ರತಿಕ್ರಿಯೆನೇ ಸಹಾಯ ಮಾಡಿದ್ದು...

ತುಂಬಾ ಒಳ್ಳೆ ಹಾಸ್ಯ ಬರಹ..ಓದಿ ನಾನಷ್ಟೇ ಅಲ್ಲ, ಎಲ್ಲರಿಗೂ ಕಥೆ ಹೇಳಿದ್ದೀನಿ. ಬಾಲ್ಯದ ನೆನಪುಗಳು ಮತ್ತೊಮ್ಮೆ ಮರುಕಳಿಸಿದುವು. ಓದುತ್ತಾ ಓದುತ್ತಾ ನನ್ನ ತಮ್ಮನ ನೆನಪಾಯಿತು.
-ಧರಿತ್ರಿ

Ittigecement said...

ರಂಜಿತಾ....

ಬಾಲ್ಯದ ನೆನಪುಗಳು ಮಧುರವಾಗಿರುತ್ತದೆ...
ನಿಮ್ಮ ಸಂತೋಷದ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅನಿಲ್....

ಬಾಲ್ಯದ ಸವಿನೆನಪು ಇನ್ನೂ ಬರೆಯಲಿದ್ದೇನೆ..
ಸಹಿಸುವಿರಲ್ಲ...?

ಪ್ರತಿಕ್ರಿಯೆಗೆ ವಂದನೆಗಳು..

ಅನಿಲ್ ರಮೇಶ್ said...

ಪ್ರಕಾಶ್,
ಬಾಲ್ಯದನೆನಪುಗಳನ್ನು ಬರೆಯಿರಿ, ಓದ್ತೀನಿ.

-ಅನಿಲ್

Ittigecement said...

ನವೀನ್....

ಬಾಲ್ಯ ನಮ್ಮನ್ನು, ವ್ಯಕ್ತಿತ್ವವನ್ನು ರೂಪಿಸುತ್ತದೆ...
ಬಾಲ್ಯ ಅಮೂಲ್ಯ....

"ಮೈ ಆಟೋಗ್ರಾಫ್ " ಚಿತ್ರ ತುಂಬಾ ಚೆನ್ನಾಗಿದೆ..
ಬಾಲ್ಯವನ್ನು ಸೊಗಸಾಗಿ ಚಿತ್ರಿಸಿದ್ದಾರೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ರಾಘವೇಂದ್ರ(ಸಕಲ ಸ್ಟುಡಿಯೋ)

ಹೆಚ್ಚಿನ ಓದುಗರು ನಾನು...
ಈ ಥರಹ ಬರೆಯುವದನ್ನು ಇಷ್ಟ ಪಟ್ಟಿದ್ದಾರೆ...

ಲೇಖನ ಇಷ್ಟ ಪಟ್ಟಿದ್ದಕ್ಕೆ ಹ್ರದಯ ಪೂರ್ವಕ ಧನ್ಯವಾದಗಳು...

ಮೈಸೂರು ಮಲ್ಲಿಗೆ ನಾಟಕದಲ್ಲಿ..
ಅಭಿನಯಿಸಿದವರು ನೀವೇ ತಾನೆ...?

ನಾಟಕ ಸೂಪರ್... ಸೂಪರ್...!!

Ittigecement said...

ಉಮೇಶ್....

ಗಣಪ್ತಿಯೂ ಸಹ ಹೆಂಡತಿಗೆ ತಕ್ಕ ಗಂಡ....
ತುಂಬಾ ಒಳ್ಳೆಯ, ಸಾಧು ಮನುಷ್ಯ...

ಅವರಿಬ್ಬರ ಜೋಡಿ ತುಂಬಾ ಚೆನ್ನಾಗಿದೆ....

ಚೆನ್ನಾಗಿ ವಿಶ್ಲೇಷಣೆ... ಮಾಡಿದ್ದಕ್ಕಾಗಿ ವಂದನೆಗಳು...

ಬರುತ್ತಾ ಇರಿ....

Ittigecement said...

ವೀಣಾರವರೆ......

ಆ ಉತ್ತರ ಭಾರತದವನಿಗೆ..
ಚಡ್ಡಿಯಲ್ಲಿ ತೊಟ್ಟಿಲು ಕಟ್ಟುವ ಶಬ್ಧದ ಅರ್ಥ ಹೇಗೆ ಹೇಳಿದಿರಿ...?
ಅದರ ಭಾಷಾಂತರದ ರೂಪ ಏನು...?

ನಿಮ್ಮ ಪರಿಸ್ಥಿತಿ ನೆನೆದು ನನಗೂ ನಗು ಬರುತ್ತಿದೆ...

ಈ ಆರ್ಥಿಕ ಹಿಂಜರಿತದ ಸಮಯದಲ್ಲಿ..
ಎಲ್ಲೆಲ್ಲೂ ದುಗುಡ ತುಂಬಿರುವಾಗ "ನಗು" ನಮ್ಮ ಬಳಿ ಇರಲೇ ಬೇಕು....

ಲೇಖನ ತುಂಬಾ ಎಂಜಾಯ್ ಮಾಡಿ...
ನಮ್ಮೊಡನೆ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು....

Ittigecement said...
This comment has been removed by the author.
ಜಿ.ಎಸ್.ಬಿ. ಅಗ್ನಿಹೋತ್ರಿ said...

mast

paapu paapa said...

majavaagide... ghatane naijavaagide.

Ranjana Shreedhar said...

ಪ್ರಕಾಶಣ್ಣ.. ಕತೆ ಸೂಪರ್... ಒಂದು ಸಾರಿ ಸಿರ್ಸಿ ಕಡೆ ಮದ್ವೆಗೆ ಹೋಗಿ ಬಂದಂಗೆ ಆತು. ಮತ್ತೆ 'ಶಾರಿ' ಮನೆಗೆ ಹೋಗಿದ್ಯ? ಎಂತ ಆತು ಅಲ್ಲಿ? ಹೇಳಿದ್ದೆ ಇಲ್ಲೇ. ಯಾವಾಗ್ ಹೇಳ್ತೆ? ಕಾಯ್ತಾ ಇರ್ತಿ....

Unknown said...

channagi bareeteeri prakash. ittige cement madhya aralo nim lekhanagala naviru, neravantike tumba ishta agutte. pls ashtu gap kodbedi marayre. dina blog check madi madi sakagutte

b.suresha said...

ಬರಹ ಸರಳವಾಗಿದೆ. ಬಾಲ್ಯದ ನೆನಪುಗಳನ್ನ ತಂದುಕೊಡುತ್ತದೆ.
ನನಗೂ ಹಲವು ಬಾಲ್ಯ ಗೆಳತಿಯರಿದ್ದರು. ಮಾವಿನಕಾಯಿ, ಚೇಪೇಕಾಯಿಯನ್ನ ಕಾಗೆ ಎಂಜಲು ಮಾಡಿಕೊಡುತ್ತಿದ್ದರು. ಆದರೆ ಈ ವರೆಗೆ ಯಾರೂ ಮತ್ತೆ ಸಿಕ್ಕಿಲ್ಲ. ಅಪರೂಪಕ್ಕೆ ಸಿಕ್ಕವರು ಇಷ್ಟೆಲ್ಲಾ ಮಾತೇ ಆಡಿಲ್ಲ.
ಯಾರಾದರೂ ಸಿಕ್ಕರೆ ಖಂಡಿತಾ ನಿಮ್ಮ ಹಾಗೇ ನನ್ನ ಹಳೆಯ ಸಖರು ಕೊಟ್ಟ ಸುಖವನ್ನ ಹಂಚಿಕೊಳ್ಳುತ್ತೇನೆ.
ನಿಮ್ಮ ಬರಹಕ್ಕೆ ಹಾಸ್ಯಲೇಖನವಾಗುವಾಗ ಶಕ್ತಿಯಿದೆ. ಅದಕ್ಕಿನ್ನೊಂದಿಷ್ಟು ಒಗ್ಗರಣೆ ಹಾಕಿದರೆ ಕತೆಯೂ ಆದೀತು.
ಬರೆಯಿರಿ. ಬರೆಯುತ್ತಾ ಇರಿ. ಒಳ್ಳೆಯದಾಗಲಿ
ಬಿ.ಸುರೇಶ

Ittigecement said...

ಸುಧೇಶ್....

ನಮ್ಮ ಹಳೆಯ ಗೆಳೆಯರು ವಯಸ್ಸಾದ ಹಾಗೆ ಬದಲಾಗದೆ..
ಮೊದಲಿನ ಹಾಗೆ ಸ್ವಭವದಲ್ಲಿ ನಮ್ಮನ್ನು ಮಾತನಾಡಿಸಿದರೆ...
ಎಷ್ಟೊಂದು ಖುಷಿಯಾಗುತ್ತದೆ... ಅಲ್ಲವಾ...?

ನನಗೂ ಹಾಗೇ ಆಯಿತು....

ಸ್ವಲ್ಪ ಕೆಲಸದ ಒತ್ತಡ..
ಮುಂದಿನ ಕಂತನ್ನು ಬರೆಯಲು ತಡ ಆಗುತ್ತಿದೆ....

ಕ್ಷಮೆ ಇರಲಿ....

ಪ್ರೀತಿಯಿಂದ

ಇಟ್ಟಿಗೆ ಸಿಮೆಂಟು....

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ದಯವಿಟ್ಟು ಕ್ಷಮೆ ಇರಲಿ ವೈಯುಕ್ತಿಕ ಕಾರಣಗಳಿಂದ ಬ್ಲಾಗಿನ ಕಡೆ ಬರಲಾಗಿರಲೇ ಇಲ್ಲ, ಮತ್ತೀಗ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಬರಹ ಸಕತ್ತಾಗಿದೆ. ಶಾರಿಯವರ ಮನೆಗೆ ಹೋಗಿದ್ರ, ಅಲ್ಲೇನಾಯ್ತು ಅಂತ ಹೇಳಲೇ ಇಲ್ಲ. ಮುಂದುವರೆಸಿ ಆದಷ್ಟು ಬೇಗ...mpi

Ittigecement said...

ಗೌತಮ್....

ನನ್ನ ಬ್ಲಾಗಿಗೆ ಸ್ವಾಗತ....

ಮುಗ್ಧ ಮನಸ್ಸಿನ ಶಾರಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಬರುತ್ತಾ ಇರಿ...

Ittigecement said...

ಶಿವಪ್ರಕಾಶ್....

ಬಹಳ ವರ್ಷಗಳ ನಂತರ ಭೇಟಿಯಾದ..
ಆತ್ಮೀಯರು ಬದಲಾಗದೆ..
ಮೊದಲಿನಂತೆ ಸಹಜವಾಗಿ ಆತ್ಮೀಯರಾಗಿ..
ನಮ್ಮ ಬಳಿ ಒಡನಾಡಿದರೆ ಬಹಳ ಖುಷಿಯಗುತ್ತದೆ..
ಅಲ್ಲವಾ...?

ಲೇಖನ ಇಷ್ಟವಾಗಿದ್ದಕ್ಕೆ ವಂದನೆಗಳು...

Ittigecement said...

ಧರಿತ್ರಿ....

ಈ ಸಂಕ್ರಪ್ಪಣ್ಣ ನನಗೆ ಮೊದಲಿನಿಂದ ಪರಿಚಯ...
ಅವರ ಮನೆಯಲ್ಲಿ ಇಂಟೀರಿಯರ್ ಕೆಲಸ ನಾನೇ ಮಾಡಿದ್ದು...
ಸ್ವಲ್ಪ ವರ್ಷಗಳ ಹಿಂದೆ...

ಮಧ್ಯದಲ್ಲಿ ಸಂಪರ್ಕ ಇಲ್ಲವಾಗಿತ್ತು...
ಹಲವು ವರ್ಷಗಳ ನಂತರ ಅವರೇ ಗುರುತು ಹಿಡಿದರು....

ಈ ಬ್ಲಾಗ್ ಲೋಕ ನಮ್ಮನ್ನು ಹತ್ತಿರಕ್ಕೆ ತರುತ್ತದೆ ಅನ್ನುವದು ನಿಜ....


ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಅನಿಲ್....

ಖ್ಂಡಿತ ನನ್ನ ಬಾಲ್ಯದ ಬಗೆಗೆ ಬರೆಯುವೆ...

ನಿಮ್ಮ ಪ್ರೋತ್ಸಾಹಕ್ಕೆ
ಹ್ರದಯ ಪೂರ್ವಕ ವಂದನೆಗಳು....

Ittigecement said...

ಅಗ್ನಿ......

ನಿಮ್ಮ ಬ್ಲಾಗಿನ ಹಕ್ಕಿಗಳ ಫೋಟೊಗಳು...
ಅವುಗಳ ಬಗೆಗಿನ ಮಾಹಿತಿ ತುಂಬಾ ಚೆನ್ನಾಗಿರುತ್ತದೆ...

ನನ್ನ ಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು

Ittigecement said...

ಪ್ರೀತಿ.....

ನನ್ನ ಅನುಭವಗಳಿಗೆ ...
ಸ್ವಲ್ಪ ಒಗ್ಗರಣೆ ಹಾಕಿರುತ್ತೇನೆ...
ಸ್ವಲ್ಪವೇ ಮಸಾಲೆ...
ಮೂಲ ರುಚಿಗೆ ಧಕ್ಕೆ ಬಾರದ ಹಾಗೆ...

ಇಷ್ಟಪಟ್ಟಿದ್ದಕ್ಕೆ... ಖುಷಿಯಾಗುತ್ತದೆ...
ಧನ್ಯವಾದಗಳು...

Ittigecement said...

ರಂಜನಾ....

ನನ್ನ ಬ್ಲಾಗಿಗೆ ಸ್ವಾಗತ....

ನಿಮ್ಮ ಬ್ಲಾಗಿನ ಲೇಖನಗಳು ತುಂಬಾ ಚೆನ್ನಾಗಿರುತ್ತದೆ...
ಶಾಂತಲಾ ಭಂಡಿಯವರ ಥರಹ....

ಅಭಿನಂದನೆಗಳು...

ಸಿರ್ಸಿ ಕಡೆಯ ಹಳ್ಳಿಗಳ ಮುಗ್ಧತನ ಮಜವಾಗಿರುತ್ತದೆ...
ರವಿ ಬೆಳಗೆರೆಯವರು ಕಳೆದವಾರದ(ಆದಿತ್ಯವಾರ) ವಿಜಯ ಕರ್ನಾಟಕದಲ್ಲಿ..
ಅಲ್ಲಿಯ ವೈಶಿಷ್ಟತೆ ಬಗೆಗೆ ಬರೆದಿದ್ದಾರೆ....

ಅವರದೇ ಆದ ಭಾಷೆ, ಆಹಾರ, ಸಂಸ್ಕ್ರತಿ ಇದೆ...

ನಮ್ಮ ದೇಶದ ಪ್ರತಿಯೊಂದು ಪ್ರಾಂತ ಕೂಡ ಹಾಗೇ ಇರುತ್ತದೆ..

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Kishan said...

ನಿಮ್ಮ ಮಾಮೂಲಿ ಶೈಲಿಯಲ್ಲಿ ಸುಂದರವಾಗಿ ಬಣ್ಣಿಸಿದ್ದೀರಿ. The "main theme" in the writing is masked by the nice,humoros sugar quoting, which I think many readers might not recognize. However, excellent presentation, time and again.

Mohan said...

ಚೆನ್ನಾಗಿದೆ ಸರ್ , ನೀವು ಚಡ್ಡಿಯಲ್ಲಿ ತೊಟ್ಟಿಲು ಕಟ್ತಾಇದ್ದರ ? ನಾವಂತೂ ಸಾಯಂಕಾಲ ಹರೆಕೆ ಕಟ್ಟಿ ಓದ್ತಾ ಇದೀನಿ ಹ ಹ

Roopa said...

ನಕ್ಕೂ ನಕ್ಕೂ ಸಾಕಾಯ್ತು
ಮುಂದಿನ ಕಂತಿಗಾಗಿ ಕಾಯುತ್ತೇನೆ

Ittigecement said...

ಅನು....

ಹೊಸ ಕೆಲಸ ಶುರುವಾಗಿದೆ...
ಸ್ವಲ್ಪ ಬ್ಯೂಸಿಯಾಗಿದ್ದೇನೆ...

ನಿಮಗೆಲ್ಲ ಶಾರಿ ಇಷ್ಟವಾದಳಲ್ಲ...
ಖುಷಿಯಾಗುತ್ತಿದೆ ನನಗೆ...
ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಬರೆಯಲು ಉತ್ಸಾಹ ಕೊಡುತ್ತದೆ...

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಸುರೇಶ್ ಸರ್....

ನ್ನೀವು ನನ್ನ ಬ್ಲಾಗಿಗೆ ಬಂದಿದ್ದು ಬಹಳ ಸಂತೋಷ ಆಗ್ತಾ ಇದೆ...

ನಾನು ಬರಹಗಾರನಲ್ಲ...
ಸಾಹಿತ್ಯ ಹೆಚ್ಚಾಗಿ ಓದಿಯೂ ಇಲ್ಲ...
ನೀವು ಹೇಳಿದ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳ್ತ್ತೇನೆ...
ತಿದ್ದಿಕೊಳ್ಳುತ್ತೆನೆ...

ನಿಮ್ಮ ಪ್ರೋತ್ಸಾಹಕ್ಕೆ ಹ್ರದಯ ಪೂರ್ವಕ ವಂದನೆಗಳು...

Ittigecement said...

ರಾಜೇಶ್...

ನೀವು ಯಾವಾಗ ಬಂದರೂ ಸ್ವಾಗತ....

ಶಾರಿಯ ಮನೆಯ ಆತಿಥ್ಯ ಮಜವಾಗಿತ್ತು...
ಕೆಲವೊಂದನ್ನು ಸೆನ್ಸಾರ್ ಮಾಡಬೇಕಾಗುತ್ತದೆ...

ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಕಿಶನ್....

ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

ನಿಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿರುತ್ತದೆ..

Ittigecement said...

ಮೋಹನ್...
ಬರಹ ಮೆಚ್ಚಿದ್ದಕ್ಕೆ ವಂದನೆಗಳು....

Ittigecement said...

ರೂಪಾರವರೆ...

ನನ್ನ ಬ್ಲಾಗಿಗೆ ಸ್ವಾಗತ....

ನಿಮ್ಮ ಪ್ರೋತ್ಸಾಹದ ನುಡಿಗಳು ನನ ಇನ್ನಷ್ಟು ಬರೆಯ ಬೇಕೆಂಬ ಉತ್ಸಾಹ ನೀಡುತ್ತದೆ...

ಪ್ರತಿಕ್ರಿಯೆಗೆ ವಂದನೆಗಳು...

ಬರುತ್ತಾ ಇರಿ...

ಜಲನಯನ said...

ಪ್ರಕಾಶ್,
ವ್ಹಾವ್..!! ಸೂಪರ್ ಕಣ್ರೀ...ಚನ್ನಾಗಿ ಮಧುರ ಸಂಬಂಧಗಳನ್ನು ಮುಗ್ಧತೆಯ ನವಿರು ಎಳೆಗಳನ್ನು ಚಾಕಚಕ್ಯತೆಯಿಂದ...ಯೂ ಶೇಪ್ ನ ಮುಖಕ್ಕೆ ಕಾರಣರಾಗಿದ್ದೀರಿ..ಕೆಲವು ಕಡೆ ನಕ್ಕೂ ಬಿಟ್ಟೆ ನಿಮ್ಮ ಬ್ಲಾಗ್ ಓದ್ತಾ...ನಾನೇನಾದ್ರೂ ಬ್ಲಾಗುಗಳ ಪೋಸ್ಟ್ ಗಳ ಸಂಗ್ರಹದ print ಮಾಡಿಸ್ದ್ರೆ..ನಿಮ್ಮ, ಈ ಲೇಖನ ಖಂಡಿತ ಮುಂಚೂಣಿಯಲ್ಲಿರುತ್ತೆ...

Ittigecement said...

ಜಲನಯನ....

ನನ್ನ ಬ್ಲಾಗಿಗೆ ಸ್ವಾಗತ....

ನಿಮ್ಮ ಬ್ಲಾಗಿಗೂ ಹೋಗಿ ಬಂದೆ...
ತುಂಬಾ ಚೆನ್ನಾಗಿದೆ....
ವೈವಿದ್ಯಮಯವಾಗಿದೆ...

ಹಳೆಯ ಲೇಖನಗಳನ್ನೂ ಓದಿ...
ಪ್ರೋತ್ಸಾಹಕ್ಕಾಗಿ ವಂದನೆಗಳು...

ಪ್ರೋತ್ಸಾಹದ ನುಡಿಗಳು ..
ಮತ್ತಷ್ಟು ಬರೆಯಲು ಟಾನಿಕ್ ಥರಹ...

ಜಲನಯನ said...

ಪ್ರಕಾಶ್
ನನ್ನ ಬ್ಲಾಗಿಗೆ ಬಂದಿರಿ...ನಿಮ್ಮ ಅನಿಸಿಕೆಗಳನ್ನ ಬಿಟ್ಟಿದ್ದೀರಿ..ತುಂಬಾ..ಧನ್ಯನಾದೆ...
ನಿಮ್ಮ e-ಸ್ಟೈಲು ಚನ್ನಾಗಿದೆ..
ಒಂದು ಪಾಮರನ ಸಂದೇಹ...ಸಿಮೆಂಟು ಮರಳಿನ ಮಧ್ಯೆ..??? ಯಾಕೋ ತುಂಬಾ materialistic ಅನ್ಸುತ್ತೆ..
ಅದೇ ನಿಮ್ಮ posts ನೋಡಿದ್ರೆ..ಬಹಳ Lively ಮತ್ತು lovely

Ittigecement said...

ಜಲನಯನ....

ಮತ್ತೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

ನಿಮ್ಮ ಬರಹಗಳಲ್ಲಿ ಕೆಲವು ಓದಿದೆ...ಇಷ್ಟವಾಯಿತು...
ಇನ್ನುಳಿದವಗಳನ್ನೂ ಓದುವೆ...

ನನ್ನ ಹಳೆಯ ಬರಹಗಳನ್ನೂ ಓದಿ...

ಮತ್ತೊಮ್ಮೆ ಬಂದು ಅನಿಸಿಕೆ ಹಂಚಿಕೊಂಡಿದ್ದಕ್ಕೆ ವಂದನೆಗಳು...

Shy said...

prakash rawareee...nimma baraha channgidee....

Ittigecement said...

ಶೈಲಾ...

ತುಂಬಾ.. ತುಂಬಾ ಧನ್ಯವಾದಗಳು...

ನನ್ನ ಹಳೆಯ ಲೇಖನಗಳನ್ನೂ ಓದಿ...

ಬರುತ್ತಾ ಇರಿ...

venkob said...

supeeeeeeeeeeeeeer :)

Ittigecement said...

Thank you.... Venkatesh....!!

jayashree hegde said...

nim friend shaari avara innocence , apyaayamaana tumba ista aytu. neevu avara bagge blog alli barediddira anta avarige heltini nodi. [:)]

Nagashree said...

ha ha ha nagadi nagadi hotte yella noyta ide...lekhana super...Nimma balyadatavannu Shariyavaru thumba chennagi vivarisiddare....:)

Bala said...

ಪ್ರಕಾಶ್,

ಶಾರಿಯ ಪ್ರಹಸನ ಚೆನ್ನಾಗಿದೆ. ನಾನು ಸಿಸಿ೯ಯ ಮಲೆನಾಡಿನಲ್ಲಿ ಹುಟ್ಟಿ ಬೆಳೆದಿಲ್ಲದಿದ್ದರೂ ನನ್ನ ಬೇರುಗಳೆಲ್ಲ ಅಲ್ಲೇ ಇವೆ. ಶಾಲೆಯ ರಜಾ ದಿನಗಳಲ್ಲೆಲ್ಲ ಅಲ್ಲೇ ಕ್ಯಾ೦ಪ್! ಹೊಳೆಗೆ ಒಡ್ಡು ಕಟ್ಟುವದು, ಮುಳ್ಳೇ ಹಣ್ಣು ಹುಡುಕಿ ಬೆಟ್ಟ ಹತ್ತುವದು, ಕರೆ೦ಟ್ ಮತ್ತೆ ಟಿವಿ ಇಲ್ಲದ ದಿನಗಳು, ಸ೦ಜೆಯ ಭಜನೆಗಳು... ಮನೆ ತು೦ಬ ಒಟ್ಟು ಕುಟು೦ಬದ ೨೦- ೩೦ ಜನ, ಹಳೆಯ ಹುಲ್ಲು ಮಾಡು, ದಸರೆಯ ಮುತ್ತೈದೆಯರ ಊಟ, ಅಮ್ಮನವರ ಅಲ೦ಕಾರ, ಹೆಗ್ಗರಣಿಯ ಶಾಲೆಯ ವಾಷಿ೯ಕೋತ್ಸವ... ಈಗೀಗ ಅಲ್ಲಿ ಹೋದರೆ ಹಳೆಯ ನೆನಪುಗಳೆಲ್ಲ ನಿಜವೋ ಅಲ್ಲವೋ ಅನ್ನಿಸುವಷ್ಟು ಬದಲಾಗಿದೆ. ಕಾಲನ ಮಹಿಮೆ. ನನ್ನ ಮಕ್ಕಳಿಗೆ ನನ್ನೆಲ್ಲ ಬಾಲ್ಯದ ಖುಷಿಯ ಅನುಭವಗಳನ್ನು ಪರಿಚಯಿಸಬೇಕೆಂದರೆ, ಜನವೂ ಬದಲು, ವಾತಾವರಣವೂ ಬದಲು!! ನನ್ನ ಬಾಲ್ಯದ ಆ ಅನುಭವಗಳು ನನ್ನ ಮಕ್ಕಳಿಗೆ ದಕ್ಕುವದೆಲ್ಲವೆ೦ದು ಒ೦ಥರ ವಿಷಾದವೆನಿಸುತ್ತದೆ.

Thanks for a trip down memory lane!!!

ಬಾಲು...

Jyoti Hebbar said...

hahhahahaha... nakku nakku saakaytu...super...

Madahavi Hegde said...

Dear Prakashanna ,
nim lekhana superrrrrrrrrrrr.mundenatu heli....