Sunday, May 10, 2009

ಬೆಡಗಿನ .. ಬಣ್ಣದ ಚಿಟ್ಟೆಯೇ...ಆಶೀಷ
ಸಾರಿ ಊರಿಗೆ ಹೋದಾಗ ಬಹಳ ಉತ್ಸಾಹದಿಂದ ಇದ್ದ...

ಅಮ್ಮನ ಕೈತೋಟದಲ್ಲಿ ಹಾರಾಡುವ ಬಣ್ಣದ ಚಿಟ್ಟೆಗಳನ್ನು...
ಕ್ಯಾಮರಾದಲ್ಲಿ ಸೆರೆ ಹಿಡಿಯುವ ತವಕ ಅವನಿಗೆ ...

ಸಂಗಡ ನನ್ನ ಅಣ್ಣನ ಬೆಂಬಲ ಅವನಿಗೆ ...

ದೊಡ್ಡಪ್ಪ, ಮಗ ಸೇರಿ ನನಗೂ ಉರಿ ಬಿಸಿಲಿನ ಝಳ ತೋರಿಸಿದರು....

ಅಡಿಕೆ ತೋಟ... , ಊರ ಹೊರಗಿನ ಗದ್ದೆ ಬಯಲು...,
ನಮ್ಮನೆ ಬೆಟ್ಟಗಳನ್ನ ಅಲೆಸಿದರು...
ಅಲ್ಲಿ ಕಂಡ ಕೆಲವು ಬಣ್ಣದ ಚಿಟ್ಟೆಗಳು ಇವು....

ಸಂಗಡ ಹಲವಾರು ಹಕ್ಕಿಗಳು...!
ಅವುಗಳ ಚಿಲಿಪಿಲಿ ಕಲರವ...!
ಹಸಿರು ಚಿಗುರಿದ ಗಿಡ ಮರಗಳು...!
ಹೂಗಳು.., ದುಂಬಿಗಳು...!


ಇವೆಲ್ಲ ನೋಡಿ ಆತ ದಂಗಾಗಿ ಹೋಗಿದ್ದ...

"ಅಪ್ಪಾ ... ನಮ್ಮೂರು ತುಂಬಾ ಸುಂದರವಾಗಿದೆ...
ಬೆಂಗಳೂರು ಬೋರು...
ನಾವು ಇಲ್ಲೇ ಯಾಕೆ ಇರಬಾರದು...?"

ಅವನ ಮುಗ್ಧ ಪ್ರಶ್ನೆಗೆ ಉತ್ತರ ಕೊಡುವದು ನನಗೆ ಕಷ್ಟವಾಯಿತು.
..

ಪಟ್ಟಣಗಳ... ಧೂಳು, ಹೊಗೆ..
ಯಾಂತ್ರಿಕ ಜೀವನ...
ನಮಗೆ ಅನಿವಾರ್ಯವೇ...?

ಎಷ್ಟು ಮೋಹಕ ಬಣ್ಣದ ಚಿಟ್ಟೆಗಳು...!!


ಕಪ್ಪು ಬಣ್ಣಕ್ಕೂ, ಕೆಂಪಿಗೂ ಎಂಥಹ ಹೊಂದಾಣಿಕೆ..??... !!
ಇದು ಯಾವ ಕುಂಚದ ಕಲ್ಪನೆ...??...ಕಪ್ಪು.., ಕೇಸರಿ ..., ಬಿಳಿ ಬಣ್ಣದ ಹೊಂದಾಣಿಕೆ...
ಹಸಿರೆಲೆಯ ಮೇಲೆ...!ಇದು ಯಾವ ಕಣ್ಣು...??
ಒಂದೊಂದು ಚಿಟ್ಟೆಗೂ... ಅದರದೇ ವೈಶಿಷ್ಟ್ಯ... !!ಕಪ್ಪು ಸುಂದರಿ....!ನನ್ನ ಬಣ್ಣಕ್ಕೆ ಏನು ಹೆಸರು..?

ಪಾತರಗಿತ್ತಿ ಪಕ್ಕ....!
ನೋಡಿದೇನೆ ಅಕ್ಕ....!
ಬಣ್ಣದ ಬೆಡಗಿನ .. ಚಿಟ್ಟೆಯೇ...
ನಿನಗೆ...
ಮಧುರ ಸಿಹಿ..
ಮಕರಂದದ ಆಸೆಯೇ..?

ಬಣ್ಣದ .. ಸುಂದರ ..
ಹೂವಿನ
ಸೊಬಗಿನ ಬಯಕೆಯೇ...?

70 comments:

ಶಾಂತಲಾ ಭಂಡಿ (ಸನ್ನಿಧಿ) said...

ಪ್ರೀತಿಯ ಚಿಕ್ಕಪ್ಪಾ...

ಹತ್ತು ದಿನ ಹೇಳಿ ಎಷ್ಟೆಲ್ಲ ದಿನ ಮಾಯ ಆಗ್ಬಿಟ್ಟಿದ್ದೆ!
ಚೆಂದದ ಫೋಟೋಗಳಿಗಾಗಿ ಆಶೀಷನಿಗೂ, ನಿನಗೂ ಇಬ್ಬರಿಗೂ ಧನ್ಯವಾದಗಳು.

pavana m hegde said...

very nice pictures mama

SSK said...

ಪ್ರಕಾಶ್ ಹೆಗ್ಡೆ ಅವರೇ, ಬಣ್ಣ ಬಣ್ಣದ ಚಿಟ್ಟೆಗಳ ಚಿತ್ರಗಳು ಮತ್ತು ಊರಿನಲ್ಲಿ ನಿಮಗಾದ ಅನುಭವದ ಬಗ್ಗೆ ಬರೆದಿರುವ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ!! ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಮ್ಮೂರು ನಮಗೆ ಅದೆಷ್ಟು ಆಪ್ಯಾಯಮಾನ ಎನಿಸಿ ಬಿಡುತ್ತದೆ ಅಲ್ವ. ಜೀವನ ಅನಿವಾರ್ಯತೆಯ ಹೆಸರಿನಲ್ಲಿ ಈ ಯಾಂತ್ರಿಕ ನಗರಿಗೆ ನಮ್ಮನ್ನು ಕರೆ ತಂದಿದೆ. ಚಿಟ್ಟೆ ಚಿತ್ರಗಳು ಬೊಂಬಾಟ್.

Ittigecement said...

ಶಾಂತಲಾ...

ಹತ್ತು ದಿನಕ್ಕೆಂದು ಹೋದವನಿಗೆ ಹದಿನೇಳು ದಿನ ಉಳಿಯುವ ಸಂದರ್ಭ ಬಂದಿತು...
ಎಲ್ಲವೂ ಖುಷಿ, ಸಂತೋಷವಾಗಿತ್ತು...
ಅಪರೂಪದ ಆತ್ಮೀಯರನ್ನು ಭೇಟಿಯಾದೆ...
ಅದರಲ್ಲೂ ನನ್ನ ಮಾನಸ ಸಹೋದರಿ "ಶಾರೀ" ಸಿಕ್ಕಿದ್ದಳು..

ಕೊನೆಯಲ್ಲಿ ನಡೆದ ಒಂದು ಅವಘಡ ಮನಸ್ಸನ್ನು ವಿಚಲಿತ ಗೊಳಿಸಿತು...
ಜೀವನದಲ್ಲಿ ಸೋತು ಹಣ್ಣಾಗಿರುವ ಗೆಳೆಯನೊಬ್ಬ...
ಮತ್ತೆ ಸಾಧಿಸಿ ಮೇಲೆ ಬರೆವೆ ಎಂದು ಶಪಥಮಾಡಿದವ...
ರಸ್ತೆ ಅಪಘಾತದಲ್ಲಿ ತೀರಿಕೊಂಡ....

ಸುಖದುಃಖ, ಖುಷಿ ಸಂಭ್ರಮ, ಬೇಜಾರು....
ಇದೇ ಜೀವನ....

ನಿಮ್ಮೆಲ್ಲ ಪ್ರೀತಿಗೆ, ಸ್ನೇಹಕ್ಕೆ

ಧನ್ಯವಾದಗಳು....

ಇಷ್ಟು ದಿನ ಇವೆಲ್ಲವನ್ನು ತುಂಬಾ "ಮಿಸ್" ಮಾಡಿಕೊಂಡೆ...

ವ್ಯವಹಾರದ ಕೆಲಸಗಳು ಬೆಟ್ಟದಷ್ಟಿವೆ..
ಎಲ್ಲಿಂದ ಶುರು ಮಾಡಬೇಕೆಂದು ತಿಳಿಯುತ್ತಿಲ್ಲ....

ಹೇಳ ಬೇಕಾದ ವಿಷಯಗಳು ಬಹಳಷ್ಟು ತಂದಿದ್ದೇನೆ...

ಇನ್ನೇನು....?
ಮತ್ತೆ ಬರೆಯುವೆ...
ಬರೆಯುತ್ತಲೇ ಇರುವೆ....

ನಿಮ್ಮೆಲ್ಲರ ಬ್ಲಾಗ್ ಬಹಳ ಮಿಸ್ ಮಾಡಿಕೊಂಡಿರುವೆ...

ಶಾಂತಲಾ....
ಧನ್ಯವಾದಗಳು...

ತುಂಬು ಪ್ರೀತಿಯಿಂದ...
ಪ್ರಕಾಶಣ್ಣ....

PARAANJAPE K.N. said...

ಪ್ರಕಾಶರೇ,
ಏನು ಊರಿಗೆ ಹೋದ ಅಸಾಮಿ ವಾಪಸು ಬ೦ದೇ ಇಲ್ವಲ್ಲ ಅ೦ದ್ಕೊ೦ಡಿದ್ದೆ. ಇನ್ನೊ೦ದೆರಡು ದಿನ ನೋಡಿ ಫೋನ್ ಮಾಡೋಣ ಅ೦ತಿದ್ದೆ. ಸ್ವರ್ಗಸೀಮೆಯಿ೦ದ ನರಕಸದೃಶ ಬೆ೦ದಕಾಳೂರಿಗೆ ಅ೦ತೂ ಬ೦ದ್ರಲ್ಲ, ಬಹಳ ಚೆನ್ನಾದ ರ೦ಗುರ೦ಗಿನ ಚಿಟ್ಟೆಗಳ ಮನಮೋಹಕ ಚಿತ್ರಗಳನ್ನು ಹಾಕಿ ಮನ ಸೆಳೆದಿದ್ದೀರಿ, thanks.

Umesh Balikai said...

ಪ್ರಕಾಶ್ ಸರ್,

ಚಿಟ್ಟೆ ಚಿತ್ರಗಳು ತುಂಬಾ ಚೆನ್ನಾಗಿವೆ. ಬೇಂದ್ರೆ ಅಜ್ಜನ "ಪಾತರಗಿತ್ತಿ ಪಕ್ಕ" ಹಾಡು ನೆನಪಿಸಿದ್ದಕ್ಕೆ ಧನ್ಯವಾದಗಳು.

ನಿಮ್ಮ ಸ್ನೇಹಿತನ ಆತ್ಮಕ್ಕೆ ಕರುಣಾಮಯಿಯಾದ ಆ ಭಗವಂತ ಶಾಂತಿಯನ್ನು ಮತ್ತು ಅವನ ಕುಟುಂಬದವರಿಗೆ ದುಖ:ವನ್ನುಬರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

-ಉಮೀ

ಮನಸು said...

ನಿಮಗೆ ಸ್ವಾಗತ ಹಸಿರ ಬನದಿಂದ ಕಾಂಕ್ರೆಟ್ ವನಕ್ಕೆ.......ಕೆಲಸ ಇದ್ದೇ ಇರುತ್ತೇ ಬಿಡಿ.....ನೀವು ನಿಮ್ಮ ಕುಟುಂಬದೊಂದಿಗೆ ಕಳೆದ ಕ್ಷಣ ಮರೆಯಲಾರದ್ದು..... ಮಗನಿಗು ಖುಷಿಯಾಗಿರಬೇಕಲ್ಲವೆ..?
ಊರಿಗೆ ಹೋಗು ಇಷ್ಟೊಂದು ಚಿಟ್ಟಿಗಳನ್ನ ಹೊತ್ತು ತಂದಿರುವಿರಲ್ಲ.......ಎಂತಹ ಬಣ್ಣ ಅವುಗಳದು ಚಿತ್ರಬರೆದು ಅದಕ್ಕೆ ತರ ತರದ ಬಣ್ಣ ತುಂಬಿದರು ಈ ರೀತಿ ಡಿಸೈನ್ ಮಾಡಲಿಕ್ಕೆ ಸಾಧ್ಯವಾಗೋಲ್ಲ ಬಿಡಿ. ತುಂಬಾ ಚೆನ್ನಾಗಿವೆ.
ವಂದನೆಗಳು ಮತ್ತಷ್ಟು ಅನುಭವದ ನಗೆಯ ಲೇಖನಗಳು ಬರಲಿ ಕಾಯುತ್ತಲಿರುತ್ತೇವೆ.
ಧನ್ಯವಾದಗಳು

guruve said...

ವಿಧ ವಿಧ ಚಿಟ್ಟೆಗಳ ಚಿತ್ರಗಳಿಂದ ಚಿತ್ತಾರ ಬಿಡೀಸಿದ್ದೀರ.. ಬಹಳ ಚೆನ್ನಾಗಿ ಮೂಡಿ ಬಂದಿವೆ ಫೋಟೋಗಳು..

Amit Hegde said...

Wow...! what a nice collection...! Good work indeed...!

Looking @ the photos, I feel, even I have to go back to Sirsi and spend some time with the nature...!

http://simplyperceptions.blogspot.com/

Sushrutha Dodderi said...

ಸಖತ್ ಫೋಟೋಸ್!

Unknown said...

ಪ್ರಕಾಶ್ ಸಖತ್ತಾಗಿದೆ ನಿಮ್ಮೂರಿನ ಚಿಟ್ಟೆಗಳ ಚಿತ್ರಗಳು. (ಕೆಲವೊಂದು ಡಿಸ್ಪ್ಲೇ ಆಗಲಿಲ್ಲ). ನಿಮ್ಮ ಮಗನ ಪ್ರಶ್ನೆಗೆ ಏನು ಉತ್ತರ? ಕಾಲವೇ ನಿರ್ಧರಿಸಬೇಕೋ ಏನೋ?
ಬಹಳ ದಿನವಾಯಿತು. ಊರಿಗೆ ಹೋಗಿದ್ದಕ್ಕೂ ಒಳ್ಳೊಳ್ಳೆಯ ಚಿತ್ರಗಳನ್ನು ಸಂಪಾದಿಸಿಕೊಂಡು ಬಂದಿದ್ದೀರ. ಅಭಿನಂದನೆಗಳು

Unknown said...

ಸುಂದರ ಚಿತ್ರಗಳು. ಸಾಕಷ್ಟು ಓಡಾಡಿರಬೇಕು ಈ ಕೆಲಸಕ್ಕಾಗಿ. ಆ ಊರು ಯಾವುದು?

Ittigecement said...

ಪಾವನಾ...

ಈ ಫೋಟೊ ತೆಗೆಯುವಾಗ ನನ್ನಮ್ಮ ಬಯ್ಯುತ್ತಿದ್ದರು...
"ಈ ಸುಡುವ ಬಿಸಿಲಲ್ಲಿ ಆ ಕ್ಯಾಮರಾ ಹಿಡಕೊಂಡು ಏನು ಮಾಡ್ತೀರೋ" ಅಂತ.
ನಂತರ ಟಿವಿಯಲ್ಲಿ ಚಿಟ್ಟೆಗಳ, ಹೂಗಳ, ಹಕ್ಕಿಗಳ
ಫೋಟೊ ನೋಡಿದ ಮೇಲೆ ಅವರಿಗೆ ಸಮಾಧಾನವಾಯಿತು..
"ಅಕ್ಟೋಬರ್ ನಲ್ಲಿ ಬನ್ನಿ .., ಒಂದಡಿ ಅಗಲದ ಚಿಟ್ಟೆಗಳು ಕಾಣ ಸಿಗುತ್ತವೆ" ಅಂದಿದ್ದಾರೆ.
ಆಗ ಹೋಗಲೇ ಬೇಕಾಗಿದೆ...

ಚಿತ್ರ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

Ittigecement said...

ಎಸೆಸ್ಕೆಯವರೆ.....

ಮಲೆನಾಡು ಈಗ ಮೊದಲಿನಂತಿಲ್ಲ...
ಸೆಖೆಯೂ ಜಾಸ್ತಿಯಾಗುತ್ತಿದೆ...
ಆದರೂ ಆ ಕಾಡು ಆಸಕ್ತಿ ಉಳಿಸಿಕೊಂಡಿದೆ...
ಹೊಲಕ್ಕೆ ಬರುವ ನವಿಲು ಪಕ್ಷಿಗಳ ಹಿಂಡು,
ಅಪ್ಪೆ ಮಾವಿನಕಾಯಿ,ಕಾಡಿನ ಹಣ್ಣುಗಳು...

ಒಟ್ಟಿನಲ್ಲಿ ಮತ್ತೆ ಹಳೆಯ ನೆನಪಾದವು...

ಚಿತ್ರಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ರಾಜೇಶ್....

ಇಷ್ಟು ದಿನಗಳವರೆಗೆ ನಮ್ಮ ಕಾಡಿನ ಪರಿಚಯ ನನ್ನ ಮಗನಿಗೆ ಆಗಿರಲಿಲ್ಲ...
ಅಲ್ಲಿ ಕೂಗುವ ಹಕ್ಕಿಗಳ ಧ್ವನಿ ಅವನಿ ಬಹಳ ಇಷ್ಟವಾಯಿತು...
ಅಷ್ಟೆಲ್ಲ ಸಂಪತ್ತು, ಆರೋಗ್ಯವಿರುವ
ಊರನ್ನು ಬಿಟ್ಟು ಈ ನರಕದಲ್ಲಿ ಯಾಕಿರಬೇಕು...?

ಈ ಥರಹದ ಬದುಕು ನಮಗೆ ಅನಿವಾರ್ಯವೆ?
ಇದು ನಮಗೆ ನಾವು ಹಾಕಿಕೊಂಡ ಬೇಲಿ ಅಂತ ನನ್ನ ಭಾವನೆ..

ಬೆಂಗಳೂರಲ್ಲಿಎರಡು ವರ್ಷ ಇದ್ದರೆ "ಅಸ್ತಮಾ" ಗ್ಯಾರೆಂಟಿಯಂತೆ..

ಆದರೂ ಜನ ಬೆಂಗಳೂರಿಗೆ ಬರುತ್ತಾರೆ..
ಬದುಕು ಹುಡುಕಿಕೊಂಡು....

ಚಿತ್ರಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು...

sunaath said...

ಪ್ರಕಾಶ,
ಎಷ್ಟೆಲ್ಲಾ ಸುಂದರ ಚಿಟ್ಟೆಗಳ ಫೋಟೋ ಇವೆಯಲ್ಲ!
ನಿಮಗೆ ಹಾಗೂ ಆಶೀಷನಿಗೆ ಅಭಿನಂದನೆಗಳು.

ಮೂರ್ತಿ ಹೊಸಬಾಳೆ. said...

Prakashanna,
welcome back to bangalore
aasheesh is not a bad photographer I wish him all the best.nice caption from you.

Ittigecement said...

ಪರಾಂಜಪೆಯವರೆ...

ಇಷ್ಟುದಿನ ವ್ಯವಹಾರ ಬಿಟ್ಟು ಹೋದವನಲ್ಲ.
ಈ ಬಾರಿಯ ರಜೆ ನೆನಪಿನಲ್ಲಿ ಉಳಿಯುವಂಥದ್ದು.
ಕಾರವಾರಕ್ಕೆ ಹೋಗಿದ್ದೆ. ಒಂದು ಬೋಟಿನಲ್ಲಿ ದಿನವೆಲ್ಲ ಕಳೆದಿದಿದ್ದೇವೆ.
ಆ ಅನುಭವ ಸೊಗಸಾಗಿದೆ.
ಟ್ಯಾಗೋರ್ ಬೀಚ್ ಸೂಪರ್ ಆಗಿದೆ.

ಎಲ್ಲ ಬರೆಯುವೆ...

ಚಿಟ್ಟೆಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

Ittigecement said...

ಉಮೇಶ್.....

ಸುಮಾರು ೭೫ ಫೋಟೊಗಳಿವೆ. ಅವುಗಳಲ್ಲಿ ಕೆಲವು ಇಲ್ಲಿ ಹಾಕಿರುವೆ.

ನನ್ನಣ್ಣ, ಅಣ್ಣನ ಮಕ್ಕಳು, ಆಶೀಷ್ ಜತೆ ಹೊಲ, ಬೆಟ್ಟ ತಿರುಗಿ ತೆಗೆದ ಫೋಟೊಗಳು
ಆ ಅನುಭವ ಮಸ್ತ್ ಆಗಿತ್ತು.

ಕೊನೆಯಲ್ಲಿ ಊರಿನ ಗೆಳೆಯನೊಬ್ಬ ತೀರಿಕೊಂಡಿದ್ದು ಬೇಸರ ತಂದಿತು.

ನಿಮ್ಮ ಪ್ರೀತಿ , ಸ್ನೇಹಕ್ಕೆ ನನ್ನದೊಂದು ಸಲಾಮ್.

ನಿಮ್ಮೆಲ್ಲರ ಬ್ಲಾಗಿಗೂ ಬರುವೆ....

ಧನ್ಯವಾದಗಳು

Ittigecement said...

ಮನಸು.....

ಧಾರವಾಡಕ್ಕೆ ಹೋಗಿದ್ದೆ. ಗೆಳೆಯ "ದಿವಾಕರ" ನ ಮನೆಗೆ.

ಅಲ್ಲಿ ಹಿರಿಯ ಸಾಹಿತಿಗಳ, ಸಂಗೀತಗಾರರ ಭೇಟಿ ಖುಷಿ ತಂದಿತು..

ಅಂಥಹ ಹಿರಿಯರ ಬಗೆಗೆ ಒಂದು ಚಿತ್ರ ಲೇಖನ ಬರೆಯುವ ವಿಚಾರ ಇದೆ.

ಅಂತೂ ಬಹಳ ದಿನಗಳ ನಂತರ ಅರ್ಥಪೂರ್ಣವಾಗಿ ಕಳೆದ ರಜೆಗಳಿವು.

ನಗೆಯ ಪ್ರಸಂಗಗಳೂ ಇವೆ.

ಅಪರೂಪದ ಸಹೋದರಿ "ಶಾರೀ" ಭೇಟಿಯಾಗಿದ್ದೆ.

ಮುಂದಿನ ಲೇಖನ ಅವಳ ಬಗೆಗೆ.

ನಿಮಗೂ, ಮಹೇಶರವರಿಗೂ
ವಂದನೆಗಳು... ಧನ್ಯವಾದಗಳು....

PaLa said...

ಪ್ರಕಾಶ್,

ಇಷ್ಟೊಂದು ಚಿಟ್ಟೆಗಳ ವಿವಿಧ ಬಣ್ಣವನ್ನು ಒಂದೇ ಪೋಸ್ಟಿನಲ್ಲಿ ಉಣಬಡಿಸಿದ್ದೀರಿ, ಧನ್ಯವಾದ. ಸಾಧ್ಯವಾಗಿದ್ದರೆ ಅವುಗಳ ಹೆಸರನ್ನೂ ಪ್ರಕಟಿಸಿದರೆ ಚೆನ್ನಾಗಿತ್ತು (ಶಿವು ಹೆಸರು ಗುರುತಿಸಲು ಸಹಾಯಮಾಡಬಹುದೇನೋ).

Ittigecement said...

ಗುರುಪ್ರಸಾದ್....

ಈ ಪಾತರಗಿತ್ತಿಗಳು ಕೂತಲ್ಲಿ ಕೂರಲ್ಲ..
ನಿಂತಲ್ಲಿ ನಿಲ್ಲಲ್ಲ...

ಒಮ್ಮೆ ಕುಳಿತಿದೆ ಎಂದು ಫೋಕಸ್ ಮಾಡ ತೊಡಗಿದರೆ...
ತಟ್ಟನೆ ಹಾರಾಡತೊಡಗಿ ಬಿಡುತ್ತವೆ.
ಎತ್ತಲೋ ಹಾರಿ ಹೋಗಿ ಬಿಡುತ್ತಿದ್ದವು...

ನಿಮ್ಮೆಲ್ಲರ ಮೆಚ್ಚುಗೆಗೆ...
ಪ್ರೀತಿಗೆ ಧನ್ಯವಾದಗಳು

Ittigecement said...

ಅಮಿತ್....

ಖಂಡಿತ ಹೋಗಿ ಬನ್ನಿ ಸಿರ್ಸಿಗೆ.....
ಅಲ್ಲಿನ ಕಾಡಿಗೆ, ಹೊಳೆಗೆ,
ಹಣ್ಣಿನ ಮರಗಳು ಕಾಯುತ್ತಿವೆ ನಿಮಗಾಗಿ...

ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು

Ittigecement said...

ಸುಶ್ರುತ ದೊಡ್ಡೇರಿಯವರೆ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....
ನೀವಾಗಿದ್ದರೆ ಈ ಫೋಟೊಗಳ ಸಂಗಡ...
ಒಂದು ಸೊಗಸಾದ ಕವಿತೆ ಬರೆಯುತ್ತಿದ್ದಿರೇನೋ....

(ಮುಂಚಿತವಾಗಿ)
ಹುಟ್ಟು ಹಬ್ಬದ ಶುಭಾಶಯಗಳು..
(೧೨/೦೫)

Ittigecement said...

ಸತ್ಯನಾರಾಯಣರೆ.....

ಪಟ್ಟಣದಲ್ಲಿ ಹಣ ಇದೆ...
ಓದಿದ ಡಿಗ್ರಿಗೆ ಕೆಲಸವಿದೆ...
ನಮ್ಮ ಓದಿನ ಪರಮೋಚ್ಛ ಧ್ಯೇಯ "ನೌಕರಿ"

ಹಾಗಾಗಿ ನಾವೆಲ್ಲ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದೇವೆ....

ನಿಮ್ಮ ಲೇಖನಗಳನ್ನೂ ಓದಿಲ್ಲ...
ಇಷ್ಟರಲ್ಲೇ ಓದುವೆ....

ಪ್ರೋತ್ಸಾಹಕ್ಕೆ ಧನ್ಯವಾದಗಳು....

Ittigecement said...

ಕ್ರಷ್ಣ ಮೂರೂರು.....

ನಮ್ಮೂರು ಸಿರ್ಸಿಯ ಬಳಿ "ದೇವಿಸರ"

ಮಲೇನಾಡು, ಮೊದಲಿನಷ್ಟು ತಂಪಿಲ್ಲದಿದ್ದರೂ
ಅಳಿದುಳಿದ ಕಾಡಿನಲ್ಲಿ ತೆಗೆದ ಫೋಟೊಗಳಿವು...

ಮುರೂರು ಅಂದರೆ "ಯಕ್ಷಗಾನದ " ಮುರೂರಾ?
ಕುಮುಟಾ ಹತ್ತಿರ?

ಫೋಟೊಗಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಫೋಟೊ ಭಾಳ್ ಲಾಯ್ಕಿತ್ತಲ್ಲ ಮಾರ್ರೇ... ಊರ್ ಕಡೆ ನೆಂಪು ಬರೂಕ್ ಸುರೂ ಆತ್ ಕಾಣಿ!

Geetha said...

welcome back sir :)

ಚಿಟ್ಟೆಗಳ ಪೋಟೊ ತುಂಬಾ ಚೆನ್ನಾಗಿವೆ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ತುಂಬಾ ಚಂದದ ಫೋಟೋಗಳು, ಮನಸ್ಸಿಗೆ ಮುದ ನೀಡಿತು

Ittigecement said...

ಸುನಾಥ ಸರ್.....

ಈ ಪ್ರಕ್ರತಿ ಎಷ್ಟು ಚಂದದ ಕಲಾಕಾರ ಅಲ್ಲವಾ...?

ನಾವು ಆ ಅಂದ ಚಂದವನ್ನು ಹಾಳು ಮಾಡುತ್ತಿದ್ದೇವೆ......

ಸ್ವಚ್ಛವಾಗಿ, ಸ್ವತಂತ್ರವಾಗಿ ಹಾರಾಡುವ ಪ್ರಾಣಿ, ಪಕ್ಷಿ ಸಂಕುಲಗಳ ಜೀವಕ್ಕೆ ಅಪಾಯವಿದೆ...

ಇದು ನಮ್ಮ ಸ್ವಯಂಕ್ರತ ಅಪರಾಧ...

ಸರ್ ...
ಫೋಟೊ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು....

NiTiN Muttige said...

ಅಂತೂ ಪ್ರಕಾಶ್ ಅಣ್ಣ ನ ಆಗಮನ ಆತು!! :) ಚಿಟ್ಟೆ ಎಲ್ಲಾ ತುಂಬಾ ಚೆನ್ನಾಗಿದ್ದು..

Shivanand said...

ತುಂಬಾ ಚೆನ್ನಾಗಿವೆ. ನಾನೂ ತುಂಬಾ ಪ್ರಯತ್ನ ಪಟ್ಟಿದ್ದೀನಿ ಅವನ್ನು ಸೆರೆಹಿಡಿಯಲು. ತುಂಬಾ ಓಡಾಡಿಸುತ್ತವೆ. ೧ ಸೆಕೆಂಡ್ ಕೂತಲ್ಲಿ ಕೂರಲ್ಲ ಈ ಚಿಟ್ಟೆಗಳು. ಕೆಲವೊಂದು ಸೆರೆ ಹಿಡಿದಿದ್ದೀನಿ. ಆದರೆ ಇಷ್ಟು ಹತ್ತಿರದಿಂದಲ್ಲ, ಇಷ್ಟು ಚೆನ್ನಾಗಿ ಬಂದಿಲ್ಲ. ಅದ್ಭುತವಾಗಿ ಸೆರೆ ಹಿಡಿದಿದ್ದೀರಿ ನಿಮ್ಮ ಕ್ಯಾಮೆರಾದಲ್ಲಿ. ಒಳ್ಳೆಯ ಚಾಕಚಕ್ಯತೆ ಇದೆ ನಿಮ್ಮಲ್ಲಿ.

Shivanand
http://colorshots.blogspot.com/

ಮಲ್ಲಿಕಾರ್ಜುನ.ಡಿ.ಜಿ. said...

1.DanaidEgg Butterfly(female)
2.Blue Tiger
3.Crimson Rose
4.Red Pierrot
5.Peacock Pansy
6.Common Mormon(Male)
7.(Damaged -difficult to identify)
8.Lime Butterfly

ಆಶಿಷ್ ಒಳ್ಳೆ ಪ್ರಯತ್ನ ಮಾಡಿದ್ದಾನೆ. ಅಭಿನಂದನೆಗಳನ್ನು ತಿಳಿಸಿ. ಅವನಿಗೆ Butterflies of Peninsular India by Krushnamegh Kunte ಎಂಬ ಪುಸ್ತಕ ಕೊಡಿಸಿ. ಅವನು ತೆಗೆದ ಚಿಟ್ಟೆ ಚಿತ್ರಗಳ ಹೆಸರು ಅವನೇ ಹುಡುಕಿ ಅದರ ಬಗ್ಗೆ ತಿಳಿದುಕೊಳ್ಳುತ್ತಾನೆ. ಫೋಟೋ ಮತ್ತು ಕಲಿಕೆ ಎರಡು ಆಗುತ್ತೆ.
ರಜೆಯ ಮಜ ಇತ್ಯಾದಿ ಬರೆಯಿರಿ.

shivu.k said...

ಪ್ರಕಾಶ್ ಸರ್,

ಚಿಟ್ಟೆ ಚಿತ್ರಗಳು ಚೆನ್ನಾಗಿವೆ...

ನಾನು ಹೇಳುವ ಅಭಿಪ್ರಾಯವನ್ನು ಮಲ್ಲಿಕಾರ್ಜುನ್ ಹೇಳಿದ್ದಾರೆ. ಮತ್ತೆ ಹೆಸರನ್ನು ಸೂಚಿಸಿದ್ದಾರೆ..
ಅವರು ಹೇಳಿದ ಪುಸ್ತಕದ ಜೊತೆ ಟಿ.ಎನ್.ಎ.ಪೆರುಮಾಳ್‌ರವರ "south indian butterflies' ಪುಸ್ತಕವನ್ನು ಕೊಡಿಸಿದರೆ ಮತ್ತಷ್ಟು ಉತ್ತಮ ಮಾಹಿತಿ ಸಿಗುವುದು ಖಚಿತ.

ಏಳನೇ ಚಿಟ್ಟೆಯ ಹೆಸರು " common navab"

ಧನ್ಯವಾದಗಳು.

Unknown said...

Shivu and mallikarjun kutoohalakkaagi matte ee Post nodalu bande. nimmibbara abhiprayagalu prakash mattu ashish citrgalu nammalli hecchina arivu moodisive.

ಶಿವಪ್ರಕಾಶ್ said...

ಊರಿಗೆ ಹೋಗಿ ಬರುವಾಗ ಒಳ್ಳೆ ಚಿಟ್ಟೆಗಳನ್ನೂ ಸೆರೆ ಹಿಡ್ಕೊಂಡು ಬಂದಿದಿರಿ...
ಚಿಟ್ಟೆಗಳ ಫೋಟೋಗಳು ತುಂಬಾ ಚನ್ನಾಗಿವೆ...

ವಿನುತ said...

ಪ್ರಕಾಶ್ ಅವರೇ,

ಅದ್ಭುತ ಚಿತ್ರಗಳು. ಪಾತರಗಿತ್ತಿ ಅಷ್ಟು ಸುಲಭವಾಗಿ ಒಲಿಯುವವಳಲ್ಲ, ಬಹಳ ಚ೦ಚಲೆ. ಆದರು ನಿಮ್ಮ ಹಾಗು ಆಶೀಷನ ಕ್ಯಾಮೆರ ಕಣ್ಣಿಗೆ ಸಿಕ್ಕಿದ್ದಾಳೆ. ಮಲ್ಲಿಕಾರ್ಜುನ್ ಹಾಗು ಶಿವೂ ಅವರ ಮಾಹಿತಿಯಿ೦ದ ಗೊತ್ತಿರದ ಹೆಸರಿನ ಮಾಹಿತಿಯು ಸಿಕ್ಕ೦ತಾಯಿತು. ಎಲ್ಲರಿಗೂ ಧನ್ಯವಾದಗಳು.

Ittigecement said...

ಮೂರ್ತಿ.....

ನಿಮ್ಮ ಅಭಿಪ್ರಾಯವನ್ನು ಆಶೀಷ್ ಗೆ ತಿಳಿಸಿದ್ದೇನೆ....

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು....

ನಿಮ್ಮ ಟೊಮ್ಯಾಟೊ ಹುಡುಗಿ ಲೇಖನ ತುಂಬಾ ಚೆನ್ನಾಗಿದೆ...

Ittigecement said...

ಪಾಲಚಂದ್ರ....

ನನಗೆ ಈ ಚಿಟ್ಟೆಗಳಿಗೆ ಹೆಸರಿರುತ್ತದೆ ಅನ್ನುವದೇ ಗೊತ್ತಿರಲಿಲ್ಲ...
ಮಲ್ಲಿಕಾರ್ಜುನ್ ಹೇಳಿದಾಗಲೇ ಗೊತ್ತಾದದ್ದು...

ಹವ್ಯಾಸದ ಸಂಗಡ ಕಲಿಕೆಯೂ ಇದೆಯಲ್ಲವೇ...?
ಒಟ್ಟು ಎಪ್ಪತ್ತೈದು ಫೋಟೊಗಳಿವೆ(ಚಿಟ್ಟೆಗಳದ್ದು)
ಅವುಗಳ ಫೋಸ್ ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕಾದರೆ
ಬಹಳ ಕಷ್ಟವಾಯಿತು...

ಧನ್ಯವಾದಗಳು

Ittigecement said...

ಪೂರ್ಣಿಮಾ....

ನಿಮ್ಮ ಊರ ಪಕ್ಕ ದೊಡ್ಡೂರಿಗೆ ಹೋಗಿದ್ದೆ ಕಾಣಿ...
ನಿಮ್ಮೂರೂ ಮಸ್ತ್ ಇತ್ತೆ...
ತುಂಬಾ ಸೆಖೆ ಇತ್ತೆ....

ನಮ್ಮ ಸಣ್ಣ ಹೆಗ್ಡೇರಿಗೆ ಅಲ್ಲಿಂದ ಬರೂಕೆ ..
ಮನ್ಸೇ ಇಲ್ಯೇ...

ಈ ಸಾರಿ ಟ್ರಿಪ್ ಮಜಾ ಇತ್ತ್ ಕಾಣಿ....

ಇಮಗೆ ಇಷ್ಟ ಆಯ್ತಲ್ಲ...
ಅಷ್ಟ್ ಸಾಕ್ ಕಾಣಿ...

PaLa said...

>>ಒಟ್ಟು ಎಪ್ಪತ್ತೈದು ಫೋಟೊಗಳಿವೆ(ಚಿಟ್ಟೆಗಳದ್ದು)
ಸಕ್ಕತ್ ಪ್ರಕಾಶ್, ನಿಜ ಚಿಟ್ಟೆ ಫೋಟೋ ತೆಗೆಯೋದು ಕಷ್ಟ.

ಮಲ್ಲಿಕಾರ್ಜುನ್, ಶಿವು ಇಬ್ಬರಿಗೂ ವಂದನೆಗಳು

Srinidhi said...

ಸಕ್ಕತ್ ಚಿತ್ರಗಳು!

ಶಿವು, ಮಲ್ಲಿಕಾರ್ಜುನ್ - ಹೆಸರುಗಳನ್ನು ತಿಳಿಸಿದ್ದಕ್ಕೆ ಥ್ಯಾಂಕ್ಸು.

ಬಿಸಿಲ ಹನಿ said...

ಪ್ರಕಾಶ್‍ವರೆ,
Welcome back to Bengaluru! ಊರಿನಿಂದ ತುಂಬಾ ಸುಂದರವಾದ ಚಿಟ್ಟೆಗಳನ್ನು ಎತ್ತಿಕೊಂಡು ಬಂದಿದ್ದೀರಿ. ಥ್ಯಾಂಕ್ಸ್.

Ittigecement said...

ಗೀತಾರವರೆ....

ಇಂಥಹ ಟ್ರಿಪ್ ಆಗಾಗ ಆಗುತ್ತಿರಬೇಕು....
ಯಾಂತ್ರಿಕ ಜೀವನ, ಟ್ರಾಫಿಕ್, ಜಂಜಾಟಗಳಿಂದ
ದೂರವಾಗಿ....
ಬೇರೆ ವಾತಾವರಣದದಲ್ಲಿ ಹೊಸತನ ಕಾಣಬೇಕು...

ನನಗಂತೂ ಈ ಟ್ರಿಪ್ ಚೆನ್ನಾಗಿತ್ತು...
ಕೊನೆಯ ನಾಲ್ಕುದಿನಗಳನ್ನು ಬಿಟ್ಟು...

ಛಾಯಾಚಿತ್ರಗಳು ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು...

ನಿಮ್ಮ ಬ್ಲಾಗಿಗೆ ಇಷ್ಟರಲ್ಲೇ ಬರುವೆ..

Ittigecement said...

ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)

ಊರಿಗೆ ಹೋದಾಗ ಒಂದೆರಡು ಮದುವೆ ಕಾರ್ಯಕ್ರಮಕ್ಕೂ ಹಾಜರಾಗಿದ್ದೆ...
ಮನೆಯಲ್ಲೇ ಮದುವೆ.
ಅಲ್ಲಿನ ಸಡಗರ, ಊರಿನವರ ಸಹಕಾರ...
ಆದರ, ಸತ್ಕಾರ ತುಂಬಾ ಚೆನ್ನಾಗಿತ್ತು...

ನಮ್ಮ ಹಳ್ಳಿಗಳು ಇನ್ನೂ ಹಳೆಯ ಬೇರನ್ನು ಉಳಿಸಿ ಕೊಂಡಿವೆ...
ಹಳೆತನ, ಹೊಸತನಗಳ ಸಂಘರ್ಷ ಕಾಣುತ್ತಿತ್ತು...
ಖುಷಿಯಾಯಿತು..

ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ನಿಮ್ಮ ಬ್ಲಾಗಿಗೂ ಇಷ್ಟರಲ್ಲೇ ಬರುವೆ...

Ittigecement said...

ಹಿರಿಯ ಲೇಖಕ..
ಶ್ರೀ ನಾಗೇಶ್ ಹೆಗಡೆಯವರು ಹೀಗೆ ಹೇಳುತ್ತಾರೆ....


ಚೆನ್ನಾಗಿವೆ ಚಿತ್ರಗಳು. ಸಖತ್ ದುಬಾರಿ ಕ್ಯಮರಾ ಇರಬೇಕು.
ಅಂತೂ ಶಿವೂ ಮಲ್ಲಿಕ್ ಸ್ಪರ್ಶ ಚೆನ್ನಾಗಿಯೇ ಆಗಿದೆ.

ನಿಮ್ಮ ರಾಜಕುಮಾರ್ ಲೇಖನ ಹಾಗೂ ಆ ಬೆಳಕಿನ ಮನೆಯ ಕತ್ತಲಿನ ಬರಹವೂ ಟಚಿ ಆಗಿವೆ.

ನೀವು ಯಾಕೆ ಪತ್ತೆದಾರಿ ಕಾದಂಬರಿ ಬರೆಯಬಾರದು? ಸಸ್ಪೆನ್ಸ್ ಚೆನ್ನಾಗಿ ಕ್ರಿಯೇಟ್ ಮಾಡುತ್ತೀರಿ.
ತುಂಟತನ, ಚೇಷ್ಟೆಗಳೂ ಸೇರಿರುವ ತಮಾಷೆ ಪತ್ತೆದಾರಿ ಕಾದಂಬರಿ ಕನ್ನಡದಲ್ಲಿ ಇದುವರೆಗೆ ಬಂದಂತಿಲ್ಲ. ಆಲ್್ ದ ಬೆಸ್ಟ್.
-ನಾಹೆ.

VENU VINOD said...

first photo is awesome...

Godavari said...

ಇವೆಲ್ಲ ಶಿರಸಿಯ ಚಿಟ್ಟೆಗಳೇ??!!
ತುಂಬಾ ಸುಂದರವಾಗಿವೆ ಫೋಟೋಗಳು..

ಕ್ಷಣ... ಚಿಂತನೆ... said...

ಪ್ರಕಾಶ್ ಸರ್‍,

ಚಿಟ್ಟೆಗಳ ಚಿತ್ರ ಚಿತ್ತಾಕರ್ಷಕವಾಗಿವೆ. ಚಿತ್ರಗಳಿಗೆ ಕೊಟ್ಟ ಶೀರ್ಷಿಕೆಗಳೂ ಸುಂದರ. ಬಹಳ ಕಷ್ಟದಿಂದ ಈ ಚಿತ್ರಗಳನ್ನು ಸೆರೆಹಿಡಿದಿರುತ್ತೀರೆಂದು ನನ್ನ ಅನಿಸಿಕೆ. ಇದರ ಜೊತೆಗೆ ಒಂದಷ್ಟು ಇವುಗಳ ಗುಂಪು, ಪ್ರಭೇದ ಇವೆಲ್ಲ ಇದ್ದಿದ್ದರೆ... ನಮಗೂ ಸ್ವಲ್ಪ ತಿಳುವಳಿಕೆಯಾಗುತ್ತಿತ್ತು (ಬೇಸರಿಸಿಕೊಳ್ಳಬೇಡಿ).

ಇಂತಹ ಪ್ರಕೃತಿಯೊಂದಿಗಿನ ಒಡನಾಟದ ಪ್ರಯಾಣ ಆಗಾಗ ಆಗುತ್ತಿದ್ದರೆ... ಚೆಂದ.

ಧನ್ಯವಾದಗಳು.

Unknown said...

Adhbuta photogalu...Naanu oorige hogddi Prakashanna, vaapas barakke manase batale.

Ittigecement said...

ನಿತಿನ್....

ಊರಿಂದ ಏನೇನು ತಂದಿದ್ದೀರಿ ಎಂದು ಕೇಳಿದ್ದಿರಲ್ಲವೆ...?

ಸಿಕ್ಕಾಪಟ್ಟೆ ಫೋಟೊಗಳು,
ಮರೆಯಲಾಗದ ಘಟನೆಗಳು...
ಮಾಸಿಹೋಗಿದ್ದ ಹಳೆಯ ನೆನಪುಗಳು..
ಹೊಸ ಐಡಿಯಾಗಳು...

ಬ್ಲಾಗ್ ನೋಡುತ್ತಾ ಇರಿ...

ಪ್ರೋತ್ಸಾಹಕ್ಕೆ ವಂದನೆಗಳು....

ಧರಿತ್ರಿ said...

ನಮಸ್ತೆ ಪ್ರಕಾಶ್ ಸರ್..
ಮತ್ತೆ ಇಟ್ಟಿಗೆ ಸಿಮೆಂಟ್ ನಲ್ಲಿ ಸುಂದರ ಚಿತ್ರಗಳ ಮೂಲಕ ಸ್ವಾಗತಿಸಿದ್ದೀರಿ.

ಫೋಟೋಗಳು ಸುಂದರವಾಗಿವೆ..ನಿಮ್ಮ ಅನುಭವ, ಬೆಡಗಿನ ಬಣ್ಣದ ಚಿಟ್ಟೆಯ ಸೌಂದರ್ಯ ಮನತಣಿಸಿತು...

ಅಭಿನಂದನೆಗಳು
-ಧರಿತ್ರಿ

Ittigecement said...

ಶಿವಾನಂದರವರೆ...

ಈ ಚಿಟ್ಟೆಗಳ ಫೋಟೊ ತೆಗೆಯುವದು ಬಹಳ ಕಷ್ಟದ ಕೆಲಸ...

ನನ್ನ ಸ್ನೇಹಿತ ಮಲ್ಲಿಕಾರ್ಜುನ್ ಒಂದು ಅಪರೂಪದ ಫೋಟೊ ಹಿಡಿದಿದ್ದಾರೆ..
ಅವರ ಮಗನ ಕೈ ಮೇಲೆ ಚಿಟ್ಟೆಯೊಂದು ಕುಳಿತ ಫೋಟೊ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ಈ ಚಿಟ್ಟೆಗಳಿಗೆ ಹೆಸರಿರುತ್ತದೆ ಎನ್ನುವದು ನೀವು ಹೇಳಿದಾಗಲೇ ಗೊತ್ತಾದದ್ದು...
ಅವುಗಳ ಹೆಸರನ್ನು ತಿಳಿಸಿದ್ದಕ್ಕೆ , ಉತ್ತಮ ಪುಸ್ತ್ಕವನ್ನು ನೋಡಲು ಹೇಳಿದ್ದಕ್ಕೆ
ವಂದನೆಗಳು...

ನೀವು ನಮ್ಮೊಡನೆ ಬಂದಿದ್ದರೆ ನಿಮಗೆ ಹಬ್ಬವಾಗುತ್ತಿತ್ತು...

ಅಕ್ಟೋಬರನಲ್ಲಿ ಹೋಗೋಣ..
ರೆಡಿಯಾಗಿರಿ...

ಅಂಗೈ ಅಗಲದ "ಪತಂಗ" ಹಿಡಿಯಲು...

ಧನ್ಯವಾದಗಳು...

Ittigecement said...

ಶಿವು ಸರ್....

ಬಹಳ ದಿನಗಳ ನಂತರ ಭೇಟಿಯಾಗುತ್ತಿದೆ...
ನೀವು ಬ್ಯುಸಿ ಇದ್ದಿರೆಂದು ಗೊತ್ತಿತ್ತು...

ಆಶಿಷ್ ಗೆ ನೀವು ಹೇಳಿದ ಪುಸ್ತಕ ಕೊಡಿಸುವೆ...

ಮಲ್ಲಿಕಾರ್ಜುನ್ ಹಾಗು ನೀವು ಅವನಿಗೆ ಸ್ಪೂರ್ತಿಯಾಗಿದ್ದೀರಿ...

ಪ್ರೋತ್ಸಾಹ ಹೀಗೆಯೇ ಇರಲಿ...

ಧನ್ಯವಾದಗಳು....

Ittigecement said...

ಸತ್ಯನಾರಾಯಣರೆ...

ಹೂಗಳು , ಪಕ್ಷಿಗಳ ಬಗೆಗೆ ಸಂಶಯ ಇದ್ದಲ್ಲಿ
ಮಲ್ಲಿಕಾರ್ಜುನ್ ಹಾಗು ಶಿವುರವರು ಪರಿಹರಿಸುವದರಲ್ಲಿ ನಿಪುಣರು...
ಚಿಟ್ಟೆಗಳ ಬಗೆಗೆ ಗೊತ್ತಿರಲಿಲ್ಲ..

ಪಾಲಚಂದ್ರ ಹೇಳಿದಾಗಲೇ ಗೊತ್ತಾದದ್ದು...
ಧನ್ಯವಾದಗಳು

Ittigecement said...

ಶಿವಪ್ರಕಾಶ್....

ಚಿಟ್ಟೆಗಳು ಇಷ್ಟವಾಗಿದ್ದಕ್ಕೆ
ಧನ್ಯವಾದಗಳು...

ಊರಿನ ಅನುಭವಗಳನ್ನು ಸಧ್ಯದಲ್ಲಿ ಹಂಚಿಕೊಳ್ಳುವೆ...

Ittigecement said...

ವಿನೂತಾರವರೆ.....

ಪಾತರಗಿತ್ತಿ ಚಂಚಲೆ..
ಕೂತಲ್ಲಿ ಕೂರಲ್ಲ....

ಕಷ್ಟವಾದರೂ ಚಂದದ ಫೋಟೊ ಸಿಕ್ಕಿದ್ದರಿಂದ ಸಂತೋಷವಾಗಿತ್ತು...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ
ವಂದನೆಗಳು...

Ittigecement said...

ಪಾಲಚಂದ್ರ....

ಒಟ್ಟೂ ಎಪ್ಪತ್ತೈದು ಫೋಟೊಗಳು...

ಕೆಲವು ರಿಪೀಟ್ ಆಗಿವೆ...

ಬೇರೆ ಬೇರೆ ಪೋಸ್ ಗಳಲ್ಲಿ...

ಧನ್ಯವಾದಗಳು...

Ittigecement said...

ಟಿ.ಜಿ. ಶ್ರೀನಿಧಿ....

ಛಾಯಾ ಚಿತ್ರ ,
ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಉದಯ್...

ಹಳ್ಳಿಯ ನೆನಪುಗಳನ್ನು ಸಧ್ಯದಲ್ಲಿಯೇ ಹಂಚಿಕೊಳ್ಳುವೆ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ
ವಂದನೆಗಳು....

Ittigecement said...

ವೇಣು ವಿನೋದ್...

ನನ್ನ ಬ್ಲಾಗಿಗೆ ಸ್ವಾಗತ...

ನಿಮ್ಮ ಬ್ಲಾಗಿನ ಫೋಟೊಗಳು ಸಕತ್ ಆಗಿವೆ...

ಚಿತ್ರ ಲೇಖನ ಖುಷಿಯಾಗಿದ್ದಕ್ಕೆ ವಂದನೆಗಳು...

Ittigecement said...

ಗೋದಾವರಿಯವರೆ...

ನನ್ನ ಬ್ಲಾಗಿಗೆ ಸ್ವಾಗತ...

ನಿಜ ಇವೆಲ್ಲ ಸಿರ್ಸಿಯ ಚಿಟ್ಟೆಗಳು...
ಅಳಿದುಳಿದ ಕಾಡಿನ ಅವಶೇಷಗಳು...

ಫೋಟೊ, ಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು....

Ittigecement said...

ಕ್ಷಣ ಚಿಂತನೆ...

ನನ್ನಣ್ಣ ನನಗೆ ಸ್ಪೂರ್ತಿಯಾಗಿದ್ದ...
ನಾವು ತೆಗೆದ ಫೋಟೊಗಳು ಅವನ ಉತ್ಸಾಹ ಇಮ್ಮಡಿಯಾಗಿಸಿದ್ದವು...

ಚಿತ್ರ, ಲೇಖನ ಲೈಕ್ ಮಾಡಿದ್ದಕ್ಕೆ
ಧನ್ಯವಾದಗಳು...

Ittigecement said...

ಸುಧೀಂದ್ರ...

ನಿಜ ನಮ್ಮೂರೇ ಹಾಗಿದೆ...
ಬರಲಿಕ್ಕೆ ಮನಸ್ಸಾಗುವದಿಲ್ಲ...

ನೀವು ಎಷ್ಟು ಫೋಟೊ ತಂದಿದ್ದೀರಿ...?

ಪ್ರೋತ್ಸಾಹಕ್ಕೆ
ಧನ್ಯವಾದಗಳು...

Ittigecement said...

ನಮಸ್ತೆ ಧರಿತ್ರಿ....

ಇನ್ನಷ್ಟು ಫೋಟೊ, ಲೇಖನಗಳು ಬರಲಿವೆ...

ಚಂಚಲೆ ಚಿಟ್ಟೆಗಳನ್ನು..
ಇಷ್ಟಪಟ್ಟಿದ್ದಕ್ಕೆ
ವಂದನೆಗಳು...

ಹೀಗೇ ಬರುತ್ತಾ ಇರಿ....

Ittigecement said...
This comment has been removed by the author.
ಅಂತರ್ವಾಣಿ said...

ಪ್ರಕಾಶಣ್ಣ,
ತುಂಬಾ ದಿನ ಆಯ್ತು ಇಟ್ಟಿಗೆ ಸಿಮೆಂಟ್ ಮುಟ್ಟಿ.

ಬಣ್ಣ ಬಣ್ಣದ ಚಿಟ್ಟೆಗಳಿಂದ Reentry ಕೊಟ್ಟಿರಿ. ಸಕ್ಕತ್ತಾಗಿವೆ ಚಿತ್ರಗಳು

Ittigecement said...

ಅಂತರ್ವಾಣಿಯವರೆ....

ವ್ಯವಹರ, ಕೆಲಸ ಬಿಟ್ಟು ಇಷ್ಟೆಲ್ಲ ದಿನ ಹೋಗುವದಿಲ್ಲ.
ಈ ಸಾರಿ ಹೋಗಿ ಬಿಟ್ಟಿದ್ದೆ...

ಹೋದಾಗ ಇವೆಲ್ಲ ಸಿಕ್ಕವು...

ಚಿತ್ರ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...