Monday, April 6, 2009

ಏಲಕ್ಕಿಯ ಉಪ ಬೆಳೆಗಳು....!
ಸಿರ್ಸಿ ಬಸ್ ಸ್ಟಾಂಡ್......

ಅಲ್ಲೊಬ್ಬ ಟೆಂಪೊ ಏಜಂಟ್...

ಯಾವ ಯಾವ ಟೇಂಪೊ ಎಲ್ಲಿಗೆ ಹೋಗುತ್ತದೆ...?
ಎಂದು ಹೇಳುವದು ಅವನ ಕೆಲಸ...


ಅವನ ಬಗೆಗೆ ...
ನಾಗೂವಿಗೂ.., ತೆಂಗಿನ ಕಾಯಿ ಸಿತಾಪತಿಗೂ.., ಉಮಾಪತಿಗೂ ಬೆಟ್...!

ಟೆಂಪೋ ಏಜಂಟ ಬಗೆಗೆ ನಾಗುವಿನ ಚಾಲೇಂಜ್...!

"ನನ್ನ ಕಿವಿಯನ್ನು ಏನೂ ಕೇಳದ ಹಾಗೆ "ಹತ್ತಿ" ಹಾಕಿ...
ಏರ್ ಟೈಟ್ ಮಾಡಿ.., ಬಂದು ಮಾಡಿ...!
ಅವನು ಏನು ಹೇಳುತ್ತಾನೆ ಅನ್ನುವದನ್ನು ನಾನು ಹೇಳುತ್ತೇನೆ...!"

"ನೀನು ಸೋತು ಹೋದರೆ...? !!..."
ಉಮಾಪತಿಗೆ ಸಣ್ಣ ಸಂಶಯ..!


"ನಾನು ಸೋತು ಹೋದರೆ " ಸಾಮ್ರಾಟ್ ಹೊಟೆಲ್" ನಲ್ಲಿ ಪಾರ್ಟಿ..ಕೊಡುತ್ತೇನೆ.."

ಸರಿ ......
ನಾಗುವಿಗೆ ಸಿರ್ಸಿ ಬಸ್ಟ್ಯಾಂಡಿಗೆ ಕರೆದು ಕೊಂಡು ಹೋಗಿ...

ಕಿವಿಗೆ ಹತ್ತಿ ತುಂಬಿ.., ಬ್ಯಾಂಡ್ ಏಡ್ ನ ಪ್ಲಾಸ್ಟರ್ ನಿಂದ.. ಸೀಲ್ ಮಾಡಿ..

ಕಿವಿ ಮುಚ್ಚುವ ಹಾಗೆ ತಲೆಗೊಂದು ಪೇಟ "ಬಿಗಿಯಾಗಿ" ಕಟ್ಟಿದೆವು...

ಟೆಂಪೋ ಏಜಂಟ್ ಬಂದ...

"ಸಿರ್ಸಿ.. ಸಿದ್ದಾಪುರ...! ಸಿರ್ಸಿ ಸಿದ್ದಾಪುರ..!" ಅಂತ ಕೂಗಿದ..

ನಾಗು ಸರಿಯಾಗಿ ಅವನು ಹೇಳಿದ್ದನ್ನೆ ಸರಿಯಾಗಿ ಹೇಳಿದ...!

ನಮಗೆಲ್ಲ ಆಶ್ಚರ್ಯ...!

ಮತ್ತೆ ಬಂದ ಟೆಂಪೋದವ

"ಸಿರ್ಸಿ... ಭಟ್ಕಳ್... ಸಿರ್ಸಿ ಭಟ್ಕಳ್.."

ಅಂತ ಕೂಗಿದ ನಾಗು ಮತ್ತೆ ಸರಿಯಾಗಿ ಹೇಳಿದ...!

ನಾವೆಲ್ಲ ಆಶ್ಚರ್ಯದಿಂದ ಮೂಕರಾಗಿ ಬಿಟ್ಟೇವು..!!

" ಇದು ಹೇಗೆ ನಾಗು... ಹೇಳೊ..ಪ್ಲೀಸ್.."
ಎಂದು ಗೋಗರೆದೆವು...

ಆಗ ಮತ್ತೆ ಬಂದ ಟೆಂಪೊದವ...

" ಸಿರ್ಸಿ ಕುಮುಟಾ... ಸಿರ್ಸಿ ಕುಮುಟಾ..
ಕುಮುಟಾ ಹೋಗುವವರಿಗೆ ಟೆಂಪೋ ರೆಡಿ ಇದೆ...."


ನಾಗು ಹೇಳಿದ " ನೋಡ್ರೊ.. ಅವನು ಎಲ್ಲಿ ಕೆರೆದುಕೊಳ್ಳುತ್ತಿದ್ದಾನೆ...?"

"ಹೊಟ್ಟೆಯ ಮೇಲೆ..!"

" ಅವನು ಒಂದೊಂದು ಊರಿಗೆ ಒಂದೊಂದು ಕಡೆ ತುರಿಸಿಕೊಳ್ಳುತ್ತಾನೆ..!

ಕುಮುಟಾದಲ್ಲಿ ಸೆಖೆ ಅಲ್ಲವಾ..! ಹೊಟ್ಟೆ ತುರಿಸಿಕೊಳ್ಳುತ್ತಿದ್ದಾನೆ....!"

ನಾಗು ನಗುತ್ತಿದ್ದ...


ಟೆಂಪೋದವ ಮತ್ತೆ ಕೂಗಿದ...

" ಸಿರ್ಸಿ ಗೋಕರ್ಣ... ಸಿರ್ಸಿ ಗೋಕರ್ಣ....!"

ಈಗ ಆತ ತೊಡೆ ತುರುಸಿಕೊಳ್ಳುತ್ತಿದ್ದ...!

ಗೋಕರ್ಣದಲ್ಲಿ ಮತ್ತೂ ಸೆಖೆನಾ....?

ಅದು ನಿಜ ಆತ ಒಂದೊಂದು ಊರಿಗೆ...

ಒಂದೊಂದು ಕಡೆ ತುರಿಸಿ.., ಕೆರೆದು ಕೊಳ್ಳುತ್ತಿದ್ದ...!


ಕೆಲವು ಅಭ್ಯಾಸಗಳೇ ಹಾಗೆ.....! ಬಿಡಲಾಗುವದಿಲ್ಲ...!

ಇವೆಲ್ಲ ಏಲಕ್ಕಿ ಉಪ ಬೆಳೆಗಳು...!

ತೋಟದಲ್ಲಿ ಏಲಕ್ಕಿ ಪ್ರಮುಖ ಬೆಳೆಯಾದರೆ...
ಕೆಲವು ಉಪ ಬೆಳೆಗಳೂ ಇರತ್ತವೆ...!


ನಮಗೆ ಗೊತ್ತಿಲ್ಲದಂತೆ...
ನಮ್ಮ
ಕೈಗಳು ಎಲ್ಲೆಲ್ಲೊ ಓಡಾಡುತ್ತಿರುತ್ತವೆ...
!!ಕೆರೆದರೂ.... ಸಾಲದೇ...!

.. ತುರಿಕೆಯೇ......!

(" ಕರೆದರೂ... ಕೇಳದೆ .." ... ಧಾಟಿಯಲ್ಲಿ
)ತುರಿಕೆಯಲ್ಲಿ.. ಇರೋ ...ಸುಖ ...

ಗೊತ್ತೇ
ಇರಲಿಲ್ಲಾ...!

ಹ್ಹುಂ .. ಅಂತೀಯಾ...?...

ಉಹೂಂ.. ಅಂತೀಯಾ...?


(ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ... ಧಾಟಿಯಲ್ಲಿ ಹಾಡಿಕೊಳ್ಳಿ..!)
ಪ್ರತಿಯೊಬ್ಬರೂ ಏನಾದರು "ಉಪ ಬೆಳೆ " ಬೆಳೆದೇ ಬೆಳೆಯುತ್ತಾರೆ....

ಗಮನವಿರುವದಿಲ್ಲ ಅಷ್ಟೆ....!

ಬೆಳೆಗಳಿಗೆ ಹೆಸರಿಡಲು ನನ್ನಿಂದ ಆಗಲಿಲ್ಲ...!

ಇದನ್ನು ಬೆಳೆ ಅನ್ನುವದಕ್ಕಿಂತ ...

ಬೆಳೆಯ ಸಂಗಡ ಬೆಳೆಯುವ ..."ಕಳೆ"

ಅಂದರೆ ಸರಿಯಾಗಬಹುದೇನೋ....!

ಕೆಟ್ಟ ಕಳೆಗಳನ್ನು ತೆಗೆದು ಹಾಕ ಬಹುದಲ್ಲವೇ...?...?


ಪ್ರಿಯ ಓದುಗರೇ...
ಲೇಖನ ಬರೆಯುವ ಭರದಲ್ಲಿ ...ಅವುಗಳಿಂದ ಕೆಲವರ ಮನಸ್ಸಿಗೆ ನೋವಾಗಿದ್ದಲ್ಲಿ.. ಬೇಸರ ಪಟ್ಟುಕೊಳ್ಳ ಬೇಡಿ..
ನನ್ನ ಉದ್ದೇಶ ಯಾರಿಗೂ ನೋವು ಕೊಡುವದಲ್ಲ...


64 comments:

mukhaputa said...

sir super,prapanchadalle athi adbuthavaada 3 sukhagalalli turikeyoo ondanthe,turikeya yella praakaragalannu nimma photodalli torisibittiddira,intaha hasya seriesgalu munduvareyali.

ದಿನೇಶ್ ಕುಮಾರ್ ಎಸ್.ಸಿ. said...

ತುರಿತ, ಕಡಿತ, ಕೆರೆತಗಳ ತರೇವಾರಿ...ಚೆನ್ನಾಗಿದೆ.

Ittigecement said...

ಕೌಂಡಿನ್ಯ.....

ಮೂರು ಅಧ್ಬುತವಾದ ಸುಖಗಳಲ್ಲಿ "ತುರಿಕೆಯೂ" ಒಂದು ಅಂದಿದ್ದೀರಿ..
ಇನ್ನೆರಡು ಯಾವುದು....?

ಕೆಲವು ಬಾರಿ ಬಹಳ ಅಸಹ್ಯವಾಗುವಷ್ಟು..
ಈ ಥರಹದ ಚಟಗಳನ್ನು ನೋಡುತ್ತೇವೆ...!

ಸ್ವಲ್ಪ ಪ್ರಯತ್ನ ಪಟ್ಟರೆ ಬಿಡಬಹುದಲ್ಲವೇ...?

ಬಿಡಬೇಕೆಂಬುದು ಈ ಲೇಖನದ ಆಶಯ...

ಪ್ರತಿಕ್ರಿಯೆ, ಪ್ರೋತ್ಸಾಹಕ್ಕೆ ಧನ್ಯವಾದಗಳು...

PARAANJAPE K.N. said...

ಪ್ರಕಾಶರೆ
ಏಲಕ್ಕಿ ಉಪಬೆಳೆಗಳ ಕಥೆಯ ಜೊತೆಗೆ "ತುರಿಕೆಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ " ಅನ್ನುತ್ತಾ ನಮ್ಮೊಳಗೆ ಸುಪ್ತವಾಗಿ ಅಡಗಿರುವ ಅಭ್ಯಾಸಗಳ ಬಗ್ಗೆ ಬರೆದಿದ್ದೀರಿ. ನಿಮ್ಮ ಹಾಸ್ಯಪ್ರಜ್ಞೆ ಗೆ ನಮನ.

Ittigecement said...

ದಿನೇಶರವರೆ...

ನನ್ನ ಬ್ಲಾಗಿಗೆ ಸ್ವಾಗತ....!

ಯಾರಾದರೂ ನಮ್ಮ ಬಳಿ ಮಾತಾಡುವಾಗ ಈ ಥರಹದ..
ಅಸಭ್ಯ "ಬೆಳೆಗಳನ್ನು" ಬೆಳೆಯುತ್ತಿದ್ದರೆ...
ಬಹಳ ಕೋಪ ಬರುತ್ತದೆ ಅಲ್ಲವೇ...?

ಎಷ್ಟೇ ಆತ್ಮೀಯರಾದರೂ "ಇದನ್ನು ಮಾಡಬೇಡಿ"
ಎಂದು ಹೇಳಲು ನಮ್ಮಿಂದ ಆಗುವದಿಲ್ಲ...

ಸರ್... ಹೀಗೆಯೇ ಬರುತ್ತಾ ಇರಿ...

ಪ್ರತಿಕ್ರಿಯೆಗೆ ವಂದನೆಗಳು...

ಬಾಲು said...

. ಸ್ವಾಮಿನೀವು, ಇದನ್ನ ಬಿಡಬೇಕು ಅಂತೀರಲ್ಲ? ಕೇರ್ಕೋಳೋದ್ರಲ್ಲಿ ಇರೋ ಸುಖ ಬೇರೆ ಎಲ್ಲಿ ಸಿಗುತ್ತೆ ಸ್ವಾಮಿ.

ಆದ್ರೂ ಬೇರೆಯವರಿಗೆ ಕಾಣದ ಹಾಗೆ, ಇಷ್ಟ ಬಂದಲ್ಲಿ ತುರಿಸಿ ಕೊಳ್ಳೋದು ಒಳಿತು.

ಹೌದು ಈ ಫೋಟೋ ಗಳನ್ನ ಎಲ್ಲಿಂದ ಹಿಡ್ಕೊಂಡು ಬಂದಿರಿ? ಅವರಿಗೆ ಗೊತ್ತಾಗದ ಹಾಗೆ ತೆಗೆದಿದ್ದೀರಿ!!! ಗುಡ್ ವರ್ಕ್. :)

ನಂ ಫ್ರೆಂಡ್ ಒಬ್ಬರ ಮ್ಯಾನೇಜರ್ ಒಬ್ಬರು, ಕಿವಿ ಒಳಗೆ ಅಥವಾ ಮೂಗಿನ ಒಳಗೆ, ಕೈ/ ಪೆನ್ಸಿಲ್.. ಏನು ಸಿಗುತ್ತೋ ಅದನ್ನ ಹಾಕ್ಕೊತ ಇದ್ರು... ಅವರು ಬಂದ್ರೆ ಊಟ ಕೂಡ ಸೇರ್‌ತಾ ಇರಲಿಲ್ಲ.

ಕೆಲವ್ರು ಆವಾಗ ಆವಾಗ ಸ್ಮೆಲ್ (vaasane) ಕೂಡ ಕೊಡ್ತಾ ಇರ್ತಾರೆ, ಈ ಉಪ ಬೆಲೆ ಗಳ ಜೊತೆ ಗೆ!!

ಧರಿತ್ರಿ said...

ಮತ್ತೆ ಏಲಕ್ಕಿ ಉಪಬೆಳೆಗೆ ಮೊರೆ ಹೋದ್ರಾ?

ಇದೆಲ್ಲ ಜಗದ ವೈಚಿತ್ರ್ಯ...

ನಮಗೆ ಸಿಟ್ಟು ಬಂದರೂ ತಡಕೋಬೇಕು...

ಯಾಕಂದ್ರೆ ಕೆಲವರಿಗೆ ಅದೇ ಚಾಳಿ..ಇನ್ನು ಕೆಲವರು ಕೇವಲ ಮಾತನಾಡುವಾಗ ಈ ರೀತಿ ಅಸಹ್ಯ ವರ್ತನೆ ತೋರಿಸುತ್ತಾರೆ.

ಥೂ! ಅಸಹ್ಯವಾಗುತ್ತೆ...ನೋಡಕ್ಕೂ ಕಿರಿಕಿರಿ.

ಒಟ್ಟಿನಲ್ಲಿ ಒಳ್ಳೆ ಬೆಳೆಗಾರರನ್ನು ಕಲೆಹಾಕಿದ್ದೀರಿ...

ಮುಂದಿನ ಬೆಳೆ ಯಾವುದು? ಒಳ್ಳೆ ಬರಹಕ್ಕೆ ಅಭಿನಂದನೆಗಳು.

-ಧರಿತ್ರಿ

ವಿನುತ said...

ಪ್ರಕಾಶ್ ರವರೆ,

ಸಧ್ಯ ಈ ಬೆಳೆಗಳಿಗೆ ಹೆಸರಿಡಲು ನಿಮ್ಮಿ೦ದ ಆಗಲಿಲ್ಲ. ಇಲ್ಲದಿದ್ದಲ್ಲಿ, ಇನ್ಯಾವ ಕನ್ನಡ ಪದಗಳು ಕೊನೆ ಕಾಣಬೇಕಿತ್ತೋ? :)
ಹಾಸ್ಯ ಒತ್ತಟ್ಟಿಗಿರಲಿ. ಇಂತಹ ಬೆಳೆಗಳು ಯಾವಾಗಲು ಒ೦ದು ರೀತಿಯ ಅಭಾಸವನ್ನೇ ಸೃಷ್ಟಿಸುವುದು. ಸ್ವಲ್ಪ ಜಾಗರೂಕತೆಯಿ೦ದ ಇದ್ದರೆ ಇವನ್ನು ತಡೆಯುವುದು ಕಷ್ಟವೇನಲ್ಲ. ಇನ್ನಾದರು ನಾವೆಲ್ಲರೂ ಈ ನಿಟ್ಟಿನಲ್ಲಿ ಯೋಚಿಸುವ೦ತಾಗಲಿ.

Ittigecement said...

ಪರಾಂಜಪೆಯವರೆ...

ತಲೆ ಕೆರೆದು ಕೊಳ್ಳುವದೂ ಕೂಡ ಒಂದು ಕೆಟ್ಟ ಚಟ...

ನನ್ನ ಬಾಸ್ ಒಬ್ಬರಿಗೆ ತಲೆಯ ನೆತ್ತಿ ಕೆರೆದು ಕೊಂಡರೆ ಮಾತ್ರ...
ಹೊಸ ವಿಚ್ರ, ಉಪಾಯ ಹೊಳೆಯುತ್ತಿತ್ತು...!

ನವೆಲ್ಲ ನಗುತ್ತಿದ್ದೇವು..

ಎಲ್ಲೆಲ್ಲೋ ಕೆರೆದು ಕೊಳ್ಳುವದಕ್ಕಿಂತ ತಲೆ ಕೆರೆತ ಉತ್ತಮ ಅಲ್ಲವಾ...?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಬಾಲು ಸರ್....

ಬೆರೆಯವರಿಗೆ ಕಾಣದ ಹಾಗೆ
ಕಳೆ ಬೆಳೆಗಳನ್ನು ಮಾಡಿಕೊಂಡರೆ ಒಳ್ಳೆಯದು...

ಇದರಲ್ಲಿನ ಹೆಚ್ಚಿನ ಫೋಟೊ ತೆಗೆದದ್ದು "ಆಶಿಷ್"

ಗ್ಯಾಸ್ ಬಗೆಗೆ ಒಂದು ಒಳ್ಳೆಯ ಮೋಜಿನ ಘಟನೆ ಇದೆ...
ಮತ್ತೊಮ್ಮೆ ಹೇಳುವೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಧರಿತ್ರಿ.....

ಏನು ಮಾಡಲಿ ಹೇಳಿ...

ಏಲಕ್ಕಿ ಬೆಳೆ ಮಾಡಲು ಹೊರಟಾಗ ಇದೆಲ್ಲ ಗೊತ್ತಿರಲಿಲ್ಲ...

ಫೋಟೊ ತೆಗೆಯುತ್ತ.. ತೆಗೆಯುತ್ತ ಐಡಿಯಾಗಳು ಬಂದವು...

ಈ ಕಳೆಗಳು ಇರಬಾರದು ಅನ್ನುವದು ನನ್ನ ಆಶಯ....

ಕಷ್ಟವಾದರೂ ಬಿಡಬೇಕು...
ಅವರ ಹತ್ತಿರದವರು ಅವರಿಗೆ ಹೇಳ ಬೇಕು...
ಹೆಚ್ಚಿನವರಿಗೆ ಇದು ಗೊತ್ತೇ ಇರುವದಿಲ್ಲ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ವಿನುತಾ....

ಈ ಬೆಳೆ .. ಕಳೆಗಳನ್ನು ಕೆಲವರು ಎಷ್ಟು ಚೆನ್ನಾಗಿ...
ಕಲಾತ್ಮಕವಾಗಿ ತೆಗೆಯುತ್ತಾರೆ ಗೊತ್ತೆ...?

ಅದಕ್ಕೂ ಒಂದು ಸ್ಟೈಲು...!!

ನನ್ನಲ್ಲಿ ಕೆಲವು ಫೋಟೊಗಳಿವೆ ,...
ಅದರಲ್ಲಿ ಮುಖಗಳನ್ನು ತೋರಿಸದಿದ್ದರೆ... ಕಷ್ಟ...
ತೋರಿಸಿದರೆ ನನಗೆ ಕಷ್ಟ...
ಹಾಗಾಗಿ ಇಲ್ಲಿ ಹಾಕಲಿಲ್ಲ...!
ಇನ್ನು ಕೆಲವು ಹಾಕುವ ಹಾಗೆಯೂ ಇಲ್ಲ...!

(ಇಲ್ಲಿ ಯಾವುದೇ ಫೋಟೊಗಳನ್ನು ಎದುರುಗಡೆಯ ಫೋಸ್ ಹಾಕಲಿಲ್ಲ...)

ಲೇಖನ ಮೆಚ್ಚಿಕೊಂಡಿದ್ದಕ್ಕೆ ವಂದನೆಗಳು...

ಮನಸು said...

hahaha prakash sir ollole kategaLu, kale ella ide nimmalli...yellige ee payana...?sagali nimma baravaNigeya payana..

kalita buddigu dodda rogakku maddillavante hahaha..

Ittigecement said...

ಮನಸು....

ನನ್ನ ಲೇಖನ ಓದುವ ಒಬ್ಬ ಲೇಖಕ ಹಿತೈಷಿ ಒಬ್ಬರು...
"ನೀವು ಬ್ಲಾಗ್ ಬರೆದು ನಿಮ್ಮ ವೇಳೆಯನ್ನು ಏಕೆ ವೇಸ್ಟ್ ಮಾಡಿಕೊಳ್ಳುವಿರಿ...?
ನಿಮ್ಮ ಪರಿಶ್ರಮವನ್ನು ಕಥೆ ಬರೆಯುವಲ್ಲಿ ತೊಡಗಿಸಿ..."

ನನಗೂ ಹೌದೆನಿಸಿದೆ...!

ಬ್ಲಾಗ್ ಅದರಪಾಡಿಗೆ ಬರೆಯುತ್ತಿರುತ್ತೇನೆ...
ಸಂಗಡ ಕಥೆ ಬರೆಯುವ ಪ್ರಯತ್ನ ಮಾಡ ಬೇಕೆಂದಿದ್ದೇನೆ...

ನನ್ನ ಬ್ಲಾಗಿನ ಲೇಖನಗಳನ್ನು ಪುಸ್ತಕ ರೂಪದಲ್ಲಿ
ಪ್ರಕಟಿಸುವ ಇಚ್ಛೆಯನ್ನು ಹಲವರು ವ್ಯಕ್ತ ಪಡಿಸುತ್ತಿದ್ದಾರೆ...

ಮಾಡಬಹುದೇನೋ...!

ಹೇಗಿದ್ದರೂ ಕೆಲಸ ಕಡಿಮೆ..!ಆರ್ಥಿಕ ಮುಗ್ಗಟ್ಟಿನ ಬಿಸಿ...!

ನಿಮ್ಮ ಗಾದೆ ಬಲು ಚೆನ್ನಾಗಿದೆ...
"ಕಲಿತ ಬುದ್ದಿಗೂ..
ದೊಡ್ಡ ರೋಗಕ್ಕೂ ಮದ್ದಿಲ್ಲವಂತೆ...!"

ಚಿತ್ರ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

Ramya Hegde said...

ಪ್ರಕಾಶಣ್ಣ,
ನೀವು ಹೇಳಿದ್ದು ನಿಜ.ಇವುಗಳಲ್ಲಿ ಹೆಚ್ಚಿನದು ನಿಜವಾದ ತುರಿಕೆ ಅಂತನು ಹೇಳಲ್ಲಗ್ತಿಲ್ಲೇ.ಕೆಲವು ಚಟಾನೂ ಇರಲ್ಲಕ್ಕು ಅಲ್ದ.
ಲೇಖನ ಚನ್ನಾಗಿದ್ದು.ಆದ್ರೆ ಫೋಟೋಸ್ ತಗಳಕಾದ್ರೆ ಹುಷಾರಾಗಿರಿ.

Ramya Hegde said...
This comment has been removed by the author.
Kishan said...

ತುರಿಕೆಯ ತುಡಿತವನ್ನು ತರಹಾವರಿ ರೀತಿಯಲ್ಲಿ ತೆರೆದು ಇಟ್ಟಿದ್ದೀರಿ !
I have a host of colleagues in my office who bite their nails or fingers all the time. I could not stop myself and one day wrote in very big letters on the board "Nail biters Nest". But the result was just a laugh from them and nothing changed!

Ittigecement said...

ರಮ್ಯಾರವರೆ....

ನನ್ನ ಹೈಸ್ಕೂಲ್ ದಿನಗಳಲ್ಲಿ ನನಗೊಬ್ಬ ಸ್ನೇಹಿತ ಇದ್ದ...

ಯಾವಾಗಲೂ ಕಿವಿ ಒಳಗೆ ಕಡ್ಡಿ ಹಾಕಿ ತೂರಿಸಿಕೊಳ್ಳುತ್ತಿದ್ದ...

ಎಷ್ಟೇ ಹೇಳಿದರೂ ಬಿಡುತ್ತಿರಲ್ಲಿಲ್ಲ..

ಬೆಂಕಿಕಡ್ಡಿ, ಹಿಡಿ ಕಡ್ಡಿ ..
ಕೊನೆಗೆ ಏನು ಸಿಗುತ್ತದೋ ಅದು ಹಾಕಿಕೊಳ್ಳುತ್ತಿದ್ದ...

ಅದಕ್ಕೂ ಮಾನಸಿಕ ಕಾರಣ ಇದೆಯೆಂತೆ...

ಫೋಟೊ ತೆಗೆಯುವಾಗ ಬಹಳ ಎಚ್ಚರಿಕೆವಹಿಸಿದ್ದೇನೆ
(ಆಶೀಷ್ ಗೂ ಸೂಚನೆ ಕೊಟ್ಟಿದ್ದೇನೆ)

ಸಂಗಡ

ಶಿವು,.., ಮಲ್ಲಿಕಾರ್ಜುನ್ ..,

ಸಲಹೆ ಸೂಚನೆಗಳಿವೆ

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ನಿಜಕ್ಕೂ ನಿಮ್ಮ ಕಥೆಗಳಲ್ಲಿ ಒಂದು ಹಿಡಿತವಿದೆ. ನಗಿಸುವ ತುಡಿತವಿದೆ, ತಿದ್ದಿ ತೀಡುವ ಮಿಡಿತವಿದೆ. ಅದಕ್ಕೆ ಒಂದು ಪುಸ್ತಕದ ಚೌಕಟ್ಟನ್ನು ನೀಡಿ ಅದು ಎಲ್ಲರಿಗೂ ಸಿಗುವಂತೆ ಮಾಡಿ. ನಿಮ್ಮ ಹೊಸ ವಿಚಾರಗಳು ಮನಸ್ಸಿಗೆ ಆರೋಗ್ಯಕ್ಕೆ ಒಳ್ಳೆಯ ಟಾನಿಕ್ ಇದ್ದ ಹಾಗೆ.
ಹೀಗೆಯೇ ಬರೆಯುತ್ತಿರಿ

PaLa said...

ಸಾರ್,
ನನಗೆ ಕೈ ಬೆರಳಿನ ಚರ್ಮ ತಿನ್ನೋ ಅಭ್ಯಾಸ ಇದೆ. ಹೆದ್ರಿಕೆ ಆಗ್ತಾ ಇದೆ, ನಿಮ್ಮ ಕ್ಯಾಮರಾ ಬರಹಕ್ಕೆ ಮುಂದೆ ನಾನು ಎಲ್ಲಾದ್ರೂ ಸಿಕ್ಕಿದ್ರೆ ಅಂತ!

Ittigecement said...

ಕಿಶನ್...

ಮನಸು ಅವರು ಹೇಳಿದ ಹಾಗೆ

ಆ ಚಟ ಬಿಡಲು ಹೇಗೆ ಸಾಧ್ಯ...?

ಹಲ್ಲು ಕಡೆಯುವದು.. ಅದೇ ಬೆರಳನ್ನು ಮೂಗಿಗೆ ತೂರಿಸಿಕೊಳ್ಳುವದು...!

ಇಲ್ಲೂ ಒಂದು ಫೋಟೊವಿದೆ ನೋಡಿ..

ಅವನು ಮೂಗಿಗೆ ತೂರಿಸಿ ಕೊಳ್ಳುವ ಫೋಟೊ ಸರಿಯಾಗಿ ತೆಗೆಯಲಾಗಲಿಲ್ಲ..
ಎಲ್ಲವೂ ಕ್ಷಣ.. ಕ್ಷಣದಲ್ಲಿ ನಡೆದಿತ್ತು...

ಅದರಲ್ಲಿ ಏನು ರುಚಿಯೋ..
ಏನು ಸೊಗಸೋ..?
ದೇವರೇ ಬಲ್ಲ...!

ಪ್ರತಿಕ್ರಿಯೆಗೆ ವಂದನೆಗಳು...

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ..
ಚನ್ನಾಗಿದೆ ರೀ...
:D :D :D

Ittigecement said...

ಅನ್ನಪೂರ್ಣಾರವರೆ...

ಕೆಲವರಿಗೆ ಮುಖದಲ್ಲಿರುವ ಮೊಡವೆಯನ್ನು ಮುಟ್ಟಿಕೊಳ್ಳುವ ಅಭ್ಯಾಸವಿರುತ್ತದೆ...

ಅದೂ ಕೂಡ ಮಾನಸಿಕ..!

ಅತಂತ್ರತೆಯ, ಒಂಟೀತನದ..
ಭಾವ ಅವರನ್ನು ಕಾಡುತ್ತದಂತೆ...!

ಇದರಿಂದಲೂ ಹೊರಗೆಬರಲು ಸಾಧ್ಯ...

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಗುರುಮೂರ್ತಿಯವರೆ...

ನನ್ನ ಲೇಖನಗಳನ್ನು ಇಷ್ಟ ಪಟ್ಟು ಪ್ರತಿಕ್ರಿಯೆ ಕೊಡುತ್ತೀರಲ್ಲ..
ಅದು ನನಗೆ ಖುಷಿ..

ಪುಸ್ತಕದ ಚಿಂತೆ ಇಲ್ಲ..

ಆಗುವದಿದ್ದರೆ ಆಗುತ್ತದೆ...

ಈ ಚಟ ಬಿಡುವದರ ಬಗೆಗೆ ನಿಮ್ಮ ಸಲಹೆ ಏನು...?
ನೀವು ಒಬ್ಬ ಡಾಕ್ಟರ್ ಅಂತ ಕೇಳಿದ್ದೇನೆ..

ಚಿತ್ರ ಲೇಖನ ಇಷ್ಟ ಪಟ್ಟಿದ್ದಕ್ಕೆ ವಂದನೆಗಳು

Ittigecement said...

ಪಾಲಚಂದ್ರರವರೆ...

ನನ್ನ ಬಳಿ

"ಗಣ್ಯರ"....
"ದೊಡ್ಡ ಜನರ"...

ಈ ಥರಹದ ಫೋಟೊಗಳೂ ಇವೆ...
ಅದನ್ನು ಹಾಕಲಿಕ್ಕೆ ಧೈರ್ಯ ಸಾಲಲಿಲ್ಲ...

ಅವರು ಅದನ್ನು ಸ್ಪರ್ಧಾತ್ಮಕವಾಗಿ ತೆಗೆದು ಕೊಳ್ಳುವರೆ..?

ಗೊತ್ತಿಲ್ಲ..

ನೋಡೋಣ ಮುಂದೆ ಏನಾಗುತ್ತದೆ ...!

ನಿಮ್ಮ ಅಭ್ಯಾಸವನ್ನು ಬಿಡ ಬಹುದು...
ಬಿಟ್ಟು ಬಿಡಿ..
ಬೆರಳ ತುದಿಗೆ ಹಾಗಲಕಾಯಿ ರಸ ಹಚ್ಚಿಕೊಳ್ಳಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಿವಪ್ರಕಾಶ್...

ನಿಮ್ಮ ಬ್ಲಾಗಿನ "ಬಯಲಾಟದ ಅನುಭವ" ಮಸ್ತ್ ಇದೆ..!

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ...

ಧನ್ಯ..
ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ನಿಮ್ಮ ಸ್ನೇಹಿತ ನಾಗುವಿನ observation ಅದ್ಭುತ. ಕೆರೆತಕ್ಕೂ ಊರಿಗೂ ನಂಟು!!
ಊಪಬೇಳೆಗಳ ಕಲ್ಪನೆ, ಮಾನಸಿಕ ವಿಶ್ಲೇಷಣೆ, ಅಪಾಯಗಳ ಬಗ್ಗೆ ಕೆರೆದಿದ್ದೀರಿ sorry ಬರೆದಿದ್ದೀರಿ. ತುಂಬಾ ಚೆನ್ನಾಗಿದೆ. ಈ ತರಹದ ಫೋಟೋಗಳು ತೆಗೆಯುವುದೂ ಕಷ್ಟ , ಅದನ್ನು ಹಾಕುವುದೂ ಕಷ್ಟ. ನೀವು ಬೇಸಿಗೆಯಲ್ಲೂ ಬೆಳೆಚೆನ್ನಾಗಿ ಬೆಳೆದಿದ್ದೀರಿ! ವಿಜಯೀಭವ ವಿಜಯೀಭವ!!

ಅಂತರ್ವಾಣಿ said...

ಹೊ! ಪ್ರಕಾಶಣ್ಣ,

ಹಾಡುಗಳ ರೀಮಿಕ್ಸ್ ಚೆನ್ನಾಗಿದ್ದವು :)

sunaath said...

ಪ್ರಕಾಶ,
It is superb!

Prabhuraj Moogi said...

ಅದೆಲ್ಲಿ ಸಿಗುತ್ತವೆ ನಿಮಗೆ ಈ ಫೊಟೊಗಳು ಅಂತೀನಿ. ಎಲಕ್ಕಿ ಬೆಳೆಯ ಕಳೆ ಅಂತ ಹೆಸರಿಸಿದ್ದು ಚೆನ್ನಾಗಿತ್ತು, ಒಂದು ಕಾಮೇಂಟಿನಲ್ಲಿ ಕಥೆ ಬರೆಯುವ ಯೋಚೆನೆಯಿದೆ ಎಂದಿದ್ದೀರಲ್ಲ, ಬರೆಯಿರಿ ನಮ್ಮೆಲ್ಲರ ಶುಭ ಹಾರೈಕೆಗಳು ನಿಮ್ಮೊಂದಿಗಿವೆ.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಫೋಟೋ ತೆಗೀತಾ ಜೋಪಾನ, ನಿಮಗೆ ಇನ್ನು ಅತಿ ಹೆಚ್ಚಿನ ರಕ್ಷಣೆ ಬೇಕು ಅನ್ಸುತ್ತೆ :)
ನಗು ತರಿಸುವ ಬರಹವಾದರೂ, ಎಲ್ಲೋ ಸಾಮಾಜಿಕ ಜಾಗ್ರತೆಯನ್ನು ಮೂಡಿಸುವ ಪ್ರಯತ್ನ ಮಾಡಿದ್ದೀರಿ, ಮುಂದುವರೆಯಲಿ ನಿಮ್ಮ ಪಯಣ...

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಕಥೆ ಬರೆಯಲಿರುವ ನಿಮಗೆ ಶುಭಕೋರುತ್ತಿದ್ದೇನೆ. ನೀವು ಬರೆಯಲಿರುವ ಕಥೆಯ ನಿರೀಕ್ಷೆಯಲ್ಲಿದ್ದೇನೆ. ಮುಂದಿನ ಪೋಸ್ಟ್ ಕಥೆಯೇ ಆಗಿರಲಿ ಎಂಬುದಾಗಿ ಆಶಿಸುತ್ತೇನೆ.
ಎಲ್ಲವೂ ಒಳಿತಾಗಲಿ.

ಟೆಂಪೋ ಏಜೆಂಟ್ ಮತ್ತು ನಾಗು ಅವರ ಊಹೆಯ ಬಗೆಗಿನ ಈ ಬರಹ ಇಷ್ಟವಾಯಿತು. ಬರೆಯುತ್ತಿರಿ.

Ittigecement said...

ಮಲ್ಲಿಕಾರ್ಜುನ್....

ನಮ್ಮ ನಾಗು ಅದೆಷ್ಟು ಸಲ ನೋಡಿರ ಬಹುದು ಟೆಂಪೋ ಏಜಂಟನನ್ನು...?

ಸಿರ್ಸಿಯಲ್ಲಿ ಟೆಂಪೋ ಹಾವಳಿ ಜಾಸ್ತಿ...
ಈ ಘಟನೆ ಆದ ಮೇಲೆ ನಾನು ಕಾಲೇಜಿನಲ್ಲಿ "ಟೆಂಪೊ ಏಜಂಟನ" ಮಿಮಿಕ್ರಿಯನ್ನೂ ಮಾಡಿದ್ದೇನೆ..
ಅದಕ್ಕೆ ಸ್ಪೂರ್ತಿ
ನಿರ್ದೇಶನ ಎಲ್ಲದೂ... "ನಾಗು"

ಇದು ಬೇಸಿಗೆ ಬೆಳೆ ಅಂತೇನಿಲ್ಲ...
ಇದು "ಸರ್ವಕಾಲಿಕ" ಬೆಳೆ...!
ಅಲ್ಲವಾ...?

ಫೋಟೊ ತೆಗೆಯುವಾಗ..
ನೀವು ಮತ್ತು ಶಿವು ಅವರು ಹೇಳಿದ ಉಪಾಯ, ಹಿತವಚನ ಪಾಲಿಸುತ್ತಿದ್ದೇನೆ...

ನಿಮ್ಮ ಪ್ರೋತ್ಸಾಹಕ್ಕೆ
ಧನ್ಯವಾದಗಳು...

Ittigecement said...

ಅಂತರ್ವಾಣಿಯವರೆ...

ನಾಗು ಮಹಾಶಯ ಸಿನೇಮಾ ಹಾಡುಗಳನ್ನು ತಿರುಚುವದರಲ್ಲಿ ನಿಸ್ಸೀಮ..
ಇವೆಲ್ಲ ಅವನ ಕೆಲವು ತುಣುಕುಗಳು...

" ಕೆರೆದರೂ ಸಾಲದೇ..."

ಈ ಹಾಡನ್ನು ಹೈಸ್ಕೂಲ್ ದಿನಗಳಲ್ಲಿ
ನನ್ನ ಕ್ಲಾಸ್ ಮೇಟ್ ಒಬ್ಬರು ಹಾಡಿ ಡಾನ್ಸ್ ಮಾಡಿದ ನೆನಪು....

ಅವನು ತಿರುಚಿದ ಹಾಡುಗಳನ್ನು ನೀವು ಕೇಳಿದರೆ...
ನೀವು ಸಿನೇಮಾ ಹಾಡು ಕೇಳುವದನ್ನು ನಿಲ್ಲಿಸಿ ಬಿಡ್ತೀರಿ...!

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಸುನಾಥ ಸರ್....

ನೀವು ಇಷ್ಟಪಟ್ಟಿದ್ದು ಖುಷಿಯಾಯಿತು...

ಇನ್ನೂ ಹಲವಾರು "ಉಪ ಬೆಳೆಗಳಿವೆ" ಕ್ಷಮಿಸಿ..
ಕಳೆಗಳಿವೆ...

ಮುಂದೆ ಹಾಕುತ್ತೇನೆ....

ಮೆಚ್ಚುಗೆಗೆ.., ಪ್ರತಿಕ್ರಿಯೆಗೆ...
ಧನ್ಯವಾದಗಳು...

Ittigecement said...

ಪ್ರಭು...

ನಿಮ್ಮಷ್ಟು ಚೆನ್ನಾಗಿ ಕಥೆ ಬರೆಯಲು ಬರಲಿಕ್ಕಿಲ್ಲ...
ಪ್ರಯತ್ನ ಪಡುವೆ...
ಹೇಗಿದ್ದರೂ ಆರ್ಥಿಕ ಹಿಂಜರಿತ ..
ಕೆಲಸ ಕಡಿಮೆ...

ಬೇಜಾರದಲ್ಲಿರುವದಕ್ಕಿಂತ ಬರೆಯುವದು ಲೇಸು...!

ಪ್ರತಿಕ್ರಿಯೆಗೆ

ವಂದನೆಗಳು..

Ittigecement said...

ರಾಜೇಶ್.....

ಪೂಜೆ ಮಾಡಿಸುವವರು ಆಗಾಗ..
ಕಾಲನ್ನು ಮುಟ್ಟಿಕೊಳ್ಳುತ್ತ..
ದೇವರಿಗೆ ಹೂ ಏರಿಸುತ್ತ...
ಅದೇ ಕೈಯಲ್ಲಿ ನಮಗೆ ಪ್ರಸಾದ ಕೊಡುತ್ತಿದ್ದರೆ....?

ಹೀಗೊಂದು ಅನುಭವ ಇತ್ತೀಚೆಗೆ ಆಯಿತು...!

ನಮಗೆ ಹೇಗೆ ಭಕ್ತಿ ಬರಲು ಸಾಧ್ಯ...?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

NiTiN Muttige said...

ayyayyo!!!! simply superb prakashanna!! nakkidde nakkiddu!! ;-)

shivu.k said...

ಪ್ರಕಾಶ್ ಸರ್,

ಏಲಕ್ಕಿ ಉಪಬೆಳೆಗಳ ಕತೆ ತುಂಬಾ ಚೆನ್ನಾಗಿದೆ....ನಾವು ಒಂದಲ್ಲ ಒಂದು ಉಪಬೆಳೆಯ ಕೆಲಸ ಮಾಡುತ್ತಿರುತ್ತೇವಲ್ಲವೇ.....ಎಲ್ಲಾ ಕಡಿತ, ಕೆರೆತಗಳ, ನೆನೆಪಾಯಿತು. ಫೋಟೊಗಳನ್ನು ನೋಡಿದಾಗ ನಗು ಬಂತು...

ಇದನ್ನು ಮಾಡುವಾಗ ನಮಗೆ ಸುಖವೆನ್ನುವುದು ನಿಜ ಅದರೆ ಅದನ್ನು ಪಕ್ಕದಲ್ಲಿದ್ದು ನೋಡುವವರಿಗೆ ಮಾತ್ರ ಬೇಸರವೇ ಸರಿ....ಇದನ್ನು ಬಿಡಬೇಕೆಂದರೂ ಬಿಡಲಾಗದು...

ಇನ್ನಷ್ಟು ಇಂಥವು ಬರಲಿ....

guruve said...

ನಿಮ್ಮಿಂದ ಸ್ವಲ್ಪ ದೂರ ಇರಬೇಕು ಸ್ವಾಮಿ... ನಾವು ಮನಸೋ ಇಚ್ಚೆ ಕೆರ್ಕೋತಾ ಇರ್ತೀವಿ...
ಸಿಕ್ಕಿದ್ರೆ ಫೋಟೋ ತೆಗೆದು ಹಾಕಿಬಿಡ್ತೀರ! :)

ವಿ.ರಾ.ಹೆ. said...

ಹ್ಹ ಹ್ಹ ಹ್ಹ ಪ್ರಕಾಶಣ್ಣ....

ಇಂತ ಕಾನ್ಸೆಪ್ಟ್ ಗಳೆಲ್ಲಾ ಹೇಗೆ ಹೊಳೀತವೆ ನಿಮ್ಗೆ ಅಂತ!

ಸುಪರ್ ಕಾನ್ಸೆಪ್ಟ್..

Ittigecement said...

ಶಾಂತಲಾ...

ನಾನು "ಪ್ರಕಾಶಣ್ಣನಾದರೂ"..
ಬರೆಯುವ ವಿಷಯದಲ್ಲಿ ಕಿರಿಯ...

ಗೊತ್ತಿರದ ಕೆಲಸ ಮಾಡುವದು ಕಷ್ಟ...

ಗೆಳೆಯ ಶಿವು, ಮಲ್ಲಿಕಾರ್ಜುನ್ ಇಲ್ಲಿಗೆ ಕರೆ ತಂದರು...
ನನ್ನ ಕೆಲಸವನ್ನು
ನಿಮ್ಮಂಥವರೂ ಮೆಚ್ಚಿ, ಬೆನ್ನು ತಟ್ಟಿದ್ದೀರಿ...
ಖುಷಿಯಾಗುತ್ತಿದೆ..

ಜೀವನದ ಅನುಭವ ಬರೆದ ನಾನು..
ಕಾಲ್ಪನಿಕ ಬರೆಯ ಬಲ್ಲೇನೆ...?

ಅಳುಕಿದೆ...

ಈ ನಾಗು ಒಂದು ಅದ್ಭುತ...!

ಇನ್ನೂ ಅವನ ಪ್ರೇಮದ ಕಥೆ ಬರೆದಿಲ್ಲ..
ಅದಕ್ಕಿಂತ ಮೊದಲು "ಪೆಟ್ಟಿಗೆ ಗಪ್ಪತಿ ಪ್ರೇಮ ಪ್ರಸಂಗ" ಇದೆ..

ಈ ಚಿತ್ರ ಲೇಖನ ಮೆಚ್ಚಿದ್ದಕ್ಕೆ..
ಪ್ರೋತ್ಸಾಹಕ್ಕೆ...
ವಂದನೆಗಳು...

Umesh Balikai said...

ಪ್ರಕಾಶ್ ಸರ್,

ಉಪಬೆಳೆ ಚಿತ್ರ-ಲೇಖನ ಚೆನ್ನಾಗಿದೆ. ಬೆಳೆ ಬೆಳೆಯಲೇ ಬೇಕು ಎಂಬ ಸಂದರ್ಭ ಬಂದರೆ ಏನೂ ಮಾಡಲಾಗುವುದಿಲ್ಲ ಅಲ್ಲವೇ. ಉಪಬೆಳೆ ಬೆಳೆಯುವುದು ತಪ್ಪಲ್ಲ. ಆದರೆ, ಬೆಳೆಗಾರರು ತಮ್ಮ ಅಕ್ಕ-ಪಕ್ಕ ಯಾರಾದರೂ ಇದ್ದಾರೆಯೇ ಎಂದು ಗಮನಿಸಿ ಬೆಳೆಯುವುದು ಉತ್ತಮ ಎನಿಸುತ್ತದೆ. ಇಲ್ಲದಿದ್ದರೆ ಅದು ನೋಡುಗರಿಗೆ ಅಸಹ್ಯ ಹುಟ್ಟಿಸುತ್ತದೆ.

ಅಂದ ಹಾಗೆ, ಬರೀ ಬೆಳೆಗಾರರನ್ನೇ ಬೆನ್ನು ಹತ್ತಿ ಹೋಗಬೇಡಿ ಮಾರಾಯರೆ :)ನೀವು ನನ್ನ ಬ್ಲಾಗ್ ಕಡೆ ಬಂದು ತುಂಬಾ ದಿನಗಳಾದವು.

ಧನ್ಯವಾದಗಳು.

-ಉಮೀ

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

Ittigecement said...

ನಿತಿನ್....

ಈ ಫೋಟೊ ತೆಗೆಯಲು ಒಂದೆರಡು ದಿನ ಶಿವು ಸಂಗಡ ಹೋಗಿದ್ದೆ...
ಅವರು ಕೆಲವು ಸೂಕ್ಷ್ಮಗಳನ್ನು ತಿಳಿಸಿಕೊಟ್ಟರು...

ಆಮೇಲೆ ನಾನು, ನನ್ನ ಮಗ ಹೊರಟಿದ್ದು...
ಇಲ್ಲಿ ಹೆಚ್ಚಿನ ಫೋಟೊಗಳನ್ನು ಆಶೀಷ್ ತೆಗೆದದ್ದು...
ಕೊನೆಯ ಮತ್ತು ಮೂರನೆಯ ಫೋಟೊ ಮಾತ್ರ ನಾನು ತೆಗೆದದ್ದು...

ಕ್ಯಾಮರ ಹಿಡಿದು ಹೊರಟಾಗ ಎಲ್ಲೆಲ್ಲೂ..
ಏಲಕ್ಕಿ ಬೆಳೆ..., ಏಲಕ್ಕಿಯ ಉಪಬೆಳೆಗಳು...!
ಹೇರಳವಾಗಿ ಸಿಗುತ್ತದೆ...!

ನನ್ನ ಬಳಿ ಈಗ ಎಷ್ಟೊಂದು ಫೋಟೊಗಳಿವೆ ಗೊತ್ತಾ...?

ಕೆಲವು ಗಣ್ಯರ ಫೋಟೊಗಳೂ ಇವೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವು ಸರ್...

ನನಗೂ ಮೊದಲು ಉಗುರು ಕಡಿಯುವ ಚಟವಿತ್ತು..
ಉಗುರು ಕಡಿಯುವದನ್ನು ಬಿಡಲು..

ನಾಗುವಿನ ಒಂದು ಉಪಾಯ ಇದೆ...

ಒಂದುವಾರ ಕಿಸೆಯಲ್ಲಿ "ಹಾಗಲಕಾಯಿ" ಇಟ್ಟುಕೊಳ್ಳಿ..
ಆಗಾಗ ಉಗುರಿನಿಂದ ಹಾಗಲಕಾಯಿಗೆ ಉಜ್ಜಿಕೊಳ್ಳುತ್ತಿರಿ...
ನಿಮ್ಮ ಬೆರಳು ಅಕಸ್ಮಾತ್ ಬಾಯಿಗೆ ಹೋದರೆ..
ತಕ್ಷಣ ಹಿಂದಕ್ಕೆ ಬರುತ್ತದೆ..

ಖಂಡಿತ ಒಂದುವಾರ ಸಾಕು..

ನಾನೂ ಸಹ ಬಿಟ್ಟಿದ್ದೇನೆ...

ಲೇಖನ ಮೆಚ್ಚಿದ್ದಕ್ಕೆ..
ಪ್ರೋತ್ಸಾಹಕ್ಕೆ..
ನನ್ನ ತಲೆಹರಟೆ ಐಡಿಯಾಗಳಿಗೆ ಬೆಂಬಲ ಕೊಟ್ಟಿದ್ದಕ್ಕೆ..
ನಿಮ್ಮ ಸಂಗಡ ನನ್ನನ್ನು ತಿರುಗಿಸಿದ್ದಕ್ಕೆ..
ಒಳ್ಳೆಯ ಊಟಕ್ಕೆ..
ಧನ್ಯ..
ಧನ್ಯವಾದಗಳು...

Ittigecement said...

ಗುರುಪ್ರಸಾದ್...

ಹಾಗೇನಿಲ್ಲ..
ನನ್ನ ಬಳಿ ಈಗ ಬಹಳ, ಬಹಳ ಫೋಟೊಗಳಿವೆ..

ನಮ್ಮ ಪರಿಚಯದವರೊಬ್ಬರಿದ್ದಾರೆ..
ಯಾವಾಗಲೂ ಎಲ್ಲ ಕಡೆ ಕೆರೆದುಕೊಳ್ಳುತ್ತಿರುತ್ತಾರೆ..

ಕುತ್ತಿಗೆಯಿಂದ ಶುರುವಾದರೆ..
ಎಲ್ಲ ಕಡೆಗೂ ಕೈ ಹರಿದಾಡುತ್ತಿರುತ್ತದೆ...
"ಮನೆಯಲ್ಲಿ ಆರಾಮಾ..?"
ಕೇಳುವಷ್ಟರಲ್ಲಿ ಒಂದು ಹಂತದ ಕೆರೆತ ಮುಗಿದಿರುತ್ತದೆ..

"ಮತ್ತೆ ಏನು ಸುದ್ಧಿ ..?"
ಕೇಳುವಷ್ಟರಲ್ಲಿ ಎರಡನೆ ಹಂತ..

ಹೊಟ್ಟೆಯ ಭಾಗ .., ಸೊಂಟ...ಕೆರೆತ...

ಹೆಣ್ಣುಮಕ್ಕಳೂ ಅವರನ್ನು ಕಂಡರೆ ಓಡಿ ಹೋಗುತ್ತಾರೆ...!
ಅದು ಧರ್ಯದ ಪ್ರಶ್ನೆಯಲ್ಲ...
ಗೌರವದ ಪ್ರಶ್ನೆ...!

ಸ್ವಲ್ಪ ಏಲಕ್ಕಿ ಬೆಳೆ, ಏಲಕ್ಕಿಯ ಉಪ ಬೆಳೆ ಓಕೆ..
ಜಾಸ್ತಿ ಯಾಕೆ...?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ...

Shweta said...

Super ! prakaashanna nimma lekhana oduttiddene......hahaa baayitumbaa nakku bitte.....
-shweta

Ittigecement said...

ವಿಕಾಸ್ ....

ನನ್ನ ಬ್ಲಾಗಿಗೆ ಸ್ವಾಗತ...

ಏಲಕ್ಕಿ ಬೆಳೆ ಶುರು ಮಾಡಿದಾಗ ಈ ಐಡಿಯಾ ಎಲ್ಲ ಇರಲಿಲ್ಲ...

ಕ್ಯಾಮರ ಕಣ್ಣಿಂದ ಜನರನ್ನು ನೋಡಲು ಶುರು ಮಾಡಿದೆ ನೋಡಿ...

ಏಲಕ್ಕಿ ಉಪ ಬೆಳೆ ಶುರುವಾಯಿತು...!

ಚಿತ್ರ ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

Ittigecement said...

ಉಮೀ....

ಬೆಳೆಗೆ ತಕ್ಕ "ಹದ" ಸಿಕ್ಕಿದರೆ ಬೆಳೆಯಲೇ ಬೇಕಾಗುತ್ತದೆ...
ಅನಿವಾರ್ಯ ಸಂದರ್ಭ...

ಎಲ್ಲ ಕಾಲದಲ್ಲೂ ಬೆಳೆಯುವ ಬೆಳೆಯಾಗ ಬಾರದು ನೋಡಿ...

ನನ್ನ ಪರಿಚಯದವರೊಬ್ಬರಿಗೆ ಆಗಾಗ ಹೊಟ್ಟೆಯ ಮೇಲೆ ಕೈ ಆಡಿಸು ಅಭ್ಯಾಸವಿತ್ತು...
ಇದಕ್ಕೆಲ್ಲ ಮಾನಸಿಕ ಇರಲಿಕ್ಕಿಲ್ಲ...
ಇದು ಅಭ್ಯಾಸ ಬಲ.... ಅಷ್ಟೆ...
ಈಗ ಬಿಟ್ಟಿದ್ದಾರೆ...

ಈ ಥರಹ ಇರುವವರಿಗೆ ಅವರ ಹತ್ತಿರದವರು ಆಪ್ತವಾಗಿ ಹೇಳಬೇಕು....
ಹೆಚ್ಚಿನ ಜನರಿಗೆ ಗೊತ್ತೇ ಇರುವದಿಲ್ಲ....

ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

Ittigecement said...

ರಾಘವೇಂದ್ರರವರೆ...

ಒಳ್ಳೆಯ ಪ್ರಯತ್ನ.....

ಒಳ್ಳೆಯದಾಗಲಿ....

Unknown said...

ಇಂಜಿನಿಯರಿಂಗ್ ಮಾಡೋವಾಗ ನಮ್ಮ HOD ಗೆ ಈ ತರ ಕೆಟ್ಟ ಅಭ್ಯಾಸ ಇತ್ತು. ನಿಮ್ಮ ಲೇಖನ ಓದಿ ಅದು ನೆನಪಾಯಿತು.!!!

Ittigecement said...

ಶ್ವೇತಾರವರೆ...

ನನ್ನ ಬ್ಲಾಗಿಗೆ ಸ್ವಾಗತ...

ನಾನು ಫೋಟೊ ತೆಗೆಯುವಾಗ ಸಿಕ್ಕಾಪಟ್ಟೆ ನಗು ಬರುತ್ತಿತ್ತು..
ತಡೆಯಲು ಸಾಧ್ಯವಾಗುತ್ತಿರಲಿಲ್ಲ...

ಉಗುರು ಕಡಿದ ಮೇಲೆ ಬೆರಳನ್ನು..ಮತ್ತೆ...
ಮೂಗಿಗೆ ಹಾಕಿ ಕೊಳ್ಳುವ ಹುಡುಗನ ಫೋಟೊ..
ನಗು ಬಂದಿದ್ದರಿಂದ ಕ್ಯಾಮರಾ ಶೇಕ್ ಆಗಿ ಫೋಟೊ ಸರಿಯಾಗಿ ಬರಲಿಲ್ಲ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ಸುಧೀಂದ್ರರವರೆ...

ನಿಮ್ಮ ಜಲವರ್ಣ ತುಂಬಾ ಚೆನ್ನಾಗಿದೆ...

ಸಿರ್ಸಿ ಟೆಂಪೋದವ ಬಹಳ ಮಜಾ ಇದ್ದ...
ಅವನು ಕೂಗುತ್ತಿದ್ದ ಶೈಲಿಯೇ ಒಂಥರಾ ಇಇತ್ತು...
ಅವನ ಧ್ವನಿ, ಧಾಟಿ...
ನಗುತರಿಸುವಂತಿತ್ತು...

ಲೇಖನ ಮೆಚ್ಚಿದ್ದಕ್ಕೆ...
ಪ್ರೋತ್ಸಾಹಕ್ಕೆ ವಂದನೆಗಳು...

Unknown said...

ಸಾರ್, ನಾನು ನಿಮ್ಮ ಳೇಕನವನ್ನು ಮೊನ್ನೆಯೇ ಓದಿದ್ದರೂ ಪ್ರತಿಕ್ರಿಯೆ ನೀಡುವಷ್ಟರಲ್ಲಿ ಏನೋ ಕೆಲಸ ಬಿದ್ದು ಎದ್ದು ಹೋಗಿದ್ದೆ. ಕೆರೆದುಕೊಳ್ಳುವುದರಲ್ಲಿ ಇರೋ ಸುಖದ ವಿವಿಧ ಾಯಾಮಗಳನ್ನು ನಿಮ್ಮ ಲೇಖನ ನೀಡಿದೆ. ಜನ ಬ್ಯುಸಿಯಾಗಿದ್ದೇನೆ ಎನ್ನುವುದಕ್ಕೆ, 'ತಿಕ ತುರಿಸಿಕೊಳ್ಳೋದಿಕ್ಕೂ ತೈಮಿಲ್ಲ' ಎನ್ನುತ್ತಾರೆ. ಇದು ಕರ್ನಾಟಕದ ಎಲ್ಲಾ ಭಾಗದಲ್ಲೂ ಇರುವ ನುಡಿಗಟ್ಟು. 'ಅಂಡು ತುರಿಸಿಕೊಳ್ಳೋದಿಕ್ಕೂ ಸಮಯ ಇಲ್ಲೋ' ಎಂದೂ ಹೇಳುತ್ತಾರೆ. ಜನರಿಗೆ ಊಟ ತಿಂಡಿಗೆ ಸಮಯವಿಲ್ಲದಿರುವ ಬಗ್ಗೆ, ಮನೆಯಲ್ಲಿ ಹೆಂಡತಿ ಮಕ್ಕಳ ಬಗ್ಗೆ ಸಮಯಕಳೆಯುವುದಕ್ಕೆ ಸಮಯವಿಲ್ಲದಿರುವ ಬಗ್ಗೆ ಯೋಚನೆಯಿಲ್ಲ. ತಮ್ಮ ಮಕ್ಕಳೊಂದಿಗೆ ಒಂದಷ್ಟು ಹೊತ್ತು ಆಟವಾಡುವ ಬಗ್ಗೆ ಸಮಯವಿಲ್ಲದಿರುವುದಕ್ಕೆ ಯೋಚನೆಯಿಲ್ಲ. ಆದರೆ ಅವರ ಯೋಚನೆಯಿರಉವುದು, ಕೆರೆದುಕೊಳ್ಳುವುದಕ್ಕೆ ಸಮಯವಿಲ್ಲದಿರುವ ಬಗ್ಗೆ! ಎಂದ ಮೇಲೆ ಕೆರೆದುಕೊಳ್ಳುವುದಕ್ಕೆ ಇರುವ ಮಹತ್ವ ೆಂಥಹದ್ದು ಎನ್ನುವುದ ಅರ್ಥವಾಗುತ್ತದೆ. ಯಾರೋ ಒಬ್ಬ ಭಕ್ತ ದೇವರ ಬಳಿ ವರ ಕೇಲುವಾಗ, 'ಬಿಸಿನೀರು ಸ್ನಾ ಮಾಡುವಾಗ ನನಗೆ ಕಜ್ಜಿ ತುರಿಕೆಯುಂಟಾಗಲಿ' ಎಂದು ವರ ಕೇಳಿದನೆಂದು ಎಲ್ಲೋ ಓದಿದ ಅಥವಾ ಕೇಳಿದ ನೆನಪು. ಅದು ಏನೇ ಇರಲಿ, ನಿಮ್ಮ ವೃತ್ತಿ ಪ್ರವೃತ್ತಿಗಳ ನಡುವೆ .... ತುರಿಸಿಕೊಳ್ಳುವುದಕ್ಕೆ ಸಮಯವಿಲ್ಲದ ನೀವು, ತುರಿಸಿಕೊಳ್ಳುವವರ ಬೆನ್ನು ಹತ್ತಿ ಇಷ್ಟುಂದು ಒಳ್ಳೆಯ ಚಿತ್ರಲೇಖನ ಕೊಟ್ಟಿದ್ದಕ್ಕೆ ನಿಮಗೆ ಥ್ಯಾಂಕ್ಸ್.

ಕ್ಷಣ... ಚಿಂತನೆ... said...

ಪ್ರಕಾಶ್ ಸರ್‌,

ಇದು ಸರ್ವೇಸಾಮಾನ್ಯವಾದ ವಿಚಾರವಾದರೂ ಕೆಲವೊಮ್ಮೆ ಬೇಸರ ತರಿಸದೇ ಇರದು. ಆದರೆ ಇಲ್ಲಿ ಯಾವುದೇ ಬೇಸರವಿಲ್ಲದೇ ಖುಷಿಯಾಗಿ ಓದಿಸಿಕೊಂಡು ಹೋಗುವಂತೆ ಬರೆದಿದ್ದೀರಿ. ಚಿತ್ರಗಳೂ ಸಹ ಸಹ್ಯವಾಗಿರುವುದಕ್ಕೆ ಧನ್ಯವಾದಗಳು.

ಇಂತಿ,

kalsakri said...

ಚಿತ್ರಲೇಖನ ಅದ್ಭುತವಾಗಿದೇರಿ . ಬಾಕಿ ಬ್ಲಾಗ್ ಎಲ್ಲ ಓದ್ಬೇಕು..

Ittigecement said...

ಸತ್ಯನಾರಾಯಣರೆ....

ನಿಮ್ಮ ವಿಮರ್ಶೆ ಚೆನ್ನಾಗಿದೆ...
ತುರಿಸಿಕೊಳ್ಳುವದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ...
ಇದು ಸುಖ ಕೂಡ...
"ಕೌಂಡಿನ್ಯ"ರವರು ಹೇಳಿದ ಹಾಗೆ...

ಆದರೂ...

ಇವೆಲ್ಲ ಸಾರ್ವಜನಿಕವಾಗಬಾರದು...
ಪ್ರತ್ಯೇಕವಾಗಿರಲಿ ಎನ್ನುವದು ಆಶಯ...

ಚಂದದ ಪ್ರತಿಕಿಯೆಗೆ..
ಧನ್ಯವಾದಗಳು...

Ittigecement said...

ಕ್ಷಣ ಚಿಂತನೆ....

ಎಲ್ಲೊ ಒಂದೆರಡು ಬಾರಿ ತಲೆ ಕೆರೆದು ಕೊಂಡರೆ ಏನೂ ಅನ್ನಿಸುವದಿಲ್ಲ...

ಕೆರೆದು ಕೊಳ್ಳುವ ಜಾಗವೂ ಕೂಡ ಮಹತ್ವ..
ಎಲ್ಲಿ ಕೆರೆದು ಕೊಂದರೆ "ಸಹ್ಯ"..?

ಅಸಹ್ಯದ ಕಲ್ಪನೆ ಇದ್ದರೆ ಇದೆಲ್ಲ ಆಗುವದಿಲ್ಲ ಅಲ್ಲವೇ...?

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಕಲ್ಲುಸಕ್ಕರೆಯವರೆ...

ಎಷ್ಟು ಚಂದದ ಹೆಸರು..? ಕಲ್ಪನೆ..?

ನನ್ನ ಬ್ಲಾಗಿಗೆ ಸ್ವಾಗತ...

ಚಿತ್ರ ಲೇಖನ ಇಷ್ಟಪಟ್ಟಿದ್ದು ಖುಷಿ ಆಯ್ತ್ರೀ...!

ನಿಮ್ಮ ಪ್ರತಿಕ್ರಿಯೆ ಕಲ್ಸಕ್ರೆ ಇದ್ದಾಂಗೆ ಐತ್ರಿ...

ನನ್ನ ಹಳೆ ಲೇಖನ ಎಲ್ಲ ಓದಿ...

ಪ್ರತಿಕ್ರಿಯೆ ಕೊಡ್ರಿ...
ಅದು ನನಗ "ಟಾನಿಕ್" ಇದ್ದಂಗ...


ಮತ್ತೆ... ಮತ್ತೆ... ಬರ್ತಾ ಇರ್ರೀ...

Guruprasad said...

ಪ್ರಕಾಶ್.
ಹಾ ಹಾ ಹಾ, ಯಾವ ಟಾಪಿಕ್ ಅರಿಸಿಕೊಂಡ್ ಇದ್ದೀರಿ ಮಾರಾಯರೇ..... ಏನ್ ಎಲಕ್ಕಿನೋ ಏನ್ ಅದರ ಉಪ ಬೆಳೆನೋ... ಸರ್ ಒಂದು ಅಂತು ನಿಜ... ನಮಗೆ ದೇವರು ಕೈ ಕೊಟ್ಟಿದ್ದಾನೆ,, ಅದರಿಂದ ಎಸ್ಟೋ ಉಪಯೋಗಗಳಿವೆ ಅದರಲ್ಲಿ ಇದು ಒಂದು... ಪಾಪ ಹಸು ಎಮ್ಮೆ ಅಥವಾ ಬೇರೆ ನಾಲ್ಕು ಕಾಲಿನ ಪ್ರಾಣಿಗಳನ್ನು ನೋಡಿ... ಅದರ ಮೈ ಗೆ ನವೆ ಆದರೆ ಎಲ್ಲೊ ಒಂದು ಕಡೆ ಮರಕ್ಕೋ ಅಥವಾ ಬೇರೆ ಇನ್ ಯಾವುದೊ ವಸ್ತುವಿಗೆ ಮೊರೆ ಹೋಗಬೇಕು...
ಆದರೆ ಈ ಥರ ಕೆರೆದು ಕೊಳ್ಳುವುದು ಬೇರೆಯವರಿಗೆ ಅಸಹ್ಯ ಆಗಬಾರದು ಅಸ್ಟೆ....
ನೈಸ್ topic ..... ಫೋಟೋ ಸಮೇತ ಇದನ್ನು ಕೊಟ್ಟಿದಕ್ಕೆ ಧನ್ಯವಾದಗಳು...

Unknown said...

Yippi... sadyakke nange antha abhyaasagalyaavudoo illa.. :-)

Unknown said...

ಸಕತ್ತಾಗಿ ಬರೆದಿದ್ದೀರಿ. ಬಹಳ ಸಲ ನಾವು ಇನ್ನೊಬ್ಬರನ್ನು ನೋಡಿ ಏನೋ ಟೀಕೆ ಮಾಡುತ್ತೇವೆ. ಆದರೆ ಅದೇ ಸಮಯದಲ್ಲಿ ನಾವಿನ್ನೆಲ್ಲೋ ತುರಿಸಿಕೊಳ್ಳುತ್ತಿರುತ್ತೇವೆ.

Digwas Bellemane said...

ಇನ್ನು ತುರಿಸಿಕೊಳ್ಳುವಾಗಲೆಲ್ಲ ಪ್ರಕಾಶನ್ನನ್ ನೆನಪು ಅಗದು ಗ್ಯಾರ೦ಟಿ