ಎಷ್ಟು ಹೊತ್ತಿನಿಂದ ಕಣ್ಮುಚ್ಚಿದ್ದೆನೊ ಗೊತ್ತಾಗಲಿಲ್ಲ...
ಎಚ್ಚರವಾದಾಗ ಕಗ್ಗತ್ತಲೆ... ...
ಆಕಾಶದಲ್ಲಿ ಮಿಂಚುವ ತಾರೆಗಳು...
ಅಸಾಧ್ಯ ನೋವು.....!
ಆಗಾಗ
ನರಿಗಳು.. ತೋಳಗಳು ಊಳಿಡುವ ವಿಕಾರ ಸ್ವರಗಳು !
ಓಹ್...!
ನಾನು ಕುರುಕ್ಷೇತ್ರದ ರಣರಂಗದಲ್ಲಿದ್ದೇನೆ...
ಒಂಟಿಯಾಗಿ
ಮಲಗಿದ್ದೇನೆ... !
ಯಾರೋ ತತ್ವಶಾಸ್ತ್ರಜ್ಞ ಹೇಳಿದ ಮಾತು ನೆನಪಾಯಿತು...
"ನೋವು...
ಸಂತೋಷ ಎರಡೂ ಒಂದೇ...!
ಅವುಗಳ
ಅತ್ಯುನ್ನತ ಹಂತದಲ್ಲಿ ..
ಉತ್ಕಟದ ಉತ್ಕರ್ಷದಲ್ಲಿ....ಯಾರೂ ಬೇಕಾಗುವದಿಲ್ಲ...
ನೀನೊಬ್ಬನೇ ಇರುತ್ತೀಯಾ....
ಒಬ್ಬನೆ
ಒಂಟೀಯಾಗಿ ಅನುಭವಿಸುತ್ತೀಯಾ...."...
ಮಲಗಿದ್ದವನಿಗೆ ಪಕ್ಕಕ್ಕೆ ಹೊರಳಬೇಕೆನಿಸಿತು....
ಆಗಲಿಲ್ಲ....
ಬಾಣಗಳು ಚುಚ್ಚುತ್ತಿವೆ ....!
ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಮತ್ತೆ ಬಿಸಿರಕ್ತ ಒಸರುತ್ತಿದೆ....
ಅಸಾಧ್ಯವಾದ ಉರಿ... ನೋವು !
ನಾನು ಮಲಗಿದ್ದುದು ಬಾಣಗಳ ಹಾಸಿಗೆಯಮೇಲೆ...
ನನ್ನ ಮೊಮ್ಮಗ
ಅರ್ಜುನ ನನ್ನನ್ನು ಯುದ್ಧದಲ್ಲಿ ಸೋಲಿಸಿ
ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದ್ದಾನೆ...
"ಅಜ್ಜಾ...
ಭೀಷ್ಮಜ್ಜಾ...
ನಿನ್ನನ್ನು ನಾವು ಇದ್ದಲ್ಲಿಗೆ ಕರೆದೊಯ್ಯುತ್ತೇವೆ.. ಬಾ..."
ನಾನು ನಿರಾಕರಿಸಿದ್ದೆ...
"ನಾನು
ಎಂದಿಗೂ ರಣರಂಗದಲ್ಲಿ ಸೋತು ಅರಮನೆಗೆ ಹೋಗಿಲ್ಲ...
ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದೇನೆ...
ಅಲ್ಲಿಯ ತನಕ ಇಲ್ಲೇ ಇರುವೆ.."
ಅವರೆಲ್ಲ ಹೋಗುವ ಮುನ್ನ
ನನ್ನ ಆರಾಧ್ಯ ದೈವ ಶ್ರೀಕೃಷ್ಣನಿಗೆ ಕೈ ಮುಗಿದಿದ್ದೆ...
"ಕೃಷ್ಣಾ....
ನನ್ನ ಜೀವ ನಿನ್ನ ಪಾದ ಸೇರುವ ಮುನ್ನ.. ನನ್ನಲ್ಲಿ
ಒಂದಷ್ಟು ಪ್ರಶ್ನೆಗಳಿವೆ...
ಇಂದು ರಾತ್ರಿ
ಯುದ್ಧ ಮುಗಿದ ಮೇಲೆ ಇಲ್ಲೊಮ್ಮೆ ಬರುವೆಯಾ ?"...
ಕೃಷ್ಣ ನನ್ನಾಸೆಗೆ ಇಲ್ಲವೆನ್ನಲಿಲ್ಲ...
ಗಂಭೀರವಾಗಿ ನಕ್ಕು ತಲೆಯಾಡಿಸಿ ಹೋಗಿದ್ದ....
ಏನು ಅರ್ಥವಿದೆ ....
ನನ್ನ ಇಷ್ಟು ಸುಧೀರ್ಘ ಬದುಕಿಗೆ....?...
ಯಾವ ಪುರುಷಾರ್ಥಕಾಗಿ ಇಲ್ಲಿವರೆಗೆ ಬದುಕಿದೆ.... ?
ಹೆಂಡತಿ..
ಮಕ್ಕಳು... ?
ಸಂಸಾರ...?
ಯಾವುದೂ ನನಗಿಲ್ಲವಲ್ಲ... ... ! ...
ಪ್ರಾಯಕ್ಕೆ
ಬಂದ ಮಗನಿದ್ದಾನೆ ಎನ್ನುವದನ್ನೂ ಮರೆತು...
ನನ್ನ ಅಪ್ಪ "ಶಾಂತನು"...
ಮಗನ ವಯಸ್ಸಿನ ಚೆಲುವೆ "ಮತ್ಸ್ಯಗಂಧಿಯಲ್ಲಿ" ಮೋಹಿತನಾಗಿದ್ದ...
ಆಗ
ನನಗೂ ಉಕ್ಕುವ ಯೌವ್ವನ...
ಕಣ್ಣು ಕುಕ್ಕುವ ತಾರುಣ್ಯ... !
"ಅಪ್ಪಾ....ಚಿಂತಿಸಬೇಡ...
ಈ ಸಾಮ್ರಾಜ್ಯದ ಸಿಂಹಾಸನವನ್ನೂ ಎಂದೂ ಏರುವದಿಲ್ಲ....
ತಾಯಿ
ಮತ್ಸ್ಯಗಂಧಿ ನನ್ನಮ್ಮನಾಗಿ ಬರಲಿ..
ಅವರ ಮಗ ಈ ಸಿಂಹಾಸನವನ್ನು ಆಳಲಿ..
ನನ್ನ ಸಮಸ್ತ ಶಕ್ತಿ..
ಬಾಹುಬಲ
ಯುದ್ಧ ಕೌಶಲ್ಯವನ್ನು ಈ ಸಿಂಹಾಸನದ ರಕ್ಷಣೆಗೆ ಮುಡಿಪಾಗಿಡುವೆ..."
ಅಪ್ಪನ ಮದುವೆಗಾಗಿ
ಈ
ಪ್ರತಿಜ್ಞೆ ಸಾಕಿತ್ತಲ್ಲವೆ ?
ಮತ್ಸ್ಯಗಂಧಿಯ
ಅಪ್ಪ
ತನ್ನ ಮಗಳ ಭವಿಷ್ಯದ ವಿಚಾರ ಮಾಡಿದ...
ಅವನಿಗಾಗಿ..
ನನ್ನ ಚಿಕ್ಕಮ್ಮನಿಗಾಗಿ ...
ಅವಳ ಮಕ್ಕಳು ರಾಜರಾಗಲೆಂದು ಇನ್ನೊಂದು ಪ್ರತಿಜ್ಞೆ ಮಾಡಿದೆ
"ನನ್ನ
ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿರುವೆ...
ಎಂದಿಗೂ ಮದುವೆಯಾಗಲಾರೆ " .....!..
ಮುಂದೆ
ಎಂಥಹ ಸಂದರ್ಭ ಎದುರಾದರೂ ...
ನಾನು
ಮದುವೆಯಾಗಲಿಲ್ಲ ..
ನನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡೆ.....
:::::::::::::::::::::::::::
ನನ್ನಪ್ಪ
ಬದುಕನ್ನು ಕಂಡವ...ಉಂಡಿದವ...
ತನ್ನ ಬದುಕಿನ
ಪ್ರತಿಯೊಂದೂ ಕ್ಷಣ ಕ್ಷಣವನ್ನೂ ಅನುಭವಿಸಿದವ...
ನನ್ನ ಪ್ರತಿಜ್ಞೆಯನ್ನು ಕೇಳಿ
ಸಂತೋಷದಿಂದ ನನಗೊಂದು ವರವನ್ನು ದಯಪಾಲಿಸಿದ...
"ಮಗನೇ...
ನೀನು ಇಚ್ಛಾ ಮರಣಿಯಾಗು...."... !..
"ಇಚ್ಛಾಮರಣಿ" ಅಂದರೆ ಆತ್ಮಹತ್ಯೆ ಅಲ್ಲವೇ ?
ನನಗೆ ನಗು ಬರುತ್ತಿದೆ....
ನಗೋಣ ಎಂದು ಕೊಂಡೆ...
ನಗಲಾಗಲಿಲ್ಲ... ಕಣ್ಣಲ್ಲಿ ನೀರು ಒಸರುತ್ತಿದೆ...
"ಬದುಕಿನುದ್ದಕ್ಕೂ
ನನ್ನ ಮಗ
ಹೆಣ್ಣು ಸಂಗಾತಿಯಿಲ್ಲದೆ ಇರುತ್ತಾನೆ..
ಒಂಟೀ ಜೀವ....
ಒಂಟೀ ಬದುಕು ಅಂದರೆ ಸಾವಿಗೆ ಹತ್ತಿರ...
"ಆತ್ಮ ಹತ್ಯಾ ದೋಷ ತನ್ನ ಮಗನನ್ನು ತಾಗದಿರಲಿ"
ಅಂತ ಈ ವರವನ್ನು ಕೊಟ್ಟಿರಬಹುದಾ ?...
ಸಾವನ್ನು ಎದುರು ನೋಡುತ್ತಿರುವ
ಈ ಸಂದರ್ಭದಲ್ಲಿ
ಬದುಕಿನಲ್ಲಿ ನಡೆದ ಹಲವಾರು ಘಟನೆಗಳು
ಬೇಡವೆಂದರೂ ನೆನಪಾಗುತ್ತಿವೆ....
"ಆಯ್ಯೋ...
ನೋವು...."...
ಯಾರೋ ಚೀರುವ ಸದ್ಧು....
ನನ್ನ ಮನಸ್ಸು ಮಮ್ಮಲ ಮರುಗಿತು...
ಈ ಕುರುಕ್ಷೇತ್ರ ಯುದ್ಧದಲ್ಲಿ
ಯಾರೆಲ್ಲ ಸಾಯುತ್ತಿದ್ದಾರೆ.. !
ಯಾರದ್ದೋ ಮಗ..
ಯಾರದ್ದೋ ಪತಿ...
ಇನ್ಯಾರದ್ದೋ ಅಪ್ಪ...
ಸಾಯುವವ ಒಬ್ಬ ವ್ಯಕ್ತಿಯಲ್ಲ...
ಒಂದು ಕುಟುಂಬ...
ಕುಟುಂಬದ ಭವಿಷ್ಯಗಳು ... ಆಸೆಗಳೂ ಇಲ್ಲಿ ಸಾಯುತ್ತಿವೆ.....
ಎಷ್ಟೋ ಕನಸುಗಳು ಇಲ್ಲಿ ಕಮರುತ್ತಿವೆ.... !
ಯಾರೋ ಬರುತ್ತಿರುವ ಸದ್ಧು.....
ಕುತ್ತಿಗೆ ಹೊರಳಿಸುವ ಪ್ರಯತ್ನ ಮಾಡಿದೆ...
ಚುಚ್ಚಿದ ಬಾಣಗಳಿಂದಾಗಿ ಆಗಲಿಲ್ಲ...
" ಭೀಷ್ಮಾ...
ನಾನು..
ನಿನ್ನ ಕೃಷ್ಣ ಬಂದಿರುವೆ.. "
ನನ್ನ ಕಣ್ಣುಗಳು ಮಿನುಗಿದವು !
ನನ್ನ ಆರಾಧ್ಯ ದೈವ ... ಶ್ರೀಕೃಷ್ಣ...! ...
"ಕೃಷ್ಣಾ...
ಮಾಧವಾ...
ಹರಿ...ಮುರಾರಿ...
ಗೋವರ್ಧನ ಗಿರಿಧಾರಿ....
ನನ್ನ
ಬಾಯಿತುಂಬಾ ನಿನ್ನ ಹೆಸರನ್ನಾದರೂ ಹೇಳಿಬಿಡುತ್ತೇನೆ...!
ಕಣ್ ತುಂಬ ನೋಡಿ ....
ಕೈ ಮುಗಿಯುವ ಭಾಗ್ಯವೂ ನನಗಿಲ್ಲ ನೋಡು...."
ನನ್ನ ಧ್ವನಿ ನಡುಗುತ್ತಿತ್ತು...
ಕಣ್ಣಲ್ಲಿ ನೀರು ತುಂಬಿತ್ತು...
ಈಗ ಕೃಷ್ಣ ನನ್ನ ಮುಂದೆ ಬಂದು ನಿಂತ...
"ಭಕ್ತಿಗೆ
ಆಡಂಬರ ಬೇಕಿಲ್ಲ..
ಶುದ್ಧ ಅಂತಃಕರಣದ ಭಾವ ಸಾಕು...
ಭೀಷ್ಮಾ....
ನೋವಾಗುತ್ತಿದೆಯಾ... ?"...
ನನಗೆ ನಗು ಬಂತು....
"ಮಾಧವಾ...
ಕಣ್ ಮುಚ್ಚಿದರೂ...
ಕಾಡುವ
ಮಾನಸಿಕ ನೋವಾ.. ?..
ಕ್ಷಣ ಕ್ಷಣಕ್ಕೂ ಚುಚ್ಚುವ ಬಾಣಗಳ ದೈಹಿಕ ನೋವಾ ?...
ಯಾವ ನೋವು ಅಂತ ಹೇಳಲಿ ಕೃಷ್ಣಾ .. ?...
ಇದುವರೆಗೂ
ನೋವಿನೊಂದಿಗೆ ಜೊತೆ ಜೊತೆಯಾಗಿ ಬದುಕಿರುವೆ.."..
ಕೃಷ್ಣ ಮುಗುಳು ನಗುತ್ತಿರುವಂತೆ ಕಾಣುತ್ತಿತ್ತು..
"ಭೀಷ್ಮಾ...
ನಿನಗೆಂಥಹ ನೋವು...?...
ಹಸ್ತಿನಾವತಿಪುರದ
ಮಹಾರಥಿ ಸೇನಾನಿ...
ಹರಿ ಹರರನ್ನೇ ಗೆಲ್ಲಬಲ್ಲ ಭೀಷ್ಮನಿಗೆ ನೋವೇ ?..."
ನನಗೆ ಅರ್ಥವಾಯಿತು...
ಕೃಷ್ಣ ನನ್ನನ್ನು ಕೆಣಕುತ್ತಿದ್ದಾನೆ ಅಂತ...
"ಮಾಧವಾ...
ನನ್ನ ಅಂತರಂಗ ಅರಿತಿದ್ದರೂ..
ಮತ್ತೆ ಕೆಣಕುವೆಯೇಕೆ .. ?"
ಕೃಷ್ಣ ಮುಗುಳ್ನಕ್ಕ...
"ಭೀಷ್ಮಾ...
ನಿನ್ನ ಬದುಕನ್ನು ನಾನು ಬಲ್ಲೆ...
ಬದುಕಿನ ಕುರಿತ ನಿನ್ನ ನಿಷ್ಠೆಯನ್ನೂ ಬಲ್ಲೆ...
ರಾಜ ವೈಭೋಗವನ್ನು ಅನುಭವಿಸುತ್ತ...
ರಾಜನ ಆಸ್ಥಾನದಲ್ಲಿ
ನರ್ತಕಿಯರ ನೃತ್ಯಗಳನ್ನು ನೋಡುತ್ತ...
ಆಸ್ಥಾನದ ಅರೆನಗ್ನ ಹೆಂಗಳೆಯರ ಪಟಗಳನ್ನು ನೋಡುತ್ತ...
ವೈಭೋಗದ ಮಧ್ಯೆ
ಬ್ರಹ್ಮಚಾರಿಯಾಗಿವದು ಬಹಳ ಕಷ್ಟ...
ನೀನೊಬ್ಬ ಸೇನಾನಿ...
ವೀರ ಯೋಧ...!
ಹರಿ ಹರ ..
ಬ್ರಹ್ಮಾದಿಗಳನ್ನು ಸೋಲಿಸಬಲ್ಲ ವೀರ...
ಶೂರತನ ಸುಲಭವಾಗಿ ಬರುವದಿಲ್ಲ...
ಅದಕ್ಕೆ ತಕ್ಕ ವ್ಯಾಯಾಮ...
ಪೌಷ್ಟಿಕ ಆಹಾರ ಸೇವಿಸುವ ಅನಿವಾರ್ಯ...
ಸಮರ್ಥ
ವೀರ್ಯವಂತನ..
ದೇಹ
ತನ್ನ ಜೈವಿಕ ಕ್ರಿಯೆಯನ್ನು ಮಾಡಲೇ ಬೇಕಲ್ಲವೆ ?...
ಭೀಷ್ಮಾ...
ನೀನು ಪ್ರತಿಜ್ಞೆ ಮಾಡಿದ್ದು ನಿನ್ನ ಯೌವ್ವನದ ದಿನಗಳಲ್ಲಿ...
ಆರಮನೆಯ ರಾಜಕುವರ..
ಹತ್ತಾರು ಸುಂದರ ಹೆಂಗಳೆಯರ ಕನಸು ಕಂಡವ....!
ಪ್ರತಿಜ್ಞೆ ಮಾಡಿದರೂ..
ಬದುಕಿನುದ್ದಕ್ಕೂ ಕನಸುಗಳು ಕಾಡದೆ ಬಿಟ್ಟಾವೆಯೆ... ?...
ಭೀಷ್ಮಾ..
ನಿನಗೆ ..
ಕನಸುಗಳು ಕೂಡಾ ನೋವುಗಳಾಗಿದ್ದವು ಅಲ್ಲವೆ ?"...
ಈ
ಕೃಷ್ಣ
ನನ್ನನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ...
ತಲೆ ಅಲ್ಲಾಡಿಸುವ ಪ್ರಯತ್ನ ಮಾಡಿದೆ...ನೋವಿನಿಂದ ಮುಖ ಕಿವುಚಿದೆ...
"ಮಾಧವಾ....
ಬದುಕಿನುದ್ದಕ್ಕೂ ..
ನಾನು
"ಕಾಮವನ್ನು" ಧಿಕ್ಕರಿಸಿ ... ಎದುರಿಸಿ ಬದುಕಿದ್ದೇನೆ...
ನನ್ನ
ಬದುಕಿನ ವೈರುಧ್ಯ ನೋಡು ಕೃಷ್ಣಾ...
ನನ್ನಿಂದ
ಬ್ರಹ್ಮಚೈರ್ಯದ ಪ್ರತಿಜ್ಞೆ ಮಾಡಿಸಿದ
ನನ್ನ ಚಿಕ್ಕಮ್ಮ
ಮತ್ಸ್ಯಗಂಧಿಗೆ ಯೋಗ್ಯರಾದ ಸೊಸೆಯರನ್ನು ನಾನು ತರಬೇಕಾಯಿತು....
ಮುಂದೊಮ್ಮೆ
ಅವರು ಮಕ್ಕಳಾಗದೆ ವಿಧವೆಯರಾದರು....
ರಾಜ್ಯದ ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಲ್ಲ... !
ವೇದವ್ಯಾಸರು ಸಮಸ್ಯೆ ಪರಿಹರಿಸಲಿಕ್ಕೆ ಬರಬೇಕಾಯಿತು....
ಕುಟುಂಬದ ಹಿತೈಷಿಯಾಗಿ..
ಇದಕ್ಕೆಲ್ಲ ನಾನು ಸಾಕ್ಷಿಭೂತನಾಗಿದ್ದೆ....
ಎಲ್ಲೋ
ಬೆಟ್ಟದಲ್ಲಿ ...
ಹಿಮಾಲಯದಲ್ಲಿ ಮರದ ಕೆಳಗೆ
ಬದುಕಿನ ಸಂಬಂಧಗಳನ್ನೆಲ್ಲ
ತೊರೆದು...
ಸನ್ಯಾಸಿಯಾಗಿ ಬ್ರಹ್ಮಚಾರಿಯಾಗುವದು ಸುಲಭ....
ರಾಜಭೋಗದಲ್ಲಿ ....
ಸನ್ಯಾಸಿಯಾಗಿ ನಾನು ಗೆದ್ದಿರುವೆ ಕೃಷ್ಣಾ...."
ಕೃಷ್ಣ ನನ್ನನ್ನು ನೋಡಿ ಹೆಮ್ಮೆಯಿಂದ ನಕ್ಕ...
"ಕೃಷ್ಣಾ....
ಈ ಸೃಷ್ಟಿಯಲ್ಲಿ
ಒಂದು ಗಂಡು..
ಒಂದು ಹೆಣ್ಣು ಹುಟ್ಟುವದು ಸಂತಾನೋತ್ಪತ್ತಿಗೋಸ್ಕರ...
ಇದು ನನಗೆ ತಿಳಿಯದ ವಿಷಯವೇನಲ್ಲ...
ನನ್ನ
ಕಣ್ಣೇದುರಲ್ಲೇ ...
ಕಾಮದ ಭಯಂಕರ ಆಟಗಳನ್ನು ನೋಡಿರುವೆ..."
"ಎಲ್ಲಿ ?"
"ಕೃಷ್ಣಾ...
ಧೃಥರಾಷ್ಟ್ರ ಹುಟ್ಟು ಕುರುಡ...!
ನಮ್ಮ ಕಣ್ಣಿಗೆ ಕಾಣುವ
ಬಣ್ಣಗಳ ರಂಗುಗಳನ್ನು ಆತ ನೋಡಲೇ ಇಲ್ಲ...
ಹೆಣ್ಣಿನ ಸೌಂದರ್ಯದ
ಸೊಬಗಿನ ಕಲ್ಪನೆ ಕೂಡ ಅವನಿಗಿಲ್ಲ...
ಅಂಥಹ ಹುಟ್ಟು ಕುರುಡನ
ಕಾಮಕ್ಕೆ
ಮಡದಿ ಗಾಂಧಾರಿ ಸಾಕಾಗಲಿಲ್ಲ...
ದಾಸಿಯಲ್ಲಿ ಮೋಹಿತನಾದ
ಅವಳಲ್ಲಿ ಮಗುವನ್ನು ಪಡೆದ...
ಅದೊಂದು ದೊಡ್ಡ ಗಲಾಟೆಯೇ ಆಗಿ ಹೋಯಿತು...
ಅವನ ಈ ಅವಾಂತರವನ್ನು ಪರಿಹರಿಸಿದ್ದು ನಾನು...
ಅವನ ದಾಸಿ ಪುತ್ರ
"ಯಯತ್ಸು" ನಿನಗೂ ಗೊತ್ತಲ್ಲವೆ ?"
ಕೃಷ್ಣ ನಗುತ್ತ ತಲೆಯಾಡಿಸಿದ...
"ಕೃಷ್ಣಾ...
ಇದಕ್ಕಿಂತಲೂ ಆಶ್ಚರ್ಯವಾದ ಇನ್ನೊಂದು ವಿಷಯವಿದೆ...
ಧೃಥರಾಷ್ಟ್ರನ ಸಹೋದರ
ಪಾಂಡು ಮಹಾರಾಜನಿಗೆ ಒಂದು ಭಯಂಕರ ಶಾಪವಿತ್ತು...
"ನೀನು
ಕಾಮಾತುರನಾಗಿ...
ಮಡದಿಯನ್ನು ಭೋಗಿಸಲು ಮುಂದಾದರೆ ನಿನಗೆ ಸಾವು ಖಂಡಿತ" ..
ಅಂತ.....
ಕಾಮವನ್ನು ಅನುಭವಿಸಲು ಹೋದರೆ ಸಾವು ಖಂಡಿತ !
ಈ ಪಾಂಡು ಮಾಡಿದ್ದೇನು ?
ತನ್ನ ಸಾವನ್ನು ಲೆಕ್ಕಿಸದೆ...
ಕಾಮವನ್ನು ಅನುಭವಿಸಲು ಹೋದ...
ಸತ್ತೂ ಹೋದ.. "...
ಸಾವಿನ ಭಯವಿದ್ದರೂ
ದೇಹವನ್ನೂ ... ಮನಸ್ಸನ್ನೂ
ಕಾಡುವ ಕಾಮವೇ ದೊಡ್ಡದಾಗಿ ಹೋಯ್ತು.... ! "...
ಕೃಷ್ಣ ಮತ್ತೆ ಕಿರು ನಗು ನಕ್ಕ.....
"ಕೃಷ್ಣಾ...
ನಿನ್ನಲ್ಲಿ ಒಂದು ಪ್ರಶ್ನೆಯಿದೆ...."
"ಏನದು ಪ್ರಶ್ನೆ... ?....
"ಮಾಧವಾ...
ಬದುಕಿನುದ್ದಕ್ಕೂ ನಾನು "ಪ್ರಕೃತಿಯ" ವಿರುದ್ಧವಾಗಿ ಬದುಕಿದೆ...
ಮನಸ್ಸಿನ...
ದೇಹದ ಸಹಜ ಆಸೆಗಳನ್ನು
ಹತ್ತಿಕ್ಕಿ..
ಹಠದಿಂದ ಬದುಕಿದೆ...
ನನ್ನ
ಬದುಕಿನ ಕ್ಷಣ ಕ್ಷಣದಲ್ಲೂ
ಈ ಹೆಣ್ಣು ...
ಈ ಪ್ರಕೃತಿ .... ನನ್ನನ್ನು ಕಾಡಿದೆ...
ಅಂಬೆಗೆ
ನಾನು ಮಾಡಿದ್ದೇನು... ?
ನನ್ನ ತಮ್ಮನಿಗಾಗಿ ಅವಳನ್ನು ಕರೆ ತಂದೆ...
"ನಾನು ಸಾಲ್ವ ಮಹಾರಾಜನನ್ನು ಪ್ರೀತಿಸಿದ್ದೇನೆ..." ಎಂದಾಗ
ಬಹಳ ಮರ್ಯಾದೆಯಿಂದ ಅವನಲ್ಲಿ ಅವಳನ್ನು ಕಳುಹಿಸಿಕೊಟ್ಟೆ...
ಸಾಲ್ವ ಮಹಾರಾಜ
ಅಂಬೆಯನ್ನು ತಿರಸ್ಕರಿಸಿದರೆ ನನ್ನ ತಪ್ಪೇನಿದೆ ? ...
ಇಂದು ಅಂಬೆ ...
ಶಿಖಂಡಿಯಾಗಿ ನನ್ನ ಸಾವಿಗೆ ಕಾರಣಳಾಗಿದ್ದಾಳೆ...
ಕೃಷ್ಣಾ...
ಇದುವರೆಗೂ
ಕುರುವಂಶದ ಸಿಂಹಾಸನವನ್ನು
ವೈರಿಗಳಿಂದ ಕಾಪಾಡಿಕೊಂಡು ಬಂದಿದ್ದೆ..
ಇಂದು
ಮನೆಯ ಸೊಸೆ "ದ್ರೌಪದಿಯಿಂದಾಗಿ" ಕುರುವಂಶ ನಾಶವಾಗುತ್ತಿದೆ...
ನನ್ನ
ಬದುಕಿನಲ್ಲಿ ಯಾವಾಗಲೂ
"ಹೆಣ್ಣು "
ಈ ರೀತಿಯಾಗಿ ಬಂದು
ವಿಪರ್ಯಾಸಗಳನ್ನು ಹುಟ್ಟು ಹಾಕುವದು ಯಾಕೆ ?
ಯಾಕೆ ಹೀಗೆ ?
ಬ್ರಹ್ಮಚಾರಿಯಾಗಿರಬೇಕು ಎಂದರೆ ಕಾಮವನ್ನು ಗೆಲ್ಲಬೇಕು....
ಈ ಪ್ರಕೃತಿ..
ಈ ಸ್ತ್ರೀಯನ್ನು ವಿರೋಧಿಸಿ ಬದುಕಿದ್ದು ತಪ್ಪಾ ?....
ಕಾಮದ ಹೊರತಾಗಿ
ಈ ಬದುಕಿನಲ್ಲಿ ಏನೂ ಇಲ್ಲವೆ ಕೃಷ್ಣಾ... ?..."
ಕೃಷ್ಣ ನಗುತ್ತಿದ್ದ...
ಒಂದೇ ಸವನೆ ನಗುತ್ತಿದ್ದ...
ನಗುವ
ಮುದ್ದು ಮುಖದ
ಕೃಷ್ಣನ ಮುಖವನ್ನು ಕಣ್ ತುಂಬಾ ತುಂಬಿಕೊಂಡೆ...
"ಭೀಷ್ಮಾ....
ಏನು ಹೇಳಲಿ ?...
ನಾನೂ ಸಹ ನಿನ್ನ ಹಾಗೆಯೇ ಬ್ರಹ್ಮಚಾರಿ....
ಇದು ನಿನಗೂ ಗೊತ್ತಲ್ಲವೆ ?...
ಲೋಕದ ಸಹಜ ಸೃಷ್ಟಿ "ಪ್ರಕೃತಿ.. ಪುರುಷ" ,...
ಇಲ್ಲಿ ಕಾಮವೂ ಸಹಜ....
ಸಹಜತೆಯನ್ನು
ಒಪ್ಪಿದರೂ ....
ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ...."
ಭೀಷ್ಮಾ...
ನಿನ್ನ ಬದುಕು ..
ಸಾರ್ಥಕ ಬದುಕು...
ಅಪ್ಪನಿಗಾಗಿ ಮಾಡಿದ ಪ್ರತಿಜ್ನೆಗಾಗಿ ನಿನ್ನ ಬದುಕನ್ನೇ ಮುಡಿಪಾಗಿಟ್ಟೆ...
ವೈಭೋಗದ
ಕಾಮಕೂಪದಲ್ಲಿದ್ದರೂ...
ನಿನ್ನ ಛಲವನ್ನು ಬಿಡಲಿಲ್ಲ...
ನೀನು ಗೆದ್ದಿದ್ದೀಯಾ ಭೀಷ್ಮಾ... !
ನಿನ್ನದು ಸಾರ್ಥಕ ಬದುಕು... "..
ನನ್ನ
ನೋವುಗಳನ್ನು ಲೆಕ್ಕಿಸದೆ ...
ಬಾಣಗಳಿಂದ ಜರ್ಜರಿತವಾದ
ರಕ್ತಸಿಕ್ತ ಕೈಗಳನ್ನು
ಎತ್ತಿ
ಕಣ್ಮುಚ್ಚಿ ಕೈಮುಗಿದೆ...
ಭಕ್ತಿಯಿಂದ ಪರವಶನಾದೆ...
ನನ್ನ ಧ್ವನಿ ನಡುಗುತ್ತಿತ್ತು...
"ಕೃಷ್ಣಾ ....
ಕೃಷ್ಣಾ ....... ಕೃಷ್ಣಾ ..."...
ಕೃಷ್ಣ
ಮೃದುವಾಗಿ ಮೈದವಡುತ್ತಿದ್ದ...
ನನ್ನ
ಕಣ್ಣುಗಳಲ್ಲಿ ಧಾರಾಕಾರವಾಗಿ ನೀರಿಳಿಯುತ್ತಿತ್ತು...
(ಆಸ್ತಿಕ ಮನಸ್ಸುಗಳ ಕ್ಷಮೆ ಕೋರುವೆ....)
ಸುಂದರ ಪ್ರತಿಕ್ರಿಯೆಗಳಿವೆ.... ದಯವಿಟ್ಟು ಪ್ರತಿಕ್ರಿಯೆಗಳನ್ನೂ ನೋಡಿ...
ಎಚ್ಚರವಾದಾಗ ಕಗ್ಗತ್ತಲೆ... ...
ಆಕಾಶದಲ್ಲಿ ಮಿಂಚುವ ತಾರೆಗಳು...
ಅಸಾಧ್ಯ ನೋವು.....!
ಆಗಾಗ
ನರಿಗಳು.. ತೋಳಗಳು ಊಳಿಡುವ ವಿಕಾರ ಸ್ವರಗಳು !
ಓಹ್...!
ನಾನು ಕುರುಕ್ಷೇತ್ರದ ರಣರಂಗದಲ್ಲಿದ್ದೇನೆ...
ಒಂಟಿಯಾಗಿ
ಮಲಗಿದ್ದೇನೆ... !
ಯಾರೋ ತತ್ವಶಾಸ್ತ್ರಜ್ಞ ಹೇಳಿದ ಮಾತು ನೆನಪಾಯಿತು...
"ನೋವು...
ಸಂತೋಷ ಎರಡೂ ಒಂದೇ...!
ಅವುಗಳ
ಅತ್ಯುನ್ನತ ಹಂತದಲ್ಲಿ ..
ಉತ್ಕಟದ ಉತ್ಕರ್ಷದಲ್ಲಿ....ಯಾರೂ ಬೇಕಾಗುವದಿಲ್ಲ...
ನೀನೊಬ್ಬನೇ ಇರುತ್ತೀಯಾ....
ಒಬ್ಬನೆ
ಒಂಟೀಯಾಗಿ ಅನುಭವಿಸುತ್ತೀಯಾ...."...
ಮಲಗಿದ್ದವನಿಗೆ ಪಕ್ಕಕ್ಕೆ ಹೊರಳಬೇಕೆನಿಸಿತು....
ಆಗಲಿಲ್ಲ....
ಬಾಣಗಳು ಚುಚ್ಚುತ್ತಿವೆ ....!
ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಮತ್ತೆ ಬಿಸಿರಕ್ತ ಒಸರುತ್ತಿದೆ....
ಅಸಾಧ್ಯವಾದ ಉರಿ... ನೋವು !
ನಾನು ಮಲಗಿದ್ದುದು ಬಾಣಗಳ ಹಾಸಿಗೆಯಮೇಲೆ...
ನನ್ನ ಮೊಮ್ಮಗ
ಅರ್ಜುನ ನನ್ನನ್ನು ಯುದ್ಧದಲ್ಲಿ ಸೋಲಿಸಿ
ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದ್ದಾನೆ...
"ಅಜ್ಜಾ...
ಭೀಷ್ಮಜ್ಜಾ...
ನಿನ್ನನ್ನು ನಾವು ಇದ್ದಲ್ಲಿಗೆ ಕರೆದೊಯ್ಯುತ್ತೇವೆ.. ಬಾ..."
ನಾನು ನಿರಾಕರಿಸಿದ್ದೆ...
"ನಾನು
ಎಂದಿಗೂ ರಣರಂಗದಲ್ಲಿ ಸೋತು ಅರಮನೆಗೆ ಹೋಗಿಲ್ಲ...
ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದೇನೆ...
ಅಲ್ಲಿಯ ತನಕ ಇಲ್ಲೇ ಇರುವೆ.."
ಅವರೆಲ್ಲ ಹೋಗುವ ಮುನ್ನ
ನನ್ನ ಆರಾಧ್ಯ ದೈವ ಶ್ರೀಕೃಷ್ಣನಿಗೆ ಕೈ ಮುಗಿದಿದ್ದೆ...
"ಕೃಷ್ಣಾ....
ನನ್ನ ಜೀವ ನಿನ್ನ ಪಾದ ಸೇರುವ ಮುನ್ನ.. ನನ್ನಲ್ಲಿ
ಒಂದಷ್ಟು ಪ್ರಶ್ನೆಗಳಿವೆ...
ಇಂದು ರಾತ್ರಿ
ಯುದ್ಧ ಮುಗಿದ ಮೇಲೆ ಇಲ್ಲೊಮ್ಮೆ ಬರುವೆಯಾ ?"...
ಕೃಷ್ಣ ನನ್ನಾಸೆಗೆ ಇಲ್ಲವೆನ್ನಲಿಲ್ಲ...
ಗಂಭೀರವಾಗಿ ನಕ್ಕು ತಲೆಯಾಡಿಸಿ ಹೋಗಿದ್ದ....
ಏನು ಅರ್ಥವಿದೆ ....
ನನ್ನ ಇಷ್ಟು ಸುಧೀರ್ಘ ಬದುಕಿಗೆ....?...
ಯಾವ ಪುರುಷಾರ್ಥಕಾಗಿ ಇಲ್ಲಿವರೆಗೆ ಬದುಕಿದೆ.... ?
ಹೆಂಡತಿ..
ಮಕ್ಕಳು... ?
ಸಂಸಾರ...?
ಯಾವುದೂ ನನಗಿಲ್ಲವಲ್ಲ... ... ! ...
ಪ್ರಾಯಕ್ಕೆ
ಬಂದ ಮಗನಿದ್ದಾನೆ ಎನ್ನುವದನ್ನೂ ಮರೆತು...
ನನ್ನ ಅಪ್ಪ "ಶಾಂತನು"...
ಮಗನ ವಯಸ್ಸಿನ ಚೆಲುವೆ "ಮತ್ಸ್ಯಗಂಧಿಯಲ್ಲಿ" ಮೋಹಿತನಾಗಿದ್ದ...
ಆಗ
ನನಗೂ ಉಕ್ಕುವ ಯೌವ್ವನ...
ಕಣ್ಣು ಕುಕ್ಕುವ ತಾರುಣ್ಯ... !
"ಅಪ್ಪಾ....ಚಿಂತಿಸಬೇಡ...
ಈ ಸಾಮ್ರಾಜ್ಯದ ಸಿಂಹಾಸನವನ್ನೂ ಎಂದೂ ಏರುವದಿಲ್ಲ....
ತಾಯಿ
ಮತ್ಸ್ಯಗಂಧಿ ನನ್ನಮ್ಮನಾಗಿ ಬರಲಿ..
ಅವರ ಮಗ ಈ ಸಿಂಹಾಸನವನ್ನು ಆಳಲಿ..
ನನ್ನ ಸಮಸ್ತ ಶಕ್ತಿ..
ಬಾಹುಬಲ
ಯುದ್ಧ ಕೌಶಲ್ಯವನ್ನು ಈ ಸಿಂಹಾಸನದ ರಕ್ಷಣೆಗೆ ಮುಡಿಪಾಗಿಡುವೆ..."
ಅಪ್ಪನ ಮದುವೆಗಾಗಿ
ಈ
ಪ್ರತಿಜ್ಞೆ ಸಾಕಿತ್ತಲ್ಲವೆ ?
ಮತ್ಸ್ಯಗಂಧಿಯ
ಅಪ್ಪ
ತನ್ನ ಮಗಳ ಭವಿಷ್ಯದ ವಿಚಾರ ಮಾಡಿದ...
ಅವನಿಗಾಗಿ..
ನನ್ನ ಚಿಕ್ಕಮ್ಮನಿಗಾಗಿ ...
ಅವಳ ಮಕ್ಕಳು ರಾಜರಾಗಲೆಂದು ಇನ್ನೊಂದು ಪ್ರತಿಜ್ಞೆ ಮಾಡಿದೆ
"ನನ್ನ
ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿರುವೆ...
ಎಂದಿಗೂ ಮದುವೆಯಾಗಲಾರೆ " .....!..
ಮುಂದೆ
ಎಂಥಹ ಸಂದರ್ಭ ಎದುರಾದರೂ ...
ನಾನು
ಮದುವೆಯಾಗಲಿಲ್ಲ ..
ನನ್ನ ಪ್ರತಿಜ್ಞೆಯನ್ನು ಉಳಿಸಿಕೊಂಡೆ.....
:::::::::::::::::::::::::::
ನನ್ನಪ್ಪ
ಬದುಕನ್ನು ಕಂಡವ...ಉಂಡಿದವ...
ತನ್ನ ಬದುಕಿನ
ಪ್ರತಿಯೊಂದೂ ಕ್ಷಣ ಕ್ಷಣವನ್ನೂ ಅನುಭವಿಸಿದವ...
ನನ್ನ ಪ್ರತಿಜ್ಞೆಯನ್ನು ಕೇಳಿ
ಸಂತೋಷದಿಂದ ನನಗೊಂದು ವರವನ್ನು ದಯಪಾಲಿಸಿದ...
"ಮಗನೇ...
ನೀನು ಇಚ್ಛಾ ಮರಣಿಯಾಗು...."... !..
"ಇಚ್ಛಾಮರಣಿ" ಅಂದರೆ ಆತ್ಮಹತ್ಯೆ ಅಲ್ಲವೇ ?
ನನಗೆ ನಗು ಬರುತ್ತಿದೆ....
ನಗೋಣ ಎಂದು ಕೊಂಡೆ...
ನಗಲಾಗಲಿಲ್ಲ... ಕಣ್ಣಲ್ಲಿ ನೀರು ಒಸರುತ್ತಿದೆ...
"ಬದುಕಿನುದ್ದಕ್ಕೂ
ನನ್ನ ಮಗ
ಹೆಣ್ಣು ಸಂಗಾತಿಯಿಲ್ಲದೆ ಇರುತ್ತಾನೆ..
ಒಂಟೀ ಜೀವ....
ಒಂಟೀ ಬದುಕು ಅಂದರೆ ಸಾವಿಗೆ ಹತ್ತಿರ...
"ಆತ್ಮ ಹತ್ಯಾ ದೋಷ ತನ್ನ ಮಗನನ್ನು ತಾಗದಿರಲಿ"
ಅಂತ ಈ ವರವನ್ನು ಕೊಟ್ಟಿರಬಹುದಾ ?...
ಸಾವನ್ನು ಎದುರು ನೋಡುತ್ತಿರುವ
ಈ ಸಂದರ್ಭದಲ್ಲಿ
ಬದುಕಿನಲ್ಲಿ ನಡೆದ ಹಲವಾರು ಘಟನೆಗಳು
ಬೇಡವೆಂದರೂ ನೆನಪಾಗುತ್ತಿವೆ....
"ಆಯ್ಯೋ...
ನೋವು...."...
ಯಾರೋ ಚೀರುವ ಸದ್ಧು....
ನನ್ನ ಮನಸ್ಸು ಮಮ್ಮಲ ಮರುಗಿತು...
ಈ ಕುರುಕ್ಷೇತ್ರ ಯುದ್ಧದಲ್ಲಿ
ಯಾರೆಲ್ಲ ಸಾಯುತ್ತಿದ್ದಾರೆ.. !
ಯಾರದ್ದೋ ಮಗ..
ಯಾರದ್ದೋ ಪತಿ...
ಇನ್ಯಾರದ್ದೋ ಅಪ್ಪ...
ಸಾಯುವವ ಒಬ್ಬ ವ್ಯಕ್ತಿಯಲ್ಲ...
ಒಂದು ಕುಟುಂಬ...
ಕುಟುಂಬದ ಭವಿಷ್ಯಗಳು ... ಆಸೆಗಳೂ ಇಲ್ಲಿ ಸಾಯುತ್ತಿವೆ.....
ಎಷ್ಟೋ ಕನಸುಗಳು ಇಲ್ಲಿ ಕಮರುತ್ತಿವೆ.... !
ಯಾರೋ ಬರುತ್ತಿರುವ ಸದ್ಧು.....
ಕುತ್ತಿಗೆ ಹೊರಳಿಸುವ ಪ್ರಯತ್ನ ಮಾಡಿದೆ...
ಚುಚ್ಚಿದ ಬಾಣಗಳಿಂದಾಗಿ ಆಗಲಿಲ್ಲ...
" ಭೀಷ್ಮಾ...
ನಾನು..
ನಿನ್ನ ಕೃಷ್ಣ ಬಂದಿರುವೆ.. "
ನನ್ನ ಕಣ್ಣುಗಳು ಮಿನುಗಿದವು !
ನನ್ನ ಆರಾಧ್ಯ ದೈವ ... ಶ್ರೀಕೃಷ್ಣ...! ...
"ಕೃಷ್ಣಾ...
ಮಾಧವಾ...
ಹರಿ...ಮುರಾರಿ...
ಗೋವರ್ಧನ ಗಿರಿಧಾರಿ....
ನನ್ನ
ಬಾಯಿತುಂಬಾ ನಿನ್ನ ಹೆಸರನ್ನಾದರೂ ಹೇಳಿಬಿಡುತ್ತೇನೆ...!
ಕಣ್ ತುಂಬ ನೋಡಿ ....
ಕೈ ಮುಗಿಯುವ ಭಾಗ್ಯವೂ ನನಗಿಲ್ಲ ನೋಡು...."
ನನ್ನ ಧ್ವನಿ ನಡುಗುತ್ತಿತ್ತು...
ಕಣ್ಣಲ್ಲಿ ನೀರು ತುಂಬಿತ್ತು...
ಈಗ ಕೃಷ್ಣ ನನ್ನ ಮುಂದೆ ಬಂದು ನಿಂತ...
"ಭಕ್ತಿಗೆ
ಆಡಂಬರ ಬೇಕಿಲ್ಲ..
ಶುದ್ಧ ಅಂತಃಕರಣದ ಭಾವ ಸಾಕು...
ಭೀಷ್ಮಾ....
ನೋವಾಗುತ್ತಿದೆಯಾ... ?"...
ನನಗೆ ನಗು ಬಂತು....
"ಮಾಧವಾ...
ಕಣ್ ಮುಚ್ಚಿದರೂ...
ಕಾಡುವ
ಮಾನಸಿಕ ನೋವಾ.. ?..
ಕ್ಷಣ ಕ್ಷಣಕ್ಕೂ ಚುಚ್ಚುವ ಬಾಣಗಳ ದೈಹಿಕ ನೋವಾ ?...
ಯಾವ ನೋವು ಅಂತ ಹೇಳಲಿ ಕೃಷ್ಣಾ .. ?...
ಇದುವರೆಗೂ
ನೋವಿನೊಂದಿಗೆ ಜೊತೆ ಜೊತೆಯಾಗಿ ಬದುಕಿರುವೆ.."..
ಕೃಷ್ಣ ಮುಗುಳು ನಗುತ್ತಿರುವಂತೆ ಕಾಣುತ್ತಿತ್ತು..
"ಭೀಷ್ಮಾ...
ನಿನಗೆಂಥಹ ನೋವು...?...
ಹಸ್ತಿನಾವತಿಪುರದ
ಮಹಾರಥಿ ಸೇನಾನಿ...
ಹರಿ ಹರರನ್ನೇ ಗೆಲ್ಲಬಲ್ಲ ಭೀಷ್ಮನಿಗೆ ನೋವೇ ?..."
ನನಗೆ ಅರ್ಥವಾಯಿತು...
ಕೃಷ್ಣ ನನ್ನನ್ನು ಕೆಣಕುತ್ತಿದ್ದಾನೆ ಅಂತ...
"ಮಾಧವಾ...
ನನ್ನ ಅಂತರಂಗ ಅರಿತಿದ್ದರೂ..
ಮತ್ತೆ ಕೆಣಕುವೆಯೇಕೆ .. ?"
ಕೃಷ್ಣ ಮುಗುಳ್ನಕ್ಕ...
"ಭೀಷ್ಮಾ...
ನಿನ್ನ ಬದುಕನ್ನು ನಾನು ಬಲ್ಲೆ...
ಬದುಕಿನ ಕುರಿತ ನಿನ್ನ ನಿಷ್ಠೆಯನ್ನೂ ಬಲ್ಲೆ...
ರಾಜ ವೈಭೋಗವನ್ನು ಅನುಭವಿಸುತ್ತ...
ರಾಜನ ಆಸ್ಥಾನದಲ್ಲಿ
ನರ್ತಕಿಯರ ನೃತ್ಯಗಳನ್ನು ನೋಡುತ್ತ...
ಆಸ್ಥಾನದ ಅರೆನಗ್ನ ಹೆಂಗಳೆಯರ ಪಟಗಳನ್ನು ನೋಡುತ್ತ...
ವೈಭೋಗದ ಮಧ್ಯೆ
ಬ್ರಹ್ಮಚಾರಿಯಾಗಿವದು ಬಹಳ ಕಷ್ಟ...
ನೀನೊಬ್ಬ ಸೇನಾನಿ...
ವೀರ ಯೋಧ...!
ಹರಿ ಹರ ..
ಬ್ರಹ್ಮಾದಿಗಳನ್ನು ಸೋಲಿಸಬಲ್ಲ ವೀರ...
ಶೂರತನ ಸುಲಭವಾಗಿ ಬರುವದಿಲ್ಲ...
ಅದಕ್ಕೆ ತಕ್ಕ ವ್ಯಾಯಾಮ...
ಪೌಷ್ಟಿಕ ಆಹಾರ ಸೇವಿಸುವ ಅನಿವಾರ್ಯ...
ಸಮರ್ಥ
ವೀರ್ಯವಂತನ..
ದೇಹ
ತನ್ನ ಜೈವಿಕ ಕ್ರಿಯೆಯನ್ನು ಮಾಡಲೇ ಬೇಕಲ್ಲವೆ ?...
ಭೀಷ್ಮಾ...
ನೀನು ಪ್ರತಿಜ್ಞೆ ಮಾಡಿದ್ದು ನಿನ್ನ ಯೌವ್ವನದ ದಿನಗಳಲ್ಲಿ...
ಆರಮನೆಯ ರಾಜಕುವರ..
ಹತ್ತಾರು ಸುಂದರ ಹೆಂಗಳೆಯರ ಕನಸು ಕಂಡವ....!
ಪ್ರತಿಜ್ಞೆ ಮಾಡಿದರೂ..
ಬದುಕಿನುದ್ದಕ್ಕೂ ಕನಸುಗಳು ಕಾಡದೆ ಬಿಟ್ಟಾವೆಯೆ... ?...
ಭೀಷ್ಮಾ..
ನಿನಗೆ ..
ಕನಸುಗಳು ಕೂಡಾ ನೋವುಗಳಾಗಿದ್ದವು ಅಲ್ಲವೆ ?"...
ಈ
ಕೃಷ್ಣ
ನನ್ನನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ...
ತಲೆ ಅಲ್ಲಾಡಿಸುವ ಪ್ರಯತ್ನ ಮಾಡಿದೆ...ನೋವಿನಿಂದ ಮುಖ ಕಿವುಚಿದೆ...
"ಮಾಧವಾ....
ಬದುಕಿನುದ್ದಕ್ಕೂ ..
ನಾನು
"ಕಾಮವನ್ನು" ಧಿಕ್ಕರಿಸಿ ... ಎದುರಿಸಿ ಬದುಕಿದ್ದೇನೆ...
ನನ್ನ
ಬದುಕಿನ ವೈರುಧ್ಯ ನೋಡು ಕೃಷ್ಣಾ...
ನನ್ನಿಂದ
ಬ್ರಹ್ಮಚೈರ್ಯದ ಪ್ರತಿಜ್ಞೆ ಮಾಡಿಸಿದ
ನನ್ನ ಚಿಕ್ಕಮ್ಮ
ಮತ್ಸ್ಯಗಂಧಿಗೆ ಯೋಗ್ಯರಾದ ಸೊಸೆಯರನ್ನು ನಾನು ತರಬೇಕಾಯಿತು....
ಮುಂದೊಮ್ಮೆ
ಅವರು ಮಕ್ಕಳಾಗದೆ ವಿಧವೆಯರಾದರು....
ರಾಜ್ಯದ ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಲ್ಲ... !
ವೇದವ್ಯಾಸರು ಸಮಸ್ಯೆ ಪರಿಹರಿಸಲಿಕ್ಕೆ ಬರಬೇಕಾಯಿತು....
ಕುಟುಂಬದ ಹಿತೈಷಿಯಾಗಿ..
ಇದಕ್ಕೆಲ್ಲ ನಾನು ಸಾಕ್ಷಿಭೂತನಾಗಿದ್ದೆ....
ಎಲ್ಲೋ
ಬೆಟ್ಟದಲ್ಲಿ ...
ಹಿಮಾಲಯದಲ್ಲಿ ಮರದ ಕೆಳಗೆ
ಬದುಕಿನ ಸಂಬಂಧಗಳನ್ನೆಲ್ಲ
ತೊರೆದು...
ಸನ್ಯಾಸಿಯಾಗಿ ಬ್ರಹ್ಮಚಾರಿಯಾಗುವದು ಸುಲಭ....
ರಾಜಭೋಗದಲ್ಲಿ ....
ಸನ್ಯಾಸಿಯಾಗಿ ನಾನು ಗೆದ್ದಿರುವೆ ಕೃಷ್ಣಾ...."
ಕೃಷ್ಣ ನನ್ನನ್ನು ನೋಡಿ ಹೆಮ್ಮೆಯಿಂದ ನಕ್ಕ...
"ಕೃಷ್ಣಾ....
ಈ ಸೃಷ್ಟಿಯಲ್ಲಿ
ಒಂದು ಗಂಡು..
ಒಂದು ಹೆಣ್ಣು ಹುಟ್ಟುವದು ಸಂತಾನೋತ್ಪತ್ತಿಗೋಸ್ಕರ...
ಇದು ನನಗೆ ತಿಳಿಯದ ವಿಷಯವೇನಲ್ಲ...
ನನ್ನ
ಕಣ್ಣೇದುರಲ್ಲೇ ...
ಕಾಮದ ಭಯಂಕರ ಆಟಗಳನ್ನು ನೋಡಿರುವೆ..."
"ಎಲ್ಲಿ ?"
"ಕೃಷ್ಣಾ...
ಧೃಥರಾಷ್ಟ್ರ ಹುಟ್ಟು ಕುರುಡ...!
ನಮ್ಮ ಕಣ್ಣಿಗೆ ಕಾಣುವ
ಬಣ್ಣಗಳ ರಂಗುಗಳನ್ನು ಆತ ನೋಡಲೇ ಇಲ್ಲ...
ಹೆಣ್ಣಿನ ಸೌಂದರ್ಯದ
ಸೊಬಗಿನ ಕಲ್ಪನೆ ಕೂಡ ಅವನಿಗಿಲ್ಲ...
ಅಂಥಹ ಹುಟ್ಟು ಕುರುಡನ
ಕಾಮಕ್ಕೆ
ಮಡದಿ ಗಾಂಧಾರಿ ಸಾಕಾಗಲಿಲ್ಲ...
ದಾಸಿಯಲ್ಲಿ ಮೋಹಿತನಾದ
ಅವಳಲ್ಲಿ ಮಗುವನ್ನು ಪಡೆದ...
ಅದೊಂದು ದೊಡ್ಡ ಗಲಾಟೆಯೇ ಆಗಿ ಹೋಯಿತು...
ಅವನ ಈ ಅವಾಂತರವನ್ನು ಪರಿಹರಿಸಿದ್ದು ನಾನು...
ಅವನ ದಾಸಿ ಪುತ್ರ
"ಯಯತ್ಸು" ನಿನಗೂ ಗೊತ್ತಲ್ಲವೆ ?"
ಕೃಷ್ಣ ನಗುತ್ತ ತಲೆಯಾಡಿಸಿದ...
"ಕೃಷ್ಣಾ...
ಇದಕ್ಕಿಂತಲೂ ಆಶ್ಚರ್ಯವಾದ ಇನ್ನೊಂದು ವಿಷಯವಿದೆ...
ಧೃಥರಾಷ್ಟ್ರನ ಸಹೋದರ
ಪಾಂಡು ಮಹಾರಾಜನಿಗೆ ಒಂದು ಭಯಂಕರ ಶಾಪವಿತ್ತು...
"ನೀನು
ಕಾಮಾತುರನಾಗಿ...
ಮಡದಿಯನ್ನು ಭೋಗಿಸಲು ಮುಂದಾದರೆ ನಿನಗೆ ಸಾವು ಖಂಡಿತ" ..
ಅಂತ.....
ಕಾಮವನ್ನು ಅನುಭವಿಸಲು ಹೋದರೆ ಸಾವು ಖಂಡಿತ !
ಈ ಪಾಂಡು ಮಾಡಿದ್ದೇನು ?
ತನ್ನ ಸಾವನ್ನು ಲೆಕ್ಕಿಸದೆ...
ಕಾಮವನ್ನು ಅನುಭವಿಸಲು ಹೋದ...
ಸತ್ತೂ ಹೋದ.. "...
ಸಾವಿನ ಭಯವಿದ್ದರೂ
ದೇಹವನ್ನೂ ... ಮನಸ್ಸನ್ನೂ
ಕಾಡುವ ಕಾಮವೇ ದೊಡ್ಡದಾಗಿ ಹೋಯ್ತು.... ! "...
ಕೃಷ್ಣ ಮತ್ತೆ ಕಿರು ನಗು ನಕ್ಕ.....
"ಕೃಷ್ಣಾ...
ನಿನ್ನಲ್ಲಿ ಒಂದು ಪ್ರಶ್ನೆಯಿದೆ...."
"ಏನದು ಪ್ರಶ್ನೆ... ?....
"ಮಾಧವಾ...
ಬದುಕಿನುದ್ದಕ್ಕೂ ನಾನು "ಪ್ರಕೃತಿಯ" ವಿರುದ್ಧವಾಗಿ ಬದುಕಿದೆ...
ಮನಸ್ಸಿನ...
ದೇಹದ ಸಹಜ ಆಸೆಗಳನ್ನು
ಹತ್ತಿಕ್ಕಿ..
ಹಠದಿಂದ ಬದುಕಿದೆ...
ನನ್ನ
ಬದುಕಿನ ಕ್ಷಣ ಕ್ಷಣದಲ್ಲೂ
ಈ ಹೆಣ್ಣು ...
ಈ ಪ್ರಕೃತಿ .... ನನ್ನನ್ನು ಕಾಡಿದೆ...
ಅಂಬೆಗೆ
ನಾನು ಮಾಡಿದ್ದೇನು... ?
ನನ್ನ ತಮ್ಮನಿಗಾಗಿ ಅವಳನ್ನು ಕರೆ ತಂದೆ...
"ನಾನು ಸಾಲ್ವ ಮಹಾರಾಜನನ್ನು ಪ್ರೀತಿಸಿದ್ದೇನೆ..." ಎಂದಾಗ
ಬಹಳ ಮರ್ಯಾದೆಯಿಂದ ಅವನಲ್ಲಿ ಅವಳನ್ನು ಕಳುಹಿಸಿಕೊಟ್ಟೆ...
ಸಾಲ್ವ ಮಹಾರಾಜ
ಅಂಬೆಯನ್ನು ತಿರಸ್ಕರಿಸಿದರೆ ನನ್ನ ತಪ್ಪೇನಿದೆ ? ...
ಇಂದು ಅಂಬೆ ...
ಶಿಖಂಡಿಯಾಗಿ ನನ್ನ ಸಾವಿಗೆ ಕಾರಣಳಾಗಿದ್ದಾಳೆ...
ಕೃಷ್ಣಾ...
ಇದುವರೆಗೂ
ಕುರುವಂಶದ ಸಿಂಹಾಸನವನ್ನು
ವೈರಿಗಳಿಂದ ಕಾಪಾಡಿಕೊಂಡು ಬಂದಿದ್ದೆ..
ಇಂದು
ಮನೆಯ ಸೊಸೆ "ದ್ರೌಪದಿಯಿಂದಾಗಿ" ಕುರುವಂಶ ನಾಶವಾಗುತ್ತಿದೆ...
ನನ್ನ
ಬದುಕಿನಲ್ಲಿ ಯಾವಾಗಲೂ
"ಹೆಣ್ಣು "
ಈ ರೀತಿಯಾಗಿ ಬಂದು
ವಿಪರ್ಯಾಸಗಳನ್ನು ಹುಟ್ಟು ಹಾಕುವದು ಯಾಕೆ ?
ಯಾಕೆ ಹೀಗೆ ?
ಬ್ರಹ್ಮಚಾರಿಯಾಗಿರಬೇಕು ಎಂದರೆ ಕಾಮವನ್ನು ಗೆಲ್ಲಬೇಕು....
ಈ ಪ್ರಕೃತಿ..
ಈ ಸ್ತ್ರೀಯನ್ನು ವಿರೋಧಿಸಿ ಬದುಕಿದ್ದು ತಪ್ಪಾ ?....
ಕಾಮದ ಹೊರತಾಗಿ
ಈ ಬದುಕಿನಲ್ಲಿ ಏನೂ ಇಲ್ಲವೆ ಕೃಷ್ಣಾ... ?..."
ಕೃಷ್ಣ ನಗುತ್ತಿದ್ದ...
ಒಂದೇ ಸವನೆ ನಗುತ್ತಿದ್ದ...
ನಗುವ
ಮುದ್ದು ಮುಖದ
ಕೃಷ್ಣನ ಮುಖವನ್ನು ಕಣ್ ತುಂಬಾ ತುಂಬಿಕೊಂಡೆ...
"ಭೀಷ್ಮಾ....
ಏನು ಹೇಳಲಿ ?...
ನಾನೂ ಸಹ ನಿನ್ನ ಹಾಗೆಯೇ ಬ್ರಹ್ಮಚಾರಿ....
ಇದು ನಿನಗೂ ಗೊತ್ತಲ್ಲವೆ ?...
ಲೋಕದ ಸಹಜ ಸೃಷ್ಟಿ "ಪ್ರಕೃತಿ.. ಪುರುಷ" ,...
ಇಲ್ಲಿ ಕಾಮವೂ ಸಹಜ....
ಸಹಜತೆಯನ್ನು
ಒಪ್ಪಿದರೂ ....
ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ...."
ಭೀಷ್ಮಾ...
ನಿನ್ನ ಬದುಕು ..
ಸಾರ್ಥಕ ಬದುಕು...
ಅಪ್ಪನಿಗಾಗಿ ಮಾಡಿದ ಪ್ರತಿಜ್ನೆಗಾಗಿ ನಿನ್ನ ಬದುಕನ್ನೇ ಮುಡಿಪಾಗಿಟ್ಟೆ...
ವೈಭೋಗದ
ಕಾಮಕೂಪದಲ್ಲಿದ್ದರೂ...
ನಿನ್ನ ಛಲವನ್ನು ಬಿಡಲಿಲ್ಲ...
ನೀನು ಗೆದ್ದಿದ್ದೀಯಾ ಭೀಷ್ಮಾ... !
ನಿನ್ನದು ಸಾರ್ಥಕ ಬದುಕು... "..
ನನ್ನ
ನೋವುಗಳನ್ನು ಲೆಕ್ಕಿಸದೆ ...
ಬಾಣಗಳಿಂದ ಜರ್ಜರಿತವಾದ
ರಕ್ತಸಿಕ್ತ ಕೈಗಳನ್ನು
ಎತ್ತಿ
ಕಣ್ಮುಚ್ಚಿ ಕೈಮುಗಿದೆ...
ಭಕ್ತಿಯಿಂದ ಪರವಶನಾದೆ...
ನನ್ನ ಧ್ವನಿ ನಡುಗುತ್ತಿತ್ತು...
"ಕೃಷ್ಣಾ ....
ಕೃಷ್ಣಾ ....... ಕೃಷ್ಣಾ ..."...
ಕೃಷ್ಣ
ಮೃದುವಾಗಿ ಮೈದವಡುತ್ತಿದ್ದ...
ನನ್ನ
ಕಣ್ಣುಗಳಲ್ಲಿ ಧಾರಾಕಾರವಾಗಿ ನೀರಿಳಿಯುತ್ತಿತ್ತು...
(ಆಸ್ತಿಕ ಮನಸ್ಸುಗಳ ಕ್ಷಮೆ ಕೋರುವೆ....)
ಸುಂದರ ಪ್ರತಿಕ್ರಿಯೆಗಳಿವೆ.... ದಯವಿಟ್ಟು ಪ್ರತಿಕ್ರಿಯೆಗಳನ್ನೂ ನೋಡಿ...
30 comments:
ಚೆನ್ನಾದ ಮೂರ್ತಿ.. ಚೆಲುವೆ ಮೈವೆತ್ತಿಂದ ಕೆತ್ತನೆ. ಅದಕ್ಕೆ ದೊಡ್ಡದಾದ ಗರ್ಭಗುಡಿ, ಆ ಗರ್ಭಗುಡಿಗೆ ಹೊನ್ನ ಕಲಶ.. ಎಲ್ಲವೂ ಕ್ರಮಬದ್ಧವಾಗಿ ನಿಂತಿತ್ತು... ಏನೋ ಕೊರತೆ.. ಏನೋ ಕೊರತೆ..
ಆಗ ನೆನಪಿಗೆ ಬಂತು.. ಶುರುವಾಯಿತು.. ಇಡಿ ದೇವಸ್ಥಾನದ ಕಟ್ಟಡಕ್ಕೆ ಒಂದು ಭದ್ರವಾದ ಉಕ್ಕಿನ ಕೋಟೆ.. ಆಗ ಮೂಲವಿಗ್ರಹ, "ಗರ್ಭ"ಗುಡಿ, ಹೊನ್ನ ಕಲಶ.. ಎಲ್ಲವೂ ನೆಮ್ಮದಿಯ ಉಸಿರು ಬಿಟ್ಟಿತು. ನಮ್ಮನ್ನು ಕಾಯಲು ಒಂದು ಉಕ್ಕಿನ ಕೋಟೆ ಇದೆ.. ಇನ್ನು ನಮ್ಮ ನಮ್ಮ ಕೆಲಸ ನಾವು.. ನಮ್ಮ ಬದುಕು ಸಾರ್ಥಕ.
ಮಹಾಭಾರತದಲ್ಲಿ ನನಗೆ ಇಷ್ಟವಾದ ಪಾತ್ರಗಳಲ್ಲಿ ಶ್ರೀ ಕೃಷ್ಣ, ಭೀಷ್ಮ ಮತ್ತು ವಿದುರ ನಿಲ್ಲುತ್ತಾರೆ.
ನಿಮ್ಮ ಲೇಖನದಲ್ಲಿ ಹೇಳದೆ ಹೊಮ್ಮಿಸಿರುವ, ಆ ಸಾಲುಗಳ ಮಧ್ಯೆ, ಪದಗಳ ಮಧ್ಯೆ, ಅಕ್ಷರಗಳ ಮಧ್ಯೆ ಅಡಗಿರುವ ಭೀಷ್ಮನ ತಳಮಳ, ಅದರ ಜೊತೆಯಲ್ಲಿ ಕೃಷ್ಣ ನಗು ಹಲವಾರು ಅರ್ಥಗಳನ್ನು ಹೊಮ್ಮಿಸುತ್ತಿದೆ.
ಬಾಣಗಳ ನೋವುಗಳಿಗಿಂತ ಮನಸ್ಸಿನ ನೋವುಗಳು ಘಾಸಿ ಮಾಡುತ್ತಿದೆ ಎನ್ನುವ ಅರ್ಥ ಬರುವ ಮಾತುಗಳು ನಿಜಕ್ಕೂ ಸೂಪರ್.
ಒಂದು ಗಟ್ಟಿಯಾದ ನೆಲೆಯಿಂದ ಕಥಾನಕವನ್ನು ಆಳಕ್ಕೆ ಕರೆದೊಯ್ದು ಅದಕ್ಕೆ ಒಂದು ತಾರ್ಕಿಕ ಅಂತ್ಯ ಕೊಡದೆ ಓದುಗರ ಅನುಭವಕ್ಕೆ ಸಿಲುಕಿದ ಅಂತ್ಯವನ್ನು ಅವರಿಗೆ ಕಲ್ಪಿಸುವಂಥಹ ಚಾತುರ್ಯ ನಿಮ್ಮ ಲೇಖನದಲ್ಲಿ ಅಡಗಿದೆ. ಅದು ಕೃಷ್ಣನ ನಗು ಮತ್ತು ಕಡೆಯಲ್ಲಿ ಹೇಳಿಸುವ ಕೃಷ್ಣನೂ ಬ್ರಹ್ಮಚಾರಿ ಎನ್ನುವ ಮಾತಲ್ಲಿ ನುಗ್ಗಿದೆ.
ಸಂಕೀರ್ಣ ಲೇಖನವನ್ನು ನಿಮ್ಮದೇ ಶೈಲಿಯಲ್ಲಿ ನಿಲ್ಲಿಸಿರುವುದು ನಿಮ್ಮ ಜಾಣ್ಮೆ..
ಸೂಪರ್ ಪ್ರಕಾಶಣ್ಣ.. (ಕ್ಷಮೆ ಇರಲಿ ನನ್ನ ಅಭಿಪ್ರಾಯ ತುಸು ಉದ್ದವೇ ಆಗಿಬಿಟ್ಟಿದೆ)
ಪ್ರೀತಿಯ ಶ್ರೀಕಾಂತೂ...
ಈ ಕಥೆಯಲ್ಲಿ ಬರುವ ಘಟನೆ ಕಾಲ್ಪನಿಕ...
ಯುದ್ಧ ಭೂಮಿಯಲ್ಲಿ ರಾತ್ರಿ ಕೃಷ್ಣ ಭೀಷ್ಮನನ್ನು ನೋದಲು ಬರುವದರ ಕುರಿತು ನಾನು ಎಲ್ಲಿಯೂ ಓದಿಲ್ಲ..
ಆದರೆ ಭೀಷ್ಮನ ಬಗೆಗೆ..
ಅವನ ಬದುಕಿನ ನಿಷ್ಠೆಯ ಬಗೆಗೆ ಓದಿದ್ದೆ..
ಮಾನಸಿಕ ಆಸೆಯನ್ನು ಧ್ಯಾನ.. ಆಧ್ಯಾತ್ಮ ಚಿಂತನೆಗಳಿಂದ ಗೆಲ್ಲಬಹುದು...
ಅರಮನೆಯ ವೈಭೋಗದಲ್ಲಿದ್ದರೂ...
ಶೂರ.. ಯೋಧ...
ಕಟ್ಟು ಮಸ್ತಾದ ದೇಹ.. ವ್ಯಾಯಾಮ ಮಾಡುತ್ತಿದ್ದರೂ "ಬ್ರಹ್ಮಚರ್ಯವನ್ನು" ಎಂಟುನೂರು ವರ್ಷಗಳ ಪಾಲಿಸಿಕೊಂಡು ಬಂದಂಥಹ ಸಾರ್ಥಕ ಬದುಕು...
ಮಾನಸಿಕ ಆಸೆಯನ್ನು ಧ್ಯಾನ.. ಆಧ್ಯಾತ್ಮ ಚಿಂತನೆಗಳಿಂದ ಗೆಲ್ಲಬಹುದು...
ನಮ್ಮ ಪುರಾಣದಲ್ಲಿ
ಬ್ರಹ್ಮಚರ್ಯ ಕಾಪಾಡಿಕೊಂಡು ಬರಲು ಆಹಾರ ಪದ್ಧತಿ ಇದೆ..
ಆದರೆ ಅದು ಸಾಧು ಸನ್ಯಾಸಿಗಳಿಗೆ..
ಭೀಷ್ಮನಂಥಹ ಮಹಾರಥಿಗಳಿಗೆ ಅಲ್ಲ...
ಪ್ರಕೃತಿಗೆ ವಿರುದ್ಧದ ಬದುಕು ಅವನದ್ದು....
ಎಂದಿನಂತೆ ಗೆಳೆಯರ ತಲೆ ತಿಂದೆ...
ಒಂದಷ್ಟು ಪುಸ್ತಗಳನ್ನು ಓದಿದೆ..
ಅಂತೂ ಅಂದುಕೊಂಡ ಕಥೆಯನ್ನು ಬರೆದೆ...
ಆಸ್ತಿಕ ಮನಸ್ಸುಗಳ ಕ್ಷಮೆ ಕೋರುವೆ...
ಶ್ರೀಕಾಂತೂ..
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಪ್ರೀತಿಯ ಧನ್ಯವಾದಗಳು...
ಈ ಕಥೆಯ ಬಗೆಗೆ ಇನ್ನೂ ಹೇಳುವದಿದೆ...
Very good words to describe a man. Indded a very respected man like Bheeshma. Very well narrated ��
'ಒಂಟೀ ಬದುಕು ಅಂದರೆ ಸಾವಿಗೆ ಹತ್ತಿರ'
ನೂರಕ್ಕೆ ನೂರು ಅಪ್ಪಟ ಸತ್ಯ.
ಭೀಷ್ಮನ ಮುಖೇನ ಹೆಚ್ಚೂ ಕಡಿಮೆ ಮಹಾಭಾರತದ ಸಾರಾಂಶ ಕಥನವನ್ನು ಮುಂದಿಟ್ಟ ಬರವಣಿಗೆಗೆ ನಮ್ಮ ಶರಣು.
ಬದುಕಿನ ಕ್ಷಣ ಕ್ಷಣವೂ ಕೌರವರ ಏಳಿಗೆಯನ್ನೇ ಚಿಂತಿಸಿದರೂ ಸಹ ಎಂದೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಅದಕಾಗಿಯೇ ತಮ್ಮ ಕಲ್ಪನೆಯಂತೆ ಅವನ ಅಂತ್ಯಕಾಲಕ್ಕೆ ಸಾಕ್ಷಾತ್ ಭಗವಂತನೇ ಮಾತು ತಪ್ಪದೆ ಬಂದ. ಏಕೆಂದರೆ ಬದುಕಿದಷ್ಟೂ ಕ್ಷಣ ಭಿಷ್ಮ ಮಾತು ತಪ್ಪದ ಮಹಾನ್.
ಧೃತರಾಷ್ಟ್ರ ನೂರೊಂದು ಮಕ್ಕಳ ಪಿತೃವಾದರೂ ಕಾಮಾತುರನಾದದ್ದು...
ಪಾಂಡುವು ಶಾಪ ಮೀರಿ ಕಾಮಾತುರನಾದದ್ದೂ...
ಎರಡೂ ವಿಪರೀತವೇ!
(ತಮ್ಮ ಕಥನದಲ್ಲಿ ಬಂದಂತೆ, ಶಯ್ಯೆಯಲಿ ಮಲಗಿದ ಆ ಬ್ರಹ್ಮಚಾರಿಯನ್ನು ಸಂತೈಸಿ ಮುಕ್ತಿಯನ್ನು ದಯಪಾಲಿಸಲು ಬಂದ ಆ ದೈವಿಕ ಬ್ರಹ್ಮಚಾರಿಗೂ ಈ ದಾಯಾದಿಗಳ ನಿರಂತರ ಕಿತ್ತಾಟ ಅದೆಷ್ಟು ಬೇಸರ ತರಿಸಿದ್ದೀತೋ?)
ಮಹಾಭಾರತ ಸನ್ನಿವೇಶಳನ್ನ ಕಣ್ಣಿಗೆ ಕಟ್ಟುವಂತೆ ವಿವರಿಸುವ ನಿಮ್ಮ ಶೈಲಿ ನಿಜಕ್ಕೂ ಅತ್ಯಂತ ಅದ್ಭುತ ಪ್ರಕಾಶಣ್ಣಾ..
ಈಗಷ್ಟೇ ನೀವು ಆ ದೃಶ್ಯಗಳನ್ನು ನೋಡಿ ಬಂದು ನಮಗೆ ಬರಹದ ರೂಪದಲ್ಲಿ ವಿವರಿಸುವ ಹಾಗೆ ಇರುತ್ತದೆ..
ಕುರುಕ್ಷೇತ್ರ ಯುದ್ಧ ನಡೆಯುತ್ತಿರುವಾಗ ಸಂಜಯನು ಧೃಥರಾಷ್ಟ್ರನಿಗೆ ಯುದ್ದಭೂಮಿಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತನ್ನ ದಿವ್ಯದೃಷ್ಟಿಯಲ್ಲಿ ಬಹುಷಃ ಹೀಗೆಯೇ ವಿವರಿಸುತ್ತಿದ್ದನೋ ಎಂದು ಅನಿಸುತ್ತಿದೆ..
ತುಂಬ ಸುಂದರವಾಗಿದೆ ಪ್ರಕಾಶಣ್ಣಾ...
ಹೀಗೇ ಬರೆಯುತ್ತಾ ಇರಿ..
ಆ ...ಮಾಧವನ ದ್ರಷ್ಟಿಯಲ್ಲಿ ಭೀಷ್ಮ ಹೇಗೋ...ಏನೋ...
ಈ ...ಮಾನವರ ದ್ರಷ್ಟಿಯಲ್ಲಿ ಭೀಷ್ಮ ಹೇಗೋ..ಏನೋ...
ಈ ಪ್ರಕಾಶ ಣ್ಣನ...ದ್ರಷ್ಟಯಲ್ಲಿ ..ಭೀಷ್ಮನ...ಅಂತರಾಳ...ನಾವೂ..
ಸಹಾ..ಯೋಚಿಸುವಂತಾಯ್ತ.... :)
ಎಂದಿನಂತೆ...ಚಂದದ ನಿರೂಪಣೆ,ನೇರ ಹಾಗೂ...ವಿಭಿನ್ನ ಕಥಾವಸ್ತು... superr...
Nimma hosa lekhanakkagi dinaalu kaayutidde...ivattu nodidaga, marabhumiyalli neeru sikkashtu santosha aayitu...tumba chennagi bandide Prakashanna...nimma pratiyondu lekhana nanage bariyalu spoorthi...Keep Writing Prakashanna...
ಉಷಾ ಚಂದ್ರುರವರೆ....
ಸಣ್ಣವನಿದ್ದಾಗ ಯಕ್ಷಗಾನದಲ್ಲಿ ಭೀಷ್ಮನ ಪಾತ್ರಗಳನ್ನು ನೋಡುತ್ತಿದ್ದೆ..
ಅದರಲ್ಲಿ ಕೆರೆಮನೆ ಮೇಳದ "ದಿವಗಂತ ಶ್ರೀ ಮಹಾಬಲ ಹೆಗಡೆಯವರ" ಪಾತ್ರ ಯಾವತ್ತಿಗೂ ಮರೆಯಲಾರೆ...
ಹಾಗೆ ಶಂಭು ಹೆಗಡೆಯವರ..
ಇತ್ತೀಚೆಗಿನ ಮೇರು ಕಲಾವಿದ ಶ್ರೀ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಭೀಷ್ಮನ ಪಾತ್ರಗಳು...
ಅದೇ ಕಥೆ..
ಅದೇ ವಿಷಯ...
ಒಬ್ಬೊಬ್ಬ ಕಲಾವಿದರ ಪಾತ್ರ ಪೋಷಣೆ ಒಂದೊಂದು ರೀತಿ...!
ನಿಜಕ್ಕೂ ಯಕ್ಷಗಾನ ನೋಡದವರು ದೌರ್ಭಾಗ್ಯವಂತರು...
ಪಾತ್ರ ಪೋಷಣೆಯಲ್ಲಿ
ಅವರ ಅಧ್ಯಯನ...
ತರ್ಕ ಎದ್ದು ಕಾಣುತ್ತದೆ...
ಯಕ್ಷಗಾನದ ಪ್ರಭಾವದಿಂದ ಹೊರ ಬಂದು ಈ ಕಥೆ ಬರೆದಿರುವೆ...
ಬ್ಲಾಗ್ ಬರೆಯುವದು ತುಂಬಾ ಅಪರೂಪವಾಗಿಬಿಟ್ಟಿದೆ..
ಮೊದಲಿನಂತೆ ಪ್ರತಿಕ್ರಿಯೆಗಳೂ..
ಓದುವವರ ಸಂಕ್ಯೆಯೂ ಕಡಿಮೆ ಆಗಿದೆ ಎನ್ನುವದು ನನ್ನ ಭಾವನೆ...
ಹಾಗಾಗಿ ಫೇಸ್ ಬುಕ್ಕಿನಲ್ಲಿ ಸಣ್ಣದಾಗಿ ಬರೆದು ನನ್ನ ಹವ್ಯಾಸವನ್ನು ತೃಪ್ತಿ ಗೊಳಿಸಿಕೊಳ್ಳುತ್ತಿರುವೆ..
ನಿಜ ಹೇಳಬೇಕೆಂದರೆ ಬ್ಲಾಗ್ ನಲ್ಲಿ ಬರೆಯುವ ಖುಷಿಯೇ ಬೇರೆ...
ಬ್ಲಾಗಿನಲ್ಲಿ ಬರೆಯುವದನ್ನು ಮಿಸ್ ಮಾಡ್ಕೊತ್ತಾ ಇದ್ದೀನಿ...
ಪ್ರೀತಿಯ ಪ್ರತಿಕ್ರಿಯೆಗೆ ಪ್ರೀತಿಯ ಧನ್ಯವಾದಗಳು...
ಬದರಿ ಸರ್ ಜೀ....
ನಿನ್ನೆ ನೀವು ಫೋನ್ ಮಾಡಿ..
ಬ್ಲಾಗಿನಲ್ಲಿ ಏನೂ ಬರೆದಿಲ್ಲ ಅಂತ ಹೇಳಿದಾಗ
ಪ್ರೀತಿಗೆ ಮಣಿದು ಬರೆದು ಮುಗಿಸಿದ್ದೆ...
ನಿಮ್ಮ ಬ್ಲಾಗ್ ಪ್ರೀತಿಗೆ ಶರಣು... ಶರಣು....
ಭೀಷ್ಮನದು ಸಂಕೀರ್ಣ ವ್ಯಕ್ತಿತ್ವ...
ಇಷ್ಟೆಲ್ಲ ಉನ್ನತ ವಿಚಾರಗಳ..
ಜ್ಞಾನಿ.. :ದ್ರೌಪದಿಯ ಸೀರೆ ಸೆಳೆಯುವಾಗ" ಎಲ್ಲಿದ್ದ ?
ಯಾಕೆ ಮೌನವಾಗಿದ್ದ.. ?
ಈತ ಬಿಲ್ಲು ಬಾಣ ಹಿಡಿದು ಪ್ರತಿಭಟಿಸಿದ್ದರೆ ಕೌರವ ಖಂಡಿತ ಸುಮ್ಮನಾಗುತ್ತಿದ್ದ...
ಮಹಾಭಾರತ ಯುದ್ಧ ಆಗುತ್ತಲೇ ಇರಲಿಲ್ಲ....ಅಲ್ಲವಾ ?
ಭೀಷ್ಮನ ಇದೊಂದು ನಡೆ ಸಹ್ಯವಾಗಲಿಲ್ಲ....
"ಕೌರವನ ಅನ್ನದ ಋಣ ಇತ್ತು...
ಅವನ ಉಪ್ಪು ತಿಂದಿದ್ದೆ...." ಇದು ಸಮರ್ಥನೀಯವಲ್ಲ....
ಶೂರ ಯೋಧನಾಗಿ
ಒಂದು ಮಾನಿನಿಯ ಮಾನ ಹರಣವಾಗುತ್ತಿರುವಾಗ ಇವನ ಧರ್ಮ ಎಲ್ಲಿತ್ತು ?
ಪ್ರತಿಭಟಿಸುವ ಶಕ್ತಿ ಇವನಲ್ಲಿ ಇರಲಿಲ್ಲವೆ ?
ಕೌರವನ ಅವಸಾನ ಇವನಿಗೆ ಬೇಕಿತ್ತೆ ?....
ಕಡೆದಷ್ಟು..
ಬಗೆದಷ್ಟು ಸಿಗುತ್ತದೆ ಈ ಮಹಾಭಾರತ ಕಾವ್ಯದಲ್ಲಿ...
ನಿಮ್ಮ ಪ್ರೀತಿಯ ಪ್ರತಿಕ್ರಿಯೆ ಬರೆಯಲು ಸ್ಪೂರ್ತಿ.....
ಧನ್ಯವಾದಗಳು ಬದರಿ ಭಾಯ್...
ಭೀಷ್ಮ, ಕೃಷ್ಣರ ಮುಖಾಮುಖಿಯೇ ಒಂದು ಸುಂದರ ಕಲ್ಪನೆ. ಈ ಕಲ್ಪನೆಯ ಮೂಲಕ ಸಾರ್ಥಕ ಬದುಕಿನ ತಿರುಳನ್ನು ತೋರಿಸಿದ್ದೀರಿ. ಅಭಿನಂದನೆಗಳು.
ಯಾವ ಹೆಣ್ಣಿನ ..ಕಣ್ಣಿನ. . ಮಣ್ಣಿನ .. ಮೋಹದ ಆಸೆಗಳ ಅದುಮಿಟ್ಟು ಬದುಕಿದ ಭೀಷ್ಮನ ಎದುರಲ್ಲೇ ಹೆಣ್ಣಿನಿಂದಾಗಿ ಮಣ್ಣಿಗಾಗಿ ಮಹಾಭಾರತವೇ ನಡೆದುಹೋಯಿತು... ಚೆನ್ನಾಗಿದೆ ಕಥೆ
Bheeshma is a well known character for oaths and promises.. Feel proud towards his willing ness to full filling his words.. He was the best organizer, leader, teacher and proud elder .. These are all known things.. Here U have perceived his intrinsic pain, desperation and unwilling ness towards lifes spirit.. He might have been confronted with dilemma between his physical necessities and his position in his team.. Still there is an enigma.. What kind of spirit followed throughout his long journey with out a single stain regarding personal emotions..how he lead such long period even death was in his trigger!.. Beautiful story it clearly indicates a pathetic view of Bheeshmas life
“ವೈರುಧ್ಯ” ಭೀಷ್ಮನ ವೈರುದ್ಯದ ಬದುಕಿನ ಚಿತ್ರಣ ... ಸರಳ, ಸುಂದರ, ಅರ್ಥವತ್ತಾದ , ಪುರಾಣದ
ಸೂಕ್ಸ್ಮ ಎಳೆಯಿಂದ ಹೆಣೆದಿರುವ
ಈ ಬರಹ ಮೇಲ್ನೋಟಕ್ಕೆ ಕೃಷ್ಣ ,ಭೀಷ್ಮರ ಸಂವಾದ ಜೊತೆಗೆ ಭೀಷ್ಮನ
ಅಂತರಂಗದ ತುಮುಲ ನೋವನ್ನು ಎಳೆ ಎಳೆಯಾಗಿ ಬಿಡಿಸಿ ತೆಗೆದ ಚಿತ್ರಣವಾದರೂ
ಇದೊಂದು ವೈಚಾರಿಕತೆಯ ನೆಲೆಗಟ್ಟಿನ ಮೇಲೆ ನಿಂತಿರುವ ವಾಸ್ತವ ಜೀವನಕ್ಕೆ ಹತ್ತಿರವಾದ
ವಿಷಯ ಅನ್ನಿಸುತ್ತೆ. ಮಹಾಭಾರತದಲ್ಲಿ ಎಲ್ಲೂ ಕಂಡು ಬರದ ಈ ಸನ್ನಿವೇಶ ಪ್ರಕಾಶ್ ಜಿ ಅವರ
ವಾಸ್ತವಕ್ಕೆ ಹತ್ತಿರವಾದ ಕಲ್ಪನೆಗಳ ಅನಾವರಣ. ಇಲ್ಲಿ ಲೇಕಖರು ಪ್ರಕೃತಿ ಸಹಜ ಜೀವನದ ಭಾವನೆಗಳ
ಹತ್ತಿಕ್ಕಿ ವಿರುದ್ದದ ದಿಕ್ಕಿನಲ್ಲಿ ಅನಿವಾರ್ಯವಾಗಿ ಬದುಕುವವರ ಮನೋಬಲ ಸಾಮರ್ಥ್ಯ ಎಂತಹದ್ದಿರಬೇಕು . ಭೀಷ್ಮನಂತೆ ಇರಬೇಕೆ ? ಭೀಷ್ಮ ಇಲ್ಲಿ ಸೋತು ಗೆದ್ದಿರುವವನು ...ಇಲ್ಲಿ ವೈದೃಶ್ಯವಿದೆ (ವಿಭಿನ್ನತೆ) ....ಲೇಕಖರ ವೈದುಷ್ಯದ(ಜ್ಞಾನದ) ಹರವು ಈ ಸನ್ನಿವೇಶವನ್ನು ಬಿನ್ನವಾದ ಯೋಚನಾ ಲಹರಿ ಅಲ್ಲಿ ಸಮೃದಗೊಳಿಸಿದೆ . ಯೌವ್ವನದ ಸುಖ ಅನುಭವಿಸಬೇಕಾದ ಮಗನ ಹತ್ತಿರವೇ ತನ್ನ ಸುಖಕ್ಕಾಗಿ ಪ್ರತಿಜ್ಞೆ ಮಾಡಿಸಿಕೊಂಡ ಅಪ್ಪ ಶಂತನು... ಸಾಮಾನ್ಯ ಅಂಗವಿಕಲತೆ ಹೊಂದಿರುವ ಯಾವುದನ್ನೂ ನೋಡಿ ಅನುಭಿವಿಸಲಾಗದ ಧೃತರಾಷ್ಟ್ರ ಸಂಸಾರ ಸುಖ ಅನುಭಿವಿಸಿಯೂ ಇನ್ನು ಬೇಕೆಂಬ ಹಂಬಲದಿಂದ ಅಡ್ಡದಾರಿ ಹಿಡಿಯುವುದು . ಮತ್ತು ಸಾವಿನ ಭಯ ಇದ್ದರೂ ಕಾಮವನ್ನು ಹತ್ತಿಕ್ಕಲಾರದ ಪಾಂಡು , ಇವರ ನಡುವೆ ಸಕಲ ವೈಭೋಗದ ನಡುವೆ ವೀರ, ಶೂರ, ದೃಡ ಕಟ್ಟುಮಸ್ತ್ತಾದ ಯುವಕ ಬೇರೆಯವರ ಹಿತಕ್ಕಾಗೆ ಪ್ರಕೃತಿಗೆ ವಿರುದ್ದವಾಗಿ ಬದುಕಿ ಸೈ ಅನ್ನಿಸಿಕೊಂಡಿದ್ದು ಹಿತವಾಗಿ ಕಂಡರೂ ....ಭೀಷ್ಮನ ಅಂತರಂಗದಲ್ಲಿ ನೋವಿತ್ತು ಅನ್ನುವುದು ಬರಹದಲ್ಲಿ ಬಿಡಿಸಿ ಹೇಳಿರುವುದು, ವಾಸ್ತವದಲ್ಲಿ ಪ್ರಕೃತಿಗೆ ವಿರುದ್ದವಾಗಿ ಅನಿವಾರ್ಯವಾಗಿ ಬದುಕುತಿರುವವರ ನೋವಿದೆ ಅನ್ನಿಸುತ್ತೆ...!
ವಾಸ್ತವದಲ್ಲಿ ಭೀಷ್ಮನಂತೆ ಇರಲು ಸಾಮಾನ್ಯರಿಗೆ ಸಾದ್ಯವೇ ?? ಅದಕ್ಕೆ ಸೂಕ್ಸ್ಮವಾದ ಕೃಷ್ಣನ ಉತ್ತರ “ನಾನೂ ಸಹ ನಿನ್ನ ಹಾಗೆಯೇ ಬ್ರಹ್ಮಚಾರಿ....ಇದು ನಿನಗೂ ಗೊತ್ತಲ್ಲವೆ ?...ಲೋಕದ ಸಹಜ ಸೃಷ್ಟಿ "ಪ್ರಕೃತಿ.. ಪುರುಷ" ,...
ಇಲ್ಲಿ ಕಾಮವೂ ಸಹಜ....ಸಹಜತೆಯನ್ನುಒಪ್ಪದಿದ್ದರೂ ...ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ...."ಭೀಷ್ಮಾ...ನಿನ್ನ ಬದುಕು ಸಾರ್ಥಕ ಬದುಕು... “ ಸಾರ್ಥಕ ಬದುಕು ಬಯಸುವವರಿಗೆ ಈ ಉತ್ತರ ತೃಪ್ತಿ ತರಬಹುದು ಅನ್ಸುತ್ತೆ...
ಇಲ್ಲಿ ಲೇಕಖರು ಭೀಷ್ಮನ ಮನೋಮಂಡಲದಲ್ಲಿ ಮೂಡಿದ ಎಲ್ಲಾ ಜೀವಂತ ಪ್ರಶ್ನೆಗಳ ಸಂಚಲನಕ್ಕೆ ಕೃಷ್ಣನ ಮೇಲಿನ ಉತ್ತರದಿಂದ ಮೋಕ್ಷ ಕೊಡಿಸಿದ್ದಾರೆ.. ಹಾಗೆ ವಾಸ್ತವದಲ್ಲೂ ವೈರುಧ್ಯ ದ ಬದುಕಿನ ಅನಿವಾರ್ಯತೆ ಇದ್ದಾಗ , ಕೃಷ್ಣ ನ ಉತ್ತರವೇ ಸಾರ್ಥಕ ಬದುಕಿಗೆ ಉತ್ತರ ಅನ್ನುವ ಹಾಗೆ ಕೊನೆಗೊಳಿಸಿ ಬರಹಕೊಂದು ಉತ್ತಮ ಅಂತ್ಯ ಕೊಟ್ಟು ಅರ್ಥಪೂರ್ಣಗೊಳಿಸಿದ್ದಾರೆ....ಉತ್ತಮ ಶೈಲಿಯ ಓದುಗರ ಮನದಲಿ ಪುರಾಣದ ಪಾತ್ರಗಳಿಗೆ ಜೀವ ಸಂಚಲನ ಮೂಡಿಸುವ ಅದ್ಭುತ ಬರಹ ...ಶುಭವಾಗಲಿ ಪ್ರಕಾಶ್ ಜಿ... :-)
prakashanna.. ur imagination is awesome.. bhismana manadaalada thudithavannu athi sarala vaagi vivarisiddhira..
S.L.Byrappa navara "Parva" vannu matthe manthisuvanthayithu...
Thank u Prakashanna :)
''ಸಾಯುವವ ಒಬ್ಬ ವ್ಯಕ್ತಿಯಲ್ಲ... ಒಂದು ಕುಟುಂಬ... ಆ ಕುಟುಂಬದ ಭವಿಷ್ಯಗಳು, ಆಸೆಗಳೂ ಇಲ್ಲಿ ಸಾಯುತ್ತಿವೆ... ಎಷ್ಟೋ ಕನಸುಗಳು ಇಲ್ಲಿ ಕಮರುತ್ತಿವೆ.... !''
ಪ್ರಕಾಶ್ ಜೀ... ಯಾರೂ ಯೋಚಿಸದ ಕಡೆ ನಿಮ್ಮ ಯೋಚನೆ ಹರಿಯುತ್ತದಲ್ಲ ! ಅದೇ ನನಗೆ ನೀವು ಅಚ್ಚರಿಯ ವ್ಯಕ್ತಿಯಾಗಿ ತೋರುವುದಕ್ಕೆ ಕಾರಣ.
ಈ ಕತೆ ನಿಮ್ಮ ಅನನ್ಯ ಸೃಜನಶೀಲತೆಗೆ ಮತ್ತೊಂದು ಉದಾಹರಣೆ.
ಬೇಗ ಇಂಥ ನಿಮ್ಮೆಲ್ಲ ಕತೆಗಳ ಸಂಕಲನವೊಂದನ್ನು ನಮ್ಮ ಕೈಗಿಡದಿದ್ದರೆ... ಅಷ್ಟೇ.
ಶುಭವಾಗಲಿ.
ಪ್ರೀತಿಯ ಪ್ರಕಾಶಣ್ಣ ,
ನಾನು ನಿಮ್ಮ ಬ್ಲಾಗನ್ನು ಯಾವಾಗಲೂ ಓದ್ತಾ ಇರ್ತೀನಿ. ಚಿಕ್ಕದಾಗಿದ್ದರೂ ಚೊಕ್ಕದಾಗಿ ಹೇಳಬೇಕಾದ್ದನ್ನ ಮನ ಮುಟ್ಟುವಂತೆ ಬರೆಯುವ ನಿಮಗೊಂದು ಸಲಾಮ್.
ನಾನು ರಾಮಾಯಣ ಮಹಾಭಾರತ ಓದಿಲ್ಲ. ಅದು ಎಷ್ಟರ ಮಟ್ಟಿಗೆ ನಿಜ ನನಗೆ ಗೊತ್ತಿಲ್ಲ. ಆದರೆ ಅದ್ರಲ್ಲಿ ಬರೋ ಪ್ರತಿ ಸನ್ನಿವೇಶವು ವಾಸ್ತವ ಪ್ರಪಂಚಕ್ಕೆ ಹಿಡಿದ ಕೈಗನ್ನಡಿ. ಇನ್ನು ನೀವೂ ಬರೆದಿದ್ದನ್ನ ಓದಿದ್ರೆ ನನ್ನ ಸುತ್ತ ಮುತ್ತ ಆ ಘಟನೆ ನಡೀತಾ ಇದೆ ಅನ್ನೋ ಭಾವನೆ ಬರುತ್ತೆ.
"ಪ್ರಕೃತಿ - ಪುರುಷ - ಕಾಮ - ತ್ಯಾಗ" ಬಿಡಿಸಲಾಗದ ಬದುಕಿನ ಕಗ್ಗಂಟುಗಳು.
ಧನ್ಯವಾದಗಳು.
ತುಂಬಾ ಚಂದವಿದೆ ಪ್ರಕಾಶಣ್ಣ , ಓದಿ ಪರ್ವ ನೆನಪಾಯಿತು , ಎಷ್ಟೆಷ್ಟು ಒಳ್ಳೆಯ ಸಾಲುಗಳು , ಯೋಚನೆಯ ಹೊಳವುಗಳು .., ಮತ್ತೊಂದು ಲೋಕ ಎಳೆಯಾಗಿ ತೆರೆದಂತೆ ಅನಿಸಿತು .
"ಸಹಜತೆಯನ್ನು
ಒಪ್ಪಿದರೂ ....
ಅಪ್ಪಿ ಕೊಳ್ಳುವ ಅಗತ್ಯವೇನಿಲ್ಲ...."
ಸಾಲುಗಳು ' ಅರ್ಥವಾದಷ್ಟೂ ನಿಗೂಡವಾಗುತ್ತಿದೆ '
ಪ್ರೀತಿಯ ಬಲರಾಮ್....
ಭೀಷ್ಮನಿಗೆ ತನ್ನದು ಅಂತ ಯಾವುದೇ ಬಂಧಗಳಿರಲಿಲ್ಲ...
ಅಂದರೆ ಮಡದಿ.. ಮಕ್ಕಳು.. ಮೊಮ್ಮಕ್ಕಳು.. ಇತ್ಯಾದಿ...
ಆತ ತನ್ನ ಬದುಕಿನುದ್ದಕ್ಕೂ ಬೇರೆಯವರ ಮಕ್ಕಳ..
ತನ್ನದಲ್ಲದ ರಾಜ್ಯದ ಸಿಂಹಾಸನಕ್ಕಾಗಿ ಬದುಕಿದ...
ಆತ ಬದುಕಿದ್ದುದು ಎಂಟುನೂರು ವರ್ಷಗಳಿಗಿಂತಲೂ ಹೆಚ್ಚು... !
ಎಷ್ಟು ವಿಚಿತ್ರ ಅಲ್ಲವ ?
ಆತ ಬಹಳ ಪರಾಕ್ರಮಿಯಾಗಿದ್ದ..
ರಾಜ್ಯದ ರಕ್ಷಣೆಗೆ..
ಯುದ್ಧಕ್ಕಾಗಿ ಭೀಷ್ಮ ಬೇಕು ಅಂತ ಅಲ್ಪ ಸ್ವಲ್ಪ ಗೌರವ ಸಿಗುತ್ತಿತ್ತೇನೊ.....
ಬದುಕಿನುದ್ದಕ್ಕೂ
ಆತನಿಗೆ
ಹೆಣ್ಣಿಗೆ ಸಂಬಂಧಪಟ್ಟ...
ಕಾಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಅಡಿಗಡಿಗೂ ಎದುರಾಗುತ್ತಿದ್ದವು...
ಆತ ಆಜನ್ಮ ಬ್ರಹ್ಮಚಾರಿ !
ಆತ ಎಂಟೂನೂರು ವರ್ಷ ಬದುಕಿದ !
ಭೀಷ್ಮ
ಇಚ್ಛಾ ಮರಣಿಯಾಗಿದ್ದ...
ಒಂಟೀ
ಬದುಕು ಬೇಸರವಾಗಲಿಲ್ಲವೆ ಅವನಿಗೆ ?
ಇದು ನನಗೆ ಬಹಳ ಕಾಡಿದ ವಿಷಯ....
ಮಹಭಾರತ ಒಂದು ಅತ್ಯುದ್ಭುತ ಕಾದಂಬರಿ.....
ನಿಮ್ಮ ಪ್ರತಿಕ್ರಿಯೆ ಬರೆಯಲು ಸ್ಪೂರ್ತಿ...
ಪ್ರೀತಿಯ ಧನ್ಯವಾದಗಳು....
ಗೀತಾ....
ಭೀಷ್ಮ ಕ್ಷತ್ರೀಯ....ವೀರ ಯೋಧ....
ವೈಭೋಗದ ಮಧ್ಯೆ ಸನ್ಯಾಸಿಯಂಥಹ ಬದುಕು...
ತನ್ನ ರಕ್ತ..
ತನ್ನದು ಅಂತ ಯಾವ ಸಂಬಂಧವೂ ಅಲ್ಲಿಲ್ಲ....
ಆದರೂ ಆತ ಎಂಟುನೂರು ವರ್ಷ ಬದುಕಿದ... !
ಅಪ್ಪನಿಗೆ ಕೊಟ್ಟ ಮಾತನ್ನು ಬದುಕಿನುದ್ದಕ್ಕೂ ಪಾಲಿಸಿದ..
ಕೊನೆಯಲ್ಲಿ
ಆತ ಯುದ್ಧ ಮಾಡಿದ್ದು ಸಿಂಹಾಸನಕ್ಕಾಗಿಯೆ ?
ಯಾರ ವಿರುದ್ಧ ?
ಅನ್ಯಾಯದ ಪರವೊ ? ನ್ಯಾಯದ ಪರವೊ ?
ಬದುಕಿದ್ದು ಇಂಥಹ ಒಂದು ಯುದ್ಧಕ್ಕಾಗಿಯೆ ?
ಇಂಥಹ ಒಂದು ಸಾವಿಗಾಗಿಯೆ ?...
ಎಷ್ಟೋ
ರಾಜಮನೆತನಗಳಲ್ಲಿ....
ನಮ್ಮ ಒಟ್ಟು ಕುಟುಂಬಗಳಲ್ಲಿ ಭೀಷ್ಮನಂಥಹ ವ್ಯಕ್ತಿಗಳು ಬದುಕಿದ್ದನ್ನು ನಾವು ಕಾಣುತ್ತೇವೆ.....
ದುರಂತದ ಬದುಕು ಭೀಷ್ಮನದು ಅಲ್ಲವಾ ?
ಪ್ರೀತಿಯಿಂದ ಕೊಟ್ಟ ಪ್ರತಿಕ್ರಿಯೆಗೆ ಪ್ರೀತಿಯ ಸಲಾಮ್....
ಪ್ರೀತಿಯ ಪ್ರವೀಣ್...
ನಿಜ ಹೇಳ್ತಿನಿ...
ನನಗೂ ಬ್ಲಾಗಿನಲ್ಲಿ ಬರೆಯುವದೆಂದರೆ ಬಹಳ ಖುಷಿ....
ಆದರೆ ಬ್ಲಾಗಿಗೆ ಬಂದು ಓದುವ ಓದುಗರ ಸಂಖ್ಯೆ ತುಂಬಾ ಕಡಿಮೆಯಾಗಿಬಿಟ್ಟಿದೆ...
ಹಾಗಾಗಿ ಫೇಸ್ ಬುಕ್ಕಿನಲ್ಲಿ ಚುಟುಕಾಗಿ ಸಣ್ಣದಾಗಿ ಬರೆವ ರೂಢಿ ಮಾಡಿಕೊಂಡು ಬಿಟ್ಟೆ...
ಬ್ಲಾಗ್ ಶುರು ಮಾಡಿದ ವರ್ಷಗಳಲ್ಲಿ ತಿಂಗಳಿಗೆ ನಾಲ್ಕು ಐದು ಲೇಖನ ಬರಿತ್ತಿದ್ದೆ...
ಪ್ರತಿಕ್ರಿಯೆಗಳು ಬರೆಯಲು ಸ್ಪೂರ್ತಿ ಕೊಡುತ್ತವೆ...
ಈ ಕಥೆಗೆ ಬಂದ ಪ್ರತಿಕ್ರಿಯೆಗಳು ಇನ್ನಷ್ಟು ಉತ್ಸಾಹ ಕೊಟ್ಟಿದೆ...
ಇನ್ನು ಮತ್ತೆ ಬ್ಲಾಗಿನಲ್ಲಿ ಬರೆವ ಆಸೆ ಹೆಚ್ಚಾಗುತ್ತಿದೆ...
ಭೀಷ್ಮನ ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ನಮನಗಳು....
ಪ್ರೀತಿಯ ಪ್ರಕಾಶಣ್ಣಾ..
ನಿಜಕ್ಕೂ ಮಹಾಭಾರತ ಅಸಂಖ್ಯ ಪಾತ್ರಗಳನ್ನು ಒಳಗೊಂಡಂಥಹ ಒಂದು ವಿಸ್ಮಯ ಕಾದಂಬರಿ.
ಇದರೊಳಗೆ ಬರುವ ಇನ್ನೂ ಅನೇಕ ಪಾತ್ರಗಳಿಗೆ ಹೀಗೇ ನಿಮ್ಮದೇ ಶೈಲಿಯಲ್ಲಿ ನಿರೂಪಣೆ ಕೊಟ್ಟು ಬರೆದರೆ ತುಂಬಾ ಸೊಗಸಾಗಿರುತ್ತದೆ..
ಖಂಡಿತವಾಗಿಯೂ ಬ್ಲಾಗ್ ನಲ್ಲಿ ಬರೆಯುವುದನ್ನು ನಿಲ್ಲಿಸಬೇಡಿ.. ಕೇವಲ ಒಂದು ವರ್ಷದ ಹಿಂದೆ ನಿಮ್ಮ ಬ್ಲಾಗ್ ಗೆ ಭೇಟಿಕೊಟ್ಟು, ನೀವು ಬರೆದಿದ್ದರಲ್ಲಿ ನಾನು ಓದಿದ ಮೊದಲ ಬರಹಕ್ಕೇ ಮನಸೋತು, ಕೇವಲ ಒಂದೂವರೆ ತಿಂಗಳಲ್ಲಿ ನಿಮ್ಮ ಬ್ಲಾಗ್ ನಲ್ಲಿ ಬರೆದ ಪೂರ್ತಿ ಬರಹಗಳನ್ನು ಓದಿ ಮುಗಿಸಿ ಮತ್ತಷ್ಟು ಹೊಸ ಬರಹಗಳಿಗಾಗಿ ಕಾಯುತ್ತಿದ್ದೆ...
ಆದರೆ ನಾನು ಮಾಡಿದ ತಪ್ಪೆಂದರೆ, ಬಹುಷಃ ಯಾವುದೇ ಬರಹಗಳಿಗೂ ಪ್ರತಿಕ್ರಿಯುಸುವ ಅವಕಾಶ ಇದ್ದರೂ ಪ್ರತಿಕ್ರಿಯಿಸದೇ ಇದ್ದದ್ದು..
ಖಂಡಿತವಾಗಿಯೂ ಒಬ್ಬ ಬರಹಗಾರರಿಗೆ ಓದುಗರ ಪ್ರತಿಕ್ರಿಯೆಯು ಯಾವ ರೀತಿ ಇದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗೂ ಇದು ಬರಹಗಾರರಿಗೆ ಇನ್ನಷ್ಟು ಬರೆಯುವಂತೆ ಪ್ರೇರೇಪಿಸುತ್ತದೆ...
ನಿಮ್ಮ ಅಷ್ಟೂ ಬರಹಗಳನ್ನು ಓದಿ ಪ್ರತಿಕ್ರಿಯೆ ನೀಡದೇ ಇದ್ದದ್ದಕ್ಕಾಗಿ ಕ್ಷಮೆ ಇರಲಿ..
ನಿಮ್ಮ ಹೊಸ ಬರಹಗಳಿಗಾಗಿ ಕಾಯುತ್ತಿರುತ್ತೇನೆ.. ಮತ್ತು ಓದಿದ ಮೇಲೆ ಖಂಡಿತವಾಗಿಯೂ ನನ್ನ ಮುಕ್ತ ಅಭಿಪ್ರಾಯವನ್ನು ಪ್ರತಿಕ್ರಿಯೆಯಲ್ಲಿ ತಿಳಿಸುವೆ..
ಪ್ರೀತಿಯ ಸುನಾಥ ಸರ್.....
ಭೀಷ್ಮನೂ ಬ್ರಹ್ಮಚಾರಿ... ಕೃಷ್ಣನೂ ಬ್ರಹ್ಮಚಾರಿ...
ಇಬ್ಬರೂ ಪ್ರಕೃತಿಯ ವಿರುದ್ಧವಾಗಿ ಬದುಕಿದವರು...
ಒಬ್ಬ ಒಪ್ಪಲಿಲ್ಲ...
ಇನ್ನೊಬ್ಬ ಅಪ್ಪಿಕೊಳ್ಳಲಿಲ್ಲ...
ಬದುಕಿನ ಸೂಕ್ಷ್ಮಗಳನ್ನು ಮಹಾಭಾರತದಲ್ಲಿ ಹೇಳುವಷ್ಟು ಇನ್ಯಾವುದೆ ಕಾವ್ಯಗಳು ಹೇಳುವದಿಲ್ಲ..
ಪ್ರತಿಯೊಂದೂ ಪಾತ್ರಗಳು
ಅವುಗಳ ಬದುಕು..
ಎಲ್ಲವೂ ಅದೆಷ್ಟು ಸೂಕ್ಷ್ಮ !
ವ್ಯಾಸ ಭಾರತವನ್ನು ಮೊದಲಿಗೆ ಪಿಯೂಸಿಯಲ್ಲಿ ಫೇಲ್ ಆಗಿ ಮನೆಯಲ್ಲಿದ್ದಾಗ ಓದಿದೆ...
ಆಗತಾನೆ ಅದು ಪುಸ್ತಕ ಬಿಡುಗಡೆಯಾಗಿತ್ತು..
ನಂತರ ವ್ಯಾಸಭಾರತವನ್ನು ಅದೆಷ್ಟು ಬಾರಿ ನೋಡಿದ್ದೇನೊ ಗೊತ್ತಿಲ್ಲ...
ಏನೇನೊ ಹುಚ್ಚುಚ್ಚು ಕಲ್ಪನೆಗಳು ಬಂದರೂ
ಅಲ್ಲಿ
ಮಹಾಭಾರತದಲ್ಲಿ ಒಂದು ಪಾತ್ರ ನನಗೆ ಸಿಗುತ್ತಿತ್ತು....
ಹಿರಿಯರೊಡನೆ ಚರ್ಚಿಸಿದಷ್ಟು...
ವಿಸ್ತಾರವಾಗುತ್ತಿತ್ತು ಆ ಪಾತ್ರಗಳು !
ಸುನಾಥ ಸರ್..
ನನ್ನ ಬ್ಲಾಗಿನ ಮೊಟ್ಟ ಮೊದಲ ಲೇಖನದಿಂದ ಇದುವರೆಗೂ ನೀವು ಪ್ರತಿಕ್ರಿಯೆ ಕೊಟ್ಟು ಪ್ರೋತ್ಸಾಹಿಸಿದ್ದೀರಿ...
ತುಂಬು ಪ್ರೀತಿಯ ನಮನಗಳು..
ಯುಗಾದಿ ಹಬ್ಬದ ಶುಭಾಶಯಗಳು...
ನಿಷ್ಠೆ ನಿಯತ್ತು ಯಾರಿಗೆ ಯಾಕೆ ಯಾರಿಗಾಗಿ ಯಾವಗಲೂ ಕಾಡುವ ಪ್ರಶ್ನೆ. ಭೀಷ್ಮ ಒಂದು ನಂಬಿಕೆಯ ಸಂಕೇತ! ಅಪ್ಪ ಹಾಕಿದ ಆಲದಮರಕ್ಕೆ ನೇಣು ಹಾಕಿಕೊಳ್ಳುವ ಎಷ್ಟೋ ಸನ್ನಿವೇಷಗಳಲ್ಲಿ ಭೀಷ್ಮ ನೆನಪಾಗಿ ಕಾಡುತ್ತಾನೆ. ಹೇಳಿಕೊಳ್ಳ ಲಾಗದ ಸತ್ಯಕ್ಕೆ, ದ್ವಂದ್ವಕ್ಕೆ, ಅಸಹಾಯಕತೆಗೆ ಸಾಕ್ಷಿಗೆ ಮಹಾಭಾರತದ ಕಾಲದಿಂದ ಇಲ್ಲಿಯವರೆಗೆ ಈ ಭೀಷ್ಮರು ನಮ್ಮ ನಡುವೆಯೇ ಇದ್ದು ತಮ್ಮ ನೋವಿನಲ್ಲೇ ನಶಿಸಿಹೋಗುತ್ತಿದ್ದಾರೆ ಇದೇ ಆತ್ಮದ ಹತ್ಯೆ ಇರಬಹುದೇ ಇಚ್ಚಾಮರಣ ಇರಬಹುದೇ. ನಿಮ್ಮ ಸಂಕೀರ್ಣ ಲೇಖನ ಬಿಳಿ ವಸ್ತ್ರದಲ್ಲಿ ಕಲೆಯನ್ನು ಸರಿಯಾಗೇ ಗುರುತಿಸಿದೆ. ವಂದನೆಗಳು ಪಂಕುಮಾಮ
ಚೆಂದಿದ್ದು.. ಕುರುಕ್ಷೇತ್ರ ಪ್ರಸಂಗವನ್ನು ಮತ್ತೊಮ್ಮೆ ನೋಡಿದ ಅನುಭವ :-)
’ನೋವು ಸ೦ತೋಷ ಎರಡೂ ಒ೦ದೇ...ಅವುಗಳ ಅತ್ಯುನ್ನತ ಹಂತದಲ್ಲಿ ..ಉತ್ಕಟದ ಉತ್ಕರ್ಷದಲ್ಲಿ....ಯಾರೂ ಬೇಕಾಗುವದಿಲ್ಲ...ನೀನೊಬ್ಬನೇ ಇರುತ್ತೀಯಾ....’ ನ೦ಗೆ ತು೦ಬಾ ಮೆಚ್ಚುಗೆಯಾದ ಮಾತು.
ಇಚ್ಛಾಮರಣವನ್ನು ಆತ್ಮಹತ್ಯೆಯೊ೦ದಿಗೆ ಬೆಸೆದಿದ್ದು ಅದ್ಬುತ ಕಲ್ಪನೆ.
ಭೀಷ್ಮ ನನ್ನ ಮೆಚ್ಚುಗೆಯ ಪಾತ್ರವೂ ಹೌದು. ಆದರೆ ಅವನು ಅದೆಷ್ಟೇ ಮಹಾನ್ ವ್ಯಕ್ತಿಯಾಗಿದ್ದರೂ ಪರಿಪೂರ್ಣನಾಗಿರಲಿಲ್ಲ. ಅವನಷ್ಟೇ ಅಲ್ಲ ಮಹಾಭಾರತದ ಎಲ್ಲಾ ಪಾತ್ರಗಳಿಗೂ ಒ೦ದಲ್ಲ ಒ೦ದು ದೌರ್ಬಲ್ಯವಿದೆ, ಒ೦ದಿಲ್ಲ ಒ೦ದು ಕಡೆ ತಪ್ಪೆಸೆಗಿವೆ. ಮಹಾಭಾರತ ಮೆಚ್ಚುಗೆಯಾಗುವುದೇ ಈ ಕಾರಣದಿ೦ದಾಗಿ. ಅಲ್ಲಿರುವುದು ಬದುಕಿಗೆ ಹತ್ತಿರವಾದ ಪಾಠಗಳೇ ಹೊರತು ಬದುಕಿಗೆ ಮೀರಿದ ತತ್ವಗಳಲ್ಲ.
ಮಹಾಭಾರತದಲ್ಲಿ ಯುದ್ದವೇ ನಡೆಯದಿದ್ದರೆ ಭಗವದ್ಗೀತೆ ಬೋಧನೆನೇ ಆಗ್ತಿರಲಿಲ್ವಲ್ಲಾ ಸಾರ್! ಹಾಗಾಗಿ ದ್ರೌಪದಿಯ ವಸ್ತ್ರಾಪಹರಣ ಸಮಯದಲ್ಲಿನ ಭೀಷ್ಮನ ಅಸಹಾಯಕತೆಯನ್ನ ಮಾಫಿ ಮಾಡಿ ಬಿಡೋಣ ಬಿಡಿ ;-)
ಕಲ್ಪನೆಯ ಎಳೆಯೊ೦ದಿಗೆ ಹೆಣೆದ ಲೇಖನ ತು೦ಬಾ ನೈಜವಾಗಿ ಬ೦ದಿದೆ. ಇದೇ ರೀತಿ ನಿಮ್ಮಿ೦ದ ಇನ್ನಷ್ಟು ಪಾತ್ರ ವಿಶ್ಲೇಷಣೆಗಳ ನಿರೀಕ್ಷೆಯಲ್ಲಿ....
wah wah...enthaha adhbhuthavada sambhashane.....chitrakatheyannu kannmunde kattindante ide e sambhashane....
Kathe astthe alla, comments ododu ondu abhutapurva anubhuti tamma blogalli.
Sir very nice narration
Post a Comment