ಸಿರ್ಸಿ ಕಾಲೇಜಿಗೆ ಹೋಗುವಾಗ ನಡೆದದ್ದು....
ಪಿಯೂಸಿಯಲ್ಲಿ ಫೇಲಾಗಿ..
ಒಂದು ವರ್ಷ ಅಣ್ಣನೊಂದಿಗೆ ತೋಟದಲ್ಲಿ ಕೆಲಸ ಮಾಡಿದ್ದು..
ನಿಜವಾದ ಸ್ನೇಹಿತರ್ಯಾರು..?
ನಾವು ಬಿದ್ದಾಗ ನಗುವವರು ಯಾರು ? ..
ಎಲ್ಲ ಗೊತ್ತಾಗಿತ್ತು...
ಪ್ರಪಂಚದ ಬಣ್ಣಗಳು ಗೊತ್ತಾಗತೊಡಗಿದವು... .
ಫೇಲಾಗಿ..
ಆದ ಅವಮಾನ.. ಹೀಯಾಳಿಕೆ ಕೇಳಿ ಕುಗ್ಗಿ ಹೋಗಿದ್ದೆ..
ಮತ್ತೆ ಓದುವ ಅವಕಾಶ ಸಿಕ್ಕಿತಲ್ಲ.. !
ಛಲದಿಂದ ಓದುತ್ತಿದ್ದೆ...
ಸಿರ್ಸಿ ರಾಯ್ಕರ್ ಬಿಲ್ಡಿಂಗಿನಲ್ಲಿ ನಮ್ಮ ವಾಸ..
ನಿತ್ಯ
ನಾಷ್ಟ ಮಾಡಿ.. ಮಧ್ಯಾಹ್ನಕ್ಕೂ ಅಡಿಗೆ ಮಾಡಿ ಹೋಗಬೇಕಿತ್ತು..
ತಿಂಗಳಿಗೆ ರೂಮಿನ ಬಾಡಿಗೆ ಖರ್ಚೂ ಸೇರಿ ನೂರಿಪ್ಪತ್ತು ರೂಪಾಯಿ...
ಅದೂ ಕೂಡ ಆಗ ಬಹಳ ದೊಡ್ಡ ಮೊತ್ತವಾಗಿತ್ತು...
ಅಂದು...
ಎಂದಿನಂತೆ ಕಾಲೇಜಿಗೆ ಹೊರಟಿದ್ದೆ..
ದಾರಿಯಲ್ಲಿ ಗೆಳೆಯರು ಸಿಕ್ಕರು..
ಒಬ್ಬರೂ ಮಾತನಾಡಿಲ್ಲ..
ಒಂದು ಮುಗುಳ್ನಗೆಯೂ ಇಲ್ಲ !
ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ಹೆಣ್ಣು ಮಕ್ಕಳು ಸಿಕ್ಕರು..
ನಾನು ..
ಆಗಿನಿಂದಲೂ ಸಾರ್ವತ್ರಿಕವಾಗಿ "ಪ್ರಕಾಶಣ್ಣ"ನಾಗಿದ್ದರಿಂದ..
ಎಲ್ಲ ಹೆಣ್ಣುಮಕ್ಕಳೂ ಸಲುಗೆಯಿಂದ ಮಾತನಾಡುತ್ತಿದ್ದರು..
ಅಂದು ಮುಖ ತಿರುಗಿಸಿಕೊಂಡು ಹೋದರು !
ಏನಾಯ್ತು ?... !!!!!!.......
ಸ್ವಲ್ಪ ಗೊಂದಲಕ್ಕೆ ಬಿದ್ದೆ..
ಕಾಲೇಜಿಗೆ ಬಂದೆ... ಕ್ಲಾಸ್ ಶುರುವಾಗಿತ್ತು..
ಅಲ್ಲೂ ಸಹ ಯಾರೂ ನನ್ನೊಡನೆ ಮಾತನಾಡುತ್ತಿಲ್ಲ...
ಪ್ರಿನ್ಸಿಪಾಲರ ಕ್ಲಾಸ್ ಆಗಿತ್ತು..
ಕ್ಲಾಸ್ ಮುಗಿದು ಹೋಗುವಾಗ ...
ಚಶ್ಮದೊಳಗಿನಿಂದ ಕೆಂಗಣ್ಣು ಬೀರಿದರು ..
"ಪ್ರಕಾಶ್.. ನನ್ನ ಛೇಂಬರಿಗೆ ಬಾ.."
ಹುಡುಗರೆಲ್ಲ ಒಂಥರಾ ನೋಡಿ ಮುಸಿ ಮುಸಿ ನಗುತ್ತಿದ್ದರು...
ಎನ್. ಎನ್. ರಾಯಸದ್ ಪ್ರಿನ್ಸಿಪಾಲರು..
ಅವರಿಗೆ ನನ್ನನ್ನು ಕಂಡರೆ ಪ್ರೀತಿ..
ಲೈಬ್ರರಿಯಿಂದ ಪುಸ್ತಕ ಒದಗಿಸುತ್ತಿದ್ದರು..
ಪುಸ್ತಕಕ್ಕಾಗಿ ಹಣದ ತೊಂದರೆ ಇತ್ತು..
ಅವರ ಛೇಂಬರಿಗೆ ಹೋದೆ..
ನನ್ನನ್ನು ನೋಡಿದವರೆ ಕೋಪಗೊಂಡರು..
"ಏನೋ ಇದು ?
ಒಳ್ಳೆಯ ಹುಡುಗ ಅಂದುಕೊಂಡಿದ್ದೆ..
ಹೀಗೆ ಮಾಡ್ತೀಯಾ ಅಂತ ಗೊತ್ತಿರಲಿಲ್ಲ..
ಊರಲ್ಲಿ ನಿನ್ನಣ್ಣ ಎಷ್ಟು ಕಷ್ಟ ಪಡ್ತಿದ್ದಾನೆ ಅಂತ ಗೊತ್ತಿದೆಯಲ್ಲ..?
ಒಮ್ಮೆ ಎಡವಿ ಬಿದ್ದಿದ್ದು ಸಾಲದೇನು ?.."
" ಈಗ ಅಂಥಾದ್ದು ಏನಾಯ್ತು ಸರ್..?..?"
"ಇನ್ನೇನು ಆಗಬೇಕಿದೆ ?
ಯಾವುದೋ ಹುಡುಗಿಗೆ ಪತ್ರ ಬರೆದಿರುವೆಯಂತಲ್ಲ.. !
ಛೇ....!"
"ಇಲ್ಲ.. ಸಾರ್..
ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲ.."
"ನಮ್ಮ ಕಾಲೇಜಿನ ಕಂಪೌಂಡ್ ಗೋಡೆಗಳನ್ನು ನೋಡು..
ಸತ್ಯ ಗೊತ್ತಾಗುತ್ತದೆ.."
ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ..
ಕುಗ್ಗಿ ಹೋದೆ...
ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲವಾಗಿತ್ತು..
ಕಾಲೇಜಿನ ಪೂರ್ತಿ ನನ್ನನ್ನು ಹೀಯಾಳಿಸುವವರೇ..
ಎಲ್ಲರ ಬಾಯಲ್ಲೂ ನನ್ನದೇ ಮಾತು....!
"ಪ್ರಕಾಶ ಪ್ರೇಮ ಪತ್ರ ಬರೆದನಂತೆ...!!.. ."
ಕ್ಲಾಸಿನಲ್ಲಿ ಕುಳಿತುಕೊಳ್ಳುವ ಮೂಡ್ ಇಲ್ಲವಾಗಿತ್ತು..
ರೂಮಿಗೆ ಬಂದೆ..
ನಾಗು ಇದ್ದಿದ್ದ..
"ಪ್ರಕಾಶೂ.. ಏನೋ ಅದು..?
ಯಾವ ಹುಡುಗಿನೋ ?"
ನನಗೆ ಮೈಯೆಲ್ಲ ಉರಿದು ಹೋಯಿತು..
ಕೋಪದಿಂದ ಅಳು ಬರುವಂತಾಯಿತು..
ನನ್ನನ್ನು ... ಕಷ್ಟಪಟ್ಟು ಓಡಿಸುತ್ತಿರುವ ಅಣ್ಣನಿಗೆ ಗೊತ್ತಾದರೆ ಎಷ್ಟು ನೊಂದುಕೊಂಡಾನು... !
ಛೇ...... !
ನಾಗು ನನ್ನನ್ನು ತಬ್ಬಿಕೊಂಡ.. ಸಮಾಧಾನ ಪಡಿಸಿದ..
ಕಷ್ಟ ಬಂದಾಗ...
ತಪ್ಪಿ ಬೀಳುವಾಗ ...
ಎಲ್ಲಿಂದ ಬರುತ್ತಾರೋ ನನ್ನ ಗೆಳೆಯರು.. ದೇವರ ಹಾಗೆ...!
"ಯಾರು ಈ ಸುದ್ಧಿ ಹರಡುತ್ತಿರುವವರು...?"
ಎಷ್ಟೇ ವಿಚಾರಿಸಿದರೂ "ಸುದ್ಧಿಯ ಮೂಲ" ಗೊತ್ತಾಗಲಿಲ್ಲ...
ಮಧ್ಯಾಹ್ನದ ಹೊತ್ತಿನಲ್ಲಿ ...
ಗೆಳೆಯರೆಲ್ಲ ಊಟಕ್ಕೆ ತಯಾರಿ ಮಾಡುತ್ತಿದ್ದೇವು..
ಅಷ್ಟರಲ್ಲಿ ...
ಒಬ್ಬರು ಬಹಳ ದರ್ಪದಿಂದ ರೂಮಿನ ಒಳಗೆ ಬಂದರು..
"ಇಲ್ಲಿ ಪ್ರಕಾಶ ಅಂದರೆ ಯಾರು ?... "
"ನಾನು..."
"ಏನಪ್ಪಾ..
ಮನೆಯಲ್ಲಿ ಹಿರಿಯರು ಯಾರೂ ಇಲ್ವಾ ?
ನಿನಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ವಾ?....
ಪತ್ರ ಬರಿಲಿಕ್ಕೆ ನನ್ನ ಮಗಳೇ ಸಿಕ್ಕಳಾ ?
ನಮ್ಮಂಥವರ ಮನೆಯ ಹೆಣ್ಣು ಮಕ್ಕಳು ...
ಮರ್ಯಾದೆಯಿಂದ ಕಾಲೇಜಿಗೆ ಹೋಗುವದು ಬೇಡವಾ.. ?"
ಸಿಕ್ಕಾಪಟ್ಟೆ ದೊಡ್ಡ ಧ್ವನಿಯಲ್ಲಿ ಕಿರುಚಾಡಿದರು..
ಕರಿ ಟೊಪ್ಪಿ..
ಬಿಳಿ ಅಂಗಿ.. ಬಿಳಿ ಪಂಚೆ..
ಒಳಗಡೆ
ಪಟ್ಟೆ... ಪಟ್ಟೆ ಉದ್ದನೆಯ ಅಂಡರವೇರ್...
ಪಂಚೆಯ ತುದಿಯನ್ನು ಕೈಯಲ್ಲಿ ಹಿಡಿದು..
ಅದೇ ಕೈಯಲ್ಲಿ ಸಣ್ಣ ಬ್ಯಾಗು...
ಬಾಯಲ್ಲಿ ಎಲೆ ಅಡಿಕೆ....
"ನೀವ್ಯಾರು...?.."
" ನಾನು ಯಾರೂ ಅಂತ ಗೊತ್ತಿಲ್ವಾ ?... !!.. "
" ಇಲ್ಲ... !.. "
" ನಾನು ಉಪಾಸಕೊಡ್ಳು ದೇವರು ಹೆಗಡೆ...!
"ಬಿಳಿ ಪಂಚೆ ದೇವರು ಹೆಗಡೆ" ಅಂತ... !
ಸಿದ್ದಾಪುರ ತಾಲೂಕಿನ ಜಗತ್ತಿಗೆಲ್ಲ ಗೊತ್ತು... "
ನಾಗು ತಲೆ ಕೆರೆದು ಕೊಂಡ..
"ನಿಮ್ಮ ಹುಡುಗಿಯ ಹೆಸರೇನು?..
ಯಾವ ಕ್ಲಾಸು..?.."
ಈಗ..
ಅವರು ಭಯಂಕರ ರಾಕ್ಷಸರಾಗಿ ಹೋದರು... !
ಥೈ ಥೈ ಕುಣಿದಾಡಿಬಿಟ್ಟರು...!
"ಏನೂ ...... ?....
ನನ್ನ ಮಗಳ ಹೆಸರು ಗೊತ್ತಿಲ್ಲದಯೇ ಪತ್ರ ಬರೆದದ್ದಾ... ?
ನಾನು ಸುಮ್ಮನಿರ್ತೇನೆ ಅಂದುಕೊಳ್ಳಬೇಡಿ..!
ಪೋಲೀಸ್ ಕಂಪ್ಲೇಂಟ್ ಕೊಡ್ತೇನೆ...
"ಬಿಳಿ ಪಂಚೆ ದೇವರು ಹೆಗಡೆ" ಅಂದ್ರೆ ಏನು ಅಂತ ಅಂದುಕೊಂಡಿದ್ದೀರಿ...?
ಚರ್ಮ ಸುಲಿಸಿ ಬಿಡ್ತೇನೆ...
ಈ ಬಡಕಲು ಹುಡುಗನಿಗೆ ...
ದುಡ್ಡು ಕೊಟ್ಟು ಪೋಲಿಸರಿಂದ ಹೋಡೆಸುತ್ತೇನೆ...
ಪತ್ರ ಬರಿತಾನಂತೆ.... ಪತ್ರ... !"
ಅವಮಾನದಿಂದ ಕುಗ್ಗಿ ಹೋಗಿದ್ದ ...
ನನಗೆ ಈಗ ಹೆದರಿಕೆಯೂ ಶುರುವಾಯ್ತು...
ದಿವಾಕರ ಬುದ್ಧಿವಂತ..
" ನೋಡಿ ....
ಬಿಳಿ ಪಂಚೆ ದೇವರು ಅಣ್ಣಾ...
ನಮ್ ಹುಡುಗ ಪತ್ರ ಬರೆದಿಲ್ಲ..
ಅಂಥವನಲ್ಲ..
ಯಾರೋ.. ಮಾಡಿದ ಕಿತಾಪತಿ ಇದು..
ನೀವು ಪೋಲಿಸ್ ಕಪ್ಲೇಂಟು ಕೊಡುವದಾದರೆ ಕೊಡಿ..
ಆದರೆ ಮರ್ಯಾದೆ ಹೋಗುವದು ಯಾರದ್ದು ?..
" ಉಪಾಸಕೊಡ್ಳು ದೇವರಣ್ಣನ ಮಗಳು ..
ಪ್ರಕಾಶನ್ನ ಲವ್ ಮಾಡಿದ್ದಳಂತೆ"
ಎನ್ನುವದು ಸಿರ್ಸಿ ಜಗತ್ತಿಗೇ ಗೊತ್ತಾಗುತ್ತದೆ..!
ಇದನ್ನು ತಾಳ್ಮೆಯಿಂದ ಬಗೆಹರಿಸಿಕೊಂಡರೆ ಒಳ್ಳೆಯದು..."
ಈಗ ....
ಬಿಳೆ ಪಂಚೆಯವರು ಸ್ವಲ್ಪ ತಣ್ಣಗಾದರು..
ಕರಿ ಟೊಪ್ಪಿಯನ್ನು ತೆಗೆದುಕೊಂಡು..
ಅದರಿಂದ ಗಾಳಿ ಹಾಕಿಕೊಂಡರು...
ಏದುಸಿರು ಬಿಡುತ್ತ ಒಂದು ಗ್ಲಾಸ್ ನೀರು ಕುಡಿದರು..
"ಹೌದಲ್ವ ....
ಹಾಗಾದರೆ ಏನು ಮಾಡೋಣ...?...
ನಾನು ಸುಮ್ಮನಿದ್ದರೂ ನನ್ನ ಮಗ ಸುಮ್ಮನಿರಲ್ಲ..."
"ಯಾರೂ... ನಿಮ್ಮ ಮಗ...?.... "
"ಅಯ್ಯೋ..
ಇದೊಳ್ಳೇ ಫಜೀತಿ ಆಯ್ತಲ್ಲ..!
ನನ್ನ ಮಗನ ಪರಿಚಯವೂ ನಿಮಗೆ ಇಲ್ಲವಾ?.."
"ಇಲ್ಲ.... ! "
ನಮ್ಮ ಹುಬ್ಬುಗಳು ಮೇಲಕ್ಕೇರಿದವು !
"ಅಯ್ಯೋ ರಾಮಾ...!
ನನ್ನ ಮಗ ಅಂದ್ರೆ ಭಯಂಕರ ಹುಲಿ..!,,..
ಕಾಡಿನಲ್ಲಿರೋ ಸಿಂಹ...!
ಮಹಾ ಒರಟ... ರೌಡಿ...!
ಉಪಾಸ್ ಕೊಡ್ಳು " ಕೇಡಿ ಹೆಗಡೇ" ಅಂದ್ರೆ ಜನ ಉಚ್ಚೆ ಹೊಯ್ಕೋತಾರೆ..."
ನಮಗೆಲ್ಲರಿಗೂ ನಡುಕ ಶುರುವಾಯ್ತು..
"ನಿಮ್ಮ ಮಗ " ಕೇಡಿ " ನಾ..?... "
"ಕೇಡಿ .... ಅಂದ್ರೆ ಕೇಡಿ ಅಲ್ಲ..
ಕೃಷ್ಣ ದೇವರು ಹೆಗಡೆ..
ಇಂಗ್ಲೀಷಿನಲ್ಲಿ " ಕೇಡಿ ಹೆಗಡೆ ".. ಅಂತ...
ಅವ ಸುಮ್ನೆ ಬಿಡೋದಿಲ್ಲ..
ಮೊನ್ನೆ ತಾನೆ ಪೋಲೀಸ್ ಠಾಣೆಗೆ ಹೋಗಿ ಬಂದಿದ್ದಾನೆ...
ನಿಮ್ಮನ್ನು ಭಗವಂತ ಬಂದ್ರೂ ಕಾಪಾಡಲಿಕ್ಕೆ ಸಾಧ್ಯ ಇಲ್ಲ..!.. "
ನಮಗೆ ಈಗ ನಿಜಕ್ಕೂ ಹೆದರಿಕೆ ಶುರುವಾತು....
ತಲೆಯೆಲ್ಲ ಕೆಟ್ಟು ಕೆರವಾಗಿ ಹೋಯ್ತು... !
" ಹುಡುಗಿ ಯಾರು ?
ಎಲ್ಲಿದ್ದಾಳೆ..?
ನೋಡಲಿಕ್ಕೆ ಚಂದ ಇದ್ದೀರಬಹುದಾ ?...
ಹುಡುಗಿ ಯಾರು ಅಂತ ಗೊತ್ತಿಲ್ಲ..
ಅವಳ ಅಣ್ಣ ರೌಡಿ..!...
ಕೇಡೀ ಹೆಗಡೆಯನ್ನು ತಡೆಯುವದು ಹೇಗೆ ?... "
(ಇನ್ನೂ ಇದೆ............... )
ಪ್ರತಿಕ್ರಿಯೆಗಳನ್ನು ದಯವಿಟ್ಟು ಓದಿ... .........
ಪಿಯೂಸಿಯಲ್ಲಿ ಫೇಲಾಗಿ..
ಒಂದು ವರ್ಷ ಅಣ್ಣನೊಂದಿಗೆ ತೋಟದಲ್ಲಿ ಕೆಲಸ ಮಾಡಿದ್ದು..
ನಿಜವಾದ ಸ್ನೇಹಿತರ್ಯಾರು..?
ನಾವು ಬಿದ್ದಾಗ ನಗುವವರು ಯಾರು ? ..
ಎಲ್ಲ ಗೊತ್ತಾಗಿತ್ತು...
ಪ್ರಪಂಚದ ಬಣ್ಣಗಳು ಗೊತ್ತಾಗತೊಡಗಿದವು... .
ಫೇಲಾಗಿ..
ಆದ ಅವಮಾನ.. ಹೀಯಾಳಿಕೆ ಕೇಳಿ ಕುಗ್ಗಿ ಹೋಗಿದ್ದೆ..
ಮತ್ತೆ ಓದುವ ಅವಕಾಶ ಸಿಕ್ಕಿತಲ್ಲ.. !
ಛಲದಿಂದ ಓದುತ್ತಿದ್ದೆ...
ಸಿರ್ಸಿ ರಾಯ್ಕರ್ ಬಿಲ್ಡಿಂಗಿನಲ್ಲಿ ನಮ್ಮ ವಾಸ..
ನಿತ್ಯ
ನಾಷ್ಟ ಮಾಡಿ.. ಮಧ್ಯಾಹ್ನಕ್ಕೂ ಅಡಿಗೆ ಮಾಡಿ ಹೋಗಬೇಕಿತ್ತು..
ತಿಂಗಳಿಗೆ ರೂಮಿನ ಬಾಡಿಗೆ ಖರ್ಚೂ ಸೇರಿ ನೂರಿಪ್ಪತ್ತು ರೂಪಾಯಿ...
ಅದೂ ಕೂಡ ಆಗ ಬಹಳ ದೊಡ್ಡ ಮೊತ್ತವಾಗಿತ್ತು...
ಅಂದು...
ಎಂದಿನಂತೆ ಕಾಲೇಜಿಗೆ ಹೊರಟಿದ್ದೆ..
ದಾರಿಯಲ್ಲಿ ಗೆಳೆಯರು ಸಿಕ್ಕರು..
ಒಬ್ಬರೂ ಮಾತನಾಡಿಲ್ಲ..
ಒಂದು ಮುಗುಳ್ನಗೆಯೂ ಇಲ್ಲ !
ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ಹೆಣ್ಣು ಮಕ್ಕಳು ಸಿಕ್ಕರು..
ನಾನು ..
ಆಗಿನಿಂದಲೂ ಸಾರ್ವತ್ರಿಕವಾಗಿ "ಪ್ರಕಾಶಣ್ಣ"ನಾಗಿದ್ದರಿಂದ..
ಎಲ್ಲ ಹೆಣ್ಣುಮಕ್ಕಳೂ ಸಲುಗೆಯಿಂದ ಮಾತನಾಡುತ್ತಿದ್ದರು..
ಅಂದು ಮುಖ ತಿರುಗಿಸಿಕೊಂಡು ಹೋದರು !
ಏನಾಯ್ತು ?... !!!!!!.......
ಸ್ವಲ್ಪ ಗೊಂದಲಕ್ಕೆ ಬಿದ್ದೆ..
ಕಾಲೇಜಿಗೆ ಬಂದೆ... ಕ್ಲಾಸ್ ಶುರುವಾಗಿತ್ತು..
ಅಲ್ಲೂ ಸಹ ಯಾರೂ ನನ್ನೊಡನೆ ಮಾತನಾಡುತ್ತಿಲ್ಲ...
ಪ್ರಿನ್ಸಿಪಾಲರ ಕ್ಲಾಸ್ ಆಗಿತ್ತು..
ಕ್ಲಾಸ್ ಮುಗಿದು ಹೋಗುವಾಗ ...
ಚಶ್ಮದೊಳಗಿನಿಂದ ಕೆಂಗಣ್ಣು ಬೀರಿದರು ..
"ಪ್ರಕಾಶ್.. ನನ್ನ ಛೇಂಬರಿಗೆ ಬಾ.."
ಹುಡುಗರೆಲ್ಲ ಒಂಥರಾ ನೋಡಿ ಮುಸಿ ಮುಸಿ ನಗುತ್ತಿದ್ದರು...
ಎನ್. ಎನ್. ರಾಯಸದ್ ಪ್ರಿನ್ಸಿಪಾಲರು..
ಅವರಿಗೆ ನನ್ನನ್ನು ಕಂಡರೆ ಪ್ರೀತಿ..
ಲೈಬ್ರರಿಯಿಂದ ಪುಸ್ತಕ ಒದಗಿಸುತ್ತಿದ್ದರು..
ಪುಸ್ತಕಕ್ಕಾಗಿ ಹಣದ ತೊಂದರೆ ಇತ್ತು..
ಅವರ ಛೇಂಬರಿಗೆ ಹೋದೆ..
ನನ್ನನ್ನು ನೋಡಿದವರೆ ಕೋಪಗೊಂಡರು..
"ಏನೋ ಇದು ?
ಒಳ್ಳೆಯ ಹುಡುಗ ಅಂದುಕೊಂಡಿದ್ದೆ..
ಹೀಗೆ ಮಾಡ್ತೀಯಾ ಅಂತ ಗೊತ್ತಿರಲಿಲ್ಲ..
ಊರಲ್ಲಿ ನಿನ್ನಣ್ಣ ಎಷ್ಟು ಕಷ್ಟ ಪಡ್ತಿದ್ದಾನೆ ಅಂತ ಗೊತ್ತಿದೆಯಲ್ಲ..?
ಒಮ್ಮೆ ಎಡವಿ ಬಿದ್ದಿದ್ದು ಸಾಲದೇನು ?.."
" ಈಗ ಅಂಥಾದ್ದು ಏನಾಯ್ತು ಸರ್..?..?"
"ಇನ್ನೇನು ಆಗಬೇಕಿದೆ ?
ಯಾವುದೋ ಹುಡುಗಿಗೆ ಪತ್ರ ಬರೆದಿರುವೆಯಂತಲ್ಲ.. !
ಛೇ....!"
"ಇಲ್ಲ.. ಸಾರ್..
ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲ.."
"ನಮ್ಮ ಕಾಲೇಜಿನ ಕಂಪೌಂಡ್ ಗೋಡೆಗಳನ್ನು ನೋಡು..
ಸತ್ಯ ಗೊತ್ತಾಗುತ್ತದೆ.."
ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ..
ಕುಗ್ಗಿ ಹೋದೆ...
ನಾನು ಯಾವ ಹುಡುಗಿಗೂ ಪತ್ರ ಬರೆದಿಲ್ಲವಾಗಿತ್ತು..
ಕಾಲೇಜಿನ ಪೂರ್ತಿ ನನ್ನನ್ನು ಹೀಯಾಳಿಸುವವರೇ..
ಎಲ್ಲರ ಬಾಯಲ್ಲೂ ನನ್ನದೇ ಮಾತು....!
"ಪ್ರಕಾಶ ಪ್ರೇಮ ಪತ್ರ ಬರೆದನಂತೆ...!!.. ."
ಕ್ಲಾಸಿನಲ್ಲಿ ಕುಳಿತುಕೊಳ್ಳುವ ಮೂಡ್ ಇಲ್ಲವಾಗಿತ್ತು..
ರೂಮಿಗೆ ಬಂದೆ..
ನಾಗು ಇದ್ದಿದ್ದ..
"ಪ್ರಕಾಶೂ.. ಏನೋ ಅದು..?
ಯಾವ ಹುಡುಗಿನೋ ?"
ನನಗೆ ಮೈಯೆಲ್ಲ ಉರಿದು ಹೋಯಿತು..
ಕೋಪದಿಂದ ಅಳು ಬರುವಂತಾಯಿತು..
ನನ್ನನ್ನು ... ಕಷ್ಟಪಟ್ಟು ಓಡಿಸುತ್ತಿರುವ ಅಣ್ಣನಿಗೆ ಗೊತ್ತಾದರೆ ಎಷ್ಟು ನೊಂದುಕೊಂಡಾನು... !
ಛೇ...... !
ನಾಗು ನನ್ನನ್ನು ತಬ್ಬಿಕೊಂಡ.. ಸಮಾಧಾನ ಪಡಿಸಿದ..
ಕಷ್ಟ ಬಂದಾಗ...
ತಪ್ಪಿ ಬೀಳುವಾಗ ...
ಎಲ್ಲಿಂದ ಬರುತ್ತಾರೋ ನನ್ನ ಗೆಳೆಯರು.. ದೇವರ ಹಾಗೆ...!
"ಯಾರು ಈ ಸುದ್ಧಿ ಹರಡುತ್ತಿರುವವರು...?"
ಎಷ್ಟೇ ವಿಚಾರಿಸಿದರೂ "ಸುದ್ಧಿಯ ಮೂಲ" ಗೊತ್ತಾಗಲಿಲ್ಲ...
ಮಧ್ಯಾಹ್ನದ ಹೊತ್ತಿನಲ್ಲಿ ...
ಗೆಳೆಯರೆಲ್ಲ ಊಟಕ್ಕೆ ತಯಾರಿ ಮಾಡುತ್ತಿದ್ದೇವು..
ಅಷ್ಟರಲ್ಲಿ ...
ಒಬ್ಬರು ಬಹಳ ದರ್ಪದಿಂದ ರೂಮಿನ ಒಳಗೆ ಬಂದರು..
"ಇಲ್ಲಿ ಪ್ರಕಾಶ ಅಂದರೆ ಯಾರು ?... "
"ನಾನು..."
"ಏನಪ್ಪಾ..
ಮನೆಯಲ್ಲಿ ಹಿರಿಯರು ಯಾರೂ ಇಲ್ವಾ ?
ನಿನಗೆ ಮಾಡಲಿಕ್ಕೆ ಬೇರೆ ಕೆಲಸ ಇಲ್ವಾ?....
ಪತ್ರ ಬರಿಲಿಕ್ಕೆ ನನ್ನ ಮಗಳೇ ಸಿಕ್ಕಳಾ ?
ನಮ್ಮಂಥವರ ಮನೆಯ ಹೆಣ್ಣು ಮಕ್ಕಳು ...
ಮರ್ಯಾದೆಯಿಂದ ಕಾಲೇಜಿಗೆ ಹೋಗುವದು ಬೇಡವಾ.. ?"
ಸಿಕ್ಕಾಪಟ್ಟೆ ದೊಡ್ಡ ಧ್ವನಿಯಲ್ಲಿ ಕಿರುಚಾಡಿದರು..
ಕರಿ ಟೊಪ್ಪಿ..
ಬಿಳಿ ಅಂಗಿ.. ಬಿಳಿ ಪಂಚೆ..
ಒಳಗಡೆ
ಪಟ್ಟೆ... ಪಟ್ಟೆ ಉದ್ದನೆಯ ಅಂಡರವೇರ್...
ಪಂಚೆಯ ತುದಿಯನ್ನು ಕೈಯಲ್ಲಿ ಹಿಡಿದು..
ಅದೇ ಕೈಯಲ್ಲಿ ಸಣ್ಣ ಬ್ಯಾಗು...
ಬಾಯಲ್ಲಿ ಎಲೆ ಅಡಿಕೆ....
"ನೀವ್ಯಾರು...?.."
" ನಾನು ಯಾರೂ ಅಂತ ಗೊತ್ತಿಲ್ವಾ ?... !!.. "
" ಇಲ್ಲ... !.. "
" ನಾನು ಉಪಾಸಕೊಡ್ಳು ದೇವರು ಹೆಗಡೆ...!
"ಬಿಳಿ ಪಂಚೆ ದೇವರು ಹೆಗಡೆ" ಅಂತ... !
ಸಿದ್ದಾಪುರ ತಾಲೂಕಿನ ಜಗತ್ತಿಗೆಲ್ಲ ಗೊತ್ತು... "
ನಾಗು ತಲೆ ಕೆರೆದು ಕೊಂಡ..
"ನಿಮ್ಮ ಹುಡುಗಿಯ ಹೆಸರೇನು?..
ಯಾವ ಕ್ಲಾಸು..?.."
ಈಗ..
ಅವರು ಭಯಂಕರ ರಾಕ್ಷಸರಾಗಿ ಹೋದರು... !
ಥೈ ಥೈ ಕುಣಿದಾಡಿಬಿಟ್ಟರು...!
"ಏನೂ ...... ?....
ನನ್ನ ಮಗಳ ಹೆಸರು ಗೊತ್ತಿಲ್ಲದಯೇ ಪತ್ರ ಬರೆದದ್ದಾ... ?
ನಾನು ಸುಮ್ಮನಿರ್ತೇನೆ ಅಂದುಕೊಳ್ಳಬೇಡಿ..!
ಪೋಲೀಸ್ ಕಂಪ್ಲೇಂಟ್ ಕೊಡ್ತೇನೆ...
"ಬಿಳಿ ಪಂಚೆ ದೇವರು ಹೆಗಡೆ" ಅಂದ್ರೆ ಏನು ಅಂತ ಅಂದುಕೊಂಡಿದ್ದೀರಿ...?
ಚರ್ಮ ಸುಲಿಸಿ ಬಿಡ್ತೇನೆ...
ಈ ಬಡಕಲು ಹುಡುಗನಿಗೆ ...
ದುಡ್ಡು ಕೊಟ್ಟು ಪೋಲಿಸರಿಂದ ಹೋಡೆಸುತ್ತೇನೆ...
ಪತ್ರ ಬರಿತಾನಂತೆ.... ಪತ್ರ... !"
ಅವಮಾನದಿಂದ ಕುಗ್ಗಿ ಹೋಗಿದ್ದ ...
ನನಗೆ ಈಗ ಹೆದರಿಕೆಯೂ ಶುರುವಾಯ್ತು...
ದಿವಾಕರ ಬುದ್ಧಿವಂತ..
" ನೋಡಿ ....
ಬಿಳಿ ಪಂಚೆ ದೇವರು ಅಣ್ಣಾ...
ನಮ್ ಹುಡುಗ ಪತ್ರ ಬರೆದಿಲ್ಲ..
ಅಂಥವನಲ್ಲ..
ಯಾರೋ.. ಮಾಡಿದ ಕಿತಾಪತಿ ಇದು..
ನೀವು ಪೋಲಿಸ್ ಕಪ್ಲೇಂಟು ಕೊಡುವದಾದರೆ ಕೊಡಿ..
ಆದರೆ ಮರ್ಯಾದೆ ಹೋಗುವದು ಯಾರದ್ದು ?..
" ಉಪಾಸಕೊಡ್ಳು ದೇವರಣ್ಣನ ಮಗಳು ..
ಪ್ರಕಾಶನ್ನ ಲವ್ ಮಾಡಿದ್ದಳಂತೆ"
ಎನ್ನುವದು ಸಿರ್ಸಿ ಜಗತ್ತಿಗೇ ಗೊತ್ತಾಗುತ್ತದೆ..!
ಇದನ್ನು ತಾಳ್ಮೆಯಿಂದ ಬಗೆಹರಿಸಿಕೊಂಡರೆ ಒಳ್ಳೆಯದು..."
ಈಗ ....
ಬಿಳೆ ಪಂಚೆಯವರು ಸ್ವಲ್ಪ ತಣ್ಣಗಾದರು..
ಕರಿ ಟೊಪ್ಪಿಯನ್ನು ತೆಗೆದುಕೊಂಡು..
ಅದರಿಂದ ಗಾಳಿ ಹಾಕಿಕೊಂಡರು...
ಏದುಸಿರು ಬಿಡುತ್ತ ಒಂದು ಗ್ಲಾಸ್ ನೀರು ಕುಡಿದರು..
"ಹೌದಲ್ವ ....
ಹಾಗಾದರೆ ಏನು ಮಾಡೋಣ...?...
ನಾನು ಸುಮ್ಮನಿದ್ದರೂ ನನ್ನ ಮಗ ಸುಮ್ಮನಿರಲ್ಲ..."
"ಯಾರೂ... ನಿಮ್ಮ ಮಗ...?.... "
"ಅಯ್ಯೋ..
ಇದೊಳ್ಳೇ ಫಜೀತಿ ಆಯ್ತಲ್ಲ..!
ನನ್ನ ಮಗನ ಪರಿಚಯವೂ ನಿಮಗೆ ಇಲ್ಲವಾ?.."
"ಇಲ್ಲ.... ! "
ನಮ್ಮ ಹುಬ್ಬುಗಳು ಮೇಲಕ್ಕೇರಿದವು !
"ಅಯ್ಯೋ ರಾಮಾ...!
ನನ್ನ ಮಗ ಅಂದ್ರೆ ಭಯಂಕರ ಹುಲಿ..!,,..
ಕಾಡಿನಲ್ಲಿರೋ ಸಿಂಹ...!
ಮಹಾ ಒರಟ... ರೌಡಿ...!
ಉಪಾಸ್ ಕೊಡ್ಳು " ಕೇಡಿ ಹೆಗಡೇ" ಅಂದ್ರೆ ಜನ ಉಚ್ಚೆ ಹೊಯ್ಕೋತಾರೆ..."
ನಮಗೆಲ್ಲರಿಗೂ ನಡುಕ ಶುರುವಾಯ್ತು..
"ನಿಮ್ಮ ಮಗ " ಕೇಡಿ " ನಾ..?... "
"ಕೇಡಿ .... ಅಂದ್ರೆ ಕೇಡಿ ಅಲ್ಲ..
ಕೃಷ್ಣ ದೇವರು ಹೆಗಡೆ..
ಇಂಗ್ಲೀಷಿನಲ್ಲಿ " ಕೇಡಿ ಹೆಗಡೆ ".. ಅಂತ...
ಅವ ಸುಮ್ನೆ ಬಿಡೋದಿಲ್ಲ..
ಮೊನ್ನೆ ತಾನೆ ಪೋಲೀಸ್ ಠಾಣೆಗೆ ಹೋಗಿ ಬಂದಿದ್ದಾನೆ...
ನಿಮ್ಮನ್ನು ಭಗವಂತ ಬಂದ್ರೂ ಕಾಪಾಡಲಿಕ್ಕೆ ಸಾಧ್ಯ ಇಲ್ಲ..!.. "
ನಮಗೆ ಈಗ ನಿಜಕ್ಕೂ ಹೆದರಿಕೆ ಶುರುವಾತು....
ತಲೆಯೆಲ್ಲ ಕೆಟ್ಟು ಕೆರವಾಗಿ ಹೋಯ್ತು... !
" ಹುಡುಗಿ ಯಾರು ?
ಎಲ್ಲಿದ್ದಾಳೆ..?
ನೋಡಲಿಕ್ಕೆ ಚಂದ ಇದ್ದೀರಬಹುದಾ ?...
ಹುಡುಗಿ ಯಾರು ಅಂತ ಗೊತ್ತಿಲ್ಲ..
ಅವಳ ಅಣ್ಣ ರೌಡಿ..!...
ಕೇಡೀ ಹೆಗಡೆಯನ್ನು ತಡೆಯುವದು ಹೇಗೆ ?... "
(ಇನ್ನೂ ಇದೆ............... )
ಪ್ರತಿಕ್ರಿಯೆಗಳನ್ನು ದಯವಿಟ್ಟು ಓದಿ... .........
32 comments:
ಈ ಕಥೆ ಗೊತ್ತಿರಲೇ ಇರಲಿಲ್ಲ ಪ್ರಕಾಶಣ್ಣ. ಪಂಚೆ+ ಕೇಡಿ ಸೇರಿ ಎಂತ ಮಾಡಿದರು? ಬೇಗ ಮುಂದುವರೆಸಿ..
ಬದರೀ ಭಾಯ್...
ನಾವು ಮಾಡಿರದ ಅಪವಾದವೊಂದನ್ನು ಎದುರಿಸುವದು ಬಹಳ ಹಿಂಸೆ...
ಅದರ ನೋವು ಹೇಳಲಾಗದು...
ಆ ವಯಸ್ಸಿನಲ್ಲಿ ನಾನು "ವಿಜಯಾ" ಅನ್ನೊ ಹುಡುಗಿ ಪ್ರೀತಿಯಲ್ಲಿದ್ದೆ..
ಅವಳಿಗೆ ಇತ್ತೋ ಇಲ್ಲವೋ ಗೊತ್ತಿಲ್ಲ..
ನಾನು ಮಾತ್ರ ಅವಳನ್ನು ತುಂಬಾ ಆರಾಧಿಸುತ್ತಿದ್ದೆ..
ವಿಜಯಾ ಹೆಸರು ಹೇಳಿ..
ನನ್ನಾಕೆ ಈಗಲೂ ನನಗೆ ಆಗಾಗ ಛೇಡಿಸುತ್ತಾಳೆ
ಪಿಯೂಸಿಯಲ್ಲಿ ಫೇಲಾಗಿ... ಅವಮಾನ ಸಹಿಸಿ..
ಓದಲು ಬಂದಿದ್ದೆ..
ಚೆನ್ನಾಗಿ ಓದಿ ಪಾಸು ಮಾಡುವ ಉತ್ಸಾಹದಲ್ಲಿದ್ದೆ..
ಆಗ ನನ್ನ ಗೆಳೆಯರಿಗೆ ಒಂದಷ್ಟು ಪ್ರೇಮ ಪತ್ರ ಬರೆದು ಕೊಟ್ಟಿದ್ದು ಹೌದಾಗಿತ್ತು...
ಆದರೆ ನಾನು ಯಾರಿಗೂ ಪತ್ರ ಬರೆದಿಲ್ಲವಾಗಿತ್ತು...
ನಿಜಕ್ಕೂ ಆತಂಕದ ಕ್ಷಣಗಳು ಅವು..
ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ಧನ್ಯವಾದಗಳು...
ಹಹಹ ಒಳ್ಳೆ ಕಥೆ.. ಕೇಡಿ ಕೈಲಿ ಪ್ರಕಾಶಣ್ಣ ಮುಂದೇನಾಯ್ತು ಬೇಗ ಹೇಳಿ
ಮುಂದಕ್ಕೆ ಹೇಳಿ ಬಾಸೂ....ಫುಲ್ ಇಂಟೆರೆಸ್ಟಿಂಗು!
ಐತಲಕಡಿ ಒಳ್ಳೆ ಕಥೆ ಆತಲ್ಲ ... ಕಥೆ ಬೇಗ ಬರಿಯೋ ಅಣ್ಣಯ್ಯ KD ಹೆಗ್ಡೆ ಸ್ಟೇ ತಂದರೆ ಕಷ್ಟ !!!!
This part of the story just you have afforded is very entertaining and originates many queries, and invents curiosity.. Hoping it would end with humour. and hope you will be back after the short break with climax.. this article also proves you have best boon of writing style and good inventor of humour..
It the human tendency to fond of gossips and entertain with romours not with reality.. we dont put even little effort to take second look.. as an innocent who have confronted with such accusement could only measure the depth pain.. good writting.
ಪ್ರಕಾಶಣ್ಣ ಶುಕ್ರವಾರದ ಧಾರಾವಾಹಿಯಾಸಿಸಿಬಿಟ್ರಿ....
ಬೇಗ ಮುಂದುವರೆಸಿ....
ಪಂಚೆ ಹೆಗಡೆ ಅಂದರೆ ನಿನ್ನ ಮಾವ ಮತ್ತೆ ಭಾವ ರ ನಡುವೆ ನಿಂದೇನು ಕಥೆ...?????
ರಸವತ್ತಾದ ಕತಿ ಹಿಂಗ ಅರ್ಧಾಕ್ಕ ನಿಲ್ಲಿಸಿದ್ರ ಹೆಂಗ..
ದಾವಾ ಹಾಕೋಣೇನು....??
ಪ್ರಕಾಶಣ್ಣ..
ಕೆ.ಡಿ. ಹೆಗಡೆ ಹಾಗೂ ಹುಡುಗಿಯ ಪ್ರೇಮ ಪ್ರಕರಣ ಬಹಳ ಕುತೂಹಲಕ್ಕೆ ಕಾರಣವಾಜು..
ಬೇಗ ಮುಂದುವರಿಯಿರಿ...
ಓದಿ ಖುಷಿ ಪಡುತ್ತೇವೆ...
ಮನಸು....
ನನ್ನ ಗೆಳೆಯರು...
ಪ್ರಿನ್ಸಿಪಾಲರು... ಕಾಲೇಜಿನ ಗುರುವೃಂದ...
ಎಲ್ಲರೂ "ಯಾಕೋ ಪ್ರೇಮ ಪತ್ರ ಬರೆದು ಬಿಟ್ಯಾ ? " ಅಂತ ಕೇಳುವಾಗ ನನ್ನ ಸ್ಥಿತಿ ಹೇಗಿರಬೇಡ.. !
ಹೇಳುವವರಿಗೇನು ? ಬಾಯಿಚಪಲ... ನಾಲಿಗೆ ತುರಿತ.. ಹೇಳಿಬಿಡ್ತಾರೆ..
ಆದರೆ ನಮ್ಮ ಸ್ಥಿತಿ ?
ಆಗ ಪಿಯೂಸಿ ಫೇಲಾಗಿ.. ಸಿವಿಲ್ ಓದಲು ಬಂದಿದ್ದೆ..
ಎಲ್ಲರೆದುರಿಗೆ ನಾನು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗಿತ್ತು.. ಬೆಳೆಸಿಕೊಳ್ಳಬೇಕಾಗಿತ್ತು..
ಆಗ ಈ ಅಪವಾದ !
ನಿಜಕ್ಕೂ
ನನ್ನ ಸ್ಥಿತಿ ತುಂಬಾ ಹೀನಾಯಮಾನವಾಗಿತ್ತು...
ಆದರೆ ನನ್ನ ಗೆಳೆಯರಿದ್ದಾರಲ್ಲ.. ಅವರು ನಾನು ಕುಗ್ಗಿದಾಗಲೆಲ್ಲ ನನ್ನ ಬೆಂಬಲಕ್ಕಿದ್ದರು..
ಇಂದು ನನ್ನ ಗೆಳೆಯ ಆಜಾದನ ಜನ್ಮ ದಿನ..
ಅವನೂ ಸಹ ನಾಗೂ ಥರಹದವನು..
ನನ್ನ ಗೆಳೆಯರೆಲ್ಲರ ಪ್ರೀತಿಗೆ ಈ ಲೇಖನ...
ಲೇಖನ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...
ಪ್ರೀತಿಯ ಸಂತೋಷ್ ಕುಮಾರ್...
ನಾನು ಪತ್ರ ಬರೆದೆ ಅಂತ ಗುಲ್ಲು... ! ಗಾಸಿಪ್... !
ಯಾವ ಹುಡುಗಿಗೆ ? ಹೆಸರೇನು ?
ಗೊತ್ತಿಲ್ಲ !
ನಮ್ಮ ಗೆಳೆಯರಿಗೆ ಬರೆದುಕೊಟ್ಟ ಪತ್ರವಾ ? ಅದೂ ಅಲ್ಲ...!
ವಿಚಿತ್ರ ಸಂದಿಗ್ಧದಲ್ಲಿ ನಾವಿದ್ದೆವು...
ಒಂದೊಂದೆ ಎಳೆಗಳನ್ನು ಬಿಡಿಸಬೇಕಾಗಿತ್ತು... ಬಹುಷಃ ಮುಂದಿನ ಲೇಖನದಲ್ಲಿ ಮುಗಿಸುವೆ...
ಇಷ್ಟಪಟ್ತು.. ಪ್ರೋತ್ಸಾಹಿಸಿದ್ದಕ್ಕೆ ಪ್ರೀತಿಯ ವಂದನೆಗಳು....
ಪ್ರಕಾಶಣ್ಣ ಆ ಸಂದರ್ಭದಲ್ಲಿ ತಾವು ಅನುಭವಿಸಿದ ಮನೋ ವ್ಯಥೆ, ನಮ್ಮ ಊಹೆಗೂ ನಿಲುಕದು.
ಓದುಗರನ್ನು time machineನಲ್ಲಿ ಯಾನ ಮಾಡಿಸುವ ನಿಮ್ಮ ಶೈಲಿಗೆ ನಾವೆಲ್ಲ ಶರಣಾಗಿದ್ದೇವೆ.
ಪ್ರೀತಿಯ ಪ್ರವೀಣೂ..
ಕಾಲೇಜಿನಲ್ಲಿರುವಾಗ ನನಗೆ ನನ್ನ ಗೆಳೆಯರೆಲ್ಲ "ಪೀಜೀ" ಅಂತ ಕರೆಯುತ್ತಿದ್ದರು...
ಅಲ್ಲಿನ ರೂಢಿ ಹಾಗೆ..
"ಪ್ರಕಾಶ ಗಣಪತಿ ಹೆಗಡೆ"
Prakash Ganapathi Hegde
ಇದು ನನ್ನ ಹೆಸರು..
ಇಂಗ್ಲೀಷಿನ ಮೊದಲ ಅಕ್ಷರಗಳನ್ನು ತೆಗೆದುಕೊಂಡು ನನ್ನ ಹೆಸರು ಕರೆಯುತ್ತಿದ್ದರು..
ಆ ಭಾಗದಲ್ಲಿ ಆ ರೂಢಿ ಯಾಕೊ ಗೊತ್ತಿಲ್ಲ...
ಕೇಡಿ.. ಬೀಡಿ... ಕೇಜಿ... ಎಮ್ಟಿ ಹೆಗಡೆ... ಟೀಟಿ ಭಟ್.. ಡೀಡೀ ನಾಯ್ಕ್..
ವಾಯ್. ವಾಯ್ ಗೌಡ.. ಸಿ ಎಮ್ ನಾಯ್ಕ.. ಈ ಜಿ ಹೆಗಡೆ .. ಟೀಕೆ ರಾಯ್ಕರ್.. ಯೂ. ಯೂ ಭಟ್.. ಆಯ್ ಎಮ್ ನಾಯಕ್.. ಇಂಥಹ ರಸವತ್ತಾದ ಹೆಸರುಗಳು ಅಲ್ಲಿವೆ... !
ನಿಜಕ್ಕೂ ಉತ್ತರ ಕನ್ನಡ ಬಲು ಸೋಜಿಗ....
ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...
ಶುಭಾರವರೆ...
ತುಂಬಾ ಅರ್ಥಪೂರ್ಣವಾದ ಪ್ರತಿಕ್ರಿಯೆ ನಿಮ್ಮದು..
ಲೇಖನ ಬರೆದದ್ದು ಸಾರ್ಥಕ ಎನ್ನುಸುವಂಥಹ ಪ್ರತಿಕ್ರಿಯೆ...
ನಮ್ಮನ್ನು ಬಿಟ್ಟು...
ಉಳಿದವರ ಬಗೆಗೆ..
ಅವರ ವ್ಯಕ್ತಿತ್ವದ ಬಗೆಗೆ ಹಗುರವಾಗಿ ತೆಗೆದುಕೊಳ್ಳುವದು ನಮ್ಮ ಸ್ವಭಾವ...
ನಮ್ಮೆದುರಿಗೆ... ನಮ್ಮ ಅನುಭವದಲ್ಲಿರುವ ವ್ಯಕ್ತಿ.. ನಮ್ಮೊಡನೆ ಹೇಗಿದ್ದಾನೆ ?
ನಮ್ಮ ಅನುಭವದಲ್ಲಿ ಆ ವ್ಯಕ್ತಿ ನಮ್ಮೊಡನೆ ಹೇಗಿದ್ದಾನೆ ? ಎನ್ನುವದನ್ನು ಮರೆತುಬಿಡುತ್ತೇವೆ.
ಬೇರೆಯವರ ಮಾತುಗಳಿಗೆ ರೆಕ್ಕೆಪುಕ್ಕ ಹಚ್ಚಿಬಿಡುತ್ತೆವೆ..
ಗಾಸಿಪ್ ಬಗೆಗೆ ಅದೆಂಥದೋ ವಿಲಕ್ಷಣವಾದ ಖುಷಿ... !
ಅನುಭವಿಸುವರ ಸ್ಥಿತಿ ನರಕ ಯಾತನೆ...
ಲೇಖನ ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...
ಈ ಥರ ಅರ್ಧರ್ಧ ಬರೆದ್ರೆ ಕೋರ್ಟಲ್ಲಿ ಕೇಸ್ ಹಾಕ್ಬೇಕಾಗತ್ತೆ .... :)
K R ಹೆಗ್ದೆರಿಗೆ ಗುತ್ತಯ್ದಿಲ್ಲ್ಯ ?
ಕನಸು ಕಂಗಳ ಹುಡುಗ....
ಈಗ ಮದುವೆ ಆಗಿರೋ ಹುಡುಗಿಗೂ ಈ ಘಟನೆಗೂ ಸಂಬಂಧವಿಲ್ಲ..
ನನ್ನ ಮಾವ ಏರ್ ಫೋರ್ಸ್ ಆಫಿಸರ್...
ಈ ಹುಡುಗಿ ಯಾರು ಅಂತ ನನಗೂ ಗೊತ್ತಿಲ್ಲ...
ಈ ಘಟನೆಗೆ ಸಾಕ್ಷಿಯಾಗಿದ್ದ ನಮ್ಮ ಪ್ರಿನ್ಸಿಪಾಲರು ಈಗಲೂ ಇದ್ದಾರೆ..
ರಾಯ್ಸದ್ ಅವರು..
ಈಗ್ಗೆ ಕೆಲವು ವರ್ಷಗಳ ಹಿಂದೆ ನನ್ನ ತಮ್ಮನ ಮದುವೆಗೆ ಅವರು ಬಂದಿದ್ದರು..
ನನ್ನ ಗುರುತು ಸಿಗಲಿಲ್ಲ..
ಆಮೇಲೆ ವಿವರ ಹೇಳಿದ ಮೇಲೆ ತುಂಬಾ ಖುಷಿ ಪಟ್ಟರು..
ಎರಡೂ ಕೈಗಳಿಂದ ಹರಸಿದರು..
ನನ್ನಂಥಹ ಅನೇಕರಿಗೆ ತುಂಬಾ ಸಹಾಯ ಮಾಡಿದ್ದಾರೆ ಅವರು.
ಅನೇಕ ವಿದ್ಯಾರ್ಥಿಗಳಿಗೆ ಹಣದ ಸಹಾಯವನ್ನೂ ಮಾಡಿದ್ದಾರೆ..
ಅವರ ಶಿಸ್ತು... ದಕ್ಷತೆ.. ಅವರ ವ್ಯಕ್ತಿತ್ವ ಹಿರಿದು..
ಪತ್ರ ಪ್ರಸಂಗವನ್ನು ಇಷ್ಟಪಟ್ಟಿದ್ದಕ್ಕೆ ಪ್ರೀತಿಯ ವಂದನೆಗಳು...
Intersting...
Interesting...
Mast......Continue madu bega.......
Mast......Continue madu bega.......
:) :) :) :) :) :)
sopperrrrr .. adre mundenaytu,,??? bega barali part two...
ದೊಡ್ಡ ದೊಡ್ಡ ಅಕ್ಷರಗಳ ಚಂದಮಾಮ ಕಥೆ ಅದಕ್ಕಿಂತ ದೊಡ್ಡಪರದೆಯ ಮೇಲೆ ತೋರಿಸ್ತಾ...ಕಥೆಯ ಪಾತ್ರಧಾರಿಗಳು ಬರುವುದನ್ನೇ ಬಿಟ್ಟ ಬಾಯಿ...ಇಟ್ಕೊಂಡ್ ನೋಡೋ ಊರ ಪಡ್ಡೆ ಹೈಕ್ಳ ತರಹ ಆಗಿದ್ದೀನಿ ನಾನು...ಬೇಗ ಬರ್ಲಿ ಪಾತ್ರಗಳು...
ಇಲ್ಲಿವರೆಗೂ ಟೈಟಲ್ಸೇ ಆಯ್ತು...
ಆಮ್ಯಾಕ್ಕೆ...???????????????????????????????????
ರಸವತ್ತಾಗಿ ಬರಹ ಬಂದಿದೆ..ಈ ಘಟನೆ ನಿಜವಾಗಿಯೂ ನಡೆದಿದ್ದರೆ ( ಪತ್ರ ಬರೆದಿದ್ದು ನಿಜವಾಗಿದ್ದರೆ ಅಂತಲ್ಲಾ!!) ಆ ಹುಡುಗಿ / ಅವಳ ಅಪ್ಪ / ಅವಳ ಅಣ್ಣನಿಗೆ ಗೊತ್ತಾಗಿ ನಿಮ್ಮ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡಬಹುದು...???? :D
idi mosa...... bega bareyiri... odi anisike haaktene...
ಹ ಹ ಹ ಇಂತಹ ಘಟನೆಗಳು ನಡೆದಾಗ ಆಗುವ ಮಾನಸಿಕ ಆಘಾತ ಅನುಭವಿಸಿದವರಿಗೆ ಗೊತ್ತು, ನಿಮ್ಮ ಪುಣ್ಯ ಅಗಾ ಈಗಿನಂತೆ ಟಿ .ವಿ . ಚಾನಲ್ ಗಳ ಹಾವಳಿ ಇರಲಿಲ್ಲ ಇಲ್ಲದಿದ್ದರೆ, ಬಿ. ಪಿ . ಡಿ . ಹೆಗ್ಡೆ ,["ಬಿಳಿ ಪಂಚೆ ದೇವರು ಹೆಗಡೆ" ] , ಅವರನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು , ನಿಮ್ಮ ಗುಣಗಾನ ಮಾಡಿಸಿ ಬಿಡುತ್ತಿದ್ದರು . ಹಾಗಿದ್ರೆ ಮುಂದಿನ ಸಂಚಿಕೆಯಲ್ಲಿ " ಕೇಡಿ ಹೆಗಡೆ " ಕೈಯಲ್ಲಿ ಗೂಸಾ ತಿಂದ ಬಗ್ಗೆ ಅಥವಾ ಚಾಣಾಕ್ಷತನದಿಂದ ಬಜಾವಾದ ಬಗ್ಗೆ ಬೊಂಬಾಟ್ ಲೇಖನ ಇರುತ್ತೆ, ನೋವಿನ ದಿನಗಳ ಅನುಭವಕ್ಕೆ ನಗುವಿನ ಲೇಪನ ಹಚ್ಚಿದ ಲೇಖನ ಇದು. ಇಷ್ಟಾ ಆಯ್ತು. ಜೈ ಹೊ , ಪ್ರಕಾಶ್ ಜಿ
ಯಪ್ಪಾ.. ಮುಂದೇನಾಯ್ತು..?? ಯಾರವಳು..?? ಯಾರು ಬರೆದರು ಪತ್ರ ನಾ..?? ಯಾಕೆ ಬರೆದ್ರು..?? ಯಾಕೆ ಹಾಗೆ ಕಾಲೇಜಿನ ಗೋಡೆಗಳಿಗೆಲ್ಲ ಅಂಟಿಸಿದ್ರು..?? ಆ ಹುಡುಗಿ ಏನಾದಳು..?? ಆ ಹುಡುಗಿ ಮನಸ್ಥಿತಿ ಹೇಗಿತ್ತು..?? ಕಡೆಗೆ ನಿಮ್ ಕಥೆ ಏನಾಯ್ತು..?? ಅಭಿಪ್ರಾಯಗಳಿಗಿಂತ ಇಷ್ಟು ಪ್ರಶ್ನೆಗಳನ್ನ ಏಕ ಕಾಲಕ್ಕೆ ಹುಟ್ಟಿಸಿದ ಕುತೂಹಲಕರ ಬರಹ. ಕಳವಳದ ಕಥೆ ಆದರೂ ಕಳಕಳೆ ಇಂದ ಕೂಡಿರೋ ಹಾಗೆ ಬರೆಯೋ ನಿಮ್ಮ ಶೈಲಿಗೆ ಸಲಾಮು. ಮುಂದೇನಾಯ್ತು ಪ್ರಕಾಶಣ್ಣ.. ದಯವಿಟ್ಟು ಬೇಗ ಹೇಳಿ..
"ನಿಜ ಚಪ್ಪಲಿಗೆ ಹುಡುಕುತ್ತಿದ್ದಾಗ ಸುಳ್ಳು ಊರು ಸುತ್ತಿ ಬಂತಂತೆ" ಎನ್ನುವ ಮಾತಿನಂತೆ.. ಇಲ್ಲ ಸಲ್ಲದ ಸುದ್ಧಿಗಳು ಕಾಡ್ಗಿಚ್ಚಿನಂತೆ ಹಬ್ಬುತ್ತವೆ.. ನೀವು ಬಳಸುವ ವಿಶೇಷಣಗಳು, ಅದನ್ನ ವಿವರಿಸುವ ರೀತಿ.. ತುಂಬಾ ಹೆದರಿಕೆಯ ಪ್ರಸಂಗವನ್ನು ನಗೆಗಡಲಲ್ಲಿ ತೇಲಿಸುತ್ತದೆ. "ಛಲ ಇದ್ದಾಗ ಬಲ ತಾನಾಗೆ ಬರುತ್ತದೆ" ಎನ್ನುತ್ತಾರೆ ಹಿರಿಯರು. ನಿಮ್ಮ ಜೀವನದ ಆರಂಭಿಕ ಹಿಂಸೆಗಳನ್ನು ಸವಾಲಾಗಿ ತೆಗೆದುಕೊಂಡು "ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ" ಎನ್ನುವ ಹಾಡಿನಂತೆ ಧೈರ್ಯದಿಂದ ನಿಂತು ನೆಲೆಕಂಡಿರುವ ನಿಮ್ಮ ಬದುಕೇ ನಮಗೆಲ್ಲ ಒಂದು ಮಾರ್ಗ ದೀಪ. ಒಂದು ಸೊಂಪಾದ ಪ್ರಸಂಗವನ್ನು ಹಾಸ್ಯ, ಕುತೂಹಲ, ಭಯ ಹೀಗೆ ಎಲ್ಲಾ ನವರಸಗಳನ್ನು ಸೇರಿಸಿ ಬೆರೆಸಿ ಬಡಿಸುವ ನಿಮ್ಮ ಬರಹದ ಶೈಲಿಗೆ ನಮಸ್ಕಾರಗಳು. ಮುಂದಿನ ಕಂತಿನಲ್ಲಿ ಹುಡುಗಿಯ ದರ್ಶನ ಮಾಡಿಸುತ್ತೀರಿ ಎನ್ನುವ ನಂಬಿಕೆಯಿಂದ.. ಹಾಗು ಪಂಚೆ ಮತ್ತು ಕೇಡಿ ಏನು ಮಾಡುತ್ತಾರೆ ಎನ್ನುವ ಕುತೂಹಲದಿಂದ ಬೇಯುತ್ತಿದ್ದೇನೆ. ಸೂಪರ್ ಪ್ರಕಾಶಣ್ಣ!
ಹಾಯ್ ಪ್ರಕಾಶ ಅಣ್ಣ
ಬಿಳಿ ಪಂಚೆ ದೇವರ ಅಣ್ಣನ ಮಗಳು ಹೇಗಿದ್ದಾಳೆ?
ಸರ್..)
ಅಹಾ! ಬಹಳ ಕುತೂಹಲಕಾರಿಯಾಗಿದೆ ಲೇಖನ, ದಯವಿಟ್ಟು ಬೇಗ ಮುಂದುವರಿಸಿ... ನೀವು ನಿಜವಾಗಿ ಇಷ್ಟೆಲ್ಲಾ ಸನ್ನಿವೇಶಗಳನ್ನು ಅನುಭವಿಸಿದ್ದಿರಾ ಎಂದು ಆಶ್ಚರ್ಯವಾಗುತ್ತದೆ!
ಪ್ರಕಾಶಣ್ಣಾ ಸೂಪರ್.. ಮುಂದೆ ಏನಾಯ್ತು ಬೇಗ ಹೇಳಿ.. ತುಂಬಾ ದಿವ್ಸ ಕಾಯಿಸ್ಬೇಡಿ..
ಎಸ್ಟೋ ವರ್ಷದ ನಂತರ ಪುನಃ ಬಂದು ಓದಿದೆ... ಹೀಗೆ ಅರ್ಧಕ್ಕೆ ನಿಲ್ಲಿಸಿ ತವಕದಲ್ಲಿ ಇಡಬಾರದು ಪ್ರಕಾಶಣ್ಣ ..... ಉಳಿದ ಕಥೆ ಬೇಗ ಹೆಳಿ... ದ್ರೌ ಪದಿ... ಬ್ರಹನ್ನಳೆ ಸಂಭಾಷಣೆ ಅದ್ಬುತ ವಾಗಿತ್ತು.
Post a Comment