Thursday, October 27, 2011

ಬಸ್ ನಂಬರ್ "ಇಪ್ಪತ್ತೆಂಟು..ಮೂವತ್ತೆರಡು "..... ಹುಕ್ಲಕೈಗೆ ಹೋಗ್ತದೆ......!!


ಶಾರೀ ಮನೆಗೆ ಬಂದಾಗ ಮಧ್ಯಾಹ್ನ ಹನ್ನೊಂದು ಗಂಟೆ...


ಭರ್ಜರಿ ಸ್ವಾಗತ ಸಿಕ್ಕಿತು...


ಪುಟಾಣಿಯೊಬ್ಬಳು ತಂಬಿಗೆಯಲ್ಲಿ ನೀರಿಟ್ಟು ನಮಸ್ಕರಿಸಿ ..
ಒಳಗೆ ಓಡಿದಳು...
ಶಾರೀಗೂ ಖುಷಿಯಾಗಿತ್ತು...


ಗಣಪ್ತಿ ಬಾವ ...
ಬಾಯಲ್ಲಿದ್ದ ಎಲೆ ಅಡಿಕೆಯನ್ನು ಮತ್ತೊಂದು ಪಕ್ಕಕ್ಕೆ ಇಟ್ಟುಕೊಂಡು ಮಾತನಾಡಿಸಿದ..


"ಪ್ರಕಾಶು..
ಬೆಂಗಳೂರಿನ ಕಡೆ ಏನು ವಿಶೇಷ?
ನಮ್ಮ ರಾಜಕೀಯದವರಿಗೆ ಏನಾಗಿದೆ ಮಾರಾಯಾ ?
ಎಲ್ಲರೂ ಜೈಲಿಗೆ ಹೋಗ್ತಿದ್ದಾರೆ... ಹಗರಣ ಮಾಡ್ತಿದ್ದಾರೆ.."


"ಹೌದು ಗಣಪ್ತಿ ಬಾವ..
ನಾವು ಓಟು ಹಾಕಿದ ಜನರ ಬಗೆಗೆ ಬೇಸರ ಆಗುತ್ತದೆ..
ದುಃಖವೂ ಆಗುತ್ತದೆ..."


ಗಣಪ್ತಿ  ಭಾವನೂ ಅದಕ್ಕೆ ತಲೆ ಹಾಕಿದ..
ಅಷ್ಟರಲ್ಲಿ ಶಾರಿ ಬಾಯಿ ಹಾಕಿದಳು..


" ಪ್ರಕಾಶು...
ಇನ್ನೊಂದು ಬೇಜಾರು ಸಂಗತಿ ಇದೆ...
ನಾನೂ ದಿನಾಲೂ ಪೇಪರ್ ಓದ್ತಿನಲ್ಲಾ..


ನಮ್ಮ ದೇಶದಲ್ಲಿ ಬೇಜಾರು ಮಾಡ್ಕೊಳ್ಳೋಕೆ... 
ದುಃಖ ಪಟ್ಕೊಳ್ಳೋಕೆ..
ಎಲ್ಲದಕ್ಕೂ ಜಾತಿ ಬೇಕು...


ಇನ್ನೊಂದು ವಿಷಯ ಗೊತ್ತಾ?


ಅರೋಪ ಮಾಡ್ಳಿಕ್ಕೆ..
ಆರೋಪ ಸಮರ್ಥನೆ ಮಾಡಿಕೊಳ್ಳಲಿಕ್ಕೆ  ಜಾತಿ ಜಾತಿ ಬೇಕಾಗ್ತದೆ....


ನಿನ್ನೆ ಟಿವಿ ಚಾನೆಲ್ಲಿನಲ್ಲಿ "ತಿರುಪತಿ ತಿಮ್ಮಪ್ಪ ದೇವರು" ಯಾವ ಜಾತಿಯವ ಅಂತ ಚರ್ಚೆ ನಡೆಯುತ್ತಿತ್ತು... !!


ಜಾತ್ಯಾತೀತ ದೇಶದಲ್ಲಿ ಜಾತಿ ಮೊದಲಿಗೆ ಬೇಕು..
ಎಲ್ಲ ಜಾತಿ, ಮಠ, ಧರ್ಮ ಮೊದಲು...
ನಮ್ಮ ದೇಶ ಆಮೇಲೆ...
ಅಂಬೇಡ್ಕರ್ರು ಇದ್ದಿದ್ರೆ ಯಾಕಾದ್ರೂ ಸಂವಿಧಾನ ಮಾಡಿಬಿಟ್ಟೆ ಅಂತಿದ್ರೇನೊ !!.."


ಗಣಪ್ತಿ ಬಾವ  ಬಾಯಲ್ಲಿದ್ದ ಎಲೆ ಅಡಿಕೆಯನ್ನು ಇನ್ನೊಂದು ಪಕ್ಕಕ್ಕೆ ಸರಿಸಿದ..


ಅಷ್ಟರಲ್ಲಿ ಮನೆಯ ಫೋನ್ ರಿಂಗಾಯಿತು...


ಗಣಪ್ತಿ  ಭಾವ ಫೋನ್ ತಗೊಂಡ... ಮಾತಾಡಿದ..
ಫೋನ್ ಇಟ್ಟು ಶಾರಿಗೆ ಹೇಳಿದ..


"ಶಾರೀ..
ಇವತ್ತಿನ ಬೆಳಗಿನ ಬಸ್ಸಿಗೆ ..
 ನಮ್ಮ ಮಗಳು ಅಳಿಯ "ಹುಕ್ಲಕೈ ಬಸ್ಸಿಗೆ "  ಹೊರ್ಟಿದ್ದಾರಂತೆ...
ಊಟಕ್ಕೆ ರೆಡಿ ಮಾಡು..."


"ಮಧ್ಯಾಹ್ನ ಬಂದಿದ್ರೆ ಚೆನ್ನಾಗಿತ್ತು...
ಸಾಯಂಕಾಲ ಎಷ್ಟು ಹೊತ್ತಿಗೆ ಬರ್ತಾರೋ.. !
ಏನು ಕಥೆಯೋ... !"


ಶಾರಿ ಬೇಸರ ಪಟ್ಟುಕೊಂಡಳು..


ನನ್ನ ಮಡದಿಗೆ ಆಶ್ಚರ್ಯ..


" ಬೆಳಗಿನ  ಬಸ್ಸಿಗೆ ಬರ್ತಿದ್ದಾರಲ್ಲ.. 
ಇದೀಗ ಇನ್ನೂ ಹನ್ನೊಂದು ಗಂಟೆ..
ಎಷ್ಟೇ ತಡ ಆದರೂ ಮಧ್ಯಾಹ್ನ ಬಂದೇ ಬರ್ತಾರಲ್ವಾ?"


"ಇಲ್ಲಾ.. ಮಾರಾಯ್ತಿ...
ನಮ್ಮೂರಿನ ಬಸ್ಸಿಗೆ ಹೊರಡುವ.. 
ತಲುಪುವ ಸಮಯ  ಯಾರಿಗೂ ಹೇಳಲಿಕ್ಕೆ ಆಗೋದಿಲ್ಲ...


ಆದರೆ..
ಬಸ್ ನಿಲ್ದಾಣದಿಂದ ಹೊರಟಮೇಲೆ.. 
ಎಷ್ಟೇ ಹೊತ್ತಾದರೂ ನಮ್ಮೂರಿಗೆ ಬಂದೇ ಬರ್ತದೆ..
ಇದು ಮಾತ್ರ ಗ್ಯಾರೆಂಟಿ.."


ಈಗ ಮತ್ತೊಮ್ಮೆ  ಆಶ್ಚರ್ಯ  ಪಡುವ ಸರದಿ ನನ್ನದು..!


"ಅಷ್ಟೇ ಅಲ್ಲ ಪ್ರಕಾಶು...


ಎಲ್ಲೋ ವರ್ಷಕ್ಕೊಮ್ಮೆ ...
ನಮ್ಮೂರ ಬಸ್ಸು ಸರಿಯಾದ ಸಮಯಕ್ಕೆ ಬಂದು ಬಿಟ್ಟರೆ..
ನಮಗೆಲ್ಲರಿಗೂ ಏನೋ ಬೇಸರ...


ನಮ್ಮೂರಲ್ಲಿ ಪ್ರತಿನಿತ್ಯ ಬೆಟ್ಟಿಂಗ್ ಕೂಡ ನಡೆಯುತ್ತದೆ...!


ಬೆಳಿಗ್ಗೆ ಹನ್ನೊಂದು ಗಂಟೆ ಬಸ್ಸು ...
ರಾತ್ರಿ ಎಷ್ಟು ಗಂಟೆಗೆ ತಲುಪುತ್ತದೆ ಅಂತ... !!!


ಒಂಥರಾ "ಓಸೀ" ಆಟ ಇತ್ತಲ್ಲ... ಅದೇ ತರಹದ  ಬೆಟ್ಟಿಂಗ್ ಈಗಲೂ ಇದೆ... !!"


ಗಣಪ್ತಿ  ಭಾವ ಮತ್ತೊಂದು ರೌಂಡ್ ಎಲೆ ಅಡಿಕೆ ಬಾಯಿಗೆ ಹಾಕಿದ..


"ಪ್ರಕಾಶು..
ಒಂದು ಮಜಾ ವಿಷಯ ಗೊತ್ತಾ?
ಕಳೆದ ತಿಂಗಳು ನಮ್ಮೂರ " ಹುಕ್ಲಕೈ" ಬಸ್ಸು ಕಳೆದು ಹೋಗಿತ್ತು...


ಅದೂ ಬಸ್ ನಿಲ್ದಾಣದಲ್ಲಿದ್ದ ಬಸ್ಸು...!!


ಹಗಲು ಹೊತ್ತಿನಲ್ಲಿ !!


ಆಮೇಲೆ ಹದಿನೈದು ದಿನದ ನಂತರ ಸಿಕ್ಕಿತ್ತು...!!"


ನನ್ನ ತಲೆಯಲ್ಲಿ  ಅಳಿದುಳಿದ  ಹದಿನೈದು ಕೂದಲೂ ..
ಉದುರಿ ಹೋದ ಅನುಭವ ನನಗಾಯ್ತು !!


"ಏನು ಗಣಪ್ತಿ  ಬಾವಯ್ಯಾ...?
ಬಸ್ಸನ್ನು ಕದ್ದುಕೊಂಡು ಹೋದ್ರಾ..?"


"ಅದೊಂದು ದೊಡ್ಡ ಕಥೆ...
ಬುಡದಿಂದ ಹೇಳ್ತೀನಿ ಕೇಳು..."


ನನ್ನಾಕೆ.. 
ಮತ್ತು ಆಶೀಷ್ ಕಿವಿ ನೆಟ್ಟಗೆ ಮಾಡಿಕೊಂಡು ಇನ್ನೂ ಹತ್ತಿರ ಬಂದರು...


" ಆ ದಿನ.. ಮಂಗಳವಾರ ..
ಪಟ್ಟಣದಲ್ಲಿ ಸಂತೆ... ಸಿಕ್ಕಾಪಟ್ಟೆ ಜನ...


ಬೆಳಿಗ್ಗೆ ಹನ್ನೊಂದು ಗಂಟೆಗೆ ಬಿಡುವ ಬಸ್ಸು ಮಧ್ಯಾಹ್ನ ಒಂದು ಗಂಟೆಯಾದ್ರೂ ಬಿಡಲಿಲ್ಲ...
ಜನರು.. ಬಸ್ಸು ಹತ್ತೋದು.. ಇಳಿಯೋದು ಮಾಡುತ್ತ ಇದ್ರು.."


"ಬಸ್ಸು ಹಾಳಾಗಿತ್ತೇನೋ.. ಅಲ್ವಾ?"


"ಇಲ್ಲಾ.. ಮಾರಾಯಾ...
ಬಸ್ಸು ಬಸ್ಸು ನಿಲ್ದಾಣದಲ್ಲೇ ಇತ್ತು...
ಕಂಡಕ್ಟರ್ ಕೂಡ ಅಲ್ಲೇ ಒಡಾಡ್ತಾ ಇದ್ದ...
ಡ್ರೈವರ್ ಕೂಡ ಅಲ್ಲೇ ಟೀ ಕುಡಿತಾ ಇದ್ದ...


ಎಷ್ಟೇ ಹೊತ್ತಾದ್ರೂ ಬಸ್ಸು ಬಿಡಲಿಲ್ಲ.. ಜನರು ಹೋಗಿ ಕಂಪ್ಲೇಂಟು ಮಾಡಿದರು...


ಈಗ ಅಲ್ಲಿನ ಆಫೀಸರ್ರುಗಳಿಗೆ ಎಚ್ಚರ ಆಯ್ತು... 
ಮೈಕಿನಿಂದ ಜೋರಾಗಿ ಅನೌನ್ಸ್ ಮಾಡಿದರು...


" ಬಸ್ ನಂಬರ್  "ಇಪ್ಪತ್ತೆಂಟು... ಮೂವತ್ತೆರಡು"  ...
ಹುಕ್ಲಕೈಗೆ.. ಹೋಗ್ತದೆ...
ಕಾನಸೂರು.. 
ಅಜ್ಜಿಬಳ್ಳು..ಯಡಳ್ಳಿ ಹೋಗುವವರು ಇಪ್ಪತ್ತೆಂಟು ಮುವತ್ತೆರಡು ಬಸ್ಸನಲ್ಲಿ ಕುಳಿತುಕೊಳ್ಳಿ.."


ಜನ ಓಡಿದರು...


ಅಲ್ಲಿ  ಬಸ್ಸೇ... ಇರಲಿಲ್ಲ... !!


ಎಲ್ಲರಿಗೂ ಆಶ್ಚರ್ಯ... !!


"ವಾಪಸ್ಸು ಡಿಪೋಕ್ಕೆ  ತೆಗೆದು ಕೊಂಡು ಹೋದ್ರೇನೋ.. ಅಲ್ವಾ?"


"ಇಲ್ಲಾ ಮಾರಾಯಾ... !!
ಮ್ಯಾನೇಜರ್ರು ಡಿಪೋಗೆ ಫೋನ್ ಮಾಡಿದರು..


"ನಾವು ನಿಲ್ದಾಣದಿಂದ ಬಸ್ಸು ತಂದಿಲ್ಲ ಎನ್ನುವ ಉತ್ತರ ಸಿಕ್ಕಿತು.! "


"ಹಾಗಾದರೆ ಬಸ್ಸು ಎಲ್ಲಿ ಹೋಯ್ತು...?"


" ಎಲ್ಲರಿಗೂ ಕುತೂಹಲವಾಯ್ತು...


ಅಲ್ಲಿನ ಸಿಬ್ಬಂದಿ ಅಕ್ಕಪಕ್ಕದ ರಸ್ತೆ..
ಓಣಿ.. ಗಲ್ಲಿ...
ಎಲ್ಲವನ್ನೂ ಹುಡುಕಿದರು.. ಬಸ್ಸು ಸಿಗಲಿಲ್ಲ...!!


"ಹುಕ್ಲಕೈ ಬಸ್ಸು ಕಳುವಾಗಿ ಹೋಯ್ತಂತೆ...!!!!! .."


ಇದು ಬಹಳ ದೊಡ್ಡ ವಿಷಯವೇ ಆಗಿ ಹೋಯ್ತು... !!
ಮರುದಿನ ಅಲ್ಲಿನ ಲೋಕಲ್ ಪತ್ರಿಕೆಗಳಲ್ಲಿ ಮುಖ ಪುಟದ ಸುದ್ಧಿ ಆಯ್ತು.. !!


" ಗಣಪ್ತಿ ಭಾವಾ... ಬಸ್ಸು ಎಲ್ಲಿ ಹೋಯ್ತು...?"


"ಬಹುಷಃ ...
ಬಸ್ ನಿಲ್ದಾಣದ ಮ್ಯಾನೇಜರ್ರು ಪೋಲಿಸ್ ಕಂಪ್ಲೇಂಟು ಕೊಟ್ರು ಅಂತ ಅನಿಸ್ತದೆ...
ಪೋಲಿಸರೂ ಬಂದರು..."


ಆಶೀಷ್ ಗೆ ಕೆಟ್ಟ ಕುತೂಹಲ ಜಾಸ್ತಿ ಆಯ್ತು...


"ಗಣಪ್ತಿ ಮಾಮಾ.. 
ಪೋಲಿಸರು ಬಸ್ಸನ್ನು ಹುಡುಕಿದ್ರಾ...?"


"ಇಲ್ಲಾ.. ಪುಟ್ಟಾ...
ಎಲ್ಲಿ ಅಂತ ಹುಡುಕ್ತಾರೆ...?
ಅದೂ ಮಟ ಮಟ ಮಧ್ಯಾಹ್ನ ...!
ಬಸ್ ನಿಲ್ದಾಣದಲ್ಲಿದ್ದ ಬಸ್ಸು ..
ಕಳುವಾಗಿ ಹೋಯ್ತು ಅಂದ್ರೆ ಏನು ಕಥೆ ?
ಬಸ್ಸಿಗೆ ಸಂಬಂಧ ಪಟ್ಟವರಿಗೆಲ್ಲ ಅವಮಾನ ಅಲ್ವಾ?"


" ಏನು ಮಾಡಿದರು.....?"


"ಯಾರಾದ್ರೂ ಏನು ಮಾಡ್ತಾರೆ?..


ಹೀಗೆ ಹತ್ತು ದಿನ ಕಳೆಯಿತು...


ಕಳೆದು ಹೋಗಿದ್ದು  ಸಿಗಲಿಕ್ಕೆ ಅದೇನು ಎಮ್ಮೆ ನಾ? 
ಹಸು ನಾ?


ಒಟ್ಟಿನಲ್ಲಿ  ಬಸ್ಸು ಸಿಗಲಿಲ್ಲ... !!
ಎಲ್ಲರ ಬಾಯಲ್ಲೂ ಒಂದೇ ಮಾತು ... !


" ಹುಕ್ಲಕೈ ಬಸ್ಸು ಕಳುವಾಗಿ ಹೋಯ್ತಂತೆ !!"


"ಮುಂದೆ ಏನಾಯ್ತು,...?"


"ಒಂದು ದಿನ ಪಕ್ಕದ ಊರಿನ   "ಅಟ್ಲಕಾಯಿ ಹೆಗಡೆ" ಸಿರ್ಸಿಗೆ ಹೋಗಿದ್ದ..."


"ಏನದು "ಅಟ್ಲಕಾಯಿ ಹೆಗಡೆ..".. ?.. !!!...


"ಅಯ್ಯೋ ಮಾರಾಯಾ..
ಅದು ಅವನ ಅಡ್ಡ ಹೆಸರು...!!


ಆತ ಯಾವುದೇ ವಿಷಯ ಇರಲಿ...
ಚೆನ್ನಾಗಿ ನೋರೆ ಬರುವ ಹಾಗೆ ಮಸೆದು ಮಸೆದು ...
ತಿಕ್ಕಿ.. ತಿಕ್ಕಿ...
ವಿಚಾರ ಮಾಡ್ತಾನೆ.. ನೊರೆ ತಂದು ಇಡ್ತಾನೆ...


ಹಾಗಾಗಿ ನಾವೆಲ್ಲ ಅವನಿಗೆ  "ಅಟ್ಲಕಾಯಿ ಹೆಗಡೆ" ಅಂತ ಕರೆಯೋದು..."


"ಸರಿ... ಮುಂದೆ ಏನಾಯ್ತು...?"


"ಈ ಅಟ್ಲಕಾಯಿ ಹೆಗಡೆಗೆ  ಯಾರೋಹೇಳಿದ್ರು .. 
"ಹುಕ್ಲಕೈ ಬಸ್ಸು ಕಳುವಾಗಿದೆ.. ಇನ್ನೂ ಸಿಕ್ಕಿಲ್ಲ" ಅಂತ..."


ಆತ ಸೀದಾ ಬಸ್ ನಿಲ್ದಾಣದ ಮ್ಯಾನೇಜರ್ರ ಬಳಿ ಹೋಗಿ ಹೇಳಿದ..


"ನಮ್ಮೂರ ಶಾಲೆ ಮನೆ ಹತ್ರ ...
ಒಂದು ಬಸ್ಸು ಬಂದು ಸುಮ್ನೆ ನಿಂತುಕೊಂಡಿದೆ......
ಹತ್ತು ದಿನದಿಂದ  ಆ ಬಸ್ಸು ಅಲ್ಲೇ ಇದೆ..!!..."


ಮ್ಯಾನೇಜರ್ರಿಗೆ ಹೊಟ್ಟೆ ಒಡೆದು ಹೋಗುವಷ್ಟು ಸಂತೋಷ ಆಯ್ತು..
ಅವನನ್ನು ತಬ್ಬಿ ಮುದ್ದಾಡುವಷ್ಟು ಖುಶಿಆಯ್ತು... !!


"ನೋಡಿ.. 
ದಮ್ಮಯ್ಯ...
ಇಲ್ಲಿ ನಮ್ಮ ಮರ್ಯಾದೆ ಮೂರುಕಾಸಿಗೆ ಮಾರಾಟ ಆಗ್ತ ಇದೆ..


ಇಲ್ಲಿ ಬಂದವರೆಲ್ಲ ..


"ಹುಕ್ಲಕೈ  ಬಸ್ಸು ಸಿಗ್ತಾ?
ಹುಕ್ಲಕೈ ಬಸ್ಸು ಸಿಗ್ತಾ..?' 


ಅಂತ ಕೇಳಿ ಕೇಳಿ ನನ್ನ ತಲೆ ತಿಂತಾ ಇದ್ದಾರೆ...!


ಎಲ್ಲಾದ್ರೂ ನೀರು ಇರುವ ಹೊಳೆಗೆ ಹಾರಿಬಿಡೋಣ ಅಂತ ಅನ್ನಿಸ್ತಾ ಇತ್ತು...!
ದಯವಿಟ್ಟು ಬನ್ನಿ .. 
ಎಲ್ಲಿದೆ ಅಂತ ತೋರಿಸಿ..."


ಮ್ಯಾನೇಜರ್ರು ಪೋಲಿಸರಿಗೆ ಫೋನ್ ಮಾಡಿದರು...


ಪೋಲಿಸರನ್ನು ನೋಡಿ ಅಟ್ಲಕಾಯಿ ಹೆಗಡೇರಿಗೆ ಹೆದರಿಕೆ ಆದ್ರೂ ..
ಪೋಲಿಸ್ ಜೀಪು ಹತ್ತಿದರು...


ಇಲ್ಲಿ ಶಾಲೆ ಮನೆ ಹತ್ತಿರ ಬಂದು ನೋಡಿದರೆ...


"ಹುಕ್ಲಕೈ ಬಸ್ಸು"  ತಣ್ಣಗೆ ನಿಂತುಕೊಂಡಿದೆ.....!!


"ಯಾರು ಈ ಬಸ್ಸುನ್ನು ತಂದು ಇಲ್ಲಿ ನಿಲ್ಲಿಸಿದ್ದಾರೆ...? !!..’


ಎಲ್ಲರೂ ತಲೆ ಕೆರೆದು ಕೊಂಡರು...


ಬಹಳ ವಿಚಾರ ಮಾಡಿ ಅಟ್ಲಕಾಯಿ ಹೆಗಡೆ ಹೇಳಿದ..


"ಸರ್ರಾ...
ಇದು ನಮ್ಮ ಕೇಡಿಭಟ್ರ ಕೆಲ್ಸ ಆಗಿರಬಹುದು...
ಅವರೊಬ್ಬರಿಗೆ ಡ್ರೈವಿಂಗು ಬರ್ತದೆ...
ತುಂಬಾ ಒಳ್ಳೆಯ ಜನ..
ಆದರೆ.. ತುಂಬಾ ಕೊಪಿಷ್ಟರು... 
ಹುಶಾರಿಯಿಂದ ಮಾತನಾಡಬೇಕು..
ತಿಳಿತಾ..?"


ಸರಿ...


ಎಲ್ಲರೂ ಕೇಡಿ ಭಟ್ರ ಮನೆಗೆ ಹೋದರು...


ಕೇಡಿ ಭಟ್ರು..ಎಮ್ಮೆಗೆ ಸ್ನಾನ ಮಾಡಿಸ್ತ ಇದ್ದರು...


" ಕೇಡಿ ಭಟ್ರೆ...
ಒಂದು ವಿಷಯಾ..ಬೇಜಾರು ಮಾಡ್ಕೋಬೇಡಿ...
ಹುಕ್ಲಕೈ ಬಸ್ಸು ತಂದಿದ್ದು ನೀವಾ...?"


ಕೇಡಿ ಭಟ್ರಿಗೆ ಎಲ್ಲಿಲ್ಲದ ಕೆಂಡಾ ಮಂಡಲ  ಕೋಪ ಬಂತು...!!


"ಹೌದ್ರಿ... !!
ನಾನೇ... ತಂದಿದ್ದು...!  
ಏನೀಗಾ..?...
ಏನು ಮಾಡ್ತೀರ್ರೀ..ಈಗಾ .?


ಮಾತನಾಡಲಿಕ್ಕೆ ಬಂದವರು ಕಂಗಾಲಾದರು...!
ಕಣ್ಣು ಕೆಂಪಗೆ ಮಾಡಿಕೊಂಡು  ಭಟ್ರು ಇನ್ನೂ ಜೋರಾಗಿ ಹೇಳಿದ್ರು...


" ಅಲ್ರೀ....
 ಅವತ್ತು ಹನ್ನೊಂದು ಗಂಟೆಗೆ ಬಿಡೋ ಬಸ್ಸನ್ನು ..
ಒಂದು ಗಂಟೆ ಆದ್ರೂ ಬಿಡಲಿಲ್ಲ..!


ಕಂಡಕ್ಟರ್ ಕೇಳಿದ್ರೆ "ಡ್ರೈವರ್ ರಿಪೋರ್ಟ್ ಮಾಡ್ಲಿಲ್ಲ" ಅಂತಾರೆ..


ಡ್ರೈವರ್ರು ಕೇಳಿದ್ರೆ... "ನನಗೆ ಯಾರೋ ಹೇಳಿಲ್ಲ ಅಂತಾರೆ.."...


ಮ್ಯಾನೇಜರ್ರು ಕೇಳಿದ್ರೆ "ಬಸ್ಸು ಬಂದಿದ್ದ ಬಗೆಗೆ ಏನೂ ಗೊತ್ತಿಲ್ಲ" ಅಂತ ಹೇಳ್ತಾರೆ...


ನನಗೆ ಸಿಟ್ಟು ಬಂತು...


ಬಸ್ಸನ್ನು ಇಲ್ಲಿ ತಂದಿಟ್ಟಿದ್ದೇನೆ...


ನನ್ನ ಮೇಲೆ ಪೋಲಿಸ್ ಕೇಸ್ ಹಾಕ್ತೀರಾ...? 
ಹಾಕಿ...
ನಾನೂ ಕಾನೂನು ಓದಿದ್ದೇನೆ ..
ಒಂದು ಕೈ ನೋಡ್ಕೋತೇನೆ..."


ಎಂದು ಅಬ್ಬರಿಸಿದ...


ಅಷ್ಟರಲ್ಲಿ  ಅಟ್ಲಕಾಯಿ ಹೆಗಡೆ.. ಮ್ಯಾನೆಜರ್ರಿಗೆ ಕಿವಿಯಲ್ಲಿ ಕಿಸಿಪಿಸಿ ಮಾತನಾಡಿದ..


"ಮ್ಯಾನೆಜರ್ರೆ..
ಇವರಿಗೆ ನಮ್ಮೂರಲ್ಲಿ ಭಾರಿ ಜನ ಬೆಂಬಲ ಉಂಟು..
ಹುಷಾರಿ...
ಇವರನ್ನು ಎದುರು ಹಾಕ್ಕೊಬೇಡಿ..."


ಬಸ್ ಮ್ಯಾನೇಜರ್ರಿಗೆ ಏನು ಮಾಡ್ಬೇಕು ಅಂತ ಗೊತ್ತಾಗ್ಲಿಲ್ಲ...
ಬಹಳ ವಿಚಾರ ಮಾಡಿ...


"ಆಗಿದ್ದು ಆಗಿ ಹೋಯ್ತು...
ಭಟ್ರೆ... 
ಇನ್ನು ಮುಂದೆ ಹೀಗೆ ಮಾಡಬೇಡಿ"


 ಅಂತ.. ಬಸ್ಸು ತಗೊಂಡು  ಬಂದ್ರು.... "


ನಮಗೆಲ್ಲರಿಗೂ ಹೊಟ್ಟೆ ಹುಣ್ಣಾಗುವಷ್ಟು ನಗು...!!
ತಡೆಯಲಿಕ್ಕೆ ಆಗ್ಲಿಲ್ಲ...!


ಆಶೀಷ್ ಗೆ ಒಂದು ಅನುಮಾನ.. !!


"ಗಣಪ್ತಿ  ಮಾಮಾ.....
ಕೇಡಿ ಭಟ್ರು  ಅಂದ್ರೆ ಏನದು?
ಅದೆಂಥಾ ವಿಚಿತ್ರ ಹೆಸರು...?.. !!.."


ಗಣಪ್ತಿ ಬಾವ ಬಾಯಿತುಂಬಾ ಎಲೆ ಅಡಿಕೆ ಇಟ್ಟುಕೊಂಡೇ ನಗೆಯಾಡಿದ...


" ಅಯ್ಯೋ.. 
ಅದು ಅವರ  ಹೆಸರು...!
" ಕೃಷ್ಣಯ್ಯ  ದಶರಥ  ಭಟ್ " ಅಂತ..


ಅದನ್ನು ಶಾರ್ಟ್ ಆಗಿ ಇಂಗ್ಲಿಷಿನಲ್ಲಿ  "ಕೆ.ಡಿ. ಭಟ್ " ಅಂತ ಕರಿತಾರೆ...
ಅವರು ಕೇಡಿ ಅಲ್ಲ..
ತುಂಬಾ ತಂಬಾ.. ಒಳ್ಳೆ ಮನುಷ್ಯ...! 
ಊರಿನಲ್ಲಿ ಎಲ್ಲರಿಗೂ ಬೇಕಾದವರು...!


ಇನ್ನೂ ಒಂದು ವಿಷ್ಯಾ ಹೇಳ್ತೀನಿ ಕೇಳು..
ಕೇಡಿ ಭಟ್ರ ತಮ್ಮನ ಹೆಸರು "ಭಾಸ್ಕರ ದಶರಥ ಭಟ್"...


ಇಂಗ್ಲಿಷಿನಲ್ಲಿ  "ಬೀಡಿ  ಭಟ್" ಅಂತ..


ಆ ಮನುಷ್ಯನಿಗೆ ತಂಬಾಕು ಚಟ ಇಲ್ಲವೇ.. .. ಇಲ್ಲ....!! .."


ಮತ್ತೊಮ್ಮೆ ನಮಗೆಲ್ಲ ನಗು ಉಕ್ಕಿತು.....





(ಪ್ರೀತಿಯ ಓದುಗ ಬಂಧುಗಳಿಗೆ 
ಬೆಳಕಿನ ಹಬ್ಬದ ಶುಭಾಶಯಗಳು... )....


ಈ ಬಸ್ಸಿಗೆ ಸಂಬಂಧ ಪಟ್ಟ ಇನ್ನು ಕೆಲವು ಸಂಗತಿಗಳಿವೆ...!
ದಯವಿಟ್ಟು ಪ್ರತಿಕ್ರಿಯೆಗಳನ್ನು ಓದಿ....




ಆಗ..
ಬಸ್ ನಿಲ್ದಾಣಗಳಲ್ಲಿ ಇದೆ ರೀತಿ..
ಇದೆ ಧ್ವನಿಯಲ್ಲಿ..
ಇದೆ ಧಾಟಿಯಲ್ಲಿ ಬಸ್ ಬಗೆಗೆ ವಿವರಗಳನ್ನು ಕೊಡುತ್ತಿದ್ದರು..

ಇದನ್ನು ಓದಿದವರು ನಮ್ಮ ಪ್ರೀತಿಯ "ಗಂಗಣ್ಣ"...

41 comments:

ಜಲನಯನ said...

ಹಹಹ...ಬಸ್ ಕಳೆದುಹೋಗೋದು...?? ನನಗೂ ಕುತೂಹಲ...ಆಶಿಸ್ ಥರ...ಆತುರಾತುರ ಲೈನು ಎಗರಿಸಿ ಓದಿದ್ದು..ಹಹಹ ಕೇಡೀ ಹೆಗಡೆ.. ಎಂಥ ಕೇಡಿಲ್ಲದ ಕೆಲ್ಸ ಮಾಡಿದ್ದು...?? ಕೊಟ್ರಲ್ಲಾ ಕಡೇಗೂ ಕದ್ದಮಾಲನ್ನ...
ಚನ್ನಾಗಿದೆ ಪ್ರಸಂಗ...

HegdeG said...

LOL....olleya patha haagu balasida hesarugalu :D
Super kathe :)

Ittigecement said...

ಆಜಾದೂ...

ನಮ್ಮೂರ ಕಡೆ ಹೆಸರನ್ನು ಹೆಚ್ಚಾಗಿ ಹಾಗೇ ಕರೆಯೋದು...
ನನಗೆ "ಪ್ರಕಾಶ ಗನಪತಿ ಹೆಗಡೆ" ಅಂತ ಇದೆಯಲ್ಲ..
ನನ್ನ ಗೆಳೆಯರೆಲ್ಲ "ಪೀಜಿ" ಪೀಜಿ ಹೆಗಡೆ" ಅಂತ ಕರಿತಿದ್ರು...

ನಿನಗೆ ಇವತ್ತಿಂದ "ಆಜಾದ್ ಹೆಗಡೆ ಅಂತ ಕರಿತಿನಿ...

ಕಥೆ ಓದಿ ಖುಷಿ ಪಟ್ಟಿದ್ದಕ್ಕೆ ಥ್ಯಾಂಕ್ಸು ಕಣೊ... !

ದೀಪಾವಳಿ ಹಬ್ಬದ ಶುಭಾಶಯಗಳು...

Unknown said...

ಕೇಡಿ ಬಾವ, ಪಕ್ಕಾ ಕೇಡಿನೇ ಆಗ್ಬಿಟ್ಟೀದ್ದಾ ಮ್ಯಾನೇಜರ್ ಪಾಲಿಗೆ!! :D....!! ಚೆನ್ನಾಗಿದೆ.. ಚೆನ್ನಾಗಿದೆ.. :)

Ittigecement said...

ಪ್ರೀತಿಯ ಗನಪತಿ...

ನಮ್ಮೂರ ಕೆಲವು ಪಾತ್ರ ಗುಣ ಸ್ವಭಾವಗಳೇ ಹೀಗೆ...
ಮಜಾ ಇರುತ್ತವೆ...

ಒಬ್ಬೊಬ್ಬರದೂ ಒಂದೊಂದು ವೈಶಿಷ್ಟ್ಯ... ವಿಭಿನ್ನ..!

"ಕೇಡಿ ಹೆಗಡೇ"ಯವರನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !!

Badarinath Palavalli said...

ಮೊದಲಿಗೆ ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

ನಿಮ್ಮ ಕಡೆ ಭಾಷೆಯನ್ನು ಅಕ್ಕಸಾಲಿಗ ಚಿನ್ನವ ತೂಗಿ ತೂಗಿ ಆಭರಣವಾಗಿಸುವ ಹಾಗೆ ಬಳಸುತ್ತೀರಿ. ಓದಿಗೆ ಭಾಷೆ ತೊಡಕಾಗದ ಹಾಗೆ, ಕಥನದ ಪರಿಸರವನ್ನು ಕಟ್ಟಿಕೊಡುವ ಹಾಗೆ ಭಾಷೆ ಬಳಸುತ್ತೀರಿ.

ಅದಕ್ಕೆ ಮೊದಲ ಜೈ ಹೋ!

ರಾಜಕಾರಣಿಗಳೆಲ್ಲ ಹಗರಣಿಗಳು ಅಂತ ಮಾದ್ಯಮಗಳೂ, ಪೊಲೀಸರು ಮತ್ತು ಲೋಕಾಯುಕ್ತ ಹಣೆ ಪಟ್ಟಿ ಹಚ್ಚಿದ ಮೇಲೆ. ಯಾವ ಕ್ಷಣದಲ್ಲಿ ತಾವೆಲಾ ಝಾಡಿಸಿ ಒದೆಸಿಕೊಂಡು ಜೈಲು ಪಾಲೋ ಅಂತ ರಾಜಕಾರಣಿಗಳೆಲ್ಲ, ಸಳಸಳನೆ ಬೆವರುತ್ತಿದ್ದಾರೆ. ಜಾತ್ಯಾತೀತ ಎನ್ನುವ ಪದಕ್ಕೆ ಅಪಹಾಸ್ಯವಾಗಿರುವ ರಾಜಕೀಯ ಜಾತಿ ಪದ್ಧತಿ ಮತ್ತು ವಿಂಗಡೆಯನ್ನು ಸೂಪರ್ರಾಗಿ ವಿಶ್ಲೇಷಿಸಿದ್ದೀರಿ.

ಅದಕ್ಕೆ ಎರಡನೇ ಜೈ ಹೋ!

ಹುಕ್ಲಕೈ ಸ್ಥಳ ಪುರಾಣ ಇನ್ನೊಮ್ಮೆ ಹಾಕಿ ಸಾರ್.
ಈ ಬಸ್ಸಿನ ಪ್ರವರ ಓದುತ್ತಿದ್ದರೆ, ಜುಗಾರಿ ಕ್ರಾಸಿನ ಬಸ್ಸು ನೆನಪು ಬರುತ್ತದೆ. ಹಳ್ಳಿಯ ಬಸ್ಸುಗಳ ಸಮಯ ಪಾಲನೆ ಹೇಗಿರುತ್ತದೆ ಎಂದರೆ, ಗರ್ಭಿಣಿ ಹೆಂಗಸನ್ನು ಹೆರಿಗೆಗೆ ಅಂತ ಕರೆದೊಯ್ಯಲು ಬಸ್ಸಿಗೆ ಕಾದರೆ, ಮಗುವಿನ ನಾಮಕರಣಕ್ಕೆ ಬಸ್ಸು ಹಾಜರು! ಬಸ್ಸಿನ ಕಳವು ಪುರಾಣ ಸಕ್ಕತ್ ಆಗಿ ಬಂದಿದೆ.

ಅದಕ್ಕೆ ಮೂರನೇ ಜೈ ಹೋ!

Dr.D.T.Krishna Murthy. said...

ಪ್ರಕಾಶಣ್ಣ;ನಾನು ಗಣೇಶ ಗುಡಿ(ಸೂಪಾ ಅಣೆಕಟ್ಟೆ)ಯಲ್ಲಿ ಕೆಲಸಮಾಡುವಾಗ ಇದೇ ರೀತಿ ಘಟನೆ ನಡೆದಿತ್ತು;ದಾಂಡೇಲಿ ಯಿಂದ ಗಣೇಶ್ ಗುಡಿಗೆ ರಾತ್ರಿ ಒಂಬತ್ತೂವರೆಗೆ ಹೊರಡುವ ಕೊನೆ ಬಸ್ಸು ಜನಗಳಿಂದ ಪೂರ್ತಿ ತುಂಬಿದ್ದರೂ ಕಂಡಕ್ಟರ್ ಮತ್ತು ಡ್ರೈವರ್ ಬರದೆ ಇರದಿದ್ದರಿಂದ ಹತ್ತಾದರೂ ಹೊರಟಿರಲಿಲ್ಲ.ಬಸ್ಸಿನ ಅರ್ಧಕ್ಕೂ ಹೆಚ್ಚು ಜನ 'ಟೈಟ್'ಆಗಿದ್ದರು.ಅದರಲ್ಲೇ ಯಾರೋ ಒಬ್ಬರು ಡ್ರೈವರ್ ಸೀಟಿನಲ್ಲಿ ಕುಳಿತರೆ ಮತ್ತೊಬ್ಬರು 'ರೈಟ್ ರೈಟ್'ಅಂದರು.ಬಸ್ಸು ರೆಗ್ಯುಲರ್ ಕಂಡಕ್ಟರ್ ಮತ್ತು ಡ್ರೈವರ್ ಇಲ್ಲದೆಇಪ್ಪತ್ತೈದು ಕಿಲೋಮೀಟರ್ ಪ್ರಯಾಣಿಸಿ ಸೀದಾ ಗಣೇಶ ಗುಡಿಯ ಬಸ್ ನಿಲ್ದಾಣದಲ್ಲಿ ಬಂದು ನಿತಿತ್ತು.ಎಲ್ಲರೂ ಪುಕ್ಕಟ್ಟೆ ಪ್ರಯಾಣ ಮಾಡಿ ಖುಷಿಯಿಂದ ಏನೂ ಆಗದವರಂತೆ ತಮ್ಮ ತಮ್ಮ ಮನೆಗೆ ಹೊರಟುಹೋದರು.ಬಸ್ ಮಾತ್ರ ಒಂದು ವಾರ ಅಲ್ಲೇ ನಿಂತಿತ್ತು.

Ittigecement said...

ಗೋಪಾಲಕೃಷ್ಣ ....

ಆ ದಿನಗಳಲ್ಲಿ ಈ ಬಸ್ಸಿಗೆ ಇನ್ನೊಂದು ಹೆಗ್ಗಳಿಕೆ ಇತ್ತು...

"ಈ ಬಸ್ಸಿಗೆ ರಿವರ್ಸ್ ಗ್ಯಾರ್ ಇರ್ತಿರ್ಲಿಲ್ಲ..
ಲಾಸ್ಟ್ ಸ್ತಾಪಿಗೆ ಹೋಗಿ ಅಲ್ಲಿ ಶಾಲೆಮನೆ ರೌಂಡ್ ಹಾಕಿ ಬರ್ತಿತ್ತು...

ಒಂದು ದಿನ ಆ ಡ್ರೈವರ್ ಗೆ ಮಿಸ್ಟೇಕ್ ಆಗಿ ಒಂದು ಮತ್ತಿ ಮರದ ಮುಂದೆ ತಂದು ನಿಲ್ಲಿಸಿದ..

ಏನು ಮಾಡುವದು...?

ಆಲ್ಲೇ ಪಕ್ಕದ ಹಳ್ಳಿಗೆ ಹೋಗಿ "ನಾಯ್ಕ್ರೆ...
ನಿಮ್ಮ ಶಾಲೆ ಹತ್ತಿರ ಇರುವ ಮತ್ತಿ ಮರ ಕಡಿಯ ಬೇಕು...
ಅದು ಬಸ್ಸಿನ ಮುಂದೆ ಬಂದು ನಿಂತು ಬಿಟ್ಟಿದೆ.. !!" ಅಂದ..

ಆ ಊರಿನವರೆಲ್ಲ ಬಂದು ನೋಡ್ತಾರೆ.. ಬಸ್ಸು ಮತ್ತಿ ಮರದ ಮುಂದೆ ಇದೆ..

"ಡ್ರೈವರ್ರೇ.. ಬಸ್ಸು ಹಿಂದಕ್ಕೆ ತಗೊಳ್ಳಿ..."

"ಇಲ್ರಾ.. ಈ ಬಸ್ಸಿಗೆ ರಿವರ್ಸ್ ಗ್ಯಾರು ಇಲ್ಲ..."

ಜನ ತಳ್ಳಲಿಕ್ಕೆ ಪ್ರಯತ್ನಿಸಿದರೂ..
ರಸ್ತೆ ಅಳ್ಳ, ದಿನ್ನೆ ಇದ್ದಿದ್ದರಿಂದ ಆಗಲಿಲ್ಲ...

ಆಮೇಲೆ ಕಾನಸೂರಿಗೆ ಹೋಗಿ..
ಅಲ್ಲಿ "ಮಾದೇಶೆಟ್ಟಿ ವ್ಯಾನು ತಂದು...
ಅದಕ್ಕೆ ಈ ಬಸ್ಸನ್ನು ಕಟ್ಟಿ.. ಎಳೆದು.. ಬಸ್ಸನ್ನು ವಾಪಸ್ಸು ಕಳಿಸಿದರು...."

ಈ ಸಂಗತಿ ಬ್ಲಾಗಿನಲ್ಲಿತ್ತು... ತುಂಬಾ ಉದ್ದವಾಯ್ತು ಅಂತ ಕಟ್ ಮಾಡಿದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...
ದೀಪಾವಳಿಯ ಶುಭಾಶಯಗಳು..

Ittigecement said...

ಫಲವಳ್ಳಿ ಸರ್..

ನಮ್ಮ ದೇಶದಲ್ಲಿ ಜಾತಿಯತೆ ಹೋದಂತೂ ಮುಂದುವರೆಯುವದು ಕಷ್ಟ...
ವಿದ್ಯಾವಂತ ಮನಸ್ಸುಗಳೂ ಈ ಥರಹ ವಿಚಾರ ಮಾಡುತ್ತಿರುವದು ದುಃಖದ ಸಂಗತಿ..

ಇರಲಿ ಬಿಡಿ..

ಆಗ ಟಿವಿ , ಮನೋರಂಜನೆಗಳಿಲ್ಲದ ಸಮಯ..
"ಇವತ್ತು ಹುಕ್ಲಕೈ ಬಸ್ಸು ಎಷ್ಟು ಹೊತ್ತಿಗೆ ಬರಬಹುದು?"

ಇದೊಂದು ದೊಡ್ಡ ಚರ್ಚೆಯ ವಿಷಯವಾಗಿರುತ್ತಿತ್ತು...
ಮನೆಗೆ ನೆಂಟರು ಬಂದಾಗ ಒಂದು ಥರಹದ ಖುಷಿಯಿಂದ ಹೇಳುವಂಥಹ ವಿಷಯ ಇದು..

ಹುಕ್ಲಕೈ ಬಸ್ಸಿನ ಡ್ರೈವರ್, ಕಂಡಕ್ಟರ್ ಮನೆ ಜನರ ಥರಹ ಇದ್ದು ಬಿಡುತ್ತಿದ್ದರು..

"ಕಂಡಕ್ಟರ್ರೇ..
ನಾಳೆ ಸಿರ್ಸಿಯಿಂದ ಬರ್ತಾ..
ಎರಡು ಕೇಜಿ ಬದನೆಕಾಯಿ ತಗೊಂಡು ಬನ್ನಿ"
ಅಂತ ಅತ್ಯಂತ ಸಲುಗೆಯುಳ್ಳ ಜನ ಕೆಲಸವನ್ನೂ ಹೇಳುತ್ತಿದ್ದರು..

ಹಳ್ಳಿ ಬಸ್ಸುಗಳ ಕಥೆ ಬಲು ಮೋಜು....

ದೀಪಾವಳಿಯ ಶುಭಾಶಯಗಳು..

ಹುಕ್ಲಕೈ ಬಸ್ಸು ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

Srikanth Manjunath said...

ಪ್ರಕಾಶ್ ಅವ್ರೆ...ಈ ಲೇಖನದ ಬಗ್ಗೆ ನನ್ನ ಕೆಲವು ಮಾತುಗಳು
ಮೊದಲಿಗೆ ಭಾಷಾ ಸೊಗಡು ಬೆಂಗಳೂರಿನಿಂದ ಕೆಲವೇ ನಿಮಿಷಗಳಲ್ಲಿ ನಮ್ಮನ್ನು ನಿಮ್ಮ ನೆಲಗಟ್ಟಿಗೆ ಕರೆದೊಯ್ಯುತ್ತದೆ..
ಸಣ್ಣ ಸಂಗತಿಯನ್ನು ಕೂಡ ಎಷ್ಟು ಸೊಗಸಾಗಿ ಹಾಗು ಚೆನ್ನಾಗಿ ವರ್ಣನೆ ಮಾಡಬಹುದು ಎನ್ನುವುದಕ್ಕೆ ಒಂದು ನಿದರ್ಶನ..
ಅಡ್ಡ ಹೆಸರು ಹೇಗೆ ಖ್ಯಾತಿ ಹಾಗು ಕುಖ್ಯಾತಿ ಭಾವನೆ ಮೂಡಿಸಬಹುದು ನಗು ಬರಿಸುತ್ತದೆ......
ಚಿಕ್ಕ ಚಿಕ್ಕ ಸಂಗತಿಗಳು ನಮ್ಮನ್ನು ಹಾಗು ನಮ್ಮ ಮನಸನ್ನು ಮುದಗೊಳಿಸಬಹುದು ಎನುವ ಸಂದೇಶ ನಿಜಕ್ಕೂ ಶ್ಲಾಘನೀಯ
ನಿಮ್ಮ ಹಾಗು ನಿಮ್ಮ ಕುಟುಂಬದ ಪರಿವಾರ ದೇವತೆಗಳಿಗೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು

Ittigecement said...

ಡಾಕ್ಟ್ರೆ...

ಭರ್ಜರಿಯಾಗಿದೆ ನೀವು ಹೇಳಿದ ಕಥೆ... !!
ಹಳ್ಳಿ ಕಡೆ ಬಸ್ಸುಗಳ ಅವಾಂತರ ಬಹಳ..

ಆ ಹಳೆ ಬಸ್ಸುಗಳೊಡನೆ ಒಡನಾಟ ಮರೆಯರಲಾರದ್ದು...

ನಮ್ಮ ಹಳೆಯ ನೆನಪುಗಳೊಡನೆ ಇಂಥಹ ಬಸ್ಸುಗಳೂ ಮರೆಯದೆ ನಿಂತು ಬಿಡುತ್ತವೆ..

ನನ್ನ ಆಪ್ತ ಗೆಳೆಯನೊಬ್ಬನ "ಪ್ರೇಮ ಪ್ರಸಂಗ" ಇದೇ ಹುಕ್ಲಕೈ" ಬಸ್ಸಿನಲ್ಲಾಗಿತ್ತು..
ಅದೊಂದು ಭಯಂಕರ ಕಥೆ...

ಅಲ್ಲಿನ ಬದುಕು ಅವ್ಯವಸ್ಥೆ ಬಸ್ಸುಗಳ ಜೊತೆಗೆ ಹೊಂದಿಕೊಂಡುಬಿಟ್ಟಿರುತ್ತದೆ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. ಜೈ ಹೋ !!

viju said...

Bhari maja iddu...Prakashanna......Title sakattagiddu......!!!!! very nice... :)

ಸಾಗರದಾಚೆಯ ಇಂಚರ said...

ಸೂಪರ್ ಅಣ್ಣ

ಎಲ್ಲಿಂದ ಹೊಳಿತು ಮಾರಾಯ
ಅದ್ಭುತ

Ranjita said...

ಚಲೋ ಇದ್ದು ಪ್ರಕಾಶಣ್ಣ. ಅಟ್ಲಕಾಯಿ ಹೆಗಡೆ, ಬೀಡಿ ಭಟ್, ಕೇಡಿ ಭಟ್ ಹೆಸರು ಮಜಾ ಇದ್ದು..

Sathisha said...

ತುಂಬಾ ಖುಷಿಯಾಯ್ತು ಸರ್, ನಿಮ್ಮ ಬಸ್ಸಿನ ಕಥೆ ಕೇಳಿ. ಅಯ್ಯೋ ಕತೆ ಮುಗೀತಲ್ಲ ಅಂತ ಬೇಜಾರು ಪಟ್ಕೊಂದ್ರೆ, ಕಂಮೆಂಟ್ಸಲ್ಲಿ ಇನ್ನು ಕೆಲವು ಕತೆ. ಎಲ್ಲ ಒಂದಕ್ಕಿಂತ ಒಂದು ಚೆನ್ನಾಗಿತ್ತು.

Gubbachchi Sathish said...

ಅವನನ್ನು ತಬ್ಬಿ ಮುದ್ದಾಡುವಷ್ಟು ಖುಶಿಆಯ್ತು... !!

ಇದನ್ನು ಕಥೆಗಾರನನ್ನು ಎಂದು ಓದಿಕೊಳ್ಳಿ.

Vani Satish said...

Waaw !! Prakashanna Wonderfull story :)Kathe odi khushee aatu, Please eee kathe 5-6 episode maadu :)

Ittigecement said...

ಶ್ರೀಕಾಂತ್ ಮಂಜುನಾಥ್...

ನಿಜ ಹೇಳ್ತೀನಿ...
ನೀವು ಎಳೆ ಎಳೆಯಾಗಿ ವಿಮರ್ಶಿಸುವ ರೀತಿ ತುಂಬಾ ಇಷ್ಟವಾಗುತ್ತದೆ...

ನಮ್ಮ ಕನ್ನಡದ ಸೊಬಗೇ ಹಾಗೆ...

ಪ್ರತಿ ಎರಡು ನೂರು ಕಿಲೋಮೀಟರಿಗೆ ಭಾಷೆಯಾಡುವ ರೀತಿ.. ಊಟ, ತಿಂಡಿ..
ಪ್ರದೇಶದ ದೇಶಿಯ ಸೊಬಗು ಬದಲಾಗುತ್ತಿರುತ್ತದೆ...!!

ನಮ್ಮ ಮಲೆನಾಡಿನ ಕಡೆ ಆಡುವ ಭಾಷೆ.. ಮತ್ತು ಸಂಸ್ಕೃತಿ ಇನ್ನೂ ಅಷ್ಟಾಗಿ ಪ್ರಚಾರ ಪಡೆಯಲಿಲ್ಲ ಅಷ್ಟೆ...

ಮಂಡ್ಯದ ಕಡೆಯ ಭಾಷೆಯಾಡುವ ರೀತಿ ನನಗೆ ಬಹಳ ಬಹಳ ಇಷ್ಟ..
ಎಷ್ಟು ಸಹಜತೆ ಮತ್ತು ನೈಜ ಪ್ರೀತಿ ಇರುತ್ತದೆ ಆ ಮತುಗಳಲ್ಲಿ.. !!

ನಮ್ಮ ನಾಡಿನ ಒರಿಜಿನಾಲಿಟಿ ಇರುವದು ಪ್ರಾದೇಶಿಕ ಭಾಷೆಯಾಡುವ ಸೊಬಗಿನಲ್ಲಿ ಅಲ್ಲವಾ?

ಸುಂದರ ಪ್ರತಿಕ್ರಿಯೆಗಾಗಿ ವಂದನೆಗಳು..

ನಿಮ್ಮೆಲ್ಲರ ಪ್ರತಿಕ್ರಿಯೆಗಳು ನನಗೆ ಟಾನಿಕ್ ಥರಹ... ಮತ್ತಷ್ಟು ಬರೆಯಲು ಉತ್ಸಾಹ ಕೊಡುತ್ತದೆ..

ನಿಮಗೂ ನಿಮ್ಮ ಕುಟುಂಬ ಪರಿವಾರದವರಿಗೂ ದೀಪದ ಹಬ್ಬದ ಶುಭಾಶಯಗಳು...

sunaath said...

ಬಸ್ಸು ಬೇಗನೇ ನಿಲ್ದಾಣ ಬಿಡದಿದ್ದರೆ ಏನು ಮಾಡಬೇಕು ಅನ್ನೋದು ತಿಳಿದಂತಾಯ್ತು. ಕೇಡಿ ಭಟ್ಟರಿಗೆ ಥ್ಯಾಂಕ್ಸ ಹೇಳಬೇಕು, ನಿಮಗೂ ಸಹ thanks!

ಓ ಮನಸೇ, ನೀನೇಕೆ ಹೀಗೆ...? said...

ಹ ಹ ಹ ಹುಕ್ಲಕೈ ಬಸ್ ಕಥೆ ಸೂಪರ್ .. "ನಂಬದಿಗೆ ನಡೆಯೋ ಇಂಥ ಕತೆಗಳನ್ನ ಕೇಳೋಕೆ ಮಜಾ...ಪಾಪ ಆ ಊರಿನವರಿಗೆ ಬಸ್ ಗೆ ಕಾಯೋದೆ ಒಂದು ಸಜಾ"....ಅಲ್ದ ಪ್ರಕಾಶಣ್ಣ.

ಶಾನಿ said...

ಜಾತ್ಯಾತೀತ ರಾಷ್ಟ್ರ ಅಂದ್ರೆ ಅತೀ ಜಾತೀಯ ರಾಷ್ಟ್ರ ಅಂಥ!

balasubramanya said...

"ಬಸ್ ನಂಬರ್ "ಇಪ್ಪತ್ತೆಂಟು..ಮೂವತ್ತೆರಡು "..... ಹುಕ್ಲಕೈಗೆ ಹೋಗ್ತದೆ......!!" ದೀಪಾವಳಿಗೆ ಒಳ್ಳೆಯ ನಗುವಿನ ಕೊಡುಗೆ.halli ಕಡೆ ಅಡ್ಡ ಹ್ವ್ಸರಿನಿಂದ ಕರೆಯೋದು ಮಾಮೂಲಿ.ಕೆ.ಡಿ.ಹೆಗ್ಡೆ , ಬೀ.ಡಿ.ಹೆಗ್ಗಡೆ ಹೆಸರೇ ನಗು ಬರಿಸುತ್ತೆ.ಬಸ್ಸನ್ನು ಕದ್ದಿದ್ದು ಅಲ್ಲಾ ಅಪಹರಿಸಿ ಹತ್ತು ದಿನ ಬಸ್ಸು ಕಾಣೆಯಾಗಿದ್ದು, ಅಲ್ಲಿಯವರೆಗೆ ಯಾರಿಗೂ ಬಸ್ಸು ಎಲ್ಲಿದೆ ಅಂತಾ ಗೊತ್ತಿಲ್ಲದಿದ್ದುದು ಒಟ್ಟಿನಲ್ಲಿ ಸೋಜಿಗವೇ ಸರಿ .ನಗುವಿನ ಒಳ್ಳೆಯ ಉಡುಗೊರೆ ನೀಡಿ ಹಬ್ಬದಲ್ಲಿ ನಗಿಸಿದ್ದೀರಿ ಕೆ.ಡಿ.ಭಾವ ನ ಬಗ್ಗೆ ಹುಷಾರಾಗಿ ಇರಬೇಕು ಮುಂದೆ ಏರೋಪ್ಲೇನ್ ಅಪಹರಿಸಿಬಿಟ್ಟರೆ ಕಥೆ ಏನು ??? ಹಳ್ಳಿಗಾಡಿನ ಬಸ್ಸುಗಳ ಬಗ್ಗೆ ಯಾರಾದ್ರೂ ಸಂಶೋದನೆ ನಡೆಸಿದರೆ ಇಂತಹ ಬಹಳಷ್ಟು ಘಟನೆ ಬೆಳಕಿಗೆ ಬರುತ್ತವೆ.ಸುಂದರ ನಿರೂಪಣೆ ಇಷ್ಟ ಆಯ್ತು . ಜೈ ಹೋ .

Ittigecement said...

ಪ್ರೀತಿಯ ವಿಜು....

ಬಸ್ ನಂಬರ್ "ಇಪ್ಪತ್ತೆಂಟು.. ಮೂವತ್ತೆರಡು" ಹುಕ್ಲಕೈ ಹೋಗ್ತದೆ...

ಇದನ್ನು ಹೇಳುವ ಧಾಟಿ.. ಮತ್ತು ಧ್ವನಿ ಇನ್ನೂ ಕಿವಿಯಲ್ಲಿ ಅಚ್ಚೊತ್ತಿದೆ..
ಇಷ್ಟು ವರ್ಷಗಳಾದರೂ..
ನೆನಪಾದಾಗ ಮುಖದಲ್ಲೊಂದು ಮಂದಹಾಸ ಮೂಡಿ ಮಾಯವಾಗುತ್ತದೆ..

ಇದನ್ನು ಓದಿದ ನನ್ನ ತಂಗಿ ವಾಣಿ "ಇದನ್ನು ಧಾರವಾಹಿಯಾಗಿ ಬರಿ ಪ್ರಕಾಶಣ್ಣಾ" ಅಂತ ವಿನಂತಿಸಿದ್ದಾಳೆ..
ಹೌದು.. ಇದರ ಬಗೆಗೆ ಇನ್ನೂ ಬರೆಯುವಷ್ಟು ಬೇಕಾದಷ್ಟಿದೆ...

ಹುಕ್ಲಕೈ ಬಸ್ಸಲ್ಲಿ ಪ್ರಯಾಣ ಮಾಡಿದ್ದಕ್ಕಾಗಿ ಧನ್ಯವಾದಗಳು..

ಬರುತ್ತಾ ಇರಿ ಜೈ ಹೋ !!

Ittigecement said...

ಸಾಗರದಾಚೆಯ ಇಂಚರ.. ಗುರು...

ಇದನ್ನು ನನಗೆ ನೆನಪು ಮಾಡಿದ್ದು ನನ್ನ ತಂಗಿ "ವಾಣಿ"
ದೆಹಲಿಯಲ್ಲಿರ್ತಾಳೆ..
ದೀಕ್ಷಾ ಸ್ಕೂಲಿನಲ್ಲಿರುವ "ಸುಬ್ಬು" ಮತ್ತು "ಶ್ರೀಲಕ್ಷ್ಮೀ " ದಂಪತಿಗಳು ಇನ್ನಷ್ಟು ಮಾಹಿತಿ ಕೊಟ್ಟರು..
ನನ್ನ ಚಿಕ್ಕಮ್ಮ ಮತ್ತಷ್ಟು...ಮಜಾ ವಿಷಯಗಳನ್ನು ನೆನಪಿಸಿದ್ದಾರೆ..

ವಿವರಗಳು ಎಷ್ಟು ಇದೆಯೆಂದರೆ ಧಾರವಾಹಿ ಬರೆಯುವಷ್ಟು..

ಹುಕ್ಲಕೈ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಕ್ಕೆ ಧನ್ಯವಾದಾಗಳು..

ದೀಪಾವಳಿ ಹಬ್ಬದ ಶುಭಾಶಯಗಳು...

Ittigecement said...

ರಂಜಿತಾ...

ಇಂಥಹ ವಿಚಿತ್ರ ಹೆಸರುಗಳು ಎಲ್ಲ ಪ್ರದೇಶಗಳಲ್ಲೂ ಇರುತ್ತವೆ..
ನಾನು ಹೊಸದಾಗಿ ಬೆಂಗಳೂರಿಗೆ ಬಂದಾಗ ನಮ್ಮ ಎದುರು ಮನೆಯಲ್ಲಿ ಒಬ್ಬರು ಮಹಿಳೆ ಇದ್ದರು..

ಅವರ ಹೆಸರನ್ನು ಕೇಳಿ ಸಿಕ್ಕಾಪಟ್ಟೆ ನಕ್ಕಿದ್ದಿದೆ..

ನಾವು ಗೆಳೆಯರೆಲ್ಲ ಆಗಾಗ ಬೇಜಾರಾದಗ ಹೆಸರು ಹೇಳಿಕೊಂಡು ನಗುತ್ತಿದ್ದೆವು..

ಅವರ ಹೆಸರು "ಅಂಡಾಳಮ್ಮ"

ಯಾಕೊ ಗೊತ್ತಿಲ್ಲ ಈಗಲೂ ನಗು ಬರುತ್ತದೆ..

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ.. ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...

ದೀಪದ ಹಬ್ಬದ ಶುಭಾಶಯಗಳು...

Ittigecement said...

ಪ್ರೀತಿಯ ಸತೀಶ...

ಈ ಬಸ್ಸಿನ ಬಗೆಗೆ ಇನ್ನಷ್ಟು ಬರೆಯಬೇಕೆಂದಿರುವೆ...

ನಮ್ಮೂರಕಡೆ.. ಮತ್ತಿಘಟ್ಟ ಬಸ್ಸು, ಹಾರ್ಸಿಕಟ್ಟಾ ಬಸ್ಸು.., ಬಾಳೆಸರ ಬಸ್ಸು.. ಹೆಗಡೆಕಟ್ಟಾ ಬಸ್ಸು..

ಇಲ್ಲಿಗೆ ಹೋಗಿಬರುವ ಬಸ್ಸುಗಳ ಕಥೆಗಳು ತುಂಬಾ ರೋಚಕವಾಗಿವೆ..

ಸಿರ್ಸಿ ಬಸ್ ನಿಲ್ದಾಣಗಳು ಮನರಂಜನಾ ಕೇಂದ್ರಗಳಾಗಿದ್ದವು..

ನಿಮ್ಮ ಪ್ರೀತಿ ಹೀಗೆಯೇ ಇರಲಿ..

ಹುಕ್ಲಕೈ ಬಸ್ಸಲ್ಲಿ ಪ್ರಯಾಣ ಮಾಡಿದ್ದಕ್ಕೆ ಧನ್ಯವಾದಗಳು...

Anonymous said...

ಶಿರಸಿ ಯ ಬಸ್ ಸ್ಟ್ಯಾಂಡಿ ನ ಪುಟ್ಟ ಕಥೆ ಮನಸ್ಸಿಗೆ ಖುಷಿ ಕೊಟ್ಟಿತು...ಇದೇ ಜಾಡಿನಲ್ಲಿ ಇನ್ನೂ ಬರೀರಿ ಪ್ಲೀಸ್..

ಶುಭಾ:-) said...

ಹ ಹಾ ಹ್ಹಾ ಚೊಲೋ ಇದ್ದು ಪ್ರಕಾಶಣ್ಣ.. ಕಥೆ ಮತ್ತು vedio ಎರಡುವಾ..

ದಿನಕರ ಮೊಗೇರ said...

hha hha mast iddu.......

SpoorthyMurali said...

LOL!!! **This happens only in India :) **

Ittigecement said...

ಪ್ರೀತಿಯ ಗುಬ್ಬಚ್ಚಿ ಸತೀಶು...

ನಮ್ಮ ಹಳ್ಳಿ ಬಸ್ಸುಗಳು ಮಿನಿ ಭಾರತದ ಹಾಗೆ..
ಅಲ್ಲಿ ಏನಿಲ್ಲ.. ಏನುಂಟು...

ಸಂತೆಯ ದಿನವಂತೂ ರಷ್ಷೋ ರಷ್ಷು...
ಅಲ್ಲಿನ ಗಜಿಬಿಜಿ.. ಮಾತುಕತೆಗಳು..

ಬದುಕಿನ ಬಗೆಗಿರುವ ಅವರ ಸಂಭ್ರಮ.. !!
ಸಣ್ಣ ಸಣ್ಣ ವಿಷಯಗಳಲ್ಲಿ ಅವರು ಪಡುವ ಖುಷಿ..

ತುಂಬಾ ಸೊಗಸು ಅಲ್ಲಿನ ಚಿತ್ರಣ..

ನಾವು ಪಟ್ಟಣದವರು ಅದನ್ನು ಕಳೆದುಕೊಂಡುಬಿಟ್ಟಿದ್ದೇವೆ ಅಲ್ವಾ?

ಪ್ರೀತಿಗೆ..ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ಪ್ರೀತಿಯ ವಾಣಿ ಪುಟ್ಟಿ...

ಖಂಡಿತ ಮಾಡೋಣ...!!

ಅಲ್ಲಿನ ಬಸ್ಸ್ ಕಥೆಗಳು ರೋಚಕವಾಗಿವೆ..
ಅಲ್ಲಿ ಅಂತ ಅಲ್ಲ... ಎಲ್ಲ ಹಳ್ಳಿಕಡೆ ಹಾಗೇನೆ...

ಬಸ್ಸಿನಲ್ಲಿ ಜಗಳ...
ಪಡ್ಡೆ ಹುಡುಗರ ಪ್ರೇಮ..

ಮೊದಲು ಅಲ್ಲಿ ದಾರದಿಂದ ಬಾರಿಸುವ ಬೆಲ್ ಇತ್ತು.. ಟಿಣ್.. ಟಿಣ್...

ಕಂಡಕ್ಟರ್ ಕೂಗುವ "ರೈಟ್.. ರೈಟ್..."...

ಎಲ್ಲ ನೆನಪಾಗುತ್ತವೆ ಅಲ್ವಾ?

ಪ್ರೋತ್ಸಾಹಕ್ಕೆ ಧನ್ಯವಾದಗಳು... ಜೈ ಹೋ !!

ಶಶೀ ಬೆಳ್ಳಾಯರು said...

prakashanna,, super.. bus kalavagiddu odtha odtha nange kalavada bhava...!! nimma ithara kathegaligintha koncha bhinnavagide. dhanyavadagalu.. nammoora bus kooda agaga mayavagtha irutthe.. adra hindenu inthadde karana irbahudeno..? anyway thnx fr u sir... Jai ho...!!

Pradeep Rao said...

ha ha tumba tamasheyaagide..

bus ge reverse gear ilde irodu ille first keliddu!!

Sunanda hegde said...

namma havyka bhasheya sogadu adarondigina hasya balyavannu nenapisuvalli sotilla.. danyavadagalu.

ಕಾವ್ಯಾ ಕಾಶ್ಯಪ್ said...

ಹಾ ಹಾ.. ಚೆನ್ನಾಗಿದೆ ಪ್ರಕಾಶಣ್ಣ...
ಇದನ್ನು ನೋಡಿ ನಮ್ಮೂರ ಬಸ್ ಕಥೆ ನೆನಪಾಯ್ತು.. ಹೀಗೆ ಎಷ್ಟ್ ಹೊತ್ತಾದರೂ ಬಸ್ ಬಿಡದೆ ಜನ ಹತ್ತಿ ಕೂತು ತಲೆ ಕೆಟ್ಟು ಸೆಕೆಯಲ್ಲಿ ತತ್ತರಿಸುತ್ತಿದ್ದರು... ಅಷ್ಟರಲ್ಲಿ ಅಂತು ಇಂತೂ ಡ್ರೈವರ್ ಬಸ್ಸೇರಿದ... ಅವನನ್ನು ನೋಡಿದ್ದೇ ಹಿಂದೆ ಇದ್ದ ಒಬ್ಬ ರೈಟ್ ರೈಟ್ ಅಂದಿದ್ದೆ ತಡ ಡ್ರೈವರ್ ಬಸ್ ಹೊರಡಿಸಿಯೇ ಬಿಟ್ಟ.. ಆಮೇಲೆ ಸುಮಾರು ಮುಂದೆ ಹೋಗಿ ನೋಡಿದರೆ ಬಸ್ಸಿನ ನೂಕು ನುಗ್ಗಲಿನಲ್ಲಿ ಕಂಡಕ್ಟರ್ ಇಲ್ಲವೇ ಇಲ್ಲಾ....!! ಮತ್ತೆ ಬಸ್ಸನ್ನು ವಾಪಸ್ ತಿರಿಸಿದ್ದಾಯ್ತು ಆಮೇಲೆ....

prashasti said...

ಅಬ್ಬಾ!!! ಭಯಂಕರ.. ಸೂಪರ್ರಾಗಿದ್ದು :-) ಕೊನೆಗೆ ನಕ್ಕೂ ನಕ್ಕೂ ನಂಗೂ ಸಾಕಾತು :-)

Unknown said...

ನಿಜ.. ಪ್ರಕಾಶಣ್ಣ... ನಮ್ಮೂರಲ್ಲೂ ಹೀಗೇ ಒ​ಂದು ಕತೆ ಆಗಿತ್ತು... ಕತೆ ಅಲ್ಲ.. ನಿಜ ಮತ್ತೆ... ಈ ಪೋಸ್ಟ್ ನಲ್ಲಿ ಇಷ್ಟ ಆಗಿದ್ದು ಅ​ಂದರೆ ಕೊನೆಗೆ ಗ​ಂಗಣ್ಣ ಓದಿದ ಕಾಮೆ​ಂಟರಿ... ಅದ್ಭುತ... ಯಾವ್ದಾದ್ರೂ ಬಸ್ ಸ್ಟ್ಯಾ​ಂಡ್ನಲ್ಲಿ ಗ​ಂಗಣ್ಣನ ತಗೊ​ಂಡು ಹೋಗಿ ಕೂರಿಸಬಹುದು..!!
ಮತ್ತೆ ಪ್ರಕಾಶಣ್ಣನ ಕಥೆ ಚೆ​ಂದ ಇತ್ತು.

ಸಂಧ್ಯಾ ಶ್ರೀಧರ್ ಭಟ್ said...

Kathe Mastiddu annayya...... :) Sirsi bus stand matte nenapaatu...:) (avaagaa bus kaayakare dabba busstand li yaar nitgatta kantittu.. Igaa adannu miss madkyattaiddi..:( ) Mattimara Bus ge adda bandiddu mastiddu..:)

ಸಂಧ್ಯಾ ಶ್ರೀಧರ್ ಭಟ್ said...
This comment has been removed by the author.
ಸೀತಾರಾಮ. ಕೆ. / SITARAM.K said...

ತುಂಬಾ ಹಾಸ್ಯಭರಿತ ಲೇಖನ...ಓದಿ ನಕ್ಕು ನಕ್ಕು ಇಟ್ಟೆದ್ದಾಯ್ತು.....