ಇತ್ತೀಚೆಗೆ ಕೆಲಸಗಾರರ ಸಮಸ್ಯೆ ಬಹಳವಾಗಿಬಿಟ್ಟಿದೆ...
ನಾನೂ ನನ್ನ ಮೇಸ್ತ್ರಿಯೂ ಪ್ರತಿ ಶನಿವಾರ ದೇವರಲ್ಲಿ ತಪ್ಪದೆ ಪ್ರಾರ್ಥನೆ ಮಾಡುತ್ತೇವೆ...
"ದೇವರೆ..
ನಾವು ಕೊಟ್ಟ ಹಣ ಭಾನುವಾರವೇ ಖರ್ಚಾಗಿಬಿಡಲಿ.....
ಅಪ್ಪಿತಪ್ಪಿಯೂ ...
ಸೋಮವಾರದ ತನಕ ಉಳಿಯದಿರಲಿ.."
ನಾವು ಶನಿವಾರ ಕೊಟ್ಟ ಹಣ ಭಾನುವಾರ ಖರ್ಚಾಗಿಬಿಟ್ಟರೆ ...
ನಮ್ಮ ಕೆಲಸಗಾರರು ಸೋಮವಾರ ತಪ್ಪದೆ ಕೆಲಸಕ್ಕೆ ಬರ್ತಾರೆ...
ಹೆಚ್ಚಿನದಾಗಿ ನಮ್ಮ ಪ್ರಾರ್ಥನೆ ದೇವರಿಗೆ ಕೇಳಿಸಿರುತ್ತದೆ..
ಗಲ್ಲಿಗೊಂದು ಬಾರು...
ಹೆಂಡದಂಗಡಿಗಳು ನಮ್ಮ ಪ್ರಾರ್ಥನೆಯನ್ನು ಸಾರ್ಥಕ ಮಾಡಿಸಿರುತ್ತವೆ..
ದೇವರ ಮೇಲೆ ನಂಬಿಕೆಯೂ ಬಂದುಬಿಡುತ್ತದೆ...
ಅಂದು ಶನಿವಾರ ಮೇಸ್ತ್ರಿಯ ಸಂಗಡ ಲೆಕ್ಕಾಚಾರ ಮಾಡುತ್ತ ಕುಳಿತ್ತಿದ್ದೆ..
ಮೇಸ್ತ್ರಿ ರಾಜೇಂದ್ರ ಹೇಳಿದ..
"ಸರ್..
ಈ ಸಾರಿ ನಮ್ಮ ಕಾಳಿಯಪ್ಪನ್ ಗೆ ಕೂಲಿ ಹಣ ಪೂರ್ತಿಕೊಡಬೇಡಿ...
ನಮಗೆ ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡ್ತಾ ಇಲ್ಲ..."
ನನಗೆ ಬಹಳ ಆಶ್ಚರ್ಯವಾಯಿತು..
ಕಾಳಿಯಪ್ಪನ್ ಒಳ್ಳೆಯ ಕೆಲಸಗಾರ...
ಇಬ್ಬರ ಕೆಲಸವನ್ನು ಒಬ್ಬನೇ.. ಮಾಡಬಲ್ಲ..
"ಹೌದಾ?? !! "
"ಹೌದು ಸಾರ್..
ಮೊನ್ನೆ ನಮಗೆ ಅರ್ಜೆಂಟ್ ಇದ್ದಾಗ ಬರ್ಲೇ ಇಲ್ಲ..
ಬೇರೆಯವರ ಹತ್ರ ಕೆಲ್ಸ ಮಾಡಿಸ್ದೆ.....
ನಮಗೆ ಅಗತ್ಯ ಇದ್ದಾಗಲೆ ಕೈ ಕೊಡ್ತಾನೆ.."
ಮೇಸ್ತ್ರಿ ಯಾರ ಬಗ್ಗೆಯೂ ಹಾಗೆಲ್ಲ ಚಾಡಿ ಹೇಳುವದಿಲ್ಲ...
"ಆಯ್ತು ಬಿಡಿ.. ಹಾಗೆ ಮಾಡೋಣ " ಅಂದೆ
ಅಷ್ಟರಲ್ಲಿ ಫೋನ್..
ನೋಡಿದೆ.. ಗೆಳೆಯ ನಾಗು..!
ನಾಗು ಅಂದರೆ ಮುಖದಲ್ಲಿ ನಗು ಬಂದೆ ಬರುತ್ತದೆ....
"ಪ್ರಕಾಶು..
ಗಿರಿನಗರದ ಹತ್ರ ಇದ್ದೇನೆ.. ನೀನು ಎಲ್ಲಿದ್ದೀಯಾ?"
"ನಾನೂ ಗಿರಿನಗರದಲ್ಲೇ ಇದ್ದೀನಿ...
ಜಲ್ದಿ ಬಾ.. ಇಬ್ರೂ ಊಟಕ್ಕೆ ಹೋಗೋಣ..
ಹಸಿವೆ ಆಗ್ತ ಇದೆ"
ನಾನು ವಿಳಾಸ ಕೊಟ್ಟೆ.. ಆತ ನಮ್ಮ ಬಿಲ್ಡಿಂಗ ಹತ್ರಾನೆ ಬಂದ...
ನಾಗು ಮುಖ ಸಪ್ಪೆಯಾಗಿತ್ತು..
"ಏನಾಯ್ತಪ್ಪಾ..? ಏನು ಸಮಸ್ಯೆ?"
"ಪ್ರಕಾಶು..
ಕೊಟ್ಟಂವ ಕೋಡಂಗಿ..
ತಗೊಂಡವನು ವೀರಭದ್ರ... !"
" ಏನಾಯ್ತು?
ಎಮ್ಮೆಲ್ಲೆ , ಎಂಪಿಗಳಿಗೆ ವೋಟ್ ಕೊಟ್ಟಿದ್ದಕ್ಕೆ ಬೇಸರ ಆಯ್ತೇನೋ..?"
"ಇಲ್ಲಪಾ...
ಅವರಿಗಾದರೆ.. ಮನಸು ತೃಪ್ತಿಯಾಗುವಷ್ಟು ಬಯ್ದು ಸಮಾಧಾನ ತಗೋಬಹುದು...
ಅದಲ್ಲ.. ಇದು...
ನನ್ನ ಕಲೀಗ್ ಒಬ್ಬ.. ಸಭ್ಯಸ್ಥ ಅಂತ ತಿಳಿದು ಸಾಲ ಕೊಟ್ಟಿದ್ದೆ..
ಈಗ ಕಣ್ಣು ತಪ್ಪಿಸಿ ತಿರಗ್ತಾ ಇದ್ದಾನೆ..
ಸುಳ್ಳು ಹೇಳ್ತಾನೆ.."
"ಮಾರಾಯಾ ...
ಗಂಭೀರ ಸಮಸ್ಯೆ ಇದ್ದಿರ ಬಹುದು...
ದುಡುಕಬೇಡಪ್ಪಾ...
ನಾನೂ ಕೂಡ ಅಂಥಹ ಸಮಸ್ಯೆ ದಾಟಿ ಬಂದಿದ್ದೀನಿ..."
"ಇಲ್ಲಪ್ಪಾ...
ಈತನಿಗೆ ಸಾಲ ಕೇಳೊ ಚಟ..
ಇವತ್ತು ನೋಡಿದರೆ ...
ಸುಮಾರು ಹದಿನೈದು ಜನರ ಹತ್ರ ಸಾಲ ಮಾಡಿದಾನೆ..
ನಂದು "ತಿರುಪತಿ ಯಂಕಟರಮಣಾ..... ಗೋವಿಂದಾ.. ಗೋ..ವಿಂದಾ.. !"
ಆಸೆ ಬಿಡ್ತಾ ಇದ್ದೀನಿ... ಕಣೋ.."
"ನೋಡಪಾ... ನಾಗು..
ಕೊಟ್ಟ ಹಣ ಕೇಳದೆ ಹೋಗಿತ್ತು ಅಂತಾರೆ..
ನೀನು ಕೇಳ್ತಾ ಇರಬೇಕು..
ಅವರ ಹತ್ರ ಕೂತ್ಕೊಂಡು ಮಾತಾಡು..
ಏನಾದ್ರೂ ಪರಿಹಾರ ಸಿಗ್ತದೆ.."
"ಅಯ್ಯೋ ಪ್ರಕಾಶು...
ಈತ ನನ್ನ ಕಲೀಗ್ ಎಲ್ಲರ ಹತ್ರ ಸಾಲ ಮಾಡಿದಾನೆ..
ಎಲ್ಲರ ಹತ್ರಾನೂ..
ಒಂದೊಂದು ನೆಪ.. ಒಂದೊಂದು ಕಟ್ಟು ಕಥೆ...
ಸುಳ್ಳು...!
ನಂಬಿ ಕೆಟ್ಟು ಹೋದೆ ಪ್ರಕಾಶು..."
"ಏನು ಹೇಳಿ ಸಾಲ ಕೇಳಿದ್ದಾನೆ?"
"ನನ್ನ ಹತ್ರ ಅವನ ಮಾವನಿಗೆ ಕಿಡ್ನಿ ಅಪರೇಷನ್ ಇದೆ... ಅರ್ಜಂಟ್ ಹಣ ಬೇಕು ಅಂತ ತಗೊಂಡ..
ನನ್ನ ಗೆಳೆಯ ರಮೇಶ್ ಹತ್ರ ತನ್ನ ಅಣ್ಣನಿಗೆ ಅಪಘಾತ ಆಗಿದೆ..
ತುರ್ತಾಗಿ ಹಣ ಬೇಕು ಅಂತ ತಗೊಂಡಿದ್ದಾನೆ...
ಇವನಿಗೆ ಹಣ ಅಗತ್ಯ ಇರುವಾಗ ...
ಯಾರಿಗಾದರೂ ಏನಾದ್ರೂ ಮಾಡಿ..
ಆಸ್ಪತ್ರೆ ಸೇರ್ಸಿಬಿಡ್ತಾನೆ ಮಾರಾಯಾ..!
ಆಮೇಲೆ.. ಖರ್ಚು.. ಹಣಾ.. ಅಂತಾ ಸಾಲಾ ತಗೋತಾನೆ.."
ಅಲ್ಲೇ ಇದ್ದ ಮೇಸ್ತ್ರಿ ರಾಜೇಂದ್ರ..
"ನಾಗೂ ಸಾರ್..
ನೀವು..ಏನೇ ಹೇಳಿ ...
ನಿಮ್ಮ ಫ್ರೆಂಡು ಸಾವಿರ ಪಾಲು ಬೇಕು...!
ತುಂಬಾ ಒಳ್ಳೆಯವರು ಸಾರ್.."
ನಾಗುಗೆ ಆಶ್ಚರ್ಯವಾಯಿತು...
"ಅದು ಹೇಗೋ..?"
" ನಾಗು.. ಸಾರ್...
ನಮ್ಮ ಹತ್ರ ಒಬ್ಬ ಕಾಳಿಯಪ್ಪನ್ ಅಂತ ಇದ್ದಾನೆ..
ಅವನು ನಮಗೆ ಅಗತ್ಯ ಇರುವಾಗ ..
ಕೆಲಸಕ್ಕೆ ಬರೋದೆ ಇಲ್ಲ...
ಕಾರಣ ಕೇಳಿದ್ರೆ ಯಾರನ್ನಾದ್ರೂ ಸಾಯಿಸಿ ಬಿಡ್ತಾನೆ..!!"
ನಾಗು ಹುಬ್ಬು ಮೇಲಕ್ಕೇರಿತು...!!
ಬಹಳ ಹೊತ್ತು ಕೆಳಗೆ ಇಳಿಯಲೇ ಇಲ್ಲ... !!
"ಏನು ಮೇಸ್ತ್ರಿ...?
ಸಾಯಿಸಿ ಬಿಡ್ತಾನಾ?
ಕೊಲೆ ಮಾಡ್ತಾನೇನೋ..?.."
"ಹೌದು ಸಾರ್..!!
ಮೊನ್ನೆ ಯಾಕೋ ಬರ್ಲಿಲ್ಲ ಅಂದೆ..
" ನನ್ನ ಹೆಂಡ್ತಿ ಅಕ್ಕ ತೀರ್ಕೊಂಡು ಬಿಟ್ರು ಸಾರ್.. ಬರ್ಲಿಕ್ಕೆ ಆಗ್ಲಿಲ್ಲ" ಅಂದ.."
" ಹೌದಾ? !!"
"ಅಷ್ಟೇ.. ಅಲ್ಲಾ..ಸಾರ್..
ಅದಕ್ಕೂ ಮೊದಲು ಕೈ ಕೊಟ್ಟಾಗ...
ಅವನ ಸ್ವಂತ ಮಾವನ್ನ ಸಾಯಿಸಿ ಬಿಟ್ಟಿದ್ದ..!!
ಅವನು ರಜೆ ಹಾಕ್ದಾಗಲೆಲ್ಲ ಯಾರನ್ನಾದ್ರು ಸಾಯಿಸಿ ಬಿಡ್ತಾನೆ ಸಾರ್..!!..
ಬಲು ಡೇಂಜರ್ ನನ್ನಮಗ ಸಾರ್.. !!"
"ಆಯೋ ರಾಮಾ.....!!
ಹೌದೇನೋ...??"
"ಸಾರ್..
ತಪ್ಪು ತಿಳ್ಕೋಬೇಡಿ..
ನಿಮ್ಮ ಸ್ನೇಹಿತರು ತುಂಬಾ ಒಳ್ಳೆಯವರು..!
ಅವರು ತಮ್ಮ ಜನರಿಗೆ ಏನಾದ್ರೂ ಮಾಡಿ...
ಹೇಗಾದ್ರೂ ಮಾಡಿ...
ಆಸ್ಪತ್ರೆ ಸೇರ್ಸಿ...ಅಪರೇಷನ್ ಮಾಡ್ಸಿ..
ಐಸಿಯೂ ದಲ್ಲಿಡ್ತಾರೆ..
ನಮ್ಮ ಕಾಳಿಯಪ್ಪನ್ ಹಾಗೆ ಸಾಯ್ಸಲ್ಲ...
ನಿಮ್ಮ ಫ್ರೆಂಡು ತುಂಬಾ ಒಳ್ಳೆಯವರು.. ಸಾ...!!.."
ನಾಗು ಹೊಟ್ಟೆ ತುಂಬಾ ನಕ್ಕುಬಿಟ್ಟ...!
"ಮೇಸ್ತ್ರಿ..
ಸಾಯಿಸಿ ಬಿಟ್ರೆ ಖರ್ಚು ಕಡಿಮೆ ಕಣೋ...!
ಈ ಆಸ್ಪತ್ರೆ..
ಅಪರೇಷನ್ನು..
ಐಸಿಯೂ ...
ಡಾಕ್ಟರ್ ಬಿಲ್ಲುಗಳು....ಸಿಕ್ಕಾಪಟ್ಟೆ ಖರ್ಚು ಕಣಪಾ...!
ಹಾಗಾಗಿ ನನ್ನ ಸ್ನೇಹಿತನಿಗಿಂತ ನಿಮ್ಮ ಕಾಳಿಯಪ್ಪನ್ ತುಂಬಾ ಒಳ್ಳೆಯವನು...
ನಿಮಗೆಲ್ಲ ಖರ್ಚಿನ ಬಾಬ್ತು ಹಾಕೋಲ್ಲ...
ನಿಮ್ಮ ಕಾಳಿಯಪ್ಪನ್ ತುಂಬಾ.. ತುಂಬಾ..ಒಳ್ಳೆಯವನು..."
ಸರ್ಟಿಫಿಕೆಟ್ ಕೊಟ್ಟುಬಿಟ್ಟ...!!
ನನಗೂ ಮೇಸ್ತ್ರಿಗೂ ಗೊಂದಲ ಉಂಟಾಯಿತು...
ತಲೆಹಾಕಬೇಕೋ ಬೇಡವೊ ಅಂತ ವಿಚಾರ ಮಾಡುತ್ತ ಸುಮ್ಮನಿದ್ದು ಬಿಟ್ಟೇವು....
41 comments:
ಹ ಹ ಹ ಹ ನಿಲ್ಲುತ್ತಿಲ್ಲಾ ನಗು ಏನು ಮಾಡಲಿ.ನಿಮ್ಮ ಮೇಸ್ತ್ರಿ ಮಾತಿಗೆ ನನ್ನ ಬೆಂಬಲ ವಿದೆ.ಪಾಪ ಕೂಲಿಯವ ತನ್ನ ಸಮಯಕ್ಕೆ ತಕ್ಕಹಾಗೆ ಒಬ್ಬೊಬ್ಬರನ್ನು ಸಾಯಿಸಿ ತನ್ನ ಕಾರ್ಯ ಸಾಧನೆ ಮಾಡುತ್ತಿದ್ದ. ನಾಗು ಫ್ರೆಂಡು ಪಾಪ ಆಸ್ಪತ್ರೆ , ಪರ್ಜ್ನೆ ತಪ್ಪುವುದೂ,ಐ.ಸಿ.ಯೂ , ಇಷ್ಟರಲ್ಲೇ, ತಮ್ಮ ಕಾರ್ಯ ಸಾಧನೆ ಮಾಡಿಕೊಂಡಿದ್ದಾರೆ. ಆದರೆ ಇಬ್ಬರಲ್ಲಿಯೂ ಒಂದೇ ವೆತ್ಯಾಸ ಒಬ್ಬ ಅವಿಧ್ಯಾವಂತಾ ಮತ್ತೊಬ್ಬ ವಿಧ್ಯಾವಂತಾ . ಇಬ್ಬರಿಗೂ ಅವರ ಬುದ್ದಿವಂತಿಕೆಗೆ ಸಲಾಂ ಹೇಳೋಣ ಬಿಡಿ. ವಾಸ್ತಾಧಾರಿತ ಹಾಸ್ಯ ಚೆನ್ನಾಗಿ ನಕ್ಕು ಬಿಟ್ಟೆ. ನಾನು.ಜೈ ಹೋ ಪ್ರಕಾಶಣ್ಣ.
:-)
Jai hoooooooooooo
ಬಾಲೂ ಸರ್...
ಸಮಯ ಸಾಧಕತನ....
ಎಲ್ಲರಲ್ಲಿಯೂ ಇರುತ್ತದೆ...
ನನ್ನಲ್ಲೂ... ನಿಮ್ಮಲ್ಲೂ... ಎಲ್ಲರಲ್ಲೂ....
ಇಂದಿನ ಜಗತ್ತಿನಲ್ಲಿ ಅದು ಅನಿವಾರ್ಯ ಅನ್ನುವಷ್ಟು...
ಬೇರೆಯವರಿಗೆ ತೊಂದರೆಯಾಗದೆ ಇರುವ ಸಮಯಸಾಧಕತನ ಒಳ್ಳೆಯದು...
ನನಗನ್ನಿಸುತ್ತದೆ...
"ನನಗೆ ಕೆಲಸಕ್ಕೆ ತೊಂದರೆಯಾದರೂ...
ಕಾಳಿಯಪ್ಪನ್ ಒಳ್ಳೆಯವನು..."
ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
HAAA Haaa Haaaa :D
PrakashaNNa Super !!
ಪ್ರಕಾಶ,
ಈ ಖದೀಮರ ಅಭಿನಯ ಕಲೆಯನ್ನು ಮೆಚ್ಚಲೇಬೇಕು, ಆದರೆ ದೂರದಿಂದ! ನಿಮ್ಮ ವ್ಯಂಗ್ಯ ಹಾಗು ವಿನೋದಶೈಲಿ ಈ ಲೇಖನದಲ್ಲಿ ಬಲು ಸೊಗಸಾಗಿ ಮೂಡಿ ಬಂದಿದೆ.
ಸುಬ್ರಮಣ್ಯರೆ...
ಸಮಯ ಸಾಧಕತನ....ಇಂದಿನ ಬದುಕಿನಲ್ಲಿ ಅನಿವಾರ್ಯ...
ಸಮಯಕ್ಕೊಂದು ಸುಳ್ಳು ಹೇಳಲೇ ಬೇಕಾಗುತ್ತದೆ...
ಅದು ಆರೋಗ್ಯಕರವಾಗಿರಬೇಕಷ್ಟೆ...
ಯಾರದರೂ ಸ್ನೇಹಿತರು "ವಿಪರೀತ ಖರ್ಚಿನ ಸಮಸ್ಯೆ ಹೇಳಿಕೊಂಡರೆ..
ಅನುಮಾನಪಡುವಷ್ಟು ನಮ್ಮ ಮನಸ್ಸುಕೆಟ್ಟುಹೋಗಿದೆ..."
ಎಲ್ಲದೂ ನಾವೇ ಮಾಡಿಕೊಂಡ...
ಕಟ್ಟಿಕೊಂಡ ಪರಿಸರ ಇದು...!
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಮಹೇಶ...
ದಾಸರ ಹಾಡು ನೆನಪಾಗುತ್ತದೆ...
"ಸುಳ್ಳುನಮ್ಮಲಿಲ್ಲವಯ್ಯ...
ಸುಳ್ಳೇ ನಮ್ಮ ದೇವರೂ..."
ಕಾಳಿಯಪ್ಪನ್ ನಮ್ಮ ಟೀಮಿನಲ್ಲಿ ಜಗತ್ ಪ್ರಸಿದ್ದನಾಗಿದ್ದಾನೆ...
ಆತ ಒಂದುದಿನ ಕೆಲಸಕ್ಕೆ ಬಾರದಿದ್ದರೆ...
"ಸಾರ್.. ನಾಳೆ ಒಂದು ಮರ್ಡರ್ ಗ್ಯಾರೆಂಟಿ’ ಅನ್ನುವಷ್ಟು... !!
ನಾವು ಎಷ್ಟೇ ಚಾಳಿಸಿದರೂ, ಛೇಡಿಸಿದರೂ..
ಆತ ತನ್ನ ಸ್ವಭಾವ ಬಿಡುವದು ಕಷ್ಟ...
ಮಹೇಶ್....
ಇಷ್ಟಪಟ್ಟಿದ್ದಕ್ಕೆ..ಪ್ರೋತ್ಸಾಹಕ್ಕೆ ಧನ್ಯವಾದಗಳು...
ಚಿಕ್ಕೋರಿದ್ದಾಗಾ ಇಸ್ಕೂಲಿಗ್ ಚಕ್ಕರ್ ಹಾಕಿ ಆಮ್ಯಾಕೆ ಮೇಸ್ಟ್ರು ಕೇಳಿದ್ರೆ ನಾವೂನೂವೆ ಮನೆ ಮಂದೀನೆಲ್ಲಾ ಒಂದ್ ರೌಂಡು ಆಸ್ಪತ್ರೆ ಸೇರಿಸ್ತಿದ್ವಿ ಪ್ರಕಾಶಣ್ಣಾ... ಆದ್ರೆ ಕೆಲವು ಹೈಕ್ಳು ದೊಡ್ದೋರಾದ್ಮೆಲೂ ಅದ್ನೇ ಮಾಡ್ತಾವಲ್ಲಾ. ಯೋನ್ ಹೇಳಾ ಣಾ ಇಂತೊರ್ಗೆ... ಬೋ ಪಸಂದಾಗಯ್ತೆ ಕತೆ.. ಸಾನೆ ನಗ್ಸಿದ್ದಕೆ ಸಲಾಮು..
ಪ್ರಕಾಶ್ ಹೆಗಡೆಯವರೆ...ಈ ಕತೆಯನ್ನು ಮೊದಲೊಮ್ಮೆ ನೀವು ಹೇಳಿದ್ದಿರಿ...ಅ೦ದು ಹೊಟ್ಟೆ ತು೦ಬ ನಕ್ಕಿದ್ದೆ...ಇ೦ದು ಇಲ್ಲಿ ಒದಿದಾಗಲು ಅದೆ ಅನುಭವವಾಯ್ತು.ಚೆನ್ನಾಗಿದೆ.
haha prakashanna as usual no words its simply superb:) but this reminds me of my childhood :P whenever i missed de school de leave letter wud say "grand mother died" :grand pa died" :P thy died b4 i was born though :P if my principal wud turn de pages of my leave book surely he wud ve killed me :)
ಹಹಹಹ....
ನಾನು ಸಾರಕ್ಕಿ ಬಳಿ ಲೈಸೆನ್ಸ್ ಇಲ್ಲದೆ ಬೈಕ್ ಹೊಡಿಸ್ತಾ ಇದ್ದಾಗ ಪೊಲೀಸ್ ಕೈಗೆ ಸಿಕ್ಕಾಗ ಸುಳ್ಳು ಹೇಳಿದ್ದು ನೆನಪಾಯಿತು....
ಸಾರ್ ಅರ್ಜೆಂಟ್ ಆಸ್ಪತ್ರೆಗೆ ಊಟ ಕೊಡಲು ಹೋಗಬೇಕು. ನನ್ನ ತಂಗಿಗೆ ಡೆಲಿವರಿ ಇದೆ ಅಂತ ಹೇಳಿ ಬ್ಯಾಗ ನಲ್ಲಿದ್ದ ಊಟದ ಬಾಕ್ಸ್(ಆಫೀಸ್ ನವರಿಗೆಲ್ಲಾ ಅಂತ ಹೆಂಡತಿ ದೊಡ್ಡ ಬಾಕ್ಸ್ ಕೊಟ್ಟಿದ್ದಳು). ತೋರಿಸಿದ್ದಾಗ ಪೊಲೀಸ್ ಬಿಟ್ಟಿದ್ದ....
ha ha prakasanna,soooooooooper,
prakasanna supper, jai hooooooo
ವಾಣಿ ಪುಟ್ಟಿ...
ಸಮಯಕ್ಕೊಂದು ಸುಳ್ಳು ನಾನೂ ಹೇಳಿದ್ದೇನೆ..
ನೀವೂ ಹೇಳಿರ್ತೀರಿ...
ಎಲ್ಲರೂ ಹೇಳಿರ್ತಾರೆ...
ಹೇಳುವ ಸಂದರ್ಭವೇನು?
ಬಹುಷಃ ನಾವೆಲ್ಲ ಸಣ್ಣ ಸಣ್ಣ ಕಾರಣಕ್ಕಾಗಿ ಹೇಳಿರುತ್ತೇವೆ...
ಕೆಲವರು ಅದನ್ನೇ ರೂಢಿಮಾಡಿಕೊಂಡು ಚಟವನ್ನಾಗಿಸಿಕೊಂಡಿರುತ್ತಾರೆ...
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !
prakaashanna;harmless ಸುಳ್ಳುಗಳಾದರೆ ಪರವಾಗಿಲ್ಲ.ಬೇರೆಯವರಿಗೆ ಟೋಪಿ ಹಾಕುವಂತಹ ಸುಳ್ಳುಗಳು ಬೇಡ .ಇದು ಟೋಪಿ ಹಾಕಿಸಿಕೊಂಡು ಹಣ ಕಳೆದುಕೊಂಡವರ ಅಭಿಪ್ರಾಯ.ಹಾಸ್ಯ ಲೇಖನ ಚೆನ್ನಾಗಿದೆ.ನನ್ನ ಅಭಿಪ್ರಾಯದಲ್ಲೂ ನಿಮ್ಮ ಮೆಸ್ತ್ರೀನೆ ಎಷ್ಟೋ ಮೇಲು.
ha ha ha...nice one...kathe odi nan students kodo nepagalu nenapaitu....yak late classge andre my 'mom is not well mam' antare... heege nim kalappan kuda...ha ha ha...
ಪ್ರಕಾಶಣ್ಣ..
ಹೌದು, ಸಮಯಸಾದಕತನದಿ೦ದ ಬೇರೆಯವರ ಜೀವನವೆ ಅಲ್ಲೋಲಕಲ್ಲೋಲ ಆಗದಿದ್ರೆ ಸಾಕು. ಬರೀ ಗೆಳೆಯರೂ ಅ೦ತಲ್ಲ, ಕೆಲಸಗಾರರೂ ಅ೦ತಲ್ಲ. ಪರಿವಾರದ ಒಬ್ಬ ಸದಸ್ಯನ ಎಡವಟ್ಟುತನದಿ೦ದ ಇಡೀ ಪರಿವಾರವೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳಬಾರದು ಅಷ್ಟೆ.
ಕಥೆಯ ಮೂಲಕ ಚನ್ನಾಗಿ ವಿವರಿಸಿದ್ದೀರಿ.
ವಾಸ್ತವವನ್ನು ತಮಾಷೆಯಾಗಿ ನಿರೂಪಿಸಿದ್ದೀರಿ ಸರ್!
ಒಂಥರಾ ಸಕ್ಕರೆ ಲೇಪನದ ಕಹಿ ಗುಳಿಗೆಯಂತೆ!
ಈ ತರಹದ ಗಿರಾಕಿಗಳು ನಮಗೂ ಎಲ್ಲೆಲ್ಲೂ ಸಿಗುತ್ತಾರೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಸಹೋದ್ಯೋಗಿಯೊಬ್ಬ ರಜೆಗಾಗಿ ಅವರ ತಾತನನ್ನು ಏಳೆಂಟು ಬಾರಿ ಸಾಯಿಸಿದ್ದ! ನನಗೂ ನೆನಪಿದೆ.
ಬಾರ್ ಗಳಲ್ಲಿ ಎಣ್ಣೆ ಹೊಡೆದು ಬಿಲ್ ಟೈಂಗೆ
ಫೋನಾಯಿಸೋ ಗೆಳೆಯರು...
ಇಸ್ಪೀಟ್ ಅಡ್ಡೇಯಲ್ಲಿ ಬನೀನ್ ಸಮೇತ ಬಿಚ್ಚಿಸಿಕೊಂಡ ಮೇಲೆ
ಫೋನಾಯಿಸೋ ಗೆಳೆಯರು...
ಹಲವರಿದ್ದಾರೆ..
ನಿಮ್ಮ ಮೇಸ್ತ್ರೀ ಒಳ್ಳೆಯವನು ಬಿಡಿ ಸಾರ್... ಪಾಪ ನಿಯತ್ಗಾರ...
Pl. visit my blogs:
www.badaripoems.wordpress.com
www.badari-poems.blogspot.com
www.badari-notes.blogspot.com
Ur comments are pathfinder to me.
Pl. catch me at Facebook:
Profile : Badarinath Palavalli
ha ha ,, havdu.. inthaha janaranna naavu jeevanadalli saakashtu nodirutteve.. tumba chennaagi nirupisiddira,,
jai ho..
hhhh :) mast idde :)
ಹೆಗಡೇಜಿ ಎಂದಿನ ನಿಮ್ಮ ಶೈಲಿ ತೀರ ಸಕಾಲಿಕ ಬರಹ.
ಶಿಕ್ಷಿತ ಸುಳ್ಳುಗಾರ ಯಾವಾಗಲು(ಲೂ) ಡೇಂಜರ್ರೇ
ಏನುಮಾಡೋದು ಈ ವ್ಯಾಧಿ ಅನೇಕ "ಮಹನೀಯ"ರಿಗಿದೆ
ಸುನಾಥ ಸರ್...
ಕೆಲವೊಂದು ದೌರ್ಬಲ್ಯ ನಮ್ಮಿಂದ ಇಂಥಹ ಸಮಯಕ್ಕೆ ತಕ್ಕ ಸುಳ್ಳನ್ನು ಹೇಳಿಸಿಬಿಡುತ್ತದೆ..
ನಾನು ಕತಾರ್ ದೇಶದಲ್ಲಿದ್ದಾಗ ಕ್ರಿಕೆಟ್ ಹುಚ್ಚು ಬಹಳ ಇತ್ತು.
ನಮ್ಮ ಪ್ರಾಜೆಕ್ಟ್ ಮ್ಯಾನೇಜರ್ ತುಂಬಾ ಒಳ್ಳೆಯವರು..
ನನ್ನ ಕ್ರಿಕೆಟ್ ಹುಚ್ಚು ಅವರಿಗೂ ಗೊತ್ತಿತ್ತು..
ನಾವು ಒಂದು ವಾರದ ಕಾರ್ಯಕ್ರಮವನ್ನು ಮುಂಚಿತವಾಗಿ ಕೊಡಬೇಕಿತ್ತು..
"ಪ್ರಕಾಶ್.. ನೀವು ೨೪ ಕ್ಕೆ ಕಾಂಕ್ರೀಟ್ ಹಾಕ್ತೀರಿ ಅಂದಿದ್ದೀರಿ..
ಅವತ್ತು ನಿಮಗೆ ಜ್ವರ ಬರುತ್ತದಲ್ಲವಾ?"
ಆಶ್ಚರ್ಯವಾಯಿತು ನನಗೆ..
"ಯಾಕೆ ಸರ್?"
"ಅವತ್ತು ಭಾರತ . ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಇದೆಯಪ್ಪಾ.."
ನಾನು ತಲೆ ಹಾಕಿದೆ..
ಅವರು ಒಂದು ದಿನ ಮುಂಚಿತವಾಗಿ ಕಾಂಕ್ರೀಟ್ ಹಾಕಿಸಿದರು...
ಕ್ರಿಕೆಟ್ ಇದ್ದಾಗ ನನಗೆ ಬಹಳ ಜ್ವರ ಬರ್ತಿತ್ತು... ಹ್ಹಾ..ಹ್ಹಾ.. !
ಆದರೆ ಈಗಲ್ಲ...
ಸರ್ ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ನಾಗು ಪಂಚ್. ನೈಸ್ ಒನ್.
ಸಮಯಕ್ಕೊ೦ದು ಸುಳ್ಳು! ವ್ಯಕ್ತಿಗಳಿಗನುಗುಣವಾಗಿ ವೈವಿಧ್ಯ.
ನಿಮ್ಮ ಬರಹದ ನಿರೂಪಣೆ ಚೆನ್ನಾಗಿದೆ ಪ್ರಕಾಶ್ ರವರೆ, ಅಭಿನ೦ದನೆಗಳು.
tumbaa haasyamayavagide lekhana...
ದಿಲಿಪು..
ನಿಮ್ಮ ಪ್ರತಿಕ್ರಿಯೆ ಓದಿ ನಮ್ಮ ಓದಿನ ದಿಗಳಲ್ಲಿ ಒಬ್ಬ ಪುಣ್ಯಾತ್ಮನ ..
ಅವನ ಭಾನಗಡಿ ನೆನಪಾಯಿತು...
ಅವನ ಬಗೆಗೆ ಬರೆಯಲೇ ಬೇಕು..
ಇಷ್ಟು ದಿನ ನೆನಪೇಕೆ ಆಗಲಿಲ್ಲ... ಇದೂ ಆಶ್ಚರ್ಯ..
ಸಮಯಕ್ಕೊಂದು ಸುಳ್ಳು ಬೇರೆಯವರಿಗೆ ಕಷ್ಟಕೊಡದಿದ್ದರೆ ಸಾಕು...
ಲೇಖನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸು... ಜೈ ಹೋ !
ನಿವೇದಿತಾ...
ನಾನು ಮುಂಬೈನಲ್ಲಿದ್ದಾಗ ನಾನು ಕೆಲಸ ಮಾಡುವ ಕಂಪನಿಯಲ್ಲಿ ರಜೆ ಬಹಳ ಕಡಿಮೆ ಸಿಗುತ್ತಿತ್ತು..
ದೀಪಾವಳಿ.. ಗಣೇಶ ಹಬ್ಬಕ್ಕೆ ರಜೆ ಸಿಗುವದೇ ಇಲ್ಲವಾಗಿತ್ತು...
ಆಗ ಒಂದು ಉಪಾಯ ಮಾಡುತ್ತಿದ್ದೆ...
ನನ್ನ ಅಣ್ಣನಿಗೆ ಹೇಳಿ "ಟೆಲಿಗ್ರಾಮ್" ತರಿಸಿಕೊಳ್ಳುತ್ತಿದ್ದೆ...
( ಅಣ್ಣನಿಗೆ ಪತ್ರ ಬರೆದು ಟೆಲಿಗ್ರಾಮ್ ವಿಷಯವನ್ನು ಬರೆದು ಕಳುಹಿಸುತ್ತಿದ್ದೆ)
" Situation serious. Start immedietly"
ಆಗ ಏನಾದರೂ ಸುಳ್ಳು ಹೇಳಿ ರಜೆ ಗಿಟ್ಟಿಸಿಕೊಂಡು ಬರುತ್ತಿದ್ದೆ..
ಹ್ಹಾ..ಹ್ಹಾ..
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಸವಿಗನಸು "ಮಹೇಶ್"
ಸಮಯಕ್ಕೊಂದು ಹೇಳುವ ಸುಳ್ಲು ನಮಗೆ ಅನುಕೂಲವಿದ್ದು.. ಬೇರೆಯವರಿಗೆ ತೊಂದರೆಯಾಗದಿದ್ದರೆ..
ನಮ್ಮ ಕಾರ್ಯಸಾಧನೆಯಾದರೆ ಏನೂ ಸಮಸ್ಯೆ ಇಲ್ಲ..
ನೀವು ಹೇಳಿದ ಸುಳ್ಳು ಇಷ್ಟವಾಯಿತು...
ಟ್ರಾಫಿಕ್ ಪೋಲಿಸನಿಗೆ ದಿನಾ ಇಂಥಹ ಎಷ್ಟು ಸುಳ್ಳುಗಳನ್ನು ಕೇಳುತ್ತಿರುತ್ತಾನೋ.. !
ಬಹುಷಃ ಅವರಿಗೆ ಒಳ್ಳೆಯವರು ಹೇಳುವ ಸುಳ್ಳು...
ಮಹಾ ಸುಳ್ಳರು ಹೇಳುವ ಸುಳ್ಳು ಗೊತ್ತಾಗಿ ಹೋಗುತ್ತದೆ ಅಂತ ಅನ್ನಿಸುತ್ತದೆ.. ಅಲ್ಲವೆ?
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಸತ್ಯಾರವರೆ...
ನಾವು ಅಪರೂಪಕ್ಕೆ ಸುಳ್ಳು ಹೇಳುತ್ತೇವೆ ಮತ್ತು ಕೇಳುತ್ತೇವೆ..
ನಮ್ಮ ಬಳಿ ಪರಿಣಿತ ಸುಳ್ಳುಹೇಳುವವ ಬಂದು ಸಮಯಕ್ಕೊಂದು ಸುಳ್ಳು ಹೇಳಿದರೆ ನಂಬಿ ಬಿಡುತ್ತೇವೆ..
ಬಲು ಸುಲಭವಾಗಿ..
ಸಮಯಕ್ಕೊಂದು ಸುಳ್ಲು ಹೇಳುವವರೆಲ್ಲ ಫಟಿಂಗರಲ್ಲ..
ನಮ್ಮಲ್ಲಿ ಕೆಲಸ ಮಾಡುವ "ಕಾಳಿಯಪ್ಪನ್" ತುಂಬಾ ಒಳ್ಳೆಯವ.. ಒಳ್ಳೆಯ ಕೆಲಸಗಾರ ಕೂಡ..
ಆದರೆ "ಆದತ್ ಸೆ.. ಮಜಬೂರ್"
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !
ಪ್ರೀತಿಯ ಶ್ರೀರಾಮ...
ಮನೆಯಲ್ಲಿ ಹೆಂಡತಿ ಏನೋ ಸಾಮಾನು ತರಲಿಕ್ಕೆ ಹೇಳಿರ್ತಾಳೆ..
ತರಲು ಮರೆತು ಹೋಗಿರ್ತದೆ..
ಆಗ ಸಮಯಕ್ಕೊಂದು ಸುಳ್ಳು !
ಸಿಕ್ಕಿಹಾಕಿಕೊಳ್ಳದಿದ್ದರೆ ಪರವಾಗಿಲ್ಲ...
ಲೇಖನ ಇಷ್ಟವಾಗಿದ್ದಕ್ಕೆ ಜೈ ಹೋ !
ಪ್ರಕಾಶ್...
ಚನ್ನಾಗಿ ನಕ್ಕೆ...
ಈ ಸಭ್ಯಸ್ಥ (ರ) ಸುಳ್ಳುಗಳು ಭಾರಿ ಅಪಾಯ
ಸಾಯಿಸೋ ಸುಳ್ಳೇ ಎಷ್ಟೋ ವಾಸಿ ಅಂತ ಅನ್ನಿಸ್ತು.....
ಮತ್ತೆ ಕಾಳಿಯಪ್ಪನ್ ತಿಥಿ ಮಾಡೋದು ಯಾವಾಗ??
ಸಮಯಸಾದಕತನದ ಸುಳ್ಳು ಬೇರೆಯವರಿಗೆ ತೊಂದರೆಯಾಗದಿದ್ದರೆ ಪರವಾಗಿಲ್ಲ ,
ಆದರೆ ಸಿಕ್ಕಿಹಾಕಿಕೊಂಡಾಗ ಆಗುವುದು ಪೇಚಾಟ ಮಾತ್ರ ವಿಚಿತ್ರ
Tumba Chenaagide :)
Nimma barahadalli 'Naagu' bandare oduvaaga nanna mukhadallu 'Nagu' mooduttade...
Superr!!
ನನ್ನ ಹೈಸ್ಕೂಲ್ ದಿನದ ಒಂದು ಸನ್ನಿವೇಶ:ನಮ್ಮ ಬೆಂಚಿನಲ್ಲೇ ಕೂರುತಿದ್ದ ನನ್ನ ಸ್ನೇಹಿತನೊಬ್ಬ ಕ್ಲಾಸ್ ಟೀಚರ್ ಹತ್ತಿರ ಕೊಡುವ leave letter ನಲ್ಲಿ 'my grand father's brother ಅಂತ ಬರೆದಿದ್ದ,
ಅದರ ನಂತರ ಇನ್ನೊಬ್ಬ ಟೀಚರ್ ಕೇಳಿದಾಗ ಅವರಿಗೆ my grand mother's brother ಅಂತ ಹೇಳಿದ್ದ...ತಕ್ಷಣ ಯಾಕೋ ಅವರೂ ಕೂಡ ಆ leave letter ತೆಗೆದು ನೋಡಿದರು..ಆಗ ಸಿಕ್ಕಿಬಿದ್ದ ಆಸಾಮಿ..ಆ ಸುಳ್ಳಿಗೆ ಶಿಕ್ಷೆಯಾಗಿ ೨೦ extra page copy writing ಬರೆಯಬೇಕಾಗಿ ಬಂತು ಅವನಿಗೆ..
Tumba chennagide. Kannambadi kattodakku Vishveshwaraiah ede trick balasidru...............
ಪ್ರಕಾಶಣ್ಣ ,
ಮಸ್ತ್ ಇದ್ದು !!! ಹೀಂಗೆ , ಸಾಯ್ಸೋದು , ಆಸ್ಪತ್ರೆ ಗೆ ಸೇರಿಸೋದು .. ಇತ್ತೀಚೆ ಬಹಳ ಕಾಮನ್ ! ಯಾರದ್ರು ಇಂಥ ನೆವ ಹೇಳಿ ಸಾಲ ಕೇಳಿದ್ರೆ .. ಕೊಡೋವ್ರಿಗೂ ಗೊತ್ತಿರತ್ತೆ ಆತ ಹೇಳ್ತಿರೋದು ಶುದ್ಧ ಸುಳ್ಳು ಅಂತ. ಆದರೆ ಏನು ಮಾಡೋದು ? ಕೊಡಲ್ಲ.. ನೀನು ಸುಳ್ಳು ಹೇಳ್ತಾ ಇದ್ದೀಯ ಅಂತ ಹೇಳೋಕೆ ಅಗಲ್ವಲ್ಲ !
ಆಮೇಲೆ .. ಯಾವಾಗಲೂ.. "ಕೊಟ್ಟವ ಕೋಡಂಗಿ, ಇಸಕೊಂಡವ ಈರಭದ್ರ " ನೆ ! ನಂಗೂ ಇಂಥಾ ಅನುಭವ ಸುಮಾರು ಸಲ ಆಗಿದೆ. ನೆವ ಇಲ್ಲದೆ ಹೋದರೂ , ನಾವು ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ನಮ್ಮ ಮೇಲೆ ಸಿಟ್ಟು ಬೇರೆ . ಇನ್ನೊಬ್ರ ಹತ್ರ ಹೇಳೋದು .. " ಅಯ್ಯೋ ಏನೋ ಸ್ವಲ್ಪ ದುಡ್ಡು ಕೊಟ್ಟಿದ್ರು .. ಈಗ ಅದಕ್ಕೋಸ್ಕರ ಏನು ತಲೆ ತಿಂತಾರೆ .. ನಾವೇನು ಓಡಿ ಹೋಗ್ಬಿಡ್ತೀವ? ನಮಗೇನು ಇವರ ದುಡ್ಡೇ ಗತಿ ನಾ? " ಅಂತೆಲ್ಲ ಡಯಲಾಗ್ ಬೇರೆ.
ಇದೆಲ್ಲ ನೆನಪಾಯ್ತು . ಹಾ ಹಾ ಹಾ .. ತುಂಬಾ ಚೆನಾಗಿದೆ ಬರಹ .
Super...... Salagararu....
ಕೃಷ್ಣಮೂರ್ತಿಯವರೆ..
ನಿಜ ಟೋಪಿ ಹಾಕುವಂಥಹ ಸುಳ್ಳು ಬೇಡ..
ಇಲ್ಲಿ ಪ್ರತಿಕ್ರಿಯೆಗಳನ್ನು ಓದುತ್ತ ಇನ್ನೊಂದು ಹಾಸ್ಯ ಘಟನೆ ನೆನಪಾಗುತ್ತಿದೆ..
ಅದು ಬ್ಲಾಗಿನಲ್ಲಿ ಬರೆಯುವಂಥಾದ್ದು.. ಸಧ್ಯದಲ್ಲೇ ಬರೆಯುವೆ..
ಆದರೆ.. ಸಂದರ್ಭಕ್ಕೆ ಅನುಗುಣವಾಗಿ ಎಲ್ಲರೂ ಸುಳ್ಳು ಹೇಳೇ ಹೇಳಿರುತ್ತಾರೆ..
ಪ್ರತಿಕ್ರಿಯೆಗಳು ಟಾನಿಕ್ ಥರಹ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತವೆ.
ನಿಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು..
ha ha ha...
Nija prakashanna... intavare jaasti aagiddare...
Post a Comment