ದಿನ ನಿತ್ಯ ನಾವು ಬಹಳ ಷ್ಟು ಜನರನ್ನು ನೋಡುತ್ತೇವೆ..
ಮಾತಾಡುತ್ತೇವೆ...
ನಮಗೆ ಎಷ್ಟೆಲ್ಲ ಜನ ಪರಿಚಯವಾಗುತ್ತಾರೆ..
ಕೆಲವರ ಸಂಗಡ ಆತ್ಮೀಯ ಗೆಳೆತನವೂ ಆಗುತ್ತದೆ...
ಗೆಳೆತನದ ಬಾಂಧವ್ಯ ಯಾವಾಗಲೂ ಹಸಿರಾಗಿ..
ನಮ್ಮ ಮನದಲ್ಲಿ ಯಾವಾಗಲೂ ...
ಹತ್ತಿರವಾಗುವ ಗೆಳೆಯರು ಅತೀ ಕಡಿಮೆ...
" ಗೆಳೆತನ " ಒಂದು ಜವಾಬ್ದಾರಿ ಕೂಡ...
ನಮಗೆ ಏನೋ ಬೇಸರವಾಗಲಿ..
ಖುಷಿಯಾಗಲಿ..
ಅವರೊಡನೆ ಹಂಚಿಕೊಂಡಾಗಲೇ ಸಮಧಾನ..
ಒಮ್ಮೊಮ್ಮೆ...
ನಾವು..ತಿಂಗಳುಗಟ್ಟಲೆ ಮಾತನಾಡದೇ ಇದ್ದರೂ...
ಗೆಳೆತನ ಮಾತ್ರ ಹಾಗೇಯೇ ಇದ್ದಿರುತ್ತದೆ...!
ಇನ್ನೂ ಗಟ್ಟಿಯಾಗಿ ಬೇರು ಬಿಟ್ಟಿರುತ್ತದೆ...!
ಮತ್ತೆ ಭೇಟಿಯಾದಾಗ ಮಾತುಕತೆಯಾದಾಗ...
ಆ ಸಂತೋಷ..
ಖುಷಿ ಇಮ್ಮಡಿಯಾಗುತ್ತದೆ...
ಇಂಥಹದೊಂದು ಗೆಳೆತನ...
ಗೆಳೆಯ ನನಗೂ ಇದ್ದಾನೆ..
ನನ್ನನ್ನು ಬ್ಲಾಗಲೋಕದಲ್ಲಿ ಬೆಳೆಸಿ ...
ತಾನು ತೆರೆಯ ಮರೆಯಲ್ಲಿ ಸಂತೋಷಿಸುವ ...
ಹೂವಿನಂಥಹ ಮನಸ್ಸಿನವನು...!
ಆರಂಭದಲ್ಲಿ ನಾನು ಬರೆಯುವ ರೀತಿಯ ಬಗೆಗೆ ...
ನನಗೆ ಬಹಳ ಅಂಜಿಕೆಯಿತ್ತು.. ಅಳುಕಿತ್ತು..
"ನೀವು.. ಯಾರನ್ನೂ ಕಾಪಿ ಮಾಡ ಬೇಡಿ....
ಈಗ ಬರೆಯುತ್ತಿರುವದು ವಿಚಿತ್ರವಾಗಿದ್ದರೂ..
ಸರಿಯಾಗಿದೆ..ಚೆನ್ನಾಗಿದೆ.."
ಹೀಗೆ ನನ್ನನ್ನು ಬರೆಯಲು ಹುರಿದುಂಬಿಸಿದ ...
ಗೆಳೆಯ ಮಲ್ಲಿಕಾರ್ಜುನ್..!
ಥೇಟ್ ನನ್ನ ಮತ್ತೊಬ್ಬ ಗೆಳೆಯ "ನಾಗುವಿನ" ಹಾಗೆ...!
ತನಗೆ ಫೋಟೊಗ್ರಫಿಯಲ್ಲಿ ...
ರಾಷ್ಟ್ರೀಯ..
ಅಂತರಾಷ್ಟ್ರೀಯ ಖ್ಯಾತಿಯಿದ್ದರೂ...
ಸ್ವಲ್ಪವೂ ಗರ್ವವಿಲ್ಲದೆ.. ಸರಳತೆ..
ಸಜ್ಜನಿಕೆಯಿಂದ ದಿಗ್ಗಜ ಸಾಹಿತಿಗಳ ಪ್ರೀತಿಗಳಿಸಿದ್ದಾನೆ ನಮ್ಮ "ಮಲ್ಲಿ" ...
ಮೆಡಿಕಲ್ ಶಾಪ್ ನಡೆಸುತ್ತ...
ಪತ್ರಿಕೆಯವರದಿಗಾರನಾಗಿ... ಕ್ಯಾಮರ ಸಂಗಡ "ಹುಡುಕಾಟ" ನಡೆಸುವ ಮಲ್ಲಿ "ಸಮಯವನ್ನು" ಹೇಗೆ ಹೊಂದಿಸುತ್ತಾರೆ ಅನ್ನುವದು ಯಕ್ಷಪ್ರಶ್ನೆ...!
ಇವರ ಅನೇಕ ಫೋಟೊಗಳು ಮುಖಪುಟಕ್ಕೆ ಆಯ್ಕೆಯಾಗಿವೆ...
( ಕನ್ನಡದ ಖ್ಯಾತ ಬರಹಗಾರ "ಮಣಿಕಾಂತ" ಅವರ ಪುಸ್ತಕದ ಮುಖಚಿತ್ರಕ್ಕೆ ಮಲ್ಲಿಯವರು ತೆಗೆದ ಫೋಟೋ..
ಇದುವರೆಗೆ ಈ ಪುಸ್ತಕ ಇಪ್ಪತ್ತು ಸಾವಿರ ಪ್ರತಿಗಳು ಮಾರಾಟವಾಗಿದೆ..)
ಖ್ಯಾತ ಮುಖಪುಟ ವಿನ್ಯಾಸಕಾರ "ರಘು ಅಪಾರ" ಮತ್ತು ಮಲ್ಲಿಯವರ ..
"ಜುಗಲ್ ಬಂದಿ" ಜೋಡಿ ಬಹಳ ಜನಪ್ರಿಯವಾಗಿದೆ...
ಯಾವಗಲೋ ಬರಬೇಕಾಗಿದ್ದ ಪುಸ್ತಕ ಈಗ ಬಿಡುಗಡೆಯಾಗುತ್ತಲಿದೆ..
ಇವರ ಪ್ರತಿಭೆ.. ಪರಿಶ್ರಮ..
ತಮ್ಮ ಕೆಲಸದಲ್ಲಿನ ಶ್ರದ್ಧೆಗೆ ಇನ್ನಷ್ಟು ಮನ್ನಣೆ ಸಿಗಲಿ...
ಕನ್ನಡಿಗರ ಹೆಮ್ಮೆಯಾಗಲಿ ...
ಇವರ ಕನಸಿನ ಕೂಸು " ಅರೆಕ್ಷಣದ ಅದೃಷ್ಟ" ಬರುವ ಭಾನುವಾರ ಬಿಡುಗಡೆಯಾಗುತ್ತಲಿದೆ...
ಖ್ಯಾತ ಪರಿಸರ ತಜ್ಞ ನಾಗೇಶ್ ಹೆಗಡೆಯವರು ಇವರ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ..
ದಯವಿಟ್ಟು ಬನ್ನಿ...
ನಮ್ಮ ಸಂಭ್ರಮದಲ್ಲಿ ಭಾಗಿಯಾಗಿ...
ನಮ್ಮ ಬ್ಲಾಗಿಗ ಗೆಳೆಯರು...
ಅನೇಕ ಸಾಹಿತಿಗಳು....
ಖ್ಯಾತ ಛಾಯಾಚಿತ್ರಕಾರರನ್ನು ಭೇಟಿಯಾಗುವ ಅವಕಾಶ...!
ಹೀಗೆ ಸುಮ್ಮನೆ ಕಳೆದು ಹೋಗುವ ಭಾನುವಾರವನ್ನು ..
ಅರ್ಥಪೂರ್ಣವಾಗಿ ಕಳೆಯುವ ...
ದಯವಿಟ್ಟು ಬನ್ನಿ...
ದಯವಿಟ್ಟು ಬನ್ನಿ....
ಪ್ರಕಾಶಕರು -- "ನವಕರ್ನಾಟಕ "..
ಸ್ಥಳ == ಕನ್ನಡ ಸಾಹಿತ್ಯ ಪರಿಷತ್ತು..( ಚಾಮರಾಜ ಪೇಟೆ..)
ಸಮಯ == ಭಾನುವಾರ ಬೆಳಿಗ್ಗೆ 9.30 ( 23/01/2011)
ವಿಳಾಸಕ್ಕಾಗಿ ಸಂಪರ್ಕಿಸಿ... 9449053412 / 9980217997
ಇಲ್ಲೊಮ್ಮೆ ನೋಡಿ....
32 comments:
Present Prakashanna :-)
ಖ೦ಡಿತ ಬರುವೆ...
congratulations mallikarjun sir ... karyakrama chennagi moodi barali :)
ನಾನೂ ಬರ್ತೇನೆ ಸ್ವಾಮಿ,
ರಾಜೇಶ್...
ಇವರ ಪುಸ್ತಕ ಯಾವಾಗಲೋ ಬಿಡುಗಡೆಯಾಗ ಬೇಕಿತ್ತು...
ನನ್ನ, ಶಿವು ಮತ್ತು ದಿವಾಕರನ ಪುಸ್ತಕ ಬಿಡುಗಡೆಯಂದೇ ಆಗಬೇಕಿತ್ತು...
ಆಗ ಅನಿವಾರ್ಯ ಕಾರಣಗಳಿಂದ ಆಗಲಿಲ್ಲ...
ತಡವಾಗಿಯಾದರೂ ಒಳ್ಳೆಯ ಪ್ರಕಾಶಕರು ಸಿಕ್ಕಿದ್ದು ತುಂಬಾ ಖುಷಿಯಾಗುತ್ತಿದೆ...
ದಯವಿಟ್ಟು ಬನ್ನಿ ...
ಎಲ್ಲ ಬ್ಲಾಗ್ ಗೆಳೆಯರೆಲ್ಲ ಮತ್ತೊಮ್ಮೆ ಸೇರೋಣ... ನಗೋಣ... ಸಂತಸ ಪಡೋಣ...
ಜೈ ಹೋ.. !
ಖಂಡಿತ ಬರ್ತೇನೆ
ಪ್ರಕಾಶಣ್ಣಾ ೯.೩೦ಗೆಲ್ಲ ನಾನು ಅಲ್ಲಿರುತ್ತೇನೆ ಒಕೆ
ಪ್ರಕಾಶಣ್ಣ ನಾನು ಮೈಸೂರಿನಿಂದಾ ಬರಬೇಕೂ ಪ್ರಯತ್ನಿಸುತ್ತೇನೆ.ಮಲ್ಲಿಕಾರ್ಜುನ್ ಸರ್ ನಿಮಗೆ ಶುಭಾಶಯಗಳು.
ವಾವ್! ಎಂಥಾ ಭಾವುಕತೆ ನಿಮ್ಮ ಆತ್ಮೀಯ ಬರಹದಲ್ಲಿ!
ಮಲ್ಲಿ ಸರ್ ಪುಸ್ತಕ ಬಿಡುಗಡೆ ಅವಧಿಯಲ್ಲಿ ನೋಡಿ ಬಹಳ ಖುಷಿಯಾಯ್ತು. ಅಂದು ಇಲ್ಲೊಂದು ಕವನ ಸಂಕಲನ ಬಿಡುಗಡೆ ಇದೆ. ಅದೇ ಬೇಜಾರು. ಮಲ್ಲಿ ಸರ್ ಗೆಳೆಯರಾದ ಅಜಿತ್ ಕೌಂಡಿನ್ಯ ನನ್ನ ಕವನ ಸಂಕಲನದ ಮುಖಪುಟ ಇನ್ನೇನೂ ಅಂತಿಮ ಗೊಳಿಸಲ್ಲಿದ್ದಾರೆ. ಅದರ ಬಿಡುಗಡೆಯ ತಯಾರಿಯಲ್ಲಿ ನಾನಿದ್ದೇನೆ. ಶಿಡ್ಲಘಟ್ಟದವರ ಆತ್ಮ್ನೀಯತೆ ನನಗೆ ತುಂಬಾ ಇಷ್ಟವಾಗುತ್ತಿದೆ. ಬರಲು ಪ್ರಯತ್ನಿಸುತ್ತೇನೆ. ನಿಮ್ಮ ಈ ಲೇಖನ ನನಗೆ ತುಂಬಾ ಆತ್ಮೀಯವಾಯಿತು ಪ್ರಕಾಶಣ್ಣ. ಮೊದಲ ಬಾರಿಗೆ ಜೈ ಹೋ... ಮಲ್ಲಿ ಸರ್...ಪ್ರಕಾಶಣ್ಣ...ಜೈ ಹೋ...ಬ್ಲಾಗ್ ಪ್ರೆಂಡ್ಸ್...
congratulations mallikarjun.
Prakashravare
ಈ ಸಲ ನಿಮ್ಮನ್ನು ಬೇಟಿ ಆಗೋಣ ಅಂದ್ಕೊಂಡಿದ್ದೆ , ಆದರೆ , ಶನಿವಾರ , ಬನುವರ ಕುಮಾರ ಪರ್ವತ ಹತ್ತಿ ಇಳಿಯೋ ಪ್ಲಾನ್ ಹಾಗಿದೆ ,
ಪ್ರಕಾಶಣ್ಣ...
ಮಲ್ಲಿಕಾರ್ಜುನ್ ಅವರಿಗೆ ನಂದೂ ಶುಭಾಶಯ ಮತ್ತು ಅಭಿನಂದನೆ.
ಪ್ರೀತಿಯಿಂದ,
ಶಾಂತಲಾ ಭಂಡಿ
ಪ್ರೀತಿಯ ದಿಗ್ವಾಸ್...
ನಿಮ್ಮಂಥಹ ಉದಯೋನ್ಮುಖ ಫೋಟೊಗ್ರಾಫರ್ ಗಳಿಗೆ ಅವರು ಚೆನ್ನಾಗಿ ಮಾರ್ಗದರ್ಶನ ಮಾಡುತ್ತಾರೆ...
ಸ್ವಲ್ಪವೂ ಅಹಂ ಇಲ್ಲ...
ಅದು ಅವರ ವಿಶೇಷ..
ಖಂಡಿತಾ ಬನ್ನಿ.. ನಿಮಗೆ ಅವರ ಪರಿಚಯ ಮಾಡಿಕೊಡುತ್ತೇನೆ...
ರಂಜಿತಾ...
ನಮ್ಮ ಗೆಳೆಯರ ಬಳಗದಲ್ಲಿ ನಮಗೆಲ್ಲ
"ಮಲ್ಲಿಯವರ ಒಂದು ಪುಸ್ತಕ ಬಿಡುಗಡೇಯಾಗ ಬೇಕು" ಅಂತ ಕೊರಗು ಇತ್ತು...
ನವ ಕರ್ನಾಟಕ ಪ್ರಕಾಶನದವರು ಈ ಕೊರಗನ್ನು ದೂರ ಮಾಡಿದ್ದಾರೆ...
ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು..
ಜೈ ಹೋ...!
ಪ್ರೀತಿಯ ಪರಾಂಜಪೆಯವರೆ..
ದಯವಿಟ್ಟು ಬನ್ನಿ.. ನಾವು ಬ್ಲಾಗಿಗರೆಲ್ಲ ಸೇರಿ ಸಂಭ್ರಮಿಸೋಣ...
ನಿನ್ನೆ ಮಣಿಕಾಂತರವರು ಒಂದು ಸ್ವಾರಸ್ಯಕರವಾದ ವಿಷಯ ಹೇಳಿದರು..
ಮಣಿಕಾಂತರವರ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕಕ್ಕಾಗಿ ಮಲ್ಲಿಯವರು ಒಟ್ಟು ಎಂಬತ್ತು ನಾಲ್ಕು ಫೋಟೊಗಳನ್ನು ತೆಗೆದಿದ್ದರಂತೆ. !!
ಅಬ್ಭಾ ಅವರ ತಾಳ್ಮೆಯೆ... !!
ಪ್ರತಿಸಾರಿಯೂ ಅವರು ಕಳುಹಿಸಿದ ಫೋಟೊಕ್ಕೆ "ಕ್ಷಮಿಸಿ ಇಷ್ಟವಾಗಲಿಲ್ಲ" ಅನ್ನುತ್ತಿದ್ದರಂತೆ...
ಕೊನೆಯಲ್ಲಿ ಮಣಿಕಾಂತರವರಿಗೆ ಇಷ್ಟವಾದ ಫೋಟೊ ಈಗ ಮುಖಚಿತ್ರವಾಗಿದೆ.. !
ದಯವಿಟ್ಟು ಬನ್ನಿ ನಾವೆಲ್ಲ ಕಾರ್ಯಕ್ರಮದಲ್ಲಿ ಸೇರೋಣ...
ಮಲ್ಲಿಯವರಿಗೆ ಅಭಿನಂದನೆ ಹೇಳೋಣ...ಜೈ ಹೋ !!
Mallikarjun awarige abhinandane...
naanantoo nimma fanu :)
- CheT
ಪ್ರೀತಿಯ ಮಲ್ಲಿಕಾರ್ಜುನ್ ಅವರ ಕಾರ್ಯಕ್ರಮಕ್ಕೆ ಶುಭಾಶಯಗಳು.. ಪ್ರಕಾಶಣ್ಣಾ ನಿಮ್ಮ ಕಡೆ ಇಂದ ಮಲ್ಲಿಕಾರ್ಜುನ್ ಅವರಿಗೆ ಪ್ರಮೋಟ್ ಮಾಡ್ತ ಇರೋದಕ್ಕೆ ನಿಮಗೂ ಧನ್ಯವಾದ.. ತುಂಬಾ ಸಂತೋಷ ಇಂತಹ ಪುಸ್ತಕಗಳು ಹೊರಗೆ ಬರಲಿ ಮರೆಯಲ್ಲಿರುವ ಪ್ರತಿಭೆಗಳು ಅನಾವರಣಗೊಳಲಿ... :)
ಗಣಕಯಂತ್ರದ ತೊಂದರೆಯಿಂದಾಗಿ ಒಂದು ವಾರ ಅಂತರಜಾಲಕ್ಕೆ ಬರಲಾಗಿರಲಿಲ್ಲ. ಮಲ್ಲಿಕಾರ್ಜುನರ ಕಾರ್ಯಕ್ರಮಕ್ಕೆ ಶುಭಾಶಯಗಳು.
ಹೋ,, ನನಗೆ ಬರುವುದಕ್ಕೆ ಆಗೋದಿಲ್ಲ..... ಬೆಂಗಳೂರಿನಲ್ಲಿ ಇದ್ದಿದರೆ... ಖಂಡಿತ ಬರುತ್ತಿದೆ.... I wish you all the best for this book release function.
ನನಗೋಸ್ಕರ ಒಂದು ಪುಸ್ತಕ ತೆಗೆಡಿತ್ತಿರಿ ಪ್ರಕಾಶಣ್ಣ... ಬಂದು collect ಮಾಡ್ಕೋತೇನೆ ......
ಮಲ್ಲಿಕಾರ್ಜುನ್ ರವರಿಗೆ... ನನ್ನ ಅಭಿನಂದನೆಗಳು ..... ಹೇಗೆ ಅವರ ಹವ್ಯಾಸಗಳು... ಫೋಟೋಗ್ರಫಿ ,,, ಎಲ್ಲವೂ ಇನ್ನು ಎತ್ತೆರಕ್ಕೆ ಬೆಳೆಯಲಿ ಏನು ಹಾರೈಸುತ್ತೇನೆ......
ಪ್ರಕಾಶ..ಮಲ್ಲಿ ಪುಸ್ತಕ ಬಿಡುಗಡೆಗೆ ನಾನು ಬರಲಾಗುತ್ತಿಲ್ಲವಲ್ಲ ಎನ್ನುವುದೇ ಕೊರಗು..ಆದರೂ ಇಲ್ಲಿಂದಲೇ ಶುಭ ಮತ್ತು ಯಶಸ್ಸಿನ ಹಾರೈಕೆ ಮತ್ತು ಪ್ರಾರ್ಥನೆ ನನ್ನದು. ಮಲ್ಲಿ ಮತ್ತು ನಿಮ್ಮೆಲ್ಲರೊಡನೆ ಮತ್ತೆ ಸೇರುವ ಸುಯೊಗ ಮಿಸ್ ಆಯ್ತು...
ಪ್ರಕಾಶ, ಮಲ್ಲಿ, ಶಿವು ಫೋಟೋಗಳಿಗೆ ಕಾಯುತ್ತೇನೆ...
ಪ್ರೀತಿಯ ಪ್ರಕಾಶ್ ರವರೆ
ನಿಮ್ಮ ಇಡೀ ಬ್ಲಾಗ್ ಅನ್ನು ಕೇವಲ ೪ ದಿನದಲ್ಲಿ ಓದಿ ಮುಗಿಸಿದೆ, ಆಫೀಸಿನಲ್ಲಿ ಕೂತೆ, ಕೆಲಸವೂ ಇರಲಿಲ್ಲ.
ಕೆಲಸ ಇರಲಿಲ್ಲ ಅನ್ನುವುದಕ್ಕಿಂತ, ನಿಮ್ಮ ಒಂದೊಂದು ಬರಹವೂ ತಾಂತಾನೆ ಓದಿಸಿಕೊಂಡು ಹೋಗುತ್ತಿತ್ತು.
ಒಂದನ್ನು ಓದಿ ಮುಗಿಸಿದರೆ, ಇನ್ನೊಂದನ್ನು ಓದಿ ಬಿಡುವ ತವಕ ಹೆಚ್ಚಾಗುತಿತ್ತು, ಹೀಗಾಗೆ ಎಲ್ಲವನ್ನೂ ಓದಿ ಮುಗಿಸಿದೆ.
ಬಹಳ ಸೊಗಸಾಗಿ ಮೂಡಿ ಬಂದಿದೆ, ನಿಮ್ಮ ನಿರೂಪಣೆ ಬಹಳ ಸೊಗಸಾಗಿತ್ತು. ಅತೀ ಸರಳ, ಹೆಚ್ಚು ನಿಗೂಡ, ಆತ್ಮೀಯತೆ ಎಲ್ಲವೂ ಅದರಲ್ಲಿತ್ತು.
ನಿಮ್ಮ ಆ ಎಷ್ಟೋ ಬರಹಗಳು ಕೇವಲ ನಗಿಸುವುದಷ್ಟೇ ಅಲ್ಲದೆ ಕೆಲವು ಪಾಠವನ್ನೂ ಕಲಿಸುತ್ತದೆ, ಜೀವನದ ಸತ್ಯ ದರ್ಶನ ಮಾಡಿಸುತ್ತದೆ.
ಬಹುಷಃ ನೊಂದವರಿಗೆ ದಾರಿಯಾಗಲೂಬಹುದು.
ಕೊನೆಯದಾಗಿ, ನಿಮ್ಮ ಬರಹ ನನಗೆಲ್ಲೋ ಹೀಗೆ ಸಿಕ್ಕಿತು, ಓದಿದೆ, ಪೂರ್ತಿ ಓದಿದೆ, ಮನಸ್ಸು ತುಂಬಿಕೊಂಡೆ.
ನಿಮ್ಮ "ಹೆಸರೇ ಬೇಡ" ಓದುವ ಮನಸಿದೆ, ಆದಷ್ಟು ಬೇಗ ಓದುತ್ತೇನೆ.
ನಿಮ್ಮ ಅನೇಕ ಫೋಟೋಗಳು ಬಹಳ ಬಹಳ ಹಿಡಿಸಿದವು.
ನಿಮ್ಮ ಮುಂದಿನ ಬರಹಗಳನ್ನೂ ತಪ್ಪದೆ ಓದುತ್ತೀನಿ, ಕಾಯುತ್ತಿರುತ್ತೀನಿ.
ಆತ್ಮೀಯ ಪ್ರಕಾಶ್ ಹೆಗಡೆಯವರೆ,
ಧನ್ಯವಾದ ಎಂದು ಹೇಳಿದರೆ ಶಿಷ್ಟಾಚಾರವಾಗುತ್ತದೆ. ಏನು ಹೇಳಲಿ... ನನ್ನ ಬಳಿ ಪದಗಳಿಲ್ಲ...
ನಿಮ್ಮನ್ನೂ ಸೇರಿಸಿ ಎಲ್ಲ ಬ್ಲಾಗ್ ಸ್ನೇಹಿತರಲ್ಲೂ ವಿನಂತಿಸಿಕೊಳ್ಳುತ್ತೇನೆ...
ನವಕರ್ನಾಟಕ ಸಂಸ್ಥೆಯವರು ಪ್ರಕಟಿಸುತ್ತಿರುವ ನನ್ನ ಪುಸ್ತಕ ’ಅರೆಕ್ಷಣದ ಅದೃಷ್ಟ’ ಬಿಡುಗಡೆಯ ಸಮಾರಂಭವು ಬರುವ ಭಾನುವಾರವಿದೆ. ದಯವಿಟ್ಟು ಬನ್ನಿ. ಹಾರೈಸಿ.
ನಮಸ್ಕಾರಗಳೊಂದಿಗೆ,
-ಮಲ್ಲಿಕಾರ್ಜುನ.ಡಿ.ಜಿ.ಶಿಡ್ಲಘಟ್ಟ
I will be present Prakashanna...
Ninnalli Gunakke Matsaraville yaavagalu.....!!!?????
Prakashanna,
Naanu irodu durada Munbai aaddarinda baralikke aagta illa, Kaaryakrama yashashvi aagi neraverali, 'Malli' sir ge Subhashyagalu.....
JAI HO..........
ಪ್ರಕಾಶಣ್ಣ ಖಂಡಿತ ಬರುತ್ತೇನೆ.ಮಲ್ಲಿಕಾರ್ಜುನ್ ರವರಿಗೆ ಹಾರ್ದಿಕ ಶುಭಾಶಯಗಳು.
Jai Ho Mallikarjun Sir
all the best for the function
namage missingggg, naavoo missingg
Congrats Mallikarjun Sir..
Karyakrama chennagi nadeyali..
ಇತ್ತೀಚೆಗೆ ಅನೇಕ ಕಾರ್ಯಕ್ರಮಗಳಲ್ಲಿ ನನಗೆ ಕ್ಯಾಮೆರ ಹಿಡಿಯುವ ಅವಕಾಶವಿರಲಿಲ್ಲ. ಏಕೆಂದರೆ ಅವೆಲ್ಲಾ ನನ್ನದೇ ಪುಸ್ತಕ ಬಿಡುಗಡೆ, ಸನ್ಮಾನ ಕಾರ್ಯಕ್ರಮಗಳಾಗಿದ್ದವು. ಈಗ ಮತ್ತೊಮ್ಮೆ ಮೊದಲಿನಂತೆ ಛಾಯಾಗ್ರಾಹಕನಾಗಿ ಬರುತ್ತಿದ್ದೇನೆ. ಯಾರಿಗಾದರೂ ದೈರ್ಯವಿದ್ದಲ್ಲಿ ನನ್ನ ಕ್ಯಾಮೆರ ಕಣ್ಣಿನಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಹಳೆ ಬ್ಲಾಗ್ ಗೆಳೆಯರು, ಹೊಸ ಗೆಳೆಯರು, ಖ್ಯಾತ ಲೇಖಕರ ಬೇಟಿ...ಇವೆಲ್ಲಾವನ್ನು ಅನುಭವಿಸಿ ಎಷ್ಟೋ ದಿನಗಳಾಗಿ ಹೋಗಿತ್ತು. ಎಲ್ಲಾ ಅನುಭವಿಸಲು ಮಗುವಿನಂತೆ ಬರಲು ಸಿದ್ದನಾಗಿಬಿಟ್ಟಿದ್ದೇನೆ.
ಮಲ್ಲಿಗೆ ಮತ್ತೊಮ್ಮೆ ಅಭಿನಂದನೆಗಳು.
ಛೇ, ಈ ಸಲವೂ ನನಗೆ ಬರಲಾಗುವುದಿಲ್ಲ. ನನ್ನ ಬ್ಲಾಗ್ ಮಿತ್ರರನ್ನು ಭೇಟಿಮಾಡಲು ಈ ಕಾರ್ಯಕ್ರಮಕ್ಕೆ ಬರಲು ಒಳ್ಳೆ ಅವಕಾಶವಿತ್ತು, ಆದರೆ ಬೇರೆ ಕೆಲಸದನಿಮಿತ್ತ ಆಗುತ್ತಿಲ್ಲ. ಕಾರ್ಯಕ್ರಮ ಯಶಸ್ವಿಯಾಗಲಿ
ಪ್ರೋತ್ಸಾಹಕ್ಕೆ ಧನ್ಯವಾದಗಳು!
ಶುಭವಾಗಲಿ.
ಪ್ರೀತಿಯಿಂದ,
ಅದಮ್ಯಾಯುಷ್ಯ
ಪ್ರಕಾಶ್ ರವರೆ, ,ಅರೆಕ್ಷಣದ ಅದೃಷ್ಟ ,ದ ಕೃತಿ ಬಿಡುಗಡೆಗಾಗಿ ಶುಭ ಹಾರೈಕೆಗಳು.ಸ್ಪುಟವಾದ ಛಾಯ ಚಿತ್ರಗಳು.
ಕ್ಷಮಿಸಿ ನಿಮ್ಮ ಬ್ಲಾಗ್ ಗೆ ತಡವಾಗಿ ಭೇಟಿ ನೀಡುತ್ತಿದ್ದೇನೆ.
Post a Comment