Monday, October 4, 2010

......ಬ ದು ಕು.......




ಇದ್ದಕ್ಕಿದ್ದಂತೆ... ಮೈಯೆಲ್ಲ ಬೆವರಿತು...

ಎದೆಯಲ್ಲಿ ಒಂದು ತರಹದ ನೋವಿನ ಛಳಕು...!
ಮೈ ಅದುರತೊಡಗಿತು...!
ಸಾವಿರಾರು  ಸೂಜಿಗಳಿಂದ  ನನ್ನ ಹೃದಯವನ್ನು  ಚುಚ್ಚಿದಂತಾಯಿತು..

ತಡೆಯಲಾರದ ನೋವು... !

ಜೋರಾಗಿ ಕೂಗಬೇಕೆಂದು ಕೊಂಡೆ...
ಧ್ವನಿ  ಹೊರಗೆ ಬರಲಿಲ್ಲ....

ಅಯ್ಯೋ..  !!

ಇದೇ.. ನನ್ನ ಸಾವಾ...? 
ನಾನು ಸಾಯುತ್ತಿದ್ದೇನಾ..?  ...

ಅಯ್ಯೋ.. !
ಅಸಾಧ್ಯ ನೋವು... ನೋವು...!

ನನ್ನ  ಹೃದಯ ಒಡೆದು ಹೋಗುತ್ತಿದೆಯಾ....?

ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡೆ...

ಬದುಕಿನ  ಕಟ್ಟಕಡೆಯ  ನೋವು  ಇದೇನಾ?  

ನಿಲ್ಲಲಾಗಲಿಲ್ಲ.... 
ಕಣ್ಣು ಕತ್ತಲೆ ಸುತ್ತಿ ಬಂತು...

ನಾನು ಬೀಳುತ್ತಿರುವೆ... ಅಯ್ಯೋ.. ಆಯ್ಯೋ....!!

.... ..........  ....... ....

ಎಚ್ಚರಾಗುತ್ತಿದೆ... 
ಕಣ್ಣುಬಿಡಲು ಪ್ರಯತ್ನಿಸಿದೆ.....
ಮೆಲ್ಲಗೇ... ಕಣ್ಣು ಬಿಟ್ಟೆ... 
ಮಂಜು.. ಮಂಜಾಗಿ.. ಅಸ್ಪಷ್ಟವಾಗಿ  ಕಾಣಿಸಿತು...

ಕಣ್ಣು  ಬಿಡಲಾಗಲಿಲ್ಲ...

"ನೋಡಿ  ಇವರ ಹತ್ತಿರದವರು ಯಾರು.. ?
 ಅವರನ್ನು ಸ್ವಲ್ಪ ಅರ್ಜಂಟಾಗಿ ಕರೆಸಿಬಿಡಿ...


ಇವರು ಹೆಚ್ಚೆಂದರೆ ಇನ್ನೆರಡು ದಿನ  ಬದುಕ ಬಹುದು...


ಮೊದಲೇ ಬಂದಿದ್ದರೆ ...ಏನಾದರೂ ಪ್ರಯತ್ನ ಮಾಡ ಬಹುದಿತ್ತು... 
ಈಗ ಪರಿಸ್ಥಿತಿ ಕೈ ಮೀರಿದೆ.."

ಅಂದರೆ....! ?  
ನಾನು ಸಾಯ್ತಾ ಇದ್ದೀನಾ?
ಇದು ನನ್ನ ಕೊನೆ..  !

ಮತ್ತೆ  ಸೂಜಿ  ಚುಚ್ಚಿದ ನೋವು !

" ಡಾಕ್ಟ್ರೆ..
ಇವರಿಗೆ  ಹತ್ತಿರದವರು ಯಾರೂ ಇಲ್ಲ...
ಹೆಂಡತಿಯೊಡನೆ  ಪ್ರತ್ಯೇಕವಾಗಿದ್ದಾರೆ.."
ಜೀವನ ಪೂರ್ತಿ  ಹಣ.. ಹಣ ಅಂತ  ಹಣದ ಹಿಂದೆಯೇ.. ಬಿದ್ದಿದ್ದರು..

ತುಂಬಾ ಪ್ರ್ಯಾಕ್ಟಿಕಲ್ ಮನುಷ್ಯ..
ಪಕ್ಕಾ  ವ್ಯವಹಾರಸ್ಥ..


ಇವರ ಮಕ್ಕಳೂ.. ಸಹ ಇವರ ಹತ್ತಿರ ಇಲ್ಲ....
  
ತನ್ನ ಮಕ್ಕಳಿಗೆಲ್ಲ  ಪ್ರತ್ಯೇಕ ಮನೆ ಮಾಡಿಕೊಟ್ಟು ಇವರು 

" ಹೌದಾ ? ..
ಇವರ ಮಕ್ಕಳಿಗೆ ಕರೆಸಿ.. 
ಇವರ ಮಡದಿಗೂ ತಿಳಿಸಿ...
ಇವರನ್ನು ಮನೆಗೆ ಕರ್ಕೊಂಡು ಹೋಗ್ತಾರೋ.. 
ಅಥವಾ ಜೀವ ಹೋಗೋ ತನಕ ಇಲ್ಲೇ ಇಡ್ತಾರೋ ಅವರು ನಿರ್ಣಯಿಸಲಿ..
ನಮ್ಮ ಬಿಲ್ ಯಾರು ಕೊಡುತ್ತಾರೆ.. ನೋಡೋಣ..
ನಾನು ಆಮೇಲೆ ಬರ್ತೇನೆ.."

ಬಹುಷಃ ... ಡಾಕ್ಟರ್ ಹೋದರು ಅನಿಸುತ್ತದೆ..

ನನಗೆ  ಷಾಕ್.. !!

ಅಯ್ಯೋ... ದೇವರೇ.. !!!
ನಾನು ಸಾಯ್ತಾ ಇದ್ದೀನಾ?..

ಮೆಲ್ಲಗೇ  ಕಣ್ಣು ಬಿಟ್ಟೆ...
ನನ್ನ ಹತ್ತಿರದದಲ್ಲಿದ್ದವರು  ಹೆಂಡತಿಗೆ ಕೂಗಿ ಕರೆದರು...

ನನ್ನಾಕೆ ಓಡೋಡಿ ಬಂದಳು... !

"ಆಯಾಸ ಮಾಡ್ಕೋಬೇಡಿ...  ಆಸ್ಪತ್ರೆಯಲ್ಲಿದ್ದೀರಿ...
ಏನೋ  ಸಣ್ಣ ತೊಂದರೆಯಾಗಿದೆ.. 
ಎಲ್ಲವೂ ಸರಿಯಾಗುತ್ತದೆ ಅಂತ ಡಾಕ್ಟರ್ ಹೇಳಿದ್ದಾರೆ.."

ನನ್ನಾಕೆ  ಮುಖ ನೋಡಿದೆ...

ಎಂಥಹ ಮುಗ್ಧೆ  ನನ್ನಾಕೆ.. !

ಅಡಿಗೆ ಮನೆ.. 
ದೇವರ ಮನೆಯಲ್ಲೇ... ತನ್ನ ಜೀವನ ಪೂರ್ತಿ ಕಳೆದಳು..  !!


ಕೇವಲ ನನ್ನ ಬೇಕು ಬೇಡಗಳಿಗಾಗಿ  ಬದುಕಿದಳು....


ಏನೇನೋ.. ವ್ರತಗಳು...!
ವಾರಕ್ಕೆ ಮೂರು ದಿನ ಉಪವಾಸಗಳು... !

"ಯಾಕೆ ..  ಈ ಥರಹ ಉಪವಾಸ ಮಾಡ್ತಿಯಾ? 
ಅಪರಾಧಿ ಮನೋಭಾವನೆ ದೇವರ ಭಕ್ತಿಗೆ  ಕಾರಣವಂತೆ..
ನಿನ್ಯಾಕೆ ಇಷ್ಟೆಲ್ಲಾ ವ್ರತ ಮಾಡ್ತಿಯಾ..?" 
ಅಂತ ಒಮ್ಮೆ ಕೇಳಿದ್ದೆ...

"ನೋಡಿ.. 
ನಿಮಗೆ ದೇವರ ಮೇಲೆ ಭಕ್ತಿ ಇಲ್ಲ.. .
ನನಗೆ  ಇದೆ.. 
ಅದನ್ನಾದರೂ ಮಾಡಲು  ಬಿಡಿ.. 
ದಯವಿಟ್ಟು.."

ಇವಳಿಗೆ  ಜೀವನ ಪೂರ್ತಿ ಎಷ್ಟೆಲ್ಲ ತೊಂದರೆ ಕೊಟ್ಟೆ..!
ಛೇ.. ! 
ಹೊರಗಿನ ಪ್ರಪಂಚ ನೋಡಲೂ ಸಹ ಬಿಡಲಿಲ್ಲ... 
ಮನೆಯಲ್ಲೇ ಬಂಧಿಸಿ ಇಟ್ಟುಬಿಟ್ಟೆ.. !

ಜೀವನ ಪೂರ್ತಿ..ನನ್ನ ಸೇವೆ....
ಅಡುಗೆ  ಮನೆ.. ದೇವರ ಮನೆಯಲ್ಲೇ ಇಟ್ಟುಬಿಟ್ಟೆ..

ನಾನು  ಪೂರ್ತಿ  ನನ್ನ ವ್ಯವಹಾರ... ಹಣ.. ಅಂತ  ಮುಳುಗಿ ಹೋದೆ....
ನನ್ನವಳ ಬಗೆಗೆ ವಿಚಾರವನ್ನೇ ಮಾಡಿಲ್ಲ...

ನಾನು ಹೋದ ಮೇಲೆ ಇವಳ ಗತಿ..? ..? 
ಅಯ್ಯೋ ದೇವರೆ..!

ನನ್ನ ಕಣ್ಣೆದುರೇ.. ನನ್ನಾಕೆ  ಹೋಗಿಬಿಟ್ಟಿದ್ದಾರೆ ಒಳ್ಳೆಯದಿತ್ತು....
ಏನು ಮಾಡಲಿ...?


"ನೋಡು... 
ನಾನು ಮನೆಗೆ ಹೋಗ ಬೇಕು...
ಸ್ವಲ್ಪ ಅರ್ಜೆಂಟಾಗಿ  ಮಕ್ಕಳನ್ನೆಲ್ಲ ಕರೆಸು..."

ಮಕ್ಕಳೆಲ್ಲ ಬಂದರು...
ನಾನು ಹಠ ಹಿಡಿದು  ಮನೆಗೆ ಬಂದೆ...

ನಾನು ತುರ್ತಾಗಿ ನನ್ನ  ಮಡದಿಗೆ...
ಅವಳ  ಮುಂದಿನ ಬದುಕಿಗೆ... ಏನಾದರೂ  ಮಾಡಬೇಕಿತ್ತು..

ದೊಡ್ಡ ಮಗನನ್ನು ಕರೆಸಿದೆ...

ಆತ ತನ್ನ ಹೆಂಡತಿಯೊಡನೆ ಬಂದ...
ತನ್ನ ಮಗನನ್ನು ಎತ್ತಿಕೊಂಡಿದ್ದ.. 
ಅವನ ಹೆಂಡತಿ  ಅವನ ಕೈ ಹಿಡಿದುಕೊಂಡಿದ್ದಳು...

ನನಗೆ ನನ್ನ ಹೆಂಡತಿ ನೆನಪಾದಳು...

ನಾನು  ನನ್ನ ಮಡದಿಗೆ ಸ್ವಲ್ಪವಾದರೂ ಪ್ರೀತಿ ಕೊಡಬೇಕಿತ್ತು...

ಛೇ... !


ನಾನು  ನನ್ನ ಜೀವನದಲ್ಲಿ ಎಲ್ಲವನ್ನೂ ವ್ಯವಹಾರವಾಗಿ ಮಾಡಿದೆ....
ನನ್ನ ಮದುವೆಯನ್ನೂ ಕೂಡ...
ಮಾವನ ಬಳಿ ಹಣ, ಸೈಟು ತೆಗೆದು ಕೊಂಡಿದ್ದೆ....


ಜೀವನ ಪೂರ್ತಿ  ನಾನು ಓಡುತ್ತಲೇ.. ಕಳೆದು ಬಿಟ್ಟೆ....
ಒಮ್ಮೆಯಾದರೂ... ಸ್ವಲ್ಪ ನಿಂತು...
ನನ್ನ ಬದುಕಿನಲ್ಲಿ  ಸ್ವಲ್ಪ   ಹಿಂತಿರುಗಿ ನೋಡ ಬೇಕಿತ್ತು...

ಬಹಳ ದೊಡ್ಡ ತಪ್ಪು ಮಾಡಿದೆ...
ಬದುಕಿನ ಪೂರ್ತಿ ಹಣದ ಹಿಂದೆ ಬೀಳಬಾರದಿತ್ತು...

" ನೋಡು... ಮಗನೆ.. 
ಡಾಕ್ಟ್ರು ಹೇಳೀದ್ದಾರೆ.. 
ನಾನು  ಇನ್ನೊಂದು ದಿನ ಬದುಕಿದರೆ ಹೆಚ್ಚು...


ನನ್ನ ಜೀವನ ಪೂರ್ತಿ.. 
ನಿಮ್ಮ ಬದುಕನ್ನು ಚೆನ್ನಾಗಿಡಲು ದುಡಿದೆ...


ನಿಮಗೆಲ್ಲ  ಪ್ರತ್ಯೇಕ ವ್ಯವಹಾರ ಮಾಡಿಕೊಟ್ಟು ನಿಮ್ಮ  
ಜೀವನಕ್ಕೊಂದು ನೆಲೆ ಮಾಡಿದೆ..


ನಾನು ಸಾಯ್ತಾ ಇದ್ದೀನಿ..
ನಾನು ಸತ್ತ ಮೇಲೆ.... 
ನಿನ್ನ ಅಮ್ಮ...  "

ನನಗೆ ದುಃಖವಾಯಿತು.. 
ಗಂಟಲು ಬಿಗಿದು ಕೊಡಿತು..

ಹೇಳಬೇಕಿದ್ದ ಮಾತೆಲ್ಲ  ಕಣ್ಣಲ್ಲಿ ನೀರಾಯಿತು..

ಎಂಥಹ ಅಸಹಾಯಕತೆ  ಇದು.. !

"ಅಪ್ಪಾ.. ಆಯಾಸ ಮಾಡ್ಕೋಬೇಡಿ.. 
ನಿಶ್ಚಿಂತೆಯಾಗಿರಿ..
ನಮ್ಮನೆಯ ಹತ್ತಿರ  ಒಂದು ವೃದ್ಧಾಶ್ರಮವಿದೆ.. 
ಬಹಳ ಚೆನ್ನಾಗಿದೆ..
ಅದನ್ನು ನಡೆಸುವವರು  ನನಗೆ ಬಹಳ ಬೇಕಾದವರು..
ಅಮ್ಮಾ ಅಲ್ಲಿರ್ತಾಳೆ.. 
ನಾನು ದಿನಾಲೂ ಹೋಗಿ ನೋಡ್ಕೊಂಡು ಬರ್ತೇನೆ.
ಅಪ್ಪಾ....  ನೀವು ಚಿಂತೆ ಮಾಡ್ಬೇಡಿ... "

ನಾನು ಕಣ್ಣ್ಮುಚ್ಚಿಕೊಂಡೆ...  ...

ನಾನು ಮಾಡಿದ ಕರ್ಮ  ನನ್ನನ್ನು ಬಿಡುತ್ತಿಲ್ಲ...

ನಾನು ನನ್ನ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ...

ಅವರಿಗೊಂದು ಪ್ರತ್ಯೇಕ ಮನೆ ಮಾಡಿ..
ಆಳು ಕಾಳುಗಳನ್ನಿಟ್ಟಿದ್ದೆ.. 
ದಿನಾಲೂ ನಾನು ಹೋಗಿ ಮಾತನಾಡಿಸುತ್ತಿದ್ದೆ..

ಅಪ್ಪ ಹೋದ ಕೆಲವು ದಿನಗಳಲ್ಲಿ ಅಮ್ಮನೂ ಹೋಗಿಬಿಟ್ಟಳು...

ನನಗೆ ನಿರಾಸೆಯಾಯಿತು... ಏನು ಮಾಡಲಿ?

ಎರಡನೇ ಮಗನನ್ನು ಕರೆಸಿದೆ..

"ಅಪ್ಪಾ..
ನಮ್ಮ ಸಂಬಂಧಿಕರೊಬ್ಬರು ಬಹಳ ಬಡವರಿದ್ದಾರೆ..
ಅವರಿಗೊಂದು ಬಾಡಿಗೆ ಮನೆಕೊಡಿಸಿ.... 
ಅಮ್ಮನನ್ನು ನೋಡಿಕೊಳ್ಳಲು ಹೇಳುತ್ತೇನೆ..


ನೀವು ಚಿಂತೆ ಮಾಡಬೇಡಿ...


ನನ್ನ ಮನೆಯಲ್ಲೇ  ಇಟ್ಟುಕೊಳ್ಳಬಹುದಿತ್ತು...
ನಿಮಗೆ ಗೊತ್ತಲ್ಲ ಹೆಂಗಸರ ವಿಷಯ.. 
ಹಾಗಾಗಿ ಹೀಗೆ ಮಾಡುತ್ತೇನೆ..
ನಾನು ದಿನಾಲೂ ಹೋಗಿ ನೋಡ್ಕೊಂಡು ಬರ್ತೇನೆ..
ನೀವು ಚಿಂತೆ ಮಾಡ್ಬೇಡಿ.. ಅಪ್ಪಾ..."

ಬಿತ್ತಿದಂತೆ ಬೆಳೆ...! 
ಗಿಡದಂತೆ ಫಲ !

ಸಣ್ಣ ಮಗನನ್ನು ಕರೆಸಲಿಲ್ಲ...
ಇವರಿಗಿಂತ  ಬೇರೆಯಾಗಿ ಮತ್ತೆ ಆತ ಬೇರೆ ಏನೂ ಹೇಳಲಾರ... ಅನ್ನಿಸಿತು...

ಬೇರೆ ಏನಾದರೂ  ವ್ಯವಸ್ಥೆ ಮಾಡಲೇ.. ಬೇಕಿತ್ತು....
ಏನು ಮಾಡಲಿ?
ನನ್ನಾಕೆಗೆ  ಮಾರ್ಕೆಟ್ಟಿಗೆ ಹೋಗಿ ಒಂದು ಕೇಜಿ ತರಕಾರಿ ತರಲೂ ಗೊತ್ತಿಲ್ಲ...!

ಈ  ಕೆಟ್ಟ  ಜಗತ್ತಿನಲ್ಲಿ... 
ನನ್ನ ಮುಗ್ಧ ಹೆಂಡತಿ..
ಈ ವಯಸ್ಸಿನಲ್ಲಿ ಹೇಗೆ ಬದುಕುತ್ತಾಳೆ..?

ನನ್ನ ದಬ್ಬಾಳಿಕೆಗೆ ತಲೆಯಾಡಿಸಿ... 
ತುಟಿ ಎರಡು ಮಾಡದೇ.. ನನ್ನೊಂದಿಗೆ  ಬದುಕಿದ ....
ಇವಳಿಗೆ  ಏನಾದರೂ ವ್ಯವಸ್ಥೆ ಮಾಡಬೇಕಲ್ಲ..!!

ಏನು ಮಾಡಲಿ...?

ಮಡದಿಯನ್ನೇ ಕೂಗಿದೆ..

ಓಡೋಡಿ ಬಂದಳು...!

"ನೋಡು..
ನಿನಗೆ  ಬದುಕಿನಲ್ಲಿ ಒಂದು ಸಂಭ್ರಮ...
ಒಂದು ನಗು.. ಸಂತೋಷ ಏನೂ ಕೊಡಲಿಲ್ಲ...


ಯಾವದಕ್ಕೂ ನಿನ್ನ ಇಷ್ಟ ಏನೆಂದು ಕೇಳಲಿಲ್ಲ...

ಕೊನೆ ಪಕ್ಷ ಒಂದು  ಆತ್ಮೀಯ ಮಾತನ್ನೂ ಆಡಲಿಲ್ಲ...

ನಾನು  ಸಾಯ್ತಾ ಇದ್ದೀನಿ...
ಒಂದಷ್ಟು ಹಣ ಮಾಡಿದ್ದೇನೆ...... "

ನನ್ನಾಕೆ ಅಳುತ್ತಿದ್ದಳು..


ಆಕೆ ನನ್ನ ಬಾಯಮೇಲೆ ಕೈ ಇಟ್ಟು ಬಾಯಿ ಮುಚ್ಚಿದಳು..

ನನಗೂ ದುಃಖ ತಡೆದುಕೊಳ್ಳಲಾಗುತ್ತಿಲ್ಲ...


ಈ ತರಹದ ಅಸಹನೀಯ  ಅಸಹಾಯಕತೆ.. ಯಾರಿಗೂ ಬರಬಾರದು....

"ನೋಡಿ ನಿಮಗೆ ಏನೂ ಆಗುವದಿಲ್ಲ..
ನನಗೆ ದೇವರ ಮೇಲೆ ನಂಬಿಕೆ ಇದೆ... ಇರಿ.. ಬಂದೆ...!

ಯಾರನ್ನೋ.. ಕರೆದುಕೊಂಡು ಬಂದಳು....

"ನೋಡಿ  ನೀವು ಚಿಂತೆ ಮಾಡ ಬೇಡಿ..


 ನನ್ನ ತಮ್ಮನನ್ನು ಕೇಳಿ ..
ಒಂದು ಲಾಯರ್ ಹಿಡಿದು ನಿಮ್ಮ ವಿಲ್ ಬರೆಸಿದ್ದೇನೆ..


ಇದಕ್ಕೊಂದು ಸಹಿ ಹಾಕಿಬಿಡಿ..."

ಆ ಲಾಯರ್ ನನ್ನ ಮುಂದೆ ಪೇಪರ್  ಹಿಡಿದ...

ಮತ್ತೆ .....
ಎದೆಯಲ್ಲಿ ಸಾವಿರ ಸೂಜಿಗಳಿಂದ ಚುಚ್ಚಿದ ಅನುಭವ... !


ಹೃದಯ ಹಿಂಡುವ ನೋವು...ಗಂಟಲು ಉಬ್ಬಿ ಬಂತು....!


ಇದು ನನ್ನ ಸಾವಾ..?.. !!










44 comments:

ಸೀತಾರಾಮ. ಕೆ. / SITARAM.K said...

ಬದುಕಿನ ಚಿತ್ರಣ ಮನ ತಟ್ಟುವಂತೆ ಚಿತ್ರಿಸಿದ್ದಿರಾ.. ಸ್ವಾರ್ಥದ ಪರಿಧಿಯಲ್ಲಿ ಸುತ್ತುವ ಸಂಭ೦ಧಗಳನ್ನು ಚೆನ್ನಾಗಿ ಕೆಣಕಿದ್ದಿರಾ....
ಕೊನೆಯ ಪಂಚ ಅನೀರಿಕ್ಷಿತ! ಯಾರು ಸಭ್ಯರಲ್ಲ ಅಥವಾ ಸಭ್ಯ ಮುಗ್ಧತೆಯ ಶೋಷಣೆ
ಅಲ್ಲವೇ...
ಚಂದದ ಕಥೆ

ಸವಿಗನಸು said...

ಪ್ರಕಾಶಣ್ಣ,
ಎಂತಹ ಚಿತ್ರಣ....ಸರಾಗವಾಗಿ ಓದಿಸಿಕೊಂಡು ಹೋಯಿತು....
ಲಾಯರ್ ವಿಲ್ ಎನೆಂದು ತಿಳಿದುಕೊಳ್ಳುವಷ್ಟರಲ್ಲಿ ಮುಗಿದಿತ್ತು....
ಬೇಗ ಮುಂದುವರೆಸಿ....
ಚೆಂದದ ನಿರೊಪಣೆ...

SNEHA HEGDE said...

Aadona banni kannu muchchale.. Toogona banni Uyyale..
Jeevana ondu naataka shaale ..
Navella kuniyova nartana Shaale..

ಜಲನಯನ said...

ನನಗೆ ಭೋಜರಾಜನ ಕಥೆ ನೆನಪಾಯ್ತು ಪ್ರಕಾಶ..ನಿನ್ನ ಪೋಸ್ಟ್ ನೋಡಿ...ಅವನು ತನ್ನ ಚರಮಗೀತೆಯನ್ನ ತನ್ನ ಗೆಳೆಯ ಕವಿಪುಂಗವ ಕಾಳಿದಾಸ ಬಾಯಲ್ಲಿ ಕೇಳಲಿಕ್ಕಾಗಿಯೇ ಸತ್ತಂತೆ ನಾಟಕ ಮಾಡಿದನಂತೆ...ಹಹಹಹ,,,,ಇಲ್ಲಿ ನಮ್ಮ ಸ್ವಾರ್ಥಿ ಸಮಾಜ ಹಾಗೆ ಮಾಡಿದ್ರೆ ನಿಜವಾಗೂ ಎಲ್ಲ ಕರ್ಮ ಮುಗಿಸಿ ಚರಮ ಗೀತೆ ಹಾಡುತ್ತೆ...ಅಪ್ಪಿ ತಪ್ಪಿ ಬದುಕಿಬಿಟ್ರೆ..
ಕೈಗೆ ಬಂದದ್ದು ಬಾಯಿಗಿಲ್ಲದಾಗಿ ಬಿಟ್ರೆ...???
ಚನ್ನಾಗಿದೆ....ಆದರೆ..ಯಾಕೆ ಅಕ್ಷರಗಳು ಒಂದರಮೇಲೊಂದು ..ಎಡಿಟ್ ಮಾಡು...ಸ್ವಲ್ಪ ಸಾಲುಗಲ ಮಧ್ಯೆಯ ಸಾಲು ಹೆಚ್ಚಿಸು ಇಲ್ಲ ಫಾಂಟ್ ಗಾತ್ರ ಕಡಿಮೆ ಮಾಡು..ಚನ್ನಾಗಿದೆ...

Nisha said...

Chennagide Prakashanna.

ಹಳ್ಳಿ ಹುಡುಗ ತರುಣ್ said...

ಪ್ರಕಾಶ್ ಸರ್ ಮನುಷ್ಯನ ಜೀವನದ ಚಿತ್ರಣವನ್ನು ಮನತಟ್ಟುವಂತೆ ಸುಂದರವಾಗಿ ಹೇಳಿದ್ದೀರ...

ಬಿತ್ತಿದಂತೆ ಬೆಳೆ...! ಗಿಡದಂತೆ ಫಲ !..

ನಿಮ್ಮ ಈ ಮಾತು ನೋರಕ್ಕೆ ನೋರು ಸತ್ಯ ಸರ್.. ಮನುಷ್ಯ ತನ್ನ ಸ್ವಾರ್ಥ, ದುರಾಸೆಯಿಂದ
ತಾನು ನಡೆದುಬಂದ ದಾರಿಯನ್ನು ಮರೆಯುತಿದ್ದಾನೆ, ತಂದೆ ತಾಯಿಯಾರನ್ನು ಕೀಳಾಗಿ ನೋಡುತ ಇದ್ದಾನೆ
ತನ್ನ ಮುಂದಿನ ಕರಾಳ ದಿನಗಳ ಮರೆಯುತಿದ್ದಾನೆ..... "ತಾನೊಂದು ಬಗೆದರೆ ದೈವವೊಂದು ಬಗೆವುದಯ್ಯ"...


ಮುಂದುವರಿಸಿ ಸರ್...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಬದುಕಿದ್ದಷ್ಟು ದಿನ ಹಣದ ಹಿಂದೆ ಬಿದ್ದರೆ ಸಾಯುವಾಗ ಬದುಕು ನೆನಪಾಗುತ್ತದೆ

ಹಣ ಕೇವಲ ಆ ಕ್ಷಣಕ್ಕೆ ಅಷ್ಟೇ ಆದರೆ ಸ್ನೇಹಿತರು, ಸ್ನೇಹ ಕೊನೆತನಕ,

ಸುಂದರ ಬರಹ

ಮನಸು said...

badukina kivimaatu... naavellaru tiLidukoLLabekaada vishaya munduvarisi...

AntharangadaMaathugalu said...

ಬಿತ್ತಿದಂತೆ ಬೆಳೆ... ಗಿಡದಂತೆ ಫಲ.... ಎಷ್ಟೊಂದು ಅರ್ಥವತ್ತಾದ ಮಾತುಗಳು. ಅರ್ಥ ಮಾಡಿಕೊಂಡರೆ.. ಇಡೀ ಬದುಕಿನ ಸಾರವೇ ಅಡಗಿದೆ ಈ ಮಾತುಗಳಲ್ಲಿ. ಇದು ಕಥೆಯಲ್ಲ... ಘಟನೆ ಅನ್ನಿಸಿತು. ಚೆನ್ನಾಗಿದೆ.

ಶ್ಯಾಮಲ

Ittigecement said...

ಸೀತಾರಾಮ್ ಸರ್...

ಬದುಕು ಎಲ್ಲೂ ..
ಕಾಯುವದಿಲ್ಲ...
ಯಾರಿಗಾಗಿಯೂ ನಿಲ್ಲುವದಿಲ್ಲ... ಓಡುತ್ತಲೇ ಇರುತ್ತದೆ..

ಅದು ಅನಿವಾರ್ಯವೋ..ಅವಲಂಬನೆಯೋ ..

ಕೆಟ್ಟ ಸ್ವಾರ್ಥವೆನಿಸಿದರೂ...

ಬದುಕೇ ನಮಗೆ ಕಲಿಸಿದ ಪಾಠ ಅವೆಲ್ಲ...

ಮುಗ್ಧ ಹೆಂಡತಿ ಗಂಡ ಇರುವತನಕ ಸುಮ್ಮನಿದ್ದಳು...
ಗಂಡ ಸಾಯುತ್ತಿದ್ದಾನೆ ಎಂದಾಗ .. ಮುಂದೆ ಅವಳು ಬದುಕಬೇಕಲ್ಲ...
ಅದಕ್ಕಾಗಿ ಏನಾದರೂ ಮಾಡಲೇ ಬೇಕಿತ್ತಲ್ಲ...

ಅದು ಸರಿ ಅಂತ ಅನ್ನಿಸದಿದ್ದರೂ...
ತಪ್ಪೆಂತೂ ಅಲ್ಲ ಅಂತ ನನ್ನ ಭಾವನೆ...

ಬಹಳ ಚಂದದ ಪ್ರತಿಕ್ರಿಯೆ ..

ಉತ್ಸಾಹ ತುಂಬಿದ್ದಕ್ಕೆ ಧನ್ಯವಾದಗಳು...

Ittigecement said...

ಸವಿಗನಸು (ಮಹೇಶ್)...

ನಮ್ಮ ಬದುಕಿನಲ್ಲೂ ಓಡುತ್ತಲೇ.. ಇರುತ್ತೇವೆ...
ಹಣ, ಮನೆ, ಸೈಟು.. ಮಕ್ಕಳ ವಿದ್ಯಾಭ್ಯಾಸ...!

ಒಮ್ಮೆ ನಿಂತು ಯೋಚಿಸಿ ನೋಡುವ ವ್ಯವಧಾನ ನಮ್ಮಲ್ಲಿರುವದಿಲ್ಲ...

ಈ ಓಟದಲ್ಲಿ ಅತ್ಯಮೂಲ್ಯವಾದುದನ್ನು ಕಳೆದು ಕೊಂಡಿರುಬಿಟ್ಟಿರುತ್ತೇವೆ...

ಬದುಕಿನ ಓಟದಲ್ಲಿ ಗಳಿಸಲು ಹೋಗಿ ..
ಕಳೆದುಕೊಳ್ಳುವದೇ.. ಜಾಸ್ತಿ ಅಲ್ಲವೆ?

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸ್ನೇಹಾ...

ನಿಜ ಬದುಕು ಒಂದು ನಾಟಕ ರಂಗ...

ನಮ್ಮದೂ ಒಂದು ಪಾತ್ರ ಅಂದ ಮೇಲೆ ಬಣ್ಣ ಹಚ್ಚಲೇ ಬೇಕಾಗುತ್ತದೆ...
ನಮ್ಮ ಯಥಾನು ಶಕ್ತಿ ಅಭಿನಯವನ್ನೂ ಮಾಡಬೇಕಾಗುತ್ತದೆ ಅಲ್ಲವೆ?

ನಾವು ಹಚ್ಚಿಕೊಂಡ ಬಣ್ಣ ಸ್ವಂತಿಕೆಯದ್ದಾದರೆ ಒಳ್ಳೆಯದು ಅಲ್ಲವೆ?


ನಮ್ಮ ಹುಟ್ಟಿನ ಸಂಗಡ ನಮ್ಮ ಜೊತೆಯಾಗಿ ಸಾವೂ ಕೂಡ ಬಂದಿರುತ್ತದೆ ಎನ್ನುವದನ್ನು ನಾವು ಮರೆತುಬಿಡುತ್ತೇವೆ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಆಜಾದು..( ಜಲನಯನ)

ಮನೆ.. ಸಂಸಾರ.. ಬದುಕಿನ ಓಟದಲ್ಲಿ..
ನಮ್ಮ ಹತ್ತಿರದವರನ್ನು ಮರೆತೇ ಬಿಡುತ್ತೇವೆ...

ಹಗಲಿರುಳೂ.. ನಮ್ಮ ಬಗೆಗೆ ಚಿಂತಿಸುವ. ಜೀವದ ಬಗೆಗೆ ನಮಗೆ ಲಕ್ಷ್ಯವೇ ಇದ್ದಿರುವದಿಲ್ಲ...

ನಾವು ಅಮರರು.. ಚಿರಂಜಿವಿಗಳು ಅನ್ನೋ ಅರ್ಥದಲ್ಲಿ ಇದ್ದುಬಿಡುತ್ತೇವೆ...

ನಾವು ಹೋದ ಮೇಲೆ ನಮ್ಮವರಿಗಾಗಿ ಏನು..?

ನಮ್ಮ ಅರಿವಿಗೆ ಬಂದಾಗಲೇ ನಮ್ಮವರಿಗಾಗಿ ಏನಾದರೂ ಮಾಡಿ ಇಡಬೇಕು ಅಲ್ಲವ?

ನಾನು ಬರೆಯುವ ಫಾಂಟು ದೊಡ್ಡದಿರುತ್ತದೆ..
ಯಾಕೆಂದರೆ ಒಬ್ಬ ಹಿರಿಯರು.. ವಯಸ್ಸಾದವರು (ಕೊಡಗಿನವರು..)
ನಾನು ಬ್ಲಾಗ್ ಶುರು ಮಾಡಿದಾಗಾಲಿನಿಂದ ಓದುತ್ತಿದ್ದಾರೆ...
ಅವರ ವಿನಂತಿಯ ಮೇರೆಗಾಗಿ ಅಕ್ಷರ ದೊಡ್ಡದಿಡುತ್ತೇನೆ..

ಜೈ ಹೋ...

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ನಿಷಾ...

ಮುಗ್ಧ ಹೆಂಡತಿ ಮಾದಿದ್ದು ತಪ್ಪೇ..?
ಮಕ್ಕಳು ಇಂಥವರಿರುವಾಗ..
ತನ್ನ ಬದುಕಿನ ಬಗೆಗೆ ವಿಚಾರ ಮಾಡುವದು ಸರಿಯಿದೆ ಅಲ್ಲವೆ?

ಆದರೂ...
ಕಲ್ಪನೆಯ.. ಭಾವದ ಮನಸುಗಳಿಗೆ..
ಅವಳ ನಿರ್ಣಯ ಕಷ್ಟವೆನಿಸುತ್ತದೆ...

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Shashi jois said...

ಪ್ರಕಾಶ್ ಅವ್ರೆ ,
ಬಿತ್ತಿದಂತೆ ಬೆಳೆ...! ಗಿಡದಂತೆ ಫಲ !.. ಈ ಮಾತು ಎಷ್ಟು ಅರ್ಥ ಪೂರ್ಣ ವಾಗಿದೆಯಲ್ಲ...
ಜೀವನವೆ ಹಾಗೇ ಆಲ್ವಾ ..ಕೊನೆಯಲ್ಲಿ ಒಳ್ಳೆ ಕುತೂಹಲ ಹಂತದಲ್ಲೇ ಸಶೇಷ ಮಾಡಿದಿರಿ..ಮುಂದುವರೆಸಿ

Guruprasad said...

ತುಂಬಾ ಚೆನ್ನಾಗಿ ಬರೆದಿದ್ದೀರ ಪ್ರಕಾಶಣ್ಣ.... ಜೀವನ ಎಷ್ಟು ಚಿತ್ರ ವಿಚಿತ್ರ ಅಲ್ಲವ... ನಾವು ಅದನ್ನೇ ಹೇಗೆ ನೋಡಿ ಕೊಳ್ಳುತ್ತೆವೋ.. ಅದು ನಮ್ಮನ್ನು ಹಾಗೆ ನೋಡಿ ಕೊಳ್ಳುತ್ತೆ ...
"ಅಪರಾಧಿ ಮನೋಭಾವನೆ ದೇವರ ಭಕ್ತಿಗೆ ಕಾರಣವಂತೆ.. " ಇದು ನಿಜನ....? ಕೆಲವೊಮ್ಮೆ ನಿಜನೇನೋ ಅಂತ ಅನ್ನಿಸುತ್ತೆ....

Ittigecement said...

ತರುಣ್...

ಇಲ್ಲಿ ಕಥಾನಾಯಕ ತನ್ನ ಅಪ್ಪ ಅಮ್ಮ ಅಮ್ಮಂದಿರನ್ನು..
ಬಾಡಿಗೆ ಮನೆಯಲ್ಲಿಟ್ಟು.. ಆಳುಕಾಳು ಇಟ್ಟು...
ಅವರ ಮುದಿತನಕ್ಕೆ ಗೌರವ ಕೊಟ್ಟಿದ್ದ...

ಇದನ್ನು ನೋಡಿ ಬೆಳೆದ.. ಮಕ್ಕಳು ಇನ್ನು ಹೇಗೆ ತಯಾರಾಗಿಯಾರು ಹೇಳಿ..?

ಬಿತ್ತಿದಂತೆ ಬೆಳೆ..
ಗಿಡದಂತೆ ಫಲ.. ಅಲ್ಲವೆ?

ನಿಮ್ಮ ಪ್ರತಿಕ್ರಿಯೆ ..ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು...

ನಿಮ್ಮ ಬ್ಲಾಗಿನ "ರಾಜಕೀಯ" ಕವನ ಮಸ್ತ್ ಇದೆ... ಜೈ ಹೋ...

Ittigecement said...

ಗುರು.. (ಸಾಗರದಾಚೆಯ ಇಂಚರ)

ಹಣ ಬದುಕಲಿಕ್ಕೆ ಬೇಕೇ ಬೇಕು...

ಆದರೆ ಅದರ ಬೆನ್ನ ಹಿಂದೆ ಬಿದ್ದು ...
ಬದುಕಿನ ಸಂತೋಷದ ಕ್ಷಣಗಳನ್ನು ಹಾಳು ಮಾಡಿಕೊಳ್ಳ ಬಾರದಲ್ಲವೆ?

ಬದುಕಿನ ಅಗತ್ಯವಾದ ಸಂಬಂಧಗಳ ಜೊತೆಯಿರದೆ...
ಎಲ್ಲಿ ಇರಬೇಕೋ..
ಅಲ್ಲಿರದೆ..
ಕೊನೆಯಲ್ಲಿ ಮತ್ತೆ ಸಂಬಂಧಗಳನ್ನು ದೂರುವದು ತಪ್ಪಲ್ಲವೆ?

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಜೈ ಹೋ...

ಅನಂತ್ ರಾಜ್ said...

ಹೃದಯ ಸ್ಪರ್ಶಿ ಚಿತ್ರಣ - ಪ್ರಕಾಶ್ ಸರ್. ಆತ್ಮಾವಲೋಕನದ ಕಿವಿಮಾತು ಕೂಡ ಸೂಚಿತವಾಗಿದೆ.
ಧನ್ಯವಾದಗಳು

ಅನ೦ತ್

Ittigecement said...

ಮನಸು...

ಬದುಕಿನ ಓಟದಲ್ಲಿ ಆಗಾಗ ಸ್ವಲ್ಪ ನಿಂತು ಸಿಂಹಾವಲೋಕನ ಮಾಡಿಕೊಳ್ಳುವದು ಒಳ್ಳೆಯದಲ್ಲವೆ?

ನಮ್ಮ ಹತ್ತಿರದವರೊಡನೆ..
ಹೆಂಡತಿ ಮಕ್ಕಳೊಡನೆ..
ಸ್ವಲ್ಪ ಆತ್ಮೀಯ ಮಾತುಕತೆ..
ನಗು ಸಂತೋಷ..
ಇದಕ್ಕಲ್ಲವೇ ನಮ್ಮ ದುಡಿತ... ನೌಕರಿ..?

ಅಗತ್ಯ ಸಂಬಂಧಗಳ ಜೊತೆಯಿರದ "ಗಳಿಕೆ" ಯಾವ ಪುರುಷಾರ್ಥಕ್ಕೆ?

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಅಂತರಂಗದ ಮಾತುಗಳು...

ನನಗೆ ಪರಿಚಯದ ಹಿರಿಯೊಬ್ಬರಿದ್ದರು...
ಅವರು ಸುಮಾರು ಇಂಥಹುದೇ ಬಾಳು ಬಾಳಿದ್ದರು..
ಅವರು ತೀರಿಕೊಂಡ ಮೇಲೆ ಅವರ ಹೆಂಡತಿ ಎಷ್ಟು ಸಂತೋಷದಿಂದ ಇದ್ದಾರೆಂದರೆ... ತ್
ಉಂಬಾ ಖುಷಿಯಾಗುತ್ತದೆ...

ಬದುಕು ಯಾರಿಗೋಸ್ಕರವೂ ನಿಲ್ಲುವದಿಲ್ಲ...
ಚಲನೆಯೆ ಅದರ ಧರ್ಮ...
ಸ್ವಾರ್ಥವೆಂದರೂ ಸರಿಯೆ... ಅದು ಚಲಿಸುತ್ತದೆ...
ಚಲಿಸಲೇ ಬೇಕು..
ಅದೇ ಬದುಕು...

ಯರಿಗೂ ಯಾರೂ ಸಹ ಅನಿವಾರ್ಯವಲ್ಲ... !!

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಂದರ ಬೆಳಗಿನ ಬಗೆಗಿನ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ...

Dr.D.T.Krishna Murthy. said...

ಪ್ರಕಾಶಣ್ಣ;ಕಥೆಯಲ್ಲಿ ಸಂಬಂಧಗಳ ವಿಶ್ಲೇಷಣೆ ತುಂಬಾ ಚೆನ್ನಾಗಿದೆ.ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಅಲ್ಲವೇ?ಅಭಿನಂದನೆಗಳು.

sunaath said...

ಕೊನೆಗೂ ಉಳಿಯುವದು ಸ್ವರಕ್ಷಣೆಯ ಚಿಂತೆ. ತುಂಬ ಚೆನ್ನಾಗಿ ವಿಡಂಬಿಸಿದ್ದೀರಿ!

Ittigecement said...

ಶಶಿಯವರೆ...

ಕಥೆ ಇಲ್ಲಿಗೆ ನಿಂತರೇನೆ ಸರಿ ಎನ್ನಿಸಿತು...
ಸಾವಿನ ಅಂಚಿನಲ್ಲಿರುವ ಪತಿಗೆ ಹೆಂಡತಿ ತಾನಿಲ್ಲದೆ ಹೇಗೆ ಬಾಳ ಬಹುದು ಎನ್ನುವದು ದೊಡ್ಡ ಚಿಂತೆ...
ಆದರೆ...
ಆ ಹೆಂಡತಿ ಅಳುತ್ತ... ದುಃಖಿಸುತ್ತ...

ತನ್ನ ಬದುಕಿಗೆ ಮುಂದೆ ಏನು ಮಾಡುಕೊಳ್ಳ ಬೇಕು ಅದನ್ನು ಮಾಡಿಕೊಂಡಿದ್ದಳು...

ಇದು ಸ್ವಾರ್ಥವೆನಿಸಿದರೂ...
ತಪ್ಪಲ್ಲವೆಂದು ನನಗೆ ಅನ್ನಿಸುತ್ತದೆ...

ಬದುಕು.. ಬದುಕುತ್ತ..
ಬದುಕನ್ನು ಕಲಿಸುತ್ತದೆ...
ಹೇಗೆ ಬದುಕಬೇಕೆಂದು..

ಅವರವರ ಭಾವಕ್ಕೆ ತಕ್ಕತೆ.. ಅಲ್ಲವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ದಿನಕರ ಮೊಗೇರ said...

ಪ್ರಕಾಶಣ್ಣ,
ಬದುಕಿನ ವಿಪರ್ಯಾಸ ಇದು.....ಯಾರಿಲ್ಲದಿದ್ದರೂ ಬದುಕು ನಡೆಯಲೇ ಬೇಕು..... ನಡೆಯತ್ತೆ....... ನಿಮ್ಮ ಕಥೆ ಜೀವನದ ಪಾಠ ಹೇಳಿದೆ.... ಮಗ ತನ್ನನ್ನು ನೋಡಿಕೊಳ್ಳದೇ ಇದ್ದರೂ ತನ್ನ ದಾರಿ ತಾನು ನೋಡಿಕೊಳ್ಳುವ ತಾಯಿ..... ಪ್ರೀತಿ ಎಂದರೆ ಏನೆಂದು ಗೊತ್ತು ಮಾಡಿಕೊಳ್ಳುವ ರೋಗಿಯ ಪಾತ್ರ ಎಲ್ಲವೂ ಇಷ್ಟ ಆಯ್ತು..... ಚೆನ್ನಾಗಿದೆ ....

Ittigecement said...

ಗುರು...

ನಾನು ಕೆಲವು ಮನೆಯ ಸಂಬಂಧಗಳನ್ನು ನೋಡಿರುವೆ...

ಅಲ್ಲಿ ಪ್ರತಿಯೊಂದೂ ಸಹ ವ್ಯವಹಾರ...

ಗಂಡ ಹೆಂಡತಿಯಿಂದ "ಸಾಲ" ಪಡೆಯುತ್ತಾನೆ..

ಮಗ ಅಪ್ಪನಿಂದ ಸಾಲ " ಪಡೆಯುತ್ತಾನೆ..

"ಸಾಲ" ತೀರಿಸದಿದ್ದರ ಸಲುವಾಗಿ..
ನನ್ನನೊಮ್ಮೆ "ಪಂಚಾಯತಿಕೆ" ..
ಕಲಹ ಸುಧಾರಿಸಲು ಕರೆದಿದ್ದರು...

ನಾನು ದಂಗಾಗಿ ಹೋಗಿದ್ದೆ...

ಮಗ ತನ್ನ ಹುಟ್ಟಿದ ದಿನ ಆಚರಿಸುವ ಸಲುವಾಗಿ ಹಣ ಕೊಟ್ಟಿದ್ದ..
ಮಗ ಅದನ್ನು ತೀರಿಸಿರಲಿಲ್ಲ...

ಇಂಥವರೆಲ್ಲ ನಮ್ಮ ಅನುಭವದಲ್ಲೇ ಸಿಗುತ್ತಾರೆ..

ಅಲ್ಲಿ ಸಂಬಂಧಗಳ ನಡುವಿನ...
ಮಮತೆ, ವಾತ್ಸ್ಯಲ್ಯ.. ಪ್ರೀತಿಯ ಸೆಲೆ ಹೇಗೆ ಹುಡುಕುವದು..?

"ಅಪರಾಧಿ ಭಾವನೆ ದೈವ ಭಕ್ತಿಗೆ ಕಾರಣ" ಹೌದು..

ಪ್ರತಿಕ್ರಿಯೆ, ಪ್ರೋತ್ಸಾಹಕ್ಕೆ ಧನ್ಯವಾದಗಳು..

Ittigecement said...

ವಸಂತ್...

ಕೆಲವರು ಬದುಕೆಲ್ಲ ದುಡಿದು...
ಹತ್ತಿರದವರಿಗಾಗಿ ಏನನ್ನೂ ಮಾಡದೆ ಹೊರಟು ಹೋಗಿರುತ್ತಾರೆ..
ಕೊನೆ ಪಕ್ಷ ತಮ್ಮ ಆಸ್ತಿಯ ಕಾಗದ ಪತ್ರಗಳನ್ನು, ವಿಲ್ ಗಳನ್ನು ಮಾಡಿರಬೇಕು ಅಲ್ಲವೆ?

ಸಾವು ಕರೆಯುವಾಗ... ಓಡಲೇ ಬೇಕಲ್ಲ..

ತಮ್ಮ ವಿಶ್ವಾಸಿಕರಿಗೆ, ಪ್ರೀತಿ ಬಾಂಧವರಿಗೆ ವಿಲ್ ಬರೆದು ಇಡುವದು ಒಳ್ಳೆಯದು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಅನಂತ್ ಸರ್...

ಯಾರಿಗೂ ಯಾರೂ ಸಹ ಅನಿವಾರ್ಯವಲ್ಲ...

ಅವರವರ ಬದುಕಿನ ಬಗೆಗೆ ...
ಅವರವರೇ ಜವಾಬ್ದಾರರು... ಮತ್ತು..
ತಮ್ಮ ಬಳಿ ಬಂದಾಗ ಅವರೇ ನೋಡಿಕೊಳ್ಳುತ್ತಾರೆ..

ಈ ಕಥೆಯಲ್ಲಿ...

"ತನ್ನ ಗಂಡ ಸಾಯುತ್ತಿದ್ದಾನೆ...
ಮುಂದೆ ತನಗೆ ಏನು? ಅಂತ ಹೆಂಡತಿ ಯೋಚಿಸಿದ್ದಾಳೆ..

ಅಥವಾ...

ಇಷ್ಟು ವರ್ಷ ಅಂಥಹ ವ್ಯವಹಾರಸ್ಥನ ಬದುಕಿನ ಪ್ರಭಾವ ಕೂಡ ಇದ್ದಿರ ಬಹುದು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಕೃಷ್ಣಮೂರ್ತಿಯವರೆ...

ಬಹುಷಃ ಜಾಗತೀಕರಣದ ಪ್ರಭಾವವಿದ್ದಿರ ಬಹುದು...

ಪ್ರತಿಯೊಂದು ಭಾವ ಸಂಬಂಧವನ್ನು "ವ್ಯವಹಾರಿಕ ದೃಷ್ಟಿಯಲ್ಲಿ" ನೋಡುವದು ಜಾಸ್ತಿಯಾಗಿದೆ ...

ಹೆಂಡತಿ ನೌಕರಿ ಮಾಡುವದು...
ಮಕ್ಕಳು ಮದುವೆಗೆ ಮುನ್ನ ದುಡಿದು ಸಂಬಳವನ್ನು ಪಾಲಕರಿಗೆ ಕೊಡುವದು..

ಎಲ್ಲ ಕಡೆ ವ್ಯವಹಾರ... !

ಮಮತೆ, ವಾತ್ಯ್ಸಲ್ಯ ಕಾಣುವ ಸಂಬಂಧಗಳಲ್ಲೂ ವ್ಯವಹಾರ ಕಾಣುತ್ತೇವೆ..

ಹಾಗಾಗಿ ವೃದ್ಧಾಶ್ರಮಗಳಿಗೆ ಬೇಡಿಕೆ ಜಾಸ್ತಿ..

ಪತಿಕ್ರಿಯೆಗೆ ಧನ್ಯವಾದಗಳು...

ಚಿನ್ನುಡಿ..... said...

Baduku jatakaa Bandi Vidhi adara Saaheba...........!!!!

Gubbachchi Sathish said...

ಕಥೆ ಚೆನ್ನಾಗಿ ನಿರೂಪಿಸಿದ್ದೀರಿ.

ಅಭಿನಂದನೆಗಳು.

Ittigecement said...

ಸುನಾಥ ಸರ್...

ನಾನು ಇಷ್ಟೆಲ್ಲ ಬರೆದುದನ್ನು ಒಂದೇ ಸಾಲಿನಲ್ಲಿ ಹೇಳಿದ್ದೀರಿ...
ನಿಜ... ಬದುಕಿನ ತತ್ವವೂ ಅದೇ ಅಲ್ಲವೆ?

ಪ್ರೀತಿ, ಪ್ರೇಮ, ಭಾವುಕತನ ....
ಎಲ್ಲವೂ ನಮ್ಮ ಸ್ವಭಾವ
ಆದರೂ..

ಇಂಥದೊಂದು ಸಮಯ ಬಂದಾಗ..
ನಮ್ಮದನ್ನು ನಾವು ನೋಡಿಕೊಳ್ಳುವದು ..
ಬದುಕಿನ ಭದ್ರತೆಯ ಬಗೆಗೆ ವಿಚಾರ ಮಾಡುವದು ತಪ್ಪಾ?

ತುಂಬಾ ತಾತ್ವಿಕವಾದ ಪ್ರತಿಕ್ರಿಯೆಗೆ ಧನ್ಯವಾದಗಳು...

Bhavana Rao said...

nice story, it shows all the dimensions of way of lives of our conservative South Indian families..
its the reality..
When your time permits, please read my post http://bhavana-pen.blogspot.com/2009/08/place-for-individuality.html
Regards.

ಮನಮುಕ್ತಾ said...

ಪ್ರಕಾಶಣ್ಣ,
ಬದುಕಿನ ಒ೦ದು ಚಿತ್ರಣ.. ನೈಜ ರೂಪದಲ್ಲಿ ನಡೆಯುತ್ತಿರುವುದೇನೋ ಎ೦ಬ೦ತೆ ಭಾವನೆಗಳನ್ನು ಚಿತ್ರಿಸಿದ್ದೀರಿ.
ವ೦ದನೆಗಳು.

ಅಪ್ಪ-ಅಮ್ಮ(Appa-Amma) said...

ಓದುತ್ತಾ ಹೋದ ಹಾಗೇ ಈ ಜೀವನ ಇಷ್ಟೇ ಅಲ್ವಾ ಅನ್ನೋ ಸರಳ ತತ್ವ ಕಣ್ಮುಂದೆ ಬಂದು ಹೋಯ್ತು..

ಸರಳವಾಗಿ ಮತ್ತು ಗಾಢವಾಗಿ ನಿರೂಪಿಸಿದ್ದೀರಿ..

Manju M Doddamani said...

ಮಾಡಿದ್ದು ಉಣ್ಣೋ ಮಾರಾಯ ..! ಕಥೆ ಜೊತೆ ಸಂದೇಶ ಚನ್ನಾಗಿದೆ ಸರಳ ನಿರೂಪಣೆಯಿಂದ ಎಲ್ಲಿಯೋ ಬೋರ್ ಅನಿಸಲಿಲ್ಲ ಮುಂದುವರೆಸಿ ಶುಭವಾಗಲಿ

Ittigecement said...

ದಿನಕರ್...

ಈ ಕಥೆಗೆ ಬೇರೆ ತಿರುವು ಕೊಟ್ಟಿದ್ದೆ...
ಯಾಕೋ ಮನುಷ್ಯ ಸಂಬಂಧಗಳ ಈ ಥರಹದ ವಾಸ್ತವದ ಮುಕ್ತಾಯವೇ ಸರಿ ಎಂದು.. ಇದನ್ನೇ ಇಟ್ಟೆ...

ಆ ಹೆಂಡತಿ ಗಂಡನನ್ನು ನಂಬಿ ಇದ್ದವಳು...
ಗಂಡ ಸಾಯುತ್ತಾನೆ ಎಂದಾಗ..
ಮಕ್ಕಳೂ ಇಂಥವರೆಂದು ಗೊತ್ತಾದಾಗ...
ಗಂಡ ಬದುಕಿರುವಾಗ...

ತನ್ನ ಬದುಕಿನ ಭದ್ರತೆ ಬಗೆಗೆ ವಿಚಾರ ಮಾಡಿದ್ದು ಸ್ವರ್ಥವೆನಿಸಿಬಿಡುತ್ತಾ?

ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ..

ಪ್ರತಿಕ್ರಿಯೆ, ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯ ಚಿನ್ನುಡಿ..

ನನ್ನ ಬ್ಲಾಗಿಗೆ ಸ್ವಾಗತ..

ನಾವು ಎಣಿಸಿದಂತೆ ಏನೂ ನಡೆಯುವದಿಲ್ಲ ನಿಜ...
ಸಂಬಂಧಗಳನ್ನು ನಾವು ಯಾಕೆ ಮಾಡಿಕೊಳ್ಳ ಬೇಕು..."
ಎಲ್ಲವೂ ತನಗಾಗಿ..
ತಾನು ಹೇಳಿದಂತೆ ಇರಬೇಕು ಎನ್ನುವಾಗ "ಬಾಂಧವ್ಯದಲ್ಲಿ ಮಧುರವಾಗಿ ಅರಳಬೇಕಾಗಿದ್ದ ಹತ್ತಿರದವರಲ್ಲಿ..
ತೀರಾ ವ್ಯವಹಾರಿಕವಾಗಿ ನಡೆದುಕೊಳ್ಳುವದು ಎಷ್ಟರ ಮಟ್ಟಿಗೆ ಸರಿ?

ಅಪ್ಪ ಮಗನಿಗೆ ಸಾಲ ಕೊಡುವದು..
ಹೆಂಡತಿ ಗಂಡನಿಗೆ ಸಾಲ ಕೊಡುವದು...

ಇದೆಲ್ಲ ಅಸಹ್ಯವೆನಿಸಿಬಿಡುತ್ತದೆ ಅಲ್ಲವಾ?
ಇದಕ್ಕೆಲ್ಲ ಮದುವೆ ಮಕ್ಕಳು ಎಲ್ಲ ಯಾಕೆ?

ಪ್ರೋತ್ಸಾಹದ ನುಡಿಗಳಿಗೆ ನನ್ನ ನಮನಗಳು..

chand said...

ಬರವಣಿಗೆ ಚೆಂದ ಇದೆ. ಕಥೆಯ ಅಂತ್ಯವನ್ನು ಇನ್ನಷ್ಟು ಪಾಲಿಶ್ ಮಾಡಬಹುದಿತ್ತು ಅನಿಸಿತು.

umesh desai said...

ಹೆಗಡೇಜಿ ಕತೆ ಚೆನ್ನಾಗಿದೆ
ಸಂಬಂಧಗಳ ಬಣ್ಣ ಬಯಲಾದಾಗ
ಅನಿಸಿದ್ದು ಬೆಳದಿಂಗಳಿನ ಹಿತಕ್ಕಿಂತ
ಸುಡುವ ನೆಲದಗುಂಟ ನಾವು ತುಳಿದ
ದಾರಿಯೇ ಮಿಗಿಲೆಂದು...!

Ittigecement said...

ಗುಬ್ಬಚ್ಚಿ ಸತೀಶ್...

ಸಾಯುವಾಗಲಾದರೂ.. ನಮಗೆ
ನಮ್ಮ ಸ್ವಭಾವದ ಬಗೆಗೆ..
ನಮ್ಮ ನಡುವಳಿಕೆ ಬಗೆಗೆ..
ನಾವು ಮಾಡಿದ ತಪ್ಪಿನ ಅರಿವಾಗುವದೇ..?

ನಮ್ಮ ತಪ್ಪನ್ನು ಒಪ್ಪಿಕೊಳ್ಳುವದು ಸಾಧ್ಯವೇ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸುಧೇಶ್ ಶೆಟ್ಟಿ said...

thumba chennagi barediddeeya prakashaNNa sambhandagaLa mahathvavannu.... ishta aayithu...

prabhamani nagaraja said...

ಕಥಾ ನಿರೂಪಣೆ ವಾಸ್ತವಕ್ಕೆ ಹತ್ತಿರವಾಗಿದೆ. ಆಕೆ ವಿಲ್ ಬಗ್ಗೆ ಸಾವಿನ ಸಮ್ಮುಖದಲ್ಲಿರುವ ಪತಿಗೆ ಯಥಾವತ್ತಾಗಿ ತಿಳಿಸಿದ್ದರಿ೦ದ ನಿಜವಾಗಿಯೂ ಮುಗ್ಧೆಯೇ! ನನ್ನ ಬ್ಲಾಗ್ ಗೆ ಒಮ್ಮೆ ಬನ್ನಿ.

Ashok.V.Shetty, Kodlady said...

ಪ್ರಕಾಶಣ್ಣ,

ಈಗಿನ ಪ್ರಪಂಚವೇ ಹೀಗೆ ನೋಡಿ, ತುಂಬಾ ಸೊಗಸಾಗಿ ನಿರೂಪಿಸಿದ್ದೀರಿ, ಎಲ್ಲರೂ ಸ್ವಾರ್ಥಿಗಳೇ ಅಲ್ಲವೇ, ನಮ್ಮ ಕೈ ನಮ್ಮ ತಲೆಗೆ ಅಷ್ಟೇ...