Thursday, September 16, 2010

ಹೂವಿನಂಥಹ... ನಗು..!!.


ನಗು ಅನ್ನೋದು.. 

ತಿನ್ನಲು ಬಾರದ ..

ಸಿಹಿ ಸಕ್ಕರೆ...


 
                      
ನನ್ನ  ನಗು ನೋಡಿ ನಿಮಗೆಲ್ಲ  ಆಶ್ಚರ್ಯನಾ??

                                                
 ನನಗೆ ನಗು ಅಂದರೆ ಬಲು ಇಷ್ಟ...
ನನ್ನ  ನಗು ಕಂಡು...
ನನ್ನಮ್ಮನೂ.. ನಕ್ಕು ಬಿಡ್ತಾಳೆ...


ನೀವೆಲ್ಲ ನಗಲಿಕ್ಕೆ ಯಾಕೆ ಇಷ್ಟೆಲ್ಲಾ  ಕಷ್ಟ ಪಡ್ತಿರಿ??

ಏನಾಗಿದೆ ನಿಮಗೆ ??



ಮನಸ್ಸಿನಲ್ಲಿ  ಏನೆಲ್ಲಾ  ಕೆಟ್ಟದ್ದನ್ನೆಲ್ಲಾ  ಇಟ್ಟುಕೊಂಡು...

 ಒದ್ದಾಡುತ್ತಿರಿ...!!

ಯಾಕೆ ??



ನಿಮಗೆ  ಹೇಗೆ  ನಗಬೇಕು ಅನ್ನೋದನ್ನು  ನಾನು ಹೇಳಿಕೊಡ್ತೇನೆ...
ಇದು ...
 ಬಹಳ  ಸಿಂಪಲ್....!!
ಏನೂ ಕಷ್ಟನೆ .. ಇಲ್ಲಾರಿ...!!


 

ನೀವು ಮೊದಲು ನಮ್ಮ ಹಾಗೆ ಇದ್ರಿ ಅಲ್ಲವೇ  ??

ಬರ್ತಾ... ಬರ್ತಾ ...
 ಯಾಕೆ  ನಗುವನ್ನು ಮರೆತ್ರಿ  ??





ಒಮ್ಮೆ  ಹಿಂದೆ ತಿರುಗಿ ನೋಡಿ... 
ನಿಮಗೇ...  
ಗೊತ್ತಾಗುತ್ತದೆ...!!





ದೊಡ್ದವರಾಗ್ತಾ .. ಆಗ್ತಾ ...
ನೀವು  ಬಹಳ ಬದಲಾಗಿ ಬಿಟ್ರಿ....


ಹೀಗೆ ಬದಲಾಗೋ ಅಗತ್ಯ ಇತ್ತಾ  ??

ದೊಡ್ಡವರಾದ ಮೇಲೆ..
ಯಾಕೆ  ಬದಲಾಗ ಬೇಕು...?
ನಮ್ಮ ಹಾಗೆ ಇರಬಹುದಲ್ಲಾ?



ನಮಗೂ ಅಳು ಬರುತ್ತದೆ... ಅಳುತ್ತೇವೆ...







ಆದರೆ...
ಅಳುವನ್ನು ಮರೆತು... 
ತಕ್ಷಣ ....
ನಕ್ಕುಬಿಡುತ್ತೇವೆ...!!
ಹೂವಂತೆ...!! 
ಸಿಹಿ ಸಕ್ಕರೆಯಂತೆ... 
ಜೇನಿನಂತೆ.... ಸವಿಯಾಗಿ...!!.



ಹೋಗ್ರಿ.. ರೀ...!!
ನಗೋದು ಹೇಗಂತ ...
ನಿಮಗೆ  ನಾನು ಹೇಳಿ ಕೊಡ ಬೇಕಾ ? !!

ಪುಕ್ಕಟೆ  ಹಾಗೆಲ್ಲ ಏನೂ  ಹೇಳಿ ಕೊಡೋದಿಲ್ಲ...


   
ನಿಮಗೆ  ಒಂದು  ವಿಷಯ ಹೇಳ್ತೇನೆ  ಕೇಳಿ...
ಏನಾದ್ರೂ.. ಬೇಕಿದ್ರೆ.. 
ಮೊದಲು ಏನಾದ್ರೂ  ಕೊಡ ಬೇಕು....



ನನಗೂ ಏನಾದ್ರೂ  ಕೊಡಿ...
ನಗೋದು ಹೇಗಂತ ಹೇಳಿ ಕೊಡ್ತೇನೆ....




ನನಗೆ ಏನು ಕೊಡ ಬೇಕು ಅಂತ  ಗೊತ್ತಾಗಲಿಲ್ವಾ?




ಅಯ್ಯೋ.. !!
 ರಾಮಾ..ರಾಮಾ...!!

ನನಗೆ...  ಹಣ ಕೊಡ್ತಿರಾ??

ನೀವು ಎಲ್ಲವನ್ನು  ಹಣದಿಂದಲೇ  ಖರೀದಿ ಮಾಡ್ತಿರಾ??
ನನಗೆ ಹಣ ಬೇಡಾರಿ.....




ನಿಮ್ಮ ಹಣ ನಿಮ್ಮ  ಹತ್ರಾನೆ.. ಇಟ್ಟುಕೊಳ್ಳಿ...




ನೀವೆಲ್ಲ  ಸ್ವಲ್ಪ ವಿಚಾರ ಮಾಡಿ ನೋಡಿ....
..



ಹಣದಿಂದ ಏನೇನು ಖರೀದಿ ಮಾಡ ಬಲ್ಲಿರಿ ?

ಎಷ್ಟು ಹಣ ಬೇಕು ನಿಮಗೆ?

ಹಣ ಬಿಟ್ರೆ ಬದುಕಿನಲ್ಲಿ ಬೇರೆ ಏನೂ ಇಲ್ಲವಾ?

ನೀವೇ.. ಹೇಳಿ..
.



ಬದುಕ ಬೇಕು...
ನಗಬೇಕು...
ಇದ್ದಷ್ಟು ದಿನ  ನಗುತ್ತ ಇರಬೇಕು...




ನನಗೆ  ಒಂದು ಹಿಡಿ  ಪ್ರೀತಿ ಕೊಡಿ...
ನಕ್ಕು ಬಿಡ್ತೇನೆ....
 ಪ್ರೀತಿ ಕೊಡಿ....
 ನಾನು ನಿಮಗೆ  ನಗು ಕೊಡ್ತೇನೆ...
ಹಾ..ಹ್ಹಾ.. !!


ನಗೋದು ತುಂಬಾ  ಸಿಂಪಲ್  ರೀ...!!

ನಗಲಿಕ್ಕೆ ಏನೂ ಮಾಡ ಬೇಕಿಲ್ಲಾ  !!

ಸ್ವಲ್ಪ.. ತುಂಟತನ ಇಟ್ಟುಕೊಳ್ಳಿ....



ಸುಮ್ಮನೆ...
ನಕ್ಕುಬಿಡಿ...! 
ಮನಸ್ಸಲ್ಲಿ ಏನನ್ನು ಇಟ್ಟುಕೊಳ್ಳದೆ..!


.
ಹ್ಹ..ಹ್ಹಾ..  ಹ್ಹಾ  !!

ನಕ್ಕು ಬಿಡಿ ಒಮ್ಮೆ...
ಯಾವುದೇ... 
ಗೋಡೆಗಳನ್ನು ಇಟ್ಟುಕೊಳ್ಳದೆ...
ನನ್ನ ಹಾಗೆ....!!




ಗೆಳೆಯರೇ....
ನಮಗೂ " ನಗಬೇಕು "  ಅಂತ ಅನಿಸುತ್ತದೆ...

ಕೆಲವೊಮ್ಮೆ ನಗುತ್ತೇವೆ...

ಅದು ಒಳಗಿನ ನಗುವಾಗಿರೋದಿಲ್ಲ...

ಏನೇನೋ... 
ದುಃಖ, ದುಗುಡ ..
ದುಮ್ಮಾನ... ನುಂಗಿಕೊಂಡು...
ಲಾಭ, ನಷ್ಟಗಳ...ಲೆಕ್ಕಾಚಾರ ಮಾಡುತ್ತಾ..
ಮುಖದಿಂದ .... 
ನಗುತ್ತೇವೆ....

ಮನಸ್ಸಿಂದ....
 ಹೃದಯದಿಂದ ಅಲ್ಲ....

ಹೊರಗೆ ಕಾಣುವ ಮುಖದಿಂದ..
ವ್ಯವಹಾರಕ್ಕಾಗಿ...
  ನಗುತ್ತೇವೆ... ಅಲ್ಲವೇ?.



(ಗೆಳೆಯರೇ.. 
ನಾನು ಬರೆದ  "ಬೇಕು.. ಕಪ್ಪು ಬಿಳುಪು"  ಕಥೆಯ ಮುಂದಿನ ಭಾಗವನ್ನು  
ಬಹಳ ಚಂದವಾಗಿ  ಬರೆದಿದ್ದಾರೆ ...
 ನಮ್ಮೆಲ್ಲರ ಮೆಚ್ಚಿನ ಬ್ಲಾಗಿಗ "ದಿನಕರ್ "

"ಕಪ್ಪು ಬಿಳುಪು" ನೆನಪಿನಲ್ಲಿ  ಉಳಿದದ್ದು  ಬರಿ.. ಬಿಳುಪಾ?

54 comments:

Guruprasad . Sringeri said...

ಮುದ್ದು ಕಂದಮ್ಮಗಳ ಮುಖಭಾವಗಳನ್ನು ಚೆನ್ನಾಗಿ ಚಿತ್ರಿಸಿ ಉತ್ತಮ ವಿವರಣೆ ನೀಡಿರುವಿರಿ....

ದಿನಕರ್ ಅವರು ಮುಂದುವರಿಸಿರುವ ಕಪ್ಪು ಬಿಳುಪು ಸೂಪರ್ ಆಗಿದೆ ಪ್ರಕಾಶ್ ಅವರೆ....

Ittigecement said...

ಗುರು ಜಿ...

ಮಗುವಿನಂಥಹ ಹೂ ನಗು.. ನಮಗೇಕೆ ಸಾಧ್ಯವಿಲ್ಲ?
ಈ.. ಬದುಕಿಗಾಗಿ..
ನಮ್ಮ ನಗು, ಸಂತೋಷವನ್ನು ಮರೆತು ಬಿಡ ಬೇಕೆ?

ನಕ್ಕರೂ.. ಅದು ಮುಖದ ಮೇಲಿನ ನಗುವಾಗಿರುತ್ತದೆ...
ಒಳಗಿನ ಅಂತರಾಳದಿಂದ ಬಂದ ನಗುವಾಗಿರುವದಿಲ್ಲ..

ನಾವೂ ಕೂಡ "ಮಗುವಿನಂಥಹ ಹೂ ನಗುವಿನ" ಪ್ರಯತ್ನ ಮಾಡ ಬಾರದೇಕೆ...

ದಿನಕರ್ ಬರೆದ ಕಥೆ..
ಅದರ ಅಂತ್ಯ..
ಭಾವುಕತೆ ಎಲ್ಲವೂ ಬಹಳ ಸೊಗಸಾಗಿ ಬಂದಿದೆ...

ಚಂದದ ಕಥೆ ಬರೆದ ದಿನಕರ್ ಅವರಿಗೂ...

ಪ್ರೋತ್ಸಾಹ.. ಪ್ರತಿಕ್ರಿಯೆಗಾಗಿ ನಿಮಗೂ ಧನ್ಯವಾದಗಳು...

ವನಿತಾ / Vanitha said...

wow..nice photos and captions:)

balasubramanya said...

ವಾವ್ ಪ್ರಕಾಶ್ ಸಾರ್ ಮುದ್ದುಮಕ್ಕಳ ಚಿತ್ರಕ್ಕೆ ತುಂಟ ಶೀರ್ಷಿಕೆ ನೀಡಿದ್ದೀರಿ ಚೆನ್ನಾಗಿದೆ. ದಿನಕರ್ ಮೊಗೆರ ನಿಮ್ಮ ಕಪ್ಪು ಬಿಳುಪು ಕಥೆಗೆ ಮತ್ತೊಂದು ಆಯಾಮ ನೀಡಿದ್ದಾರೆ ಚೆನ್ನಾಗಿದೆ.ಅವರ ಬಗ್ಗೆ ನಿಮ್ಮ ಕಾಂಪ್ಲಿ ಮೆಂಟು ಕೂಡ ಚೆನ್ನಾಗಿದೆ.

ನಾಗರಾಜ್ .ಕೆ (NRK) said...

ಮಕ್ಕಳ ಚಿತ್ರಗಳು ಮತ್ತು ತಕ್ಕ ಸಾಲುಗಳು ಚೆನ್ನಾಗಿವೆ.
ಹೌದು, ನಾವು ನಗಬೇಕು ನಕ್ಕು ಹಗುರಾಗಬೇಕು.
"ಹೇಗಾದರೂ ನಗು,ನಗುವಾಗು ಮನಸು ಬಿಚ್ಚಿ ನಗು"

Dr.D.T.Krishna Murthy. said...

ಪ್ರಕಾಶಣ್ಣ;ಎಂತಹ ಅದ್ಭುತ ಮುದ್ದು ನಗುವಿನ ,ಮುದ್ದು ಮಕ್ಕಳಚಿತ್ರಗಳು!ಅದಕ್ಕೆತಕ್ಕಂತಹ ಅಡಿ ಬರಹಗಳು.ನಮಗೆಲ್ಲಾ ಏನಾಗಿದೆ?ಎಲ್ಲಿ ಹೋಯಿತು ಆ ಮುಗ್ಧ,ಸ್ನಿಗ್ಧ ನಗು.ಮಗುವಿಗೆ ಮಾತ್ರ ನಗು ಸೀಮಿತವೇ?ನಮ್ಮ ಮನಸ್ಸಿನಲ್ಲಿ ಏನೆಲ್ಲಾ ತುಂಬಿಕೊಂಡು ನಗುವಿಗೆಜಾಗವಿಲ್ಲದಂತಾಗಿದೆ.ಅಭಿನಂದನೆಗಳು.

Ittigecement said...

ವನಿತಾ...

ನಾವೆಲ್ಲ ನಗಲಿಕ್ಕೆ ಬಹಳ "ಕಂಜೂಸ್"
ನಗಲಿಕ್ಕೇನು ದುಡ್ಡು ಕೊಡ ಬೇಕಾಗಿಲ್ಲ..
ಬಿಂದಾಸ್ ಆಗಿ ನಗೋಣ..
ಗೋಡೆ..
ಅಡ್ಡಿ, ಆತಂಕಗಳಿಲ್ಲದೆ...
ಮಕ್ಕಳಂತ ಹೂ ನಗೆ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ದಿನಕರ ಮೊಗೇರ said...

ಪ್ರಕಾಶಣ್ಣ,
ಮೊನ್ನೆ ಬಜ್ಜ್ ನಲ್ಲಿದ್ದ ಪಾಲಚಂದ್ರ ಅವರ ಒಂದು ಮಗುವಿನ ಫೋಟೊ ಎಷ್ಟು ಚೆನ್ನಾಗಿ ಇತ್ತೆಂದರೆ ... ನಿಮ್ಮ ಬ್ಲೊಗ್ ನ ಈ ಫೋಟೊ ನೋಡಿ ಅದೆಲ್ಲಾ ನೆನಪಾಯಿತು..... ಮಕ್ಕಳ ನಗು ನಮ್ಗೆ ಸ್ಫೂರ್ತಿ..... ನಾವು ಮಕ್ಕಳಾಗೋಕೆ ಸಾಧ್ಯಾನಾ...? ಇದು ಮಿಲಿಯನ್ ಡಾಲರ್ ಪ್ರಶ್ನೆ..... ಅವರ ನಗು ನಿಷ್ಕಲ್ಮಶ..
ನಮ್ಮಲ್ಲಿ ಅದು ಸಾಧ್ಯಾನಾ.....
ಸ್ನೇಹಿತರೆ, ಪ್ರಕಾಶಣ್ಣ ಬರೆದ ಲೆಖನದಲ್ಲಿ ಒಂದು ಮಗುವಿನ ಚಿತ್ರ ಕಣ್ತಪ್ಪಿನಿಂದ ಬಿಟ್ಟೂ ಹೋಗಿದೆ.... ಆ ಮಗುವಿನ ಮನಸ್ಸಿನ , ಮಗುವಿನ ನಗುವಿನ ನಮ್ಮೆಲ್ಲರ ಪ್ರಕಾಶಣ್ಣನದು...
ನನ್ನ ಕಥೆಯ ಬಗ್ಗೆ ಹೇಳೊಣ ಎಂದರೆ ಇದರ ಪೂರ್ತಿ ಶ್ರೇಯ ಇವರಿಗೆ ಸಲ್ಲತ್ತೆ..... ನನಗನಿಸಿದ ಹಾಗೆ ಅವರಿಗೆ ಕಥೆ ಹೇಳಿದ್ದೆ...... ಅದನ್ನ ಪ್ರಕಾಶಣ್ಣ ಬರೆಯಲು ಹೇಳಿದ್ದರು...... ನನಗೆ ಅವರ ಕಥೆ ಮುಂದುವರಿಸುವ ಅವಕಾಶ ಸಿಕ್ಕಿದ್ದು ಖುಶಿಯಾಯ್ತು..... ನನಗೆ ತಿಳಿದ ಹಾಗೆ ಬರೆದು ಕಳಿಸಿದೆ..... ಅದಕ್ಕೆ ಅವರು ಕಥೆಗೆ ಇರಬೇಕಾದ ನಯ ,ನಾಜುಕು ಎಲ್ಲಾ ಹಾಕಿ ನನಗೆ ವಾಪಸ್ ಕಳಿಸಿ ನಾನೇ ಪಬ್ಲಿಶ್ ಮಾಡಲು ಹೇಳಿದರು....
ನನ್ನಂಥಹ ಕಿರಿಯನನ್ನು ಹುರಿದುಂಬಿಸಿ ಬರೆಸಲು ಹಚ್ಚಿದ್ದಕ್ಕೆ ಪ್ರಕಾಶಣ್ಣ ತುಂಬಾ ಥಾಂಕ್ಸ್..... ನಿಮ್ಮ ಪ್ರೊತ್ಶಾಹ ಹೀಗೆ ಇರಲಿ......

Kishan said...

sooopero sooooperru. Morning started with a fresh mood looking at those lovely cutie cutie smiles of gods.

Ittigecement said...

ನಿಮ್ಮೊಳಗೊಬ್ಬ ಬಾಲು...

ನಮ್ಮ ಹತ್ತಿರದವರೊಡನೆ...
ಬಂದು ಬಳಗದವರೊಡನೆ...ಒಂದಷ್ಟು ಹೊತ್ತು ಆತ್ಮೀಯವಾಗಿ ಕುಳಿತು..
ಮಾತನಾಡಿ .. "ನಗಲು" ನಮ್ಮ ಬಳಿ ಸಮಯವಿರುವದಿಲ್ಲ...

ನಮ್ಮ ವ್ಯವಹಾರ, ಕೆಲಸದ ಒತ್ತಡಗಳಲ್ಲಿ ಕಳೆದು ಹೋಗಿಬಿಡುತ್ತೇವೆ...

ನಗುವನ್ನು ದೂರಮಾಡಿಕೊಂಡು ಬಿಡುತ್ತೇವೆ...
ಹಾಗೆ ಮಾಡುವ ಅಗತ್ಯವಿಲ್ಲ ಅಲ್ಲವಾ?

ನಗುವಿಗೆ ಲೆಕ್ಕಾಚಾರ ಮಾಡುವದು ತಪ್ಪಲ್ಲವಾ?

ಈ ಮುದ್ದು ಮಕ್ಕಳ ಹಾಗೆ ..
ಮುಗ್ಧವಾಗಿ.. ನಗಲು ನಮ್ಮಿಂದ ಸಾಧ್ಯವೆ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ದಿನಕರ್ ಒಮ್ಮ ಉದಯೋನ್ಮುಖ ಬರಹಗಾರ..
ತಮ್ಮ ಕೆಲಸದ ಒತ್ತಡದಿಂದ ಕಳೆದು ಹೋಗದೆ ..
ಲವಲವಿಕೆಯಿಂದ ಬರೆಯುವ ಅವರ ಶೈಲಿ ಬಹಳ ಇಷ್ಟ...

ಆ ಕಥೆ ಅವರೇ ಬರೆದದ್ದು... ಅದರಲ್ಲಿ ನನ್ನ ಹೆಗ್ಗಳಿಕೆ ಏನೂ ಇಲ್ಲ..

ಮತ್ತೊಮ್ಮೆ ದಿನಕರ್ ಅವರಿಗೆ ಅಭಿನಂದನೆಗಳು...

PARAANJAPE K.N. said...

ಮಗುವಿನ ನಗುವಿಗೆ, ಅದರ ಅ೦ದಕ್ಕೆ,ಅಮಾಯಕ ನಿಷ್ಕಪಟ ಭಾವಕ್ಕೆ ಸಾಟಿಯೇ ಇಲ್ಲ. ತು೦ಬ ಚೆ೦ದನೆಯ ಫೋಟೋ ಗಳು. ನೋಡಿ ಮನಸಿಗೆ ತು೦ಬಾ ಖುಷಿ ಆಯ್ತು.

ಮನಮುಕ್ತಾ said...

ಪ್ರಕಾಶಣ್ಣಾ,
ಮಕ್ಕಳ ಸು೦ದರ ಫೋಟೊಗಳು..ಅದಕ್ಕೆ ನಿಮ್ಮ ಚೆ೦ದದ ವಿವರಣೆ..ನೋಡಿ, ಓದಿ.. ತು೦ಬಾ ಖುಶಿಯಾಯ್ತು.:)

Niharika said...

Hi,
Makkalu estondu expressive alva. Attaru maru kshana nagtare. Naanu estondu sala try madtini hage. A rithine nagu tarisutte.
Thanks 4 nice photoes.

ಪ್ರವೀಣ್ ಭಟ್ said...

beleyutta beleyutta namma pakka naave gode kattikollutteve.. manabichchi makkalanthe naguvude marutu hogiruttade.. uttama photogala jote ondolleya sandesha neediddeeri.. dhanyavaada prakaashanna

Pravi

Manju M Doddamani said...

ಫೋಟೋಗೆ ತಕ್ಕ ರೀತಿ ಕ್ಯಾಪ್ಶನ್ ಕೊಟ್ಟಿದಿರ ತುಂಬಾ ಚನ್ನಾಗಿದೆ..!
ನಾವು ನಗಬೇಕು ನಮ್ ಜೊತೆ ಇರೋರ್ನು ನಗಿಸಬೇಕು..!
ನಾನು ಯಾವಾಗಲು ನಗ್ತಾ ಇರ್ತೀನಿ ಯಾವಾಗ ನಿಮ್ಹಾನ್ಸ್ ಸೇರುಸ್ತಾರೋ ಗೋತ್ತಿಲ್ಲ :) ;)

ಸುಧೇಶ್ ಶೆಟ್ಟಿ said...

ಸದಾ ನಗುತ್ತಿರುವ ನಿಮ್ಮಿ೦ದಲೇ ಇ೦ತಹ ಬರಹಗಳು ಬರಲು ಸಾಧ್ಯ ಪ್ರಕಾಶಣ್ಣ.... ಆ ಮುದ್ದು ಕ೦ದಮ್ಮಗಳು ಯಾರು?

ಮನಸು said...

super foto's

ವೆಂಕಟೇಶ್ ಹೆಗಡೆ said...

very nice photos with comments prakashanna..

ಪಾಚು-ಪ್ರಪಂಚ said...

ಮುದ್ದು ಕಂದಮ್ಮಗಳ ಮುಗ್ಧ ನಗು ಇಷ್ಟ ಆತು. ನಗುವಿನಲ್ಲೂ ವಿವಿಧ ಭಾವನೆ ಇದ್ದು ಅನ್ಸ್ತು ಅಲ್ದಾ..?
ಚಂದದ ಫೋಟೋ ಪ್ರಕಾಶಣ್ಣ.

Shashi jois said...

ಮುದ್ದು ಮಕ್ಕಳ ಮನಮೋಹಕ ಚಿತ್ರ ದೊಂದಿಗೆ ವಿವರಣೆ ಓದಿ ತುಂಬಾ ಖುಷಿಯಾಯ್ತು .ತುಂಬಾ ಚೆನ್ನಾಗಿದೆ.

sunaath said...

ತುಂಬ ಮೋಹಕ ಚಿತ್ರಗಳು. ಥ್ಯಾಂಕ್ಸ ಪ್ರಕಾಶ!

ಮನದಾಳದಿಂದ............ said...

ಪ್ರಕಾಶಣ್ಣ,
ಮುದ್ದಾದ ಮಕ್ಕಳ ಸುಂದರ ಚಿತ್ರಗಳೊಂದಿಗೆ ಅರ್ಥಗರ್ಭಿತ ವಿವರಣೆ,
ಅದ್ಭುತ............
ಮಕ್ಕಳ ಆ ನಗು, ಆಟ, ಮುಗ್ಧತೆ ನಮಗೆ ಕೈಗೆಟುಕದ ಚಂದ್ರಮನಂತೆಯೇ ಸರಿ, ದೂರದಿಂದ ಕಂಡು ಸಂತೋಷಪಡಬೇಕು.
ತುಂಟತನದ ಜೊತೆಗೇ ಕನಿಷ್ಠ ಮೊಗದಲ್ಲಿ ನಗುವನ್ನಾದರೂ ಇಟ್ಟುಕೊಳ್ಳೋಣ. ಹಣ, ದುಡಿಮೆ, ಸಂಸಾರದ ಚಿಂತೆ ಕ್ಷಣ ಕಾಲ ಮರೆಯೋಣ......
ಧನ್ಯವಾದಗಳು ಪ್ರಕಾಶಣ್ಣ....

* ನಮನ * said...

ವಾವ್ ಸುಂದರ ಚಿತ್ರಗಳು.....
ಜಾನಪದ ಗೀತೆಯ ಸಾಲೊಂದು ನೆನಪಾಗುತ್ತದೆ


...ಮಕ್ಕಳಾಟವು ಚಂದ ಮತ್ತೆ ಯೌವನ ಚಂದ
ಮುಪ್ಪಿನಲಿ ಚಂದ ನರೆಗಡ್ಡ
ಜಗದೊಳಗೆ ಎತ್ತ ನೋಡಿದರೂ ನಗು ಚಂದ...

ಅನಂತ್ ರಾಜ್ said...

ಮನಕೆ ಮುದ ನೀಡುವ ಉತ್ತಮ ಮಕ್ಕಳ ಚಿತ್ರಗಳು ಹಾಗೂ ಶೀರ್ಷಿಕೆಗಳು..ಧನ್ಯವಾದಗಳು ಪ್ರಕಾಶ ಸರ್.

ಅನ೦ತ್

ಹಳ್ಳಿ ಹುಡುಗ ತರುಣ್ said...

manasannu manasaagi tanisuva sundara makkala photgala jote alli nangu naguvagi heliruva baravanige super agide sir..

Ittigecement said...

ನಾಗರಾಜು..

ನಿಜ ಮನಬಿಚ್ಚಿ ನಗಬೇಕು...

ನಮ್ಮ ದೈನಂದಿನ ವ್ಯ್ವಹಾರಗಳಲ್ಲಿ ನಗುವದನ್ನು ಮರೆತಿದ್ದೇವೆ...
ಅಪರೂಪಕ್ಕೆ ನಕ್ಕರೂ...
ಅದು ತೋರಿಕೆಯ ನಗುವಾಗಿರುತ್ತದೆ...

ಮಕ್ಕಳ ಹಾಗೆ..
ಎಲ್ಲ ಮರೆತು ಮುಗ್ಧ ನಗು ನಮಗೆ ಬಹಳ ಕಷ್ಟ.. ಅಲ್ಲವಾ?

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಚಿತ್ರಾ said...

ಪ್ರಕಾಶಣ್ಣ,
ಮುದ್ದು ಪುಟಾಣಿಗಳ ಮನಸೂರೆಗೊಳ್ಳುವ ನಗುವಿಗೆ , ಚಂದ ಚಂದದ ಅರ್ಥಬದ್ಧ ಶೀರ್ಷಿಕೆ ! ನಿಜವಾಗಿಯೂ ನಾವು ನಗುವುದನ್ನು ಕಲಿಯಬೇಕಿದೆ !! ಅದಾಗದಿದ್ದರೆ , ಕೊನೆ ಪಕ್ಷ ಪುಟಾಣಿಗಳ ಮುಗ್ಧ ನಗುವನ್ನು ಉಳಿಸುವುದನ್ನಾದರೂ ...... ತುಂಬಾ ಇಷ್ಟವಾಯ್ತು .

Ittigecement said...

ಡಾಕ್ಟ್ರೆ... (ಕೊಳಲು)

ಈಗ ಮಕ್ಕಳಿಗೂ ಮನಃಪೂರ್ತಿಯಾಗಿ ನಗಲು ಬಿಡುತ್ತಿಲ್ಲ ನಾವು..

ಎಲ್ಕೇಜಿ..
ಯುಕೇಜಿ ಅನ್ನುತ್ತ ..
ಹೆಗಲಿಗೊಂದು ಚೀಲ ಏರಿಸಿ...
ಟ್ಯೂಷನ್.. ಪಾಠ ಅಂತೆಲ್ಲ...
ಮನಸ್ಸಲ್ಲಿ ಒತ್ತಡ ಹೇರಿ..
ಸಹಜ ಬದುಕಿನ ನಗುವನ್ನು ಮಾಯವಾಗಿಸುತ್ತಿದ್ದೇವೆ...

ಫೋಟೊ.. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ದಿನಕರ್

ನನಗೆ ಮೆಚ್ಚಿನ ಫೋಟೊಗ್ರಾಫರ್ "ಪಾಲಚಂದ್ರ" ಅವರ ಮಗುವಿನ ಫೋಟೊ ಸ್ಪೂರ್ತಿಕೊಟ್ಟಿದ್ದು ನಿಜ...

ಅದೊಂದು ಬಹಳ ಸೊಗಸಾದ ಫೋಟೊ...!

ಮಕ್ಕಳು ತುಂಟಾಟ ಮಾಡುವಾಗ ಗಂಭೀರವಾಗಿ "ಗದರಿಸುವವರನ್ನು" ಕಂಡರೆ ನನಗೆ ಕೋಪ ಬರುತ್ತದೆ..

ತುಂಟಾಟ ಮಕ್ಕಳಲ್ಲದೆ ಇನ್ಯಾರು ಮಾಡಲು ಸಾಧ್ಯ?

ಮಕ್ಕಳನ್ನು ಮಕ್ಕಳಾಗಿರಲು ಬಿಡಬೇಕು..

ಮಕ್ಕಳನ್ನು "ಮಕ್ಕಳಾಗಿಯೇ.." ನೋಡ ಬೇಕು...
ಮಕ್ಕಳಾಗಿಯೇ ಅರ್ಥ ಮಾಡಿಕೊಳ್ಳ ಬೇಕು ಅಲ್ಲವೆ??

ನಿಮ್ಮೊಳಗಿನ ಕಥೆಗಾರ ಇನ್ನಷ್ಟು ಕಥೆ ಬರೆಯಲಿ..
ನಮಗೆಲ್ಲ ಉಣ ಬಡಿಸಿ ಎಂದು ನಮ್ಮೆಲ್ಲರ ಆಶಯ...

ಜೈ ಹೋ ದಿನಕರ್...!!

ಆನಂದ said...

ತುಂಬಾನೇ‌ ಚೆಂದನೆಯ ಫೋಟೋಗಳು, ಪ್ರಕಾಶಣ್ಣ.

UMESH VASHIST H K. said...

ಪ್ರಕಾಶ್ ಸರ್, ಫೋಟೋಸ್ soooper , ಆ ಮಕ್ಕಳ ನಗು ನಮಗೆ ಇಲ್ವಲ್ಲ ಅನ್ನಿಸ್ತು, !!!!!!! ನಾವೆಲ್ಲಾ ಬೇಗ ದೊಡ್ದೊವ್ರಾಗ್ಬಿತ್ವಿ!!!!!

umesh desai said...

ಹೆಗಡೇಜಿ ಕೆಮೆರಾದಲ್ಲಿ ಕವಿತೆಗೀಚುವ ಕಲೆ ನಿಮಗೆ ಸಿದ್ಧಿಸಿದೆ ಅಭಿನಂದನೆಗಳು

Uday Hegde said...

Great Images sir, few of them are AMAZING in terms of expression.

Ashok.V.Shetty, Kodlady said...

ಪ್ರಕಾಶಣ್ಣ,

ಮಗುವಿನ ನಗುವಿನಲ್ಲಿ ಅದೆಷ್ಟೋ ಅರ್ಥಗಳಿವೆ. ಮಗುವಿನ ನಗು ಎನ್ನುವುದು ಎಲ್ಲಾ ಸಮಸ್ಯಗಳಿಗೆ ಸಿಹಿಮದ್ದು. ಇದು ನನ್ನ ಸ್ವಂತ ಅನುಭವದಿನ ಹೇಳಿರುವ ಮಾತು. ಎಷ್ಟೇ ತಲೆಬಿಸಿಯಲ್ಲಿದ್ದರೂ, ಬೇಸರದಲ್ಲಿದ್ದ್ರೂ, ಮನೆಗೆ ಬಂದು ನನ್ನ ಮಗಳ ಮುದ್ದು ಮುಖವನ್ನು, ಸಿಶ್ಕಲ್ಮಶ ನಗುವನ್ನು ನೋಡಿ ನಾನು ಎಲ್ಲವನ್ನೂ ಮರೆತು ಬಿಡುತ್ತೇನೆ.

ಸುಂದರ ಚಿತ್ರಗಳೊಂದಿಗೆ ನೀವು ಭಾವನೆಗಳನ್ನು ನಿರೂಪಿಸಿದ ರೀತಿ ತುಂಬಾ ಇಷ್ಟ ಆಯಿತು. ಧನ್ಯವಾದಗಳು.

ಜಲನಯನ said...

ಪ್ರಕಾಶ ಬಹಳ ಛಂದ್ ಇದ್ದು...

ನನಗೆ ಯಾವಾಗಲೂ ಅನಿಸೋದು

ಕೇವಲ ಒಮ್ಮೆ ನೀ ನಗು
ನೀನಾಗಿಯಲ್ಲ ಆಗಿ ಮಗು
ತೊಡೆ ಗೆರೆ-ಮುಖದ ಬಿಗು
ಮನತುಂಬಿ ನೀನೊಮ್ಮೆ ನಗು
ನಿನ್ನ ಈ ಚಿತ್ರಗಳಿಂದ ಪ್ರೇರಿತ ನನ್ನ ಕವನ "ಜಲನಯನ" ದಲ್ಲಿದೆ...(ಚಿತ್ರಾನೂ ತಗೊಂಡೆ..ಓಕೆನಾ..?)

Shweta said...

:):):):)
sooper iddu ...

© ಹರೀಶ್ said...

ಮಕ್ಕಳ ಪೋಟೊ ಹಾಗೂ ಅದರ ವಿವರಣೆ ಚನ್ನಾಗಿದೆ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಮಗುವಿನ ನಗು, ಎಂಥಹ ಕಟುಕನಲ್ಲೂ ಕನಿಕರ ತರಿಸುವುದಂತೆ

ಸುಂದರ ಫೋಟೋಗಳು

Subrahmanya said...

ಪುಟ್ಟ ಮಕ್ಕಳ ಚಿತ್ರಗಳು ಮುದ್ದಾಗಿವೆ. Thanks.

AntharangadaMaathugalu said...

ತುಂಬಾ ಮುದ್ದಾಗಿವೆ ಮಕ್ಕಳ ಚಿತ್ರಗಳು. ಅದೆಷ್ಟು ಮುಕ್ಧತೆ ಮುಖದಲ್ಲಿ.... ಅವರ ನಗು.. ಅಳು... ಸಿಟ್ಟು... ಹಟ... ಎಲ್ಲವೂ ಚಂದವೇ...


ಶ್ಯಾಮಲ

SNEHA HEGDE said...

Howdu Prakashanna, Naavella kaldu hoja.Innondu swalpa dina hodre naavella yaaragididda helade martu hogtu. Nammanella kaldu hogadi heli nenapu maatda idyali.. adke ninge special thanks... yestu helidru saldu.

V.R.BHAT said...

Very Nice to see children with smile, neatly driven, thanks

ಕನಸು said...

ಹಾಯ್
ಪ್ರಕಾಶಣ್ಣ
ತುಂಬಾ ಮುದ್ದಾಗಿವೆ ಮಕ್ಕಳ ಚಿತ್ರಗಳು. ಅದೆಷ್ಟು ಮುಕ್ಧತೆ ಮುಖದಲ್ಲಿ.... ಅವರ ನಗು.. ಅಳು... ಸಿಟ್ಟು... ಹಟ... ಎಲ್ಲವೂ ಅಂದ ಚೆಂದವೆ ಗೇಳೆಯನ ಪ್ರೇಂ ಪತ್ರದಂತೆ
ಗುಡ್ ನೈಟ್ ಎಸ್ ಎಮ್ ಎಸ್ ತರಹ
ಮೋಹಕ ಕಲ್ಪನ..!!ಧನ್ಯವಾದಗಳು

PaLa said...

"ನಮಗೂ ಅಳು ಬರುತ್ತದೆ... ಅಳುತ್ತೇವೆ..." - ಸುಂದರ ಚಿತ್ರ

Gubbachchi Sathish said...

ನಗುಗಳು ಮಗುಗಳು :-) :-)

ಕ್ಷಣ... ಚಿಂತನೆ... said...

ಮುದ್ದಾದ ಮಕ್ಕಳ ನಗುವಿನ ಚಿತ್ರಗಳು ಮತ್ತು ವಿವರಣೆ ಚೆನ್ನಾಗಿವೆ.
ಧನ್ಯವಾದಗಳು.

Minchu said...

makkala mukha noodoke ondu chanda, mathe nimma barahagalu innu channa

Ittigecement said...

ಕಿಶನ್...

ನಿಜಕ್ಕೂ ಮಕ್ಕಳ
ಆ..
ಮುಗ್ಧ ನಗು...
ಬೆಳಗಿನ ಎಳೆ ಬಿಸಿಲಿನ...
ಸೂರ್ಯೋದಯದಲ್ಲಿ ಅರಳುವ ಹೂ.. ಮೊಗ್ಗಿನಂತಿರುತ್ತದೆ...!

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಪರಾಂಜಪೆಯವರೆ...

ನೀವು ಫೋಟೊ ಇಷ್ಟಪಟ್ಟಿದ್ದು...
ಪುಟ್ಟ ಮಗುವಿನ ಬಗೆಗೆ ಒಂದು ಸುಂದರ ಕವಿತೆ ಬರೆದದ್ದು... ಮಸ್ತ್ ಆಗಿದೆ...

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು...

Ittigecement said...

ಮನಮುಕ್ತಾ....

ಒಂದು ಸುಂದರ ಬೆಳಗನ್ನು ಮಕ್ಕಳ ಹೂವಿನಂಥಹ ನಗುವಿನಿಂದ ಶುರು ಮಾಡಿದರೆ..
ದಿನವೆಲ್ಲ ಹಾಯಾಗಿ... ಸಂತಸದಿಂದಿರುತ್ತದೆ ಅಲ್ಲವೆ?

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Anonymous said...

ಸಕ್ಕತ್ ಬರಹ ಪ್ರಕಾಶ್.. ಫೋಟೋಸ್ ಅಂತೂ ಸೂಪರ್... ಒಂದ್ ಹುಡುಗಂಗೆ ಅಶಿಷ್ ಹೋಲಿಕೆ ಇದ್ದು ಅಲ್ಡಾ(ನೀಲಿ ಅಂಗಿ..ಕೆಂಪು ದಾರ ಕುತ್ತಿಗೆಗೆ!!)???ಯಾರು ಅದು?

let we get more and more of such write ups!!

ಸೀತಾರಾಮ. ಕೆ. / SITARAM.K said...

ಫೋತೋಗಳನ್ನು ನೋಡುತಾ ಇದ್ದ ಹಾಗೇ ಮನ ಖುಷಿಯಿಂದ ತುಂಬಿ ನಗುವರಳಿತು. ಜೊತೆಗೆ ತಮ್ಮ ಟಿಪ್ಪಣೆ ಓದುತ್ತಾ ಚಿಂತನೆಯು ಸೇರಿತು.

ಮಕ್ಕಳ ನಗುಮೊಗದ ಚಿತ್ರಗಳಿಂದ ಇಂದಿನ ಮುಂಜಾವಿನಲ್ಲಿ ಮನವರಲಿ ಪ್ರಫುಲ್ಲವಾಯಿತು. ಧನ್ಯವಾದಗಳು.

anitha said...

maguvina nagu bhasheyannu kaliyalu navella manasu mada bekashte!

chetana said...

aahaa sooper collection prakaashaNNa.
btw, nagu annOdu tinlikke baarada sakkare! - sooopper :)